“17 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಕಾವೇರಿ ಆನ್‌ಲೈನ್ ಸೇವೆ

1.

ಸುದ್ಧಿಯಲ್ಲಿ ಏಕಿದೆ ?ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಭಿವೃದ್ಧಿ ಪಡಿಸಿರುವ ಕಾವೇರಿ-ಆನ್‌ಲೈನ್ ಸೇವೆಗಳಿಗೆ ಚಾಲನೆ ನೀಡಿದರು.

ಉದ್ದೇಶ

 • ಸಬ್​ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬೇರೂರಿರುವ ಮಧ್ಯವರ್ತಿಗಳ ಹಾವಳಿಗೆ ತಿಲಾಂಜಲಿ ಇಡುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ‘ಕಾವೇರಿ’ ಹೆಸರಿನ 9 ಆನ್​ಲೈನ್ ಸೇವೆಗಳನ್ನು ರೂಪಿಸಿದೆ.

ಕಾವೇರಿ – ಆನ್‌ಲೈನ್ ಸೇವೆಗಳು

 • ಕರ್ನಾಟಕ ಸರಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಸ್ಥಿರಾಸ್ತಿಗಳ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ ಮತ್ತು ಅಧಿಕಾರ ಪತ್ರಗಳನ್ನು ನೋಂದಣಿ ಮಾಡುವ ಜವಬ್ದಾರಿ ಹೊಂದಿರುತ್ತದೆ. ನೋಂದಾಯಿಸಿದ ದಾಖಲೆಗಳ ಭದ್ರತೆಯನ್ನು ಕಾಪಾಡಿಕೊಂಡು ಅವುಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಸಂರಕ್ಷಿಸುವುದು ಇಲಾಖೆಯ ಆದ್ಯ ಕರ್ತವ್ಯವಾಗಿರುತ್ತದೆ.
 • ಸಾರ್ವಜನಿಕರಿಗೆ ನೋಂದಣಿಗೆ ಸಂಬಂಧಿಸಿದಂತಹ ಈ ಸೇವೆಗಳನ್ನು ಸುಲಭವಾಗಿ ತಲುಪಿಸಲು ಒಂದೇ ಹಂತದ ಪರಿಹಾರ ಕ್ರಮವಾಗಿ ಇಲಾಖೆಯು KAVERI Online ಸೇವೆಗಳನ್ನು ಅಭಿವೃದ್ಧಿಪಡಿಸಿದೆ. ಅವುಗಳು ಈ ಕೆಳಕಂಡಂತೆ ಇರುತ್ತದೆ.
 • ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ/ ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿ ಪೂರೈಸುವಿಕೆ
 • ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ ಮತ್ತು ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿಗಳನ್ನು ಆನ್‌ಲೈನ್ ಮುಖಾಂತರ ಪಡೆಯಬಹುದಾಗಿರುತ್ತದೆ. ಒಂದು ವೇಳೆ ನಿರ್ದಿಷ್ಟ ಆಸ್ತಿಗಳ ಕುರಿತು ಋಣಭಾರಗಳನ್ನು ಪರಿಶೀಲಿಸಬೇಕಾದಲ್ಲಿ ಆಸ್ತಿಯ ವಿವರವನ್ನು ನೀಡಿ ನೈಜ ಸಮಯದಲ್ಲಿ ವಿವರಗಳನ್ನು ಪಡೆಯಬಹುದಾಗಿರುತ್ತದೆ. ಡಿಜಿಟಲ್ ಸಹಿ ಮಾಡಿದ ಋಣಭಾರ ಪ್ರಮಾಣ ಪತ್ರಗಳನ್ನು ಸಾರ್ವಜನಿಕರು ಆನ್‌ಲೈನ್ನ ಮೂಲಕ ಸೂಕ್ತ ಶುಲ್ಕವನ್ನು ಪಾವತಿಸುವ ಮೂಲಕ ಪಡೆಯಬಹುದಾಗಿರುತ್ತದೆ.
 • ನೋಂದಾಯಿಸಿದ ದಸ್ತಾವೇಜಿನ ದೃಢೀಕೃತ ನಕಲನ್ನು ಪಡೆಯಲು ಸಾರ್ವಜನಿಕರು ಆನ್‌ಲೈನ್ನಲ್ಲಿ ದಸ್ತಾವೇಜು ನೋಂದಾಯಿಸಿದ ಉಪನೋಂದಣಿ ಕಛೇರಿಯ ಹೆಸರನ್ನು ಆಯ್ಕೆ ಮಾಡಿ ದಸ್ತಾವೇಜಿನ ಸಂಖ್ಯೆ ನಮೂದಿಸಿ ಸೂಕ್ತ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ ಪಡೆಯಬಹುದಾಗಿರುತ್ತದೆ.
 • ಸ್ಥಿರಾಸ್ತಿಗಳ ಮೌಲ್ಯ ಮತ್ತು ಮುದ್ರಾಂಕ ಶುಲ್ಕಗಳ ಲೆಕ್ಕ ಹಾಕುವಿಕೆ
 • ಸಾರ್ವಜನಿಕರು ತಮ್ಮ ಆಸ್ತಿಯ ವಿವರಗಳನ್ನು ತಂತ್ರಾಂಶದಲ್ಲಿ ನಮೂದಿಸಿ, ಆಸ್ತಿಯ ಮಾರ್ಗಸೂಚಿ ಮೌಲ್ಯವನ್ನು ಸ್ವತಃ ಲೆಕ್ಕ ಮಾಡಬಹುದು. ಹಾಗೂ ಪಾವತಿಸಬೇಕಾದ ಮುದ್ರಾಂಕ ಶುಲ್ಕವನ್ನು ಸರಳ ಮತ್ತು ಸುಲಭ ಹಂತಗಳಲ್ಲಿ ತಂತ್ರಾಂಶದಲ್ಲಿ ಲೆಕ್ಕ ಮಾಡಬಹುದಾಗಿರುತ್ತದೆ.
 • ಸಾರ್ವಜನಿಕರಿಂದ ನೋಂದಣಿ ಪೂರ್ವ ಡೇಟಾ ಎಂಟ್ರಿ : ಈ ಸೇವೆಯು ಸಾರ್ವಜನಿಕರಿಂದ ಉಪನೋಂದಣಿ ಕಛೇರಿಗೆ ಅನೇಕ ಬಾರಿ ಭೇಟಿ ನೀಡುವುದನ್ನು ತಪ್ಪಿಸಿ ಆನ್‌ಲೈನ್ ಮೂಲಕ ದಸ್ತಾವೇಜನ್ನು ನೋಂದಣಿಗೆ ಸಲ್ಲಿಸುವ ಅವಕಾಶ ಕಲ್ಪಿಸುತ್ತದೆ. ಸಾರ್ವಜನಿಕರು ನೋಂದಾಯಿಸಬೇಕಾದ ಆಸ್ತಿಯ ಎಲ್ಲಾ ವಿವರಗಳನ್ನು ನೋಂದಣಿ ಪೂರ್ವದಲ್ಲಿ ಆನ್‌ಲೈನ್ ಮೂಲಕ ನಮೂದಿಸಿಕೊಂಡು, ಮಾಹಿತಿಗಳನ್ನು ವೀಕ್ಷಿಸಿದ ನಂತರ ಅವಶ್ಯವಿದ್ದಲ್ಲಿ ಸರಿಪಡಿಸಿ ಸಂಬಂಧಪಟ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್‌ಲೈನ್ನಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
 • ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ನಿಗದಿಪಡಿಸಿದ ಆಸ್ತಿಯ ಮಾರ್ಗಸೂಚಿ ದರಗಳನ್ನು ತಂತ್ರಾಂಶದಲ್ಲಿ ಪಡೆದು, ದಸ್ತಾವೇಜಿಗೆ ಸಂಬಂಧಿಸಿದ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಿಕೊಳ್ಳಬಹುದು. ನಂತರ ನಿರ್ಧರಿಸಿದ ಮಾರುಕಟ್ಟೆ ಮೌಲ್ಯದ ಮಂಜೂರಾತಿಗಾಗಿ ಅರ್ಜಿಯನ್ನು ಉಪನೋಂದಣಾಧಿಕಾರಿಗಳಿಗೆ ಸಲ್ಲಿಸಬಹುದು.
 • ದಸ್ತಾವೇಜಿನ ನೋಂದಣಿಗೆ ಮುಂಗಡ ಕಾಲ ನಿಗದಿಪಡಿಸುವಿಕೆ (Appointment Booking) ಉಪನೋಂದಣಾಧಿಕಾರಿಗಳು ಸಾರ್ವಜನಿಕರಿಂದ ಆನ್‌ಲೈನ್ ಮೂಲಕ ಅರ್ಜಿ ಮತ್ತು ಮೌಲ್ಯವನ್ನು ಮಾನ್ಯಗೊಳಿಸಿದ ನಂತರ ದಸ್ತಾವೇಜಿಗೆ ತಗಲುವ ಶುಲ್ಕಗಳನ್ನು ಸಾರ್ವಜನಿಕರು ಪಾವತಿಸಲು ಸಿದ್ಧರಿದ್ದಲ್ಲಿ ಆನ್‌ಲೈನ್ ಮೂಲಕ ಪಾವತಿಸಿ, ಅವಕಾಶವಿದ್ದ ಮುಂದಿನ ದಿನಾಂಕಗಳಂದು ನೋಂದಣಿ ಪ್ರಕ್ರಿಯೆಗಾಗಿ ಮುಂಗಡವಾಗಿ ಕಾಲ ನಿಗದಿಪಡಿಸಿಕೊಳ್ಳಬಹುದಾಗಿರುತ್ತದೆ.
 • ಉಪನೋಂದಣಿ ಕಛೇರಿಯ ಗುರುತಿಸುವಿಕೆ : ರಾಜ್ಯದ ಎಲ್ಲಾ 250 ಉಪನೋಂದಣಿ ಕಛೇರಿಗಳ ವಿಳಾಸದ ಮಾಹಿತಿಯು ಆನ್‌ಲೈನ್ ಪೋರ್ಟಲ್ನಲ್ಲಿ ಲಭ್ಯವಿದ್ದು, ಸಂಬಂಧಿಸಿದ ಕಾರ್ಯ ವ್ಯಾಪ್ತಿಯ ಉಪನೋಂದಣಿ ಕಛೇರಿಯಲ್ಲಿ ವಿವರವನ್ನು ಸಾರ್ವಜನಿಕರು ತಂತ್ರಾಂಶದಲ್ಲಿ ಪಡೆದುಕೊಳ್ಳಬಹುದಾಗಿರುತ್ತದೆ.
 • ವಿವಾಹ ನೋಂದಣಿ ಕಛೇರಿಯ ಗುರುತಿಸುವಿಕೆ : ವಧು ಮತ್ತು ವರನ ವಿಳಾಸ ಹಾಗೂ ವಿವಾಹ ನೆರವೇರಿದ ಸ್ಥಳ ಆಧಾರಿಸಿ ವಿವಾಹವನ್ನು ನೋಂದಾಯಿಸಿಕೊಳ್ಳಬೇಕಾದ ಕಛೇರಿ ವಿವರಗಳನ್ನು ದೃಢಪಡಿಸಿಕೊಳ್ಳಬಹುದು. ವಿವಾಹ ನೋಂದಣಿ ಮಾಡಿಕೊಳ್ಳಲು ಆಯಾ ಕಾರ್ಯ ವ್ಯಾಪ್ತಿಯ ಕಛೇರಿಗಳ ವಿವರವನ್ನು ಆನ್‌ಲೈನ್ ಪೋರ್ಟಲ್ನಿಂದ ಪಡೆಯಬಹುದಾಗಿರುತ್ತದೆ.
 • KACOMP ಕಾಯ್ದೆ ಅಡಿಯಲ್ಲಿ ಕೃಷಿ ಸಾಲಗಳಿಗೆ ಸಂಬಂಧಿಸಿದ ಡಿಕ್ಲರೇಷನ್ ಮತ್ತು ಸಾಲ ತೀರುವಳಿ ಪತ್ರಗಳ ಫೈಲಿಂಗ್ ಮಾಡುವಿಕೆ
 • ರೈತರಿಗೆ ಕೃಷಿ ಸಾಲ ನೀಡುವ ಸಂದರ್ಭದಲ್ಲಿ ಏಂಅಔಒ ಕಾಯ್ದೆ ಅಡಿಯಲ್ಲಿ ಪಡೆಯುವ ಡಿಕ್ಲರೇಷನ್ ಮತ್ತು ಸಾಲತೀರುವಳಿ ಪತ್ರಗಳನ್ನು ಆನ್‌ಲೈನ್ ಮೂಲಕ ಫೈಲಿಂಗ್ ಮಾಡುವ ಸೌಲಭ್ಯವನ್ನು ಬ್ಯಾಂಕುಗಳ ಮತ್ತು ಇತರೆ ಹಣಕಾಸು ಸಂಸ್ಥೆಗಳಿಗೆ ಒದಗಿಸಲಾಗಿದೆ.
 • ಮೌಲ್ಯ ಮೊಬೈಲ್ ಆಪ್ : ಸಾರ್ವಜನಿಕರು ಯಾವುದೇ ಸ್ಥಿರಾಸ್ತಿಯ ಮಾರ್ಗಸೂಚಿ ಮೌಲ್ಯ ತಿಳಿಯಲು ಅನುಕೂಲವಾಗುವಂತೆ, ಮೌಲ್ಯ ಎಂಬ ಹೆಸರಿನ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
 • ಆನ್‌ಲೈನ್ ಇ-ಸ್ಟಾಂಪ್ ಮುದ್ರಾಂಕ ಕಾಗದ : ಸಾರ್ವಜನಿಕರು ತಾವು ಮಾಡಿಕೊಳ್ಳುವ ಕರಾರು ಪತ್ರ ಮತ್ತು ಪ್ರಮಾಣ ಪತ್ರಗಳಿಗೆ ಮುದ್ರಾಂಕ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ, ಇ-ಸ್ಟಾಂಪ್ ಕಾಗದವನ್ನು ತಮ್ಮ ಮನೆಯಿಂದಲೇ ಪ್ರಿಂಟ್ ಓಟ್ ತೆಗೆದುಕೊಳ್ಳುವ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಲಿ. (SHCIL) ರವರ ಸಹಯೋಗದೊಂದಿಗೆ ಕಲ್ಪಿಸಲಾಗಿದೆ.

ಲಾಭಗಳೇನು?

 • ಮಧ್ಯವರ್ತಿಗಳ ಹಾವಳಿ ನಿಲ್ಲುವ ಸಾಧ್ಯತೆ ಹೆಚ್ಚು
 • ನೋಂದಣಿ ಪೂರ್ವ ಪ್ರಕ್ರಿಯೆ ಅಲೆದಾಟ ತಪ್ಪಲಿದೆ
 • ಮುದ್ರಾಂಕ ಶುಲ್ಕವನ್ನು ನಿಖರವಾಗಿ ಲೆಕ್ಕಹಾಕಬಹುದು
 • ಋಣಭಾರ ಪ್ರಮಾಣಪತ್ರಕ್ಕಾಗಿ ಕಚೇರಿಗೆ ಹೋಗುವ ಅಗತ್ಯವಿಲ್ಲ

ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ

2.

ಸುದ್ಧಿಯಲ್ಲಿ ಏಕಿದೆ ?ಧಾರವಾಡ ನಗರದಲ್ಲಿ 2019ರ ಜ. 4, 5, 6ರಂದು ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಹಾಗೂ ವೆಬ್‌ಸೈಟ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಲೋಕಾರ್ಪಣೆ ಮಾಡಿದರು.

 • ಕನ್ನಡ ಧ್ವಜ, ಭುವನೇಶ್ವರಿ ಭಾವಚಿತ್ರ, ಕನ್ನಡ ಸಾಹಿತ್ಯ ಪರಿಷತ್‌ ಲಾಂಛನ, ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ವಿದ್ಯಾವರ್ಧಕ ಸಂಘ, ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗಳನ್ನು ಲಾಂಛನ ಒಳಗೊಂಡಿದೆ.
 • ಸಂಗೀತದ ವಾದ್ಯಪರಿಕರಗಳು, ಪುಸ್ತಕ, ಲೇಖನಿಗಳನ್ನು ಆಕರ್ಷಕವಾಗಿ ಸಂಯೋಜಿಸಿ ಸ್ಥಳೀಯ ಕಲಾವಿದ ಮಹೇಶ್‌ ಪತ್ತಾರ ರಚಿಸಿದ ಈ ಲಾಂಛನವನ್ನು ತಜ್ಞರ ಸಮಿತಿ ಅಂತಿಮಗೊಳಿಸಿತ್ತು. ಅದೇ ರೀತಿ ಸಮ್ಮೇಳನದ ಚಟುವಟಿಕೆಗಳ ಎಲ್ಲ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸಲು ವೆಬ್‌ಸೈಟ್‌ (abkssdwd.org) ರೂಪಿಸಲಾಗಿದೆ.

ಹೆರಿಗೆ ರಜೆಗೆ ಸರ್ಕಾರಿ ವೇತನ

3.

ಸುದ್ಧಿಯಲ್ಲಿ ಏಕಿದೆ ?ಉದ್ಯೋಗಸ್ಥ ಮಹಿಳೆಯರಿಗೆ ನೀಡುವ 26 ವಾರಗಳ ಹೆರಿಗೆ ರಜೆಯ ಪೈಕಿ 7 ವಾರದ ರಜೆಯ ವೇತನ ಹಾಗೂ ಮತ್ತಿತರ ಭತ್ಯೆಯನ್ನು ಪರಿಹಾರ ರೂಪದಲ್ಲಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

 • ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಾತೃತ್ವ ಸೌಲಭ್ಯ (ತಿದ್ದುಪಡಿ) ಕಾಯ್ದೆ, 2017 ಪ್ರಕಾರ ಮಹಿಳಾ ಉದ್ಯೋಗಿಗಳ ಮಾತೃತ್ವ ರಜೆ 12 ವಾರದಿಂದ 26 ವಾರಗಳಿಗೆ ಹೆಚ್ಚಳವಾಗಿದೆ. ಈ ಹೆಚ್ಚುವರಿ 14 ವಾರಗಳ ಪೈಕಿ 7 ವಾರಗಳ ವೇತನ ಮತ್ತಿತರ ಭತ್ಯೆಯನ್ನು ಪರಿಹಾರ ರೂಪದಲ್ಲಿ ಉದ್ಯೋಗದಾತರಿಗೆ ಮರುಪಾವತಿಸಲು ಸರ್ಕಾರ ಬಯಸಿದ್ದು, ಈ ಕುರಿತ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.
 • ಈ ಸಂಬಂಧ ಕೇಂದ್ರ ಕಾರ್ವಿುಕ ಇಲಾಖೆ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಕನಿಷ್ಠ 15 ಸಾವಿರ ರೂ. ವೇತನ ಹೊಂದಿರುವ ಮಹಿಳೆಯರಿಗೆ ಈ ನಿಯಮ ಅನ್ವಯವಾಗುತ್ತದೆ.
 • ಪ್ರಸ್ತಾವನೆಗೆ ಕಾರಣ: ಮಾತೃತ್ವ ಸೌಲಭ್ಯ (ತಿದ್ದುಪಡಿ) ಕಾಯ್ದೆ, 2017 ಜಾರಿಗೆ ಬಂದ ನಂತರದಲ್ಲಿ ರಾಷ್ಟ್ರದ ಶೇ.11ಕ್ಕೂ ಹೆಚ್ಚು ಉದ್ಯೋಗದಾತರು ಮಹಿಳಾ ಸಿಬ್ಬಂದಿ ನೇಮಕಕ್ಕೆ ನಿರಾಕರಿಸಿದ್ದರು. ಇನ್ನು ಶೇ.46 ಸಂಸ್ಥೆಗಳು ನೇಮಕಾತಿಯಲ್ಲಿ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದವು.
 • ಮಾತೃತ್ವ ರಜೆ ಪಡೆವ ಮಹಿಳೆಯರಿಗೆ ಆ ಅವಧಿಯಲ್ಲಿ ಪೂರ್ಣ ಪ್ರಮಾಣದ ಸಂಬಳ ಮತ್ತಿತರ ಭತ್ಯೆಗಳನ್ನು ಪಾವತಿಸಬೇಕಾಗುತ್ತದೆ. ಇದು ಹೆಚ್ಚುವರಿ ವೆಚ್ಚ ಎಂಬುದು ಉದ್ಯೋಗದಾತರ ಪ್ರತಿಪಾದನೆ.
 • ಇನ್ನು ಕೆಲವು ಸಂಸ್ಥೆಗಳು ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಂಡರೂ, ಮಾತೃತ್ವ ರಜೆ ಪಡೆಯುವ ಸುಳಿವು ದೊರೆಯುತ್ತಲೇ ರಾಜೀನಾಮೆ ನೀಡುವಂತೆ ಅವರ ಮೇಲೆ ಒತ್ತಡ ಹೇರುತ್ತಿದ್ದವು. ಇಲ್ಲವೇ ಕ್ಷುಲ್ಲಕ ಕಾರಣ ನೀಡಿ ಅವರನ್ನು ಕೆಲಸದಿಂದ ತೆಗೆದುಹಾಕುತ್ತಿದ್ದವು.
 • ಉದ್ಯೋಗದಾತರ ಇಂತಹ ಕ್ರಮದಿಂದ ಪ್ರಸಕ್ತ ವಿತ್ತೀಯ ವರ್ಷದಲ್ಲಿ 11ರಿಂದ 18 ಲಕ್ಷ ಮಹಿಳೆಯರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕಾರ್ವಿುಕ ಇಲಾಖೆ ಈ ಪ್ರಸ್ತಾವನೆ ಸಿದ್ಧಪಡಿಸಿದೆ.

ಮಾತೃತ್ವ ಪ್ರಯೋಜನ ತಿದ್ದುಪಡಿ ಕಾಯಿದೆ

 • 2017 ರ ಮಾರ್ಚ್ 27 ರಂದು ಸಂಸತ್ತಿನ ಅಂಗೀಕಾರದ ನಂತರ ಅಧ್ಯಕ್ಷೀಯ ಒಪ್ಪಿಗೆಯನ್ನು ಹೆರಿಗೆ ಬೆನಿಫಿಟ್ (ತಿದ್ದುಪಡಿ) ಆಕ್ಟ್ 2017 ರಲ್ಲಿ ಸ್ವೀಕರಿಸಿದೆ. ಈ ಕಾಯಿದೆ 1961 ರ ಮಾತೃತ್ವ ಲಾಭಗಳ ಕಾಯಿದೆಗೆ ತಿದ್ದುಪಡಿಗಳನ್ನು ಮಾಡಿದೆ.
 • 2017 ರ ಏಪ್ರಿಲ್ 1 ರಿಂದ ಮಾತೃತ್ವ ಬೆನಿಫಿಟ್ (ತಿದ್ದುಪಡಿ) ಕಾಯ್ದೆಯ ಬಹುಪಾಲು ನಿಬಂಧನೆಗಳು ಜಾರಿಗೆ ಬಂದಿವೆ.

ಬಿಲ್ನ ಮುಖ್ಯಾಂಶಗಳು

 • ಆಕ್ಟ್ ಎಲ್ಲಾ ಮಹಿಳೆಯರಿಗೆ ಮಾತೃತ್ವರಜೆಯ 12 ವಾರಗಳ ಅವಧಿಯನ್ನು 26 ವಾರಗಳವರೆಗೆ ವಿಸ್ತರಿಸುತ್ತದೆ. ಹೇಗಾದರೂ, ಎರಡು ಅಥವಾ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳೆಗೆ 12 ವಾರಗಳ ಮಾತೃತ್ವ ರಜೆಗೆ ಅರ್ಹರಾಗಿರುತ್ತಾರೆ.
 • ಬಿಲ್ ಮೂರು ತಿಂಗಳ ವಯಸ್ಸಿನ ಮಗುವಿಗೆ ಹಾಲೂಡಿಸುವ ತಾಯಂದಿರನ್ನು ನೇಮಕ ಮಾಡುವ ಮಹಿಳೆಯರಿಗೆ 12 ವಾರಗಳವರೆಗೆ ಮಾತೃತ್ವ ರಜೆಯನ್ನು ನೀಡುತ್ತದೆ  . ಮಗುವನ್ನು ದತ್ತು ಅಥವಾ ಆಯೋಗವು  ತಾಯಿಗೆ ಒಪ್ಪಿಸಿದ ದಿನಾಂಕದಿಂದ ಮಾತೃತ್ವ ರಜೆ ಅವಧಿಯನ್ನು ಲೆಕ್ಕಹಾಕಲಾಗುತ್ತದೆ.
 • ನಿಗದಿತ ಅಂತರದಲ್ಲಿ ಕ್ರೇಚೆ ಸೌಕರ್ಯಗಳಿಗಾಗಿ ಪ್ರತಿ 50 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳೊಂದಿಗೆ ಸ್ಥಾಪನೆಯ ಅವಶ್ಯಕತೆ ಇದೆ. ಮಹಿಳೆಗೆ ದಿನಕ್ಕೆ ನಾಲ್ಕು ಬಾರಿ ಭೇಟಿ ನೀಡುವ ಅವಕಾಶ ಕಲ್ಪಿಸಿಕೊಡಲಾಗುವುದು .
 • ನೌಕರಿಯ ಕೆಲಸ ಮನೆಯಿಂದ ಮಾಡಲು ಮಹಿಳೆಗೆ ಅನುಮತಿ ನೀಡಬಹುದು, ಕೆಲಸದ ಸ್ವಭಾವವು ಹಾಗೆ ಮಾಡಲು ಅನುಮತಿ ನೀಡಿದರೆ. ಇದು ಉದ್ಯೋಗದಾತ ಮತ್ತು ಮಹಿಳೆಯರಿಂದ ಪರಸ್ಪರ ಒಪ್ಪಿಗೆಯಾಗಬಹುದು.
 • ಬಿಲ್ ನೇಮಕಾತಿಯ ಸಮಯದಲ್ಲಿ, ಲಭ್ಯವಿರುವ ಎಲ್ಲ ಪ್ರಯೋಜನಗಳ ಮಹಿಳೆಯರಿಗೆ ತಿಳಿಸಲು ಈ ಬಿಲ್ಗೆ ಒಂದು ಸ್ಥಾಪನೆ ಅಗತ್ಯವಿದೆ. ಅಂತಹ ಮಾಹಿತಿಯನ್ನು ಬರವಣಿಗೆಯಲ್ಲಿ ಮತ್ತು ವಿದ್ಯುನ್ಮಾನವಾಗಿ ನೀಡಬೇಕು

ಪೋಸ್ಟಾಫೀಸಲ್ಲೇ ಫಸಲ್ ಬಿಮಾ

4.

ಸುದ್ಧಿಯಲ್ಲಿ ಏಕಿದೆ ? ದೇಶದ ಪ್ರತಿ ಅಂಚೆ ಕಚೇರಿ ಮೂಲಕ ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ನೋಂದಣಿ ಆಗುವ ಅವಕಾಶ ಕಲ್ಪಿಸಲಾಗುವುದು ಎಂದು ಯೋಜನೆಯ ಸಿಇಒ ಡಾ.ಆಶಿಶ್ ಕುಮಾರ್ ಭುಂಟಿಯಾ ತಿಳಿಸಿದರು.

 • ಯೋಜನೆ ಆರಂಭವಾದಾಗಿನಿಂದ 62 ಕೋಟಿ ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ. 2016-17ರಲ್ಲಿ 5.7 ಕೋಟಿ ಹಾಗೂ 2017-18ರಲ್ಲಿ 4.9 ಕೋಟಿ ರೈತರು ವಿಮೆ ಮಾಡಿಸಿದ್ದರು. ದೇಶದ 4 ರಾಜ್ಯಗಳಲ್ಲಿ ಬೆಳೆ ಸಾಲ ಮನ್ನಾ ಹಾಗೂ ಬೆಳೆ ವಿಮೆಗೆ ಆಧಾರ್ ಕಡ್ಡಾಯಗೊಳಿಸಿದ್ದರಿಂದ 2017-18ರಲ್ಲಿ ರೈತರ ಸಂಖ್ಯೆ 80 ಲಕ್ಷಕ್ಕೆ ಇಳಿದಿತ್ತು.
 • ಸಾಲರಹಿತ ರೈತರನ್ನು ಪ್ರಧಾನಮಂತ್ರಿ ಫಸಲ್ ಬಿಮಾದತ್ತ ಆಕರ್ಷಿಸಲು ಅಂಚೆ ಕಚೇರಿಗಳಲ್ಲೇ ದಾಖಲೆ ಸಲ್ಲಿಕೆ ಹಾಗೂ ವಿಮೆ ಪ್ರೀಮಿಯಂ ಕಟ್ಟಲು ಸೌಲಭ್ಯ ಕಲ್ಪಿಸಲಾಗುವುದು. ಈ ಕುರಿತು ಅಂಚೆ ಇಲಾಖೆ ಜತೆ ಚರ್ಚೆ ನಡೆಸಲಾಗುತ್ತಿದೆ.
 • ಸೂಕ್ತ ದಾಖಲೆ ಇಲ್ಲದೆ ಎರಡೆರಡು ಕಡೆ ಸಾಲ ಪಡೆದುಕೊಂಡ ರೈತರು ಆಧಾರ್ ಸಂಖ್ಯೆ ನೀಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ವಿಮೆ ಪಡೆದುಕೊಳ್ಳುವ ರೈತರ ಸಂಖ್ಯೆ ತಗ್ಗಿದೆ. ಫಸಲ್ ಬಿಮಾ ಯೋಜನೆ ಬಗ್ಗೆ ಇನ್ನೂ ಹಲವರಿಗೆ ಮಾಹಿತಿ ಇಲ್ಲ.
 • ವಿಮಾ ಕಂಪನಿಗಳು 2018ರ ಮುಂಗಾರು ಅವಧಿಯಲ್ಲಿ ಕೇವಲ 6 ಲಕ್ಷ ರೈತರನ್ನು ಸಂರ್ಪಸಿ ವಿಮೆ ಮಾಡಿಸಿವೆ. ಕೇವಲ 9 ಲಕ್ಷ ರೈತರು ಆನ್​ಲೈನ್ ಮೂಲಕ ಫಸಲ್ ಬಿಮಾ ಯೋಜನೆ ಪಡೆದಿದ್ದಾರೆ.
 • ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನ, ಹರಿಯಾಣ, ಬಿಹಾರಗಳಲ್ಲಿ ಸಾಲ ರಹಿತ ರೈತರು ಫಸಲ್ ಬಿಮಾ ಯೋಜನೆ ಫಲಾನುಭವಿಗಳಾಗುವ ಸಂಖ್ಯೆ ಕೇವಲ ಶೇ.1-3 ರಷ್ಟಿದೆ ಎಂದರು.
 • ರಾಜ್ಯ ಸರ್ಕಾರಗಳಿಗೆ ಸೂಚನೆ: ಆರೋಗ್ಯ, ಮೋಟಾರು ವಾಹನ ವಿಮೆಯಲ್ಲಿ ವ್ಯಕ್ತಿ ವಿಮೆಗೆ ಅರ್ಜಿ ಸಲ್ಲಿಸಿದ 30 ದಿನದೊಳಗಾಗಿ ವಿಮಾ ಕಂಪನಿ ಕಡ್ಡಾಯವಾಗಿ ಪರಿಹಾರ ನೀಡಬೇಕು. ಆದರೆ ಬೆಳೆ ವಿಮೆಯ ಕೆಲ ಪ್ರಕರಣಗಳಲ್ಲಿ ವರ್ಷ ಕಳೆದರೂ ಪ್ರೀಮಿಯಂ ಕಟ್ಟಿದ ರೈತರಿಗೆ ಪರಿಹಾರ ಸಿಗುತ್ತಿಲ್ಲ. ರಾಜ್ಯ ಸರ್ಕಾರಗಳು ಪ್ರೀಮಿಯಂ ಮೊತ್ತವನ್ನು ಆಯಾ ವಿಮಾ ಕಂಪನಿಗಳಿಗೆ ಠೇವಣಿ ಮಾಡದಿರುವುದು ಇದಕ್ಕೆ ಕಾರಣ. ಹೀಗಾಗದಂತೆ ರಾಜ್ಯ ಸರ್ಕಾರಗಳು ಗಮನಹರಿಸಬೇಕು.

12ನೇ ಸ್ಥಾನದಲ್ಲಿ ಕರ್ನಾಟಕ

 • 2017ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ 12ನೇ ಸ್ಥಾನದಲ್ಲಿದೆ. ರಾಜ್ಯದ ಶೇ.51 ಸಾಲ ರಹಿತ ರೈತರು ವಿಮೆ ಮಾಡಿಸಿಕೊಂಡಿದ್ದು, ಶೇ.16 ಬಿತ್ತನೆ ಪ್ರದೇಶ ವಿಮೆಗೆ ಒಳಪಟ್ಟಿದೆ. 2017 ಮುಂಗಾರಿನಲ್ಲಿ ಶೇ.64 ಪರಿಹಾರ ವಿತರಿಸಲಾಗಿದೆ. ಮೊದಲನೇ ಸ್ಥಾನದಲ್ಲಿ ಛತ್ತೀಸ್​ಗಡ್, 2ನೇ ಸ್ಥಾನದಲ್ಲಿ ಮಹಾರಾಷ್ಟ್ರ ಹಾಗೂ 3ನೇ ಸ್ಥಾನದಲ್ಲಿ ಒಡಿಶಾ ರಾಜ್ಯಗಳಿವೆ.

ಪ್ರಾಣಿಗಳಿಂದ ಬೆಳೆ ಹಾನಿಗೂ ಪರಿಹಾರ

 • ಪ್ರಸ್ತುತ ಬರಗಾಲ, ಭಾರಿ ಮಳೆ ಮುಂತಾದ ನೈಸರ್ಗಿಕ ವಿಕೋಪಗಳಿಗಷ್ಟೇ ವಿಮೆ ಪರಿಹಾರ ಸಿಗುತ್ತಿದೆ. ಮುಂದಿನ ಮುಂಗಾರಿನಿಂದ ಕಾಡುಪ್ರಾಣಿಗಳ ಹಾವಳಿ, ಮೇಘಸ್ಪೋಟ, ಕಾಡ್ಗಿಚ್ಚಿನಿಂದಾದ ಬೆಳೆ ಹಾನಿಗೂ ವಿಮೆ ಸಿಗಲಿದೆ

ಹಾಲ್‌ ಮಾರ್ಕಿಂಗ್‌ ಕಡ್ಡಾಯ

5.

ಸುದ್ಧಿಯಲ್ಲಿ ಏಕಿದೆ ?ದೇಶದಲ್ಲಿ ಮಾರಾಟವಾಗುವ ಎಲ್ಲ ಚಿನ್ನಾಭರಣಗಳಿಗೆ ಶೀಘ್ರದಲ್ಲಿಯೇ ಹಾಲ್‌ಮಾರ್ಕಿಂಗ್‌ ಅನ್ನು ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಮ್‌ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

 • ಚಿನ್ನಕ್ಕೆ ಹಾಲ್‌ ಮಾರ್ಕಿಂಗ್‌ ಹಾಕುವುದು ಅಮೂಲ್ಯ ಲೋಹದ ಶುದ್ಧತೆಯನ್ನು ಪ್ರಮಾಣೀಕರಿಸುತ್ತದೆ.
 • ಹಾಲ್‌ಮಾರ್ಕಿಂಗ್‌ ನೀಡುವ ಭಾರತೀಯ ಮಾನಕ ಸಂಸ್ಥೆ(BIS)ಯು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ.
 • ಬಿಐಎಸ್ ಮೂರು ವಿಧದಲ್ಲಿ ಚಿನ್ನಾಭರಣಗಳಿಗೆ ಹಾಲ್‌ ಮಾರ್ಕಿಂಗ್‌ನ್ನು ನೀಡುತ್ತದೆ. ಅದರಲ್ಲಿ 14 ಕ್ಯಾರೆಟ್‌, 18 ಕ್ಯಾರೆಟ್‌ ಮತ್ತು 22 ಕ್ಯಾರೆಟ್ ಎಂದು ಹಾಲ್‌ ಮಾರ್ಕಿಂಗ್‌ ನೀಡಲಾಗುತ್ತದೆ.
 • ವಿಶ್ವ ಮಾಪನ ದಿನದ ಅಂಗವಾಗಿ ಬಿಐಎಸ್ ಆಯೋಜಿಸಿದ್ದ ಗ್ಲೋಬಲ್‌ ಸ್ಟಾಂಡರ್ಡ್ಸ್‌ ಮತ್ತು ನಾಲ್ಕನೇ ಕೈಗಾರಿಕ ಕ್ರಾಂತಿ ಕಾರ್ಯಕ್ರಮದಲ್ಲಿ ಗ್ರಾಹಕರ ಹಿತದೃಷ್ಟಿಯಿಂದ ಗುಣಮಟ್ಟ ವಿಧಾನವನ್ನುಅಳವಡಿಸಿಕೊಳ್ಳಲಾಗುತ್ತಿದ್ದು, ಚಿನ್ನದ ಆಭರಣಗಳಿಗೆ ಹಾಲ್‌ ಮಾರ್ಕಿಂಗ್‌ ನೀಡುವುದನ್ನು ಶೀಘ್ರವೇ ಕಡ್ಡಾಯ ಮಾಡಲಾಗುತ್ತದೆ.
 • ಭಾರತದಲ್ಲಿ ಬಿಐಎಸ್‌ನಿಂದ ಮಾನ್ಯತೆಗೊಂಡಿರುವ 220 ಹಾಲ್ ಮಾರ್ಕಿಂಗ್ ಕೇಂದ್ರಗಳಿವೆ. ಇವುಗಳಲ್ಲಿ ತಮಿಳುನಾಡಿನಲ್ಲೇ ಗರಿಷ್ಠ ಪ್ರಮಾಣದಲ್ಲಿದ್ದು, ಕೇರಳದಲ್ಲಿಯೂ ಜಾಸ್ತಿ ಕೇಂದ್ರಗಳಿವೆ.

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್)

 • ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಬಿಐಎಸ್ ನ್ಯಾಷನಲ್ ಸ್ಟ್ಯಾಂಡರ್ಡ್ ಬಾಡಿ ಆಫ್ ಇಂಡಿಯಾ ಬಿಐಎಸ್ ಆಕ್ಟ್, 1986 ರ ಅಡಿಯಲ್ಲಿ ಸ್ಥಾಪನೆಯಾಗಿದೆ. ಪ್ರಮಾಣೀಕರಣದ ಚಟುವಟಿಕೆಗಳ ಚಟುವಟಿಕೆ, ಸರಕುಗಳ ಗುರುತಿಸುವಿಕೆ ಮತ್ತು ಗುಣಮಟ್ಟದ ಪ್ರಮಾಣೀಕರಣ ಮತ್ತು ಇತರ ವಿಷಯಗಳಿಗೆ ಸಾಮರಸ್ಯದ ಅಭಿವೃದ್ಧಿಗೆ ಇದು ಆದೇಶ ನೀಡಿದೆ.
 • ಇದು ದೆಹಲಿಯಲ್ಲಿ ಪ್ರಧಾನ ಕಚೇರಿಯಾಗಿದೆ.
 • ಬಿಐಎಸ್ ಪ್ರಮಾಣಿತ ಸೂತ್ರೀಕರಣ, ಉತ್ಪನ್ನ ಪ್ರಮಾಣೀಕರಣ ಯೋಜನೆ, ಕಡ್ಡಾಯ ನೋಂದಣಿ ಯೋಜನೆ, ವಿದೇಶಿ ತಯಾರಕರು ಪ್ರಮಾಣೀಕರಣ ಯೋಜನೆ, ಹಾಲ್ ಮಾರ್ಕಿಂಗ್ ಯೋಜನೆ, ಪ್ರಯೋಗಾಲಯ ಸೇವೆಗಳು, ಪ್ರಯೋಗಾಲಯ ಗುರುತಿಸುವಿಕೆ ಯೋಜನೆ, ಭಾರತೀಯ ಮಾನದಂಡಗಳ ಮಾರಾಟ, ಗ್ರಾಹಕ ವ್ಯವಹಾರ ಚಟುವಟಿಕೆಗಳು, ತರಬೇತಿ ಸೇವೆಗಳು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಮತ್ತು ಮಾಹಿತಿ ಸೇವೆಗಳು.
 • ಸುರಕ್ಷಿತ ವಿಶ್ವಾಸಾರ್ಹ ಗುಣಮಟ್ಟದ ಸರಕುಗಳನ್ನು ಒದಗಿಸುವುದು, ರಫ್ತು ಮತ್ತು ಆಮದುಗಳನ್ನು ಬದಲಿಸುವುದು, ಗ್ರಾಹಕರ ಆರೋಗ್ಯ ಅಪಾಯಗಳನ್ನು ಕಡಿಮೆ ಮಾಡುವುದು, ಪ್ರಮಾಣೀಕರಣ, ಪ್ರಮಾಣೀಕರಣ ಮತ್ತು ಪರೀಕ್ಷೆಯ ಮೂಲಕ ಪ್ರಭೇದಗಳ ಪ್ರಸರಣವನ್ನು ನಿಯಂತ್ರಿಸುವ ಮೂಲಕ ಬಿಐಎಸ್ ರಾಷ್ಟ್ರೀಯ ಆರ್ಥಿಕತೆಗೆ ಪತ್ತೆಹಚ್ಚುವಿಕೆಯನ್ನು ಮತ್ತು ಸಂಭಾವ್ಯ ಅನುಕೂಲಗಳನ್ನು ಒದಗಿಸುತ್ತಿದೆ.

Related Posts
“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶಾಲೆಗೆ ಬನ್ನಿ ಶನಿವಾರ ಶೀಘ್ರ ಪುನಾರಂಭ ಸುದ್ಧಿಯಲ್ಲಿ ಏಕಿದೆ ?ಮೂಲೆಗುಂಪಾಗಿದ್ದ ಶಿಕ್ಷಣ ಇಲಾಖೆಯ ಜನಪ್ರಿಯ ಯೋಜನೆ ‘ಶಾಲೆಗೆ ಬನ್ನಿ ಶನಿವಾರ- ಕಲಿಯಲು ನೀಡಿ ಸಹಕಾರ’ ಮತ್ತೆ ಆರಂಭವಾಗಲಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಪಾಠ-ಪ್ರವಚನ ಮಾಡಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ...
READ MORE
“12 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಚುನಾವಣಾ ಬಾಂಡ್‌ ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಸರಕಾರದ ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿದ್ದ ಜನಹಿತಾಸಕ್ತಿ ಅರ್ಜಿಯ ಕುರಿತ ತೀರ್ಪುನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ರಾಜಕೀಯ ಪಕ್ಷಗಳಿಗೆ ಆರ್ಥಿಕ ನೆರವು ನೀಡುವ ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವವನ್ನು ಪ್ರಸ್ನಿಸಿ ಸರ್ಕಾರರೇತರ ಸಂಸ್ಥೆಯೊಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಚುನಾವಣಾ ...
READ MORE
“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ರಾಷ್ಟ್ರೀಯ ಯುವ ದಿನ ಸುದ್ಧಿಯಲ್ಲಿ ಏಕಿದೆ ?ಸ್ವಾಮಿ ವಿವೇಕಾನಂದರ ಸ್ವರಣಾರ್ಥ ಜ.12ನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. 1984 ರಲ್ಲಿ ಭಾರತ ಸರಕಾರ ದಿನವನ್ನು ರಾಷ್ಟ್ರೀಯ ಯುವ ...
READ MORE
“25 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ರಾಷ್ಟ್ರೀಯ ಯುದ್ಧ ಸ್ಮಾರಕ ಸಿದ್ಧ ಸುದ್ಧಿಯಲ್ಲಿ ಏಕಿದೆ ?ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರನ್ನು ಗೌರವದಿಂದ ಸ್ಮರಿಸುವುದು ನಮ್ಮ ಕರ್ತವ್ಯ. ಹೀಗಾಗಿ ಇಂಡಿಯಾ ಗೇಟ್ ಬಳಿ ನಿರ್ವಿುಸಲಾಗಿರುವ ಸ್ಮಾರಕವನ್ನು ದೇಶಕ್ಕೆ ಅರ್ಪಿಸಲಾಗುವುದು. ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಬೇಕು ಎಂದು ದಶಕಗಳಿಂದ ಒತ್ತಾಯಿಸಲಾಗುತ್ತಿತ್ತು. ಎನ್​ಡಿಎ ಸರ್ಕಾರ ಅಧಿಕಾರಕ್ಕೆ ...
READ MORE
“23 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದೇಸಿ ಬೋಫೋರ್ಸ್‌ ಫಿರಂಗಿ  ಸುದ್ಧಿಯಲ್ಲಿ ಏಕಿದೆ ?ದೇಸಿ ನಿರ್ಮಿತ ಮೊದಲ ಬೋಫೋರ್ಸ್‌ ಫಿರಂಗಿಗಳು ಇದೇ 26ರಂದು ಸೇನೆಗೆ ಸೇರ್ಪಡೆಯಾಗಲಿವೆ ಎಂದು ಸೇನಾ ಮೂಲಗಳು ಹೇಳಿವೆ. ಮೂಲ ಬೋಫೋರ್ಸ್‌ ಫಿರಂಗಿಯ ತಂತ್ರಜ್ಞಾನವನ್ನೇ ಉನ್ನತೀಕರಿಸಿ ಶೇಕಡ 81ರಷ್ಟು ದೇಸಿ ಉತ್ಪನ್ನ ಬಳಸಿ ಅಭಿವೃದ್ಧಿಪಡಿಸಿದ 155 ಎಂಎಂ/45 ...
READ MORE
“08 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿರಾಗಿಯ ಮಹಾಮಜ್ಜನಕ್ಕೆ ಧರ್ಮಸ್ಥಳ ಸಜ್ಜು ಸುದ್ಧಿಯಲ್ಲಿ ಏಕಿದೆ ? ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಈ ಶತಮಾನದ ಎರಡನೇ ಮಹಾಮಜ್ಜನಕ್ಕೆ ಸಿದ್ಧವಾಗಿದ್ದು, ಧಾರ್ವಿುಕ ಕಾರ್ಯಕ್ರಮಗಳು ಮೇಳೈಸಲಿವೆ. ರತ್ನಗಿರಿ ಬೆಟ್ಟದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ...
READ MORE
“05 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಟ್ರಿಣ್​ಟ್ರಿಣ್ ಸುದ್ಧಿಯಲ್ಲಿ ಏಕಿದೆ ?ಪರಿಸರ ಮಾಲಿನ್ಯ ಮತ್ತು ಸಂಚಾರದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ನಗರದಲ್ಲಿ ಟ್ರಿಣ್ ಟ್ರಿಣ್ ಯೋಜನೆ ಜಾರಿಗೊಳಿಸಿದೆ. ಆ ಮೂಲಕ ಸೈಕಲ್ ಸವಾರಿಗೆ ಹೆಚ್ಚಿನ ಒತ್ತು ನೀಡಿ ವಾಹನ ಸಂಚಾರ ಪ್ರಮಾಣ ಕಡಿಮೆ ಮಾಡಲು ...
READ MORE
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉದ್ಯೋಗ ಖಾತ್ರಿ ಹೆಚ್ಚಳ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಉದ್ಭವಿಸಿರುವ ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಕಾಯ್ದೆಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ 100 ದಿನಗಳ ಉದ್ಯೋಗವನ್ನು 150ಕ್ಕೆ ವಿಸ್ತರಿಸಲಾಗಿದ್ದು, ಈ ವರ್ಷ ಮಾನವ ದಿನಗಳ ಸೃಜನೆ ಗುರಿಯನ್ನು 8.5 ಕೋಟಿ ಯಿಂದ 10 ...
READ MORE
“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಲಮನ್ನಾ ಮೊತ್ತ ತೀರಿಸಿ ಸುದ್ಧಿಯಲ್ಲಿ ಏಕಿದೆ ?ರೈತರ ಕೃಷಿ ಸಾಲಮನ್ನಾ ಮಾಡುತ್ತಿರುವ ರಾಜ್ಯ ಸರ್ಕಾರಗಳು ನಿಗದಿತ ಅವಧಿಯಲ್ಲಿ ಬ್ಯಾಂಕ್​ಗಳಿಗೆ ಹಣ ಭರಿಸಬೇಕು ಎಂದು ನಬಾರ್ಡ್ ಸೂಚಿಸಿದೆ. ಉದ್ದೇಶ ರಾಜ್ಯ ಸರ್ಕಾರಗಳು ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡದೆ ಸಾಲಮನ್ನಾ ಮಾಡುತ್ತಿವೆ ಎಂಬ ಆರೋಪದ ಮಧ್ಯೆಯೇ ನಬಾರ್ಡ್ ಈ ...
READ MORE
“14 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಫ್​ಐಆರ್ ಲೋಪಕ್ಕೆ ಅಧಿಕಾರಿಯೇ ಹೊಣೆ ಸುದ್ಧಿಯಲ್ಲಿ ಏಕಿದೆ ?ಸಮಾಜಘಾತಕ ಶಕ್ತಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗದೇ ಬಹುಬೇಗ ಬಿಡುಗಡೆ ಹೊಂದುತ್ತಾರೆ ಎಂಬ ಆರೋಪ ಸಾರ್ವಕಾಲಿಕ. ಆದರೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೇ ಇದನ್ನು ಒಪ್ಪಿ ಎಫ್​ಐಆರ್ ದಾಖಲಾತಿಯ ಪದ್ಧತಿಯಲ್ಲೇ ಆಮೂಲಾಗ್ರ ಬದಲಾವಣೆಗೆ ಮುಂದಾಗಿದೆ. ಯಾವ ಬದಲಾವಣೆಗಳು ...
READ MORE
“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“12 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“25 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“23 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“08 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“05 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“14 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *