“10 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಪ್ರಸಾದ ತಯಾರಿಕೆಗೂ ಲೈಸೆನ್ಸ್

1.

ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಪ್ರಸಾದ ವಿನಿಯೋಗಿಸುವ 30 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ಆಹಾರ ತಯಾರಿಕಾ ಘಟಕಗಳಿಗೆ ಇನ್ನು ಲೈಸನ್ಸ್ ಕಡ್ಡಾಯವಾಗಲಿದೆ.

 • ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ 37 ಸಾವಿರ ದೇವಾಲಯಗಳೂ ಸೇರಿ 2 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳಿವೆ. ಈ ಪೈಕಿ ಅಂದಾಜು 30-40 ಸಾವಿರ ದೇವಸ್ಥಾನಗಳಲ್ಲಿ ಪ್ರಸಾದ ವಿತರಿಸಲಾಗುತ್ತದೆ. ಪ್ರಸಾದ ತಯಾರಿಸುವ ಅಡುಗೆ ಕೋಣೆಗಳನ್ನು ಆಹಾರ ಸುರಕ್ಷತಾ ಕಾಯ್ದೆಯಡಿ ತಂದು ಹೋಟೆಲ್-ಅಂಗಡಿ ಮುಂಗಟ್ಟುಗಳಿಗೆ ನೀಡುವಂತೆ ಲೈಸನ್ಸ್ ಕಡ್ಡಾಯಗೊಳಿಸಲಾಗುತ್ತದೆ.
 • ಕೇಂದ್ರದ ಮಾರ್ಗಸೂಚಿ ಅನ್ವಯ ರಾಜ್ಯ ಆಹಾರ ಸುರಕ್ಷತಾ ಇಲಾಖೆ ಸುತ್ತೋಲೆ ಕರಡು ಸಿದ್ಧಪಡಿಸಿದ್ದು, ಆಯುಕ್ತರ ಅನುಮೋದನೆ ಪಡೆದು ಒಂದೆರಡು ವಾರಗಳಲ್ಲೇ ಜಾರಿಗೆ ಬರಲಿದೆ.

ಲೈಸೆನ್ಸ್ ಪಡೆದಿರುವ ದೇವಸ್ಥಾನಗಳು

 • ಧರ್ಮಸ್ಥಳ ಮಂಜುನಾಥೇಶ್ವರ, ಕುಕ್ಕೆ ಸುಬ್ರಹ್ಮಣ್ಯ ಮತ್ತು ಮಲೆ ಮಹದೇಶ್ವರ ದೇವಸ್ಥಾನಗಳ ಪ್ರಸಾದ ತಯಾರಿಕಾ ಘಟಕಗಳು ಸೇರಿ ರಾಜ್ಯದ 60-70 ದೇವಸ್ಥಾನಗಳು ಲೈಸೆನ್ಸ್ ಪಡೆದಿದ್ದು, ಉಳಿದ ದೇವಸ್ಥಾನಗಳಿಗೂ ಈ ಕಾಯ್ದೆ ಕಡ್ಡಾಯವಾಗಿ ಜಾರಿಗೊಳಿಸಲು ಆರೋಗ್ಯ ಇಲಾಖೆ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಿದೆ.

ಯಾವ ನಿಬಂಧನೆಗಳನ್ನು ವಿಧಿಸಲಾಗಿದೆ ?

 • ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪ್ರಸಾದ ತಯಾರಿಸುವ ಕೋಣೆಗಳಿಗೆ ಸಿಸಿ ಕ್ಯಾಮರಾ ಅಳವಡಿಕೆ ಸೇರಿ ಹಲವು ನಿಬಂಧನೆ ವಿಧಿಸಲಾಗಿದೆ.
 • ಅಡುಗೆ ತಯಾರಕರು 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಿ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ.
 • ಪ್ರಸಾದ ತಯಾರಿಸುವ ಅಡುಗೆ ಕೋಣೆ ಲೈಸನ್ಸ್​ಗೆ ವಾರ್ಷಿಕ 2 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ.

ಪ್ಲಾಸ್ಟಿಕ್-ಕಾಗದ ಪ್ಯಾಕ್ ಇಲ್ಲ

 • ಪ್ರಸಾದವನ್ನು ಪ್ಲಾಸ್ಟಿಕ್ ಹಾಗೂ ರದ್ದಿ ಕಾಗದದಲ್ಲಿ ಪ್ಯಾಕ್ ಮಾಡುವಂತಿಲ್ಲ. ಪೊಟ್ಟಣಗಳ ಮೇಲೆ ಪ್ರಸಾದ ತಯಾರಿಕಾ ದಿನಾಂಕ-ಅವಧಿ ಮುಕ್ತಾಯವಾಗಲಿರುವ ದಿನಾಂಕ ನಮೂದಿಸು ವುದು ಕಡ್ಡ್ಡಾಯ ಎಂದು ಆರೋಗ್ಯ ಇಲಾಖೆ ಆದೇಶಿಸಿದೆ.

ಹಿನ್ನಲೆ

 • ಚಾಮರಾಜನಗರ ಜಿಲ್ಲೆ ಸುಳವಾಡಿ ಗ್ರಾಮದ ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 17 ಜನ ಮೃತಪಟ್ಟಿದ್ದರಿಂದ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆರೋಗ್ಯ ಇಲಾಖೆ ಸಜ್ಜಾಗಿದೆ.

ಏರ್​ಪೋರ್ಟ್​ನಿಂದ ಪಿಂಕ್ ಟ್ಯಾಕ್ಸಿ 24/7 ಸೇವೆ ಶುರು

2.

ಸುದ್ಧಿಯಲ್ಲಿ ಏಕಿದೆ ?ಮಹಿಳೆಯರಿಂದ ಮಹಿಳೆಯರಿಗಾಗಿ ಏರ್​ಪೋರ್ಟ್ ಪಿಂಕ್ ಟ್ಯಾಕ್ಸಿ ಸೇವೆಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್​ಟಿಡಿಸಿ) ಆರಂಭಿಸಲಿದೆ.

 • ಗುಲಾಬಿ ಕಾರು (ಪಿಂಕ್ ಟ್ಯಾಕ್ಸಿ) ಸೇವೆಗೆ ನಿಗಮದ ಎಂಡಿ ಕುಮಾರ ಪುಷ್ಕರ್ ಚಾಲನೆ ನೀಡಿದರು.
 • ಒಟ್ಟು 850 ಏರ್​ಪೋರ್ಟ್ ಟ್ಯಾಕ್ಸಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಚಾಲಕಿಯರು ಉತ್ತಮ ಚಾಲನಾ ತರಬೇತಿ ಪಡೆದಿದ್ದು, ಸ್ವರಕ್ಷಣಾ ಸಾಮರ್ಥ್ಯ ಹೊಂದಿದ್ದಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಸ್ಥಳಕ್ಕೆ ತಲುಪಿಸಬಲ್ಲವರಾಗಿದ್ದಾರೆ.
 • ಪಿಂಕ್ ಟ್ಯಾಕ್ಸಿಗಳಿಗೆ ಜಿಪಿಎಸ್ ಸಾಧನ, ಆರ್​ಎಫ್​ಐಡಿ ಟ್ಯಾಕ್ಸ್ ಎಂಡಿಟಿ ಸಾಧನಗಳು ಅಲ್ಲದೆ ‘ಆತಂಕ ಕ್ಷಣದ ಗುಂಡಿ’ (ಪ್ಯಾನಿಕ್ ಬಟನ್) ಅಳವಡಿಸಲಾಗಿದೆ. ದಿನದ 24 ಗಂಟೆಯೂ ವಾಹನಗಳ ಚಲನವಲನಗಳ ಬಗ್ಗೆ ನಿಗಾ ವಹಿಸುವ ವ್ಯವಸ್ಥೆಯೂ ಇರುತ್ತದೆ. ಈ ರೀತಿಯ ಕೆಎಸ್​ಟಿಡಿಸಿ ಕಾರುಗಳನ್ನು ಸುಲಭವಾಗಿ ಗುರುತಿಸಲು ಗುಲಾಬಿ ಬಣ್ಣದ ಬಂಪರ್​ಗಳನ್ನು ಅಳಡಿಸಲಾಗಿದೆ.

ಉಪಯೋಗಗಳು

 • ಒಂಟಿ ಮಹಿಳೆಯರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಪ್ರಯಾಣದ ಭರವಸೆ ದೊರೆಯಲಿದ್ದು,
 • ಚಾಲಕಿಯರಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಆರಂಭಿಕವಾಗಿ 10 ಚಾಲಕಿಯರಿರುವ ಹೊಸ ಕಾರುಗಳನ್ನು ಸೇರ್ಪಡೆಮಾಡಿಕೊಳ್ಳಲಿದೆ.

ಹರಪ್ಪ ಕಾಲದ ಜೋಡಿ ಸಮಾಧಿ ಪತ್ತೆ

3.

ಸುದ್ಧಿಯಲ್ಲಿ ಏಕಿದೆ ?ಯುವಕ ಮತ್ತು ಯುವತಿಯನ್ನು ಒಟ್ಟಾಗಿ ಹೂತಿರುವ ಹರಪ್ಪ ಕಾಲದ್ದೆಂದು ಹೇಳಲಾದ ಸಮಾಧಿಯನ್ನು ಪುಣೆಯ  ಡೆಕ್ಕನ್ ಕಾಲೇಜು ಸ್ವಾಯತ್ತ ವಿಶ್ವವಿದ್ಯಾಲಯದ ಪುರಾತತ್ವ ತಜ್ಞರು ಪತ್ತೆ ಮಾಡಿದ್ದಾರೆ.

ಸಮಾಧಿ ಎಲ್ಲಿ ಪತ್ತೆಯಾಗಿದೆ ?

 • ಕೊರಿಯಾದ ಸಿಯೋಲ್​ನ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾಲೇಜಿನ ವಿಧಿವಿಜ್ಞಾನ ಸಂಸ್ಥೆ ಪುರಾತತ್ವ ತಜ್ಞರು ಹಾಗೂ ಡೆಕ್ಕನ್ ವಿಶ್ವವಿದ್ಯಾಲಯ ಒಟ್ಟಾಗಿ ಸಂಶೋಧನೆ ನಡೆಸುತ್ತಿದ್ದಾಗ ಹರಿಯಾಣದ ರಾಖಿಗಢಿ ಎಂಬಲ್ಲಿ ಈ ಸಮಾಧಿ ಪತ್ತೆಯಾಗಿದೆ.
 • ಬಲ ಭಾಗದಲ್ಲಿರುವ ಯುವತಿಯತ್ತ ಯುವಕ ನೋಡುತ್ತಿರುವ ರೀತಿಯಲ್ಲಿ ಶವಗಳನ್ನು ಹೂಳಲಾಗಿದೆ. ಎರಡೂ ಅಸ್ಥಿಪಂಜರಗಳ ಕೈ ಮತ್ತು ಕಾಲುಗಳು ನೇರವಾಗಿ ಚಾಚಿದ ಸ್ಥಿತಿಯಲ್ಲಿದೆ. ಯುವಕ ಹಾಗೂ ಯುವತಿ ಇಬ್ಬರ ಸಮಾಧಿಯೂ ಈ ಸ್ಥಿತಿಯಲ್ಲಿ ದೊರಕಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
 • 21ರಿಂದ 35 ವರ್ಷದ ಈ ಜೋಡಿಯನ್ನು ಒಟ್ಟಾಗಿ ಸಮಾಧಿ ಮಾಡಲಾಗಿದೆಯೇ ಅಥವಾ ಪ್ರತ್ಯೇಕವಾಗಿಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಪುರಾತತ್ವ ತಜ್ಞರು ಹೇಳಿದ್ದಾರೆ.
 • ಹರಪ್ಪನ್‌ ಸ್ಮಶಾನದಲ್ಲಿ ಜೋಡಿಯನ್ನು ಜತೆಯಾಗಿ ಹೂಳಿರುವ ಬಗ್ಗೆ ಮೊದಲ ಕುರುಹಾಗಿ ಮಾನವಶಾಸ್ತ್ರಜ್ಞರು ಗುರುತಿಸಿದ್ದಾರೆ. ಇದುವರೆಗೆ ಹರಪ್ಪನ್‌ ಯುಗದಲ್ಲಿ ಜೋಡಿಯನ್ನು ಜತೆಯಾಗಿ ಸಮಾಧಿ ಮಾಡಿದ ಬಗ್ಗೆ ಇದುವರೆಗೆ ಯಾವುದೇ ಕುರುಹುಗಳು ಸಿಕ್ಕಿರಲಿಲ್ಲ.

ಲೋಥಲ್​ನಲ್ಲಿ ಸಿಕ್ಕಿತ್ತು…

 • ಹರಪ್ಪ ಕಾಲದ್ದೆಂದು ಹೇಳಲಾದ ಮೊದಲ ಜೋಡಿ ಸಮಾಧಿ ಈಗಿನ ಗುಜರಾತ್​ನಲ್ಲಿರುವ ಸಿಂಧೂ ನದಿ ಕಣಿವೆ ನಾಗರಿಕತೆಯ ಕುರುಹುಗಳು ಯಥೇಚ್ಚವಾಗಿ ಲಭ್ಯವಿರುವ ಲೋಥಲ್ ಎಂಬಲ್ಲಿ ಪತ್ತೆಯಾಗಿತ್ತು.
 • ಬಹುಶಃ ಪತಿಯ ಸಾವಿನ ದುಃಖ ಭರಿಸಲಾಗದೆ ಪತ್ನಿಯೂ ಜೀವಂತವಾಗಿ ಸಮಾಧಿಯಾಗಿರುವ ಸಾಧ್ಯತೆ ಇರಬಹುದು ಎಂದು ಆಗ ಅಂದಾಜಿಸಲಾಗಿತ್ತು.

ಹರಪ್ಪನ್ ನಾಗರೀಕತೆ: ಸಮಾಧಿ ಸ್ಥಳಗಳು ಮತ್ತು ಆಚರಣೆಗಳು

 • ಸಿಂಧೂ ಕಣಿವೆ ಪ್ರದೇಶದ ಮೊದಲ ನಾಗರೀಕತೆಗಳಲ್ಲಿ ಹರಪ್ಪನ್ ನಾಗರಿಕತೆಯು ಒಂದು. ಇದು ಸುಮಾರು 2500 ರಿಂದ ಕ್ರಿ.ಪೂ. 1900 ರವರೆಗೆ ವಿಸ್ತರಿಸಿದೆ. ನಾಗರಿಕತೆಯು ತನ್ನ ಹೆಸರನ್ನು ಹರಪ್ಪ ನಗರದಿಂದ ಪಡೆದುಕೊಂಡಿದೆ , ಅಲ್ಲಿ ಸಮಾಧಿ ಸ್ಥಳಗಳು ಕಂಡುಬಂದಿವೆ. ಹರಪ್ಪನ್ ಜನರ ಅಂತ್ಯಸಂಸ್ಕಾರದ ಅಭ್ಯಾಸಗಳು ಅವರ ಸಂಸ್ಕೃತಿ ಮತ್ತು ನೈಸರ್ಗಿಕ,, ಜೀವ ಮತ್ತು ಮರಣದ ಕಲ್ಪನೆಗಳ ಬಗ್ಗೆ ಕಲ್ಪನೆಗಳನ್ನು ರೂಪಿಸುವಲ್ಲಿ ನಮಗೆ ಸಹಾಯ ಮಾಡುತ್ತದೆ.
 • ಮೊಹೆಂಜೋಧರೋವಿನಲ್ಲಿ ಮೂರು ತರಹದ ಸಮಾಧಿಗಳನ್ನು ಪತ್ತೆಮಾಡಲಾಗಿದೆ.ಅವುಗಳೆಂದರೆ , ಸಂಪೂರ್ಣ ಸಮಾಧಿಗಳು, ಭಾಗಶಃ ಸಮಾಧಿಗಳು, ಮತ್ತು ಅಂತ್ಯಸಂಸ್ಕಾರದ ನಂತರದ ಸಮಾಧಿಗಳು.
 • ಸಂಪೂರ್ಣ ಸಮಾಧಿ ಎಂದರೆ ಇಡೀ ದೇಹವನ್ನು ಸಮಾಧಿ ಮಾಡುವುದು, ಈ ಆಚರಣೆಯಲ್ಲಿ ವಿವಿಧ ರೀತಿಯ ರೂಪಗಳಲ್ಲಿ ಪ್ರದರ್ಶಿಸಲಾಗುತ್ತದೆ, ಸಮಾಧಿ ಪೀಠೋಪಕರಣಗಳು, ಅರ್ಪಣೆಗಳು ಇತ್ಯಾದಿ.
 • ಭಾಗಶಃ ಸಮಾಧಿಯು ಮೃತ ದೇಹವನ್ನು ಕಾಡು ಮೃಗಗಳು ಮತ್ತು ಪಕ್ಷಿಗಳಿಗೆ ಒಡ್ಡಿದಾಗ ಉಳಿದುಕೊಂಡ ಕೆಲವು ಮೂಳೆಗಳ ಸಂಗ್ರಹವನ್ನು  ಪ್ರತಿನಿಧಿಸುತ್ತದೆ. ಐದು ಅಂತಹ ಸಮಾಧಿಗಳನ್ನು ಪತ್ತೆ ಮಾಡಲಾಗಿದೆ, ಅತ್ಯುತ್ತಮ ಮಾದರಿಯು ಒಂದು ತಲೆಬುರುಡೆ ಮತ್ತು ಕೆಲವು ತುಣುಕುಗಳನ್ನು ಒಳಗೊಂಡಿದ್ದು, ಹಲವಾರು ಮಣ್ಣಿನ ಪಾತ್ರೆಗಳು ಮತ್ತು ಚೆಂಡುಗಳು, ಮಣಿಗಳು, ಶೆಲ್ ಚಮಚ, ದಂತದ ಬಿಟ್ಗಳು ಮತ್ತು ಚಿಕಣಿ ಹಡಗುಗಳು ಸೇರಿದಂತೆ ವಿವಿಧ ಸಣ್ಣ ವಸ್ತುಗಳನ್ನು ಒಳಗೊಂಡಿವೆ.
 • ಅಂತ್ಯಸಂಸ್ಕಾರದ ನಂತರದ ಸಮಾಧಿಗಳನ್ನು ಹಲವಾರು ಸಣ್ಣ ಹಡಗುಗಳು, ಕುರಿಮರಿಗಳು, ಆಡುಗಳು, ಮುಂತಾದ ಪ್ರಾಣಿಗಳ ಮೂಳೆಗಳು ಮತ್ತು ಪಕ್ಷಿಗಳು ಅಥವಾ ಮೀನುಗಳು ಮತ್ತು ಮಣಿಗಳು, ಬಳೆಗಳು, ಸಣ್ಣ ಪ್ರತಿಮೆಗಳು ಮುಂತಾದ ವೈವಿಧ್ಯಮಯ ಸಣ್ಣ ವಸ್ತುಗಳನ್ನೊಳಗೊಂಡ ದೊಡ್ಡ ವಿಶಾಲ-ಮುತ್ತಿನ ಸಮಾಧಿಗಳಿಂದ ಮಾಡಲ್ಪಟ್ಟಿದ್ದವು ಎಂದು ಊಹಿಸಲಾಗಿದೆ. , ಇತ್ಯಾದಿ.
 • ಕೆಲವು ಬಾರಿ ಚಾರ್ಕೋಲ್ ಚಿತಾಭಸ್ಮದೊಂದಿಗೆ ಬೆರೆಸಲಾಗುತ್ತದೆ. ಇವುಗಳು ಸಾಮಾನ್ಯವಾಗಿ ನೆಲದ ಅಡಿಯಲ್ಲಿ ಅಥವಾ ಬೀದಿಯಅಡಿಯಲ್ಲಿಕಂಡುಬರುತ್ತವೆ. ಮಾನವ ಮೂಳೆಗಳು ಅಪರೂಪವಾಗಿ ಕಂಡುಬರುತ್ತವೆ ಏಕೆಂದರೆ ಅಂತ್ಯಕ್ರಿಯೆ ಸಮಾಧಿ ಸಮಾರಂಭಗಳಿಗೆ ಮೂಳೆಗಳು ಅಷ್ಟೇನೂ ಅವಶ್ಯಕವಾಗಿದ್ದವು ಎಂದು ಅನಿಸುವುದಿಲ್ಲ

ಜಗತ್ತಿನ ಅತಿದೊಡ್ಡ ಕುಂಭಮೇಳ

4.

ಸುದ್ಧಿಯಲ್ಲಿ ಏಕಿದೆ ?ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಗತ್ತಿನ ಅತ್ಯಂತ ದೊಡ್ಡ ಜನಜಾತ್ರೆ, ಜಗತ್ತಿನ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮ.

 • ಯುನೆಸ್ಕೋದಿಂದ ಮನುಕುಲದ ಚರಿತ್ರೆಯಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಸಾಂಸ್ಕೃತಿಕ ಪರಂಪರೆಎಂದು ಹೊಗಳಿಸಿಕೊಂಡಿರುವ ಅರ್ಧ ಕುಂಭ ಮೇಳ, ಪ್ರತಿ ಆರು ವರ್ಷಕ್ಕೊಮ್ಮೆ ನಡೆಯುವಂಥದು. ಈ ಬಾರಿ ಜ.15ರ ಮಕರ ಸಂಕ್ರಾಂತಿಯಿಂದ ಆರಂಭವಾಗಿ ಮಾರ್ಚ್‌ 4ರ ಶಿವರಾತ್ರಿಯವರೆಗೆ 49 ದಿನಗಳ ಕಾಲ ನಡೆಯಲಿದೆ.
 • ಯಮುನಾ ನದಿಯಲ್ಲಿ ಪವಿತ್ರ ನೀರು ಹರಿಯುವ ಕ್ಷಣಕ್ಕೆ ಕಾದಿರುವ ಕೋಟ್ಯಂತರ ಜನರ ಪ್ರವಾಹ, ಏಕಕಾಲಕ್ಕೆ ನದಿಸ್ನಾನಕ್ಕೆ ಇಳಿದುಬಿಡುತ್ತದೆ. ಅದರಲ್ಲಿ ಪ್ರಮುಖ ಭಾಗ ದೇಶ- ವಿದೇಶಗಳೆಲ್ಲೆಡೆಗಳಿಂದ ಬರುವ ಸಾಧುಗಳದು. ಕುಂಭಮೇಳದ ಹೊತ್ತಿಗೆ ಸರಿಯಾಗಿ ಯಮುನೆಯ ತಟದಲ್ಲಿರುತ್ತಾರೆ ಈ ಸಾಧುಗಳು. ನಾಗಾ ಸಾಧುಗಳು, ಕಾಪಾಲಿಕರು, ಶಾಕ್ತ ಪಂಥದವರು- ಹೀಗೆ ನಾನಾ ಪಂಥದ, ನಾನಾ ಅಖಾಡದ ಸಾಧು ಸನ್ಯಾಸಿಗಳಿಂದ ಪ್ರಯಾಗ್‌ರಾಜ್‌ ಗಿಜಿಗುಡುತ್ತಿರುತ್ತದೆ.

ಈ ಸಲದ ವಿಶೇಷತೆಗಳು

 • ಕಳೆದ ಬಾರಿ 2013ರಲ್ಲಿ ನಡೆದಿತ್ತು. ಈ ಬಾರಿ ಕುಂಭ ಮೇಳ ನಡೆಯುವ ಸ್ಥಳ ಅಲಹಾಬಾದ್‌ಬದಲು ಪ್ರಯಾಗ್‌ರಾಜ್‌ಆಗಿದೆ. 49 ದಿನಗಳಲ್ಲಿ 12-15 ಕೋಟಿ ಭಕ್ತರು ಪವಿತ್ರಸ್ನಾನಕ್ಕಾಗಿ ಆಗಮಿಸುವ ನಿರೀಕ್ಷೆಯಿದೆ. ಕಳೆದ ಸಲಕ್ಕಿಂತ ಬಜೆಟ್‌ ಮೂರು ಪಟ್ಟು ಆಗಿದೆ. 1300 ಕೋಟಿಯಿಂದ 4200 ಕೋಟಿಗೆ ಬೆಳೆದಿದೆ. ಮೇಳ ನಡೆಯುವ ಜಾಗದ ವಿಸ್ತೀರ್ಣವನ್ನು 2000 ಹೆಕ್ಟೇರ್‌ಗಳಿಂದ 3200 ಹೆಕ್ಟೇರ್‌ಗೆ ಹೆಚ್ಚಿಸಲಾಗಿದೆ.

ಕುಂಭಸ್ನಾನ ಯಾಕೆ?:

 • ಕುಂಭಸ್ನಾನ ಪವಿತ್ರತೆಯನ್ನು ಸಾರುವ ಪುರಾಣದ ಕತೆಯಿದೆ. ಒಮ್ಮೆ ದೂರ್ವಾಸರ ಶಾಪದಿಂದಾಗಿ ಸ್ವರ್ಗದ ಸಕಲ ಸುವಸ್ತುಗಳೂ ಸಮುದ್ರದಲ್ಲಿ ಕಣ್ಮರೆಯಾದವು. ಅವುಗಳನ್ನು ಮರಳಿ ಪಡೆಯಲು ದೇವಾಸುರರು ಸೇರಿ ಸಮುದ್ರವನ್ನು ಮಥಿಸತೊಡಗಿದರು. ಸುವಸ್ತುಗಳು ಸ್ವರ್ಗವನ್ನು ಸೇರಿದವು. ಕೊನೆಯದಾಗಿ ಆಗಮಿಸಿದ ಅಮೃತಕ್ಕಾಗಿ ದೇವಾಸುರರ ನಡುವೆ ಕಲಹ ಎದ್ದಿತು. ವಿಷ್ಣುವು ಮೋಹಿನಿಯ ರೂಪವನ್ನು ಧರಿಸಿ, ಅಸುರರನ್ನು ವಂಚಿಸಿ ಅಮೃತಕುಂಭವನ್ನು ದೇವತೆಗಳಿಗಾಗಿ ಹೊತ್ತೊಯ್ದ. ಹಾಗೆ ಒಯ್ಯುವ ವೇಳೆಗೆ. ಕುಂಭದಿಂದ ನಾಲ್ಕು ಹನಿ ಅಮೃತ ಚೆಲ್ಲಿ ಭೂಮಿಯ ನಾಲ್ಕು ಕಡೆ ಬಿತ್ತು.
 • ಆ ನಾಲ್ಕು ಸ್ಥಳಗಳು- ಪ್ರಯಾಗ್‌ರಾಜ್‌, ಹರಿದ್ವಾರ, ನಾಶಿಕ್‌ ಮತ್ತು ಉಜ್ಜಯಿನಿ.
 • ಪ್ರಯಾಗ್‌ರಾಜ್‌ನಲ್ಲಿ ಗಂಗೆ- ಯಮುನಾ ಸಂಗಮ, ಹರಿದ್ವಾರದಲ್ಲಿ ಗಂಗೆ, ನಾಶಿಕದಲ್ಲಿ ಗೋದಾವರಿ ಹಾಗೂ ಉಜ್ಜಯಿನಿಯಲ್ಲಿ ಶಿಪ್ರಾ ನದಿಗಳು ಪವಿತ್ರಸ್ನಾನದ ತಾಣವಾಗಿವೆ. ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಈ ಅಮೃತ ನದಿಯಲ್ಲಿ ಉಕ್ಕುವುದರಿಂದ, ಆ ಸಂದರ್ಭದಲ್ಲಿ ಸ್ನಾನ ಮಾಡುವುದರಿಂದ ಪವಿತ್ರರಾಗಬಹುದು ಎಂಬುದು ಭಕ್ತರ ನಂಬಿಕೆ.
 • ಹನ್ನೆರಡು ವರ್ಷಕ್ಕೊಮ್ಮೆ ಪೂರ್ಣಕುಂಭ, ಆರು ವರ್ಷಕ್ಕೊಮ್ಮೆ ಅರ್ಧಕುಂಭ ನಡೆಯುತ್ತವೆ.
 • ಅಖಾಡಗಳ ಆಕರ್ಷಣೆ: ಅಖಾಡಗಳೆಂದರೆ ಸಾಧುಗಳ ಪಂಥಗಳು. ತಾವು ಆರಾಧಿಸುವ ದೇವತೆಯ ಹಿನ್ನೆಲೆಯಲ್ಲಿ ತಮ್ಮನ್ನು ಇವರು ಪ್ರತ್ಯೇಕ ಅಖಾಡದವರು ಎಂದು ಕರೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಎಲ್ಲರ ದೇವತೆ ಶಿವ ಅಥವಾ ವಿಷ್ಣು. ಸುಮಾರು 13 ಅಖಾಡಗಳು ಇಲ್ಲಿ ಪಾಲ್ಗೊಳ್ಳುತ್ತವೆ. ಪ್ರತ್ಯೇಕ ಅಖಾಡದ ಸಾಧುಗಳು ಏಕಕಾಲಕ್ಕೆ ಮೆರವಣಿಗೆಯಲ್ಲಿ ಆಗಮಿಸಿ ಸ್ನಾನಕ್ಕಿಳಿಯುತ್ತಾರೆ.
 • ಮಹಾನಿರ್ವಾಣಿ ಅಖಾಡ ಮೊದಲ ಸ್ನಾನವನ್ನೂ, ನಿರ್ಮಲ ಅಖಾಡ ಕೊನೆಯ ಸ್ನಾನವನ್ನೂ ನೆರವೇರಿಸುತ್ತವೆ.
 • ತೇಲುವ ಘಾಟ್‌ಗಳು: ಪವಿತ್ರಸ್ನಾನಕ್ಕಾಗಿ ನಾಲ್ಕು ತೇಲುವ ಘಾಟ್‌ಗಳನ್ನು ರಚಿಸಲಾಗಿದೆ. ಕಿಲಾ ಘಾಟ್‌, ಸರಸ್ವತಿ ಘಾಟ್‌, ನೈನಿ ಸೇತುವೆ ಹಾಗೂ ಸುಜವಾನ್‌ ಘಾಟಗಳಲ್ಲಿವೆ. ಎರಡು ದೊಡ್ಡ ನೌಕೆಗಳು ಮತ್ತು ಸಾಕಷ್ಟು ಸಣ್ಣ ದೋಣಿಗಳನ್ನು ಭಕ್ತರ ಓಡಾಟಕ್ಕೆ ಕಲ್ಪಿಸಲಾಗಿದೆ.
 • ಗಂಗೆ- ಯಮುನೆ ಸ್ವಚ್ಛ : ಈಗಾಗಲೇ ಸಾಕಷ್ಟು ಕೊಳಕಾಗಿರುವ ಗಂಗೆ ಹಾಗೂ ಯಮುನಾ ನದಿಯ ನೀರನ್ನು ಈ ಸಂದರ್ಭ ಸ್ವಚ್ಛವಾಗಿ ಕಾಪಾಡಿಕೊಳ್ಳುವುದೇ ಸವಾಲು. ಭಕ್ತರಿಗೆ ಸಾಧ್ಯವಾದಷ್ಟು ಸ್ವಚ್ಛವಾದ ನೀರನ್ನು ಒದಗಿಸುವ ಸಂಕಲ್ಪವನ್ನು ಸರಕಾರ ಮಾಡಿದೆ. ಅದಕ್ಕಾಗಿ ರಾಷ್ಟ್ರೀಯ ಹಸಿರು ಪ್ರಾಧಿಕಾರವು ಗಂಗಾನದಿಯ ಅಕ್ಕಪಕ್ಕದ 100 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿದೆ.
 • ಕಾನ್ಪುರದಿಂದ ಉನ್ನಾವೊವರೆಗಿನ ವ್ಯಾಪ್ತಿಯಲ್ಲಿರುವ ಎಲ್ಲ ಟ್ಯಾನರಿಗಳನ್ನು ಡಿ.15ರಿಂದ ಮಾ.15ರವರೆಗೆ ಬಂದ್‌ ಮಾಡಿಸಲಾಗಿದೆ. ಗಂಗಾನದಿಗೆ ಯಾವುದೇ ತ್ಯಾಜ್ಯವನ್ನು ವಿಸರ್ಜಿಸಕೂಡದು ಎಂಬ ಷರತ್ತಿನೊಂದಿಗೆ ಎರಡು ಟ್ಯಾನರಿಗಳಿಗೆ ಕೆಲಸ ಮಾಡಲು ಅಲಹಾಬಾದ್‌ ಹೈಕೋರ್ಟ್‌ ಅವಕಾಶ ಕಲ್ಪಿಸಿದೆ. 14 ಕೋಟಿ ಲೀಟರ್‌ಗಳಷ್ಟು ಅಸಂಸ್ಕರಿತ ಚರಂಡಿ ನೀರನ್ನು ಗಂಗೆಗೆ ಸುರಿಯುತ್ತಿದ್ದ ಸಿಸ್ಮಾವು ಡ್ರೈನೇಜನ್ನು ತಿರುಗಿಸಿ ಸಂಸ್ಕರಣಾ ಘಟಕಕ್ಕೆ ಬಿಡಲಾಗಿದೆ. ಗಂಗಾ ದಡದಲ್ಲಿರುವ ಸಕ್ಕರೆ ಮಿಲ್ಲುಗಳು, ಯಾವುದೇ ತ್ಯಾಜ್ಯವನ್ನು ನದಿಗೆ ಬಿಡದಂತೆ ಎಚ್ಚರಿಕೆ ನೀಡಲಾಗಿದೆ.
 • ಮಹಾಮಂಡಲೇಶ್ವರ: ಚರಿತ್ರೆಯಲ್ಲೇ ಮೊದಲ ಬಾರಿಗೆ ಕುಂಭದಲ್ಲಿ ಭಾಗವಹಿಸುವ ಪ್ರಖ್ಯಾತ ಜುನಾ ಅಖಾಡದ ಮಹಾಮಂಡಲೇಶ್ವರರಾಗಿ ದಲಿತ ಸನ್ಯಾಸಿಯೊಬ್ಬರು ನಿಯುಕ್ತರಾಗಿದ್ದಾರೆ. ಅವರು ಹೆಸರು ಕನ್ಹಯ್ಯಕುಮಾರ್‌ ಕಶ್ಯಪ್‌, 32 ವರ್ಷ. ಮಹಾಮಂಡಲೇಶ್ವರ ಎಂಬುದು ಕುಂಭಮೇಳದ ಅತ್ಯುನ್ನತ ಪದವಿ. ಜುನಾ ಅಖಾಡ ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಅಖಾಡಗಳಲ್ಲೊಂದು.
 • ವಿದೇಶಿಗರ ಮೇಲೆ ಪ್ರಭಾವ: ಸಾವಿರಾರು ವಿದೇಶಿಗರು ಕುಂಭಮೇಳವನ್ನು ನೋಡಲೆಂದು ಜಗತ್ತಿನ ನಾನಾ ಕಡೆಗಳಿಂದ ಆಗಮಿಸುತ್ತಾರೆ. ಸಾಧುಗಳ ಜೊತೆ ಒಡನಾಡಿ ಆಧ್ಯಾತ್ಮದ ರಹಸ್ಯಗಳನ್ನು ತಿಳಿದುಕೊಳ್ಳಲು ಬಯಸುವವರು, ಎಷ್ಟೋ ವರ್ಷಗಳಿಂದ ಭೇಟಿಯಾಗಲು ಬಯಸುತ್ತಿರುವ ಬಾಬಾಜಿಗಳನ್ನು ಕುಂಭಮೇಳದಲ್ಲಿ ಕಂಡೇ ಕಾಣುವ ಖಚಿತ ನಂಬಿಕೆಯಿಂದ ಬರುವವರು, ಫೋಟೋಗ್ರಫಿ ಮತ್ತು ಡಾಕ್ಯುಮೆಂಟರಿಗಳನ್ನು ಮಾಡುವವರು, ಭಾರತೀಯ ಯತಿಗಳ ಶಿಷ್ಯತ್ವ ಪಡೆಯಲು ಬರುವವರು- ಹೀಗೆ ನಾನಾ ಬಗೆಯವರು ಇರುತ್ತಾರೆ.

ಬ್ರಹ್ಮೋಸ್‌ಗೆ ಸವಾಲೊಡ್ಡುವ ಕ್ಷಿಪಣಿ ಪಾಕ್‌ ಬತ್ತಳಿಕೆಗೆ

5.

ಸುದ್ಧಿಯಲ್ಲಿ ಏಕಿದೆ ?ಭಾರತೀಯ ನೌಕಾಪಡೆ ಹೊಂದಿರುವ ಶಕ್ತಿಶಾಲಿ ಬ್ರಹ್ಮೋಸ್‌ ಕ್ಷಿಪಣಿಗೆ ಸವಾಲೊಡ್ಡಬಲ್ಲ ಚೀನಾ ನಿರ್ಮಿತ ಯುದ್ಧನೌಕೆ ನಿರೋಧಕ ಕ್ಷಿಪಣಿಯೊಂದನ್ನು ಪಾಕಿಸ್ತಾನ ಶೀಘ್ರವೇ ಹೊಂದಲಿದೆ.

 • ವೈಜೆ-12 ಕ್ಷಿಪಣಿಯ ರಫ್ತು ರೂಪಾಂತರವಾಗಿರುವ ಸಿಎಂ-302 ಕ್ಷಿಪಣಿಯು ಶಬ್ದಕ್ಕಿಂತ ಮೂರು ಪಟ್ಟ ಹೆಚ್ಚು ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಭಾರತೀಯ ಸೇನೆ ಹೊಂದಿರುವ ಬ್ರಹ್ಮೋಸ್‌ ಬಲವನ್ನು ಇದು ಕುಂದಿಸಲಿದೆ ಎಂದು ಹೇಳಲಾಗುತ್ತಿದೆ.
 • ಶಾಂಘೈನ ಹುಡಾಂಗ್‌-ಝೋಂಗ್ಹುಯಾ ಶಿಫ್‌ಯಾರ್ಡ್‌ನಲ್ಲಿ ಪಾಕಿಸ್ತಾನಕ್ಕಾಗಿ ಚೀನಾ ಸರಕಾರವು ನಾಲ್ಕು ಯುದ್ಧನೌಕೆಗಳನ್ನು ನಿರ್ಮಿಸುತ್ತಿದ್ದು, ಇವುಗಳ ಪ್ರಾಥಮಿಕ ಆಯುಧವಾಗಿ ಈ ಅತ್ಯಾಧುನಿಕ ಮತ್ತು ಅತಿ ವೇಗದ ಸಿಎಂ-302 ಕ್ಷಿಪಣಿಗಳನ್ನು ಸೇರ್ಪಡೆ ಮಾಡಲಿದೆ.

ಭಾರತದ ಬ್ರಹ್ಮೋಸ್ ಕ್ಷಿಪಣಿಗಿಂತ ಹೇಗೆ ಭಿನ್ನ ?

 • ಆದರೆ, ಇದೀಗ ಬ್ರಹ್ಮೋಸ್‌ ಕ್ಷಿಪಣಿಯನ್ನು ಮೀರಿಸಬಲ್ಲ ಸಿಎಂ-302 ಕ್ಷಿಪಣಿಯಿಂದಾಗಿ ಪಾಕಿಸ್ತಾನ ಮುಂದೆ ಭಾರತದ ಶಕ್ತಿ ತುಸು ಕುಂದಲಿದೆ. ಸಿಎಂ-302 ಕ್ಷಿಪಣಿಯ ಸೂಪರ್‌ಸಾನಿಕ ವೇಗವನ್ನು ಹೊಂದಿದ್ದು, ವ್ಯಾಪ್ತಿಯಲ್ಲಿ ಭಾರತದ ಬ್ರಹ್ಮೋಸ್‌ ಹೊಂದಿರುವ ವ್ಯಾಪ್ತಿಯನ್ನು ಸರಿಗಟ್ಟಲಿದೆ.

ಇಡೀ ಭಾರತದ ಮೇಲೆ ಚೀನಾ ರಡಾರ್ ಕಣ್ಣು?

6.

ಸುದ್ಧಿಯಲ್ಲಿ ಏಕಿದೆ ?ಇಡೀ ಭಾರತದ ಮೇಲೆ ನಿರಂತರವಾಗಿ ನಿಗಾ ಇರಿಸ ಬಹುದಾದ ಅತ್ಯಾಧುನಿಕ ಕಾಂಪ್ಯಾಕ್ಟ್ ರಡಾರನ್ನು ಚೀನಾ ಅಭಿವೃದ್ಧಿ ಪಡಿಸಿದೆ.

 • ಇದನ್ನು ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿದೆ.
 • ಓವರ್ ದ ಹಾರಿಜಾನ್ (ಒಟಿಎಚ್) ಎಂಬ ಹೆಸರಿನ ಈ ವ್ಯವಸ್ಥೆ ಯನ್ನು ಬಳಸಿಕೊಂಡು ಚೀನಾದ ನೌಕಾಪಡೆ ಭಾರತದ ಇಡೀ ಜಲಗಡಿಯ ಮೇಲೆ ನಿರಂತರ ವಾಗಿ ನಿಗಾ ಇರಿಸಬಹುದಾಗಿದೆ.
 • ಸದ್ಯ ಲಭ್ಯ ವಿರುವ ರಡಾರ್ ವ್ಯವಸ್ಥೆಗೆ ಹೋಲಿಸಿದರೆ ಅತ್ಯಾಧುನಿಕವಾದ ಈ ವ್ಯವಸ್ಥೆಯಡಿ ಶತ್ರು ದೇಶದ ವಿಮಾನಗಳು, ಯುದ್ಧನೌಕೆಗಳ ಚಲನೆ, ಕ್ಷಿಪಣಿ ದಾಳಿಗಳ ಕುರಿತು ಮಾಹಿತಿ ಪಡೆದುಕೊಂಡು, ಸೂಕ್ತ ಪ್ರತಿದಾಳಿ ಸಂಘಟಿಸಲು ಅನುಕೂಲವಾಗಲಿದೆ.
 • ಸಿಎಎಸ್​ನಲ್ಲಿ ಅಭಿವೃದ್ಧಿ: ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್​ನ (ಸಿಎಎಸ್) ಮತ್ತು ಚೀನೀಸ್ ಅಕಾಡೆಮಿ ಆಫ್ ಇಂಜಿನಿಯರಿಂಗ್​ನ (ಸಿಎಇ) ಶಿಕ್ಷಣತಜ್ಞ ಲಿಯು ಯಾಂಗ್ಟಾನ್ ಒಟಿಎಚ್ ರಡಾರ್ ಅಭಿವೃದ್ಧಿಪಡಿಸಿದ್ದಾರೆ. ಈ ಕಾರ್ಯದಲ್ಲಿ ಕಿಯಾನ್ ಕಿಹು ಎಂಬ ಮಿಲಿಟರಿ ವಿಜ್ಞಾನಿಯೂ ಇವರಿಗೆ ಸಹಕರಿಸಿದ್ದಾರೆ.

ಒಟಿಎಚ್ ಮ​ಹತ್ವ

 • ಯುದ್ಧನೌಕೆ ಆಧಾರಿತ ಒಟಿಎಚ್ ರಡಾರ್​ನಿಂದ ಪೀಪಲ್ಸ್ ಲಿಬರೇಷನ್ ಆರ್ವಿುಗೆ ಹೆಚ್ಚಿನ ಬಲ ಬಂದಂತಾಗಿದೆ. ಸಾಂಪ್ರದಾಯಿಕ ತಂತ್ರಜ್ಞಾನದಡಿ ಚೀನಾದ ಒಟ್ಟು ಜಲಗಡಿಯ ಶೇ. 20 ಭಾಗದ ಮೇಲೆ ನಿಗಾ ಇರಿಸಲು ಈ ಹಿಂದೆ ಸಾಧ್ಯವಾಗುತ್ತಿತ್ತು. ಆದರೆ ಈಗ ದಕ್ಷಿಣ ಚೀನಾ ಸಾಗರ, ಹಿಂದೂ ಮಹಾಸಾಗರ ಮತ್ತು ಶಾಂತ ಮಹಾಸಾಗರದ ಸಂಪೂರ್ಣ ಭಾಗದ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತದೆ.

ಖೇಲೋ ಇಂಡಿಯಾ ಗೇಮ್ಸ್‌ 

7.

ಸುದ್ಧಿಯಲ್ಲಿ ಏಕಿದೆ ?ಎರಡನೇ ಆವೃತ್ತಿಯ ಖೇಲೊ ಇಂಡಿಯಾ ಯೂತ್‌ ಗೇಮ್ಸ್‌ ಆಯೋಜನೆಗೆ ಅತ್ಯಾಧುನಿಕ ಮೂಲಭೂತ ಸೌರ್ಕಗಳು ಮತ್ತು ಸುಸಜ್ಜಿತ ಶೂಟಿಂಗ್‌ ರೇಂಜ್‌ನೊಂದಿಗೆ ಮಹಾರಾಷ್ಟ್ರ ಸಜ್ಜಾಗಿದ್ದು, ಮಹತ್ವಾಕಾಂಕ್ಷೀಯ ಕ್ರೀಡಾಕೂಟಕ್ಕೆ ಪುಣೆಯಲ್ಲಿ ಚಾಲನೆ ದೊರೆಯಲಿದೆ.

 • ಖೇಲೋ ಇಂಡಿಯಾ ಸ್ಕೂಲ್‌ ಗೇಮ್ಸ್‌ ಹೆಸರಿನಲ್ಲಿ ಮೊದಲ ಆವೃತ್ತಿಯನ್ನು ಆಯೋಜಿಸಲಾಗಿತ್ತು. ಇದೀಗ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ ಎಂದು ಹೆಸರು ಬದಲಾಯಿಸಲಾಗಿದೆ.
 • ಒಟ್ಟಾರೆ 18 ಕ್ರೀಡೆಗಳಲ್ಲಿ ಸ್ಪರ್ಧೆ ನಡೆಯಲಿದ್ದು, ದೇಶದಾದ್ಯಂತ ಒಟ್ಟಾರೆ 9000ಕ್ಕೂ ಹೆಚ್ಚಿನ ಯುವ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ.

ಖೇಲೋ ಇಂಡಿಯಾ ಯುವ ಆಟಗಳು

 • ಖೇಲೋ ಇಂಡಿಯಾ ಯುವ ಆಟಗಳನ್ನು ವಾರ್ಷಿಕವಾಗಿ ಜನವರಿ ಅಥವಾ ಫೆಬ್ರವರಿಯಲ್ಲಿ ರಾಷ್ಟ್ರೀಯ ಹಂತದ ಬಹುಶಿಸ್ತಿನ ಹುಲ್ಲುಗಾವಲು ಆಟಗಳು ಎಂದು ಆಯೋಜಿಸಲಾಗುತ್ತದೆ. ಈ ಆಟಗಳನ್ನು ಎರಡು ವಿಭಾಗಗಳಲ್ಲಿ -17 ವರ್ಷದೊಳಗಿನ ಶಾಲಾ ವಿದ್ಯಾರ್ಥಿಗಳು ಮತ್ತು ಅಂಡರ್ -21 ಕಾಲೇಜು ವಿದ್ಯಾರ್ಥಿಗಳಲ್ಲಿ ನಡೆಸಲಾಗುತ್ತದೆ.
 • ಖೇಲೋ ಇಂಡಿಯಾ ಯುವ ಆಟಗಳು ಖೇಲೋ ಇಂಡಿಯಾ ಕಾರ್ಯಕ್ರಮದ ಒಂದು ಭಾಗವಾಗಿದೆ, ನಮ್ಮ ದೇಶದಲ್ಲಿಆಡುವ ಎಲ್ಲಾ ಕ್ರೀಡೆಗಳಿಗೆ ಬಲವಾದ ಚೌಕಟ್ಟನ್ನು ನಿರ್ಮಿಸುವ ಮೂಲಕ ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಹುಲ್ಲುಗಾವಲು ಮಟ್ಟದಲ್ಲಿ ಪುನಶ್ಚೇತನಗೊಳಿಸಲು ಮತ್ತು ಭಾರತವನ್ನು ಶ್ರೇಷ್ಠ ಕ್ರೀಡಾ ರಾಷ್ಟ್ರವಾಗಿ ಸ್ಥಾಪಿಸಲು ಇದನ್ನು ಪರಿಚಯಿಸಲಾಯಿತು.
 • ಉನ್ನತ ಮಟ್ಟದ ಸಮಿತಿಯಿಂದ ವಿವಿಧ ಹಂತಗಳಲ್ಲಿ ಆದ್ಯತೆಯ ಕ್ರೀಡಾ ವಿಭಾಗಗಳಲ್ಲಿ ಗುರುತಿಸಲಾದ ಪ್ರತಿಭಾನ್ವಿತ ಆಟಗಾರರಿಗೆ ಆರ್ಥಿಕ ನೆರವನ್ನು ವಾರ್ಷಿಕ 5 ಲಕ್ಷ ರೂ 8 ವರ್ಷಕ್ಕೆ ನೀಡಲಾಗುತ್ತದೆ
Related Posts
5th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಚುನಾವಣಾ ಸಿಬ್ಬಂದಿ ಮೇಲೆ ‘ಲೈಫ್’ ಕಣ್ಗಾವಲು ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕರ್ತವ್ಯದಲ್ಲಿರುವ ಸೆಕ್ಟರ್ ಮತ್ತು ಫ್ಲೈಯಿಂಗ್ ಅಧಿಕಾರಿಗಳ ಮೇಲೆ ನಿಗಾ ಇಡಲು ‘ಲೈಫ್‌– 360’ ಎಂಬ ಆ್ಯಪ್‌ ಸಿದ್ಧಗೊಳಿಸಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯೋಗ. ಹುಣಸೂರು ಉಪವಿಭಾಗಾಧಿಕಾರಿ ಕೆ.ನಿತೀಶ್‌, ಪ್ರಭಾರಿ ...
READ MORE
” 14 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳಗಾವಿ-ಯರಗಟ್ಟಿ ರಸ್ತೆ ಸುದ್ಧಿಯಲ್ಲಿ ಏಕಿದೆ ?ಮೇಲ್ದರ್ಜೆಗೇರಿರುವ ಇಲ್ಲಿನ ಬೆಳಗಾವಿ-ಯರಗಟ್ಟಿ ನಡುವಿನ ರಸ್ತೆ, ಅಪಘಾತ ನಿಯಂತ್ರಿಸುವ ದೇಶದ ಮೊದಲ ಮಾದರಿ ರಸ್ತೆಯಾಗಿ ನಿರ್ಮಾಣಗೊಂಡಿದೆ. ಇದಕ್ಕೆ ಅತ್ಯಧಿಕ ರಾರ‍ಯಂಕ್‌ ನೀಡಿರುವ ವಿಶ್ವಬ್ಯಾಂಕ್‌, ಈ ಮಾದರಿ ರಸ್ತೆಯನ್ನು ಅನುಸರಿಸುವಂತೆ ಇತರ ರಾಜ್ಯಗಳಿಗೂ ಸೂಚನೆ ನೀಡಿದೆ. ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿಯಿಂದ ...
READ MORE
ವಾಷಿಂಗ್ಟನ್‌ ಮೂಲದ ಆರ್ಥಿಕ ಮತ್ತು ಶಾಂತಿ ಸಂಸ್ಥೆ ತಯಾರಿಸಿದ ವರದಿ. 162 ದೇಶಗಳಲ್ಲಿ ಅಧ್ಯಯನ ನಡೆಸಿ ವರದಿ ಭಯೋತ್ಪಾದಕರಿಂದ ಅತಿಹೆಚ್ಚು ತೊಂದರೆಗೆ ಒಳಗಾದ ಮೊದಲ 10 ದೇಶಗಳ ಪಟ್ಟಿಯಲ್ಲಿ ಭಾರತ ಸೇರಿದೆ. ಈ ಸಂಸ್ಥೆ ಸಿದ್ಧಪಡಿಸಿದ ಜಾಗತಿಕ ಭಯೋತ್ಪಾದನಾ ಸೂಚ್ಯಂಕದ ಪ್ರಕಾರ (ಜಿಟಿಐ), ಜಗತ್ತಿನಲ್ಲಿ ಭಯೋತ್ಪಾದಕ ...
READ MORE
ಕಷ್ಠಕರ ಪರಿಸ್ಥತಿಯಲ್ಲಿರುವ ಮಹಿಳೆಯರಿಗಾಗಿ ಯೋಜನೆ ಇದು ಕೇಂದ್ರ ವಲಯದ ಯೋಜನೆಯಾಗಿದ್ದು ಕಷ್ಠಕರ ಪರಿಸ್ಥಿತಿಯಲ್ಲಿರುವ ಅಂದರೆ ಪರಿತ್ಯಕ್ತೆಯರು, ವಿಧವೆಯರು , ಜೈಲಿನಿಂದ ಬಿಡುಗಡೆ ಹೊಂದಿದ ಮಹಿಳಾ ಖೈದಿಗಳು ಮತ್ತು ಕುಟುಂಬದ ಸಹಾಯವಿಲ್ಲದವರು, ಪ್ರಕೃತಿ ವಿಕೋಪಕ್ಕೆ ಸಿಕ್ಕಿ ಒಬ್ಬಂಟಿಗರಾದ ಮಹಿಳೆಯರು , ಅನೈತಿಕ ಸಾಗಣೆಗೆ ಒಳಗಾಗಿ ...
READ MORE
“11th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಇ-ವಾಹನ ನೀತಿ ಸುದ್ದಿಯಲ್ಲಿ ಏಕಿದೆ? ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ವಯೋಮಿತಿಯನ್ನು 16 ವರ್ಷಕ್ಕೆ ಇಳಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದೆ. ದೇಶದಲ್ಲಿ ಇ-ವಾಹನಗಳ ಬಳಕೆ ಹೆಚ್ಚಿಸುವ ಉದ್ದೇಶ ದಿಂದ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಇ-ವಾಹನ ನೀತಿಯ ಮಹತ್ವ: ...
READ MORE
“20tht ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಿಶೇಷ ಕೋರ್ಟ್‌ ಸ್ಥಾಪನೆ ಸುದ್ಧಿಯಲ್ಲಿ ಏಕಿದೆ ?ವಾಣಿಜ್ಯ ವ್ಯವಹಾರ ಸಂಬಂಧಿ ಪ್ರಕರಣಗಳ ನಿರ್ವಹಣೆಗೆ ಹೊಸದಾಗಿ ಮೂರು ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ರಾಜ್ಯ ಸರಕಾರ ಮಂಜೂರಾತಿ ನೀಡಿದೆ. ರಾಜ್ಯದಲ್ಲಿ 'ಈಜಿ ಆಫ್‌ ಡೂಯಿಂಗ್‌ ಬ್ಯುಸಿನೆಸ್‌' ಯೋಜನೆ ಅನುಷ್ಠಾನ ಉದ್ದೇಶದಿಂದ ಮೂರು ವಾಣಿಜ್ಯಾತ್ಮಕ ನ್ಯಾಯಾಲಯಗಳ ಸ್ಥಾಪನೆಗೆ ಮಂಜೂರಾತಿ ...
READ MORE
“29th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಾಣಿಜ್ಯ ಜಾಹೀರಾತು ಪ್ರದರ್ಶನ ಸುದ್ಧಿಯಲ್ಲಿ ಏಕಿದೆ ?ಸರಕಾರಿ ಕಾರ್ಯಕ್ರಮಗಳ ಪ್ರಚಾರ ಹೊರತುಪಡಿಸಿ, ಇತರೆ ಎಲ್ಲ ವಾಣಿಜ್ಯ ಜಾಹೀರಾತು ಪ್ರದರ್ಶನಗಳನ್ನು ಶಾಶ್ವತವಾಗಿ ನಿಷೇಧಿಸುವ ಸಂಬಂಧ ಬಿಬಿಎಂಪಿಯು ನೂತನ ಜಾಹೀರಾತು ನೀತಿ ಮತ್ತು ಬೈಲಾ ಸಿದ್ಧಪಡಿಸಿದೆ. ಇದು ಒಂದೆರಡು ತಿಂಗಳಲ್ಲೇ ಜಾರಿಗೆ ಬರಲಿದೆ. ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಉತ್ಪನ್ನಗಳ ...
READ MORE
ಕೃಷಿ ಭಾಗ್ಯ
ಮಳೆಯಾಶ್ರಿತ ಪ್ರದೇಶದ ರೈತರ ಜೀವನೋಪಾಯ ಉತ್ತಮಪಡಿಸಲು 'ಕೃಷಿ ಭಾಗ್ಯ' ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಸ್ವಾಭಾವಿಕ ಸಂಪನ್ಮೂಲ ಮಣ್ಣು ಮತ್ತು ನೀರಿನ ಸಂರಕ್ಷಣೆಯೊಂದಿಗೆ ಕೃಷಿ ಉತ್ಪಾದಕತೆ ಮತ್ತು ರೈತರು ಹಾಗೂ ಕೃಷಿ ಕಾರ್ಮಿಕರ ಆದಾಯ ಮಟ್ಟ ಹೆಚ್ಚಿಸುವುದು ಕೃಷಿ ಭಾಗ್ಯ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಮೊದಲ ...
READ MORE
“24th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆಯುಷ್ಮಾನ್‌ಭವ  ಸುದ್ಧಿಯಲ್ಲಿ ಏಕಿದೆ ?ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಬಡವರ ಆರೋಗ್ಯ ಕಾಪಾಡುವ, ಜಗತ್ತಿನ ಅತಿ ದೊಡ್ಡ ಸರಕಾರ ಪ್ರಾಯೋಜಿತ ಹೆಲ್ತ್‌ ಕೇರ್‌ ಯೋಜನೆ 'ಆಯುಷ್ಮಾನ್‌ ಭಾರತ್‌' ಲೋಕಾರ್ಪಣೆಗೊಂಡಿತು. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ...
READ MORE
“25th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ವಿಕ್ರಮಾದಿತ್ಯ ಸುದ್ಧಿಯಲ್ಲಿ ಏಕಿದೆ ?ಭಾರತೀಯ ನೌಕಾಪಡೆಯ ಏಕೈಕ ಯುದ್ಧ ವಿಮಾನ ವಾಹಕ ನೌಕೆ ಐಎನ್​ಎಸ್ ವಿಕ್ರಮಾದಿತ್ಯ ಎರಡನೇ ಬಾರಿ ರಿಪೇರಿ ಕಾರ್ಯ ಮುಗಿಸಿ ವಾರದೊಳಗೆ ಕಾರವಾರ ಬಂದರಿಗೆ ವಾಪಸಾಗುತ್ತಿದೆ. ಕೊಚ್ಚಿ ಶಿಪ್​ಯಾರ್ಡ್​ನಿಂದ ನೌಕೆ ಹೊರಟಿದ್ದು, ಅ.30ರೊಳಗೆ ತನ್ನ ಕೇಂದ್ರ ಸ್ಥಾನವಾದ ಕಾರವಾರ ಕದಂಬ ನೌಕಾನೆಲೆ ...
READ MORE
5th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
” 14 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉಗ್ರರ ಕಾಟ: ಭಾರತಕ್ಕೆ 6ನೇ ಸ್ಥಾನ
ಸ್ವಾಧಾರ
“11th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
“20tht ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“29th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕೃಷಿ ಭಾಗ್ಯ
“24th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“25th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *