” 14 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಬೆಳಗಾವಿ-ಯರಗಟ್ಟಿ ರಸ್ತೆ

1.

ಸುದ್ಧಿಯಲ್ಲಿ ಏಕಿದೆ ?ಮೇಲ್ದರ್ಜೆಗೇರಿರುವ ಇಲ್ಲಿನ ಬೆಳಗಾವಿ-ಯರಗಟ್ಟಿ ನಡುವಿನ ರಸ್ತೆ, ಅಪಘಾತ ನಿಯಂತ್ರಿಸುವ ದೇಶದ ಮೊದಲ ಮಾದರಿ ರಸ್ತೆಯಾಗಿ ನಿರ್ಮಾಣಗೊಂಡಿದೆ. ಇದಕ್ಕೆ ಅತ್ಯಧಿಕ ರಾರ‍ಯಂಕ್‌ ನೀಡಿರುವ ವಿಶ್ವಬ್ಯಾಂಕ್‌, ಈ ಮಾದರಿ ರಸ್ತೆಯನ್ನು ಅನುಸರಿಸುವಂತೆ ಇತರ ರಾಜ್ಯಗಳಿಗೂ ಸೂಚನೆ ನೀಡಿದೆ.

 • ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿಯಿಂದ ಆರಂಭಗೊಂಡು ಯರಗಟ್ಟಿವರೆಗಿನ 62 ಕಿ.ಮೀ. ವ್ಯಾಪ್ತಿಯ ಈ ರಸ್ತೆ ಈಗ ದೇಶದ ಎಸ್‌ಸಿಡಿಪಿ (ಸ್ಪೆಷಲ್‌ ಕ್ಯಾರಿಯರ್‌ ಡೆಮಾನ್‌ಸ್ಪ್ರೇಶನ್‌ ಪ್ರೋಗ್ರಾಂ) ಮಾದರಿ ರಸ್ತೆ ಎಂದು ಗುರುತಿಸಿಕೊಂಡಿದೆ. 2016ರಲ್ಲಿ ರಸ್ತೆ ಕಾಮಗಾರಿ ಆರಂಭಿಸಿದ್ದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್‌) ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಿ 2018ರ ಜುಲೈನಲ್ಲಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿತ್ತು.

ಏನಿದು ಎಸ್‌ಸಿಡಿಪಿ ಮಾದರಿ ರಸ್ತೆ?:

 • ರಸ್ತೆ ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ರೂಪಿಸಿದ ಯೋಜನೆಯೇ ಎಸ್‌ಸಿಡಿಪಿ.
 • ಬೆಳಗಾವಿ-ಯರಗಟ್ಟಿ ಘಾಟ್‌ ರಸ್ತೆಯಲ್ಲಿ 45 ಕೂಡು ರಸ್ತೆ (ಜಂಕ್ಷನ್‌)ಗಳಿವೆ. ಇದೇ ಕಾರಣದಿಂದ ಈ ರಸ್ತೆಯಲ್ಲಿ ಹೆಚ್ಚು ಅಪಘಾತ ಸಂಭವಿಸಿ ಸಾವು-ನೋವುಗಳ ಸಂಖ್ಯೆ ಅಧಿಕವಾಗಿತ್ತು. ಅಪಘಾತ ರಹಿತ ಮಾದರಿ ರಸ್ತೆ ನಿರ್ಮಿಸುವ ಉದ್ದೇಶದಿಂದ ವಿಶ್ವ ಬ್ಯಾಂಕ್‌ ಮತ್ತು ಕೆಶಿಪ್‌ ಈ ರಸ್ತೆಯನ್ನು ಆಯ್ಕೆ ಮಾಡಿಕೊಂಡಿದ್ದವು.

ವಿಶೇಷತೆ ಏನು ?

 • ಒಟ್ಟು 29 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಮೇಲ್ದರ್ಜೆಗೇರಿಸಲಾಗಿದ್ದು, ಎಲ್ಲ 45 ಜಂಕ್ಷನ್‌ಗಳನ್ನು ಚಾಲಕ ಸ್ನೇಹಿಯನ್ನಾಗಿಸಲಾಗಿದೆ. ಅತಿ ಹೆಚ್ಚು ಅಪಘಾತ ಸಂಭವಿಸುತ್ತಿದ್ದ ‘ವೈ’ ಜಂಕ್ಷನ್‌ಗಳನ್ನು ‘ಟಿ’ ಜಂಕ್ಷನ್‌ಗಳನ್ನಾಗಿಸಲಾಗಿದೆ.
 • 12 ಕಡೆ ಟ್ರಾಫಿಕ್‌ ಸಿಗ್ನಲ್‌ ಜತೆಗೆ ಅತ್ಯಾಧುನಿಕ ಮಾದರಿ ಕ್ಯಾಮರಾ ಕೂಡ ಅಳವಡಿಸಲಾಗಿದೆ.
 • ವಾಹನ ಸವಾರರಿಗೆ ಭಾರಿ ಕಿರಿಕಿರಿ ಉಂಟು ಮಾಡಿ ಕೆಲ ಸಂದರ್ಭಗಳಲ್ಲಿ ಅಪಘಾತಗಳಿಗೂ ಕಾರಣವಾಗುತ್ತಿದ್ದ ಅವೈಜ್ಞಾನಿಕ 36 ರಸ್ತೆ ತಡೆಗಳನ್ನು (ಹಂಫ್ಸ್‌) ತೆರವುಗೊಳಿಸಿ ವೈಜ್ಞಾನಿಕವಾಗಿ ಅಳವಡಿಸಲಾಗಿದೆ.
 • ಟ್ರಕ್‌, ಬಸ್‌ ಬೇ: ಲಾಂಗ್‌ ರೂಟ್‌ ವಾಹನ ಸವಾರರ ಅನುಕೂಲಕ್ಕಾಗಿ ಟ್ರಕ್‌ ಮತ್ತು ಬಸ್‌ ಬೇಗಳನ್ನು ರಚಿಸಲಾಗಿದೆ. ರಸ್ತೆಯುದ್ದಕ್ಕೂ ಪಾದಚಾರಿ ಮತ್ತು ಜಾನುವಾರುಗಳು ರಸ್ತೆಗೆ ನುಸಳದಂತೆ ಗ್ರಿಲ್‌ ಅಳವಡಿಸಲಾಗಿದೆ. ಹಳೇ 15 ಬಸ್‌ ತಂಗುದಾಣ ಅಭಿವೃದ್ಧಿ ಜತೆಗೆ ಹೊಸದಾಗಿ 16 ತಂಗುದಾಣ ನಿರ್ಮಿಸಿ ಪ್ರಯಾಣಿಕರ ರಕ್ಷಣೆಗೆ ಒತ್ತು ನೀಡಲಾಗಿದೆ. ಜಂಕ್ಷನ್‌ಗಳಲ್ಲಿ ವಿದ್ಯುತ್‌ ದೀಪ ಹೆಚ್ಚಿಸಿ ಅಪಘಾತಗಳನ್ನು ತಗ್ಗಿಸುವ ಪ್ರಯತ್ನ ಮಾಡಲಾಗಿದೆ. ಇಷ್ಟಾಗಿಯೂ ಸಂಚಾರ ನಿಯಮ ಉಲ್ಲಂಘನೆ ತಡೆಗಟ್ಟಲು ಎಸ್‌ಸಿಡಿಪಿ ಯೋಜನೆಯಲ್ಲಿಯೇ ಎರಡು ‘ಇಂಟರ್‌ಸೆಪ್ಟರ್‌’ ವಾಹನಗಳನ್ನೂ ಒದಗಿಸಲಾಗಿದೆ.

ಅಪಘಾತ ಸಂಖ್ಯೆ ಇಳಿಕೆ :

 • ಬೆಳಗಾವಿ-ಯರಗಟ್ಟಿ ನಡುವಿನ ರಸ್ತೆ ವ್ಯಾಪ್ತಿಯಲ್ಲಿನ ಪೊಲೀಸ್‌ ಠಾಣೆಗಳ ದಾಖಲೆ ಪ್ರಕಾರ, 2016ರಲ್ಲಿ 162 ರಸ್ತೆ ಅಪಘಾತಗಳು ಸಂಭವಿಸಿ 49 ಪ್ರಯಾಣಿಕರು ಮೃತಪಟ್ಟಿದ್ದರು. 2017ರಲ್ಲಿ ಅಪಘಾತಗಳ ಸಂಖ್ಯೆ 107ಕ್ಕೆ ಇಳಿದಿದ್ದು, 20 ಜನರು ಸಾವಿಗೀಡಾಗಿದ್ದರು. ಈಗ ರಸ್ತೆ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡಿದ್ದರಿಂದ ಅಪಘಾತಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಕೆಶಿಪ್‌ ಅಧಿಕಾರಿಗಳು.

ರಾಜ್ಯ ಕ್ಷಯ ವೇದಿಕೆ ರಚನೆ

2.

ಸುದ್ಧಿಯಲ್ಲಿ ಏಕಿದೆ ? ಕ್ಷಯ ರೋಗ ನಿಯಂತ್ರಣಕ್ಕಾಗಿ ಕೇಂದ್ರದ ಸೂಚನೆ ಮೇರೆಗೆ ಕರ್ನಾಟಕದಲ್ಲಿ ‘ರಾಜ್ಯ ಕ್ಷಯ ವೇದಿಕೆ’ ರಚಿಸಿದೆ.

 • ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರಚಿಸಿರುವ ರಾಜ್ಯ ಕ್ಷಯ ವೇದಿಕೆ ಕಾರ್ಯನಿರ್ವಹಿಸಲಿದೆ.

ರಾಜ್ಯ ಕ್ಷಯ ವೇದಿಕೆಯ ಕಾರ್ಯಗಳೇನು ?

 • ಕ್ಷಯ ರೋಗಿಗಳಿಗೆ ಸರಕಾರಿ ಸೌಲಭ್ಯ ತಲುಪಿಸುವುದು, ಕಾರ್ಯನೀತಿ ರಚನೆ, ಚಿಕಿತ್ಸೆ ಬಗ್ಗೆ ತಿಳುವಳಿಕೆ, ಸ್ನೇಹಯುತವಾದ ಕಾನೂನು ಹಾಗೂ ನೀತಿ ಅನುಷ್ಠಾನ, ರೋಗಿಗಳ ಕುಟುಂಬಕ್ಕೆ ಅಂಟಿರುವ ಕಳಂಕ ದೂರ ಮಾಡುವುದು, ಸರಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿ ಮಾಡುವ ಹೊಣೆಯನ್ನು ವೇದಿಕೆಗೆ ವಹಿಸಲಾಗಿದೆ.

ರಾಜ್ಯ ಕ್ಷಯ ವೇದಿಕೆಯ ಸದಸ್ಯರು

 • ರಾಜ್ಯ ಮಟ್ಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ವೇದಿಕೆಯ ಅಧ್ಯಕ್ಷರು, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಸಹ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
 • ವೈದ್ಯಕೀಯ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ನಿರ್ದೇಶಕ, ರಾಷ್ಟ್ರೀಯ ಕ್ಷಯ ರೋಗ ಸಂಸ್ಥೆ ನಿರ್ದೇಶಕ, ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣಾ ಸಂಸ್ಥೆ ಯೋಜನಾ ನಿರ್ದೇಶಕ, ರಾಜ್ಯ ಔಷಧ ನಿಯಂತ್ರಕರು, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ, ಕಿಮ್ಸ್‌ ಪಲ್‌ಮನೊಜಿ ವಿಭಾಗದ ಮುಖ್ಯಸ್ಥರು ಸೇರಿದಂತೆ 31 ಇಲಾಖೆ ಹಾಗೂ ಸಂಸ್ಥೆಗಳ ಪ್ರತಿನಿಧಿಗಳು ವೇದಿಕೆಯ ಸದಸ್ಯರಾಗಿರುತ್ತಾರೆ.

ಕ್ಷಯರೋಗ (ಟಿಬಿ)

 • ಟಿಬಿಯು ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗ “ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್” ಇದು ಹೆಚ್ಚಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಗಾಳಿಯ ಮೂಲಕ  ಹರಡುತ್ತದೆ. ಇದು ಸಾಮಾನ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಆದರೆ ದೇಹದ ಇತರ ಭಾಗಗಳ ಮೇಲೆಯೂ  ಪರಿಣಾಮ ಬೀರಬಹುದು.
 • HIV / AIDS ರೋಗದ ನಂತರ  ವಿಶ್ವದಾದ್ಯಂತ ಇದು ಎರಡನೇ ಅತಿದೊಡ್ಡ ಕೊಲೆಗಾರ ರೋಗವಾಗಿದೆ. ಜಾಗತಿಕ ಮಟ್ಟದ ಟಿಬಿ ರೋಗದಲ್ಲಿ ಭಾರತವು ಕಾಲುಭಾಗಕ್ಕಿಂತ  ಹೆಚ್ಚಿನ ಪಾಲನ್ನು ಹೊಂದಿದೆ.
 • ವಿಶ್ವದಾದ್ಯಂತ ಭಾರತವು ಟಿಬಿ ಮತ್ತು ಎಮ್ಡಿಆರ್ (ಮಲ್ಟಿ-ಡ್ರಗ್ ರೆಸಿಸ್ಟೆಂಟ್) ಟಿಬಿಗಳ ಅತಿ ಹೆಚ್ಚಿನ ಹೊರೆ ಹೊಂದಿರುವ ದೇಶವಾಗಿದೆ. ಇದು ಪ್ರಪಂಚದ ಟಿಬಿ ಪ್ರಕರಣಗಳಲ್ಲಿ 27% ನಷ್ಟಿದೆ, ಪ್ರತಿ ವರ್ಷ 421,000 ಸಾವುಗಳು ಸಂಭವಿಸುತ್ತದೆ, ಅಂದರೆ ಪ್ರತಿ ನಿಮಿಷಕ್ಕೆ ಟಿಬಿಗೆ ಸಂಬಂಧಿಸಿದ ಒಂದು ಸಾವು ಸಂಭವಿಸುತ್ತದೆ.
 • ಮಾರ್ಚ್ 2017 ರ ಪ್ರಕಾರ, 2025 ರ ಹೊತ್ತಿಗೆ ಭಾರತದಲ್ಲಿ ಟಿಬಿಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ

ಸೂರ್ಯ ಕಿರಣಕ್ಕೆ ಕರಗುವ ಪ್ಲಾಸ್ಟಿಕ್‌!

3.

ಸುದ್ಧಿಯಲ್ಲಿ ಏಕಿದೆ ?ಅಭಿವೃದ್ಧಿಶೀಲ ರಾಷ್ಟ್ರಗಳ ಬಹುದೊಡ್ಡ ಸಮಸ್ಯೆಯಾಗಿರುವ ಪ್ಲಾಸ್ಟಿಕ್‌ ತ್ಯಾಜ್ಯ ನಿವಾರಣೆಗೆ ರಕ್ಷಣಾ ಆಹಾರ ತಂತ್ರಜ್ಞಾನ ಪ್ರಯೋಗಾಲಯ (ಸಿಎಫ್‌ಟಿಆರ್‌ಐ) ನೂತನ ತಂತ್ರಜ್ಞಾನ ಆವಿಷ್ಕರಿಸಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಸಂಶೋಧನೆಯ ಮಹತ್ವ

 • ನೂರಾರು ವರ್ಷಗಳ ಬಳಿಕವೂ ಮಣ್ಣಲ್ಲಿ ಕರಗದೆ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ಪಿಡುಗು ನಿವಾರಣೆ ನಿಟ್ಟಿನಲ್ಲಿ ಈ ಸಂಶೋಧನೆ ಆಶಾದಾಯಕ ಬೆಳವಣಿಗೆಯಾಗಿದೆ.
 • ವಿಶ್ವದಲ್ಲಿ ಪ್ರತಿವರ್ಷ ಲಕ್ಷಾಂತರ ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ. ವಿಶ್ವ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಕೂಡ ಒಂದಾಗಿದ್ದು, ಹಲವು ದೇಶಗಳು ತೆಳು ಪ್ಲಾಸ್ಟಿಕ್‌ ಚೀಲಗಳ ಮೇಲೆ ನಿಷೇಧ ಹೇರಿವೆ. ಆದರೂ ಇದರ ನಿಯಂತ್ರಣ ಸಾಧ್ಯವಾಗದೆ ಪ್ಲಾಸ್ಟಿಕ್‌ ಭೂಮಿಯ ಒಡಲನ್ನು ವಿಷಮಯಗೊಳಿಸುತ್ತಿದೆ.
 • ಇಲ್ಲಿಯ ಸಿಎಫ್‌ಟಿಆರ್‌ಐನಲ್ಲಿ ನಡೆಯುತ್ತಿರುವ 8ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನ ಇಫ್ಕಾನ್‌-2018′ರಲ್ಲಿ ಡಿಎಫ್‌ಆರ್‌ಎಲ್‌ನ ತಂತ್ರಜ್ಞರು ನೀಡುತ್ತಿರುವ ಈ ನೂತನ ಆವಿಷ್ಕಾರದ ಮಾಹಿತಿ ಪ್ರಮುಖ ಆಕರ್ಷಣೆಯಾಗಿದೆ.

ಬೆಳಕಿಗೆ ಕರಗುತ್ತದೆ!

 • ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್‌ ಚೀಲ, ಪೊಟ್ಟಣಗಳು ಸಾಮಾನ್ಯವಾಗಿ ಹದಿನೈದು ದಿನಗಳಾದರೂ ಭೂಮಿಯಲ್ಲಿ ಕರಗುವುದಿಲ್ಲ. ಆದರೆ, ಈ ತಂತ್ರಜ್ಞಾನದಲ್ಲಿ ತಯಾರಾಗುವ ಪ್ಲಾಸ್ಟಿಕ್‌ ಕೆಲವೇ ದಿನಗಳಲ್ಲಿ ಕರಗುತ್ತವೆ. ಇವುಗಳ ಮೇಲೆ ಸೂರ್ಯನ ಕಿರಣ ಬೀಳುತ್ತಿದ್ದಂತೆ ಪುಡಿಯಾಗುತ್ತದೆ. ನಂತರ ಅದು ಮಣ್ಣಿನಲ್ಲಿ ಮಾಯವಾಗುತ್ತವೆ. ಇವುಗಳನ್ನು ಕರಗಿಸುವ ಬ್ಯಾಕ್ಟೀರಿಯಗಳನ್ನು ಪ್ಲಾಸ್ಟಿಕ್‌ ಆಕರ್ಷಿಸಲಿದೆ. ಇದು ಅಪಾಯಕಾರಿಯಾಗದೆ ಮಣ್ಣಿಗೆ ಪೂರಕವಾಗಿರಲಿದೆ. ಇದು ಕನಿಷ್ಠ 5 ದಿನಗಳಿಂದ 100 ದಿನಗಳ ತನಕ ಬಳಸಬಹುದಾದಂತಹ ತಂತ್ರಜ್ಞಾನ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಸೇನೆಗಾಗಿ ಆವಿಷ್ಕಾರ

 • ಸೇನಾ ಯೋಧರು ಆಹಾರ ಪದಾರ್ಥ ಹಾಗೂ ಇತರ ಸಾಮಗ್ರಿಗಳನ್ನು ಬಳಸುವ ಸಂದರ್ಭ ಪ್ಲಾಸ್ಟಿಕ್‌ ಚೀಲ ಹಾಗೂ ಪೊಟ್ಟಣ ಬಳಸುತ್ತಾರೆ. ಮರುಭೂಮಿ, ಗಡಿ ಹಾಗೂ ಹಿಮಪರ್ವತಗಳಲ್ಲಿ ಎಸೆದ ಪ್ಲಾಸ್ಟಿಕ್‌ಗಳು ಅಪಾಯಕಾರಿಯಾಗಿರುತ್ತವೆ. ಅಲ್ಲದೆ, ಅವುಗಳು ಶತ್ರುಗಳಿಗೆ ಇರುವಿಕೆಯ ಸುಳಿವನ್ನು ಕೂಡ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರು ಎಸೆಯುವ ಪ್ಲಾಸ್ಟಿಕ್‌ಗಳನ್ನು ಕರಗಿಸಲು ಸಂಶೋಧನೆ ಮಾಡಲಾಗಿದ್ದು, ಇದು ವಿಶ್ವದಲ್ಲಿಯೇ ಅತ್ಯಂತ ಉಪಯುಕ್ತ ಆವಿಷ್ಕಾರವಾಗುವ ಸಾಧ್ಯತೆ ಇದೆ.

ತಮಿಳುನಾಡು ಆಸಕ್ತಿ

 • ಪ್ಲಾಸ್ಟಿಕ್‌ ಮಣ್ಣಿಗೆ ಬಿದ್ದೊಡನೆ ಸೂರ್ಯನ ಕಿರಣ ತಾಗಿ ಕರಗುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ತಮಿಳುನಾಡು ಮುಂದೆ ಬಂದಿದ್ದು, ಡಿಎಫ್‌ಆರ್‌ಎಲ್‌ನೊಂದಿಗೆ ಸಂಪರ್ಕದಲ್ಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಕಾರವಾರ ಬಳಿ ಹವಳ ದ್ವೀಪ ಪತ್ತೆ

4.

ಸುದ್ಧಿಯಲ್ಲಿ ಏಕಿದೆ ?ಅರಬ್ಬೀ ಸಮುದ್ರದ ಲೈಟ್‌ ಹೌಸ್‌ ಬಳಿ ದಶಕಗಳ ಹಿಂದೆ ಮುಳುಗಡೆಯಾಗಿದ್ದ ಹಡಗಿನ ಅವಶೇಷಗಳ ಮೇಲೆ ಹವಳದ ದಿಬ್ಬ ಬೆಳೆದಿರುವುದು ಬೆಳಕಿಗೆ ಬಂದಿದೆ. ಸಾಹಸ ಕೈಗೊಳ್ಳಲು ಸಮುದ್ರಕ್ಕಿಳಿದ ಸ್ಕೂಬಾ ಡೈವರ್‌ಗಳಿಗೆ ಹವಳ ದ್ವೀಪ ಕಂಡುಬಂದಿವೆ.

ಓಶಿಯನ್ ಸೆರೆಯಾ ಅವಶೇಷ..?

 • 2006ರ ಮೇ 30ರಂದು ಕಾರವಾರ ಬೈತಖೋಲ ವಾಣಿಜ್ಯ ಬಂದರಿಗೆ ಆಗಮಿಸುತ್ತಿದ್ದ ಸಿಂಗಾಪುರ ಮೂಲದ ಎಂವಿ ಓಶಿಯನ್ ಸೆರೆಯಾ ಎಂಬ ಹಡಗು ಲೈಟ್ ಹೌಸ್ ಬಳಿ ಕಲ್ಲಿಗೆ ಅಪ್ಪಳಿಸಿ ಇಬ್ಭಾಗವಾಗಿತ್ತು.
 • ಹಡಗಿನಲ್ಲಿದ್ದ 22 ಸಿಬ್ಬಂದಿ ಪೈಕಿ 21 ಜನರನ್ನು ರಕ್ಷಿಸಲಾಗಿತ್ತು.
 • ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ಸ್‌ ಸಂಸ್ಥೆಯ ಸ್ಕೂಬಾ ಡೈವರ್‌ಗಳು ಲೈಟ್‌ ಹೌಸ್‌ ಬಳಿ ಸಮುದ್ರಕ್ಕಿಳಿದಿದ್ದರು. ಈ ವೇಳೆ ಮುಳುಗಿದ ಹಡಗಿನ ಅವಶೇಷಗಳು ಕಂಡುಬಂದಿದೆ. ಕುತೂಹಲದಿಂದ ಸಮೀಪ ತೆರಳಿದಾಗ ಅದರಲ್ಲಿ ಹವಳದ ದ್ವೀಪ ಬೆಳೆದಿರುವುದು ಗೊತ್ತಾಗಿದೆ.

ವಿಜ್ಞಾನಿಗಳು ಹೇಳೋದೇನು? :

 • ಹವಳ ದ್ವೀಪಗಳು ಸಾಗರ ಜೀವಿಗಳ ಆಹಾರ ಕಣಜದಂತೆ ಕೆಲಸ ಮಾಡುತ್ತವೆ. ಸಮುದ್ರದ ಆಳದಲ್ಲಿ ಬೃಹತ್‌ ವಸ್ತುಗಳು ಮುಳುಗಿದಾಗ ಅವುಗಳ ಆಶ್ರಯದಲ್ಲಿ ಸೂಕ್ಷ ್ಮ ಜೀವಿಗಳು ಬೆಳೆಯುತ್ತವೆ.
 • ಇದನ್ನು ಆಶ್ರಯಿಸಿ ನಾನಾ ಬಗೆಯ ಮೀನುಗಳು ಸೇರಿದಂತೆ ಕಡಲ ಜೀವ ವೈವಿಧ್ಯತೆ ಬೆಳೆಯುತ್ತಾ ಹೋಗುತ್ತದೆ.
 • ಈ ಹಿನ್ನೆಲೆಯಲ್ಲಿ ಹವಳ ದ್ವೀಪಗಗಳು ಸೂಕ್ಷ ್ಮ ಪ್ರದೇಶವಾಗಿದೆ.
 • ಸಾಗರ ಜೀವ ವೈವಿಧ್ಯತೆ ಕಾಪಾಡುವ ನಿಟ್ಟಿನಲ್ಲಿ ಹವಳ ದ್ವೀಪಗಳ ರಕ್ಷ ಣೆ ಅತ್ಯಂತ ಮಹತ್ವದ್ದು. ಆದರೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಹವಳಕ್ಕೂ ಸಮುದ್ರದ ಹವಳ ದ್ವೀಪಗಳಿಗೂ ಸಂಬಂಧಿವಿಲ್ಲ.

‘ನಮ್ಮ ಹೊಲ, ನಮ್ಮ ದಾರಿ’ ಕಾಮಗಾರಿಗಳಿಗೆ ಬ್ರೇಕ್‌

ಸುದ್ಧಿಯಲ್ಲಿ ಏಕಿದೆ ?2017-18ರ ಸಾಲಿನ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಕೈಗೆತ್ತಿಕೊಂಡ ‘ನಮ್ಮ ಹೊಲ-ನಮ್ಮ ದಾರಿ’ ಯೋಜನೆಯ ಹಲವು ಕಾಮಗಾರಿಗಳನ್ನು ಕೈ ಬಿಡಲಾಗಿದೆ.

ಏನಿದು ಯೋಜನೆ?:

 • ಗ್ರಾಮೀಣ ಪ್ರದೇಶದಲ್ಲಿ ಹೊಲ-ಮನೆಗಳಿಗೆ ಸಂಚರಿಸಲು ದಾರಿಯದ್ದೇ ದೊಡ್ಡ ಸಮಸ್ಯೆ. ಮಳೆಗಾಲದ ಸಂದರ್ಭದಲ್ಲಿ ಜಮೀನುಗಳಿಗೆ ತೆರಳಲು ರೈತರು ಸಂಕಷ್ಟ ಎದುರಿಸುತ್ತಿದ್ದರು. ಇಂತಹ ಪರಿಸ್ಥಿತಿ ನಿವಾರಣೆಗಾಗಿಯೇ ನಮ್ಮ ಹೊಲ-ನಮ್ಮ ದಾರಿ ಯೋಜನೆಯನ್ನು ಕಳೆದ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಜಾರಿ ಮಾಡಲಾಗಿತ್ತು.
 • ಹಳ್ಳಿಯಿಂದ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸುಧಾರಣೆ ಮಾಡುವುದು ಯೋಜನೆ ಉದ್ದೇಶ. ದ್ವಿಚಕ್ರ ವಾಹನ, ಟ್ರ್ಯಾಕ್ಟರ್‌ ಇಲ್ಲವೇ ಎತ್ತಿನ ಬಂಡಿಯಲ್ಲಿ ತೆರಳಲು ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡಬೇಕಿತ್ತು.
 • ಇದಕ್ಕಾಗಿ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕಳೆದ 2017-18 ನೇ ಸಾಲಿನಲ್ಲಿ ಘೋಷಣೆಯಾದ 1500 ಕೋಟಿ ರೂ.ಬಜೆಟ್‌ಗೆ ರೂಪಿಸಿದ ಕ್ರಿಯಾಯೋಜನೆಯಲ್ಲಿ ಹೊಲದ ರಸ್ತೆಗಳನ್ನು ಸೇರಿಸಲಾಗಿತ್ತು.

ದೇಶಾದ್ಯಂತ ಆನ್‌ಲೈನ್‌ನಲ್ಲಿ ಔಷಧ ಮಾರಾಟ ಬ್ಯಾನ್:

6.

ಸುದ್ಧಿಯಲ್ಲಿ ಏಕಿದೆ ? ಇ – ಫಾರ್ಮಾಸಿಸ್ಟ್‌ಗಳು ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದನ್ನು ದೇಶಾದ್ಯಂತ ಬ್ಯಾನ್‌ ಮಾಡಬೇಕೆಂದು ದಿಲ್ಲಿ ಹೈಕೋರ್ಟ್ ಆದೇಶ ನೀಡಿದೆ. ತಕ್ಷಣದಿಂದಲೇ ಈ ಆದೇಶ ಜಾರಿಗೆ ತರುವಂತೆ ಕೇಂದ್ರ ಸರಕಾರ ಹಾಗೂ ಎಎಪಿ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

 • ದಿಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾಯಮೂರ್ತಿ ವಿ.ಕೆ.ರಾವ್ ಈ ಆದೇಶ ನೀಡಿದ್ದಾರೆ. ದಿಲ್ಲಿ ಮೂಲದ ಚರ್ಮರೋಗ ವೈದ್ಯ ಜಹೀರ್ ಅಹ್ಮದ್ ಎಂಬುವವರು ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
 • ಎಗ್ಗಿಲ್ಲದೇ ದಂಧೆ: ಆನ್​ಲೈನ್ ಔಷಧ ಮಾರಾಟಗಾರರು ಔಷಧ ಮಾರಾಟ ನಿಯಂತ್ರಣ ಆಯೋಗದಿಂದ ಪರವಾನಗಿ ಹೊಂದಿರುವುದಿಲ್ಲ. ಗ್ರಾಮೀಣ ಭಾಗದಲ್ಲೂ ಕೂಡ ಈಗ ಇಂಟರ್​ನೆಟ್ ಲಭ್ಯವಿದೆ. ಮಾನಸಿಕ ಸಮಸ್ಯೆಗಳಿಗೆ ನೀಡಲಾಗುವ ಔಷಧಗಳು ಸಹ ಆನ್​ಲೈನ್​ನಲ್ಲಿ ಸಿಗುತ್ತದೆ. ವೈದ್ಯರ ಸಲಹೆ ಪಡೆಯದೆ ಸ್ವಯಂ ಚಿಕಿತ್ಸೆಗೆ ಮುಂದಾದರೆ ಪ್ರಾಣಕ್ಕೆ ಅಪಾಯವಾಗಲಿದೆ ಎಂದು ಪಿಐಎಲ್​ನಲ್ಲಿ ವಿವರಿಸಿಲಾಗಿತ್ತು.
 • ಪ್ರತಿದಿನ ಇಂಟರ್‌ನೆಟ್‌ನಲ್ಲಿ ಸರಿಯಾದ ನಿಯಂತ್ರಣವಿಲ್ಲದೆ ಲಕ್ಷಾಂತರ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ರೋಗಿಗಳಿಗೆ ಹಾಗೂ ವೈದ್ಯರಿಗೂ ಸಮಾನವಾದ ಅಪಾಯವಿದೆ ಎಂದು ವಕೀಲ ನಕುಲ್ ಮೊಹ್ತಾ ಎಂಬ ವಕೀಲರ ಮೂಲಕ ಪಿಐಎಲ್‌ ಸಲ್ಲಿಸಿದ್ದರು.
 • ಜತೆಗೆ, 1940ರ ಔಷಧ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ ಹಾಗೂ 1948ರ ಫಾರ್ಮಸಿ ಕಾಯ್ದೆಯಡಿ ಔಷಧಗಳ ಆನ್‌ಲೈನ್‌ ಮಾರಾಟಕ್ಕೆ ಅವಕಾಶವಿಲ್ಲ.
 • ಅಲ್ಲದೆ, ಡ್ರಗ್‌ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ರಾಜ್ಯದ ಎಲ್ಲ ಔ‍ಷಧ ನಿಯಂತ್ರಣಕಾರರಿಗೆ ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯನ್ನು ಕಾಪಾಡುವಂತೆ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ನಿರ್ಬಂಧ ವಿಧಿಸಬೇಕೆಂದು 2015ರಲ್ಲೇ ನಿರ್ದೇಶನ ನೀಡಿದ್ದರೂ ಸಹ ಆನ್‌ಲೈನ್‌ನಲ್ಲಿ ಲಕ್ಷಾಂತರ ಔಷಧಗಳು ಮಾರಾಟವಾಗುತ್ತಿದೆ.

ಆನ್ಲೈನ್ ಔಷಧಿ ಮಾರಾಟದ ಪರಿಣಾಮಗಳು

 • ಔಷಧಗಳನ್ನು ದುರುಪಯೋಗ ಅಥವಾ ದುರ್ಬಳಕೆ ಮಾಡಿಕೊಂಡರೆ, ಅದರಿಂದ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗಬಹುದು. ಕೆಲವು ಔಷಧಗಳು ವ್ಯಸನಕಾರಿ ವಸ್ತುಗಳಾಗಿರಬಹುದು. ಅಲ್ದೆ, ಹೆಚ್ಚು ಮಂದಿ ಮಕ್ಕಳು ಅಥವಾ ಅವಿದ್ಯಾವಂತ ಹಳ್ಳಿ ಜನತೆ ಸಹ ಇಂಟರ್‌ನೆಟ್ ಬಳಕೆ ಮಾಡುತ್ತಿರುವುದರಿಂದ ತಪ್ಪು ಔಷಧಿಗಳನ್ನು ಪಡೆದು ಬಲಿಪಶುಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಇ-ಫಾರ್ಮಸಿಗಳ ಕರಡು ನೀತಿಗೆ ಸಮ್ಮತಿ

 • ಆನ್​ಲೈನ್ ಔಷಧ ಮಾರಾಟ ನಿಯಂತ್ರಣ ಕುರಿತು ಆರೋಗ್ಯ ಸಚಿವಾಲಯ ಸಲ್ಲಿಸಿದ್ದ ಕರಡು ನೀತಿಗೆ ಔಷಧ ಮಾರಾಟ ನಿಯಂತ್ರಿಸುವ ಔಷಧಗಳ ತಾಂತ್ರಿಕ ಸಲಹಾ ಮಂಡಳಿ (ಡಿಟಿಎಬಿ) ಸಮ್ಮತಿ ನೀಡಿದೆ.
 • ಇ-ಫಾರ್ಮಸಿಗಳಲ್ಲಿ ವಿವಿಧ ರೀತಿಯ ಔಷಧಗಳ ಮಾರಾಟಕ್ಕೆ ಪ್ರತ್ಯೇಕ ನಿಯಮ ಶೀಘ್ರದಲ್ಲೇ ಜಾರಿಗೆ ಬರಲಿದೆ. ಎಲ್ಲ ಇ-ಫಾರ್ಮಸಿಗಳು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.
 • ಆನ್​ಲೈನ್ ಮಾರಾಟಗಾರರಿಗೆ ಔಷಧ ಕ್ಷೇತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಮೂಲಕ ಔಷಧಗಳ ಮಾರಾಟ ಬೆಲೆಯಲ್ಲಿ ಇಳಿಕೆ ಮಾಡುವ ಉದ್ದೇಶ ಸರ್ಕಾರದ್ದಾಗಿದೆ ಎಂದು ವಿಶ್ಲೇಷಿಸಲಾಗಿದೆ.
 • ಡಿಸ್ಟ್ರಿಬ್ಯೂಷನ್ ದರ ತಗುಲದ ಹಿನ್ನೆಲೆ ಆನ್​ಲೈನ್ ಮಾರಾಟಗಾರರು ಔಷಧಗಳ ಮೇಲೆ ಶೇ. 15-20 ರಿಯಾಯಿತಿ ನೀಡುತ್ತಿದ್ದಾರೆ. ಈಗಾಗಲೇ ಇ-ಫಾರ್ಮಸಿ ದೇಶದಲ್ಲಿ 3000 ಕೋಟಿ ರೂ. ಉದ್ದಿಮೆಯಾಗಿ ವಿಸ್ತರಿಸಿದೆ.

ರೆಡ್ ಕಾರ್ನರ್ ನೋಟಿಸ್

7.

ಸುದ್ಧಿಯಲ್ಲಿ ಏಕಿದೆ ? ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣ ಮುಖ್ಯ ಆರೋಪಿಗಳಲ್ಲಿ ಒಬ್ಬರಾದ ವಜ್ರದ ವ್ಯಾಪಾರಿ ಮೊಹುಲ್ ಚೋಕ್ಸಿ ವಿರುದ್ಧ ಇಂಟರ್‌ಪೋಲ್ ಅಂತಾರಾಷ್ಟ್ರೀಯ ಬಂಧನ ವಾರಂಟ್, ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ.

 • ಭಾರತ ತನಿಖಾ ಸಂಸ್ಥೆ ಸಿಬಿಐ ಸೂಚನೆ ಮೇರೆಗೆ ಇಂಟರ್‌ಪೋಲ್ ಈ ಬಂಧನ ವಾರಂಟ್ ಜಾರಿಗೊಳಿಸಿದೆ.

ಇಂಟರ್ಪೋಲ್ ರೆಡ್ ಕಾರ್ನರ್ ನೋಟೀಸ್ ಎಂದರೇನು ?

 • ಬೇಕಾಗಿರುವ ಕ್ರಿಮಿನಲ್ಗಳ ಬಂಧನ ಅಥವಾ ಹಸ್ತಾಂತರಕ್ಕಾಗಿ ಈ ಅಧಿಸೂಚನೆಯನ್ನು ನೀಡಲಾಗುತ್ತದೆ. ಕ್ರಿಮಿನಲ್ ಮೊಕದ್ದಮೆಯಲ್ಲಿ ಆರೋಪಿಸಲ್ಪಟ್ಟ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸುವ ವಿನಂತಿಯನ್ನು ಕೆಂಪು ಕಾರ್ನರ್ ನೋಟಿಸ್ ಹೊಂದಿದೆ. ಆದರೆ ರೆಡ್ ಕಾರ್ನರ್ ನೋಟಿಸ್ನ ಬಿಡುಗಡೆಯು ವ್ಯಕ್ತಿಯು ಅಪರಾಧಿ ಎಂದು ಅರ್ಥವಲ್ಲ; ಕೋರ್ಟ್ ಮುಂದುವರಿಯುವ ನಂತರ ಅವರನ್ನು ತಪ್ಪಿತಸ್ಥರೆಂದು ಘೋಷಿಸಬೇಕು.
 • ಇಂಟರ್ಪೋಲ್ನ ಪ್ರಧಾನ ಕಾರ್ಯದರ್ಶಿ ಕ್ರಿಮಿನಲ್ ವಿರುದ್ಧ ಸದಸ್ಯ ರಾಷ್ಟ್ರದ ಹೊರಡಿಸಿದ ಬಂಧನ ವಾರಂಟ್ ಆಧಾರದ ಮೇಲೆ ಈ ರೀತಿಯ ಸೂಚನೆ ನೀಡಬಹುದು. ರೆಡ್ ಕಾರ್ನರ್ ನೋಟೀಸ್ ಅಂತಾರಾಷ್ಟ್ರೀಯ ಬಂಧನ ವಾರಂಟ್ ಅಲ್ಲ.
 • “INTERPOL” ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ ವ್ಯಕ್ತಿಯ ವಿರುದ್ಧ ಬಂಧಿಸಲು ಸದಸ್ಯ ರಾಷ್ಟ್ರವನ್ನು INTERPOL ನಿರ್ಬಂಧಿಸಲು ಸಾಧ್ಯವಿಲ್ಲ

ಕೆಂಪು ಕಾರ್ನರ್ ನೋಟೀಸ್ ಏಕೆ ನೀಡಲಾಗುತ್ತದೆ?

 • ಇಂಟರ್ಪೋಲ್ ಮುಖ್ಯವಾಗಿ 8 ವಿಧದ ಸೂಚನೆಗಳನ್ನು ನೀಡಿದೆ ಆದರೆ ಅತ್ಯಂತ ಅಪೇಕ್ಷಿತ ಆರೋಪಿತ ವ್ಯಕ್ತಿಯನ್ನು ಬಂಧಿಸಲು ರೆಡ್ ಕಾರ್ನರ್ ನೋಟೀಸ್ ಅನ್ನು ನೀಡಲಾಗುತ್ತದೆ. ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಸಮುದ್ರ ಮಾರ್ಗಗಳು ಇತ್ಯಾದಿಗಳಲ್ಲಿ ಬೇಕಾದ ವ್ಯಕ್ತಿಗಳ ಛಾಯಾಚಿತ್ರಗಳು ಈ ಸ್ಥಳಗಳಲ್ಲಿ ಅಂಟಿಸಲಾಗಿದೆ.
 • ಎಲ್ಲಾ ಸದಸ್ಯ ರಾಷ್ಟ್ರಗಳ ಪೋಲಿಸ್ನಿಂದ ನೋಟಿಸ್ ನೀಡಿದವರ ವಿರುದ್ಧ ಬೇಡಿಕೆ ಇದೆ

ರೆಡ್ ಕಾರ್ನರ್ ನೋಟೀಸಿನಿಂದ ಆಗುವ ಪ್ರಯೋಜನ

 • ರೆಡ್ ಕಾರ್ನರ್ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ 192 ದೇಶಗಳಲ್ಲಿ ಎಲ್ಲೇ ಅಡಗಿದ್ದರೂ ಆರೋಪಿಯನ್ನು ಬಂಧಿಸುವುದು ಸುಲಭವಾಗುತ್ತದೆ. ಅದೇ ರೀತಿ ಅವರ ಬಳಿ ಇರುವ 32 ದೇಶಗಳಿಗೆ ವೀಸಾ ರಹಿತ ಸಂಚಾರ ಕಲ್ಪಿಸುವ ಆಂಟಿಗುವಾ ಪಾಸ್‌ಪೋರ್ಟ್‌ನ್ನು ಸಹ ನಿರ್ಬಂಧಿಸಲಾಗುತ್ತದೆ.

ಹಿನ್ನಲೆ

 • ಸುಮಾರು 13,578 ಕೋಟಿ ರೂ. ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣ ಇದೇ ವರ್ಷ ಫೆಬ್ರವರಿಯಲ್ಲಿ ಬೆಳಕಿಗೆ ಬಂದಿತ್ತು. ನೀರವ್ ಮೋದಿ, ಛೋಕ್ಸಿ ಸೇರಿದಂತೆ ಹಲವರ ವಿರುದ್ಧ ಸಿಬಿಐ, ಜಾರಿ ನಿರ್ದೇಶಾನಾಲಯ (ಇಡಿ) ಪ್ರಕರಣ ದಾಖಲಿಸಿದ್ದವು.

ಇ-ಬೈಕ್ ಲೈಸೆನ್ಸ್

8.

ಸುದ್ಧಿಯಲ್ಲಿ ಏಕಿದೆ ?18 ವರ್ಷ ಒಳಗಿನವರಿಗೂ ವಿದ್ಯುತ್​ಚಾಲಿತ ದ್ವಿಚಕ್ರ ವಾಹನಗಳ ಚಾಲನಾ ಪರವಾನಗಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

 • ಗಂಟೆಗೆ ಗರಿಷ್ಠ 70 ಕಿ.ಮೀ. ವೇಗವಾಗಿ ಚಲಿಸುವ ಇ-ಬೈಕ್​ಗಳನ್ನು ಅವರು ಚಲಾಯಿಸಬಹುದು. ಸರ್ಕಾರದ ಈ ಕ್ರಮ ದಿಂದಾಗಿ ವಿದ್ಯುತ್​ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ಸಿಗಲಿದೆ.
 • ಇಂತಹ ವಾಹನಗಳ ಗರಿಷ್ಠ ಮೋಟಾರು ಸಾಮರ್ಥ್ಯವನ್ನು 4 ಕಿಲೋವಾಟ್​ಗಳಿಗೆ (4ಕೆಡಬ್ಲ್ಯೂಎಚ್) ಸೀಮಿತಗೊಳಿಸಲಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ವಿದ್ಯುತ್​ಚಾಲಿತ ದ್ವಿಚಕ್ರ ವಾಹನಗಳು ಈ ಸಾಮರ್ಥ್ಯದ್ದಾಗಿವೆ.
 • ಪ್ರಸ್ತುತ ಇರುವ ಸಾರಿಗೆ ನಿಯಮ ಪ್ರಕಾರ 16-18 ವರ್ಷದವರು 50 ಸಿಸಿವರೆಗಿನ ಸಾಮರ್ಥ್ಯದ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡಲು ಡಿಎಲ್ ಪಡೆಯುಬಹುದಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಸದ್ಯ ಈ ಸಾಮರ್ಥ್ಯದ ಯಾವುದೇ ವಾಹನಗಳು ಲಭ್ಯವಿಲ್ಲದ ಕಾರಣ, ಈ ನಿಯಮ ನಿಷ್ಟ್ರಯೋಜಕವಾಗಿದೆ.
 • ನೋಂದಣಿ ಕಡ್ಡಾಯ: ಕೇಂದ್ರ ಸರ್ಕಾರ 4 ಕೆಡಬ್ಲ್ಯೂಎಚ್​ವರೆಗಿನ ಮೋಟಾರು ಸಾಮರ್ಥ್ಯ ಹೊಂದಿರುವ ವಿದ್ಯುತ್​ಚಾಲಿತ ವಾಹನಗಳನ್ನು ಹಗುರವಾದ ವಿದ್ಯುತ್​ಚಾಲಿತ ದ್ವಿಚಕ್ರವಾಹನ ಎಂದು ವರ್ಗೀಕರಿಸಲಿದೆ.
 • ಹಾಗಾಗಿ, ಈ ವಾಹನಗಳನ್ನು ಚಾಲನೆ ಮಾಡಲು ಡಿಎಲ್ ಪಡೆಯುವುದು ಕಡ್ಡಾಯವಾಗಿದೆ. ಜತೆಗೆ, ಇಂತಹ ವಾಹನಗಳ ನೋಂದಣಿ ಹಾಗೂ ಇವುಗಳನ್ನು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದು ಕೂಡ ಕಡ್ಡಾಯವಾಗಿದೆ.

ವಿಶ್ವಾಸ ಗೆದ್ದ ಥೆರೇಸಾ ಮೇ

9.

ಸುದ್ಧಿಯಲ್ಲಿ ಏಕಿದೆ ?ಸ್ವಪಕ್ಷದ ಸಂಸದರು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ಎದುರಿಸಿದ ಬ್ರಿಟನ್ ಪ್ರಧಾನಿ ಥೆರೇಸಾ ಮೇ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ.

 • ಬ್ರೆಕ್ಸಿಟ್ ವಿಚಾರವಾಗಿ ಮೇ ನಾಯಕತ್ವವನ್ನು ಪ್ರಶ್ನಿಸಿ ಕನ್ಸರ್ವೆಟಿವ್ ಪಕ್ಷದ ಸಂಸದರು ಅವಿಶ್ವಾಸ ಗೊತ್ತುವಳಿ ಮಂಡಿಸಿದರು.
 • ಈ ಮೂಲಕ ಬ್ರೆಕ್ಸಿಟ್ ವಿಚಾರವಾಗಿ ತಮ್ಮ ಪ್ರಾಬಲ್ಯವನ್ನು ಮೇ ಕಾಯ್ದುಕೊಂಡಂತಾಗಿದೆ.
 • ಮೇ ಜಯಶಾಲಿಯಾಗಿರುವುದರಿಂದ ಮುಂದಿನ ಒಂದು ವರ್ಷದವರೆಗೆ ಸ್ವಪಕ್ಷ ಮತ್ತೊಮ್ಮೆ ಮೇ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಬ್ರಿಟನ್ ಸಂಸತ್ ಅವಕಾಶ ನೀಡುವುದಿಲ್ಲ. ಆದರೆ ವಿಪಕ್ಷ ಲೇಬರ್ ಪಾರ್ಟಿ ಗೊತ್ತುವಳಿ ಮಂಡಿಸಬಹುದಾಗಿದೆ.

ಬ್ರೆಕ್ಸಿಟ್

 • ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ನ ನಿರ್ಗಮನವನ್ನು ಬ್ರೆಕ್ಸಿಟ್ ಎಂದು ರೂಪಿಸಲಾಗಿದೆ. ಜನಾಭಿಪ್ರಾಯ ಸಂಗ್ರಹದಲ್ಲಿ ಬ್ರಿಟಿಷ್ ಜನರು ಬಹುಮತದ ನಿರ್ಗಮನಕ್ಕಾಗಿ ಮತ ಚಲಾಯಿಸಿದ್ದಾರೆ. ಲಿಸ್ಬನ್ ಒಡಂಬಡಿಕೆಯ ಲೇಖನ 50 ರ ಪ್ರಕಾರ ಐರೋಪ್ಯ ಒಕ್ಕೂಟದಿಂದ ಔಪಚಾರಿಕವಾಗಿ ನಿರ್ಗಮಿಸಲು ಎರಡು ವರ್ಷಗಳ ಯುಕೆ ತೆಗೆದುಕೊಳ್ಳುತ್ತದೆ.
 • ವ್ಯಾಪಾರ, ಆರ್ಥಿಕತೆ, ವಲಸೆ, ಕಾರ್ಮಿಕ ವಲಸೆ, ನಾಗರಿಕರು, ವೀಸಾ, ಕರೆನ್ಸಿ ಮತ್ತು ಮುಂತಾದವುಗಳ ಮೇಲೆ ದೀರ್ಘಕಾಲೀನ ಪ್ರಭಾವವನ್ನು ಬ್ರೆಕ್ಸಿಟ್ ಹೊಂದಿರಬಹುದು.

ರಾಕೆಟ್‌ನ ತುದಿಯಲ್ಲಿ ಪ್ರಯೋಗಶಾಲೆ

11.

ಸುದ್ಧಿಯಲ್ಲಿ ಏಕಿದೆ ? ಉಪಗ್ರಹಗಳನ್ನು ಉಡಾಯಿಸುವ ರಾಕೆಟ್‌ನ ನಾನಾ ಭಾಗಗಳು ನಾನಾ ಹಂತಗಳಲ್ಲಿ ಉರಿದು ಕಳಚಿ ಬೀಳುತ್ತವೆ. ಆದರೆ, ಉಪಗ್ರಹವನ್ನು ಹೊತ್ತಿರುವ ಕೊನೆಯ ಭಾಗ ಮಾತ್ರ ಉಪಗ್ರಹದ ಜತೆಗೇ ಕಕ್ಷೆಯನ್ನು ಸೇರುತ್ತದೆ ಮತ್ತು ಬಾಹ್ಯಾಕಾಶದ ಕಸವಾಗಿ ಮಾರ್ಪಡುತ್ತದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಗಳ ಮೂಲಕ ಗಮನ ಸೆಳೆಯುತ್ತಿರುವ ಇಸ್ರೊ ಈ ಕಸವನ್ನೂ ರಸವಾಗಿ ಪರಿವರ್ತಿಸಲು ಮುಂದಾಗಿದೆ.

 • ಅಂದರೆ, ಬಾಹ್ಯಾಕಾಶ ಸೇರಿ ಅವಶೇಷವಾಗುವ ರಾಕೆಟ್‌ನ ಕೊನೆಯ ಭಾಗವನ್ನು ಪ್ರಯೋಗಗಳಿಗೆ ಬಳಸಲು ನಿರ್ಧರಿಸಿದೆ.
 • ಅದಕ್ಕಾಗಿ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ.
 • ಈ ಹೊಸ ಪ್ರಯೋಗ ಮುಂದಿನ ಜನವರಿಯಲ್ಲಿ ಉಡಾಯಿಸಲಾಗುವ ಪಿಎಸ್‌ಎಲ್‌ವಿ ಸಿ22 ರಾಕೆಟ್‌ನಲ್ಲಿ ನಡೆಯಲಿದೆ

ಆರು ತಿಂಗಳು ಜೀವಂತ

 • ಪಿಎಸ್‌ಎಲ್‌ವಿ ರಾಕೆಟ್‌ನ ಕೊನೆಯ ಹಂತ(ಪಿಎಸ್‌ 2 ಸ್ಟೇಜ್‌) ಉಪಗ್ರಹದೊಂದಿಗೆ ಕಕ್ಷೆ ಸೇರುತ್ತದೆ. ಆದರೆ, ಅದು ಆರು ತಿಂಗಳ ಕಾಲ ‘ಜೀವಂತ’ವಾಗಿರುತ್ತದೆ. ಈ ಆರು ತಿಂಗಳ ಅವಧಿಯಲ್ಲಿ ಬಾಹ್ಯಾಕಾಶದ ಬಗ್ಗೆ ಅಧ್ಯಯನಕ್ಕೆ ಅದನ್ನು ಬಳಸಲು ನಿರ್ಧರಿಸಲಾಗಿದೆ.
 • ರಾಕೆಟ್‌ನ ಕೊನೆಯ ಹಂತವನ್ನು ಮತ್ತೊಂದು ಉಪಗ್ರಹವಾಗಿ ಬಳಸುವುದು ಈ ತಂತ್ರದ ಸಾರ. ಅಂದರೆ, ಈ ಹಂತಕ್ಕೆ ಇನ್ನೊಂದು ಕಿರು ಉಪಗ್ರಹ ಇಲ್ಲವೇ ಸಾಧನವನ್ನು ಅಳವಡಿಸಿ ಉಪಗ್ರಹ ಮಾದರಿಯಲ್ಲಿ ಭೂಮಿಯಿಂದಲೇ ಅದರ ದತ್ತಾಂಶಗಳನ್ನು ಸ್ವೀಕರಿಸಬಹುದು. ಇದು ಒಂದೇ ಬಾರಿಗೆ ಎರಡು ಉಪಗ್ರಹ ಹಾರಿ ಬಿಟ್ಟಿ ಫಲವನ್ನು ನೀಡುತ್ತದೆ. ಪ್ರತ್ಯೇಕ ಉಪಗ್ರಹ ಹಾರಿಸುವ ಖರ್ಚು ಉಳಿಯುತ್ತದೆ

ವಿಶ್ವದಲ್ಲೇ ಮೊದಲು

 • ಮೃತ ರಾಕೆಟ್‌ನ ಜೀವಂತ ಭಾಗವನ್ನು ಪ್ರಯೋಗಕ್ಕೆ ಬಳಸುವ ತಂತ್ರಜ್ಞಾನವನ್ನು ವಿಶ್ವದಲ್ಲೇ ಮೊದಲ ಬಾರಿಗೆ ಭಾರತ ಅಭಿವೃದ್ಧಿಪಡಿಸುತ್ತಿದೆ.
 • ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ ಎಕ್ಸ್‌ ರಾಕೆಟ್‌ಗಳ ಮರುಬಳಕೆ ತಂತ್ರಜ್ಞಾನವನ್ನು ಕಂಡುಕೊಂಡಿದ್ದರೂ ಭಾರತದಂಥ ಪ್ರಯೋಗಕ್ಕೆ ಕೈ ಹಾಕಿಲ್ಲ.

Related Posts
“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ರಾಷ್ಟ್ರೀಯ ಯುವ ದಿನ ಸುದ್ಧಿಯಲ್ಲಿ ಏಕಿದೆ ?ಸ್ವಾಮಿ ವಿವೇಕಾನಂದರ ಸ್ವರಣಾರ್ಥ ಜ.12ನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. 1984 ರಲ್ಲಿ ಭಾರತ ಸರಕಾರ ದಿನವನ್ನು ರಾಷ್ಟ್ರೀಯ ಯುವ ...
READ MORE
24th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ ) ಸುದ್ಧಿಯಲ್ಲಿ ಏಕಿದೆ? ಬೇರೆ ಬೇರೆ ಯುನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್ (ಯುಪಿಐ) ಐಡಿಯನ್ನು ಬಳಸಿಕೊಂಡು ತಮ್ಮದೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಆಗಸ್ಟ್ 1ರಿಂದ ತಡೆ ಬೀಳಲಿದೆ. ವರ್ಗಾವಣೆಯಾದ ತಕ್ಷಣದಲ್ಲೆ ಹಣ ಪಡೆಯುವ ವ್ಯವಸ್ಥೆಯಾದ ಯುಪಿಐ ಐಡಿ ದುರ್ಬಳಕೆ ತಡೆಯಲು ...
READ MORE
“29th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ದೇವಾಲಯಗಳ ದೇಣಿಗೆ ಕಡ್ಡಾಯವೆಂಬ ಆದೇಶ ತಿದ್ದುಪಡಿ ಸುದ್ಧಿಯಲ್ಲಿ ಏಕಿದೆ ? ರಾಜ್ಯದ 81 ದೇವಾಲಯಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುಮಾರು 12.38 ಕೋಟಿ ಹಣ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್‌ ಇತ್ಯರ್ಥಗೊಳಿಸಿದೆ. ಹಿನ್ನಲೆ ಸರಕಾರ ಆ.21ರಂದು ಹೊರಡಿಸಿದ್ದ ಆದೇಶದ ಪ್ರಕಾರ ...
READ MORE
“07 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಓಝೋನ್​ ಪದರ ರಂಧ್ರ ಕ್ರಮೇಣ ಕ್ಷೀಣ ಸುದ್ಧಿಯಲ್ಲಿ ಏಕಿದೆ ?ಭೂಮಿಯನ್ನು ಸೂರ್ಯನ ನೇರಳೆ ಕಿರಣಗಳಿಂದ ರಕ್ಷಣೆ ಮಾಡುವ ಓಝೋನ್​ ಪದರ ಸವಕಳಿ ಸುಧಾರಿಸುತ್ತಿದ್ದು ಪದರಕ್ಕೆ ಆಗಿದ್ದ ಹಾನಿ ಕ್ರಮೇಣ ಸರಿಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಹಿನ್ನೆಲೆ ಓಝೋನ್​ ಪದರ 1970ನೇ ಇಸ್ವಿಯಿಂದೀಚೆಗೆ ತೆಳುವಾಗುತ್ತಿದೆ ಎಂದು ...
READ MORE
12th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
 ಏಕತೆ ಪ್ರತಿಮೆ ಪೂರ್ಣ ಸುದ್ಧಿಯಲ್ಲಿ ಏಕಿದೆ ?ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಉಕ್ಕಿನ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅವರ 143ನೇ ಹುಟ್ಟುಹಬ್ಬದ ದಿನ ಅ. 31ರಂದು ಉದ್ಘಾಟನೆಗೊಳ್ಳಲಿದೆ. ಗುಜರಾತ್​ನ ನರ್ಮದಾ ನದಿಯ ...
READ MORE
“10th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸೂರ್ಯಯಾನಕ್ಕೆ ನಾಸಾ ಸಜ್ಜು ಈವರೆಗೆ ಅಸಾಧ್ಯವಾಗಿದ್ದ ಇಂತಹ ಸಾಹಸಕ್ಕೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕೈ ಹಾಕಿದೆ. ಮನುಕುಲದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಸೂರ್ಯಯಾನಕ್ಕೆ ಸಜ್ಜಾಗಿರುವ ನಾಸಾ, ಜು.31ರಂದು ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್​ನಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆಗೊಳಿಸಲಿದೆ. ಪಾರ್ಕರ್ ಸೋಲಾರ್ ...
READ MORE
“20 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಗಿಡ ಬೆಳೆಸಿ ಅಂಕ ಗಳಿಸಿ! ಯೋಜನೆ ಸುದ್ಧಿಯಲ್ಲಿ ಏಕಿದೆ ?ಇನ್ನು ಮುಂದೆ 8ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಚೆನ್ನಾಗಿ ಪೋಷಿಸಿದರೆ ಅಂಕಗಳನ್ನು ಪಡೆಯಬಹುದು. ಅರಣ್ಯ, ಪರಿಸರ ಮತ್ತು ಜೈವಿಕ ಇಲಾಖೆ ಈ ಸಂಬಂಧ ಸದ್ಯದಲ್ಲಿಯೇ ...
READ MORE
“3rd ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆಫ್‌ಲೈನ್‌ ಟೂಲ್‌ಗಳ ಅಭಿವೃದ್ಧಿ  ಸುದ್ಧಿಯಲ್ಲಿ ಏಕಿದೆ?ನಾಗರಿಕರ ಖಾಸಗಿತನದ ಉಲ್ಲಂಘನೆ, ಡೇಟಾ ಕದಿಯುವಿಕೆ ಮತ್ತು ಕಣ್ಗಾವಲು ಆತಂಕಗಳ ನಿವಾರಣೆ ಯತ್ನವಾಗಿ ಕೇಂದ್ರ ಸರಕಾರ ಇದೀಗ ಆಫ್‌ಲೈನ್ ಆಧಾರ್‌ ದೃಢೀಕರಣ ಟೂಲ್‌ಗಳ ಅಭಿವೃದ್ಧಿಗೆ ಮುಂದಾಗಿದೆ. ಕ್ಯೂಆರ್‌ ಕೋಡ್‌ಗಳು ಮತ್ತು ಬಯೋ ಮೆಟ್ರಿಕ್‌ ಅಥವಾ ಯುಐಡಿಎಐ ಸರ್ವರ್‌ಗಳ ಮಾಹಿತಿ ಹಂಚಿಕೊಳ್ಳದೆ ...
READ MORE
18th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಎನ್​ಸಿಸಿ ರೀತಿ ಎನ್-ಯೆಸ್ ಸುದ್ಧಿಯಲ್ಲಿ ಏಕಿದೆ? ಯುವ ಸಮುದಾಯದಲ್ಲಿ ಶಿಸ್ತುಬದ್ಧ ಜೀವನಕ್ರಮ ಮತ್ತು ದೇಶಪ್ರೇಮ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ 10 ಲಕ್ಷ ಯುವಕರು ಮತ್ತು ಯುವತಿಯರಿಗೆ ತರಬೇತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ರಾಷ್ಟ್ರೀಯ ಯುವ ಸಬಲೀಕರಣ ಯೋಜನೆ (ಎನ್-ವೈಇಎಸ್) ಎಂಬ ಈ ...
READ MORE
14th & 15th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಆರೋಗ್ಯ ಕರ್ನಾಟಕ ಯೋಜನೆ ಸುದ್ದಿಯಲ್ಲಿ ಏಕಿದೆ? ರಾಜ್ಯದಲ್ಲಿ ಹೊಸದಾಗಿ ಜಾರಿಗೆ ತಂದಿರುವ 'ಸಮಗ್ರ ಆರೋಗ್ಯ ಕರ್ನಾಟಕ'ಯೋಜನೆ ವ್ಯಾಪ್ತಿಯಿಂದ ಹಲವು ವರ್ಗಗಳನ್ನು ಹೊರಗಿಟ್ಟಿರುವುದರಿಂದ ಇದು ಕನ್ನಡಿಯೊಳಗಿನ ಗಂಟಿನಂತಾಗಿದೆ. ಉದ್ದೇಶ ಸರಕಾರದ ಎಲ್ಲ ಆರೋಗ್ಯ ಯೋಜನೆಗಳನ್ನು ಒಗ್ಗೂಡಿಸಿ ಒಂದೇ ಆರೋಗ್ಯ ಯೋಜನೆ ಇರಬೇಕೆಂದು ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತರಲಾಗಿದೆ. ಆದರೆ ...
READ MORE
“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
24th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
“29th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“07 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
12th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“10th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“20 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“3rd ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
18th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
14th & 15th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

Leave a Reply

Your email address will not be published. Required fields are marked *