“19 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”

ಮೈಸೂರು ದಸರಾ

6.

ಸುದ್ಧಿಯಲ್ಲಿ ಏಕಿದೆ ?ದಶಕಗಳ ಇತಿಹಾಸವಿರುವ ಮೈಸೂರು ದಸರಾ ಸದಾ ಸುಂದರ. ನಾಡಹಬ್ಬದ ಆಚರಣೆಯ ಬಗೆ ಬದಲಾಗುತ್ತ ಬಂದಿದೆ.

 • ಮೈಸೂರು ದಸರಾ ಕರ್ನಾಟಕದ ನಡಹಬ್ಬ (ರಾಜ್ಯ ಉತ್ಸವ) ಆಗಿದೆ. ಇದು ನವರಾತ್ರಿ (ನವ-ರಾತ್ರಿ ಎಂದರೆ ಒಂಭತ್ತು-ರಾತ್ರಿಗಳು) ಮತ್ತು ವಿಜಯದಶಮಿ ಎಂಬ ಕೊನೆಯ ದಿನದಿಂದ ಆರಂಭಗೊಂಡು 10 ದಿನಗಳ ಹಬ್ಬ.
 • ಹಿಂದು ಕ್ಯಾಲೆಂಡರ್ ತಿಂಗಳ ಅಶ್ವಿಜ ದಿನದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ, ಇದು ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್  ಗ್ರೆಗೋರಿಯನ್ ತಿಂಗಳುಗಳಲ್ಲಿಬರುತ್ತದೆ.

ದಸರಾ ಇತಿಹಾಸ

 • ಮೈಸೂರು ದಸರಾಗೆ 4 ಶತಮಾನಗಳಷ್ಟು ಹೆಚ್ಚು ಹಳೆಯ ಇತಿಹಾಸವಿದೆ.
 • ವಿಜಯನಗರದ ಕಾಲದಲ್ಲಿ ದಸರಾ ಹಬ್ಬ ರಾಜರ ಶೌರ್ಯ, ಸಂಪತ್ತು, ವೀರತ್ವ ಹಾಗೂ ಸಂಪತ್ತಿನ ಸಂಕೇತವಾಗಿತ್ತು.
 • ಈ ನವರಾತ್ರಿ ಉತ್ಸವವನ್ನು ವೀಕ್ಷಿಸಲು ದೇಶ-ವಿದೇಶಗಳ ಗಣ್ಯಾತಿಗಣ್ಯರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ. ಅದಕ್ಕೆ ಸಾಕಷ್ಟು ದಾಖಲೆಗಳೂ ಸಿಗುತ್ತವೆ.
 • 11ನೇ ಶತಮಾನದಲ್ಲೇ ವಿದೇಶಿ ಪ್ರವಾಸಿಗ ಅಲ್ಬೆರೋನಿ, 15-16ನೇ ಶತಮಾನದಲ್ಲಿ ಪರ್ಷಿಯಾದ ಅಬ್ದುಲ್‌ ರಜಾಕ್‌ಇಟಲಿಯ ನಿಕೋಲಕೊಂಟಿಪೋರ್ಚುಗೀಸಿನ ಡೊಮಿಂಗೋಪಾಯಸ್‌ (1520-1522) ಮೊದಲಾದವರು ವಿಜಯನಗರ ಸಾಮ್ರಾಜ್ಯದ ವೈಭವೋಪೇತವಾದ ದಸರಾ ಮಹೋತ್ಸವವನ್ನು ಕೊಂಡಾಡಿ ತಮ್ಮ ಪ್ರವಾಸ ಕಥನಗಳಲ್ಲಿ ದಾಖಲಿಸಿದ್ದಾರೆ.
 • ವಿಜಯನಗರ ಸಾಮ್ರಾಜ್ಯದ ಪತನದ ನಂತರ ಯದುವಂಶದ ಮೈಸೂರು ಒಡೆಯರು ವಿಜಯದಶಮಿ ದಸರಾ ಮಹೋತ್ಸವವನ್ನು ಮುಂದುವರಿಸಿಕೊಂಡು ಬಂದರು.
 • ರಾಜ ಒಡೆಯರು (1578-1617) ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ 1610ರಲ್ಲಿ ವಿಜಯನಗರದ ರಾಜಪರಂಪರೆಯಂತೆ ನವರಾತ್ರಿ ಉತ್ಸವದ ವಿಜಯದಶಮಿಯ ದಸರಾ ಮಹೋತ್ಸವ ಆರಂಭಿಸಿದರು.

ಮೈಸೂರಿಗೆ ದಸರಾ ವರ್ಗ:

 • 1799ರವರೆಗೂ ಮೈಸೂರು ರಾಜ್ಯದ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲೇ ದಸರಾ ನಡೆಯುತ್ತಿತ್ತು.
 • ಹೈದರಾಲಿ ಮತ್ತು ಟಿಪ್ಪುವಿನ ಆಳ್ವಿಕೆಯ ನಂತರ ಮತ್ತೆ ಅಧಿಕಾರಕ್ಕೆ ಬಂದ ಯದುವಂಶದ ಮುಮ್ಮಡಿ ಕೃಷ್ಣರಾಜ ಒಡೆಯರ್‌ (1799-1868) ರಾಜ್ಯದ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗ ಮಾಡಿದರು.
 • ಅಲ್ಲಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್‌ 1800ರಲ್ಲಿ ಮೈಸೂರಿನಲ್ಲಿ ದಸರಾ ಪ್ರಾರಂಭಿಸಿದರು. ಅಲ್ಲಿಂದ ಇಲ್ಲಿಯವರೆಗೆ ‘ಮೈಸೂರು ದಸರಾ’ ಎಂಬ ಹೆಸರಿನಲ್ಲಿ ನಾಡಹಬ್ಬ ವಿಶ್ವ ವಿಖ್ಯಾತಿ ಪಡೆದುಕೊಂಡಿದೆ.

ಮೂಲದಲ್ಲೇ ಸಂಪ್ರದಾಯವಿದೆ:

 • ಇಂದಿಗೂ ದಸರಾ ಹಬ್ಬದ ಮೂಲದಲ್ಲಿ ಸಂಪ್ರದಾಯವಿದೆ. ಸಾವಿರಾರು ಬಗೆಯ ಸಂಭ್ರಮಗಳಿವೆ.
 • ಅಂಬಾವಿಲಾಸ ಅರಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಒಂಭತ್ತು ದಿನವೂ ನಡೆಯುತ್ತವೆ.
 • ಪಟ್ಟದ ಆನೆ, ಹಸುವಿಗೆ ನಿತ್ಯವೂ ಪೂಜೆ ನಡೆಯುತ್ತದೆ. ಖಾಸಗಿ ದರ್ಬಾರ್‌ ರಾಜಮನೆತನ ಸೊಬಗನ್ನು ಸಾರಿ ಹೇಳುತ್ತದೆ. ಇವಿಷ್ಟು ಅರಮನೆ ಒಳಗೆ ನಡೆದರೆ, ಹೊರಗೆ ದಸರಾ ಹೊಸ ಲೋಕವನ್ನೇ ತೆರೆದಿಡುತ್ತದೆ.

ದಸರಾ ವಿಧಗಳು

 • ಅನ್ನದಾತ ರೈತನ ಬೆವರ ಹನಿ ಸ್ಮರಿಸಲು ರೈತ ದಸರಾ ನಡೆಸಲಾಗುತ್ತದೆ.
 • ಸ್ತ್ರೀ ಸಂವೇದನಾಶೀಲತೆ ಅನಾವರಣಗೊಳಿಸಲು ಮಹಿಳಾ ದಸರಾ ಇದೆ.
 • ಮಕ್ಕಳನ್ನು ಪ್ರೀತಿಸುವ ಚಿಣ್ಣರ ದಸರಾ
 • ಯುವ ಮನಸ್ಸುಗಳನ್ನು ಒಂದೆಡೆ ಕಲೆ ಹಾಕುವ ಯುವ ದಸರಾ
 • 2006ರಿಂದ ಯುವ ದಸರಾ ನಡೆದುಕೊಂಡು ಬರುತ್ತಿದೆ.
 • ಮೊದಲೆಲ್ಲಾ ರಾಜರ ಕಾಲದಲ್ಲಿ ಅರಮನೆ ಮತ್ತು ಜಗನ್ಮೋಹನ ಅರಮನೆಯಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು.
 • ಆದರೆ, ಇದೀಗ ಕಲಾಮಂದಿರ, ಪುರಭವನ, ಚಿಕ್ಕಗಡಿಯಾರ, ವೀಣೆ ಶೇಷಣ್ಣ ಭವನದಲ್ಲಿ ವಿವಿಧ ನೃತ್ಯ ರೂಪಕ ಹಾಗೂ ನಾಟಕ ಪ್ರದರ್ಶನ ನಡೆಯುತ್ತವೆ.
 • ದಸರಾ ಮೈಸೂರಿಗಷ್ಟೇ ಸೀಮಿತವಾಗಬಾರದೆಂದು ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಕೊಡಗಿಗೂ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.

ವೈಭವದ ಜಂಬೂ ಸವಾರಿ

 • ವೈಭವದ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಗೆ ಅಧಿಕೃತ ಚಾಲನೆ ದೊರೆತಿದ್ದು, ಅಂಬಾರಿ ಹೊತ್ತಿರುವ ಅರ್ಜುನ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಲಾರಂಭಿಸಿದ್ದಾನೆ.
 • ಜಂಬೂಸವಾರಿಯಲ್ಲಿ ಸಾಗುವ ಅಂಬಾರಿಯನ್ನು ಅರ್ಜುನನ ಹೆಗಲಿಗೆ ಕ್ರೇನ್ ಸಹಾಯದಿಂದ ಅರ್ಜುನ ಆನೆಗೆ ಕಟ್ಟಲು ಅರಮನೆಯಲ್ಲಿ ಇರಿಸಲಾಗಿದ್ದ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅರಮನೆಯ ಬಲ ಭಾಗಕ್ಕೆ ತರಲಾಯಿತು. ಬಳಿಕ ಅಲ್ಲಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಜಂಬೂ ಸವಾರಿಗೆ ಚಾಲನೆ ನೀಡಿದ್ದಾರೆ.
 • ಅದಕ್ಕೂ ಮೊದಲು ಸಿಎಂ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ನಂತರ ದಸರಾ ಮೆರವಣಿಗೆಯಲ್ಲಿ ಸಾಗುವ ವಿವಿಧ ಕಲಾ ತಂಡಗಳ ಪ್ರದರ್ಶನಕ್ಕೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು.
 • 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತಿರುವ ಅರ್ಜುನನಿಗೆ ಕಾವೇರಿ ಮತ್ತು ವರಮಹಾಲಕ್ಷ್ಮೀ ಕುಮ್ಕಿ ಆನೆಗಳು ಸಾಥ್ ನೀಡಿವೆ. ರಾಜ್ಯದ ವಿವಿಧ ಜಿಲ್ಲೆಗಳ ವೈವಿಧ್ಯಮಯ ಸ್ಥಬ್ದಚಿತ್ರಗಳು ಮೆರವಣಿಗೆಯಲ್ಲಿ ಸಾಗುತ್ತಿವೆ.

ಕೃತಕ ಸರೋವರ

7.

ಸುದ್ಧಿಯಲ್ಲಿ ಏಕಿದೆ ?ಟಿಬೆಟ್‌ನಲ್ಲಿ ಸಂಭವಿಸಿದ ಭೂಕುಸಿತ ಪ್ರದೇಶದ ಪ್ರಮುಖ ನದಿಯ ಹರಿವನ್ನು ತಡೆಗಟ್ಟಿ ಕೃತಕ ಸರೋವರ ಸೃಷ್ಟಿಯಾಗಿದ್ದು, ಇದರಿಂದ ನದಿಗಳ ಕೆಳ ದಂಡೆಗಳ ಮೇಲಿರುವ ಭಾರತದ ಪ್ರದೇಶಗಳಿಗೆ ಅಪಾಯ ಉಂಟಾಗಬಹುದೆಂದು ಚೀನಾದ ತುರ್ತು ಸೇವೆಗಳು ಎಚ್ಚರಿಕೆ ನೀಡಿವೆ.

 • ಯಾರ್ಲುಂಗ್ ತ್ಸಾಂಗ್‌ಪೋ (ಬ್ರಹ್ಮಪುತ್ರಾದ ಮೂಲ ತೊರೆ) ನದಿ ಹರಿಯುವ ಆಳವಾದ ಕಣಿವೆಯಲ್ಲಿ ಸಂಭವಿಸಿದ ಕುಸಿತ ಅಣೆಕಟ್ಟು-ತರಹದ ತಡೆಗೋಡೆ ಸೃಷ್ಟಿಸಿದೆ ಎಂದು ಸ್ಥಳೀಯ ತುರ್ತು ಸ್ಥಿತಿ ನಿರ್ವಹಣಾ ಕಚೇರಿ ತಿಳಿಸಿದೆ.
 • ಮೆನ್ಲಿಂಗ್ ಕೌಂಟಿ ಗ್ರಾಮದ ಬಳಿ ಕುಸಿತವಾಗಿದ್ದು ಸರೋವರದಲ್ಲಿ ನೀರಿನ ಮಟ್ಟ 40 ಮೀಟರ್ (130 ಅಡಿ) ಎತ್ತರಕ್ಕೆ ಏರಿದೆ ಎಂದು ವರದಿಯಾಗಿದೆ.
 • ಈಶಾನ್ಯ ಭಾರತದ ಅಧಿಕಾರಿಗಳು ಚೀನಾದ ಟಿಬೆಟ್ ಪ್ರದೇಶದ ಗಡಿಪ್ರದೇಶದಲ್ಲಿರುವ ಅರುಣಾಚಲ ಪ್ರದೇಶದ ಈಸ್ಟ್ ಸಿಯಾಂಗ್ ಜಿಲ್ಲೆಯ ಗ್ರಾಮಸ್ಥರಿಗೆ ನದಿಯ ಬಳಿ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.
 • ನದಿಯ ನೀರಿನ ಮಟ್ಟವು ತೀವ್ರವಾಗಿ ಕುಸಿದಿದೆ ಮತ್ತು ಚೀನಾದಲ್ಲಿ ನೀರಿನ ಹರಿವಿಗೆ ಉಂಟಾಗಿರುವ ತಡೆ ತೆರವಾದ ಕೂಡಲೇ ಹಠಾತ್ತಾಗಿ ಪ್ರವಾಹ ಉಂಟಾಗಿ ವಿಪತ್ತು ಸೃಷ್ಟಿಸಬಹುದು

ಹಿನ್ನಲೆ

 • ಜೂನ್ 2000 ರಲ್ಲಿ, ಯಾರ್ಲುಂಗ್ ತ್ಸಾಂಗ್‌ಪೋ ನದಿಯಿಂದ ಹಠಾತ್ ಆಗಿ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಅರುಣಾಚಲ ಪ್ರದೇಶ ಮತ್ತು ಭಾರತದ ಇತರ ಪ್ರದೇಶಗಳಲ್ಲಿ (ನದಿಪಾತ್ರದ ಕೆಳ ಭಾಗ) ವ್ಯಾಪಕ ಹಾನಿಯಾಗಿತ್ತು.
 • ಎತ್ತರದ ಶಿಖರಗಳು ಮತ್ತು ಹಿಮನದಿಗಳ ಮೂಲಕ, ಟಿಬೆಟ್ ಏಷ್ಯಾದ ಅನೇಕ ನದಿಗಳ ಮೂಲವಾಗಿದೆ. ಏರುತ್ತಿರುವ ತಾಪಮಾನದಿಂದಾಗಿ ಈ ಹಿಮನದಿಗಳು ವೇಗದಲ್ಲಿ ಕರಗುತ್ತಿವೆ. ಇದು ಚೀನಾ ಮತ್ತು ಏಷ್ಯಾದ ಇತರ ರಾಷ್ಟ್ರಗಳ ಜಲ ಸಂಪನ್ಮೂಲಗಳ ಮೇಲೆ ಭವಿಷ್ಯದಲ್ಲಿ ಕರಿನೆರಳನ್ನು ಚೆಲ್ಲಲಿವೆ.

ಯರ್ಲುಂಗ್ ತ್ಸಾಂಗ್ಪೊ

 • ಯರ್ಲುಂಗ್ ತ್ಸಾಂಗ್ಪೊ ಅಥವಾ ಯಲು ಜಂಗ್ಬು ನದಿ ಟಿಬೆಟ್ ಸ್ವಾಯತ್ತ ಪ್ರದೇಶ, ಚೀನಾದ ಉದ್ದದ ನದಿಯಾಗಿದೆ. ತ್ಸಾಂಗ್ಪೊ ಭಾಗವು ಬಹುಶಃ ತ್ಸಾಂಗ್ ಮೂಲಕ ಹುಟ್ಟಿಕೊಂಡಿದೆ- ಇದು ಲಾಸಾದ ಟಿಬೆಟ್ ಪಶ್ಚಿಮ ಭಾಗವನ್ನು ಒಳಗೊಂಡಿದೆ.
 • ಇದು ಬ್ರಹ್ಮಪುತ್ರ ನದಿಯ ಮೇಲಿನ ಪ್ರವಾಹವಾಗಿದೆ. ಪಶ್ಚಿಮ ಟಿಬೆಟ್ನಲ್ಲಿ ಆಂಗ್ಸಿ ಗ್ಲೇಸಿಯರ್ನಲ್ಲಿ ಆರಂಭಗೊಂಡು, ಮೌಂಟ್ ಕೈಲಾಶ್ನ ಆಗ್ನೇಯ ಮತ್ತು ಮನಾಸಾ ಸರೋವರ ಸರೋವರ, ನಂತರ ಇದು ದಕ್ಷಿಣ ಟಿಬೆಟ್ ಕಣಿವೆ ಮತ್ತು ಯಾರ್ಲುಂಗ್ ತ್ಸಾಂಗ್ಪೊ ಗ್ರ್ಯಾಂಡ್ ಕ್ಯಾನ್ಯನ್ ಅನ್ನು ಭಾರತದಲ್ಲಿ ಅರುಣಾಚಲ ಪ್ರದೇಶಕ್ಕೆ ಹಾದುಹೋಗುವ ಮೊದಲು ರಚಿಸುತ್ತದೆ.
 • ಅರುಣಾಚಲ ಪ್ರದೇಶದಿಂದ ಡೌನ್ಸ್ಟ್ರೀಮ್ ನದಿಯು ಅಸಾಧಾರಣವಾಗಿ ವಿಸ್ತಾರಗೊಳ್ಳುತ್ತದೆ ಮತ್ತು ಇದನ್ನು ಸಯಾಂಗ್ ಎಂದು ಕರೆಯಲಾಗುತ್ತದೆ. ಅಸ್ಸಾಂ ತಲುಪಿದ ನಂತರ, ನದಿಯನ್ನು ಬ್ರಹ್ಮಪುತ್ರ ಎಂದು ಕರೆಯಲಾಗುತ್ತದೆ.
 • ಟಿಬೆಟಿಯನ್ ಪ್ರಸ್ಥಭೂಮಿಯಿಂದ ಹೊರಬಂದಾಗ, ನದಿಯು ವಿಶ್ವದ ಅತಿದೊಡ್ಡ ಮತ್ತು ಆಳವಾದ ಕಣಿವೆಯ ಯಾರ್ಲುಂಗ್ ಸಾಂಗ್ಪೊ ಗ್ರ್ಯಾಂಡ್ ಕ್ಯಾನ್ಯನ್ ಅನ್ನು ರೂಪಿಸುತ್ತದೆ

ಬ್ರಿಟಿಷ್‌ ಕರೆನ್ಸಿಯಲ್ಲಿ ಭಾರತೀಯ ಮೂಲದ ಗೂಢಚಾರಿಣಿಯ ಚಿತ್ರ

8.

ಸುದ್ಧಿಯಲ್ಲಿ ಏಕಿದೆ ?ಇಂಗ್ಲಿಷರ ಕರೆನ್ಸಿ ನೋಟಿನಲ್ಲಿ ಶೀಘ್ರದಲ್ಲೇ ಭಾರತೀಯ ಮೂಲದ ಸಾಹಸಗಾಥೆಯ ಭಾವಚಿತ್ರ ಕಾಣಿಸಿಕೊಳ್ಳಲಿದೆ.

 • 50 ಪೌಂಡ್‌ ಮುಖಬೆಲೆಯ ನೋಟಿನಲ್ಲಿ ನೂರ್‌ ಇನಾಯತ್‌ ಖಾನ್‌ ಚಿತ್ರ ಮೂಡಿ ಬರಲಿದೆ. ಈ ನಿಟ್ಟಿನಲ್ಲಿ ಅಭಿಯಾನ ಜೋರಾಗಿದೆ.
 • 2020ಕ್ಕೆ ಹೊಸ ವಿನ್ಯಾಸದ ಪಾಲಿಮರ್‌ ನೋಟುಗಳನ್ನು ಮುದ್ರಿಸಲು ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಮುಂದಾಗಿದ್ದು, ಹೊಸ ನೋಟುಗಳಲ್ಲಿ ಯಾರ ಭಾವಚಿತ್ರವಿರಬೇಕು ಎಂದು ನಾಮನಿರ್ದೇಶಿಸಲು ಸಾರ್ವಜನಿಕರಲ್ಲಿ ಕೋರಲಾಗಿದೆ. ನೂರ್‌ ಪರ ಹೆಚ್ಚು ಮತಗಳು ದಾಖಲಾಗುತ್ತಿವೆ.

ಯಾರೀಕೆ ನೂರ್‌ ಇನಾಯತ್‌ ಖಾನ್‌?

 • 2ನೇ ವಿಶ್ವಯುದ್ಧದ ಗೂಢಚಾರಿಣಿ. 30 ವರ್ಷಕ್ಕೆ ನಾಜಿಗಳಿಂದ ಬಂಧಿತಳಾಗಿ ಕೊಲ್ಲಲ್ಪಟ್ಟ ವೀರ ವನಿತೆ. ಟಿಪ್ಪು ಸುಲ್ತಾನ್‌ ವಂಶಸ್ಥಳೂ ಹೌದು.
 • ಭಾರತೀಯ ಸೂಫಿ ಸಂತ ಹಜ್ರಾತ್‌ ಇನಾಯತ್‌ ಖಾನ್‌ ಪುತ್ರಿ. ತಾಯಿ ಅಮೆರಿಕ ಮೂಲದವರು. ಮಾಸ್ಕೋದಲ್ಲಿ ಜನಿಸಿದ ನೂರ್‌ ಪ್ಯಾರಿಸ್‌ ಮತ್ತು ಬ್ರಿಟನ್‌ನಲ್ಲಿ ಬೆಳೆದಳು. ಅಹಿಂಸೆಯಲ್ಲಿ ಬಲವಾದ ನಂಬಿಕೆ ಇರಿಸಿದ್ದ ನೂರ್‌ ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿದ್ದಳು.
 • ಕರೆನ್ಸಿಯಲ್ಲಿ ನೂರ್‌ ಭಾವಚಿತ್ರವನ್ನು ಅಳವಡಿಸುವ ಮೂಲಕ ಮೊದಲ ಬ್ರಿಟಿಷ್‌ ಅಲ್ಪಸಂಖ್ಯಾತ ಮಹಿಳೆ ಎಂಬ ಗೌರವ ನೀಡಬೇಕು ಎಂಬುದು ಹೆಚ್ಚಿನವರ ಒಲವಾಗಿದೆ.
 • ನೂರ್‌ ಕುರಿತಾದ ಜೀವನಚರಿತ್ರೆ ಸ್ಪೈ ಪ್ರಿನ್ಸಸ್‌ ಲೇಖಕಿ ಮತ್ತು ನೂರ್‌ ಇನಾಯತ್‌ ಖಾನ್‌ ಮೆಮೋರಿಯಲ್‌ ಟ್ರಸ್ಟ್‌ ಸ್ಥಾಪಕಿ ಶರ್ಬಾನಿ ಬಸು ಹೇಳುವಂತೆ ನೂರ್‌ ಇನಾಯತ್‌ ಜೀವನ ಹೆಚ್ಚಿನವರಿಗೆ ಸ್ಫೂರ್ತಿ ನೀಡುತ್ತದೆ. ನೂರ್‌ ಒಬ್ಬಳು ಅದ್ಭುತ ಯುದ್ಧ ನಾಯಕಿ.
 • 1944ರಲ್ಲಿ ನೂರ್‌ಳನ್ನು ಸೆರೆ ಹಿಡಿದ ನಾಜಿಗಳು ಹಿಂಸಿಸಿ ಸಾಯಿಸಿದ್ದು ಕರಾಳ ಇತಿಹಾಸ.
Related Posts
Proposed Karnataka sports policy
The Karnataka Knowledge Commission (KKC) has submitted a Sports Policy to the state government covering a wide gamut of aspects including sports for all and a long-term road map for the ...
READ MORE
Karnataka Current Affairs – KAS / KPSC Exams – 27th June 2017
Mysuru missed the ‘Smart City’ bus yet again Slipping to fifth place in the most recent Swachh rankings, Mysuru has missed the ‘Smart City’ bus yet again. Meanwhile, Bengaluru finally made it ...
READ MORE
Karnataka Current Affairs – KAS/KPSC Exams – 6th April 2018
Mobile app to ‘fix’ bus breakdown issues The Bangalore Metropolitan Transport Corporation (BMTC) has launched a mobile app to track and fix buses in the hope that it will bring down ...
READ MORE
“14th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪ್ರಮುಖ ಔಷಧಿಗಳ ಬ್ಯಾನ್‌ ಸುದ್ಧಿಯಲ್ಲಿ ಏಕಿದೆ ? 28 ಸ್ಥಿರ ಸಂಯೋಜನೆಯ ಔಷಧಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಬ್ಯಾನ್‌ ಮಾಡಿದೆ. ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧ ಮಾಡಲಾಗಿದ್ದು, ಇತರೆ 6 ಔಷಧವನ್ನು ನಿರ್ಬಂಧಿಸಿದೆ. ಇದರಿಂದ 2016ರಿಂದ ಸಂಯೋಜನೆಯ ...
READ MORE
Karnataka State will not denotify fruits & vegetables
The state government has decided to adhere to its stand and not denotify fruits and vegetables from the Karnataka Agricultural Produce Marketing Committee (Regulation and Development) Act, despite the Centre ...
READ MORE
National Current Affairs – UPSC/KAS Exams- 26th January 2019
SC upholds bankruptcy code Topic: Economy IN NEWS: In a whoop of victory for credits markets and entrepreneurship, the Supreme Court  upheld the constitutionality of the Insolvency and Bankruptcy Code (IBC), saying ...
READ MORE
 Sellixo  Students of the New Horizon Public School, Bengaluru, won the Technovation Challenge 2015 held at San Francisco in June for their app named Sellixo (means waste in Portuguese). The Android mobile ...
READ MORE
National Current Affairs – UPSC/KAS Exams- 11th December 2018
National Pension Scheme Topic: Government Policies IN NEWS: The government  announced a slew of changes to the National Pension Scheme (NPS), including increasing the government’s contribution, exempting withdrawals from tax, and also ...
READ MORE
National Current Affairs – UPSC/KAS Exams- 8th September 2018
COMCASA to help keep a watch over Indian Ocean Why in news? India and the U.S. on September 6 signed the foundational or enabling agreement COMCASA on the side-lines of the inaugural ...
READ MORE
Karnataka Current Affairs – KAS/KPSC Exams – 22nd October 2018
‘Save Bandipur’ campaign picks up The ‘Save Bandipur’ campaign against the proposed elevated highways through the national parks is gaining traction with a slew of protests planned in the days ahead. While ...
READ MORE
Proposed Karnataka sports policy
Karnataka Current Affairs – KAS / KPSC Exams
Karnataka Current Affairs – KAS/KPSC Exams – 6th
“14th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Karnataka State will not denotify fruits & vegetables
National Current Affairs – UPSC/KAS Exams- 26th January
National Current Affairs – UPSC/KAS Exams- 11th December
National Current Affairs – UPSC/KAS Exams- 8th September
Karnataka Current Affairs – KAS/KPSC Exams – 22nd

Leave a Reply

Your email address will not be published. Required fields are marked *