” 13 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಆನ್​ಲೈನಲ್ಲೇ ಆಯುಷ್ಮಾನ್ ಶಿಫಾರಸು!

1.

ಸುದ್ಧಿಯಲ್ಲಿ ಏಕಿದೆ ? ಯಶಸ್ವಿನಿ ಯೋಜನೆ ಕೈಬಿಟ್ಟು ಆರೋಗ್ಯ ಕರ್ನಾಟಕ ರೂಪಿಸಿದ್ದ ಸರ್ಕಾರ ಬಡವರಿಗೆ ಆರೋಗ್ಯ ಕಾರ್ಡ್ ಒದಗಿಸಲು ವ್ಯವಸ್ಥಿತ ಜಾಲ ಸೃಷ್ಟಿಸಿದೆ. ಜತೆಗೆ ಈ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗಳಿಂದ ಪಡೆಯಬೇಕಾದ ಶಿಫಾರಸನ್ನು ಇನ್ಮುಂದೆ ಆನ್​ಲೈನ್​ನಲ್ಲೇ ನೀಡುವ ನಿರ್ಧಾರಕ್ಕೆ ಬಂದಿದೆ.

 • ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸುವ ಈ ಮಹತ್ವದ ಯೋಜನೆ 2018ರ ಮಾ.2ರಂದು ಜಾರಿಗೆ ಬಂದಿದೆ.
 • ಕೇಂದ್ರದ ಆಯುಷ್ಮಾನ್ ಭಾರತವನ್ನು ಈ ಯೋಜನೆಯಲ್ಲಿ ವಿಲೀನಗೊಳಿಸಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಎಂಬ ಹೆಸರಿಡಲಾಗಿದೆ. ಆದರೆ ಯೋಜನೆಯಡಿ ಚಿಕಿತ್ಸೆ ಪಡೆಯಲು ಆರೋಗ್ಯ ಕಾರ್ಡ್ ಸಿಗುತ್ತಿಲ್ಲವೆಂದು ಬಡವರು ಅಳಲು ತೋಡಿಕೊಂಡಿದ್ದರು.
 • ಈ ಬೇಡಿಕೆಗೆ ಕಿವಿಗೊಟ್ಟ ಸರ್ಕಾರ ಆಸ್ಪತ್ರೆಗಳ ಜತೆಗೆ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್​ಗಳಲ್ಲೂ ಕಾರ್ಡ್ ವಿತರಣೆಗೆ ಸಜ್ಜಾಗಿದೆ.
 • ಈಗಾಗಲೇ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಈ ಕೇಂದ್ರಗಳಲ್ಲಿ ಫಲಾನುಭವಿಗಳ ಕೈಗೆ ಕಾರ್ಡ್​ಗಳು ಸಿಗಲಿವೆ.

ಏನೇನು ಸೌಲಭ್ಯ?:

 • ಬಿಪಿಎಲ್ ಕಾರ್ಡದಾರರು 5 ಲಕ್ಷ ರೂ.ವರೆಗೆ, ಎಪಿಎಲ್ ಕಾರ್ಡದಾರರು 50 ಲಕ್ಷ ರೂ.ವರೆಗೆ ನಗದುರಹಿತ ಉಚಿತ ಚಿಕಿತ್ಸೆ ಸೌಲಭ್ಯ ಪಡೆಯಬಹುದಾಗಿದೆ.

ಚಿಕಿತ್ಸೆಗಳ ಸಂಖ್ಯೆ ಹೆಚ್ಚು:

 • ಆರೋಗ್ಯ ಕರ್ನಾಟಕದಡಿ 1,528 ಚಿಕಿತ್ಸೆಗಳನ್ನು ಗುರುತಿಸಲಾಗಿತ್ತು. ಆಯುಷ್ಮಾನ್ ಭಾರತ್ ಯೋಜನೆ ವಿಲೀನದ ತರುವಾಯ 96 ಚಿಕಿತ್ಸೆಗಳನ್ನು ಹೆಚ್ಚುವರಿಯಾಗಿ ಸೇರಿಸಿ ಒಟ್ಟು 1,614 ಚಿಕಿತ್ಸೆಗಳಿಗೆ ಯೋಜನೆಯ ಸವಲತ್ತು ಕಲ್ಪಿಸಲಾಗುತ್ತದೆ.

ಶಿಫಾರಸು ಸುಲಭ

 • ಯೋಜನೆ ಸವಲತ್ತು ಪಡೆಯಲು ರೋಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಕಡ್ಡಾಯವಾಗಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯವಿಲ್ಲದಿದ್ದಾಗ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಈ ಶಿಫಾರಸನ್ನು ಇನ್ನು ಮುಂದೆ ಆನ್​ಲೈನ್​ನಲ್ಲಿ ಮಾಡಲಾಗುತ್ತದೆ. ಇದರಿಂದ ರೋಗಿ ಶಿಫಾರಸು ಪತ್ರಕ್ಕೆ ಕಾಯುವ ಅಗತ್ಯವಿರುವುದಿಲ್ಲ.

ಕಾರ್ಡ್ ಬೇಕಿಲ್ಲ

 • ಯೋಜನೆಯ ಸೌಲಭ್ಯ ಪಡೆಯಲು ಆರೋಗ್ಯ ಕಾರ್ಡ್ ಬೇಕೆಂದೇನೂ ಇಲ್ಲ. ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಇದ್ದರೂ ತಕ್ಷಣ ಚಿಕಿತ್ಸೆ ದೊರೆಯುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗೂ ಲಾಭ

 • ಖಾಸಗಿ ಆಸ್ಪತ್ರೆಗಳ ಜತೆಗೆ ಸರ್ಕಾರಿ ಆಸ್ಪತ್ರೆಗಳಿಗೂ ಯೋಜನೆಯಿಂದ ಲಾಭವಾಗಲಿದೆ. ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸೆಗಳಿಗೆ ನಿಗದಿಯಾಗಿರುವ ಪ್ಯಾಕೇಜ್ ದರದಲ್ಲಿ ಶೇ.50 ಹಣ ಸರ್ಕಾರಿ ಆಸ್ಪತ್ರೆಗಳಿಗೂ ದೊರೆಯಲಿದೆ.
 • ಆಸ್ಪತ್ರೆಗಳಿಗೆ ಬರುವ ರೋಗಿಗಳ ಹೆಸರು ನೋಂದಣಿ ಮಾಡಿಕೊಂಡು ಯೂನಿಕ್ ಐಡಿ ಸೃಷ್ಟಿಸಿ, ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಪೋರ್ಟಲ್​ನಲ್ಲಿ ನೋಂದಣಿ ಮಾಡಿ ಎ-4 ಸೀಟ್​ನಲ್ಲಿ ವಿವರ ಮುದ್ರಿಸಿಕೊಡಲಾಗುತ್ತದೆ. ಇದಕ್ಕೆ 10 ರೂ. ಶುಲ್ಕ ನಿಗದಿಪಡಿಸಲಾಗಿದೆ. ತರುವಾಯ ನೇರವಾಗಿ ಫಲಾನುಭವಿಗಳ ಮನೆಗೆ ಕಾರ್ಡ್ ತಲುಪಿಸಲಾಗುತ್ತದೆ.

ಸ್ಮಾರ್ಟ್‌ ಸಿಟಿ ಕಾಮಗಾರಿ

2.

ಸುದ್ಧಿಯಲ್ಲಿ ಏಕಿದೆ ? ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಾಮಗಾರಿಗಳ ಸಮರ್ಪಕ ಹಾಗೂ ತ್ವರಿತ ಅನುಷ್ಠಾನಕ್ಕಾಗಿ ಇನ್ನು ಮುಂದೆ ಪ್ರತಿ ತಿಂಗಳು ಸ್ಮಾರ್ಟ್‌ಸಿಟಿ ಉಸ್ತುವಾರಿ ಸಮಿತಿಗಳ ಸಭೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು. ಟಿ.ಖಾದರ್‌ ತಿಳಿಸಿದರು.

 • ರಾಜ್ಯದ ಏಳು ಮಹಾನಗರಗಳಲ್ಲಿ ಸ್ಮಾರ್ಟ್‌ ಸಿಟಿ ಅಭಿಯಾನದಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆಯಾ ಭಾಗದಲ್ಲಿ ಸ್ಮಾರ್ಟ್‌ಸಿಟಿ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗಳು ಪ್ರತಿ ತಿಂಗಳೂ ಸಭೆ ಸೇರಿ ಕಾಮಗಾರಿಗಳನ್ನು ಪರಿಶೀಲಿಸುವಂತೆ ಹಾಗೂ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುತ್ತಿದೆ
 • ರಾಜ್ಯದಲ್ಲಿ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಧಾರವಾಡ, ಶಿವಮೊಗ್ಗ, ಮಂಗಳೂರು, ತುಮಕೂರು ಹಾಗೂ ಬೆಂಗಳೂರು ಮಹಾನಗರ ಈ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿವೆ.

ಸ್ಮಾರ್ಟ್ ನಗರ ಎಂದರೇನು?

ಇದನ್ನು ಮೂರು ಕೇಂದ್ರೀಕೃತ ಪದರಗಳಾಗಿ ನೋಡಲಾಗುತ್ತದೆ

 • ಕೋರ್- ಮೂಲಭೂತ ಸೇವೆಗಳು ಮತ್ತು ಮೂಲಭೂತ ಸೌಕರ್ಯಗಳು– ಉತ್ತಮ ರಸ್ತೆಗಳು, ನೀರು ಸರಬರಾಜು, ಒಳಚರಂಡಿ- ಜನರಿಗೆ ಸಂಬಂಧಿಸಿದ ವಿಷಯಗಳು.
 • ಡಿಜಿಟಲ್ ತಂತ್ರಜ್ಞಾನ- ಇದು ಸೇವೆಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಸುಧಾರಿಸುವ ಸಾಧ್ಯತೆಯನ್ನು ಹೊಂದಿದೆ.
 • ವಿಸ್ತೀರ್ಣ ಆಧಾರಿತ ಅಭಿವೃದ್ಧಿ– ಹಗುರಗೊಂಡ ರಸ್ತೆಗಳು, ಉದ್ಯಾನವನಗಳು, ಶುದ್ಧ ಗಾಳಿ.

ಸ್ಮಾರ್ಟ್ ಪರಿಹಾರಗಳು

 • ಈ ಯೋಜನೆಯಡಿಯಲ್ಲಿ ಸ್ಮಾರ್ಟ್ ಪರಿಹಾರಗಳು ತಂತ್ರಜ್ಞಾನದ ಬಳಕೆಯನ್ನು ಸ್ಮಾರ್ಟ್ ಫಲಿತಾಂಶಗಳಿಗೆ ಕಾರಣವಾಗುವ ರೀತಿಯಲ್ಲಿ ಬಳಸುತ್ತವೆ. ಸ್ಮಾರ್ಟ್ ಪರಿಹಾರಗಳ ಕೆಲವು ಉದಾಹರಣೆಗಳು ಹೀಗಿವೆ:
 • ಇ-ಗವರ್ನೆನ್ಸ್ ಮತ್ತು ನಾಗರಿಕ ಸೇವೆಗಳು: ಇದು ಸಾರ್ವಜನಿಕ ಮಾಹಿತಿ ಮತ್ತು ದುಃಖ ಪರಿಹಾರವನ್ನು ಒಳಗೊಂಡಿದೆ; ಎಲೆಕ್ಟ್ರಾನಿಕ್ ಸೇವೆ ವಿತರಣೆ; ನಾಗರಿಕ ತೊಡಗಿಸಿಕೊಳ್ಳುವಿಕೆ ; ನಾಗರಿಕರನ್ನು ನಗರದ ಕಣ್ಣುಗಳು ಮತ್ತು ಕಿವಿಗಳನ್ನಾಗಿಸುತ್ತದೆ ; ವೀಡಿಯೊ ಅಪರಾಧದ ಮೇಲ್ವಿಚಾರಣೆ ಇತ್ಯಾದಿ.
 • ತ್ಯಾಜ್ಯ ನಿರ್ವಹಣೆ: ಇದು ಶಕ್ತಿ ಮತ್ತು ಇಂಧನಕ್ಕೆ ತ್ಯಾಜ್ಯವನ್ನು ಒಳಗೊಂಡಿದೆ; ತ್ಯಾಜ್ಯವನ್ನು ಕಾಂಪೋಸ್ಟ್ಗೆ ಪರಿವರ್ತಿಸುವುದು ; ತ್ಯಾಜ್ಯ ನೀರಿನ ಚಿಕಿತ್ಸೆ; ಮರುಬಳಕೆ.
 • ವಾಟರ್ ಮ್ಯಾನೇಜ್ಮೆಂಟ್: ಸ್ಮಾರ್ಟ್ ಮೀಟರ್ಗಳು ಮತ್ತು ನಿರ್ವಹಣೆ; ಸೋರಿಕೆ ಗುರುತಿಸುವಿಕೆ, ತಡೆಗಟ್ಟುವಿಕೆ ಮತ್ತು ನಿರ್ವಹಣೆ; ನೀರಿನ ಗುಣಮಟ್ಟ ಮೇಲ್ವಿಚಾರಣೆ.
 • ಎನರ್ಜಿ ಮ್ಯಾನೇಜ್ಮೆಂಟ್: ಸ್ಮಾರ್ಟ್ ಮೀಟರ್ಗಳು ಮತ್ತು ನಿರ್ವಹಣೆ; ನವೀಕರಿಸಬಹುದಾದ ಶಕ್ತಿಯ ಬಳಕೆ ; ಹಸಿರು ಕಟ್ಟಡಗಳು.
 • ನಗರ ಚಲನಶೀಲತೆ: ಸ್ಮಾರ್ಟ್ ಪಾರ್ಕಿಂಗ್; ಜಾಣ ಟ್ರಾಫಿಕ್ ನಿರ್ವಹಣೆ; ಸಂಯೋಜಿತ ಬಹು-ಮಾದರಿ ಸಾರಿಗೆ; ಇತರೆ: ಟೆಲಿಮೆಡಿಜನ್; ವ್ಯಾಪಾರ ಅನುಕೂಲ ಕೇಂದ್ರಗಳು; ಕೌಶಲ್ಯ ಅಭಿವೃದ್ಧಿ ಕೇಂದ್ರಗಳು.

ಜಿಸ್ಯಾಟ್‌-7ಎ ಉಡಾವಣೆ

3.

ಸುದ್ಧಿಯಲ್ಲಿ ಏಕಿದೆ ? ಭಾರತೀಯ ಸೇನೆ ಹಾಗೂ ವಾಯುಪಡೆಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗುವ ಜಿಸ್ಯಾಟ್‌-7ಎ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಡಿ.19ರಂದು ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳಿಸಲಿದೆ.

 • 2,250 ಕೆ.ಜಿ ತೂಕದ ಇದು ಇಸ್ರೊ ಅಭಿವೃದ್ಧಿಪಡಿಸಿದ 35ನೇ ಸಂವಹನ ಉಪಗ್ರಹವಾಗಿದೆ.
 • ಜಿಎಸ್‌ಎಲ್‌ವಿ-ಎಫ್‌11 ರಾಕೆಟ್‌ ಮೂಲಕ ಇದನ್ನು ಭೂಸ್ಥಿರ ಕಕ್ಷೆಗೆ ಸೇರಿಸಲಾಗುವುದು.
 • ಕೆ-ಯು ಬ್ಯಾಂಡ್‌ನಲ್ಲಿ ಸಂಪರ್ಕ ಒದಗಿಸಲಿದ್ದು ಇದು ರೇಡಾರ್‌ ಸ್ಟೇಷನ್ಸ್‌ಗಳ, ಏರ್‌ಬೋರ್ನ್‌ ವಾರ್ನಿಂಗ್‌ ಅಂಡ್‌ ಕಂಟ್ರೋಲ್‌ ಏರ್‌ಕ್ರಾಫ್ಟ್‌ ಮತ್ತು ವಾಯುನೆಲೆಗಳ ಮಧ್ಯೆ ಸುಧಾರಿತ ಸಂಪರ್ಕ ಜಾಲ ಒದಗಿಸಲು ಸೇನೆಗೆ ನೆರವಾಗಲಿದೆ.
 • ಇದರ ಕಾರ್ಯಾವಧಿ 8 ವರ್ಷವಾಗಿರಲಿದೆ.

ಪಾಕಿಸ್ತಾನಕ್ಕೆ ಅಸಹಿಷ್ಣು ರಾಷ್ಟ್ರ ಕಳಂಕ ಪಟ್ಟ

4.

ಸುದ್ಧಿಯಲ್ಲಿ ಏಕಿದೆ ? ಜನರ ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕುವ ರಾಷ್ಟ್ರಗಳ ವಾರ್ಷಿಕ ಪಟ್ಟಿಗೆ ಪಾಕಿಸ್ತಾನದ ಹೆಸರು ಸೇರಿಕೊಂಡಿದೆ. ಅಮೆರಿಕ ಈ ಕುರಿತು ಪಟ್ಟಿ ತಯಾರಿಸಿದ್ದು, ಪಾಕ್‌ ಧರ್ಮಾಂಧ ಧೋರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಪ್ರಮುಖ ಅಂಶಗಳು

 • ಯುಎಸ್ ಪ್ರಕಾರ ಪಾಕಿಸ್ತಾನವನ್ನು ಈ ಪಟ್ಟಿಯಲ್ಲಿ ಇರಿಸಲಾಗಿದೆ ಏಕೆಂದರೆ ಇದು ಧಾರ್ಮಿಕ ಅಲ್ಪಸಂಖ್ಯಾತರನ್ನು ಕಿರುಕುಳಗೊಳಿಸುತ್ತಿದೆ ಮತ್ತು ಧರ್ಮನಿಂದೆಯ ವಿರುದ್ಧದ ಹೆಚ್ಚುವರಿ ನ್ಯಾಯಾಂಗ ಹಿಂಸೆಯನ್ನು ಸಹಿಸಿಕೊಳ್ಳುತ್ತದೆ. ಇದಲ್ಲದೆ ಇದು ಅಹಮದಿಗಳಂತಹ ಗುಂಪುಗಳ ವಿರುದ್ಧ ರಾಜ್ಯ-ಅನುಮೋದಿತ ತಾರತಮ್ಯವನ್ನು ಹೊಂದಿದೆ. ಸಂಶೋಧನೆಯ ಪ್ರಕಾರ, ಪಾಕಿಸ್ತಾನವು ಧರ್ಮದ ಮೇಲಿನ ಹೆಚ್ಚಿನ ನಿರ್ಬಂಧಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ
 • ಧಾರ್ಮಿಕ ಅಲ್ಪಸಂಖ್ಯಾತರ ನಾಗರಿಕ ಮತ್ತು ಮಾನವ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಪಾಕಿಸ್ತಾನ ನಿರಂತರ ವೈಫಲ್ಯ ಕಂಡಿದೆ. ಹಾಗಾಗಿ ಇದರ ಹೊಣೆಯನ್ನು ಇಸ್ಲಾಮಾಬಾದ್‌ಗೆ ಹೊರಿಸಿರುವುದು ಸೂಕ್ತವಾಗಿದೆ
 • ಈ ಕ್ರಮ ಪಾಕಿಸ್ತಾನದಲ್ಲಿ ನೆಲೆಸಿರುವ ಶಿಯಾ, ಹಿಂದೂ, ಕ್ರೈಸ್ತ, ಅಹ್ಮದಿ ಮತ್ತು ಇತರ ಅಲ್ಪಸಂಖ್ಯಾತರ ಪರ ಧ್ವನಿಯಾಗಲಿದೆ.
 • ಆ ದೇಶದಲ್ಲಿ ಇವರ ಉಪಸ್ಥಿತಿ ಧಾರ್ಮಿಕ ಉಗ್ರತ್ವದ ವಿರುದ್ಧದ ಹೋರಾಟದಲ್ಲಿ ಪ್ರಮುಖವಾಗಲಿದೆ

ಇತರೆ ದೇಶಗಳ ಹೆಸರು

 • ಈ ಪಟ್ಟಿಯಲ್ಲಿ ಪಾಕಿಸ್ತಾನದ ಜತೆಗೆ ಚೀನಾ, ಸೌದಿ ಅರೇಬಿಯ, ಮ್ಯಾನ್ಮಾರ್‌, ಎರಿಟ್ರಿಯಾ, ಇರಾನ್‌, ಉತ್ತರ ಕೊರಿಯಾ, ಸುಡಾನ್‌, ತಜಕಿಸ್ತಾನ್‌ ಮತ್ತು ತುರ್ಕ್‌ಮೇನಿಸ್ತಾನ್‌ ಸೇರಿವೆ.
 • ಯುನೈಟೆಡ್ ಸ್ಟೇಟ್ಸ್ ಉಜ್ಬೇಕಿಸ್ತಾನ್ ದೇಶವನ್ನು ಪಟ್ಟಿಯಿಂದ ತೆಗೆದುಹಾಕಿದೆ , ಆದರೆ ಅದನ್ನು ವೀಕ್ಷಣೆ ಪಟ್ಟಿಯಲ್ಲಿ ಇಟ್ಟುಕೊಂಡಿದೆ
 • ಅಮೆರಿಕದ ಈ ಕ್ರಮವನ್ನು ಪಾಕಿಸ್ತಾನ ಖಂಡಿಸಿದೆ.

USCIRF ಬಗ್ಗೆ

 • ಯುಎಸ್ಸಿಐಆರ್ಎಫ್ ಸ್ವತಂತ್ರ, ಉಭಯಪಕ್ಷೀಯ ಯು.ಎಸ್. ಫೆಡರಲ್ ಸರ್ಕಾರದ ಕಮಿಷನ್, ಜಗತ್ತಿನ ಮೊದಲನೆಯ ವಿಧವಾಗಿದೆ, ಧರ್ಮದ ಸ್ವಾತಂತ್ರ್ಯ ಅಥವಾ ವಿದೇಶದಲ್ಲಿ ನಂಬಿಕೆಗೆ ಸಾರ್ವತ್ರಿಕ ಹಕ್ಕನ್ನು ಸಮರ್ಥಿಸಲು ಸಮರ್ಪಿಸಲಾಗಿದೆ.
 • ಯುಎಸ್ಸಿಐಆರ್ಎಫ್ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಗಳ ಸತ್ಯ ಮತ್ತು ಸನ್ನಿವೇಶಗಳನ್ನು ವಿಮರ್ಶಿಸುತ್ತದೆ ಮತ್ತು ಅಧ್ಯಕ್ಷ, ಕಾರ್ಯದರ್ಶಿ ಮತ್ತು ಕಾಂಗ್ರೆಸ್ಗೆ ನೀತಿ ಶಿಫಾರಸುಗಳನ್ನು ಮಾಡುತ್ತದೆ.
Related Posts
“16 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆಯುಷ್ಮಾನ್ ಆರೋಗ್ಯ ಸುದ್ಧಿಯಲ್ಲಿ ಏಕಿದೆ ?ಬಡ ಹಾಗೂ ಮಧ್ಯಮವರ್ಗದ ನಾಗರಿಕರಿಗೆ ಆರೋಗ್ಯ ಸೇವೆಯಲ್ಲಿ ಖಾತ್ರಿ ನೀಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿದ್ದ ಎರಡು ಪ್ರತ್ಯೇಕ ಯೋಜನೆಗಳನ್ನು ವಿಲೀನಗೊಳಿಸುವ ಮೂಲಕ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯನ್ನು ಜಾರಿ ಮಾಡಲಾಗಿದೆ. ಕೋ-ಬ್ರಾ್ಯಂಡಿಂಗ್​ನಲ್ಲಿ ಎರಡೂ ಯೋಜನೆಗಳನ್ನು ...
READ MORE
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷಿ ಆದಾಯ ಹೆಚ್ಚಳಕ್ಕೆ ಯೋಜನೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕೃಷಿ ಭೂಮಿ ಸದ್ಬಳಕೆ ಜತೆಗೆ ಅನ್ನದಾತರ ಆದಾಯವನ್ನೂ ಹೆಚ್ಚಿಸುವ ಉದ್ದೇಶದಿಂದ ಮೂರು ಹೊಸ ಕಾಯ್ದೆಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ರೂಪಿಸಿದ್ದ ಮಾದರಿ ಕಾಯ್ದೆಗಳು ಇದಕ್ಕೆ ಆಧಾರವಾಗಿರುವುದು ವಿಶೇಷ. ಉದ್ದೇಶ ಕೃಷಿ ಭೂಮಿ ಗುತ್ತಿಗೆ ...
READ MORE
“13 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ತರಕಾರಿ ಬೀಜಗಳ ಕಿಟ್‌ ವಿತರಣೆ ಸುದ್ಧಿಯಲ್ಲಿ ಏಕಿದೆ ?ರಾಜ್ಯಾದ್ಯಂತ ರೈತರಿಗೆ ತರಕಾರಿ ಬೆಳೆಯಲು ನಾನಾ ತರಕಾರಿ ಬೀಜಗಳಿಗೆ ಸಹಾಯಧನವಾಗಿ ಪ್ರತಿ ಎಕರೆಗೆ 2,000 ರೂ. ನೀಡುವ 'ತರಕಾರಿ ಬೀಜಗಳ ಕಿಟ್‌ ವಿತರಣೆ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಅಧಿಕೃತ ಚಾಲನೆ ನೀಡಿದೆ. ಪ್ರತಿ ಎಕರೆಯಲ್ಲಿ ತರಕಾರಿ ...
READ MORE
13th ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಎನ್‌ಐಆರ್‌ಎಫ್‌ ರಾಯಂಕಿಂಗ್‌ ಸುದ್ಧಿಯಲ್ಲಿ ಏಕಿದೆ ? ಅಂಕಿ ಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳದೆ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ರಾರ‍ಯಂಕಿಂಗ್‌ ಫ್ರೇಮ್‌ವರ್ಕ್‌(ಎನ್‌ಐಆರ್‌ಎಫ್‌) ನಲ್ಲಿ ಪಿಇಎಸ್‌ ವಿಶ್ವವಿದ್ಯಾಲಯಕ್ಕೆ 149 ನೇ ಸ್ಥಾನ ನೀಡಲಾಗಿದೆ. ಈ ತಪ್ಪನ್ನು ಸರಿಪಡಿಸದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ವಿವಿ ಕುಲಾಧಿಪತಿ ಡಾ.ಎಂ.ಆರ್‌.ದೊರೆಸ್ವಾಮಿ ...
READ MORE
“11 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏರ್‌ಪೋರ್ಟ್‌ ಭಾಗ್ಯ ಸುದ್ಧಿಯಲ್ಲಿ ಏಕಿದೆ ?ವಿಮಾನ ನಿಲ್ದಾಣ ಹೊಂದಿರದ ರಾಷ್ಟ್ರದ ಏಕೈಕ ರಾಜ್ಯವಾಗಿದ್ದ ಅರುಣಾಚಲ ಪ್ರದೇಶಕ್ಕೆ ಏರ್‌ಪೋರ್ಟ್‌ ಭಾಗ್ಯ ಸಿಕ್ಕಿದೆ. ಈಗಾಗಲೇ ರಾಷ್ಟ್ರದ 29 ರಾಜ್ಯಗಳಲ್ಲಿ ವಿಮಾನ ನಿಲ್ದಾಣ ಸೌಲಭ್ಯವಿದೆ. ಆದರೆ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ವಿಮಾನ ನಿಲ್ದಾಣದ ಕೊರತೆಯಿತ್ತು. ಪ್ರಧಾನಿ ನರೇಂದ್ರ ಮೋದಿ ...
READ MORE
“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ರಾಷ್ಟ್ರೀಯ ಯುವ ದಿನ ಸುದ್ಧಿಯಲ್ಲಿ ಏಕಿದೆ ?ಸ್ವಾಮಿ ವಿವೇಕಾನಂದರ ಸ್ವರಣಾರ್ಥ ಜ.12ನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. 1984 ರಲ್ಲಿ ಭಾರತ ಸರಕಾರ ದಿನವನ್ನು ರಾಷ್ಟ್ರೀಯ ಯುವ ...
READ MORE
“26 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶ್ರೀಗಂಧ ಮಂಡಳಿ ರಚನೆ ಸುದ್ಧಿಯಲ್ಲಿ ಏಕಿದೆ ?ಕರ್ನಾಟಕ ಶ್ರೀಗಂಧ ಮಂಡಳಿ ರಚನೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ಸೊಸೈಟಿ ಆಪ್ ಇಂಡಿಯಾ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀಗಂಧದ ಪ್ರಸ್ತುತ ಸ್ಥಿತಿಗತಿ ಮತ್ತು ...
READ MORE
“21 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆಗೆ ಯೋಜನೆ ಸುದ್ಧಿಯಲ್ಲಿ ಏಕಿದೆ ? ಪದೇಪದೆ ಕಾಡುವ ಚಂಡಮಾರುತ ಸುಳಿಯಿಂದ ಪಾರಾಗಲು ಕೇಂದ್ರ ಸರ್ಕಾರದ ನೇತೃತ್ವದಲ್ಲಿ, ಕರ್ನಾಟಕ ಸೇರಿದಂತೆ ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆ ಯೋಜನೆ ಕೈಗೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಈ ಯೋಜನೆ ಶೇ.75-25 ಕೇಂದ್ರ-ರಾಜ್ಯ ಸಹಕಾರದಲ್ಲಿ ...
READ MORE
“09 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
 ವಾಣಿಜ್ಯ ಸಮರ  ಸುದ್ಧಿಯಲ್ಲಿ ಏಕಿದೆ ?ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಉತ್ತಮಗೊಳ್ಳುತ್ತಿರುವ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ಸಮರ ತೀವ್ರಗೊಳ್ಳುವ ಸಾಧ್ಯತೆ ಇದೆ. ಕಾರಣ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ 2 ಸಾವಿರಕ್ಕೂ ಹೆಚ್ಚು ಉತ್ಪನ್ನಗಳಿಗೆ ನೀಡುತ್ತಿರುವ ಶೂನ್ಯ ತೆರಿಗೆಯನ್ನು ರದ್ದುಗೊಳಿಸುವ ಬಗ್ಗೆ ಅಮೆರಿಕ ...
READ MORE
“16 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಿಪಂ ವಾಹನಗಳಲ್ಲಿ ಬಯೋಡೀಸೆಲ್‌ ಬಳಕೆಗೆ ಸೂಚನೆ ಸುದ್ಧಿಯಲ್ಲಿ ಏಕಿದೆ ? ರಾಜ್ಯದಲ್ಲಿ ಜೈವಿಕ ಇಂಧನ ಉತ್ಪಾದನೆ ಮತ್ತು ಬಳಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಸರಕಾರಿ ವಾಹನಗಳಲ್ಲಿ ಬಯೋಡೀಸೆಲ್‌ ಬಳಸುವಂತೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಬಯೋಡೀಸೆಲ್‌ ಬಳಸುವ ಬಗ್ಗೆ ಮಾರ್ಗಸೂಚಿ ಸಹ ...
READ MORE
“16 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“13 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
13th ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
“11 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“26 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“21 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“09 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“16 ಫೆಬ್ರವರಿ 2019 ರ ಕನ್ನಡ ಪ್ರಚಲಿತ

Leave a Reply

Your email address will not be published. Required fields are marked *