“22 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಇಎಸ್​ಎ ಇಳಿಕೆಯಿಲ್ಲ

11.

ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಸೇರಿ ಪಶ್ಚಿಮಘಟ್ಟಗಳ ಸೂಕ್ಷ್ಮ ಪರಿಸರ ವಲಯ(ಇಎಸ್​ಎ)ದ ಪ್ರಮಾಣವನ್ನು ಇಳಿಕೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಹಿನ್ನಲೆ

 • ಕೇಂದ್ರ ಪರಿಸರ ಇಲಾಖೆಯು ಇತ್ತೀಚೆಗೆ ನಾಲ್ಕನೇ ಬಾರಿ ಕರಡು ಅಧಿಸೂಚನೆ ಹೊರಡಿಸಿತ್ತು. ಆ ಪ್ರಕಾರ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳ 56,825 ಚ.ಕಿ.ಮೀ ವ್ಯಾಪ್ತಿಯು ಸೂಕ್ಷ್ಮ ಪರಿಸರ ವಲಯಕ್ಕೆ ಸೇರಲಿದೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶದಂತೆ ಈ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಈ ಕರಡು ಪ್ರತಿಗೆ ಎಲ್ಲ ರಾಜ್ಯಗಳಿಂದ ಅಭಿಪ್ರಾಯಗಳನ್ನು ಕೂಡ ಕೇಳಲಾಗಿದೆ.
 • ಇನ್ನು ಈ ವಲಯದಲ್ಲಿ ಅಭಿವೃದ್ಧಿ ಚಟುವಟಿಕೆಗೆ ಸಂಬಂಧಿಸಿ ಎಲ್ಲ ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿ ಹೊರಡಿಸಲಾಗಿದೆ. ಪರಿಸರಕ್ಕೆ ಹಾನಿ ಮಾಡುವ ಐದು ಪ್ರಮುಖ ಕೈಗಾರಿಕೆಗಳ ನಿರ್ಬಂಧಕ್ಕೆ ಸೂಚಿಸಲಾಗಿದೆ. ಈ ಪ್ರಕಾರ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಶಾಖೋತ್ಪನ್ನ ವಿದ್ಯುತ್ ಘಟಕ, ಬೃಹತ್ ಕಟ್ಟಡ ಹಾಗೂ ಇತರ ಕಾಮಗಾರಿಗಳನ್ನು ನಿಷೇಧಿಸಲಾಗಿದೆ.

ಪರಿಸರ ಸೂಕ್ಷ್ಮ ವಲಯ

 • ಪರಿಸರ (ರಕ್ಷಣಾ) ಕಾಯಿದೆ 1986 (ಇಪಿಎ) ನ ಅಧಿನಿಯಮ 3 ಪ್ರಕಾರ ಕೇಂದ್ರ ಸರ್ಕಾರಕ್ಕೆ ಅಂದರೆ ಪರಿಸರ ಮತ್ತು ಅರಣ್ಯಗಳ ಸಚಿವಾಲಯವು ಪರಿಸರದ ಗುಣಮಟ್ಟವನ್ನು ರಕ್ಷಿಸಲು ಮತ್ತು ಸುಧಾರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಪರಿಸರ ಮಾಲಿನ್ಯ ನಿಯಂತ್ರಿಸಲು ಅಧಿಕಾರವನ್ನು ನೀಡುತ್ತದೆ .
 • ಈ ಉದ್ದೇಶವನ್ನು ಪೂರೈಸಲು, ಕೇಂದ್ರ ಸರ್ಕಾರವು ಯಾವುದೇ ಕೈಗಾರಿಕೆಗಳು, ಕಾರ್ಯಾಚರಣೆಗಳು ಅಥವಾ ಪ್ರಕ್ರಿಯೆಗಳು ಅಥವಾ ಕೈಗಾರಿಕೆಗಳ ವರ್ಗಗಳು, ಕಾರ್ಯಾಚರಣೆಗಳು ಅಥವಾ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗದ ಪ್ರದೇಶಗಳನ್ನು ನಿರ್ಬಂಧಿಸಬಹುದು ಅಥವಾ ಕೆಲವು ಸುರಕ್ಷತೆಗಳಿಗೆ ಒಳಪಡಿಸಬಹುದು .
 • ಇಎಸ್ಎಗಳನ್ನು ಪರಿಸರ ಮತ್ತು ಆರ್ಥಿಕವಾಗಿ ಮುಖ್ಯವಾದ ಪ್ರದೇಶಗಳು ಎಂದು ವ್ಯಾಖ್ಯಾನಿಸಲಾಗಿದೆ, ಆದರೆ ಅವುಗಳು ಸೌಮ್ಯ ತೊಂದರೆಗಳಿಗೆ ಕೂಡಾ ದುರ್ಬಲವಾಗುತ್ತವೆ, ಮತ್ತು ಇದರಿಂದಾಗಿ ಎಚ್ಚರಿಕೆಯ ನಿರ್ವಹಣೆ ಅವಶ್ಯಕವಾಗಿದೆ . ಆದ್ದರಿಂದ ‘ಪರಿಸರ ವಿಜ್ಞಾನ ಮತ್ತು ಆರ್ಥಿಕವಾಗಿ ಮುಖ್ಯ’ ಪ್ರದೇಶಗಳು ಜೈವಿಕವಾಗಿ ಮತ್ತು ಪರಿಸರವಿಜ್ಞಾನದ ‘ಶ್ರೀಮಂತ’, ‘ಮೌಲ್ಯಯುತ’ ಮತ್ತು ‘ವಿಶಿಷ್ಟ’, ಮತ್ತು ನಾಶವಾದರೆ ಹೆಚ್ಚಾಗಿ ಭರಿಸಲಾಗದ ಪ್ರದೇಶಗಳಾಗಿವೆ.

ಸದನದ ಬಾವಿಗಿಳಿದು ಪ್ರತಿಭಟಿಸಿದರೆ ಸಸ್ಪೆಂಡ್‌

12.

ಸುದ್ಧಿಯಲ್ಲಿ ಏಕಿದೆ?ಕಲಾಪದ ವೇಳೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವ ಅಥವಾ ಉದ್ದೇಶಪೂರ್ವಕವಾಗಿ ಕಲಾಪಕ್ಕೆ ಅಡ್ಡಿಪಡಿಸುವ ಸಂಸದರ ಸದಸ್ಯತ್ವವನ್ನು ರದ್ದುಪಡಿಸುವಂತೆ ಲೋಕಸಭೆಯ ನಿಯಮಗಳ ಸಮಿತಿಶಿಫಾರಸು ಮಾಡಿದೆ.

 • ಸ್ಪೀಕರ್‌ ಮನವಿಯನ್ನು ಧಿಕ್ಕರಿಸಿ ಬಾವಿಗಿಳಿದು ಪ್ರತಿಭಟನೆ ಮಾಡುವವರ ಅಥವಾ ಘೋಷಣೆಗಳನ್ನು ಕೂಗಿ ಗದ್ದಲ ಮಾಡುವವರ ಸದಸ್ಯತ್ವ ಸ್ವಯಂಚಾಲಿತವಾಗಿ ಅಮಾನತುಗೊಳ್ಳಬೇಕು. ಐದು ದಿನಗಳ ಕಲಾಪ ಅಥವಾ ಅಧಿವೇಶನದ ಉಳಿದ ಅವಧಿ ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ಕಾಲ ಅಮಾನತು ಚಾಲ್ತಿಯಲ್ಲಿರಬೇಕು ಎಂದು ಸಲಹೆ ಮಾಡಿದೆ.

ಪ್ರಸ್ತುತವಿರುವ ನಿಯಮವೇನು?

 • ಪ್ರಸ್ತುತ ಇರುವ ನಿಯಮದಡಿ, ಸದಸ್ಯರನ್ನು ಅಮಾನತುಗೊಳಿಸಬೇಕಾದರೆ, ಸ್ಪೀಕರ್‌ ಅವರು ಖುದ್ದಾಗಿ ಸಂಸದರ ಹೆಸರನ್ನು ಕೂಗಿ ಮೌಖಿಕವಾಗಿ ಅಮಾನತು ಆದೇಶ ಹೊರಡಿಸಬೇಕು. ಹೊಸ ನಿಯಮ ಜಾರಿಯಾದರೆ, ಇದು ಸ್ವಯಂಚಾಲಿತವಾಗಿ ನಡೆಯಲಿದೆ.

ನಿಯಮಗಳ ಸಮಿತಿ

 • ಸಂಸತ್ತಿನ ಪ್ರತಿ ಸಭೆಗಳು ನಿಯಮಗಳ ಸಮಿತಿಯನ್ನು ಹೊಂದಿದ್ದು, ಅದು ಆ ಮನೆಯ ವ್ಯವಹಾರದ ಕಾರ್ಯವಿಧಾನ ಮತ್ತು ಕಾರ್ಯವಿಧಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಗಣಿಸುತ್ತದೆ ಮತ್ತು ನಿಯಮಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಸೂಚಿಸುತ್ತದೆ. ಲೋಕಸಭಾ ಸಮಿತಿ 15 ಸದಸ್ಯರನ್ನು ಹೊಂದಿದೆ ಮತ್ತು ಸ್ಪೀಕರ್ ಅದರ ಅಧ್ಯಕ್ಷರಾಗಿದ್ದಾರೆ. ರಾಜ್ಯಸಭಾ ಸಮಿತಿಗೆ 16 ಸದಸ್ಯರು ಮತ್ತು ಉಪಾಧ್ಯಕ್ಷರು ಅದರ  ಅಧ್ಯಕ್ಷರಾಗಿದ್ದಾರೆ

ಲೈಟ್‌ ಫೀಷರಿಂಗ್‌

13.

ಸುದ್ಧಿಯಲ್ಲಿ ಏಕಿದೆ?ಕರ್ನಾಟಕ ಒಳಗೊಂಡಂತೆ ಕರಾವಳಿಯ ವಿಶೇಷ ಆರ್ಥಿಕ ವಲಯ (ಇಇಝಡ್‌)ದಲ್ಲಿ ಬೆಳಕು ಮೀನುಗಾರಿಕೆ ಅಥವಾ ಪೇರ್‌ ಟ್ರಾಲಿಂಗ್‌ ಅನ್ನು ನಿಷೇಧಿಸಿ ಕೇಂದ್ರ ಸರಕಾರ 2017ರ ನ.10ರಂದು ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ.

 • ಎಲ್‌ಇಡಿ, ಹಾಲೋಜನ್‌ ಮತ್ತಿತರ ಬೆಳಕು ಬಳಸಿ ಸಮುದ್ರದ ಆಳದಲ್ಲಿ ಯಾಂತ್ರೀಕೃತ ದೋಣಿಗಳ ಮೂಲಕ ಮೀನುಗಾರಿಕೆ ನಡೆಸಲಾಗುತ್ತಿದೆ.
 • ಇದರಿಂದ ಅಪರೂಪದ ಮೀನು ಹಾಗೂ ಮೀನು ಮರಿಗಳನ್ನೂ ಹಿಡಿಯಲಾಗುತ್ತಿತ್ತು.ಇದು ಮೀನುಗಳ ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಅದನ್ನು ಮನಗಂಡು ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿದೆ

ಹಿನ್ನಲೆ

 • ಕರ್ನಾಟಕ, ಕೇರಳ, ಗೋವಾ ಮತ್ತು ಮಹಾರಾಷ್ಟ್ರ ಒಳಗೊಂಡ ವಿಶೇಷ ವಿತ್ತ ವಲಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಲ್‌ಇಡಿ ಮತ್ತಿತರ ಬೆಳಕು ಬಳಸಿ ಸಮುದ್ರದಾಳದಲ್ಲಿ ಮೀನುಗಾರಿಕೆ ನಡೆಸಲಾಗುತ್ತಿತ್ತು. ಅದು ಮೀನು ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದನ್ನು ಮನಗಂಡು ಕೇಂದ್ರ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ 2017ರಲ್ಲಿ ಬೆಳಕು ಮೀನುಗಾರಿಕೆಯನ್ನು ನಿಷೇಧಿಸಿತ್ತು.

ರಾಷ್ಟ್ರೀಯ ಗಣಿತ ದಿನ

14.

ಸುದ್ಧಿಯಲ್ಲಿ ಏಕಿದೆ ?ಡಿಸೆಂಬರ್ 22, ಈ ದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ.

 • ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್‌ ಅವರ ಜನ್ಮ ವಾರ್ಷಿಕೋತ್ಸವವನ್ನು ದೇಶಾದ್ಯಂತ ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ.
 • ತಮಿಳುನಾಡಿನ ಈರೋಡ್‌ನಲ್ಲಿ ಡಿಸೆಂಬರ್ 22,1887ರಲ್ಲಿ ಜನಿಸಿರುವ ರಾಮಾನುಜನ್‌ಗೆ ಗಣಿತ ವಿಷಯದೊಂದಿಗೆ ಇದ್ದ ಒಲವು, ಅಪಾರ ಜ್ಞಾನದಿಂದಾಗಿ ಪ್ರತಿ ವರ್ಷ ಡಿ. 22ರಂದು ಭಾರತದಲ್ಲಿ ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ.
 • ಬಾಲ್ಯದಿಂದಲೂ ರಾಮಾನುಜನ್‌ಗೆ ಗಣಿತ ವಿಷಯದ ಬಗ್ಗೆ ಅಪಾರ ಉತ್ಸಾಹ ಇತ್ತು. ಅದು ಎಷ್ಟರಮಟ್ಟಿಗೆ ಎಂದರೆ, 12 ನೇ ವಯಸ್ಸಿನಲ್ಲೇ ಟ್ರಿಗನಾಮೆಟ್ರಿ ( ತ್ರಿಕೋನಮಿತಿ)ಯಲ್ಲಿ ಅವರು ನಿಪುಣನಾಗಿದ್ದು, ಯಾರ ಸಹಾಯವೂ ಇಲ್ಲದೆ ಅನೇಕ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸಿದ್ದರು
 • 1917ರಲ್ಲಿ ಲಂಡನ್ ಗಣಿತ ಸಮಾಜದ ಸದಸ್ಯರಾಗಿಯೂ ಶ್ರೀನಿವಾಸ ರಾಮಾನುಜನ್‌ ನೇಮಕವಾಗುತ್ತಾರೆ. ಜತೆಗೆ, 1918ರಲ್ಲಿ ರಾಯಲ್‌ ಸೊಸೈಟಿಯ ಫೆಲೋ ಗೌರವವನ್ನೂ ಅವರು ಪಡೆದುಕೊಳ್ಳುತ್ತಾರೆ. ಜತೆಗೆ, ಈ ಗೌರವ ಪಡೆದುಕೊಂಡ ಅತಿ ಕಿರಿಯ ವ್ಯಕ್ತಿ ಎಂಬ ಹಿರಿಮೆಗೂ ಗಣಿತಶಾಸ್ತ್ರಜ್ಞ ರಾಮಾನುಜನ್‌ ಪಾತ್ರರಾಗುತ್ತಾರೆ.

ಸಿನಿಮಾ ಕೂಡ ಬಂದಿದೆ

 • ಅನಂತ ಸಿದ್ಧಾಂತದ ಪ್ರವರ್ತಕ ರಾಮಾನುಜನ್ ಮೇಲೆ ‘ದಿ ಮ್ಯಾನ್ ಹೂ ನ್ಯೂ ಇನ್​ಫಿನಿಟಿ’ ಎನ್ನುವ ಸಿನಿಮಾ ಕೂಡ ಬಂದಿದೆ. ಇದು 2015ರಲ್ಲಿ ಬಿಡುಗಡೆಯಾಗಿದ್ದು, ರಾಬರ್ಟ್ ಕನಿಗಲ್ ಬರೆದ ಕೃತಿಯನ್ನು ಆಧರಿಸಿದ ಚಿತ್ರವಾಗಿದೆ, ರಾಮಾನುಜನ್ 26 ವರ್ಷಕ್ಕೇ ಜಗತ್ ಪ್ರಸಿದ್ಧಯಾದ ಮೇಧಾವಿಯಾಗಿದ್ದರು.

ಭಾರತಕ್ಕೆ ಚೀನಾ ಕಾರಿಡಾರ್ ಆತಂಕ

15.

ಸುದ್ಧಿಯಲ್ಲಿ ಏಕಿದೆ ?ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಯನ್ನು ಉಭಯ ದೇಶಗಳು ಮಿಲಿಟರಿ ಮೂಲಸೌಕರ್ಯ ನಿರ್ವಣಕ್ಕೆ ಬಳಸಿಕೊಳ್ಳಲು ನಿರ್ಧರಿಸಿರುವುದು ಭಾರತಕ್ಕೆ ಭಾರಿ ಭದ್ರತಾ ಆತಂಕ ತಂದೊಡ್ಡಿದೆ.

 • ಕಾರಿಡಾರ್ ಪ್ರದೇಶದಲ್ಲಿ ಮಿಲಿಟರಿ ಯುದ್ಧವಿಮಾನ, ಶಸ್ತ್ರಾಸ್ತ್ರ ತಯಾರಿಕೆಗೆ ಪಾಕಿಸ್ತಾನ ಹಾಗೂ ಚೀನಾ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿವೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕ್, ಚೀನಾದ ಒತ್ತಡಕ್ಕೆ ಮಣಿದು ಎಲ್ಲ ರೀತಿಯ ಸಹಕಾರ ನೀಡಲು ಮುಂದಾಗಿದೆ. ಆರ್ಥಿಕ ಕಾರಿಡಾರ್ ಕಾಶ್ಮೀರ ಮೂಲಕ ಹಾದು ಹೋಗುತ್ತದೆ. ಇಲ್ಲಿ ಭದ್ರತಾ ಸಾಮಗ್ರಿ ಉತ್ಪಾದನೆ, ಚೀನಾದ ಚಟುವಟಿಕೆ ಭಾರತಕ್ಕೆ ಆತಂಕ ತಂದಿದೆ.

ಪಾಕ್ ನಡೆಗೆ ಕಾರಣವೇನು?

 • ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಬಳಿಕ ಪಾಕಿಸ್ತಾನಕ್ಕೆ ನೀಡುತ್ತಿರುವ ಮಿಲಿಟರಿ ನೆರವನ್ನು ಕಡಿತ ಮಾಡುತ್ತಿದ್ದಾರೆ. ಭಯೋತ್ಪಾದಕರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ಹೇರುವುದು ಇದರ ಉದ್ದೇಶ.
 • ಆದರೆ ಚೀನಾ ಇದಕ್ಕೆ ಅಡ್ಡಗಾಲಾಗಿದೆ. ಪಾಕಿಸ್ತಾನಕ್ಕೆ ಬೇಕಾದ ಆರ್ಥಿಕ ನೆರವನ್ನು ನೀಡಿ ಕೊರತೆ ನಿವಾರಿಸಿದೆ. ಅಮೆರಿಕ ಮಿಲಿಟರಿ ಧನಸಹಾಯ ಸ್ಥಗಿತಗೊಳಿಸಿದ ಎರಡು ವಾರಗಳ ಬಳಿಕ, ಮಿಲಿಟರಿ ಜೆಟ್​ಗಳು ಹಾಗೂ ಶಸ್ತ್ರಾಸ್ತ್ರ ಮತ್ತಿತರ ಉಪಕರಣಗಳ ತಯಾರಿಕೆಗೆ ಪಾಕಿಸ್ತಾನ ಹಾಗೂ ಚೀನಾ ಒಪ್ಪಂದ ಮಾಡಿಕೊಂಡಿವೆ.
 • ಸಿಪಿಇಸಿ ಯೋಜನೆ ಮೂಲಕ ಚೀನಾದ ಬೀಡೌ ಉಪಗ್ರಹ ದಿಕ್ಸೂಚಿ ಸೌಲಭ್ಯ ಬಳಸಿಕೊಳ್ಳಲು ಪಾಕ್​ಗೆ ಚೀನಾ ಅವಕಾಶ ಮಾಡಿಕೊಡಲಿದೆ. ಮಿಲಿಟರಿ ಉದ್ದೇಶದ ಉಪಗ್ರಹಗಳ ಸೇವೆ ಪಡೆದುಕೊಳ್ಳಲು ಪಾಕ್​ಗೆ ಚೀನಾ ಅನುಮತಿ ನೀಡಿದೆ.

ಒನ್ ಬೆಲ್ಟ್ ಯೋಜನೆಗೆ ಗಾಳ

 • ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಇತರ ರಾಷ್ಟ್ರಗಳನ್ನು ಆಕರ್ಷಿಸಲು ಚೀನಾ ಯತ್ನಿಸುತ್ತಿದೆ. ಈ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಹಲವು ರಾಷ್ಟ್ರಗಳು ಈಗ ಜಿಪಿಎಸ್ ವ್ಯವಸ್ಥೆಗಾಗಿ ಅಮೆರಿಕವನ್ನು ಅವಲಂಬಿಸಿವೆ. ಅಮೆರಿಕ ವಿವಿಧ ರಾಷ್ಟ್ರಗಳ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಚೀನಾ ಪ್ರಚಾರ ಮಾಡುತ್ತಿದೆ. ಈ ಯೋಜನೆಗೆ ಒಪ್ಪಿಕೊಂಡರೆ, ಸುರಕ್ಷಿತವಾದ ಜಿಪಿಎಸ್ ಸೌಲಭ್ಯ ಕಲ್ಪಿಸಿಕೊಡುವುದಾಗಿ ಚೀನಾ ಹೇಳುತ್ತಿದೆ.

ಆಯಕಟ್ಟಿನ ಜಾಗದಲ್ಲಿ ಬಂದರು

 • ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಮಲೇಷ್ಯಾಗಳಲ್ಲಿ ಚೀನಾ ಬಂದರುಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಮಿಲಿಟರಿ ಉದ್ದೇಶಕ್ಕೆ ಇದನ್ನು ಬಳಸಿಕೊಳ್ಳುವುದಿಲ್ಲ ಎಂದು ಚೀನಾ ಭರವಸೆ ನೀಡುತ್ತದೆ. ಆದರೆ, ಆ ರಾಷ್ಟ್ರ ಸಾಲದ ಸುಳಿಗೆ ಸಿಲುಕಿಕೊಂಡ ಬಳಿಕ, ಬಂದರನ್ನು ಮಿಲಿಟರಿ ಉದ್ದೇಶಗಳಿಗೆ ಬಳಸಿಕೊಳ್ಳಲು ಮುಂದಾಗುತ್ತದೆ. ಇದಕ್ಕೆ ಶ್ರೀಲಂಕಾದ ಹಂಬನ್​ತೋಟಾ ಬಂದರು ಉದಾಹರಣೆ. ಈ ಬಂದರನ್ನು ಚೀನಾ ಅಭಿವೃದ್ಧಿಪಡಿಸಿತ್ತು. ಆದರೆ, ಚೀನಾದಿಂದ ಪಡೆದ ಸಾಲವನ್ನು ತೀರಿಸಲಾಗದ ಶ್ರೀಲಂಕಾ ಸರ್ಕಾರ ಇದೀಗ ಈ ಬಂದರನ್ನು 99 ವರ್ಷಚೀನಾಕ್ಕೆ ಗುತ್ತಿಗೆ ನೀಡಿದೆ.
 • ಪಾಕಿಸ್ತಾನದ ಗ್ವಾದರ್ ಬಂದರು 2015ರವರೆಗೆ ಅಭಿವೃದ್ಧಿ ಕಾಣದೆ, ನಲುಗುತ್ತಿತ್ತು. ಆದರೆ, ಪಾಕ್ ಸಹಕಾರದಲ್ಲಿ ಚೀನಾ ಸಿಪಿಇಸಿ ಯೋಜನೆ ಅನುಷ್ಠಾನಗೊಳಿಸಲು ಈ ಬಂದರನ್ನು ಆಯ್ಕೆ ಮಾಡಿಕೊಂಡಿತು. ಅಂದಾಜು 800 ದಶಲಕ್ಷ ಡಾಲರ್ ಹೂಡಿಕೆ ಮಾಡಿ, ಈ ಬಂದರಿನ ಬಳಿ ಚೀನಿ ಕಂಪನಿಗಳಿಗಾಗಿ ವಿಶೇಷ ಆರ್ಥಿಕ ವಲಯವನ್ನು (ಎಸ್​ಇಜೆಡ್) ಸ್ಥಾಪಿಸಿಕೊಂಡಿತು. ಸರಕುಗಳನ್ನು ತ್ವರಿತವಾಗಿ ಸಾಗಿಸಲು ಚೀನಾಕ್ಕೆ ಅನುಕೂಲವಾಗಿದೆ.
 • ಭಾರತ ಜತೆಗೆ ಯುದ್ಧ ನಡೆದರೆ ದಾಳಿ ಮಾಡಲು ಚೀನಾಕ್ಕೆ ಅನುಕೂಲವಾಗಿದೆ. ಈ ಬಂದರನ್ನು ಅಭಿವೃದ್ಧಿಪಡಿಸಿದ್ದರಿಂದ ಹಿಂದು ಮಹಾಸಾಗರ ಮೂಲಕ ಸರಕು ಸಾಗಣೆಗೆ ತಗಲುತ್ತಿದ್ದ ವೆಚ್ಚವೂ ಕಡಿಮೆಯಾಗಿದೆ.

ವೇಗವಾಗಿ ಕ್ಷೀಣಿಸುತ್ತಿವೆ ಶನಿಯ ಮಂಜಿನ ಉಂಗುರಗಳು!

16.

ಸುದ್ಧಿಯಲ್ಲಿ ಏಕಿದೆ ?ಶನಿ ಗ್ರಹದ ಸುತ್ತಲಿರುವ ಮಂಜಿನ ಉಂಗುರಗಳು ವೇಗವಾಗಿ ಕ್ಷೀಣಿಸುತ್ತಿವೆ. ಒಂದು ಸೆಕೆಂಡಿಗೆ ಬರೋಬ್ಬರಿ 1,814 ಕೆಜಿ ಮಂಜು ಶನಿ ಗ್ರಹದ ಮೇಲ್ಮೈನಿಂದ ಬಿದ್ದು ಹೋಗುತ್ತಿದೆಯಂತೆ.

 • ಶನಿಯ ಎದ್ದು ಕಾಣುವಂಥ ಉಂಗುರ ವ್ಯವಸ್ಥೆಯು ಮುಖ್ಯವಾಗಿ ಮಂಜಿನ ಪುಡಿಯಿಂದ ರಚಿತಗೊಂಡಿವೆ. ಉಂಗುರಗಳಲ್ಲಿ ಸ್ವಲ್ಪ ಕಲ್ಲಿನ ಚೂರುಗಳು ಮತ್ತು ಧೂಳು ಮಿಶ್ರಗೊಂಡಿವೆ.
 • ಅನಿಲ ರೂಪಿ ಶನಿಯ ಅದ್ಭುತ ಉಂಗುರಗಳನ್ನು ಅತ್ಯಂತ ವೇಗವಾಗಿ ಕ್ಷೀಣಿಸುತ್ತಿವೆ. ಮುಂದಿನ 10 ಕೋಟಿ ವರ್ಷಗಳಲ್ಲಿ ಈ ಉಂಗುರಗಳು ಕಣ್ಮರೆಯಾಗುತ್ತವೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.
 • ಉಂಗುರದಂತಿರುವ ಪದರದಲ್ಲಿರುವ ಕಲ್ಲುಗಳು ಮತ್ತು ಧೂಳಿನ ಸ್ಥಿರತೆಗೆ ತೊಂದರೆಯುಂಟಾಗುತ್ತಿದೆ. ಮಂಜಿನ ಅಂಶವೂ ಶನಿ ಗ್ರಹದ ಗುರುತ್ವದಿಂದ ದೂರವಾಗುತ್ತಿದೆ. ಈ ಕಾರಣಗಳಿಂದ ಸುತ್ತಲಿನ ಉಂಗುರಗಳು ಕ್ಷೀಣಿಸುತ್ತಿವೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ಇದನ್ನು ‘ರಿಂಗ್‌ ರೈನ್‌(Ring Rain)’ ಎಂದು ಗುರುತಿಸಲಾಗಿದೆ.
 • 1980ರಲ್ಲಿ ಫ್ಲೈಬಿ ಉಪಗ್ರಹ ಮೊದಲ ಬಾರಿಗೆ ಶನಿಯ ಚಿತ್ರಗಳನ್ನು ತೆಗೆದಿತ್ತು. ಇತ್ತೀಚೆಗೆ ಶನಿ ಗ್ರಹದ ಮಂಜಿನ ಉಂಗುರಗಳು ವೇಗವಾಗಿ ಕ್ಷೀಣಿಸುತ್ತಿರುವ ಬಗ್ಗೆ ಕೆಸಿನಿ ಮಿಷನ್‌ ದೃಢ ಪಡಿಸಿದೆ.
 • ಹವಾಯಿಯಲ್ಲಿರುವ ಕೆಕ್‌ ಟೆಲಿಸ್ಕೋಪ್‌ನಿಂದ ವಿಜ್ಞಾನಿಗಳು ಗಮನಿಸಿದ್ದಾರೆ.
 • ಇದೇ ರೀತಿ ಮಂಜಿನ ಪತನ ಮುಂದುವರಿದರೆ 10 ಕೋಟಿ ವರ್ಷಗಳಲ್ಲಿ ಉಂಗುರಗಳು ಸಂಪೂರ್ಣ ಕಣ್ಮರೆಯಾಗಲಿವೆ ಎಂದು ನಾಸಾ ತಿಳಿಸಿದೆ.
 • ಗ್ರಹಗಳ ಸುತ್ತಲಿನ ಉಂಗುರಗಳು ತಾತ್ಕಾಲಿಕ. ಗುರು, ಯುರೇನಸ್‌ ಮತ್ತು ನೆಪ್ಚೂನ್‌ ಗ್ರಹಗಳ ಸುತ್ತಲಿದ್ದ ಉಂಗುರಗಳನ್ನು ವೀಕ್ಷಿಸಲು ನಮಗೆ ಸಾಧ್ಯವಾಗಿಲ್ಲ. ಪ್ರಸ್ತುತ ಈ ಗ್ರಹಗಳ ಸುತ್ತ ಸೂಕ್ಷ ಪದರವಷ್ಟೇ ಇದೆ.

ಕ್ಯಾಸ್ಸಿನಿ ಮಿಷನ್

 • ಶನಿಗ್ರಹವನ್ನು ಮತ್ತು ಅದರ ಉಂಗುರಗಳು ಮತ್ತು ನೈಸರ್ಗಿಕ ಉಪಗ್ರಹಗಳನ್ನು ಒಳಗೊಂಡಂತೆ ಆ ಗ್ರಹವನ್ನು ಅಧ್ಯಯನ ಮಾಡಲು ತನಿಖೆ ನಡೆಸಲು ಕಾಸ್ಸಿನಿ-ಹ್ಯುಜೆನ್ಸ್ ಮಿಷನ್ ಕಾಸ್ಸಿನಿ ಎಂದು ಕರೆಯಲ್ಪಡುವ ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಮತ್ತು ಇಟಾಲಿಯನ್ ಸ್ಪೇಸ್ ಏಜೆನ್ಸಿ (ASI) ನಡುವಿನ ಸಹಯೋಗವಾಗಿತ್ತು.
 • ಇದನ್ನು ಅಕ್ಟೋಬರ್ 1997 ರಲ್ಲಿ ಪ್ರಾರಂಭಿಸಲಾಯಿತು. ಸ್ಯಾಟರ್ನ್ ಅನ್ನು ಅನ್ವೇಷಿಸಲು ಕ್ಯಾಸಿನಿ ಮಿಷನ್ ಸೆಪ್ಟೆಂಬರ್ 15, 2017 ರಂದು ಶನಿಯ ವಾತಾವರಣಕ್ಕೆ ಒಂದು ಉದ್ದೇಶಪೂರ್ವಕ ಧುಮುಕುಕೊಡೆಯೊಂದಿಗೆ ಕೊನೆಗೊಂಡಿತು.
 • ಕ್ಯಾಸ್ನಿನಿ ಶನಿಗೆ ಭೇಟಿ ನೀಡುವ ನಾಲ್ಕನೇ ಬಾಹ್ಯಾಕಾಶ ತನಿಖೆ ಮತ್ತು ಅದರ ಕಕ್ಷೆಯನ್ನು ಪ್ರವೇಶಿಸಲು ಮೊದಲು.
Related Posts
“15 ಏಪ್ರಿಲ್ 2019 ಕನ್ನಡದ ಪ್ರಚಲಿತ ವಿದ್ಯಮಾನಗಳು”
ಚುನಾವಣೆ ಕ್ಷಿಪ್ರ ಪಡೆಗಳ ಸಮನ್ವಯಕ್ಕೆ ವಿಶೇಷಾಧಿಕಾರಿ ನೇಮಕ ಸುದ್ಧಿಯಲ್ಲಿ ಏಕಿದೆ? ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಿರ ಕಣ್ಗಾವಲು ತಂಡದ (ಎಸ್‌ಎಸ್‌ಟಿ) ಕ್ಷಿಪ್ರ ಕಾರ್ಯ ಪಡೆ (ಫ್ಲೈಯಿಂಗ್ ಸ್ಕ್ವಾಡ್‌)ಯ ಚಟುವಟಿಕೆಗಳ ಉಸ್ತುವಾರಿಗಾಗಿ ಬಿಬಿಎಂಪಿ ವಿಶೇಷಾಧಿಕಾರಿಯನ್ನು ನೇಮಿಸಿದೆ. ವಿಶೇಷ ಅಧಿಕಾರಿ (ಜಾರಿ) ಯಾಗಿ ಸರ್ವೇ, ಸೆಟಲ್‌ಮೆಂಟ್‌ ಮತ್ತು ...
READ MORE
“26 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಬಡವರ ಬಂಧು’ ನಿಯಮಾವಳಿ ಸಡಿಲ ಸುದ್ಧಿಯಲ್ಲಿ ಏಕಿದೆ ?ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ 'ಬಡವರ ಬಂಧು' ಯೋಜನೆ ಅನುಷ್ಠಾನದಲ್ಲಿ ತೊಡಕಾಗಿದ್ದ ಕೆಲ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಯಾವ ನಿಯಮವನ್ನು ಸಡಿಲಿಸಲಾಗಿದೆ ? 'ಯೋಜನೆಯಡಿ ಫಲಾನುಭವಿಗಳ ಆಯ್ಕೆಗೆ ಸ್ಥಳೀಯ ಸಂಸ್ಥೆಗಳ ಗುರುತಿನ ಚೀಟಿ ಹಾಗೂ ರೇಷನ್‌ ಕಾರ್ಡ್‌ ದಾಖಲೆಯಾಗಿ ...
READ MORE
“04 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸೇನೆಗೆ ಮಣಿಪಾಲದ ಬೈನಾಕ್ಯೂಲರ್ ಸುದ್ಧಿಯಲ್ಲಿ ಏಕಿದೆ ?ದೇಶದಲ್ಲಿ ಶತಮಾನದ ಹಿಂದಿನ ತಂತ್ರಜ್ಞಾನ ಹೊಂದಿರುವ ಟೆಲಿಸ್ಕೋಪ್ ಮತ್ತು ಬೈನಾಕ್ಯುಲರ್ ಬಳಸಲಾಗುತ್ತಿದೆ. ಅತ್ಯಾಧುನಿಕ ಬೈನಾಕ್ಯುಲರ್ ಬೇಕಾದರೆ ಲಕ್ಷಾಂತರ ರೂ. ವ್ಯಯಿಸಬೇಕಿದ್ದರಿಂದ ಸಂಶೋಧನೆ ಮತ್ತು ಸೈನಿಕ ಕಾರ್ಯಾಚರಣೆಗೆ ತೊಡಕಾಗಿದೆ. ಹೀಗಾಗಿ ಮಣಿಪಾಲದ ಇಂಜಿನಿಯರೊಬ್ಬರು ಕಡಿಮೆ ವೆಚ್ಚದ, ಉತ್ತಮ ...
READ MORE
“15 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದ ಮೆರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌ ರ‍್ಯಾಂಕ್ ಪಟ್ಟಿ  ಸುದ್ಧಿಯಲ್ಲಿ ಏಕಿದೆ ?ಗುಣಮಟ್ಟದ ಜೀವನಕ್ಕೆ ಅತ್ಯುತ್ತಮ ನಗರ ಯಾವುದೆಂದು ತೀರ್ಮಾನಿಸುವ 2019ರ ದ ಮೆರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌ ರ‍್ಯಾಂಕ್ ಪಟ್ಟಿ (21ನೇ ಆವೃತ್ತಿ) ಬಿಡುಗಡೆಯಾಗಿದ್ದು, ಬೆಂಗಳೂರು ಜಾಗತಿಕ ಮಟ್ಟದಲ್ಲಿ 149ನೇ ಸ್ಥಾನ ...
READ MORE
” 06 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶಿಕ್ಷಣ ಹಕ್ಕು ಕಾಯ್ದೆ(ಆರ್​ಟಿಇ) ಸುದ್ಧಿಯಲ್ಲಿ ಏಕಿದೆ ?ಬಾಗಿಲು ಮುಚ್ಚುವ ಆತಂಕದಲ್ಲಿರುವ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿ ಖಾಸಗಿ ಶಾಲೆಗಳಿಗೆ ಮೂಗುದಾರ ಹಾಕುವ ಉದ್ದೇಶದಿಂದ ಶಿಕ್ಷಣ ಹಕ್ಕು ಕಾಯ್ದೆ(ಆರ್​ಟಿಇ) ನಿಯಮಗಳಿಗೆ ಬದಲಾವಣೆ ತರುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಕೇರಳ ಮಾದರಿ: ...
READ MORE
“24th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
‘ಶಾಲಾ -ಸಂಪರ್ಕ ಸೇತು’ ಯೋಜನೆ ಸುದ್ಧಿಯಲ್ಲಿ ಏಕಿದೆ ? ಮಲೆನಾಡು, ಕರಾವಳಿ ಭಾಗದ ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲಿ ವಾಸಿಸುವ ಜನರು ವಿಶೇಷವಾಗಿ ಶಾಲಾ ಮಕ್ಕಳು ಮಳೆಗಾಲದಲ್ಲಿ ಅಪಾಯಕಾರಿ ತೋಡು, ಹಳ್ಳ -ಕೊಳ್ಳ ದಾಟುವ ಪ್ರಯಾಸವನ್ನು ಶಾಶ್ವತವಾಗಿ ಪರಿಹರಿಸಲು 'ಶಾಲಾ -ಸಂಪರ್ಕ ಸೇತು' ಎಂಬ ...
READ MORE
“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏರೋ ಇಂಡಿಯಾ ಡ್ರೋನ್ ಒಲಿಂಪಿಕ್ಸ್ ಸುದ್ಧಿಯಲ್ಲಿ ಏಕಿದೆ ?ಏರೋ ಇಂಡಿಯಾ ಇತಿಹಾಸದಲ್ಲಿ ಇದೇ ಮೊದಲ ಬಾರಿ ಡ್ರೋನ್​ಗಳ ಸ್ಪರ್ಧೆ ಏರ್ಪಡಿಸಲಾಗಿದ್ದು, ಅದಕ್ಕೆ ಡ್ರೋನ್ ಒಲಿಂಪಿಕ್ಸ್ ಎಂದು ಹೆಸರಿಡಲಾಗಿದೆ. ವಿಜೇತರಾಗುವವರಿಗೆ ನಗದು ಬಹುಮಾನವನ್ನು ನೀಡಲು ಏರೋ ಇಂಡಿಯಾ ಶೋ ಆಯೋಜಕರು ನಿರ್ಧರಿಸಿದ್ದಾರೆ. ಎರಡು ವಿಭಾಗದಲ್ಲಿ ಸ್ಪರ್ಧೆ: ಡ್ರೋನ್ ...
READ MORE
“20 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಚುನಾವಣಾ ಆ್ಯಪ್ ಸುದ್ಧಿಯಲ್ಲಿ ಏಕಿದೆ ?ಮತಗಟ್ಟೆ, ಕ್ಷೇತ್ರದ ವಿವರ, ಮತಗಟ್ಟೆ ಇರುವ ಸ್ಥಳ, ಪಥ ಸೂಚಕ, ತಾವಿರುವ ಪ್ರದೇಶದಿಂದ ಮತಗಟ್ಟೆ ದೂರ ಸೇರಿದಂತೆ ವಿವಿಧ ಮಾಹಿತಿಗಳನ್ನು ಪಡೆಯಲು ಆಪ್​ನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ. ‘ಚುನಾವಣಾ’ ಹೆಸರಿನ ಈ ಆ್ಯಪ್ ಅನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ...
READ MORE
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷಿ ಆದಾಯ ಹೆಚ್ಚಳಕ್ಕೆ ಯೋಜನೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕೃಷಿ ಭೂಮಿ ಸದ್ಬಳಕೆ ಜತೆಗೆ ಅನ್ನದಾತರ ಆದಾಯವನ್ನೂ ಹೆಚ್ಚಿಸುವ ಉದ್ದೇಶದಿಂದ ಮೂರು ಹೊಸ ಕಾಯ್ದೆಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ರೂಪಿಸಿದ್ದ ಮಾದರಿ ಕಾಯ್ದೆಗಳು ಇದಕ್ಕೆ ಆಧಾರವಾಗಿರುವುದು ವಿಶೇಷ. ಉದ್ದೇಶ ಕೃಷಿ ಭೂಮಿ ಗುತ್ತಿಗೆ ...
READ MORE
“12 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷ್ಣರಾಜಸಾಗರ ಅಣೆಕಟ್ಟು ಸುದ್ಧಿಯಲ್ಲಿ ಏಕಿದೆ ?ಮಂಡ್ಯ ರೈತರ ಜೀವನಾಡಿ ಕಾವೇರಿ ನದಿಗೆ ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣಕ್ಕೆ  ಶಂಕುಸ್ಥಾಪನೆ ನೆರವೇರಿಸಿ 107 ವರ್ಷಗಳು ಸಂದಿವೆ. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿ ಫಲವಾಗಿ ಮಂಡ್ಯದ ಕನ್ನಂಬಾಡಿ ಗ್ರಾಮದಲ್ಲಿ ಕೆಆರ್​ಎಸ್ ಜಲಾಶಯ ನಿರ್ಮಾಣವಾಯಿತು. ಅದರ ...
READ MORE
“15 ಏಪ್ರಿಲ್ 2019 ಕನ್ನಡದ ಪ್ರಚಲಿತ ವಿದ್ಯಮಾನಗಳು”
“26 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“04 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 06 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“24th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“20 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“12 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *