“14 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಕೆಜಿಎಫ್‌ ಗಣಿ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ

1.

ಸುದ್ಧಿಯಲ್ಲಿ ಏಕಿದೆ ?ಕೆಜಿಎಫ್‌ನ ಭಾರತ್‌ ಗೋಲ್ಡ್‌ ಮೈನ್ಸ್‌ ಕಂಪನಿ (ಬಿಜಿಎಂಎಲ್‌) ವಶದಲ್ಲಿರುವ ಸುಮಾರು 10 ಸಾವಿರ ಎಕರೆ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ಹಾಗೂ ಟೌನ್‌ಶಿಪ್‌ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಬಯಸಿದೆ.

 • ”ಗಣಿಗಾರಿಕೆ ಸಂಬಂಧಿಸಿದಂತೆ 2015ರಲ್ಲಿ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತಂದಿದ್ದು, ಗಣಿಗಾರಿಕೆ ಪ್ರದೇಶವನ್ನು ರಾಜ್ಯಗಳ ವಶಕ್ಕೆ ಒಪ್ಪಿಸಲು ಅವಕಾಶವಿದೆ.
 • ಅಂತೆಯೇ, ಬಿಜಿಎಂಎಲ್‌ ವಶಕ್ಕೆ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಸಿದ್ಧವಿದೆ. ಆದರೆ, 1,600 ಕೋಟಿ ರೂ. ಪಾವತಿಸುವಂತೆ ಕೇಂದ್ರ ಸರಕಾರ ಷರತ್ತು ಹಾಕಿದೆ.
 • ”ಬಿಜಿಎಂಎಲ್‌ ಸುಮಾರು 12 ಸಾವಿರ ಎಕರೆ ಪ್ರದೇಶದಲ್ಲಿದೆ. ಈ ಪೈಕಿ ಸುಮಾರು ಎರಡು ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆದಿದೆ. ವ್ಯರ್ಥವಾಗಿರುವ ಈ ಉಳಿಕೆ ಭೂಮಿಯನ್ನು ವಶಕ್ಕೆ ಪಡೆದು ಕೈಗಾರಿಕೆಗಳ ಸ್ಥಾಪನೆ, ಟೌನ್‌ಶಿಪ್‌ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ”.

ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್

 • ಇದೊಂದು ಪಿಎಸ್ಯು ಆಗಿದೆ ಹಾಗು ಗಣಿ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿದೆ ಮತ್ತು ಈಗ ಮುಚ್ಚಲಾಗಿದೆ.
 • 1972 ರಲ್ಲಿ ಮೈಸೂರು ಸರಕಾರದಿಂದ ಕೋಲಾರ ಚಿನ್ನದ ಗಣಿಗಳನ್ನುಕೇಂದ್ರ ಸರ್ಕಾರ ವಹಿಸಿಕೊಂಡಿದೆ.
 • ಮುಖ್ಯವಾಗಿ ಕರ್ನಾಟಕದಲ್ಲಿ ನೆಲೆಗೊಂಡಿರುವ ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್) ನಲ್ಲಿನ ಬಂಧಿತ ಗಣಿಗಳಿಂದ ಮತ್ತು ಆಂಧ್ರ ಪ್ರದೇಶದ ಭಾಗಶಃ ಸ್ಥಳಗಳಲ್ಲಿ ಚಿನ್ನದ ಗಣಿಗಾರಿಕೆಗೆ ಪ್ರಾಥಮಿಕವಾಗಿ ತೊಡಗಿತ್ತು .
 • ಅದರ ಕೊನೆಯ ವರ್ಷಗಳಲ್ಲಿ ಕಂಪನಿಯು ಗಣಿ ಅಭಿವೃದ್ಧಿ, ಶಾಫ್ಟ್ ಮುಳುಗುವಿಕೆ, ಗಣಿಗಾರಿಕೆ ಯಂತ್ರಗಳ ತಯಾರಿಕೆ ಮತ್ತು ಹೊರಗಿನ ಗ್ರಾಹಕರಿಗೆ ಇತರ ಗಣಿಗಾರಿಕೆ ನಿರ್ಮಾಣ ಮತ್ತು ಇಂಜಿನಿಯರಿಂಗ್ ವಿಭಾಗವನ್ನು ಸ್ಥಾಪಿಸಿದ ಇತರ ವಸ್ತುಗಳನ್ನು ತಯಾರಿಸಿತು.
 • ಅದರ ಮುಚ್ಚುವಿಕೆಯ ಸಮಯದವರೆಗೆ, ಬಿಜಿಎಂಎಲ್ ಭಾರತದಲ್ಲಿ ಏಕ ಮಾತ್ರ ವಿಶ್ವದರ್ಜೆಯ ಚಿನ್ನದ ಗಣಿಗಾರಿಕೆ ಕಾರ್ಯಾಚರಣೆ ನಡೆಸುತಿತ್ತು

ಕರಾವಳಿ ಪ್ರಭಾವಳಿ

2.

ಸುದ್ಧಿಯಲ್ಲಿ ಏಕಿದೆ ?ಜಲಸಾರಿಗೆ ಮೂಲಕ ಆರ್ಥಿಕತೆ ಬಲಪಡಿಸುವ ಹಾಗೂ ಕರಾವಳಿ ಪ್ರದೇಶಗಳ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ಕರಾವಳಿ ರಾಜ್ಯಗಳಲ್ಲಿ 14 ರಾಷ್ಟ್ರೀಯ ಉದ್ಯೋಗ ವಲಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ.

 • ಈ ಪ್ರಕಾರ, ಕೇಂದ್ರ, ರಾಜ್ಯ ಸರ್ಕಾರಗಳು ಈ ಯೋಜನೆಗೆ ಸಮಾನವಾಗಿ ಬಂಡವಾಳ ಹೂಡಿಕೆ ಮಾಡಲಿವೆ. ಎರಡೂ ಸರ್ಕಾರಗಳು ಸೇರಿ ಮೊದಲು ಮೂಲಸೌಕರ್ಯ ಅಭಿವೃದ್ಧಿಪಡಿಸಲಿವೆ. ಇದರ ಜತೆಗೆ ಬಂಡವಾಳ ಆಕರ್ಷಣೆಗೂ ಕ್ರಮ ತೆಗೆದುಕೊಳ್ಳಲಿವೆ. ಪ್ರತಿ ಉದ್ಯೋಗ ವಲಯ 2 ಸಾವಿರ ಎಕರೆ ವಿಸ್ತೀರ್ಣ ಹೊಂದಲಿದೆ.

 ಮಹತ್ವ

 • ಆ ಮೂಲಕ ಮುಂದಿನ 3 ವರ್ಷಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಉದ್ದೇಶ.
 • ಕೇಂದ್ರ ಜಲಸಾರಿಗೆ ಸಚಿವಾಲಯ ಸಂಪುಟದ ಮುಂದಿಟ್ಟಿರುವ ಪ್ರಸ್ತಾವನೆ ಪ್ರಕಾರ 1 ಲಕ್ಷ ಕೋಟಿ ರೂ. ಬಂಡವಾಳದೊಂದಿಗೆ ದೇಶದ ವಿವಿಧೆಡೆ 14 ರಾಷ್ಟ್ರೀಯ ಉದ್ಯೋಗ ವಲಯಗಳನ್ನು ಸೃಷ್ಟಿಸಲಾಗುತ್ತದೆ.
 • ಸುಮಾರು 35 ಕೈಗಾರಿಕೆ ಉಪ ವಲಯಗಳು ಈ ವಲಯದಲ್ಲಿರಲಿದೆ. ಭಾರತದ ಕೈಗಾರಿಕೆ ಹಾಗೂ ಉತ್ಪಾದನಾ ವಲಯದ ಸುಧಾರಣೆಗೆ ಇದು ಮಹತ್ವದ ಹೆಜ್ಜೆಯಾಗಲಿದೆ.

ಕರಾವಳಿ ರಾಜ್ಯಗಳೇಕೆ?

 • ರಾಷ್ಟ್ರೀಯ ಉದ್ಯೋಗ ವಲಯವನ್ನು ಕರಾವಳಿ ರಾಜ್ಯಗಳಲ್ಲಿ ಆರಂಭಿಸಲು ನಿರ್ದಿಷ್ಟ ಉದ್ದೇಶವಿದೆ. ಕೇಂದ್ರದ ಅಂದಾಜಿನ ಪ್ರಕಾರ ಜಲಸಾರಿಗೆ ಮೂಲಕ ದೇಶದ ಆರ್ಥಿಕತೆ ಬದಲಿಸಬಹುದಾಗಿದೆ.
 • ಮೊನ್ನೆಯಷ್ಟೇ ವಾರಾಣಸಿಯಲ್ಲಿ ದೇಶದ ಮೊದಲ ಬಹುಮಾದರಿ ಟರ್ವಿುನಲ್ ಕಾರ್ಯಾರಂಭವಾಗಿರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ.
 • ಕರಾವಳಿಯಲ್ಲಿ ಉದ್ಯೋಗ ವಲಯ ಸೃಷ್ಟಿಸಿದರೆ ಕೈಗಾರಿಕೆ ಉತ್ಪನ್ನಗಳ ಸಾಗಾಟ, ಕೈಗಾರಿಕೆಗಳನ್ನು ಸೆಳೆಯುವುದು ಸುಲಭ. ಈಗಾಗಲೇ ಬಂದರು ಅಭಿವೃದ್ಧಿಗೆ ಒತ್ತು ನೀಡಿರುವುದರಿಂದ ಕರಾವಳಿ ರಾಜ್ಯಗಳೇ ಈ ವಲಯಕ್ಕೆ ಸೂಕ್ತ ಎಂಬುದು ಸರ್ಕಾರದ ನಿರ್ಧಾರವಾಗಿದೆ.

ಯೋಜನೆಯ ನೀಲಿನಕ್ಷೆ

 • ಕರಾವಳಿ ರಾಜ್ಯಗಳಲ್ಲಿ ಹದಿನಾಲ್ಕು ರಾಷ್ಟ್ರೀಯ ಉದ್ಯೋಗ ವಲಯ
 • ಸುಮಾರು 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಉದ್ಯೋಗ ವಲಯ ನಿರ್ಮಾಣ
 • ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಂದ ಸಮಾನ ವೆಚ್ಚ
 • 3 ವರ್ಷಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ
 • 4 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷೆ
 • ಪ್ರತಿ ವಲಯದ ವಿಸ್ತೀರ್ಣ 2 ಸಾವಿರ ಎಕರೆ
 • ಉದ್ಯೋಗ ವಲಯದಲ್ಲಿ 35 ಕೈಗಾರಿಕೆಗಳಿರಲಿವೆ

ರಾಜ್ಯಕ್ಕೂ ಪಾಲು

 • ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕರಾವಳಿ ಪ್ರದೇಶಗಳಿವೆ. ಹೀಗಾಗಿ ಈ ಯೋಜನೆಯಲ್ಲಿ ಕರ್ನಾಟಕವೂ ಭಾಗಿಯಾದರೆ ಮೂರರಲ್ಲಿ ಒಂದು ಜಿಲ್ಲೆಗೆ ರಾಷ್ಟ್ರೀಯ ಉದ್ಯೋಗ ವಲಯ ಬರಲಿದೆ.

ಫಿನ್‌ಟೆಕ್‌ ಫೆಸ್ಟಿವಲ್‌

3.

ಸುದ್ಧಿಯಲ್ಲಿ ಏಕಿದೆ ?ಸಿಂಗಾಪುರದಲ್ಲಿ ಫಿನ್‌ಟೆಕ್‌ ಫೆಸ್ಟಿವಲ್‌ನಲ್ಲಿ ಭಾಷಣ ಮಾಡಿದ ಮೋದಿ, ಜಾಗತಿಕ ಮಟ್ಟದಲ್ಲಿ ಡಿಜಿಟಲ್‌ ಯುಗ ಆರಂಭವಾಗಿದೆ. ಭಾರತ ಕೂಡ ಇದಕ್ಕೆ ಮುಕ್ತವಾಗಿ ತೆರೆದುಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಡಿಜಿಟಲೀಕರಣದಿಂದ ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದು ತಿಳಿಸಿದ್ದಾರೆ.

 • ಸಿಂಗಾಪುರ ಆರ್ಥಿಕ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಮುಖ್ಯ ಹಬ್‌ ಆಗಿದೆ. ಹಣಕಾಸು ವಿಷಯದಲ್ಲಿ ಡಿಜಿಟಲೀಕರಣಕ್ಕೆ ಈ ದೇಶ ಸಾಕಷ್ಟು ಒತ್ತು ನೀಡಿದೆ. ಈ ನಿಟ್ಟಿನಲ್ಲಿ ಆಯೋಜನೆ ಮಾಡುತ್ತಿರುವ ಫಿನ್‌ಟೆಕ್‌ ಫೆಸ್ಟಿವಲ್‌ ವಿಶ್ವಾಸದ ಪ್ರತೀಕವಾಗಿದೆ.

ಡಿಜಿಟಲೀಕರಣದ ಉಪಯೋಗಗಳು

 • ಡಿಜಿಟಲೀಕರಣದಿಂದಾಗಿ ದೇಶದಲ್ಲಿ ಹಲವಾರು ಯೋಜನೆಗಳನ್ನು ಆರಂಭಿಸಲು ಸಾಧ್ಯವಾಗಿದೆ. ಇದರಿಂದಾಗಿ ವಿಶ್ವದ ಅತ್ಯಂತ ಬೃಹತ್ ಆರೋಗ್ಯ ವಿಮೆ ಯೋಜನೆ ಆಯುಷ್ಮಾನ್‌ ಭಾರತ್‌ ಅನ್ನು ಆರಂಭಿಸಲು ಸಾಧ್ಯವಾಯಿತು. ಡಿಜಿಟಲ್‌ ತಂತ್ರಜ್ಞಾನದ ಯಶಸ್ಸಿಗೆ ಇದೊಂದು ಉತ್ತಮ ಉದಾಹರಣೆ
 • ಭಾರತದಲ್ಲಿ 128 ಬ್ಯಾಂಕ್‌ಗಳು ಯುಪಿಐ ಜತೆ ಲಿಂಕ್‌ ಆಗಿವೆ. ಇದು ವಿಶ್ವದಲ್ಲಿಯೇ ಅತಿ ದೊಡ್ಡ ಜಾಲಗಳಲ್ಲಿ ಒಂದಾಗಿದೆ. ಡಿಜಿಟಲ್‌ ಪೇಮೆಂಟ್‌ಗೆ ಭಾರತ ಒತ್ತು ನೀಡಿರುವುದು, ಅದರಲ್ಲೂ ರೂಪೇ ಕಾರ್ಡ್‌ಗಳು ಈಗ ಬಹುತೇಕ ಎಲ್ಲ ಭಾರತೀಯನ ಕೈಯಲ್ಲಿ ಇದೆ. ಗ್ರಾಮೀಣ ಭಾರತದಲ್ಲಿಯೂ ಈಗ ತಂತ್ರಜ್ಞಾನ, ಡಿಜಿಟಲ್‌ ವಹಿವಾಟು ಜೋರಾಗಿ ಸಾಗುತ್ತಿರುವುದಕ್ಕೆ ಕಳೆದ ನಾಲ್ಕು ವರ್ಷಗಳಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಗಳು ಸಹಕಾರಿಯಾಗಿವೆ

APIX (ಅಪ್ಲಿಕೇಷನ್ ಪ್ರೊಗ್ರಾಮಿಂಗ್ ಇಂಟರ್ಫೇಸ್ ಎಕ್ಸ್ಚೇಂಜ್)

 • ಬ್ಯಾಂಕ್ ಖಾತೆ ಹೊಂದದವರನ್ನು ಬ್ಯಾಂಕಿಂಗ್ ವಲಯಕ್ಕೆ ಪರಿಚಯಿಸುವ ನೂತನ ‘ಅಪಿಕ್ಸ್’ ತಂತಜ್ಞಾನಕ್ಕೆ ಪ್ರಧಾನಿ ಮೋದಿ ಸಿಂಗಾಪುರದಲ್ಲಿ ಚಾಲನೆ ನೀಡಲಿದ್ದಾರೆ.
 • 23 ದೇಶಗಳಲ್ಲಿ ಅಪಿಕ್ಸ್ ಬಳಕೆಗೆ ಬರಲಿದೆ. ಹೈದರಾಬಾದ್, ಕೊಲಂಬೊ ಮತ್ತು ಲಂಡನ್​ಗಳ ಸಾಫ್ಟ್​ವೇರ್ ತಂತ್ರಜ್ಞರು ಇದನ್ನು ಅಭಿವೃದ್ಧಿಪಡಿಸಿದ್ದಾರೆ.
 • ಅಮೆರಿಕದ ಬಾಸ್ಟನ್ ಮೂಲದ ವರ್ಟುಸಾ ಗ್ರಾಮೀಣ ಭಾಗದ ಸಣ್ಣ ಬ್ಯಾಂಕ್​ಗಳಿಗಾಗಿಯೇ ಈ ತಂತ್ರಜ್ಞಾನವನ್ನು ರೂಪಿಸಲಾಗಿದೆ. ಇದರಿಂದ ಬ್ಯಾಂಕ್ ಖಾತೆ ಹೊಂದಿಲ್ಲದ 200 ಕೋಟಿ ಜನರು ಬ್ಯಾಂಕ್ ಮೂಲಕ ವಹಿವಾಟು ನಡೆಸಲು ಅನುಕೂಲವಾಗಲಿದೆ .

ಸಿಂಗಪುರ್ ಫಿನ್ಟೆಕ್ ಫೆಸ್ಟಿವಲ್ (ಎಸ್ಎಫ್ಎಫ್)

 • ಸಿಂಗಪುರ್ ಫಿನ್ಟೆಕ್ ಫೆಸ್ಟಿವಲ್ (ಎಸ್ಎಫ್ಎಫ್) – ಅಥವಾ ಫಿನ್ಟೆಕ್ಈಗಾಗಲೇ ಹಣಕಾಸು ತಂತ್ರಜ್ಞಾನದ ವಿಶ್ವದ ಅತಿ ದೊಡ್ಡ ಕಾರ್ಯಕ್ರಮವಾಗಿದೆ.
 • 2017 ರಲ್ಲಿ, ಈ ಘಟನೆಯು 100 ಕ್ಕೂ ಹೆಚ್ಚಿನ ದೇಶಗಳಿಂದ 30,000 ಪಾಲ್ಗೊಳ್ಳುವವರನ್ನು ಆಕರ್ಷಿಸಿತು. ಎಸ್ಎಫ್ಎಫ್ ಮೂರು ದಿನ ಕಾನ್ಫರೆನ್ಸ್ ಮತ್ತು ಫಿನ್ಟೆಕ್ ಸಂಸ್ಥೆಗಳ ಮತ್ತು ಸಾಮರ್ಥ್ಯಗಳ ಪ್ರದರ್ಶನ, ಫಿನ್ಟೆಕ್ ಪರಿಹಾರಗಳ ಜಾಗತಿಕ ಸ್ಪರ್ಧೆ ಮತ್ತು ಹೊಂದಾಣಿಕೆಯ ಉದ್ಯಮಿಗಳು ಮತ್ತು ಹೂಡಿಕೆ ಬಂಡವಾಳದ ವೇದಿಕೆಯನ್ನು ಒಳಗೊಂಡಿರುತ್ತದೆ.

ವಿಶ್ವಸಂಸ್ಥೆ ವರದಿ

4.

ಸುದ್ಧಿಯಲ್ಲಿ ಏಕಿದೆ ?ವಿಶ್ವಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಸಂಖ್ಯೆ ನಿರಂತರವಾಗಿ ಇಳಿಮುಖವಾಗುತ್ತಿದೆ.

 • 2012ರಿಂದ 2017ರ ಅವಧಿಯಲ್ಲಿ ಇದು ಶೇ.22ರಿಂದ ಶೇ.18ಕ್ಕೆ ಕಡಿಮೆಯಾಗಿದೆ. ಮೊದಲ ಬಾರಿಗೆ 10 ಲಕ್ಷಕ್ಕಿಂತ ಕೆಳಕ್ಕಿಳಿದಿದೆ.
 • ವಿಶ್ವದಲ್ಲಿ 5 ವರ್ಷದೊಳಗಿನ ಪ್ರತಿ 1000 ಮಕ್ಕಳಲ್ಲಿ ಸರಾಸರಿ 39 ಮಂದಿ ಸಾವಿಗೀಡಾಗುತ್ತಿದ್ದಾರೆ. ಭಾರತದಲ್ಲೂ ಇದೇ ಮಟ್ಟಕ್ಕೆ ಇಳಿಕೆಯಾಗಿರುವುದು ಗಮನಾರ್ಹ. ಹೆಣ್ಣು ಮಕ್ಕಳ ಮೃತ್ಯುವಿನ ಪ್ರಮಾಣದಲ್ಲೂ ಶೇ.10ರಿಂದ ಶೇ.5ಕ್ಕೆ ತಗ್ಗಿದೆ.
 • ಹೀಗಿದ್ದರೂ, ಯುನಿಸೆಫ್‌, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ವರ್ಲ್ಡ್‌ ಬ್ಯಾಂಕ್‌ ಗ್ರೂಪ್‌ನ ಪ್ರಕಾರ, 2017ರಲ್ಲಿ 15 ವರ್ಷದೊಳಗಿನ 63 ಲಕ್ಷ ಮಕ್ಕಳು ಮೃತಪಟ್ಟಿದ್ದಾರೆ. ಇದರಲ್ಲಿ 54 ಲಕ್ಷ ಮಕ್ಕಳು 5 ವರ್ಷದೊಳಗೆ ಸಾವಿಗೀಡಾಗಿದ್ದಾರೆ. ಇದರಲ್ಲಿ ಸುಮಾರು ಅರ್ಧದಷ್ಟು ನವಜಾತ ಶಿಶುಗಳಾಗಿವೆ.

ಆಫ್ರಿಕಾದಲ್ಲಿ ಮಕ್ಕಳ ಮರಣ ಹೆಚ್ಚು:

 • ಜಗತ್ತಿನಲ್ಲಿ ಐದು ವರ್ಷದೊಳಗಿನ ಮಕ್ಕಳ ಸಾವು ಅತಿ ಹೆಚ್ಚಾಗಿ ಆಫ್ರಿಕಾದ ರಾಷ್ಟ್ರಗಳಲ್ಲಿ ಸಂಭವಿಸಿತ್ತದೆ. 2017ರಲ್ಲಿ ಅರ್ಧದಷ್ಟು ಮಕ್ಕಳ ಸಾವು ಆಫ್ರಿಕಾದಲ್ಲೇ ಆಗಿತ್ತು.

ಶಿಶು ಮರಣಕ್ಕೆ ಕಾರಣ:

 1. ಜನನ ಸಂದರ್ಭದ ಸಂಕೀರ್ಣ ಸಮಸ್ಯೆಗಳು.
 2. ನ್ಯುಮೋನಿಯಾ
 3. ಅತಿ ಸಾರ
 4. ಮಲೇರಿಯಾ

ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ತೆಗೆದುಕೊಂಡ ಕ್ರಮಗಳು

 • ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ, ದೇಶದ ಎಲ್ಲಾ ರಾಜ್ಯಗಳಲ್ಲಿ ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸಲು ಕೆಳಗಿನ ಪ್ರಮುಖ ಮಧ್ಯಸ್ಥಿಕೆಗಳು ಜಾರಿಗೆ ತರಲಾಗುತ್ತಿದೆ.
 • ಜನನಿ ಸುರಕ್ಷ ಯೋಜನೆ (ಜೆಎಸ್ವೈ) ಮೂಲಕ ಸಾಂಸ್ಥಿಕ ಪ್ರಸವವನ್ನು  ಉತ್ತೇಜಿಸುವುದು:
 • ಮಗುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡಲು ವಿವಿಧ ಹಂತಗಳಲ್ಲಿ ಸೌಲಭ್ಯ ಆಧಾರಿತ ಹೊಸ-ಜನನ ಆರೈಕೆಗೆ ಒತ್ತು ನೀಡುವುದು
 • ಆರೋಗ್ಯ ರಕ್ಷಣೆ ಪೂರೈಕೆದಾರರ ಸಾಮರ್ಥ್ಯ ನಿರ್ಮಾಣ
 • ಅಪೌಷ್ಟಿಕತೆಯ ನಿರ್ವಹಣೆ
 • ಸೂಕ್ತ ಶಿಶು ಮತ್ತು ಯಂಗ್ ಚೈಲ್ಡ್ ಫೀಡಿಂಗ್ (ಐವೈಸಿಎಫ್) ಪದ್ಧತಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಲ್ಲಿ ಒಗ್ಗೂಡಿಸಿ ನೀಡಲಾಗುತ್ತಿದೆ.
 • ಯುನಿವರ್ಸಲ್ ಇಮ್ಯುನಿಜೇಷನ್ ಪ್ರೋಗ್ರಾಂ (ಯುಐಪಿ)
 • ಜನನಿ ಶಿಶು ಸುರಕ್ಷಾ ಕಾರ್ಯಕ್ರಮ (ಜೆಎಸ್ಎಸ್ಕೆ)
 • ಗೃಹಾಧಾರಿತ ಹೊಸ ಜನನ ಆರೈಕೆ (HBNC)
 • ತಾಯಿ ಮತ್ತು ಮಕ್ಕಳ ಟ್ರ್ಯಾಕಿಂಗ್ ವ್ಯವಸ್ಥೆ (MCTS)

ಸ್ವದೇಶಿ ರುಪೇ ಕಾರ್ಡ್‌!

5.

ಸುದ್ಧಿಯಲ್ಲಿ ಏಕಿದೆ ? ಕೇವಲ 6 ವರ್ಷಗಳಲ್ಲಿ 50 ಕೋಟಿ ರುಪೇ ಕಾರ್ಡ್‌ ಬಳಕೆಯಾಗುತ್ತಿದೆ. ವಿದೇಶಿ ಕಂಪನಿಗಳಿಗೆ ಗ್ರಾಹಕರ ಸಂಖ್ಯೆ ಇಳಿಯುತ್ತಿದೆ.

 • ಭಾರತದಲ್ಲಿ ಇದುವರೆಗೆ ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ನದ್ದೇ ಅಬ್ಬರವಿತ್ತು. ಜನತೆ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ಮಾಡುವ ಪ್ರತಿಯೊಂದು ಪೇಮೆಂಟ್‌ನಲ್ಲೂ ನಿಗದಿತ ಶುಲ್ಕವನ್ನು ಆಯಾ ಕಾರ್ಡ್‌ ಕಂಪನಿಗಳು ಪಡೆಯುತ್ತವೆ.

ಹಿನ್ನಲೆ

 • ರುಪೇ ಕಾರ್ಡ್‌ ಬಳಸುವ ಮೂಲಕ ದೇಶಸೇವೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಕರೆಗೆ ಅಸಂಖ್ಯಾತ ಮಂದಿ ಭಾರತೀಯರು ಸ್ಪಂದಿಸಿದ್ದು, ವೀಸಾ, ಮಾಸ್ಟರ್‌ ಕಾರ್ಡ್‌ಗಳ ಬದಲಿಗೆ ಸ್ವದೇಶಿ ರುಪೇ ಕಾರ್ಡ್‌ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
 • ನಾವು ವಿದೇಶಿ ಮೂಲದ ಕಾರ್ಡ್‌ಗಳನ್ನು ಬಳಸಿದರೆ, ಅದಕ್ಕೆ ತಗಲುವ ಶುಲ್ಕ ವಿದೇಶಕ್ಕೆ ಹೋಗುತ್ತದೆ. ಆದರೆ ರುಪೇ ಕಾರ್ಡ್‌ ಬಳಸಿದರೆ ನಮ್ಮ ದೇಶದಲ್ಲೇ ದುಡ್ಡು ಇರುತ್ತದೆ. ಅದರಿಂದ ಸರಕಾರ ಗಳಸುವ ಆದಾಯವನ್ನು ಸಾರ್ವಜನಿಕ ಆಸ್ಪತ್ರೆ, ಬಡವರಿಗೆ ಶಿಕ್ಷಣ, ಗ್ರಾಮಗಳಲ್ಲಿ ಮೂಲ ಸೌಕರ್ಯ ಇತ್ಯಾದಿಗಳಿಗೆ ಖರ್ಚು ಮಾಡಬಹುದು. ಎಲ್ಲರಿಗೂ ಗಡಿಗೆ ತೆರಳಿ ದೇಶ ಕಾಯಲು ಸಾಧ್ಯವಾಗದು. ಆದರೆ ರುಪೇ ಕಾರ್ಡ್‌ ಬಳಸಿಯೂ ದೇಶ ಸೇವೆ ಮಾಡಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದರು

ಸ್ವದೇಶಿ ರುಪೇಕಾರ್ಡ್‌ :

 • ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ವ್ಯಾಪ್ತಿಯಲ್ಲಿರುವ ನ್ಯಾಶನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ಎಂಬ ಸಂಸ್ಥೆಯು ರುಪೇ ಕಾರ್ಡ್‌ ಅನ್ನು ನಿರ್ವಹಿಸುತ್ತಿದೆ. ಇದರ ರುಪೇ ಕಾರ್ಡ್‌ 2012ರ ಮಾರ್ಚ್‌ 26ರಂದು ಬಿಡುಗಡೆಗೊಳಿಸಲಾಯಿತು. ವೀಸಾ, ಮಾಸ್ಟರ್‌ ಕಾರ್ಡ್‌ಗೆ ಪರ್ಯಾಯವಾಗಿ ಭಾರತದ ಸಂಪೂರ್ಣ ಸ್ವದೇಶಿ ಪೇಮೆಂಟ್‌ ಕಾರ್ಡ್‌ ಇದಾಗಿದೆ. ಹಾಗೂ ಸಂಪೂರ್ಣ ಸುರಕ್ಷಿತ.

ರುಪೇ ಕಾರ್ಡ್‌ ಎಲ್ಲಿ ಸಿಗುತ್ತದೆ?

 • ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಇಂಡಿಯಾ, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಸಿಟಿ ಬ್ಯಾಂಕ್‌ ಮತ್ತು ಎಚ್‌ಎಸ್‌ಬಿಸಿಯನ್ನು ರುಪೇ ಕಾರ್ಡ್‌ ವಿತರಣೆಗೆ 10 ಪ್ರಮುಖ ಬ್ಯಾಂಕ್‌ಗಳೆಂದು ಎನ್‌ಪಿಸಿಐ ಗುರುತಿಸಿದೆ. ಮಾತ್ರವಲ್ಲದೆ ಎಲ್ಲ ಪ್ರಮುಖ ಪಿಎಸ್‌ಯು ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌, ಸಹಕಾರಿ ಮತ್ತು ಗ್ರಾಮೀಣ ಬ್ಯಾಂಕ್‌ಗಳು ರುಪೇ ಕಾರ್ಡ್‌ ವಿತರಿಸುತ್ತಿವೆ.

ರುಪೇ ಕಾರ್ಡ್‌ ಅನುಕೂಲವೇನು?

 • ಭಾರತದಲ್ಲಿ ಎಲ್ಲಿ ಬೇಕಾದರೂ ರುಪೇ ಕಾರ್ಡ್‌ ಬಳಸಬಹುದು. ಇತ್ತೀಚೆಗೆ ವಿದೇಶಗಳಲ್ಲೂ ಇದರ ಪ್ರಯೋಗ ನಡೆಯುತ್ತಿದೆ. ಇದರಲ್ಲಿ ಪೇಮೆಂಟ್‌ಗೆ ತಗಲುವ ವೆಚ್ಚ ವಿದೇಶಿ ಕಾರ್ಡ್‌ಗೆ ಹೋಲಿಸಿದರೆ ಕಡಿಮೆ.
 • ಎಲ್ಲ ಎಟಿಎಂ, ಸ್ವೈಪಿಂಗ್‌ ಮೆಶೀನ್‌ಗಳಲ್ಲಿ ಉಪಯೋಗಿಸಬಹುದು.
 • ಕ್ಯಾಶ್‌ ಬ್ಯಾಕ್‌, ವಿಮೆ, ವಿಶೇಷ ರಿಯಾಯಿತಿಗಳೂ ಆಗಿಂದಾಗ್ಗೆ ದೊರೆಯುತ್ತದೆ.
 • ವಿದೇಶಿ ಡೆಬಿಟ್‌ ಕಾರ್ಡ್‌ಗೆ ಹೋಲಿಸಿದರೆ, ರುಪೇ ಕಾರ್ಡ್‌ನಲ್ಲಿ ಪೇಮೆಂಟ್‌ಗೆ ತಗಲುವ ವೆಚ್ಚ 2/3ರಷ್ಟು ಅಗ್ಗ. ಉದಾಹರಣೆಗೆ 2,000 ರೂ. ವರ್ಗಾವಣೆಗೆ ವಿದೇಶಿ ಕಾರ್ಡ್‌ನಲ್ಲಿ 25 ರೂ. ತಗಲಿದರೆ, ರುಪೇ ಕಾರ್ಡ್‌ನಲ್ಲಿ 2.50 ರೂ. ಸಾಕು.
 • ವೀಸಾ ಅಥವಾ ಮಾಸ್ಟರ್‌ ಕಾರ್ಡ್‌ಗೆ ಹೋಲಿಸಿದರೆ ರುಪೇ ಕಾರ್ಡ್‌ನಲ್ಲಿ ಹಲವು ಸೌಲಭ್ಯಗಳು ಸಿಗುತ್ತವೆ. ಆದರೆ ವಿದೇಶಗಳಲ್ಲಿ ರುಪೇ ಕಾರ್ಡ್‌ ಬಳಕೆ ಸದ್ಯಕ್ಕೆ ವ್ಯಾಪಕವಾಗಿಲ್ಲ ಎನ್ನುವುದು ನಿಜ. ಆದರೆ ದೇಶದೊಳಗೆ ಸರ್ವವ್ಯಾಪಿ ಬಳಸಬಹುದು.

ಪೂರ್ವ ಏಷ್ಯಾ ಶೃಂಗಸಭೆ

ಸುದ್ಧಿಯಲ್ಲಿ ಏಕಿದೆ ?ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಅಮೆರಿಕ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ರನ್ನು ಭೇಟಿ ಮಾಡಿ ದ್ವೀಪಕ್ಷೀಯ ಮಾತುಕತೆ ನಡೆಸಿದ್ದಾರೆ.

 • ಸಿಂಗಾಪುರದಲ್ಲಿ ಆಯೋಜನೆಯಾಗಿರುವ 13ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ವಿಚಾರ ಪ್ರಮುಖ ಅಜೆಂಡಾವಾಗಿದ್ದು, ಪರಸ್ಪರ ವಾಣಿಜ್ಯ ಸಹಕಾರ ಪ್ರಮುಖ ಉದ್ದೇಶವಾಗಿದೆ.

ಪೂರ್ವ ಏಷ್ಯಾ ಶೃಂಗಸಭೆ (ಇಎಎಸ್)

 • ಪೂರ್ವ ಏಷ್ಯಾದ ಶೃಂಗಸಭೆ (ಇಎಎಸ್) 2005 ರಲ್ಲಿ 18 ದೇಶಗಳ ನಾಯಕರ ಸಮ್ಮುಖದಲ್ಲಿ ವಾರ್ಷಿಕವಾಗಿ ನಡೆಯುವ ಶೃಂಗ ಸಭೆಯಾಗಿದೆ . ಪೂರ್ವ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಏಷ್ಯಾದ ಪ್ರದೇಶಗಳಲ್ಲಿ 16 ದೇಶಗಳು ವೇದಿಕೆಯ ಸದಸ್ಯರಾಗಿದ್ದವು. ಸದಸ್ಯತ್ವವು 2011 ರಲ್ಲಿ ಆರನೇ ಇಎಎಸ್ನಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ರಷ್ಯಾ ಸೇರಿದಂತೆ 18 ದೇಶಗಳಿಗೆ ವಿಸ್ತರಿಸಿದೆ.
 • ಅಸೋಸಿಯೇಶನ್ ಆಫ್ ಆಗ್ನೇಯ ಏಷಿಯನ್ ನೇಷನ್ಸ್ (ಎಎಸ್ಇಎನ್) ನಾಯಕರ ಸಭೆಗಳ ನಂತರ ಇಎಎಸ್ ಸಭೆಗಳು ನಡೆಯುತ್ತವೆ.
 • ಮೊದಲ ಶೃಂಗಸಭೆಯು 14 ಡಿಸೆಂಬರ್ 2005 ರಂದು ಮಲೇಷಿಯಾದ ಕೌಲಾಲಂಪುರ್ನಲ್ಲಿ ನಡೆಯಿತು.
 • ಪೂರ್ವ ಏಷ್ಯಾ ಶೃಂಗಸಭೆಯು 10 ಏಷಿಯಾನ್ ಸದಸ್ಯ ರಾಷ್ಟ್ರಗಳಲ್ಲದೆ ಭಾರತ, ಚೀನಾ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಯುನೈಟೆಡ್ ಸ್ಟೇಟ್ಸ್ ಮತ್ತು ರಷ್ಯಾಗಳನ್ನು ಒಳಗೊಂಡಿದೆ. ಪೂರ್ವ ಏಷ್ಯಾ ಸಮ್ಮೇಳನದ ಭಾರತವು ಸಂಸ್ಥಾಪಕ ಸದಸ್ಯ.
 • ಪೂರ್ವ ಏಷ್ಯಾದ ಶೃಂಗಸಭೆಯ ಚೌಕಟ್ಟಿನೊಳಗೆ ಪ್ರಾದೇಶಿಕ ಸಹಕಾರದ ಪ್ರಾಶಸ್ತ್ಯದ ಪ್ರದೇಶಗಳು:
 • ಇವು:ಪರಿಸರ ಮತ್ತು ಶಕ್ತಿ, ಶಿಕ್ಷಣ, ಹಣಕಾಸು, ಜಾಗತಿಕ ಆರೋಗ್ಯ ಸಮಸ್ಯೆಗಳು ಮತ್ತು ಸಾಂಕ್ರಾಮಿಕ ರೋಗಗಳು, ನೈಸರ್ಗಿಕ ವಿಕೋಪ ನಿರ್ವಹಣೆ

ಏಷಿಯಾನ್ ಸಂಪರ್ಕ

 • ಇಎಸ್ಎಎಸ್ ಏಷಿಯಾನ್ ನ ಉಪಕ್ರಮವಾಗಿದೆ ಮತ್ತು ಇದು ಏಷಿಯಾನ್ ಕೇಂದ್ರೀಯತೆಯ ಆಧಾರದ ಮೇಲೆ ಆಧರಿಸಿದೆ.
 • ಇದು ಪ್ರಾದೇಶಿಕ ವಾಸ್ತುಶಿಲ್ಪದಲ್ಲಿ ರಾಜಕೀಯ, ಭದ್ರತೆ ಮತ್ತು ಸಾಮಾನ್ಯ ಪ್ರಾದೇಶಿಕ ಕಾಳಜಿಯ ಆರ್ಥಿಕ ವಿಚಾರಗಳ ಬಗ್ಗೆ ಆಯಕಟ್ಟಿನ ಸಂಭಾಷಣೆ ಮತ್ತು ಸಹಕಾರಕ್ಕಾಗಿ ಒಂದು ವೇದಿಕೆಯಾಗಿ ವಿಕಸನಗೊಂಡಿತು ಮತ್ತು ಪ್ರಾದೇಶಿಕ ವಾಸ್ತುಶಿಲ್ಪದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶೃಂಗಸಭೆಗೆ ವ್ಯಾಪಾರ ಕೂಡ ಒಂದು ಮುಖ್ಯವಾದ ಕೇಂದ್ರವಾಗಿದೆ

Related Posts
“2nd ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಸ್ವಚ್ಛ ಕ್ಯಾಂಪಸ್’ ಸುದ್ಧಿಯಲ್ಲಿ ಏಕಿದೆ ?ದೇಶದ ವಿಶ್ವವಿದ್ಯಾಲಯಗಳ ‘ಸ್ವಚ್ಛ ಕ್ಯಾಂಪಸ್’ ರ‍್ಯಾಂಕಿಂಗ್ ಪಟ್ಟಿ ಯಲ್ಲಿ ಕೆಎಲ್​ಇ ಸಂಸ್ಥೆಯ ಉನ್ನತ ಶಿಕ್ಷಣ ಅಕಾಡೆಮಿ ಹಾಗೂ ಸಂಶೋಧನೆ ಕೇಂದ್ರಕ್ಕೆ (ಕೆಎಲ್​ಇ ವಿವಿ) 3ನೇ ಸ್ಥಾನ ದೊರಕಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಲ್​ಇ ಸಂಸ್ಥೆಯ ಉನ್ನತ ಶಿಕ್ಷಣ ಅಕಾಡೆಮಿ ...
READ MORE
“8th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
'ಸ್ವಚ್ಛ ಸರ್ವೇಕ್ಷಣೆ-2019 ಕಾರ್ಯಾಗಾರ' ಸುದ್ಧಿಯಲ್ಲಿ ಏಕಿದೆ ? ಕರ್ನಾಟಕದ ನಗರಗಳು ಸ್ವಚ್ಛತಾ ಅಭಿಯಾನದಲ್ಲಿ ಹಿಂದುಳಿಯುತ್ತಿದ್ದು, ಇನ್ನು ಮುಂದಾದರೂ ಮುಂಚೂಣಿಗೆ ಬರುವ ಪ್ರಯತ್ನ ಮಾಡಬೇಕು ಎಂದು ಸ್ವಚ್ಛತಾ ಭಾರತ್‌ ಮಿಷನ್‌ನ ಜಂಟಿ ಕಾರ್ಯದರ್ಶಿ ವಿ.ಕೆ.ಜಿಂದಾಲ್‌ ಹೇಳಿದರು. ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್‌.ಟಾಟಾ ಸಭಾಂಗಣದಲ್ಲಿ ನಡೆದ 'ಸ್ವಚ್ಛ ಸರ್ವೇಕ್ಷಣೆ-2019 ...
READ MORE
ರೈತರ ಕೃಷಿ ಉತ್ಪನ್ನಗಳನ್ನು ಪಟ್ಟಣದ ಮಾರುಕಟ್ಟೆಗೆ ಸುರಕ್ಷಿತವಾಗಿ ಸಾಗಿಸುವುದಕ್ಕೆ ಮತ್ತು ಗ್ರಾಮೀಣ ಪ್ರದೇಶದ ಜನರಿಗೂ ಉತ್ತಮ ಸಂಪರ್ಕ ರಸ್ತೆ ಅನುಕೂಲ ಕಲ್ಪಿಸುವ ಯೋಜನೆ. ರಸ್ತೆ ನಿರ್ಮಾಣಗೊಂಡ ನಂತರದ ಐದು ವರ್ಷಗಳವರೆಗೆ ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕು, ಆರನೇ ವರ್ಷ ಮತ್ತೆ ಮರುಡಾಂಬರಿಕರಣಗೊಳಿಸಿ ಸರ್ಕಾರಕ್ಕೆ ಹಸ್ತಾಂತರಿಸುವುದು ಯೋಜನೆಯಲ್ಲಿರುವ ...
READ MORE
” 4th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪ್ರಥಮ ಇಲ್ಲವೇ ದ್ವಿತೀಯ ಭಾಷೆಯಾಗಿ ಕನ್ನಡ  ಸುದ್ಧಿಯಲ್ಲಿ ಏಕಿದೆ?ಎಲ್ಲ ಖಾಸಗಿ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧನೆ ಮಾಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಶಿಕ್ಷಣ ಇಲಾಖೆಯು ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದೆ. ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂದು 2017-18ನೇ ಸಾಲಿನಲ್ಲಿ ಆದೇಶಿಸಿದ್ದರೂ ...
READ MORE
“09 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಪೌರತ್ವ ವಿಧೇಯಕ ಸುದ್ಧಿಯಲ್ಲಿ ಏಕಿದೆ ?ಅಕ್ರಮ ವಲಸಿಗರ ಪಿಡುಗಿಗೆ ತಡೆ ಹಾಕುವ ಮಹತ್ವದ ಪೌರತ್ವ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಭಾರಿ ಗದ್ದಲದ ನಡುವೆ ಅಂಗೀಕಾರಗೊಂಡಿದೆ. ಏನಿದು ಪೌರತ್ವ ವಿಧೇಯಕ? ಪ್ರಸ್ತುತ ದೇಶದಲ್ಲಿ ಪೌರತ್ವ ಕಾಯಿದೆ-1955ರ ಪ್ರಕಾರ ವಲಸಿಗರನ್ನು ಗುರುತಿಸಲಾಗುತ್ತಿದೆ. ಈ ಕಾಯಿದೆಗೆ ತಿದ್ದುಪಡಿ ಮಾಡುವ ...
READ MORE
“23rd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಬಹು ಅಂಚೆ ಸೇವೆಗಳಿಗೆ ಏಕ ತಂತ್ರಜ್ಞಾನ ಭಾರತೀಯ ಅಂಚೆ ಇಲಾಖೆಯು ರಾಜ್ಯದ ಎಲ್ಲಾ ಅಂಚೆ ಕಚೇರಿಗಳಲ್ಲಿ 'ಕೋರ್‌ ಸಿಸ್ಟಂ ಇಂಟಿಗ್ರೇಟರ್‌' ಎಂಬ ನೂತನ ಸಾಫ್ಟ್‌ವೇರ್‌ ಅಳವಡಿಸುವ ಮೂಲಕ ಹಲವು ಅಂಚೆ ಸೇವೆಗಳಿಗೆ ಬೇರೆ ಬೇರೆಯಾಗಿದ್ದ ತಂತ್ರಾಂಶಗಳನ್ನು ರದ್ದುಪಡಿಸಿ, ಇದೀಗ ಏಕ ವ್ಯವಸ್ಥೆ ಅಳವಡಿಸಿಕೊಂಡಿದೆ. ಉಳಿತಾಯ ...
READ MORE
ಕಿಶೋರಿ ಶಕ್ತಿ ಯೋಜನೆಯು ಸಬಲಾ ಅನುಷ್ಠಾನಗೊಳ್ಳುತ್ತಿರುವ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 21 ಜಿಲ್ಲೆಗಳ 128 ಸಮಗ್ರ ಶಿಶು ಅಬಿವೃದ್ಧಿ ಯೋಜನೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಪ್ರತಿ ವರ್ಷ ಐಸಿಡಿಎಸ್ ಯೋಜನೆಯಡಿ 180 ಪ್ರಾಯಪೂರ್ವ ಬಾಲಕಿಯರಿಗೆ 5 ದಿನಗಳ ವಸತಿಯುತ ತರಬೇತಿಯನ್ನು ತಾಲ್ಲೂಕುಮಟ್ಟದ ತರಬೇತುದಾರರಿಂದ ...
READ MORE
ಪ್ರಸ್ತುತ ವಿದ್ಯಮಾನಗಳ ಮಾಸ ಪತ್ರಿಕೆ- ಜನವರಿ ತಿಂಗಳು 2017
Dear aspirants, NammaKPSC Is pleased to release the 2nd edition of Mahithi monthly Kannada. This has been  our dream and the demand of thousands of aspirants across Karnataka. This is like ...
READ MORE
“07 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಓಝೋನ್​ ಪದರ ರಂಧ್ರ ಕ್ರಮೇಣ ಕ್ಷೀಣ ಸುದ್ಧಿಯಲ್ಲಿ ಏಕಿದೆ ?ಭೂಮಿಯನ್ನು ಸೂರ್ಯನ ನೇರಳೆ ಕಿರಣಗಳಿಂದ ರಕ್ಷಣೆ ಮಾಡುವ ಓಝೋನ್​ ಪದರ ಸವಕಳಿ ಸುಧಾರಿಸುತ್ತಿದ್ದು ಪದರಕ್ಕೆ ಆಗಿದ್ದ ಹಾನಿ ಕ್ರಮೇಣ ಸರಿಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಹಿನ್ನೆಲೆ ಓಝೋನ್​ ಪದರ 1970ನೇ ಇಸ್ವಿಯಿಂದೀಚೆಗೆ ತೆಳುವಾಗುತ್ತಿದೆ ಎಂದು ...
READ MORE
“30th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಫ್ಯೂಚರ್ ಟ್ರೇಡಿಂಗ್ ಸುದ್ದಿಯಲ್ಲಿ ಏಕಿದೆ? ಪೆಟ್ರೋಲ್ ಹಾಗೂ ಡೀಸೆಲನ್ನು ಫ್ಯೂಚರ್ ಟ್ರೇಡಿಂಗ್ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಿನ್ನಲೆ: ಪೆಟ್ರೋಲ್, ಡೀಸೆಲ್ ಬೆಲೆ ದಿನೇದಿನೆ ಏರುತ್ತಿರುವ ಕಾರಣ ಪೆಟ್ರೋಲಿಯಂ ಕಂಪನಿಗಳ ಹಿತ ಕಾಯುವುದರ ಜತೆಗೆ ಜನರಿಗೂ ಕೊಂಚ ನಿಟ್ಟುಸಿರು ಬಿಡುವಂತಹ ಈ ಪ್ರಸ್ತಾವನೆಯನ್ನು ...
READ MORE
“2nd ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“8th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ನಮ್ಮ ಗ್ರಾಮ ನಮ್ಮ ರಸ್ತೆ’
” 4th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“09 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“23rd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಿಶೋರಿ ಶಕ್ತಿ ಯೋಜನೆ
ಪ್ರಸ್ತುತ ವಿದ್ಯಮಾನಗಳ ಮಾಸ ಪತ್ರಿಕೆ- ಜನವರಿ ತಿಂಗಳು 2017
“07 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“30th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *