“12 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಕೃಷ್ಣರಾಜಸಾಗರ ಅಣೆಕಟ್ಟು

1.

ಸುದ್ಧಿಯಲ್ಲಿ ಏಕಿದೆ ?ಮಂಡ್ಯ ರೈತರ ಜೀವನಾಡಿ ಕಾವೇರಿ ನದಿಗೆ ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣಕ್ಕೆ  ಶಂಕುಸ್ಥಾಪನೆ ನೆರವೇರಿಸಿ 107 ವರ್ಷಗಳು ಸಂದಿವೆ.

 • ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿ ಫಲವಾಗಿ ಮಂಡ್ಯದ ಕನ್ನಂಬಾಡಿ ಗ್ರಾಮದಲ್ಲಿ ಕೆಆರ್​ಎಸ್ ಜಲಾಶಯ ನಿರ್ಮಾಣವಾಯಿತು. ಅದರ ಫಲವೆಂಬಂತೆ ಬೆಂಗಾಡಾಗಿದ್ದ ಮಂಡ್ಯ ಜಿಲ್ಲೆ ಇಂದು ಸಮೃದ್ಧ ಕೃಷಿ ಭೂಮಿಯಿಂದ ನಳನಳಿಸವಂತಾಗಿದೆ.
 • ನಿರ್ಮಾಣಕ್ಕೆ ಕಾರಣ: ಕೋಲಾರ ಚಿನ್ನದ ಗಣಿಗೆ ನಿರಂತರವಾಗಿ ವಿದ್ಯುತ್ ಪೂರೈಕೆ ದೃಷ್ಟಿಯಿಂದ 1902ರಲ್ಲಿ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಕೈಗೊಳ್ಳಲಾಯಿತು.
 • ಈ ಹಿನ್ನೆಲೆಯಲ್ಲಿ ನದಿಯ ನೀರಿನ ಹರಿವನ್ನು ನಿಯಂತ್ರಿಸುವ ಸಲುವಾಗಿ ನವೆಂಬರ್ 11ರ 1911ರಲ್ಲಿ ಜಲಾಶಯ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಯಿತು.
 • ಸರ್ ಎಂ. ವಿಶ್ವೇಶ್ವರಯ್ಯ ಅವರು ಮುಖ್ಯ ಇಂಜಿನಿಯರ್ ಆಗಿ ಅಣೆಕಟ್ಟೆ ನಿರ್ವಣಕ್ಕೆ ಸಂಬಂಧಿಸಿ ವರದಿ ಹಾಗೂ ವಿನ್ಯಾಸವನ್ನು ಅಂತಿಮಗೊಳಿಸಿ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡರು. ಹೆಚ್ಚಿನ ಪ್ರಮಾಣದ ನೀರು ಶೇಖರಣೆ ಹಾಗೂ ಹೆಚ್ಚಿನ ಪ್ರದೇಶಕ್ಕೆ ನೀರೊದಗಿಸುವ ದೃಷ್ಟಿಯಿಂದ ಕನ್ನಂಬಾಡಿ ಗ್ರಾಮದ ಬಳಿ ಅಣೆಕಟ್ಟೆ ನಿರ್ವಣಕ್ಕೆ ಸ್ಥಳ ಆಯ್ಕೆ ಮಾಡಿಕೊಳ್ಳಲಾಯಿತು.

ಅಣೆಕಟ್ಟಿನ ಬಗ್ಗೆ

 • ಅಣೆಕಟ್ಟೆಯ ತಳಪಾಯವನ್ನು ಗ್ರಾನೈಟ್ ಮತ್ತು ಹಾರ್ನ್​ಬ್ಲೆಂಡ್ ಸಿಸ್ಟ್ ಪದರಗಳನ್ನೊಳಗೊಂಡ ನೆಲಹಾಸಿನ ಮೇಲೆ ನಿರ್ವಿುಸಲಾಗಿದೆ.
 • ಅಣೆಕಟ್ಟೆಯ ತಳಮಟ್ಟದ ಅಗಲವು 111 ಅಡಿ ಇದ್ದು ಎತ್ತರವು ನದಿ ತಳಮಟ್ಟದಿಂದ 140 ಅಡಿ ಇದೆ.
 • ಒಟ್ಟು ಉದ್ದ 8,600 ಅಡಿ (621 ಕಿ.ಮೀ) ಇದ್ದು, 124 ಅಡಿ ನೀರು ಶೇಖರಣೆ ಸಾಮರ್ಥ್ಯ ಇದೆ.
 • ಜಲಾಶಯವನ್ನು ಕಾವೇರಿ ನದಿಯ ಉಪನದಿಗಳಾದ ಲಕ್ಷ್ಮಣ ತೀರ್ಥ ಮತ್ತು ಹೇಮಾವತಿ ನದಿಗಳ ಸಂಗಮದ ನಂತರ ನಿರ್ವಿುಸಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ನೀರು ತುಂಬಿದಾಗ ಜಲಾಶಯದ ಹಿಂಭಾಗ ಸುಮಾರು 23 ಕಿ.ಮೀ. ವರೆಗಿನ ಪ್ರದೇಶ ಮುಳುಗಡೆ ಆಗುತ್ತದೆ.
 • ‘ಅಣೆಕಟ್ಟೆಯ ನಿರ್ವಣದ ವೆಚ್ಚವು 1933ನೇ ಇಸವಿಯಲ್ಲಿ ಸುಮಾರು 50 ಕೋಟಿ ರೂ.ಗಳಾಗಿತ್ತು. ಅಣೆಕಟ್ಟೆ ಮತ್ತು ನಾಲೆಗಳಿಗಾಗಿ ಒಟ್ಟು 173 ಗೇಟುಗಳು ಇದ್ದು, ಇವುಗಳನ್ನು ವಿವಿಧ ಎತ್ತರಗಳಲ್ಲಿ ಅಳವಡಿಸಲಾಗಿದೆ.

ಕಾವೇರಿ ಆನ್​ಲೈನ್ ಸೇವೆ

ಸುದ್ಧಿಯಲ್ಲಿ ಏಕಿದೆ ?ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸಾರ್ವಜನಿಕ ಉಪಯೋಗಕ್ಕಾಗಿ ರೂಪಿಸಿರುವ ವಿವಿಧ ಆನ್​ಲೈನ್ ಸೇವೆಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

 • ನೋಂದಣಿಗೆ ಸಂಬಂಧಿಸಿದ ಆಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ, ಅಧಿಕಾರಪತ್ರ ಮೊದಲಾದ ಸೇವೆಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಮಾಡಲು ‘ಕಾವೇರಿ ಆನ್​ಲೈನ್’ ಸೇವೆ ಆರಂಭಿಸಲಾಗುತ್ತಿದೆ.
 • ಕಾವೇರಿ ಆನ್​ಲೈನ್ ಸೇವೆಗಳ ಜಾಲದಲ್ಲಿ ಸ್ಥಿರಾಸ್ತಿಗಳ ಋಣಭಾರರಾಹಿತ್ಯ ಪ್ರಮಾಣಪತ್ರ (ಆನ್​ಲೈನ್ ಇಸಿಸಿಸಿ), ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿ ಪೂರೈಸುವಿಕೆ, ಸಾರ್ವಜನಿಕರಿಂದ ನೋಂದಣಿಪೂರ್ವ ಡೇಟಾ ಎಂಟ್ರಿ, ಆಸ್ತಿಪಾಸ್ತಿಗಳ ನೋಂದಣಿಗೆ ಮುಂಗಡವಾಗಿ ಕಾಲ ನಿಗದಿಪಡಿಸಿಕೊಳ್ಳುವಿಕೆ, ವಿವಾಹ ನೋಂದಣಿ ಕಚೇರಿಯ ಗುರುತಿಸುವಿಕೆ ಮುಂತಾದ ಸೇವೆ ಒದಗಿಸಲಾಗುವುದು.
 • ಕೆಎಸಿಒಎಂಪಿ ಕಾಯ್ದೆಯಡಿಯಲ್ಲಿ ಕೃಷಿ ಸಾಲಗಳಿಗೆ ಸಂಬಂಧಿಸಿದ ಡಿಕ್ಲರೇಷನ್ ಮತ್ತು ಸಾಲ ತೀರುವಳಿ ಪತ್ರಗಳ ಆನ್​ಲೈನ್ ಫೈಲಿಂಗ್ ಸೌಲಭ್ಯವನ್ನು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಒದಗಿಸಲಾಗಿದೆ.
 • ಈ ಸೇವೆಗಳ ಜಾಲದಲ್ಲಿ ಯಾವುದೇ ಸ್ಥಿರಾಸ್ತಿಯ ಮಾರ್ಗಸೂಚಿ ಮೌಲ್ಯ ತಿಳಿಯಲು ಅನುಕೂಲವಾಗುವಂತೆ ‘ಮೌಲ್ಯ’ ಎಂಬ ಜಿಐಎಸ್ ಆಧಾರಿತ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ.

ತಿಥಿ ಊಟ ಯೋಜನೆ

3.

ಸುದ್ಧಿಯಲ್ಲಿ ಏಕಿದೆ ?ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಜತೆಗೆ ‘ತಿಥಿ ಊಟ’ ಹಾಕಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅರ್ಥಾತ್, ತಿಥಿ ಭೋಜನ ಶೀರ್ಷಿಕೆಯಲ್ಲೇ ಯೋಜನೆ ಜಾರಿಗೊಳಿಸಬೇಕೆಂಬ ಕೇಂದ್ರ ಸರ್ಕಾರದ ಆದೇಶವೀಗ ಇಕ್ಕಟ್ಟು ಸೃಷ್ಟಿಸಿದೆ.

 • 4 ವರ್ಷದ ನಂತರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್​ಆರ್​ಡಿ) ‘ತಿಥಿ ಭೋಜನ’ (ಸಮುದಾಯ ಭೋಜನ) ಹೆಸರಿನಲ್ಲೇ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.
 • ಕೇಂದ್ರ ಸರ್ಕಾರದ ಕಲ್ಪನೆ ಉತ್ತಮವಾಗಿದೆ. ಆದರೆ ಶೀರ್ಷಿಕೆ ಸಮಸ್ಯೆ ತಂದೊಡ್ಡಿದೆ.
 • ತಿಥಿ ಎಂದರೆ ಹಿಂದಿಯಲ್ಲಿ ಒಳ್ಳೆಯ ಘಳಿಗೆ ಅಥವಾ ಸಮಯ. ಈ ಅರ್ಥವನ್ನೇ ಆಧರಿಸಿ ಯೋಜನೆಗೆ ತಿಥಿ ಭೋಜನ ಹೆಸರಿಡಲಾಗಿದೆ. ಆದರಿಲ್ಲಿ ತಿಥಿ ಎಂದರೆ ಮೃತಪಟ್ಟವರಿಗಾಗಿ ನಡೆಯುವ ಉತ್ತರ ಕ್ರಿಯೆ-ಕರ್ಮ. ಹೀಗಾಗಿ ತಿಥಿ ಹೆಸರಿನಲ್ಲಿ ಮಕ್ಕಳಿಗೆ ಭೋಜನ ಸೇವನೆ ಮಾಡುವುದು ಸಮಂಜಸವಲ್ಲ ಎಂದು ಬಹುತೇಕರ ವಿರೋಧವಿದೆ.
 • ನಾವು-ನೀವು ಆಗಬಹುದಲ್ಲ: ಕರ್ನಾಟಕದಲ್ಲಿ ಈಗಾಗಲೇ ‘ಶಾಲೆಗಾಗಿ ನಾವು ನೀವು’ ಶೀರ್ಷಿಕೆಯಲ್ಲಿ ಈ ಪರಿಕಲ್ಪನೆಯನ್ನು ಬಹಳ ವರ್ಷಗಳಿಂದ ರೂಢಿಸಿಕೊಂಡು ಬರಲಾಗುತ್ತಿದೆ. ಈಗ ತಿಥಿ ಭೋಜನ ಎಂದು ಬದಲಾಯಿಸಿದರೆ ಪಾಲಕರು ಮಕ್ಕಳಿಗೆ ಭೋಜನ ಸವಿಯಲು ಅವಕಾಶ ನೀಡಲು ಹಿಂಜರಿಯುವ ಸಾಧ್ಯತೆ ಜಾಸ್ತಿ. ಹೀಗಾಗಿ ನಾವು-ನೀವು ಹೆಸರಿನಲ್ಲೇ ಕೇಂದ್ರದ ಯೋಜನೆ ಅನುಷ್ಠಾನಕ್ಕೆ ತರಲು ಅವಕಾಶ ನೀಡಬೇಕು ಎಂಬುದು ರಾಜ್ಯ ಸರ್ಕಾರದ ವಾದವಾಗಿದೆ.

ಏನಿದು ಯೋಜನೆ?

 • ನಿಮ್ಮ ಕುಟುಂಬದ ಶುಭ ಸಮಾರಂಭಗಳಲ್ಲಿ (ಮದುವೆ, ವಾರ್ಷಿಕೋತ್ಸವ, ಹುಟ್ಟುಹಬ್ಬ) ಮಾಡಿದ ಅಡುಗೆಯನ್ನು ಶಾಲಾ ವಿದ್ಯಾರ್ಥಿ ಗಳಿಗೆ ಬಡಿಸುವುದು, ಅವರೊಟ್ಟಿಗೆ ಊಟ ಮಾಡುವುದು ತಿಥಿ ಭೋಜನ (ಸಮುದಾಯ ಭೋಜನ) ಪರಿಕಲ್ಪನೆ.
 • ಮೊದಲಿಗೆ 2014ರಲ್ಲೇ ಇದನ್ನು ಗುಜರಾತ್ ಸರ್ಕಾರ ಜಾರಿಗೆ ತಂದಿದೆ. ನಂತರ ಎಲ್ಲ ರಾಜ್ಯಗಳಲ್ಲೂ ಇದರ ಅನುಷ್ಠಾನಕ್ಕೆ ಸೂಚನೆ ನೀಡಿತ್ತು. ಆದರೆ ಮಾರ್ಗಸೂಚಿ ರಚಿಸಿರಲಿಲ್ಲ. ಇದೀಗ ರಚನೆ ಮಾಡಿ ಕಡ್ಡಾಯ ಅನುಷ್ಠಾನಕ್ಕೆ ತಿಳಿಸಿದೆ.

ನಿಯಮಗಳೇನು?

 • ಮಾಂಸಾಹಾರ ನೀಡುವಂತಿಲ್ಲ
 • ಜ್ಯೂಸ್, ಡ್ರೖೆಫ್ರೂಟ್ಸ್, ಐಸ್ ಕ್ರೀಂ, ಮೊಟ್ಟೆಗೂ ಪ್ರಾಮುಖ್ಯತೆ
 • ಯಾರಿಂದಲೂ ಹಣ ಸ್ವೀಕರಿಸಲ್ಲ, ಊಟವನ್ನೇ ನೀಡಬೇಕು
 • ಊಟ ಬಡಿಸುವಾಗ ಪ್ಲಾಸ್ಟಿಕ್ ವಸ್ತು ಬಳಸುವಂತಿಲ್ಲ, ಶುಚಿಗೆ ಆದ್ಯತೆ

ಉದ್ದೇಶವೇನು?

 • ಎಲ್ಲರೂ ಒಂದೇ ಎಂಬ ಪರಿಕಲ್ಪನೆ ಮಕ್ಕಳಲ್ಲಿ ಮೂಡಿಸುವುದು
 • ಸಹಪಂಕ್ತಿ ಭೋಜನ ಪರಿಕಲ್ಪನೆ ಶಾಲೆಯಲ್ಲಿ ಹುಟ್ಟುಹಾಕುವುದು
 • ಹೆಚ್ಚುವರಿ ಪೌಷ್ಟಿಕ ಆಹಾರ ನೀಡುವುದು
 • 12 ರಾಜ್ಯಗಳಲ್ಲಿ ಬೇರೆ ಹೆಸರಲ್ಲಿ ಜಾರಿ

ಎಷ್ಟು ರಾಜ್ಯಗಳಲ್ಲಿ ಜಾರಿ ?

 • ಈಗಾಗಲೇ ದೇಶದ 12 ರಾಜ್ಯಗಳಲ್ಲಿ ತಿಥಿ ಭೋಜನ ಬೇರೆ ಹೆಸರಿನಲ್ಲಿ ಅನುಷ್ಠಾನವಾಗಿದೆ. ಆದರೆ ಕೇಂದ್ರ ಸರ್ಕಾರ ಇದೇ ಹೆಸರಿನಲ್ಲೇ ಅನುಷ್ಠಾನ ಮಾಡಬೇಕೆಂದು ಮತ್ತೊಮ್ಮೆ ಸೂಚಿಸಿದೆ. ಅಲ್ಲದೆ, ಮಾರ್ಗಸೂಚಿ ಯನ್ನೂ ಬಿಡುಗಡೆ ಮಾಡಿದೆ.

ಯಾವ ಹೆಸರಿನಲ್ಲಿ ಜಾರಿಯಲ್ಲಿದೆ ?

 • ಕರ್ನಾಟಕ-ಶಾಲೆಗಾಗಿ ನಾವು-ನೀವು, ಆಂಧ್ರ ಪ್ರದೇಶ ಮತ್ತು ಅಸ್ಸಾಂ- ಸಂಪ್ರೀತಿ ಭೋಜನ, ಪಂಜಾಬ್- ಪ್ರೀತಿ ಭೋಜನ, ಡಿಯು-ಡಾಮನ್ ಮತ್ತು ಚಂಢಿಗಡ, ಗುಜರಾತ್, ಉತ್ತರಾಖಂಡ- ತಿಥಿ ಭೋಜನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ- ಸ್ನೇಹ ಭೋಜನ, ಪುದುಚೇರಿ- ಅನ್ನದಾನಂ, ಹರಿಯಾಣ-ಭೇಟಿ ಕಾ ಜನ್ಮ ದಿನ್ ಹೆಸರಿನಲ್ಲಿ ಯೋಜನೆ ಜಾರಿಯಾಗಿದೆ.

ವಿಶ್ವ ಮಹಾಸಮರಕ್ಕೆ 100 ವರ್ಷ

4.

ಸುದ್ಧಿಯಲ್ಲಿ ಏಕಿದೆ ?ಮೊದಲ ಜಾಗತಿಕ ಮಹಾಸಮರ ಘಟಿಸಿ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಇದರ ಸ್ಮರಣಾರ್ಥ ಕದನ ವಿರಾಮ ಘೋಷಿಸಿದ ಸ್ಥಳವಾದ ಫ್ರಾನ್ಸ್‌ನ ಲ್ಯಾವೆಂಟಿ ಪಟ್ಟಣದಲ್ಲಿ ಪ್ರಧಾನ ಕಾರ್ಯಕ್ರಮ ನಡೆಯಿತು.

 • ಈ ವೇಳೆ, ವಿಶ್ವ ಸಮರದಲ್ಲಿ ಪಾಲ್ಗೊಂಡ ಭಾರತೀಯ ವೀರ ಯೋಧರ ಸ್ಮರಣಾರ್ಥ ಪ್ರತಿಮೆ ಸ್ಥಾಪಿಸಲಾಯಿತು.
 • ಇದೇ ಸ್ಥಳದಲ್ಲಿ ನಿರ್ಮಿಸಲಾಗಿರುವ ಯುದ್ಧ ಸ್ಮಾರಕವನ್ನು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯಲ್‌ ಮ್ಯಾಕ್ರೊನ್‌ ಹಾಗೂ ಜರ್ಮನಿ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಅನಾವರಣಗೊಳಿಸಿದರು. ಪ್ರಥಮ ವಿಶ್ವ ಯುದ್ಧ ಜುಲೈ 28, 1914ರಿಂದ ಪ್ರಾರಂಭವಾಗಿ ನವೆಂಬರ್‌ 11, 1918ರಂದು ಕೊನೆಗೊಂಡಿತ್ತು.

ಮೈತ್ರಿಕೂಟಗಳ ಯುದ್ಧ 

 • ಸೆಂಟ್ರಲ್‌ ಪವರ್ಸ್‌ (ಜರ್ಮನಿ, ಆಸ್ಟ್ರೀಯಾ-ಹಂಗೇರಿ, ದಿ ಒಟ್ಟೊಮನ್‌ ರಾಜಮನೆತನ ಹಾಗೂ ಬಲ್ಗೇರಿಯಾ) ಹಾಗೂ ತ್ರಿವಳಿ ಕೂಟ (ಬ್ರಿಟನ್‌, ಫ್ರಾಸ್ಸ್‌ ಹಾಗೂ ರಷ್ಯಾ) ನಡುವೆ ಮೊದಲ ಮಹಾಯುದ್ಧ ಸಂಭವಿಸಿತು.
 • ಆರಂಭದಲ್ಲಿ ಸೆಂಟ್ರಲ್‌ ಪವರ್ಸ್‌ ಜತೆ ಇದ್ದ ಇಟಲಿ 1915ರ ನಂತರ ಬ್ರಿಟನ್‌ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿತು.
 • ನಂತರದ ದಿನಗಳಲ್ಲಿ ಮೈತ್ರಿಕೂಟಕ್ಕೆ ಜಪಾನ್‌, ಬೆಲ್ಜಿಯಂ, ಸರ್ಬಿಯಾ, ಗ್ರೀಸ್‌, ಮಾಂಟೆನೆಗ್ರೋ, ರೊಮೆನಿಯಾ, ಬ್ರೆಜಿಲ್‌ ಹಾಗೂ ಜಕೊಸ್ಲೋವಾಕ್‌ ಬೆಂಬಲ ವ್ಯಕ್ತಪಡಿಸಿದವು.
 • 1917ರ ನಂತರ ಜರ್ಮನಿ ವಿರುದ್ಧ ಅಮೆರಿಕ ಯುದ್ಧ ರಂಗ ಪ್ರವೇಶಿಸಿತು. ಈ ಮಹಾ ಯುದ್ಧದಲ್ಲಿ ವಸಾಹತು ದೇಶಗಳು ಸೇರಿದಂತೆ ವಿಶ್ವದ 70 ರಾಷ್ಟ್ರಗಳು ಭಾಗಿಯಾಗಿದ್ದವು. 20 ದೇಶಗಳು ಮಾತ್ರ ಸಂಘರ್ಷಕ್ಕೆ ಇಳಿಯದೇ ತಟಸ್ಥ ನಿಲುವು ತಳಿದವು.

6.5 ಕೋಟಿ ಸೈನಿಕರು ಭಾಗಿ

 • ಈ ಯುದ್ಧದಲ್ಲಿ ಒಟ್ಟು 5 ಕೋಟಿಗೂ ಅಧಿಕ ಸಂಖ್ಯೆಯ ಸೈನಿಕರು ಭಾಗಿಯಾಗಿದ್ದರು. ಫ್ರಾನ್ಸ್‌ನ 80 ಲಕ್ಷ , ಜರ್ಮನಿಯ 1.3 ಕೋಟಿ, ಆಸ್ಟ್ರಿಯಾ-ಹಂಗೇರಿಯ 90 ಲಕ್ಷ , ಇಟಲಿಯ 60 ಲಕ್ಷ ಹಾಗೂ ಅಮೆರಿಕದ 40 ಲಕ್ಷ ಸೈನಿಕರು ಹೋರಾಡಿದರು. ಇದರಲ್ಲಿ 85 ಲಕ್ಷ ಯೋಧರು ಮೃತಪಟ್ಟು, 3.7 ಕೋಟಿ ಸೈನಿಕರು ಗಾಯಗೊಂಡಿದ್ದರು.
 • 60 ಲಕ್ಷ ಯುದ್ಧ ಕೈದಿಗಳು ಸೇರಿದಂತೆ ಅಸಂಖ್ಯಾತ ಜನರನ್ನು ನಿರಾಶ್ರಿತರನ್ನಾಗಿಸಿತು. ಇದರಿಂದ ಅನೇಕ ರಾಷ್ಟ್ರಗಳ ಆರ್ಥಿಕ ಕುಸಿತಕ್ಕೆ ಕಾರಣವಾಯಿತು. ಕೋಟ್ಯಂತರ ರೂಪಾಯಿ ರಣಭೂಮಿಯಲ್ಲಿ ಕರಗಿ ಹೋಯಿತು.

62,000 ಭಾರತೀಯ ಯೋಧರು ಹುತಾತ್ಮ

 • ಬ್ರಿಟಿಷ್‌ ಸಾಮ್ರಾಜ್ಯದ ಪರವಾಗಿ ಭಾರತ ಸೇರಿದಂತೆ ಅನೇಕ ವಸಾಹತುಶಾಹಿ ರಾಷ್ಟ್ರಗಳ 90 ಲಕ್ಷ ಸೈನಿಕರು ಯುದ್ಧದಲ್ಲಿ ಪಾಲ್ಗೊಂಡಿದ್ದರು. ಭಾರತದ 13 ಲಕ್ಷ ಯೋಧರು ಹಾಗೂ 7 ಲಕ್ಷ ಕಾರ್ಮಿಕರು ಕಾದಾಡಿದರು. ಇದರಲ್ಲಿ 62,000 ಭಾರತೀಯ ಯೋಧರು ಹುತಾತ್ಮರಾದರು. ಅನೇಕರು ಯುದ್ಧ ಕೈದಿಗಳಾಗಿ ಸೆರೆವಾಸ ಅನುಭವಿಸಿದರು.

ಸೈಬರ್ ದಾಳಿ!

5.

ಸುದ್ಧಿಯಲ್ಲಿ ಏಕಿದೆ ?ಈ ವರ್ಷದ ಜನವರಿಯಿಂದ ಜೂನ್​ವರೆಗೆ ಭಾರತದ ಸೈಬರ್ ಕ್ಷೇತ್ರದ ಮೇಲೆ 6.95 ಲಕ್ಷ ದಾಳಿಗಳು ನಡೆದಿದ್ದು, ಈ ಪೈಕಿ 4.36 ಲಕ್ಷ ದಾಳಿ ವಿದೇಶಿ ನೆಲದಿಂದಲೇ ಆಗಿದೆ. ಪ್ರಮುಖವಾಗಿ ರಷ್ಯಾ, ಅಮೆರಿಕ, ಚೀನಾ, ನೆದರ್ಲೆಂಡ್, ಜರ್ಮನಿಗಳಿಂದ ಹ್ಯಾಕಿಂಗ್ ನಡೆದಿದೆ.

 • ಜಾಗತಿಕ ಸೈಬರ್ ದಾಳಿ ಪಟ್ಟಿಯಲ್ಲಿ ಭಾರತ 21ನೇ ರ್ಯಾಂಕ್​ನಲ್ಲಿದೆ ಎಂದು ಸೈಬರ್ ಸುರಕ್ಷತೆ ಕುರಿತು ಅಧ್ಯಯನ ನಡೆಸಿರುವ ‘ಎಫ್- ಸೆಕ್ಯೂರ್’ ಕಂಪನಿ ವರದಿಯಲ್ಲಿ ಹೇಳಿದೆ.
 • ಈ ವರದಿಯನ್ನು ‘ಹನಿಪಾಟ್ಸ್’ ಒದಗಿಸಿದ ಡೇಟಾವನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಜಾಗತಿಕವಾಗಿ ಅತಿ ಹೆಚ್ಚು ಸೈಬರ್ ದಾಳಿಗೆ ಗುರಿಯಾಗಿರುವ ದೇಶಗಳ ಪೈಕಿ ಬ್ರಿಟನ್ (76 ಕೋಟಿ), ನಂತರದ ಸ್ಥಾನದಲ್ಲಿ ಅಮೆರಿಕ (1.10 ಕೋಟಿ) ಇದೆ.

ಹನಿಪಾಟ್ಸ್ ಎಂದರೇನು?

 • ಕಂಪ್ಯೂಟರ್ ಪರಿಭಾಷೆಯಲ್ಲಿ ‘ಹನಿಪಾಟ್ಸ್’ ಒಂದು ರೀತಿಯ ಸುರಕ್ಷತಾ ಬಲೆ. ಕಂಪ್ಯೂಟರ್​ನ ಸರ್ವರ್ ರೀತಿಯಲ್ಲೆ ಕಾರ್ಯನಿರ್ವಹಿಸುವ ಇದು, ಮಾಹಿತಿ ಕೋಶಕ್ಕೆ ಅನಧಿಕೃತವಾಗಿ ಪ್ರವೇಶಿಸುವ ಅಥವಾ ಮಾಹಿತಿಗೆ ಕನ್ನ ಹಾಕಲು ಮಾಡಿದ ಪ್ರಯತ್ನಗಳ ಲೆಕ್ಕ ಇರಿಸುತ್ತದೆ.
 • ಸೈಬರ್ ಖದೀಮರು ಎಲ್ಲಿಂದ ಕನ್ನಹಾಕಲು ಯತ್ನಿಸಿದರು, ಬಳಸಿದ ಮಾಲ್​ವೇರ್ ಮಾದರಿ ಯಾವುದು, ಹ್ಯಾಕರ್​ಗಳಿಗೆ ಇಷ್ಟವಾದ ಮಾಹಿತಿ ಏನು ಎಂಬುದು ಸೇರಿದಂತೆ ಇನ್ನಿತರ ತಾಂತ್ರಿಕ ಮಾಹಿತಿಗಳನ್ನು ಹನಿಪಾಟ್ಸ್ ಕಲೆಹಾಕುತ್ತದೆ.
 • ‘ಎಫ್-ಸೆಕ್ಯೂರ್’ ವಿಶ್ವಾದ್ಯಂತ 41 ಸ್ಥಳಗಳಲ್ಲಿ ‘ಹನಿಪಾಟ್ಸ್’ಗಳನ್ನು ಅಳವಡಿಸಿ ಸೈಬರ್ ಸುರಕ್ಷತೆಯ ಅಧ್ಯಯನ ನಡೆಸಿದೆ.

ಚಾಬಹಾರ್ ಬಂದರು ಯೋಜನೆ

6.

ಸುದ್ಧಿಯಲ್ಲಿ ಏಕಿದೆ ?ಭಾರತ-ಅಫ್ಘಾನಿಸ್ತಾನದ ಒತ್ತಡಕ್ಕೆ ಮಣಿದಿರುವ ಅಮೆರಿಕ ಚಾಬಹಾರ್ ಬಂದರು ಯೋಜನೆ ಹಾಗೂ ಬಳಕೆ ಮೇಲಿನ ನಿರ್ಬಂಧವನ್ನು ಸಡಿಲಿಸಿದೆ.

 • ಇದರಿಂದ ಸುಮಾರು 5 ಲಕ್ಷ ಕೋಟಿ ರೂ.ಗಳ ಯೋಜನೆಯು ಭಾರತಕ್ಕೆ ಹೊಸ ಭರವಸೆ ಮೂಡಿಸಿದೆ. ಅಂದಹಾಗೆ ಭಾರತದ ಮಟ್ಟಿಗೆ ವಿದೇಶದಲ್ಲಿ ಬಂದರು ಅಭಿವೃದ್ಧಿ ಮಾಡುವ ಮೊದಲ ಯೋಜನೆ ಇದಾಗಿದೆ.

ಏನಿದು ಯೋಜನೆ?

 • ಇರಾನಿನ ಚಾಬಹಾರ್​ನಲ್ಲಿ ಬಂದರು ನಿರ್ಮಾಣ ಮಾಡುವ ಯೋಜನೆ ಪ್ರಸ್ತಾಪವು 2003ರಲ್ಲಿ ಬಂದಿತ್ತು. ಆದರೆ, ಇರಾನ್ ಮೇಲಿನ ನಿರ್ಬಂಧದ ಕಾರಣದಿಂದ ಯೋಜನೆ ಮುಂದುವರಿದಿರಲಿಲ್ಲ.
 • ಆದರೆ, ಪ್ರಧಾನಿ ನರೇಂದ್ರ ಮೋದಿ, ಇರಾನ್ ಅಧ್ಯಕ್ಷ ಹುಸೇನ್ ರುಹಾನಿ ಹಾಗೂ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘಾನಿ ಅವರು 2016ರಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿ ಜಂಟಿಯಾಗಿ ಬಂದರು ಅಭಿವೃದ್ಧಿಪಡಿಸುವ ಯೋಜನೆಗೆ ಒಪ್ಪಿದರು. ಪರಿಣಾಮವಾಗಿ 2017ರಲ್ಲಿ ಈ ಬಂದರು ಕಾರ್ಯಾರಂಭ ಮಾಡಲು ಶುರುಮಾಡಿತು.
 • ಈ ಯೋಜನೆಯಿಂದ ಭಾರತ ಹಾಗೂ ಅಫ್ಘಾನಿಸ್ತಾನಕ್ಕೆ ದೊಡ್ಡ ಲಾಭವಾಗಲಿದೆ. ಪಾಕಿಸ್ತಾನದ ಕರಾಚಿ ಬಂದರಿನ ಮೇಲಿನ ಅವಲಂಬನೆಯಿಂದ ಭಾರತ ಮುಕ್ತವಾಗಬಹುದಾಗಿದೆ. ಭಾರತದ ಆರ್ಥಿಕ ಹಾಗೂ ಭದ್ರತಾ ಕಾರಣಗಳಿಂದ ಈ ಒಪ್ಪಂದಕ್ಕೆ ಮಹತ್ವವಿದೆ.

ಪಾಕಿಸ್ತಾನ, ಚೀನಾಕ್ಕೆ ಸೆಡ್ಡು!

 • ತೈಲ ಆಮದು ಹಾಗೂ ಅಫ್ಘಾನಿಸ್ತಾನಕ್ಕೆ ರಫ್ತು ಮಾಡಲು ಭಾರತವು ಕರಾಚಿ ಬಂದರಿನ ಮೇಲೆ ಅವಲಂಬಿತವಾಗಿತ್ತು. ಆದರೆ, ಪಾಕಿಸ್ತಾನದ ಮೇಲೆ ದೀರ್ಘಕಾಲೀನ ಸಂಬಂಧ ಇರಿಸಿಕೊಳ್ಳುವುದು ಭಾರತಕ್ಕೆ ಆತಂಕಕಾರಿ ವಿಚಾರ.
 • ಹೀಗಾಗಿ ಇದಕ್ಕೆ ಪ್ರತಿಯಾಗಿ ಇನ್ನೊಂದು ಬಂದರು ನಿರ್ಮಾಣ ಮಾಡುವುದು ಭಾರತಕ್ಕೆ ಅನಿವಾರ್ಯವಾಗಿತ್ತು. ಇನ್ನೊಂದೆಡೆ ಪಾಕಿಸ್ತಾನದ ಗ್ವಾದರ್​ನಲ್ಲಿ ಚೀನಾವು ಬಂದರು ನಿರ್ವಣಕ್ಕೆ ನೆರವು ನೀಡುತ್ತಿದೆ. ಇಲ್ಲಿಂದ ಕೇವಲ 400 ಕಿ.ಮೀ ದೂರದಲ್ಲಿ ಚಾಬಹಾರ್ ಇರುವುದು ಭವಿಷ್ಯದ ಸೇನಾ ಆತಂಕಗಳಿಗೆ ಉತ್ತರ ನೀಡಲು ಸುಲಭವಾಗುತ್ತದೆ.

ಇಷ್ಟೊಂದು ಮಹತ್ವವೇಕೆ?

 • ಚಾಬಹಾರ್ ಬಂದರು ಅಭಿವೃದ್ಧಿ ಒಪ್ಪಂದದ ಬಳಿಕವಷ್ಟೇ ಭಾರತ ಹಾಗೂ ಇರಾನ್ ನಡುವೆ ರೂಪಾಯಿಯಲ್ಲಿ ವ್ಯವಹಾರ ಆರಂಭವಾಗಿದೆ.
 • ಈ ಯೋಜನೆಗೆ ಭಾರತವು ರೂಪಾಯಿಯಲ್ಲೇ ಹೂಡಿಕೆ ಮಾಡುತ್ತಿದೆ.
 • ಭಾರತಕ್ಕೆ ತೈಲ ಆಮದಿಗೆ ಈ ಬಂದರು ಪ್ರಮುಖ ಪಾತ್ರವಹಿಸಲಿದ್ದು, ಅತಿ ಹತ್ತಿರದ ಮಾರ್ಗವೂ ಆಗಿದೆ.
 • ಸಾರಿಗೆ ವೆಚ್ಚ ಹಾಗೂ ದೂರಕ್ಕೆ ಸಂಬಂಧಿಸಿ ಶೇ.60 ವೆಚ್ಚವನ್ನು ಈ ಬಂದರು ಕಡಿಮೆ ಮಾಡಲಿದೆ.
 • ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗುವ ಸಂಭವವಿದೆ
 • ಅಫ್ಘಾನಿಸ್ತಾನಕ್ಕೆ ಆಹಾರ ಪದಾರ್ಥ ಸೇರಿ ಇತರ ವಸ್ತುಗಳ ರಫ್ತಿಗೆ ಸುಲಭ ಮಾರ್ಗವಾಗಿದ್ದು, ಚಾಬಹಾರ್​ನಿಂದ ರೈಲ್ವೆ ಅಥವಾ ರಸ್ತೆ ಮೂಲಕ ಕಳುಹಿಸಬಹುದಾಗಿದೆ. ಅಲ್ಲಿಂದ ಕೇವಲ 880 ಕಿ.ಮೀ. ದೂರದಲ್ಲಿ ಅಫ್ಘಾನಿಸ್ತಾನವಿದೆ.
 • ಮಧ್ಯ ಏಷ್ಯಾ ಹಾಗೂ ಹಿಂದು ಮಹಾಸಾಗರದ ಮಟ್ಟಿಗೆ ಈ ಬಂದರು ಪ್ರಮುಖ ವಹಿವಾಟು ತಾಣವಾಗುವ ಸಾಧ್ಯತೆ ಇದೆ.
 • ಈ ಬಂದರು ಮೂಲಕ ಭಾರತವು ಅಫ್ಘಾನಿಸ್ತಾನದ 4 ಪ್ರಮುಖ ನಗರಗಳಿಗೆ ರಸ್ತೆ ಸಂಪರ್ಕ ಸಾಧಿಸಬಹುದಾಗಿದೆ.
 • ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದ ಅನಿವಾರ್ಯ ಪರಿಸ್ಥಿತಿಯಲ್ಲಿ ಭಾರತವು ಈ ಬಂದರನ್ನು ಸೇನಾ ಕಾರ್ಯಾಚರಣೆಗೂ ಬಳಸಬಹುದಾಗಿದೆ.

ನಿರ್ಬಂಧ ಸಡಿಲಿಸಿದ ಯುಎಸ್

 • ಚಾಬಹಾರ್ ಬಂದರು ಅಭಿವೃದ್ಧಿಯನ್ನು ಇರಾನ್ ನಿರ್ಬಂಧದಿಂದ ಹೊರಗಿಡಲು ಅಮೆರಿಕ ನಿರ್ಧರಿಸಿದೆ. ಭಾರತ ಹಾಗೂ ಅಫ್ಘಾನಿಸ್ತಾನಕ್ಕೆ ಅತ್ಯಗತ್ಯವಾಗಿರುವ ಈ ಯೋಜನೆಗೆ ವಿನಾಯಿತಿ ನೀಡಲಾಗಿದೆ.
 • ಯುದ್ಧಪೀಡಿತ ಅಫ್ಘಾನಿಸ್ತಾನಕ್ಕಾಗಿ ಈ ಕ್ರಮ ಅನಿವಾರ್ಯ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ತಿಳಿಸಿದ್ದಾರೆ.
 • ಚಾಬಹಾರ್ ಬಂದರು ಅಭಿವೃದ್ಧಿಗೆ ಪೂರಕವಾಗಿರುವ ರೇಲ್ವೆ ಯೋಜನೆಗೂ ನಿರ್ಬಂಧ ಅನ್ವಯವಾಗುವುದಿಲ್ಲ.
 • ಈ ಬಂದರಿನಿಂದ ಭಾರತ ಹಾಗೂ ಅಫ್ಘಾನಿಸ್ತಾನಗಳು ನಿರ್ಬಂಧ ರಹಿತ ವಸ್ತುಗಳ ರವಾನೆಗೆ ಬಳಸಬಹುದಾಗಿದೆ.

ಸ್ತನ ಕ್ಯಾನ್ಸರ್ ಪತ್ತೆಗೆ ಎಐ ಆಧರಿತ ತಂತ್ರಾಂಶ

7.

ಸುದ್ಧಿಯಲ್ಲಿ ಏಕಿದೆ ?ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಇದೀಗ ಆರೋಗ್ಯ ವಲಯದಲ್ಲಿಯೂ ಸದ್ದು ಮಾಡುತ್ತಿದ್ದು, ಈ ವಿನೂತನ ತಂತ್ರಜ್ಞಾನದ ಆಧಾರದಲ್ಲಿ ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ತಂತ್ರಾಂಶವೊಂದನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಯಿತು.

 • ವೈಟ್‌ಫೀಲ್ಡ್‌ನಲ್ಲಿರುವ ಟೆಲಿರಾಡ್ ಟೆಕ್ ಹಾಗೂ ಇಮೇಜ್ ಕೋರ್ ಲ್ಯಾಬ್ ಮುಂದಾಳುತ್ವದಲ್ಲಿ ನಡೆದ ರೇಡಿಯಾಲಜಿಯಲ್ಲಿ ಕೃತಕ ಬುದ್ಧಿಮತ್ತೆ 2018′ ವಿಚಾರ ಸಂಕಿರಣಲ್ಲಿ ಈ ತಂತ್ರಾಂಶವನ್ನು ಅನಾವರಣಗೊಳಿಸಲಾಗಿದ್ದು, ಇದು ವಿಶೇಷವಾಗಿ ರೇಡಿಯಾಲಜಿಸ್ಟ್‌ಗಳಿಗೆ ಸ್ತನ ಕ್ಯಾನ್ಸರ್‌ನ ಲಕ್ಷಣವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ನೆರವಾಗಲಿದೆ.
 • Mammo Assist ತಂತ್ರಾಂಶವು ಮ್ಯಾಮೋಗ್ರಾಮ್ ಮೂಲಕ ಬಂದಿರುವ ವರದಿಯನ್ನು ವಿಶ್ಲೇಷಿಸುತ್ತದೆ, ಅನೋಟೇಟ್ ಮಾಡುವ ಮೂಲಕ ರೋಗ ಪತ್ತೆ ಪ್ರಕ್ರಿಯೆಯನ್ನು ವೇಗವಾಗಿಸುತ್ತದೆ.
 • ಸ್ತನ ಕ್ಯಾನ್ಸರ್ ಪತ್ತೆಗೆ ಮ್ಯಾಮೋಗ್ರಾಮ್ ಪರೀಕ್ಷೆ ಇದ್ದರೂ ಅದರ ಫಲಿತಾಂಶದ ವಿಶ್ಲೇಷಣೆಯನ್ನು ಹೆಚ್ಚು ವೇಗವಾಗಿ ಮತ್ತು ನಿಖರವಾಗಿಸುವಲ್ಲಿ, ಈ ಮೂಲಕ, ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಗುರುತಿಸುವಿಕೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಆಧಾರದಲ್ಲಿ ಕೆಲಸ ಮಾಡುವ ‘ಮ್ಯಾಮೋ ಅಸಿಸ್ಟ್’ ನೆರವಾಗಲಿದೆ

Related Posts
“15 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮೇಲ್ವರ್ಗ ಮೀಸಲು ಜಾರಿ ಸುದ್ಧಿಯಲ್ಲಿ ಏಕಿದೆ ?ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನಿಕ ಸವಲತ್ತು ಅಧಿಕೃತವಾಗಿ ಅನುಷ್ಠಾನಗೊಂಡಿದೆ. ಈ ದಿಸೆಯಲ್ಲಿನ ಸಂವಿಧಾನ ತಿದ್ದುಪಡಿಗೆ ರಾಷ್ಟ್ರಪತಿಗಳ ಸಮ್ಮತಿ ಲಭಿಸಿತ್ತು. ''ಸಂವಿಧಾನ (ತಿದ್ದುಪಡಿ) ಕಾಯಿದೆ -2019ರ ವಿಧಿ ...
READ MORE
“11 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೈಗಾ ಅಣು ವಿದ್ಯುತ್ ಸ್ಥಾವರ ಸುದ್ಧಿಯಲ್ಲಿ  ಏಕಿದೆ ? ಯಾವುದೇ ತೊಂದರೆ ಇಲ್ಲದೆ ನಿರಂತರವಾಗಿ 941 ದಿನ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಕೈಗಾ ಮೊದಲ ಅಣು ವಿದ್ಯುತ್​ ಘಟಕ ವಿಶ್ವ ದಾಖಲೆ ನಿರ್ಮಿಸಿ ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ...
READ MORE
“13 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹೆಸರಿನ ಜತೆ ಭಾರತರತ್ನ, ಪದ್ಮ ಪ್ರಶಸ್ತಿ ಬಳಸುವಂತಿಲ್ಲ! ಸುದ್ಧಿಯಲ್ಲಿ ಏಕಿದೆ ? ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳೆನಿಸಿರುವ ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗಳು ಗೌರವಗಳೇ ಹೊರತು ಬಿರುದುಗಳಲ್ಲ. ಹಾಗಾಗಿ ಹೆಸರಿನ ಜತೆ ಅವುಗಳನ್ನು ಬಳಸುವಂತಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಒಂದು ವೇಳೆ ...
READ MORE
9th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ತ್ರಿವರ್ಣ ನಾಡಧ್ವಜಕ್ಕೆ ಒಪ್ಪಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನೇತೃತ್ವದ ತಜ್ಞರ ಸಮಿತಿ ವಿನ್ಯಾಸಗೊಳಿಸಿರುವ ತ್ರಿವರ್ಣ ಕನ್ನಡ ಧ್ವಜಕ್ಕೆ ಸಾಹಿತಿಗಳು, ಕಲಾವಿದರು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಒಪ್ಪಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಸಾಹಿತಿಗಳು ಮತ್ತು ...
READ MORE
ಕೇಂದ್ರ ಕೃಷಿ ಸಚಿವಾಲಯವು ಇತ್ತೀಚೆಗೆ ತನ್ನ ‘ಆಹಾರ ಸುರಕ್ಷತಾ’ ಕಾರ್ಯಕ್ರಮದಡಿಯಲ್ಲಿ ನಕಲಿ ಕೀಟನಾಶಕಗಳ ವಿರುದ್ಧ   ವಿತರಕರು ಹಾಗೂ ಮಾರಾಟಗಾರರಲ್ಲಿ   ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ. ಭಾರತೀಯ ವಾಣಿಜ್ಯೋದ್ಯಮ ಸಂಘಟನೆಗಳ ಮಹಾ ಒಕ್ಕೂಟ (ಫಿಕ್ಕಿ)   ನಡೆಸಿದ ಅಧ್ಯಯನದ ಪ್ರಕಾರ, ದೇಶಿ ಕೃಷಿ ರಂಗದಲ್ಲಿ   ₹ 25 ಸಾವಿರ ...
READ MORE
27th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಚಿರತೆ ಗಣತಿ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸುಮಾರು ಎರಡುವರೆ ಸಾವಿರ ಚಿರತೆಗಳು ಇರುವುದನ್ನು ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ನೇತೃತ್ವದ ನೇಚರ್‌ ಕನ್ಸರ್ವೇಷನ್‌ ಫೌಂಡೇಶನ್‌ ಪತ್ತೆ ಹಚ್ಚಿದೆ. ದೇಶದಲ್ಲೇ ಮೊದಲ ಬಾರಿ ಚಿರತೆಗಳನ್ನು ಅಂದಾಜು ಮೂಲಕ ಗಣತಿ ನಡೆಸಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ...
READ MORE
“9th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆರೋಗ್ಯವಾಣಿ ಸುದ್ದಿಯಲ್ಲಿ ಏಕಿದೆ ?  ರಾಜ್ಯ ಸರಕಾರ ಜಾರಿಗೆ ತಂದಿರುವ ಆರೋಗ್ಯವಾಣಿ 104 ಕಾರ್ಯ ಯೋಜನೆಗೆ ಮನಸೋತ ಕೇಂದ್ರ ಸರಕಾರ, ಅದನ್ನು ರಾಷ್ಟ್ರಮಟ್ಟದಲ್ಲಿ ‘ಆರೋಗ್ಯವಾಣಿ 1104’ ಮೂಲಕ ಪರಿಚಯಿಸಿ ಒಂದೇ ಸೂರಿನಡಿ ತುರ್ತು ಆರೋಗ್ಯ ಮಾಹಿತಿ ನೀಡಲು ಮುಂದಾಗಿದೆ. ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ...
READ MORE
“21 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂದಿರಾ ಯೋಜನೆಗೆ ಚಾಲನೆ ಸುದ್ಧಿಯಲ್ಲಿ ಏಕಿದೆ ? 'ಇಂದಿರಾ ಯೋಜನೆ'ಗೆ ಸಚಿವೆ ಡಾ. ಜಯಮಾಲಾ ಚಾಲನೆ ನೀಡಿದರು. ಏನಿದು ಇಂದಿರಾ ಯೋಜನೆ ? ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುವ ಮೇಲ್ವಿಚಾರಕರಿಗೆ ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ಬಡ್ಡಿ ರಹಿತ ಸಾಲ ನೀಡುವ ಯೋಜನೆಯೇ ...
READ MORE
“13th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಗುಡುಗು ,ಸಿಡಿಲು ಸೂಚಿಸುವ ಆ್ಯಪ್‌ ನೀವು ನಿಂತಿರುವ ಸ್ಥಳದಲ್ಲಿ ಮಿಂಚು ಹಾಗೂ ಚಂಡಮಾರುತ ಬರಲಿದೆಯೇ ಎಂಬುದನ್ನು ತಿಳಿಯಲು ಹವಾಮಾನ ತಜ್ಞರನ್ನೇ ಸಂಪರ್ಕಿಸಬೇಕಾದ ಅಗತ್ಯವಿಲ್ಲ. ಏಕೆಂದರೆ ಇರುವ ಜಾಗದಲ್ಲೇ ಇವರೆಡೂ ಮುನ್ಸೂಚನೆಗಳನ್ನು ಮೊಬೈಲ್‌ನಲ್ಲಿ ಪಡೆಯಬಹುದು. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಬಿಡುಗಡೆಗೊಳಿಸಿರುವ 'ಸಿಡಿಲು' ಮೊಬೈಲ್‌ ...
READ MORE
“12th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸತ್ಯಾಗ್ರಹದಿಂದ ಸ್ವಚ್ಛಾಗ್ರಹ ಚಂಪಾರಣ್ ಸತ್ಯಾಗ್ರಹಕ್ಕೆ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರ ಹಮ್ಮಿಕೊಂಡಿದ್ದ 1 ವರ್ಷದ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವನ್ನು ಶ್ಲಾಘಿಸಿದರು. ರಾಜ್ಯ ಸರ್ಕಾರ ಸತ್ಯಾಗ್ರಹ ದಿಂದ ಸಚ್ಛಾಗ್ರಹದತ್ತ ತಿರುಗಿದೆ ...
READ MORE
“15 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“11 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“13 ಫೆಬ್ರವರಿ 2019 ರ ಕನ್ನಡ ಪ್ರಚಲಿತ
9th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಆಹಾರ ಸುರಕ್ಷತಾ’ ಕಾರ್ಯಕ್ರಮ
27th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ
“9th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“21 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“13th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“12th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *