” 17 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಕೃಷಿ ಕ್ರಾಂತಿಗೆ ಹೊಸ ನೀತಿ

1.

ಸುದ್ಧಿಯಲ್ಲಿ ಏಕಿದೆ ?ಬರಗಾಲ, ಬೆಳೆ ಸಾಲದಂತಹ ಸರಣಿ ಸಂಕಷ್ಟಗಳಿಗೆ ಸಿಲುಕಿ ಕೃಷಿ ಮೇಲೆ ವೈರಾಗ್ಯ ಹೊಂದುತ್ತಿರುವ ರೈತರಲ್ಲಿ ಆತ್ಮವಿಶ್ವಾಸ ಬಿತ್ತಿ, ಬದುಕು ಕಟ್ಟಲು ನೆರವಾಗುವ ಉದ್ದೇಶದಿಂದ ಹೊಸ ಕೃಷಿ ನೀತಿ ತರಲು ರಾಜ್ಯ ಸರ್ಕಾರ ಮುಂದಾಗಿದೆ.

 • ರೈತರ ಬೆಳೆಗೆ ವರ್ಷ ಮೊದಲೇ ಬೆಲೆ ನಿಗದಿ ಮಾಡಿ ದುಪ್ಪಟ್ಟು ಆದಾಯ ಕೊಡಿಸಲು ಸರ್ಕಾರ ಹೊಸ ಕೃಷಿ ನೀತಿ ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ .

ಉದ್ದೇಶ

 • ರಾಜ್ಯದಲ್ಲಿ ಗ್ರಾಹಕ ಸೂಚ್ಯಂಕ ನಿರಂತರ ಏರಿಕೆಯಾಗುತ್ತಿದ್ದರೆ ಕೃಷಿಕರ ಆದಾಯ ಇನ್ನೂ ನಿಂತ ನೀರಿನಂತಾಗಿದೆ. ಜಿಎಸ್​ಡಿಪಿಗೆ ಕೃಷಿ ಕೊಡುಗೆ ದಿನೇ ದಿನೆ ಕಡಿಮೆಯಾಗುತ್ತಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಮುಂದಿನ ವರ್ಷ ಕೃಷಿ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದೆ.
 • ರಾಜ್ಯದಲ್ಲಿ 2006ರಲ್ಲಿ ಜಾರಿಗೆ ಬಂದ ಕೃಷಿ ನೀತಿಯ ಮತ್ತೊಂದು ಅವಧಿ 2016ಕ್ಕೆ ಬಂದಿದೆ. ಹಿಂದಿನ ಸರ್ಕಾರ ದೇಶದಲ್ಲೇ ಮೊದಲನೆಯದಾದ ಸಾವಯವ ಕೃಷಿ ನೀತಿ ಜತೆಗೆ ಕೃಷಿ ರಫ್ತು ನೀತಿಯನ್ನೂ ತಂದಿತ್ತು. ಇದೀಗ ರಾಜ್ಯ ಸರ್ಕಾರ ಕೃಷಿಯ ಸಮಗ್ರ ಬೆಳವಣಿಗೆಯತ್ತ ಚಿತ್ತ ಹರಿಸುವ ಮೂಲಕ ರೈತರನ್ನು ಆತ್ಮಹತ್ಯೆಯಿಂದ ದೂರ ಮಾಡಿ ಅವರಲ್ಲಿ ಕೃಷಿಯ ಬಗ್ಗೆ ವಿಶ್ವಾಸ ಮೂಡಿಸಲು ಹೊಸ ನೀತಿ ರೂಪಿಸುತ್ತಿದೆ.

ಹೊಸ ನೀತಿಯಲ್ಲಿ ಏನಿರಲಿದೆ ?

 • ಗೋದಾಮು ನಿರ್ಮಾಣ: ವ್ಯಾಪಾರಿಗಳು ಮೋಸ ಮಾಡಿ ಬೆಲೆ ತಗ್ಗಿಸುವ ಸಂದರ್ಭದಲ್ಲಿ ರೈತರಿಗೆ ತಮ್ಮಕೃಷಿ ಉತ್ಪನ್ನವನ್ನು ಕಾಯ್ದಿರಿಸಲು ಗೋದಾಮುಗಳ ಅಗತ್ಯವಿರುತ್ತದೆ. ಆದ್ದರಿಂದ ಪ್ರತಿ 5 ಕಿಮೀಗಳಿಗೆ ಒಂದರಂತೆ ಗೋದಾಮು ನಿರ್ಮಾಣ, ಅಲ್ಲಿ ತಂದಿಡುವ ಉತ್ಪನ್ನಗಳಿಗೆ ಅರ್ಧದಷ್ಟು ಹಣವನ್ನು ಸರ್ಕಾರವೇ ಪಾವತಿಸುವುದು, ಉತ್ತಮ ಬೆಲೆ ಸಿಕ್ಕಾಗ ರೈತರು ಸರ್ಕಾರದ ಹಣ ವಾಪಸ್ ಮಾಡುವುದು ಎಂಬ ಅಂಶಗಳು ನೀತಿಯಲ್ಲಿ ಆದ್ಯತೆ ಪಡೆಯಲಿವೆ.
 • ಉತ್ಪನ್ನಗಳಿಗೆ ದುಪ್ಪಟ್ಟು ಬೆಲೆ ನಿಗದಿ: ಖರ್ಚಿನ ಆಧಾರದಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಬೇಕೆಂಬ ರೈತರ ಬೇಡಿಕೆಗೆ ಹೊಸ ನೀತಿಯಲ್ಲಿ ಆದ್ಯತೆ ಸಿಗುತ್ತಿದೆ. ಎಲ್ಲ ಬೆಳೆಗೂ ವರ್ಷ ಮುನ್ನವೇ ಖರ್ಚಿನ ಆಧಾರದಲ್ಲಿ ಬೆಲೆ ನಿಗದಿ ಮಾಡಲಾಗುತ್ತದೆ. ಅಷ್ಟೇ ಬೆಳೆಯನ್ನು ವ್ಯಾಪಾರಿಗಳು ನೀಡಲೇಬೇಕು. ಇಲ್ಲದಿದ್ದರೆ ವ್ಯಾಪಾರಿಗಳ ವಿರುದ್ಧ ಶಿಸ್ತುಕ್ರಮಕ್ಕೂ ಆದ್ಯತೆ ನೀಡಲಾಗುತ್ತದೆ. ರೈತರ ಆದಾಯ ಈಗ ಇರುವುದಕ್ಕಿಂತ ದ್ವಿಗುಣವಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.
 • ರೈತ ಸಮಿತಿ ಚರ್ಚೆ: ಸರ್ಕಾರ ಈಗಾಗಲೇ ಪ್ರತಿ ಜಿಲ್ಲೆಗೆ ಇಬ್ಬರಂತೆ 60 ರೈತರು, ತಜ್ಞರು, ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿದ್ದು, ನೀತಿಯಲ್ಲಿ ರಬೇಕಾದ ಅಂಶಗಳ ಬಗ್ಗೆ ಚರ್ಚೆ ನಡೆಸುತ್ತಿದೆ. ಬಜೆಟ್ ವೇಳೆಗೆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಬಜೆಟ್ ನಂತರ ಹೊಸ ನೀತಿ ಜಾರಿಗೆ ಬರಲಿದೆ.
 • ಹವಾಮಾನ ಆಧಾರಿತ ಬೆಳೆ: ರಾಜ್ಯದಲ್ಲಿ ಆರು ಹವಾಮಾನ ಆಧಾರಿತ ಪ್ರದೇಶಗಳಿದ್ದು, ಹೊಸ ನೀತಿಯ ಪ್ರಕಾರ ಅದರ ಆಧಾರದಲ್ಲಿಯೇ ಯಾವ ಬೆಳೆ ಬೆಳೆಯಬೇಕು, ಯಾವ ಪ್ರದೇಶ ಎಂಬುದನ್ನು ನಿಗದಿ ಮಾಡಲಾಗುತ್ತದೆ. ಒಂದೇ ಬೆಳೆ ಹೆಚ್ಚಿಗೆ ಬೆಳೆದು ರೈತರು ಬೆಲೆ ಕುಸಿಯದಂತೆ ನೋಡಿಕೊಳ್ಳುವುದು ಇದರ ಉದ್ದೇಶ. ಇದಕ್ಕಾಗಿಯೇ ಜಿಲ್ಲೆಗೆ ಅಗತ್ಯವಿರುವಷ್ಟು ಬೆಳೆಯನ್ನು ನಿಗದಿ ಮಾಡುವ ಉದ್ದೇಶವೂ ಇದೆ. ನಿಗದಿತ ಬೆಳೆ ಹೊರತು ಬೇರೆ ಬೆಳೆ ಬೆಳೆಯುವ ರೈತರಿಗೆ ಸಹಾಯಧನಗಳನ್ನು ನೀಡುವುದಿಲ್ಲ ಎಂಬ ಅಂಶವನ್ನು ಸೇರಿಸಲಾಗುತ್ತದೆ.
 • ಸಂಸ್ಕರಣೆ: ಕೃಷಿ ಉತ್ಪನ್ನಗಳನ್ನು ಎಪಿಎಂಸಿಗಳಲ್ಲಿಯೇ ಮಾರಾಟ ಮಾಡಬೇಕು. ಸಂಸ್ಕರಣೆಗೆ ಒತ್ತು ನೀಡಬೇಕು ಎಂಬ ನಿಟ್ಟಿನಲ್ಲಿ ಕೃಷಿಕರ ನೆರವಿಗೆ ಸರ್ಕಾರ ಮುಂದಾಗಲಿದೆ.
 • ವಿವಿಗಳ ಬಲವರ್ಧನೆ : ಕೃಷಿ ವಿಶ್ವವಿದ್ಯಾಲಗಳನ್ನು ಇನ್ನಷ್ಟು ಬಲ ಪಡಿಸುವ ನಿಟ್ಟಿನಲ್ಲಿ ಈಗಾಗಲೇ ಅಧ್ಯಯನ ನಡೆದಿದೆ. ಅಲ್ಲಿ ರೈತ ಪರ ಸಂಶೋಧನೆಗಳನ್ನು ಹೆಚ್ಚಿಸುವ ಮೂಲಕ ಲ್ಯಾಬ್ ಟು ಲ್ಯಾಂಡ್ ಪರಿಕಲ್ಪನೆಗೆ ಬಲ ತುಂಬುವುದು ಸರ್ಕಾರದ ಉದ್ದೇಶವಾಗಿದೆ.
 • ಸಹಕಾರ ಕೃಷಿ: ಸಹಕಾರ ವಲಯದ ಮೂಲಕವೂ ಕೃಷಿಗೆ ಆದ್ಯತೆ ನೀಡಲಾಗುತ್ತದೆ. ರೈತರು ಸಹಕಾರ ಸಂಘಗಳನ್ನು ರಚನೆ ಮಾಡಿಕೊಂಡು ಕೃಷಿ ಚಟುವಟಿಕೆಗಳನ್ನು ಕೈಗೊಂಡರೆ ಸಹಕಾರ ಇಲಾಖೆಯ ಮೂಲಕ ನೆರವು ನೀಡುವುದು ಸರ್ಕಾರದ ಉದ್ದೇಶವಾಗಿದೆ.

ನೀತಿಯ ಪ್ರಮುಖಾಂಶ

 • ಇಸ್ರೇಲ್ ತಂತ್ರಜ್ಞಾನ ಹಾಗೂ ಶೂನ್ಯ ಬಂಡವಾಳ ಕೃಷಿ ಯೋಜನೆ
 • ಹವಾಮಾನ ಹಾಗೂ ಪ್ರದೇಶ ಆಧಾರಿತ ಕೃಷಿ ಪದ್ಧತಿ
 • ಭೂಮಿಯ ಸದ್ಬಳಕೆ, ಫಲವತ್ತತೆ ಹೆಚ್ಚಳ
 • ನಿಗದಿತ ಬೆಳೆ ಬಿಟ್ಟು ಬೇರೆ ಬೆಳೆದರೆ ಸಹಾಯಧನ ರದ್ದು
 • ವರ್ಷಕ್ಕೂ ಮೊದಲೇ ಬೆಳೆಗೆ ಬೆಲೆ ನಿಗದಿ, ಹನಿ ನೀರಾವರಿ ಪ್ರಮಾಣ ಹೆಚ್ಚಳ
 • ಕೃಷಿ ವಿವಿಗಳ ಬಲವರ್ಧನೆ
 • ಗೋದಾಮುಗಳ ಸಂಖ್ಯೆಹೆಚ್ಚಳ
 • ಸರ್ಕಾರದಿಂದ ನೆರವು

ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ರೈತರಿಗೆ ನಷ್ಟ ತುಂಬಿ ಕೊಡುವ ಯೋಜನೆಯೊಂದನ್ನು ಜಾರಿಗೆ ತರಲು ಹೊಸ ಕೃಷಿ ನೀತಿಯಲ್ಲಿ ಸೇರಿಸಲಾಗುತ್ತದೆ. ಹನಿ ನೀರಾವರಿ ಮೂಲಕ ನೀರಿನ ಸದ್ಬಳಕೆ ಹಾಗೂ ಮಿತವ್ಯಯ ಮಾಡುವುದು ಸಹ ಸರ್ಕಾರದ ಆದ್ಯತೆಯಾಗಿರುತ್ತದೆ. ಶೂನ್ಯ ಬಂಡವಾಳ ಕೃಷಿ ಪದ್ಧತಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಣೆ ಮಾಡಲಾಗುತ್ತದೆ.

ಅಂಚೆ ಇಲಾಖೆಯಿಂದ ನೆಟ್‌ ಬ್ಯಾಂಕಿಂಗ್‌ ಸೇವೆ

2.

ಸುದ್ಧಿಯಲ್ಲಿ ಏಕಿದೆ ?ಭಾರತೀಯ ಅಂಚೆ ಇಲಾಖೆಯು ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆಯನ್ನು ತನ್ನ ಉಳಿತಾಯ ಖಾತೆ ಗ್ರಾಹಕರಿಗೆ ಒದಗಿಸಿದೆ. ಇದರ ಮೂಲಕ ಆರ್‌ಡಿ, ಪಿಪಿಎಫ್‌ ಖಾತೆಗಳಿಗೆ ಗ್ರಾಹಕರು ಹಣ ಪಾವತಿಸಬಹುದು. ಇಲ್ಲವೇ ಇಂಥ ಖಾತೆಗಳನ್ನು ತೆರೆಯಬಹುದು ಅಥವಾ ಸ್ಥಗಿತಗೊಳಿಸಬಹುದು.

 • ಅಂಚೆ ಕಚೇರಿಯ ಉಳಿತಾಯ ಬ್ಯಾಂಕ್‌(ಪಿಒಎಸ್‌ಬಿ) ಗ್ರಾಹಕರು ನೂತನ ನೆಟ್‌ ಬ್ಯಾಂಕಿಂಗ್‌ ಸೇವೆಯನ್ನು ಇಲಾಖೆಯ ವೆಬ್‌ಸೈಟ್‌ ಮೂಲಕ ಪಡೆಯಬಹುದು.

ಗ್ರಾಹಕರಿಗೆ ಲಭ್ಯವಿರುವ ಸೌಲಭ್ಯಗಳು

 • ಗ್ರಾಹಕರಿಗೆ ಒಂದು ಪೋಸ್ಟ್ ಆಫೀಸ್ ಸೇವಿಂಗ್ ಬ್ಯಾಂಕ್ ಖಾತೆಯಿಂದ ಇತರರಿಗೆ ಆನ್ಲೈನ್ನಲ್ಲಿ ಹಣವನ್ನು ವರ್ಗಾಯಿಸಬಹುದು.
 • ಇ-ವಾಣಿಜ್ಯ ಪೋರ್ಟಲ್ ಗ್ರಾಮೀಣ ಕುಶಲಕರ್ಮಿಗಳಿಗೆ ಮತ್ತು ಸಾರ್ವಜನಿಕ ವಲಯದ ಘಟಕಗಳಿಗೆ ಆನ್ಲೈನ್ ​​ಮಾರುಕಟ್ಟೆಯನ್ನು ಒದಗಿಸುತ್ತದೆ, ಅಲ್ಲಿ ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು
 • 5 ಲಕ್ಷ ಸ್ಥಳಗಳಲ್ಲಿ ಉತ್ಪನ್ನಗಳನ್ನು ವಿತರಿಸಲು ಭಾರತೀಯ ಪೋಸ್ಟ್ ಸೇವೆ ವಿಶಾಲವಾದ ಜಾಲವನ್ನು ಒದಗಿಸುತ್ತದೆ. ಸ್ಪೀಡ್ ಪೋಸ್ಟ್ ಸೇವೆ ಗಮ್ಯಸ್ಥಾನಕ್ಕೆ ಉತ್ಪನ್ನಗಳನ್ನು ತಲುಪಿಸುತ್ತದೆ
 • ಆನ್ಲೈನ್ ​​ಮಾರುಕಟ್ಟೆ ಗ್ರಾಹಕರಿಗೆ ರಿಟರ್ನ್ ಪಾಲಿಸಿಯನ್ನು ಒದಗಿಸುತ್ತದೆ.
 • ಪೋಸ್ಟ್ ಇಲಾಖೆ ಮೊದಲ ಆರು ತಿಂಗಳ ಕಾಲ ಉಚಿತವಾಗಿ ಮಾರಾಟಗಾರರನ್ನು ನೋಂದಾಯಿಸುತ್ತದೆ

ಏನು ಪ್ರಯೋಜನ?

 • ಆರ್‌ಡಿ, ಪಿಪಿಎಫ್‌ ಸೇರಿದಂತೆ ಇತರೆ ಯೋಜನೆಗಳಿಗೆ ಹಣ ಪಾವತಿಸಲು ಅಂಚೆ ಕಚೇರಿಗೆ ಹೋಗುವ ಅವಶ್ಯಕತೆಯನ್ನು ನೆಟ್‌ ಬ್ಯಾಂಕಿಂಗ್‌ ತಪ್ಪಿಸುತ್ತದೆ.
 • ಸುಲಭವಾಗಿ ನೆಟ್‌ ಬ್ಯಾಂಕಿಂಗ್‌ ಮೂಲಕ ಪಾವತಿ ಮಾಡಬಹುದು. ಶ್ರಮ ಮತ್ತು ಸಮಯ ಉಳಿತಾಯವಾಗುತ್ತದೆ.
 • ಅಲ್ಲದೇ, ಪಿಒಎಸ್‌ಬಿ ಖಾತೆಯಿಂದ ಇನ್ನೊಬ್ಬರಿಗೆ ಹಣ ರವಾನಿಸಬಹುದು.
 • ಆರ್‌ಡಿ, ಪಿಪಿಎಫ್‌, ನಿಶ್ಚಿತ ಠೇವಣಿ ಖಾತೆಗಳನ್ನು ತೆರೆಯಲು ಅಥವಾ ಸ್ಥಗಿತಗೊಳಿಸಲೂ ನೆಟ್‌ ಬ್ಯಾಂಕಿಂಗ್‌ನಲ್ಲಿ ಅವಕಾಶವಿದೆ.
 • ಅಲ್ಲದೇ, ಪಿಪಿಎಫ್‌ ಖಾತೆಯಿಂದ ಹಣ ಹಿಂಪಡೆಯುವ ಅನುಕೂಲವೂ ಇದೆ.

ರಾಣಿ ಹುಹ್‌ ಸ್ಮಾರಕ

3.

ಸುದ್ಧಿಯಲ್ಲಿ ಏಕಿದೆ ?ಅಯೋಧ್ಯೆಯ ರಾಜಕುಮಾರಿಯಾಗಿ ಮುಂದೆ ಕೊರಿಯನ್ನರ ಜನಪ್ರಿಯ ರಾಣಿಯಾದ ಹುಹ್‌ ಸ್ಮರಣಾರ್ಥ ಅಯೋಧ್ಯೆಯಲ್ಲಿರುವ ಸ್ಮಾರಕದ ಉನ್ನತೀಕರಣ ಯೋಜನೆ ಇನ್ನೆರೆಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಉತ್ತರ ಕೊರಿಯಾದ ರಾಯಭಾರ ಕಚೇರಿ ತಿಳಿಸಿದೆ.

 • ಸರಯೂ ನದಿ ತಟದಲ್ಲಿರುವ ಕೊರಿಯಾ ಪಾರ್ಕ್‌ನಲ್ಲಿ ಪುಟ್ಟ ಸ್ಮಾರಕವಿದೆ.

ಹಿನ್ನೆಲೆ

 • ದೇವತೆಯ ಆದೇಶದಂತೆ ಅಯೋಧ್ಯೆ ರಾಜಕುಮಾರಿ ಸುರಿರತ್ನ ಕ್ರಿಸ್ತಶಕ 48ರಲ್ಲಿ ಕೊರಿಯಾಗೆ ತೆರಳಿ ಅಲ್ಲಿನ ಅರಸ ಸುರೋವನ್ನು ಮದುವೆಯಾಗಿ ಮುಂದೆ ರಾಣಿ ಹುಹ್‌ ಹ್ವಾಂಗ್‌ ಒಕೆ ಎಂದೇ ಜನಪ್ರಿಯಳಾದಳು ಎನ್ನುತ್ತದೆ ಪ್ರಾಚೀನ ಇತಿಹಾಸ. ಹೀಗೆ ಅಯೋಧ್ಯೆ ಮತ್ತು ಕೊರಿಯಾ ನಡುವೆ ಬಾಂಧವ್ಯ ಬೆಸೆಯಲು ಕಾರಣವಾದ ರಾಣಿ ಹುಹ್‌ನ ಸ್ಮರಣಾರ್ಥ ಅಯೋಧ್ಯೆಯ ಸರಯೂ ನದಿ ತಟದಲ್ಲಿ ಸ್ಮಾರಕವಿದೆ.
 • ಪ್ರತಿ ಏಪ್ರಿಲ್‌ನಲ್ಲಿ ಕೊರಿಯನ್ನರು ಇಲ್ಲಿಗೆ ಭೇಟಿಕೊಟ್ಟು ಗೌರವ ಸಲ್ಲಿಸುವುದು ವಾಡಿಕೆ.
 • ಕಳೆದ ನವೆಂಬರ್‌ನಲ್ಲಿ ಅಯೋಧ್ಯೆಯಲ್ಲಿ ನಡೆದ ದೀಪೋತ್ಸವ ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಕ್ಷಿಣ ಕೊರಿಯಾದ ಮೊದಲ ಮಹಿಳೆ ಕಿಮ್‌ ಜುಂಗ್‌ ಸೂಕ್‌ ಅವರು ಸ್ಮಾರಕದ ಉನ್ನತೀಕರಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ರಾಷ್ಟ್ರೀಯ ಕರಡು ಶಿಕ್ಷಣ ನೀತಿ 

4.

ಸುದ್ಧಿಯಲ್ಲಿ ಏಕಿದೆ ?ರಾಷ್ಟ್ರೀಯ ಶಿಕ್ಷ ಣ ನೀತಿ (ಎನ್‌ಇಪಿ) ರೂಪಿಸಲು ನೇಮಿಸಿದ್ದ ಕೆ. ಕಸ್ತೂರಿರಂಗನ್‌ ನೇತೃತ್ವದ ಸಮಿತಿಯು ತನ್ನ ಕಾರ್ಯವನ್ನು ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ಸರಕಾರಕ್ಕೆ ಕರಡು ವರದಿ ಸಲ್ಲಿಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ತಿಳಿಸಿದ್ದಾರೆ.

ಕರಡು ನೀತಿ ಯಾವುದನ್ನು ಆಧರಿಸಿದೆ ?

 • ಕರಡು ನೀತಿಯು ಕೈಗೆಟುಕುವ ಬೆಲೆಯ, ಸರ್ವರಿಗೂ ಲಭ್ಯವಾಗುವ, ಗುಣಮಟ್ಟ, ನ್ಯಾಯೋಚಿತ ಹಾಗೂ ಹೊಣೆಗಾರಿಕೆ ಎಂಬ ಐದು ಆಧಾರಸ್ತಂಭಗಳ ಮೇಲೆ ನಿಂತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹಿಂದಿನ ಕರಡು ನೀತಿಗಳು

 • 1968ರಲ್ಲಿ ಇಂದಿರಾಗಾಂಧಿ ಅವರ ಅವಧಿಯಲ್ಲಿ ಮೊದಲ ಶಿಕ್ಷ ಣ ನೀತಿಯನ್ನು ಘೋಷಿಸಲಾಗಿತ್ತು.
 • 1986ರಲ್ಲಿ ರಾಜೀವ್‌ಗಾಂಧಿ ಅವರ ಅವಧಿಯಲ್ಲಿ ಎರಡನೇ ನೀತಿ ಜಾರಿಗೊಂಡಿತ್ತು.
 • 2017ರಲ್ಲಿ ಕೇಂದ್ರ ಸರಕಾರ ನೂತನ ಶಿಕ್ಷಣ ನೀತಿಯ ರೂಪುರೇಷೆಗಳನ್ನು ರಚಿಸಲು ಕೆ. ಕಸ್ತೂರಿರಂಗನ್‌ ನೇತೃತ್ವದ 9 ಸದಸ್ಯರ ಸಮಿತಿಯನ್ನು ರಚಿಸಿತ್ತು.
 • 2000 ಕೋರ್ಸ್‌ಗಳ ಆರಂಭ: ವೃತ್ತಿಪರರು, ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಹಿರಿಯ ನಾಗರಿಕರು ಸೇರಿದಂತೆ ಸರ್ವರಿಗೂ ಸ್ವಯಂ ವೇದಿಕೆ ಅಡಿಯಲ್ಲಿ 2000 ಕೋರ್ಸ್‌ಗಳನ್ನು ಆರಂಭಿಸಲು ಎಚ್‌ಆರ್‌ಡಿ ಸಚಿವಾಲಯ ಯೋಜಿಸುತ್ತಿದೆ.
 • ಇದರ ಅಡಿಯಲ್ಲಿ ಸಾಂಪ್ರದಾಯಿಕ ಶಿಕ್ಷಣ ಮುಗಿದ ಬಳಿಕವೂ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ತಮಗೆ ಇಷ್ಟವಾದ ಕೋರ್ಸ್‌ಗಳನ್ನು ಮಾಡುವ ಮೂಲಕ ಕೌಶಲ್ಯಾಭಿವೃದ್ಧಿ ಮಾಡಿಕೊಳ್ಳಬಹುದು.

ಹೊಸ ಶಿಕ್ಷಣ ನೀತಿಯ ಮುಖ್ಯಾಂಶಗಳು

 • ಜನಸಾಮಾನ್ಯರಿಗೂ ಶಿಕ್ಷ ಣ ತಲುಪಿಸುವ ಉದ್ದೇಶ
 • ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಹಾಗೂ ಅನ್ವೇಷಣೆಗೆ ಹೆಚ್ಚಿನ ಒತ್ತು
 • ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಕ್ರಾಂತಿಕಾರಿ ಸುಧಾರಣೆಗೆ ಕ್ರಮ

ಸುಧಾರಣೆಗೆ ಸರ್ಕಾರ ತೆಗೆದುಕೊಂಡ ಕ್ರಮಗಳು

 • ಸಂಶೋಧನೆ ಸಂಸ್ಕೃತಿ ಬೆಳೆಸಬೇಕು: ದೇಶದ ಶಿಕ್ಷಣ ಪದ್ಧತಿಯಲ್ಲಿ ಸಂಶೋಧನೆ ಸಂಸ್ಕೃತಿಯನ್ನು ಬೆಳೆಸಬೇಕು. ಹೀಗಾಗಿಯೇ ಅಟಲ್‌ ಇನ್ನೋವೇಷನ್‌ ಮಿಷನ್‌ ಯೋಜನೆ ಅಡಿಯಲ್ಲಿ ಸರಕಾರ ದೇಶದ 3,000ಕ್ಕೂ ಹೆಚ್ಚಿನ ಶಾಲೆಗಳಲ್ಲಿ ಅಟಲ್‌ ಥಿಂಕಿಂಗ್‌ ಲ್ಯಾಬ್‌ ಅನ್ನು ಸ್ಥಾಪಿಸಿದೆ. ಈ ಯೋಜನೆ ಅಡಿಯಲ್ಲಿ 6ರಿಂದ 12ನೇ ತರಗತಿ ಮಕ್ಕಳು 3-ಡಿ ಪ್ರಿಂಟಿಂಗ್‌, ರೋಬೊಟಿಕ್ಸ್‌, ಕೃತಕ ಬುದ್ಧಿಮತ್ತೆ ವಿಚಾರದಲ್ಲೂ ಸಂಶೋಧನೆ ನಡೆಸಬಹುದು.
 • ”ಮಕ್ಕಳಲ್ಲಿ ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಹೆಚ್ಚಿಸುವ ದೃಷ್ಟಿಯಿಂದ 2016ರಲ್ಲಿ ಹ್ಯಾಕಥಾನ್‌ ಅಭಿಯಾನ ಅರಂಭಿಸಲಾಗಿದೆ. ಇದರ ಅಡಿಯಲ್ಲಿ ಮೊದಲ ವರ್ಷ 40,000 ಮಕ್ಕಳು ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. 2017ರಲ್ಲಿ ಹ್ಯಾಕಥಾನ್‌ನಲ್ಲಿ ಭಾಗವಹಿಸಿದ್ದಾರೆ. ಮೊದಲ ವರ್ಷ 50 ಮತ್ತು ಎರಡನೇ ವರ್ಷ 100ಕ್ಕೂ ಹೆಚ್ಚು ಸಂಶೋಧನೆಗಳನ್ನು ಇದರ ಅಡಿಯಲ್ಲಿ ಮಾಡಲಾಗಿದೆ

ಅಟಲ್ ಇನ್ನೋವೇಶನ್ ಮಿಷನ್ (ಎಐಎಂ).

 • ದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ಉತ್ತೇಜಿಸುವ ಭಾರತದ ಪ್ರಮುಖ ಉಪಕ್ರಮವೆಂದರೆ ಅಟಲ್ ಇನ್ನೋವೇಶನ್ ಮಿಷನ್ (ಎಐಎಂ).
 • AIM ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಾವೀನ್ಯತೆ ಪರಿಸರ-ವ್ಯವಸ್ಥೆಯನ್ನು ಕ್ರಾಂತಿಗೊಳಿಸಲು ಹಲವಾರು ಯೋಜನೆಗಳ ಮೂಲಕ ಇಡೀ ನಾವೀನ್ಯ ಜೀವನ ಚಕ್ರವನ್ನು ಸ್ಪರ್ಶಿಸಲು ಒಂದು ವಿಶಾಲವಾದ ರಚನೆಯನ್ನು ರಚಿಸಲು ಆದೇಶ ನೀಡಿದೆ

ಶೈಕ್ಷಣಿಕ ವಲಯಕ್ಕೆ ಸೂಪರ್ ಕಂಪ್ಯೂಟರ್ ಬಲ

5.

ಸುದ್ಧಿಯಲ್ಲಿ ಏಕಿದೆ ?ದೇಶದ ಅಕಾಡೆಮಿಕ್‌ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಅತ್ಯಾಧುನಿಕ ಸೂಪರ್‌ ಕಂಪ್ಯೂಟರ್‌ಗಳ ಸೌಲಭ್ಯವನ್ನು ಒದಗಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

 • ಭಾರತದಾದ್ಯಂತ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ 7 ವರ್ಷಗಳಲ್ಲಿ 75 ಸೂಪರ್‌ ಕಂಪ್ಯೂಟರ್‌ಗಳನ್ನು ಅಳವಡಿಸುವ ಉದ್ದೇಶವನ್ನು ಯೋಜನೆ ಹೊಂದಿದೆ.
 • ಈ ಸಂಬಂಧ ರಾಷ್ಟ್ರೀಯ ಸೂಪರ್‌ ಕಂಪ್ಯೂಟರ್‌ ಯೋಜನೆಗೆ (ಎನ್‌ಎಸ್‌ಎಂ) ಚಾಲನೆ ನೀಡಲಾಗಿದೆ. ಫ್ರಾನ್ಸ್‌ ಮೂಲದ ತಂತ್ರಜ್ಞಾನ ಸಂಸ್ಥೆ ಅಟೋಸ್‌ ಜತೆ 4,500 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
 • ಅಟೋಸ್‌ ಹಾಗೂ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಸಂಸ್ಥೆಯಾದ ಸಿ-ಡಾಕ್‌ (ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಅಡ್ವಾನ್ಸ್ಡ್‌ ಕಂಪ್ಯೂಟಿಂಗ್‌) 3 ವರ್ಷ ಅವಧಿಯ ಒಪ್ಪಂದಕ್ಕೆ ಅಂಕಿತ ಹಾಕಿವೆ.
 • ಅಟೋಸ್‌ ಫ್ರಾನ್ಸ್‌ನ ಬಿಜೋನ್ಸ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಅಟೋಸ್‌, ಸೂಪರ್‌ ಕಂಪ್ಯೂಟರ್‌ಗಳನ್ನು ನಿರ್ಮಿಸಲಿದೆ.

ಯೋಜನೆ ಜಾರಿ ಹೇಗೆ?

 • ಈ ರಾಷ್ಟ್ರೀಯ ಸೂಪರ್‌ ಕಂಪ್ಯೂಟರ್‌ ಯೋಜನೆ ಒಟ್ಟು ಮೂರು ಹಂತಗಳನ್ನು ಹೊಂದಿದೆ. ಮೊದಲನೆಯ ಹಂತದಲ್ಲಿ 68 ಕೋಟಿ ರೂ. ವೆಚ್ಚದಲ್ಲಿ ಮೂರು ಸೂಪರ್‌ ಕಂಪ್ಯೂಟರ್‌ ಅಳವಡಿಸಸಲಾಗುವುದು. ನಂತರ 2-3ನೇ ಹಂತದಲ್ಲಿ ಸೂಪರ್‌ ಕಂಪ್ಯೂಟರ್‌ ಸಿಗಲಿದೆ.

ಬೆಂಗಳೂರಿನ ಐಐಎಸ್ಸಿ ಪಾತ್ರ:

 • ಯೋಜನೆಯಲ್ಲಿ ಸೂಪರ್‌ ಕಂಪ್ಯೂಟರ್‌ಗಳ ನಿರ್ಮಾಣ ಮತ್ತು ಖರೀದಿ ಎಂಬ ಎರಡು ಭಾಗವಿದೆ.
 • ಸಿ-ಡಾಕ್‌ ಮತ್ತು ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಇದರಲ್ಲಿ ತೊಡಗಿಸಿಕೊಳ್ಳಲಿವೆ. ಅಟೋಸ್‌ ಸೂಪರ್‌ ಕಂಪ್ಯೂಟರ್‌ ಯೋಜನೆಯ ನಿರ್ಮಾಣ ಹಾಗೂ ಎಲ್ಲ ಮೂರು ಹಂತಗಳಲ್ಲಿ ಪಾಲುದಾರಿಕೆಯನ್ನು ಹೊಂದಲಿದೆ.
 • ಮೊದಲ ಹಂತದಲ್ಲಿ ಸೂಪರ್‌ ಕಂಪ್ಯೂಟರ್‌ಗಳ ಜೋಡಣೆ ನಡೆಯಲಿದೆ. ಎರಡನೇ ಹಂತದಲ್ಲಿ ಮದರ್‌ ಬೋರ್ಡ್‌ ಇತ್ಯಾದಿ ಭಾಗಗಳ ಸ್ಥಳೀಯ ಉತ್ಪಾದನೆಯಾಗಲಿದೆ. ಮೂರನೇ ಹಂತದಲ್ಲಿ ಭಾರತದಲ್ಲಿ ಸಿ-ಡಾಕ್‌ ಸಹಯೋಗದಲ್ಲಿ ಸೂಪರ್‌ ಕಂಪ್ಯೂಟರ್‌ನ ವಿನ್ಯಾಸ ಸಿದ್ಧವಾಗಲಿದೆ.

ಚೆನ್ನೈನಲ್ಲಿ ಜೋಡಣೆ:

 • ಅಟೋಸ್‌ ಫ್ರಾನ್ಸ್‌ನಿಂದ ಸೂಪರ್‌ ಕಂಪ್ಯೂಟರ್‌ನ ಭಾಗಗಳಲ್ಲಿ ತರಿಸಿಕೊಳ್ಳಲಿದೆ. ಚೆನ್ನೈನಲ್ಲಿ ಇವುಗಳ ಜೋಡಣೆಯ ಕೆಲಸ ನಡೆಯಲಿದೆ. ಏಕಕಾಲದಲ್ಲೇ ಮೂರೂ ಹಂತಗಳ ಕೆಲಸಗಳು ನಡೆಯಲಿವೆ. ಆದರೆ ಭಿನ್ನ ಹಂತಗಳಲ್ಲಿ ಬಿಡುಗಡೆಯಾಗಲಿದೆ.

ಅಟೋಸ್‌ ಇತಿಹಾಸ:

 • ಫ್ರಾನ್ಸ್‌ ಮೂಲದ ಐರೋಪ್ಯ ತಂತ್ರಜ್ಞಾನ ಕಂಪನಿ ಅಟೋಸ್‌, ನಾನಾ ರಾಷ್ಟ್ರಗಳಲ್ಲಿ ಕಚೇರಿ ಹೊಂದಿದೆ. ಯುನಿಫೈಡ್‌ ಕಮ್ಯುನಿಕೇಶನ್ಸ್‌, ಕ್ಲೌಡ್‌, ಬಿಗ್‌ ಡೇಟಾ, ಸೈಬರ್‌ ಸೆಕ್ಯುರಿಟಿ ಇತ್ಯಾದಿ ವಲಯಗಳ ಸೇವೆ ನೀಡುತ್ತಿದೆ. ಭಾರತಕ್ಕೆ ಬುಲ್‌ ಸೆಕ್ವೆನಾ ಸೂಪರ್‌ ಕಂಪ್ಯೂಟರ್‌ ಎಂಬ ಬ್ರ್ಯಾಂಡ್‌ನ ಸೂಪರ್‌ ಕಂಪ್ಯೂಟರ್‌ಗಳನ್ನು ಒದಗಿಸಲಿದೆ.

ಏನಿದು ಸೂಪರ್‌ ಕಂಪ್ಯೂಟರ್‌?

 • ಇದೊಂದು ಕಂಪ್ಯೂಟರ್‌ ಆಗಿದ್ದು ಅತ್ಯುನ್ನತ ಮಟ್ಟದ ಸಾಮರ್ಥ್ಯ‌, ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ. ಇದರ ಸಾಮರ್ಥ್ಯ‌ವನ್ನು ಫ್ಲೋಟಿಂಗ್‌-ಪಾಯಿಂಟ್‌ ಆಪರೇಷನ್ಸ್‌ ಪರ್‌ ಸೆಕೆಂಡ್‌ (fpos) ಎಂಬ ಲೆಕ್ಕಾಚಾರದ ಪದ್ಧತಿಯಲ್ಲಿ ಅಳೆಯಲಾಗುತ್ತದೆ. 2017ರ ನವೆಂಬರ್‌ ವೇಳೆಗೆ ಜಗತ್ತಿನ ಎಲ್ಲ 500 ಅತಿ ವೇಗದ ಸೂಪರ್‌ ಕಂಪ್ಯೂಟರ್‌ಗಳು ಲಿನಕ್ಸ್‌ ಆಧಾರಿತ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. 1960ರಲ್ಲಿ ಮೊದಲ ಸಲ ಇದರ ಬಿಡುಗಡೆಯಾಯಿತು.

ಸೂಪರ್‌ ಕಂಪ್ಯೂಟರ್‌ ನಿರ್ಮಿಸುವ ರಾಷ್ಟ್ರಗಳು:

 • ಮುಖ್ಯವಾಗಿ ಅಮೆರಿಕ, ಜಪಾನ್‌, ಚೀನಾ, ಯುರೋಪ್‌, ಸೂಪರ್‌ ಕಂಪ್ಯೂಟರ್‌ಗಳ ಸಂಶೋಧನೆ-ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ. 2018ರ ವೇಳೆಗೆ ಚೀನಾದಲ್ಲಿ 206 ಸೂಪರ್‌ ಕಂಪ್ಯೂಟರ್‌ಗಳಿದ್ದರೆ, ಅಮೆರಿಕದಲ್ಲಿ 124 ಇತ್ತು.

ಯಾಕೆ ಬೇಕು?

 • ಕಂಪ್ಯೂಟರ್‌ ವಿಜ್ಞಾನದ ಸಂಕೀರ್ಣ ತಂತ್ರಜ್ಞಾನಗಳ ಅಭಿವೃದ್ಧಿಗೆ ಸೂಪರ್‌ ಕಂಪ್ಯೂಟರ್‌ಗಳು ಅಗತ್ಯ. ಕ್ವಾಂಟಮ್‌ ಮೆಶೀನ್‌, ಹವಾಮಾನ ಮುನ್ಸೂಚನೆ, ಹವಾಮಾನ ಸಂಶೋಧನೆ, ತೈಲ ಮತ್ತು ಅನಿಲ ನಿಕ್ಷೇಪಗಳ ಶೋಧ, ಜೈವಿಕ ತಂತ್ರಜ್ಞಾನ , ಅಣು ವಿಜ್ಞಾನ, ಅಣ್ವಸ್ತ್ರ ಅಭಿವೃದ್ಧಿ ಇತ್ಯಾದಿ ವಲಯಗಳಲ್ಲಿ ಸೂಪರ್‌ ಕಂಪ್ಯೂಟರ್‌ಗಳ ಅಗತ್ಯತೆ ಇದೆ.

ಭಾರತದಲ್ಲಿ ಸೂಪರ್‌ ಕಂಪ್ಯೂಟರ್‌:

 • ಭಾರತದಲ್ಲಿ 1980ರಲ್ಲಿ ಸೂಪರ್‌ ಕಂಪ್ಯೂಟರ್‌ ಅಭಿವೃದ್ಧಿ ಆರಂಭವಾಯಿತು. 1991ರಲ್ಲಿ ದೇಶದ ಮೊದಲ ಸೂಪರ್‌ ಕಂಪ್ಯೂಟರ್‌ ಪರಮ್‌ 8000 ಬಿಡುಗಡೆಯಾಯಿತು. ಸದ್ಯಕ್ಕೆ 5 ಸೂಪರ್‌ ಕಂಪ್ಯೂಟರ್‌ಗಳಿವೆ.
Related Posts
“25 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ರಾಷ್ಟ್ರೀಯ ಯುದ್ಧ ಸ್ಮಾರಕ ಸಿದ್ಧ ಸುದ್ಧಿಯಲ್ಲಿ ಏಕಿದೆ ?ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರನ್ನು ಗೌರವದಿಂದ ಸ್ಮರಿಸುವುದು ನಮ್ಮ ಕರ್ತವ್ಯ. ಹೀಗಾಗಿ ಇಂಡಿಯಾ ಗೇಟ್ ಬಳಿ ನಿರ್ವಿುಸಲಾಗಿರುವ ಸ್ಮಾರಕವನ್ನು ದೇಶಕ್ಕೆ ಅರ್ಪಿಸಲಾಗುವುದು. ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಬೇಕು ಎಂದು ದಶಕಗಳಿಂದ ಒತ್ತಾಯಿಸಲಾಗುತ್ತಿತ್ತು. ಎನ್​ಡಿಎ ಸರ್ಕಾರ ಅಧಿಕಾರಕ್ಕೆ ...
READ MORE
“27 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮುಖ್ಯ ಚುನಾವಣಾ ಆಯುಕ್ತ ಸುದ್ಧಿಯಲ್ಲಿ ಏಕಿದೆ ?ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್ ಮಾಸಾಂತ್ಯಕ್ಕೆ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಸುನೀಲ್ ಅರೋರಾ ಅವರನ್ನು ನೇಮಕ ಮಾಡಲಾಗಿದೆ. ಅರೋರಾ ಅವರು ಡಿಸೆಂಬರ್‌ 2ರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ಡಿ.7ರಂದು ನಡೆಯುವ ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆ ಹಾಗೂ ...
READ MORE
“11 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೈಗಾ ಅಣು ವಿದ್ಯುತ್ ಸ್ಥಾವರ ಸುದ್ಧಿಯಲ್ಲಿ  ಏಕಿದೆ ? ಯಾವುದೇ ತೊಂದರೆ ಇಲ್ಲದೆ ನಿರಂತರವಾಗಿ 941 ದಿನ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಕೈಗಾ ಮೊದಲ ಅಣು ವಿದ್ಯುತ್​ ಘಟಕ ವಿಶ್ವ ದಾಖಲೆ ನಿರ್ಮಿಸಿ ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ...
READ MORE
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಸಿವಿಜಿಲ್’ ಮೊಬೈಲ್ ಆಪ್ ಸುದ್ಧಿಯಲ್ಲಿ ಏಕಿದೆ ?ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಚುನಾವಣಾ ಆಯೋಗ ’ ಸಿವಿಜಿಲ್’ ಮೊಬೈಲ್ ಆಪ್ ಹೊರತರುತ್ತಿದೆ. ಆಪ್​ನಲ್ಲಿ ಅಕ್ರಮದ ಫೋಟೋ, ವೀಡಿಯೋ ಅಪ್​ಲೋಡ್ ಮಾಡಿದ 100 ನಿಮಿಷಗಳಲ್ಲಿ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿಯೂ ಲಭಿಸಲಿದೆ. ಹಿನ್ನಲೆ ಕಳೆದ ...
READ MORE
“31 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದೇವಸ್ಥಾನಕ್ಕೂ ಬಂತು ವಸ್ತ್ರ ಸಂಹಿತೆ, ಗುರುತಿನ ಚೀಟಿ ಸುದ್ಧಿಯಲ್ಲಿ ಏಕಿದೆ ?ದೇವಸ್ಥಾನಗಳಲ್ಲಿ ಪ್ರಸಾದ ದುರಂತ ಘಟನೆಗಳಿಂದ ಎಚ್ಚೆತ್ತ ಸರಕಾರ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದೆ. ಸೂಚನೆಗಳೇನು ? ಪ್ರಸಾದ ತಯಾರಕರಿಂದ ಹಿಡಿದು ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿ ಸರಕಾರ ನಿಗದಿಪಡಿಸಿದ ಮಾರ್ಗ ಸೂಚಿಯನ್ವಯ ಸಮವಸ್ತ್ರ ...
READ MORE
“07 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಋುಣ ಪರಿಹಾರ ಆಯೋಗ ಸುದ್ಧಿಯಲ್ಲಿ ಏಕಿದೆ ?ರೈತರು, ಕೂಲಿಕಾರ್ಮಿಕರು ಹಾಗೂ ಕೆಳಸ್ತರದ ಜನರಿಗೆ ಖಾಸಗಿ ಸಾಲದ ಹೊರೆಯಿಂದ ಮುಕ್ತಿ ನೀಡುವ ಉದ್ದೇಶದ 'ಋುಣ ಪರಿಹಾರ ಕಾಯಿದೆ'ಗೆ ರಾಷ್ಟ್ರಪತಿ ಅಂಕಿತ ಬಾಕಿ ಇರುವ ಬೆನ್ನಲ್ಲೇ, ಕೇರಳ ಮಾದರಿಯಲ್ಲಿ 'ಋುಣ ಪರಿಹಾರ ಆಯೋಗ' ರಚನೆಗೆ ರಾಜ್ಯ ...
READ MORE
“17 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಿಎಸ್ಎಲ್ವಿ ಉಡಾವಣೆ ವಾಹನಗಳು ಸುದ್ಧಿಯಲ್ಲಿ ಏಕಿದೆ ?ಜಿಎಸ್ಎಲ್ವಿ ಮುಂದುವರಿಕೆ ಕಾರ್ಯಕ್ರಮದ 4 ನೇ ಹಂತದಡಿಯಲ್ಲಿ 2021-24ರ ಅವಧಿಯಲ್ಲಿ ಐದು ಜಿಎಸ್ಎಲ್ವಿ ಉಪಗ್ರಹ ಉಡಾವಣೆ ವಾಹನಗಳನ್ನು ಕೇಂದ್ರ ಕ್ಯಾಬಿನೆಟ್ ಅನುಮೋದಿಸಿದೆ. ಅವುಗಳಲ್ಲಿ ಒಂದನ್ನು ಎರಡನೆಯ ಮಾರ್ಸ್ ಮಿಷನ್ಗಾಗಿ ಬಳಸಲಾಗುತ್ತಿತ್ತು. ಮೂರನೇ ಹಂತ 2003 ರಲ್ಲಿ ಅನುಮೋದನೆಗೊಂಡ ...
READ MORE
“20 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಚುನಾವಣಾ ಆ್ಯಪ್ ಸುದ್ಧಿಯಲ್ಲಿ ಏಕಿದೆ ?ಮತಗಟ್ಟೆ, ಕ್ಷೇತ್ರದ ವಿವರ, ಮತಗಟ್ಟೆ ಇರುವ ಸ್ಥಳ, ಪಥ ಸೂಚಕ, ತಾವಿರುವ ಪ್ರದೇಶದಿಂದ ಮತಗಟ್ಟೆ ದೂರ ಸೇರಿದಂತೆ ವಿವಿಧ ಮಾಹಿತಿಗಳನ್ನು ಪಡೆಯಲು ಆಪ್​ನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ. ‘ಚುನಾವಣಾ’ ಹೆಸರಿನ ಈ ಆ್ಯಪ್ ಅನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ...
READ MORE
“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಬಡವರ ಬಂಧು’ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮೀಟರ್‌ ಬಡ್ಡಿ ದಂಧೆ ನಡೆಸುವವರ ಕಪಿಮುಷ್ಠಿಯಿಂದ ಸಣ್ಣ ವ್ಯಾಪಾರಿಗಳನ್ನು ಪಾರುಮಾಡಿ, ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ಒದಗಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ 'ಬಡವರ ಬಂಧು' ಯೋಜನೆಗೆ ನ.22 ಚಾಲನೆ ಸಿಗಲಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 5 ...
READ MORE
“25th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ವಿಕ್ರಮಾದಿತ್ಯ ಸುದ್ಧಿಯಲ್ಲಿ ಏಕಿದೆ ?ಭಾರತೀಯ ನೌಕಾಪಡೆಯ ಏಕೈಕ ಯುದ್ಧ ವಿಮಾನ ವಾಹಕ ನೌಕೆ ಐಎನ್​ಎಸ್ ವಿಕ್ರಮಾದಿತ್ಯ ಎರಡನೇ ಬಾರಿ ರಿಪೇರಿ ಕಾರ್ಯ ಮುಗಿಸಿ ವಾರದೊಳಗೆ ಕಾರವಾರ ಬಂದರಿಗೆ ವಾಪಸಾಗುತ್ತಿದೆ. ಕೊಚ್ಚಿ ಶಿಪ್​ಯಾರ್ಡ್​ನಿಂದ ನೌಕೆ ಹೊರಟಿದ್ದು, ಅ.30ರೊಳಗೆ ತನ್ನ ಕೇಂದ್ರ ಸ್ಥಾನವಾದ ಕಾರವಾರ ಕದಂಬ ನೌಕಾನೆಲೆ ...
READ MORE
“25 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“27 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“11 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“31 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“07 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“17 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“20 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“25th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *