“23rd ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”

ಸ್ಪೀಡ್‌ ಪೋಸ್ಟ್‌

1.

ಸುದ್ಧಿಯಲ್ಲಿ ಏಕಿದೆ ?ಗ್ರಾಹಕರ ಸಮಯ ಉಳಿತಾಯದೊಂದಿಗೆ ಸುಗಮ ಹಾಗೂ ತ್ವರಿತ ಅಂಚೆ ವಿಲೇವಾರಿಗೆ ಅನುಕೂಲವಾಗುವಂತೆ ಅಂಚೆ ಇಲಾಖೆಯು ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌ ಅಳವಡಿಕೆ ಮಾಡಿದೆ.

 • ಎಟಿಎಂ ಮಾದರಿಯಲ್ಲಿರುವ ‘ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌’ ಯಂತ್ರವನ್ನು ದೇಶದಲ್ಲೇ ಮೊದಲ ಬಾರಿಗೆ ನಗರದ ಪ್ರಧಾನ ಅಂಚೆ ಕಚೇರಿ (ಜಿಪಿಒ)ಯಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಇದು ಗ್ರಾಹಕರಿಗೆ ಸುಗಮ ಅಂಚೆ ವ್ಯವಹಾರ ನಡೆಸಲು ಅನುಕೂಲ ಮಾಡಿಕೊಡಲಿದೆ.
 • ದೂರವಾಣಿ, ಮೊಬೈಲ್‌, ವಾಟ್ಸ್‌ಆ್ಯಪ್‌, ಇ-ಮೇಲ್‌ ಮೂಲಕ ತ್ವರಿತ ಸಂದೇಶ ರವಾನೆ ಮಾಡುವ ಆಧುನಿಕ ವ್ಯವಸ್ಥೆಗಳ ನಡುವೆಯೂ ಅಂಚೆ ಇಲಾಖೆಗೆ ತೆರಳಿ ತಾಸುಗಟ್ಟಲೆ ಕಾಯುತ್ತ ರಿಜಿಸ್ಟ್ರರ್‌ ಪೋಸ್ಟ್‌ ಮತ್ತು ಸ್ಪೀಡ್‌ ಪೋಸ್ಟ್‌ ಮಾಡುವ ಬಹಳಷ್ಟು ಮಂದಿ ಇಂದಿಗೂ ಇದ್ದಾರೆ. ಇವರ ಅನುಕೂಲಕ್ಕಾಗಿ ಅಂಚೆ ಇಲಾಖೆ ‘ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌’ ಅನ್ನು ಅವಳಡಿಸಿಕೊಂಡಿದ್ದು, ಪ್ರಾಯೋಗಿಕ ಯಶಸ್ಸು ಆಧರಿಸಿ ಮುಂದಿನ ದಿನಗಳಲ್ಲಿ ಮೆಟ್ರೊ ನಿಲ್ದಾಣ, ಬಸ್‌ ಮತ್ತು ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಈ ಯಂತ್ರಗಳ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಿದೆ.
 • ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌‘: ಎಟಿಎಂ ಯಂತ್ರದ ರೀತಿಯಲ್ಲೇ ಕಾರ್ಯನಿರ್ವಹಿಸುವ ಆಧುನಿಕ ಅಂಚೆ ಪೆಟ್ಟಿಗೆ ಈ ‘ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌’. ಎಟಿಎಂನಲ್ಲಿ ಹಣ ಪಡೆಯುವ ರೀತಿಯಲ್ಲೇ ಈ ಯಂತ್ರ ಬಳಸಿ ಕೆಲವೇ ನಿಮಿಷಗಳಲ್ಲಿ ರಿಜಿಸ್ಟರ್‌ ಪೋಸ್ಟ್‌ ಮತ್ತು ಸ್ಪೀಡ್‌ ಪೋಸ್ಟ್‌ ಗಳನ್ನು ಕಳುಹಿಸಬಹುದಾಗಿದೆ. ನಗರದ ಜನರಿಗೆ ಸಮಯದ ಉಳಿತಾಯಕ್ಕೆ ಈ ಯಂತ್ರ ಸಹಕಾರಿಯಾಗಿದೆ. ಅದಕ್ಕೂ ಮೊದಲು ಯಂತ್ರದ ಪ್ರಾಯೋಗಿಕ ಪರೀಕ್ಷೆ ನಡೆಸಿ ನಂತರ ಸಾರ್ವಜನಿಕ ಬಳಕೆಗೆ ಇಡಲಾಗುವುದು.

ಕಾರ್ಯನಿರ್ವಹಣೆ ಹೇಗೆ?:

 • ಇದರಲ್ಲಿ ಕೇವಲ ಸ್ಪೀಡ್‌ ಪೋಸ್ಟ್‌ ಅಥವಾ ರಿಜಿಸ್ಟರ್‌ ಪೋಸ್ಟ್‌ಗಳನ್ನು ಮಾತ್ರವೇ ಕಳುಹಿಸಲು ಅವಕಾಶ. ಮೊದಲಿಗೆ ಗ್ರಾಹಕರು ಯಂತ್ರದ ಎದುರು ನಿಂತು ತಮ್ಮ ಹೆಸರು, ಮೊಬೈಲ್‌ ಸಂಖ್ಯೆ ಮತ್ತು ಇಮೇಲ್‌ ಐಡಿ, ಪೋಸ್ಟ್‌ ತಲುಪಬೇಕಾದ ವಿಳಾಸ ಸೇರಿದಂತೆ ಯಂತ್ರ ಕೇಳುವ ಮಾಹಿತಿಗಳನ್ನು ದಾಖಲಿಸಬೇಕು.
 • ನಂತರ ತಾನು ಕಳುಹಿಸುತ್ತಿರುವ ಪೋಸ್ಟ್‌ ಸ್ಪೀಡ್‌ ಅಥವಾ ರಿಜಿಸ್ಟರ್‌ ಎಂಬುದನ್ನು ದೃಢಪಡಿಸಿ ಯಂತ್ರದಲ್ಲಿ ಪೋಸ್ಟ್‌ಕವರ್‌ ಹಾಕಿದರೆ ತೂಕ ಮತ್ತು ಕ್ರಮಿಸಬೇಕಾದ ದೂರವನ್ನು ಆಧರಿಸಿ ಎಷ್ಟು ಹಣ ಪಾವತಿಸಬೇಕು ಎಂಬುದನ್ನು ಪರದೆಯ ಮೇಲೆ ತೋರಿಸುತ್ತದೆ.
 • ಆಗ ಡೆಬಿಟ್‌ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಅಥವಾ ಐಪಿಪಿಬಿ ಕಾರ್ಡ್‌ ಬಳಸಿ ಯಂತ್ರದಲ್ಲೇ ಹಣ ಪಾವತಿಸಿದರೆ. ಕೂಡಲೇ ಬಾರ್‌ಕೋಡ್‌ ಸ್ಟಿಕ್ಕರನ್ನು ನೀಡುತ್ತದೆ. ಅದನ್ನು ಪೋಸ್ಟಲ್‌ ಕವರ್‌ ಮೇಲೆ ಅಂಟಿಸಿ ಯಂತ್ರದ ಒಳಕ್ಕೆ ಹಾಕಿದರೆ ರಸೀದಿ ನೀಡುತ್ತದೆ. ಅಲ್ಲಿಗೆ ವಹಿವಾಟ ಕಾರ್ಯ ಮುಗಿಯಲಿದೆ. ನಂತರ ಅಂಚೆ ಇಲಾಖೆ ಸಿಬ್ಬಂದಿ ಅದನ್ನು ತಲುಪಿಸುವ ಕಾರ್ಯ ಮಾಡಲಿದ್ದಾರೆ.
 • ಪ್ರಧಾನಿಯಿಂದ ಚಾಲನೆ: ಐಟಿಐ ಮತ್ತು ಸಿ ಡಾಕ್‌ ವತಿಯಿಂದ ಅಭಿವೃದ್ದಿ ಪಡಿಸಿರುವ ‘ಸ್ಮಾರ್ಟ್‌ ಪೋಸ್ಟ್‌ ಕಿಯೋಸ್ಕ್‌’ ಯಂತ್ರವನ್ನು ಹೊಸದಿಲ್ಲಿಯಲ್ಲಿ ನಡೆಯಲಿರುವ ಪ್ರದರ್ಶನ ಒಂದರಲ್ಲಿ ಇರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಬಳಿಕ ಯಂತ್ರದ ಪ್ರಾಯೋಗಿಕ ಪರೀಕ್ಷೆ ನಡೆಸಿ ಸಾರ್ವಜನಿಕ ಬಳಕೆಗೆ ಇಡಲಾಗುವುದು.

ಉಡಾನ್‌ 3ರಲ್ಲಿ ಬೆಳಗಾವಿ

2.

ಸುದ್ಧಿಯಲ್ಲಿ ಏಕಿದೆ ?ವಿಮಾನ ನಿಲ್ದಾಣಗಳ ಪುನರುಜ್ಜೀವನಕ್ಕಾಗಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಉಡಾನ್‌ ಯೋಜನೆಯ 3ನೇ ಹಂತ ಇನ್ನೊಂದು ವಾರದಲ್ಲಿ ಘೋಷಣೆಯಾಗುವ ನಿರೀಕ್ಷೆ ಇದ್ದು, ಇದರಲ್ಲಿ ಬೆಳಗಾವಿ ವಿಮಾನ ನಿಲ್ದಾಣದ ಹೆಸರು ಇರಲಿದೆ.

ಹಿನ್ನಲೆ

 • ಉಡಾನ್‌ 3ರಲ್ಲಿ ಬೆಳಗಾವಿ ಸೇರಿಸುವಂತೆ ಕೇಂದ್ರ ಸರಕಾರದ ಮೇಲೆ ಬೆಳಗಾವಿಯ ಸಂಘಸಂಸ್ಥೆಗಳು, ಗಣ್ಯರು, ಜನಪ್ರತಿನಿಧಿಗಳು ಹೋರಾಟದ ಮೂಲಕ ನಿರಂತರ ಒತ್ತಡ ತಂದಿದ್ದರು. ವೈಯಕ್ತಿಕ ಭೇಟಿಯಲ್ಲದೆ ಟ್ವಿಟರ್‌ ಸೇರಿದಂತೆ ಡಿಜಿಟಲ್‌ ಮೀಡಿಯಾಗಳ ಮೂಲಕವೂ ಹೋರಾಟ ನಡೆದಿತ್ತು.

ಮಾರಕವಾದ ಯೋಜನೆ:

 • ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ವಿಮಾನ ನಿಲ್ದಾಣಗಳನ್ನು ಉಳಿಸಲೆಂದು ಕೇಂದ್ರ ಸರಕಾರ ಉಡಾನ್‌ ಯೋಜನೆ ಜಾರಿಗೆ ತಂದಿದೆ. ಆದರೆ ಸಂಚಾರ ದಟ್ಟಣೆ ಇದ್ದರೂ ಇದೇ ಯೋಜನೆ ಬೆಳಗಾವಿ ವಿಮಾನ ನಿಲ್ದಾಣದ ಪಾಲಿಗೆ ಮಾರಕವಾಗಿ ಪರಿಣಮಿಸಿತ್ತು. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಈ ಯೋಜನೆಯ ಅಡಿ ಸೇರಿಸಿದ್ದರಿಂದಾಗಿ ಬೆಳಗಾವಿಯಿಂದ ಎಲ್ಲ ವಿಮಾನಗಳು ಹುಬ್ಬಳ್ಳಿಗೆ ಸ್ಥಳಾಂತರಗೊಂಡಿದ್ದವು. ಹಾಗಾಗಿ ಬೆಳಗಾವಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದ್ದರೂ ತೀವ್ರ ಸಂಕಷ್ಟಕ್ಕೆ ತಲುಪಿದೆ.
 • ಉಡಾನ್‌ ಯೋಜನೆಗೆ ಬೆಳಗಾವಿ ಸೇರ್ಪಡೆಯಾದರೆ ಬೆಳಗಾವಿಯಿಂದ ಬೆಂಗಳೂರು, ಮುಂಬೈ, ನವದೆಹಲಿ, ಹೈದರಾಬಾದ್‌, ಚೆನ್ನೈಸೇರಿದಂತೆ ರಾಷ್ಟ್ರದ ಪ್ರಮುಖ ನಗರಗಳೊಂದಿಗೆ ವಿಮಾನಯಾನ ಸೌಲಭ್ಯ ಒದಗುವ ನಿರೀಕ್ಷೆ ಇದೆ. ಏರ್‌ ಇಂಡಿಯಾ, ಇಂಡಿಗೋ, ಸ್ಪೈಸ್‌ ಜೆಟ್‌, ಸ್ಟಾರ್‌ ಏರ್‌ವೇಸ್‌ ಮೊದಲಾದ ಕಂಪನಿಗಳು ಬೆಳಗಾವಿಯಿಂದ ವಿಮಾನ ಸೇವೆ ನೀಡುವ ಸಾಧ್ಯತೆ ಇದೆ.
 • 1 ನೇ ಹಂತದ ಮಾರ್ಗ: ಉಡೇ ದೇಶ್ ಕ ಆಮ್ ನಾಗರೀಕ್ (ಉಡಾನ್) ಯೋಜನೆಯಡಿ ಬಳ್ಳಾರಿಯ ವಿದ್ಯಾನಗರ-ಬೆಂಗಳೂರು, ಬೆಂಗಳೂರು-ಸೇಲಂ, ಮೈಸೂರು-ಚೆನ್ನೈ ನಡುವೆ ವಿಮಾನ ಸೇವೆ ಆರಂಭವಾಗಿದೆ.
 • 2 ನೇ ಹಂತದ ಮಾರ್ಗ: ಉಡಾನ್ 2ನೇ ಹಂತದ ಯೋಜನೆಯಲ್ಲಿ ಬೆಂಗಳೂರು-ಕೊಪ್ಪಳ, ಹುಬ್ಬಳ್ಳಿ-ಅಹಮದಾಬಾದ್ ನಡುವೆ ವಿಮಾನ ಸೇವೆ ಆರಂಭವಾಗುತ್ತಿದೆ.

ಬೆಳಗಾವಿ  ವಿಮಾನ ನಿಲ್ದಾಣ

 • ಬೆಳಗಾವಿ ವಿಮಾನನಿಲ್ದಾಣವು ಇತ್ತೀಚಿಗೆ ವಿಸ್ತರಿಸಿದ ಓಡುದಾರಿ 3 ಕಿಮೀ, ಹೊಸ ಪ್ರತ್ಯೇಕವಾದ ಕೊಲ್ಲಿ, ಟ್ಯಾಕ್ಸಿವೇ, ಮೂರು ದೊಡ್ಡ ವಿಮಾನಗಳಿಗಾಗಿ ಏಪ್ರನ್ ಮತ್ತು 22.5 ಮೀ ಏರ್ ಟ್ರಾಫಿಕ್ ಕಂಟ್ರೋಲ್ ಟವರ್ ಮತ್ತು ಫ್ಲೈಟ್ ಮಾಹಿತಿ ಪ್ರದರ್ಶನ ವ್ಯವಸ್ಥೆಗಳನ್ನು ಹೊಂದಿದೆ. ಇದು ಒಂದು ಮೀಸಲಾದ ಅಗ್ನಿಶಾಮಕ ಕೇಂದ್ರವನ್ನೂ ಸಹ ಹೊಂದಿದೆ.
 • 320 ಪ್ರಯಾಣಿಕರು, ಒಂದು ಮೀಸಲು ಕೋಣೆ ಮತ್ತು ಎಲಿವೇಟರ್, ಎರಡು ಬ್ಯಾಗೇಜ್ ಕನ್ವೇಯರ್ ಬೆಲ್ಟ್ಗಳು ಮತ್ತು ಆರು ಸಿಇಟಿಇ (ಸಾಮಾನ್ಯ ಬಳಕೆ ಟರ್ಮಿನಲ್ ಉಪಕರಣಗಳು) -ಶಕ್ತಗೊಂಡ ಚೆಕ್ ಇನ್ ಕೌಂಟರ್ಗಳನ್ನು ನಿರ್ವಹಿಸುವ 3,600 ಚದರ ಮೀಟರ್ಗಳಷ್ಟು ವಿಸ್ತಾರವಾದ ಹೊಸ ಟರ್ಮಿನಲ್ ಕಟ್ಟಡವನ್ನು ಇಲ್ಲಿ ಒಳಗೊಂಡಿದೆ. 250 ಕಾರುಗಳನ್ನು ಹೊಂದಿಸಲು ಇದು ಪಾರ್ಕಿಂಗ್ ಸ್ಥಳವನ್ನು ಹೊಂದಿದೆ.

ಅದು ಹೇಗೆ ಪ್ರಾರಂಭವಾಯಿತು?

 • 1941 ರಲ್ಲಿ ಬ್ರಿಟಿಷ್ ರಾಯಲ್ ವಾಯುಪಡೆಯಿಂದ ಈ ವಿಮಾನ ನಿಲ್ದಾಣವು ನಿರ್ಮಿಸಲ್ಪಟ್ಟಿತು, ಇದು ಬೆಳಗಾವಿ ಸಾಂಗ್ಲಿಯ ಪಟವರ್ಧನ್ ರಾಜರಿಂದ ಆಳಲ್ಪಟ್ಟಿತು.
 • ಸ್ವಾತಂತ್ರ್ಯದ ತನಕ, ಸೇನಾ ವಿಮಾನಗಳು ಮತ್ತು ಕೆಲವು ಖಾಸಗಿ ವಿಮಾನಗಳು ಮಾತ್ರ ಜಾಗವನ್ನು ಬಳಸಿದವು. ಏರ್ ಇಂಡಿಯಾವು 1947 ರಿಂದ ವಿಮಾನ ಹಾರಾಟ ಆರಂಭಿಸಿತು.
 • ಗೋವಾ ವಿಮೋಚನೆ ಚಳವಳಿಯ ಸಂದರ್ಭದಲ್ಲಿ ನಾಯಕರು ಮತ್ತು ಸರಬರಾಜುಗಳನ್ನು ಸಾಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ. ಏರ್ ಡೆಕ್ಕನ್, ಎನ್.ಪಿ.ಪಿ.ಸಿ, ಈಸ್ಟ್ ವೆಸ್ಟ್ ಮತ್ತು ಗುಜರಾತ್ ಏರ್ಲೈನ್ಸ್ ಮುಂತಾದ ಹಲವಾರು ಖಾಸಗಿ ಪಾಲುದಾರರು ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
 • ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿನ ತಾಂತ್ರಿಕ ಸಾಮರ್ಥ್ಯಗಳು ಮತ್ತು ನಾಗರಿಕ ಸೌಕರ್ಯಗಳು ರೂ. 140 ಕೋಟಿ. ರಾಜ್ಯ ಸರ್ಕಾರ 365 ಎಕರೆ ಭೂಮಿಯನ್ನು ಎಎಐಗೆ ಉಚಿತವಾಗಿ ನೀಡಿದೆ. ರೈತರಿಗೆ ಮಾರುಕಟ್ಟೆ ದರವನ್ನು ನಾಲ್ಕು ಬಾರಿ ಪಾವತಿಸಿದ ನಂತರ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು.
 • 2016 ರಲ್ಲಿ ವಿಮಾನ ನಿಲ್ದಾಣವು ಸುಮಾರು ಒಂದು ಲಕ್ಷ ಪ್ರಯಾಣಿಕರನ್ನು ನಿಭಾಯಿಸಿತು. 2017 ರಲ್ಲಿ ಅಡಿಪಾಯ ಸ್ವಲ್ಪಮಟ್ಟಿಗೆ ಕಡಿಮೆಯಾಯಿತು, ಏಕೆಂದರೆ ಇದು ಅಪ್ಗ್ರೇಡ್ಗಾಗಿ ಸ್ವಲ್ಪ ಸಮಯದವರೆಗೆ ಮುಚ್ಚಲ್ಪಟ್ಟಿತು.

ವಿಶ್ವದ ಅತಿ ಉದ್ದದ ಸಮುದ್ರ ಸೇತುವೆ

3.

ಸುದ್ಧಿಯಲ್ಲಿ ಏಕಿದೆ ?ನಿರ್ಮಾಣ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರಗತಿ ಪಥದತ್ತ ಮುನ್ನುಗ್ಗುತ್ತಿರುವ ಚೀನಾ ಪರ್ಲ್‌ ರಿವರ್‌ ಡೆಲ್ಟಾ ಸಮುದ್ರ ತೀರದಲ್ಲಿ ವಿಶ್ವದ ಅತಿ ಉದ್ದದ ಸೇತುವೆ ನಿರ್ಮಿಸಿದೆ.

 • ಹಾಂಕಾಂಗ್‌-ಮಕಾವ್‌-ಝುಹಾಯ್‌ ನಡುವೆ ನಿರ್ಮಾಣಗೊಂಡಿರುವ 55 ಕಿ.ಮೀ ಉದ್ದದ ಸಮುದ್ರ ಸೇತುವೆಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಅಕ್ಟೋಬರ್‌ 24ರಂದು ಚೀನಾದ ಝುಹಾಯ್‌ನಲ್ಲಿ ಉದ್ಘಾಟಿಸಲಿದ್ದಾರೆ.

ಪ್ರಯೋಜನಗಳು

 • ಹಾಂಕಾಂಗ್‌ನಿಂದ ಝುಹಾಯ್‌ ನಡುವಿನ ಪ್ರಯಾಣ ಅವ 3 ಗಂಟೆಯಾಗಿತ್ತು. ಆದರೆ ಈಗ ಈ ಸೇತುವೆಯಿಂದ ಪ್ರಯಾಣ ಅವ ಕೇವಲ 30 ನಿಮಿಷಕ್ಕೆ ಇಳಿಯಲಿದೆ.
 • 56,500 ಚದರ ಕಿ.ಮೀ ವಿಸ್ತೀರ್ಣದ ದಕ್ಷಿಣ ಚೀನಾದಲ್ಲಿನ 11 ನಗರಗಳಿಗೆ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆ ದೃಷ್ಟಿಯಿಂದ ಇದರಿಂದ ಅನುಕೂಲವಾಗಲಿದೆ. 2009ರಲ್ಲಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. 2016ರಲ್ಲಿ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದ್ದರೂ ನಾನಾ ಕಾರಣಗಳಿಂದ ಉದ್ಘಾಟನೆ ವಿಳಂಬಗೊಂಡಿತ್ತು.

ವಿಶೇಷ ಏನು?

 • ಅಗಾಧ ಪ್ರಮಾಣದಲ್ಲಿ ಉಕ್ಕು ಮತ್ತು ಸಿಮೆಂಟ್‌ ಬಳಸಿ ಇದನ್ನು ನಿರ್ಮಿಸಲಾಗಿದೆ. ಗಂಟೆಗೆ 360 ಕಿ.ಮಿ. ವೇಗದಲ್ಲಿ ಚಂಡಮಾರುತ ಬೀಸಿದರೂ ಸೇತುವೆಗೆ ಹಾನಿಯಾಗದು. ಸರಿಸುಮಾರು 120 ವರ್ಷ ಬಾಳಿಕೆ ಬರುತ್ತದೆ ಎನ್ನುತ್ತಾರೆ ಮುಖ್ಯ ವಿನ್ಯಾಸಗಾರ ಮೆಂಗ್‌ ಫ್ಯಾನ್‌ಚಾವ್‌.
 • ಅಂದಾಜು ವೆಚ್ಚ – 4 ಲಕ್ಷ ಕೋಟಿ ರೂ.
 • ಸೇತುವೆ ಉದ್ದ – 55 ಕಿ.ಮೀ
 • ಕೃತಕ ದ್ವೀಪದ ಮೂಲಕ ನಿರ್ಮಿಸಿದ ಸುರಂಗ ಮಾರ್ಗದ ಉದ್ದ – 3 ಕಿ.ಮೀ
 • ದಿನವೊಂದಕ್ಕೆ ಕಾರುಗಳ ಸಂಚಾರಕ್ಕೆ ನೀಡುವ ಮಿತಿ – 5,000
 • ಹಾಂಕಾಂಗ್‌-ಝುಹಾಯ್‌ ನಡುವಿನ 3 ಗಂಟೆ ಪ್ರಯಾಣದ ಅವಧಿ ಈಗ ಅರ್ಧ ಗಂಟೆಗೆ ಇಳಿಯಲಿದೆ.

ಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ ?ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಶ್ರಮಿಸಿದವರಿಗೆ ನೀಡಲಾಗುವ ಪ್ರತಿಷ್ಠಿತ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಈ ಬಾರಿ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರನ್ನು ರಾಜ್ಯ ಸರಕಾರ ಆಯ್ಕೆ ಮಾಡಿದೆ.

 • ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರ ಅಧ್ಯಕ್ಷತೆಯಲ್ಲಿ ಸರಕಾರ ನೇಮಿಸಿದ್ದ ಸಮಿತಿ ಶಿಫಾರಸಿನಂತೆ ಸರಕಾರ ಈ ಪ್ರಶಸ್ತಿಯನ್ನು ಎಚ್‌.ಡಿ.ದೇವೇಗೌಡ ಅವರಿಗೆ ನೀಡಿ ಗೌರವಿಸಲು ನಿರ್ಧರಿಸಿದೆ.
 • ಪ್ರಶಸ್ತಿಯು 5ಲಕ್ಷ ನಗದು, ಚಿನ್ನದ ಫಲಕವನ್ನು ಒಳಗೊಂಡಿದೆ. ರಾಜ್ಯ ಸರ್ಕಾರ ನೀಡುವ ಎರಡನೇ ಪ್ರಶಸ್ತಿ ಇದಾಗಿದೆ.
 • ಕಳೆದ ವರ್ಷ ಅಕ್ಟೋಬರ್ 5ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದ ಬೃಹತ್ ಮೆಟ್ಟಿಲು ಮೇಲೆ ನಡೆದ ಸಮಾರಂಭದಲ್ಲಿ ನಡೆದಿತ್ತು. ಮಾಜಿ ಸಚಿವ ವೀರಣ್ಣ ಅವರಿಗೆ ನೀಡಲಾಗಿತ್ತು.
 • ಶೋಷಿತ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿರುವ ವ್ಯಕ್ತಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಅಕ್ಟೋಬರ್ 24ರಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮೆನ್‌ ಟೂ ಅಭಿಯಾನ

4.

ಸುದ್ಧಿಯಲ್ಲಿ ಏಕಿದೆ ?ಒಂದೆಡೆ ಮಿ ಟೂ ಆಂದೋಲನದ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಮತ್ತೊಂದೆಡೆ ಮೆನ್‌ ಟೂ ಅಭಿಯಾನ ಆರಂಭವಾಗಿದೆ.

 • ಮಿ ಟೂ ಮೂಲಕ ಮಹಿಳೆಯರು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯವನ್ನು ಧೈರ‍್ಯವಾಗಿ ಹೇಳಲು ಮುಂದಾಗುತ್ತಿದ್ದಾರೆ. ಅದೇ ರೀತಿ ಪುರುಷರು ಕೂಡ ಈಗ ಮಹಿಳೆಯರಿಂದ ತಮ್ಮ ಮೇಲಾದ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಇದಕ್ಕೆ ಸಾಮಾಜಿಕ ತಾಣ ಹಾಗೂ ಬಹಿರಂಗ ವೇದಿಕೆಗಳು ಸೃಷ್ಟಿಯಾಗುತ್ತಿವೆ.
 • ಪುರುಷರ ಮೇಲಿನ ದೌರ್ಜನ್ಯವನ್ನು ವಿರೋಧಿಸುವ ಆಂದೋಲನ ಟ್ವಿಟ್ಟರ್‌ ಸೇರಿ ನಾನಾ ಸಾಮಾಜಿಕ ತಾಣಗಳಲ್ಲಿ ಹ್ಯಾಷ್‌ಟ್ಯಾಗ್‌ನಡಿ ಮೆನ್‌ ಟೂ, ವಿ ಟೂ ಮತ್ತಿತರ ಹೆಸರುಗಳಲ್ಲಿ ಆರಂಭವಾಗಿದೆ. ಇದರಡಿ ಪುರುಷರು ತಾವು ಮಹಿಳೆಯರಿಂದ ಹೇಗೆ ದೌರ್ಜನ್ಯಕ್ಕೆ ಒಳಗಾಗಿದ್ದೇವೆ ಎಂಬುದನ್ನು ಹೇಳಿಕೊಳ್ಳಲಾರಂಭಿಸಿದ್ದಾರೆ.

ಹಿನ್ನಲೆ

 • ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ‘ಮೀ ಟೂ’ಯಿಂದ  ಸ್ಫೂರ್ತಿಗೊಂಡ ಪುರುಷರ ಗುಂಪೊಂದು ಬೀದಿಗಿಳಿದು , ‘ಮೆನ್ ಟೂ’ ಎಂಬ ಫಲಕಗಳನ್ನು ಹಿಡಿದು
 • ಪ್ರತಿಭಟನಾಕಾರರು ತಮ್ಮ ಚಳುವಳಿ ವರದಕ್ಷಿಣೆ ಕಾಯಿದೆಯಡಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498A ಅಡಿಯಲ್ಲಿ ‘ಸುಳ್ಳು’ ಪ್ರಕರಣಗಳು ನೋಂದಾಯಿಸಲಾಗಿದೆ  ಎಂದು ಪ್ರತಿಭಟಿಸಿದರು .

ಬಹಿರಂಗ ವೇದಿಕೆ

 • ಮೆನ್‌ ಟೂ ಅಭಿಯಾನ ಇದೀಗ ಕೇವಲ ಸಾಮಾಜಿಕ ತಾಣಗಳಿಗೆ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ಮೆನ್‌ ಟೂ ಸಾರ್ವಜನಿಕ ಅಭಿಯಾನ ಆರಂಭವಾಗಿದ್ದು, ಈ ಸಂಬಂಧ ಈಗಾಗಲೇ ಪುರುಷರ ಪರ ಹೋರಾಟ ಸಂಘಟನೆಯೊಂದು ಜನ ಜಾಗೃತಿ ಆಂದೋಲನ ನಡೆಸಿದೆ.
 • ಈ ಮೂಲಕ ಪುರುಷರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರೆ ಸಾಂತ್ವನ ನೀಡಲಾಗುವುದು, ಸಾಮಾಜಿಕ ತಾಣಗಳ ಮೂಲಕವೂ ಈ ಸಂಬಂಧ ಅಭಿಪ್ರಾಯ ಹಂಚಿಕೊಳ್ಳಬಹುದು ಎಂದಿದೆ ಸಂಘಟನೆ. ಮಹಿಳೆ ಅಥವಾ ಪುರುಷ ಎನ್ನುವ ಲಿಂಗಭೇದ ಮರೆತು ದೌರ್ಜನ್ಯದ ಲೈಂಗಿಕ ವಿರುದ್ಧ ಹೋರಾಟಕ್ಕೆ ಇಂತಹ ಅಭಿಯಾನಗಳು ಸಕಾರಾತ್ಮಕ ವೇದಿಕೆಯಾಗಬೇಕು.

ಅನಗತ್ಯ ಗೊಂದಲ, ಆರೋಪ ಬೇಡ

 • ಪುರುಷ ಅಥವಾ ಮಹಿಳೆ ಯಾರೇ ಆದರೂ ಒಪ್ಪಿತವಲ್ಲದ ಯಾವುದೇ ರೀತಿಯ ಅಸಹಜ ಸ್ಪರ್ಶ, ಲೈಂಗಿಕ ದೌರ್ಜನ್ಯವನ್ನು ಸಹಿಸುವುದಿಲ್ಲ. ಅದೇ ರೀತಿ ಪ್ರತಿಭಟಿಸಲು ಮುಂದಾಗುವುದಿಲ್ಲ. ಕಿರಿಕಿರಿ ಅನುಭವಿಸುತ್ತಾರೆ, ನೋವು ಅನುಭವಿಸುತ್ತಾರೆ.
 • ಆದರೆ ಇಂತಹ ಅಭಿಯಾನಗಳು ಅಂತರಾಳದ ನೋವನ್ನು ಹೊರ ಹಾಕಲು, ಅನ್ಯಾಯದ ವಿರುದ್ಧ ಹೋರಾಡಲು ಸಹಕಾರಿಯಾಗಬೇಕು. ಮಿ ಟೂ ಅಥವಾ ಮೆನ್‌ ಟೂ ಇನ್ಯಾವುದೇ ಆದರೂ ಮಹಿಳೆ ಅಥವಾ ಪುರುಷನ ಮೇಲೆ ಅನಗತ್ಯ ಆರೋಪಿಸುವುದು ಬೇಡ. ತಪ್ಪು ಕಲ್ಪನೆಗಳಿಗೆ ದೌರ್ಜನ್ಯದ ಹೆಸರು ಇಡುವುದು ಬೇಡ ಎಂಬ ಮಾತು ಸಾಮಾನ್ಯರಿಂದ ಸಿಲೆಬ್ರಿಟಿಗಳವರೆಗೂ ಕೇಳಿ ಬರುತ್ತಿದೆ.

ಪ್ರಧಾನಮಂತ್ರಿ ಮುದ್ರಾ ಯೋಜನೆ

5.

ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ(ಪಿಎಂಎಂವೈ)ಯಡಿ ಶೇಕಡಾ 90ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಿಕ್ಕಿದ ಸಾಲದ ಮೊತ್ತ 50 ಸಾವಿರಕ್ಕೂ ಕಡಿಮೆಯಾಗಿದೆ. ಸರ್ಕಾರದ ಅಂಕಿಅಂಶಗಳಿಂದ ಇದು ತಿಳಿದುಬಂದಿದೆ.

 • ಯೋಜನೆಯಡಿ ಸಣ್ಣ ಉದ್ದಿಮೆದಾರರಿಗೆ 10 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಆದರೆ ಉದ್ದಿಮೆಗಳ ಷೇರುದಾರರು, ವ್ಯಾಪಾರಿಗಳು, ಸಂಘಟನೆಗಳು, ಬ್ಯಾಂಕು ಅಧಿಕಾರಿಗಳು, ಯೋಜನೆಯ ತಜ್ಞರು ಹೇಳುವ ಪ್ರಕಾರ, ಒಂದು ಸಣ್ಣ ಉದ್ದಿಮೆ ಆರಂಭಿಸಲು ಕೂಡ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಇಂದು ಅಗತ್ಯವಿರುತ್ತದೆ. ಸರ್ಕಾರ ನೀಡುವ ಸಾಲದ ಮೊತ್ತ ಸಾಕಾಗುವುದಿಲ್ಲ ಎಂದು ಹೇಳುತ್ತಾರೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆ

 • ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಮೂರು ವಿಭಾಗಗಳಲ್ಲಿ ಸಾಲವನ್ನು ನೀಡಲಾಗುತ್ತದೆ.
 • ಶಿಶು ಸಾಲ(50 ಸಾವಿರದವರೆಗೆ), ಕಿಶೋರ(50 ಸಾವಿರದಿಂದ 5 ಲಕ್ಷಗಳವರೆಗೆ) ಮತ್ತು ತರುಣ(5 ಲಕ್ಷದಿಂದ 10 ಲಕ್ಷದವರೆಗೆ) ಎಂಬ ಮೂರು ವಿಭಾಗಗಳಿವೆ.
 • ಇದುವರೆಗೆ ಸುಮಾರು 04 ಕೋಟಿಗೂ ಅಧಿಕ ಮಂದಿ ಕಿಶೋರ ಸಾಲ ತೆಗೆದುಕೊಂಡಿದ್ದು ತರುಣ ವಿಭಾಗದಡಿ ಸಾಲ ಪಡೆದವರ ಸಂಖ್ಯೆ 19 ಲಕ್ಷ ಮಂದಿ.

ಕಡಿಮೆ ಸಾಲ ನೀಡುವುದಿಂದ ಆಗುವ ಪರಿಣಾಮಗಳು

 • 50 ಸಾವಿರಕ್ಕಿಂತ ಅಥವಾ ಅದಕ್ಕಿಂತ ಕಡಿಮೆ ಸಾಲ ನೀಡುವುದು ಯೋಜನೆಯ ಉದ್ದೇಶವನ್ನೇ ಅಳಿಸಿಹಾಕುತ್ತದೆ.
 • ಅನೇಕ ಸಂದರ್ಭಗಳಲ್ಲಿ ಸಾಲ ಪಡೆಯುವ ವ್ಯಾಪಾರಿಗಳು ಮಧ್ಯವರ್ತಿಗಳ ಸಹಾಯದಿಂದ ಸಾಲ ಪಡೆಯುತ್ತಿದ್ದು ಅವರಿಗೆ ಕಮಿಷನ್ ನೀಡಬೇಕಾಗುತ್ತದೆ. ಇಂತವರಲ್ಲಿ ಅನೇಕ ಮಧ್ಯವರ್ತಿಗಳು ಬ್ಯಾಂಕಿಗೆ ಹಣ ಪಾವತಿಸುವುದಿಲ್ಲ, ಸಣ್ಣ ಉದ್ದಿಮೆದಾರರಿಗೆ ಕಿರುಕುಳ ನೀಡುತ್ತಾರೆ.
 • ಈ ಮಧ್ಯೆ ವ್ಯಾಪಾರಿಗಳು ಮತ್ತು ಜನರ ವಿರೋಧದ ನಂತರ ಸರ್ಕಾರ ಮುದ್ರಾ ಯೋಜನೆಯ ಪರಿಣಾಮಗಳನ್ನು ವಿಸ್ತಾರವಾದ ಅಧ್ಯಯನ ನಡೆಸಲು ಮುಂದಾಗಿದೆ. ಅಧ್ಯಯನದಲ್ಲಿ ಸುಮಾರು 1 ಲಕ್ಷ ಮುದ್ರಾ ಯೋಜನೆ ಫಲಾನುಭವಿಗಳನ್ನು ಒಳಪಡಿಸಲಾಗಿದೆ.

 ಪರಮಾಣು ಒಪ್ಪಂದ

ಸುದ್ಧಿಯಲ್ಲಿ ಏಕಿದೆ ?ಶೀತಲ ಸಮರ ಸಂದರ್ಭದಲ್ಲಿ ರಷ್ಯಾ ಜೊತೆ ಮಾಡಿಕೊಂಡಿದ್ದ ಮಧ್ಯಂತರ ಶ್ರೇಣಿಯ ಪರಮಾಣು ಪಡೆ(ಐಎನ್ಎಫ್) ಒಪ್ಪಂದದಿಂದ ಅಮೆರಿಕ ಹೊರಬರಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. ರಷ್ಯಾ ಒಪ್ಪಂದವನ್ನು ಮುರಿದಿದೆ ಎಂದು ಅಮೆರಿಕಾ ಆರೋಪಿಸಿದೆ.

 • ಅಮೆರಿಕಾ-ರಷ್ಯಾ ನಡುವಿನ ಮೂರು ದಶಕಗಳ ಒಪ್ಪಂದ ಇದಾಗಿದೆ.

ಹಿನ್ನಲೆ

 • 1987ರಲ್ಲಿ ಅಮೆರಿಕಾ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಮತ್ತು ರಷ್ಯಾ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ನಡುವೆ ನಡೆದ ಒಪ್ಪಂದ ಇದಾಗಿತ್ತು.
 • 500-1,000 ಕಿಲೋಮೀಟರ್ ಅಥವಾ 310-620 ಮೈಲುಗಳು (ಸಣ್ಣ-ವ್ಯಾಪ್ತಿಯ) ಮತ್ತು 1,000-5,500 ಕಿಮೀ ಅಥವಾ 620-3,420 ಮೈಲಿಗಳು (ಮಧ್ಯಂತರ-ಶ್ರೇಣಿಯ) ವ್ಯಾಪ್ತಿಯೊಂದಿಗೆ ಅವುಗಳ ಉಡಾವಣಾ ಸಾಧನಗಳ ಮಧ್ಯಂತರ ಶ್ರೇಣಿಯ ಮತ್ತು ಕಡಿಮೆ ವ್ಯಾಪ್ತಿಯ ಕ್ಷಿಪಣಿಗಳ ಹೊರಹಾಕುವಿಕೆಯ ಒಪ್ಪಂದ ಇದಾಗಿತ್ತು.
 • ಇದು ಎಲ್ಲಾ ಪರಮಾಣು ಮತ್ತು ಸಾಂಪ್ರದಾಯಿಕ ಕ್ಷಿಪಣಿಗಳನ್ನು ಹೊರಹಾಕುತ್ತದೆ.
 • ಈ ಹಳೆ ಒಪ್ಪಂದವನ್ನು ಮುರಿದಿದ್ದು ಹೊಸ ಒಪ್ಪಂದವನ್ನು ಚೀನಾ ಮತ್ತು ರಷ್ಯಾ ಒಪ್ಪಿಕೊಳ್ಳದಿದ್ದರೆ ನಾವೇ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Related Posts
“03 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಲೆನಾಡಿನಲ್ಲಿ ಮಂಗನಕಾಯಿಲೆ: ಸುದ್ಧಿಯಲ್ಲಿ ಏಕಿದೆ ?ಮಹಾಮಾರಿ ಮಂಗನಕಾಯಿಲೆಗೆ ನಾಲ್ವರು ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಸಿಗೆಯಲ್ಲಿ ತೀರ್ಥಹಳ್ಳಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಂಗನ ಕಾಯಿಲೆ ಈ ಬಾರಿ ಬೇಸಿಗೆಗೂ ಮುಂಚೆ ಕಾಣಿಸಿಕೊಂಡಿದೆ. ಜತೆಗೆ ಸಾಗರಕ್ಕೂ ವ್ಯಾಪಿಸಿದೆ. ಮಂಗನಕಾಯಿಲೆ ಹರಡದಂತೆ ಪ್ರತಿವರ್ಷ ಲಸಿಕೆ ಹಾಕಲಾಗುತ್ತಿತ್ತು. ಆದರೆ ...
READ MORE
“20 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಗಿಡ ಬೆಳೆಸಿ ಅಂಕ ಗಳಿಸಿ! ಯೋಜನೆ ಸುದ್ಧಿಯಲ್ಲಿ ಏಕಿದೆ ?ಇನ್ನು ಮುಂದೆ 8ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಚೆನ್ನಾಗಿ ಪೋಷಿಸಿದರೆ ಅಂಕಗಳನ್ನು ಪಡೆಯಬಹುದು. ಅರಣ್ಯ, ಪರಿಸರ ಮತ್ತು ಜೈವಿಕ ಇಲಾಖೆ ಈ ಸಂಬಂಧ ಸದ್ಯದಲ್ಲಿಯೇ ...
READ MORE
“04 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸೇನೆಗೆ ಮಣಿಪಾಲದ ಬೈನಾಕ್ಯೂಲರ್ ಸುದ್ಧಿಯಲ್ಲಿ ಏಕಿದೆ ?ದೇಶದಲ್ಲಿ ಶತಮಾನದ ಹಿಂದಿನ ತಂತ್ರಜ್ಞಾನ ಹೊಂದಿರುವ ಟೆಲಿಸ್ಕೋಪ್ ಮತ್ತು ಬೈನಾಕ್ಯುಲರ್ ಬಳಸಲಾಗುತ್ತಿದೆ. ಅತ್ಯಾಧುನಿಕ ಬೈನಾಕ್ಯುಲರ್ ಬೇಕಾದರೆ ಲಕ್ಷಾಂತರ ರೂ. ವ್ಯಯಿಸಬೇಕಿದ್ದರಿಂದ ಸಂಶೋಧನೆ ಮತ್ತು ಸೈನಿಕ ಕಾರ್ಯಾಚರಣೆಗೆ ತೊಡಕಾಗಿದೆ. ಹೀಗಾಗಿ ಮಣಿಪಾಲದ ಇಂಜಿನಿಯರೊಬ್ಬರು ಕಡಿಮೆ ವೆಚ್ಚದ, ಉತ್ತಮ ...
READ MORE
“31 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದೇವಸ್ಥಾನಕ್ಕೂ ಬಂತು ವಸ್ತ್ರ ಸಂಹಿತೆ, ಗುರುತಿನ ಚೀಟಿ ಸುದ್ಧಿಯಲ್ಲಿ ಏಕಿದೆ ?ದೇವಸ್ಥಾನಗಳಲ್ಲಿ ಪ್ರಸಾದ ದುರಂತ ಘಟನೆಗಳಿಂದ ಎಚ್ಚೆತ್ತ ಸರಕಾರ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದೆ. ಸೂಚನೆಗಳೇನು ? ಪ್ರಸಾದ ತಯಾರಕರಿಂದ ಹಿಡಿದು ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿ ಸರಕಾರ ನಿಗದಿಪಡಿಸಿದ ಮಾರ್ಗ ಸೂಚಿಯನ್ವಯ ಸಮವಸ್ತ್ರ ...
READ MORE
12th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
 ಏಕತೆ ಪ್ರತಿಮೆ ಪೂರ್ಣ ಸುದ್ಧಿಯಲ್ಲಿ ಏಕಿದೆ ?ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಉಕ್ಕಿನ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅವರ 143ನೇ ಹುಟ್ಟುಹಬ್ಬದ ದಿನ ಅ. 31ರಂದು ಉದ್ಘಾಟನೆಗೊಳ್ಳಲಿದೆ. ಗುಜರಾತ್​ನ ನರ್ಮದಾ ನದಿಯ ...
READ MORE
” 28 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಡಿಎಲ್, ಆರ್​ಸಿ ಡಿಜಿಟಲ್ ದಾಖಲೆ ಪರೀಕ್ಷಿಸಲು ಮಾರ್ಗಸೂಚಿ ಸುದ್ಧಿಯಲ್ಲಿ ಏಕಿದೆ ?ವಾಹನ ಚಾಲಕರು ಸಲ್ಲಿಸುವ ಡಿಜಿಟಲ್ ಮಾದರಿ ದಾಖಲೆಗಳು ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹಲವು ಮಾರ್ಗಸೂಚಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್- ಎಸ್​ಒಪಿ) ರೂಪಿಸಿದೆ. ಎಸ್​ಒಪಿ ...
READ MORE
“10 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಚ್​ಟಿಟಿ 40 ಸ್ಪಿನ್ ಟೆಸ್ಟ್ ಯಶಸ್ವಿ ಸುದ್ಧಿಯಲ್ಲಿ ಏಕಿದೆ ?ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ತಯಾರಿಸಿರುವ ಎಚ್​ಟಿಟಿ 40 (ತರಬೇತಿ ಯುದ್ಧವಿಮಾನ) ಯಶಸ್ವಿಯಾಗಿ ಸ್ಪಿನ್ ಟೆಸ್ಟ್ ನಡೆಸಿದೆ. ಎಚ್​ಟಿಟಿ 40 ಹಾರಾಟದ ಸಂದರ್ಭದಲ್ಲೇ ಸ್ಪಿನ್ ಟೆಸ್ಟ್ ನಡೆಸಿ ನಂತರ ಯಥಾಸ್ಥಿತಿಯಲ್ಲಿ ಹಾರಾಡುವಲ್ಲಿ ಯಶಸ್ವಿಯಾಗಿದೆ. ಗ್ರೂಪ್ ಕ್ಯಾಪ್ಟನ್​ಗಳಾದ ...
READ MORE
“20 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸ್ತ್ರೀಯರಿಗೆ ಕಾಯಕ ಶಕ್ತಿ! ಸುದ್ಧಿಯಲ್ಲಿ ಏಕಿದೆ ?ಬಡವರ ಬಂಧು, ಋಣ ಪರಿಹಾರ ಕಾಯ್ದೆಗಳ ಮೂಲಕ ಬಡವರ ನೆರವಿಗೆ ಬಂದ ಸರ್ಕಾರ, ಮಹಿಳಾ ಮತದಾರರಿಗಾಗಿ ರೂಪಿಸಿರುವ ಕಾಯಕ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮಹಿಳೆಯರಿಗೆ ಮುಂದಿನ ಐದು ವರ್ಷಗಳಲ್ಲಿ ಪ್ರತಿ ...
READ MORE
“28th ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮೇಕೆದಾಟು ಯೋಜನೆ ಸುದ್ಧಿಯಲ್ಲಿ ಏಕಿದೆ? ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು, ಯೋಜನೆ ವಿರೋಧಿಸಿದ್ದ ತಮಿಳುನಾಡಿಗೆ ಹಿನ್ನಡೆಯಾಗಿದೆ. ಮೇಕೆದಾಟು ಯೋಜನೆ ಕುರಿತ ರಾಜ್ಯದ ಪ್ರಿ-ಫೀಸಿಬಿಲಿಟಿ ವರದಿಗೆ ಕೇಂದ್ರದ ಜಲ ಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿದ್ದು, ಸಮಗ್ರ ಯೋಜನಾ ವರದಿ ...
READ MORE
“18 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
ತಲಕಾವೇರಿಯಲ್ಲಿ ತೀರ್ಥೋದ್ಭವ ಸುದ್ಧಿಯಲ್ಲಿ ಏಕಿದೆ ?ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಕಂಡು ಭಕ್ತರು ಪುಳಕಿತರಾದರು. ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಉಕ್ಕುವುದನ್ನು ಕಂಡು ಹಾಗೂ ಪುರೋಹಿತರು ತೀರ್ಥವನ್ನು ಚೆಲ್ಲಿದ ನಂತರ ಭಕ್ತರು ಸಂತೃಪ್ತಗೊಂಡರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಈ ಅಭೂತಪೂರ್ವ ...
READ MORE
“03 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“20 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“04 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“31 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
12th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
” 28 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“10 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“20 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“28th ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“18 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “

Leave a Reply

Your email address will not be published. Required fields are marked *