“15 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಮೇಲ್ವರ್ಗ ಮೀಸಲು ಜಾರಿ

ಸುದ್ಧಿಯಲ್ಲಿ ಏಕಿದೆ ?ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನಿಕ ಸವಲತ್ತು ಅಧಿಕೃತವಾಗಿ ಅನುಷ್ಠಾನಗೊಂಡಿದೆ. ಈ ದಿಸೆಯಲ್ಲಿನ ಸಂವಿಧಾನ ತಿದ್ದುಪಡಿಗೆ ರಾಷ್ಟ್ರಪತಿಗಳ ಸಮ್ಮತಿ ಲಭಿಸಿತ್ತು.

 • ಸಂವಿಧಾನ (ತಿದ್ದುಪಡಿ) ಕಾಯಿದೆ –2019ರ ವಿಧಿ 1ರ ಉಪ ವಿಧಿ (2) ಮೂಲಕ ಮೀಸಲು ಸವಲತ್ತು ಜನವರಿ 14ರಿಂದ ಅನುಷ್ಠಾನಗೊಂಡಿದೆ,” ಎಂದು ಸಮಾಜ ಕಲ್ಯಾಣ ಮತ್ತು ಸಬಲೀಕರಣ ಸಚಿವಾಲಯ ಹೊರಡಿಸಿರುವ ಗೆಜೆಟ್‌ ಅಧಿಸೂಚನೆ ತಿಳಿಸಿದೆ. ಇದರೊಂದಿಗೆ ದೇಶದ ಎಲ್ಲ ಜನವರ್ಗವೂ ಒಂದಲ್ಲ ಒಂದು ಮೀಸಲಾತಿ ಸವಲತ್ತಿನ ವ್ಯಾಪ್ತಿಗೆ ಒಳಪಟ್ಟಂತಾಗಿದೆ.
 • ಮೇಲ್ವರ್ಗದ ಆರ್ಥಿಕ ದುರ್ಬಲರ ಕಲ್ಯಾಣಕ್ಕೆ ರಾಜ್ಯಗಳು ತಮ್ಮ ಇಚ್ಛೆಯಾನುಸಾರ ಮೀಸಲು ಕಲ್ಪಿಸಲು ಸಂವಿಧಾನದ ಪರಿಚ್ಛೇದ 15 ಮತ್ತು 16ನೇ ವಿಧಿಗೆ ತಿದ್ದುಪಡಿ ಮಾಡಲಾಗಿದೆ.

ಕೇರಳದ ಅಗಸ್ತ್ಯರಕೂಡಂ ಬೆಟ್ಟ

ಸುದ್ಧಿಯಲ್ಲಿ ಏಕಿದೆ ?ಮಹಿಳೆಯರಿಗೆ ಅಘೋಷಿತ ನಿರ್ಬಂಧವಿದ್ದ ಕೇರಳದ ಎರಡನೇ ಅತಿ ಎತ್ತರದ ಬೆಟ್ಟ ‘ಅಗಸ್ತ್ಯರಕೂಡಂ’ಅನ್ನು 38 ವರ್ಷದ ಕೆ.ಧನ್ಯಾ ಸಾನಲ್‌ ಏರುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಇವರು ರಕ್ಷಣಾ ಸಚಿವಾಲಯದ ವಕ್ತಾರೆ.

ಹಿನ್ನಲೆ

 • ನೆಯ್ಯಾರ್‌ ವನ್ಯಜೀವಿಧಾಮದಲ್ಲಿ ಬರುವ ಅಗಸ್ತ್ಯರಕೂಡಂ ಬೆಟ್ಟಕ್ಕೆ ಮಹಿಳಾ ಚಾರಣಿಗರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಕೇರಳ ಹೈಕೋರ್ಟ್‌ ಕಳೆದ ನವೆಂಬರ್‌ನಲ್ಲಿ ರದ್ದುಗೊಳಿಸಿತ್ತು. ಇದಾದ ಬಳಿಕ ಚಾರಣ ಕೈಗೊಳ್ಳುವವರಿಗೆ ಕೇರಳದ ಅರಣ್ಯ ಇಲಾಖೆ ಐದು ದಿನಗಳ ಹಿಂದಷ್ಟೇ ಆನ್‌ಲೈನ್‌ ನೋಂದಣಿ ಆರಂಭಿಸಿ, ಮಹಿಳೆಯರಿಗೂ ಅವಕಾಶ ನೀಡಿತ್ತು. ಹೀಗೆ ಮೊದಲ ಬ್ಯಾಚ್‌ನಲ್ಲಿ ನೋಂದಣಿ ಮಾಡಿಸಿದ 100 ಚಾರಣಿಗರ ಜತೆಗೆ ಏಕೈಕ ಮಹಿಳೆಯಾಗಿ ಧನ್ಯಾ ಬೆಟ್ಟದ ತುದಿ ಏರಿದ್ದಾರೆ.
 • ಜೀವ ವೈವಿಧ್ಯದ ಆಗರವೆನಿಸಿರುವ ಅಗಸ್ತ್ಯರಕೂಡಂ ಯುನೆಸ್ಕೊದ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮಾರ್ಚ್‌ 1ರವರೆಗೂ ಟ್ರಕ್ಕಿಂಗ್‌ ನಡೆಯಲಿದೆ.

ಅಗಸ್ತ್ಯ ಮಲೈ ಬಗ್ಗೆ

 • ಅಗಸ್ತ್ಯ ಮಲೈ ಪಶ್ಚಿಮ ಘಟ್ಟ ಶಿಖರಶ್ರೇಣಿಯಲ್ಲಿ ಕೇರಳ ರಾಜ್ಯದಲ್ಲಿರುವ ಒಂದು ಶಿಖರ.ಇದು 6129 ಅಡಿ ಎತ್ತರವಿದೆ. ಈ ಶಿಖರದಿಂದ ಎರಡು ನದಿಗಳು ಜನಿಸುತ್ತವೆ. ತಾಮ್ರಪರ್ಣಿ ನದಿಯು ಪೂರ್ವಕ್ಕೆ ಹರಿದರೆ, ನೆಯ್ಯಾರ್ ನದಿಯು ಪಶ್ಚಿಮಕ್ಕೆ ಹರಿಯುತ್ತದೆ. ಪ್ರಾಚೀನ ನಂಬಿಕೆಯಂತೆ ಅಗಸ್ತ್ಯ ಮುನಿಯು ಯೋಗಿಯ ರೂಪದಲ್ಲಿ ಇನ್ನೂ ಈ ಶಿಖರದಲ್ಲಿ ವಾಸಿಸುತ್ತಿದ್ದಾರೆ ಎಂಬ ನಂಬಿಕೆಯಿದೆ .
 • ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ನೆಯ್ಯಾರ್ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯೊಳಗಿರುವ ಒಂದು ಎತ್ತರವಾದ ಬೆಟ್ಟ. ಈ ಶಿಖರವು ಕೇರಳದ ತಿರುವನಂತಪುರಂ ಜಿಲ್ಲೆಯ ಗಡಿಯ ಬಳಿ ತಮಿಳುನಾಡಿನ ಒಳಗೆ ಇದೆ. ಇದು ಭಾರತದ ಕೇರಳ (ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಯಲ್ಲಿ) ಮತ್ತು ತಮಿಳುನಾಡು (ಕನ್ಯಾಕುಮಾರಿ ಜಿಲ್ಲೆಯ ತಿರುನೆಲ್ವೇಲಿ ಜಿಲ್ಲೆ) ರಾಜ್ಯಗಳ ನಡುವೆ ‘ಅಗಸ್ಥ್ಯಮಲಬಯೋ ಸ್ಫರ ರೆಸೆರ್ವ್’ ಭಾಗವಾಗಿ ಗಡಿಯಲ್ಲಿ ನೆಲೆಗೊಂಡಿದೆ.
 • ಅಗಸ್ತ್ಯ ಮಲೈ ಹಿಂದೂ ಮಹರ್ಷಿ ಅಗಸ್ತ್ಯರ ಭಕ್ತರು ಯಾತ್ರಾ ಕೇಂದ್ರವಾಗಿದೆ ಹಾಗೂ ಅಗಸ್ತ್ಯ ಮರ್ಹಷಿಯನ್ನು ಹಿಂದೂ ಪುರಾಣಗಳಲ್ಲಿ ಏಳು ಋಷಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ತಮಿಳು ಭಾಷೆಯ ಅಗಸ್ತ್ಯರ ವರವೆಂದು ಪರಿಗಣಿಸಲಾಗಿದೆ. ಒಂದು ಪೂರ್ಣ ಗಾತ್ರದ ಅಗಸ್ತ್ಯರ ಪ್ರತಿಮೆ ಶಿಖರದ ಮೇಲಿದೆ ಮತ್ತು ಭಕ್ತರು ಆ ಪ್ರತಿಮೆಗೆ ಪೂಜೆಗಳನ್ನು ಒದಗಿಸುತ್ತಾರೆ.

ಕಂಪ್ಯೂಟರ್‌ ಕಣ್ಗಾವಲು:

11.

ಸುದ್ಧಿಯಲ್ಲಿ ಏಕಿದೆ ?ಹತ್ತು ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಕಂಪ್ಯೂಟರ್‌ ಕಣ್ಗಾವಲು ನಡೆಸಲು ಅನುಮತಿ ನೀಡಿದ ಕುರಿತು ಆರು ವಾರಗಳ ಒಳಗೆ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.

ಹಿನ್ನಲೆ

 • ಕೇಂದ್ರ ಸರ್ಕಾರದ 10 ಏಜೆನ್ಸಿಗಳು ದೇಶದಲ್ಲಿ ಬಳಕೆಯಾಗುತ್ತಿರುವ ಎಲ್ಲ ಕಂಪ್ಯೂಟರ್​ಗಳ ಮೇಲೂ ಕಣ್ಗಾವಲು (ಸ್ನೂಪಿಂಗ್) ಇಡಬಹುದು ಎಂದು ಸುತ್ತೋಲೆ ಹೊರಡಿಸಲಾಗಿತ್ತು. ಇದರಿಂದ ಕೇಂದ್ರ ಸರ್ಕಾರ ಅಧಿಕೃತ ಸ್ನೂಪಿಂಗ್​ಗೆ ಅವಕಾಶ ಮಾಡಿಕೊಟ್ಟಿದೆ. ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಪಿಐಎಲ್​ನಲ್ಲಿ ಆರೋಪಿಸಲಾಗಿದೆ.
 • ಕಳೆದ ವರ್ಷ ಡಿಸೆಂಬರ್ನಲ್ಲಿ ಗೃಹ ಕಾರ್ಯದರ್ಶಿ ಅವರು ಸಹಿ ಹಾಕಿದ ಆದೇಶದಲ್ಲಿ, ಹತ್ತು ಕೇಂದ್ರ ಏಜೆನ್ಸಿಗಳನ್ನು “ಯಾವುದೇ ಕಂಪ್ಯೂಟರ್ನಲ್ಲಿ ರಚಿಸಿದ, ಹರಡುವ, ಸ್ವೀಕರಿಸಿದ ಅಥವಾ ಸಂಗ್ರಹಿಸಿದ ಯಾವುದೇ ಮಾಹಿತಿಯ ಪ್ರತಿಬಂಧ, ಮೇಲ್ವಿಚಾರಣೆ ಮತ್ತು ಅಸಂಕೇತೀಕರಣ” ದ ಅಧಿಕಾರವನ್ನು ಅಳವಡಿಸಲಾಗಿದೆ ಎಂದು ಘೋಷಿಸಿತ್ತು .
 • ಮುಂಚೆ, ಗೃಹ ಸಚಿವಾಲಯವು ಕೇವಲ ಜನರ ಕರೆಗಳು ಮತ್ತು ಇಮೇಲ್ಗಳನ್ನು ಸ್ಕ್ಯಾನ್ ಮಾಡಬಹುದಾಗಿತ್ತು ಆದರೆ ಹೊಸ ಆದೇಶವು ಇಂಟೆಲಿಜೆನ್ಸ್ ಬ್ಯೂರೋ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಎನ್ಫೋರ್ಸ್ಮೆಂಟ್ ಡೈರೆಕ್ಟರಿ, ಕೇಂದ್ರ ತೆರಿಗೆ ಮಂಡಳಿ, ನಿರ್ದೇಶನಾಲಯ ಆಫ್ ರೆವಿನ್ಯೂ ಇಂಟೆಲಿಜೆನ್ಸ್, ಸಿಬಿಐ, ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ, ಕ್ಯಾಬಿನೆಟ್ ಸೆಕ್ರೆಟರಿಯಟ್ (ಸಂಶೋಧನೆ ಮತ್ತು ವಿಶ್ಲೇಷಣಾ ವಿಂಗ್), ಸಿಗ್ನಲ್ ಇಂಟೆಲಿಜೆನ್ಸ್ನ ನಿರ್ದೇಶನಾಲಯ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಅಸ್ಸಾಂ ಮಾತ್ರ) ಮತ್ತು ದೆಹಲಿ ಪೊಲೀಸ್ ಆಯುಕ್ತರಿಗೆ ಅಧಿಕಾರವನ್ನು ನೀಡಿದೆ
 • ಮಾಹಿತಿ ತಂತ್ರಜ್ಞಾನ ಕಾಯಿದೆ 2000, ಸೈಬರ್ಅಪರಾಧವನ್ನು ನಿಭಾಯಿಸಲು ಮತ್ತು ವಿದ್ಯುನ್ಮಾನ ವಾಣಿಜ್ಯವನ್ನು ಎದುರಿಸಲು ಭಾರತದಲ್ಲಿ ಪ್ರಾಥಮಿಕ ಕಾನೂನುಯಾಗಿದೆ. ಇನ್ಫರ್ಮೇಷನ್ ಟೆಕ್ನಾಲಜಿ ಆಕ್ಟ್, 2000 ರ ವಿಭಾಗ 69 ರಲ್ಲಿ ಸೈಬರ್-ಅಪರಾಧ ತನಿಖೆಗಳಿಗೆ ಅಸಂಕೇತೀಕರಣದೊಂದಿಗೆ ತಡೆ ಮತ್ತು ಮೇಲ್ವಿಚಾರಣೆಯನ್ನು ಒದಗಿಸುತ್ತದೆ. ಮಾಹಿತಿ ತಂತ್ರಜ್ಞಾನ (ಪ್ರತಿಬಂಧ, ಮಾನಿಟರಿಂಗ್ ಮತ್ತು ಮಾಹಿತಿಯ ಅಸಂಕೇತೀಕರಣಕ್ಕಾಗಿ ಕಾರ್ಯವಿಧಾನಗಳು ಮತ್ತು ಸೇಫ್ ಗಾರ್ಡ್ಗಳು) ನಿಯಮಗಳು, 2009, ಪರಿಚ್ಛೇದ 69 ರ ಅಡಿಯಲ್ಲಿ ಸರ್ಕಾರವು ಸೂಚಿಸಲ್ಪಟ್ಟಿದೆ.
 • ಈ ನಡುವೆ, ”ಯುಪಿಎ ಅವಧಿಯಲ್ಲಿ 2009ರಲ್ಲಿ ರೂಪಿಸಲಾದ ನಿಯಮವನ್ನೇ ಜಾರಿಗೆ ತರಲಾಗಿದೆಯೇ ವಿನಾ ಇದು ಹೊಸ ನಿಯಮವಲ್ಲ,” ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.

ಅಂಟಾರ್ಟಿಕಾದಲ್ಲಿ ಹಿಮ ಕರಗುತ್ತಿದೆ

12.

ಸುದ್ಧಿಯಲ್ಲಿ ಏಕಿದೆ ?ಹವಾಮಾನ ವೈಪರೀತ್ಯ ಮತ್ತು ನಿರಂತರವಾಗಿ ಏರಿಕೆಯಾಗುತ್ತಿರುವ ತಾಪಮಾನದಿಂದಾಗಿ ಭೂಮಿಯ ದಕ್ಷಿಣ ಧ್ರುವದಲ್ಲಿರುವ ಅಂಟಾರ್ಟಿಕಾ ಖಂಡದಲ್ಲಿ ಹಿಮ 1980 ಕ್ಕೆ ಹೋಲಿಸಿದರೆ 6 ಪಟ್ಟು ಹೆಚ್ಚು ವೇಗದಲ್ಲಿ ಕರಗುತ್ತಿದೆ ಎಂದು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ.

ಹೇಗೆ ಪತ್ತೆಮಾಡಲಾಯಿತು?

 • ವಿಜ್ಞಾನಿಗಳು ಅಂಟಾರ್ಟಿಕಾ ಖಂಡದ ವೈಮಾನಿಕ ಚಿತ್ರಗಳು, ಉಪಗ್ರಹ ಚಿತ್ರಗಳು, ಉಪಗ್ರಹ ನಕ್ಷೆ ಮತ್ತು ಕಂಪ್ಯೂಟರ್​ ಮಾದರಿಗಳನ್ನು ಆಧರಿಸಿ 1979 ರಿಂದ ಇಲ್ಲಿಯವರೆಗೆ ಹಿಮ ಕರಗುತ್ತಿರುವ ಪ್ರಮಾಣವನ್ನು ಲೆಕ್ಕ ಹಾಕಿದ್ದಾರೆ.
 • ಈ ಸಂಶೋಧನೆಯಿಂದ ಆಘಾತಕಾರಿ ಸುದ್ದಿಯೊಂದು ತಿಳಿದು ಬಂದಿದ್ದು, ಮಾನವನ ಹಸ್ತಕ್ಷೇಪದಿಂದಾಗಿ 2009 ರಿಂದ ಇಲ್ಲಿಯವರೆಗೆ ಪ್ರತಿ ವರ್ಷ ಅಂಟಾರ್ಕಿಕಾದಲ್ಲಿ ಜಮೆಯಾಗಿದ್ದ 278 ಬಿಲಿಯನ್​ ಟನ್​ ಹಿಮ ಕರಗಿ ಸಮುದ್ರ ಸೇರಿದೆ ಎಂದು ತಿಳಿದು ಬಂದಿದೆ.

ಪರಿಣಾಮ

 • 1980 ರಲ್ಲಿ 44 ಬಿಲಿಯನ್ ​ಟನ್ ​ಹಿಮ ಕರಗುತ್ತಿತ್ತು. ಆದರೆ ಈ ಪ್ರಮಾಣ ಈಗ 6 ಪಟ್ಟು ಹೆಚ್ಚಿದೆ. 2017 ಕ್ಕೆ ಹೋಲಿಸಿದರೆ 2018ರಲ್ಲಿ ಹಿಮ ಕರಗುವ ಪ್ರಮಾಣ ಶೆ. 15ರಷ್ಟು ಹೆಚ್ಚಿದೆ.
 • ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ವೇಗವಾಗಿ ಹಿಮ ಕರಗುವ ಅಪಾಯ ಎದುರಾಗಿದೆ.
 • ಇದೇ ಪ್ರಮಾಣದಲ್ಲಿ ಹಿಮ ಕರಗಿದರೆ ಮುಂದಿನ ಶತಮಾನದ ವೇಳೆಗೆ ಸಮುದ್ರದ ಮಟ್ಟ ಕನಿಷ್ಠ 10 ಅಡಿ ಏರಿಕೆಯಾಗಲಿದೆ ಎಂದು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ಆಂತಕ ವ್ಯಕ್ತಪಡಿಸಿದ್ದಾರೆ.

ಪ್ರತಿಷ್ಠಿತ ಫಿಲಿಪ್​ ಕೊಟ್ಲೆರ್​ ಪ್ರಶಸ್ತಿ

13.

ಸುದ್ಧಿಯಲ್ಲಿ ಏಕಿದೆ ?ಪ್ರಧಾನಿ ಮೋದಿಯವರು ಅಮೆರಿಕದ ಪ್ರತಿಷ್ಠಿತ ಫಿಲಿಪ್​ ಕೊಟ್ಲೆರ್​ ಅಧ್ಯಕ್ಷೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 • ವಿಶ್ವಮಟ್ಟದಲ್ಲಿ ತಮ್ಮ ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
 • ಪ್ರಸಕ್ತ ಸಾಲಿನಿಂದ ಕೊಡಲಾಗುತ್ತಿದ್ದು ನರೇಂದ್ರ ಮೋದಿಯವರು ಪ್ರಶಸ್ತಿಗೆ ಭಾಜನರಾದ ಮೊದಲ ನಾಯಕರಾಗಿದ್ದಾರೆ.
 • ಪೀಪಲ್​, ಪ್ರಾಫಿಟ್​, ಪ್ಲಾನೆಟ್​ ಎಂಬ ಮೂರು ಅಂಶಗಳನ್ನು ಮುಖ್ಯವಾಗಿಟ್ಟುಕೊಂಡು ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಮೋದಿಯವರನ್ನು ಆಯ್ಕೆ ಮಾಡಲು ಕಾರಣಗಳು

 • ಮೋದಿಯವರು ವಿಶ್ವಮಟ್ಟದಲ್ಲಿ ಭಾರತವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
 • ಮೇಕ್​ ಇನ್​ ಇಂಡಿಯಾ, ಡಿಜಿಟಲ್​ ಇಂಡಿಯಾದಂಥ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ನಿಸ್ವಾರ್ಥವಾಗಿ ದೇಶ ಸೇವೆ ಮಾಡುತ್ತಿದ್ದಾರೆ.
 • ಆರ್ಥಿಕ, ಸಾಮಾಜಿಕ, ತಾಂತ್ರಿಕ ಕ್ಷೇತ್ರಗಳಲ್ಲಿ ದೇಶವನ್ನು ಸದೃಢಗೊಳಿಸಿ, ಪ್ರಗತಿಯತ್ತ ಕೊಂಡೊಯ್ದಿದ್ದಾರೆ ಎಂದು ಮೋದಿಯವರಿಗೆ ನೀಡಿದ ಸನ್ಮಾನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಫಿಲಿಪ್​ ಕೊಟ್ಲೆರ್​

 • ಫಿಲಿಪ್​ ಕೊಟ್ಲೆರ್​ ಅವರು ಅಮೆರಿಕಾದ ನಾರ್ತ್​ವೆಸ್ಟರ್ನ್​ ವಿಶ್ವವಿದ್ಯಾಲಯದ ಪ್ರತಿಭಾನ್ವಿತ ಪ್ರಾಧ್ಯಾಪಕರಾಗಿದ್ದವರು. ಅನಾರೋಗ್ಯದ ನಿಮಿತ್ತ ಅವರು ಸಮಾರಂಭಕ್ಕೆ ಗೈರಾಗಿದ್ದರು. ಫಿಲಿಪ್​ ಅನುಪಸ್ಥಿತಿಯಲ್ಲಿ ಯೂನಿವರ್ಸಿಟಿಯ ಜಗದೀಶ್​ ಸೇಠ್​ ಮೋದಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಸಿಪಿಇಸಿ ವಿದ್ಯುತ್ ಯೋಜನೆ

ಸುದ್ಧಿಯಲ್ಲಿ ಏಕಿದೆ ?ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್​ (ಸಿಪಿಇಸಿ) ಅರ್ಥ ಮಾಡಿಕೊಳ್ಳುತ್ತಿರುವ ಪಾಕಿಸ್ತಾನ, ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯಿಂದ ಹಿಂದೆ ಸರಿಯುತ್ತಿದೆ. ಈ ಕುರಿತು ಚೀನಾಗೆ ಪತ್ರ ಬರೆದಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ , ವಿದ್ಯುತ್ ಯೋಜನೆಯಿಂದ ಪಾಕ್ ಹೆಸರು ಕೈಬಿಡುವಂತೆ ಕೋರಿದ್ದಾರೆ.

ಕಾರಣಗಳು

 • ಈಗಾಗಲೇ ರಾಷ್ಟ್ರದಲ್ಲಿ ಸಾಕಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿದೆ ಎಂಬ ಕಾರಣವನ್ನು ಮೇಲ್ನೋಟಕ್ಕೆ ನೀಡಿದ್ದರೂ, ಚೀನಾ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಈ ನಿರ್ಧಾರ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
 • ಮುಂದಿನ ಕೆಲವು ವರ್ಷಗಳಲ್ಲಿ ಅನೇಕ ವಿದ್ಯುತ್ ಯೋಜನೆಗಳು ಪೂರ್ಣಗೊಳ್ಳಲಿದೆ. ಇದರಿಂದ ದೇಶದ ವಿದ್ಯುತ್ ಬೇಡಿಕೆ ಪೂರೈಕೆಯಾಗುತ್ತದೆ. ಹೀಗಾಗಿ ಸಿಪಿಇಸಿ ಅಡಿಯ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯಲ್ಲಿ ಪಾಕಿಸ್ತಾನವನ್ನು ಸೇರಿಸಿಕೊಳ್ಳುವ ನಿರ್ಧಾರ ಕೈಬಿಡಬೇಕು ಎಂದು ಪತ್ರದಲ್ಲಿ ಖಾನ್ ವಿವರಿಸಿದ್ದಾರೆ.
 • ಪಾಕ್ ಸರ್ಕಾರದ ಈ ನಿರ್ಧಾರಕ್ಕೆ ದಿವಾಳಿ ಅಂಚಿಗೆ ಬಂದಿರುವ ದೇಶದ ಅರ್ಥಿಕತೆ ಮುಖ್ಯ ಕಾರಣ ಎನ್ನಲಾಗಿದೆ. ಕರಾಚಿಯಿಂದ ಪೆಶಾವರದವರೆಗಿನ ರೈಲ್ವೆ ಯೋಜನೆಯಲ್ಲಿ -ಠಿ; 14,153 ಕೋಟಿ ಹೂಡಿಕೆಯನ್ನು ತಗ್ಗಿಸುವುದಾಗಿ ಪಾಕ್ ಕಳೆದ ಅಕ್ಟೋಬರ್​ನಲ್ಲಿ ಹೇಳಿತ್ತು.

ಏನಿದು ಯೋಜನೆ?

 • ನವಾಜ್ ಷರೀಫ್ ನೇತೃತ್ವದ ಸರ್ಕಾರ 1,320 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ರಹಿಮ್ ಯಾರ್ ಖಾನ್ ಕಲ್ಲಿದ್ದಲು ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಚೀನಾ ಜತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಇಮ್ರಾನ್ ಖಾನ್ ನೇತೃತ್ವದ ಸರ್ಕಾರ, ಈ ಯೋಜನೆ ಬಗ್ಗೆ ನಿರಾಸಕ್ತಿ ಹೊಂದಿದೆ. ಈ ಯೋಜನೆ ಬದಲಿಗೆ ಮಖ್ದೂಮ್ ಖುಸ್ರೂ ಬಖ್ತಿಯಾರ್ ಯೋಜನೆಗೆ ಪ್ರಧಾನಿ ಇಮ್ರಾನ್ ನೇತೃತ್ವದ ಜಂಟಿ ಸಮನ್ವಯ ಸಮಿತಿ ಕಳೆದ ತಿಂಗಳು ಒಪ್ಪಿಗೆ ನೀಡಿದೆ.

Related Posts
“2nd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಆರೋಗ್ಯ ಸೇವೆ ಸುದ್ಧಿಯಲ್ಲಿ ಏಕಿದೆ ? ಕಾಡನ್ನೇ ನಂಬಿಕೊಂಡು ಬದುಕು ನಡೆಸುವ ಬುಡಕಟ್ಟು ಜನರಿಗಾಗಿ ರಾಜ್ಯ ಸರಕಾರ ಸಂಚಾರಿ ಆರೋಗ್ಯ ಘಟಕ ಸೇವೆಯನ್ನು ಪ್ರಾರಂಭಿಸಿದೆ. ಯಾರು ಜಾರಿಗೆ ತರುತ್ತಾರೆ ? ಪರಿಶಿಷ್ಟ ಪಂಗಡಗಳ ಇಲಾಖೆಯಿಂದ ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ, ಬೆಳಗಾವಿ ಸಹಯೋಗದಲ್ಲಿ ಆರೋಗ್ಯ ಸೇವೆ ...
READ MORE
“1st ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಾತ್ಸಲ್ಯ ವಾಣಿ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಮಾಡುವುದು, ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದು ಹಾಗೂ ಕಾಲ ಕಾಲಕ್ಕೆ ಗರ್ಭಿಣಿಯರಿಗೆ ದೂರವಾಣಿಯಲ್ಲಿ ಅಗತ್ಯ ಮಾರ್ಗದರ್ಶನ ನೀಡುವ ಸಲುವಾಗಿ ರಾಜ್ಯ ಸರಕಾರ ‘ವಾತ್ಸಲ್ಯ ವಾಣಿ- 104’ ಯೋಜನೆ ಜಾರಿಗೆ ತಂದಿತು. ಇದು ...
READ MORE
“19 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಮೈಸೂರು ದಸರಾ ಸುದ್ಧಿಯಲ್ಲಿ ಏಕಿದೆ ?ದಶಕಗಳ ಇತಿಹಾಸವಿರುವ ಮೈಸೂರು ದಸರಾ ಸದಾ ಸುಂದರ. ನಾಡಹಬ್ಬದ ಆಚರಣೆಯ ಬಗೆ ಬದಲಾಗುತ್ತ ಬಂದಿದೆ. ಮೈಸೂರು ದಸರಾ ಕರ್ನಾಟಕದ ನಡಹಬ್ಬ (ರಾಜ್ಯ ಉತ್ಸವ) ಆಗಿದೆ. ಇದು ನವರಾತ್ರಿ (ನವ-ರಾತ್ರಿ ಎಂದರೆ ಒಂಭತ್ತು-ರಾತ್ರಿಗಳು) ಮತ್ತು ವಿಜಯದಶಮಿ ಎಂಬ ಕೊನೆಯ ದಿನದಿಂದ ಆರಂಭಗೊಂಡು ...
READ MORE
“3 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹೊಸ ವಾಹನ ನೋಂದಣಿ 2 ವರ್ಷ ಸ್ಥಗಿತ ಸುದ್ಧಿಯಲ್ಲಿ ಏಕಿದೆ ? ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಪರಿಹಾರದ ಹಿನ್ನೆಲೆಯಲ್ಲಿ ಮುಂದಿನ ಎರಡು ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸುವ ಚಿಂತನೆ ನಡೆದಿದೆ. ನಿರ್ಧಾರಕ್ಕೆ ಕಾರಣಗಳು ಬೆಂಗಳೂರು ಮಹಾನಗರದಲ್ಲಿ ವಾಹನಗಳ ಸಂಖ್ಯೆ ...
READ MORE
“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕಬ್ಬನ್‌ ಪಾರ್ಕ್‌ಗೆ ಏರ್‌ ಕ್ಲೀನರ್‌ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ರಾಜಧಾನಿಯಲ್ಲೂ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಈ ನಡುವೆ, ಅತಿ ಹೆಚ್ಚು ಜನರು ವಾಯು ಸೇವನೆಗೆ ಆಗಮಿಸುವ ಕಬ್ಬನ್‌ ಪಾರ್ಕ್‌ನಲ್ಲೂ ವಾಯು ಮಾಲಿನ್ಯ ಹೆಚ್ಚಿರುವುದನ್ನು ಮನಗಂಡು ಅಲ್ಲಿ ಗಾಳಿಯ ಶುದ್ಧೀಕರಣಕ್ಕೆ ಯಂತ್ರವನ್ನು ...
READ MORE
“29th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಾಣಿಜ್ಯ ಜಾಹೀರಾತು ಪ್ರದರ್ಶನ ಸುದ್ಧಿಯಲ್ಲಿ ಏಕಿದೆ ?ಸರಕಾರಿ ಕಾರ್ಯಕ್ರಮಗಳ ಪ್ರಚಾರ ಹೊರತುಪಡಿಸಿ, ಇತರೆ ಎಲ್ಲ ವಾಣಿಜ್ಯ ಜಾಹೀರಾತು ಪ್ರದರ್ಶನಗಳನ್ನು ಶಾಶ್ವತವಾಗಿ ನಿಷೇಧಿಸುವ ಸಂಬಂಧ ಬಿಬಿಎಂಪಿಯು ನೂತನ ಜಾಹೀರಾತು ನೀತಿ ಮತ್ತು ಬೈಲಾ ಸಿದ್ಧಪಡಿಸಿದೆ. ಇದು ಒಂದೆರಡು ತಿಂಗಳಲ್ಲೇ ಜಾರಿಗೆ ಬರಲಿದೆ. ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಉತ್ಪನ್ನಗಳ ...
READ MORE
“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ರಾಷ್ಟ್ರೀಯ ಯುವ ದಿನ ಸುದ್ಧಿಯಲ್ಲಿ ಏಕಿದೆ ?ಸ್ವಾಮಿ ವಿವೇಕಾನಂದರ ಸ್ವರಣಾರ್ಥ ಜ.12ನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. 1984 ರಲ್ಲಿ ಭಾರತ ಸರಕಾರ ದಿನವನ್ನು ರಾಷ್ಟ್ರೀಯ ಯುವ ...
READ MORE
“5th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪಶ್ಚಿಮಘಟ್ಟ ಸುದ್ಧಿಯಲ್ಲಿ ಏಕಿದೆ?ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿ ಆರು ರಾಜ್ಯಗಳಲ್ಲಿ ಹಾದುಹೋಗಿರುವ ಪಶ್ಚಿಮ ಘಟ್ಟಗಳ ಸಾಲಿನ 56,825 ಚದರ ಕಿಲೋಮೀಟರ್‌ ವ್ಯಾಪ್ತಿಯ ಜೈವಿಕ ಸೂಕ್ಷ್ಮ ಪ್ರದೇಶದ ವ್ಯಾಪ್ತಿ ಗುರುತಿಸಿ ರೂಪಿಸಲಾಗಿದ್ದ ಕರಡು ಅಧಿಸೂಚನೆಯ ಕುರಿತು ಕೇಂದ್ರ ಸರಕಾರ ಮತ್ತೊಮ್ಮೆ ರಾಜ್ಯಗಳ ಜತೆಗೆ ...
READ MORE
“08 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಲೆಕ್ಟ್ರಿಕ್ ಬಸ್ ಯೋಜನೆ ಸುದ್ಧಿಯಲ್ಲಿ ಏಕಿದೆ ?ಕೇಂದ್ರದ ಫಾಸ್ಟರ್ ಅಡಾಪ್ಷನ್ ಆಂಡ್ ಮಾನ್ಯುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (ಫೇಮ್ ಅನುದಾನದಲ್ಲಿ ಗುತ್ತಿಗೆ ಆಧಾರದಡಿ 150 ಎಲೆಕ್ಟ್ರಿಕ್ ಬಸ್​ಗಳನ್ನು ಬಿಎಂಟಿಸಿ ಹೊಂದಲಿದೆ. ಕಳೆದ ಸರ್ಕಾರದ ಅವಧಿಯಲ್ಲಿ ನಿಗಮ ಕರೆದಿದ್ದ ಟೆಂಡರ್​ನಲ್ಲಿ ಹೈದರಾಬಾದ್ ಮೂಲದ ಒಲೆಕ್ಟ್ರಾ ...
READ MORE
“6th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಜನತಾ ದರ್ಶನ’ ಸುದ್ಧಿಯಲ್ಲಿ ಏಕಿದೆ?ಮುಖ್ಯಮಂತ್ರಿಗಳ ಜನತಾದರ್ಶನಕ್ಕೆ ಜನರು ನೇರವಾಗಿ ಬರುವಂತಿಲ್ಲ. ಜಿಲ್ಲೆಯ ಮಟ್ಟದಲ್ಲಿ ಪರಿಹಾರ ಸಿಗದೇ ಇದ್ದರೆ ಮಾತ್ರ ಬರಬೇಕೆಂಬ ನಿಯಮಗಳನ್ನು ರೂಪಿಸಲಾಗಿದೆ. ಏಕೆ ಈ ನಿರ್ಧಾರ ? ಸಿಎಂ ಜನತಾ ದರ್ಶನಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಜನರು ಆಗಮಿಸುವುದಾದರೆ ಆಡಳಿತ ಯಂತ್ರ, ಅಧಿಕಾರಿ ವರ್ಗ ...
READ MORE
“2nd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“1st ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“19 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“3 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“29th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“5th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“08 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“6th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *