“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ರಾಷ್ಟ್ರೀಯ ಯುವ ದಿನ

ಸುದ್ಧಿಯಲ್ಲಿ ಏಕಿದೆ ?ಸ್ವಾಮಿ ವಿವೇಕಾನಂದರ ಸ್ವರಣಾರ್ಥ ಜ.12ನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.

ರಾಷ್ಟ್ರೀಯ ಯುವ ದಿನ

 • ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. 1984 ರಲ್ಲಿ ಭಾರತ ಸರಕಾರ ದಿನವನ್ನು ರಾಷ್ಟ್ರೀಯ ಯುವ ದಿನವೆಂದು ಘೋಷಿಸಿತು ಮತ್ತು 1985 ರಿಂದ ಪ್ರತಿವರ್ಷ ಭಾರತದಲ್ಲಿ ಆಚರಿಸಲಾಗುತ್ತದೆ.
 • ಈ ವರ್ಷ ಇದು ಸ್ವಾಮಿ ವಿವೇಕಾನಂದರ 155 ನೇ ಜನ್ಮ ದಿನಾಚರಣೆಯಾಗಿದೆ. ದಿನದ ಆಚರಣೆಯು ತತ್ವಶಾಸ್ತ್ರವನ್ನು ಮತ್ತು ಸ್ವಾಮಿ ವಿವೇಕಾನಂದದ ಆದರ್ಶಗಳನ್ನು ಪ್ರಸಾರ ಮಾಡಲು ಮತ್ತು ಅವರ ಧ್ಯೇಯ ಮತ್ತು ಉದ್ದೇಶವನ್ನು ಪ್ರಸಾರ ಮಾಡಲು ಪ್ರಯತ್ನಿಸುತ್ತದೆ. ಇದು ಭಾರತೀಯ ಯುವಜನತೆಗೆ ಸಹಾ ಪ್ರೇರಣೆಗೆ ಸಹಾಯ ಮಾಡುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ.

ಸ್ವಾಮಿ ವಿವೇಕಾನಂದ ಬಗ್ಗೆ

 • ಸ್ವಾಮಿ ವಿವೇಕಾನಂದ 12 ಜನವರಿ 1863 ರಂದು ನರೇಂದ್ರನಾಥ ದತ್ತಾನಾಗಿ ಜನಿಸಿದರು ಮತ್ತು 4 ಜುಲೈ 1902 ರಂದು ನಿಧನರಾದರು. 19 ನೇ ಶತಮಾನದ ಸಂತ ರಾಮಕೃಷ್ಣ ಪರಮಹಂಸದ ಮುಖ್ಯ ಶಿಷ್ಯರಾಗಿದ್ದರು.
 • “ಪಾಶ್ಚಾತ್ಯ” ಜಗತ್ತಿಗೆ ವೇದಾಂತ ಮತ್ತು ಯೋಗದ ಭಾರತೀಯ ತತ್ತ್ವಗಳನ್ನು ಪರಿಚಯಿಸಿದ ಭಾರತದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.
 • 19 ಹಾಗೂ 20ನೇ ಶತಮಾನದಲ್ಲಿ ರಾಷ್ಟ್ರೀಯತೆಯನ್ನು ಜನರ ಮನದಲ್ಲಿ ಬಿತ್ತುವ ಕೈಂಕರ್ಯದಲ್ಲಿ ವಿವೇಕಾನಂದರ ಪಾತ್ರ ಮಹತ್ವದ್ದು.
 • ಅವರ ಮೌಲ್ಯಾಧಾರಿತ ವಿಚಾರಧಾರೆಗಳು ಹಿಂದುತ್ವ, ಹಿಂದೂ ಸಂಸ್ಕೃತಿ ಹಾಗೂ ಅದರ ಪ್ರಾಚೀನತೆ ಜನರ ಮನದಲ್ಲಿ ನೆಲೆಯೂರಿಸಿತು.
 • 1893ರಲ್ಲಿ ಅಮೆರಿಕದ ಚಿಕಾಗೋದಲ್ಲಿ ನಡೆದ ಜಾಗತಿಕ ಧರ್ಮ ಸಮ್ಮೇಳದಲ್ಲಿ ಅವರ ಭಾಷಣ, ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿತು.
 • 1897ರಲ್ಲಿ ವಿವೇಕಾನಂದರು ರಾಮಕೃಷ್ಣ ಮಿಶನ್‌ ಸ್ಥಾಪಿಸುವ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಂಡರು.

ಚಾರ್‌ಧಾಮ್‌ ಯೋಜನೆ

ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಚಾರ್‌ಧಾಮ್‌ ಅಭಿವೃದ್ಧಿ ಯೋಜನೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿದೆ.

ಯೋಜನೆಯ ಉದ್ದೇಶ

 • ಉತ್ತರಾಖಂಡದ ನಾಲ್ಕು ಪವಿತ್ರ ಪಟ್ಟಣಗಳಿಗೆ ಎಲ್ಲಾ ಹವಾಮಾನಕ್ಕೆ ಒಗ್ಗುವ ರಸ್ತೆಗಳನ್ನು ನಿರ್ಮಿಸುವ ಮೂಲಕ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
 • ಚಾರ್‌ಧಾಮ್‌ ಯೋಜನೆ ಎಲ್ಲ ಹವಾಮಾನ ರಸ್ತೆಗಳ ಮೂಲಕ ಉತ್ತರಾಖಂಡದ ನಾಲ್ಕು ಪಟ್ಟಣಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್‌ ಮತ್ತು ಬದ್ರಿನಾಥ್‌ ಸಂಪರ್ಕಿಸಲು ಉದ್ದೇಶಿಸಿದೆ.
 • ವಿಚಾರಣೆ ನಡೆಸುತ್ತಿರುವ ನ್ಯಾ.ಆರ್‌.ಎಫ್‌.ನಾರಿಮನ್‌ ಮತ್ತು ನ್ಯಾ.ವಿನೀತ್‌ ಸರಣ್‌ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ರಾಷ್ಟ್ರೀಯ ಹಸಿರು ಪೀಠ(ಎನ್‌ಜಿಟಿ) ನೀಡಿರುವ ಆದೇಶಕ್ಕೆ ತಡೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಅಫಿಡೆವಿಟ್‌ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
 • ಎನ್‌ಜಿಟಿ ಈ ಯೋಜನೆಗೆ ಸಮ್ಮತಿಸಿದ್ದು, ಇದರ ಮೇಲ್ವಿಚಾರಣೆಗೆ ಸಮಿತಿಯೊಂದನ್ನು ರಚಿಸಿದೆ.

ಸುಪ್ರೀಂಕೋರ್ಟ್‌ಗೆ ನ್ಯಾ.ದಿನೇಶ್‌ ಮಹೇಶ್ವರಿ

ಸುದ್ಧಿಯಲ್ಲಿ ಏಕಿದೆ ?ಹಾಲಿ ಕರ್ನಾಟಕ ಹೈಕೋರ್ಟ್‌ನ ಸಿಜೆಯಾಗಿ ಸೇವೆ ಸಲ್ಲಿಸುತ್ತಿರುವ ನ್ಯಾ.ದಿನೇಶ್‌ ಮಹೇಶ್ವರಿ ಅವರಿಗೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲು ಸುಪ್ರೀಂಕೋರ್ಟ್‌ನ ಕೊಲಿಜಿಯಂ ನಿರ್ಧರಿಸಿದೆ.

ಸುಪ್ರೀಂಕೋರ್ಟ್ ನ್ಯಾಯಾಧೀಶರ ಆಯ್ಕೆ ಹೇಗೆ ನಡೆಯುತ್ತದೆ ?

 • ಕೊಲಿಜಿಯಂ ನಿಯಮದಂತೆ ತನ್ನ ತೀರ್ಮಾನವನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಕಳುಹಿಸಿಕೊಡಲಿದೆ.ಅದು ರಾಷ್ಟ್ರಪತಿ ಅವರಿಗೆ ಕಳುಹಿಸಲಿದೆ, ಮುಂದಿನ ಒಂದು ವಾರದಲ್ಲಿ ರಾಷ್ಟ್ರಪತಿ ಅವರಿಂದ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ದಿನೇಶ್ ಮಹೇಶ್ವರಿ ಬಗ್ಗೆ

 • 2004 ಸೆ.2ರಂದು ರಾಜಸ್ತಾನ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ದಿನೇಶ್‌ ಮಹೇಶ್ವರಿ, 2014 ಜುಲೈನಲ್ಲಿ ಅಲಹಾಬಾದ್‌ಗೆ ವರ್ಗಾವಣೆಗೊಂಡಿದ್ದರು. ನಂತರ 2016ರ ಫೆಬ್ರವರಿಯಲ್ಲಿ ಮೇಘಾಲಯ ಸಿಜೆಯಾಗಿ ಪದೋನ್ನತಿ ಹೊಂದಿದ್ದ ಅವರು, 2018ರ ಫೆ.12ರಂದು ಕರ್ನಾಟಕ ಹೈಕೋರ್ಟ್‌ ಸಿಜೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿಬಿಎಂಪಿಗೆ ಬಿಸಿಮುಟ್ಟಿಸಿದ್ದರು

 • ಸುಮಾರು 11 ತಿಂಗಳ ಅವಧಿಯಲ್ಲಿ ಅನಗತ್ಯ ಪಿಐಎಲ್‌ಗಳಿಗೆ ಕಡಿವಾಣ ಹಾಕಿದ್ದ ಅವರು, ರಸ್ತೆ ಗುಂಡಿ, ಅನಧಿಕೃತ ಜಾಹೀರಾತುಗಳ ವಿರುದ್ಧ ಸಮರ ಸಾರಿ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡು ಹಗಲು-ರಾತ್ರಿ ಕೆಲಸ ಮಾಡಿಸಿದ್ದರು. ಅದರ ಪರಿಣಾಮ ನಗರದಲ್ಲಿ ಒಂದೂ ಅನಧಿಕೃತ ಬ್ಯಾನರ್‌, ಫ್ಲೆಕ್ಸ್‌ ಇಲ್ಲದಂತಾಯಿತು, ರಸ್ತೆಗಳ ಗುಣಮಟ್ಟವೂ ಸುಧಾರಿಸುತ್ತಿದೆ. ರಸ್ತೆ ಗುಣಮಟ್ಟ ಪರಿಶೀಲನೆಗಾಗಿ ಕೋರ್ಟ್‌ ಕಮೀಷನರ್ಸ್‌ ಸಹ ನೇಮಕ ಮಾಡಿದ್ದರು.

ಮಾನವಸಹಿತ ಗಗನಯಾನ

ಸುದ್ಧಿಯಲ್ಲಿ ಏಕಿದೆ ?ಮಾನವಸಹಿತ ಗಗನ್​ಯಾನ್ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸಿದ್ಧತೆ ಆರಂಭಿಸಿದೆ.

 • 2021ರ ಡಿಸೆಂಬರ್​ನಲ್ಲಿ ಈ ಯೋಜನೆ ಕೈಗೊಳ್ಳಲು ಸ್ವಯಂ ಗಡುವು ವಿಧಿಸಿಕೊಂಡಿರುವ ಇಸ್ರೋ ಇದಕ್ಕೆ ಪೂರಕವಾಗಿ ಪ್ರತ್ಯೇಕ ಮಾನವ ಬಾಹ್ಯಾಕಾಶಯಾನ ಕೇಂದ್ರ ಸ್ಥಾಪಿಸಿದೆ.
 • ಮಹಿಳಾ ಗಗನಯಾತ್ರಿ?: ಗಗನ್​ಯಾನ್ ಯೋಜನೆ ಯಲ್ಲಿ ಬಾಹ್ಯಾ ಕಾಶಯಾನ ಕೈಗೊಳ್ಳುವವರೆಲ್ಲರೂ ಭಾರತೀಯ ವಾಯುಪಡೆ ಅಧಿಕಾರಿ ಗಳು ಆಗಿರುತ್ತಾರೆ. ಮೊದಲ ಯೋಜನೆಯಲ್ಲಿ ಗಗನ ಯಾತ್ರಿಗಳು ಒಟ್ಟು 7 ದಿನ ಬಾಹ್ಯಾಕಾಶದಲ್ಲಿ ಇರುತ್ತಾರೆ. ಒಟ್ಟಾರೆ ಮೂವರು ಗಗನಯಾತ್ರಿಗಳನ್ನು ಕಳುಹಿಸಲು ನಿರ್ಧರಿಸಲಾಗಿದೆ. ಇವರಲ್ಲಿ ಒಬ್ಬ ಮಹಿಳೆಯೂ ಇರಲಿದ್ದಾರೆ.
 • 3 ಪ್ರಮುಖ ಯೋಜನೆಗೆ ಆದ್ಯತೆ: ಪ್ರಸಕ್ತ ವರ್ಷದಲ್ಲಿ ಇಸ್ರೋ 3 ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಿದೆ. 2019ರ ಜುಲೈನಲ್ಲಿ ಅತಿಕಡಿಮೆ ತೂಕದ, ಸಣ್ಣ ಉಪಗ್ರಹ ಕಳುಹಿಸುವ ರಾಕೆಟ್ ಉಡಾವಣೆ ಮಾಡಲಿದೆ. ಕೇವಲ 72 ಗಂಟೆಗಳ ಒಳಗೆ 100 ಟನ್ ತೂಕದ ಈ ಉಡಾಹಕ ಸಿದ್ಧಗೊಳ್ಳಲಿದೆ. 30 ಕೋಟಿ ರೂ. ವೆಚ್ಚದಲ್ಲಿ ತಯಾರಾಗಲಿದ್ದು, 6 ಜನರು ನಿಯಂತ್ರಿಸಲಿದ್ದಾರೆ. ಗರಿಷ್ಠ 500 ಕೆ.ಜಿ. ಭಾರದ ಉಪಗ್ರಹವನ್ನು ಇದು ಹೊತ್ತೊಯ್ಯಲಿದೆ. ದೇಶಕ್ಕೆ 100 ಜಿಬಿಪಿಎಸ್ ವೇಗದ ಇಂಟರ್​ನೆಟ್ ಸೌಲಭ್ಯ ಒದಗಿಸಲಿರುವ ಜಿಸ್ಯಾಟ್ 20 ಸೆಪ್ಟಂಬರ್/ ಅಕ್ಟೋಬರ್​ನಲ್ಲಿ ಉಡಾವಣೆಯಾಗಲಿದೆ. ಜತೆಗೆ ಮರುಬಳಸಬಹುದಾದ ಉಡಾಹಕದ ಪರೀಕ್ಷೆಗೂ ಇಸ್ರೋ ಸಜ್ಜಾಗುತ್ತಿದೆ. ಅಂದಾಜು 2-3 ಕಿ.ಮೀ. ಎತ್ತರಕ್ಕೆ ಹೆಲಿಕಾಪ್ಟರ್​ನಲ್ಲಿ ಈ ಉಡಾವಣಾ ವಾಹನವನ್ನು ಹೊತ್ತೊಯ್ದು ಉಡಾವಣೆ ಮಾಡಿ ಸುರಕ್ಷಿತವಾಗಿ ಭೂಮಿಗೆ ಇಳಿಸಲಾಗುವುದು.

ಎರಡು ಮಾನವ ರಹಿತ ನೌಕೆ

 • ಗಗನ್​ಯಾನ್​ನ ಅಂತಿಮ ಉಡಾವಣೆಗೂ ಮುನ್ನ 2 ಮಾನವರಹಿತ ನೌಕೆಗಳು ಪರೀಕ್ಷಾರ್ಥ ಹಾರಾಟ ಕೈಗೊಳ್ಳಲಿವೆ. ಜಿಎಸ್​ಎಲ್​ವಿ ಮಾರ್ಕ್ 3 ಉಡಾಹಕಗಳನ್ನು ಬಳಸಿ 2020ರ ಡಿಸೆಂಬರ್ ಹಾಗೂ 2021ರ ಜುಲೈನಲ್ಲಿ ಪರೀಕ್ಷಾರ್ಥ ಹಾರಾಟ ನಡೆಯಲಿದೆ. ಬಾಹ್ಯಾಕಾಶಯಾನಿಗಳ ಸುರಕ್ಷತೆ ಸೇರಿ ಹಲವು ಅಂಶಗಳನ್ನು ಗಮನಿಸಲಾಗುವುದು. ಲಭಿಸುವ ಮಾಹಿತಿ ಆಧರಿಸಿ, ಕೆಲ ಬದಲಾವಣೆ ಮಾಡಲಾಗುವುದು.

2019ರಲ್ಲಿ ಮಿಷನ್ 32!

 • ಇಸ್ರೋ 2018ರಲ್ಲಿ 17 ಯೋಜನೆ ಕೈಗೆತ್ತಿಕೊಂಡಿದ್ದು, 16 ಯೋಜನೆಗಳು ಯಶಸ್ವಿಯಾಗಿವೆ. 2019ರಲ್ಲಿ 32 ಯೋಜನೆ ಕೈಗೊಳ್ಳಲು ನಿರ್ಧರಿಸಿದೆ. 8 ಪಿಎಸ್​ಎಲ್​ವಿ, 2 ಜಿಎಸ್​ಎಲ್​ವಿ, 2 ಮಾರ್ಕ್ 3 ಹಾಗೂ 2 ಎಸ್​ಎಸ್​ಎಲ್​ವಿ ಸೇರಿ 14 ಉಡಾಹಕಗಳು, 18 ಉಪಗ್ರಹ ಉಡಾವಣೆಯಾಗಲಿವೆ.

ಚಂದ್ರನ ಮೇಲೂ ಭಾರತದ ಹೆಜ್ಜೆ ಗುರುತು!

 • ಪ್ರಸಕ್ತ ಸಾಲಿನಲ್ಲಿ ಗಗನ್​ಯಾನ್ ಯೋಜನೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಪ್ರಸ್ತುತ ಇಸ್ರೋದ ಚಟುವಟಿಕೆಗಳು ಉಡಾವಣಾ ವಾಹನ ನಿರ್ಮಾಣ ಮತ್ತು ಉಪಗ್ರಹಗಳ ಉಡಾವಣೆಗೆ ಸೀಮಿತವಾಗಿದೆ. ಆದರೆ, ಗಗನ್​ಯಾನ್ ಯೋಜನೆಯಿಂದ ಸಂಸ್ಥೆಯ ಕಾರ್ಯಚಟುವಟಿಕೆ ಮತ್ತಷ್ಟು ವಿಸ್ತಾರವಾಗಲಿದೆ.
 • ಈ ಬಾರಿ ಉಡಾವಣೆಗೊಳ್ಳುವ ರಾಕೆಟ್​ನಲ್ಲಿ ಉಪಗ್ರಹದ ಬದಲು ಮಾನವರು ಇರಲಿದ್ದಾರೆ. ಇದಕ್ಕೆ ಪೂರಕವಾಗಿ ಇಸ್ರೋದ ಬೆಂಗಳೂರು ಕೇಂದ್ರದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಮಾನವ ಬಾಹ್ಯಾಕಾಶಯಾನ ಕೇಂದ್ರವನ್ನು (ಹ್ಯೂಮನ್ ಸ್ಪೇಸ್​ಫ್ಲೈಟ್ ಸೆಂಟರ್) ಸ್ಥಾಪಿಸಲಾಗುತ್ತಿದೆ. ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಸಮಾನವಾಗಿ ಭಾರತದ ಬಾಹ್ಯಾಕಾಶ ಕೇಂದ್ರ ಸ್ಥಾಪನೆಗೆ ಹಾಗೂ ಚಂದ್ರನ ಮೇಲೆ ಮಾನವರನ್ನು ಇಳಿಸುವ ಯೋಜನೆಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

ನಿರ್ದೇಶಕರಾಗಿ ಉನ್ನಿಕೃಷ್ಣನ್ ನಾಯರ್

 • ಮಾನವ ಬಾಹ್ಯಾಕಾಶಯಾನ ಕೇಂದ್ರದ ನಿರ್ದೇಶಕರಾಗಿ ಹಿರಿಯ ವಿಜ್ಞಾನಿ ಡಾ. ಉನ್ನಿಕೃಷ್ಣನ್ ನಾಯರ್ ನೇಮಕಗೊಂಡಿದ್ದಾರೆ. ಇದಕ್ಕೂ ಮುನ್ನ ಇವರು ವಿಕ್ರಮ್ ಸಾರಾಬಾಯ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಪಿಎಸ್​ಎಲ್​ವಿ ಯೋಜನಾ ನಿರ್ದೇಶಕರಾಗಿದ್ದ ಆರ್. ಹಟ್ಟನ್ ಗಗನ್​ಯಾನ್ ಯೋಜನೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಏಪ್ರಿಲ್​ನಲ್ಲಿ ಚಂದ್ರಯಾನ-2

 • 2008ರ ಚಂದ್ರಯಾನ 1ರ ಯಶಸ್ಸಿನಿಂದ ಉತ್ತೇಜನಗೊಂಡಿರುವ ಇಸ್ರೋ, 2019ರ ಏಪ್ರಿಲ್​ನಲ್ಲಿ ಚಂದ್ರಯಾನ 2ರ ಉಡಾವಣೆಗೆ ಸಜ್ಜಾಗಿದೆ. ಉಡಾವಣೆಗೊಂಡ ಬಳಿಕ ಉಪಗ್ರಹವು ಚಂದ್ರನ ಮೇಲೆ ಇಳಿಯಲು ಕನಿಷ್ಠ 35-45 ದಿನ ಬೇಕಾಗುತ್ತದೆ. ಉಪಗ್ರಹವು 6 ಹಂತಗಳಲ್ಲಿ ಚಂದ್ರನ ಕಕ್ಷೆ ಸೇರಲಿದೆ. ಬಳಿಕ ಇದರಲ್ಲಿರುವ ರೋವರ್ ವಾಹನ ಚಂದ್ರನ ಮೇಲೆ ಇಳಿಯಲಿದೆ. ಇದು ಅಂದಾಜು 500 ಮೀ. ಸಂಚರಿಸಿ ಚಂದ್ರನ ಮೇಲ್ಮೈ ಪರೀಕ್ಷಿಸಲಿದೆ. ಉಪಗ್ರಹ 1 ವರ್ಷ ಕಾರ್ಯನಿರ್ವಹಿಸಲಿದ್ದು, ರೋವರ್ ವಾಹನ 14 ದಿನ ಕಾರ್ಯನಿರ್ವಹಿಸಲಿದೆ.
Related Posts
“30 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಚ್‌1ಎನ್‌1 ಮುಂಜಾಗ್ರತೆಗೆ ಸೂಚನೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ವರ್ಷದ ಆರಂಭದಲ್ಲೇ ಎಚ್‌1ಎನ್‌1 ಜ್ವರ ಭೀತಿ ಸೃಷ್ಟಿಸಿರುವುದರಿಂದ ಅಗತ್ಯ ಔಷಧಗಳ ದಾಸ್ತಾನು ಮೂಲಕ ಶಂಕಿತ ರೋಗಿಗಳಿಗೆ 48 ಗಂಟೆಯೊಳಗೆ ಟ್ಯಾಮಿಫ್ಲೂ ಚಿಕಿತ್ಸೆ ಪ್ರಾರಂಭಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಏಕೆ ಈ ಸೂಚನೆ ...
READ MORE
“19 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಜ್ಯೋತಿ ಸಂಜೀವಿನಿ’  ಸುದ್ಧಿಯಲ್ಲಿ ಏಕಿದೆ ? ಸರಕಾರಿ ನೌಕರರಿಗೆ ನೀಡುತ್ತಿರುವ 'ಜ್ಯೋತಿ ಸಂಜೀವಿನಿ' ಸೌಲಭ್ಯವನ್ನು ನಿವೃತ್ತ ಸರಕಾರಿ ನೌಕರರಿಗೂ ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಸರಕಾರವನ್ನು ಆಗ್ರಹಿಸಿದೆ. ಜ್ಯೋತಿ ಸಂಜೀವಿನಿ ಯೋಜನೆ (ಜೆಎಸ್ಎಸ್) ಕರ್ನಾಟಕ ಸರ್ಕಾರವು "ಜ್ಯೋತಿ ಸಂಜೀವಿನಿ" ಎಂಬ ...
READ MORE
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷಿ ಆದಾಯ ಹೆಚ್ಚಳಕ್ಕೆ ಯೋಜನೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕೃಷಿ ಭೂಮಿ ಸದ್ಬಳಕೆ ಜತೆಗೆ ಅನ್ನದಾತರ ಆದಾಯವನ್ನೂ ಹೆಚ್ಚಿಸುವ ಉದ್ದೇಶದಿಂದ ಮೂರು ಹೊಸ ಕಾಯ್ದೆಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ರೂಪಿಸಿದ್ದ ಮಾದರಿ ಕಾಯ್ದೆಗಳು ಇದಕ್ಕೆ ಆಧಾರವಾಗಿರುವುದು ವಿಶೇಷ. ಉದ್ದೇಶ ಕೃಷಿ ಭೂಮಿ ಗುತ್ತಿಗೆ ...
READ MORE
“09 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಪೌರತ್ವ ವಿಧೇಯಕ ಸುದ್ಧಿಯಲ್ಲಿ ಏಕಿದೆ ?ಅಕ್ರಮ ವಲಸಿಗರ ಪಿಡುಗಿಗೆ ತಡೆ ಹಾಕುವ ಮಹತ್ವದ ಪೌರತ್ವ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಭಾರಿ ಗದ್ದಲದ ನಡುವೆ ಅಂಗೀಕಾರಗೊಂಡಿದೆ. ಏನಿದು ಪೌರತ್ವ ವಿಧೇಯಕ? ಪ್ರಸ್ತುತ ದೇಶದಲ್ಲಿ ಪೌರತ್ವ ಕಾಯಿದೆ-1955ರ ಪ್ರಕಾರ ವಲಸಿಗರನ್ನು ಗುರುತಿಸಲಾಗುತ್ತಿದೆ. ಈ ಕಾಯಿದೆಗೆ ತಿದ್ದುಪಡಿ ಮಾಡುವ ...
READ MORE
“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಬಡವರ ಬಂಧು’ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮೀಟರ್‌ ಬಡ್ಡಿ ದಂಧೆ ನಡೆಸುವವರ ಕಪಿಮುಷ್ಠಿಯಿಂದ ಸಣ್ಣ ವ್ಯಾಪಾರಿಗಳನ್ನು ಪಾರುಮಾಡಿ, ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ಒದಗಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ 'ಬಡವರ ಬಂಧು' ಯೋಜನೆಗೆ ನ.22 ಚಾಲನೆ ಸಿಗಲಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 5 ...
READ MORE
“12 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷ್ಣರಾಜಸಾಗರ ಅಣೆಕಟ್ಟು ಸುದ್ಧಿಯಲ್ಲಿ ಏಕಿದೆ ?ಮಂಡ್ಯ ರೈತರ ಜೀವನಾಡಿ ಕಾವೇರಿ ನದಿಗೆ ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣಕ್ಕೆ  ಶಂಕುಸ್ಥಾಪನೆ ನೆರವೇರಿಸಿ 107 ವರ್ಷಗಳು ಸಂದಿವೆ. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿ ಫಲವಾಗಿ ಮಂಡ್ಯದ ಕನ್ನಂಬಾಡಿ ಗ್ರಾಮದಲ್ಲಿ ಕೆಆರ್​ಎಸ್ ಜಲಾಶಯ ನಿರ್ಮಾಣವಾಯಿತು. ಅದರ ...
READ MORE
“18 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಸಾಕ್ಷಿಗಳ ರಕ್ಷಣಾ ಯೋಜನೆ’ ಜಾರಿಗೆ ಸುಪ್ರೀಂ ಆದೇಶ ಸುದ್ಧಿಯಲ್ಲಿ ಏಕಿದೆ ?ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯ ಸುಧಾರಣೆಗೆ ಒಂದೂವರೆ ದಶಕದ ಹಿಂದೆ ಕರ್ನಾಟಕದ ನ್ಯಾ.ವಿ.ಎಸ್‌.ಮಳೀಮಠ್‌ ಸಲ್ಲಿಸಿದ್ದ ವರದಿಯ ಪ್ರಮುಖ ಅಂಶವಾದ 'ಸಾಕ್ಷಿಗಳ ರಕ್ಷಣಾ ಯೋಜನೆ' ದೇಶಾದ್ಯಂತ ಜಾರಿಯಾಗುತ್ತಿದೆ. ಸುಪ್ರೀಂಕೋರ್ಟ್‌ ಇತ್ತೀಚೆಗೆ ಸಾಕ್ಷಿಗಳ ರಕ್ಷಣಾ ಯೋಜನೆ ಕುರಿತು ...
READ MORE
” 01 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಗ್ರಾಮ ವಿಕಾಸ ಯೋಜನೆ ಸುದ್ಧಿಯಲ್ಲಿ ಏಕಿದೆ ?ಸಿದ್ದರಾಮಯ್ಯ ಸರಕಾರದ ಮಹತ್ವಾಕಾಂಕ್ಷಿ 'ಗ್ರಾಮ ವಿಕಾಸ' ಯೋಜನೆಗೆ ಅನುದಾನ ಸ್ಥಗಿತಗೊಳಿಸಿದ್ದು, ಕಾಂಗ್ರೆಸ್‌ ಸಚಿವರ ಆಕ್ರೋಶಕ್ಕೆ ಕಾರಣವಾಗಿದೆ. ಹಿನ್ನಲೆ ಎಚ್‌.ಕೆ.ಪಾಟೀಲ್‌ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ 2015ರ ಗಾಂಧಿ ಜಯಂತಿಯಂದು ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಕಾಂಗ್ರೆಸ್‌ ಸರಕಾರದ 'ಫ್ಲ್ಯಾಗ್‌ಶಿಫ್‌ ಪ್ರೋಗ್ರಾಮ್ಸ್‌ ' ಪಟ್ಟಿಯಲ್ಲಿದ್ದ ...
READ MORE
“11 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಟಾಪ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹಂಪಿ ಸುದ್ಧಿಯಲ್ಲಿ   ಏಕಿದೆ ?ಈ ವರ್ಷ ನೀವು ನೋಡಲೇಬೇಕಾದ ಜಗತ್ತಿನ 52 ಟಾಪ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ರಾಜ್ಯದ ಪಾರಂಪರಿಕ ನಗರಿ ಹಂಪಿ ಟಾಪ್ 2 ಸ್ಥಾನ ಪಡೆದಿದೆ. ದಿ ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ 2019ರ ಟಾಪ್ ...
READ MORE
“31st ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಎನ್​ಪಿಎಸ್ ಶೀಘ್ರ ರದ್ದು ಸುದ್ಧಿಯಲ್ಲಿ ಏಕಿದೆ ?ನೂತನ ಪಿಂಚಣಿ ಯೋಜನೆ (ಎನ್​ಪಿಎಸ್) ರದ್ದು ಮಾಡಬೇಕೆಂಬ ನೌಕರರ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ಈ ಸಂಬಂಧ ಶೀಘ್ರ ಕಡತ ಮಂಡಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ. ಹಿನ್ನಲೆ ಸರ್ಕಾರದ ವಿವಿಧ ಇಲಾಖೆಗಳಿಗೆ, ...
READ MORE
“30 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“19 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“09 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“12 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“18 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 01 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“11 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“31st ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *