“22 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

‘ಬಡವರ ಬಂಧು’ ಯೋಜನೆ

1.

ಸುದ್ಧಿಯಲ್ಲಿ ಏಕಿದೆ ?ಮೀಟರ್‌ ಬಡ್ಡಿ ದಂಧೆ ನಡೆಸುವವರ ಕಪಿಮುಷ್ಠಿಯಿಂದ ಸಣ್ಣ ವ್ಯಾಪಾರಿಗಳನ್ನು ಪಾರುಮಾಡಿ, ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ಒದಗಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಬಡವರ ಬಂಧುಯೋಜನೆಗೆ ನ.22 ಚಾಲನೆ ಸಿಗಲಿದೆ.

 • ಪ್ರಾಯೋಗಿಕವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 5 ಸಾವಿರ, ರಾಜ್ಯದ ಇತರ ಮಹಾನಗರಗಳ ವ್ಯಾಪ್ತಿಯಲ್ಲಿ 3 ಸಾವಿರ ಹಾಗೂ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿ 1 ಸಾವಿರ ಮಂದಿಗೆ ಸಾಲ ನೀಡಲಾಗುತ್ತಿದೆ.
 • ಸದ್ಯಕ್ಕೆ ವಾರ್ಷಿಕ 50 ಸಾವಿರ ಮಂದಿ ತಳ್ಳುಗಾಡಿ ಮತ್ತು ಬೀದಿ ಬದಿ ವ್ಯಾಪಾರಿಗಳು ಹಾಗೂ ಸಣ್ಣಪುಟ್ಟ ವ್ಯವಹಾರಸ್ಥರಿಗೆ ಸಾಲ ನೀಡಲಾಗುವುದು. ಸಹಕಾರ ಇಲಾಖೆ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ರಾಜ್ಯಾದ್ಯಂತ ಎಲ್ಲ ನಗರ ಪ್ರದೇಶಗಳಲ್ಲಿ ಫಲಾನುಭವಿಗಳಿಗೆ ಡಿಸಿಸಿ ಬ್ಯಾಂಕ್‌, ಮಹಿಳಾ ಸಹಕಾರಿ ಬ್ಯಾಂಕ್‌ಗಳು ಹಾಗೂ ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಮೂಲಕ ಫಲಾನುಭವಿಗಳಿಗೆ ಕನಿಷ್ಟ 2,000 ರೂ.ಗಳಿಂದ ಗರಿಷ್ಠ 10 ಸಾವಿರ ರೂ.ವರೆಗೆ ಸಾಲ ನೀಡಲಾಗುವುದು.

ಫಲಾನುಭವಿಗಳು ಯಾರು ?

 • ರಸ್ತೆ ಬದಿ ತಳ್ಳು ಗಾಡಿ,ಮೋಟಾರು ವಾಹನದಲ್ಲಿ ಪಾನೀಯ, ತಿಂಡಿ, ಊಟ, ಸಿಹಿ ಪದಾರ್ಥ ಮತ್ತಿತರ ಹೋಟೆಲ್‌ ಸೇವೆ ನೀಡುವವರು.
 • ತಳ್ಳು ಗಾಡಿ ಅಥವಾ ಮೋಟಾರು ವಾಹನದಲ್ಲಿ ತರಕಾರಿ, ಹಣ್ಣು, ಹೂವು, ಕಾಯಿ ಮಾರುವವರು ಮತ್ತು ರಸ್ತೆ ಬದಿಯ ಬುಟ್ಟಿ ವ್ಯಾಪಾರಿಗಳು.
 • ಪಾದರಕ್ಷೆ, ಚರ್ಮ ಉತ್ಪನ್ನಗಳ ರಿಪೇರಿ, ಮಾರಾಟದಲ್ಲಿ ತೊಡಗಿರುವ ಬೀದಿ ವ್ಯಾಪಾರಿಗಳು.
 • ಆಟದ ಸಾಮಾನು, ಇತರೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು.
 • ಬಿಪಿಎಲ್‌ ಕಾರ್ಡ್‌ ಹೊಂದಿರುವ ವ್ಯಾಪಾರಿಗಳಿಗೆ ಮಾತ್ರ ಈ ಯೋಜನೆ ಅನ್ವಯ.
 • ರಸ್ತೆ ಬದಿ ಸ್ವಚ್ಛತೆ ಹಾಳು ಮಾಡುವ ಹಾಗೂ ಪರಿಸರಕ್ಕೆ ಹಾನಿಯಾಗುವ ವಸ್ತು ಉಪಯೋಗಿಸುವ ಸಣ್ಣ ವ್ಯಾಪಾರಿಗಳಿಗೆ ಈ ಸೌಲಭ್ಯವಿಲ್ಲ.

ಷರತ್ತು ಮತ್ತು ಮಾರ್ಗಸೂಚಿಗಳೇನು?

 • ಸಹಕಾರಿ ಬ್ಯಾಂಕ್‌ಗಳು ತಮ್ಮ ವ್ಯಾಪ್ತಿಯಲ್ಲಿರುವ ನಗರ ಪ್ರದೇಶಗಳಲ್ಲಿ ನಿಗದಿಪಡಿಸಿದ ಗುರಿಯಂತೆ ಅರ್ಜಿ ಸಲ್ಲಿಸಿದ ಫಲಾನುಭವಿಗೆ ಮೊದಲ ಆದ್ಯತೆ ನೀಡಿ ಸಾಲ ವಿತರಿಸಬೇಕು.
 • ಫಲಾನುಭವಿಗಳನ್ನು ಗುರುತಿಸಲು ಸಹಕಾರಿ ಬ್ಯಾಂಕ್‌ಗಳು ತಮ್ಮ ಸಿಬ್ಬಂದಿ ಅಥವಾ ಪ್ರತಿನಿಧಿಯನ್ನು ನೇಮಿಸಬೇಕು.
 • ಬೀದಿ ವ್ಯಾಪಾರಿಗಳು ಹೆಚ್ಚಿರುವ ಎಪಿಎಂಸಿ, ತರಕಾರಿ -ಹಣ್ಣು, ಹೂವು ಮಾರುಕಟ್ಟೆ ಮತ್ತಿತರ ಮಾರುಕಟ್ಟೆ ಪ್ರದೇಶಗಳಲ್ಲಿ ಮೊಬೈಲ್‌ ವ್ಯಾನ್‌ ಹಾಜರಿರುವಂತೆ ವ್ಯವಸ್ಥೆ ಕಲ್ಪಿಸಬೇಕು. ಸಂಬಂಧಪಟ್ಟ ಮಾರುಕಟ್ಟೆ ಮಂಡಳಿ, ಸ್ಥಳೀಯ ಸಂಸ್ಥೆಗಳು ಮೊಬೈಲ್‌ ವ್ಯಾನ್‌ ನಿಲ್ಲಲು ಸೂಕ್ತ ಸ್ಥಳಾವಕಾಶದ ವ್ಯವಸ್ಥೆ ಕಲ್ಪಿಸಬೇಕು.
 • ಪ್ರತಿ ನಗರ ಪ್ರದೇಶದಲ್ಲಿ ಒಂದು ಸಹಕಾರಿ ಬ್ಯಾಂಕ್‌ ಮೂಲಕ ಸಾಲ ವಿತರಿಸಬೇಕು. ಈ ಬ್ಯಾಂಕ್‌ ಯಾವುದು ಮತ್ತು ಮೊಬೈಲ್‌ ವ್ಯಾನ್‌ಗೆ ಸ್ಥಳ ಗುರುತಿಸಲು ಆಯಾ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ.
 • ನೋಂದಾಯಿತ ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಆಧಾರ್‌ ಕಾರ್ಡ್‌, ಬಿಪಿಎಲ್‌ ಕಾರ್ಡ್‌ ಹಾಗೂ ತಾವು ವ್ಯಾಪಾರ ನಡೆಸುವ ಸ್ಥಳದ ಪೋಟೋ ಮತ್ತು ಸ್ಥಳೀಯ ಸಂಸ್ಥೆಯ ಗುರುತಿನ ಚೀಟಿ ಸಲ್ಲಿಸಿದರೆ ಡಿಸಿಸಿ ಬ್ಯಾಂಕ್‌ಗಳು ಶೂನ್ಯ ಬ್ಯಾಲೆನ್ಸ್‌ ಉಳಿತಾಯ ಖಾತೆ ತೆರೆಯಬೇಕು.
 • ಸಾಲದ ಖಾತೆ ತೆರೆದ ಫಲಾನುಭವಿಗಳಿಗೆ 2 ಸಾವಿರ ರೂ.ಗಳಿಂದ ಗರಿಷ್ಠ 10 ಸಾವಿರ ವರೆಗೆ ಸಾಲ ವಿತರಿಸಬೇಕು. ಸಾಲವನ್ನು ಹಂತಹಂತವಾಗಿ ರೂಪೇ ಕ್ರೆಡಿಟ್‌ ಕಾರ್ಡ್‌ ಮೂಲಕ ವಿತರಿಸಲು ಕ್ರಮ ತೆಗೆದುಕೊಳ್ಳಬೇಕು.
 • ಸಾಲವು ಕ್ಯಾಷ್‌ ಕ್ರೆಡಿಟ್‌ ರೂಪದಲ್ಲಿದ್ದು, ಮರುಪಾವತಿ ಅವಧಿ ಮೂರು ತಿಂಗಳು. ಈ ಅವಧಿಯಲ್ಲಿ ಸಾಲದ ಮಿತಿಗೊಳಪಟ್ಟು ಫಲಾನುಭವಿ ಎಷ್ಟು ಬಾರಿಯಾದರೂ ಹಣ ಡ್ರಾ ಮಾಡಬಹುದು ಮತ್ತು ಜಮಾ ಮಾಡಬಹುದು.
 • ಮೂರು ತಿಂಗಳಲ್ಲಿ ನಿಗದಿಯಂತೆ ಸಾಲ ಮರುಪಾವತಿಸಿದವರಿಗೆ ಹೊಸದಾಗಿ ಸಾಲ ನೀಡಬಹುದು. ಸಾಲದ ಮಿತಿಯನ್ನು 15 ಸಾವಿರ ಮಿತಿಗೆ ಹೆಚ್ಚಳ ಮಾಡಬಹುದು.
 • ಫಲಾನುಭವಿ ಇಚ್ಛೆ ಮತ್ತು ಅನುಕೂಲಕ್ಕೆ ತಕ್ಕಂತೆ ಪಿಗ್ಮಿ ಮಾದರಿಯಲ್ಲಿ ತಮ್ಮ ಬ್ಯಾಂಕ್‌ ಖಾತೆಗೆ ಜಮಾ ಮಾಡಲೂ ಅವಕಾಶ ಕಲ್ಪಿಸಬೇಕು. ಪಿಗ್ಮಿ ಮತ್ತು ಸಾಲದ ಮೊತ್ತ ಸಂಗ್ರಹಿಸಲು ಬ್ಯಾಂಕ್‌ ತನ್ನ ವ್ಯಾಪಾರ ಪ್ರತಿನಿಧಿ ನೇಮಿಸಬೇಕು.
 • ಯೋಜನೆ ಫಲಾನುಭವಿಯ ಉಳಿತಾಯ ಖಾತೆಯ ಈ ವಹಿವಾಟಿಗೆ ದಿನದ ಬ್ಯಾಲೆನ್ಸ್‌ ಆಧರಿಸಿ ಶೇ.4 ಬಡ್ಡಿಯನ್ನು ಸಂಬಂಧಪಟ್ಟ ಬ್ಯಾಂಕ್‌ಗಳು ನೀಡಬೇಕು.
 • ಬ್ಯಾಂಕ್‌ಗಳು ದೈನಂದಿನ ಚಾಲ್ತಿ ಹೊರಬಾಕಿ ಆಧಾರದಲ್ಲಿ ಸರಕಾರದಿಂದ ಶೇ.10 ಬಡ್ಡಿ ಸಹಾಯಧನಕ್ಕಾಗಿ ಅಪೆಕ್ಸ್‌ ಬ್ಯಾಂಕ್‌ ಮೂಲಕ ಸಹಕಾರ ಸಂಘಗಳ ನಿಬಂಧಕರಿಗೆ ಸಲ್ಲಿಸಿ ಮರುಪಾವತಿ ಪಡೆಯಬಹುದು.

ಅರ್ಜಿ ಸಲ್ಲಿಕೆ ಹೇಗೆ?

 • ನೋಂದಾಯಿತ ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಸಹಿತ ಆಯಾ ಡಿಸಿಸಿ ಬ್ಯಾಂಕ್ ಅಥವಾ ನಿಗದಿಪಡಿಸಿದ ಇತರ ಬ್ಯಾಂಕ್​ನಲ್ಲಿ ನಿಗದಿತ ಅರ್ಜಿ ಸಲ್ಲಿಸಬೇಕು. ಅರ್ಹ ಫಲಾನುಭವಿಯನ್ನು ಆಯ್ಕೆ ಮಾಡಿದಾಗ ಶೂನ್ಯ ಬ್ಯಾಲೆನ್ಸ್ ಇರುವ ಉಳಿತಾಯ ಖಾತೆ ತೆರೆಯಬೇಕು. ನಂತರ ಆಯಾ ಫಲಾನುಭವಿಗಳ ವ್ಯಾಪಾರವನ್ನು ಆಧರಿಸಿ 2ರಿಂದ 10 ಸಾವಿರ ರೂ. ಸಾಲ ವಿತರಿಸಲಾಗುವುದು. ಸಾಲದ ಮೊತ್ತವನ್ನು ಹಂತಹಂತವಾಗಿ ರೂಪೇ ಕ್ರೆಡಿಟ್ ಕಾರ್ಡ್ ಮೂಲಕ ವಿತರಿಸಲಾಗುವುದು.

ಜಲಧಾರೆ

2.

ಸುದ್ಧಿಯಲ್ಲಿ ಏಕಿದೆ ?ರಾಜ್ಯದ ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರು ಪೂರೈಸಬೇಕು ಎನ್ನುವ ಉದ್ದೇಶದಿಂದ ನದಿ ಮೂಲಗಳಿಂದ ಶಾಶ್ವತ ಕುಡಿಯುವ ನೀರು ಪೂರೈಸುವ ಜಲಧಾರೆ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ.

 • ರಾಜ್ಯದ ಪ್ರತಿ ಜನವಸತಿಗೂ ಶುದ್ಧ ಕುಡಿಯುವ ನೀರು ಕಲ್ಪಿಸುವುದು, ಬರಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದು ಮತ್ತು ವಿದ್ಯುತ್ ಬಳಕೆ ಮೇಲಿನ ಒತ್ತಡ ತಗ್ಗಿಸಲು ನದಿಮೂಲದಿಂದಲೇ ನೀರು ಕೊಡಬೇಕೆಂಬ ಜಲಧಾರೆ ಯೋಜನೆಗೆ ಬರೋಬ್ಬರಿ 80 ಸಾವಿರ ಕೋಟಿ ರೂ. ಬೇಕಾಗಬಹುದೆಂದು ಅಂದಾಜಿಸಲಾಗಿದೆ.
 • ಈ ಹಿಂದೆ ಗ್ರಾಮೀಣ ವಸತಿ ಪ್ರದೇಶಕ್ಕೆ ಸೀಮಿತವಾಗಿ ರೂಪುಗೊಳ್ಳುತ್ತಿದ್ದ ಯೋಜನೆ ಈಗ ವಿಸ್ತಾರಗೊಳ್ಳುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಜತೆ ನಗರಾಭಿವೃದ್ಧಿ ಇಲಾಖೆಯೂ ಸೇರಿ ಯೋಜನೆ ರೂಪಿಸಲು ತಯಾರಿ ಆರಂಭವಾಗಿದೆ.
 • ರಾಜ್ಯದಲ್ಲಿರುವ ಎಲ್ಲ ಜನವಸತಿಗಳಿಗೂ ಏಕಕಾಲದಲ್ಲಿ ನದಿಮೂಲದಿಂದ ನೀರುಕೊಡಲು ಸಾಧ್ಯವಿಲ್ಲದ್ದರಿಂದ, ಆದ್ಯತೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಹಂತಗಳನ್ನು ಮಾಡಿಕೊಂಡು ಅನುಷ್ಠಾನ ಮಾಡಲಾಗುತ್ತದೆ.
 • ತೆಲಂಗಾಣ ಮಾದರಿಯಲ್ಲಿ ಯೋಜನೆ ಕಾರ್ಯಗತ ಮಾಡುವ ಉದ್ದೇಶವಿದೆ. ಮೊದಲು ತಾಂತ್ರಿಕ ಸಾಧ್ಯತೆಗಳು ಹಾಗೂ ಹಣಕಾಸು ಅವಕಾಶಗಳ ಬಗ್ಗೆ ರ್ಚಚಿಸಿ ಕಾನ್ಸೆಪ್ಟ್ ನೋಟ್ ಸಿದ್ಧಪಡಿಸಲಾಗುತ್ತದೆ.

ಹಣ ಎಲ್ಲಿಂದ?

 • ಯೋಜನೆಗೆ ಅಗತ್ಯವಾದ ದೊಡ್ಡ ಮೊತ್ತವನ್ನು 2 ಮೂಲಗಳಿಂದ ಕ್ರೋಡೀಕರಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿದೆ.
 • ರಾಜ್ಯ ಬಜೆಟ್​ನಲ್ಲಿ ಹಂತಹಂತವಾಗಿ ಹಣ ತೆಗೆದಿಡುವುದು ಮತ್ತು ಅಂತಾರಾಷ್ಟ್ರೀಯ ಸಾಲ, ರಾಜ್ಯ ಮತ್ತು ಕೇಂದ್ರದ ಹಣಕಾಸು ಸಾಲ ಪಡೆಯಲಾಗುತ್ತದೆ.
 • ಈಗಾಗಲೇ ನಿವೃತ್ತ ಅಧಿಕಾರಿಗಳ ತಂಡವನ್ನೂ ಈ ಕೆಲಸಕ್ಕಾಗಿ ರೂಪಿಸಲಾಗುತ್ತಿದೆ. ತೆಲಂಗಾಣ ಮತ್ತು ಗುಜರಾತ್​ಗೆ ತೆರಳಿ ಅಧ್ಯಯನ ಮಾಡಬೇಕೆಂಬ ಉದ್ದೇಶವೂ ಇದೆ. ವಿವಿಧ ಉನ್ನತ ಮಟ್ಟದ ತಾಂತ್ರಿಕ ಜ್ಞಾನವನ್ನೂ ಬಳಸಿಕೊಂಡು ಯೋಜನೆ ಅನುಷ್ಠಾನ ಕಲ್ಪನೆ ಹೊಂದಲಾಗಿದೆ.

ಉದ್ದೇಶ

 • ರಾಜ್ಯದಲ್ಲಿ ಸರಿಸುಮಾರು 60 ಸಾವಿರ ಜನವಸತಿಗಳಿದ್ದು, ಇಲ್ಲಿಗೆ ನದಿಮೂಲದಿಂದ ಕುಡಿಯುವ ನೀರನ್ನು ಒದಗಿಸಿದ್ದೇ ಆದಲ್ಲಿ ಬರದ ಸಮಸ್ಯೆಗೆ ಶಾಶ್ವತ ಮುಕ್ತಿಕೊಡಬಹುದು ಎಂಬುದು ಯೋಜನೆ ಉದ್ದೇಶ.

ಚೀನಾದೊಂದಿಗೆ ಸ್ಪರ್ಧೆ

3.

ಸುದ್ಧಿಯಲ್ಲಿ ಏಕಿದೆ ?ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಜೆಟ್​ನಲ್ಲಿ ಘೋಷಿಸಿದ್ದ ‘ಚೀನಾದೊಂದಿಗೆ ಸ್ಪರ್ಧೆ’ ಯೋಜನೆಯನ್ನು ಡಿಸೆಂಬರ್ 2ನೇ ವಾರದೊಳಗೆ ಅನುಷ್ಠಾನಕ್ಕೆ ತರುವ ಸಿದ್ಧತೆ ಆರಂಭವಾಗಿದೆ.

ಸ್ಪರ್ಧೆ ಏಕೆ ?

 • ಚೀನಾದ ಗೊನ್​ಶಾವ್, ಫೊಶಾನ್ ಪ್ರದೇಶದಲ್ಲಿ ಜಾಗತಿಕ ಮಟ್ಟದ ಬೇಡಿಕೆ ಇರುವ ಅನೇಕ ವಸ್ತುಗಳನ್ನು ಉತ್ಪಾದಿಸಿ ಭಾರತೀಯ ಮಾರುಕಟ್ಟೆಗೆ ರವಾನಿಸುತ್ತಿದೆ. ರಾಜ್ಯಕ್ಕೂ ಚೀನಾ ಕರಿನೆರಳು ವ್ಯಾಪಿಸಿರುವ ಪರಿಣಾಮ ನೂರಾರು ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗಿ, ನಿರುದ್ಯೋಗ ಉಲ್ಬಣಗೊಂಡಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಯೋಜನೆ ರೂಪುಗೊಂಡಿದೆ.

ಪ್ರತ್ಯೇಕ ಸಚಿವಾಲಯ

 • ಚೀನಾದೊಂದಿಗೆ ಸ್ಪರ್ಧೆ ಯೋಜನೆಯಲ್ಲಿ 9 ಕ್ಲಸ್ಟರ್​ಗಳಿಗೆ ಸರ್ಕಾರದಿಂದ ತಲಾ 2000 ಕೋಟಿ ರೂ.ಗಳು ಹಾಗೂ ಹೂಡಿಕೆದಾರರಿಂದ 3000 ಕೋಟಿ ರೂ. ಹೂಡಿಕೆ ನಿರೀಕ್ಷೆ ಮಾಡಲಾಗುತ್ತಿದೆ.
 • ಪ್ರತಿ ಕ್ಲಸ್ಟರ್​ನಲ್ಲಿಯೂ ಒಂದು ಲಕ್ಷ ಉದ್ಯೋಗಗಳು ಮುಂದಿನ ನಾಲ್ಕು ವರ್ಷದಲ್ಲಿ ಸಿಗುವಂತೆ ಮಾಡುವ ಸಲುವಾಗಿ ಕೈಗಾರಿಕಾ ಇಲಾಖೆಯಲ್ಲಿ ಪ್ರತ್ಯೇಕ ಸಚಿವಾಲಯ ತೆರೆಯುವ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ ಇನ್ನೂ ಅಂತಿಮವಾಗಿಲ್ಲ.

ಸಣ್ಣ ಕೈಗಾರಿಕಾ ವಲಯ

 • ಗ್ರಾಮೀಣ ಭಾಗದಲ್ಲಿ 150 ರಿಂದ 200 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಸಲುವಾಗಿಯೇ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಚೀನಾದೊಂದಿಗೆ ಸ್ಪರ್ಧೆ ಯೋಜನೆಗೂ ಇದಕ್ಕೂ ಸಂಬಂಧವಿಲ್ಲವಾದರೂ, ಈ ಯೋಜನೆಯಡಿ ಬರುವ ಕೈಗಾರಿಕೆಗಳು ಇಂತಹ ಭೂಮಿಯನ್ನು ಬಳಸಿಕೊಳ್ಳಬಹುದು.

ಏನಿದು ಸ್ಪರ್ಧೆ?

 • ಚೀನಾ ವಸ್ತುಗಳ ಹಾವಳಿ ತಡೆಗಟ್ಟಿ ರಾಜ್ಯದಲ್ಲಿ ಹೂಡಿಕೆ ಹೆಚ್ಚಿಸುವುದು, ಸಣ್ಣ ಕೈಗಾರಿಕಾ ವಲಯಕ್ಕೆ ಜೀವ ತುಂಬುವುದು, ಆ ಮೂಲಕ ನಿರುದ್ಯೋಗ ಸಮಸ್ಯೆ ತಗ್ಗಿಸುವುದು ಸರ್ಕಾರದ ಉದ್ದೇಶ.
 • ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಇಂತಹ ಯೋಜನೆ ರೂಪುಗೊಂಡಿಲ್ಲ. ಇದಕ್ಕಾಗಿ ಹಳ್ಳಿಯಿಂದ ಜಿಲ್ಲಾ ಕೇಂದ್ರದ ತನಕ ವಿವಿಧ ವಸ್ತುಗಳ ಉತ್ಪಾದನೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ.
 • ಚೀನಾದಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಮದಾಗುತ್ತಿರುವ ಒಂಭತ್ತು ವಸ್ತುಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ ಉತ್ಪಾದಿಸಿ ಮಾರುಕಟ್ಟೆ ಮಾಡಲು ಸಾಧ್ಯವಿರುವ ಆ ವಸ್ತುಗಳನ್ನು ತಯಾರಿಸಲು 9 ಜಿಲ್ಲೆಗಳಲ್ಲಿ 9 ಕ್ಲಸ್ಟರ್​ಗಳನ್ನು ಗುರುತಿಸಲಾಗಿದೆ.

ಸ್ವಚ್ಛ ವಿದ್ಯಾಲಯ ಪುರಸ್ಕಾರ

4.

ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡುವ 2017-18ನೇ ಸಾಲಿನ ‘ಸ್ವಚ್ಛ ವಿದ್ಯಾಲಯ’ ಪುರಸ್ಕಾರ ಪಟ್ಟಿಯಲ್ಲಿ ರಾಜ್ಯದ ಯಾವುದೇ ಶಾಲೆಯೂ ಸ್ಥಾನ ಪಡೆಯದೆ ನಿರಾಸೆ ಮೂಡಿಸಿವೆ.

 • ಪ್ರಶಸ್ತಿಗೆ ಭಾಜನವಾದ 52 ಶಾಲೆಗಳ ಪಟ್ಟಿಯನ್ನು ಸಚಿವಾಲಯ ಪ್ರಕಟಿಸಿದ್ದು, ಅದರಲ್ಲಿ ಕರ್ನಾಟಕದ ಯಾವುದೇ ಶಾಲೆಯೂ ಸೇರ್ಪಡೆಯಾಗಿಲ್ಲ. ರಾಜ್ಯದಲ್ಲಿ 45,394 ಸರಕಾರಿ ಶಾಲೆಗಳು ಹಾಗೂ ಮೂರು ಸಾವಿರ ಖಾಸಗಿ ಶಾಲೆಗಳಿವೆ. ಆದರೆ, ಸ್ವಚ್ಛ ವಿದ್ಯಾಲಯ ಪುರಸ್ಕಾರ ಪಟ್ಟಿಯಲ್ಲಿ ಇಲ್ಲದೇ ಇರುವುದು ಶಿಕ್ಷಣ ಇಲಾಖೆಗೆ ಅಚ್ಚರಿ ಮೂಡಿಸಿದೆ.

ಸ್ವಚ್ಚ ವಿದ್ಯಾಲಯ ಪುರಸ್ಕಾರ

 • ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ನೀರು, ನೈರ್ಮಲ್ಯ ಮತ್ತು ನೈರ್ಮಲ್ಯ ಅಭ್ಯಾಸಗಳಲ್ಲಿ ಶ್ರೇಷ್ಠತೆಯನ್ನು ಗುರುತಿಸಲು, ಸ್ಫೂರ್ತಿ ಮತ್ತು ಆಚರಿಸಲು ಕೇಂದ್ರ ಸರ್ಕಾರವು ‘ಸ್ವಚ್ಚ ವಿದ್ಯಾಲಯ ಪುರಸ್ಕಾರ’ (ಎಸ್.ವಿ.ಪಿ.) ಅನ್ನು 2016-17 ರಲ್ಲಿ ಸ್ಥಾಪಿಸಿತು.
 • ಪ್ರಶಸ್ತಿಯನ್ನು , ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನೀಡಲಾಗುತ್ತದೆ.
 • ಪ್ರಶಸ್ತಿಗಳಿಗಾಗಿನ ವಿಧಾನವು ಯುನಿಸೆಫ್ ಮತ್ತು ಆಡಳಿತಾತ್ಮಕ ಸಿಬ್ಬಂದಿ ಕಾಲೇಜ್ ಆಫ್ ಇಂಡಿಯಾ (ಎಎಸ್ಸಿಐ), ಅನುಷ್ಠಾನ ಮತ್ತು ತಾಂತ್ರಿಕ ಪಾಲುದಾರರೊಂದಿಗೆ ಸಮಾಲೋಚಿಸಿ ವಿಕಸನಗೊಂಡಿತು.
 • ಶಾಲೆಗಳು ಸ್ವಯಂಪ್ರೇರಣೆಯಿಂದ ವೆಬ್ಸೈಟ್ ಮೂಲಕ ಮತ್ತು ಅರ್ಜಿಗಳಿಗಾಗಿ ಮೊಬೈಲ್ ಅಪ್ಲಿಕೇಶನ್ ಮೂಲಕ ಭರ್ತಿಮಾಡಬಹುದು
 • ಪ್ರಶಸ್ತಿ ವಿಜೇತ ಶಾಲೆಗಳಿಗೆ ರೂ .50,000 ಹೆಚ್ಚುವರಿ ಶಾಲಾ ಅನುದಾನವನ್ನು ನೀಡಲಾಗುವುದು.
 • ದೀರ್ಘಾವಧಿ ಸಮರ್ಥನೀಯತೆ ಮತ್ತು ಸ್ವಚ್ಛತೆಗೆ ವರ್ತನೆಯ ಬದಲಾವಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಶಸ್ತಿಯನ್ನು ನೀಡಲಾಗುತ್ತದೆ.
 • ಮತ್ತಷ್ಟು ಸುಧಾರಣೆಗಳನ್ನು ಮಾಡಲು ಶಾಲೆಗಳಿಗೆ ಒಂದು ಮಾನದಂಡ ಮತ್ತು ಮಾರ್ಗಸೂಚಿಯನ್ನು ಇದು ಒದಗಿಸುತ್ತದೆ.

ಸಿಖ್ ವಿರೋಧಿ ಗಲಭೆ 

5.

ಸುದ್ಧಿಯಲ್ಲಿ ಏಕಿದೆ ?ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಸಿಖ್ ವಿರೋಧಿ ಗಲಭೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ಓರ್ವನಿಗೆ ಗಲ್ಲು ಹಾಗೂ ಮತ್ತೋರ್ವನಿಗೆ ಜೀವಿತಾವಧಿ ಜೈಲು ಶಿಕ್ಷೆಯನ್ನು ಪಟಿಯಾಲ ವಿಶೇಷ ಕೋರ್ಟ್ ವಿಧಿಸಿದೆ.

1984ರ ಸಿಖ್ ಗಲಭೆ ಪ್ರಕರಣದ ತನಿಖೆಯ ಅವಲೋಕನ ಇಲ್ಲಿದೆ

 • 1984ರ ಅಕ್ಟೋಬರ್ 31ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಅವರ ಬೆಂಗಾವಲು ಪಡೆಯ ನಾಲ್ವರು ಸಿಖ್​ರೇ ಹತ್ಯೆ ಮಾಡಿದರು. ಈ ಹತ್ಯೆಗೆ ಪ್ರತೀಕಾರವಾಗಿ 1984ರ ಅ.31ರಿಂದ ನ.3ರವರೆಗೆ ಸಿಖ್​ರ ಮೇಲೆ ದಾಳಿ ನಡೆಯಿತು. ಪರಿಣಾಮ, ಸಾವಿರಾರು ಜನರು ಸಾವಿಗೀಡಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಯಿತು. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಈ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 3,325. ಈ ಪೈಕಿ 2,733 ಜನರು ದೆಹಲಿಯಲ್ಲಿ ನಡೆದ ಗಲಭೆಗಳಲ್ಲಿ ಮೃತರಾದರು. ಸಿಖ್ ಹೋರಾಟಗಾರರ ಪ್ರಕಾರ ಗಲಭೆಗೆ ಬಲಿಯಾದವರ ಸಂಖ್ಯೆ 10 ಸಾವಿರಕ್ಕಿಂತಲೂ ಹೆಚ್ಚು.

ಹಲವು ತನಿಖಾ ತಂಡ-ಸಮಿತಿ

 • ಸಿಖ್ ವಿರೋಧಿ ಗಲಭೆೆ ಸಂಬಂಧ ಕಳೆದ 3 ದಶಕಗಳಲ್ಲಿ ಹಲವು ತನಿಖಾ ತಂಡಗಳು ಹಾಗೂ ಸಮಿತಿಗಳು ವಿಚಾರಣೆ ನಡೆಸಿ ವರದಿ ನೀಡಿವೆ. ಆದರೂ ನಿಜವಾದ ಅಪರಾಧಿಗಳು ಶಿಕ್ಷೆಯಿಂದ ಬಚಾವಾಗಿದ್ದಾರೆ ಎಂಬುದು ಗಲಭೆ ಸಂತ್ರಸ್ತರು ಹಾಗೂ ಅವರ ಕುಟುಂಬವರ್ಗದವರ ಆರೋಪ.

ಮಿಶ್ರಾ ಆಯೋಗ

 • ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ರಂಗನಾಥ್ ಮಿಶ್ರಾ ನೇತೃತ್ವದ ಆಯೋಗವನ್ನು 1985ರ ಮೇ ತಿಂಗಳಲ್ಲಿ ನೇಮಿಸ ಲಾಯಿತು. 1986ರ ಆಗಸ್ಟ್​ನಲ್ಲಿ ಸಲ್ಲಿಕೆಯಾದ ಈ ಆಯೋಗದ ವರದಿಯನ್ನು ಸರ್ಕಾರ ಆರು ತಿಂಗಳ ನಂತರ ಅಂದರೆ 1987ರ ಫೆಬ್ರವರಿಯಲ್ಲಿ ಬಹಿರಂಗಗೊಳಿಸಿತು. ಗಲಭೆ ತಡೆಯುವಲ್ಲಿ ಪೊಲೀಸರ ವೈಫಲ್ಯ ಅಥವಾ ನಿರ್ಲಕ್ಷ್ಯನ್ನು ಈ ವರದಿ ತಳ್ಳಿಹಾಕಿತು.

ಜೈನ್-ಅಗರ್​ವಾಲ್ ಸಮಿತಿ

 • ದೆಹಲಿ ಹೈಕೋರ್ಟ್​ನ ನಿವೃತ್ತ ನ್ಯಾಯಾಧೀಶ ಜೆ.ಡಿ. ಜೈನ್ ಮತ್ತು ಉತ್ತರಪ್ರದೇಶದ ನಿವೃತ್ತ ಡಿಜಿಪಿ ಡಿ.ಕೆ. ಅಗರ್​ವಾಲ್ ಅವರನ್ನೊಳಗೊಂಡ ಸಮಿತಿಯನ್ನು 1990ರ ಡಿಸೆಂಬರ್​ದಲ್ಲಿ ರಚಿಸಲಾಯಿತು. ಕಾಂಗ್ರೆಸ್ ನಾಯಕರಾದ ಎಚ್.ಕೆ.ಎಲ್. ಭಗತ್, ಸಜ್ಜನ್​ಕುಮಾರ್, ಜಗದೀಶ್ ಟೈಟ್ಲರ್, ಧರ್ಮದಾಸ್ ಶಾಸ್ತ್ರಿ ವಿರುದ್ಧ ಪ್ರಕರಣ ದಾಖಲಿಸುವಂತೆ ಈ ಸಮಿತಿ ಶಿಫಾರಸು ಮಾಡಿತು. ಇಡೀ ಪ್ರಕರಣದ ತನಿಖೆಯ ಮೇಲುಸ್ತುವಾರಿಗೆ ದೆಹಲಿ ಪೊಲೀಸ್ ಇಲಾಖೆ ವ್ಯಾಪ್ತಿಯ 2-3 ವಿಶೇಷ ತನಿಖಾ ತಂಡಗಳನ್ನು ನೇಮಿಸುವಂತೆಯೂ ಸಮಿತಿ ಶಿಫಾರಸು ಮಾಡಿತು. 1993ರ ಆಗಸ್ಟ್ ದಲ್ಲಿ ಈ ಸಮಿತಿಯ ಅವಧಿ ಮುಕ್ತಾಯವಾದರೂ, ಸಮಿತಿ ಸೂಚಿಸಿದ ವ್ಯಕ್ತಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿರಲಿಲ್ಲ.

ಕಪೂರ್ – ಮಿತ್ತಲ್ ಸಮಿತಿ

 • ಗಲಭೆಯಲ್ಲಿ ಪೊಲೀಸರ ಪಾತ್ರ ಮತ್ತು ನಿರ್ಲಕ್ಷ್ಯ ಬಗ್ಗೆ ತನಿಖೆ ನಡೆಸಲೆಂದೇ ಮತ್ತೊಂದು ಸಮಿತಿಯನ್ನು 1987ರ ಫೆಬ್ರವರಿಯಲ್ಲಿ ರಚಿಸಲಾಯಿತು. ಉತ್ತರ ಪ್ರದೇಶದ ನಿವೃತ್ತ ಕಾರ್ಯದರ್ಶಿಗಳಾದ ದಲೀಪ್ ಕಪೂರ್ ಮತ್ತು ಕುಸುಮ್ ಮಿತ್ತಲ್ ನೇತೃತ್ವದ ಈ ಸಮಿತಿ 1990ರಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ನೀಡಿ 72 ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿತು. ಅಲ್ಲದೆ ಈ ಪೈಕಿ 30 ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡುವಂತೆಯೂ ಶಿಫಾರಸು ಮಾಡಿತು. ಆದರೆ ಈವರೆಗೂ ಯಾವೊಬ್ಬ ಪೊಲೀಸ್ ಅಧಿಕಾರಿಯ ವಿರುದ್ಧವೂ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಕಟುವಾಸ್ತವ.

ಪೊಟ್ಟಿ ರೋಶಾ ಸಮಿತಿ

 • ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗ ಮಾರ್ಚ್ 1990ರಲ್ಲಿ ಪೊಟ್ಟಿ ರೋಶಾ ಸಮಿತಿ ರಚಿಸಲಾಯಿತು. ಈ ಸಮಿತಿಯೂ ಆಗಸ್ಟ್ 1990ರಲ್ಲಿ ಸಜ್ಜನಕುಮಾರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿತು. ಅದರಂತೆ ಸಿಬಿಐ ಅಧಿಕಾರಿಗಳು ಸಜ್ಜನಕುಮಾರ್ ಮನೆಗೆ ಹೋದಾಗ ಅವರ ಬೆಂಬಲಿಗರು ಭಾರಿ ದಾಂಧಲೆ ಎಬ್ಬಿಸಿ, ಅಧಿಕಾರಿಗಳಿಗೇ ಬೆದರಿಕೆ ಹಾಕಿದರು. 1990ರ ಸೆಪ್ಟೆಂಬರ್​ದಲ್ಲಿ ಪೊಟ್ಟಿ ರೋಶಾ ಸಮಿತಿಯ ಅವಧಿ ಮುಗಿದಿದ್ದರಿಂದ ತನಿಖೆ ರ್ತಾಕ ಅಂತ್ಯ ಕಾಣಲಿಲ್ಲ.

ಮಾರ್ವಾ ಆಯೋಗ

 • ಗಲಭೆಗಳ ಬೆನ್ನಲ್ಲಿ ಮೊದಲ ತನಿಖಾ ಆಯೋಗವನ್ನು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವೇದ ಮಾರ್ವಾ ನೇತೃತ್ವದಲ್ಲಿ 1984ರ ನವೆಂಬರ್​ನಲ್ಲಿ ನೇಮಿಸಲಾಯಿತು. ಗಲಭೆಯಲ್ಲಿ ಪೊಲೀಸರ ಪಾತ್ರ ಕುರಿತಂತೆ ತನಿಖೆ ನಡೆಸಿದ ಆಯೋಗವು 1985ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ವೇದ ಮಾರ್ವಾ ಕೈಬರಹದಲ್ಲಿ ಬರೆದ ಕೆಲ ಸಂಗತಿಗಳನ್ನು ವರದಿ ಜತೆ ನೀಡಿದ್ದರು. ಆದರೆ ಮುಂದಿನ ಆಯೋಗಕ್ಕೆ ಸರ್ಕಾರ ವರದಿ ಹಸ್ತಾಂತರಿಸಿದಾಗ ಆ ಹಸ್ತಪ್ರತಿಗಳು ಅದರಲ್ಲಿ ಇರಲಿಲ್ಲ.

ಜೈನ್-ಬ್ಯಾನರ್ಜಿ ಸಮಿತಿ

 • ಕಪೂರ್-ಮಿತ್ತಲ್ ಸಮಿತಿ ಅಸ್ತಿತ್ವದಲ್ಲಿ ಇರುವಾಗಲೇ ಹಿಂದಿನ ಮಿಶ್ರಾ ಆಯೋಗದ ಶಿಫಾರಸಿನಂತೆ ಗಲಭೆಗೆ ಸಂಬಂಧಿತ ಮತ್ತಷ್ಟು ಪ್ರಕರಣಗಳನ್ನು ದಾಖಲಿಸಿಕೊಳ್ಳಲು (ಬಿಟ್ಟುಹೋದ ಪ್ರಕರಣಗಳು) ದೆಹಲಿ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಎಂ.ಎಲ್. ಜೈನ್ ಮತ್ತು ನಿವೃತ್ತ ಐಜಿಪಿ ಎ.ಕೆ. ಬ್ಯಾನರ್ಜಿ ಅವರನ್ನು ಒಳಗೊಂಡ ಸಮಿತಿಯನ್ನು 1987ರಲ್ಲಿ ರಚಿಸಲಾಯಿತು. ಗಲಭೆ ಸಂಬಂಧ ಕಾಂಗ್ರೆಸ್ ನಾಯಕ ಸಜ್ಜನ್​ಕುಮಾರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಈ ಸಮಿತಿ 1987ರ ಆಗಸ್ಟ್​ದಲ್ಲಿ ಶಿಫಾರಸು ಮಾಡಿತು. ಈ ನಡುವೆ ಸಜ್ಜನ್​ಕುಮಾರ್ ಜತೆ ಸಹ-ಆರೋಪಿಯಾಗಿದ್ದ ಬ್ರಹ್ಮಾನಂದ ಗುಪ್ತಾ ಡಿಸೆಂಬರ್​ನಲ್ಲಿ ದೆಹಲಿ ಹೈಕೋರ್ಟ್ ಮೊರೆಹೋಗಿ ಸಮಿತಿ ವಿರುದ್ಧ ತಡೆಯಾಜ್ಞೆ ನೀಡುವಂತೆ ಕೋರಿದರು. ಸರ್ಕಾರ ಈ ಮನವಿಗೆ ನ್ಯಾಯಾಲಯದಲ್ಲಿ ವಿರೋಧ ವ್ಯಕ್ತಪಡಿಸದ್ದರಿಂದ ಕೋರ್ಟ್ 1989ರ ಆಗಸ್ಟ್​ದಲ್ಲಿ ಸಮಿತಿಯನ್ನು ಅನೂರ್ಜಿತಗೊಳಿಸಿತು.

ನಾನಾವತಿ ಆಯೋಗ

 • 2000ನೇ ಇಸವಿಯಲ್ಲಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶ ಜಿ.ಟಿ. ನಾನಾವತಿ ನೇತೃತ್ವದಲ್ಲಿ ಆಯೋಗ ರಚಿಸಲಾಯಿತು. ಗಲಭೆ ಸಂತ್ರಸ್ತರು ಹಾಗೂ ಘಟನೆಯ ಪ್ರತ್ಯಕ್ಷದರ್ಶಿಗಳನ್ನು ಮಾತನಾಡಿಸಿ ವಿವರ ಕಲೆಹಾಕಿದ ಆಯೋಗ 2005ರ ಫೆ. 9ರಂದು 185 ಪುಟಗಳ ವರದಿ ಸಲ್ಲಿಸಿತು. ‘ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸಿಖ್​ರ ವಿರುದ್ಧ ದಾಳಿಗೆ ಗಲಭೆಕೋರರನ್ನು ಉತ್ತೇಜಿಸಿದ್ದಾರೆ ಹಾಗೂ ಸಹಾಯ ಮಾಡಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಯಿತು.
Related Posts
3rd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ನೌಕಾ ಪಡೆ ಸಮರಾಭ್ಯಾಸ ಮುಕ್ತಾಯ ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆ ಮೂರು ವಾರಗಳ ಕಾಲ ಕೈಗೊಂಡ ಸಮರಾಭ್ಯಾಸ ಕೊನೆಗೊಂಡಿದೆ. ದೇಶದ ಪಶ್ಚಿಮ ಸಮುದ್ರದಲ್ಲಿರುವ ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸುವ ಕುರಿತು ವ್ಯೂಹ ರಚನೆ ಮತ್ತು ಯುದ್ಧದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಾಚರಣೆ ಯೋಜನೆಗಳ ಬಗ್ಗೆ ನೌಕಾ ಪಡೆ ...
READ MORE
2003ರಿಂದ ಜಾರಿಯಲ್ಲಿರುವ ಈ ಯೋಜನೆ ಫಲಾನುಭವಿಗೆ ನಗದುರಹಿತ  ಶಸ್ತ್ರಚಿಕಿತ್ಸೆ ಒದಗಿಸುತ್ತದೆ ಯಶಸ್ವಿನಿ ಯೋಜನೆಯಡಿ ಸೌಲಭ್ಯ ಪಡೆಯುವುದು ಹೇಗೆ ? ಯಶಸ್ವಿನಿ ಫಲಾನುಭವಿಗಳು ಶಸ್ತ್ರಚಿಕಿತ್ಸೆ ಅಗತ್ಯವಾದಲ್ಲಿ ತಮ್ಮ ಯೂನಿಕ್ ಐ.ಡಿ. ಸಂಖ್ಯೆ ಹೊಂದಿರುವ ಸದಸ್ಯರ ಉಪಯೋಗಕ್ಕಾಗಿ ನೀಡಲಾದ ಮೂಲ ಗುರುತಿನ ಕಾರ್ಡ್ ಮತ್ತು ಮೂಲ ಹಣ ಪಾವತಿ ರಸೀದಿಯೊಂದಿಗೆ ಯೋಜನೆಯಡಿಯಲ್ಲಿ ...
READ MORE
“26 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಬಡವರ ಬಂಧು’ ನಿಯಮಾವಳಿ ಸಡಿಲ ಸುದ್ಧಿಯಲ್ಲಿ ಏಕಿದೆ ?ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ 'ಬಡವರ ಬಂಧು' ಯೋಜನೆ ಅನುಷ್ಠಾನದಲ್ಲಿ ತೊಡಕಾಗಿದ್ದ ಕೆಲ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಯಾವ ನಿಯಮವನ್ನು ಸಡಿಲಿಸಲಾಗಿದೆ ? 'ಯೋಜನೆಯಡಿ ಫಲಾನುಭವಿಗಳ ಆಯ್ಕೆಗೆ ಸ್ಥಳೀಯ ಸಂಸ್ಥೆಗಳ ಗುರುತಿನ ಚೀಟಿ ಹಾಗೂ ರೇಷನ್‌ ಕಾರ್ಡ್‌ ದಾಖಲೆಯಾಗಿ ...
READ MORE
“27th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
'ಸ್ವಚ್ಛ ಬೆಂಗಳೂರು' ಸುದ್ಧಿಯಲ್ಲಿ ಏಕಿದೆ ? ಬೆಂಗಳೂರು ನಗರವನ್ನು ಸ್ವಚ್ಛ ಮಾಡಲು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಾಲಾವಧಿ ನಿಗದಿಪಡಿಸಿದೆ. ಆದರೆ ಸ್ವಚ್ಛ ಬೆಂಗಳೂರಿನ ಸವಾಲನ್ನು ಎದುರಿಸಿ ಅದನ್ನು ಸಾಧಿಸುವುದು ಕಷ್ಟ. ಸವಾಲುಗಳೇನು ? ಕಸದಿಂದ ಹಿಡಿದು ಉಗುಳುವವರೆಗೆ, ಸಾರ್ವಜನಿಕ ಶೌಚಾಲಯದಿಂದ ಹಿಡಿದು ...
READ MORE
19th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ರಾಷ್ಟ್ರೀಯ ಉದ್ಯಾನ: ಸುರಕ್ಷತಾ ವಲಯದಲ್ಲಿ ಗಣಿಗಾರಿಕೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುರಕ್ಷತಾ ವಲಯದಲ್ಲಿರುವ ರಾಗಿಹಳ್ಳಿ ಬಳಿ ನಿಯಮಗಳನ್ನು ಗಾಳಿಗೆ ತೂರಿ ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವನ್ಯಜೀವಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ವೃಕ್ಷಾ ಪ್ರತಿಷ್ಠಾನ ಆರೋಪಿಸಿದೆ. ‘ರಾಗಿಹಳ್ಳಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿ ...
READ MORE
” 28 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಡಿಎಲ್, ಆರ್​ಸಿ ಡಿಜಿಟಲ್ ದಾಖಲೆ ಪರೀಕ್ಷಿಸಲು ಮಾರ್ಗಸೂಚಿ ಸುದ್ಧಿಯಲ್ಲಿ ಏಕಿದೆ ?ವಾಹನ ಚಾಲಕರು ಸಲ್ಲಿಸುವ ಡಿಜಿಟಲ್ ಮಾದರಿ ದಾಖಲೆಗಳು ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹಲವು ಮಾರ್ಗಸೂಚಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್- ಎಸ್​ಒಪಿ) ರೂಪಿಸಿದೆ. ಎಸ್​ಒಪಿ ...
READ MORE
13th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಜಾಗತಿಕ ಆವಿಷ್ಕಾರ ಸೂಚ್ಯಂಕ ಸುದ್ಧಿಯಲ್ಲಿ ಏಕಿದೆ? 2018ರ ಜಾಗತಿಕ ಆವಿಷ್ಕಾರ ಸೂಚ್ಯಂಕ(ಜಿಐಐ) ಬಿಡುಗಡೆಯಾಗಿದ್ದು, ಭಾರತ 57ನೇ ಸ್ಥಾನ ಪಡೆದಿದೆ. 2015ರಿಂದ ಜಿಐಐ ಶ್ರೇಯಾಂಕದಲ್ಲಿ ಸತತವಾಗಿ ಹೊಸದಿಲ್ಲಿ ಏರುಗತಿಯಲ್ಲಿ ಸಾಗುತ್ತಿದೆ. ವರದಿಗಳ ಪ್ರಕಾರ, ಕೇಂದ್ರ ಮತ್ತು ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ ಭಾರತವು ತನ್ನ ಉನ್ನತ ಸ್ಥಾನವನ್ನು ಉಳಿಸಿಕೊಂಡಿದೆ. ...
READ MORE
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉದ್ಯೋಗ ಖಾತ್ರಿ ಹೆಚ್ಚಳ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಉದ್ಭವಿಸಿರುವ ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಕಾಯ್ದೆಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ 100 ದಿನಗಳ ಉದ್ಯೋಗವನ್ನು 150ಕ್ಕೆ ವಿಸ್ತರಿಸಲಾಗಿದ್ದು, ಈ ವರ್ಷ ಮಾನವ ದಿನಗಳ ಸೃಜನೆ ಗುರಿಯನ್ನು 8.5 ಕೋಟಿ ಯಿಂದ 10 ...
READ MORE
“21st ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮುಖ್ಯ ನ್ಯಾಯಮೂರ್ತಿ ಪದಚ್ಯುತಿ ಹೇಗಾಗುತ್ತದೆ ಗೊತ್ತಾ? ದೇಶದಲ್ಲೀಗ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಸಂಘರ್ಷ ನಡೆಯುತ್ತಿದೆ. ಅದರಲ್ಲೂ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರ ಹಟಾವೋ ಚಳವಳಿ ಜೋರಾಗಿ ಸಾಗುತ್ತಿದೆ. ಪ್ರತಿಪಕ್ಷಗಳು ಈ ಸಂಬಂಧ ನಿಲುವಳಿ ಸೂಚನೆ ಕೂಡ ಮಂಡಿಸಿದೆ. ಸಹೋದ್ಯೋಗಿ ನ್ಯಾಯಮೂರ್ತಿಗಳೇದೀಪಕ್‌ ಮಿಶ್ರಾ ವಿರುದ್ಧ ಆರೋಪ ...
READ MORE
“9th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಏಷ್ಯಾ ಮಾಧ್ಯಮ ಶೃಂಗಸಭೆ ಸುದ್ದಿಯಲ್ಲಿ ಏಕಿದೆ? ಮಾಧ್ಯಮ ಕ್ಷೇತ್ರದ ಅವಲೋಕನ ನಡೆಸುವ ನಿಟ್ಟಿನಲ್ಲಿ ಮೇ 10ರಿಂದ ಎರಡು ದಿನಗಳ ಕಾಲ 15ನೇ ಏಷ್ಯಾ ಮಾಧ್ಯಮ ಶೃಂಗಸಭೆ ಹೊಸದಿಲ್ಲಿಯಲ್ಲಿ ನಡೆಯಲಿದೆ. ಧ್ಯೇಯ ವಾಕ್ಯ: 'ಟೆಲ್ಲಿಂಗ್‌ ಅವರ್‌ ಸ್ಟೋರಿಸ್‌ -ಏಷ್ಯಾ ಅಂಡ್‌ ಮೋರ್‌' ಆಯೋಜಕರು: ಇಂಡಿಯನ್‌ ಇನ್ಸಿಟ್ಯೂಟ್‌ ಆಫ್‌ ಮಾಸ್‌ ಕಮ್ಯೂನಿಕೇಷನ್‌ ...
READ MORE
3rd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಸಂಜೀವಿನಿ ಯಶಸ್ವಿನಿ
“26 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“27th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
19th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
” 28 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
13th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“21st ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“9th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *