“16 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಆಯುಷ್ಮಾನ್ ಆರೋಗ್ಯ

1.

ಸುದ್ಧಿಯಲ್ಲಿ ಏಕಿದೆ ?ಬಡ ಹಾಗೂ ಮಧ್ಯಮವರ್ಗದ ನಾಗರಿಕರಿಗೆ ಆರೋಗ್ಯ ಸೇವೆಯಲ್ಲಿ ಖಾತ್ರಿ ನೀಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿದ್ದ ಎರಡು ಪ್ರತ್ಯೇಕ ಯೋಜನೆಗಳನ್ನು ವಿಲೀನಗೊಳಿಸುವ ಮೂಲಕ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯನ್ನು ಜಾರಿ ಮಾಡಲಾಗಿದೆ.

 • ಕೋ-ಬ್ರಾ್ಯಂಡಿಂಗ್​ನಲ್ಲಿ ಎರಡೂ ಯೋಜನೆಗಳನ್ನು ಸಂಯೋಜಿಸಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಜತೆ ಅ.30ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇಲ್ಲಿಯವರೆಗೆ ಯೋಜನೆಯಲ್ಲಿ 2,391 ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ
 • ಪ್ರತಿ ಬಿಪಿಎಲ್ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ.ವರೆಗೆ ಆರೋಗ್ಯ ಸೇವೆ ನೀಡುವುದರ ಜತೆಗೆ ರಾಜ್ಯದ 4 ಕೋಟಿ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಆರೋಗ್ಯ ರಕ್ಷಣೆ ಇದರಿಂದ ಸಾಧ್ಯವಾಗಲಿದೆ.
 • ಮಾರ್ಚ್ 2ರಿಂದ ರಾಜ್ಯದಲ್ಲಿ ಜಾರಿಯಾಗಿದ್ದ ‘ಆರೋಗ್ಯ ಕರ್ನಾಟಕ’ ಯೋಜನೆಯಲ್ಲಿ ಪ್ರತಿ ಬಿಪಿಎಲ್ ಕುಟುಂಬಕ್ಕೆ ಗರಿಷ್ಠ 2 ಲಕ್ಷ ರೂ.ವರೆಗೆ ಚಿಕಿತ್ಸೆ ವೆಚ್ಚ ಭರಿಸುವುದಾಗಿ ತಿಳಿಸಿತ್ತು. ಎಪಿಎಲ್ ಕುಟುಂಬಗಳಿಗೆ ಶೇ.30 ವೆಚ್ಚ ಭರಿಸಲಾಗುತ್ತದೆ.
 • ಅದೇ ರೀತಿ ಕೇಂದ್ರ ಸರ್ಕಾರ ಮಾ.21ರಿಂದ ‘ಆಯುಷ್ಮಾನ್ ಭಾರತ್’ ಯೋಜನೆ ಜಾರಿ ಮಾಡಿತ್ತು. ಇದಕ್ಕೆ ಫಲಾನುಭವಿಗಳನ್ನು ಗುರುತಿಸಲು ರಾಜ್ಯ ಸರ್ಕಾರ ಬಿಪಿಎಲ್ ಪಟ್ಟಿ ಆಧಾರವಾಗಿಸಿಕೊಂಡಿದ್ದರೆ, ಕೇಂದ್ರ ಸರ್ಕಾರ 2011ರ ಜನಗಣತಿ ಆಧಾರವಾಗಿಸಿಕೊಂಡಿದೆ.

ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ ರಾಜ್ಯದಲ್ಲಿ 66 ಲಕ್ಷ ಅರ್ಹ ಕುಟುಂಬಗಳಿದ್ದರೆ, ರಾಜ್ಯ ಸರ್ಕಾರದ ಪ್ರಕಾರ 1.2 ಕೋಟಿ ಕುಟುಂಬಗಳು ಅರ್ಹವಾಗಿವೆ. ಕೇಂದ್ರ ಸರ್ಕಾರದ ಫಲಾನುಭವಿ ಕುಟುಂಬಗಳಿಗೆ ನೀಡಲಾಗುವ ಚಿಕಿತ್ಸೆಗೆ ಕೇಂದ್ರ ಸರ್ಕಾರ ಶೇ.60, ರಾಜ್ಯ ಸರ್ಕಾರ ಶೇ.40 ವೆಚ್ಚ ಭರಿಸುತ್ತದೆ. ಉಳಿದ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳಿಗೆ ನೀಡಲಾಗುವ ಶೇ.30 ವೆಚ್ಚವನ್ನು ರಾಜ್ಯ ಸರ್ಕಾರವೇ ಪೂರ್ತಿ ಭರಿಸಲಿದೆ.

ಒಪಿಡಿ ವೆಚ್ಚ ಮರುಪಾವತಿ

 • ಒಳರೋಗಿಯಾಗಿ ದಾಖಲಾದ ಬಳಿಕ ಔಷಧ ಹಾಗೂ ಶಸ್ತ್ರಚಿಕಿತ್ಸಾ ವೆಚ್ಚ ಭರಿಸುವ ಜತೆಗೆ ಚಿಕಿತ್ಸೆಗೆ ಮುನ್ನ ಹೊರರೋಗಿಯಾಗಿ ಕೈಗೊಂಡ ಚಿಕಿತ್ಸೆ-ಪರೀಕ್ಷೆಗಳಿಗೆ ತಗಲುವ ವೆಚ್ಚವನ್ನೂ ಯೋಜನೆಯಲ್ಲಿ ಮರುಪಾವತಿಸಲಾಗುತ್ತದೆ.

ಗಡಿರಾಜ್ಯದಲ್ಲೂ ಉಚಿತ ಚಿಕಿತ್ಸೆ

 • ನೆರೆ ರಾಜ್ಯದ ಗಡಿ ಪ್ರದೇಶ ದಲ್ಲಿನ ಅನೇಕ ಜಿಲ್ಲೆಗಳ ಜನರಿಗೆ ತುರ್ತು ಹಾಗೂ ತೃತೀಯ ಹಂತದ ಚಿಕಿತ್ಸೆಗೆ ರಾಜ್ಯಕ್ಕಿಂತಲೂ ಬೇರೆ ರಾಜ್ಯದ ಖಾಸಗಿ ಆಸ್ಪತ್ರೆಗಳು ಹತ್ತಿರವಾಗುತ್ತವೆ. ಹೀಗಾಗಿ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ತೆಲಂಗಾಣದ 36 ಖಾಸಗಿ ಆಸ್ಪತ್ರೆಗಳನ್ನೂ ಯೋಜನೆಯಲ್ಲಿ ಸೇರಿಸಲಾಗಿದೆ. ಆ ಭಾಗದ ನಾಗರಿಕರೂ ಇದರ ಪ್ರಯೋಜನ ಪಡೆಯಬಹುದು.

ತುರ್ತು ಚಿಕಿತ್ಸೆಗೆ ರೆಫರಲ್ ಬೇಕಿಲ್ಲ

 • ಆರೋಗ್ಯ ಕರ್ನಾಟಕದಲ್ಲಿ ಚಿಕಿತ್ಸೆ ಪಡೆಯಲು 1,516 ಹಾಗೂ ಆಯುಷ್ಮಾನ್ ಭಾರತದಲ್ಲಿ ಚಿಕಿತ್ಸೆ ಪಡೆಯಲು 1,349 ಪ್ಯಾಕೇಜ್​ಗಳನ್ನು ಗುರುತಿಸಲಾಗಿತ್ತು. ಇದೀಗ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯಲ್ಲಿ ಎರಡೂ ಪಟ್ಟಿ ಸಂಯೋಜಿಸಿ 1,614 ಪ್ಯಾಕೇಜ್ ನಿಗದಿ ಮಾಡಲಾಗಿದೆ.
 • ಈ ಪೈಕಿ ಸಾಮಾನ್ಯ ಹಂತದ 291 ಪ್ಯಾಕೇಜ್​ಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಷ್ಟೇ ಪಡೆಯಬೇಕು. 254 ಕ್ಲಿಷ್ಟಕರ ದ್ವಿತೀಯ ಹಾಗೂ 900 ತೃತೀಯ ಚಿಕಿತ್ಸೆಗಳನ್ನು ಲಭ್ಯವಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ, ಲಭ್ಯವಿಲ್ಲದಿದ್ದರೆ ರೆಫರಲ್ ಪಡೆದು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು.
 • ಅಗ್ನಿ ಅವಘಡ, ಹೃದಯಾಘಾತ, ಸ್ಟೆಂಟ್ ಅಳವಡಿಕೆ, ಡೆಂಘ, ಬಹು ಅಂಗಾಂಗ ವೈಫಲ್ಯ, ಅಪಘಾತ, ಮಲೇರಿಯಾ, ಅಧಿಕ ರಕ್ತದೊತ್ತಡದಂಥ 169 ತುರ್ತು ಚಿಕಿತ್ಸೆಗಳನ್ನು ಯಾವುದೇ ರೆಫರಲ್ ಇಲ್ಲದೆ ನೇರವಾಗಿ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲೇ ಪಡೆಯಬಹುದು. ಇಲ್ಲಿಯವರೆಗೆ 385 ಸರ್ಕಾರಿ ಹಾಗೂ 531 ಖಾಸಗಿ ಸೇರಿ ಒಟ್ಟು 916 ಆಸ್ಪತ್ರೆಗಳು ಯೋಜನೆಗೆ ಒಳಪಟ್ಟಿವೆ.
 • ಯಶಸ್ವಿನಿ ಇನ್ನು ಇಲ್ಲ: ಆರೋಗ್ಯ ಕರ್ನಾಟಕ ಜಾರಿಯಾದಾಗಿನಿಂದ ಈವರೆಗೆ 49 ಲಕ್ಷ ಕುಟುಂಬಗಳಿಗೆ ಚಿಕಿತ್ಸೆ ಸೌಲಭ್ಯ ದೊರಕಿದೆ. ಇದಲ್ಲದೆ ಆಯುಷ್ಮಾನ್‌ ಭಾರತ್‌ನೊಂದಿಗೆ ಆರೋಗ್ಯ ಕರ್ನಾಟಕವು ಸಂಯೋಜಿತ ರೂಪದಲ್ಲಿ ಜಾರಿಗೊಂಡಿದ್ದರಿಂದ ಯಶಸ್ವಿನಿ ಸೇರಿದಂತೆ ರಾಜ್ಯದಲ್ಲಿ ಜಾರಿಯಲ್ಲಿದ್ದ ಇತರ ಆರೋಗ್ಯ ಯೋಜನೆಗಳು ರದ್ದಾದಂತಾಗಿವೆ. ಅಂದರೆ ಇಂತಹ ನಾನಾ ಯೋಜನೆಗಳು ಎಬಿ-ಎಆರ್‌ಕೆ ಅಡಿ ಬಂದಂತಾಗಲಿದೆ.

ಕೊಡಗು ಜಲಪ್ರಳಯ ಮಾನವನಿರ್ವಿುತ

2.

ಸುದ್ಧಿಯಲ್ಲಿ ಏಕಿದೆ ?ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ಜಲಪ್ರಳಯಕ್ಕೆ ಸಿಲುಕಿ ತತ್ತರಿಸಿದ ಕೊಡಗು ದುರಂತ ಮಾನವ ನಿರ್ವಿುತವೇ ಹೊರತು ಲಘು ಭೂಕಂಪನದಿಂದಾದ ಪರಿಣಾಮವಲ್ಲ ಎಂದು ಅಧ್ಯಯನ ತಂಡ ವರದಿ ನೀಡಿದೆ.

 • ಆಗಸ್ಟ್​ನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತ-ಭೂಕುಸಿತದ ಬಗ್ಗೆ ಅಧ್ಯಯನ ನಡೆಸಿರುವ ಭಾರತೀಯ ಭೌಗೋಳಿಕ ಸರ್ವೆ (ಜಿಎಸ್​ಐ) ಸಂಸ್ಥೆಯ ವಿಜ್ಞಾನಿಗಳು ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆಗಸ್ಟ್​ನಲ್ಲಿ ಪ್ರಾಥಮಿಕ ವರದಿ ಸಲ್ಲಿಸಲಾಗಿತ್ತು.
 • ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ಕೈಗೊಂಡಿದ್ದ ಜಿಎಸ್​ಐ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) ತಂಡಗಳು ಪ್ರಾಥಮಿಕ ವರದಿಯಲ್ಲಿ ಭೂಕುಸಿತ ಮಾನವ ನಿರ್ವಿುತ ಎಂದು ಉಲ್ಲೇಖಿಸಿದ್ದವು.

ಅಧ್ಯಯನಕ್ಕೆ ಒಳಪಟ್ಟ ಪ್ರದೇಶಗಳು

 • ಮೊದಲ ಹಂತದಲ್ಲಿ ಮಡಿಕೇರಿ-ಕೊಯನಾಡು- ಸುಳ್ಯ ಮಾರ್ಗ, ವಿರಾಜಪೇಟೆ-ಮಾಕುಟ್ಟ ರಸ್ತೆಯಲ್ಲಿ ಉಂಟಾದ ಭೂಕುಸಿತ ಸ್ಥಳಗಳಿಗೆ ವಿಜ್ಞಾನಿಗಳ ತಂಡ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ಈ ವ್ಯಾಪ್ತಿಯ ಭೂಕುಸಿತವಾದ 8 ಜಾಗಗಳಿಗೆ ಭೇಟಿ ನೀಡಿ, ಕಾರಣಗಳನ್ನು ಗುರುತಿಸಿದೆ.
 • 2ನೇ ಭೂ ಕುಸಿತ ಆಗಸ್ಟ್ 12 ರಿಂದ 18 ರಲ್ಲಿ ನಡೆದಿರುವುದು. ಈ ವ್ಯಾಪ್ತಿಯ 105 ಸ್ಥಳಗಳಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಇದರಲ್ಲಿ ಆಗಸ್ಟ್ 15 ರಿಂದ 17 ರವರೆಗೆ ಹೆಚ್ಚಿನ ಪ್ರದೇಶದಲ್ಲಿ ಭೂ ಕುಸಿತವಾಗಿದೆ. ಭಾರಿ ಮಳೆ ಇಲ್ಲದಿದ್ದರೆ ಕಡಿದಾದ ಇಳಿಜಾರು ಜಾರಿ ಕೊಳ್ಳುವುದಿಲ್ಲ ಎಂದು ವರದಿ ಮಾಡಲಾಗಿದೆ.

ಕಾರಣ :

 • ಇವುಗಳಲ್ಲಿ ಪ್ರತಿಯೊಂದರಲ್ಲೂ ಭೂಕುಸಿತಕ್ಕೆ ಸರಿಯಾದ ರಸ್ತೆ ನಿರ್ಮಾಣ ತಂತ್ರ ಅನುಸರಿಸದೇ ಇರುವ ಕಾರಣ ಎಂದು ಉಲ್ಲೇಖಿಸಿದೆ.
 • ನೈಸರ್ಗಿಕ ಇಳಿಜಾರು ಬದಲಾಯಿಸಿರುವುದು, ರಸ್ತೆ ರಚನೆಗೆ ನೈಸರ್ಗಿಕ ಒಳಚರಂಡಿ ತಡೆಯುವುದು, ಮನೆ, ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ ಕಟ್ಟಡ ನಿರ್ಮಾಣದಿಂದ ಮತ್ತು ಪ್ಲಾಂಟೇಷನ್​ಗಾಗಿ ಭೌಗೋಳಿಕ ಸ್ವರೂಪ ಬದಲಾಯಿಸಿರುವುದು ಭೂಕುಸಿತಕ್ಕೆ ಕಾರಣವಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.
 • ಜಿಲ್ಲೆಯ ಹಲವೆಡೆ ಜುಲೈ 9 ರಂದು ಸಂಭವಿಸಿದ 4 ಪ್ರಮಾಣದ ಭೂಕಂಪದ ಕಾರಣದ ಬಗ್ಗೆಯೂ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದ್ದು, ಪ್ರಾಕೃತಿಕ ಅನಾಹುತಗಳಿಗೆ ಭೂಕಂಪನದ ಪರಿಣಾಮ ತುಂಬಾ ದೂರದಲ್ಲಿದೆ ಎಂದು ಉಲ್ಲೇಖಿಸಿದೆ.

ಪರಿಹಾರ ಕ್ರಮಕ್ಕೆ ಸೂಚನೆ

 • ಭವಿಷ್ಯದಲ್ಲಿ ವಿಪತ್ತು ಸಂಭವಿಸುವುದನ್ನು ತಡೆಗಟ್ಟಲು ಹಲವು ಪರಿಹಾರ ಕ್ರಮ ತೆಗೆದುಕೊಳ್ಳಬೇಕೆಂದು ವರದಿ ಮಾಡಿದೆ.
 • ಮುಖ್ಯವಾಗಿ ಬೆಟ್ಟ ಪ್ರದೇಶಗಳಲ್ಲಿ ಭೂಬಳಕೆಗಾಗಿ ಕಟ್ಟು ನಿಟ್ಟಿನ ಮಾರ್ಗಸೂಚಿ ಮತ್ತು ನಿಬಂಧನೆಗಳ ಅನುಷ್ಠಾನವಾಗಬೇಕು. ಭೂ ಪ್ರದೇಶಕ್ಕೆ ವಲಯ ನಿಯಮ ನಿಗದಿಯಾಗಿರಬೇಕು.
 • ಎಲ್ಲ ನಿಯಮಗಳು ಭೂ ವಿಜ್ಞಾನಿ ಮತ್ತು ರಚನಾತ್ಮಕ ಇಂಜಿನಿಯರುಗಳ ಸ್ಪಷ್ಟೀಕರಣ ಹೊಂದಿರಬೇಕು. ಎಲ್ಲ ಲಂಬ ಇಳಿಜಾರುಗಳನ್ನು ತಡೆಯಬೇಕು. ಅನಿವಾರ್ಯವಾದರೆ ವೈಜ್ಞಾನಿಕ ಇಳಿಜಾರಿನ ಸ್ಥಿರತೆಗೆ ಪ್ರಾಮುಖ್ಯತೆ ನೀಡಬೇಕು.
 • ಮಳೆ ನೀರಿನ ಸರಿಯಾದ ಚರಂಡಿ ಖಾತ್ರಿಪಡಿಸಬೇಕು. ನೈಸರ್ಗಿಕ ಒಳಚರಂಡಿಗಳಿಗೆ ಅಡೆತಡೆ ತೆರವುಗೊಳಿಸಬೇಕು.
 • ವೆಟಿವರ್ ಎಂಬ ಜಾತಿ ಹುಲ್ಲುನೆಡುವ ಮೂಲಕ ಇಳಿಜಾರಿನ ಸ್ಥಿರತೆ ಸುಧಾರಿಸಬೇಕು ಮತ್ತು ಭೂಕುಸಿತದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಬೇಕೆಂದು ಸೂಚಿಸಲಾಗಿದೆ.

ಜಲಪ್ರಳಯದ ಪರಿಣಾಮಗಳು

 • ಸಂಕಷ್ಟಕ್ಕೆ ಸಿಲುಕಿದ 48 ಗ್ರಾಮಗಳು, ಮನೆ ಕಳೆದು ಕೊಂಡ 850 ಕುಟುಂಬ
 • 20 ಜನ ಬಲಿ, ಪತ್ತೆಯಾಗದ ಇಬ್ಬರ ಶವ. 3500 ಜನ ಸಂತ್ರಸ್ಥರು
 • ಸಂಪರ್ಕ ಕಳೆದುಕೊಂಡು ಗುರುತೇ ಇಲ್ಲದಂತಾದ ಹಲವು ಗ್ರಾಮಗಳು
 • 10 ಸಾವಿರ ಕೋಟಿ ರೂ.ಆಸ್ತಿಪಾಸ್ತಿ ಹಾನಿ, 52 ಪರಿಹಾರ ಕೇಂದ್ರ ಸ್ಥಾಪನೆ

ಹೊಸ ರೂಪದಲ್ಲಿ 108 ಆಂಬ್ಯುಲೆನ್ಸ್‌

3.

ಸುದ್ಧಿಯಲ್ಲಿ ಏಕಿದೆ ?ಜೀವ ರಕ್ಷಕ ಎನಿಸಿರುವ 108 ಆಂಬ್ಯುಲೆನ್ಸ್‌ ಯೋಜನೆಗೆ ಹೊಸ ವರ್ಷದ ವೇಳೆಗೆ ಹೊಸ ರೂಪ ಸಿಗಲಿದೆ.

 • ಮುಂದಿನ ಐದು ವರ್ಷಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಆಧಾರಿತ ವ್ಯವಸ್ಥೆಯೊಂದಿಗೆ 108 ಸಜ್ಜುಗೊಳ್ಳಿಸಲಾಗುತ್ತಿದೆ. ಪ್ರತಿ ವಾಹನದಲ್ಲೂ ಎಲೆಕ್ಟ್ರಾನಿಕ್‌ ಹೆಲ್ತ್‌ ರೆಕಾರ್ಡರ್‌ ಅಳವಡಿಕೆಯಾಗಲಿದೆ. ಇದರಿಂದ ಆಂಬ್ಯೂಲೆನ್ಸ್‌ನ ಸೇವೆಯ ಸಂಪೂರ್ಣ ಮಾಹಿತಿ ತಕ್ಷಣದಲ್ಲೇ ಸರ್ವರ್‌ನಲ್ಲಿ ದಾಖಲಾಗುತ್ತದೆ.
 • ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಆಂಬ್ಯುಲೆನ್ಸ್‌ ಸಂಚರಿಸುವ ಮಾರ್ಗ, ರೋಗಿಯನ್ನು ಎಲ್ಲಿಂದ ಕರೆದುಕೊಂಡು ಯಾವ ಆಸ್ಪತ್ರೆಗೆ ಸೇರಿಸಲಾಯಿತು, ಆಂಬ್ಯುಲೆನ್ಸ್‌ನಲ್ಲಿ ಯಾವ ರೀತಿ ತುರ್ತು ಚಿಕಿತ್ಸೆ ನೀಡಲಾಯಿತು, ಅವರೊಂದಿಗೆ ಸಿಬ್ಬಂದಿಯ ವರ್ತನೆ ಹೇಗಿತ್ತು, ವಾಹನದ ನಿರ್ವಹಣೆ ಯಾವ ರೀತಿ ಮಾಡಲಾಗುತ್ತಿದೆ, ರೋಗಿಗಳ ಕರೆ ಬಂದ ಎಷ್ಟು ಸಮಯಕ್ಕೆ ವಾಹನ ತಲುಪಿತು, ಸಿಬ್ಬಂದಿ ಹಾಜರಾತಿ ಸಮಯ, ವಾಹನ ಎಷ್ಟು ಕಿ.ಮೀ ಹಾಗೂ ಯಾವ ಮಾರ್ಗದಲ್ಲಿ ಕ್ರಮಿಸಿದೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲಾಖೆಯ ಕಚೇರಿಯಲ್ಲೇ ಕುಳಿತು ನೋಡಬಹುದಾಗಿದೆ. ಇದಕ್ಕಾಗಿ ಕಚೇರಿಯಲ್ಲಿ ವಿಡಿಯೊ ವಾಲ್‌ ಅಳವಡಿಕೆ ಮಾಡಲಾಗುವುದು.

ಹೊಸ ರೂಪಕ್ಕೆ ಕಾರಣ ?

 • ಇನ್ನು ಮುಂದೆ ಆಂಬ್ಯುಲೆನ್ಸ್‌ ದುರ್ಬಳಕೆ, ಕಮಿಷನ್‌ ಆಸೆಗೆ ರೋಗಿಗಳನ್ನು ನಿರ್ದಿಷ್ಟ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸುವುದು, ರೋಗಿಗಳಿಂದ ಹಣ ಕೀಳುವುದು, ಸುಳ್ಳು ಮಾಹಿತಿ ನೀಡುವುದು, ರೋಗಿಗಳು ಇಲ್ಲದಿದ್ದರೂ ವಾಹನಗಳನ್ನು ಎಲ್ಲೆಂದರಲ್ಲಿ ಸುತ್ತಾಡಿಸುವುದು ಇತ್ಯಾದಿ ಅಕ್ರಮಗಳಿಗೆ ತಡೆ ಬೀಳಲಿದೆ.

ಮಾರ್ಗಸೂಚಿಗೆ ಸಿದ್ಧತೆ

 • ಕಳೆದ ಹತ್ತು ವರ್ಷಗಳಲ್ಲಿ ಆಂಬ್ಯಲೆನ್ಸ್‌ ಸೇವೆಯಲ್ಲಿ ಕಂಡು ಬಂದ ನ್ಯೂನ್ಯತೆಗಳನ್ನು ದಾಖಲಿಸಿಕೊಂಡು ಮುಂದೆ ಅಂತಹ ಸಮಸ್ಯೆಗಳು ಪರಿವರ್ತನೆ ಆಗದ ರೀತಿಯಲ್ಲಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಟೆಂಡರ್‌ ಪ್ರಕ್ರಿಯೆಗಾಗಿ ಮಾರ್ಗಸೂಚಿ ರೂಪಿಸಲು ಹೊಣೆಗಾರಿಕೆಯನ್ನು ಐ-ಡೆಕ್‌ ಎಂಬ ಖಾಸಗಿ ಸಂಸ್ಥೆಗೆ ನೀಡಲಾಗಿದೆ. ನಂತರ ಅದನ್ನು ಪರಿಶೀಲಿಸಿ ಅಳವಡಿಸಿಕೊಳ್ಳಲಾಗುವುದು. ಟೆಂಡರ್‌ನ ಸಂಪೂರ್ಣ ಹೊಣೆಗಾರಿಕೆಯನ್ನೂ ಐ-ಡೆಕ್‌ಗೆ ವಹಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಹೊಸ ವ್ಯವಸ್ಥೆಯಲ್ಲಿ ಏನೇನು ಇರಲಿದೆ?

 • ಆಂಬ್ಯುಲೆನ್ಸ್‌ ಸೇವೆಯಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ಆನ್‌ಲೈನ್‌ ಮಾನಿಟರಿಂಗ್‌
 • ವಾಹನ ಸಂಚರಿಸುವ ಮಾರ್ಗ ತಿಳಿಯಲು ಜಿಪಿಎಸ್‌, ಚಾಲಕ ಹಾಗೂ ಸಿಬ್ಬಂದಿ ಹಾಜರಾತಿಗಾಗಿ ಬಯೋಮೆಟ್ರಕ್‌
 • ರೋಗಿಗಳಿಗೆ ನೀಡುವ ಸೇವೆ ಮಾಹಿತಿಗಾಗಿ ಟ್ಯಾಬ್‌ ಅಳವಡಿಕೆ
 • ಪ್ರತಿ ಸೇವೆ ಕುರಿತು ತಕ್ಷಣವೇ ಮಾಹಿತಿ ಪಡೆಯಲು (ಸಿಸ್ಟಮ್‌ ಜನರೇಟೆಡ್‌ ರಿರ್ಫೂಟ್‌ಗಾಗಿ)ಎಲೆಕ್ಟ್ರಾನಿಕ್‌ ಕ್ರಿಯೆಟರ್‌ ಅಳವಡಿಕೆ
 • ರೋಗಿಯ ಪೋಟೊ ಸಹಿತ ಮಾಹಿತಿಗಾಗಿ ಕ್ಯಾಮೆರಾ, ಮೊಬೈಲ್‌ ಫೋನ್‌ ಜತೆಗೆ ಸಮಸ್ಯೆ ಕುರಿತು ದೂರು ದಾಖಲಿಸಲು ಮೊಬೈಲ್‌ ಆ್ಯಪ್‌
 • ರೋಗಿಗೆ ತುರ್ತು ಚಿಕಿತ್ಸೆ ನೀಡಲು ಆಕ್ಸಿಜನ್‌ ಸಿಲಿಂಡರ್‌, ವೆಂಟಿಲೇಟರ್‌, ಡ್ರಿಫ್ಸ್‌ ಸ್ಟ್ಯಾಂಡ್‌, ಫಸ್ಟ್‌ ಏಡ್‌ ಕಿಟ್‌ ಲಭ್ಯತೆ ಅರಿಯಲು ಎಕ್ಯುಪ್‌ಮೆಂಟ್‌ ಮಾನಿಟರಿಂಗ್‌
 • ರೋಗಿಗಳಿಗೆ ಸಮಸ್ಯೆಯಾದರೆ ದೂರು ದಾಖಲಿಸಲು ಮೊಬೈಲ್‌ ಆ್ಯಪ್‌ ಸಹ ಅಭಿವೃದ್ಧಿ ಪಡಿಸಲಾಗುತ್ತಿದೆ
 • ಡ್ಯಾಶ್‌ಬೋರ್ಡ್‌ ಮೂಲಕ ಕಂಪ್ಯೂಟರ್‌, ಮೊಬೈಲ್‌, ಲ್ಯಾಪ್‌ಟಾಪ್‌ನಿಂದಲೇ ಆಂಬ್ಯುಲೆನ್ಸ್‌ಗಳ ಮೇಲ್ವಿಚಾರಣೆ ನಡೆಸಲಾಗುವುದು
 • ಇದಲ್ಲದೆ ಆಂಬ್ಯುಲೆನ್ಶ್‌ ಸೇವೆಯ ಗುಣಮಟ್ಟ ಮೌಲ್ಯಮಾಪನ ಮಾಡಲು ಸವೀರ್‍ಸ್‌ ಲೆವೆಲ್‌ ಅಗ್ರಿಮೆಂಟ್‌ (ಎಸ್‌ಎಲ್‌ಎ) ಹಾಗೂ ಪೆನಾಲ್ಟಿ ಕ್ಲಾಸಸ್‌ಗಳ ಅಳವಡಿಕೆ ಸಹ ಮಾಡಿಕೊಳ್ಳಲಾಗುತ್ತಿದೆ.

ನಗು ಮಗು ವಿಲೀನ

 • ‘108-ಆರೋಗ್ಯ ಕವಚ ಬಲಪಡಿಸಲು ಈಗಾಗಲೇ ಸುಸ್ಥಿಯಲ್ಲಿ ಇಲ್ಲದ 371 ಆಂಬ್ಯುಲೆನ್ಸ್‌ಗಳನ್ನು ತೆರವುಗೊಳಿಸಿ ಹೊಸ ಆಂಬ್ಯುಲೆನ್ಸ್‌ಗಳನ್ನು ಒದಗಿಸಲಾಗಿದ್ದು, ಇದರ ಜತೆಗೆ ಆರೋಗ್ಯ ಇಲಾಖೆಗೆ ಸೇರಿದ 200 ನಗು-ಮಗು ಆಂಬ್ಯುಲೆನ್ಸ್‌ಗಳನ್ನು ವಿಲೀನಗೊಳಿಸಿ ಅವುಗಳಿಗೂ ಜಿಪಿಎಸ್‌ ಸೇರಿದಂತೆ ಇತರೆ ತಂತ್ರಜ್ಞಾನಗಳನ್ನು ಅಳವಡಿಸಲಾಗುವುದು.

ಕೃಷಿ ಮೇಳ

4.

ಸುದ್ಧಿಯಲ್ಲಿ ಏಕಿದೆ ?ಬೆಂಗಳೂರಿನ ಜಿಕೆವಿಕೆಯಲ್ಲಿ ಆಯೋಜಿಸಿರುವ 4 ದಿನಗಳ (ನ.15ರಿಂದ18) ಕೃಷಿ ಮೇಳಕ್ಕೆ ಚಾಲನೆ ಸಿಕ್ಕಿದೆ

 • ಕೃಷಿಕರಿಗೆ ಆಧುನಿಕ-ಸಾಂಪ್ರದಾಯಿಕ ಕೃಷಿ ಪದ್ಧತಿ ಪರಿಚಯಿಸಲು ಹಾಗೂ ಹೊಸ ತಂತ್ರಜ್ಞಾನಗಳ ಬಳಕೆ ಬಗ್ಗೆ ಅರಿವು ಮೂಡಿಸಲು ಖಡಕ್​ನಾಥ್ ಕೋಳಿ, ಹಳ್ಳಿಕಾರ್ ಎತ್ತು, ವ್ಯವಸಾಯಕ್ಕೆ ಡ್ರೋನ್ ಕ್ಯಾಮರಾ ಬಳಕೆ ಸೇರಿ ಹಲವು ಆವಿಷ್ಕಾರಗಳು ಇಲ್ಲಿ ತೆರೆದುಕೊಂಡಿವೆ

ಹಳ್ಳಿಕಾರ್ ಎತ್ತು, ಬಂಡೂರು ಕುರಿ

 • ತಮಿಳುನಾಡು ಜಲ್ಲಿಕಟ್ಟು ಕ್ರೀಡೆಗೆ ಹೆಚ್ಚಾಗಿ ಬಳಸುವ ಹಳ್ಳಿಕಾರ್ ಎತ್ತುಗಳು ಮೇಳದಲ್ಲಿವೆ. ನಶಿಸುತ್ತಿರುವ ಹಳ್ಳಿಕಾರ್ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಬಂಡೂರು ಕುರಿಗಳು, 24 ಲಕ್ಷ ರೂ. ಮೊತ್ತದ ಗೀರ್ ಎತ್ತು, ಜಮುನಾಪಾರಿ, ಬೋಯರ್ ತಳಿ ಮೇಕೆಗಳು, ಬಣ್ಣದ ಗಿರಿರಾಜ ಕೋಳಿಗಳು ಮೇಳದ ಆಕರ್ಷಣೆ.

ನಾಲ್ಕು ತಳಿಗಳ ಬಿಡುಗಡೆ

 • ಜಿಕೆವಿಕೆ ವತಿಯಿಂದ ಅಭಿವೃದ್ಧಿ ಪಡಿಸಿದ್ದ ರಾಗಿ: ಕೆಎಂಆರ್‌-630(100 ದಿನಗಳ ಅವಧಿಯ ಬೆಳೆ. ಮುಂಗಾರಿಗೆ ಸೂಕ್ತವಾಗಿ ಎಕರೆಗೆ 20 ಕ್ವಿಂಟಾಲ್‌ ಇಳುವರಿ). ಸೂರ್ಯಕಾಂತಿ: ಕೆಬಿಎಚ್‌-78(95 ದಿನಗಳ ಬೆಳೆ, ಎಕರೆಗೆ 14 ಕ್ವಿಂಟಾಲ್‌ ಇಳುವರಿ). ಸೋಯಾ ಅವರೆ: ಕೆಬಿಎಸ್‌-23(95 ದಿನಗಳ ಬೆಳೆ, ಎಕರೆಗೆ 25-30 ಕ್ವಿಂಟಾಲ್‌ ಇಳುವರಿ) ಹಾಗೂ ಅಕ್ಕಿ ಅವರೆ: ಕೆಬಿಆರ್‌-1(75 ದಿನಗಳ ಬೆಳೆ, ಎಕರೆಗೆ 12-14 ಕ್ವಿಂಟಾಲ್‌ ಇಳುವರಿ) ತಳಿಗಳನ್ನು ಬಿಡುಗಡೆ ಮಾಡಲಾಯಿತು.

ಖಡಕ್​ನಾಥ್ ಕರಾಮತ್

 • ಸಾಮಾನ್ಯ ಕೋಳಿಯಂತೆ ಕಂಡರೂ ಖಡಕ್​ನಾಥ್ ವೈಶಿಷ್ಟ್ಯತೆ ಜನರನ್ನು ಆಕರ್ಷಿಸಿದೆ. ಕಪ್ಪು ಬಣ್ಣದ ಈ ಕೋಳಿಯ ರಕ್ತವೂ ಕಪ್ಪು ಎಂಬುದು ವಿಶೇಷ. ಕಬ್ಬಿಣದ ಅಂಶ ಹೆಚ್ಚಿರುವ ಈ ಕೋಳಿಯ ಪ್ರತಿ ಕೆ.ಜಿ. ಮಾಂಸದ ಬೆಲೆ 1,500 ರೂ. ಇದ್ದು, ಹೃದಯ ಸಂಬಂಧಿ ಕಾಯಿಲೆಗೆ ಈ ಕೋಳಿ ರಾಮಬಾಣ ಎಂಬುದು ಹಾಸನ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ರಾಜೇಗೌಡ ಅಭಿಪ್ರಾಯ.

ಅಮೆರಿಕದಿಂದ ಹೆಲಿಕಾಪ್ಟರ್ ಖರೀದಿ

5.

ಸುದ್ಧಿಯಲ್ಲಿ ಏಕಿದೆ ?ಸೇನಾ ಬಲವರ್ಧನೆ ಮತ್ತು ಆಧುನೀಕರಣಕ್ಕೆ ಮುಂದಾಗಿರುವ ಕೇಂದ್ರ ಸರಕಾರ ಅಮೆರಿಕದಿಂದ 13,500 ಕೋಟಿ ರೂ. ರಕ್ಷಣಾ ಮತ್ತು ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಖರೀದಿಗೆ ಮುಂದಾಗಿದೆ.

 • ಅಮೆರಿಕದ ಸಿಕೋಸ್ಕಿ ಲಾಕ್‌ಹೀಡ್ ಮಾರ್ಟಿನ್ ನಿರ್ಮಾಣದ ಬಹೂಪಯೋಗಿ ಎಂಎಚ್‌-60 ರೋಮಿಯೋ ಹೆಲಿಕಾಪ್ಟರ್ ಟಾರ್ಪೆಡೋ ಮತ್ತು ಕ್ಷಿಪಣಿ ಹೊಂದಿದ್ದು, ಸಬ್‌ಮೆರಿನ್‌ಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ.
 • ಈ ಹೆಲಿಕಾಪ್ಟರ್‌ಗಳ ಖರೀದಿಗೆ ಮುಂದಾಗಿರುವ ಭಾರತ, ಅವುಗಳನ್ನು 2020-2024ರೊಳಗಾಗಿ ಒದಗಿಸಿಕೊಡುವಂತೆ ಬೇಡಿಕೆ ಸಲ್ಲಿಸಲಿದೆ.

ಖರೀದಿಗೆ ಕಾರಣ

 • ಈಗಾಗಲೇ ಸಾಗರದಲ್ಲಿ ಚೀನಾದ ಸಬ್‌ಮರಿನ್‌ಗಳು ನಿರಂತರ ಕಣ್ಗಾವಲು ಇರಿಸಿದ್ದು, ದೇಶದ ಜಲಪರಿಧಿಯನ್ನೂ ಪ್ರವೇಶಿಸಲು ಯತ್ನಿಸುತ್ತವೆ. ಹೀಗಾಗಿ ಚೀನಾದ ಹಾರಾಟಕ್ಕೆ ಮಿತಿ ಹಾಕಲು ಮತ್ತು ದೇಶದ ಸಾಗರ ರಕ್ಷಣೆ, ನೌಕಾಪಡೆಯ ಬಲವರ್ಧನೆಗೆ ಎಂಎಚ್‌-60 ಬಹೂಪಯೋಗಿ ಹೆಲಿಕಾಪ್ಟರ್‌ನ ಅವಶ್ಯಕತೆಯಿದ್ದು, ಅಮೆರಿಕದೊಂದಿಗೆ ಸರಕಾರ ಶೀಘ್ರ ಒಪ್ಪಂದ ಅಂತಿಮಗೊಳಿಸಲಿದೆ.

ಎಂಎಚ್‌-60 ರೋಮಿಯೋ ಹೆಲಿಕಾಪ್ಟರ್

 • ಸಿಕೋರ್ಸ್ಕಿ ಎಂಹೆಚ್ -60 ಆರ್ ಸೀಹಾಕ್ ಬಹು-ಮಿಷನ್ ಹೆಲಿಕಾಪ್ಟರ್ ಯು.ಎಸ್. ನೌಕಾಪಡೆಯ ಫ್ಲೀಟ್ನಲ್ಲಿ SH-60B ಮತ್ತು SH-60F ಹೆಲಿಕಾಪ್ಟರ್ಗಳನ್ನು ಬದಲಾಯಿಸುತ್ತದೆ ಮತ್ತು ಈ ವಿಮಾನದ ಸಾಮರ್ಥ್ಯಗಳನ್ನು ಸಂಯೋಜಿಸುತ್ತದೆ. MH-60R ಅನ್ನು ‘ರೋಮಿಯೋ’ ಎಂದು ಸಹ ಕರೆಯಲಾಗುತ್ತದೆ.
 • ಈ ಹೆಲಿಕ್ಯಾಪ್ಟರ್ ಜಲಾಂತರ್ಗಾಮಿ ವಿರೋಧಿ ಯುದ್ಧ (ASW), ಮೇಲ್ಮೈ ವಿರೋಧಿ ಯುದ್ಧ (ASUW), ಹುಡುಕಾಟ-ಮತ್ತು-ಪಾರುಗಾಣಿಕಾ (SAR), ನೇವಲ್ ಗನ್ ಫೈರ್ ಬೆಂಬಲ (NGFS), ಕಣ್ಗಾವಲು, ಸಂವಹನ ಪ್ರಸಾರ, ಜಾರಿ ಬೆಂಬಲ ಮತ್ತು ಸಿಬ್ಬಂದಿ ವರ್ಗಾವಣೆ ಮತ್ತು ಲಂಬ ಮರುಪೂರಣ (VERTREP) ಕ್ಕೆ ಸಜ್ಜಾಗಿದೆ .

‘ಸೂಪರ್ ಅರ್ಥ್’ 

6.

ಸುದ್ಧಿಯಲ್ಲಿ ಏಕಿದೆ ?ಸೂರ್ಯನ ಸಮೀಪದಲ್ಲೇ ಇರುವ ಮತ್ತೊಂದು ನಕ್ಷತ್ರವನ್ನು ಸುತ್ತುವ ‘ಸೂಪರ್ ಅರ್ಥ್’ ಅನ್ನು ಖಗೋಳಶಾಸ್ತ್ರಜ್ಞರ ತಂಡ ಪತ್ತೆಹಚ್ಚಿದೆ. ಇದು ಮಹತ್ವದ ಸಾಧನೆ ಎಂದ ವಿಜ್ಞಾನಿಗಳು, ಭೂಮಿಯ ಸಮೀಪದ ಗ್ರಹಗಳ ಬಗ್ಗೆ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ

 • ಈ ಗ್ರಹಕ್ಕೆ ಬರ್ನಾಡ್ ಸ್ಟಾರ್ ಬಿ ಎಂದು ಸದ್ಯ ಹೆಸರಿಡಲಾಗಿದೆ. ಭೂಮಿಯಿಂದ ಕೇವಲ 6 ಜ್ಯೋತಿರ್‌ವರ್ಷಗಳಷ್ಟು ದೂರದಲ್ಲಿರುವ ಕೆಂಪು ಕುಬ್ಜ ನಕ್ಷತ್ರವಾಗಿರುವ ಬರ್ನಾಡ್‌ ನಕ್ಷತ್ರದಲ್ಲಿ ಈ ‘ಸೂಪರ್ ಅರ್ಥ್’ ಪತ್ತೆಯಾಗಿದ್ದು, ಇದು ಭೂಮಿಗಿಂತ ಕನಿಷ್ಠ 2 ಪಟ್ಟು ತೂಕ ಹೊಂದಿದೆ ಎಂದು ಖಗೋಳಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.
 • ಇದು ಶೈತ್ಯೀಕರಿಸಿದ ಸ್ಥಿತಿಯಲ್ಲಿದ್ದು, ಮಂದವಾಗಿ ಹೊಳೆಯುತ್ತಿದೆ ಎಂಬುದನ್ನು ಗುರುತು ಹಿಡಿಯಲಾಗಿದೆ.
 • ಸೌರ ಮಂಡಲದ ಹೊರಗೆ ಪತ್ತೆಹಚ್ಚಲಾದ ಎರಡನೇ ಅತಿ ಸಮೀಪ ಗ್ರಹ ಎಂಬ ಕೀರ್ತಿಗೆ ಬರ್ನಾಡ್‌ ಸ್ಟಾರ್ ಬಿ ಪಾತ್ರವಾಗಿದೆ. ಬರ್ನಾಡ್‌ ನಕ್ಷತ್ರದಲ್ಲಿ ಈ ‘ಸೂಪರ್ ಅರ್ಥ್’ ಪತ್ತೆಯಾಗಿದ್ದು, ಅದು 233 ದಿನಗಳಿಗೊಮ್ಮೆ ತನ್ನ ನಕ್ಷತ್ರವನ್ನು ( ಭೂಮಿ ಸೂರ್ಯನನ್ನು ಸುತ್ತುವ ಹಾಗೆ ) ಸುತ್ತುತ್ತದೆ. ಮೂಲ ನಕ್ಷತ್ರ ( ಬರ್ನಾಡ್ ಸ್ಟಾರ್‌)ಕ್ಕೆ ಬಹಳ ಸಮೀಪದಲ್ಲಿದ್ದರೂ ಸಹ ಆ ಗ್ರಹಕ್ಕೆ ಸೂರ್ಯನಿಂದ ಭೂಮಿಗೆ ದೊರೆಯುವ ಶೇ. 2 ರಷ್ಟು ಶಕ್ತಿ ಮಾತ್ರ ಪಡೆದುಕೊಳ್ಳುತ್ತದೆ. ಅಲ್ಲದೆ, ಗ್ರಹದ ಮೇಲ್ಮೈ ತಾಪಮಾನ ಮೈನಸ್‌ 170 ಡಿಗ್ರಿ ಸೆಲ್ಶಿಯಸ್‌ನಷ್ಟಿದೆ ಎಂದು ಖಗೋಳಶಾಸ್ತ್ರಜ್ಞರ ತಂಡ ಅಂದಾಜಿಸಿದೆ.
 • ಹೀಗಾಗಿ, ಈ ಗ್ರಹದಲ್ಲಿ ಯಾವುದೇ ಜೀವಿಗಳು ವಾಸಿಸಲು ಸಾಧ್ಯವಿಲ್ಲ. ಹಾಗೂ ದ್ರವ ರೂಪದ ನೀರು ದೊರೆಯುವುದಿಲ್ಲ. ಒಂದು ವೇಳೆ ನೀರು ಇದ್ದರೆ ಅಥವಾ ಅನಿಲವಿದ್ದರೆ ಅದು ಘನ ರೂಪದಲ್ಲಿರುತ್ತದೆ. ಹೀಗಾಗಿ, ಇದನ್ನು ಫ್ರೋಜನ್ ( ಶೈತ್ಯೀಕರಿಸಿದ ಸ್ಥಿತಿ ) ಎಂದು ಕರೆಯುತ್ತೇವೆ
 • ‘ಸೂಪರ್ ಅರ್ಥ್’ನ ಮೂಲ ನಕ್ಷತ್ರ ಬರ್ನಾಡ್ ಸ್ಟಾರ್‌ ಕೆಂಪು ಕುಬ್ಜ ನಕ್ಷತ್ರವಾಗಿದ್ದು, ಇದಕ್ಕೆ ಸೂರ್ಯನಿಗಿಂತ ಎರಡು ಪಟ್ಟು ಹೆಚ್ಚು ವಯಸ್ಸಾಗಿರಬಹುದು ಎಂದು ಹೇಳಲಾಗಿದೆ. ಹೀಗಾಗಿ, ಹೆಚ್ಚು ಬೆಳಕನ್ನು ಹೊರಸೂಸುವುದಿಲ್ಲ.
 • ಇದರಿಂದಾಗಿ ಅದರ ಕಕ್ಷೆಯಲ್ಲಿರುವ ಯಾವುದೇ ವಸ್ತುಗಳನ್ನು ಗ್ರಹಿಸಲು ಕಷ್ಟವಾಗುತ್ತದೆ ಎಂದು ಹೇಳಲಾಗಿದೆ. ಇನ್ನು, ಬರ್ನಾಡ್ ಸ್ಟಾರ್‌ ಬಿ ‘ಸೂಪರ್ ಅರ್ಥ್’ ಅನ್ನು ಪತ್ತೆಹಚ್ಚಲು ರಿಬಾಸ್ ಹಾಗೂ ತಂಡ 20 ವರ್ಷಗಳಿಗೂ ಅಧಿಕ ಕಾಲ ಅಧ್ಯಯನ ಮಾಡಿದ್ದು, 7 ಪ್ರತ್ಯೇಕ ಸಲಕರಣೆಗಳನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
 • ಅಲ್ಲದೆ, ಡೋಪ್ಲರ್ ಪರಿಣಾಮದ ಮೂಲಕ ಮೂಲ ನಕ್ಷತ್ರದಿಂದ ಗ್ರಹಕ್ಕುಂಟಾಗುವ ಗುರುತ್ವಾಕರ್ಷಣೆಯನ್ನೂ ಖಗೋಳಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ. ಇದರಿಂದಾಗಿ ಗ್ರಹ ಸುತ್ತುತ್ತಿರುವ ದಿಕ್ಕಿನ ವೇಗ ಹಾಗೂ ಆ ಮೂಲಕ ಸಮೂಹ ತೂಕವನ್ನು ಪತ್ತೆಹಚ್ಚಲು ಅವರು ಬಳಸಿಕೊಳ್ಳುತ್ತಾರೆ.

Related Posts
24th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಚಂದ್ರಯಾನ-2 ಉಡಾವಣೆ ಅಕ್ಟೋಬರ್​ಗೆ ಮುಂದೂಡಿಕೆ: ಇಸ್ರೋ ಚಂದ್ರನ ಮೂಲ ಮತ್ತು ಅದರ ವಿಕಾಸದ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ಮುಂದಿನ ತಿಂಗಳು ಉಡಾವಣೆಯಾಗಬೇಕಿದ್ದ ಚಂದ್ರಯಾನ-2 ಯೋಜನೆಯನ್ನು ಅಕ್ಟೋಬರ್​ ತಿಂಗಳಿಗೆ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ. ಇತ್ತೀಚೆಗೆ ನಡೆದ ತಜ್ಞರ ಸಭೆಯಲ್ಲಿ ಚಂದ್ರಯಾನ-2 ನೌಕೆಯನ್ನು ಮತ್ತಷ್ಟು ...
READ MORE
“8th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಹೇಗ್ ಸಮಾವೇಶ ಸುದ್ದಿಯಲ್ಲಿ ಏಕಿದೆ? ಅಂತರ-ದೇಶ ಪೋಷಕರ ಮಗು ಅಪಹರಣದ ಬಗ್ಗೆ ಒಂದು ವರದಿಯನ್ನು ಸಿದ್ಧಪಡಿಸಲು ಕೇಂದ್ರವು ಸ್ಥಾಪಿಸಿದ ಸಮಿತಿಯು ಹೇಗ್ ಕನ್ವೆನ್ಷನ್ನ ಮೂಲಭೂತ ತತ್ವಗಳನ್ನು ಪ್ರಶ್ನಿಸಿದೆ. ಪೋಷಕರ  ಅಥವಾ ಪೋಷಕರ ಆವಾಸಸ್ಥಾನಕ್ಕೆ ಮಗು ಹಿಂದಿರುಗುವುದು ಮಗುವಿನ ಹಿತಾಸಕ್ತಿಗೆ ಅಗತ್ಯವಾಗಿರಲೇಬೇಕು ಎಂಬುದು ನಿಯಮವಾಗಿರಬಾರದು  ...
READ MORE
14th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಎಲ್‌ಒಯು’ ನೀಡಿಕೆಗೆ ಆರ್‌ಬಿಐ ನಿರ್ಬಂಧ ಆಮದು ವಹಿವಾಟಿಗೆ ನೀಡಲಾಗುವ ಸಾಲಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ವಿತರಿಸುತ್ತಿದ್ದ ಸಾಲ ಮರುಪಾವತಿ ಖಾತರಿ ಪತ್ರಗಳಿಗೆ (ಎಲ್‌ಒಯು) ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಷೇಧ ವಿಧಿಸಿದೆ. ‘ಎಲ್‌ಒಯು’ಗಳ ದುರ್ಬಳಕೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ತಕ್ಷಣದಿಂದಲೇ ಇದು ಜಾರಿಗೆ ಬಂದಿದೆ. ವಜ್ರಾಭರಣ ...
READ MORE
“21st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಚಾಲ್ತಿ ಖಾತೆ ಕೊರತೆ ಸುದ್ದಿಯಲ್ಲಿ ಏಕಿದೆ? ಭಾರತದ ದೇಶೀಯ ಒಟ್ಟು ಉತ್ಪನ್ನ (ಜಿಡಿಪಿ)ದಲ್ಲಿ ಚಾಲ್ತಿ ಖಾತೆ ಕೊರತೆ ಪ್ರಮಾಣ ಶೇ. 5ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಚಾಲ್ತಿ ಖಾತೆ ಕೊರತೆಗೆ ಕಾರಣಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ, ಡಾಲರ್ ಎದುರು ರೂಪಾಯಿ ಹಿನ್ನಡೆ ...
READ MORE
“4th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಅಭಿವೃದ್ಧಿ: 10 ರಾಜ್ಯಗಳಿಗೆ ಸೂಚನೆ ನಕ್ಸಲ್‌ ಹಾವಳಿ ಹೆಚ್ಚಾಗಿರುವ 10 ರಾಜ್ಯಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಅಲ್ಲಿನ ರಾಜ್ಯ ಸರಕಾರಗಳಿಗೆ ಸೂಚಿಸಿದೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅರಣ್ಯ ಇಲಾಖೆಗೆ ಸಂಬಂಧಿಸಿದ ನಿರ್ಬಂಧಗಳನ್ನು ಪರಿಸರ ...
READ MORE
ಒಟ್ಟು ಜನಸಂಖ್ಯೆಯಲ್ಲಿ 18 ವಯೋಮಿತಿಯ ಒಳಗಿರುವ ಮಕ್ಕಳ ಶೇಕಡಾ ವಾರು ಜನಸಂಖ್ಯೆಯು ಗಣನೀಯ ವಾಗಿರುತ್ತದೆ. ಈ ಮಕ್ಕಳಿಗೆ  ಶಿಕ್ಷಣಕ್ಕೆ ಅನುವುಮಾಡುವಂತಹ, ಆಥರ್ಿಕ ಮತ್ತು ಲೈಂಗಿಕವಾಗಿ ಶೋಷಿತರಾಗದಂತೆ ರಕ್ಷಿಸುವ ಮತ್ತು ಘನತೆಯಿಂದ ಸುರಕ್ಷಿತರಾಗಿ ಬಾಳುವಂತೆ ಮಾಡುವ ವಾತಾವರಣವನ್ನು ಸೃಷ್ಠಿಸಬೇಕಾಗಿದೆ. ಮಗು ಹುಟ್ಟಿದ ದಿನದಿಂದ 18 ...
READ MORE
“11 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಟಾಪ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹಂಪಿ ಸುದ್ಧಿಯಲ್ಲಿ   ಏಕಿದೆ ?ಈ ವರ್ಷ ನೀವು ನೋಡಲೇಬೇಕಾದ ಜಗತ್ತಿನ 52 ಟಾಪ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ರಾಜ್ಯದ ಪಾರಂಪರಿಕ ನಗರಿ ಹಂಪಿ ಟಾಪ್ 2 ಸ್ಥಾನ ಪಡೆದಿದೆ. ದಿ ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ 2019ರ ಟಾಪ್ ...
READ MORE
” 05 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಈರುಳ್ಳಿ-ಬೆಳ್ಳುಳ್ಳಿಗೆ ಪರ್ಯಾಯ ಪೌಷ್ಠಿಕಾಂಶ ಬಳಕೆ ಸುದ್ಧಿಯಲ್ಲಿ ಏಕಿದೆ ?ಶಾಲಾ ಮಕ್ಕಳಿಗೆ ಪೂರೈಸುವ ಬಿಸಿಯೂಟದಲ್ಲಿ ಈರುಳ್ಳಿ-ಬೆಳ್ಳುಳ್ಳಿಗೆ ಪರ್ಯಾಯವಾಗಿ ಪೌಷ್ಠಿಕಾಂಶವಿರುವ ಇತರ ತರಕಾರಿಗಳನ್ನು ಬಳಸುವ ಆಹಾರ ಗುಣಮಟ್ಟದ ಬಗ್ಗೆ ಇಸ್ಕಾನ್‌ ಸಂಸ್ಥೆಯ 'ಅಕ್ಷಯ ಪಾತ್ರೆ' ಪ್ರತಿಷ್ಠಾನ ದೃಢೀಕೃತ ಪ್ರಮಾಣ ಪತ್ರ ನೀಡಿದಲ್ಲಿ ಅದಕ್ಕೆ ಆಯೋಗದ ಅಭ್ಯಂತರವಿಲ್ಲ ...
READ MORE
“6th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕೃಷಿ ಕಲ್ಯಾಣ ಅಭಿಯಾನ ಸುದ್ದಿಯಲ್ಲಿ ಏಕಿದೆ? ರೈತರ ಆದಾಯ ದುಪ್ಪಟ್ಟು ಹಾಗೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಗ್ರಾಮಗಳಲ್ಲಿ ಆಯ್ಕೆಯಾಗುವ ರೈತರಿಗೆ ಸೂಕ್ತ ನೆರವು ನೀಡುವ ಕೃಷಿ ಕಲ್ಯಾಣ್ ಅಭಿಯಾನ ಶೀಘ್ರ ಆರಂಭವಾಗಲಿದೆ. ಮುಂದಿನ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಜೂನ್ ...
READ MORE
“3rd July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ”
ಇ ತ್ಯಾಜ್ಯ ಸಂಸ್ಕರಣಾ ಘಟಕ ಸುದ್ದಿಯಲ್ಲಿ ಏಕಿದೆ? ದೇಶದ ಮೊದಲ 'ಇ-ತ್ಯಾಜ್ಯ ಸಂಸ್ಕರಣಾ ಘಟಕ' ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ. ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿ ಬರುವ ಕೇಂದ್ರೀಯ ಪ್ಲಾಸ್ಟಿಕ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್‌)ಯಿಂದ ನಾಲ್ಕು ತಿಂಗಳಲ್ಲಿ ಘಟಕ ಸ್ಥಾಪನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ...
READ MORE
24th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
“8th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
14th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
“21st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“4th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಚೈಲ್ಡ್ ಟ್ರ್ಯಾಕಿಂಗ್ ಪದ್ದತಿ
“11 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 05 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“6th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“3rd July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *