“21 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆಗೆ ಯೋಜನೆ

1.

ಸುದ್ಧಿಯಲ್ಲಿ ಏಕಿದೆ ? ಪದೇಪದೆ ಕಾಡುವ ಚಂಡಮಾರುತ ಸುಳಿಯಿಂದ ಪಾರಾಗಲು ಕೇಂದ್ರ ಸರ್ಕಾರದ ನೇತೃತ್ವದಲ್ಲಿ, ಕರ್ನಾಟಕ ಸೇರಿದಂತೆ ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆ ಯೋಜನೆ ಕೈಗೊಳ್ಳಲಾಗುತ್ತಿದೆ.

 • ಕರ್ನಾಟಕದಲ್ಲಿ ಈ ಯೋಜನೆ ಶೇ.75-25 ಕೇಂದ್ರ-ರಾಜ್ಯ ಸಹಕಾರದಲ್ಲಿ ಒಟ್ಟು 128 ಕೋಟಿ ರೂ. ವೆಚ್ಚದಲ್ಲಿ ರೂಪಿಸಲಾಗಿದೆ.
 • ಇದು ವಿಶ್ವ ಬ್ಯಾಂಕ್ ನೆರವಿನ ಯೋಜನೆಯಾಗಿದ್ದು, ಹೆಚ್ಚಾಗಿ ಚಂಡಮಾರುತ ಎದುರಿಸುವ ಪೂರ್ವ ಕರಾವಳಿಗೆ ಹೆಚ್ಚಿನ ಮೊತ್ತ ಮೀಸಲಿಡಲಾಗಿದೆ.
 • 332 ಕಿ.ಮೀ. ಉದ್ದದ ಕರಾವಳಿ ಹೊಂದಿರುವ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಸೈಕ್ಲೋನ್ ಶೆಲ್ಟರ್ ನಿರ್ಮಾಣ, ಸೈಕ್ಲೋನ್ ಸೈರನ್ ಟವರ್ ರಚನೆ, ಯಾವುದೇ ಸಂಪರ್ಕ ವ್ಯವಸ್ಥೆ ಹದಗೆಟ್ಟರೆ ಬಳಕೆ ಮಾಡುವಂತಹ ಆಧುನಿಕ ಸ್ಯಾಟಲೈಟ್ ಫೋನ್, ಡಿಜಿಟಲ್ ರೇಡಿಯೊ ಸಹಿತ ಹಲವು ಅಂಶಗಳನ್ನು ಈ ಯೋಜನೆ ಒಳಗೊಂಡಿದೆ.

ಉದ್ದೇಶ

 • ಚಂಡಮಾರುತ ಬಂದಾಗ ಕರಾವಳಿಯ ಜನರನ್ನು ಯಾವ ರೀತಿ ಎಚ್ಚರಿಸುವುದು, ಕಾಪಾಡಿಕೊಳ್ಳುವುದು ಎಂಬುದು ಈ ಯೋಜನೆಯ ಉದ್ದೇಶ.

ಶಾಲೆಗಳೇ ಅಪ್‌ಗ್ರೇಡ್

 • ಸೈಕ್ಲೋನ್ ಶೆಲ್ಟರ್ ಆಗಿ ಹೊಸ ಕಟ್ಟಡ ರಚಿಸಿದರೆ ಅದು ದುರುಪಯೋಗ ಆಗುವ ಅಥವಾ ಉಪಯೋಗ ಶೂನ್ಯವಾಗುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಕೆಲವು ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದೆ.
 • ಈ ಶಾಲೆಗಳಲ್ಲಿ 1000 ಮಂದಿ ಉಳಿದುಕೊಳ್ಳುವ ಕಟ್ಟಡ ನಿರ್ಮಿಸಲಾಗುತ್ತಿದೆ. ಚಂಡಮಾರುತ ಬಂದರೆ ಜನರಿಗೆ ನೆರವಾಗುವ, ಇಲ್ಲದಿದ್ದರೆ ಶಾಲಾ ಉಪಯೋಗಕ್ಕೆ ಸಿಗುವಂತಹ ರೀತಿಯಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗುವುದು, ಕರ್ನಾಟಕ ಕರಾವಳಿಯಲ್ಲಿ ಒಟ್ಟು 11 ಕಡೆ ಸೈಕ್ಲೋನ್ ಶೆಲ್ಟರ್ ನಿರ್ಮಾಣ ಪ್ರಗತಿಯಲ್ಲಿದೆ
 • ಮಂಗಳೂರಿನಲ್ಲಿ ಉಳ್ಳಾಲದ ಒಂಭತ್ತುಕೆರೆ ಹಾಗೂ ಸುರತ್ಕಲ್ ಬಳಿಯ ಹೊಸಬೆಟ್ಟು ಎಂಬಲ್ಲಿ ಈ ಶೆಲ್ಟರ್ ನಿರ್ಮಾಣ ನಡೆಯಲಿದೆ.

ಪೂರ್ವ ಕರಾವಳಿಗೆ ಆದ್ಯತೆ

 • ಪಶ್ಚಿಮ ಕರಾವಳಿಯ ಕೇರಳ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಈ ಯೋಜನೆ ಬರಲಿದೆ. ಆದರೆ, ಚಂಡಮಾರುತಕ್ಕೆ ಹೆಚ್ಚು ಗುರಿಯಾಗುವ ಪೂರ್ವದ ರಾಜ್ಯಗಳಿಗೆ 1000 ಕೋಟಿ ರೂ. ಯೋಜನಾ ಮೊತ್ತ ಮೀಸಲಿಡಲಾಗಿದೆ.

ಸೈರನ್ ಟವರ್ಸ್

 • ಸೈಕ್ಲೋನ್ ಬಂದಾಗ ಪೂರ್ವದಲ್ಲೇ ಕಡಲ ತೀರದ ಜನರಿಗೆ, ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡುವಂತಹ ಸೈಕ್ಲೋನ್ ಸೈರನ್ ಟವರ್ಸ್ ನಿರ್ಮಾಣಗೊಳ್ಳುತ್ತಿದೆ.
 • ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಉಸ್ತುವಾರಿಯಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 13, ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ತಲಾ 6 ಮತ್ತು 7 ಸೇರಿದಂತೆ 26 ಸೈಕ್ಲೋನ್ ಸೈರನ್ ಟವರ್‌ಗಳು ನಿರ್ಮಾಣಗೊಳ್ಳಲಿವೆ.
 • ಇದರಲ್ಲಿ ಕನಿಷ್ಟ 12ರಿಂದ 24 ಗಂಟೆ ಮೊದಲೇ ಉಪಗ್ರಹ ನೆರವಿನಿಂದ ಸೈಕ್ಲೋನ್ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗುವುದು. 2 ಕಿ.ಮೀ ದೂರಕ್ಕೂ ಇದು ಕೇಳಲಿದೆ.
 • ಅಪಾಯ ಪ್ರದೇಶದ ಪರಿಧಿಯೊಳಗೆ ಬರುವ ಹೊರಗಿನವರ ಮೊಬೈಲ್‌ಗಳಿಗೂ ಮುನ್ಸೂಚನಾ ಸಂದೇಶಗಳು ಬರಲಿವೆ. ಆಯಾ ಜಿಲ್ಲಾಧಿಕಾರಿಗಳ ಕಂಟ್ರೋಲ್ ಸೆಂಟರ್‌ಗಳ ಮೂಲಕ ಸೈರನ್ ಕೇಂದ್ರಗಳನ್ನು ಬೆಸೆಯಲಾಗುವುದು.

ಕಾಯಕ ಸ್ಕೀಂ

ಸುದ್ಧಿಯಲ್ಲಿ ಏಕಿದೆ ? ಸ್ವ ಸಹಾಯ ಸಂಘಗಳಿಗೆ ಕಾಯಕ ಸ್ಕೀಂ ಮೂಲಕ ಶೇ.50ರಷ್ಟು ಬಡ್ಡಿ ರಹಿತ 10 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಒದಗಿಸುವ ಯೋಜನೆಗೆ ಡಿಸೆಂಬರ್‌ನಲ್ಲಿ ಆರಂಭಿಸಲಾಗುವುದು ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಬಂಡೆಪ್ಪ ಕಾಶಂಪೂರ್‌ ಹೇಳಿದರು.

 • ಸ್ವ ಸಹಾಯ ಸಂಘಗಳು ಮತ್ತು ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಶೇ.50ರಷ್ಟು ಬಡ್ಡಿ ರಹಿತ, ಉಳಿದ ಶೇ.50ರಷ್ಟು ಮೊತ್ತಕ್ಕೆ ಕೇವಲ ಶೇ.4ರಷ್ಟು ಬಡ್ಡಿಯೊಂದಿಗೆ 10 ಲಕ್ಷ ರೂ. ವರೆಗೆ ಸಾಲ ನೀಡಲಾಗುತ್ತದೆ.
 • ಮಹಿಳಾ ಸಬಲೀಕರಣ, ಉದ್ಯಮಶೀಲತೆ ಗುಣಮಟ್ಟ ಹೆಚ್ಚಳ, ಕೌಶಲ್ಯ ಅಭಿವೃದ್ಧಿಗಾಗಿ ಕಾಯಕ ಯೋಜನೆ ಜಾರಿ ತರಲಾಗಿದೆ.

ಲಾಂಗೆವಾಲಾ ಕದನ

3.

ಸುದ್ಧಿಯಲ್ಲಿ ಏಕಿದೆ ? 1971 ರಲ್ಲಿ ನಡೆದ ಲಾಂಗ್ವಾಲಾ ಯುದ್ಧದ ನಾಯಕನಾಗಿರುವ ಬ್ರಿಗೇಡಿಯರ್ ಕುಲ್ದಿಪ್ ಸಿಂಗ್ ಚಂದಪುರಿ (ನಿವೃತ್ತ) ಮೊಹಾಲಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ

 • ಕುಲದೀಪ್​ ಸಿಂಗ್​ ಚಂದ್​ಪುರಿ ಅವರು ಲಾಂಗೆವಾಲಾ ಕದನದ ಮೂಲಕ ಪ್ರಖ್ಯಾತರಾಗಿದ್ದರು.
 • 1971ರ ಡಿಸೆಂಬರ್​ 4ರ ರಾತ್ರಿ ರಾಜಸ್ಥಾನದ ಲಾಂಗೆವಾಲಾ ಗಡಿಯಲ್ಲಿ 40 ಟ್ಯಾಂಕ್​ಗಳೊಂದಿಗೆ ಬಂದಿದ್ದ 2,000 ಪಾಕಿಸ್ತಾನಿ ಸೈನಿಕರನ್ನು ಕುಲದೀಪ್​ ಸಿಂಗ್​ ನೇತೃತ್ವದ 100 ಕ್ಕೂ ಹೆಚ್ಚು ಭಾರತೀಯ ಸೈನಿಕರಿದ್ದ ಸಣ್ಣ ತುಕಡಿ ಮಣಿಸಿತ್ತು.
 • ಲಾಂಗೆವಾಲಾ ಕದನದಲ್ಲಿ ಇವರು ತೋರಿದ ಪರಾಕ್ರಮಕ್ಕೆ ಭಾರತ ಸರ್ಕಾರ ಮಹಾವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಿತ್ತು. ಲಾಂಗೆವಾಲಾ ಕದನದ ಸಮಯದಲ್ಲಿ ಮೇಜರ್​ ಆಗಿದ್ದ ಕುಲದೀಪ್​ ಸಿಂಗ್​ ಅವರು ಬ್ರಿಗೇಡಿಯರ್​ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು.
 • 1997ರಲ್ಲಿ ತೆರೆಕಂಡಿದ್ದ ಸೂಪರ್​ಹಿಟ್​ ಚಿತ್ರ ಬಾರ್ಡರ್​ ಚಿತ್ರಕ್ಕೆ ಸ್ಪೂರ್ತಿಯಾಗಿದ್ದರು

ಲಾಂಗ್ವಾಲಾ ಯುದ್ಧ

 • ಲಾಂಗ್ವಾಲಾ ಯುದ್ಧ (4-7 ಡಿಸೆಂಬರ್ 1971) 1971 ರ ಇಂಡೋ-ಪಾಕಿಸ್ತಾನಿ ಯುದ್ಧದ ಸಮಯದಲ್ಲಿ ಪಾಶ್ಚಿಮಾತ್ಯ ವಲಯದಲ್ಲಿ ನಡೆದ ಮೊದಲ ಪ್ರಮುಖ ಕದನಗಳಲ್ಲಿ ಒಂದಾಗಿತ್ತು, ಭಾರತದ ರಾಜಸ್ಥಾನ್ ರಾಜ್ಯದ ಮರುಭೂಮಿ ಥಾರ್ನಲ್ಲಿ ಲಾಂಗ್ವಾಲಾದ ಭಾರತೀಯ ಗಡಿ ಹುದ್ದೆಯಲ್ಲಿ ಪಾಕಿಸ್ತಾನಿ ಪಡೆಗಳು ಮತ್ತು ಭಾರತೀಯ ರಕ್ಷಕರಿಂದ ಹಲ್ಲೆ ನಡೆಸಿದವು.

ಯುದ್ಧ ನೌಕೆ ನಿರ್ಮಾಣಕ್ಕೆ ಒಪ್ಪಂದ

4.

ಸುದ್ಧಿಯಲ್ಲಿ ಏಕಿದೆ ? ಫಿರಂಗಿ ಸಜ್ಜಿತ ಎರಡು ಯುದ್ಧ ನೌಕೆಗಳನ್ನು ನಿರ್ವಿುಸಲು ರಷ್ಯಾ ಮತ್ತು ಭಾರತ ಒಪ್ಪಂದ ಮಾಡಿಕೊಂಡಿವೆ. 3,571 ಕೋಟಿ ರೂ. (500 ಮಿಲಿಯನ್ ಡಾಲರ್) ವೆಚ್ಚದ ಈ ನೌಕೆ ಗೋವಾದಲ್ಲಿ ನಿರ್ಮಾಣವಾಗಲಿದೆ.

 • ರಷ್ಯಾದ ಸರ್ಕಾರಿ ಸ್ವಾಮ್ಯದ ಶಸ್ತ್ರ ರಫ್ತುದಾರ ಸಂಸ್ಥೆ ರೋಸೊಬೊರೊನ್ ಎಕ್ಸ್​ಪೋರ್ಟ್ ಮತ್ತು ಗೋವಾದ ಶಿಪ್​ಯಾರ್ಡ್ ಲಿಮಿಟೆಡ್ (ಜಿಎಸ್​ಎಲ್) ಮಧ್ಯೆ ನವದೆಹಲಿಯಲ್ಲಿ ಈ ಒಡಂಬಡಿಕೆಯಾಗಿದೆ.
 • ಗ್ರಿಗೊರೋವಿಚ್-ಕ್ಲಾಸ್ ‘ಪ್ರಾಜೆಕ್ಟ್ 6’ ಹೆಸರಿನ ಈ ನೌಕೆ ನಿರ್ವಣಕ್ಕೆ ರೋಸೊಬೊರೊನ್ ಎಕ್ಸ್​ಪೋರ್ಟ್ ಸಂಸ್ಥೆ ತಾಂತ್ರಿಕ ನೆರವು ನೀಡಲಿದೆ.
 • 3,571 ಕೋಟಿ ರೂ. ವೆಚ್ಚದಲ್ಲಿ ನೌಕೆ ನಿರ್ಮಾಣಕ್ಕೆ ಬಳಸುವ ವಸ್ತುಗಳು, ವಿನ್ಯಾಸ, ರಷ್ಯಾದ ವಿಶೇಷ ನೆರವು ಒಳಗೊಂಡಿದೆ. ದೇಶಿಯ ಅಂಶಗಳಿಗೆ ಪ್ರತ್ಯೇಕ ತಗುಲಲಿದೆ.
 • ಮೊದಲ ನೌಕೆಯು 2026ಕ್ಕೆ ಮತ್ತು ಎರಡನೇ ನೌಕೆ 2027ಕ್ಕೆ ಸಿದ್ಧವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತ ನೌಕಾ ಪಡೆಯಲ್ಲಿ ಈಗ ಆರು ಇದೇ ಮಾದರಿಯ ನೌಕೆಗಳು ಇವೆ.

ಗ್ರಿಗೊರೋವಿಚ್-ಕ್ಲಾಸ್ ನೌಕೆ ವಿಶೇಷ

 • ಗ್ರಿಗೊರೋವಿಚ್-ಕ್ಲಾಸ್ ಸರಣಿಯ ಯುದ್ಧ ನೌಕೆಗಳಲ್ಲಿ ಅತ್ಯುತ್ತಮವಾದ ಶಸ್ತ್ರ ಮತ್ತು ಸೆನ್ಸಾರ್​ಗಳಿವೆ. ಈಗ ಹೊಸದಾಗಿ ನಿರ್ವಣವಾಗುವ ನೌಕೆಗಳಲ್ಲಿ ಈ ವ್ಯವಸ್ಥೆ ಮತ್ತಷ್ಟು ಸುಧಾರಣೆಯಾಗಲಿವೆ. ಹೊಸ ನೌಕೆಯಲ್ಲಿ ಉಕ್ರೇನ್ ನಿರ್ಮಾಣದ ಅನಿಲ ಟರ್ಬನ್ ಇಂಜಿನ್​ಗಳು ಇರಲಿವೆ.

2023ರಲ್ಲಿ ಭಾರತಕ್ಕೆ

 • 7,142 ಕೋಟಿ (1 ಬಿಲಿಯನ್ ಡಾಲರ್) ವೆಚ್ಚದ ಎರಡು ಸಮರ ನೌಕೆ ಪೂರೈಕೆಗೆ ಕೆಲವು ವಾರಗಳ ಹಿಂದೆ ಭಾರತ- ರಷ್ಯಾ ಒಪ್ಪಂದ ಮಾಡಿಕೊಂಡಿವೆ.
 • ನೌಕೆಗಳು ರಷ್ಯಾದ ಕ್ಯಾಲಿನಿಂಗ್ರಾಡ್ ಯಾಂತರ್ ಶಿಪ್​ಯಾರ್ಡ್​ನಲ್ಲಿ ನಿರ್ವಣವಾಗಲಿದ್ದು, 2022-23 ಹೊತ್ತಿಗೆ ಭಾರತದ ನೌಕಾಪಡೆಗೆ ಸೇರುವ ಸಾಧ್ಯತೆ ಇದೆ.

ಸೆಂಟಿನಲೀಸ್ ಬುಡಕಟ್ಟು ಜನರು

5.

ಸುದ್ಧಿಯಲ್ಲಿ ಏಕಿದೆ ? ಸಾಹಸಯಾತ್ರೆ ಕೈಗೊಂಡಿದ್ದ ಅಮೆರಿಕ ಪ್ರಜೆಯೊಬ್ಬ ಅಕ್ರಮವಾಗಿ ಅಂಡಮಾನ್ ದ್ವೀಪದೊಳಗೆ ಪ್ರವೇಶಿಸಿದ್ದು, ಸೆಂಟಿನಲೀಸ್ ಬುಡಕಟ್ಟು ಜನರು ಆತನನ್ನು ಕೊಂದು ಹಾಕಿದ್ದಾರೆ

 • ಅಂಡಮಾನ್ ದ್ವೀಪ ಸಮೂಹದ ಉತ್ತರ ಸೆಂಟಿನೆಲ್ ದ್ವೀಪದಲ್ಲಿ ಸೆಂಟಿನಲೀಸ್ ಜನರೇ ಅಲ್ಲಿನ ಮೂಲನಿವಾಸಿ ಬುಡಕಟ್ಟಿನವರಾಗಿದ್ದಾರೆ.
 • ಈ ಬುಡಕಟ್ಟು ಜನರು ಹೊರಜಗತ್ತಿನ ಜತೆ ಸಂಪರ್ಕವನ್ನೂ ಇಟ್ಟುಕೊಳ್ಳುವುದಿಲ್ಲ, ಹೊರಗಿನವರ ಜತೆ ಬೆರೆಯುವುದೂ ಇಲ್ಲ.

ಸಂಸ್ಕೃತಿ

 • ಸೆಂಟಿನೀಲೆಗಳು ಬೇಟೆಗಾರ, ಮೀನುಗಾರಿಕೆ, ಮತ್ತು ವನ್ಯ ಸಸ್ಯಗಳನ್ನು ಸಂಗ್ರಹಿಸುವುದು ಬೇಟೆಯಾಡುವ ಸಮಾಜವಾಗಿದ್ದು ಕೃಷಿ ಅಥವಾ ಬೆಂಕಿಯ ತಯಾರಿಕೆಗೆ ಯಾವುದೇ ಪುರಾವೆಗಳಿಲ್ಲ.
 • ಸೆಂಟಿನೇಲಿಸ್ ಭಾಷೆಯು ವರ್ಗೀಕರಿಸದ ಗ್ರಹಿಸಲು ಸಾಧ್ಯವಿಲ್ಲ ಭಾಷೆಯಾಗಿದೆ ಮತ್ತು ಅವರ ಹತ್ತಿರದ ನೆರೆಹೊರೆಯವರ ಜರಾವಾ ಭಾಷೆಯೊಂದಿಗೆ ಪರಸ್ಪರ ಮಾತನಾಡುತ್ತಾರೆ.
 • ಸೆಂಟಿನೇಲೆಗಳನ್ನು ಪರಿಶಿಷ್ಟ ಪಂಗಡವಾಗಿ ಗೊತ್ತುಪಡಿಸಲಾಗಿದೆ
Related Posts
20th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
'ಮೇಘಾಲಯನ್‌ ಯುಗ' ಸುದ್ಧಿಯಲ್ಲಿ ಏಕಿದೆ? ಇದೇನಿದುಮೇಘಾಲಯನ್‌ ಯುಗ ಎಂಬ ಅಚ್ಚರಿಯೇ? ಹೌದು, ನಾವೀಗ ಜೀವಿಸುತ್ತಿರುವುದು ಮೇಘಾಲಯನ್‌ ಯುಗದಲ್ಲಿ. ಮೇಘಾಲಯನ್‌ ಯುಗವು 4,200 ವರ್ಷಗಳ ಹಿಂದೆ ಆರಂಭಗೊಂಡಿದೆ. ಹೀಗೆಂದು ವಿಜ್ಞಾನಿಗಳೇ ಷರಾ ಬರೆದಿದ್ದಾರೆ. ಭೂವಿಜ್ಞಾನಿಗಳು ಸೃಷ್ಟಿಸಿರುವ ಭೂಮಿಯ ಭೂವೈಜ್ಞಾನಿಕ ಇತಿಹಾಸದ ಹೊಸ ಅಧ್ಯಾಯವೇ ಮೇಘಾಲಯನ್‌ ಯುಗ. ನಾವೀಗ ಹೊಲೊಸಿನ್‌ನಲ್ಲಿ ...
READ MORE
“24th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
‘ಶಾಲಾ -ಸಂಪರ್ಕ ಸೇತು’ ಯೋಜನೆ ಸುದ್ಧಿಯಲ್ಲಿ ಏಕಿದೆ ? ಮಲೆನಾಡು, ಕರಾವಳಿ ಭಾಗದ ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲಿ ವಾಸಿಸುವ ಜನರು ವಿಶೇಷವಾಗಿ ಶಾಲಾ ಮಕ್ಕಳು ಮಳೆಗಾಲದಲ್ಲಿ ಅಪಾಯಕಾರಿ ತೋಡು, ಹಳ್ಳ -ಕೊಳ್ಳ ದಾಟುವ ಪ್ರಯಾಸವನ್ನು ಶಾಶ್ವತವಾಗಿ ಪರಿಹರಿಸಲು 'ಶಾಲಾ -ಸಂಪರ್ಕ ಸೇತು' ಎಂಬ ...
READ MORE
“15th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಾವೇರಿ ನದಿ ನೀರು ಪ್ರಾಧಿಕಾರ ಸುದ್ದಿಯಲ್ಲಿ ಏಕಿದೆ? ಕಾವೇರಿ ಜಲವಿವಾದ ನ್ಯಾಯಾಧೀಕರಣ 2007ರ ತನ್ನ ಐತೀರ್ಪಿನಲ್ಲಿ ಹೇಳಿದ್ದ ನೀರು ನಿರ್ವಹಣಾ ಮಂಡಳಿಯ ತದ್ರೂಪದಂತಿರುವ 'ಕಾವೇರಿ ನೀರು ನಿರ್ವಹಣಾ ಯೋಜನೆ-2018'ರ ಕರಡನ್ನು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಸಲ್ಲಿಸಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಲು ...
READ MORE
ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 125ನೇ ಜಯಂತಿ ಅಂಗವಾಗಿ 2015–16ನೇ ಸಾಲಿನಲ್ಲಿ ಪರಿಶಿಷ್ಟರಿಗೆ ವಸತಿ ಒದಗಿಸಲು ಅಂಬೇಡ್ಕರ್‌ ನಿವಾಸ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯ ಅಡಿಯಲ್ಲೇ ಈ ಯೋಜನೆಗೆ ಅನುದಾನ ಹೊಂದಿಸಲಾಗುವುದು. ಗ್ರಾಮೀಣ ...
READ MORE
“15 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಂಪ್ರದಾಯಿಕ ಕುಶಲತೆ ಸಂರಕ್ಷಣೆಗೆ ಬದ್ಧ ಸುದ್ಧಿಯಲ್ಲಿ ಏಕಿದೆ ? ರಾಜ್ಯದ ಸಾಂಪ್ರದಾಯಿಕ ಕುಶಲತೆಯನ್ನು ಸಂರಕ್ಷಿಸಲು ಭೌಗೋಳಿಕ ಗುರುತುಗಳ ನೀತಿ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಎಫ್‌ಕೆಸಿಸಿ ಆಶ್ರಯದಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಮ್ಮಿಕೊಂಡಿದದ 'ಕರಡು ಭೌಗೋಳಿಕ ಗುರುತುಗಳ ನೀತಿ' ಕುರಿತಾದ ಪಾಲುದಾರರ ಸಮಾವೇಶವನ್ನು ಉದ್ಘಾಟಿಸಿದರು. 2018-19ನೇ ಸಾಲಿನ ...
READ MORE
“15th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಂಬಳ ಸುದ್ಧಿಯಲ್ಲಿ ಏಕಿದೆ ? ಕಂಬಳ ಹಾಗೂ ಇತರೆ ಗೂಳಿ ಮತ್ತು ಎತ್ತಿನ ಗಾಡಿ ಸ್ಪರ್ಧೆಗಳಿಗೆ ಅನುಮತಿ ನೀಡಿದ್ದ ರಾಜ್ಯ ವಿಧಾನ ಮಂಡಲ ಅಂಗೀಕರಿಸಿದ್ದ ಪ್ರಾಣಿ ಹಿಂಸೆ (ಕರ್ನಾಟಕ ತಿದ್ದುಪಡಿ) ತಡೆ ಕಾಯ್ದೆ - 2017ಕ್ಕೆ ಪೆಟಾ ಮತ್ತೆ ತಗಾದೆ ತೆಗೆದಿದೆ. ರಾಜ್ಯ ...
READ MORE
“24th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮೇಘಾಲಯದಿಂದ ಸಶಸ್ತ್ರ ಪಡೆ ಹೊರಗೆ ಕಳೆದ ನಾಲ್ಕು ವರ್ಷಗಳಲ್ಲಿ ದಂಗೆ ಪ್ರಕರಣಗಳು ಶೇ. 63 ಇಳಿಕೆಯಾದ ಕಾರಣ ಮೇಘಾಲಯದಿಂದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (ಎಎಫ್​ಎಸ್​ಪಿಎ)ಕೇಂದ್ರ ಗೃಹ ಸಚಿವಾಲಯ ಹಿಂಪಡೆದಿದೆ. 2017ರಲ್ಲಿ ಉಗ್ರರ ದಾಳಿಯಲ್ಲಿ ಭದ್ರತಾ ಪಡೆ ಸಿಬ್ಬಂದಿ ಹತ್ಯೆ ಪ್ರಮಾಣ ಶೇ. ...
READ MORE
“17th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಇ–ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಪರವಾನಗಿ ಅನಗತ್ಯ ಬ್ಯಾಟರಿ ಚಾಲಿತ ವಾಹನಗಳ (ಇ–ವಾಹನ) ಚಾರ್ಜಿಂಗ್ ಕೇಂದ್ರಗಳಿಗೆ ಪರವಾನಗಿ ಪಡೆಯುವ ಅವಶ್ಯಕತೆ ಇಲ್ಲ ಎಂದು ಇಂಧನ ಸಚಿವಾಲಯ ಹೇಳಿದೆ. ಈ ಕ್ರಮದಿಂದಾಗಿ ಇ–ವಾಹನಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ದೊರಕಲಿದೆ. ‘ವಿದ್ಯುಚ್ಛಕ್ತಿ ಕಾಯ್ದೆ ಅಡಿಯಲ್ಲಿ ವಿದ್ಯುತ್ ಪ್ರಸರಣ, ಸರಬರಾಜು, ...
READ MORE
“12th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸತ್ಯಾಗ್ರಹದಿಂದ ಸ್ವಚ್ಛಾಗ್ರಹ ಚಂಪಾರಣ್ ಸತ್ಯಾಗ್ರಹಕ್ಕೆ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರ ಹಮ್ಮಿಕೊಂಡಿದ್ದ 1 ವರ್ಷದ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವನ್ನು ಶ್ಲಾಘಿಸಿದರು. ರಾಜ್ಯ ಸರ್ಕಾರ ಸತ್ಯಾಗ್ರಹ ದಿಂದ ಸಚ್ಛಾಗ್ರಹದತ್ತ ತಿರುಗಿದೆ ...
READ MORE
“13 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹೆಸರಿನ ಜತೆ ಭಾರತರತ್ನ, ಪದ್ಮ ಪ್ರಶಸ್ತಿ ಬಳಸುವಂತಿಲ್ಲ! ಸುದ್ಧಿಯಲ್ಲಿ ಏಕಿದೆ ? ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳೆನಿಸಿರುವ ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗಳು ಗೌರವಗಳೇ ಹೊರತು ಬಿರುದುಗಳಲ್ಲ. ಹಾಗಾಗಿ ಹೆಸರಿನ ಜತೆ ಅವುಗಳನ್ನು ಬಳಸುವಂತಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಒಂದು ವೇಳೆ ...
READ MORE
20th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
“24th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“15th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಅಂಬೇಡ್ಕರ್‌ ನಿವಾಸ ಯೋಜನೆ
“15 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“15th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“24th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“17th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“12th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“13 ಫೆಬ್ರವರಿ 2019 ರ ಕನ್ನಡ ಪ್ರಚಲಿತ

Leave a Reply

Your email address will not be published. Required fields are marked *