“1st ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಸುಲಲಿತ ವ್ಯವಹಾರ:

1.

ಸುದ್ಧಿಯಲ್ಲಿ ಏಕಿದೆ ? ಭಾರತದಲ್ಲಿ ವ್ಯವಹಾರ ನಡೆಸುವುದು ಅತ್ಯಂತ ಸುಲಲಿತ. ಅತ್ಯಂತ ಸುಲಲಿತ ವ್ಯವಹಾರ ದೇಶಗಳ ಪಟ್ಟಿಯಲ್ಲಿ ಭಾರತ 77ನೇ ಸ್ಥಾನಕ್ಕೇರಿದೆ.

 • ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ನೂತನ ಪಟ್ಟಿಯಲ್ಲಿ ಭಾರತ ಭಾರಿ ಪ್ರಗತಿ ಕಂಡಿದೆ.
 • 190 ದೇಶಗಳ ಪಟ್ಟಿಯಲ್ಲಿ ಕಳೆದ ಬಾರಿ 30 ಸ್ಥಾನ ಜಿಗಿದಿದ್ದ ಭಾರತ ಈ ಬಾರಿ 23 ಸ್ಥಾನ ಮೇಲೇರಿದೆ.
 • ವಿಶ್ವದ 190 ದೇಶಗಳ ಆರ್ಥಿಕ ವ್ಯವಸ್ಥೆ ಆಧರಿಸಿ ವಿಶ್ವ ಬ್ಯಾಂಕ್ ಈ ರ‍್ಯಾಂಕಿಂಗ್ ಪ್ರಕಟಿಸಿದೆ.
 • 2016ರಲ್ಲಿ 130, 2017ರಲ್ಲಿ 100ನೇ ಸ್ಥಾನಕ್ಕೆ ಭಾರತ ಏರಿತ್ತು ಉದ್ಯಮಸ್ನೇಹಿ ಸೂಚ್ಯಂಕದಲ್ಲಿಯೂ 100ಕ್ಕೆ 97 ಅಂಕದಿಂದ 67.23 ಅಂಕಕ್ಕೆ ಏರಿಕೆಯಾಗಿದೆ. ಹಿಂ
 • ದಿನ ರ‍್ಯಾಂಕಿಂಗ್​​ಗೆ ಹೋಲಿಸಿದರೆ ಸುಮಾರು 7 ಸೂಚ್ಯಂಕ ವೃದ್ಧಿಯಾಗಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.
 • ದಕ್ಷಿಣ ಏಷ್ಯಾದಲ್ಲಿ ಭಾರತ ಮೊದಲ ಸ್ಥಾನ ಹೊಂದಿದ್ದರೆ, ಬ್ರಿಕ್ಸ್ ದೇ ಶಗಳಲ್ಲಿ 3ನೇ ಸ್ಥಾನ ಹೊಂದಿದೆ.
 • ವಿದ್ಯುತ್ ಸಂಪರ್ಕ, ಸಾಲ ಹಂಚಿಕೆ, ಅಲ್ಪಸಂಖ್ಯಾತ ಹೂಡಿಕೆದಾರರ ರಕ್ಷಣೆ ವಿಚಾರದಲ್ಲಿ ವಿಶ್ವದ ಟಾಪ್-25ರ ಪಟ್ಟಿಯಲ್ಲಿ ಭಾರತ ಕಾಣಿಸಿಕೊಂಡಿದೆ.
 • ಉದ್ಯಮ ಸ್ನೇಹಿ ವಾತಾವರಣ ನಿರ್ವಣದಲ್ಲಿ ಅತ್ಯಂತ ವೇಗವಾಗಿ ಸಾಗಿರುವ ರಾಷ್ಟ್ರಗಳ ಟಾಪ್-10 ಪಟ್ಟಿಯಲ್ಲಿ ಭಾರತವೂ ಇದೆ.

ಸುಲಭ  ವ್ಯವಹಾರದ ಸೂಚ್ಯಂಕ

 • ಸುಲಭ ವ್ಯಾಪಾರದ ಸೂಚ್ಯಂಕ 190 ದೇಶದ ಆರ್ಥಿಕತೆಗಳನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು 10 ವ್ಯವಹಾರಗಳ ಜೀವನಚಕ್ರವನ್ನು ವ್ಯಾಪಿಸುವ 10 ಸೂಚಕಗಳನ್ನು ಒಳಗೊಂಡಿದೆ.
 • ಈ 10 ಸೂಚಕಗಳು ಹೀಗಿವೆ: ಒಂದು ವ್ಯಾಪಾರವನ್ನು ಪ್ರಾರಂಭಿಸುವುದು, ನಿರ್ಮಾಣ ಪರವಾನಗಿಯನ್ನು ನಿರ್ವಹಿಸುವುದು, ವಿದ್ಯುತ್ ಪಡೆಯುವಿಕೆ, ಆಸ್ತಿಯನ್ನು ನೋಂದಾಯಿಸಿಕೊಳ್ಳುವುದು, ಕ್ರೆಡಿಟ್ ಪಡೆಯುವುದು, ಅಲ್ಪಸಂಖ್ಯಾತ ಹೂಡಿಕೆದಾರರನ್ನು ರಕ್ಷಿಸುವುದು, ತೆರಿಗೆಗಳನ್ನು ಪಾವತಿಸುವುದು, ಗಡಿಗಳಲ್ಲಿ ವ್ಯಾಪಾರ ಮಾಡುವುದು, ಒಪ್ಪಂದಗಳನ್ನು ಜಾರಿಗೆ ತರುವುದು ಮತ್ತು ದಿವಾಳಿತನವನ್ನು ಬಗೆಹರಿಸುವುದು. ಈ ಪ್ರತಿಯೊಂದು ಸೂಚಕಗಳು ಸಮಾನ ತೂಕ ಹೊಂದಿರುತ್ತದೆ.

ಫ್ಲೆಕ್ಸಿ ಫೇರ್‌ ರದ್ದು

2.

ಸುದ್ಧಿಯಲ್ಲಿ ಏಕಿದೆ ? ಪ್ರಯಾಣಿಕರಿಗೆ ತುಸು ನೆಮ್ಮದಿ ನೀಡುವ ನಿಟ್ಟಿನಲ್ಲಿ, ರೈಲ್ವೆ ಇಲಾಖೆಯು 15 ಪ್ರೀಮಿಯಂ ರೈಲುಗಳಲ್ಲಿನ ಫ್ಲೆಕ್ಸಿ ಫೇರ್‌(ಹೆಚ್ಚುವರಿ ಶುಲ್ಕ)ಅನ್ನು ಸಂಪೂರ್ಣವಾಗಿ ಕೈಬಿಟ್ಟಿದೆ.

 • ಜತೆಗೆ 101 ರೈಲುಗಳಲ್ಲಿನ ಮೂಲ ಟಿಕೆಟ್‌ ದರಕ್ಕೆ ವಿಧಿಸಲಾಗುತ್ತಿದ್ದ ಫ್ಲೆಕ್ಸಿ ಫೇರ್‌ಗಳನ್ನು ಇಳಿಸಲಾಗಿದೆ. ಮೊದಲು 5 ಪಟ್ಟು ಫ್ಲೆಕ್ಸಿ ಫೇರ್‌ ವಿಧಿಸಲಾಗುತ್ತಿದ್ದು, ಅದನ್ನು 1.4 ಪಟ್ಟಿಗೆ ಕಡಿಮೆ ಮಾಡಲಾಗಿದೆ.
 • ಆದರೆ, ಫಸ್ಟ್‌ ಕ್ಲಾಸ್‌ ಎಸಿ ಮತ್ತು ಎಕಾನಮಿ ಕ್ಲಾಸ್‌ ರೈಲುಗಳಿಗೆ ಫ್ಲೆಕ್ಸಿ ಫೇರ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 2016ರ ಸೆಪ್ಟೆಂಬರ್‌ 9ರಂದು ರೈಲ್ವೆ ಇಲಾಖೆಯು 44 ರಾಜಧಾನಿ, 52 ತುರಂತೊ ಮತ್ತು 46 ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಫ್ಲೆಕ್ಸಿ ಫೇರ್‌ ಜಾರಿಗೊಳಿಸಿತ್ತು.

ಏಕೆ ಈ  ಕ್ರಮ ?

 • ಈ ಫ್ಲೆಕ್ಸಿ ಫೇರ್‌ನಿಂದಾಗಿ ರೈಲ್ವೆ ಟಿಕೆಟ್‌ಗಳ ದರಗಳು ಗಣನೀಯವಾಗಿ ಏರಿಕೆಯಾಗುತ್ತಲೇ ಹೋಗುತ್ತವೆ. ಅಂದರೆ, ರೈಲಿನಲ್ಲಿ ಪ್ರತಿ ಸಲ ಶೇ. 10 ಸೀಟುಗಳ ಟಿಕೆಟ್‌ಗಳು ಮಾರಾಟವಾದ ತಕ್ಷಣ, ಟಿಕೆಟ್‌ನ ಮೂಲ ಶುಲ್ಕಕ್ಕೆ ಶೇ.10ರಷ್ಟು ಫೇರ್‌ ವಿಧಿಸಲಾಗುತ್ತದೆ.

 ಫ್ಲೆಕ್ಸಿ-ಶುಲ್ಕ ವ್ಯವಸ್ಥೆ

 • 2016 ರ ಸೆಪ್ಟಂಬರ್ನಲ್ಲಿ ಪರಿಚಯಿಸಲಾದ ಫ್ಲೆಕ್ಸಿ-ಶುಲ್ಕ ವ್ಯವಸ್ಥೆಯು ಹೆಚ್ಚುವರಿ ಆದಾಯವನ್ನು ಸೃಷ್ಟಿಸಲು ಮತ್ತು ಅಡ್ಡ-ಸಬ್ಸಿಡಿಕರಣವನ್ನು ಸರಕುಗಳಿಂದ ಕಡಿಮೆ ಮಾಡಲು ಉದ್ದೇಶಿಸಿದೆ. ಬೇಡಿಕೆ ಆಧರಿಸಿ ಕ್ರಿಯಾತ್ಮಕ ಬೆಲೆ ಮೂಲಕ ದರಗಳು ನಿಗಧಿಯಾಗುತ್ತದೆ.

 ಕರೆನ್ಸಿ ವಿನಿಮಯ

3.

ಸುದ್ಧಿಯಲ್ಲಿ ಏಕಿದೆ ? ರೂಪಾಯಿಯ ಮೌಲ್ಯ ವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರು ಜಪಾನ್‌ ಪ್ರವಾಸದ ಸಂದರ್ಭ ಸದ್ದಿಲ್ಲದೆ ಐತಿಹಾಸಿಕ ಕ್ರಮ ತೆಗೆದುಕೊಂಡಿದ್ದಾರೆ. ಉಭಯ ರಾಷ್ಟ್ರಗಳು ಬರೋಬ್ಬರಿ 7500 ಕೋಟಿ ಡಾಲರ್‌ ಮೌಲ್ಯದ ಕರೆನ್ಸಿ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿವೆ.

 • ಇತಿಹಾಸದಲ್ಲಿಯೇ ಅತಿ ದೊಡ್ಡ ಮೊತ್ತದ ಕರೆನ್ಸಿ ವಿನಿಮಯಗಳಲ್ಲಿ ಇದೂ ಒಂದು. ಇದರೊಂದಿಗೆ ಭಾರತ-ಜಪಾನ್‌ ಮೈತ್ರಿ ಮತ್ತಷ್ಟು ವಿಶಾಲವಾಗಿದೆ. ಮಾತ್ರವಲ್ಲ ದೇಶದ ಆರ್ಥಿಕತೆಗೆ ಹಲವು ಆಯಾಮಗಳಲ್ಲಿ ಪ್ರಯೋಜನವಾಗಲಿರುವ ಮಹತ್ವದ ಬೆಳವಣಿಗೆ ಇದಾಗಿದೆ.

ಕರೆನ್ಸಿ ವಿನಿಮಯ ಒಪ್ಪಂದ ಆಗಿದ್ದೆಂದು?

 • ಚೀನಾದ ಜತೆ 3000 ಕೋಟಿ ಡಾಲರ್‌ ಕರೆನ್ಸಿ ವಿನಿಮಯ ಮಾಡಿದ ವಾರದೊಳಗೆ ಭಾರತದ ಜತೆ ಜಪಾನ್‌ ದಾಖಲೆಯ 7,500ಕೋಟಿ ಡಾಲರ್‌ಗಳ ಕರೆನ್ಸಿ ವಿನಿಮಯ ಒಪ್ಪಂದ ಮಾಡಿದೆ. ಅಕ್ಟೋ ಬರ್‌ 28ರಂದು ನಡೆದ ಒಪ್ಪಂದವಿದು. ರೂಪಾಯಿ ಲೆಕ್ಕದಲ್ಲಿ ಅಂದಾಜು 5,47,500 ಕೋಟಿ ರೂ!

ಏನಿದು ಒಪ್ಪಂದ?

 • ಎರಡು ರಾಷ್ಟ್ರಗಳ ನಡುವೆ ನಿರ್ದಿಷ್ಟ ಅವಧಿಗೆ ನಡೆಯುವ ಕರೆನ್ಸಿ ವಿನಿಮಯ. ಅವಧಿಯ ಕೊನೆಗೆ ನಿರ್ದಿಷ್ಟ ಬಡ್ಡಿ ಸಹಿತ ಮೂಲ ಮೊತ್ತವನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಕಾರ್ಪೊರೇಟ್‌ ವಲಯದ ಕಂಪನಿಗಳ ನಡುವೆ, ಎರಡು ಸರಕಾರಗಳ ನಡುವೆ ಕರೆನ್ಸಿ ವಿನಿಮಯ ನಡೆಯುತ್ತದೆ.

ಹೇಗೆ?

 • ಉದಾಹರಣೆಗೆ ಭಾರತಕ್ಕೆ 10 ಲಕ್ಷ ಡಾಲರ್‌ ಬೇಕು ಎಂದಿಟ್ಟುಕೊಳ್ಳೋಣ. ಅಮೆರಿಕದ ಬ್ಯಾಂಕ್‌ನಲ್ಲಿ ಸಿಗುತ್ತದೆ. ಆದರೆ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದ್ದರೆ, ಸಾಲದ ಮರು ಪಾವತಿಯೂ ದುಬಾರಿಯಾಗುತ್ತದೆ.
 • ರೂಪಾಯಿ ಮೌಲ್ಯ 70 ರೂ. ಇದ್ದಾಗ 10 ಲಕ್ಷ ಡಾಲರ್‌ಗೆ 7 ಕೋಟಿ ರೂ. ಕೊಟ್ಟರೆ ಸಾಕು. ಅಕಸ್ಮಾತ್‌ ರೂಪಾಯಿ ಮೌಲ್ಯ 100 ರೂ.ಗೆ ಕುಸಿದರೆ, ಆಗ 10 ಕೋಟಿ ರೂ. ಕೊಡಬೇಕಾಗುತ್ತದೆ.
 • ಇಂಥ ಸಂದರ್ಭ ಏನು ಮಾಡುವುದು?
 • ಅದಕ್ಕೊಂದು ಉಪಾಯ ಕರೆನ್ಸಿ ವಿನಿಮಯ. ರೂಪಾಯಿಯ ಅಗತ್ಯ ಇರುವ ಮತ್ತೊಬ್ಬರನ್ನು ಕಂಡುಕೊಳ್ಳುವುದು. ಜಪಾನ್‌ಗೆ 7 ಕೋಟಿ ರೂ. ಬೇಕಾಗಿದೆ ಎಂದಿಟ್ಟುಕೊಳ್ಳೋಣ. ಆಗ ಭಾರತ 7 ಕೋಟಿ ರೂ. ಕೊಟ್ಟು, ಪ್ರತಿಯಾಗಿ 10 ಲಕ್ಷ ಡಾಲರ್‌ ಪಡೆಯುತ್ತದೆ. ನಿರ್ದಿಷ್ಟ ಅವಧಿಯ ನಂತರ ನಿಗದಿತ ಬಡ್ಡಿಗೆ ಅಸಲನ್ನೂ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಡಾಲರ್‌ ಮೌಲ್ಯ ಎಷ್ಟೇ ಜಾಸ್ತಿಯಾದರೂ, ಈ ಒಪ್ಪಂದಕ್ಕೆ ಅಡ್ಡಿಯಾಗುವುದಿಲ್ಲ!

ಭಾರತಕ್ಕೆ ಲಾಭವೇನು?

 1. ಈ ವರ್ಷ ಡಾಲರ್‌ ಎದುರು ರೂಪಾಯಿ ಮೌಲ್ಯ ಶೇ.14ರಷ್ಟು ಇಳಿದಿದೆ. ಕಳೆದ ಏಪ್ರಿಲ್‌ನಿಂದ ವಿದೇಶಿ ವಿನಿಮಯ ಸಂಗ್ರಹದಲ್ಲೂ ಸ್ವಲ್ಪ ಕರಗಿದೆ. ಇದು ವಿತ್ತೀಯ ಕೊರತೆಯನ್ನು ಹೆಚ್ಚಿಸಬಲ್ಲುದು. ವಿದೇಶಿ ಸಾಲಗಳೂ ದುಬಾರಿಯಾಗುತ್ತವೆ. ಆಮದು ಕೂಡ ತುಟ್ಟಿಯಾಗುತ್ತದೆ. ಈ ಸಮಸ್ಯೆಗಳನ್ನು ನಿರ್ವಹಿಸಲು ಕರೆನ್ಸಿ ವಿನಿಮಯ ಸಹಕಾರಿ. ಡಾಲರ್‌ ಮೌಲ್ಯ ವೃದ್ಧಿಯಾದರೂ, ಅದರ ವ್ಯತಿರಿಕ್ತ ಪರಿಣಾಮವನ್ನು ತಡೆಯಬಹುದು.
 2. ಭಾರತ-ಜಪಾನ್‌ ಬಾಂಧವ್ಯ ಮತ್ತಷ್ಟು ವೃದ್ಧಿಸಲಿದೆ. ಈಗಾಗಲೇ ಬುಲೆಟ್‌ ರೈಲು, ದಿಲ್ಲಿ-ಮುಂಬಯಿ ಕಾರಿಡಾರ್‌ ಇತ್ಯಾದಿ ಹಲವು ಯೋಜನೆಗಳಲ್ಲಿ ಜಪಾನ್‌ ತೊಡಗಿಸಿದ್ದು, ಉಭಯ ರಾಷ್ಟ್ರಗಳ ನಡುವೆ ಸಾಲದ ವ್ಯವಹಾರವಿದೆ. ಇವುಗಳು ವಿವಾದ ಮುಕ್ತವಾಗಲು ಕರೆನ್ಸಿ ವಿನಿಮಯ ಸಹಕಾರಿ.
 3. ಈ ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ ಭಾರತ-ಇರಾನ್‌ ನಡುವೆ ಕಚ್ಚಾ ತೈಲದ ಪೇಮೆಂಟ್‌ ವಿಚಾರದಲ್ಲಿ ವಿವಾದ ಆಗಿತ್ತು. ಕರೆನ್ಸಿ ವಿನಿಮಯದಿಂದ ಇಂಥ ವಿವಾದ ಬರದಂತೆ ನೋಡಿಕೊಳ್ಳಬಹುದು.

ಉರ್ಜಿತ್ ಪದತ್ಯಾಗ?

4.

ಸುದ್ಧಿಯಲ್ಲಿ ಏಕಿದೆ ? ಸಾಲ ಹಂಚಿಕೆ ವಿಚಾರವಾಗಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ಹಾಗೂ ಕೇಂದ್ರ ಸರ್ಕಾರದ ನಡುವೆ ಆರಂಭಗೊಂಡಿರುವ ಸಂಘರ್ಷ ಬುಧವಾರ ಇನ್ನಷ್ಟು ಉಲ್ಬಣಿಸಿದೆ. ಆರ್​ಬಿಐಯನ್ನು ನಿಯಂತ್ರಿಸುವ ಉದ್ದೇಶದಿಂದ ಸೆಕ್ಷನ್ 7ರ ಅಸ್ತ್ರ ಪ್ರಯೋಗಿಸಲು ಕೇಂದ್ರ ಸರ್ಕಾರ ಚಿಂತನೆ ಆರಂಭಿಸಿರುವುದು ಆರ್​ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರನ್ನು ಕೆರಳಿಸಿದೆ. ಒಂದೊಮ್ಮೆ ಸೆಕ್ಷನ್ 7 ಜಾರಿಯಾದಲ್ಲಿ ಇಂಥ ಕಠಿಣ ಕ್ರಮ ಇತಿಹಾಸದಲ್ಲಿ ಇದೇ ಮೊದಲ ಬಾರಿ ಆಗಲಿದೆ.

ಏನಿದು ಬಿಕ್ಕಟ್ಟು ?

 • 2008 ಹಾಗೂ 2014ರ ನಡುವಿನ ಅವಧಿಯಲ್ಲಿ ಬೇಕಾಬಿಟ್ಟಿ ಸಾಲ ವಿತರಣೆ ಆಗುತ್ತಿದ್ದರೂ ಆರ್​ಬಿಐ ಅದನ್ನು ತಡೆಯದೇ ಇದ್ದುದರಿಂದಾಗಿ ಬ್ಯಾಂಕಿಂಗ್ ವಲಯಕ್ಕೆ ಕೆಟ್ಟಕಾಲ ಎದುರಾಗುವಂತಾಯಿತೆಂಬುದು ಕೇಂದ್ರದ ಆರೋಪ. ಇದರ ಜತೆಗೆ ಬ್ಯಾಂಕೇತರ ಹಣಕಾಸು ವಲಯಕ್ಕೆ ಹಣ ಪೂರೈಕೆ, ಅನುತ್ಪಾದಕ ಸಾಲಗಳ ನಿರ್ವಹಣೆ, ಮಾರುಕಟ್ಟೆ ನಗದು ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ಯೂ ಸರ್ಕಾರ ಮತ್ತು ಆರ್​ಬಿಐ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ.

ಏನಿದು ಸೆಕ್ಷನ್ 7?

 • ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯದಲ್ಲಿ ಆರ್​ಬಿಐಗೆ ನಿರ್ದೇಶನ ನೀಡುವ ಅಧಿಕಾರವನ್ನು ಆರ್​ಬಿಐ ಕಾಯ್ದೆ 7ನೇ ಸೆಕ್ಷನ್ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ.
 • ಈ ಕಾಯ್ದೆಯ ಮೊದಲ ಅಂಶದಂತೆ, ಸಲಹೆ, ಸೂಚನೆ ನೀಡಿ ಸಮಾಲೋಚನೆ ನಡೆಸಬಹುದಾಗಿದೆ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿ ನಿರ್ದಿಷ್ಟ ನಿರ್ಧಾರ ಕೈಗೊಳ್ಳುವಂತೆ ಎರಡನೇ ಹಂತದಲ್ಲಿ ಆರ್​ಬಿಐಗೆ ಸೂಚನೆ ನೀಡಲಾಗುತ್ತದೆ. ಆರ್​ಬಿಐ ಇದನ್ನು ಪಾಲಿಸಲೇಬೇಕು.
 • ಈಗಾಗಲೇ ಸೆಕ್ಷನ್ 7ರ ಮೊದಲ ಅಂಶದ ಪ್ರಕಾರ ಸಮಾಲೋಚನೆ ನಡೆದಿದೆ. ಎರಡನೇ ಹಂತದಲ್ಲಿ ನಿರ್ದೇಶನಗಳನ್ನು ನೀಡಿದರೆ ಆರ್​ಬಿಐ -ಕೇಂದ್ರ ಸರ್ಕಾರ ನಡುವಿನ ಶೀತಲಸಮರ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆಗಳಿವೆ.

ಪತ್ರದಲ್ಲೇನಿದೆ?:

 • ಕಳೆದ ಕೆಲ ವಾರಗಳಲ್ಲೇ ಸಾರ್ವಜನಿಕ ಹಿತಾಸಕ್ತಿಗಳಿಗಾಗಿ ಆರ್​ಬಿಐಗೆ ಪ್ರತ್ಯೇಕ ಮೂರು ಪತ್ರಗಳನ್ನು ಬರೆದಿರುವ ಹಣಕಾಸು ಸಚಿವಾಲಯ, ನಗದು ನಿರ್ವಹಣೆ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್(ಪಿಸಿಯ) ಅನ್ವಯ ರೂಪುರೇಷೆ ಸಿದ್ಧಪಡಿಸುವ ವಿಷಯಕ್ಕೆ ಸಂಬಂಧಿಸಿ ಆರ್​ಬಿಐ ಕಾಯ್ದೆಯ ಸೆಕ್ಷನ್ 7ರ ಅನ್ವಯ ಸಮಾಲೋಚನೆ ನಡೆಸಲು ಪತ್ರದಲ್ಲಿ ಕೋರಲಾಗಿದೆ ಎಂದು ಮೂಲಗಳು ಹೇಳಿವೆ.
 • ಅನುತ್ಪಾದಕ ಸಾಲದ ಘೋಷಣೆ ವೇಳೆ ವಿದ್ಯುತ್ ಕಂಪನಿಗಳಿಗೆ ಪಿಸಿಎ ಅನ್ವಯ ಆರ್​ಬಿಐ ವಿನಾಯಿತಿ ನೀಡಬೇಕು ಎಂದು ಸರ್ಕಾರ ಮೊದಲ ಪತ್ರದಲ್ಲಿ ಕೋರಿದೆ.
 • ಮಾರುಕಟ್ಟೆಯ ನಗದು ನಿರ್ವಹಣೆಗೆ ಆರ್​ಬಿಐ ಮೀಸಲು ಬಂಡವಾಳ ಬಳಸಬೇಕು ಎಂದು ಎರಡನೇ ಪತ್ರದಲ್ಲಿ ಮನವಿ ಮಾಡಿದ್ದು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ನೀಡಿಕೆ ನಿರ್ಬಂಧಗಳನ್ನು ನಿವಾರಿಸಬೇಕು ಎಂದು ಮೂರನೇ ಪತ್ರದಲ್ಲಿ ಕೋರಲಾಗಿದೆ.

ಮುಂದೇನು?

 • ಹಣಕಾಸು ಸಚಿವಾಲಯ ಹೊರಡಿಸಿರುವ ಹೇಳಿಕೆ ಗಮನಿಸಿದರೆ ಸದ್ಯಕ್ಕೆ ಸರ್ಕಾರ ಆರ್​ಬಿಐಗೆ ಸ್ಪಷ್ಟ ನಿರ್ದೇಶನಗಳನ್ನು ನೀಡುವ ನಿರ್ಧಾರದಿಂದ ಹಿಂದೆ ಸರಿದಂತಿದೆ. ಮಾತುಕತೆ ಮೂಲಕವೂ ಎನ್​ಪಿಎ, ನಗದು ನಿರ್ವಹಣೆ ಸಮಸ್ಯೆಗೆ ಸೂಕ್ತ ಮಾಗೋಪಾಯ ಕೈಗೊಳ್ಳಲು ಸಾಧ್ಯವಾಗದಿದ್ದಲ್ಲಿ ಮಾತ್ರ ಸೆಕ್ಷನ್ 7ರ 2ನೇ ಅಂಶದಂತೆ ನಿರ್ದೇಶನಗಳನ್ನು ನೀಡಬಹುದು.

ಮೊದಲ ಮೈಕ್ರೋಪ್ರೊಸೆಸರ್‌ ‘ಶಕ್ತಿ’ ಸಿದ್ಧ

5.

ಸುದ್ಧಿಯಲ್ಲಿ ಏಕಿದೆ ? ಐಐಟಿ-ಮದ್ರಾಸ್‌(ಐಐಟಿ-ಎಂ) ನ ವಿದ್ಯಾರ್ಥಿಗಳು ಸ್ವದೇಶಿ ನಿರ್ಮಿತ ಮೊತ್ತ ಮೊದಲ ಮೈಕ್ರೋಪ್ರೊಸಸರ್‌ ತಯಾರಿಸಿದ್ದಾರೆ.

 • ಶೀಘ್ರದಲ್ಲೇ ಮೊಬೈಲ್‌, ಸರ್ವಿಲೆನ್ಸ್‌ ಕ್ಯಾಮರಾ, ಸ್ಮಾರ್ಟ್‌ ಮೀಟರ್‌ ಸೇರಿದಂತೆ ಇನ್ನಿತರ ವಸ್ತುಗಳಿಗೆ ಸ್ವದೇಶಿ ಮೈಕ್ರೋಪ್ರೊಸೆಸರ್‌ ಅಳವಡಿಸಲು ಅಣಿಗೊಳಿಸಲಾಗುತ್ತಿದೆ. ಹೊಸ ಉತ್ಪನ್ನಕ್ಕೆ ಶಕ್ತಿ ಎಂದು ನಾಮಕರಣ ಮಾಡಿರುವ ವಿದ್ಯಾರ್ಥಿಗಳಿಗೆ ಛಂಡೀಗಡದ ಇಸ್ರೋದ ಸೆಮಿಕಂಡಕ್ಟರ್‌ ಲ್ಯಾಬೋರೇಟರಿ ಸಾಥ್‌ ನೀಡಿದೆ.

ಉಪಯೋಗಗಳು

 • ಮೈಕ್ರೋಚಿಪ್‌ಗಳ ಆಮದು ಹಾಗೂ ಸೈಬರ್‌ ಸೆಕ್ಯುರಿಟಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಈ ಹೊಸ ಉತ್ಪನ್ನ ಸಹಕಾರಿಯಾಗಲಿದೆ ಎನ್ನಲಾಗಿದೆ.
 • ಅಲ್ಲದೆ ರಕ್ಷಣಾ ವಲಯದಲ್ಲೂ ಸಾಕಷ್ಟು ಅವಕಾಶಗಳಿವೆ. ಜುಲೈನಲ್ಲಿ 300 ಚಿಪ್‌ಗಳನ್ನು ಇಂಟೆಲ್‌, ಒರೆಗನ್‌, ಯುಎಸ್‌ ಹಾಗೂ ಲಿನ್ಯುಕ್ಸ್‌ ಆಪರೇಟಿಂಗ್‌ ಸಿಸ್ಟಮ್‌ನ ಸಹಾಯದೊಂದಿಗೆ ತಯಾರಿಸಲಾಗಿತ್ತು. ಇದೀಗ ಸಂಪೂರ್ಣ ಸ್ವದೇಶಿ ನಿರ್ಮಿತ ಚಿಪ್‌ಗಳನ್ನು ತಯಾರಿಸಲಾಗಿದೆ.
 • ಈಗಾಗಲೇ ಹೊಸ ಮೈಕ್ರೋಪ್ರೊಸೆಸರ್ ಭಾರತೀಯ ಉದ್ಯಮ ವಲಯಕ್ಕೆ ಪರಿಚಯಿಸಲ್ಪಟ್ಟಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ 13 ಸಂಸ್ಥೆಗಳು ಐಐಟಿ-ಎಂ ಜತೆ ವಾಣಿಜ್ಯ ವ್ಯವಹಾರಗಳ ಕುರಿತು ಸಂಪರ್ಕದಲ್ಲಿದ್ದಾರೆ.
 • ಇದೇ ತಂಡ ಪರಾಶಕ್ತಿ ಎಂಬ ಹೆಸರಿನ ಅತ್ಯಾಧುನಿಕ ಮೈಕ್ರೋಪ್ರೊಸೆಸರ್‌ನ ತಯಾರಿಯಲ್ಲಿದ್ದು, ಸೂಪರ್‌ ಕಂಪ್ಯೂಟರ್‌ಗಳಿಗೆ ಬಳಸಲಾಗುತ್ತದೆ. ವರ್ಷಾಂತ್ಯದ ವೇಳೆಗೆ ಸೂಪರ್‌ ಸ್ಕೇಲರ್‌ ಪ್ರೊಸೆಸರ್ ಸಿದ್ಧವಾಗಲಿದೆ. ಡೆಸ್ಕ್‌ಟಾಪ್‌ ಕಂಪ್ಯೂಟರ್‌ಗಳಿಗೂ ಇವುಗಳಲ್ಲಿ ಕೆಲವನ್ನು ಬಳಕೆ ಮಾಡುವಂತೆ ವಿನ್ಯಾಸ ಮಾಡಲಾಗಿದೆ .
Related Posts
“27th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
'ಸ್ವಚ್ಛ ಬೆಂಗಳೂರು' ಸುದ್ಧಿಯಲ್ಲಿ ಏಕಿದೆ ? ಬೆಂಗಳೂರು ನಗರವನ್ನು ಸ್ವಚ್ಛ ಮಾಡಲು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಾಲಾವಧಿ ನಿಗದಿಪಡಿಸಿದೆ. ಆದರೆ ಸ್ವಚ್ಛ ಬೆಂಗಳೂರಿನ ಸವಾಲನ್ನು ಎದುರಿಸಿ ಅದನ್ನು ಸಾಧಿಸುವುದು ಕಷ್ಟ. ಸವಾಲುಗಳೇನು ? ಕಸದಿಂದ ಹಿಡಿದು ಉಗುಳುವವರೆಗೆ, ಸಾರ್ವಜನಿಕ ಶೌಚಾಲಯದಿಂದ ಹಿಡಿದು ...
READ MORE
“15 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದ ಮೆರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌ ರ‍್ಯಾಂಕ್ ಪಟ್ಟಿ  ಸುದ್ಧಿಯಲ್ಲಿ ಏಕಿದೆ ?ಗುಣಮಟ್ಟದ ಜೀವನಕ್ಕೆ ಅತ್ಯುತ್ತಮ ನಗರ ಯಾವುದೆಂದು ತೀರ್ಮಾನಿಸುವ 2019ರ ದ ಮೆರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌ ರ‍್ಯಾಂಕ್ ಪಟ್ಟಿ (21ನೇ ಆವೃತ್ತಿ) ಬಿಡುಗಡೆಯಾಗಿದ್ದು, ಬೆಂಗಳೂರು ಜಾಗತಿಕ ಮಟ್ಟದಲ್ಲಿ 149ನೇ ಸ್ಥಾನ ...
READ MORE
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉದ್ಯೋಗ ಖಾತ್ರಿ ಹೆಚ್ಚಳ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಉದ್ಭವಿಸಿರುವ ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಕಾಯ್ದೆಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ 100 ದಿನಗಳ ಉದ್ಯೋಗವನ್ನು 150ಕ್ಕೆ ವಿಸ್ತರಿಸಲಾಗಿದ್ದು, ಈ ವರ್ಷ ಮಾನವ ದಿನಗಳ ಸೃಜನೆ ಗುರಿಯನ್ನು 8.5 ಕೋಟಿ ಯಿಂದ 10 ...
READ MORE
“19 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿಟಮಿನ್‌ ಎ ಲಸಿಕೆ ಕೊರತೆ ಸುದ್ಧಿಯಲ್ಲಿ ಏಕಿದೆ ?ಶಿಶುಗಳ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸುವ ವಿಟಮಿನ್‌ ಎ ಲಸಿಕೆಯು ರಾಜ್ಯದಲ್ಲಿ ಸಿಗುತ್ತಿಲ್ಲ. ಅನ್ನಾಂಗ ಕೊರತೆ ನಿವಾರಿಸುವ 10 ತಿಂಗಳಿಂದ 5 ವರ್ಷದೊಳಗಿನ ಮಕ್ಕಳಿಗೆ ಹಾಕುವ ವಿಟಮಿನ್ ಎ ಲಸಿಕೆಯು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ...
READ MORE
“08 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬಿಳಿಗಿರಿ ಬೆಟ್ಟದಲ್ಲಿ ಅಪರೂಪದ ಸಸ್ತನಿ ಪತ್ತೆ ಸುದ್ಧಿಯಲ್ಲಿ ಏಕಿದೆ ?ನಾಗರಹೊಳೆ, ಬಂಡೀಪುರ ಸೇರಿ ವಿವಿಧ ದಟ್ಟ ಕಾನನಗಳ ನಾಡು ಇದೀಗ ಅಪರೂಪದ ಸಸ್ತನಿಯ ಇರುವಿಕೆ ದೃಢಪಟ್ಟಿದೆ. ಸಾಮಾನ್ಯವಾಗಿ ಪಶ್ಚಿಮ ಘಟ್ಟದ ವಿರಾಜಪೇಟೆ ಭಾಗದಲ್ಲಿರುವ ಸೆಂಡಿಲಿ ಕೀರ(ಬ್ರೌನ್‌ ಮಂಗೂಸ್‌ ಅಥವಾ Herpestes fuscus) ಪ್ರಾಣಿ ಇದೀಗ ...
READ MORE
“22 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಸಾರಯುಕ್ತ ಅಕ್ಕಿ ಸುದ್ಧಿಯಲ್ಲಿ ಏಕಿದೆ ?ಬಿಸಿಯೂಟ ಯೋಜನೆಯನ್ವಯ ರಾಜ್ಯದ 4 ಜಿಲ್ಲೆಗಳ ಒಟ್ಟು 5 ಘಟಕಗಳಲ್ಲಿ ಸಾರವರ್ಧಿತ ಅಕ್ಕಿ ಬಳಸುವ ಸಂಬಂಧ 2017-18ನೇ ಸಾಲಿನ ಬಜೆಟ್​ನಲ್ಲಿ ಘೊಷಿಸಿರುವ ಕಾರ್ಯಕ್ರಮ ಜಿಲ್ಲೆಯಲ್ಲಿ ಇನ್ನೂ ಕಾರ್ಯರೂಪಕ್ಕೆ ಬಾರದೆ ವಿಳಂಬವಾಗಿದೆ. ಸಾರಯುಕ್ತ ಅಕ್ಕಿ ಬಳಕೆಗೆ ಕಾರಣ ಇದು ತೀವ್ರ ತರಹದ ...
READ MORE
” 26 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂಡಸ್ ನದಿ ಯೋಜನೆ ಸುದ್ಧಿಯಲ್ಲಿ ಏಕಿದೆ ? ಇಂಡಸ್ ನದಿ ನೀರು ಹಂಚಿಕೆ ಕುರಿತು ಪಾಕಿಸ್ತಾನದೊಂದಿಗೆ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದದಂತೆ ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ. ನದಿಗೆ ಅಡ್ಡಲಾಗಿ ನಿರ್ವಿುಸುತ್ತಿರುವ ಎರಡು ಅಣೆಕಟ್ಟೆಗಳ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಲು ಸರ್ಕಾರ ...
READ MORE
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಸಿವಿಜಿಲ್’ ಮೊಬೈಲ್ ಆಪ್ ಸುದ್ಧಿಯಲ್ಲಿ ಏಕಿದೆ ?ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಚುನಾವಣಾ ಆಯೋಗ ’ ಸಿವಿಜಿಲ್’ ಮೊಬೈಲ್ ಆಪ್ ಹೊರತರುತ್ತಿದೆ. ಆಪ್​ನಲ್ಲಿ ಅಕ್ರಮದ ಫೋಟೋ, ವೀಡಿಯೋ ಅಪ್​ಲೋಡ್ ಮಾಡಿದ 100 ನಿಮಿಷಗಳಲ್ಲಿ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿಯೂ ಲಭಿಸಲಿದೆ. ಹಿನ್ನಲೆ ಕಳೆದ ...
READ MORE
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷಿ ಆದಾಯ ಹೆಚ್ಚಳಕ್ಕೆ ಯೋಜನೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕೃಷಿ ಭೂಮಿ ಸದ್ಬಳಕೆ ಜತೆಗೆ ಅನ್ನದಾತರ ಆದಾಯವನ್ನೂ ಹೆಚ್ಚಿಸುವ ಉದ್ದೇಶದಿಂದ ಮೂರು ಹೊಸ ಕಾಯ್ದೆಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ರೂಪಿಸಿದ್ದ ಮಾದರಿ ಕಾಯ್ದೆಗಳು ಇದಕ್ಕೆ ಆಧಾರವಾಗಿರುವುದು ವಿಶೇಷ. ಉದ್ದೇಶ ಕೃಷಿ ಭೂಮಿ ಗುತ್ತಿಗೆ ...
READ MORE
“04 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉಪ್ಪು ನೀರು ಸಿಹಿಯಾಗೋ ಕಾಲ ಸುದ್ಧಿಯಲ್ಲಿ ಏಕಿದೆ ?ಸಮುದ್ರದ ಉಪ್ಪು ನೀರು ಸಿಹಿಯಾಗಿ ಮನೆ ಮನೆಗೆ ತಲುಪುವ ಕಾಲ ಸನ್ನಿಹಿತವಾಗುತ್ತಿದೆ. ಮಂಗಳೂರು ತೈಲಾಗಾರ (ಎಂಆರ್‌ಪಿಎಲ್‌) ಕೈಗೆತ್ತಿಕೊಂಡಿರುವ ಬಹು ನಿರೀಕ್ಷೆಯ ಉಪ್ಪು ನೀರು ಸಂಸ್ಕರಣಾ ಘಟಕ 2020ರ ವೇಳೆಗೆ ಕಾರ್ಯಗತಗೊಳ್ಳುವ ನಿರೀಕ್ಷೆಯಿದ್ದು, ರಾಜ್ಯದಲ್ಲೇ ಪ್ರಥಮ ...
READ MORE
“27th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“15 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“19 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“08 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“22 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
” 26 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“04 ಫೆಬ್ರವರಿ 2019 ರ ಕನ್ನಡ ಪ್ರಚಲಿತ

Leave a Reply

Your email address will not be published. Required fields are marked *