“25 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಸಾಲಮನ್ನಾ ಮೊತ್ತ ತೀರಿಸಿ

1.

ಸುದ್ಧಿಯಲ್ಲಿ ಏಕಿದೆ ?ರೈತರ ಕೃಷಿ ಸಾಲಮನ್ನಾ ಮಾಡುತ್ತಿರುವ ರಾಜ್ಯ ಸರ್ಕಾರಗಳು ನಿಗದಿತ ಅವಧಿಯಲ್ಲಿ ಬ್ಯಾಂಕ್​ಗಳಿಗೆ ಹಣ ಭರಿಸಬೇಕು ಎಂದು ನಬಾರ್ಡ್ ಸೂಚಿಸಿದೆ.

ಉದ್ದೇಶ

 • ರಾಜ್ಯ ಸರ್ಕಾರಗಳು ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡದೆ ಸಾಲಮನ್ನಾ ಮಾಡುತ್ತಿವೆ ಎಂಬ ಆರೋಪದ ಮಧ್ಯೆಯೇ ನಬಾರ್ಡ್ ಈ ಮಾರ್ಗಸೂಚಿ ಹೊರಡಿಸಿದೆ. ಸಾಲಮನ್ನಾದಿಂದ ಬ್ಯಾಂಕ್​ಗಳ ಸಾಲಚಕ್ರ ಬದಲಾಗಬಾರದು. ಹೀಗಾಗಿ ರಾಜ್ಯ ಸರ್ಕಾರಗಳು ಘೋಷಿಸಿರುವ ಸಾಲಮನ್ನಾ ಮೊತ್ತಗಳನ್ನು ಕೂಡಲೇ ಬ್ಯಾಂಕ್​ಗಳಿಗೆ ವರ್ಗಾಯಿಸಬೇಕು ಎಂದು ವಿವರಿಸಲಾಗಿದೆ.

ಹಿನ್ನಲೆ

 • ಆಂಧ್ರಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಸಾಲಮನ್ನಾ ಘೋಷಿಸಿದ ಬಳಿಕ ಬ್ಯಾಂಕ್​ಗಳಿಗೆ ಹಣ ವರ್ಗಾಯಿಸಿರಲಿಲ್ಲ. ಕಳೆದ 3-4 ವರ್ಷಗಳಿಂದ ಸಾವಿರಾರು ಕೋಟಿ ರೂ.ಗಳು ಬಾಕಿ ಉಳಿದಿವೆ. ಇದರ ಬೆನ್ನಲ್ಲೇ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ ಹಾಗೂ ಆಸ್ಸಾಂನಲ್ಲಿಯೂ ಸಾಲಮನ್ನಾ ಘೋಷಿಸಲಾಗಿದೆ. ಹೀಗಾಗಿ 2014ರಿಂದ ಸಾಲಮನ್ನಾ ಮಾಡಿರುವ ಎಲ್ಲ 12 ರಾಜ್ಯಗಳಿಗೆ ಹೊಸ ಸುತ್ತೋಲೆ ಹೊರಡಿಸಲಾಗಿದೆ. ಕಳೆದ 2014ರಿಂದ ಸಾಲಮನ್ನಾ ಘೋಷಿಸಿರುವ 12 ರಾಜ್ಯಗಳಲ್ಲಿ ಕೇವಲ ಉತ್ತರಪ್ರದೇಶ ಸರ್ಕಾರ ಮಾತ್ರ ಬ್ಯಾಂಕ್​ಗಳಿಗೆ ಸಾಲಮನ್ನಾದ ಸಂಪೂರ್ಣ ಹಣ ವರ್ಗಾಯಿಸಿದೆ ಎನ್ನಲಾಗಿದೆ.

ಸಾಲ ಮನ್ನಾದಿಂದ ಆಗುವ ತೊಂದರೆ

 • ರಾಜ್ಯ ಸರ್ಕಾರಗಳು ಇದೇ ಮಾದರಿ ಮುಂದುವರಿಸಿದರೆ ಸ್ಥಳೀಯವಾಗಿ ಸಹಕಾರಿ ಬ್ಯಾಂಕ್​ಗಳು ಮುಚ್ಚುವ ಸ್ಥಿತಿಗೆ ಬರಲಿವೆ.
 • ರೈತರಿಗೆ ಹೊಸ ಸಾಲ ಸಿಗುವಲ್ಲಿಯೂ ಸಮಸ್ಯೆಯಾಗಲಿದೆ. ಇದರಿಂದ ರೈತ ಸಮುದಾಯವೇ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರಗಳು ಎಚ್ಚರಿಕೆ ವಹಿಸಬೇಕು ಎಂದು ನಬಾರ್ಡ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ನಬಾರ್ಡ್ ಬಗ್ಗೆ

 • ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಭಾರತದಲ್ಲಿ ಅಪರೂಪದ ಅಭಿವೃದ್ಧಿ ಹಣಕಾಸು ಸಂಸ್ಥೆಯಾಗಿದೆ, ಮುಂಬೈಯ ಪ್ರಧಾನ ಕಚೇರಿಯನ್ನು ಹೊಂದಿದ್ದು ಭಾರತದಾದ್ಯಂತ ಪ್ರಾದೇಶಿಕ ಕಛೇರಿಗಳನ್ನು ಹೊಂದಿದೆ.
 • “ಕೃಷಿ ವಿಷಯಕ್ಕೆ ಸಂಬಂಧಿಸಿದ ವಿಷಯಗಳು, ಯೋಜನೆ ಮತ್ತು ಕಾರ್ಯಾಚರಣೆಗಳಿಗೆ ,ಮತ್ತು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇತರ ಆರ್ಥಿಕ ಚಟುವಟಿಕೆಗಳು ಸಂಬಂಧಿಸಿದಂತೆ ನಬಾರ್ಡ್ ಬ್ಯಾಂಕ್ಗೆ ವಹಿಸಲಾಗಿದೆ” “.
 • ಆರ್ಥಿಕ ಸೇರ್ಪಡೆ ನೀತಿಯನ್ನು ಅಭಿವೃದ್ಧಿಪಡಿಸುವಲ್ಲಿ ನಬಾರ್ಡ್ ಸಕ್ರಿಯವಾಗಿದೆ ಮತ್ತು ಹಣಕಾಸಿನ ಸೇರ್ಪಡೆಗಾಗಿ ಅಲೈಯನ್ಸ್ ಸದಸ್ಯರಾಗಿದ್ದಾರೆ.
 • ಭಾರತದಲ್ಲಿ ಡಿಐಎಫ್ (ಡೆವಲಪ್ಮೆಂಟಲ್ ಫೈನಾನ್ಶಿಯಲ್ ಇನ್ಸ್ಟಿಟ್ಯೂಷನ್) ಸ್ಥಿತಿ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ

ಸುಳ್​ಸುದ್ದಿ ತಡೆಗೆ ಕಾಯ್ದೆ

2.

ಸುದ್ಧಿಯಲ್ಲಿ ಏಕಿದೆ ?ಸಾಮಾಜಿಕ ಜಾಲತಾಣ ಹಾಗೂ ಸಂವಹನ ಆಪ್​ಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

ಏಕೆ ಈ ತಿದ್ದುಪಡಿ ?

 • ಆನ್​ಲೈನ್ ಸಂವಹನ ವೇದಿಕೆಗಳಲ್ಲಿನ ಎಂಡ್ ಟು ಎಂಡ್ ಎನ್ಕ್ರಿಪ್ಶನ್​ಗಳ ವ್ಯವಸ್ಥೆಗೆ ತಿಲಾಂಜಲಿ ಹಾಡಿ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಗಾವಲಿಡಲು ಕೇಂದ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ಸೂಚಿಸಿದೆ.
 • ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಬಹಿರಂಗ ಪಡಿಸಲು ಅಸಾಧ್ಯ ಎಂದ ಹಿನ್ನೆಲೆಯಲ್ಲಿ ಈ ತಿದ್ದುಪಡಿಗೆ ಕೇಂದ್ರ ಮುಂದಾಗಿದೆ.
 • ಐಟಿ ಕಾಯ್ದೆಯ ಸೆಕ್ಷನ್ 66(ಎ)ಯನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿನ ವಿಷಯಗಳ ಬಗ್ಗೆ ಕಾನೂನು ನಿಯಂತ್ರಣವಿರಲಿಲ್ಲ. ಹೀಗಾಗಿ ಐಟಿ ಕಾಯ್ದೆ ಸೆಕ್ಷನ್ 79ಕ್ಕೆ ನಿಯಮ 3(4), 3(5) ಸೇರಿಸಲು ಕೇಂದ್ರ ಸಿದ್ಧವಾಗಿದೆ.

ತಿದ್ದುಪಡಿಯಲ್ಲಿ ಏನಿರಲಿದೆ?

 • ಎಂಡ್ ಟು ಎಂಡ್ ಎನ್ಕ್ರಿಪ್ಶನ್ ವ್ಯವಸ್ಥೆಗೆ ತೆರೆ
 • ಈ ಮೂಲಕ ಸಂದೇಶಗಳ ಮೂಲ ಹುಡುಕುವುದು ಸುಲಭ
 • ಕಾನೂನು ಬಾಹಿರ, ದೇಶ ವಿರೋಧಿ ಅಥವಾ ಇತರ ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿ ಭಾರತೀಯ ಆಯ್ದ ಏಜೆನ್ಸಿಗಳು ಮಾಹಿತಿ ಕೇಳಿದಾಗ 72 ಗಂಟೆಯೊಳಗೆ ದಾಖಲೆ ಬಹಿರಂಗ
 • ಸುಳ್ಳು ಸುದ್ದಿಗಳ ಮೂಲ ಹುಡುಕಲು ಎಲ್ಲ ಕಂಪನಿಗಳಲ್ಲಿ ತಾಂತ್ರಿಕ ವ್ಯವಸ್ಥೆ
 • ಸರ್ಕಾರ ಹಾಗೂ ಕಂಪನಿ ಮಟ್ಟದಲ್ಲಿ 24ಗಿ7 ಸಹಾಯವಾಣಿ
 • ಕಾನೂನು ಬಾಹಿರ ಚಟುವಟಿಕೆಗೆ ಸಂಬಂಧಿಸಿ 180 ದಿನಗಳವರೆಗೆ ದಾಖಲೆಗಳ ಸಂಗ್ರಹ

ಕೇಂದ್ರದ ವಾದವೇನು?

 • ಸುಳ್ಳು ಸುದ್ದಿಗಳ ಪತ್ತೆಗೆ ಪರ್ಯಾಯ ಮಾರ್ಗವಿಲ್ಲ
 • ಸುಳ್ಳು ಸುದ್ದಿಗಳ ಮೂಲ ಪತ್ತೆ ಮಾಡಬೇಕಿದ್ದರೆ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ವ್ಯವಸ್ಥೆಗೆ ಅಂತ್ಯ ಅನಿವಾರ್ಯ
 • ಸಂವಹನ ಕಂಪನಿಗಳು ಅಸಹಾಯಕತೆ ತೋರಿದ ಹಿನ್ನೆಲೆಯಲ್ಲಿ ಕೇಂದ್ರವೇ ಕಾನೂನು ರಚಿಸುತ್ತಿದೆ.

ಏನಿದು ಎಂಡ್-ಟು- ಎಂಡ್ ಎನ್ಕ್ರಿಪ್ಶನ್?

 • ವಾಟ್ಸ್​ಆಪ್​ನ ಪ್ರತಿಯೊಬ್ಬ ಬಳಕೆದಾರರ ಸಂದೇಶಗಳು ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಆಗಿರುತ್ತದೆ. ಈ ಪ್ರಕಾರ ‘ಎ’ ಎನ್ನುವ ವ್ಯಕ್ತಿ ಕಳುಹಿಸಿದ ಸಂದೇಶವು ‘ಬಿ’ ಎನ್ನುವ ವ್ಯಕ್ತಿಗೆ ಹೋಗುವ ಮಧ್ಯದಲ್ಲಿ ಅಥವಾ ನಂತರ ಯಾವುದೇ ಹ್ಯಾಕರ್, ಏಜೆನ್ಸಿ ಹಾಗೂ ಖುದ್ದು ವಾಟ್ಸ್​ಆಪ್ ಸರ್ವರ್ ಕೂಡ ಆ ಸಂದೇಶಗಳನ್ನು ಡಿಕೋಡ್ ಮಾಡಿ ಓದುವ ಸೌಲಭ್ಯವಿರುವುದಿಲ್ಲ. ಸಂದೇಶ ಕಳುಹಿಸಿದವರು ಹಾಗೂ ಸ್ವೀಕರಿಸಿದವರ ಮೊಬೈಲ್​ನಲ್ಲಿ ಮಾತ್ರ ಅದು ಡಿಕೋಡ್ ಆಗುತ್ತದೆ.

ಪ್ರೀ ಪೇಯ್ಡ್‌ ವಿದ್ಯುತ್‌ ಮೀಟರ್‌

3.

ಸುದ್ಧಿಯಲ್ಲಿ ಏಕಿದೆ ?ಮೊಬೈಲ್‌ ಫೋನ್‌ಗಳ ಮಾದರಿಯಲ್ಲಿಯೇ ವಿದ್ಯುತ್‌ ಬಳಕೆಗೂ ಪ್ರೀ ಪೇಯ್ಡ್‌ ರೀಚಾರ್ಜ್‌ ಕಾರ್ಡ್‌ ಪರಿಚಯಿಸಲಾಗುವುದು. ಇದು ಬರುವ ಏಪ್ರಿಲ್‌ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ.

ಏಕೆ ಈ ಪ್ರಿಪೇಯ್ಡ್ ಮೀಟರ್  ?

 • ವಿದ್ಯುತ್‌ ಸೋರಿಕೆ ಹಾಗೂ ಕಳ್ಳತನ ಪ್ರಕರಣಗಳಿಗೆ ತಡೆ ಹಾಕುವುದರ ಜತೆಗೆ ಬಿಲ್ಲಿಂಗ್‌ ಸಮಸ್ಯೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರಕಾರವು ಮುಂದಿನ ವರ್ಷ ಏಪ್ರಿಲ್‌ನಿಂದ ದೇಶಾದ್ಯಂತ ಮುಂಗಡ ಪಾವತಿ ವಿದ್ಯುತ್‌ ಮೀಟರ್‌ (ಪ್ರೀಪೇಯ್ಡ್‌ ಮೀಟರ್‌) ಪದ್ಧತಿ ಅನುಷ್ಠಾನಗೊಳಿಸಲು ನಿರ್ಧರಿಸಿದೆ.
 • ಕಳೆದ ನಾಲ್ಕೂವರೆ ವರ್ಷಗಳಲ್ಲಿ 26 ಕೋಟಿಯಷ್ಟು ಹೊಸ ಗ್ರಾಹಕರ ಸೇರ್ಪಡೆಯಾಗಿದೆ. ಇದೊಂದು ದಾಖಲೆ. ಹೆಚ್ಚೆಚ್ಚು ಗ್ರಾಹಕರು ಸೇರ್ಪಡೆಯಾದಷ್ಟೂ ಸಮಸ್ಯೆ ಹಾಗೂ ಸವಾಲುಗಳು ಹೆಚ್ಚುತ್ತದೆ. ಬಿಲ್‌ ಕಲೆಕ್ಷನ್‌ ದುಸ್ತರವಾಗುತ್ತದೆ.
 • ಬಹುತೇಕ ವಿದ್ಯುತ್‌ ವಿತರಣಾ ಕಂಪನಿ (ಎಸ್ಕಾಂ)ಗಳು ಬಿಲ್‌ ಸಂಗ್ರಹ ಜವಾಬ್ದಾರಿಯನ್ನು ಹೊರಗುತ್ತಿಗೆ ನೀಡಿವೆ. ಆದರೂ ಬಿಲ್‌ ಮೊತ್ತದಲ್ಲಿ ಏರುಪೇರು ಆಗುತ್ತಿರುವ ಬಗ್ಗೆ ಗ್ರಾಹಕರಿಂದ ದೂರುಗಳು ಬರುತ್ತಲೇ ಇವೆ. ಈ ಎಲ್ಲ ತಾಪತ್ರಗಳನ್ನು ಗಮನದಲ್ಲಿಟ್ಟುಕೊಂಡು ಸ್ಮಾರ್ಟ್‌ ಪ್ರೀ ಪೇಯ್ಡ್‌ ಮೀಟರ್‌ ಪದ್ಧತಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಅನುಕೂಲವೇನು?

 • ಈ ಪದ್ಧತಿ ಜಾರಿಯಾದರೆ ಎಲ್ಲವೂ ಸ್ವಯಂ ಚಾಲಿತ ವ್ಯವಸ್ಥೆಗೆ ಒಳಪಡುತ್ತದೆ.
 • ಬಿಲ್ಲಿಂಗ್‌ ಮತ್ತು ಬಳಕೆ ಮೊತ್ತ ಸಂಗ್ರಹ ಆನ್‌ಲೈನ್‌ ವ್ಯವಸ್ಥೆಗೆ ಒಳಪಡುತ್ತದೆ.
 • ಗ್ರಾಹಕರು, ಎಸ್ಕಾಂಗಳು ಇಬ್ಬರಿಗೂ ಅನುಕೂಲ.
 • ಮುಂಗಡವಾಗಿ ಹಣ ಸಂದಾಯವಾಗುವುದರಿಂದ ಎಸ್ಕಾಂಗಳ ತಲೆನೋವು ಕಡಿಮೆಯಾಗಲಿದೆ.
 • ಬಳಸುವಷ್ಟೇ ವಿದ್ಯುತ್‌ಗೆ ಪಾವತಿ ಮಾಡುವುದರಿಂದ ಬಡವರಿಗೆ ಇದರಿಂದ ಹೆಚ್ಚು ಪ್ರಯೋಜನ ಆಗಲಿದೆ.

ಎಲ್ಲರಿಗೂ ಕಡ್ಡಾಯ

 • ನೂತನ ಪ್ರೀ ಪೇಯ್ಡ್‌ ಮೀಟರ್‌ ಪದ್ಧತಿ ಜಾರಿಗೊಂಡ ಬಳಿಕ, ಹಾಲಿ ಇರುವ ಪೋಸ್ಟ್‌ ಪೇಯ್ಡ್‌ ಮೀಟರ್‌ (ಪೋಸ್ಟ್‌ ಪೇಯ್ಡ್‌) ವ್ಯವಸ್ಥೆ ರದ್ದುಗೊಳ್ಳಲಿದೆ. ನೂತನ ಪದ್ಧತಿಗೆ ಎಲ್ಲ ರಾಜ್ಯಗಳು ಸಮ್ಮತಿ ನೀಡುವುದು ಕಡ್ಡಾಯ. ಏಕಕಾಲಕ್ಕೆ ಎರಡು ಪದ್ಧತಿಗಳನ್ನು ಅನುಸರಿಸುವಂತಿಲ್ಲ.

ಸಬ್ಸಿಡಿ ಸಮಸ್ಯೆಗೆ ಪರಿಹಾರ

 • ರಾಜ್ಯ ಸರಕಾರಗಳು ವಿದ್ಯುತ್‌ ಬಿಲ್‌ ಮನ್ನಾ ಮಾಡುವುದಾದರೆ ಪ್ರೀ ಪೇಯ್ಡ್‌ ಪದ್ಧತಿಯಿಂದ ಅಡ್ಡಿ ಎದುರಾಗುವುದಿಲ್ಲವೇ ಎನ್ನುವ ಪ್ರಶ್ನೆಗೆ ಸರಕಾರದ ಬಳಿ ಸಮರ್ಪಕ ಉತ್ತರ ಇದೆ. ಗ್ರಾಹಕ ಕಾಳಜಿಯಿಂದ ವಿದ್ಯುತ್‌ ಬಿಲ್‌ ಮನ್ನಾ ಮಾಡಬಯಸುವ ರಾಜ್ಯ ಸರಕಾರಗಳು, ಮನ್ನಾ ಮೊತ್ತವನ್ನು ಎಸ್ಕಾಂಗಳಿಗೆ ನೇರವಾಗಿ ಪಾವತಿಸಬೇಕಾಗುತ್ತದೆ. ಸಬ್ಸಿಡಿ ವಿಷಯದಲ್ಲಿಯೂ ಇದೇ ನಿಯಮ ಪಾಲಿಸಬೇಕಾಗುತ್ತದೆ. ಆ ಮೂಲಕ ಎಸ್ಕಾಂಗಳು ಸಂಬಂಧಪಟ್ಟ ಗ್ರಾಹಕರಿಗೆ ಅದರ ಲಾಭ ವರ್ಗಾಯಿಸುತ್ತವೆ.

ಪ್ರೇ ಪೇಯ್ಡ್‌ ಮೀಟರ್‌ ರೀಚಾರ್ಜ್‌ ಹೇಗೆ?

 • ಪ್ರೀ ಪೇಯ್ಡ್‌ ಮೊಬೈಲ್‌ ಬಿಲ್‌ ಪಾವತಿಸುವ ವಿಧಾನವೇ ಯಥಾವತ್ತಾಗಿ ಈ ನೂತನ ವಿದ್ಯುತ್‌ ಮೀಟರ್‌ಗೂ ಅನ್ವಯವಾಗುತ್ತದೆ. ಆನ್‌ಲೈನ್‌ ಮೂಲಕ ಹಣ ಟ್ರಾನ್ಸ್‌ಫರ್‌ ಮಾಡಿ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್‌ ಖರೀದಿಸಬಹುದು. ಅಥವಾ ಸಮೀಪದ ವಿದ್ಯುತ್‌ ವಿತರಣ ಕಚೇರಿಗಳಿಗೆ ತೆರಳಿ ಹಣ ಪಾವತಿಸಿ ವಿದ್ಯುತ್‌ ಕಾರ್ಡ್‌ ರೀಚಾರ್ಜ್‌ ಮಾಡಿಸಬಹುದು.
 • ತಿಂಗಳಿಗೆ ಬೇಕಾದಷ್ಟು ವಿದ್ಯುತ್‌ ಬಳಕೆಯ ಮೊತ್ತವನ್ನು ತುಂಬಲೇ ಬೇಕು ಎನ್ನುವ ನಿಯಮ ಇಲ್ಲ. ಒಂದು ಅಥವಾ ಎರಡು ದಿನಗಳಿಗೆ ಬೇಕಾದಷ್ಟು ವಿದ್ಯುತ್‌ ಅನ್ನು ಕೂಡ ಪ್ರೀ ಪೇಯ್ಡ್‌ ಮೂಲಕ ಖರೀದಿಸಲು ಅವಕಾಶ ಇದೆ.
 • 2019, ಏಪ್ರಿಲ್‌ 1 ರಂದು ಪ್ರೀ ಪೇಯ್ಡ್‌ ಮೀಟರ್‌ ಪದ್ಧತಿ ಜಾರಿಗೆ ಬರಲಿದೆ.

ಅಟಲ್‌ ಜನ್ಮದಿನ, ಸ್ಮಾರಕ ಲೋಕಾರ್ಪಣೆ

ಸುದ್ಧಿಯಲ್ಲಿ ಏಕಿದೆ ? ಮಾಜಿ ಪ್ರಧಾನಿ ದಿ.ಅಟಲ್‌ ಬಿಹಾರಿ ವಾಜಪೇಯಿ ಅವರ ಸಮಾಧಿ ಇರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಿರ್ಮಿಸಿರುವ ಸ್ಮಾರಕ ಸದೈವ ಅಟಲ್‌ ಅನ್ನು ವಾಜಪೇಯಿ ಅವರ 94ನೇ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

 • ರಾಜ್‌ಘಾಟ್‌ ಬಳಿಯ ಈ ಸ್ಮಾರಕವನ್ನು ಅಟಲ್‌ ಸ್ಮೃತಿ ನ್ಯಾಸ್‌ ಸೊಸೈಟಿ ನಿರ್ಮಿಸಿದೆ.
 • ಕೇಂದ್ರ ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಿಸಿರುವ ಸ್ಮಾರಕಕ್ಕೆ 51 ಕೋಟಿ ರೂ. ವೆಚ್ಚವಾಗಿದ್ದು, ಇದನ್ನು ಸೊಸೈಟಿಯೇ ಭರಿಸಿದೆ.
 • ವಿಜಯ್‌ಕುಮಾರ್‌ ಮಲ್ಹೋತ್ರಾ ಅಧ್ಯಕ್ಷರಾಗಿರುವ ಸೊಸೈಟಿಗೆ ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಕರ್ನಾಟಕ ರಾಜ್ಯಪಾಲ ವಿ.ಆರ್‌.ವಾಲಾ, ಬಿಹಾರ ರಾಜ್ಯಪಾಲ ಲಾಲ್‌ಜಿ ಟಂಡನ್‌, ಗುಜರಾತ್‌ ರಾಜ್ಯಪಾಲ ಒ.ಪಿ.ಕೊಹ್ಲಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್‌ ಸ್ಥಾಪಕ ಸದಸ್ಯರಾಗಿದ್ದಾರೆ.

ಸ್ಮಾರಕದ ವಿಶೇಷ

 • 5 ಎಕರೆ ವಿಸ್ತೀರ್ಣದಲ್ಲಿ ‘ಸದೈವ ಅಟಲ್‌’ ಸ್ಮಾರಕ ನಿರ್ಮಾಣ
 • 50 ಕೋಟಿ ರೂ.: ಸ್ಮಾರಕ ನಿರ್ಮಾಣಕ್ಕೆ ತಗುಲಿದ ವೆಚ್ಚ
 • ಒಂದು ಮರವವನ್ನೂ ಕತ್ತರಿಸಿಲ್ಲ
 • ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ನೀಡಿದ್ದ ಸ್ಥಳದಲ್ಲಿ ಸ್ಮಾರಕ ನಿರ್ಮಾಣ
 • ಸ್ಮಾರಕಕ್ಕಾಗಿ ಒಂದೇ ಒಂದು ಮರವನ್ನೂ ಕಡಿದಿಲ್ಲ ಎನ್ನುವುದು ಗಮನಾರ್ಹ
 • ಕಳೆದ ಆ.16ರಂದು ನಿಧನರಾದ ಅಟಲ್‌ ಅಂತ್ಯಕ್ರಿಯೆ ಆ.17ರಂದು ನಡೆದಿತ್ತು
 • ನಂತರ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿದ್ದ ಸಮಾಧಿಯನ್ನು ‘ಅಟಲ್‌ ಸ್ಮೃತಿ ನ್ಯಾಸ್‌ ಸೊಸೈಟಿ’ ವಶಕ್ಕೆ ನೀಡಲಾಗಿತ್ತು
 • ಅತ್ಯಲ್ಪ ಅವಧಿಯಲ್ಲಿ ಸದೈವ ಅಟಲ್‌ನಿರ್ಮಾಣವಾಗಿರುವುದು ವಿಶೇಷ

ಅಟಲ್ ಬಿಹಾರಿ ವಾಜಪೇಯಿ

 • ಅಟಲ್ ಬಿಹಾರಿ ವಾಜಪೇಯಿ( 25 ಡಿಸೆಂಬರ್ 1924 – 16 ಆಗಸ್ಟ್ 2018)ಯವರು ಭಾರತದ ಮಾಜಿ ಪ್ರಧಾನಮಂತ್ರಿ, ರಾಜಕಾರಣಿ, ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ನೇತಾರ ಹಾಗೂ ಜನನಾಯಕ. ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಇದಕ್ಕೂ ಮುಂಚೆ ವಿದೇಶಾಂಗ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟದ ಅಧ್ಯಕ್ಷರಾಗಿದ್ದರು.
 • ಅವರಿಗೆ 2015 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ ‘ಭಾರತ್ ರತ್ನ’ ಪ್ರಶಸ್ತಿ ದೊರೆತಿತ್ತು. ಅವರ ಜನ್ಮದಿನವನ್ನು 2014 ರಿಂದ ಕೇಂದ್ರ ಸರ್ಕಾರವು ಗುಡ್ ಗವರ್ನನ್ಸ್ ಡೇ (ಜಿಜಿಡಿ) ಎಂದು ಸರ್ಕಾರದ ಹೊಣೆಗಾರಿಕೆಯನ್ನು ಜನರಲ್ಲಿ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ.
 • ಅವರ ಕವನ ಸಂಗ್ರಹವನ್ನುಅವರ ಪುಸ್ತಕ ಮೇರಿ ಎಕ್ಯಾವನ್ ಕವಿತೆಯಲ್ಲಿ  ಬಿಡುಗಡೆ ಮಾಡಲಾಗಿದೆ
Related Posts
2010-11ನೇ ಸಾಲಿನಿಂದ ಕೇಂದ್ರ ಸರ್ಕಾರದ ಯೋಜನೆ ಇಂದಿರಾಗಾಂದಿ ಮಾತೃತ್ವ ಸಹಯೋಗ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದಲ್ಲಿ  2 ಜಿಲ್ಲೆಗಳಾದ ಕೋಲಾರ ಹಾಗೂ ಧಾರವಾಡದಲ್ಲಿ  ಜಾರಿಗೊಳಿಸಲಾಗುತ್ತಿದೆ. ಇದರಡಿ ಗಬಿಣಿಯರಿಗೆ ಹಾಗೂ ಹಾಲುಣಿಸುವ ಮಹಿಳೆಯರಿಗೆ ,ಪೌಷ್ಠಿಕತೆ ಕುರಿತು ಶಿಕ್ಷಣ, ಆರೋಗ್ಯ ಸಲಹೆ  ಪದ್ಧತಿಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು. ...
READ MORE
ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದ್ದ ಸುವರ್ಣ ಗ್ರಾಮೋದಯ ಯೋಜನೆಗೆ ಕೊಕ್ ನೀಡಿರುವ ರಾಜ್ಯ ಸರ್ಕಾರ, ಪರ್ಯಾಯವಾಗಿ ಸಮಗ್ರ ಗ್ರಾಮಾಭಿವೃದ್ಧಿಯ ಜತೆಗೆ ಗ್ರಾಮದ ಯುವಜನತೆಗೆ ಕೌಶಲ ತರಬೇತಿಯ ಮೂಲಕ ಅವರ ಜೀವನಮಟ್ಟ ಸುಧಾರಿಸುವ ಹೊಸ ‘ಗ್ರಾಮ ವಿಕಾಸ’ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ...
READ MORE
“19 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶೀಘ್ರವೇ ನೋವಿಲ್ಲದ ಚಿಕಿತ್ಸೆ! ಸುದ್ಧಿಯಲ್ಲಿ ಏಕಿದೆ ?ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಕೊನೆಯ ದಿನಗಳನ್ನು ಎಣಿಸುತ್ತಿರುವ ರೋಗಿಗಳಿಗಾಗಿ ನೋವುರಹಿತ ಚಿಕಿತ್ಸಾ ಪದ್ಧತಿ ಜಾರಿಗೆ ತರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ನಡೆಸಿದೆ. ಯೋಜನೆಯ ಉದ್ದೇಶ ಕ್ಯಾನ್ಸರ್, ಏಡ್ಸ್ ಸೇರಿ ಗುಣಪಡಿಸಲಾಗದ ಕಾಯಿಲೆಗೆ ಒಳಪಟ್ಟವರು ಹಾಗೂ ...
READ MORE
“18 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
ತಲಕಾವೇರಿಯಲ್ಲಿ ತೀರ್ಥೋದ್ಭವ ಸುದ್ಧಿಯಲ್ಲಿ ಏಕಿದೆ ?ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಕಂಡು ಭಕ್ತರು ಪುಳಕಿತರಾದರು. ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಉಕ್ಕುವುದನ್ನು ಕಂಡು ಹಾಗೂ ಪುರೋಹಿತರು ತೀರ್ಥವನ್ನು ಚೆಲ್ಲಿದ ನಂತರ ಭಕ್ತರು ಸಂತೃಪ್ತಗೊಂಡರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಈ ಅಭೂತಪೂರ್ವ ...
READ MORE
28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಡೋಕ್ಲಾಂ ಬಿಕ್ಕಟ್ಟು ಸುದ್ಧಿಯಲ್ಲಿ ಏಕಿದೆ? ಸಿಕ್ಕಿಂ ಗಡಿಯ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸದ್ದಿಲ್ಲದೇ ಕಾರ್ಯಚಟುವಟಿಕೆ ಚುರುಕುಗೊಳಿಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಅಮೆರಿಕದ ಅಧಿಕಾರಿಯೊಬ್ಬರು ನೀಡಿದ್ದಾರೆ. ದೇಶದ ಉತ್ತರ ಭಾಗದಲ್ಲಿನ ಅತಿಕ್ರಮಣ ವಿರುದ್ಧ ಕಠಿಣ ನಿಲುವು ಪ್ರದರ್ಶಿಸುತ್ತಿರುವ ಭಾರತ, ಡೋಕ್ಲಾಂ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ...
READ MORE
“12th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸತ್ಯಾಗ್ರಹದಿಂದ ಸ್ವಚ್ಛಾಗ್ರಹ ಚಂಪಾರಣ್ ಸತ್ಯಾಗ್ರಹಕ್ಕೆ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರ ಹಮ್ಮಿಕೊಂಡಿದ್ದ 1 ವರ್ಷದ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವನ್ನು ಶ್ಲಾಘಿಸಿದರು. ರಾಜ್ಯ ಸರ್ಕಾರ ಸತ್ಯಾಗ್ರಹ ದಿಂದ ಸಚ್ಛಾಗ್ರಹದತ್ತ ತಿರುಗಿದೆ ...
READ MORE
“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೃಂದಾವನಕ್ಕೆ ಡಿಸ್ನಿಲ್ಯಾಂಡ್‌ ಮಾದರಿ ಲುಕ್‌ ಸುದ್ಧಿಯಲ್ಲಿ ಏಕಿದೆ ?ಕೃಷ್ಣರಾಜಸಾಗರ ಜಲಾಶಯದ ಬೃಂದಾವನ ಉದ್ಯಾನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ 1,200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನೀಲಿನಕ್ಷೆ ಸಿದ್ಧಪಡಿಸಿದೆ. ಈಗಿನ ಪಾರಂಪರಿಕ ತಾಣದ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಬೃಂದಾವನವನ್ನು ವಿಶ್ವದ ಪ್ರವಾಸಿ ತಾಣಗಳಲ್ಲೇ ...
READ MORE
ಒಟ್ಟು ಜನಸಂಖ್ಯೆಯಲ್ಲಿ 18 ವಯೋಮಿತಿಯ ಒಳಗಿರುವ ಮಕ್ಕಳ ಶೇಕಡಾ ವಾರು ಜನಸಂಖ್ಯೆಯು ಗಣನೀಯ ವಾಗಿರುತ್ತದೆ. ಈ ಮಕ್ಕಳಿಗೆ  ಶಿಕ್ಷಣಕ್ಕೆ ಅನುವುಮಾಡುವಂತಹ, ಆಥರ್ಿಕ ಮತ್ತು ಲೈಂಗಿಕವಾಗಿ ಶೋಷಿತರಾಗದಂತೆ ರಕ್ಷಿಸುವ ಮತ್ತು ಘನತೆಯಿಂದ ಸುರಕ್ಷಿತರಾಗಿ ಬಾಳುವಂತೆ ಮಾಡುವ ವಾತಾವರಣವನ್ನು ಸೃಷ್ಠಿಸಬೇಕಾಗಿದೆ. ಮಗು ಹುಟ್ಟಿದ ದಿನದಿಂದ 18 ...
READ MORE
“27th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಮಾಂಡಿಂಗ್ ಸ್ಟೇಷನ್ ಸುದ್ಧಿಯಲ್ಲಿ ಏಕಿದೆ ? ರಾಮನಗರ ಜಿಲ್ಲೆ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ಇಂಚಿಂಚು ಸಾರ್ವಜನಿಕ ಪ್ರದೇಶದ ಮೇಲೂ ಈಗ ಪೊಲೀಸರ ಕ್ಯಾಮೆರಾ ಕಣ್ಗಾವಲು ಇಡಲಿದೆ. ಈ ಠಾಣಾ ವ್ಯಾಪ್ತಿಯ ಸುಮಾರು 15 ಕಿ. ಮೀ. ಸುತ್ತಳತೆಯಲ್ಲಿ ಯಾವ ರೀತಿಯ ಚಟುವಟಿಕೆ ನಡೆಯುತ್ತಿದೆ ? ...
READ MORE
18th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಎನ್​ಸಿಸಿ ರೀತಿ ಎನ್-ಯೆಸ್ ಸುದ್ಧಿಯಲ್ಲಿ ಏಕಿದೆ? ಯುವ ಸಮುದಾಯದಲ್ಲಿ ಶಿಸ್ತುಬದ್ಧ ಜೀವನಕ್ರಮ ಮತ್ತು ದೇಶಪ್ರೇಮ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ 10 ಲಕ್ಷ ಯುವಕರು ಮತ್ತು ಯುವತಿಯರಿಗೆ ತರಬೇತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ರಾಷ್ಟ್ರೀಯ ಯುವ ಸಬಲೀಕರಣ ಯೋಜನೆ (ಎನ್-ವೈಇಎಸ್) ಎಂಬ ಈ ...
READ MORE
ಇಂದಿರಾಗಾಂದಿ ಮಾತೃತ್ವ ಸಹಯೋಗ ಯೋಜನೆ
ಗ್ರಾಮ ವಿಕಾಸ ಯೋಜನೆ
“19 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“18 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
“12th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಚೈಲ್ಡ್ ಟ್ರ್ಯಾಕಿಂಗ್ ಪದ್ದತಿ
“27th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
18th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ

Leave a Reply

Your email address will not be published. Required fields are marked *