“24 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ವಿಶ್ವ ತುಳು ಸಮ್ಮೇಳನ

1.

ಸುದ್ಧಿಯಲ್ಲಿ ಏಕಿದೆ ?ಕಡಲಾಯೆರೆದ ತುಳುವೆರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ತುಳು ಒಕ್ಕೂಟ ಸಹಕಾರದಲ್ಲಿ ದುಬೈಯ ಅಲ್ ನಾಸರ್ ಎರಡು ದಿನಗಳ ವಿಶ್ವ ತುಳು ಸಮ್ಮೇಳನ ಲೀಸರ್ ಲ್ಯಾಂಡ್ ಐಸ್‌ರಿಂಕ್ ಒಳಾಂಗಣ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಉದ್ಘಾಟನಾ ಸಮಾರಂಭ ನಡೆಯಿತು.

 • ವಿಶ್ವಾದ್ಯಂತ ಎರಡು ಮಿಲಿಯ ಜನರು ತುಳು ಎನ್ನುವ ಸುಂದರ ಭಾಷೆ ಮಾತನಾಡುತ್ತಿರುವುದರಿಂದ ತುಳು ವಿಶ್ವ ಭಾಷೆಗಳ ಭಾಗವಾಗಿ ಮಾರ್ಪಟ್ಟಿದೆ.
 • ಭಾರತದಲ್ಲಿ ಅಲ್ಪಸಂಖ್ಯಾತ ಭಾಷೆ, ಸಂಸ್ಕೃತಿ ಉಳಿಸುವ ಕೆಲಸ ನಡೆಸುತ್ತಿದೆ. ಯುಎಇ ಸಂಸ್ಕೃತಿಗೆ ಪ್ರಾಮುಖ್ಯತೆ ನೀಡುತ್ತಿದ್ದು, ಇತರ ದೇಶಗಳ ಹಬ್ಬ, ಸಂಸ್ಕೃತಿ ಆಚರಣೆಗೂ ಅವಕಾಶ ನೀಡುತ್ತಾ ಬಂದಿದೆ

ಹೆಚ್ಚು ಭಾಷೆ ಮಾತನಾಡುವವರು

2.

ಸುದ್ಧಿಯಲ್ಲಿ ಏಕಿದೆ ?ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಭಾಷೆಗಳನ್ನು ಮಾತನಾಡುವವರ ಪೈಕಿ ಕರ್ನಾಟಕ ನಂ. 1 ಎಂಬ ಕೀರ್ತಿಗೆ ಪಾತ್ರವಾಗಿದೆ. ಅಲ್ಲದೆ, ಇಡೀ ದೇಶದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ.

 • ಶೇಕಡಾವಾರು ಜನಸಂಖ್ಯೆಯ ಅನುಸಾರ ಒಂದಕ್ಕಿಂತ ಹೆಚ್ಚು ಭಾಷೆ ಮಾತನಾಡುವ ಪಟ್ಟಿಯಲ್ಲಿ ರಾಜ್ಯ ಮೂರನೇ ಸ್ಥಾನ ಪಡೆದುಕೊಂಡಿದೆ.
 • ಕಾಸ್ಮೋಪಾಲಿಟನ್ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರು ಹಾಗೂ ಇತರೆ ರಾಜ್ಯಗಳ ಗಡಿಯೊಂದಿಗೆ ಹೊಂದಿಕೊಂಡಿರುವ ಜಿಲ್ಲೆಗಳ ಜನತೆ ಹಾಗೂ ಬೇರೆ ರಾಜ್ಯಗಳಿಂದ ಬರುವ ವಲಸಿಗರ ನೆರವಿನಿಂದ ದೇಶದ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ರ‍್ಯಾಂಕ್ ದೊರೆತಿದೆ.
 • 5 ಕೋಟಿಗೂ ಅಧಿಕ ಜನಸಂಖ್ಯೆಯನ್ನು ರಾಜ್ಯ ಹೊಂದಿರುವ ಹಾಗೂ ದೇಶದ ಒಟ್ಟಾರೆ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲನೇ ರ‍್ಯಾಂಕ್ ಪಡೆದುಕಂಡಿದ್ದರೆ, ಗುಜರಾತ್ ಎರಡನೇ ಸ್ಥಾನ ಗಳಿಸಿದೆ.
 • 2011ರ ಜನಗಣತಿ ಪ್ರಕಾರ ಇಂಗ್ಲೀಷ್‌ ಅನ್ನು ಹೊರತುಪಡಿಸಿದರೆ ಮಹಾರಾಷ್ಟ್ರ, ಗುಜರಾತ್ ಹಾಗೂ ಕರ್ನಾಟಕದಲ್ಲಿ ಮರಾಠಿ, ಕನ್ನಡ, ತಮಿಳು, ತೆಲುಗು, ಕೊಂಕಣಿ, ಸೌರಾಷ್ಟ್ರ, ಹಿಂದಿ ಹಾಗೂ ಮಲಯಾಳಂ ಅನ್ನು ಹೆಚ್ಚಾಗಿ ಮಾತನಾಡಲಾಗುತ್ತದೆ.
 • ಇನ್ನು, ತಮಿಳುನಾಡು, ಪುದುಚೆರಿ, ಅವಿಭಜಿತ ಆಂಧ್ರ ಹಾಗೂ ಕೇರಳವನ್ನು ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಎರಡಕ್ಕಿಂತ ಹೆಚ್ಚು ಭಾಷೆ ಮಾತನಾಡುವವರ ಶೇಕಡಾವಾರು ಜನಸಂಖ್ಯೆ ಹೆಚ್ಚಿದೆ.
 • ಅಲ್ಲದೆ, ಎರಡು ಭಾಷೆ ಹಾಗೂ ಎರಡಕ್ಕಿಂತ ಹೆಚ್ಚು ಭಾಷೆ ಸೇರಿ ಎರಡೂ ಪಟ್ಟಿಗಳಲ್ಲಿ ರಾಜ್ಯ ದಕ್ಷಿಣ ಭಾರತದ ಇತರೆ ರಾಜ್ಯಗಳನ್ನು ದೊಡ್ಡ ಅಂತರದಿಂದ ಸೋಲಿಸಿದೆ.

ವಿಧಾನಸಭೆ ಕಟ್ಟಡ

3.

ಸುದ್ಧಿಯಲ್ಲಿ ಏಕಿದೆ ?ನೂತನ ರಾಜಧಾನಿ ಅಮರಾವತಿಯಲ್ಲಿ ನಿರ್ವಣವಾಗಲಿರುವ ವಿಧಾನಸಭೆ ಕಟ್ಟಡವನ್ನು ಏಕತಾ ಪ್ರತಿಮೆಗಿಂತಲೂ 68 ಮೀ. ಹೆಚ್ಚು ಎತ್ತರ ನಿರ್ವಿುಸಲು ಸಿಎಂ ಚಂದ್ರಬಾಬು ನಾಯ್ಡು ಮುಂದಾಗಿದ್ದಾರೆ.

 • ಎರಡು ವರ್ಷದಲ್ಲಿ ನಿರ್ಮಾಣ ಪೂರ್ಣಗೊಳಿಸಲಾಗುವುದು

ತಲೆಯೆತ್ತಲಿರುವ ಪ್ರತಿಮೆಗಳು…

 • ಉತ್ತರ ಪ್ರದೇಶದಲ್ಲಿ 201 ಮೀ. ಎತ್ತರದ ಶ್ರೀರಾಮನ ಪ್ರತಿಮೆ
 • ಕರ್ನಾಟಕ ಸರ್ಕಾರದಿಂದ 125 ಮೀ. ಎತ್ತರದ ಕಾವೇರಿ ಪ್ರತಿಮೆ
 • ಮುಂಬೈ ಬಳಿ ಅರಬ್ಬಿ ಸಮುದ್ರದಲ್ಲಿ 212 ಮೀ. ಎತ್ತರದ ಛತ್ರಪತಿ ಶಿವಾಜಿ ಪ್ರತಿಮೆ

ಬ್ರಿಟನ್​ವಾಸ್ತುಶಿಲ್ಪಿಗಳು

 • ನೋರ್ವ ಫಾಸ್ಟರ್ಸ್’ ಎಂಬ ಬ್ರಿಟನ್ ಮೂಲದ ವಾಸ್ತುಶಿಲ್ಪ ಕಂಪನಿಯ ತಜ್ಞರು ರೂಪಿಸಿರುವ ವಿಧಾನಸಭೆ ಕಟ್ಟಡದ ನೀಲಿನಕ್ಷೆಗೆ ನಾಯ್ಡು ಸಮ್ಮತಿ ನೀಡಿದ್ದಾರೆ. ಮೂರು ಮಹಡಿಗಳ ವಿಧಾನಸಭೆ ಕಟ್ಟಡದ ಒಟ್ಟು ಎತ್ತರ 250 ಮೀ.ಗೂ ಹೆಚ್ಚಿರಲಿದೆ.

ವಿಧಾನಸಭೆ ವಿಶೇಷ

 • ಲಿಲ್ಲಿ ಹೂವನ್ನು ಉಲ್ಟಾ ಇಟ್ಟಿರುವಂತೆ ಕಾಣುವ ಕಟ್ಟಡ ವಿನ್ಯಾಸ
 • ಎರಡು ಗ್ಯಾಲರಿ: 80 ಮೀ. ಎತ್ತರದಲ್ಲಿ 300 ಜನರಿಗೆ ಆಸನ ವ್ಯವಸ್ಥೆ, 250 ಮೀ. ಎತ್ತರದಲ್ಲಿ 20 ಜನರಿಗೆ ಆಸನ ವ್ಯವಸ್ಥೆ. ಇಲ್ಲಿಂದಲೇ ಪೂರ್ಣ ಅಮರಾವತಿ ಗೋಚರ.
 • ಗಾಜಿನಲ್ಲಿ ಗ್ಯಾಲರಿ ಮತ್ತು ಅದಕ್ಕೆ ತಲುಪುವ ಎಲಿವೇಟರ್​ಗಳ ನಿರ್ಮಾಣ.
 • ಚಂಡಮಾರುತ, ಭೂಕಂಪನ ನಿರೋಧಕ ಸಾಮರ್ಥ್ಯದ ಕಟ್ಟಡಗಳು.

ಕರ್ತಾರ್​ಪುರ ಗಡಿ ಕಾರಿಡಾರ್

4.

ಸುದ್ಧಿಯಲ್ಲಿ ಏಕಿದೆ ?ಕರ್ತಾರ್‌ಪುರ ಗಡಿ ಕಾರಿಡಾರ್‌ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆಂದು ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ

 • ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ನ. 28ರಂದು ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ
 • ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ಸಿಕ್ಕರ ಪವಿತ್ರ ಕ್ಷೇತ್ರ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಭಾರತೀಯ ಯಾತ್ರಿಗಳ ಭೇಟಿಗೆ ನೆರವಾಗಲು ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಿಂದ ಅಂತಾರಾಷ್ಟ್ರೀಯ ಗಡಿಗೆ ಕಾರಿಡಾರ್‌ ಸ್ಥಾಪಿಸಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು

ಹಿನ್ನಲೆ

 • ಭಾರತದೆಡೆ ಶಾಂತಿ ಪೂರ್ವಕ ಹೆಜ್ಜೆ ಇರಿಸಿರುವ ಪಾಕಿಸ್ತಾನ ಸಿಕ್ಕರ ಪವಿತ್ರ ಕತಾರ್​ಪುರ ದರ್ಬಾರ್​ ಸಾಹೀಬ್​ಗೆ ಸಂಪರ್ಕ ಕಲ್ಪಿಸುವ ಕತಾರ್​ಪುರ ಕಾರಿಡಾರ್​ ಅನ್ನು ಭಾರತೀಯರಿಗೆ ಮುಕ್ತಗೊಳಿಸಲು ನಿರ್ಧರಿಸಿದೆ.
 • ನವೆಂಬರ್​ನಲ್ಲಿ ಸಿಕ್ಕರ ಧರ್ಮಗುರು ಗುರುನಾನಕ್​ ದೇವ್​ಜೀ ಅವರ 550ನೇ ಜನ್ಮ ಜಯಂತಿ ಆಚರಣೆಯಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಕತಾರ್​ಪುರ ಸಾಹೀಬ್​ ಕಾರಿಡಾರ್​ ತೆರಯಲು ಪಾಕಿಸ್ತಾನ ಅವಕಾಶ ಕಲ್ಪಿಸಿದೆ. ಹೀಗಾಗಿ ಭಾರತೀಯರು ವೀಸಾ ಇಲ್ಲದೇ ಕತಾರ್​ಪುರ ಸಾಹೀಬ್​ಗೆ ತೆರಳಿ ದರ್ಶನ ಪಡೆಯಬಹುದಾಗಿದೆ.

ದೇವಾಲಯ

 • ಕಾರ್ತಾರ್ಪುರದ ಗುರುದ್ವಾರವು ಲಾಹೋರ್ನ ಈಶಾನ್ಯದಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ರವಿ ನದಿ ದಂಡೆಯಲ್ಲಿದೆ. ಇಲ್ಲಿ ಗುರು ನಾನಕ್ ಒಂದು ಸಿಖ್ ಸಮುದಾಯವನ್ನು ಒಟ್ಟುಗೂಡಿಸಿ 1539 ರಲ್ಲಿ ಅವರ ಸಾವಿನ ತನಕ 18 ವರ್ಷಗಳ ಕಾಲ ವಾಸಿಸುತ್ತಿದ್ದರು.
 • ಪಾಕಿಸ್ತಾನದ ಅಧಿಕಾರಿಗಳು ಸಾಮಾನ್ಯವಾಗಿ ದೊಡ್ಡ ಗಾತ್ರದ ಹುಲ್ಲನ್ನು ಟ್ರಿಮ್ ಮಾಡುತ್ತಿರುವುದರಿಂದ ಈ ಪ್ರದೇಶವು ಭಾರತದ ಭಾಗದಿಂದ ಗೋಚರಿಸುತ್ತದೆ. ಇಂಡಿಯನ್ ಸಿಖ್ಖರು ಭಾರತೀಯ ಭಾಗದಿಂದ ದರ್ಶನ್ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ  ದುರ್ಬೀನುಗಳನ್ನು ಸಂಗ್ರಹಿಸುತ್ತಾರೆ ಮತ್ತು ಅವುಗಳನ್ನು  ಗುರುದ್ವಾರ ದೇರಾ ಬಾಬಾ ನಾನಕ್ನಲ್ಲಿ ಸ್ಥಾಪಿಸಲಾಗಿದೆ

ನಡೆಯ ಮಹತ್ವ

 • ಐತಿಹಾಸಿಕ ಗುರುದ್ವಾರವು ಸಿಖ್ಖರ ಮಹತ್ತರವಾದ ಮಹತ್ವವನ್ನು ಹೊಂದಿದೆ, ಗುರು ನಾನಕ್ ದೇವ್ ಅವರ ಕೊನೆಯ ಜೀವಿತಾವಧಿಯನ್ನು ಅಲ್ಲಿ ಕಳೆದಿದ್ದರು.
 • ಇಂಟರ್ನ್ಯಾಷನಲ್ ಗಡಿಯಿಂದ ಗುರುದ್ವಾರ ವರೆಗಿನ ಕಾರಿಡಾರ್ ಸ್ಥಾಪನೆಯು ಎರಡು ಪ್ರತಿಕೂಲ ರಾಷ್ಟ್ರಗಳ ನಡುವೆ ನೋವು ಕಡಿಮೆ ಮಾಡುವ ನಿರೀಕ್ಷೆಯಿದೆ. ಕಾರಿಡಾರ್ ಸಹ ಶಾಂತಿ ಬಿಂದುವಾಗಿ ಕೆಲಸ ಮಾಡುತ್ತದೆ.
 • ಬೇಡಿಕೆಗೆ ಸಮ್ಮತಿಸಿ ಸರ್ಕಾರವು ಸಿಖ್ ಸಮುದಾಯದ ಅಭಿಮಾನವನ್ನು ಗೆಲ್ಲುತ್ತದೆ.
 • ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯದ 71 ವರ್ಷಗಳ ಆಚರಣೆಯಂತೆ, ಗುರುದ್ವಾರ ದರ್ಬಾರ್ ಸಾಹಿಬ್, ಕರ್ತಾರ್ಪುರ್, ವಿಭಜನೆಯು ಕೇವಲ ಸಾಮೂಹಿಕ ಸ್ಥಳಾಂತರ ಮತ್ತು ವೈಯಕ್ತಿಕ ದುರಂತಗಳಿಗೆ ಹೇಗೆ ಕಾರಣವಾಯಿತು ಎನ್ನುವುದಕ್ಕೆ ಕೇವಲ ಒಂದು ಉದಾಹರಣೆಯಾಗಿದೆ, ಆದರೆ ಅವರ ಐತಿಹಾಸಿಕ ಧಾರ್ಮಿಕ ಸ್ಥಳಗಳಿಂದ ಸಮುದಾಯವನ್ನು ಹೇಗೆ ಬೇರ್ಪಡಿಸಲಾಗಿದೆ ಎಂಬುದನ್ನು ಕೂಡಾ ವಿವರಿಸುತ್ತದೆ.
 • ಹೀಗಾಗಿ, ಗುರುಗಳ 550 ನೇ ವರ್ಷಾಚರಣೆಯು ವಿಶ್ವದಾದ್ಯಂತ ಸಿಖ್ ಸಮುದಾಯದಿಂದ ಮನವಿ ಮಾಡಿದಂತೆ, ಪಾಕಿಸ್ತಾನಿ ಮತ್ತು ಭಾರತೀಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಲು ಮತ್ತು ಧಾರ್ಮಿಕ ಕಾರಿಡಾರ್ ಸ್ಥಾಪಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.
 • ಜಂಟಿ ವಿಚಾರ ಸಂಕಿರಣಗಳನ್ನು ಸಹ ನಡೆಸಬಹುದಾಗಿದೆ, ಅಲ್ಲಿ ಗುರು ನಾನಕ್ ದೇವ್ಜಿಯವರ ತತ್ತ್ವಶಾಸ್ತ್ರವು ಪಂಜಾಬ್ ಮತ್ತು ಸಿಖ್ ಸಮುದಾಯದ ಸನ್ನಿವೇಶದಲ್ಲಿಲ್ಲ.

ಮಾನವ ತ್ಯಾಜ್ಯದಿಂದ ಇಂಧನ, ಗೊಬ್ಬರ

5.

ಸುದ್ಧಿಯಲ್ಲಿ ಏಕಿದೆ ?ಜಗತ್ತಿನ ಮಾಲಿನ್ಯಕಾರಕಗಳಲ್ಲಿ ಪ್ರಮುಖವಾಗಿರುವ ಮಾನವ ದೇಹದ ತ್ಯಾಜ್ಯವನ್ನೂ ಇಂಧನವಾಗಿ, ಗೊಬ್ಬರವಾಗಿ ಬಳಸುವ ಬಗ್ಗೆ ಸಂಶೋಧನೆಯೊಂದು ನಡೆದಿದೆ.

 • ಇಸ್ರೇಲ್‌ನ ನೆಗೆವ್‌ನಲ್ಲಿರುವ ಬೆನ್‌-ಗುರಿಯಾನ್‌ ವಿವಿಯ ಸಂಶೋಧಕರು ತ್ಯಾಜ್ಯವನ್ನು ಸುರಕ್ಷಿತ, ಮರುಬಳಸಬಹುದಾದ ಇಂಧನವಾಗಿ ಮತ್ತು ಪೋಷಕಾಂಶಯುಕ್ತ ಗೊಬ್ಬರವಾಗಿ ಬಳಸುವ ಹೊಸ ತಂತ್ರಜ್ಞಾನವನ್ನು ಕಂಡುಕೊಂಡಿದ್ದಾರೆ.
 • ಈ ಸಂಶೋಧನೆಯು ಜಗತ್ತು ಎದುರಿಸುತ್ತಿರುವ ಎರಡು ಪ್ರಮುಖ ಸಮಸ್ಯೆಗಳಿಗೆ ಸಣ್ಣ ಪರಿಹಾರವನ್ನು ಒದಗಿಸಲಿದೆ. ಜಗತ್ತಿಗೆ ಸವಾಲಾಗಿರುವ ಅನೈರ್ಮಲ್ಯ ಒಂದಾದರೆ ಹೆಚ್ಚುತ್ತಿರುವ ಇಂಧನ ಬೇಡಿಕೆ ಎರಡನೆಯದು.
 • ತ್ಯಾಜ್ಯವನ್ನು ಹೈಡ್ರೋಥರ್ಮಲ್‌ ಕಾರ್ಬನೈಸೇಷನ್‌ ಎಂಬ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಅಂದರೆ, ಅತ್ಯಂತ ಹೆಚ್ಚಿನ ಒತ್ತಡದಲ್ಲಿ ಇದನ್ನು ಕಾಯಿಸಲಾಗುತ್ತದೆ. ಆಗ ತ್ಯಾಜ್ಯವು ಹೈಡ್ರೋಚಾರ್‌ ಎಂಬ ಸುರಕ್ಷಿತ, ಮರುಬಳಸಬಹುದಾದ ಕಲ್ಲಿದ್ದಲು ಮಾದರಿಯ ಇಂಧನವಾಗಿ ಪರಿವರ್ತನೆಯಾಗುತ್ತದೆ.

ಏನು ಮಾಡುತ್ತಾರೆ?

 • ತ್ಯಾಜ್ಯವನ್ನು ಹೈಡ್ರೋಥರ್ಮಲ್ ಕಾರ್ಬನೈಸೇಷನ್ ಎಂಬ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಅಂದರೆ, ಅತ್ಯಂತ ಹೆಚ್ಚಿನ ಒತ್ತಡದಲ್ಲಿ ಇದನ್ನು ಕಾಯಿಸಲಾಗುತ್ತದೆ. ಆಗ ತ್ಯಾಜ್ಯವು ಹೈಡ್ರೋಚಾರ್ ಎಂಬ ಸುರಕ್ಷಿತ, ಮರುಬಳಸಬಹುದಾದ ಕಲ್ಲಿದ್ದಲು ಮಾದರಿಯ ಇಂಧನವಾಗಿ ಪರಿವರ್ತನೆಯಾಗುತ್ತದೆ.

ಪೋಷಕಾಂಶಗಳ ಆಗರ

 • ಮಾನವ ಮಲವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸುವುದು ಸ್ವಾಭಾವಿಕ. ಅದರಲ್ಲಿರುವ ಸೂಕ್ಷ್ಮಾಣುಜೀವಿಗಳಿಂದ ರೋಗಗಳು ಹರಡುತ್ತವೆ. ಆದರೆ, ಅದೇ ಹೊತ್ತಿಗೆ ಅದರಲ್ಲಿ ಸಾಕಷ್ಟು ಪೋಷಕಾಂಶಗಳೂ ಇವೆ .
 • ಮಾನವ ತ್ಯಾಜ್ಯವು ಸಾರಜನಕ, ರಂಜಕ ಮತ್ತು ಪೊಟ್ಯಾಶಿಯಂನ್ನು ಯಥೇಚ್ಛವಾಗಿ ಹೊಂದಿದೆ. ಆದರೆ, ಅದರಲ್ಲಿರುವ ಕೆಲವು ಮಾಲಿನ್ಯಕಾರಕಗಳು ಸಮಸ್ಯೆ ಉಂಟು ಮಾಡುತ್ತವೆ

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ 2018

6.

ಸುದ್ಧಿಯಲ್ಲಿ ಏಕಿದೆ ?ಐಬಾ ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಷಿಪ್‌‌ನಲ್ಲಿ ದೇಶದ ಬಾಕ್ಸಿಂಗ್‌ ತಾರೆ ಮೆಗ್ನಿಫಿಸೆಂಟ್‌ ಎಂ.ಸಿ. ಮೇರಿಕೋಮ್‌ ದಾಖಲೆಯ ಆರನೇಯ ಬಾರಿಗೆ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದ್ದಾರೆ.

 • ಆರು ಬಾರಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ವಿಶ್ವದ ಮೊದಲ ಬಾಕ್ಸಿಂಗ್ ತಾರೆ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.
 • ಐಬಾ ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಷಿಪ್‌ನ 48ಕೆಜಿ ಲೈಟ್‌ ಫ್ಲೈವೇಟ್‌ ವಿಭಾಗದಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಉಕ್ರೇನ್‌ನ ಎಚ್. ಓಕೋಟೊ ವಿರುದ್ಧ 5-0 ಅಂತರದ ಅಧಿಕಾರಯುತ ಗೆಲುವು ದಾಖಲಿಸಿದ ಮೇರಿ ಇತಿಹಾಸ ರಚಿಸಿದರು.
Related Posts
“08 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿರಾಗಿಯ ಮಹಾಮಜ್ಜನಕ್ಕೆ ಧರ್ಮಸ್ಥಳ ಸಜ್ಜು ಸುದ್ಧಿಯಲ್ಲಿ ಏಕಿದೆ ? ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಈ ಶತಮಾನದ ಎರಡನೇ ಮಹಾಮಜ್ಜನಕ್ಕೆ ಸಿದ್ಧವಾಗಿದ್ದು, ಧಾರ್ವಿುಕ ಕಾರ್ಯಕ್ರಮಗಳು ಮೇಳೈಸಲಿವೆ. ರತ್ನಗಿರಿ ಬೆಟ್ಟದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ...
READ MORE
” 13 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆನ್​ಲೈನಲ್ಲೇ ಆಯುಷ್ಮಾನ್ ಶಿಫಾರಸು! ಸುದ್ಧಿಯಲ್ಲಿ ಏಕಿದೆ ? ಯಶಸ್ವಿನಿ ಯೋಜನೆ ಕೈಬಿಟ್ಟು ಆರೋಗ್ಯ ಕರ್ನಾಟಕ ರೂಪಿಸಿದ್ದ ಸರ್ಕಾರ ಬಡವರಿಗೆ ಆರೋಗ್ಯ ಕಾರ್ಡ್ ಒದಗಿಸಲು ವ್ಯವಸ್ಥಿತ ಜಾಲ ಸೃಷ್ಟಿಸಿದೆ. ಜತೆಗೆ ಈ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗಳಿಂದ ಪಡೆಯಬೇಕಾದ ಶಿಫಾರಸನ್ನು ...
READ MORE
“14 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಫ್​ಐಆರ್ ಲೋಪಕ್ಕೆ ಅಧಿಕಾರಿಯೇ ಹೊಣೆ ಸುದ್ಧಿಯಲ್ಲಿ ಏಕಿದೆ ?ಸಮಾಜಘಾತಕ ಶಕ್ತಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗದೇ ಬಹುಬೇಗ ಬಿಡುಗಡೆ ಹೊಂದುತ್ತಾರೆ ಎಂಬ ಆರೋಪ ಸಾರ್ವಕಾಲಿಕ. ಆದರೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೇ ಇದನ್ನು ಒಪ್ಪಿ ಎಫ್​ಐಆರ್ ದಾಖಲಾತಿಯ ಪದ್ಧತಿಯಲ್ಲೇ ಆಮೂಲಾಗ್ರ ಬದಲಾವಣೆಗೆ ಮುಂದಾಗಿದೆ. ಯಾವ ಬದಲಾವಣೆಗಳು ...
READ MORE
“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏರೋ ಇಂಡಿಯಾ ಡ್ರೋನ್ ಒಲಿಂಪಿಕ್ಸ್ ಸುದ್ಧಿಯಲ್ಲಿ ಏಕಿದೆ ?ಏರೋ ಇಂಡಿಯಾ ಇತಿಹಾಸದಲ್ಲಿ ಇದೇ ಮೊದಲ ಬಾರಿ ಡ್ರೋನ್​ಗಳ ಸ್ಪರ್ಧೆ ಏರ್ಪಡಿಸಲಾಗಿದ್ದು, ಅದಕ್ಕೆ ಡ್ರೋನ್ ಒಲಿಂಪಿಕ್ಸ್ ಎಂದು ಹೆಸರಿಡಲಾಗಿದೆ. ವಿಜೇತರಾಗುವವರಿಗೆ ನಗದು ಬಹುಮಾನವನ್ನು ನೀಡಲು ಏರೋ ಇಂಡಿಯಾ ಶೋ ಆಯೋಜಕರು ನಿರ್ಧರಿಸಿದ್ದಾರೆ. ಎರಡು ವಿಭಾಗದಲ್ಲಿ ಸ್ಪರ್ಧೆ: ಡ್ರೋನ್ ...
READ MORE
“17 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆರೋಗ್ಯ ಇಲಾಖೆಯ ವಾಟ್ಸ್‌ಆ್ಯಪ್‌ ಪ್ಲಾನ್‌ ಸುದ್ಧಿಯಲ್ಲಿ ಏಕಿದೆ ?ಮಗುವಿನ ಜನನಕ್ಕೆ ನೆರವಾಗುವ ಉದ್ದೇಶದಿಂದ 'ಸುರಕ್ಷಿತ ಗರ್ಭದಿಂದ ಸಂತಸದ ಕೈಗಳಿಗೆ' ಎಂಬ ಘೋಷ ವಾಕ್ಯದೊಂದಿಗೆ ವಿನೂತನ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ ಆಯೋಜಿಸಿದೆ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ವೈದ್ಯರು ಗರ್ಭಿಣಿಯರು ...
READ MORE
“15 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮೇಲ್ವರ್ಗ ಮೀಸಲು ಜಾರಿ ಸುದ್ಧಿಯಲ್ಲಿ ಏಕಿದೆ ?ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನಿಕ ಸವಲತ್ತು ಅಧಿಕೃತವಾಗಿ ಅನುಷ್ಠಾನಗೊಂಡಿದೆ. ಈ ದಿಸೆಯಲ್ಲಿನ ಸಂವಿಧಾನ ತಿದ್ದುಪಡಿಗೆ ರಾಷ್ಟ್ರಪತಿಗಳ ಸಮ್ಮತಿ ಲಭಿಸಿತ್ತು. ''ಸಂವಿಧಾನ (ತಿದ್ದುಪಡಿ) ಕಾಯಿದೆ -2019ರ ವಿಧಿ ...
READ MORE
” 07 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಲೋಕಪಾಲ ಮುಖ್ಯಸ್ಥರ ನೇಮಕ  ಸುದ್ಧಿಯಲ್ಲಿ ಏಕಿದೆ ?ಸುಪ್ರೀಂಕೋರ್ಟ್ ಎಚ್ಚರಿಕೆ ಬಳಿಕ ಕೊನೆಗೂ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆ ವರ್ಷದಲ್ಲೇ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲದ ಮುಖ್ಯಸ್ಥರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದೆ. ಲೋಕಪಾಲ ಕಾಯ್ದೆ ಜಾರಿಗೆ ಬಂದ ಸುಮಾರು ಐದು ವರ್ಷಗಳ ಬಳಿಕ ...
READ MORE
“10 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಾನಪದ ಅಕಾಡೆಮಿ ಪ್ರಶಸ್ತಿ ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಜಾನಪದ ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ರಾಜ್ಯದ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಲಾಗಿದ್ದು, ಡಿ. 27ರಂದು ಬೀದರ್​ನ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ...
READ MORE
12th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
 ಏಕತೆ ಪ್ರತಿಮೆ ಪೂರ್ಣ ಸುದ್ಧಿಯಲ್ಲಿ ಏಕಿದೆ ?ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಉಕ್ಕಿನ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅವರ 143ನೇ ಹುಟ್ಟುಹಬ್ಬದ ದಿನ ಅ. 31ರಂದು ಉದ್ಘಾಟನೆಗೊಳ್ಳಲಿದೆ. ಗುಜರಾತ್​ನ ನರ್ಮದಾ ನದಿಯ ...
READ MORE
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷಿ ಆದಾಯ ಹೆಚ್ಚಳಕ್ಕೆ ಯೋಜನೆ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕೃಷಿ ಭೂಮಿ ಸದ್ಬಳಕೆ ಜತೆಗೆ ಅನ್ನದಾತರ ಆದಾಯವನ್ನೂ ಹೆಚ್ಚಿಸುವ ಉದ್ದೇಶದಿಂದ ಮೂರು ಹೊಸ ಕಾಯ್ದೆಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ರೂಪಿಸಿದ್ದ ಮಾದರಿ ಕಾಯ್ದೆಗಳು ಇದಕ್ಕೆ ಆಧಾರವಾಗಿರುವುದು ವಿಶೇಷ. ಉದ್ದೇಶ ಕೃಷಿ ಭೂಮಿ ಗುತ್ತಿಗೆ ...
READ MORE
“08 ಫೆಬ್ರವರಿ 2019 ರ ಕನ್ನಡ ಪ್ರಚಲಿತ
” 13 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“14 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“17 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 07 ಫೆಬ್ರವರಿ 2019 ರ ಕನ್ನಡ
“10 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
12th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
” 03 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *