“13 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಸಂಚಾರ ಕಣ್ಗಾವಲಿಗೆ ಎಫ್‌ಟಿವಿಆರ್‌

1.

ಸುದ್ಧಿಯಲ್ಲಿ ಏಕಿದೆ ?ರಾಜ್ಯದ ಸಂಚಾರ ಪೊಲೀಸರು ಇನ್ನಷ್ಟು ಡಿಜಿಟಲೀಕರಣಕ್ಕೆ ಮುಂದಾಗಿದ್ದಾರೆ. ಸಾರಿಗೆ ನಿಯಮ ಉಲ್ಲಂಘನೆ ಕೇಸ್‌ಗಳನ್ನು ತ್ವರಿತ ಮತ್ತು ಸರಳವಾಗಿ ದಾಖಲಿಸಲು ಶೀಘ್ರದಲ್ಲಿಯೇ ಫೀಲ್ಡ್‌ ಟ್ರಾಫಿಕ್‌ ವೈಲೇಷನ್‌ ರಿಪೋರ್ಟ್‌ (ಎಫ್‌ಟಿವಿಆರ್‌) ಸ್ಮಾರ್ಟ್‌ಫೋನ್‌ ಸಾಧನ ಹಿಡಿಯಲಿದ್ದಾರೆ.

 • ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದದಿಂದ ಸುಮಾರು 05 ಕೋಟಿ ರೂ. ವೆಚ್ಚದಲ್ಲಿ 800 ಎಫ್‌ಟಿವಿಆರ್‌ ಸಾಧನಗಳನ್ನು ಖರೀದಿ ಮಾಡಲಾಗುತ್ತಿದೆ. ಈ ಸಾಧನವನ್ನು ಎಲ್ಲ ಜಿಲ್ಲೆಗಳ ಸಂಚಾರ ಪೊಲೀಸರಿಗೆ ಬಳಸುವ ಕುರಿತು ತರಬೇತಿ ನೀಡಿ ವಿತರಣೆ ಮಾಡಲಾಗುತ್ತದೆ. ನಂತರ ಅಗತ್ಯಕ್ಕೆ ಅನುಸಾರ ಸಾಧನ ಖರೀದಿಯ ಉದ್ದೇಶವನ್ನು ಪೊಲೀಸ್‌ ಇಲಾಖೆ ಹೊಂದಿದೆ.
 • ಬೆಂಗಳೂರಿನಲ್ಲಿ ಎಫ್‌ಟಿವಿರ್‌ ಹಲವು ತಿಂಗಳುಗಳಿಂದ ಬಳಕೆಯಲ್ಲಿ ಇವೆ. ಮೈಸೂರು, ಮಂಗಳೂರು ಸೇರಿದಂತೆ ಪ್ರಮುಖ ಮಹಾನಗರ ಕಮೀಷನರೇಟ್‌ ವ್ಯಾಪ್ತಿಗಳಲ್ಲಿ ನಿಯಮ ಉಲ್ಲಂಘಿಸುವ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿ ಸ್ಥಳದಲ್ಲೇ ಇ-ಚಲನ್‌ ಜನರೇಟ್‌ ಮಾಡುವ ಸಾಧನಗಳನ್ನು ಬಳಕೆ ಮಾಡುತ್ತಿದ್ದಾರೆ. ಅದರ ಜತೆಗೆ ಇನ್ನು ಮುಂದೆ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತಷ್ಟು ಸುಧಾರಿತ ಎಫ್‌ಟಿವಿಆರ್‌ ಸಾಧನ ಬಳಕೆ ಮಾಡಲಿದ್ದಾರೆ.

ಈಗಿರುವ ವ್ಯವಸ್ಥೆ

 • ಹಾಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನದ ನೋಂದಣಿ ಸಂಖ್ಯೆ, ಸ್ಥಳ, ಯಾವ ನಿಯಮ ಉಲ್ಲಂಘನೆಯಾಗಿದೆ, ದಂಡದ ಮೊತ್ತದ ಕುರಿತು ನಮೂದಿಸಿ ಠಾಣೆಯಲ್ಲಿ ಅಪ್‌ಡೇಟ್‌ ಮಾಡಿದ ನಂತರ ಅಂಚೆ ಮೂಲಕ ವಾಹನದ ಮಾಲೀಕರ ಮನೆಗೆ ಕಳುಹಿಸಬೇಕು. ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಅಲ್ಲದೇ, ಕೆಲವೊಮ್ಮೆ ಮಾಹಿತಿ ಅಪ್‌ಡೇಟ್‌ ಮಾಡುವ ವೇಳೆ ಲೋಪಗಳು ಉಂಟಾಗುವ ಸಾಧ್ಯತೆ ಇರುತ್ತವೆ.
 • ಆದರೆ, ಎಫ್‌ಟಿವಿಆರ್‌ ಬಳಕೆಯಿಂದ ಈ ಎಲ್ಲ ಗೊಂದಲಗಳು ನಿವಾರಣೆಯಾಗಲಿದ್ದು, 4ಜಿ ವೇಗದಲ್ಲಿ ರಿಯಲ್‌ ಟೈಮ್‌ನಲ್ಲಿ ಮಾಹಿತಿಯು ಸೆಂಟ್ರಲ್‌ ಸರ್ವರ್‌ಗೆ ರವಾನೆಯಾಗಲಿದೆ.

ಎಫ್‌ಟಿವಿಆರ್‌ ಕಾರ್ಯ ನಿರ್ವಹಣೆ

 • 4ಜಿ ಇಂಟರ್ನೆಟ್‌ ಸೌಲಭ್ಯದ 5ರಿಂದ 6 ಇಂಚಿನ ಸ್ಮಾರ್ಟ್‌ಫೋನ್‌ ಸಾಧನಕ್ಕೆ ಟ್ರಾಫಿಕ್‌ ಪೊಲೀಸ್‌ ಇಲಾಖೆಯ ಸಾಫ್ಟ್‌ವೇರ್‌ ಅಳವಡಿಸಲಾಗುತ್ತದೆ. ಉತ್ತಮ ಗುಣಮಟ್ಟದ ಕ್ಯಾಮೆರಾ, ಜಿಪಿಎಸ್‌, ಮೆಮೋರಿ ಸೇರಿದಂತೆ ಆಧುನಿಕ ಸ್ಮಾರ್ಟ್‌ಫೋನ್‌ನಲ್ಲಿರುವ ಎಲ್ಲ ಸೌಲಭ್ಯಗಳು ಇರುತ್ತವೆ.
 • ನಿಯಮ ಉಲ್ಲಂಘನೆಯ ವಾಹನದ ನೋಂದಣಿ ಸಂಖ್ಯೆ ಸಹಿತ ಪೋಟೊ ಕ್ಲಿಕ್‌ ಮಾಡಿದರೆ ಜಿಪಿಎಸ್‌ ಮೂಲಕ ಯಾವ ಸ್ಥಳದಲ್ಲಿ ವಾಹನ ಉಲ್ಲಂಘನೆ ಮಾಡಲಾಗಿದೆ ಎಂಬುದು ಸ್ವಯಂ ಆಗಿ ದಾಖಲಾಗುತ್ತದೆ.
 • ಆ ವಿವರಣೆಯನ್ನು ಸಿಬ್ಬಂದಿ ದಾಖಲಿಸುತ್ತಿದ್ದಂತೆ ಸ್ಥಳದಿಂದಲೇ ಜನರೇಟ್‌ ಆಗಿ ಮಾಹಿತಿಯು ಮುಖ್ಯ ಸರ್ವರ್‌ಗೆ ರವಾನೆಯಾಗುತ್ತದೆ. ನಂತರ ವಾಹನ ಮಾಲೀಕರಿಗೆ ಆನ್‌ಲೈನ್‌ನಲ್ಲೇ ಮಾಹಿತಿ ಜನರೇಟ್‌ ಮಾಡಿ ಇ-ಚಲನ್‌ನಲ್ಲಿ ಮಾಹಿತಿ ಅಪ್‌ಡೇಟ್‌ ಆಗುತ್ತದೆ. ಅದನ್ನು ಆನ್‌ಲೈನ್‌ ಮೂಲಕವೂ ನೋಡಿಕೊಳ್ಳಬಹುದು. ಎಂದಿನಂತೆ ಅಂಚೆ ಮೂಲಕವೂ ಚಲನ್‌ ಅನ್ನು ವಿಳಾಸಕ್ಕೆ ಕಳುಹಿಸಲಾಗುತ್ತದೆ.
 • ಸದ್ಯ ಬೆಂಗಳೂರಿಗೆ ಸೀಮಿತವಾಗಿ ಇ-ಚಲನ್‌ ವ್ಯವಸ್ಥೆಯ ಡೆಟಾ ಸೆಂಟರ್‌ ಇದೆ. ನಂತರ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಮತ್ತೊಂದು ಡೆಟಾ ಸೆಂಟರ್‌ ಸ್ಥಾಪಿಸಲಾಗುತ್ತದೆ. ಆದರೆ, ಈ ಎರಡು ಸೆಂಟರ್‌ಗಳು ಒಂದೇ ಕಡೆ ಇರುವಂತೆ ಹಾಗೂ ಅಗತ್ಯ ಬಿದ್ದಾಗ ಪರಸ್ಪರ ಮಾಹಿತಿ ಶೇರ್‌ ಮಾಡಿಕೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ

ವನ್ಯಜೀವಿಗಳ ಅಂಗಾಂಗ

2.

ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ವನ್ಯಜೀವಿಗಳ ಅಂಗಾಂಗಗಳನ್ನು ಸಂಗ್ರಹಿಸಿ ಕೊಂಡು ಅದನ್ನು ಶೋಕಿಗೆ ಉಪಯೋಗಿಸುತ್ತಿರುವವರ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಹಿನ್ನಲೆ

 • ಇತ್ತೀಚೆಗೆ ಜಿಂಕೆ ಕೊಂಬು, ಆನೆ ದಂತವನ್ನು ಸಂಗ್ರಹಿಸಿಕೊಂಡು ವಾಹನಗಳ ಮೇಲೆ ಸ್ಟೈಲ್​ಗಾಗಿ ಅಳವಡಿಸಿಕೊಳ್ಳುವ ಕ್ರೇಜ್ ಹೆಚ್ಚಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ವನ್ಯಜೀವಿ ಮಂಡಳಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನ್ವಯ ವನ್ಯಮೃಗಗಳ ವಸ್ತುಗಳನ್ನು ಬಳಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಗೆ ಪತ್ರ ಮುಖೇನ ಮನವಿ ಮಾಡಿದೆ.
 • ಕೇಂದ್ರ ಸರ್ಕಾರ 2003ರಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸುವ ಮುಖಾಂತರ ವನ್ಯಜೀವಿ ಕಾಯ್ದೆ 1972ರ ಸೆಕ್ಷನ್ 40 (ಎ) ಕಲಂ (1) ಹಾಗೂ (3)ರ ಅನ್ವಯ ವನ್ಯಜೀವಿ ವಸ್ತು ಗಳನ್ನು ಸಂಗ್ರಹಿಸಿಟ್ಟುಕೊಂಡು ಬಳಸಲು ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿತ್ತು. ಆದರೆ, ವನ್ಯಜೀವಿ ಮಂಡಳಿ ಅನುಮತಿ ಪಡೆಯುವುದು ಕಡ್ಡಾಯವೆಂಬ ನಿಯಮವನ್ನು ಜಾರಿಗೆ ತರಲಾಗಿದೆ.

3ರಿಂದ4 ವರ್ಷ ಜೈಲು ಶಿಕ್ಷೆ!

 • ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರ ಸೆಕ್ಷನ್ ಪ್ರಕಾರ ನಿಯಮ ಉಲ್ಲಂಘಿಸುವವರಿಗೆ 3 ರಿಂದ 4 ವರ್ಷ ಜೈಲು ಶಿಕ್ಷೆ ಅಥವಾ 25 ಸಾವಿರ ರೂ.ವರೆಗೆ ದಂಡ ವಿಧಿಸಲು ಅವಕಾಶ ಇದೆ. ಶಿಕ್ಷೆ ಹಾಗೂ ದಂಡ ಎರಡನ್ನೂ ವಿಧಿಸಲೂಬಹುದು.
 • ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ವನ್ಯಜೀವಿ ಅಪರಾಧ ನಿಯಂತ್ರಣ ಘಟಕ, ಕಸ್ಟಮ್್ಸ ಹಾಗೂ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಎಲ್ಲಿ ಸಿಗುತ್ತೆ?

 • ಕಾಡು ಪ್ರಾಣಿಗಳ ಚರ್ಮ, ಕೊಂಬು, ಉಗುರು ಹಾಗೂ ಕೂದಲನ್ನು ಸಾವಿರಾರು ರೂ. ಕೊಟ್ಟು ಖರೀದಿಸುವವರಿದ್ದಾರೆ. ಇವುಗಳನ್ನು ಮಾರಾಟ ಮಾಡುವ ಜಾಲವೇ ರಾಜ್ಯದಲ್ಲಿ ಸಕ್ರಿಯವಾಗಿದೆ. ಬೇಟೆಗಾರರಿಂದ ಪ್ರಾಣಿಗಳ ವಸ್ತುಗಳನ್ನು ಖರೀದಿಸಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ.

ವನ್ಯಜೀವಿ ಸಂರಕ್ಷಣಾ ಕಾಯಿದೆ, 1972

 • ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ಸಸ್ಯ ಮತ್ತು ಪ್ರಾಣಿ ಜಾತಿಗಳ ರಕ್ಷಣೆಗಾಗಿ ಜಾರಿಗೊಳಿಸಲಾದ ಭಾರತದ ಸಂಸತ್ತಿನ ಒಂದು ಕಾಯಿದೆ.
 • 1972 ಕ್ಕೂ ಮೊದಲು, ಭಾರತವು ಕೇವಲ ಐದು ನಿಗದಿತ ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿತ್ತು. ಇತರ ಸುಧಾರಣೆಗಳ ಪೈಕಿ, ಕಾಯಿದೆ ರಕ್ಷಿತ ಸಸ್ಯ ಮತ್ತು ಪ್ರಾಣಿ ಜಾತಿಗಳ ವೇಳಾಪಟ್ಟಿಯನ್ನು ಸ್ಥಾಪಿಸಿತು;
 • ಈ ಜಾತಿಗಳನ್ನು ಬೇಟೆಯಾಡುವುದು ಅಥವಾ ಕೊಯ್ಲು ಮಾಡುವುದು ಹೆಚ್ಚಾಗಿ ನಿಷೇಧಿಸಲ್ಪಟ್ಟಿತು.ಕಾಡು ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳ ರಕ್ಷಣೆಗಾಗಿ ಒದಗಿಸುತ್ತದೆ.
 • ಇದು ಜಮ್ಮು ಮತ್ತು ಕಾಶ್ಮೀರದ ರಾಜ್ಯವನ್ನು ಹೊರತುಪಡಿಸಿ ಇಡೀ ಭಾರತಕ್ಕೆ ವಿಸ್ತರಿಸುತ್ತದೆ, ಅದು ತನ್ನದೇ ಆದ ವನ್ಯಜೀವಿ ಕಾರ್ಯವನ್ನು ಹೊಂದಿದೆ.
 • ಇದು ವಿವಿಧ ಹಂತಗಳ ರಕ್ಷಣೆ ನೀಡುವ ಆರು ವೇಳಾಪಟ್ಟಿಗಳನ್ನು ಹೊಂದಿದೆ.
 • ಷೆಡ್ಯೂಲ್ I ಮತ್ತು ಷೆಡ್ಯೂಲ್ II ನೇ ಭಾಗವು ಸಂಪೂರ್ಣ ರಕ್ಷಣೆ ನೀಡುತ್ತದೆ – ಇವುಗಳಲ್ಲಿನ ಅಪರಾಧಗಳು ಅತ್ಯಧಿಕ ಪೆನಾಲ್ಟಿಗಳನ್ನು ಶಿಫಾರಸು ಮಾಡುತ್ತವೆ. ವೇ
 • ಳಾಪಟ್ಟಿ III ಮತ್ತು ವೇಳಾಪಟ್ಟಿ IV ರಲ್ಲಿ ಪಟ್ಟಿಮಾಡಲಾದ ಜಾತಿಗಳನ್ನೂ ಸಹ ರಕ್ಷಿಸಲಾಗಿದೆ, ಆದರೆ ದಂಡಗಳು ಕಡಿಮೆ.
 • ವೇಳಾಪಟ್ಟಿ v ಬೇಟೆಯಾಡಬಹುದಾದ ಪ್ರಾಣಿಗಳನ್ನು ಒಳಗೊಂಡಿದೆ. ವೇಳಾಪಟ್ಟಿ VI ನಲ್ಲಿ ನಿಗದಿತ ಸ್ಥಳೀಯ ಸಸ್ಯಗಳನ್ನು ಕೃಷಿ ಮತ್ತು ನೆಟ್ಟದಿಂದ ನಿಷೇಧಿಸಲಾಗಿದೆ.
 • ಎನ್ಫೋರ್ಸ್ಮೆಂಟ್ ಅಧಿಕಾರಿಗಳಿಗೆ ಬೇಟೆಯಾಡುವಿಕೆಯು ಈ ವೇಳಾಪಟ್ಟಿ ಅಡಿಯಲ್ಲಿ ಅಪರಾಧಗಳನ್ನು ಹೆಚ್ಚಿಸಲು ಶಕ್ತಿಯನ್ನು ಹೊಂದಿರುತ್ತದೆ (ಅಂದರೆ ಅವರು ಅಪರಾಧಿಗಳ ಮೇಲೆ ದಂಡವನ್ನು ವಿಧಿಸುತ್ತಾರೆ).

ಅಸ್ತಮಾ

3.

ಸುದ್ಧಿಯಲ್ಲಿ ಏಕಿದೆ ?ಮರಗಳ ಹನನ, ಮಾಲಿನ್ಯದ ಕಡೆಗೆ ಕೊಡದ ಗಮನ, ನಿತ್ಯ ರಸ್ತೆಗೆ ಇಳಿಯುತ್ತಿರುವ ಸಹಸ್ರಾರು ಹೊಸ ವಾಹನ, ಬದಲಾಗುವ ಹವಾಮಾನ, ಜಂಕ್​ಫುಡ್ ಬಳಕೆ ಇತ್ಯಾದಿಗಳಿಂದ ಅಸ್ತಮಾ ಹೆಚ್ಚುವ ಆತಂಕ ಸೃಷ್ಟಿಯಾಗಿದೆ.

 • ಅಸ್ತಮಾ ಎಲ್ಲೆಡೆ ಹೆಚ್ಚುತ್ತಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕನ್ನಡ ಸೇರಿ 11 ಭಾಷೆಗಳಲ್ಲಿ ಅಸ್ತಮಾ ನಿರ್ವಹಣೆ ಕುರಿತ ಕೈಪಿಡಿ ಸಿದ್ಧಪಡಿಸಿ ಶಾಲೆಗಳಲ್ಲಿ ಬಿಡುಗಡೆ ಮಾಡಿದೆ.
 • ಬೆಂಗಳೂರು ವಾಯುಮಾಲಿನ್ಯ ದೆಹಲಿಯಷ್ಟು ಭಯಾನಕ ಹಂತ ತಲುಪದಿದ್ದರೂ ಆತಂಕವಂತೂ ಕಾಡುತ್ತಿದೆ. ತಕ್ಷಣ ಎಚ್ಚೆತ್ತುಕೊಳ್ಳದೆ ಹೋದರೆ ಗಂಭೀರ ಪರಿಣಾಮ ನಿಶ್ಚಿತ ಎಂಬುದು ಈಗ ಖಾತ್ರಿಯಾಗಿದೆ.
 • ಬರೀ ಮಕ್ಕಳಲ್ಲ, ಹದಿಹರೆಯದವರನ್ನೂ ಅಸ್ತಮಾ ಕಾಡುತ್ತಿದೆ. ಒಂದು ಅಧ್ಯಯನದ ಪ್ರಕಾರ ಬೆಂಗಳೂರಿನಲ್ಲಿ ಶೇಕಡ 5 ರಿಂದ 30 ಮಕ್ಕಳಲ್ಲಿ ಅಸ್ತಮಾ ದೃಢಪಟ್ಟಿದೆ. 20 ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಅಸ್ತಮಾ ಈಗ ಮೂರು ಪಟ್ಟು ಹೆಚ್ಚಳವಾಗಿದೆ. ಅಸ್ತಮಾಕ್ಕೆ ಚಿಕಿತ್ಸೆ ಅತ್ಯವಶ್ಯ ಎನ್ನುವ ಹಂತ ತಲುಪಿದೆ.

ಹಲವು ಕಾರಣಗಳು:

 • ಜನಸಂಖ್ಯೆ ಹೆಚ್ಚಳ, ಮಿತಿ ಮೀರಿದ ವಾಹನ ಬಳಕೆ, ಪರಿಸರ ಮಾಲಿನ್ಯ, ಹವಾನಿಯಂತ್ರಿತ ಮನೆ/ಕಚೇರಿ, ಆಹಾರ ಪದ್ಧತಿಯಲ್ಲಿನ ಅಗಾಧ ಬದಲಾವಣೆ ಅಸ್ತಮಾ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ.
 • ರಸ್ತೆ ಬದಿಯಲ್ಲಿರುವ ಶಾಲೆಗಳು, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ, ಮಕ್ಕಳಲ್ಲಿ ಅಸ್ತಮಾ ಉಲ್ಬಣಕ್ಕೆ ಬಹುಮುಖ್ಯ ಕಾರಣಗಳಾಗಿವೆ. ಇದು ರಾಜ್ಯದ ಆರೋಗ್ಯ, ಶಿಕ್ಷಣ, ಪರಿಸರ ಇಲಾಖೆಗಳಲ್ಲಿ ಆತಂಕ ಸೃಷ್ಟಿಸಿದೆ.
 • ವಾಯುಮಾಲಿನ್ಯ, ವಾತಾವರಣದಲ್ಲಿ ಕಾರ್ಬನ್ ಮಾನಾಕ್ಸೖಡ್ ಪ್ರಮಾಣ ಹೆಚ್ಚಳ, ಆನುವಂಶಿಕತೆಯಿಂದ ಮಕ್ಕಳಲ್ಲಿ ಅಸ್ತಮಾ ಕಾಣಿಸಿಕೊಳ್ಳುತ್ತಿದ್ದು, ಜಾಗತಿಕ ಮಟ್ಟದಲ್ಲಿ ಅಸ್ತಮಾ ಕಾರಣದಿಂದ ಉಂಟಾಗುವ ಸಾವಿನ ಪ್ರಮಾಣ ಶೇಕಡ 4 ಇದೆ. ಭಾರತದಲ್ಲಿ ಶೇಕಡ 1.2 ಸಾವಿನ ಪ್ರಮಾಣವಿದೆ. ಇತ್ತೀಚೆಗೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿರುವ ಕಾರಣ ಅಸ್ತಮಾ ಉಲ್ಬಣಗೊಳ್ಳುತ್ತಿದೆ ಎನ್ನುತ್ತಾರೆ ತಜ್ಞ ವೈದ್ಯರು.

ಉಸಿರಾಟ ಸಂಬಂಧಿ ಕಾಯಿಲೆ ಹೆಚ್ಚಳ

 • ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮದಡಿ ಪ್ರತಿವರ್ಷ ಶಾಲಾ ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಬೆಳಕಿಗೆ ಬಂದಿದೆ.
 • 2015-16ರಲ್ಲಿ ಒಟ್ಟು ಶೇಕಡ 71 ಮಕ್ಕಳಲ್ಲಿ ಉಸಿರಾಟ ತೊಂದರೆ ಕಾಣಿಸಿಕೊಂಡರೆ, 2016-17ರಲ್ಲಿ ಇದು ಶೇಕಡ 5.2ಕ್ಕೆ ಮತ್ತು 2017-18ರಲ್ಲಿ 6.09ಕ್ಕೆ ಏರಿಕೆ ಕಂಡಿರುವುದು ಆರೋಗ್ಯ ಅಧಿಕಾರಿಗಳಲ್ಲಿ ಆತಂಕ ಉಂಟುಮಾಡಿದೆ.

ಇಕೊ ಕ್ಲಬ್​ಗೆ ಹೊಣೆಗಾರಿಕೆ ಟಾಸ್ಕ್​ಫೋರ್ಸ್ ಸಮಿತಿ ರಚನೆ

 • ರಾಜ್ಯದ 4,388 ಸರ್ಕಾರಿ ಪ್ರೌಢಶಾಲೆ, 2,586 ಅನುದಾನಿತ ಪ್ರೌಢಶಾಲೆ, 1,526 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8,500ಕ್ಕೂ ಹೆಚ್ಚು ಇಕೊ ಕ್ಲಬ್​ಗಳಿವೆ. ಇವುಗಳ ಜತೆ ಕೆಲವು ಅನುದಾನರಹಿತ ಶಾಲೆ-ಕಾಲೇಜುಗಳಲ್ಲೂ ಇಕೊ ಕ್ಲಬ್ ತೆರೆಯಲಾಗಿದೆ.
 • ಈ ಕ್ಲಬ್​ಗಳ ಮೂಲಕ ಅಸ್ತಮಾ ಕುರಿತು ಜಾಗೃತಿ ಮೂಡಿಸಬೇಕು. ಅಸ್ತಮಾ ಟಾಸ್ಕ್​ಫೋರ್ಸ್ ಸಮಿತಿ ರಚಿಸಬೇಕು. ಶಿಕ್ಷಕರು ಹಾಗೂ ಸಿಬ್ಬಂದಿಗೆ ಕಾಯಿಲೆ ಕುರಿತು ಮಾಹಿತಿ ನೀಡಬೇಕು ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಕೈಪಿಡಿಯಲ್ಲಿ ಸೂಚಿಸಲಾಗಿದೆ.

ಪರಿಹಾರ ಮಾರ್ಗಗಳು..

 • ಶಾಲೆ, ಮನೆ ಆವರಣದಲ್ಲಿ ಶುಚಿತ್ವ ಕಾಪಾಡುವುದು
 • ಶಾಲಾ ಆವರಣದಲ್ಲಿ ದಟ್ಟ ಗಿಡಮರ ಬೆಳೆಸುವುದು
 • ಶುದ್ಧ ಗಾಳಿ ಸೇವನೆಗೆ ತಕ್ಕ ವಾತಾವರಣ ಅವಶ್ಯ
 • ವಾಹನ ದಟ್ಟಣೆಯಿಂದ ದೂರ ಇರುವಿಕೆ
 • ಟೆಡ್ಡಿ ಬೇರ್ ಸೇರಿ ಸ್ಟಫ್ ಟಾಯ್್ಸಳ ಅನಗತ್ಯವಾಗಿ ಬಳಸದಂತೆ ಎಚ್ಚರ ವಹಿಸುವುದು ಸೂಕ್ತ
 • ಕಾರ್ಪೆಟ್ ಶುಚಿತ್ವ, ಕಸ ಗುಡಿಸುವಾಗ ಧೂಳು ಏಳದಂತೆ ಎಚ್ಚರ ವಹಿಸಬೇಕು

ಕೇಂದ್ರದ ಕೈಪಿಡಿಯಲ್ಲಿರುವ ನಿರ್ದೇಶನವೇನು?

 • ಅಸ್ತಮಾ ಮತ್ತು ಉಸಿರಾಟ ಸಮಸ್ಯೆ ಇರುವ ಮಕ್ಕಳ ಪಟ್ಟಿ ತಯಾರಿಸಿ ಗುಪ್ತವಾಗಿಟ್ಟುಕೊಳ್ಳಬೇಕು.
 • ಶಾಲಾ ಹಂತದಲ್ಲಿ ಚಿಕಿತ್ಸೆಗೆ ನೀತಿ ರೂಪಿಸಬೇಕು.
 • ಶಿಕ್ಷಕರು ಹಾಗೂ ಸಿಬ್ಬಂದಿಗೆ ಅಸ್ತಮಾ ನಿರ್ವಹಣೆ ಕುರಿತು ತರಬೇತಿ ನೀಡಬೇಕು.
 • ಅಸ್ತಮಾ ಕುರಿತ ಲಿಖಿತ ಕ್ರಿಯಾಯೋಜನೆ ತಯಾರಿಸಿ ಬಾಧಿತ ಮಕ್ಕಳಿಗೆ ಕೊಡಬೇಕು.
 • ಅಸ್ತಮಾ ಪೀಡಿತ ಮಕ್ಕಳಿಗೆ ನಿತ್ಯಪಾಲನೆಗೆ ಮಾರ್ಗಸೂಚಿ ಬಿಡುಗಡೆ ಮಾಡಬೇಕು.
 • ಚಿಕಿತ್ಸೆ ಪಡೆಯುತ್ತಿದ್ದರೆ, ಶಾಲಾ ಅವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಕ್ರೋಡೀಕರಿಸಬೇಕು.
 • ಅಸ್ತಮಾ ಪೀಡಿತ ಮಕ್ಕಳ ಪಾಲಕರ ಜತೆ ನಿರಂತರ ಸಂಪರ್ಕ ಹಾಗೂ ಆರೋಗ್ಯ ಜಾಗೃತಿ ಕುರಿತು ಕಾಲಕಾಲಕ್ಕೆ ಮಾಹಿತಿ ನೀಡಬೇಕು.
 • ಅಸ್ತಮಾ ಪೀಡಿತ ಮಕ್ಕಳ ಪಾಲಕರ ದೂರವಾಣಿ ಸಂಖ್ಯೆ, ಸಮೀಪದ ತಜ್ಞ ವೈದ್ಯರ ದೂರವಾಣಿ ಸಂಖ್ಯೆಯನ್ನು ಸಿಬ್ಬಂದಿ ಇಟ್ಟುಕೊಂಡು ತುರ್ತಪರಿಸ್ಥಿತಿಯಲ್ಲಿ ಸಂವಹನ ಮಾಡಿ ಆರೈಕೆ ಮಾಡಬೇಕು.
 • ಶಾಲಾ ಅವರಣದ ಶುಚಿತ್ವ ಹಾಗೂ ಅಸ್ತಮಾ ಮುಂಜಾಗ್ರತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
 • ಕ್ರೀಡೆ, ಪ್ರವಾಸ ಸೇರಿ ಶಾಲೆಯಿಂದ ಹೊರಹೋಗುವಾಗ ಅಸ್ತಮಾ ಮಕ್ಕಳಿಗೆ ಪೂರಕ ಔಷಧಗಳನ್ನು ಕಾಯ್ದಿರಿಸಿಕೊಳ್ಳಬೇಕು.
 • ಅಸ್ತಮಾಕ್ಕೆ ಸಂಬಂಧಿಸಿದ ಮೆಡಿಸಿನ್ ಹಾಗೂ ಇನ್​ಹೇಲರ್, ನೆಬ್ಯುಲೈಸರ್​ಗಳನ್ನು ತಕ್ಷಣ ಸಿಗುವಂತೆ ನೋಡಿಕೊಳ್ಳಬೇಕು.

ದೇಶದ ಮೊದಲ ಒಳನಾಡು ಬಂದರು ಲೋಕಾರ್ಪಣೆ

4.

ಸುದ್ಧಿಯಲ್ಲಿ ಏಕಿದೆ ?ಗಂಗಾ ನದಿಯಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ ಬಹುಮಾದರಿ ಟರ್ವಿುನಲ್​ನ್ನು (ಒಳನಾಡು ಜಲ ಸಾರಿಗೆ ಬಂದರು) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

 • ವಿಶ್ವಬ್ಯಾಂಕ್ ಸಹಯೋಗದಲ್ಲಿ ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರದ ವತಿಯಿಂದ ನಿರ್ವಣಗೊಳ್ಳುತ್ತಿರುವ ನಾಲ್ಕು ಬಹುಮಾದರಿ ಟರ್ವಿುನಲ್​ಗಳ (ಜಲ ಮಾರ್ಗ ವಿಕಾಸ್ ಯೋಜನೆ) ಪೈಕಿ ಇದು ಮೊದಲನೆಯದು.
 • ಕೇಂದ್ರ ಸರಕಾರದ ಜಲ ಮಾರ್ಗ ವಿಕಾಸ ಯೋಜನೆಯ ಅಡಿಯಲ್ಲಿ ಈ ನ್ಯಾಶನಲ್‌ ವಾಟರ್‌ವೇ-1 ಅನ್ನು ಲೋಕಾರ್ಪಣೆಗೊಳಿಸಲಾಗಿದೆ.
 • ವಾರಾಣಸಿ ಹಾಗೂ ಪಶ್ಚಿಮ ಬಂಗಾಲದ ಹಲ್ದಿಯಾ ಪಟ್ಟಣದ ನಡುವೆ ಗಂಗಾ ನದಿಯಲ್ಲಿ ದೊಡ್ಡ ಹಡಗುಗಳಿಗೆ ಸಂಚರಿಸಲು ಇದರಿಂದ ಸಾಧ್ಯವಾಗಲಿದೆ
 • ಟರ್ವಿುನಲ್ ಉದ್ಘಾಟನೆಯಾದ ಬಳಿಕ ಪೆಪ್ಸಿಕೊ ಕಂಪನಿಯ 16 ಕಂಟೇನರ್​ಗಳನ್ನು ಹೊತ್ತ ಎಂ.ವಿ. ರವಿಂದ್ರನಾಥ ಟ್ಯಾಗೋರ್ ಹೆಸರಿನ ಹಡಗು ಟರ್ವಿುನಲ್​ಗೆ ಬಂದು ಸೇರಿತು. ಅಲಹಾಬಾದ್ ಹತ್ತಿರದ ಫುಲ್ಪುರದಿಂದ ರಸಗೊಬ್ಬರಗಳನ್ನು ಹೊತ್ತ ಹಡಗು ಕೋಲ್ಕತಕ್ಕೆ ಇದೇ ಟರ್ವಿುನಲ್ ಮೂಲಕ ತೆರಳಲಿದೆ.

ಜಲಮಾರ್ಗ ವಿಕಾಸ್ ಯೋಜನೆ

 • 5,369 ಕೋಟಿ ರೂ. ವೆಚ್ಚದಲ್ಲಿ ವಾರಾಣಸಿ, ಸಾಹಿಬ್​ಗಂಜ್, ಹಲ್ದಿಯಾದಲ್ಲಿ ಬಹು ಮಾದರಿ ಟರ್ವಿುನಲ್, ಎರಡು ಅಂತರ್ ಮಾದರಿ ಟರ್ವಿುನಲ್, ಐದು ರೋಲ್ ಆನ್ ರೋಲ್ ಟರ್ವಿುನಲ್ ಜೋಡಿ, ನದಿಯ ಸಾರಿಗೆ ಮಾರ್ಗ ಕುರಿತು ಮಾಹಿತಿ ವ್ಯವಸ್ಥೆಗಳನ್ನು ರೂಪಿಸುವ ಯೋಜನೆ ಇದಾಗಿದೆ. ವಿಶ್ವಬ್ಯಾಂಕ್ ಮತ್ತು ಭಾರತ ಸರ್ಕಾರ ಸಮಪ್ರಮಾಣದಲ್ಲಿ ಯೋಜನೆ ವೆಚ್ಚವನ್ನು ಭರಿಸಲಿವೆ. ವಾರಾಣಸಿಯಲ್ಲಿ ಸರಕು ಸಾಗಣೆ ಗ್ರಾಮ ಕೂಡ ನಿರ್ವಣವಾಗಲಿದ್ದು, ಇದರಿಂದ 2500 ಮಂದಿಗೆ ಉದ್ಯೋಗ ದೊರೆಯಲಿದೆ.

ಅನುಕೂಲಗಳು

 • 1,500ರಿಂದ 2,000 ಟನ್‌ ಭಾರದ ಸರಕುಗಳನ್ನು ಹಡಗುಗಳು ಈ ಜಲ ಮಾರ್ಗದಲ್ಲಿ ಸಾಗಿಸಬಹುದು. ಸರಕು ಸಾಗಣೆಗೆ ಅಗ್ಗದ ಜಲ ಮಾರ್ಗ ಸಾರಿಗೆಯನ್ನು ಬಳಸಲು ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ. ಇದು ಪರಿಸರಸ್ನೇಹಿಯೂ ಆಗಿದೆ.
 • ಈ ಟರ್ಮಿನಲ್‌ನಿಂದ 500 ಮಂದಿಗೆ ಉದ್ಯೋಗ ಸಿಗಲಿದೆ. 2,000 ಮಂದಿಗೆ ಪರೋಕ್ಷ ಉದ್ಯೋಗ ಸಿಗುವ ನಿರೀಕ್ಷೆ ಇದೆ.
 • ದೇಶದ ನಾನಾ ಕಡೆಗಳಲ್ಲಿ ಜಲ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಯೋಜಿಸಿದ್ದು, ಸಾರಿಗೆ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ, ಪ್ರಯೋಜನ ನಿರೀಕ್ಷಿಸಲಾಗಿದೆ. ಯಾಕೆಂದರೆ ಇದು ರಸ್ತೆ ಸಾರಿಗೆಗೆ ಹೋಲಿಸಿದರೆ, ಸರಕು ಸಾಗಣೆಯ ವೆಚ್ಚವನ್ನು ಶೇ.50ರಷ್ಟು ಕಡಿತಗೊಳಿಸಲಿದೆ.
 • ರಸ್ತೆಯ ಮೇಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲೂ ಸಹಕಾರಿ. ಎನ್‌ಟಿಪಿಸಿ, ಮಾರುತಿ ಸುಜುಕಿ, ಟಾಟಾ ಕೆಮಿಕಲ್ಸ್‌, ಫರ್ಟಿಲೈಸರ್‌ ಕಾರ್ಪ್‌ ಇತ್ಯಾದಿ ಕಂಪನಿಗಳಿಗೆ ತಮ್ಮ ಸರಕುಗಳ ಸಾಗಣೆಗೆ ಇದು ಅನುಕೂಲಕರ.

ವಿಶೇಷತೆ ಏನು?

 • ಗಂಗಾ ನದಿಯಲ್ಲಿ ಮೊದಲ ರಾಷ್ಟ್ರೀಯ ಜಲ ಮಾರ್ಗವಿದು
 • ಹಲ್ದಿಯಾದಿಂದ ವಾರಾಣಸಿಯ ತನಕ ಒಟ್ಟು 1,390 ಕಿ.ಮೀ. ಜಲ ಮಾರ್ಗ
 • ಪ್ರಯಾಗ್‌ರಾಜ್‌-ವಾರಾಣಸಿ-ಹಲ್ದಿಯಾದಲ್ಲಿ ಟರ್ಮಿನಲ್‌
 • ಉತ್ತರಪ್ರದೇಶ, ಜಾರ್ಖಂಡ್‌, ಬಿಹಾರ, ಪಶ್ಚಿಮ ಬಂಗಾಳದ ಮೂಲಕ ಹಾದು ಹಾಗುವ ಮಾರ್ಗ
 • ಸರಕು ಸಾಗಣೆಗೆ ಅನುಕೂಲಕರ, ಅಗ್ಗ ಮತ್ತು ಪರಿಸರಸ್ನೇಹಿ
 • ಹಡಗುಗಳ ದುರಸ್ತಿ ಸೇರಿ ಸಮಗ್ರ ನಿರ್ವಹಣೆಗೆ ಟರ್ಮಿನಲ್‌ಗಳಲ್ಲಿ ಸೌಕರ್ಯ.

‘ಶತ್ರುಗಳ ಆಸ್ತಿ’ ಮಾರಾಟ

5.

ಸುದ್ಧಿಯಲ್ಲಿ ಏಕಿದೆ ?ದೇಶ ವಿಭಜನೆಯ ಸಂದರ್ಭದಲ್ಲಿ ಭಾರತ ಬಿಟ್ಟು ತೆರಳಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸೇರಿದ ‘ಶತ್ರುಗಳ ಆಸ್ತಿಗಳ’ ಷೇರುಗಳನ್ನು ಮಾರಾಟ ಮಾಡಲು ಸರಕಾರ ನಿರ್ಧರಿಸಿದೆ. ಶತ್ರುಗಳ ಆಸ್ತಿಯ ಪಾಲಕನಾಗಿ ಸರಕಾರ ಹೊಂದಿರುವ ಷೇರುಗಳನ್ನು ಹೂಡಿಕೆ ಹಿಂತೆಗೆತದ ಭಾಗವಾಗಿ ಮಾರಾಟ ಮಾಡಲು ನಿರ್ಧರಿಸಲಾಗಿದೆ

 • ಪ್ರಚಲಿತ ಮಾರುಕಟ್ಟೆ ಬೆಲೆ ಅನುಸಾರ ಈ ಆಸ್ತಿಗಳ ಒಟ್ಟು ಮೌಲ್ಯ ಅಂದಾಜು 3,000 ಕೋಟಿ ರೂ.ಗಳಷ್ಟಾಗಿದೆ. ಶತ್ರುಗಳ ಆಸ್ತಿ ಎಂಬ ವಿಶೇಷ ವಿಭಾಗವನ್ನು ರದ್ದುಪಡಿಸಲು ಸರಕಾರ ಇತ್ತೀಚೆಗೆ ಹೊಸ ಕಾಯ್ದೆ ರೂಪಿಸಿತ್ತು.
 • ದಶಕಗಳಿಂದ ಉಪಯೋಗವಿಲ್ಲದೆ ಬಿದ್ದಿರುವ ಶತ್ರುಗಳ ಚರಾಸ್ತಿಗಳ ಮಾರಾಟದಿಂದ ಬರುವ ಹಣವನ್ನು ಜನೋಪಯೋಗಿ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ
 • ಇದರಿಂದ ಬಂಡವಾಳ ಹಿಂತೆಗೆತದ ಆದಾಯ ಸ್ವೀಕೃತಿ ಹೆಚ್ಚಲಿದ್ದು, 80,000 ಕೋಟಿ ರೂಗಳ ಗುರಿ ತಲುಪಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಶತ್ರು ಆಸ್ತಿ ಎಂದರೇನು?

 • ಚೀನಾ ವಿರುದ್ಧ 1962 ಮತ್ತು 1965 ಮತ್ತು 1971 ರಲ್ಲಿ ನಡೆದ ಯುದ್ಧದ ನಂತರ, ಪಾಕಿಸ್ತಾನಿ ಮತ್ತು ಚೀನೀ ರಾಷ್ಟ್ರೀಯತೆಯನ್ನು ಪಡೆದ ವ್ಯಕ್ತಿಗಳ ಆಸ್ತಿಗಳು ಮತ್ತು ಕಂಪನಿಗಳನ್ನು ಸರಕಾರ ವಹಿಸಿಕೊಂಡಿದೆ.
 • ಕೇಂದ್ರವು ಈ ಆಸ್ತಿಗಳನ್ನು “ಶತ್ರು ಆಸ್ತಿ ” ಎಂದು ಗೊತ್ತುಪಡಿಸಿತು.
 • ನಂತರ ಶತ್ರು ಆಸ್ತಿಯ ಕಾಯಿದೆ, 1968 ರ ‘ಕಸ್ಟೋಡಿಯನ್’ ನಲ್ಲಿ ಅಂತಹ ಎಲ್ಲ ಸ್ಥಿರ ಮತ್ತು ಚಲಿಸಬಲ್ಲ ಆಸ್ತಿಗಳನ್ನು ಅನಾವರಣಗೊಳಿಸಲಾಯಿತು.
 • ಇಂತಹ ಹೆಚ್ಚಿನ ಆಸ್ತಿಗಳು ಉತ್ತರ ಪ್ರದೇಶದಲ್ಲಿವೆ.

ವಿಶ್ವದ ಬೃಹತ್ ಸೂಪರ್ ಕಂಪ್ಯೂಟರ್!

6.

ಸುದ್ಧಿಯಲ್ಲಿ ಏಕಿದೆ ?ಕ್ಷಣಾರ್ಧದಲ್ಲಿ ಕೋಟ್ಯಂತರ ಕೆಲಸ ಮಾಡುವ ಹಾಗೂ ಮಾನವನ ಮಿದುಳಿನ ರೀತಿಯಲ್ಲಿ ಪಾದರಸದಂತೆ ಕ್ರಿಯಾಶೀಲವಾಗಿರುವ ಸೂಪರ್ ಕಂಪ್ಯೂಟರ್ ಬ್ರಿಟನ್​ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಕಾರ್ಯಾರಂಭ ಮಾಡಿದೆ.

 • ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಶಾಲೆಯ ಅಡ್ವಾನ್ಸಡ್ ಪ್ರೊಸೆಸರ್ ಟೆಕ್ನಾಲಜೀಸ್ ರಿಸರ್ಚ್ ಗ್ರೂಪ್ (ಎಪಿಟಿ) ಈ ಸೂಪರ್ ಕಂಪ್ಯೂಟರನ್ನು ಆವಿಷ್ಕರಿಸಿದೆ. ಈ ದೈತ್ಯ ಕಂಪ್ಯೂಟರ್ ಹೊಂದಿರುವಷ್ಟು ತಾಂತ್ರಿಕ ಕೋಶಗಳನ್ನು ಇಡೀ ವಿಶ್ವದಲ್ಲೇ ಬೇರ್ಯಾವುದೇ ಕಂಪ್ಯೂಟರ್ ಹೊಂದಿಲ್ಲ. ಈ ಕೋಶಗಳು ಜೈವಿಕ ನರಕೋಶದಷ್ಟೆ (ಮಿದುಳಿನ ಮೂಲ ನರಕೋಶ) ಸಶಕ್ತವಾಗಿವೆ.
 • ಮಾನವನ ಮಿದುಳಿನಲ್ಲಿ ಏಕಕಾಲಕ್ಕೆ ಅನೇಕ ಚಿಂತನೆಗಳು ನಡೆಯುತ್ತಿರುತ್ತವೆ. ಆಯಾ ಕ್ಷಣಕ್ಕೆ ತಕ್ಕಂತೆ ಚಿಂತನ-ಮಂಥನ ನಡೆಯುತ್ತಿರುತ್ತದೆ. ಇದೇ ಮಾದರಿಯಲ್ಲಿ ಕೋಟ್ಯಂತರ ಕಾರ್ಯವನ್ನು ಒಂದೇ ಕಂಪ್ಯೂಟರ್​ನಲ್ಲಿ ಕ್ಷಣಮಾತ್ರದಲ್ಲಿ ಮಾಡುವಂತಾಗಬೇಕು ಎಂಬ ಉದ್ದೇಶದಿಂದ ಈ ಸೂಪರ್ ಕಂಪ್ಯೂಟರ್ ಆವಿಷ್ಕರಿಸಲಾಗಿದೆ.

ಕಂಪ್ಯೂಟರ್ ಮಸ್ತಿಷ್ಕ!

 • ಇಲಿ ಮಿದುಳಿನಲ್ಲಿ ಒಂದು ಕೋಟಿ ನರಗಳಿರುತ್ತವೆ. ಇದಕ್ಕಿಂತ ಸಾವಿರ ಪಟ್ಟು ಹೆಚ್ಚು ನರಗಳು ಮಾನವನ ಮಿದುಳಿನಲ್ಲಿರುತ್ತವೆ. ಇದೇ ಮಾದರಿಯಲ್ಲಿ ಈ ಸೂಪರ್ ಕಂಪ್ಯೂಟರ್ ಮಸ್ತಿಷ್ಕವನ್ನು ಸಿದ್ಧಪಡಿಸಲಾಗಿದೆ.

ವಿಶೇಷ ಏನು?

 • ಸೂಪರ್ ಕಂಪ್ಯೂಟರ್ ದಶಲಕ್ಷ ಪ್ರೊಸೆಸರ್ ಹೊಂದಿದ್ದು, ಸ್ಪೈಕಿಂಗ್ ನ್ಯೂರಾಲ್ ನೆಟ್​ವರ್ಕ್ ಅರ್ಕಿಟೆಕ್ಚರ್ (ಸ್ಪಿನ್ನೆಕರ್) ಅತ್ಯಾಧುನಿಕ ತಂತ್ರಾಂಶ (ಕೋಟಿಗಟ್ಟಲೆ ಕಂಪ್ಯೂಟರ್ ವಿನ್ಯಾಸಕ್ಕೆ ಸಮ)ದಿಂದ ಅದ್ವಿತೀಯವಾಗಿ ಕಾರ್ಯನಿರ್ವಹಿಸುತ್ತದೆ. 20 ದಶಲಕ್ಷ ಕೋಟಿ ಕ್ರಿಯೆಯನ್ನು ಒಂದು ಸೆಕೆಂಡ್​ನಲ್ಲಿ ಮಾಡುತ್ತದೆ. ಇದರ ಒಂದು ಚಿಪ್​ನಲ್ಲೆ ಒಂದು ಕೋಟಿ ಟ್ರಾನ್​ಸಿಸ್ಟರ್ ಇದೆ! ಈ ಸೂಪರ್ ಕಂಪ್ಯೂಟರ್ ಅಭಿವೃದ್ಧಿಗೆ 50 ಕೋಟಿ ಪೌಂಡ್ (-ಠಿ; 141 ಕೋಟಿ) ವೆಚ್ಚವಾಗಿದೆ.

ಸ್ಪಿನ್ನೆಕರ್ ವೈಶಿಷ್ಟ್ಯ

 • ಸೂಪರ್ ಕಂಪ್ಯೂಟರ್​ನಲ್ಲಿರುವ ‘ಸ್ಪಿನ್ನೆಕರ್’ ತಂತ್ರಾಂಶ ವೈಶಿಷ್ಟ್ಯ ಪೂರ್ಣವಾಗಿದೆ. ಮಾನವನ ಮಿದುಳಿನಂತೆ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ, ಸೂಪರ್ ಕಂಪ್ಯೂಟರ್ ಸಾಂಪ್ರದಾಯಿಕ ಕಂಪ್ಯೂಟರ್​ಗಳಂತೆ ಮಾಹಿತಿಯನ್ನು ಒಂದು ತುದಿಯಿಂದ ಇನ್ನೊಂದು ತುದಿಗೆ ಸಂವಹನ ಮಾಡುವುದಿಲ್ಲ.
 • ಕೋಟ್ಯಾನುಗಟ್ಟಲೆ ಸಣ್ಣ ಸಣ್ಣ ಮಾಹಿತಿಯನ್ನು ಏಕಕಾಲಕ್ಕೆ ಸಾವಿರಾರು ಗುರಿಗಳಿಗೆ ತಲುಪಿಸುತ್ತದೆ. ರೋಬಾಟ್​ಗಳನ್ನು ನಿಯಂತ್ರಿಸಲು ‘ಸ್ಪಿನ್ನೆಕರ್’ ಗಳನ್ನು ಬಳಸಲಾಗಿದೆ. ಇದರಿಂದ ರೋಬಾಟ್​ಗಳು ವಾಸ್ತವದ ಘಟನೆಗಳಿಗೆ ಪ್ರತಿಸ್ಪಂದಿಸುತ್ತವೆ.

ಅನುಕೂಲವೇನು?

 • ವಾಸ್ತವದ ನೆಲೆಗಟ್ಟಿನಲ್ಲಿ ಏಕಕಾಲಕ್ಕೆ ಅಪರಿಮಿತ ಕಾರ್ಯನಿರ್ವಹಣೆ ಮಾಡುವ ಸೂಪರ್ ಕಂಪ್ಯೂಟರ್​ನಂತಹ ಯಂತ್ರ ಇನ್ನೊಂದು ಇಲ್ಲವಾದ ಕಾರಣ ಇದು ನರ ವಿಜ್ಞಾನಿಗಳಿಗೆ ಅತ್ಯುಪಕಾರಿ. ಉದಾಹರಣೆಗೆ ಮಿದುಳಿನಲ್ಲಿ ಕ್ರಿಯಶೀಲವಾಗಿರದ ನರಗಳನ್ನು ದ್ದೇಪಿಸಲು ‘ಸ್ಪಿನ್ನೆಕರ್’ಗಳನ್ನು ಬಳಸಬಹುದು. ಮಿದುಳಿನಲ್ಲಿರುವ ‘ಬಾಸಲ್ ಗ್ಯಾಂಗ್ಲಿಯಾ’ವನ್ನು (ರ್ಪಾನ್ಸನ್ ಕಾಯಿಲೆ ಪೀಡಿತವಾಗುವ ಭಾಗ) ಉದ್ದೀಪಿಸಬಹುದು
Related Posts
“25 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
2025ರ ವೇಳಗೆ ಭಾರತ ಕ್ಷಯರೋಗ ಮುಕ್ತ ಸುದ್ಧಿಯಲ್ಲಿ ಏಕಿದೆ ?2025ರ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಿಶ್ವದಲ್ಲಿ ...
READ MORE
30th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಆಸ್ತಿ ಮಾಹಿತಿ ಒದಗಿಸುವ ‘ದಿಶಾಂಕ್‌’ ಆ್ಯಪ್‌ ಯಾವುದಾದರೂ ಆಸ್ತಿಯ ನಿಖರವಾದ ಸರ್ವೆ ನಂಬರ್‌ ಹುಡುಕಬೇಕೇ? ಅದು ಕೆರೆಯ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿದೆಯೇ, ಆ ಜಾಗ ಸರ್ಕಾರಕ್ಕೇ ಸೇರಿದ್ದೇ,  ಗೋಮಾಳವೇ, ಅದು ಒತ್ತುವರಿ ಜಾಗವೇ ಎಂಬ ವಿವರಗಳನ್ನು ತಿಳಿದುಕೊಳ್ಳಲು ಕಂದಾಯ ಇಲಾಖೆ ಪರಿಚಯಿಸಿರುವ ‘ದಿಶಾಂಕ್‌’ ...
READ MORE
DOWNLOAD NOVEMBER 2018 CURRENT AFFAIRS MAGAZINE
DEAR Aspirants, NammaKPSC has released November 2018 Mahithi Monthly Current affairs magazine. This magazine is in both Kannada and English version. This is the Best Current affairs Magazine for all civil services ...
READ MORE
2010-11ನೇ ಸಾಲಿನಿಂದ ಕೇಂದ್ರ ಸರ್ಕಾರದ ಯೋಜನೆ ಇಂದಿರಾಗಾಂದಿ ಮಾತೃತ್ವ ಸಹಯೋಗ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದಲ್ಲಿ  2 ಜಿಲ್ಲೆಗಳಾದ ಕೋಲಾರ ಹಾಗೂ ಧಾರವಾಡದಲ್ಲಿ  ಜಾರಿಗೊಳಿಸಲಾಗುತ್ತಿದೆ. ಇದರಡಿ ಗಬಿಣಿಯರಿಗೆ ಹಾಗೂ ಹಾಲುಣಿಸುವ ಮಹಿಳೆಯರಿಗೆ ,ಪೌಷ್ಠಿಕತೆ ಕುರಿತು ಶಿಕ್ಷಣ, ಆರೋಗ್ಯ ಸಲಹೆ  ಪದ್ಧತಿಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು. ...
READ MORE
Research undertaken by has revealed that feral fish are causing the decline of presence of other species of Major Indian Carps, Minor Indian Carps and Catfish in river Krishna damaging ...
READ MORE
Interview Manual for IAS and KAS exams- download now
Dear Aspirants, Are you ready for the last leg of your preparations? NammaKPSC is here for the rescue. Presenting you the Interview manual book. This book is a comprehensive manual for all civil services ...
READ MORE
Anthropocene era
Anthropocene era set in The results, found in a new research. are published in the journal Earth’s Future in London The impact that human beings have made on the Earth in terms of production ...
READ MORE
India signs MoU with Republic of Korea - bilateral air service cooperation India has signed  a Memorandum of Understanding with South Korea or Republic of Korea (RoK) after negotiations to enhance bilateral ...
READ MORE
Introduction ∗ Waste-to-energy (WtE) or energy-from-waste (EfW) is the process of creating energy in the form of electricity orheat from the incineration of waste source. WtE is a form of energy ...
READ MORE
Pattern of exam The Examination will consist of two successive stages: (i) Preliminary Examination (Objective type) for the selection of candidates for the Main Examination (ii) Main Examination (Written and Interview) for the ...
READ MORE
“25 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
30th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
DOWNLOAD NOVEMBER 2018 CURRENT AFFAIRS MAGAZINE
ಇಂದಿರಾಗಾಂದಿ ಮಾತೃತ್ವ ಸಹಯೋಗ ಯೋಜನೆ
Biodiversity of fish threatened in krishna
Interview Manual for IAS and KAS exams- download
Anthropocene era
India- South Korea
WASTE TO ENERGY
KPSC EXAM 2017

Leave a Reply

Your email address will not be published. Required fields are marked *