“21 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ರಾಜ್ಯವಾರು ಉತ್ಪಾದನೆಯಲ್ಲಿ ಕರ್ನಾಟಕ ನಂ.1

1.

ಸುದ್ಧಿಯಲ್ಲಿ ಏಕಿದೆ ?ರಾಜ್ಯದ ತಲಾ ನಿವ್ವಳ ಆಂತರಿಕ ಉತ್ಪಾದನೆಯಲ್ಲಿ(ಎನ್‌ಎಸ್‌ಡಿಪಿ) ಕರ್ನಾಟಕವು 2017-18ರಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.

 • ಈ ಅವಧಿಯಲ್ಲಿ ರಾಜ್ಯ ಸರಾಸರಿ 1,81,788 ರೂ.ಗಳಷ್ಟು ತಲಾ ನಿವ್ವಳ ಆಂತರಿಕ ಉತ್ಪಾದನೆ ದಾಖಲಿಸಿದೆ.
 • ತೆಲಂಗಾಣ 2ನೇ ಸ್ಥಾನದಲ್ಲಿದ್ದು, 1,81,034 ರೂ., ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದ್ದು 1,80,596 ರೂ. ದಾಖಲಿಸಿದೆ.
 • ತಲಾ ಆದಾಯದ ಪೈಕಿ ಹೊಸದಿಲ್ಲಿ ಮೊದಲ ಸ್ಥಾನದಲ್ಲಿದ್ದು 3,29,093 ರೂ. ತಲಾ ಆದಾಯ ಹೊಂದಿದೆ ಎಂದು ವರದಿ ನೀಡಿದೆ.
 • ತಲಾ ಆದಾಯದಲ್ಲಿ ಬಿಹಾರ ಹಿಂದುಳಿದಿದ್ದು, 38,860 ರೂ. ಗಳಷ್ಟಿದೆ ಎಂದು ಹಣಕಾಸು ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.

ಏಷಿಯಾಟಿಕ್‌ ಸಿಂಹಗಳ ರಕ್ಷಣೆಗೆ ನೂತನ ಯೋಜನೆ

2.

ಸುದ್ಧಿಯಲ್ಲಿ ಏಕಿದೆ ?ಗುಜರಾತ್​ನ ಗಿರ್​ ಅರಣ್ಯ ಪ್ರದೇಶದಲ್ಲಿ ಕಳೆದ ಕೆಲ ತಿಂಗಳುಗಳಿಂದ ಸಿಂಹಗಳು ಅನೇಕ ಕಾರಣಗಳಿಂದಾಗಿ ಅವನತಿಯ ಅಂಚಿಗೆ ಸಾಗುತ್ತಿದ್ದು, ಅವುಗಳನ್ನು ರಕ್ಷಿಸಲೆಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಏಶಿಯಾಟಿಕ್‌ ಲಯನ್‌ ಕನ್ಸರ್ವೇಶನ್‌ ಯೋಜನೆಯನ್ನು ಆರಂಭಿಸಿದೆ.

ಯೋಜನೆಯ ಉದ್ದೇಶ

 • ಈ ಯೋಜನೆಯಿಂದಾಗಿ ಸಿಂಹಗಳನ್ನು ಸಂರಕ್ಷಿಸಲು ನಡೆಯುತ್ತಿರುವ ಕ್ರಮಗಳನ್ನು ಬಲಪಡಿಸುವುದಲ್ಲದೆ, ರಾಜ್ಯ ಸರ್ಕಾರದ ಕೌಶಲ್ಯ ಮತ್ತು ತಂತ್ರಗಳನ್ನು ಬಳಸಿಕೊಂಡು ನಿಯಮಿತ ವೈಜ್ಞಾನಿಕ ಸಂಶೋಧನಾ ಅಧ್ಯಯನ, ರೋಗ ನಿಯಂತ್ರಣ, ಆಧುನಿಕ ಕಣ್ಗಾವಲು ಮತ್ತು ಗಸ್ತು ತಿರುಗುವ ತಂತ್ರಗಳಿಂದಾಗಿ ಏಷಿಯಾಟಿಕ್‌ ಸಿಂಹಗಳ ಚೇತರಿಕೆಗೆ ನೆರವಾಗಲಿದೆ.

ಏಕೆ ಈ ಯೋಜನೆ ?

 • 1890ರ ದಶಕದ ಅಂತ್ಯದ ವೇಳೆಗೆ ಗುಜರಾತಿನ ಗಿರ್ ಕಾಡುಗಳಲ್ಲಿ 50 ಸಿಂಹಗಳಿಗಿಂತಲೂ ಕಡಿಮೆ ಇದ್ದವು. ಆದರೆ ರಾಜ್ಯ ಸರ್ಕಾರ ಮತ್ತು ಕೇಂದ್ರದ ಸೂಕ್ತ ಮತ್ತು ಕಟ್ಟುನಿಟ್ಟಿನ ಸಂರಕ್ಷಣೆಯಿಂದಾಗಿ ಏಷಿಯಾಟಿಕ್ ಸಿಂಹಗಳ ಸಂಖ್ಯೆಯು 500 ಕ್ಕಿಂತಲೂ ಹೆಚ್ಚಾಗಿದ್ದು, ಇದೀಗ ಮತ್ತೆ ಅಳಿವಿನ ಅಂಚಿನತ್ತ ಸಾಗುತ್ತಿವೆ.
 • ಪ್ರತಿ ವರ್ಷ ಸುಮಾರು 100 ಸಿಂಹಗಳು ಮೃತಪಡುತ್ತಿದ್ದು, ಮಾನ್​ಸೂನ್​ ಸಮಯದಲ್ಲಿ ಸಿಂಹಗಳ ಸಾವಿನ ಸಂಖ್ಯೆ ಏರಿಕೆಯಾಗುತ್ತದೆ. ಮೂರು ತಿಂಗಳ ಮಾನ್ಸೂನ್​ ಸಮಯದಲ್ಲಿ ಗಿರ್​ನಲ್ಲಿ ಪ್ರತಿವರ್ಷ ಅಂದಾಜು 31 ರಿಂದ 32 ಸಿಂಹಗಳು ಮೃತಪಡುತ್ತವೆ
 • ಪೂರ್ವ ಭಾರತದ ಪರ್ಷಿಯಾದಿಂದ(ಇರಾನ್) ಪಲಮಾವುವರೆಗೆ ಬೇಟೆಯಾಡುವ ಮತ್ತು ಆವಾಸಸ್ಥಾನದ ಕೊರತೆಯಿಂದಾಗಿ ಏಷ್ಯಾದ ಸಿಂಹಗಳು ಪ್ರಭೇದವು ಅಳಿವಿನಂಚಿನಲ್ಲಿದ್ದು, ಗುಜರಾತಿನ ಗಿರ್ ರಾಷ್ಟ್ರೀಯ ಉದ್ಯಾನವು ಅವುಗಳ ಕೊನೆಯ ಆವಾಸಸ್ಥಾನಗಳಲ್ಲಿ ಒಂದಾಗಿದೆ. 2015 ರ ಜನಗಣತಿಯ ಪ್ರಕಾರ ಇಲ್ಲಿ 523 ಸಿಂಹಗಳಿವೆ. ಅವುಗಳಲ್ಲಿ 109 ಗಂಡು, 201 ಹೆಣ್ಣು ಮತ್ತು 140 ಸಿಂಹದ ಮರಿಗಳಿವೆ ಎಂದು ತಿಳಿದುಬಂದಿದೆ.

ಏಷಿಯಾಟಿಕ್ ಲಯನ್ ಬಗ್ಗೆ

 • ಏಷಿಯಾಟಿಕ್ ಲಯನ್ಸ್ ಅನ್ನು ಐಯುಸಿಎನ್ ರೆಡ್ ಲಿಸ್ಟ್ ಅಡಿಯಲ್ಲಿ ಅಪಾಯಕ್ಕೊಳಗಾದವುಎಂದು ಪಟ್ಟಿ ಮಾಡಲಾಗಿದೆ. ಇದರ ಜನಸಂಖ್ಯೆಯು ಭಾರತದಲ್ಲಿ ಗುಜರಾತ್ ರಾಜ್ಯಕ್ಕೆ ಸೀಮಿತವಾಗಿದೆ.
 • 2015 ರ ಜನಗಣತಿಯ ಪ್ರಕಾರ, ಒಟ್ಟು 523 ಏಶಿಯಾಟಿಕ್ ಸಿಂಹಗಳು ಗಿರ್ ಪ್ರೊಟೆಕ್ಟೆಡ್ ಏರಿಯಾ ನೆಟ್ವರ್ಕ್ನಲ್ಲಿದೆ.
 • ಗಿರ್ ನ್ಯಾಷನಲ್ ಪಾರ್ಕ್, ಗಿರ್ ಅಭಯಾರಣ್ಯ, ಪನಿಯಾ ಅಭಯಾರಣ್ಯ, ಮಿಟಿಯಲಾ ಅಭಯಾರಣ್ಯ ಮತ್ತು ಪಕ್ಕದ ಕಾಡುಗಳನ್ನೂ ಒಳಗೊಂಡಿದೆ. ಇದು 79 ಚದರ ಕಿ.ಮೀ. ಪ್ರದೇಶವನ್ನು ಹೊಂದಿದೆ.

ಗ್ರಾಹಕರ ಹಕ್ಕಿಗೆ ಮತ್ತಷ್ಟು ಬಲ

3.

ಸುದ್ಧಿಯಲ್ಲಿ ಏಕಿದೆ ?ಗ್ರಾಹಕರ ಹಕ್ಕುಗಳ ಬಲವರ್ಧನೆ, ದೂರು ಸಲ್ಲಿಕೆ ಹಾಗೂ ಸೂಕ್ತ ಪರಿಹಾರ ಪಡೆಯುವ ಸುಲಭ ವ್ಯವಸ್ಥೆ ರೂಪಿಸಲು ಸಹಕಾರಿಯಾಗುವ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿದೆ.

 • 1986ರ ಗ್ರಾಹಕ ಹಿತರಕ್ಷಣೆ ಕಾಯ್ದೆಗೆ ಈಗ ತಿದ್ದುಪಡಿ ಮಾಡಲಾಗುತ್ತಿದೆ. ರಾಜ್ಯಸಭೆಯ ಅನುಮೋದನೆ ಬಳಿಕ ಹೊಸ ಕಾನೂನು ಜಾರಿಗೆ ಬರಲಿದೆ.
 • ದೇಶದ ಪ್ರತಿ ಜಿಲ್ಲೆಯಲ್ಲಿ ಗ್ರಾಹಕ ವ್ಯಾಜ್ಯ ಸಲ್ಲಿಕೆ ಮಂಡಳಿ ಮತ್ತು ವೇದಿಕೆ ರಚನೆ, ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಗ್ರಾಹಕರ ದೂರುಗಳನ್ನು ಆಲಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
 • ಮಂಡಳಿಗೆ ಕೇಂದ್ರೀಯ ಗ್ರಾಹಕ ರಕ್ಷಣೆ ಆಯೋಗ ರಚಿಸಲು ಅಧಿಕಾರವಿದೆ. ಈ ಮೂಲಕ ಗ್ರಾಹಕರ ಹಕ್ಕುಗಳ ರಕ್ಷಣೆ ಜತೆಗೆ ಹಕ್ಕುಗಳು ಎಲ್ಲರಿಗೂ ಸಿಗುವಂತೆ ಉತ್ತೇಜನ ಮತ್ತು ಅಗತ್ಯ ಮಾರ್ಗದರ್ಶನ ಕೂಡ ಮಂಡಳಿ ವತಿಯಿಂದ ನೀಡಲಾಗುತ್ತದೆ.

ಮಸೂದೆ ಪ್ರಮುಖಾಂಶ

 • ಟೆಲಿಕಾಂ ಮತ್ತು ಗೃಹ ನಿರ್ವಣ, ಆನ್​ಲೈನ್ ಹಾಗೂ ಟೆಲಿಶಾಪಿಂಗ್​ಗೆ ಕಾನೂನು ಅನ್ವಯ.
 • ಬಿಲ್, ರಶೀದಿ ನೀಡಲು ವಿಫಲ, 30 ದಿನಗಳಲ್ಲಿ ಹಿಂದಿರುಗಿಸಿದರೂ ಸರಕುಗಳನ್ನು ಸ್ವೀಕರಿಸದಿರುವುದು, ವಿಶ್ವಾಸಕ್ಕಾಗಿ ನೀಡಲಾದ ಖಾಸಗಿ ಮಾಹಿತಿ ದುರ್ಬಳಕೆ ವಿರುದ್ಧ ಕ್ರಮ
 • ಉತ್ಪನ್ನದ ಹೊಣೆಗಾರಿಕೆ ಉಲ್ಲೇಖ. ಉತ್ಪಾದಕ, ಸೇವಾದಾರ, ಮಾರಾಟ ಮಾಡುವವನೇ ಇದಕ್ಕೆ ಹೊಣೆ. ಆತನಿಂದ ಪರಿಹಾರ ಪಡೆಯಬಹುದು.
 • ಗ್ರಾಹಕರ ಹಿತರಕ್ಷಣೆ ಮಂಡಳಿ ಆದೇಶ ಪಾಲಿಸದಿದ್ದರೆ 3 ವರ್ಷ ಜೈಲು, ಅಥವಾ ಕನಿಷ್ಠ 25ಸಾವಿರ ದಂಡ.
 • ಜಾಹೀರಾತುದಾರರು, ಪ್ರಚಾರ ರಾಯಭಾರಿ ವಿರುದ್ಧ ಕ್ರಮಕ್ಕೂ ಅವಕಾಶ
 • ಇ-ಕಾಮರ್ಸ್ ಮತ್ತು ನೇರ ಮಾರಾಟಕ್ಕೆ ಕೇಂದ್ರ ಸರ್ಕಾರ ನಿಯಂತ್ರಣ.

ರೈತರ ಬೆಳೆಗಿನ್ನು ಎಂಆರ್​ಪಿ

4.

ಸುದ್ಧಿಯಲ್ಲಿ ಏಕಿದೆ ? 2022ರೊಳಗೆ ಕೃಷಿ ವಲಯದ ಬೆಳವಣಿಗೆಯನ್ನು ಎರಡು ಪಟ್ಟು ಹೆಚ್ಚಿಸುವ ಮೂಲಕ ಅನ್ನದಾತರ ಆದಾಯ ದ್ವಿಗುಣಗೊಳಿಸುವ ಆಶಯ, ಆಕಾಂಕ್ಷೆಗೀಗ ನೀತಿ ಆಯೋಗ ಬಲ ತುಂಬಿದೆ.

 • ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ನೀಡುವ ಬದಲು ನೇರವಾಗಿ ಮಂಡಿಗಳಲ್ಲೇ ಹರಾಜು ಹಾಕಲು ವೇದಿಕೆ ಕಲ್ಪಿಸುವ ಕನಿಷ್ಠ ಮೀಸಲು ಬೆಲೆ (ಎಂಆರ್​ಪಿ) ಜಾರಿ ಪ್ರಸ್ತಾಪ ಸೇರಿದಂತೆ ಹಲವು ಶಿಫಾರಸುಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ.

ಶಿಫಾರಸೇನು?:

 • ಕನಿಷ್ಠ ಬೆಂಬಲ ಬೆಲೆ ಎನ್ನುವುದು ತಾತ್ಕಾಲಿಕ ಪರಿಹಾರ ವ್ಯವಸ್ಥೆಯಾದ್ದರಿಂದ ಆ ಹೊತ್ತಿನ ಬೆಳೆಗಷ್ಟೇ ಪರಿಹಾರ ಸಾಧ್ಯ. ಇದರಿಂದಾಗಿ ರೈತ ಮುಂದಿನ ಬೆಳೆ ಬೆಳೆಯುವುದಕ್ಕೂ ಪೂರಕ ಆರ್ಥಿಕ ನೆರವು ಸಿಗುವುದಿಲ್ಲ. ಹೀಗಾಗಿ ಬೆಳೆಗಳನ್ನು ಮಂಡಿಗೆ ತಂದು ಹರಾಜಿಗೆ ಇರಿಸುವ ಮುನ್ನ ಸರ್ಕಾರಿ ಅಧಿಕಾರಿಗಳು ಕನಿಷ್ಠ ಮೀಸಲು ಬೆಲೆ ನಿಗದಿಪಡಿಸಬೇಕು. ಆ ಬೆಲೆಯಿಂದಲೇ ಹರಾಜು ಪ್ರಕ್ರಿಯೆ ಆರಂಭವಾಗಬೇಕು.

ಎಂಎಸ್​ಪಿಗೆ ತ್ರಿಸೂತ್ರ

 • ಒಂದೊಮ್ಮೆ ಎಂಎಸ್​ಪಿಯನ್ನೇ ಮುಂದುವರಿಸುವುದಾದರೆ ಹೆಚ್ಚುವರಿ ಬೆಳೆ ಉತ್ಪಾದನೆ, ಜಾಗತಿಕವಾಗಿ ಲಭ್ಯವಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ಮಾತ್ರ ಉಂಟಾಗಿರುವ ಬೆಳೆ ಕೊರತೆ ಮತ್ತು ಜಾಗತಿಕ-ಪ್ರಾದೇಶಿಕವಾಗಿ ಕೊರತೆ ಎದುರಿಸುತ್ತಿರುವ ಬೆಳೆಗಳೆಂಬ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಯೋಗ ಅಭಿಪ್ರಾಯಪಟ್ಟಿದೆ.

ಸಿಎಸಿಪಿ ವಿಸರ್ಜಿಸಿ

 • ಸಂವಿಧಾನದ ಅನುಚ್ಛೇದ 323ಬಿ ಅನ್ವಯ ಇರುವ ಅವಕಾಶ ಬಳಸಿ ಕೃಷಿ ವೆಚ್ಚ ಮತ್ತು ಬೆಲೆ ಮಂಡಳಿ (ಸಿಎಸಿಪಿ)ಯನ್ನು ವಿಸರ್ಜಿಸಿ ಅದರ ಬದಲಿಗೆ ಕೃಷಿ ನ್ಯಾಯಾಧಿಕರಣ ಸ್ಥಾಪಿಸಬೇಕೆಂಬ ಸಲಹೆಯನ್ನೂ ಮುಂದಿಡಲಾಗಿದೆ.
 • ಖಾರಿಫ್ ಹವಾಮಾನದ 22 ಬೆಳೆಗಳು, ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರಕ್ಕೆ ಶಿಫಾರಸು ಮಾಡುವ ಅಧಿಕಾರ ಸಿಎಸಿಪಿಗೆ ಇದೆ.

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ (ಸಿಎಸಿಪಿ)

 • ಸಿಎಸಿಪಿ ಎನ್ನುವುದು ತಜ್ಞರ ಸಂಸ್ಥೆಯಾಗಿದ್ದು, ಉತ್ಪಾದನೆಯ ವೆಚ್ಚ, ದೇಶೀಯ ಮತ್ತು ಅಂತರರಾಷ್ಟ್ರೀಯ ಬೆಲೆಯಲ್ಲಿನ ಪ್ರವೃತ್ತಿಯನ್ನು ತೆಗೆದುಕೊಳ್ಳುವ ಮೂಲಕ ಸರ್ಕಾರಕ್ಕೆ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್ಪಿಗಳು) (ಸಿಸಿಇಎ) ಶಿಫಾರಸು ಮಾಡುತ್ತದೆ.
 • ಇದು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಲಗತ್ತಿಸಲಾದ ಕಛೇರಿಯಾಗಿದೆ. ಇದು ಜನವರಿ 1965 ರಲ್ಲಿ ಅಸ್ತಿತ್ವಕ್ಕೆ ಬಂದಿತು.
 • ಪ್ರಸ್ತುತ, ಆಯೋಗವು ಅಧ್ಯಕ್ಷ, ಸದಸ್ಯ ಕಾರ್ಯದರ್ಶಿ, ಒಬ್ಬ ಸದಸ್ಯ (ಅಧಿಕೃತ) ಮತ್ತು ಇಬ್ಬರು ಸದಸ್ಯರು (ಅಧಿಕೃತವಲ್ಲದ). ಅಧಿಕೃತ ಸದಸ್ಯರು ಕೃಷಿ ಸಮುದಾಯದ ಪ್ರತಿನಿಧಿಗಳು ಮತ್ತು ಸಾಮಾನ್ಯವಾಗಿ ಕೃಷಿ ಸಮುದಾಯದೊಂದಿಗೆ ಸಕ್ರಿಯ ಸಂಬಂಧ ಹೊಂದಿದ್ದಾರೆ.

ಭಾರತ@75

5.

ಸುದ್ಧಿಯಲ್ಲಿ ಏಕಿದೆ ? ಎನ್ಐಟಿಐ ಆಯೋಗ 2022-23ರ ವೇಳೆಗೆ ಭಾರತಕ್ಕೆ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ತರಲು  ಹಲವಾರು ಸುಧಾರಣೆಗಳನ್ನು ಸೂಚಿಸುವ “ಸ್ಟ್ರಾಟಜಿ ಫಾರ್ ನ್ಯೂ ಇಂಡಿಯಾ@ 75  “ ಎಂಬ ತಂತ್ರದ ದಾಖಲೆಯನ್ನು ಅನಾವರಣ ಮಾಡಿದೆ.

 • ಭಾರತ ಆರ್ಥಿಕತೆಯು 4 ಟ್ರಿಲಿಯನ್ ಯುಎಸ್ಡಿ ಮಾರ್ಕ್ ತಲುಪಲು ವೇಗವನ್ನು ಪಡೆಯಲು ಹಲವಾರು ಆರ್ಥಿಕ ಸುಧಾರಣೆಗಳ ಬಗ್ಗೆ ಈ ಯೋಜನೆಯನ್ನುಮಾಡಿದೆ.
 • ಭಾರತದ ಸ್ವಾತಂತ್ರ್ಯಗೊಂಡು 75 ವರ್ಷ ತುಂಬವ ವೇಳೆ ಈ ಎಲ್ಲ ಯೋಜನೆಗಳು ಸಾಕಾರಗೊಳ್ಳಲಿವೆ.
 1. ರಾಷ್ಟ್ರದ ಪ್ರತಿಯೊಂದು ಕುಟುಂಬಕ್ಕೂ ಪಕ್ಕಾ ಗೃಹ ನಿರ್ಮಾಣ
 2. ಎಲ್ಲ ಮನೆಗಳಿಗೂ ನೀರಿನ ವ್ಯವಸ್ಥೆ
 3. ಎಲ್ಲ ಮನೆಗಳಲ್ಲೂ ಶೌಚಗೃಹ
 4. ಎಲ್ಲ ಮನೆಗಳಲ್ಲು 24*7 ವಿದ್ಯುತ್‌ ಸಂಪರ್ಕ 5. ನುರಿತ ಕಾರ್ಮಿಕರ ಪ್ರಮಾಣ 5.4% ರಿಂದ 15% ಹೆಚ್ಚಳ
 5. ಸಮುದ್ರ ಮತ್ತು ಒಳನಾಡಿನ ಜಲಮಾರ್ಗಗಳ ಸಾಗಣೆ ಸರಕುಗಳನ್ನು ದ್ವಿಗುಣಗೊಳಿಸುವುದು.
 6. ರಾಷ್ಟ್ರೀಯ ಹೆದ್ದಾರಿಗಳ ಉದ್ದವನ್ನು ದ್ವಿಗುಣಗೊಳಿಸುವುದು.
 7. ಭಾರತೀಯ ರೈಲ್ವೆಯನ್ನು ಸ್ವತಂತ್ರ ನಿಯಂತ್ರಕನನ್ನಾಗಿಸುವುದು.
 • ಇದೆಲ್ಲವೂ 2022 ಆಗಸ್ಟ್‌ 15ರ ಒಳಗೆ ಅಂದರೆ ಭಾರತ ಸ್ವಾತಂತ್ರ್ಯಗೊಂಡು 75 ವರ್ಷಗಳನ್ನು ಪೂರೈಸುವ ಸಂದರ್ಭದೊಳಗೆ ಅನುಷ್ಠಾನ ಗೊಳಿಸಲು ಕೇಂದ್ರ ಸರಕಾರ ಹಾಕಿಕೊಂಡಿರುವ ಯೋಜನೆಗಳು.
 • 2018-23ರ ನಡುವೆ ಸರಾಸರಿ 8% ಬೆಳವಣಿಗೆಯ ಗುರಿ ಹೊಂದಲಾಗಿದೆ. ಇದರಿಂದ ಪ್ರಸಕ್ತ 7 ಲಕ್ಷ ಕೋಟಿ ಡಾಲರ್‌ ಇರುವ ಭಾರತದ ಆರ್ಥಿಕತೆಯು 2022-23ಕ್ಕೆ 4 ಲಕ್ಷ ಕೋಟಿ ಡಾಲರ್‌ ಆಗಲಿದೆ.
 • ಎನ್ಐಟಿಐ ಆಯೋಗ್ ಪ್ರಕಾರ, ಡಾಕ್ಯುಮೆಂಟ್ನಲ್ಲಿ ಸೂಚಿಸಿದಂತೆ ಸುಧಾರಣೆಗಳು ಜಾರಿಗೊಳಿಸಿದಲ್ಲಿ, ಆರ್ಥಿಕತೆಯನ್ನು ಹೆಚ್ಚಿಸಲು, ಬಡತನವನ್ನು ಕಡಿಮೆಗೊಳಿಸುತ್ತದೆ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ.
Related Posts
“02 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹಂಪಿ ಉತ್ಸವ ಸುದ್ಧಿಯಲ್ಲಿ ಏಕಿದೆ ? ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವ ಹಂಪಿ ಉತ್ಸವವು ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದ್ದು, ಸಕಲ ಸಿದ್ಧತೆಯಾಗಿದೆ. ಮಾ.2ರಂದು ಕಲಾ ತಂಡಗಳಿಂದ ಶೋಭಾಯಾತ್ರೆ ಜರುಗಲಿದ್ದು, ಸಿಎಂ ಕುಮಾರಸ್ವಾಮಿ ಉತ್ಸವಕ್ಕೆ ಚಾಲನೆ ನೀಡುವರು. ವಿಶೇಷ ಆಹ್ವಾನಿತರಾಗಿ ನಟ ದರ್ಶನ್, ...
READ MORE
“17 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆರೋಗ್ಯ ಇಲಾಖೆಯ ವಾಟ್ಸ್‌ಆ್ಯಪ್‌ ಪ್ಲಾನ್‌ ಸುದ್ಧಿಯಲ್ಲಿ ಏಕಿದೆ ?ಮಗುವಿನ ಜನನಕ್ಕೆ ನೆರವಾಗುವ ಉದ್ದೇಶದಿಂದ 'ಸುರಕ್ಷಿತ ಗರ್ಭದಿಂದ ಸಂತಸದ ಕೈಗಳಿಗೆ' ಎಂಬ ಘೋಷ ವಾಕ್ಯದೊಂದಿಗೆ ವಿನೂತನ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ ಆಯೋಜಿಸಿದೆ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ವೈದ್ಯರು ಗರ್ಭಿಣಿಯರು ...
READ MORE
“31 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಡ್ಜ್​ಗಳ ಕೊರತೆ ಪಟ್ಟಿಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಸುದ್ಧಿಯಲ್ಲಿ ಏಕಿದೆ ? ನ್ಯಾಯಾಧೀಶರ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳು 2, 3ನೇ ಸ್ಥಾನದಲ್ಲಿವೆ. ಕರ್ನಾಟಕ 7ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 1,188 ಹುದ್ದೆಗಳು ...
READ MORE
“14 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಅತ್ಯಮೂಲ್ಯ ಖನಿಜ ಪೈರೋಕ್ಲಾಸ್ಟಿಕ್‌ ರಾಕ್ಸ್‌ ಪತ್ತೆ ಸುದ್ಧಿಯಲ್ಲಿ ಏಕಿದೆ ? ಭಾರತದಲ್ಲೇ ಅಪರೂಪವಾಗಿರುವ ಖನಿಜವೊಂದು ಕೋಲಾರ ಗೋಲ್ಡ್‌ ಫೀಲ್ಡ್‌ ಖ್ಯಾತಿಯ ಕೆಜಿಎಫ್‌ ಬಳಿ ಪತ್ತೆಯಾಗಿದ್ದು, ಭಾರತೀಯ ಭೂವಿಜ್ಞಾನ ಇಲಾಖೆಯು ಇದರ ಸಂರಕ್ಷಣೆಗೆ ಮುಂದಾಗಿದೆ. ಕೆಜಿಎಫ್‌ ಬಳಿಯ ಪೆದ್ದಪಲ್ಲಿ ಗ್ರಾಮದಲ್ಲಿ ಈ ಅಪರೂಪದ ಖನಿಜವಿದ್ದು, ಮೇಲ್ನೋಟಕ್ಕೆ ...
READ MORE
“24 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿಶ್ವ ತುಳು ಸಮ್ಮೇಳನ ಸುದ್ಧಿಯಲ್ಲಿ ಏಕಿದೆ ?ಕಡಲಾಯೆರೆದ ತುಳುವೆರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ತುಳು ಒಕ್ಕೂಟ ಸಹಕಾರದಲ್ಲಿ ದುಬೈಯ ಅಲ್ ನಾಸರ್ ಎರಡು ದಿನಗಳ ವಿಶ್ವ ತುಳು ಸಮ್ಮೇಳನ ಲೀಸರ್ ಲ್ಯಾಂಡ್ ಐಸ್‌ರಿಂಕ್ ಒಳಾಂಗಣ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಉದ್ಘಾಟನಾ ಸಮಾರಂಭ ...
READ MORE
“19 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಗಂಗಾ ಕಲ್ಯಾಣ  ಸುದ್ಧಿಯಲ್ಲಿ ಏಕಿದೆ ? ಪರಿಶಿಷ್ಟ ಜಾತಿ (ಎಸ್ಸಿ) ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಅಂಬೇಡ್ಕರ್ ನಿಗಮದ ಮೂಲಕ ಜಾರಿಗೆ ತಂದಿರುವ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಡುವ ಗಂಗಾ ಕಲ್ಯಾಣ ಯೋಜನೆ ಅನ್ನದಾತರ ಬದಲು ಅಧಿಕಾರಿಗಳು, ಬೋರ್​ವೆಲ್ ಏಜೆನ್ಸಿದಾರರ ಆರ್ಥಿಕ ಕಲ್ಯಾಣಕ್ಕೆ ದಾರಿ ...
READ MORE
“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಬಡವರ ಬಂಧು’ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮೀಟರ್‌ ಬಡ್ಡಿ ದಂಧೆ ನಡೆಸುವವರ ಕಪಿಮುಷ್ಠಿಯಿಂದ ಸಣ್ಣ ವ್ಯಾಪಾರಿಗಳನ್ನು ಪಾರುಮಾಡಿ, ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ಒದಗಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ 'ಬಡವರ ಬಂಧು' ಯೋಜನೆಗೆ ನ.22 ಚಾಲನೆ ಸಿಗಲಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 5 ...
READ MORE
“06 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಒನ್‌ ನೇಷನ್‌, ಒನ್‌ ಕಾರ್ಡ್‌: ಸುದ್ಧಿಯಲ್ಲಿ ಏಕಿದೆ ?ಒಂದು ದೇಶ ಒಂದು ಕಾರ್ಡ್‌(ಒನ್‌ ನೇಷನ್‌ ಒನ್‌ ಕಾರ್ಡ್‌) ಎಂದೇ ಹೇಳಲಾದ ರಾಷ್ಟ್ರೀಯ ಬಹುಪಯೋಗಿ ಕಾರ್ಡ್‌(ಎನ್‌ಸಿಎಂಸಿ) ಅನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ರುಪೇ ಕಾರ್ಡ್‌ ವ್ಯವಸ್ಥೆಯಲ್ಲಿ ಈ ಎನ್‌ಸಿಎಂಸಿ ಕಾರ್ಡ್‌ ಕಾರ್ಯ ನಿರ್ವಹಿಸುತ್ತದೆ. ...
READ MORE
“11 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸೋಷಿಯಲ್‌ ಮಿಡಿಯಾ ಬಳಕೆಗೆ ಕಠಿಣ ನಿರ್ಬಂಧ ಸುದ್ಧಿಯಲ್ಲಿ ಏಕಿದೆ ?ಮತದಾರರ ಮೇಲೆ ಸಾಮಾಜಿಕ ಜಾಲತಾಣಗಳು ಬೀರುವ ಪ್ರಭಾವ ಅರಿತು ಚುನಾವಣಾ ಆಯೋಗ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಷಿಯಲ್‌ ಮಿಡಿಯಾಗಳ ಬಳಕೆ ಕುರಿತು ಹಲವು ಕಠಿಣ ನಿರ್ಬಂಧಗಳನ್ನು ಹೇರಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ...
READ MORE
26th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಪ್ರಸಾದದ ಮೇಲೆ ಎಕ್ಸ್‌ಫೈರಿ ಡೇಟ್‌ ಕಡ್ಡಾಯ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ದೇವಸ್ಥಾನಗಳಲ್ಲಿ ಪ್ಯಾಕ್‌ ಮಾಡಿ ವಿತರಿಸುವ ಪ್ರಸಾದದ ಮೇಲೆ ತಯಾರಿಸಿದ ದಿನ ಹಾಗೂ ಎಷ್ಟು ದಿನಗಳವರೆಗೆ ಮಾತ್ರ ಸೇವಿಸಬಹುದು ಎಂಬ ಮಾಹಿತಿ ನಮೂದಿಸುವುದು ಕಡ್ಡಾಯವಾಗಲಿದೆ. ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದ ನಿಯಮ ...
READ MORE
“02 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“17 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“31 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“14 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“24 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“19 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“06 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“11 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
26th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು

Leave a Reply

Your email address will not be published. Required fields are marked *