“10 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಎಚ್​ಟಿಟಿ 40 ಸ್ಪಿನ್ ಟೆಸ್ಟ್ ಯಶಸ್ವಿ

1.

ಸುದ್ಧಿಯಲ್ಲಿ ಏಕಿದೆ ?ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ತಯಾರಿಸಿರುವ ಎಚ್​ಟಿಟಿ 40 (ತರಬೇತಿ ಯುದ್ಧವಿಮಾನ) ಯಶಸ್ವಿಯಾಗಿ ಸ್ಪಿನ್ ಟೆಸ್ಟ್ ನಡೆಸಿದೆ.

 • ಎಚ್​ಟಿಟಿ 40 ಹಾರಾಟದ ಸಂದರ್ಭದಲ್ಲೇ ಸ್ಪಿನ್ ಟೆಸ್ಟ್ ನಡೆಸಿ ನಂತರ ಯಥಾಸ್ಥಿತಿಯಲ್ಲಿ ಹಾರಾಡುವಲ್ಲಿ ಯಶಸ್ವಿಯಾಗಿದೆ.
 • ಗ್ರೂಪ್ ಕ್ಯಾಪ್ಟನ್​ಗಳಾದ ಕೆ.ಕೆ. ವೇಣುಗೋಪಾಲ್ ಹಾಗೂ ಎಸ್. ಚಕಿ ಎಚ್​ಟಿಟಿ 40 ಸ್ಪಿನ್ ಟೆಸ್ಟ್ ನಡೆಸಿದರು.
 • ವಿಮಾನ ಕಾರ್ಯಾಚರಣೆಗೆ ಒಪ್ಪಿಗೆ ಸಿಗಲು ಸ್ಪಿನ್ ಟೆಸ್ಟ್ ಪ್ರಮುಖವಾಗಿದೆ.

ಏನಿದು ಸ್ಪಿನ್ ಟೆಸ್ಟ್?:

 • ವಿಮಾನ ನಿಯಂತ್ರಣ ಕಳೆದುಕೊಂಡಂತೆ ತಿರುಗುತ್ತ ಸಾಗುತ್ತದೆ. ಇಂತಹ ವಿಮಾನವನ್ನು ಮತ್ತೆ ಯಥಾಸ್ಥಿತಿಗೆ ತರುವುದೇ ಸ್ಪಿನ್ ಟೆಸ್ಟ್.
 • ಈ ಯಶಸ್ಸು ಎಚ್​ಎಎಲ್​ಗೆ ಪ್ರೇರಣೆ ನೀಡಿದೆ. ಹಾರಾಟ ಸಂದರ್ಭದಲ್ಲಿ ಸ್ಪಿನ್ ಸಾಮರ್ಥ್ಯವುಳ್ಳ ವಿಮಾನ ವಿನ್ಯಾಸಗೊಳಿಸುವ ತಂತ್ರಜ್ಞಾನದ ಶಕ್ತಿ ಎಚ್​ಎಎಲ್​ಗಿದೆ ಎನ್ನುವ ವಿಶ್ವಾಸಾರ್ಹತೆ ಹೆಚ್ಚಾಗಿದೆ
 • ವಿಮಾನ ಅಭಿವೃದ್ಧಿ ಯೋಜನೆಯಲ್ಲಿ ಸ್ಪಿನ್ ಟೆಸ್ಟ್ ಪ್ರಮುಖ ಮತ್ತು ಸವಾಲಿನ ವಿಷಯವಾಗಿದೆ. ಎಚ್​ಎಎಲ್​ನ ಏರ್​ಕ್ರಾಫ್ಟ್ ಸಂಶೋಧನೆ ಮತ್ತು ವಿನ್ಯಾಸ ಕೇಂದ್ರ (ಎಆರ್​ಡಿಸಿ) ಈ ನಿಟ್ಟಿನಲ್ಲಿ ಸಮರ್ಪಕ ವಿಂಡ್ ಟನಲ್ ಪರೀಕ್ಷೆ ನಡೆಸಿದೆ.
 • ಎಚ್​ಟಿಟಿ 40 ಕಾರ್ಯಾಚರಣೆಗೆ ಮುಕ್ತವಾಗುವ ಮುನ್ನ ಪ್ರಾಥಮಿಕ ಸೇವಾ ಗುಣಮಟ್ಟ ಅಗತ್ಯತೆ(ಪ್ರಿಲಿಮಿನರಿ ಸರ್ವೀಸ್ ಕ್ವಾಲಿಟೇಟಿವ್ ರಿಕ್ವಯರ್​ವೆುಂಟ್) ಪೂರೈಸಿದೆ. ಈ ಮೂಲಕ ಅತ್ಯಾಧುನಿಕ ತಂತ್ರಜ್ಞಾನವುಳ್ಳ ತರಬೇತಿ ವಿಮಾನವಾಗಿ ಎಚ್​ಟಿಟಿ 40 ಹೊರಹೊಮ್ಮಿದೆ.

70 ಎಚ್​ಟಿಟಿ 40 ಖರೀದಿ

 • 2013ರ ಆಗಸ್ಟ್​ನಲ್ಲಿ ಎಚ್​ಟಿಟಿ 40 ಯೋಜನೆ ಪ್ರಾರಂಭವಾಗಿತ್ತು. ಎಚ್​ಎಎಲ್ ಸ್ವಂತ ಹಣ ಹೂಡಿ ಈ ವಿಮಾನ ತಯಾರಿಸಿತ್ತು. 2017ರ ಏರೋ ಇಂಡಿಯಾದಲ್ಲೂ ಎಚ್​ಟಿಟಿ 40 ಪ್ರದರ್ಶನ ನೀಡಿತ್ತು. ಡಿಫೆನ್ಸ್ ಅಕ್ವಸಿಷನ್ ಸಮಿತಿ (ಡಿಎಸಿ) 70ಎಚ್​ಟಿಟಿ 40 ಖರೀದಿಗೆ ಈಗಾಗಲೇ ಅನುಮತಿ ನೀಡಿದೆ.
 • ವರ್ಷಾಂತ್ಯದೊಳಗೆ ಎಚ್​ಟಿಟಿ 40 ಉತ್ಪಾದನೆಗೆ ಒಪ್ಪಿಗೆ ದೊರೆಯುವ ನಿರೀಕ್ಷೆಯನ್ನು ಎಚ್​ಎಎಲ್ ಹೊಂದಿದೆ.

ರಾಜ್ಯದಲ್ಲಿ ‘ಕ್ಲಸ್ಟರ್ ಫಾರ್ಮಿಂಗ್‌’

2.

ಸುದ್ಧಿಯಲ್ಲಿ ಏಕಿದೆ ?ಕೃಷಿ ಪದ್ಧತಿಯ ಬದಲಾವಣೆಗಾಗಿ ವಿನೂತನ ಗುಂಪು ಕೃಷಿಯನ್ನು (ಕ್ಲಸ್ಟರ್‌ ಫಾರ್ಮಿಂಗ್‌) ಪರಿಚಯಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಬೀದರ್‌ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಬಯಸಿದೆ.

ಆಶಯ

 • ಕೃಷಿ ವೆಚ್ಚ ತಗ್ಗಿಸಿ, ಉತ್ಪಾದನೆ ಹೆಚ್ಚಿಸುವುದು, ಬೇಸಾಯದಲ್ಲಿ ವೈಜ್ಞಾನಿಕ ವಿಧಾನ ಹಾಗೂ ಅತ್ಯಾಧುನಿಕ ಸಲಕರಣೆಗಳ ಬಳಕೆಗೆ ಒತ್ತು ನೀಡುವ ಮೂಲಕ ಸುಸ್ಥಿರ ಕೃಷಿಗೆ ಬೆಂಬಲ ನೀಡುವುದು ನೂತನ ಯೋಜನೆಯ ಆಶಯವಾಗಿದೆ.

ಏಕೆ ಈ ತೀರ್ಮಾನ ?

 • ಕನಿಷ್ಟ 50 ರೈತರ ಗುಂಪು ರಚಿಸಿ, ಈ ರೈತರ ಒಡೆತನದ 250 ರಿಂದ 300 ಎಕರೆ ಭೂಮಿಯಲ್ಲಿ ಗುಂಪು ಕೃಷಿಗೆ ಒತ್ತು ನೀಡುವುದು ಈ ಯೋಜನೆಯ ಮೂಲಕಲ್ಪನೆ. ಉಳುಮೆಯಿಂದ ಒಕ್ಕಣೆ ವರೆಗೆ ಪ್ರತಿ ಹಂತದ ಖರ್ಚು, ಆದಾಯವನ್ನು ಲೆಕ್ಕಹಾಕಿ ಸದಸ್ಯರು ಹಂಚಿಕೊಳ್ಳುವುದು ಕ್ಟಸ್ಟರ್‌ ಫಾರ್ಮಿಂಗ್‌ನ ಉದ್ದೇಶ.
 • ಸಣ್ಣ ಹಿಡುವಳಿದಾರರು ಆಧುನಿಕ ಯಂತ್ರೋಪಕರಣ ಬಳಕೆ ಮಾಡುವುದು ಕಷ್ಟ. ಹೀಗಾಗಿ ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ಈ ತೀರ್ಮಾನವನ್ನು ಕೇಂದ್ರ ಕೃಷಿ ಸಚಿವರ ಗಮನಕ್ಕೂ ತರಲಾಗಿದ್ದು, ಇಂತಹ ವ್ಯವಸ್ಥೆಯನ್ನು ಉತ್ತರಾಖಂಡ್‌ನಲ್ಲಿ ಈಗಾಗಲೇ ಆರಂಭಿಸಲಾಗಿದೆ.
 • ಈ ರೈತ ಗುಂಪುಗಳಿಗೆ ಸಹಕಾರ ಇಲಾಖೆ ಮೂಲಕ ಕ್ರೆಡಿಟ್‌ ಲಿಂಕೇಜ್‌ ಕಲ್ಪಿಸಿ, ಸಮಗ್ರ ಪ್ಯಾಕೇಜ್‌ ನೀಡಲಾಗುವುದು
 • ಕ್ಲಸ್ಟರ್‌ ಫಾರ್ಮಿಂಗ್‌ ಯೋಜನೆಯ ರೂಪುರೇಷೆ ಸಿದ್ಧಪಡಿಸುವ ಸಂಬಂಧ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಸಹಕಾರ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ಇಲಾಖೆ ಮುಖ್ಯಸ್ಥರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ವರದಿಗೆ ಕಾಯಲಾಗುತ್ತಿದೆ. ಕ್ಲಸ್ಟರ್‌ ಫಾರ್ಮಿಂಗ್‌ ವ್ಯವಸ್ಥೆಯಡಿ ಕೃಷಿ ಉತ್ಪನ್ನಗಳಿಗೆ ಎಪಿಎಂಸಿ ಮೂಲಕ ಸಮರ್ಪಕ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಚಿಂತನೆಯೂ ನಡೆದಿದೆ.

ಬಡವರ ಬಂಧು‘ ಯೋಜನೆ

ಸುದ್ಧಿಯಲ್ಲಿ ಏಕಿದೆ ?‘ಬೀದಿಬದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು ಹಾಗೂ ಸಣ್ಣಪುಟ್ಟ ವರ್ತಕರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ‘ಬಡವರ ಬಂಧು’ ಯೋಜನೆಯನ್ನು ಈ ತಿಂಗಳ 22 ರಂದು ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸುವರು.

 • ‘ಬಡವರ ಬಂಧು’ ಯೋಜನೆಯಡಿ ಆರಂಭಿಕವಾಗಿ 53 ಸಾವಿರ ಮಂದಿಗೆ ಶೂನ್ಯ ಬಡ್ಡಿದರದಲ್ಲಿ ಯಾವುದೇ ಖಾತರಿ ಇಲ್ಲದೆ ಗರಿಷ್ಠ 10 ಸಾವಿರ ಸಾಲ ನೀಡಲಾಗುವುದು. ಈ ಸಾಲವನ್ನು ಮರುಪಾವತಿಸುವ ಸಂಬಂಧ ಆಯ್ಕೆಯನ್ನು ಫಲಾನುಭವಿಗೇ ನೀಡಲಾಗುವುದು. ಪ್ರತಿದಿನ 100 ರೂ.ಗಳಂತೆ ಮರುಪಾವತಿ ಮಾಡುವ ಪಿಗ್ಮಿ ಮಾದರಿಯ ಅವಕಾಶವೂ ಇರಲಿದೆ.
 • ಬೆಂಗಳೂರು ನಗರದಲ್ಲಿ ಮೂರು ಮೊಬೈಲ್‌ ವ್ಯಾನ್‌ ಹಾಗೂ ಜಿಲ್ಲಾಕೇಂದ್ರಗಳಲ್ಲಿ ತಲಾ ಒಂದೊಂದು ಮೊಬೈಲ್‌ ವ್ಯಾನ್‌ ಮೂಲಕ ವ್ಯಾಪಾರಿಗಳಿಗೆ ಸಾಲ ನೀಡುವ ವ್ಯವಸ್ಥೆ ಮಾಡಲಾಗಿದೆ.
 • ಈ ಉದ್ದೇಶಕ್ಕೆ ಬೆಂಗಳೂರು ನಗರದಲ್ಲಿ ಸಿಟಿ ಕೋ-ಆಪರೇಟಿವ್‌ ಬ್ಯಾಂಕ್‌, ಜನತಾ ಕೋ-ಆಪರೇಟಿವ್‌ ಬ್ಯಾಂಕ್‌ ಹಾಗೂ ಬಿಸಿಸಿ ಕೋ-ಆಪರೇಟಿವ್‌ ಬ್ಯಾಂಕ್‌ಗಳು ನೋಡಲ್‌ ಬ್ಯಾಂಕ್‌ಗಳಾಗಿದ್ದು, ಜಿಲ್ಲೆಗಳಲ್ಲಿ ಆಯಾಯ ಡಿಸಿಸಿ ಬ್ಯಾಂಕ್‌ಗಳನ್ನು ನೋಡಲ್‌ ಬ್ಯಾಂಕ್‌ಗಳಾಗಿ ಮಾಡಲಾಗುತ್ತಿದೆ

 ಕಾಯಕ‘ ಯೋಜನೆ

ಸುದ್ಧಿಯಲ್ಲಿ ಏಕಿದೆ ?ಮಹಿಳೆಯರು ಸ್ವಂತ ಉದ್ಯಮ ಸ್ಥಾಪಿಸಿ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುವಂತೆ ಸಹಕಾರ ಇಲಾಖೆ ಮೂಲಕ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವ ‘ಕಾಯಕ’ ಯೋಜನೆಯನ್ನು ಈ ತಿಂಗಳಾಂತ್ಯಕ್ಕೆ ಆರಂಭಿಸಲಾಗುತ್ತಿದೆ

 • ಈ ಯೋಜನೆಗೆ 3 ಸಾವಿರ ಫಲಾನುಭವಿಗಳನ್ನು ಗುರುತಿಸಲಾಗಿದೆ. ಈ ಪೈಕಿ 1 ಸಾವಿರ ಫಲಾನುಭವಿಗಳಿಗೆ ಆಯ್ಕೆಪತ್ರ ನೀಡುವ ಮೂಲಕ ಸಿಎಂ ಕುಮಾರಸ್ವಾಮಿ ಅವರು ಯೋಜನೆಯನ್ನು ಉದ್ಘಾಟನೆ ಮಾಡಲಿದ್ದಾರೆ.
 • ದುಡಿಯುವ ಕೈಗಳಿಗೆ ಶಕ್ತಿ ನೀಡುವುದು ಈ ಯೋಜನೆಯ ಆಶಯ. ಪ್ರಸ್ತುತ ಸ್ವಸಹಾಯ ಗುಂಪುಗಳಿಗೆ 3 ರಿಂದ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದ್ದರೂ, ಈ ಸಾಲ ಫಲಾನುಭವಿಗಳ ಉಪಜೀವನಕ್ಕೆ ಮಾತ್ರ ಬಳಕೆಯಾಗುತ್ತಿದೆ.
 • ಹೀಗಾಗಿ, ಉತ್ಪಾದಕತೆ ಹೆಚ್ಚಳ ಹಾಗೂ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಲು, ಈ ಮೂಲಕ ಉದ್ಯೋಗ ಸೃಷ್ಟಿಸುವುದು ‘ಕಾಯಕ’ ಯೋಜನೆಯ ಉದ್ದೇಶವಾಗಿದೆ.

ತೈಲ ದರ ಭೀತಿ ದೂರ

5.

ಸುದ್ಧಿಯಲ್ಲಿ ಏಕಿದೆ ?ನಿರಂತರ ಹೈ ಜಂಪ್‌ ಮೂಲಕ ಭಾರತಕ್ಕೆ ಆತಂಕ ಸೃಷ್ಟಿಸಿದ್ದ ಬ್ರೆಂಟ್‌ ಕಚ್ಚಾ ತೈಲ ದರ ಕಳೆದ ಕೆಲವು ದಿನಗಳಿಂದ ಇಳಿಕೆಯ ಹಾದಿಗೆ ಮರಳಿದೆ.

 • ಅಕ್ಟೋಬರ್‌ನಲ್ಲಿ 86 ಡಾಲರ್‌ಗೆ ಜಿಗಿದಿದ್ದ ದರ 70 ಡಾಲರ್‌ಗೆ ತಗ್ಗಿದೆ. ಈ ಮೂಲಕ ದೇಶದಲ್ಲಿ ಪೆಟ್ರೋಲ್‌-ಡೀಸೆಲ್‌ ದರ ಏರಿಕೆಯ ಭೀತಿ ಸದ್ಯಕ್ಕೆ ದೂರವಾಗಿದ್ದು ನಿರಾಳತೆ ಮೂಡುವಂತಾಗಿದೆ.

ಹಿನ್ನಲೆ

 • ಕಳೆದ ಮೇ ತಿಂಗಳಿನ ಆರಂಭದಲ್ಲಿ ಅಮೆರಿಕದ ಟ್ರಂಪ್‌ ಸರಕಾರ, ಇರಾನ್‌ ವಿರುದ್ಧ ನವೆಂಬರ್‌ 4ರಿಂದ ಕಠಿಣ ನಿರ್ಬಂಧವನ್ನು ವಿಧಿಸುವುದಾಗಿ ಘೋಷಿಸಿತ್ತು. ಇರಾನ್‌ನಿಂದ ತೈಲ ಖರೀದಿಸುವ ರಾಷ್ಟ್ರಗಳಿಗೂ ನಿರ್ಬಂಧಗಳು ಅನ್ವಯವಾಗಲಿದೆ ಎಂದು ಎಚ್ಚರಿಸಿತ್ತು.
 • ಇರಾನ್‌ನ ತೈಲ ರಫ್ತನ್ನು ಶೂನ್ಯ ಮಟ್ಟಕ್ಕೆ ಇಳಿಸಿ, ಪರಮಾಣು ಕಾರ್ಯಕ್ರಮಗಳನ್ನು ಸಂಪೂರ್ಣ ಕೈ ಬಿಡುವಂತೆ ಅದರ ಮೇಲೆ ಒತ್ತಡ ಹೇರುವುದು ಅಮೆರಿಕದ ಇಂಗಿತವಾಗಿತ್ತು. ಇದರಿಂದ ಇರಾನ್‌ ತೈಲವನ್ನು ಅವಲಂಬಿಸಿದ್ದ ಭಾರತ, ಚೀನಾ, ಜಪಾನ್‌ ಸೇರಿದಂತೆ ಹಲವು ರಾಷ್ಟ್ರಗಳಿಗೆ ಕಠಿಣ ಸವಾಲು ಎದುರಾಗಿತ್ತು.
 • ಅಮೆರಿಕದ ಮನವೊಲಿಕೆಯ ಭಾಗವಾಗಿ ಕೆಲ ರಾಷ್ಟ್ರಗಳು ಇರಾನ್‌ ತೈಲ ಆಮದಿನ ಪ್ರಮಾಣವನ್ನು ಕಡಿಮೆ ಮಾಡಿದ್ದವು.
 • ತೈಲ ದರ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗೆ ದಾಟುವ ದಿನಗಳು ದೂರವಿಲ್ಲ ಎಂದೇ ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದರು. ಡಾಲರ್‌ ಎದುರು ರೂಪಾಯಿ ನೆಲಕಚ್ಚಿ ಹೈರಾಣಾಗಿತ್ತು. ಷೇರು ಮಾರುಕಟ್ಟೆಗಳು ಅಲ್ಲೋಕಕಲ್ಲೋಲವಾಗಿತ್ತು. ಕರೆನ್ಸಿಗಳು ಮುಗ್ಗರಿಸಿದ್ದವು. ಅಕ್ಟೋಬರ್‌ನಲ್ಲಂತೂ ಕಚ್ಚಾ ತೈಲ ದರ ಕಳೆದ ನಾಲ್ಕು ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ( 85 ಡಾಲರ್‌ಗೂ ಅಧಿಕ) ಜಿಗಿದು ಭೀತಿ ಸೃಷ್ಟಿಸಿತ್ತು.

ಭಾರತ-ಜಪಾನ್‌-ಚೀನಾ ತಂತ್ರಗಾರಿಕೆ

 • ಪ್ರಮುಖ ತೈಲ ಆಮದು ರಾಷ್ಟ್ರಗಳಾದ ಭಾರತ, ಜಪಾನ್‌, ಚೀನಾ ಹಾಗೂ ತೈಲ ರಫ್ತುದಾರ ಇರಾನ್‌ ಮತ್ತು ರಷ್ಯಾ ಸದ್ದಿಲ್ಲದೆ ತೆಗೆದುಕೊಂಡ ರಾಜತಾಂತ್ರಿಕ ನಿರ್ಧಾರಗಳು ಹಾಗೂ ಪರ್ಯಾಯ ಮಾರ್ಗೋಪಾಯಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರಕಾರದ ಮೇಲೆ ಒತ್ತಡ ಸೃಷ್ಟಿಸಿತು.
 • ಆರಂಭದಲ್ಲಿ ಬಿಗಿ ನಿಲುವಿಗೆ ಅಂಟಿದ್ದ ಟ್ರಂಪ್‌ ಸರಕಾರ ಭಾರತ ಸೇರಿದಂತೆ 8 ರಾಷ್ಟ್ರಗಳ ವಿರುದ್ಧ ಇರಾನ್‌ ಮೇಲಿನ ನಿರ್ಬಂಧದಿಂದ ವಿನಾಯಿತಿ ಕಲ್ಪಿಸಿತು. ಇದು ಕಚ್ಚಾ ತೈಲ ದರದ ದಿಢೀರ್‌ ಇಳಿಕೆಗೆ ತಕ್ಷಣದ ಕಾರಣ.

ತೈಲ ಖರೀದಿಗೆ ಡಾಲರ್‌ ದೂರವಿಡುವ ತಂತ್ರ

 • ಇರಾನ್‌ನಿಂದ ಅತಿ ಹೆಚ್ಚು ತೈಲ ಖರೀದಿಸುವ ರಾಷ್ಟ್ರಗಳಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಭಾರತ ತನ್ನ ಶೇ.25ಕ್ಕೂ ಹೆಚ್ಚು ಕಚ್ಚಾ ತೈಲವನ್ನು ಇರಾನ್‌ನಿಂದ ಆಮದು ಮಾಡುತ್ತಿದ್ದು, ನಿರ್ಣಾಯಕವಾಗಿತ್ತು. ಅಮೆರಿಕದ ನಿರ್ಬಂಧ ಘೋಷಣೆಯಾದ ಬಳಿಕ ಕ್ರಮೇಣ ಆಮದು ಕಡಿಮೆಯಾದರೂ, ನವೆಂಬರ್‌ ನಂತರ ಇರಾನ್‌, ರೂಪಾಯಿಯಲ್ಲಿಯೇ ತೈಲವನ್ನು ಕೊಡಲು ಒಪ್ಪಿತ್ತು.
 • ವಿಶ್ವದ ಪ್ರಬಲ ರಿಸರ್ವ್‌ ಕರೆನ್ಸಿಯಾದ ಅಮೆರಿಕದ ಡಾಲರ್‌ ಅನ್ನು ದೂರವಿಡುವುದು ಇದರ ಉದ್ದೇಶವಾಗಿತ್ತು. ನಂತರ ರಷ್ಯಾ ಕೂಡ ರುಪಾಯಿಯಲ್ಲಿ ವ್ಯವಹರಿಸಲು ಆಸಕ್ತಿ ವಹಿಸಿತು. ರಷ್ಯಾ ಭವಿಷ್ಯದಲ್ಲಿ ಭಾರತದ ಜತೆಗೆ ರೂಪಾಯಿಯಲ್ಲೇ ವ್ಯಾಪಕ ವಹಿವಾಟು ನಡೆಸಲು ಉದ್ದೇಶಿಸಿದೆ.
 • ಜಪಾನ್‌ ಜತೆಗೆ 7,500 ಕೋಟಿ ಡಾಲರ್‌ಗಳ ಐತಿಹಾಸಿಕ ಕರೆನ್ಸಿ ವಿನಿಮಯ ಒಪ್ಪಂದ ವಿಶ್ವದಲ್ಲೇ ನಡೆದ ಅತಿ ದೊಡ್ಡ ಕರೆನ್ಸಿ ವಿನಿಮಯವಾಗಿ ದಾಖಲಾಗಿದ್ದು, ಅಮೆರಿಕಕ್ಕೆ ಎಚ್ಚರಿಕೆ ಗಂಟೆಯಾಯಿತು.

ಕಚ್ಚಾ ತೈಲ ದರ 60-63 ಡಾಲರ್‌ಗೆ ಇಳಿಕೆ?

 • ಕಚ್ಚಾ ತೈಲ ದರ 2019ರ ಫೆಬ್ರವರಿ-ಮಾರ್ಚ್‌ ವೇಳೆಗೆ ಪ್ರತಿ ಬ್ಯಾರೆಲ್‌ಗೆ 60ರಿಂದ 63 ಡಾಲರ್‌ ಆಸುಪಾಸಿಗೆ ಇಳಿಕೆಯಾಗುವ ನಿರೀಕ್ಷೆ ಇದೆ. ಇದು ಭಾರತಕ್ಕೆ ಅನುಕೂಲಕರವಾಗಲಿದೆ. ಅಮೆರಿಕದ ನಿರ್ಬಂಧದ ಪರಿಣಾಮ ಇರಾನ್‌ಗೆ ಮಾರುಕಟ್ಟೆ ಸೀಮಿತವಾಗುವುದರಿಂದ, ಭಾರತ ಮುಂದಿನ 5-6 ತಿಂಗಳಿನಲ್ಲಿ ದರ ಇಳಿಕೆಗೆ ಚೌಕಾಶಿ ಮಾಡಿ ಪ್ರಯೋಜನ ಪಡೆಯಬಹುದು.

ಕಚ್ಚಾ ತೈಲ ದರ ಏರಿಕೆಗೆ ಕಾರಣವೇನು?

 • ಇರಾನ್‌ ವಿರುದ್ಧ ಅಮೆರಿಕ ನಿರ್ಬಂಧ ಪ್ರಕಟ
 • ಒಪೆಕ್‌ ರಾಷ್ಟ್ರಗಳಿಂದ ತೈಲೋತ್ಪಾದನೆ ಕಡಿತ
 • ಅಮೆರಿಕ-ಚೀನಾ ನಡುವೆ ವಾಣಿಜ್ಯ ಸಮರ
 • ಡಾಲರ್‌ ಎದುರು ಇತರ ಕರೆನ್ಸಿಗಳ ಕುಸಿತ
 • ಅಂತಾರಾಷ್ಟ್ರೀಯ ಮಟ್ಟದ ಹಣಕಾಸು ಬಿಕ್ಕಟ್ಟು

ದರ ಇಳಿಕೆಗೆ ಭಾರತ ಹೆಣೆದ ವ್ಯೂಹ

 • ಭಾರತ, ಜಪಾನ್‌, ರಷ್ಯಾ, ಇರಾನ್‌ ಸಹಿತ ಪ್ರಾದೇಶಿಕ ಕರೆನ್ಸಿ ಯೂನಿಯನ್‌ ಸ್ಥಾಪನೆ
 • ಇರಾನ್‌ ಜತೆಗೆ ರೂಪಾಯಿಯಲ್ಲಿ, ಜಪಾನ್‌ ಜತೆ ಯೆನ್‌ನಲ್ಲಿ ವ್ಯವಹಾರ
 • ಭಾರತ ಸಹಿತ 8 ರಾಷ್ಟ್ರಗಳಿಗೆ ಇರಾನ್‌ ತೈಲ ಆಮದಿಗೆ ಅಮೆರಿಕ ಅನುಮತಿ
 • ನಿರ್ಬಂಧದಿಂದಾಗಿ 8 ರಾಷ್ಟ್ರಗಳಿಗೆ ಯಥೇಚ್ಛ ಕಚ್ಚಾ ತೈಲ ಪೂರೈಕೆ
 • ಅಮೆರಿಕವನ್ನು ಎಲ್ಲರೂ ಸೇರಿ ಎದುರಿಸುವ ಕಾರ್ಯತಂತ್ರ

ಭೂ ಸೇನೆಗೆ ಎಂ777 ಫಿರಂಗಿ ಸೇರ್ಪಡೆ: 

6.

ಸುದ್ಧಿಯಲ್ಲಿ ಏಕಿದೆ ?ಅಮೆರಿಕ ನಿರ್ವಿುತ ಲಘು ಹೊವಿಟ್ಜರ್ (ತುಪಾಕಿ) ಎಂ777 ಹಾಗೂ ಕೆ-9 ವಜ್ರ ಫಿರಂಗಿ, ಸಂಯೋಜಿತ ಫಿರಂಗಿ ಸಾಗಣೆ ವಾಹನಗಳು ಭೂಸೇನೆಗೆ ಶುಕ್ರವಾರ ಅಧಿಕೃತವಾಗಿ ಸೇರ್ಪಡೆಯಾಗಿವೆ.

 • ಮಹಾರಾಷ್ಟ್ರದ ದೇವ್​ಲಾಲಿಯಲ್ಲಿರುವ ಫಿರಂಗಿ ತರಬೇತಿ ಶಾಲೆ ಮತ್ತು ವಾಯುಪಡೆಯ ಶಿಬಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ಮೂರು ಫಿರಂಗಿಗಳನ್ನು ಸೇನೆಯ ಸಂಗ್ರಹಾಗಾರಕ್ಕೆ ಸೇರ್ಪಡೆ ಮಾಡಿಕೊಂಡರು.
 • ತಲಾ 18 ಎಂ777 ತುಪಾಕಿ ಮತ್ತು ಕೆ-9 ವಜ್ರ ಫಿರಂಗಿಗಳನ್ನು ಒಳಗೊಂಡ ಮೊದಲ ರೆಜಿಮೆಂಟನ್ನು ಮುಂದಿನ ವರ್ಷ ಜೂನ್ ವೇಳೆಗೆ ರಚಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಫಿರಂಗಿಗಳನ್ನು ಭೂಸೇನೆಗೆ ಸೇರ್ಪಡೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫಿರಂಗಿಗಳ ವಿಶೇಷತೆ

ಕೆ9 ವಜ್ರ

 • 155 ಎಂಎಂ, 52 ಕ್ಯಾಲಿಬ್ರೆನ ಸ್ವಯಂ ಚಾಲಿತ ಗನ್‌ ಇದಾಗಿದ್ದು, ಭಾರತದಲ್ಲಿ ಖಾಸಗಿ ವಲಯದಲ್ಲಿ ತಯಾರಿಸಲಾದ ಮೊದಲ ಫಿರಂಗಿ ಎಂಬ ಹಿರಿಮೆ ಗಳಿಸಿದೆ.
 • 28ರಿಂದ 38 ಕಿ.ಮೀ. ವ್ಯಾಪ್ತಿಯಲ್ಲಿ ಇದನ್ನು ಪ್ರಯೋಗಿಸಬಹುದು.
 • 30 ಸೆಕೆಂಡ್‌ಗಳಲ್ಲಿ ಇದು 3 ಸುತ್ತು ಗುಂಡು ಹಾರಿಸಬಲ್ಲದು. ಅತೀವ ತರ್ತು ಸಂದರ್ಭಗಳಲ್ಲಿ ಮೂರು ನಿಮಿಷದಲ್ಲೇ 15 ಸುತ್ತು ಗುಂಡು ಹಾರಿಸಬಲ್ಲದು. ಅಷ್ಟೇ ಅಲ್ಲ, 60 ನಿಮಿಷದಲ್ಲಿ ಸತತವಾಗಿ 60 ಸುತ್ತು ಗುಂಡು ಹಾರಿಸಬಲ್ಲದು.
 • 2020ರ ವೇಳೆಗೆ 4,366 ಕೋಟಿ ರೂ. ವೆಚ್ಚದಲ್ಲಿ 100 ಇಂತಹ ಫಿರಂಗಿಗಳು ಸೇನೆಯ ಬತ್ತಳಿಕೆ ಸೇರಲಿವೆ. ಈ ಪೈಕಿ 10 ಈ ತಿಂಗಳೇ ಸೇರ್ಪಡೆಗೊಳ್ಳಲಿವೆ.

ಎಂ777 ಹೊವಿಟ್ಸರ್‌

 • ಇದು 155 ಎಂಎಂ ವ್ಯಾಸದ, ಅತ್ಯಂತ ಹಗುರವಾದ ಫಿರಂಗಿಯಾಗಿದ್ದು, ಇದನ್ನು ಹೆಲಿಕಾಪ್ಟರ್‌ ಮೂಲಕ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಿಸಬಹುದು. ಮಧ್ಯ ಶ್ರೇಣಿಯ ಈ ಫಿರಂಗಿಯನ್ನು ಗುಡ್ಡಗಾಡು ಪ್ರದೇಶಗಳಿಗೂ ಸಾಗಿಸಿ ಬಳಸಬಹುದು.
 • ಅಮೆರಿಕದಿಂದ ಭಾರತ 25 ಇಂತಹ ಗನ್‌ಗಳನ್ನು ಖರೀದಿಸಲಿದೆ. 120 ಗನ್‌ಗಳನ್ನು ಅಮೆರಿಕದಲ್ಲೇ ತಯಾರಿಸಲಾಗುವುದು.
 • 2006ರಲ್ಲೇ ಈ ಕುರಿತ ಮಾತುಕತೆ ನಡೆದಿತ್ತಾದರೂ, ಅದು ಕಾರ್ಯಸಾಧುವಾಗಿದ್ದು ಕಳೆದ 3 ವರ್ಷದಲ್ಲಿ.

ಕಾಮನ್‌ ಗನ್‌ ಟವರ್ಸ್‌

 • ಭಾರತದ ಅಶೋಕ್‌ ಲೈಲೆಂಡ್‌ ಕಂಪನಿ ತಯಾರಿಸಿದ ಫಿರಂಗಿ ಎಳೆದೊಯ್ಯುವ ವಾಹನವಿದು.
 • 6/6 ವಾಹನ ಇದಾಗಿದ್ದು, ಗುಡ್ಡಗಾಡು ಪ್ರದೇಶದಲ್ಲೂ ಇದನ್ನು ಕಾರ್ಯಾಚರಣೆ ಮಾಡಬಹುದು.
 • ಗಂಟೆಗೆ 80 ಕಿ.ಮೀ ವೇಗದಲ್ಲಿ ಇದು ಚಲಿಸಬಲ್ಲದು.
 • ಫಿರಂಗಿಯನ್ನು ಜೋಡಿಸಿದಾಗ ಇದರ ಗರಿಷ್ಠ ವೇಗ ಗಂಟೆಗೆ 50 ಕಿ.ಮೀ.
 • ಮದ್ದುಗುಂಡುಗಳನ್ನು ಹೊಂದಿರುವ ಸುಮಾರು 2 ಟನ್‌ ತೂಕದ ಕ್ರೇನ್‌ ಅನ್ನು ಇದಕ್ಕೆ ಜೋಡಿಸಲಾಗಿರುತ್ತದೆ.
Related Posts
“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಬಡವರ ಬಂಧು’ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮೀಟರ್‌ ಬಡ್ಡಿ ದಂಧೆ ನಡೆಸುವವರ ಕಪಿಮುಷ್ಠಿಯಿಂದ ಸಣ್ಣ ವ್ಯಾಪಾರಿಗಳನ್ನು ಪಾರುಮಾಡಿ, ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ಒದಗಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ 'ಬಡವರ ಬಂಧು' ಯೋಜನೆಗೆ ನ.22 ಚಾಲನೆ ಸಿಗಲಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 5 ...
READ MORE
“24 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿಶ್ವದ ಸುರಕ್ಷಿತ ನಗರ ಪಟ್ಟಿ ಸುದ್ಧಿಯಲ್ಲಿ ಏಕಿದೆ ?ಅಮೆರಿಕ ಮೂಲದ ಟ್ರಿಬ್ಯೂನ್ ಪತ್ರಿಕೆಯ ಸೋದರ ಸಂಸ್ಥೆ ‘ದಿ ಡೇಲಿ ಮೇಲ್’ ನಡೆಸಿದ ವಿಶ್ವದ ಸುರಕ್ಷಿತ ನಗರಗಳ ಸಮೀಕ್ಷೆಯಲ್ಲಿ ಭಾರತದಿಂದ ಮಂಗಳೂರು ಮಾತ್ರವೇ ಸ್ಥಾನ ಪಡೆದುಕೊಂಡಿದೆ. 1ರಿಂದ 100ರ ವರೆಗೆ ಅಂಕೆಯ ಸ್ಕೇಲ್​ನಲ್ಲಿ ಗರಿಷ್ಠ ಅಂಕ ಗಳಿಸಿದ ...
READ MORE
“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಲಮನ್ನಾ ಮೊತ್ತ ತೀರಿಸಿ ಸುದ್ಧಿಯಲ್ಲಿ ಏಕಿದೆ ?ರೈತರ ಕೃಷಿ ಸಾಲಮನ್ನಾ ಮಾಡುತ್ತಿರುವ ರಾಜ್ಯ ಸರ್ಕಾರಗಳು ನಿಗದಿತ ಅವಧಿಯಲ್ಲಿ ಬ್ಯಾಂಕ್​ಗಳಿಗೆ ಹಣ ಭರಿಸಬೇಕು ಎಂದು ನಬಾರ್ಡ್ ಸೂಚಿಸಿದೆ. ಉದ್ದೇಶ ರಾಜ್ಯ ಸರ್ಕಾರಗಳು ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡದೆ ಸಾಲಮನ್ನಾ ಮಾಡುತ್ತಿವೆ ಎಂಬ ಆರೋಪದ ಮಧ್ಯೆಯೇ ನಬಾರ್ಡ್ ಈ ...
READ MORE
04th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಸ್ವಚ್ಛ ಸರ್ವೆಕ್ಷಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಸುದ್ಧಿಯಲ್ಲಿ ಏಕಿದೆ?ಸ್ವಚ್ಛ ಸರ್ವೆಕ್ಷಣ ಅಭಿಯಾನದಲ್ಲಿ ಬೆಂಗಳೂರಿಗೆ ಉತ್ತಮ ಸ್ಥಾನ ದೊರಕಿಸಿಕೊಡಲು ಬಿಬಿಎಂಪಿ ಈ ಬಾರಿ ಹಲವು ಕ್ರಮ ಕೈಗೊಳ್ಳುತ್ತಿದೆ. ಪ್ರಮುಖವಾಗಿ ಅಭಿಯಾನದಲ್ಲಿ ಬೆಂಗಳೂರಿನ ಸ್ವಚ್ಛತೆ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಮಾಡಲು ಸಾಮಾಜಿಕ ಜಾಲತಾಣ, ಎಫ್​ಎಂ ...
READ MORE
“21 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆಗೆ ಯೋಜನೆ ಸುದ್ಧಿಯಲ್ಲಿ ಏಕಿದೆ ? ಪದೇಪದೆ ಕಾಡುವ ಚಂಡಮಾರುತ ಸುಳಿಯಿಂದ ಪಾರಾಗಲು ಕೇಂದ್ರ ಸರ್ಕಾರದ ನೇತೃತ್ವದಲ್ಲಿ, ಕರ್ನಾಟಕ ಸೇರಿದಂತೆ ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆ ಯೋಜನೆ ಕೈಗೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಈ ಯೋಜನೆ ಶೇ.75-25 ಕೇಂದ್ರ-ರಾಜ್ಯ ಸಹಕಾರದಲ್ಲಿ ...
READ MORE
“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕಬ್ಬನ್‌ ಪಾರ್ಕ್‌ಗೆ ಏರ್‌ ಕ್ಲೀನರ್‌ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ರಾಜಧಾನಿಯಲ್ಲೂ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಈ ನಡುವೆ, ಅತಿ ಹೆಚ್ಚು ಜನರು ವಾಯು ಸೇವನೆಗೆ ಆಗಮಿಸುವ ಕಬ್ಬನ್‌ ಪಾರ್ಕ್‌ನಲ್ಲೂ ವಾಯು ಮಾಲಿನ್ಯ ಹೆಚ್ಚಿರುವುದನ್ನು ಮನಗಂಡು ಅಲ್ಲಿ ಗಾಳಿಯ ಶುದ್ಧೀಕರಣಕ್ಕೆ ಯಂತ್ರವನ್ನು ...
READ MORE
“11 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೈಗಾ ಅಣು ವಿದ್ಯುತ್ ಸ್ಥಾವರ ಸುದ್ಧಿಯಲ್ಲಿ  ಏಕಿದೆ ? ಯಾವುದೇ ತೊಂದರೆ ಇಲ್ಲದೆ ನಿರಂತರವಾಗಿ 941 ದಿನ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಕೈಗಾ ಮೊದಲ ಅಣು ವಿದ್ಯುತ್​ ಘಟಕ ವಿಶ್ವ ದಾಖಲೆ ನಿರ್ಮಿಸಿ ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ...
READ MORE
“5 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳೆ ದರ್ಶಕ ಆ್ಯಪ್ ಸುದ್ಧಿಯಲ್ಲಿ ಏಕಿದೆ ? ರಾಜ್ಯ ಸರ್ಕಾರದ ಬೆಳೆ ದರ್ಶಕ ಆ್ಯಪ್ ಇದೀಗ ರೈತಸ್ನೇಹಿಯಾಗಿದ್ದು, ಅಂಗೈಯಲ್ಲೇ ಜಮೀನು ಹಾಗೂ ಬೆಳೆ ಸಮೀಕ್ಷೆ ಮಾಹಿತಿ ಲಭಿಸಲಿದೆ. ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆ 'ಬೆಳೆ ದರ್ಶಕ್' ಆಪ್ ಅನ್ನು ಪರಿಚಯಿಸಿದ್ದು, ಈ 'ಬೆಳೆ ದರ್ಶಕ್' ...
READ MORE
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉದ್ಯೋಗ ಖಾತ್ರಿ ಹೆಚ್ಚಳ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಉದ್ಭವಿಸಿರುವ ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಕಾಯ್ದೆಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ 100 ದಿನಗಳ ಉದ್ಯೋಗವನ್ನು 150ಕ್ಕೆ ವಿಸ್ತರಿಸಲಾಗಿದ್ದು, ಈ ವರ್ಷ ಮಾನವ ದಿನಗಳ ಸೃಜನೆ ಗುರಿಯನ್ನು 8.5 ಕೋಟಿ ಯಿಂದ 10 ...
READ MORE
“15 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದೇಶದ ಮೊದಲ ರೈಲ್ವೆ ವಿವಿ  ಸುದ್ಧಿಯಲ್ಲಿ ಏಕಿದೆ ?ಗುಜರಾತ್​ನ ವಡೋದರಾದಲ್ಲಿ ಸ್ಥಾಪಿತವಾಗಿರುವ ‘ದಿ ನ್ಯಾಷನಲ್ ರೈಲ್ ಆಂಡ್ ಟ್ರಾನ್ಸ್ ಪೋರ್ಟೆಷನ್ ಇನ್​ಸ್ಟಿಟ್ಯೂಟ್ (ಎನ್​ಆರ್​ಟಿಐ)’ಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ಗುಜರಾತ್ ಸಿಎಂ ವಿಜಯ್ ರೂಪಾಣಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ರೈಲ್ವೆ ಇಲಾಖೆಯೇ ಆರಂಭಿಸಿರುವ ...
READ MORE
“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“24 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
04th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
“21 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“11 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“5 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *