“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಕಬ್ಬನ್‌ ಪಾರ್ಕ್‌ಗೆ ಏರ್‌ ಕ್ಲೀನರ್‌

1.

ಸುದ್ಧಿಯಲ್ಲಿ ಏಕಿದೆ ?ರಾಜ್ಯದ ರಾಜಧಾನಿಯಲ್ಲೂ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಈ ನಡುವೆ, ಅತಿ ಹೆಚ್ಚು ಜನರು ವಾಯು ಸೇವನೆಗೆ ಆಗಮಿಸುವ ಕಬ್ಬನ್‌ ಪಾರ್ಕ್‌ನಲ್ಲೂ ವಾಯು ಮಾಲಿನ್ಯ ಹೆಚ್ಚಿರುವುದನ್ನು ಮನಗಂಡು ಅಲ್ಲಿ ಗಾಳಿಯ ಶುದ್ಧೀಕರಣಕ್ಕೆ ಯಂತ್ರವನ್ನು ಅಳವಡಿಸಲಾಗಿದೆ.

 • ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ತೀವ್ರ ಮಟ್ಟಕ್ಕೇರಿದ್ದು, ವಾಹನ ದಟ್ಟಣೆ ನಿಯಂತ್ರಿಸಲು ಸಮ-ಬೆಸ ನಿಯಮ ಜಾರಿಗೆ ಚಿಂತನೆ ನಡೆಯುತ್ತಿದೆ.
 • ಗಾಳಿ ಶುದ್ಧೀಕರಿಸುವ ಯಂತ್ರ ಅಳವಡಿಸಿರುವುದು ಬೆಂಗಳೂರಿನಲ್ಲೇ ಮೊದಲು.
 • ‘ಫೈನ್‌ ಡಸ್ಟ್‌ ಈಟರ್‌ (ಸೂಕ್ಷ್ಮ ಧೂಳು ನಿಯಂತ್ರಕ ಯಂತ್ರ) ಯಂತ್ರವನ್ನು ಮ್ಯಾನ್‌ ಅಂಡ್‌ ಹಮ್ಮೆಲ್‌ ಸಂಸ್ಥೆ ಅಭಿವೃದ್ಧಿಪಡಿಸಿದೆ.
 • ಈ ಯಂತ್ರದಲ್ಲಿ ಫಿಲ್ಟರ್‌ ಮತ್ತು ಫ್ಯಾನ್‌ಗಳು ಇದ್ದು, ಪರಿಸರದಲ್ಲಿರುವ ಗಾಳಿಯನ್ನು ಸೆಳೆದು, ಅದರಲ್ಲಿರುವ ಸೂಕ್ಷ್ಮ ಧೂಳಿನ ಕಣಗಳನ್ನು ಶೋಧಿಸುತ್ತದೆ. ಈ ಯಂತ್ರವು ಕ್ಯೂಬಿನ ಆಕಾರದಲ್ಲಿದ್ದು, ಪ್ರತಿಯೊಂದು ಕ್ಯೂಬಿನಲ್ಲೂ ಒಂದು ಫಿಲ್ಟರ್‌ ಮತ್ತು ಫ್ಯಾನ್‌ ಇರುತ್ತದೆ.
 • ಸಂಚಾರ ದಟ್ಟಣೆ ಇರುವ ರಸ್ತೆ ಹಾಗೂ ಜಂಕ್ಷನ್‌ಗಳಲ್ಲಿ ಈ ಯಂತ್ರಗಳನ್ನು ಅಳವಡಿಕೆ ಮಾಡುವುದರಿಂದ ಜನಸಾಮಾನ್ಯರ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಸೂಕ್ಷ್ಮ ಧೂಳಿನ ಕಣಗಳನ್ನು ಕಡಿಮೆ ಮಾಡಬಹುದಾಗಿದೆ.
 • ಮಾಲಿನ್ಯದ ಸ್ಥಿತಿಗನುಗುಣವಾಗಿ ಯಂತ್ರಗಳು ಕಾರ್ಯ ನಿರ್ವಹಿಸಲಿವೆ.
 • ಕಬ್ಬನ್‌ಪಾರ್ಕ್‌ನಲ್ಲಿ ಅಳವಡಿಸಿರುವ ಯಂತ್ರವು ತನ್ನ ಸುತ್ತಮುತ್ತ ನೂರು ಅಡಿ ಅಂತರದಲ್ಲಿರುವ ಸೂಕ್ಷ್ಮ ಧೂಳಿನ ಕಣಗಳನ್ನು ಹೀರಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿದೆ.

ಭಾರತದ ಉತ್ಪನ್ನಗಳಿಗೆ ಅಮೆರಿಕ ಸುಂಕ

2.

ಸುದ್ಧಿಯಲ್ಲಿ ಏಕಿದೆ ?ರಷ್ಯಾ ಜತೆಗಿನ ಟ್ರಯಂಫ್ ಕ್ಷಿಪಣಿ ಖರೀದಿ ಒಪ್ಪಂದದ ಬಳಿಕ ನಿರ್ಬಂಧಕ್ಕೆ ಗುರಿಯಾಗುವ ಭೀತಿಯಲ್ಲಿದ್ದ ಭಾರತಕ್ಕೆ ಅಮೆರಿಕ ಮತ್ತೊಂದು ಆಘಾತ ನೀಡಿದೆ. ಕೈಮಗ್ಗ ಮತ್ತು ಕೃಷಿ ಸಂಬಂಧಿತ ಸುಮಾರು 50 ಭಾರತೀಯ ಉತ್ಪನ್ನಗಳನ್ನು ಸುಂಕ ಮುಕ್ತ ಪಟ್ಟಿಯಿಂದ ತೆಗೆದುಹಾಕಿ, ತೆರಿಗೆ ಹೇರಿಕೆ ಮಾಡಲು ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಧರಿಸಿದೆ.

 • ಜೆನರಲೈಸ್ಡ ಸಿಸ್ಟಂ ಆಫ್ ಪ್ರಿಫರೆನ್ಸಸ್ (ಜಿಎಸ್​ಪಿ) ಅನ್ವಯ ನೀಡಲಾಗುತ್ತಿದ್ದ ಸುಂಕ ಮುಕ್ತ ಸೌಲಭ್ಯದಿಂದ ಒಟ್ಟು 90 ಉತ್ಪನ್ನಗಳನ್ನು ಹೊರಕ್ಕೆ ಇರಿಸಲಾಗಿದೆ ಎಂದು ಫೆಡರಲ್ ರಿಜಿಸ್ಟ್ರಾರ್ ಅಧಿಸೂಚನೆ ಹೊರಡಿಸಿದ್ದಾರೆ.
 • ಅಧ್ಯಕ್ಷ ಟ್ರಂಪ್ ಅಧಿಸೂಚನೆಗೆ ಸಹಿ ಹಾಕಿದ್ದು, ನ.1ರಿಂದ ಆದೇಶ ಜಾರಿಗೆ ಬಂದಿದೆ. ಈ ಉತ್ಪನ್ನಗಳು ಸ್ಪರ್ಧಾತ್ಮಕ ಅವಶ್ಯಕತೆ ಮಿತಿ (ಸಿಎನ್​ಎಲ್) ಮೀರಿದ್ದರಿಂದ ಸುಂಕ ಹೇರಲಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.

ಏನಿದು ಜಿಎಸ್​ಪಿ ಯೋಜನೆ?

 • ಆರ್ಥಿಕತೆ ಬೆಳವಣಿಗಾಗಿ ಅಮೆರಿಕ ರೂಪಿಸಿದ ಅತೀ ಹಳೆಯ ಯೋಜನೆ ಇದು. ಮಿತ್ರರಾಷ್ಟ್ರಗಳ ಸಾವಿರಾರು ಉತ್ಪನ್ನ ಗಳಿಗೆ ಯಾವುದೇ ಸುಂಕ ಹೇರಿಕೆ ಮಾಡದೆ ಅಮೆರಿಕದಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡುವುದು ಯೋಜನೆ ಉದ್ದೇಶ.
 • ಇದರಡಿಯಲ್ಲಿ ಅಮೆರಿಕಕ್ಕೆ ಸಾವಿರಾರು ಉತ್ಪನ್ನಗಳ ರಫ್ತಿಗೆ ಅನುಕೂಲವಾಗುತ್ತಿತ್ತು. ಯಾಕೆಂದರೆ ಸುಂಕದಲ್ಲಿ ವಿನಾಯಿತಿ ಇರುತ್ತಿತ್ತು. 2017ರಲ್ಲಿ ಭಾರತ ಈ ಜಿಎಸ್‌ಪಿ ಅಡಿಯಲ್ಲಿ 560 ಕೋಟಿ ಡಾಲರ್‌ಗೂ ಅಧಿಕ ಉತ್ಪನ್ನಗಳನ್ನು ಯಾವುದೇ ತರಿಗೆ ಇಲ್ಲದೆ ರಫ್ತು ಮಾಡಿತ್ತು.

2020ರವರೆಗೆ ಅನ್ವಯ

 • ಜಿಎಸ್​ಪಿ ಅನ್ವಯ 90 ಉತ್ಪನ್ನಗಳಿಗೆ ಇನ್ನು ಸುಂಕಮುಕ್ತ ಸೌಲಭ್ಯ ಇರುವುದಿಲ್ಲ. ಮೋಸ್ಟ್ ಫೇವರ್ಡ್ ನೇಷನ್ ಸುಂಕ ದರಗಳ ಅನ್ವಯ ಉತ್ಪನ್ನಗಳ ರಫ್ತಿಗೆ ಅವಕಾಶ ಇದೆ ಎಂದು ಅಮೆರಿಕದ ವ್ಯಾಪಾರಿಯೊಬ್ಬರು ಹೇಳಿದ್ದಾರೆ.
 • ಕಳೆದ ಏಪ್ರಿಲ್​ನಲ್ಲಿ ಜಿಎಸ್​ಪಿ ಅನ್ವಯ ರಫ್ತಾಗುತ್ತಿರುವ ಭಾರತದ ಉತ್ಪನ್ನಗಳ ಬಗ್ಗೆ ಟ್ರಂಪ್ ಆಡಳಿತ ಪರಿಶೀಲನೆ ನಡೆಸಿತ್ತು. ಜಿಎಸ್​ಪಿಯ ಪರಿಷ್ಕೃತ ಪಟ್ಟಿ 2020ರ ಡಿ. 31ರವರೆಗೆ ಜಾರಿಯಲ್ಲಿರಲಿದೆ.

41,095 ಕೋಟಿ ರೂ. ವಹಿವಾಟು

 • 2017ರಲ್ಲಿ ಒಟ್ಟು 55 ಲಕ್ಷ ಕೋಟಿ ರೂ. ಮೊತ್ತದ ಉತ್ಪನ್ನಗಳು ಜಿಎಸ್​ಪಿ ಅನ್ವಯ ಅಮೆರಿಕಕ್ಕೆ ವಿವಿಧ ದೇಶಗಳಿಂದ ರಫ್ತುಗೊಂಡಿದೆ. ಆ ಪೈಕಿ ಸುಂಕ ರಹಿತವಾಗಿ ರಫ್ತುಗೊಂಡ ಭಾರತದ ಉತ್ಪನ್ನಗಳ ಒಟ್ಟು ಮೌಲ್ಯ 41,095 ಕೋಟಿ ರೂ. ಆಗಿದೆ.

ಯಾವ ರಾಷ್ಟ್ರಗಳಿಗೆ ತೊಂದರೆ

 • ಅರ್ಜೆಂಟೀನಾ, ಬ್ರೆಜಿಲ್‌, ಪಾಕಿಸ್ತಾನ, ಥಾಯ್ಲೆಂಡ್‌, ಟರ್ಕಿಯಿಂದಲೂ ಅಮೆರಿಕಕ್ಕೆ ರಫ್ತಿಗೆ ಸುಂಕ ವಿನಾಯಿತಿ ರದ್ದುಪಡಿಸಲಾಗಿದೆ.

ಪರಿಣಾಮ ಏನು?

 • ಜಿಎಸ್​ಪಿ ಅನ್ವಯ ಅತ್ಯಧಿಕ ರಫ್ತಾಗುವ ಉತ್ಪನ್ನಗಳು ಭಾರತದ್ದಾಗಿದೆ. ಭವಿಷ್ಯದಲ್ಲಿ ಈ ಉತ್ಪನ್ನಗಳಿಗೆ ಸುಂಕ ಹೇರಿಕೆಯಾಗಲಿದೆ.
 • ದರ ಹೆಚ್ಚಳದಿಂದಾಗಿ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗುವ ಆತಂಕ ವ್ಯಾಪಾರಸ್ಥರನ್ನು ಕಾಡುತ್ತಿದೆ.
 • ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಹೆಚ್ಚಿನ ಪೆಟ್ಟು ಬೀಳುವ ಸಾಧ್ಯತೆಯಿದೆ. ಕಳೆದ ಜೂನ್​ನಲ್ಲಿ ಜಿಎಸ್​ಪಿಯಿಂದ ಉತ್ಪನ್ನಗಳನ್ನು ತೆಗೆದುಹಾಕದಂತೆ ಭಾರತ ಸರ್ಕಾರ ಮನವಿ ಸಲ್ಲಿಸಿತ್ತು.
 • ವಾಣಿಜ್ಯ ಮತ್ತು ಕೈಗಾರಿಕೆಗಳ ಭಾರತೀಯ ಒಕ್ಕೂಟ ಕೂಡ ಅಮೆರಿಕದ ವ್ಯಾಪಾರ ಪ್ರತಿನಿಧಿಗೆ ಸುಂಕ ಹೇರಿಕೆಯಿಂದಾಗುವ ಪರಿಣಾಮಗಳ ಬಗ್ಗೆ ವಿವರ ಸಲ್ಲಿಸಿತ್ತು.

ಕಾರ್ಗಿಲ್​ನತ್ತ ರೋಹಿಂಗ್ಯಾ

3.

ಸುದ್ಧಿಯಲ್ಲಿ ಏಕಿದೆ ?ಭಾರತ-ಪಾಕಿಸ್ತಾನ ನಡುವಿನ ಅತಿ ಸೂಕ್ಷ್ಮ ಗಡಿ ಪ್ರದೇಶವಾಗಿರುವ ಕಾರ್ಗಿಲ್​ನಲ್ಲಿ ರೋಹಿಂಗ್ಯಾ ಅಕ್ರಮ ವಲಸಿಗರು ದೊಡ್ಡ ಪ್ರಮಾಣದಲ್ಲಿ ನೆಲೆಸಿದ್ದಾರೆ ಎಂಬ ಆತಂಕಕಾರಿ ವಿಚಾರವನ್ನು ಗುಪ್ತಚರ ಇಲಾಖೆ ಹೊರಹಾಕಿದೆ.

 • ಕಾರ್ಗಿಲ್ ಪ್ರದೇಶವೊಂದರಲ್ಲೇ 53ಕ್ಕೂ ಅಧಿಕ ರೋಹಿಂಗ್ಯಾಗಳು ಪತ್ತೆಯಾಗಿದ್ದಾರೆ. ಒಟ್ಟಾರೆ ಜಮ್ಮು-ಕಾಶ್ಮಿರದಲ್ಲಿ ಇವರ ಸಂಖ್ಯೆ ಇನ್ನಷ್ಟು ಹೆಚ್ಚಿರಬಹುದು ಎಂದು ಶಂಕಿಸಲಾಗಿದೆ. ಅಸ್ಸಾಂ ಹಾಗೂ ಪಶ್ಚಿಮ-ಬಂಗಾಳದ ಬಳಿಕ ಕಾಶ್ಮೀರದತ್ತ ರೋಹಿಂಗ್ಯಾಗಳು ಹೊರಟಿದ್ದಾರೆ.
 • ಈಗ ಕೇಂದ್ರ ಗುಪ್ತಚರ ಇಲಾಖೆ ವರದಿಯು ರೋಹಿಂಗ್ಯಾ ಇರುವಿಕೆಯನ್ನು ಖಾತ್ರಿಪಡಿಸಿದೆ. ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ 53 ರೋಹಿಂಗ್ಯಾಗಳು ಕೂಲಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ವಿುಕರು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವಲಸೆ ಹೋಗುತ್ತಿದ್ದು, ಗುಪ್ತಚರ ಇಲಾಖೆ ಅಧಿಕಾರಿಗಳು ನಿರಂತರವಾಗಿ ನಿಗಾವಹಿಸುತ್ತಿದ್ದಾರೆ.

ಸುಪ್ರೀಂಗೆ ಕೇಂದ್ರ ಪ್ರಮಾಣಪತ್ರ

 • ರೋಹಿಂಗ್ಯಾಗಳು ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಅವರಿಗೆ ಟಿಬೇಟಿಯನ್ನರ ರೀತಿಯಲ್ಲಿ ಆಶ್ರಯ ನೀಡಲು ಸಾಧ್ಯವಿಲ್ಲ.
 • ರೋಹಿಂಗ್ಯಾಗಳು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿ ಆಗಿರುವುದಕ್ಕೆ ಸಾಕ್ಷಿಗಳಿವೆ ಎಂದು ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸಿತ್ತು.
 • ರೋಹಿಂಗ್ಯಾಗಳು ಪಾಕಿಸ್ತಾನದ ಐಎಸ್​ಐ ಜತೆಗೂ ನಂಟು ಹೊಂದಿದ್ದಾರೆ ಎನ್ನುವುದು ಕೇಂದ್ರ ಆರೋಪವಾಗಿತ್ತು. ಈ ಪ್ರಮಾಣಪತ್ರದ ಬಳಿಕ 7 ರೋಹಿಂಗ್ಯಾಗಳನ್ನು ಮ್ಯಾನ್ಮಾರ್​ಗೆ ಕಳುಹಿಸಲಾಗಿತ್ತು.
 • ಇವರ ಗಡಿಪಾರನ್ನು ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಗೂ ಸುಪ್ರೀಂಕೋರ್ಟ್ ಸಮ್ಮತಿ ನೀಡಿರಲಿಲ್ಲ

ಎಲ್​ಒಸಿ ಬಳಿ ಕಾಮಗಾರಿ

 • ಗಡಿ ನಿಯಂತ್ರಣ ರೇಖೆ ಬಳಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳಲ್ಲಿ ರೋಹಿಂಗ್ಯಾಗಳು ಕಾರ್ವಿುಕರಾಗಿ ಕೆಲಸ ಮಾಡುತ್ತಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ ಈಗಾಗಲೇ ಉಗ್ರ ಸಂಘಟನೆಗಳು ಸಕ್ರಿಯವಾಗಿವೆ. ಪಾಕಿಸ್ತಾನ ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಕಾಶ್ಮೀರದ ಮೂಲಕ ರೋಹಿಂಗ್ಯಾಗಳನ್ನು ನಿಯಂತ್ರಿಸುವ ಕೆಲಸವನ್ನು ಪಾಕಿಸ್ತಾನ ಮಾಡುವ ಸಾಧ್ಯತೆಯಿದೆ ಎನ್ನುವುದು ಭಾರತೀಯ ಗುಪ್ತಚರ ಇಲಾಖೆ ಅಧಿಕಾರಿಗಳ ಆತಂಕವಾಗಿದೆ.

ಯಾರು ಈ ರೋಹಿಂಗ್ಯಾ  ?

 • ರೋಹಿಂಗೀಯರು 15 ನೇ ಶತಮಾನದಿಂದ ಮಯನ್ಮಾರ್ನಲ್ಲಿ ನೆಲೆಗೊಂಡ ರಾಖಿನೆ ರಾಜ್ಯಕ್ಕೆ (ಅರಾಕನ್ ಎಂದು ಕೂಡ ಕರೆಯಲಾಗುತ್ತದೆ) ಸೇರಿದ ಸ್ಥಳೀಯರಾಗಿದ್ದಾರೆ.
 • ಒಟ್ಟಾಗಿ ಅವರು ಮುಸ್ಲಿಂ ಇಂಡೋ-ಆರ್ಯನ್ನರ ಅಡಿಯಲ್ಲಿ ಬರುತ್ತಾರೆ, ಇದು ವಸಾಹತು ಪೂರ್ವ ಮತ್ತು ವಸಾಹತುಶಾಹಿ ವಲಸೆಗಾರರ ​​ಮಿಶ್ರಣವಾಗಿದೆ.
 • ಆದಾಗ್ಯೂ, ಮ್ಯಾನ್ಮಾರ್ ಸರ್ಕಾರ ಪ್ರಕಾರ, ಅವರು ಬರ್ಮಾ ಸ್ವಾತಂತ್ರ್ಯ ಮತ್ತು ಬಾಂಗ್ಲಾದೇಶ ವಿಮೋಚನೆ ಯುದ್ಧದ ನಂತರ ಅಕ್ರಮ ವಲಸೆಗಾರರು ರಖೈನ್ಗೆ ವಲಸೆ ಹೋದರು.
 • ಅವರು ಸಂಘಟಿತ ನರಮೇಧದ ಸಂತ್ರಸ್ತರಾಗಿದ್ದಾರೆ ಮತ್ತು ವಿಶ್ವದ ಅತ್ಯಂತ ಹಿಂಸೆಯ ಅಲ್ಪಸಂಖ್ಯಾತರಲ್ಲಿ ಒಬ್ಬರಾಗಿದ್ದಾರೆ.
 • 2015 ರ ಬಿಕ್ಕಟ್ಟಿನ ಮೊದಲು ರೋಹಿಂಗಯಾಸ್ ಜನಸಂಖ್ಯೆಯು 1 ರಿಂದ 1.3 ಮಿಲಿಯನ್ ಆಗಿತ್ತು.
 • ಈ ಬಿಕ್ಕಟ್ಟು 2012 ರಲ್ಲಿ ರಾಖಿನೆ ರಾಜ್ಯ ಗಲಭೆಗೆ ಅಂತಾರಾಷ್ಟ್ರೀಯ ಗಮನವನ್ನು ಪಡೆದುಕೊಂಡಿತು, 2015 ರಲ್ಲಿ ರೋಹಿಂಗ್ಯಾ ಬಿಕ್ಕಟ್ಟು ಮಿಲಿಟರಿ ಶಿಸ್ತುಕ್ರಮಕ್ಕೆ ಕಾರಣವಾಯಿತು .
 • ಪ್ರಸ್ತುತ 40000 ರೋಹಿಂಗ್ಯಾಗಳು ಭಾರತವನ್ನು ತಮ್ಮ ಎರಡನೆಯ ಮನೆ ಮಾಡಿಕೊಂಡಿದ್ದಾರೆ .

ನಿರಾಶ್ರಿತರ ಬಿಕ್ಕಟ್ಟು ಭಾರತದ ಆಸಕ್ತಿ ಮತ್ತು ಮೌಲ್ಯಗಳನ್ನು ಹೇಗೆ ಪ್ರಭಾವಿಸುತ್ತದೆ?

 • ಭಾರತ ಶ್ರೀಲಂಕಾ, ಟಿಬೆಟ್, ಅಫಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದಿಂದ ನಿರಾಶ್ರಿತರನ್ನು ಸ್ವಾಗತಿಸುವ ಪ್ರಬಲ ಇತಿಹಾಸವನ್ನು ಹೊಂದಿದೆ ಮತ್ತು ಅವರು ಇನ್ನೂ ಇಲ್ಲಿ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಆನಂದಿಸುತ್ತಾರೆ.
 • ರೋಹಿಂಗ್ಯಗಳು ಈಗ ದಕ್ಷಿಣ ಏಷ್ಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಸಮುದಾಯದ ಸಮುದಾಯವಾಗಿದ್ದಾರೆ, ಅವರು ಸ್ಥಿತಿಯಿಲ್ಲದವರಾಗಿದ್ದಾರೆ ಮತ್ತು ಅವರಿಗೆ ಯಾವುದೇ ಸ್ಥಾನವಿಲ್ಲ.
 • ಭಾರತದಲ್ಲಿ 16500 ರೋಹಿಂಗ್ಯಾ ನಿರಾಶ್ರಿತರು  ವಿಶ್ವಸಂಸ್ಥೆಯ ಹೈ ಕಮಿಷನರ್ (ಯುಎನ್ಹೆಚ್ಸಿಆರ್) ನಿರಾಶ್ರಿತರ ಗುರುತಿನ ಚೀಟಿ ಹೊಂದಿದ್ದಾರೆ ಮತ್ತು ಭಾರತವು ಅದನ್ನು ಅಪ್ರಸ್ತುತವೆಂದು ಪರಿಗಣಿಸುತ್ತದೆ.
 • ಭಾರತಕ್ಕೆ ಅಕ್ರಮ ವಲಸಿಗರಾಗಿರುವವರೆಗೂ ಅವರುಗಳನ್ನು ಗಡೀಪಾರು ಮಾಡಲಾಗುವುದು.ಹಿಂದೆಯೇ ಅಂತಹ ಸಂದರ್ಭಗಳನ್ನು ನಿರಾಶ್ರಿತರು ಎದುರಿಸಿದ್ದಾರೆ.
 • ಭಾರತವು ಹಿಂದಕ್ಕೆ ಕಳುಹಿಸಿದರೆ, ಜಾಗತಿಕ ಮುಂಭಾಗದಲ್ಲಿ ಭಾರತದ ನೀತಿಗಳನ್ನು ಪ್ರಶ್ನಿಸುವಂತಾಗುತ್ತದೆ . ರೋಹಿಂಗ್ಯಗಳು ಮಯನ್ಮಾರ್ಗೆ ಹಿಂತಿರುಗುವುದಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಸಾಯುವುದೇ  ಉತ್ತಮ ಎಂದು ಪರಿಗಣಿಸಿದ್ದಾರೆ .
 • ಇತ್ತೀಚೆಗೆ ಇದಕ್ಕೆ ಸೇರ್ಪಡೆಗೊಂಡಿದ್ದ, ಬಂಡಾಯಗಾರ ಗುಂಪು – ಹರಾಕ್ವಾ ಅಲ್-ಯಾಕಿನ್ ಸೌದಿ ಅರೇಬಿಯಾದಲ್ಲಿ ರೋಹಿಂಗ್ಯಾ ನೇತೃತ್ವದಲ್ಲಿ ಯುದ್ಧತಂತ್ರದ ತರಬೇತಿ ಮತ್ತು ಗೆರಿಲ್ಲಾ ಕಾರ್ಯಾಚರಣೆ ಕೌಶಲ್ಯಗಳನ್ನು ಹೊಂದಿದನು.
 • ಭಾರತವು ಶ್ರೀಲಂಕಾದ ನಿರಾಶ್ರಿತರ ವಿಷಯದ ಇತಿಹಾಸವನ್ನು ಹೊಂದಿದ್ದು,ಅದು ಅಂತಿಮವಾಗಿ ರಾಜೀವ್ ಗಾಂಧಿಯವರ ಹತ್ಯೆಯಲ್ಲಿ ಕೊನೆಗೊಂಡಿತು.
 • ಭದ್ರತಾ ಸಮಸ್ಯೆಯ ಜೊತೆಗೆ, ಇದು ದೇಶದಲ್ಲಿ ರಾಜಕೀಯ, ಆಡಳಿತ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು.

ಕೃಷ್ಣ ರಂಧ್ರ ಪತ್ತೆ

4.

ಸುದ್ಧಿಯಲ್ಲಿ ಏಕಿದೆ ?ಇದುವರೆಗೆ ಪತ್ತೆಯಾಗಿರುವ ಕೃಷ್ಣರಂಧ್ರಗಳಲ್ಲೇ ಅತ್ಯಂತ ವೇಗವಾಗಿ ಪರಿಭ್ರಮಿಸುವ ಬ್ಲ್ಯಾಕ್‌ ಹೋಲ್‌ನ್ನು ಪತ್ತೆಹಚ್ಚಲಾಗಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

 • ಈ ಸಾಧನೆಯಲ್ಲಿ ಭಾರತದ ವಿಜ್ಞಾನಿಗಳು ಮತ್ತು ತಂತ್ರಜ್ಞಾನದ ಪಾಲು ಇರುವುದು ಗಮನಾರ್ಹ ಅಂಶ.
 • ಕೆಲವೇ ತಿಂಗಳ ಹಿಂದಷ್ಟೇ ಭಾರತ ನಭೋಮಂಡಲಕ್ಕೆ ಚಿಮ್ಮಿಸಿದ ದೇಶದ ಮೊದಲ ಖಗೋಳ ಅಧ್ಯಯನ ಉಪಗ್ರಹ ಆಸ್ಟ್ರೋಸ್ಯಾಟ್‌ ಮತ್ತು ನಾಸಾದ ಚಂದ್ರಾ ಎಕ್ಸ್‌-ರೇ ವೀಕ್ಷಣಾಲಯದಿಂದ ಪಡೆದ ದತ್ತಾಂಶಗಳನ್ನು ವಿಶ್ಲೇಷಿಸಿ ವಿಜ್ಞಾನಿಗಳು ಈ ಅಂಶವನ್ನು ಪತ್ತೆ ಹಚ್ಚಿದ್ದಾರೆ.
 • ಎರಡೇ ನಕ್ಷತ್ರಗಳಿರುವ 4ಯು 1630-47 ಎಂಬ ನಕ್ಷತ್ರ ವ್ಯೂಹದಲ್ಲಿರುವ ಕೃಷ್ಣ ರಂಧ್ರ ಗರಿಷ್ಠ ವೇಗದಲ್ಲಿ ಸುತ್ತುತ್ತಿದೆ ಎಂದು ಹೇಳಲಾಗಿದೆ.
 • ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ(ಟಿಐಎಫ್‌ಆರ್‌)ನ ಖಗೋಳ ವಿಜ್ಞಾನಿಗಳು ಮಾಡಿರುವ ಸಂಶೋಧನೆ ಇದಾಗಿದೆ.
 • ಸಾಪೇಕ್ಷವಾಗಿ ಸಣ್ಣ ಗಾತ್ರದಲ್ಲಿರುವ ಈಗ ಕೃಷ್ಣ ರಂಧ್ರ ಅಗಾಧ ವೇಗದಲ್ಲಿ ಸುತ್ತುತ್ತಿದೆ. ಈ ವೇಗ ಎಷ್ಟಿದೆಯೆಂದರೆ, ಆಕಾಶಕಾಯದ ದ್ರವ್ಯರಾಶಿಯೆಲ್ಲವೂ ಕೇಂದ್ರದ ಕಡೆಗೆ ಸೆಳೆದುಕೊಳ್ಳಲ್ಪಟ್ಟಿದೆ ಎಂದು ಖಭೌತ ಶಾಸ್ತ್ರ ಜರ್ನಲ್‌ನಲ್ಲಿ ಪ್ರಕಟಣೆಗೆ ಸ್ವೀಕಾರಾರ್ಹತೆ ಪಡೆದ ಸಂಶೋಧನೆಯಲ್ಲಿ ಹೇಳಲಾಗಿದೆ.
 • ಆಸ್ಟ್ರೋಸ್ಯಾಟ್‌ನ ಉಪಗ್ರಹದಲ್ಲಿದ್ದ ಸಾಫ್ಟ್‌ ಎಕ್ಸ್‌ರೇ ಟೆಲಿಸ್ಕೋಪ್‌ ಮತ್ತು ದೊಡ್ಡ ವ್ಯಾಪ್ತಿಯ ಎಕ್ಸ್‌ರೇ ಪ್ರಮಾಣಾನುಗುಣ ಸಾಧನ(ಎಲ್‌ಎಎಕ್ಸ್‌ಪಿಸಿ)ಗಳು ಕೃಷ್ಣ ರಂಧ್ರದ ಪರಿಭ್ರಮಣ ವೇಗವನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಮೊದಲ ಬಾರಿಗೆ ನಡೆದ ಆಸ್ಟ್ರೋಸ್ಯಾಟ್‌-ಚಂದ್ರ ಜಂಟಿ ಅಧ್ಯಯನ ಇನ್ನಷ್ಟು ಹೊಸ ಅಂಶಗಳಿಗೆ ಬೆಳಕು ಚೆಲ್ಲುವ ಸಾಧ್ಯತೆಗಳಿವೆ ಎನ್ನುತ್ತಾರೆ ಟಿಐಎಫ್‌ಆರ್‌ ಪ್ರೊಫೆಸರ್‌ ಎ.ಆರ್‌.ರಾವ್‌.

ಜಪಾನ್‌ ಬಳಿಕ ಭಾರತದ ಸಾಧನೆ

 • 2015ರಲ್ಲಿ ಇಸ್ರೊ ಹಾರಿಬಿಟ್ಟ ಆಸ್ಟ್ರೋಸ್ಯಾಟ್‌ ಎಕ್ಸ್‌-ರೇ ಟೆಲಿಸ್ಕೋಪ್‌ ಹೊಂದಿರುವುದು ವಿಶೇಷ ಸಾಧನೆಯಾಗಿದೆ. ಜಪಾನ್‌ ಬಳಿಕ ಇಂತಹದೊಂದು ಟೆಲಿಸ್ಕೋಪ್‌ ಹೊತ್ತ ಖಗೋಳ ಅಧ್ಯಯನ ಉಪಗ್ರಹ ಹಾರಿಸುವ ಸಾಧನೆ ಮಾಡಿದ ಎರಡನೇ ಏಷ್ಯನ್‌ ರಾಷ್ಟ್ರ ಭಾರತ. ಚೀನಾಕ್ಕೂ ಇಂಥ ಟೆಲಿಸ್ಕೋಪ್‌ ನಿರ್ಮಿಸಲು ಸಾಧ್ಯವಾಗಿಲ್ಲ.

ಕೃಷ್ಣ ರಂದ್ರಗಳು ಎಂದರೇನು ?

 • ಕೃಷ್ಣ ರಂಧ್ರಗಳೆಂದರೆ ಹಲವು ನಿಗೂಢತೆಗಳನ್ನು ತಮ್ಮೊಳಗೆ ಬಚ್ಚಿಟ್ಟುಕೊಂಡಿರುವ ಆಕಾಶ ಕಾಯಗಳು.
 • ಬೆಳಕಿನ ಒಂದು ಕಿರಣವನ್ನೂ ತನ್ನೊಳಗೆ ಹಾದು ಹೋಗಲು ಬಿಡದ ಇವುಗಳ ರೂಪವನ್ನು ಗುರುತಿಸಲು ಅಸಾಧ್ಯ. ದ್ರವ್ಯರಾಶಿ ಮತ್ತು ವೇಗವಷ್ಟೇ ಲೆಕ್ಕಕ್ಕೆ ಸಿಗಬಹುದಾದ ಎರಡು ಮಾನದಂಡಗಳು.
 • ಆದರೆ, ಬೆಳಕಿನ ಅತ್ಯಂತ ಸನಿಹದ ವೇಗದಲ್ಲಿ ತಿರುಗಬಲ್ಲ ಅಗಾಧ ವೇಗಕ್ಕೆ ಲೆಕ್ಕಾಚಾರ ಸಿಕ್ಕಿಲ್ಲ.

ಕೃಷ್ಣ ರಂಧ್ರದ ಪರಿಭ್ರಮಣ ವೇಗವೆಷ್ಟು?

 • ಸಾಮಾನ್ಯವಾಗಿ ಕೃಷ್ಣ ರಂಧ್ರದ ಸುತ್ತುವ ವೇಗ ಬೆಳಕಿನ ವೇಗದ 0-1.0 ಅಂಶಗಳಷ್ಟು ಇರುತ್ತದೆ. ಈಗ ಪತ್ತೆ ಹಚ್ಚಲಾಗಿರುವ ಕೃಷ್ಣ ರಂಧ್ರದ 9ಗಿಂತಲೂ ಅಧಿಕವಿದೆ.
 • ಜಗತ್ತಿನಲ್ಲಿ ಕೇವಲ ಐದು ಕೃಷ್ಣ ರಂಧ್ರಗಳ ಚಲನೆಯ ವೇಗವನ್ನಷ್ಟೇ ನಿಖರವಾಗಿ ಪತ್ತೆ ಹಚ್ಚಲಾಗಿದೆ. ಅವುಗಳಲ್ಲಿ ಇದೂ ಒಂದು.

ಲಂಕಾ ಸಂಸತ್

ಸುದ್ಧಿಯಲ್ಲಿ ಏಕಿದೆ ?ಶ್ರೀಲಂಕಾ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿದ ನಂತರ ದೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಸಂಸತ್‌ ಅಮಾನತು ಆದೇಶವನ್ನು ಹಿಂಪಡೆದಿದ್ದು, ನ.5ರಂದು ಅಧಿವೇಶನ ಕರೆದಿದ್ದಾರೆ.

ಹಿನ್ನಲೆ

 • ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ, ನೂತನ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸೆ ಅವರನ್ನು ನೇಮಕ ಮಾಡಿದ್ದರು. ಮರುದಿನ ಸಂಸತ್‌ನಲ್ಲಿ ತಮಗೇ ಬಹುಮತವಿದೆ ಎಂದು ವಿಕ್ರಮಸಿಂಘೆ ಘೋಷಿಸಿಕೊಂಡ ಕೆಲವೇ ಕ್ಷಣಗಳಲ್ಲಿ ನವೆಂಬರ್‌ 16ರವರೆಗೆ ಸಂಸತ್‌ ಅನ್ನೇ ಅಮಾನತಿನಲ್ಲಿಟ್ಟು ಆದೇಶ ಹೊರಡಿಸಿದ್ದರು. ಈ ಕ್ರಮ ಜಾಗತಿಕ ಮಟ್ಟದಲ್ಲಿಯೂ ತೀವ್ರ ಟೀಕೆ ಎದುರಿಸಿತ್ತು.

ಶ್ರೀಲಂಕಾದಲ್ಲಿ ಅಧ್ಯಕ್ಷರೇ ಪವರ್‌ಪುಲ್‌!

 • ದ್ವೀಪ ರಾಷ್ಟ್ರ ಶ್ರೀಲಂಕಾ ಅರೆ ಅಧ್ಯಕ್ಷೀಯ ವ್ಯವಸ್ಥೆ ಅಳವಡಿಸಿಕೊಂಡಿರುವ ಪ್ರಜಾಪ್ರಭುತ್ವ ರಾಷ್ಟ್ರ.
 • ಒಂದರ್ಥದಲ್ಲಿ ಇಲ್ಲಿನ ಅಧ್ಯಕ್ಷರು ಅಧ್ಯಕ್ಷೀಯ ವ್ಯವಸ್ಥೆ ಇರುವ ಅಮೆರಿಕದಲ್ಲಿನ ಅಧ್ಯಕ್ಷರಿಗಿಂತಲೂ ಪವರ್‌ಫುಲ್‌! ಏಕೆಂದರೆ ಅಧ್ಯಕ್ಷರು ರಾಷ್ಟ್ರ ಮತ್ತು ಸರಕಾರ ಎರಡಕ್ಕೂ ಮುಖ್ಯಸ್ಥರು.
 • ಜನರಿಂದ ನೇರವಾಗಿ ಆಯ್ಕೆಯಾಗುವ ಅಧ್ಯಕ್ಷರ ಅಧಿಕಾರಾವಧಿ ಆರು ವರ್ಷ.
 • ಸಂಸತ್ತಿನಲ್ಲಿ ಬಹುಮತ ಹೊಂದಿರುವ ಪಕ್ಷದ ನಾಯಕನನ್ನು ಪ್ರಧಾನಿಯಾಗಿ ಅವರು ನೇಮಕ ಮಾಡುತ್ತಾರೆ. ಪ್ರಧಾನಿಯು ಅಧ್ಯಕ್ಷರ ಡೆಪ್ಯೂಟಿಯಾಗಿ ಕಾರ್ಯನಿರ್ವಹಿಸುತ್ತಾರೆ.
 • ಆಡಳಿತಾತ್ಮಕ ಅಧಿಕಾರವನ್ನು ಸರಕಾರ ಚಲಾಯಿಸುತ್ತದೆ. ಶಾಸಕಾಂಗದ ಅಧಿಕಾರವನ್ನು ಸರಕಾರ ಮತ್ತು ಸಂಸತ್ತು ಎರಡೂ ಹೊಂದಿರುತ್ತವೆ.
 • ಸಂಸತ್‌ ಅಧಿವೇಶನವನ್ನು ಕರೆಯುವ, ಸಂಸತ್‌ ಅನ್ನು ಅಮಾನತುಗೊಳಿಸುವ ಅಧಿಕಾರವನ್ನು ಅಧ್ಯಕ್ಷರೇ ಹೊಂದಿದ್ದಾರೆ.
 • 225 ಸದಸ್ಯ ಬಲದ ಸಂಸತ್‌ಗೆ 196 ಸಂಸದರು ಜನರಿಂದ ಆಯ್ಕೆಯಾಗುತ್ತಾರೆ. ಪ್ರತಿ ರಾಜಕೀಯ ಪಕ್ಷವು ಗಳಿಸಿದ ಶೇಕಡಾವಾರು ಮತಗಳ ಆಧಾರದಲ್ಲಿ ಉಳಿದ 29 ಸ್ಥಾನಗಳಿಗೆ ನಾಮನಿರ್ದೇಶನ ಮಾಡಲಾಗುತ್ತದೆ.
Related Posts
“12th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸತ್ಯಾಗ್ರಹದಿಂದ ಸ್ವಚ್ಛಾಗ್ರಹ ಚಂಪಾರಣ್ ಸತ್ಯಾಗ್ರಹಕ್ಕೆ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರ ಹಮ್ಮಿಕೊಂಡಿದ್ದ 1 ವರ್ಷದ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವನ್ನು ಶ್ಲಾಘಿಸಿದರು. ರಾಜ್ಯ ಸರ್ಕಾರ ಸತ್ಯಾಗ್ರಹ ದಿಂದ ಸಚ್ಛಾಗ್ರಹದತ್ತ ತಿರುಗಿದೆ ...
READ MORE
“27 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏಪ್ರಿಲ್‌ಗೆ ಕರ್ನಾಟಕ ಪೂರ್ತಿ ಉಜ್ವಲ! ಸುದ್ಧಿಯಲ್ಲಿ ಏಕಿದೆ ? ರಾಜ್ಯದಲ್ಲಿ ವಿಸ್ತರಿತ ಪ್ರಧಾನಮಂತ್ರಿ ಉಜ್ವಲ ಯೋಜನೆ-2(ಇಪಿಎಂಯುವೈ) ಅಡಿ ಹೊಸದಾಗಿ ಐದು ಲಕ್ಷ ಬಡ ಕುಟುಂಬಗಳಿಗೆ ಅನಿಲ ಸಂಪರ್ಕ ಕಲ್ಪಿಸಲು ಭಾರತೀಯ ತೈಲ ನಿಗಮ ಮುಂದಾಗಿದೆ. 2019ರ ಜ.1ರಿಂದ ಉಜ್ವಲ-2ರ ಯೋಜನೆಗೆ ಚಾಲನೆ ಸಿಗಲಿದೆ. ಸದ್ಯ ...
READ MORE
“22 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಸಾರಯುಕ್ತ ಅಕ್ಕಿ ಸುದ್ಧಿಯಲ್ಲಿ ಏಕಿದೆ ?ಬಿಸಿಯೂಟ ಯೋಜನೆಯನ್ವಯ ರಾಜ್ಯದ 4 ಜಿಲ್ಲೆಗಳ ಒಟ್ಟು 5 ಘಟಕಗಳಲ್ಲಿ ಸಾರವರ್ಧಿತ ಅಕ್ಕಿ ಬಳಸುವ ಸಂಬಂಧ 2017-18ನೇ ಸಾಲಿನ ಬಜೆಟ್​ನಲ್ಲಿ ಘೊಷಿಸಿರುವ ಕಾರ್ಯಕ್ರಮ ಜಿಲ್ಲೆಯಲ್ಲಿ ಇನ್ನೂ ಕಾರ್ಯರೂಪಕ್ಕೆ ಬಾರದೆ ವಿಳಂಬವಾಗಿದೆ. ಸಾರಯುಕ್ತ ಅಕ್ಕಿ ಬಳಕೆಗೆ ಕಾರಣ ಇದು ತೀವ್ರ ತರಹದ ...
READ MORE
ಮೇಕ್ ಇನ್ ಇಂಡಿಯಾ
ಮೇಕ್ ಇನ್ ಇಂಡಿಯಾ ಬಗ್ಗೆ ಪರಿಚಯ: ಒಂದು ಪ್ರಮುಖ ಹೊಸ ರಾಷ್ಟ್ರೀಯ ಕಾರ್ಯಕ್ರಮ. ಇದನ್ನು ಹೂಡಿಕೆಗೆ  ಅನುಕೂಲಕರವಾಗಿ ವಿನ್ಯಾಸಗೊಳಿಸಲಾಗಿದೆ. ನಾವೀನ್ಯತೆಯ ಪ್ರೋತ್ಸಾಹ, ಕೌಶಲ್ಯ ಅಭಿವೃದ್ಧಿ ಹೆಚ್ಚಿಸಲು, ಬೌದ್ಧಿಕ ಆಸ್ತಿಯನ್ನು ರಕ್ಷಿಸಲು ಮತ್ತು ಅತ್ಯುತ್ತಮ ದರ್ಜೆಯ ಉತ್ಪಾದನ ಸೌಕರ್ಯವನ್ನು ನಿರ್ಮಿಸಲು ಜಾಗತಿಕ ಉತ್ಪಾದನೆಯ ಭೂಪಟದಲ್ಲಿ ಭಾರತವನ್ನು ಅಗ್ರಸ್ಥಾನಕ್ಕೇರಿಸುವ ...
READ MORE
17th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
‘ಐಸಿಡಿಎಸ್ ಖಾಸಗೀಕರಣವಿಲ್ಲ’ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್) ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಡಾ.ವೀರೇಂದ್ರಕುಮಾರ್ ಸ್ಪಷ್ಟಪಡಿಸಿದ್ದಾರೆ. ‘ಅಂತಹ ಯಾವುದೇ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದೆ ಇಲ್ಲ. ಈ ಯೋಜನೆಗೆ ರಾಜ್ಯ ...
READ MORE
“28th ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮೇಕೆದಾಟು ಯೋಜನೆ ಸುದ್ಧಿಯಲ್ಲಿ ಏಕಿದೆ? ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು, ಯೋಜನೆ ವಿರೋಧಿಸಿದ್ದ ತಮಿಳುನಾಡಿಗೆ ಹಿನ್ನಡೆಯಾಗಿದೆ. ಮೇಕೆದಾಟು ಯೋಜನೆ ಕುರಿತ ರಾಜ್ಯದ ಪ್ರಿ-ಫೀಸಿಬಿಲಿಟಿ ವರದಿಗೆ ಕೇಂದ್ರದ ಜಲ ಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿದ್ದು, ಸಮಗ್ರ ಯೋಜನಾ ವರದಿ ...
READ MORE
“3 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹೊಸ ವಾಹನ ನೋಂದಣಿ 2 ವರ್ಷ ಸ್ಥಗಿತ ಸುದ್ಧಿಯಲ್ಲಿ ಏಕಿದೆ ? ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಪರಿಹಾರದ ಹಿನ್ನೆಲೆಯಲ್ಲಿ ಮುಂದಿನ ಎರಡು ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸುವ ಚಿಂತನೆ ನಡೆದಿದೆ. ನಿರ್ಧಾರಕ್ಕೆ ಕಾರಣಗಳು ಬೆಂಗಳೂರು ಮಹಾನಗರದಲ್ಲಿ ವಾಹನಗಳ ಸಂಖ್ಯೆ ...
READ MORE
“18th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಜಲಮೂಲಗಳ ಸ್ವಚ್ಛತೆ ಅಭಿಯಾನ ಸುದ್ದಿಯಲ್ಲಿ ಏಕಿದೆ?  ಜೂನ್ 5ರ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಕರ್ನಾಟಕದ ಪಣಂಬೂರು, ಮಲ್ಪೆ, ಗೋಕರ್ಣ ಹಾಗೂ ಕಾರವಾರ ಸೇರಿದಂತೆ ದೇಶದ 24 ಸಮುದ್ರ ತೀರಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಕೇಂದ್ರ ಪರಿಸರ ಸಚಿವಾಲಯ ಸಿದ್ಧತೆ ನಡೆಸಿದೆ. ಜೊತೆಗೆ ...
READ MORE
“8th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
'ಸ್ವಚ್ಛ ಸರ್ವೇಕ್ಷಣೆ-2019 ಕಾರ್ಯಾಗಾರ' ಸುದ್ಧಿಯಲ್ಲಿ ಏಕಿದೆ ? ಕರ್ನಾಟಕದ ನಗರಗಳು ಸ್ವಚ್ಛತಾ ಅಭಿಯಾನದಲ್ಲಿ ಹಿಂದುಳಿಯುತ್ತಿದ್ದು, ಇನ್ನು ಮುಂದಾದರೂ ಮುಂಚೂಣಿಗೆ ಬರುವ ಪ್ರಯತ್ನ ಮಾಡಬೇಕು ಎಂದು ಸ್ವಚ್ಛತಾ ಭಾರತ್‌ ಮಿಷನ್‌ನ ಜಂಟಿ ಕಾರ್ಯದರ್ಶಿ ವಿ.ಕೆ.ಜಿಂದಾಲ್‌ ಹೇಳಿದರು. ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್‌.ಟಾಟಾ ಸಭಾಂಗಣದಲ್ಲಿ ನಡೆದ 'ಸ್ವಚ್ಛ ಸರ್ವೇಕ್ಷಣೆ-2019 ...
READ MORE
” 07 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಾತೃಪೂರ್ಣ ಯೋಜನೆ  ಸುದ್ಧಿಯಲ್ಲಿ ಏಕಿದೆ ? ಪೌಷ್ಟಿಕ ಆಹಾರ ಒದಗಿಸಿ ತಾಯಿ, ಮಗುವಿನ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ರಾಜ್ಯದಲ್ಲಿ ಆರಂಭಗೊಂಡ ‘ಮಾತೃಪೂರ್ಣ’ ಯೋಜನೆ ಪೂರ್ಣ ಫಲ ನೀಡುವಲ್ಲಿ ವಿಫಲವಾಗಿದೆ. ವಿಫಲವಾಗಲು ಕಾರಣ ರಾಜ್ಯದಲ್ಲಿ 61 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಅಂದಾಜು 25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ...
READ MORE
“12th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“27 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“22 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಮೇಕ್ ಇನ್ ಇಂಡಿಯಾ
17th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
“28th ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“3 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“18th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
“8th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
” 07 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *