“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಬೃಂದಾವನಕ್ಕೆ ಡಿಸ್ನಿಲ್ಯಾಂಡ್‌ ಮಾದರಿ ಲುಕ್‌

1.

ಸುದ್ಧಿಯಲ್ಲಿ ಏಕಿದೆ ?ಕೃಷ್ಣರಾಜಸಾಗರ ಜಲಾಶಯದ ಬೃಂದಾವನ ಉದ್ಯಾನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ 1,200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನೀಲಿನಕ್ಷೆ ಸಿದ್ಧಪಡಿಸಿದೆ.

 • ಈಗಿನ ಪಾರಂಪರಿಕ ತಾಣದ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಬೃಂದಾವನವನ್ನು ವಿಶ್ವದ ಪ್ರವಾಸಿ ತಾಣಗಳಲ್ಲೇ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲಿಸುವುದು ಯೋಜನೆಯ ಮೂಲಸಂಕಲ್ಪವಾಗಿರಬೇಕು

ಏನೇನು ಅಭಿವೃದ್ಧಿ?

 • ಕೆಆರ್​ಎಸ್ ಉದ್ಯಾನದಲ್ಲಿ ದೋಣಿ ವಿಹಾರ ಸರೋವರದ ಪಕ್ಕದಲ್ಲಿ ಮತ್ತೊಂದು ಸರೋವರ ನಿರ್ವಿುಸಿ, ಅದರ ಮಧ್ಯಭಾಗದಲ್ಲಿ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಚಯ ರೂಪುಗೊಳ್ಳಲಿದೆ.
 • ಈ ಸಮುಚ್ಛಯ ಮೇಲ್ಭಾಗದಲ್ಲಿ ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆ ನಿರ್ವಣವಾಗಲಿದೆ.
 • ಬೃಂದಾವನದ ಕಡೆಯಿಂದ ಇದು ಅಣೆಕಟ್ಟೆಯ ಎತ್ತರಕ್ಕಿಂತ ಹೆಚ್ಚಿರಲಿದೆ.
 • ಗೋಪುರವುಳ್ಳ ಗಾಜಿನಮನೆ ನಿರ್ವಣವಾಗಲಿದೆ. ಈ ಎರಡೂ ಕಟ್ಟಡಗಳಿಂದ ಅಣೆಕಟ್ಟೆಯ ವಿಹಂಗಮ ನೋಟ ಗೋಚರವಾಗಲಿದೆ.
 • ಮ್ಯೂಸಿಯಂನಲ್ಲಿ ಕೆಆರ್​ಎಸ್, ಮೈಸೂರು, ಕರ್ನಾಟಕದ ಇತಿಹಾಸ ಸಾರುವ ಕಲಾತ್ಮಕ, ಪ್ರಾಚ್ಯವಸ್ತುಗಳು ಇರಲಿವೆ.

300 ಕೋಟಿ ರೂ. ವಹಿವಾಟು!

 • ಬೃಂದಾವನದಿಂದ ರಾಜ್ಯ ಸರ್ಕಾರಕ್ಕೆ ಈಗ ಬರುತ್ತಿರುವ ವಾರ್ಷಿಕ ಆದಾಯ ಕೇವಲ 6 ಕೋಟಿ ರೂಪಾಯಿ. ಹೊಸ ಯೋಜನೆ ಪ್ರಕಾರ ವಾರ್ಷಿಕ 300 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಯಲಿದ್ದು, ಸರ್ಕಾರಕ್ಕೆ 30 ಕೋಟಿ ರೂ. ವರಮಾನ ಬರಲಿದೆ ಎಂದು ಅಂದಾಜು ಮಾಡಲಾಗಿದೆ. 2 ವರ್ಷದಲ್ಲಿ ಯೋಜನೆ ಪೂರ್ಣ ಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.

ವಿಶ್ವಮಟ್ಟದ ಸಂಸ್ಥೆಗೆ ಗುತ್ತಿಗೆ

 • ಯೋಜನೆಗೆ 1,200 ಕೋಟಿ ರೂ. ಅಂದಾಜು ಮಾಡಲಾಗಿದ್ದು, ಜಾಗತಿಕ ಟೆಂಡರ್‌ ಮೂಲಕ ವಿಶ್ವಮಟ್ಟದ ಸಂಸ್ಥೆಗೆ ಯೋಜನೆ ಗುತ್ತಿಗೆ ವಹಿಸಿಕೊಡಲಾಗುವುದು. ಜಾಗ ನೀಡುವುದರ ಹೊರತಾಗಿ ಯೋಜನೆಗೆ ಸರಕಾರ ಯಾವುದೇ ವೆಚ್ಚ ಮಾಡುವುದಿಲ್ಲ.ಉತ್ತಮ ಆರ್ಥಿಕ ಹಿನ್ನೆಲೆ ಹೊಂದಿರುವ ಮತ್ತು ಕಲಾತ್ಮಕ ವಿನ್ಯಾಸದಲ್ಲಿ ಜಾಗತಿಕ ಮಟ್ಟದ ನೈಪುಣ್ಯತೆ ಇರುವ ಸಂಸ್ಥೆಗಳಿಗೆ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ

ಬೃಂದಾವನ ಉದ್ಯಾನ

 • ಬೃಂದಾವನ ಉದ್ಯಾನ  ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಒಂದು ಉದ್ಯಾನವನ. ಇದು ಕಾವೇರಿ ನದಿಯುದ್ದಕ್ಕೂ ನಿರ್ಮಿಸಲಾಗಿರುವ ಕೃಷ್ಣರಾಜಸಾಗರ ಅಣೆಕಟ್ಟಿನ ಪಕ್ಕದಲ್ಲಿದೆ.ಈ ಉದ್ಯಾನವನದ ಕೆಲಸ 1927 ರಲ್ಲಿ ಪ್ರಾರಂಭವಾಯಿತು ಮತ್ತು 1932 ರಲ್ಲಿ ಪೂರ್ಣಗೊಂಡಿತು.
 • ಹಿಂದೆ ಕೃಷ್ಣರಾಜೇಂದ್ರ ಟೆರೇಸ್ ಗಾರ್ಡನ್ ಎಂದು ಕರೆಯಲ್ಪಡುತ್ತಿದ್ದ ಬೃಂದಾವನವೂ ಕೃಷ್ಣರಾಜಸಾಗರ ಆಣೆಕಟ್ಟಿನ ಕೆಳಭಾಗದಲ್ಲೇ ಇದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ರಿಂದ ಅದರ ಹೆಸರನ್ನು ಪಡೆದುಕೊಂಡಿದೆ.
 • ಇದನ್ನು 1924 –1932ರ ಅವಧಿಯಲ್ಲಿ ಸರ್ ಮಿರ್ಜಾ ಇಸ್ಮಾಯಿಲ್  ನಿರ್ಮಿಸಿದರು.ಕಾಶ್ಮೀರದ ಶಾಲಿಮಾರ್ ಗಾರ್ಡನ್ ನ ಮೂಲ ಹೊಂದಿದ ಬೃಂದಾವನವೂ ಅರವತ್ತು ಎಕರೆಗಳ ಜಾಗದಲ್ಲಿ ಚಾಚಿಕೊಂಡಿದೆ. ಇಲ್ಲಿ ಸುಂದರವಾದ ಹೂ ಹಾಸಿಗೆ, ಹುಲ್ಲು ಹಾಸು,ಮರಗಳು, ಸಣ್ಣ ಕೊಳಗಳು ಮತ್ತು ಚಿಲುಮೆಗಳನ್ನು ಕಾಣಬಹುದು.
 • ಪ್ರವಾಸಿಗರು ಉದ್ಯಾನವನದ ಮಧ್ಯಭಾಗದಲ್ಲಿರುವ ಕೆರೆಯಲ್ಲಿ ಕಾವೇರಿಯ ಪ್ರತಿಮೆಯ ಸುತ್ತ ದೋಣಿ ವಿಹಾರದಲ್ಲಿ ತೆರಳಬಹುದು. ಸಂದರ್ಶಕರು ಹೂದೋಟದ ಉತ್ತರಭಾಗದಲ್ಲಿ ಪ್ರದರ್ಶನ ಕೇಂದ್ರದ ಸಮೀಪ ಇರುವ ಸಂಗೀತದ ತಾಳಕ್ಕೆ ತಕ್ಕಂತೆ ಕುಣಿಯುವ ಬಣ್ಣದ ನೀರಿನಚಿಲುಮೆಯನ್ನು ನೋಡಲೇಬೇಕು

ನಾಡಗೀತೆ 

2.

ಸುದ್ಧಿಯಲ್ಲಿ ಏಕಿದೆ ?ನಾಡಗೀತೆಯನ್ನು ಪುನರಾವರ್ತನೆಯಾಗದಂತೆ ಹಾಡಿದರೆ ಯಾವ ಪದವನ್ನೂ ಕತ್ತರಿಸದೆ ಎರಡೂವರೆ ನಿಮಿಷದೊಳಗೆ ಹಾಡಿ ಮುಗಿಸಬಹುದು ಎಂಬುದನ್ನು ಕನ್ನಡ ಸಾಹಿತ್ಯ ಪರಿಷತ್ತು ದಾಖಲಿಸಿಕೊಂಡಿದೆ.

 • ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ಜಯ ಭಾರತ ಜನನಿಯ ತನುಜಾತೆ ನಾಡಗೀತೆಯನ್ನು ಅಪಭ್ರಂಶವಿಲ್ಲದೆ, ಯಾವುದೇ ಪದಗಳನ್ನು ತೆಗೆಯದೆ ಎರಡೂವರೆ ನಿಮಿಷದಲ್ಲಿ ಹಾಡಬಹುದು. ಸಾಹಿತಿ, ಗಾಯಕರ ಹಾಗೂ ಹೋರಾಟಗಾರರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಗಾಯಕರಿಂದ ಹಾಡಿಸಿ ನಿರ್ಧರಿಸಲಾಗಿದೆ. ಈ ಸಭೆಯಲ್ಲಿ ಕೈಗೊಂಡ ಶಿಫಾರಸುಗಳನ್ನು ಎರಡು ದಿನಳಗೊಳಗೆ ಸರಕಾರಕ್ಕೆ ಸಲ್ಲಿಸಲಾಗುವುದು

ಏಕೆ ಈ ನಿರ್ಧಾರ ?

 • ಇದೀಗ ಸಭೆ- ಸಮಾರಂಭಗಳಲ್ಲಿ ನಾಡಗೀತೆಯನ್ನು 8-9 ನಿಮಿಷಗಳ ಕಾಲ ಹಾಡಲಾಗುತ್ತಿದೆ. ಇದರಿಂದ ವಯಸ್ಸಾದವರು, ಅನಾರೋಗ್ಯಪೀಡಿತರು ಹಾಗೂ ಇತರೆ ಅಸಹಾಯಕರಿಗೆ ಹಾಡಿನ ವೇಳೆ ಅಷ್ಟು ದೀರ್ಘಕಾಲ ನಿಂತಿರುವುದು ಕಷ್ಟ. ಹೀಗಾಗಿ ಹಾಡನ್ನು ಪುನರಾವರ್ತನೆಯಾಗದಂತೆ ಯಾವುದೇ ಧಾಟಿಯಲ್ಲಿ ಹಾಡಿದರೂ ಎರಡೂವರೆ ನಿಮಿಷದೊಳಗೆ ಹಾಡಬಹುದು .
 • ಇದರ ಪೂರ್ಣ ವಿವರಗಳನ್ನು ಹಾಗೂ ಹಾಡಿನ ವಿಡಿಯೊವನ್ನು ಸರಕಾರಕ್ಕೆ ಸಲ್ಲಿಸುತ್ತೇವೆ. ನಾಡಗೀತೆಯ ಕುರಿತಾಗಿ ಉಂಟಾಗಿರುವ ಗೊಂದಲಗಳ ಕುರಿತು ಚರ್ಚಿಸಬೇಕಾದದ್ದು ಕಸಾಪದ ಕರ್ತವ್ಯ

ಎರಡು ವರದಿಗಳು ಸರಕಾರದಲ್ಲಿವೆ:

 • ”ನಾಡಗೀತೆಯ ಧಾಟಿಯ ಕುರಿತು ಈಗಾಗಲೇ ಸಾಹಿತಿಗಳಾದ ಜಿ.ಎಸ್‌. ಶಿವರುದ್ರಪ್ಪ ಮತ್ತು ವಸಂತ ಕನಕಾಪುರ ಸಮಿತಿಗಳು ನೀಡಿರುವ ವರದಿಗಳು ಸರಕಾರದ ಮಟ್ಟದಲ್ಲಿವೆ. ಅವು ಇನ್ನೂ ಇತ್ಯರ್ಥಗೊಂಡಿಲ್ಲ. ಆದರೆ ಕಸಾಪದ ವತಿಯಿಂದ  ಧಾಟಿಯ ಕುರಿತಾದ ಯಾವುದೇ ಆಕ್ಷೇಪಗಳಿಲ್ಲ. ನಾವು ಕೇವಲ ಅವಧಿಯ ಬಗ್ಗೆ ಚರ್ಚಿಸಿ, ನಿರ್ಧರಿಸಿದೆವು. ಆದರೆ ಸರಕಾರದ ಮಟ್ಟದಲ್ಲಿರುವ ಹಳೆಯ ವರದಿಗಳನ್ನು ಸರಕಾರ ಪರಿಶೀಲಿಸಬೇಕು”

ನಾಡಗೀತೆ

 • ಜಯ ಭಾರತ ಜನನಿಯ ತಾನುಜಾತೇ ಎನ್ನುವುದು ಕನ್ನಡ ಕವಿತೆಯಾಗಿದ್ದು, ಇದನ್ನು ಭಾರತೀಯ ರಾಷ್ಟ್ರೀಯ ಕವಿ ಕುವೆಂಪು  ಸಂಯೋಜಿಸಿದ್ದಾರೆ.
 • ಜನವರಿ 6, 2004 ರಂದು ಈ ಕವಿತೆಯನ್ನು ಕರ್ನಾಟಕ ರಾಜ್ಯದ ರಾಜ್ಯ ಹಾಡನ್ನಾಗಿ  ಅಧಿಕೃತವಾಗಿ ಘೋಷಿಸಲಾಯಿತು.

ಪ. ಬಂಗಾಳಕ್ಕೆ ‘ಬಾಂಗ್ಲಾ ‘ ಹೆಸರು

3.

ಸುದ್ಧಿಯಲ್ಲಿ ಏಕಿದೆ ?ಪಶ್ಚಿಮ ಬಂಗಾಳವನ್ನು ಬಾಂಗ್ಲಾ ಎಂದು ಹೆಸರು ಬದಲಾವಣೆ ಮಾಡಬೇಕೆಂದು ಅಲ್ಲಿನ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರಕಾರ ಕಳಿಸಿದ್ದ ಪ್ರಸ್ತಾವನೆಯನ್ನು ಮೋದಿ ಸರಕಾರ ವಾಪಸ್‌ ಕಳಿಸಿದೆ.

ಹಿನ್ನಲೆ

 • 2011, 2016 ಹಾಗೂ 2018 ಸೇರಿ ಮಮತಾ ಬ್ಯಾನರ್ಜಿ ಸರಕಾರ ತನ್ನ ರಾಜ್ಯದ ಹೆಸರು ಬದಲಾವಣೆ ಮಾಡಬೇಕೆಂದು ಕೇಂದ್ರ ಸರಕಾರಕ್ಕೆ ಈಗಾಗ್ಲೇ 3 ಬಾರಿ ಪ್ರಸ್ತಾವನೆ ಕಳಿಸಿದೆ. ಇನ್ನು, ಮೊದಲ ಬಾರಿಗೆ ಪಶ್ಚಿಮ್‌ಬಂಗಾ ಎಂದು ಹೆಸರಿಡಬೇಕೆಂದು ಕಳಿಸಿದ್ದ ಪ್ರಸ್ತಾವನೆಯನ್ನು ಯುಪಿಎ – 2 ಸರಕಾರ ತಿರಸ್ಕರಿಸಿತ್ತು. ನಂತರ, 2016ರಲ್ಲಿ ಇಂಗ್ಲೀಷ್‌ನಲ್ಲಿ ಬೆಂಗಾಲ್‌, ಬೆಂಗಾಲಿಯಲ್ಲಿ ಬಾಂಗ್ಲಾ ಹಾಗೂ ಹಿಂದಿಯನ್ನು ಬಂಗಾಳ್ ಎಂದು ಹೆಸರಿಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಆದರೆ, ಒಂದು ರಾಜ್ಯಕ್ಕೆ 3 ರೀತಿಯ ಹೆಸರು ಇಡುವುದು ಸರಿಯಲ್ಲ ಎಂದು ಎನ್‌ಡಿಎ ಸರಕಾರ ಮಮತಾ ಸರಕಾರದ ಪ್ರಸ್ತಾವನೆಯನ್ನು ವಾಪಸ್‌ ಕಳಿಸಿತ್ತು.
 • ಅಲ್ಲದೆ, ಎನ್‌ಡಿಎ ಸರಕಾರವೇ 2016ರಲ್ಲಿ ಬಾಂಗ್ಲಾ ಎಂದು ಹೆಸರಿಡಬಹುದು ಎಂದು ಸಲಹೆ ನೀಡಿದತ್ತು. ಇದನ್ನು ಪಶ್ಚಿಮ ಬಂಗಾಳ ಸರಕಾರ ಒಪ್ಪಿಕೊಂಡಿತ್ತು. ಬಳಿಕ, ಸೆಪ್ಟೆಂಬರ್ 2017ರಲ್ಲಿ ಬಾಂಗ್ಲಾ ಎಂದು ಮರುನಾಮಕರಣ ಮಾಡಲು ರಾಜ್ಯ ಕ್ಯಾಬಿನೆಟ್ ಪ್ರಸ್ತಾವನೆ ಸಲ್ಲಿಸಿದ್ದು, ಇದನ್ನು ಜುಲೈ 2018ರಂದು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ಸಲ್ಲಿಸಲಾಗಿತ್ತು

ಹೆಸರು ಬದಲಾವಣೆಗೆ ಕಾರಣ ಏನಿದೆ?

 • ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಾಯಿಸುವುದಕ್ಕಾಗಿ ರಾಜ್ಯ ಸರ್ಕಾರವು ನೀಡಿದ ಪ್ರಮುಖ ಕಾರಣವೆಂದರೆ ಎಲ್ಲಾ ರಾಜ್ಯಗಳ ಸಭೆ ಬಂದಾಗಲೆಲ್ಲಾ, ವರ್ಣಮಾಲೆಯ ಪ್ರಕಾರ ಪಶ್ಚಿಮ ಬಂಗಾಳದ ಅಂಕಿ ಅಂಶಗಳು ಪಟ್ಟಿಯಲ್ಲಿ ಕೆಳಗಿರುತ್ತದೆ.
 • ಆದರೆ ಬಾಂಗ್ಲಾ ಎಂಬ ಬದಲಾವಣೆಯೊಂದಿಗೆ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ನಂತರ ರಾಜ್ಯಗಳ ಪಟ್ಟಿಯಲ್ಲಿ ವರ್ಣಮಾಲೆಯ ಕ್ರಮದಲ್ಲಿ ನಾಲ್ಕನೇ ಸ್ಥಾನಕ್ಕೆ ಕಾಣಿಸಿಕೊಳ್ಳಲಿದೆ.
 • ಪಶ್ಚಿಮ ಬಂಗಾಳದ ಹೆಸರಿನಲ್ಲಿ ಬದಲಾವಣೆಗಳಿಗಾಗಿ ಮತ್ತೊಂದು ಸಾಮಾನ್ಯ ಕಾರಣವೆಂದರೆ, ಈಸ್ಟ್ ಬೆಂಗಾಲ್ ಎಂಬುದು ಈಗ ಇಲ್ಲ ಮತ್ತು ರಾಜ್ಯವನ್ನು ಪಶ್ಚಿಮ ಬಂಗಾಳ ಎಂದು ಹೇಳಲು ಅಸಂಬದ್ಧವಾಗಿದೆ.
 • 1905 ರಲ್ಲಿ ಪೂರ್ವ ಬಂಗಾಳವು 1905 ರಲ್ಲಿ ಬಂಗಾಳದ ವಿಭಜನೆಯೊಂದಿಗೆ ಅಸ್ತಿತ್ವಕ್ಕೆ ಬಂದಿತು, ಅದು 1911 ರಲ್ಲಿ ಒಂದಾಯಿತು. 1947 ರಲ್ಲಿ ಬಂಗಾಳವನ್ನು ಮತ್ತೊಮ್ಮೆ ವಿಭಜಿಸಲಾಯಿತು, ಆದರೆ ಪೂರ್ವ ಭಾಗವನ್ನು 1971 ರಲ್ಲಿ ಬಾಂಗ್ಲಾದೇಶವೆಂದು ಕರೆಯಲಾಯಿತು. ಈ ರೀತಿಯಾಗಿ, ಪಶ್ಚಿಮ ಬಂಗಾಳವನ್ನು ಸರಳವಾಗಿ ಬಂಗಾಳ ಎಂದು ಮರುನಾಮಕರಣ ಮಾಡುವುದು ಉತ್ತಮ ಎಂಬ ಅಭಿಪ್ರಾಯವಿದೆ

ರಾಜ್ಯ ಹೆಸರನ್ನು ಬದಲಾಯಿಸುವ ವಿಧಾನ

 • ರಾಜ್ಯದ ಹೆಸರನ್ನು ಬದಲಿಸುವ ಪ್ರಕ್ರಿಯೆಯನ್ನು ರಾಜ್ಯದ ಮೂಲಕ ಪ್ರಾರಂಭಿಸಬಹುದು. ಹೇಗಾದರೂ,ಆರ್ಟಿಕಲ್ 3ರರ ಕಾರಣದಿಂದಾಗಿ, ಅಂತಹ ಪ್ರಸ್ತಾವನೆ ಸಂಬಂಧಪಟ್ಟ ರಾಜ್ಯದಿಂದ ಬರುವುದಿಲ್ಲವಾದರೂ ಸಹ ಸಂಸತ್ತಿಗೆ  ರಾಜ್ಯದ ಹೆಸರನ್ನು ಬದಲಾಯಿಸುವ ಅಧಿಕಾರವಿದೆ

ರಾಜ್ಯ ವಿಧಾನ ಸಭೆ ಪ್ರಾರಂಭಿಸಿದಲ್ಲಿ

 • ರಾಜ್ಯ ವಿಧಾನಸಭೆ ಇಂತಹ ಬದಲಾವಣೆಗೆ ಒಂದು ನಿರ್ಣಯವನ್ನು ಜಾರಿಗೊಳಿಸುತ್ತದೆ ಮತ್ತು ಈ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಕೇಂದ್ರ ಸರಕಾರವು ಮಸೂದೆಯನ್ನು ರಚಿಸುತ್ತದೆ ಮತ್ತು ಈ ಮಸೂದೆಯನ್ನು ನಿಗದಿತ ಸಮಯದೊಳಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ರಾಜ್ಯ ಶಾಸಕಾಂಗಕ್ಕೆ ಕಳುಹಿಸಲಾಗುವುದು.
 • ಅಧ್ಯಕ್ಷ ಶಾಸನದಂತೆ ರಾಜ್ಯ ಶಾಸಕಾಂಗವು ಈ ಸಮಯದಲ್ಲಿ ತನ್ನ ಅಭಿಪ್ರಾಯಗಳನ್ನು ನೀಡಬೇಕಾಗಿದೆ. ಈ ಸಮಯದ ಅವಧಿ ಮುಗಿದ ನಂತರ, ಸಂಸತ್ತಿನಲ್ಲಿ ಆ ಮಸೂದೆಯನ್ನು ಪರಿಚಯಿಸಲು ಅಧ್ಯಕ್ಷರು ಶಿಫಾರಸು ಮಾಡುತ್ತಾರೆ. ಪರಿಚಯಿಸಿದ ನಂತರ, ಮಸೂದೆಯನ್ನು ರವಾನಿಸಲಾಗುವುದು, ಮತ್ತು ಅಧ್ಯಕ್ಷರು ಒಪ್ಪಿಗೆಯನ್ನು ನೀಡುತ್ತಾರೆ. ಹೀಗೆ , ರಾಜ್ಯದ ಹೆಸರು ಬದಲಾಗಲಿದೆ.
 • 2008 ರ ಒರಿಸ್ಸಾ ಸರ್ಕಾರವು ಓರಿಸ್ಸಾದಿಂದ ಶಾಸನಸಭೆಗೆ ಕೇಂದ್ರ ಸರ್ಕಾರಕ್ಕೆ ಒರಿಸ್ಸಾದಿಂದ ಒಡಿಶಾಗೆ ಬದಲಿಸುವ ನಿರ್ಣಯವನ್ನು ರವಾನಿಸಿದಾಗ ಈ ಬದಲಾವಣೆಯನ್ನು ಮಾಡಲಾಯಿತು.

ರಾಜ್ಯದ ಪ್ರಸ್ತಾಪವಿಲ್ಲದೆ

 • ಆರ್ಟಿಕಲ್ 3 ಈ ಪ್ರಸ್ತಾಪವು ಸಂಬಂಧಪಟ್ಟ ರಾಜ್ಯದಿಂದ ಬರದಿದ್ದರೂ ಸಹ, ಪ್ರದೇಶ, ಗಡಿ, ಪ್ರದೇಶ, ರಾಜ್ಯಗಳ ಹೆಸರನ್ನು ಬದಲಾಯಿಸುವ ಅಧಿಕಾರವನ್ನು ಸಂಸತ್ತಿಗೆ ನೀಡುತ್ತದೆ.
 • ಈ ಉದ್ದೇಶಕ್ಕಾಗಿ, ಕೇಂದ್ರ ಸರಕಾರವು ಕೇವಲ ಸಂಸತ್ತಿನಲ್ಲಿ ಅಂಗೀಕರಿಸಿದ ಮಸೂದೆಯನ್ನು ಪಡೆಯಬಹುದು. ಆದಾಗ್ಯೂ, ಇಂತಹ ವಿಷಯಗಳನ್ನು ಮಾಡಬೇಕಾದರೆ ರಾಜ್ಯಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಬೇಕು ಎಂದು ಸಂವಿಧಾನದ ಆದೇಶಗಳು ಹೇಳಿವೆ.
 • ಹೀಗಾಗಿ, ಮೊದಲು ಕೇಂದ್ರ ಸರ್ಕಾರವು ಮಸೂದೆಯನ್ನು ರಚಿಸುತ್ತದೆ, ಆದರೆ ಈ ಮಸೂದೆಯನ್ನು ಅಧ್ಯಕ್ಷರ ಶಿಫಾರಸಿನ ಮೂಲಕ ಸಂಸತ್ತಿನಲ್ಲಿ ಪರಿಚಯಿಸಬಹುದು. ಅಂತಹ ಶಿಫಾರಸು ಮಾಡುವ ಮೊದಲು ಅಧ್ಯಕ್ಷ ಈ ಬಿಲ್ ಅನ್ನು ಸಂಬಂಧಪಟ್ಟ ರಾಜ್ಯ ಶಾಸಕಾಂಗಕ್ಕೆ ಕಳುಹಿಸುತ್ತಾನೆ ಮತ್ತು ಆ ವಿಷಯದ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು  ಒಂದು ನಿರ್ದಿಷ್ಟ ಸಮಯವನ್ನು ನೀಡುತ್ತದೆ.
 • ಹೇಗಾದರೂ, ರಾಜ್ಯದ ದೃಷ್ಟಿಕೋನವು ಅಂತಹ ಮಸೂದೆಯ ಭವಿಷ್ಯಕ್ಕಾಗಿ ನಿಜವಾದ ಪ್ರಭಾವವನ್ನು ಹೊಂದಿಲ್ಲ. ರಾಜ್ಯವು ಹೌದು ಅಥವಾ ಇಲ್ಲ ಎಂದು ಹೇಳಿದರೆ, ಅದು ನೀಡಿದ ಸಮಯವನ್ನು ಅಂಗೀಕರಿಸಿದ ನಂತರ, ಯಾವುದೇ ಸಂಸತ್ ಭವನದಲ್ಲಿ ಪರಿಚಯಿಸುವ ಬಿಲ್ ಅನ್ನು ಅಧ್ಯಕ್ಷ ಶಿಫಾರಸು ಮಾಡಬಹುದು. ಹೀಗೆ ರಾಜ್ಯದ  ಹೆಸರನ್ನು ಬದಲಿಸಲಾಗುತ್ತದೆ.

ನೇತಾಜಿ ಸ್ಮರಣಾರ್ಥ 75 ರೂ. ಮುಖಬೆಲೆಯ ನಾಣ್ಯ ಬಿಡುಗಡೆ

4.

ಸುದ್ಧಿಯಲ್ಲಿ ಏಕಿದೆ ?ನೇತಾಜಿ ಸುಭಾಷ್ ಚಂದ್ರಬೋಸ್ ಪೋರ್ಟ್​ಬ್ಲೇರ್​ನಲ್ಲಿ ರಾಷ್ಟ್ರಧ್ವಜ ಹಾರಿಸಿ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ 75 ರೂ. ಮುಖಬೆಲೆಯ ನಾಣ್ಯ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ನಾಣ್ಯದ ವಿಶೇಷತೆ

 • ಈ ನಾಣ್ಯ 35 ಗ್ರಾಂ ತೂಕವಿದ್ದು, ಶೇ.50 ಬೆಳ್ಳಿ, ಶೇ. 40 ತಾಮ್ರ ಮತ್ತು ತಲಾ ಶೇ. 5 ನಿಕ್ಕಲ್ ಮತ್ತು ಜಿಂಕ್ ಲೋಹಗಳನ್ನು ಒಳಗೊಂಡಿದೆ. ಪೋರ್ಟ್​ಬ್ಲೇರ್​ನ ಸೆಲ್ಯುಲರ್ ಜೈಲು ಕಟ್ಟಡದ ಹಿನ್ನೆಲೆಯಲ್ಲಿ ನೇತಾಜಿ ಧ್ವಜಾರೋಹಣ ಮಾಡಿದ ಚಿತ್ರ, 75 ರೂ. ಎಂಬ ಅಂಕಿ ಹಾಗೂ ದೇವನಾಗರಿ ಹಾಗೂ ಇಂಗ್ಲಿಷ್​ನಲ್ಲಿ ‘ಫರ್ಸ್ಟ್ ಫ್ಲಾಗ್ ಹಾಸ್ಟಿಂಗ್ ಡೇ’ ಎಂಬ ವಾಕ್ಯ ನಾಣ್ಯದಲ್ಲಿ ಇರಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
 • ಸುಭಾಷ್ ಚಂದ್ರ ಬೋಸ್ ಕಟ್ಟಿದ ಆಜಾದ್ ಹಿಂದ್ ಫೌಜ್ (ಐಎನ್​ಎ) ಅಮೃತ ಮಹೋತ್ಸವ ಕಾರ್ಯಕ್ರಮ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಡಿ. 30ರಂದು ನಡೆಯಲಿದೆ. ಪೋರ್ಟ್​ಬ್ಲೇರ್​ನಲ್ಲಿ 150 ಅಡಿ ಉದ್ದದ ರಾಷ್ಟ್ರ ಧ್ವಜವನ್ನು ಪ್ರಧಾನಿ ನರೇಂದ್ರ ಮೋದಿ ಹಾರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನೇತಾಜಿ ಸ್ಮರಣಾರ್ಥ ಅಂಚೆ ಚೀಟಿ ಮತ್ತು ಈ ನಾಣ್ಯ ಬಿಡುಗಡೆ ಮಾಡಲಿದ್ದಾರೆ.

ಹಿನ್ನಲೆ

 • 1943ರಲ್ಲಿ ನೇತಾಜಿ ಪೋರ್ಟ್​ಬ್ಲೇರ್​ನಲ್ಲಿ ರಾಷ್ಟ್ರ ಧ್ವಜ ಹಾರಿಸಿ ಅಂಡಮಾನ್ ಮತ್ತು ನಿಕೋಬರ್ ಬ್ರಿಟಿಷರಿಂದ ಮುಕ್ತವಾದ ಭಾರತದ ಮೊದಲ ಭೂಭಾಗ ಎಂದು ಘೋಷಿಸಿದ್ದರು. ನೇತಾಜಿ ರಚಿಸಿದ ಆಜಾದ್ ಹಿಂದ್ ಸರ್ಕಾರದ ಅಮೃತ ಮಹೋತ್ಸವದ ಅಂಗವಾಗಿ ಅ.21ರಂದು ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ತಿರಂಗಾ ಹಾರಿಸಿದ್ದರು

ಜಿಸ್ಯಾಟ್​-29 ಉಪಗ್ರಹ ಉಡಾವಣೆ ಯಶಸ್ವಿ

5.

ಸುದ್ಧಿಯಲ್ಲಿ ಏಕಿದೆ ?ಸಂವಹನ ಕ್ಷೇತ್ರಕ್ಕೆ ಕೊಡುಗೆ ನೀಡುವ ಜಿಸ್ಯಾಟ್​-29 ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.

 • ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್​ಎಲ್​ವಿ ಮಾರ್ಕ್​III – ಡಿ2 ರಾಕೆಟ್​ 3,423 ಕೆ.ಜಿ. ತೂಕದ ಜಿಸ್ಯಾಟ್​-29 ಉಪಗ್ರಹವನ್ನು ನಿಗದಿತ ಭೂಸ್ಥಿರ ಕಕ್ಷೆಗೆ ತಲುಪಿಸಿದೆ.

ಉಪಯೋಗಗಳು

 • ಜಿಸ್ಯಾಟ್​-9 ಉಪಗ್ರಹ Ka ಮತ್ತು Ku ಬ್ಯಾಂಡ್​ ಟ್ರಾನ್ಸ್​ಪಾಂಡರ್​ಗಳನ್ನು ಹೊಂದಿದ್ದು, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳು ಸೇರಿದಂತೆ ಸಂವಹನ ಉದ್ದೇಶಕ್ಕೆ ಈ ಉಪಗ್ರಹ ಬಳಕೆಯಾಗಲಿದೆ. ಈ ಉಪಗ್ರಹದಿಂದ ದೇಶದ ಮೂಲೆ ಮೂಲೆಗೆ ಹೈಸ್ಪೀಡ್​ ಇಂಟರ್​ನೆಟ್​ ಸಂಪರ್ಕವನ್ನು ಕಲ್ಪಿಸಬಹುದಾಗಿದೆ.

ಇನ್ನೆರಡು ಉಪಗ್ರಹ ಸಿದ್ಧ

 • ಇಸ್ರೋದ ಉಪಗ್ರಹಗಳ ಪೈಕಿ ಜಿಸ್ಯಾಟ್ 29 ಅತ್ಯಾಧುನಿಕ ಹೈ ಥ್ರೋಪುಟ್ ಕಮ್ಯುನಿಕೇಷನ್ ಉಪಗ್ರಹ. ಇದೇ ಸರಣಿಯ ಜಿಸ್ಯಾಟ್ 19 ಉಪಗ್ರಹವನ್ನು ಈಗಾಗಲೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಜಿಸ್ಯಾಟ್ 11 ಉಪಗ್ರಹ ಡಿಸೆಂಬರ್​ನಲ್ಲಿ ಉಡಾವಣೆಗೊಳ್ಳಲಿದ್ದರೆ, ಜಿಸ್ಯಾಟ್ 20 ಹೊಸ ವರ್ಷದ ಮೊದಲ ಭಾಗದಲ್ಲಿ ನಭಕ್ಕೆ ಜಿಗಿಯಲಿದೆ.

ಹೊಸ ತಂತ್ರಜ್ಞಾನ

 • ಜಿಸ್ಯಾಟ್ 29 ಉಪಗ್ರಹದಲ್ಲಿ ಕ್ಯೂ ಮತ್ತು ವಿ ಬ್ಯಾಂಡ್​ಗಳನ್ನು ಅಳವಡಿಸಲಾಗಿದೆ. ಜತೆಗೆ ಆಪ್ಟಿಕಲ್ ಕಮ್ಯುನಿಕೇಷನ್ ಲಿಂಕ್ ಮೂಲಕ ಡೇಟಾ ವರ್ಗಾವಣೆ ಮಾಡುವಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಪರೀಕ್ಷಿಸಲಾಗುತ್ತಿದೆ.

10 ವರ್ಷ ಆಯಸ್ಸು

 • 3,423 ಕೆ.ಜಿ. ಭಾರವಿರುವ ಜಿಸ್ಯಾಟ್ 29 ಉಪಗ್ರಹ ಅಂದಾಜು 10 ವರ್ಷ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
 • 3 ಆಕ್ಸಿಸ್ ಬಾಡಿ ಸ್ಟಬಲೈಜ್ಡ ಮಲ್ಟಿಬೀಮ್ ಉಪಗ್ರಹವು ಕೆಎ/ಕೆಯು ಎಂಬ ಎರಡು ಹೈ ಥ್ರೋಪುಟ್ ಕಮ್ಯುನಿಕೇಷನ್ ಟ್ರಾನ್ಸ್​ಪಾಂಡರ್​ಗಳನ್ನು ಹೊಂದಿದೆ.

ಗಣರಾಜ್ಯೋತ್ಸವಕ್ಕೆ ದಕ್ಷಿಣ ಆಫ್ರಿಕಾ ಅಧ್ಯಕ್ಷ ಮುಖ್ಯ ಅತಿಥಿ

ಸುದ್ಧಿಯಲ್ಲಿ ಏಕಿದೆ ?ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್​ ರಾಮಫೋಸಾ ಅವರು ಬರುವ 2019ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 • 2018ರ ಫೆಬ್ರವರಿಯಲ್ಲಿ ರಾಮಫೋಸಾ ದಕ್ಷಿಣಾಫ್ರಿಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಗಣರಾಜ್ಯೋತ್ಸವಕ್ಕೆ ಅತಿಥಿಯಾಗಬೇಕು ಎಂಬ ಆಮಂತ್ರಣವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
 • ರಾಮಫೋಸಾ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಬೇಕು ಎಂಬುದು ನೆಲ್ಸನ್​ ಮಂಡೇಲಾ ಅವರ ಇಂಗಿತವಾಗಿತ್ತು.
 • ಏಪ್ರಿಲ್​ನಲ್ಲಿ ನಡೆದ ವಾರ್ಷಿಕ ಗಾಂಧಿ ನಡಿಗೆಯ ನೇತೃತ್ವವನ್ನು ರಾಮಫೋಸಾ ವಹಿಸಿದ್ದರು. ಅಧಿಕಾರದಲ್ಲಿದ್ದಾಗ ಅಧ್ಯಕ್ಷರೊಬ್ಬರು ನಡಿಗೆಯಲ್ಲಿ ಭಾಗವಹಿಸಿರುವುದು ಇದೇ ಮೊದಲು. ಸಮಯದಾಯ ಜಾಗೃತಿಗಾಗಿ ಜೋಹಾನ್ಸ್​ಬರ್ಗ್​ದ ದಕ್ಷಿಣ ಭಾಗದಲ್ಲಿರುವ ಭಾರತೀಯ ಪಟ್ಟಣ ಎಂದೇ ಹೆಸರಾದ ಲೆನಾಸಿಯಾದಲ್ಲಿ ಆಯೋಜಿಸಿದ್ದ ಗಾಂಧಿ ನಡಿಗೆಯಲ್ಲಿ ಸುಮಾರು 5000 ಜನರು ಭಾಗಿಯಾಗಿದ್ದರು.
 • ರಾಮಫೋಸಾ ಅವರು ಅಧ್ಯಕ್ಷರಾಗುವ ಮೊದಲು, ವರ್ಣಭೇದ ನೀತಿ ವಿರೋಧಿ ಸಂಘಟನೆಯ ಕಾರ್ಯಕರ್ತರಾಗಿದ್ದರು. ಅವರೊಬ್ಬ ಉದ್ಯಮಿಯಾಗಿ ಹಾಗೂ ಕಾರ್ಮಿಕ ಒಕ್ಕೂಟದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. 2014ರಿಂದ 2018ರವರೆಗೆ ದಕ್ಷಿಣಾಫ್ರಿಕಾದ ಉಪಾಧ್ಯಕ್ಷರಾಗಿದ್ದರು.
Related Posts
KAS
'ರಾಷ್ಟ್ರೀಯ ಇ- ಮಾರ್ಕೆಟ್‌ ಸವೀರ್‍ಸಸ್‌ ಪ್ರೈ.ಲಿ'  ಸುದ್ಧಿಯಲ್ಲಿ ಏಕಿದೆ ? ರಾಜ್ಯದ ಎಪಿಎಂಸಿಗಳಲ್ಲಿ ರೈತರಿಂದ ಅವೈಜ್ಞಾನಿಕ ಶುಲ್ಕ ಸಂಗ್ರಹಿಸುತ್ತಿರುವ 'ರಾಷ್ಟ್ರೀಯ ಇ- ಮಾರ್ಕೆಟ್‌ ಸವೀರ್‍ಸಸ್‌ ಪ್ರೈ.ಲಿ' (ರೆಮ್ಸ್‌) ಸೇವೆಯನ್ನು ರದ್ದು ಪಡಿಸಲು ಸರಕಾರ ಗಂಭೀರ ಆಲೋಚನೆ ನಡೆಸಿದೆ. ಏಕೆ ಈ ನಿರ್ಧಾರ ? ರಾಜ್ಯ ಕೃಷಿ ...
READ MORE
“16th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
2022ಕ್ಕೆ ಮಾನವ ಸಹಿತ ಬಾಹ್ಯಾಕಾಶ ಯಾನ ಸುದ್ದಿಯಲ್ಲಿ ಏಕಿದೆ? ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಎಂದಿಗೂ ಮುಂದಿರುತ್ತದೆ. 2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಳ್ಳುತ್ತದೆ. ಸಾಧ್ಯವಾದರೆ ಅದಕ್ಕಿಂತಲೂ ಮೊದಲೇ ಭಾರತ ಪುತ್ರ ಅಥವಾ ಪುತ್ರಿಯನ್ನು ಅಂತರಿಕ್ಷ ಯಾತ್ರೆಗ ಕಳುಹಿಸಲಾಗುತ್ತದೆ ಎಂದು ಮೋದಿ ...
READ MORE
“6th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕೃಷಿ ಕಲ್ಯಾಣ ಅಭಿಯಾನ ಸುದ್ದಿಯಲ್ಲಿ ಏಕಿದೆ? ರೈತರ ಆದಾಯ ದುಪ್ಪಟ್ಟು ಹಾಗೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಗ್ರಾಮಗಳಲ್ಲಿ ಆಯ್ಕೆಯಾಗುವ ರೈತರಿಗೆ ಸೂಕ್ತ ನೆರವು ನೀಡುವ ಕೃಷಿ ಕಲ್ಯಾಣ್ ಅಭಿಯಾನ ಶೀಘ್ರ ಆರಂಭವಾಗಲಿದೆ. ಮುಂದಿನ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಜೂನ್ ...
READ MORE
2nd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ
ಮಹಿಳಾ ಮತದಾರರ ಲಿಂಗಾನುಪಾತ ಹೆಚ್ಚಳ ಮತದಾರರ ಪಟ್ಟಿಯಲ್ಲಿ ಲಿಂಗಾನುಪಾತದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. 2013 ರ ಚುನಾವಣೆಯಲ್ಲಿ 1,000 ಪುರುಷರಿಗೆ 958 ಇದ್ದ ಮಹಿಳೆಯರ ಸಂಖ್ಯೆ ಈ ಚುನಾವಣೆ ವೇಳೆ 974ಕ್ಕೆ ಏರಿಕೆಯಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ತಿಳಿಸಿದ್ದಾರೆ. ಏ.14ಕ್ಕೆ ಮುಕ್ತಾಯವಾದ ಮತದಾರರ ನೋಂದಣಿ ...
READ MORE
“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳ್ಳಂದೂರು ಕೆರೆ ಸುದ್ಧಿಯಲ್ಲಿ ಏಕಿದೆ ? ನೊರೆಕಾಟದ ಮೂಲಕ ಸದಾ ಸುದ್ದಿಯಾಗುವ ಬೆಳ್ಳಂದೂರು ಕೆರೆಯಲ್ಲಿ ನೀರಿನ ಪ್ರಮಾಣವೇ ಕಡಿಮೆ ಆಗುತ್ತಿದ್ದು, ಕೆರೆ ಬತ್ತುವ ಆತಂಕ ಸ್ಥಳೀಯರಲ್ಲಿ ತಲೆದೋರಿದೆ. ಆದರೆ, ಈ ಬಗ್ಗೆ ತಜ್ಞರಿಂದ ಹಲವು ವಿಶ್ಲೇಷಣೆಗಳು ವ್ಯಕ್ತವಾಗಿವೆ. ಕೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ...
READ MORE
“3rd ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಾಡು ಹೆಚ್ಚಳ ಸುದ್ಧಿಯಲ್ಲಿ ಏಕಿದೆ?ದಾವಣಗೆರೆ ಜಿಲ್ಲೆಯಲ್ಲಿ ಕಾಡು ಹೆಚ್ಚಳವಾಗಿದ್ದು, ಹಸಿರು ವಲಯ ವಿಸ್ತರಣೆಯಲ್ಲಿ ಬಯಲು ಸೀಮೆ ಜಿಲ್ಲೆಗಳ ಪೈಕಿ ದಾವಣಗೆರೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಕೇಂದ್ರದ ಸರ್ವೆ ಆಫ್‌ ಇಂಡಿಯಾ ಕಳೆದ ತಿಂಗಳು ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಬೆಳವಣಿಗೆಯನ್ನು ಉಲ್ಲೇಖಿಸಿದೆ. ಕಳೆದ ಹತ್ತು ವರ್ಷದಲ್ಲಿ ...
READ MORE
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಸಿವಿಜಿಲ್’ ಮೊಬೈಲ್ ಆಪ್ ಸುದ್ಧಿಯಲ್ಲಿ ಏಕಿದೆ ?ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಚುನಾವಣಾ ಆಯೋಗ ’ ಸಿವಿಜಿಲ್’ ಮೊಬೈಲ್ ಆಪ್ ಹೊರತರುತ್ತಿದೆ. ಆಪ್​ನಲ್ಲಿ ಅಕ್ರಮದ ಫೋಟೋ, ವೀಡಿಯೋ ಅಪ್​ಲೋಡ್ ಮಾಡಿದ 100 ನಿಮಿಷಗಳಲ್ಲಿ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿಯೂ ಲಭಿಸಲಿದೆ. ಹಿನ್ನಲೆ ಕಳೆದ ...
READ MORE
13th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಭಾರತೀಯ ವಾಸ್ತುಶಿಲ್ಪಿ ಬಿ.ವಿ ದೋಷಿಗೆ 'ವಾಸ್ತುಶಿಲ್ಪದ ನೊಬೆಲ್‌' ಹೆಸರಾಂತ ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರು ನೊಬೆಲ್‌ಗೆ ಸಮಾನವಾದ ಪ್ರಿಟ್ಝ್‌ಕರ್‌ ಆರ್ಕಿಟೆಕ್ಚರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪುಣೆ ಮೂಲದ ದೋಷಿ (90), ಈ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯರಾಗಿದ್ದಾರೆ. ಈ ಮೊದಲು ಝಹಾ ಹಡಿಡ್‌, ಫ್ರಾಂಕ್‌ ...
READ MORE
“27th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
'ಸ್ವಚ್ಛ ಬೆಂಗಳೂರು' ಸುದ್ಧಿಯಲ್ಲಿ ಏಕಿದೆ ? ಬೆಂಗಳೂರು ನಗರವನ್ನು ಸ್ವಚ್ಛ ಮಾಡಲು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಾಲಾವಧಿ ನಿಗದಿಪಡಿಸಿದೆ. ಆದರೆ ಸ್ವಚ್ಛ ಬೆಂಗಳೂರಿನ ಸವಾಲನ್ನು ಎದುರಿಸಿ ಅದನ್ನು ಸಾಧಿಸುವುದು ಕಷ್ಟ. ಸವಾಲುಗಳೇನು ? ಕಸದಿಂದ ಹಿಡಿದು ಉಗುಳುವವರೆಗೆ, ಸಾರ್ವಜನಿಕ ಶೌಚಾಲಯದಿಂದ ಹಿಡಿದು ...
READ MORE
11th – 12th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ನೌಕಾನೆಲೆ ಬಳಸಿಕೊಳ್ಳಲು ಒಪ್ಪಿಗೆ ರಕ್ಷಣೆ ಮತ್ತು ಪರಮಾಣು ಶಕ್ತಿ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಭಾರತ ಮತ್ತು ಫ್ರಾನ್ಸ್‌ 14 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ. ಯುದ್ಧನೌಕೆಗಳಿಗೆ ನೌಕಾನೆಲೆಗಳನ್ನು ಮುಕ್ತವಾಗಿ ಬಳಸಿಕೊಳ್ಳಲು ಎರಡೂ ರಾಷ್ಟ್ರಗಳು ಒಪ್ಪಿಗೆ ಸೂಚಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಸೇನಾ ಪ್ರಾಬಲ್ಯ ...
READ MORE
9th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“16th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“6th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
2nd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ
“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“3rd ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
13th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
“27th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
11th – 12th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

Leave a Reply

Your email address will not be published. Required fields are marked *