“11 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಕೈಗಾ ಅಣು ವಿದ್ಯುತ್ ಸ್ಥಾವರ

1.

ಸುದ್ಧಿಯಲ್ಲಿ  ಏಕಿದೆ ? ಯಾವುದೇ ತೊಂದರೆ ಇಲ್ಲದೆ ನಿರಂತರವಾಗಿ 941 ದಿನ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಕೈಗಾ ಮೊದಲ ಅಣು ವಿದ್ಯುತ್​ ಘಟಕ ವಿಶ್ವ ದಾಖಲೆ ನಿರ್ಮಿಸಿ ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.

 • ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಕೈಗಾದ ಒಂದನೇ ಘಟಕ ಈ ದಾಖಲೆ ಬರೆದಿದ್ದು, ಬ್ರಿಟನ್​ನ ಹೇಶಾಮ್ ವಿದ್ಯುತ್ ಘಟಕದ ದಾಖಲೆ ಸರಿಗಟ್ಟಿದೆ.
 • 941 ದಿನದಲ್ಲಿ 4,900 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿರುವ ಕೈಗಾ, 2016 ಮೇ 13 ರಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಡಿ.31ರ ವರೆಗೂ ವಿದ್ಯುತ್ ಉತ್ಪಾದನೆ ಮುಂದುವರಿವರಿಸಲಿದೆ.
 • ಇದಕ್ಕೆ ಭಾರತೀಯ ಅಣು ವಿದ್ಯುತ್ ನಿಯಂತ್ರಣ ಪ್ರಾಧಿಕಾರದಿಂದ ಅನುಮತಿಯೂ ದೊರೆತಿದೆ.
 • ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 1999ರಲ್ಲಿ ಕೈಗಾ ಅಣು ವಿದ್ಯುತ್ ಘಟಕಕ್ಕೆ ಚಾಲನೆ ನೀಡಿದ್ದರು. ಕೈಗಾ 220 ಮೆಗಾವ್ಯಾಟ್ ಸಾಮರ್ಥ್ಯದ ನಾಲ್ಕು ಘಟಕಗಳನ್ನು ಹೊಂದಿದೆ.

ಹೇಶಮ್ ಪರಮಾಣು ವಿದ್ಯುತ್ ಕೇಂದ್ರ

 • ಹೇಶಮ್ ಪವರ್ ಸ್ಟೇಷನ್ ಎಡಿಎಫ್ ಎನರ್ಜಿ ನಿರ್ವಹಿಸುತ್ತಿರುವ ಇಂಗ್ಲೆಂಡ್ನ ಲಂಕಾಷೈರ್ನಲ್ಲಿರುವ ಹೈಶಾಮ್ನಲ್ಲಿರುವ ಪರಮಾಣು ವಿದ್ಯುತ್ ಕೇಂದ್ರವಾಗಿದೆ. ಈ ಸೈಟ್ ಎರಡು ಪ್ರತ್ಯೇಕವಾಗಿ-ನಿಯಂತ್ರಿತ ಕೇಂದ್ರಗಳಾಗಿ ವಿಂಗಡಿಸಲ್ಪಟ್ಟಿದೆ,ಹೇಶಮ್ 1 ಮತ್ತು ಹೇಶಮ್ 2, ಇವೆರಡೂ ಮುಂದುವರಿದ ಅನಿಲ-ತಂಪಾಗಿರುವ ರಿಯಾಕ್ಟರ್ (ಎಜಿಆರ್) ವಿಧದ ರಿಯಾಕ್ಟರ್ಗಳಾಗಿವೆ .
 • 2016 ರ ಆಗಸ್ಟ್ 1 ರಂದು, ಹೆಶ್ಯಾಮ್ 2 ರ ಯುನಿಟ್ 8 ಯು ಪರಮಾಣು ಜನರೇಟರ್ನ ದೀರ್ಘಕಾಲೀನ ನಿರಂತರ ಕಾರ್ಯಾಚರಣೆಗಾಗಿ ವಿಶ್ವದಾಖಲೆ ಮುರಿಯಿತು. 1994 ರಲ್ಲಿ ಪಿಕೆರಿಂಗ್ ನ್ಯೂಕ್ಲಿಯರ್ ಜನರೇಟಿಂಗ್ ಸ್ಟೇಷನ್ ನ ಘಟಕ 7 (ಲೇಕ್ ಒಂಟಾರಿಯೊ, ಕೆನಡಾ) ಸೆಟ್ ಮಾಡಿದ 894 ದಿನಗಳ ಹಿಂದಿನ ದಾಖಲೆಯನ್ನು ಇದು ಮುರಿದಿದೆ.

ಎಲ್​ಯುುಎಚ್ ಮೈಲಿಗಲ್ಲು

2.

ಸುದ್ಧಿಯಲ್ಲಿ  ಏಕಿದೆ ? ಹಿಂದುಸ್ತಾನ್ ಏರೋನಾಟಿಕ್ಸ್ ಲಿ.(ಎಚ್​ಎಎಲ್) ನಿರ್ವಿುತ ಲೈಟ್ ಯುಟಿಲಿಟಿ ಹೆಲಿಕಾಪ್ಟರ್(ಎಲ್​ಯುುಎಚ್) ಪ್ರಮುಖ ಮೈಲಿಗಲ್ಲು ಸಾಧಿಸಿದೆ.

 • ಎಲ್​ಯುುಎಚ್ ಕಾರ್ಯಾಚರಣೆಗೆ ಒಪ್ಪಿಗೆ ದೊರೆಯ ಬೇಕಿದ್ದ ಷರತ್ತುಗಳಲ್ಲಿ 6 ಕಿ.ಮೀ. ಎತ್ತರದ ಹಾರಾಟವೂ ಒಂದಾಗಿದೆ.
 • ಪರೀಕ್ಷಾರ್ಥ ಹಾರಾಟ ಸಂದರ್ಭದಲ್ಲಿ ಹೆಲಿಕಾಪ್ಟರ್ ಉತ್ತಮ ಪ್ರದರ್ಶನ ನೀಡಿದೆ. ಈ ಮೈಲಿಗಲ್ಲು ಬಳಿಕ ಮುಂದಿನ ತಿಂಗಳಲ್ಲಿ ಎಲ್​ಯುುಎಚ್ ಹೈ ಆಲ್ಟಿಟ್ಯೂಡ್ ಕೋಲ್ಡ್ ವೆದರ್ ಪರೀಕ್ಷೆಗೊಳಪಡಲಿದೆ ಎಂದು ಎಚ್​ಎಎಲ್ ತಿಳಿಸಿದೆ.

ಎಲ್​ಯುುಎಚ್ ಹೆಲಿಕಾಪ್ಟರ್

 • ಎಚ್​ಎಎಲ್ ರೋಟರಿ ವಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ(ಆರ್​ಡಬ್ಲ್ಯೂಆರ್ ಆಂಡ್​ಡಿಸಿ)3 ಟನ್ ತೂಕದ ನ್ಯೂ ಜನರೇಷನ್ ಎಲ್​ಯುುಎಚ್ ಹೆಲಿಕಾಪ್ಟರ್ ವಿನ್ಯಾಸಗೊಳಿಸಿ, ಉತ್ಪಾದಿಸಿದೆ.
 • ಎಲ್​ಯುುಎಚ್ ಪ್ರಸ್ತುತ ಭಾರತೀಯ ಸೇನೆ ಬಳಿ ಇರುವ ಚೀತಾ ಮತ್ತು ಚೇತಕ್ ಯುದ್ಧ ಹೆಲಿಕಾಪ್ಟರ್​ಗಳ ಸ್ಥಾನ ತುಂಬಲಿದೆ.
 • 2016ರ ಸೆ.6ರಂದು ಮೊದಲ ಎಲ್​ಯುುಎಚ್ ಪಿಟಿ1 ಹಾರಾಟ ನಡೆಸಿತ್ತು. 2017 ಮೇ 22ರಂದು ಎರಡನೇ ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು.
 • ಭಾರತೀಯ ಸೇನೆ 126 ಹಾಗೂ ಭಾರತೀಯ ವಾಯುಸೇನೆ 61 ಎಲ್​ಯುುಎಚ್ ಖರೀದಿಗೆ ಎಚ್​ಎಎಲ್​ಗೆ ಕಾರ್ಯಾದೇಶ ನೀಡಿದೆ.
 • 220 ಕಿ.ಮೀ ವೇಗ ಮತ್ತು ಗರಿಷ್ಠ 5 ಕಿ.ಮೀ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯವನ್ನು ಎಲ್‌ಯುಎಚ್‌ ಹೊಂದಿದೆ. 400 ಕೆ.ಜಿ ತೂಕದೊಂದಿಗೆ 350 ಕಿ.ಮೀ ದೂರವನ್ನು ಕ್ರಮಿಸಬಲ್ಲದು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್

 • ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಭಾರತದಲ್ಲಿ ಬೆಂಗಳೂರಿನಲ್ಲಿ ಭಾರತದ ಸರ್ಕಾರಿ ಸ್ವಾಮ್ಯದ ಅಂತರಿಕ್ಷಯಾನ ಮತ್ತು ರಕ್ಷಣಾ ಕಂಪನಿಯಾಗಿದೆ. ಇದು ಭಾರತೀಯ ರಕ್ಷಣಾ ಸಚಿವಾಲಯದ ಆಡಳಿತದ ಅಡಿಯಲ್ಲಿ ಆಡಳಿತ ಹೊಂದಿದೆ.
 • ಸರ್ಕಾರಿ ಸ್ವಾಮ್ಯದ ನಿಗಮವು ಏರೋಸ್ಪೇಸ್ನ ಕಾರ್ಯಾಚರಣೆಯಲ್ಲಿ ಪ್ರಾಥಮಿಕವಾಗಿ ತೊಡಗಿಸಿಕೊಂಡಿದೆ ಮತ್ತು ವಿಮಾನ, ಜೆಟ್ ಇಂಜಿನ್ಗಳು, ಹೆಲಿಕಾಪ್ಟರ್ಗಳು ಮತ್ತು ಅವುಗಳ ಬಿಡಿ ಭಾಗಗಳ ವಿನ್ಯಾಸ, ತಯಾರಿಕೆ ಮತ್ತು ಜೋಡಣೆಯಲ್ಲಿ ಪ್ರಸ್ತುತ ತೊಡಗಿದೆ.
 • ನಾಸಿಕ್, ಕೊರ್ವಾ, ಕಾನ್ಪುರ್, ಕೋರಪುಟ್, ಲಕ್ನೋ, ಬೆಂಗಳೂರು, ಹೈದರಾಬಾದ್ ಮತ್ತು ಕಾಸರಗೋಡು ಸೇರಿದಂತೆ ಭಾರತದಾದ್ಯಂತ ಹಲವಾರು ಸೌಲಭ್ಯಗಳಿವೆ. HAL HF-24 ಮಾರುತ್ ಯುದ್ಧ-ಬಾಂಬರ್ ಭಾರತದಲ್ಲಿ ಮಾಡಿದ ಮೊದಲ ಯುದ್ಧ ವಿಮಾನವಾಗಿದೆ

ಜಲಕೃಷಿ

3.

ಸುದ್ಧಿಯಲ್ಲಿ  ಏಕಿದೆ ? ವಿದೇಶಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ, ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿಯೂ ಆರಂಭಿಕ ಹಂತದಲ್ಲಿರುವ ಜಲಕೃಷಿ (Hydroponics/ soilless garden)ಯಲ್ಲಿ ಬಂಟ್ವಾಳ ಪುಂಜಾಲಕಟ್ಟೆ ಯುವಕ ಕಟ್ಟೆಮನೆ ಸೂರಜ್ ಅಜಿಲ ಯಶಸ್ಸು ಕಂಡಿದ್ದಾರೆ.

ಹೈಡ್ರೋಫೋನಿಕ್ಸ್ ವಿಶೇಷತೆ

 • ಮಣ್ಣಿನ ಅಗತ್ಯವೇ ಇಲ್ಲದೆ ಕೇವಲ ನೀರು ಹಾಗೂ ಪೋಷಕಾಂಶಯುಕ್ತ ದ್ರಾವಣಗಳ ಸಹಾಯದಿಂದ ತರಕಾರಿ ಬೆಳೆಗಳನ್ನು ಬೆಳೆಸುವುದೇ ಜಲಕೃಷಿ ಅಥವಾ ಹೈಡ್ರೋಫೋನಿಕ್ಸ್ ವಿಶೇಷತೆ.

ಬೆಳೆಯುವುದು ಹೇಗೆ?:

 • ಮಣ್ಣು ಗಿಡದ ಕಾಂಡಗಳಿಗೆ ಆಧಾರ ನೀಡಿ ಗಿಡವನ್ನು ಗಟ್ಟಿಯಾಗಿ ನಿಲ್ಲುವಂತೆ ಮಾಡಲು ಸಹಕಾರಿಯಾಗುತ್ತದೆ. ಆದರೆ, ಜಲಕೃಷಿಯಲ್ಲಿ ಮಣ್ಣು ಇಲ್ಲದಿರುವುದರಿಂದ ಗಿಡಗಳನ್ನು ನಿಲ್ಲುವಂತೆ, ಆಧಾರವಾಗಿಡಲು ವಿಶೇಷ ರೀತಿಯ ಚಟ್ಟಿಗಳು ಅಥವಾ ಕೊಳವೆ ಮಾದರಿಯನ್ನು ಮಾಡಿ ಅದರಲ್ಲಿ ಗಿಡಗಳನ್ನು ಬೆಳೆಸಬೇಕು.
 • ಅಪಾರ್ಟ್​ವೆುಂಟ್​ಗಳಲ್ಲಿರುವರು ತಮ್ಮ ಬಾಲ್ಕನಿಗಳಿಗೆ ಸರಿಹೊಂದುವಂತಹ ಮಾದರಿ ಅನುಸರಿಸಬಹುದು.
 • ಮಣ್ಣಿನಲ್ಲಿ ಗಿಡಗಳಿಗೆ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳು ದೊರೆಯುತ್ತವೆ. ಆದರೆ, ನೀರಿನಲ್ಲಿ ಆ ಪೋಷಕಾಂಶಗಳು ಇರುವುದಿಲ್ಲ. ಆದ್ದರಿಂದ ಪೋಷಕಾಂಶಯುಕ್ತ ದ್ರಾವಣವನ್ನು ನಿಗದಿತ ಪ್ರಮಾಣದಲ್ಲಿ ಸೇರಿಸಬೇಕು. ಗಿಡದ ಬೇರುಗಳು ಸದಾ ನೀರಿನಲ್ಲಿ ಮುಳುಗಿರುವಂತೆ ನೋಡಿಕೊಳ್ಳಬೇಕು.
 • ಪ್ರತಿಯೊಂದು ಗಿಡಕ್ಕೂ ಬೇರೆ ಬೇರೆ ಪ್ರಮಾಣದಲ್ಲಿ ಪೋಷಕಾಂಶಯುಕ್ತ ದ್ರಾವಣ ಹಾಕಬೇಕು. ಉದಾಹರಣೆಗೆ ಟೊಮ್ಯಾಟೊ ಗಿಡಕ್ಕೆ ಹಾಕುವ ಪೋಷಕಾಂಶಗಳನ್ನು ಪಾಲಕ್ ಗಿಡಗಳಿಗೆ ಹಾಕುವಂತಿಲ್ಲ. ಇದರಿಂದ ಗಿಡ ಸಾಯಲೂಬಹುದು.

ಅನುಕೂಲಗಳು

 • ಮಂಜು ಬೀಳುವ ಜಾಗದಲ್ಲಿ ಅಥವಾ ಮರುಭೂಮಿಯಲ್ಲಿ ಮಣ್ಣಿನ ಅಗತ್ಯವಿಲ್ಲದೆ ಜಲಕೃಷಿ ಮಾಡಿ ಬೆಳೆ ತೆಗೆಯಬಹುದು.
 • ನಗರಗಳಲ್ಲಿ ಅಪಾರ್ಟ್​ವೆುಂಟ್​ಗಳಲ್ಲಿ ವಾಸಿಸುವವರು, ಸಣ್ಣ ಜಾಗದಲ್ಲಿ ಮನೆಯಿರುವವರೂ ಜಲಕೃಷಿ ಅಳವಡಿಸಿಕೊಂಡಲ್ಲಿ ಮನೆಗೆ ಬೇಕಾದ ಸೊಪ್ಪು, ತರಕಾರಿ ಬೆಳೆಯಬಹುದು.
 • ಮಣ್ಣಿನಲ್ಲಿ ಬೆಳೆಯುವ ಗಿಡಗಳಿಗಿಂತ ಶೇ.90ರಷ್ಟು ಕಡಿಮೆ ನೀರು ಸಾಕು

ಅನಾನುಕೂಲಗಳು

 • ಮಣ್ಣಿನ ಬಫರ್ ಇಲ್ಲದೆ , ಜಲಕೃಷಿ ವ್ಯವಸ್ಥೆಯ ಯಾವುದೇ ವೈಫಲ್ಯವು ತ್ವರಿತ ಸಸ್ಯ ಸಾವಿಗೆ ಕಾರಣವಾಗುತ್ತದೆ.
 • ಜಲಕೃಷಿಗೆ ಸಂಬಂಧಿಸಿದ ಹೆಚ್ಚಿನ ತೇವಾಂಶ ಮಟ್ಟಗಳು ಮತ್ತು ಮಣ್ಣು ಆಧಾರಿತ ಸಸ್ಯಗಳ ನೀರಿನ ಮೇಲೆ ಉಂಟಾಗುವ ವರ್ಟಿಸಿಲ್ಲಿಯಂ ವಿಲ್ಟ್ ಕಾರಣದಿಂದಾಗಿ ಇತರ ಅನಾನುಕೂಲತೆಗಳು ತೇವಾಂಶದಂತಹ ರೋಗಕಾರಕ ದಾಳಿಗಳನ್ನು ಒಳಗೊಂಡಿವೆ.
 • ಅಲ್ಲದೆ, ಅನೇಕ ಹೈಡ್ರೋಪೊನಿಕ್ ಸಸ್ಯಗಳಿಗೆ ವಿವಿಧ ರಸಗೊಬ್ಬರಗಳು ಮತ್ತು ಧಾರಕ ವ್ಯವಸ್ಥೆಗಳ ಅಗತ್ಯವಿರುತ್ತದೆ.

ಅಗ್ನಿ 5 ಪರೀಕ್ಷಾರ್ಥ ಪ್ರಯೋಗ ಯಶಸ್ವಿ

4.

ಸುದ್ಧಿಯಲ್ಲಿ  ಏಕಿದೆ ? ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯದ ಸ್ವದೇಶಿ ನಿರ್ಮಿತ ಅಗ್ನಿ 5 ಕ್ಷಿಪಣಿಯನ್ನು ಒಡಿಶಾ ಕರಾವಳಿ ತೀರದಲ್ಲಿ ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ.

 • ಉಡಾವಣೆಗೊಳಿಸಲಾಗಿದೆ.

ಚೀನಾ, ಪಾಕ್‌ಗೆ ಪ್ರತ್ಯುತ್ತರ

 • ಅತಿಯಾದ ಶಾಖ ತಾಳಿಕೊಳ್ಳಬಲ್ಲ ಕಾರ್ಬನ್‌ ಕಾಂಪೊಸಿಟ್‌ ಹೀಟ್‌ ಶೀಲ್ಡ್‌ ಸೇರಿದಂತೆ ಅತ್ಯಾಧುನಿಕ ಇತರ ತಂತ್ರಜ್ಞಾನಗಳನ್ನು ಕ್ಷಿಪಣಿಗೆ ಅಳವಡಿಸಿದ ನಂತರ ನಡೆಸಿದ ಮೊದಲ ಉಡಾವಣೆ ಇದಾಗಿದೆ.
 • 5000 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ಹೊಡೆದುರುಳಿಸುವ ಅಗ್ನಿ-5 ಖಂಡಾಂತರ ಕ್ಷಿಪಣಿಯ ಏಳನೇ ಪರೀಕ್ಷಾರ್ಥ ಯಶಸ್ವಿ ಪ್ರಯೋಗವು ಸೇನೆಯ ವ್ಯೂಹಾತ್ಮಕ ಕಾರ್ಯಪಡೆ ಹಾಗೂ ಡಿಆರ್‌ಡಿಒ ವಿಜ್ಞಾನಿಗಳ ತಂಡದಲ್ಲಿ ಸಂತಸ ಮೂಡಿಸಿದೆ.
 • ಒಡಿಶಾ ಕರಾವಳಿಯ ಡಾ.ಅಬ್ದುಲ್‌ ಕಲಾಂ ದ್ವೀಪದ ಇಂಟಿಗ್ರೆಟೇಡ್‌ ಟೆಸ್ಟ್‌ ರೇಂಜ್‌ನ (ಐಟಿಆರ್‌) 4ನೇ ಲ್ಯಾಂಚ್‌ ಪ್ಯಾಡ್‌ನಿಂದ ಉಡ್ಡಯನ ವಾಹನದಿಂದ ಕ್ಷಿಪಣಿಯನ್ನು
 • ಚೀನಾ ಹಾಗೂ ಪಾಕಿಸ್ತಾನದಲ್ಲಿ ನಡುಕ ಹುಟ್ಟಿಸುವ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಈ ಎರಡೂ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸಿವೆ. ಕಳೆದ ಜೂನ್‌ 3ರಂದು ಕೊನೆಯದಾಗಿ ಪರೀಕ್ಷಾರ್ಥ ಉಡಾವಣೆ ನಡೆಸಲಾಗಿತ್ತು.

ಅಗ್ನಿ 5 ಕ್ಷಿಪಣಿ

 • 5,000 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ಹೊಡೆದು ಉರುಳಿಸಬಲ್ಲದು
 • 5 ಟನ್‌ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.
 • 17 ಮೀಟರ್‌ ಎತ್ತರ, 2 ಮೀಟರ ಅಗಲವಿರುವ ಕ್ಷಿಪಣಿ ಇದು.
 • ಇದರ ಉಡಾವಣೆಗೆ ಸ್ಥಿರ ವೇದಿಕೆಯೇ ಬೇಕೆಂದಿಲ್ಲ. ಉಡ್ಡಯನ ವಾಹನಗಳಲ್ಲಿ ಬೇಕಾದ ಕಡೆ ಸಾಗಿಸಿ ಉಡಾಯಿಸಬಹುದು.
 • ಅತಿಯಾದ ಶಾಖ ತಾಳಿಕೊಳ್ಳಬಲ್ಲ ಕಾರ್ಬನ್‌ ಕಾಂಪೊಸಿಟ್‌ ಹೀಟ್‌ ಶೀಲ್ಡ್‌ ಸೇರಿದಂತೆ ಅತ್ಯಾಧುನಿಕ ಇತರ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ.

ಅಗ್ನಿ ಸರಣಿಯ ಇತರ ಕ್ಷಿಪಣಿಗಳ ಸಾಮರ್ಥ್ಯ‌

 • ಅಗ್ನಿ 1- 700 ಕಿ.ಮೀ
 • ಅಗ್ನಿ 2- 2,000 ಕಿ.ಮೀ
 • ಅಗ್ನಿ 3- 2,500 ಕಿ.ಮೀ
 • ಅಗ್ನಿ 4- 3,500 ಕಿ.ಮೀ.
Related Posts
“3rd ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಾಡು ಹೆಚ್ಚಳ ಸುದ್ಧಿಯಲ್ಲಿ ಏಕಿದೆ?ದಾವಣಗೆರೆ ಜಿಲ್ಲೆಯಲ್ಲಿ ಕಾಡು ಹೆಚ್ಚಳವಾಗಿದ್ದು, ಹಸಿರು ವಲಯ ವಿಸ್ತರಣೆಯಲ್ಲಿ ಬಯಲು ಸೀಮೆ ಜಿಲ್ಲೆಗಳ ಪೈಕಿ ದಾವಣಗೆರೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಕೇಂದ್ರದ ಸರ್ವೆ ಆಫ್‌ ಇಂಡಿಯಾ ಕಳೆದ ತಿಂಗಳು ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಬೆಳವಣಿಗೆಯನ್ನು ಉಲ್ಲೇಖಿಸಿದೆ. ಕಳೆದ ಹತ್ತು ವರ್ಷದಲ್ಲಿ ...
READ MORE
ಮೇಕ್ ಇನ್ ಇಂಡಿಯಾ
ಮೇಕ್ ಇನ್ ಇಂಡಿಯಾ ಬಗ್ಗೆ ಪರಿಚಯ: ಒಂದು ಪ್ರಮುಖ ಹೊಸ ರಾಷ್ಟ್ರೀಯ ಕಾರ್ಯಕ್ರಮ. ಇದನ್ನು ಹೂಡಿಕೆಗೆ  ಅನುಕೂಲಕರವಾಗಿ ವಿನ್ಯಾಸಗೊಳಿಸಲಾಗಿದೆ. ನಾವೀನ್ಯತೆಯ ಪ್ರೋತ್ಸಾಹ, ಕೌಶಲ್ಯ ಅಭಿವೃದ್ಧಿ ಹೆಚ್ಚಿಸಲು, ಬೌದ್ಧಿಕ ಆಸ್ತಿಯನ್ನು ರಕ್ಷಿಸಲು ಮತ್ತು ಅತ್ಯುತ್ತಮ ದರ್ಜೆಯ ಉತ್ಪಾದನ ಸೌಕರ್ಯವನ್ನು ನಿರ್ಮಿಸಲು ಜಾಗತಿಕ ಉತ್ಪಾದನೆಯ ಭೂಪಟದಲ್ಲಿ ಭಾರತವನ್ನು ಅಗ್ರಸ್ಥಾನಕ್ಕೇರಿಸುವ ...
READ MORE
” 08 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎನ್​ಪಿಎಸ್ ಸುದ್ಧಿಯಲ್ಲಿ ಏಕಿದೆ ?ಎನ್​ಪಿಎಸ್ (ಹೊಸ ಪಿಂಚಣಿ ಯೋಜನೆ) ರದ್ದತಿ ವಿಚಾರ ಕೇಂದ್ರ ಸರ್ಕಾರದ ಮಟ್ಟದಲ್ಲಿ ಬಾಕಿ ಇರುವಂತೆಯೇ, ಆ ನೌಕರರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಕೆಲವೊಂದು ಸೌಲಭ್ಯ ನೀಡಲು ಸಮ್ಮತಿಸಿದೆ. ಎನ್​ಪಿಎಸ್ ರದ್ದತಿಗಾಗಿ ಹೋರಾಟ ನಡೆಸುತ್ತಿರುವ ನೌಕರರು, ಅದರ ಜತೆಗೆ ಬೇರೆ ...
READ MORE
“20tht ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಿಶೇಷ ಕೋರ್ಟ್‌ ಸ್ಥಾಪನೆ ಸುದ್ಧಿಯಲ್ಲಿ ಏಕಿದೆ ?ವಾಣಿಜ್ಯ ವ್ಯವಹಾರ ಸಂಬಂಧಿ ಪ್ರಕರಣಗಳ ನಿರ್ವಹಣೆಗೆ ಹೊಸದಾಗಿ ಮೂರು ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ರಾಜ್ಯ ಸರಕಾರ ಮಂಜೂರಾತಿ ನೀಡಿದೆ. ರಾಜ್ಯದಲ್ಲಿ 'ಈಜಿ ಆಫ್‌ ಡೂಯಿಂಗ್‌ ಬ್ಯುಸಿನೆಸ್‌' ಯೋಜನೆ ಅನುಷ್ಠಾನ ಉದ್ದೇಶದಿಂದ ಮೂರು ವಾಣಿಜ್ಯಾತ್ಮಕ ನ್ಯಾಯಾಲಯಗಳ ಸ್ಥಾಪನೆಗೆ ಮಂಜೂರಾತಿ ...
READ MORE
“05 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕದಂಬೋತ್ಸವ ಮುಂದೂಡಿಕೆ ಸುದ್ಧಿಯಲ್ಲಿ ಏಕಿದೆ ?ಮಂಗನ ಕಾಯಿಲೆ ಭೀತಿ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ಫೆಬ್ರವರಿ 9 ಮತ್ತು 10ರಂದು ನಡೆಯಬೇಕಿದ್ದ ಕದಂಬೋತ್ಸವನ್ನು ಮುಂದೂಡಲಾಗಿದೆ. ಹಿನ್ನಲೆ ಫೆಬ್ರವರಿ 9 ಮತ್ತು 10ರಂದು ಕದಂಬೋತ್ಸವನ್ನು ನಡೆಸಲು ಜಿಲ್ಲಾಡಳಿತ ಈಗಾಗಲೇ ಅಂತಿಮ ಹಂತದ ಸಿದ್ಧತೆಗಳನ್ನು ...
READ MORE
15th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಚೀನಾ ಗಡಿ ಬಳಿ ಐತಿಹಾಸಿಕ ಲ್ಯಾಂಡಿಂಗ್ ಆಯಕಟ್ಟಿನ ಗಡಿ ಭಾಗದಲ್ಲಿ ಕಾರ್ಯತಂತ್ರ ಬಲಿಷ್ಠಗೊಳಿಸುತ್ತಿರುವ ಭಾರತೀಯ ವಾಯುಪಡೆ ಚೀನಾ ಗಡಿಯಿಂದ ಕೇವಲ 30 ಕಿ.ಮೀ. ದೂರದಲ್ಲಿರುವ ಅರುಣಾಚಲ ಪ್ರದೇಶದ ಟ್ಯುಟಿಂಗ್​ನಲ್ಲಿ ಅತಿ ದೊಡ್ಡ ಸರಕು ಸಾಗಣೆ ವಿಮಾನ ಸಿ-17 ಗ್ಲೋಬಲ್​ವಾಸ್ಟರ್ ಅನ್ನು ಇಳಿಸುವ ಮೂಲಕ ...
READ MORE
“9th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಏಷ್ಯಾ ಮಾಧ್ಯಮ ಶೃಂಗಸಭೆ ಸುದ್ದಿಯಲ್ಲಿ ಏಕಿದೆ? ಮಾಧ್ಯಮ ಕ್ಷೇತ್ರದ ಅವಲೋಕನ ನಡೆಸುವ ನಿಟ್ಟಿನಲ್ಲಿ ಮೇ 10ರಿಂದ ಎರಡು ದಿನಗಳ ಕಾಲ 15ನೇ ಏಷ್ಯಾ ಮಾಧ್ಯಮ ಶೃಂಗಸಭೆ ಹೊಸದಿಲ್ಲಿಯಲ್ಲಿ ನಡೆಯಲಿದೆ. ಧ್ಯೇಯ ವಾಕ್ಯ: 'ಟೆಲ್ಲಿಂಗ್‌ ಅವರ್‌ ಸ್ಟೋರಿಸ್‌ -ಏಷ್ಯಾ ಅಂಡ್‌ ಮೋರ್‌' ಆಯೋಜಕರು: ಇಂಡಿಯನ್‌ ಇನ್ಸಿಟ್ಯೂಟ್‌ ಆಫ್‌ ಮಾಸ್‌ ಕಮ್ಯೂನಿಕೇಷನ್‌ ...
READ MORE
“25th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಒಂದು ವಲಯ ಒಂದು ರಸ್ತೆ’ ಸುದ್ದಿಯಲ್ಲಿ ಏಕಿದೆ? ಚೀನಾದ ‘ಒಂದು ವಲಯ ಒಂದು ರಸ್ತೆ’ (ಒಬಿಒಆರ್) ಯೋಜನೆ ಕುರಿತಂತೆ ಭಾರತದ ನಿಲುವಿಗೆ ನೆದರ್‌ಲೆಂಡ್ ಬೆಂಬಲ ವ್ಯಕ್ತಪಡಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಕಲ್ಪಿಸುವ ಯತ್ನಗಳು ಆಯಾ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವ ರೀತಿಯಲ್ಲಿ ಇರಬೇಕು ಒಂದು ಬೆಲ್ಟ್, ಒಂದು ...
READ MORE
“15 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮೇಲ್ವರ್ಗ ಮೀಸಲು ಜಾರಿ ಸುದ್ಧಿಯಲ್ಲಿ ಏಕಿದೆ ?ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನಿಕ ಸವಲತ್ತು ಅಧಿಕೃತವಾಗಿ ಅನುಷ್ಠಾನಗೊಂಡಿದೆ. ಈ ದಿಸೆಯಲ್ಲಿನ ಸಂವಿಧಾನ ತಿದ್ದುಪಡಿಗೆ ರಾಷ್ಟ್ರಪತಿಗಳ ಸಮ್ಮತಿ ಲಭಿಸಿತ್ತು. ''ಸಂವಿಧಾನ (ತಿದ್ದುಪಡಿ) ಕಾಯಿದೆ -2019ರ ವಿಧಿ ...
READ MORE
“15th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಾವೇರಿ ನದಿ ನೀರು ಪ್ರಾಧಿಕಾರ ಸುದ್ದಿಯಲ್ಲಿ ಏಕಿದೆ? ಕಾವೇರಿ ಜಲವಿವಾದ ನ್ಯಾಯಾಧೀಕರಣ 2007ರ ತನ್ನ ಐತೀರ್ಪಿನಲ್ಲಿ ಹೇಳಿದ್ದ ನೀರು ನಿರ್ವಹಣಾ ಮಂಡಳಿಯ ತದ್ರೂಪದಂತಿರುವ 'ಕಾವೇರಿ ನೀರು ನಿರ್ವಹಣಾ ಯೋಜನೆ-2018'ರ ಕರಡನ್ನು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಸಲ್ಲಿಸಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಲು ...
READ MORE
“3rd ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮೇಕ್ ಇನ್ ಇಂಡಿಯಾ
” 08 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“20tht ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“05 ಫೆಬ್ರವರಿ 2019 ರ ಕನ್ನಡ ಪ್ರಚಲಿತ
15th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
“9th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
“25th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
“15 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *