“26th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”

ಪರಿಸರ ಸೂಕ್ಷ್ಮ ವಲಯ

1.

ಸುದ್ಧಿಯಲ್ಲಿ ಏಕಿದೆ ? ಕೊಡಗು ಅತಿವೃಷ್ಠಿ ಹಾನಿಯಿಂದ ಪಾಠ ಕಲಿಯದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯದ ಬಗ್ಗೆ ಹೊರಡಿಸಿರುವ ಅಧಿಸೂಚನೆಯನ್ನು ಮತ್ತೊಮ್ಮೆ ವಿರೋಧಿಸಲು ನಿರ್ಧರಿಸಿದೆ.

 • ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಆಗಿರುವ ತೊಂದರೆಯೇ ಮಳೆ ಅವಾಂತರಕ್ಕೆ ಕಾರಣವೆಂಬುದು ತಜ್ಞರ ಅಭಿಪ್ರಾಯ. 1060 ಹೆಕ್ಟೇರ್ ಪ್ರದೇಶದಲ್ಲಿ ಭೂ ಕುಸಿತವುಂಟಾಗಿ ಅಪಾರ ಹಾನಿಯಾಗಿದೆ. ಕೇಂದ್ರದ ಅಧಿಸೂಚನೆ ವಿರೋಧಿಸಿದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ.
 • ಮಾಧವ ಗಾಡ್ಗೀಳ್ ಹಾಗೂ ಡಾ.ಕೆ.ಕಸ್ತೂರಿರಂಗನ್ ವರದಿಯಲ್ಲಿನ ಶಿಫಾರಸು ಹಾಗೂ ವಿವಿಧ ರಾಜ್ಯಗಳಿಂದ ಬಂದಿರುವ ಆಕ್ಷೇಪಣೆಗಳನ್ನು ಆಧರಿಸಿ 56,825 ಚದುರ ಕಿಮೀ ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯವನ್ನಾಗಿ ಗುರುತಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುತ್ತಿದೆ.
 • ಕಳೆದ ತಿಂಗಳಷ್ಟೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಎರಡು ವರದಿಗಳ ಶಿಫಾರಸುಗಳನ್ನು ಜಾರಿ ಮಾಡದಿರುವಂತೆ ಒತ್ತಾಯ ಮಾಡಿತ್ತು. ಆದರೆ ಹಸಿರು ನ್ಯಾಯಾಧಿಕರಣದ ತರಾಟೆ ಹಿನ್ನೆಲೆಯಲ್ಲಿ ಹೊಸ ಅಧಿಸೂಚನೆ ಹೊರಡಿಸಿದೆ.

ಏನಿದು ಸೂಕ್ಷ್ಮ ವಲಯ?

 • ರಾಜ್ಯದ 20,668 ಚದರ ಕಿಮೀ ವ್ಯಾಪ್ತಿಯಲ್ಲಿರುವ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಉತ್ತರ ಕನ್ನಡ, ಹಾಸನ, ಕೊಡಗು, ಬೆಳಗಾವಿ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಸೇರಿದ 1,576 ಹಳ್ಳಿಗಳು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಒಳಪಡಲಿವೆ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಸುವಂತಿಲ್ಲ. ಉಷ್ಣ ಸ್ಥಾವರ, ಪರಿಸರಕ್ಕೆ ಹಾನಿಯಾಗುವಂತಹ ಯಾವುದೇ ಕೈಗಾರಿಕೆಗಳಿಗೆ ಅನುಮತಿ ನೀಡುವಂತಿಲ್ಲ. ದೊಡ್ಡ ಪ್ರಮಾಣದ ಟೌನ್​ಶಿಫ್ ನಿರ್ಮಾಣ ಮಾಡುವಂತಿಲ್ಲ.

ಎತ್ತಂಗಡಿ ಭಯ

 • ಯುನೆಸ್ಕೋದ ವಿಶ್ವ ಪಾರಂಪಾರಿಕ ತಾಣದ ಪಟ್ಟಿ ಯಲ್ಲಿರುವ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಸ್ತೂರಿರಂಗನ್ ವರದಿ ಜಾರಿಯಾದರೆ ಸೂಕ್ಷ್ಮ ವಲಯದ ಹಳ್ಳಿಗಳಲ್ಲಿರುವ ಜನರನ್ನು ಎತ್ತಂಗಡಿ ಮಾಡಲಾಗುತ್ತದೆ ಎಂಬ ಭಯ ಆವರಿಸಿದೆ. ಆದ್ದರಿಂದಲೇ ಅಂತಿಮ ಅಧಿಸೂಚನೆ ವಿರೋಧಿಸುವಂತೆ ಸರ್ಕಾರದ ಮೇಲೆ ಜನಪ್ರತಿನಿಧಿಗಳ ಒತ್ತಡವಿದೆ ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯದ ವಿರೋಧಕ್ಕೆ ಕಾರಣವೇನು?

 • ಕಸ್ತೂರಿರಂಗನ್ ವರದಿ ಜಾರಿಗೆ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಗೋವಾ, ಗುಜರಾತ್ ರಾಜ್ಯಗಳು 2014ರಿಂದಲೂ ವಿರೋಧ ವ್ಯಕ್ತಪಡಿಸುತ್ತಿವೆ.
 • ಈಗಾಗಲೇ ಜಾರಿಯಲ್ಲಿರುವ ಅರಣ್ಯ ಸಂರಕ್ಷಣಾ ಕಾಯ್ದೆ 1980 ಸಾಕು, ಮತ್ತೊಂದು ಕಾನೂನು ತಂದು ಗೊಂದಲ ಸೃಷ್ಟಿಸುವ ಅಗತ್ಯವಿಲ್ಲವೆಂಬ ಅಭಿಪ್ರಾಯವನ್ನು ರಾಜ್ಯ ಸರ್ಕಾರಗಳು ಈಗಲೂ ಹೊಂದಿದೆ.

ಪಾಲಿಫೈಬರ್‌ ಸಿಲಿಂಡರ್‌

2.

ಸುದ್ಧಿಯಲ್ಲಿ ಏಕಿದೆ ? ಅಡುಗೆ ಸಿಲಿಂಡರ್‌ ಸ್ಫೋಟದಂತಹ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಸ್ಮಾರ್ಟ್‌ ಆ್ಯಂಡ್‌ ಸೇಫ್‌ ಎಂಬ ಹೆಸರಿನ ಎಲ್‌ಪಿಜಿ ಪಾಲಿಫೈಬರ್‌ ಸಿಲಿಂಡರ್‌ ಹುಬ್ಬಳ್ಳಿಯ ಮಾರುಕಟ್ಟೆಗೆ ಬಂದಿದೆ.

ಪ್ರಯೋಜನಗಳು

 • ಅನಿಲ ಸೋರಿಕೆ ಹಾಗೂ ಬೆಂಕಿ ಅವಘಡದಂತಹ ದುರ್ಘಟನೆ ಸಂಭವಿಸಿದರೂ ಈ ಸಿಲಿಂಡರ್‌ ಸ್ಫೋಟಗೊಳ್ಳುವುದಿಲ್ಲ.
 • ಬೆಂಕಿ ಹೊತ್ತಿದರೆ ಸಿಲಿಂಡರ್‌ ಉರಿದುಹೋಗಿ ಸಂಭವನೀಯ ಭಾರಿ ಅನಾಹುತ ತಪ್ಪಿಸುವುದು ಇದರ ವೈಶಿಷ್ಟ್ಯವಾಗಿದೆ.
 • ಅಡುಗೆ ತಯಾರಿಸಲು ಹಾಗೂ ವಾಹನಕ್ಕೆ ಇಂಧನದಂತೆ ಬಳಸಲು ಸೇರಿದಂತೆ ವಿವಿಧ ನಮೂನೆಯಲ್ಲಿ ಈ ಪಾಲಿಫೈಬರ್‌ ಸಿಲಿಂಡರ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

ವಿಶೇಷತೆಗಳು ಏನು

 • ಪ್ಲಾಸ್ಟಿಕ್‌ ಪಾಲಿಮರ್‌ನಿಂದ ತಯಾರಾದ ಈ ನೂತನ ಸಿಲಿಂಡರ್‌ ತೂಕದಲ್ಲಿ ಅತ್ಯಂತ ಹಗುರವಾಗಿದೆ.
 • ಗ್ರಾಹಕರಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಣೆ ಮಾಡಲು ಸರಳವಾಗಿದೆ.
 • ಅವಘಡ ಸಂಭವಿಸಿದರೂ ಸಿಲಿಂಡರ್‌ ಸ್ಫೋಟಗೊಳ್ಳದ ಕಾರಣ ಪ್ರಾಣ ಹಾನಿ ಹಾಗೂ ಆಸ್ತಿ ಪಾಸ್ತಿ ನಷ್ಟ ತಡೆಯಬಹುದಾಗಿದೆ.
 • ಇತ್ತೀಚಿನ ದಿನಗಳಲ್ಲಿ ಆಟೊ ಹಾಗೂ ವಾಹನಗಳಿಗೆ ಅಕ್ರಮವಾಗಿ ಸಿಲಿಂಡರ್‌ ಬಳಕೆ ಮಾಡುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಇದನ್ನು ತಡೆಯುವ ಜತೆಗೆ ಸುರಕ್ಷತೆಯ ದೃಷ್ಟಿಯಿಂದ ಈ ಪಾಲಿಫೈಬರ್‌ ಸಿಲಿಂಡರ್‌ ಅನುಕೂಲಕರವಾಗಿದೆ.

ಸಣ್ಣ ಪ್ರಮಾಣದ ಬೆಂಕಿ

 • ಸದ್ಯ ಜಾಲ್ತಿಯಲ್ಲಿರುವ ಸಿಲಿಂಡರ್‌ಗಳು ಅವಘಡ ನಡೆದಾಗ ಸ್ಫೋಟಗೊಳ್ಳುವುದು ಸಾಮಾನ್ಯವಾಗಿದೆ. ಹಾಗೇ ಸ್ಫೋಟಗೊಂಡಾಗ ಅದರ ತೀವ್ರತೆಯಿಂದ ಇಡೀ ಕಟ್ಟಡ ಹಾಗೂ ಮನೆಯಲ್ಲಿದ್ದ ಜನರ ಪ್ರಾಣಕ್ಕೆ ಸಂಚಕಾರ ಉಂಟು ಮಾಡುವುದು ನಿಶ್ಚಿತ.
 • ಆದರೆ ಈ ‘ಸ್ಮಾರ್ಟ್‌ ಆ್ಯಂಡ್‌ ಸೇಫ್‌’ ಎಲ್‌ಪಿಜಿ ಪಾಲಿಫೈಬರ್‌ ಸಿಲಿಂಡರ್‌ ಯಾವುದೇ ಕಾರಣಕ್ಕೂ ಸ್ಫೋಟಗೊಳ್ಳುವುದೇ ಇಲ್ಲ. ಬದಲಾಗಿ ಬೆಂಕಿ ಹೊತ್ತಿಕೊಂಡಾಗ ಸಣ್ಣ ಪ್ರಮಾಣದಲ್ಲಿ ಉರಿದು ಬೇರೆ ಕಡೆ ಹರಡದೇ ತಣ್ಣಗಾಗುತ್ತದೆ.

ಲ್ಯಾಂಟರ್ನ್‌ ಪಾರ್ಕ್‌

3.

ಸುದ್ಧಿಯಲ್ಲಿ ಏಕಿದೆ ? ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಗಮಗಿಸುವ ವಿಶೇಷ ಉದ್ಯಾನ ನಿರ್ಮಾಣವಾಗುತ್ತಿದೆ.

 • ವಿದ್ಯುದೀಪಗಳಿಂದ ಜಗಮಗಿಸುವ ಈ ಉದ್ಯಾನಕ್ಕೆ ರಾತ್ರಿ ಮಾತ್ರ ಪ್ರವೇಶ. ಒಮ್ಮೆ ಉದ್ಯಾನದೊಳಗೆ ಪ್ರವೇಶಿಸಿದರೆ ಇಡೀ ದಸರಾ ಮಹೋತ್ಸವದ ವೈಭವದ ಇತಿಹಾಸವನ್ನೇ ಕಣ್ತುಂಬಿಕೊಳ್ಳಬಹುದು. ಅಂತಹ ಉದ್ಯಾನವನ್ನು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸುತ್ತಿದೆ.
 • ದೇಶದಲ್ಲೇ ಮೊದಲು:ಚೀನಾ, ಯುಕೆ ಸೇರಿದಂತೆ ವಿದೇಶಗಳಲ್ಲಿ ಪ್ರಸಿದ್ಧಿಯಾಗಿರುವ ಲ್ಯಾಂಟರ್ನ್‌ ಉದ್ಯಾನವನ್ನು ವಸ್ತು ಪ್ರದರ್ಶನ ಆವರಣದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
 • ಈ ಪ್ರಯತ್ನ ದೇಶದಲ್ಲೇ ಮೊದಲು.
 • ಪ್ರವಾಸೋದ್ಯಮ ಇಲಾಖೆ 5 ಕೋಟಿ ರೂ. ವೆಚ್ಚದಲ್ಲಿ ಈಉದ್ಯಾನ ನಿರ್ಮಿಸುವ ಮೂಲಕ ಪ್ರವಾಸಿಗರನ್ನು ಸಳೆಯಲು ನಿರ್ಧರಿಸಿದೆ.
 • ಉದ್ಯಾನದ ನಿರ್ಮಾಣದ ಜವಾಬ್ದಾರಿಯನ್ನು ಮೈಸೂರಿನ ಡ್ರೀಮ್‌ ಪೆಟಲ್ಸ್‌ ಸಂಸ್ಥೆ ವಹಿಸಿಕೊಂಡಿದೆ.
 • 28ರಿಂದ ವೀಕ್ಷಣೆಗೆ ಅವಕಾಶ: ಅದಕ್ಕಾಗಿ ಚೀನಾದ ಓಷಿಯನ್‌ ಆರ್ಟ್‌ ಕಂಪೆನಿಯ 20 ಪರಿಣತರೊಂದಿಗೆ 30 ಮಂದಿ ಸ್ಥಳೀಯ ಕಾರ್ಮಿಕರನ್ನು ಸೇರಿಸಿಕೊಂಡು ಕಳೆದ 15 ದಿನಗಳಿಂದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪಾರ್ಕ್‌ ನಿರ್ಮಾಣದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಅ.28ಕ್ಕೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿದೆ.

ಹಿನ್ನಲೆ

 • ಲ್ಯಾಂಟರ್ನ್‌ ಉತ್ಸವ ಆಯೋಜನೆ ಮೂಲಕ ಚೀನಾದವರು ಹೊಸ ವರ್ಷ ಸ್ವಾಗತಿಸುವುದು ವಾಡಿಕೆ. ವಸಂತ ಕಾಲವನ್ನು ಬಣ್ಣಗಳ ಬೆಳಕು, ಸಂಗೀತದೊಂದಿಗೆ ಬರಮಾಡಿಕೊಳ್ಳುತ್ತಾರೆ. ಅದೇ ಮಾದರಿಯಲ್ಲಿ ಮೈಸೂರಿನಲ್ಲೂ ಆಯೋಜಿಸಲಾಗುತ್ತಿದೆ. ಪಾರ್ಕಿನದಲ್ಲಿ ನಾನಾ ಗಾತ್ರದ ವರ್ಣರಂಜಿತ ಲ್ಯಾಂಟರ್ನ್‌ಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಏನಿದು ಲ್ಯಾಂಟರ್ನ್‌ ಪಾರ್ಕ್‌?

 • ಮೆಟಲ್‌ ಮತ್ತು ಬಟ್ಟೆಯನ್ನು ಬಳಸಿ ನಾನಾ ಬಗೆಯ ಕಲಾಕೃತಿಗಳನ್ನು ನಿರ್ಮಿಸಿ ಅದರೊಳಗೆ ಲೈಟಿಂಗ್ಸ್‌ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಪೈಟಿಂಗ್‌ ಮಾಡಿ ಸಾರ್ವಜನಿಕರ ವೀಕ್ಷಣೆಗೆ ಸಿದ್ಧಪಡಿಸುವ ಕಲಾಕೃತಿಯೇ ಲ್ಯಾಂಟರ್ನ್‌.
 • ದಸರಾ ಮಹೋತ್ಸವ ಹಿನ್ನಲೆ ಇಟ್ಟುಕೊಂಡು ಇಂತಹ ಹಲವು ಲ್ಯಾಂಟರ್ನ್‌ಗಳನ್ನು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಇರಿಸಲಾಗುತ್ತಿದೆ.
 • ”ಸುಮಾರು 5 ಸಾವಿರ ಎಲ್‌ಇಡಿ ಬಲ್ಬು ಬಳಸಿ ಗುಲಾಬಿ ಉದ್ಯಾನ ನಿರ್ಮಿಸಲಾಗುತ್ತಿದೆ. ಜಂಬೂಸವಾರಿ, ಮಹಿಷಾಸುರ ಮರ್ದಿನಿ, ಡೊಳ್ಳು ಕುಣಿತ, ಪೂಜಾ ಕುಣಿತದ ಕಲಾಕೃತಿಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಅಲ್ಲದೆ, ಬಣ್ಣದ ಬೆಳಕಿನಲ್ಲಿ ಮೈಸೂರು ಇತಿಹಾಸ, ದಸರಾ ಇತಿಹಾಸವನ್ನು ಬಿಂಬಿಸಲು ಸಿದ್ಧತೆ ನಡೆದಿದೆ.
 • ವಿದ್ಯುದೀಪಗಳಿಂದ ಜಗಮಗಿಸುವ ಈ ಉದ್ಯಾನಕ್ಕೆ ರಾತ್ರಿ ವೇಳೆ ಉಚಿತ ಪ್ರವೇಶ ಅವಕಾಶವಿದ್ದು, ಯುವ ಜನತೆಯ ಸೆಲ್ಫಿ ತಾಣವಾಗಲಿದೆ.

ಕೊಳವೆಬಾವಿಗೆ ಕೊಳಚೆ ನೀರು

4.

ಸುದ್ಧಿಯಲ್ಲಿ ಏಕಿದೆ ? ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು ತಮ್ಮ ಆವರಣದಲ್ಲಿರುವ ಕೊಳವೆಬಾವಿಗಳನ್ನು ಕೊಳಚೆ ನೀರು ಸುರಿಯಲು ಬಳಸಿಕೊಳ್ಳುತ್ತಿರುವುದು ಪತ್ತೆಯಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 70 ಕೊಳವೆಬಾವಿಗಳ ನೀರನ್ನು ಪರೀಕ್ಷೆ ಮಾಡಿದಾಗ ರಾಸಾಯನಿಕಯುಕ್ತ ಲೋಹದ ಅಂಶ ಕಂಡು ಬಂದಿದೆ.

 • ಕಾರ್ಖಾನೆಗಳ ಆವರಣದಲ್ಲಿರುವ 70 ಕೊಳವೆಬಾವಿಗಳ ನೀರಿನಲ್ಲಿ ಮ್ಯಾಂಗನೀಸ್‌, ನಿಕ್ಕಲ್‌, ಸೀಸ ಮೊದಲಾದ ಲೋಹಗಳಿರುವುದು ಪತ್ತೆಯಾಗಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುವುದರಿಂದ ಮುಚ್ಚಿಸುವ ಕಾರ್ಯಾಚರಣೆ ಆರಂಭವಾಗಲಿದೆ.
 • ಮಂಡಳಿಯು ಹೈದರಾಬಾದ್‌ನ ನ್ಯಾಷನಲ್‌ ಜಿಯೊಫಿಸಿಕಲ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌ ಮೂಲಕ ನಡೆಸಿದ ಅಧ್ಯಯನದಲ್ಲಿ ಕಾರ್ಖಾನೆಗಳ ಕೊಳಚೆ ನೀರು ಕೊಳವೆಬಾವಿ ಸೇರುತ್ತಿರುವ ಶಂಕೆ ವ್ಯಕ್ತವಾಗಿದೆ.
 • ‘‘ಬಹುತೇಕ ಕಾರ್ಖಾನೆಗಳಲ್ಲಿ ಕೊಳವೆಬಾವಿ ನೀರನ್ನು ಬಳಸುತ್ತಿಲ್ಲ. ಅದರ ಬದಲು ಕೊಳವೆಬಾವಿಯ ಗುಂಡಿಗೆ ಕೊಳಚೆ ನೀರು ಹರಿಬಿಡಲಾಗುತ್ತಿದೆ. ಇದನ್ನು ತಡೆದು ಅಂತರ್ಜಲ ರಕ್ಷಿಸಲು ಕೊಳವೆಬಾವಿಗಳನ್ನು ಮುಚ್ಚಿಸಬೇಕು’’ಎಂದು ಸಂಸ್ಥೆಯು ಸಲ್ಲಿಸಿದ ಅಧ್ಯಯನ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
 • ಕೆರೆ ಸೇರಿದಂತೆ ಜಲಮೂಲಗಳಿಗೆ ಕಾರ್ಖಾನೆಗಳ ವಿಷತ್ಯಾಜ್ಯ ಹರಿಯುತ್ತಿರುವುದರಿಂದಲೂ ಅಂತರ್ಜಲ ಕಲುಷಿತಗೊಂಡಿದೆ. ಉದಾಹರಣೆಗೆ, ಪೀಣ್ಯದ ಯುನಿಟೆಕ್ಸ್‌ ಅಪಾರೆಲ್ಸ್‌ ಕಾರ್ಖಾನೆಯ ಕೊಳವೆಬಾವಿಯ 1 ಲೀಟರ್‌ ನೀರಿನಲ್ಲಿ 28 ಮೈಕ್ರೊ ಗ್ರಾಂ ಕಾರ್ಬನ್‌ ಮೊನಾಕ್ಸೈಡ್‌ ಇದೆ. ಇದು 0.04 ಮೈಕ್ರೊ ಗ್ರಾಂ ಮೀತಿ ಮೀರಬಾರದು.

ಸಂಸ್ಕರಣೆಗೆ ದುಬಾರಿ ವೆಚ್ಚ

 • ಮಂಡಳಿಯ ನಿಯಮದಂತೆ ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ವಿಷಕಾರಿಯಾದ ತ್ಯಾಜ್ಯ ನೀರನ್ನು ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ (ಸಿಇಟಿಪಿ) ನೀಡಬೇಕು.
 • ಪೀಣ್ಯದ ಕಾರ್ಖಾನೆಗಳು ದೊಡ್ಡಬಳ್ಳಾಪುರದಲ್ಲಿರುವ ಸಿಇಟಿಪಿಗೆ ಟ್ಯಾಂಕರ್‌ ಮೂಲಕ ಕೊಳಚೆ ನೀರು ನೀಡುತ್ತಿವೆ. ಸಿಇಟಿಪಿಯು 1 ಲೀಟರ್‌ ಕೊಳಚೆ ನೀರು ಸಂಸ್ಕರಣೆಗೆ 5 ರಿಂದ 6 ರೂ. ಶುಲ್ಕ ವಿಧಿಸುತ್ತಿದೆ. ಅನೇಕ ಕಾರ್ಖಾನೆಗಳು ಹಣ ತೆತ್ತು ಕೊಳಚೆ ನೀರನ್ನು ಸಂಸ್ಕರಿಸದೆ ರಾಜಕಾಲುವೆಯಲ್ಲಿ ಸುರಿಯುತ್ತಿರುವುದು ಮಂಡಳಿ ಈ ಹಿಂದೆ ನಡೆಸಿದ ತಪಾಸಣೆಗಳಲ್ಲಿ ಗೊತ್ತಾಗಿದೆ.
 • ಪೀಣ್ಯ ಅರ್ಬನ್‌ ಇಕೊ ಪಾರ್ಕ್‌ನಲ್ಲಿ ಜಲಮಂಡಳಿಯು 50 ಕೋಟಿ ರೂ. ವೆಚ್ಚದಲ್ಲಿ ಸಿಇಟಿಪಿ ನಿರ್ಮಿಸಲಿದೆ. ರಾಜ್ಯ ಸರಕಾರದಿಂದ 10 ಕೋಟಿ ರೂ. ಅನುದಾನ ಸಿಕ್ಕಿದ್ದು, ಪೀಣ್ಯ ಕೈಗಾರಿಕಾ ಸಂಘವು 22.50 ಕೋಟಿ ರೂ. ನೀಡಲಿದೆ. ಬಳಿಕ ಕಾರ್ಖಾನೆಗಳು ಕಡ್ಡಾಯವಾಗಿ ಈ ಸಿಇಟಿಪಿಗೆ ಕೊಳಚೆ ನೀರು ನೀಡುವಂತೆ ಸೂಚನೆ ನೀಡಲಾಗುತ್ತದೆ.

ಜಲಮಂಡಳಿಯಿಂದ ಪರೀಕ್ಷೆ

 • ಜಲಮಂಡಳಿಯು ಪೀಣ್ಯದ ಹಲವು ಕೊಳವೆಬಾವಿಗಳಲ್ಲಿ ಪರೀಕ್ಷೆ ನಡೆಸಿದಾಗ ನೀರಿನಲ್ಲಿ ಲೋಹ ಪತ್ತೆಯಾಗಿದೆ. 1 ಲೀಟರ್‌ ನೀರಿನಲ್ಲಿ ಕ್ಯಾಲ್ಶಿಯಂ ಪ್ರಮಾಣ 75 ಮೈಕ್ರೊ ಗ್ರಾಂ ಮೀರಬಾರದು.
 • ಚೊಕ್ಕಸಂದ್ರದ ಬಸವ ದೇವಸ್ಥಾನ ಬಳಿಯ ಬೋರ್‌ವೆಲ್‌ ನೀರಿನಲ್ಲಿ 328 ಮೈಕ್ರೊಂ ಗ್ರಾಂ ಕ್ಯಾಲ್ಶಿಯಂ ಇದೆ.
 • 1 ಲೀಟರ್‌ ನೀರಿನ ಗಡುಸುತನ 500 ಮೈಕ್ರೊ ಗ್ರಾಂ ಮೀರಬಾರದು. ಶಿವಪುರದ ಎನ್‌ಟಿಟಿಎಫ್‌ 1 ನೇ ಕ್ರಾಸ್‌ನ ಬೋರ್‌ವೆಲ್‌ ನೀರು 1,252 ಮೈಕ್ರೊ ಗ್ರಾಂ, ಶಿವಪುರದ ಲಕ್ಷ್ಮಿ ಸತ್ಯನಾರಾಯಣ ದೇವಸ್ಥಾನದ ಬಳಿಯ ಬೋರ್‌ವೆಲ್‌ ನೀರು 1,372 ಮೈಕ್ರೊ ಗ್ರಾಂ ಗಡಸುತನ ಹೊಂದಿದೆ.

ಕಲುಷಿತ ಅಂತರ್ಜಲದ ಅಪಾಯಗಳು:

ಆರೋಗ್ಯದ ಮೇಲೆ:

 • ಕಲುಷಿತ ಅಂತರ್ಜಲವನ್ನು ಕುಡಿಯುವುದು ಗಂಭೀರವಾದ ಆರೋಗ್ಯ ಪರಿಣಾಮಗಳನ್ನು ಬೀರಬಹುದು.
 • ಹೆಪಟೈಟಿಸ್ ಮತ್ತು ಅನೇಕ ರೋಗಗಳು ಸೆಪ್ಟಿಕ್ ಟ್ಯಾಂಕ್ ತ್ಯಾಜ್ಯದಿಂದ ಮಾಲಿನ್ಯದಿಂದ ಉಂಟಾಗಬಹುದು.
 • ವಿಷಯುಕ್ತ ನೀರು ಸರಬರಾಜುಗೆ ಕಾರಣವಾಗುವ ವಿಷಗಳಿಂದ ಉಂಟಾಗಬಹುದು.
 • ಕಲುಷಿತ ಅಂತರ್ಜಲದಿಂದ ಕೂಡಾ ವನ್ಯಜೀವಿಗಳನ್ನು ಹಾನಿಗೊಳಿಸಬಹುದು.
 • ಕೆಲವು ರೀತಿಯ ಕ್ಯಾನ್ಸರ್ನಂತಹ ಇತರ ದೀರ್ಘಕಾಲೀನ ಪರಿಣಾಮಗಳು ಮಾಲಿನ್ಯ ನೀರಿನಿಂದ ಒಡ್ಡಿಕೊಳ್ಳುವುದರಿಂದ ಉಂಟಾಗಬಹುದು.

ಆರ್ಥಿಕತೆ ಮೇಲೆ

 • ಅಂತರ್ಜಲ ಕಲುಷಿತಗೊಂಡಾಗ, ಆರ್ಥಿಕತೆಯು ಸಹ ಸುಲಭವಾಗಿ ಬಳಲಬಹುದು:
 • ಭೂಮಿ ಮೌಲ್ಯ ಕುಸಿಯುತ್ತದೆ . ನಿರ್ದಿಷ್ಟ ಪ್ರದೇಶಗಳಲ್ಲಿ ಅಂತರ್ಜಲವು ಹೆಚ್ಚು ಕಲುಷಿತಗೊಂಡಾಗ, ಆ ಪ್ರದೇಶವು ಮಾನವ, ಪ್ರಾಣಿ ಮತ್ತು ಸಸ್ಯ ಜೀವಿತಾವಧಿಯನ್ನು ಉಳಿಸಿಕೊಳ್ಳಲು ಕಡಿಮೆ ಸಾಮರ್ಥ್ಯವನ್ನು ಹೊಂದುತ್ತದೆ . ಪ್ರದೇಶವು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದರೆ ಮತ್ತು ಆ ಪ್ರಕೃತಿಯು ಮಾಲಿನ್ಯದ ಪರಿಣಾಮಗಳನ್ನು ಎದುರಿಸಲಾರಂಭಿಸಿದರೆ, ಅಲ್ಲಿ ವಾಸಿಸಲು ಬಯಸುವ ಜನರ ಸಾಧ್ಯತೆಗಳು ಇನ್ನೂ ಕಡಿಮೆಯಾಗುತ್ತವೆ. ಇದು ಅಂತರ್ಜಲ ಮಾಲಿನ್ಯದ ತಕ್ಷಣದ ಪರಿಣಾಮವಾಗಿರದಿದ್ದರೂ, ಭೂಮಿ ಮೌಲ್ಯದ ಸವಕಳಿ ಖಂಡಿತವಾಗಿಯೂ ಒಂದು ಸಂಭಾವ್ಯ ಅಡ್ಡ ಪರಿಣಾಮವಾಗಿದೆ.
 • ಕಡಿಮೆ ಸ್ಥಿರ ಉದ್ಯಮ:ಅನೇಕ ಕೈಗಾರಿಕೆಗಳು ತಮ್ಮ ಉತ್ಪನ್ನಗಳನ್ನು ಉತ್ಪಾದಿಸಲು ಮತ್ತು ತಮ್ಮ ಕಾರ್ಖಾನೆಗಳು ಸುಗಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಲು ಅಂತರ್ಜಲವನ್ನು ಅವಲಂಬಿಸಿವೆ. ನಿರ್ದಿಷ್ಟ ಪ್ರದೇಶದಿಂದ ಪಿಹೆಚ್ ಮತ್ತು ನೀರಿನ ಅಂತರ್ಜಲದ ಗುಣಮಟ್ಟ ವಿರಳವಾಗಿ ಬದಲಾಗುವುದರಿಂದ, ಇದು ಅನೇಕ ಉದ್ಯಮಗಳ ಒಂದು ಪ್ರಮುಖ ಭಾಗವಾಗಿದ್ದು, ಅವು ನಿರಂತರವಾಗಿ ಪರೀಕ್ಷಿಸಬೇಕಾದ ನೀರನ್ನು ಅವಲಂಬಿಸಿವೆ.

ಪರಿಸರದ ಮೇಲೆ

 • ಕೊನೆಯದಾಗಿ ಅಂತರ್ಜಲವು ಮಾಲಿನ್ಯಗೊಂಡಾಗ ಪರಿಸರವನ್ನು ಗಂಭೀರವಾಗಿ ಬದಲಾಯಿಸಬಹುದು. ಇದು ಸಂಭವಿಸುವ ಕೆಲವು ವಿಧಾನಗಳು ಇಲ್ಲಿವೆ.
 • ಪೌಷ್ಟಿಕ ಮಾಲಿನ್ಯ:ಅಂತರ್ಜಲ ಮಾಲಿನ್ಯವು ಕೆಲವು ವಿಧದ ಪೋಷಕಾಂಶಗಳಿಗೆ ಕಾರಣವಾಗಬಹುದು, ಇದು ಒಂದು ನಿರ್ದಿಷ್ಟ ಪರಿಸರ ವ್ಯವಸ್ಥೆಯಲ್ಲಿ ಸಾಮಾನ್ಯ ಜೀವನವನ್ನು ಉಳಿಸಿಕೊಳ್ಳಲು ಸಣ್ಣ ಪ್ರಮಾಣದಲ್ಲಿ ಅವಶ್ಯಕವಾಗಿರುವಷ್ಟು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಮೀನುಗಳು ತಮ್ಮ ನೀರಿನ ಸರಬರಾಜಿನಲ್ಲಿ ಇನ್ನು ಮುಂದೆ ನೀರು ಸಂಸ್ಕರಿಸಲು ಸಾಧ್ಯವಾಗದ ಕಾರಣ ಮೀನುಗಳು ಬೇಗನೆ ಸಾಯುವಿಕೆಯನ್ನು ಪ್ರಾರಂಭಿಸಬಹುದು, ಮತ್ತು ಅವುಗಳು ಸೇವಿಸುವ ನೀರಿನಲ್ಲಿನ ಹೆಚ್ಚಿನ ಪೌಷ್ಟಿಕಾಂಶಗಳಿಂದ ಇತರ ಪ್ರಾಣಿಗಳು ರೋಗಿಗಳಾಗಬಹುದು.
 • ಪರಿಸರ ವ್ಯವಸ್ಥೆಗಳಲ್ಲಿ ವಿಷಯುಕ್ತ ನೀರು. ಸರೋವರಗಳು, ನದಿಗಳು, ಹೊಳೆಗಳು, ಕೊಳಗಳು ಮತ್ತು ಜೌಗುಗಳನ್ನು ಸರಬರಾಜು ಮಾಡುವ ಅಂತರ್ಜಲವು ಕಲುಷಿತಗೊಂಡಾಗ, ಇದು ನಿಧಾನವಾಗಿ ಮೇಲ್ಮೈ ನೀರಿನ ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುತ್ತದೆ.

ಪರಿಹಾರಗಳು:

 • ಜನಸಂಖ್ಯೆಯ ಸುಮಾರು ನಾಲ್ಕನೇ ಭಾಗದಷ್ಟು ಸ್ಥಳೀಯ ನೀರನ್ನು ಒದಗಿಸುವ ನೀರಿನ ಮೂಲದ ಹೊಸ ನಿಯಂತ್ರಕ ಆಡಳಿತ ಮತ್ತು ಹೆಚ್ಚಿನ ಪ್ರಮಾಣದ ನೀರಾವರಿ ತುರ್ತು ಅವಶ್ಯಕತೆ ಇದೆ.
 • ಅನೇಕ ಸ್ಥಳಗಳಲ್ಲಿ, ಪರಿಸ್ಥಿತಿಯು ಇದೀಗ ತುಂಬಾ ಬಿಗಡಾಯಿಸಿದೆ , ನಿಯಂತ್ರಕ ಕ್ರಿಯೆಯು ಅನಿವಾರ್ಯವಾಗಿದೆ .
 • ಸಮುದಾಯಕ್ಕಾಗಿ ಭೂಗತ ನೀರಿನ ತಡೆಗಟ್ಟುವಿಕೆ ಸೇರಿದಂತೆ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಅಳವಡಿಸಬೇಕು.
 • EDC ಮತ್ತು ಇತರ ಕ್ಲೋರಿನೇಟೆಡ್ ಕಾಂಪೌಂಡ್ಸ್, MTBE, ಮತ್ತು ಅಮೋನಿಯ ಸೇರಿದಂತೆ ಅನೇಕ ಸಾಮಾನ್ಯ ಮಾಲಿನ್ಯಕಾರಕಗಳಿಗೆ ಅಂತರ್ಜಲ ಪರಿಹಾರಕ್ಕಾಗಿ ನವೀನ ತಂತ್ರಜ್ಞಾನಗಳು ಲಭ್ಯವಿವೆ. ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬಹುದು.
 • ಅಪಾಯಕಾರಿ ಪದಾರ್ಥಗಳನ್ನು ಒಳಗೊಂಡಿರುವ ಮನೆಯ ಹಿಡಿತದ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ
 • ಒಣಗಿದ ರಾಸಾಯನಿಕಗಳು, ಮೋಟಾರು ತೈಲ, ಸಮುದಾಯ ಪ್ರದೇಶಗಳಲ್ಲಿ ಕೀಟನಾಶಕಗಳನ್ನು ತಪ್ಪಿಸಿ
 • ಕ್ರಿಮಿನಾಶಕಗಳ ಬಳಕೆಯನ್ನು ಕಡಿಮೆ ಮಾಡಿ

ಪಂಚಾಯತ್ ಚುನಾವಣೆ

5.

ಸುದ್ಧಿಯಲ್ಲಿ ಏಕಿದೆ ? ಪಂಚಾಯಿತಿ ಚುನಾವಣೆ ಮತ್ತು ಸರಪಂಚ ಹುದ್ದೆಗೆ ಸ್ಫರ್ಧಿಸುವವರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬಾರದು ಎಂಬ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ.

 • ಒಡಿಶಾದ ಪ್ರಕರಣವೊಂದಕ್ಕೆ ಸಂಬಂಧಿಸಿ ನೀಡಿದ ತೀರ್ಪು ಇದಾಗಿದ್ದರೂ ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ಪರಿಣಾಮ ಬೀರುವ ಸಾಧ್ಯವಿದೆ.
 • ಮೂರನೇ ಮಗುವನ್ನು ದತ್ತು ನೀಡುವ ಮೂಲಕ ನಿಯಮಕ್ಕೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸುವವರೂ ಸ್ಪರ್ಧೆಗೆ ಅರ್ಹರಲ್ಲ ಎಂದೂ ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ.
 • ಮೂರನೇ ಮಗು ಹುಟ್ಟಿದ ಕೂಡಲೇ ಹೆತ್ತವರು ಪಂಚಾಯಿತಿ ಚುನಾವಣೆ ಸ್ಪರ್ಧೆಯಿಂದ ಸ್ವಯಂ ಆಗಿ ಅನರ್ಹರಾಗುತ್ತಾರೆ ಎಂದು ಅದು ಹೇಳಿದೆ.

ದತ್ತು ಕೊಟ್ಟರೂ ಅನರ್ಹ

 • ಎರಡಕ್ಕಿಂತ ಹೆಚ್ಚುವರಿ ಮಕ್ಕಳನ್ನು ದತ್ತು ನೀಡಿ ಅಧಿಕಾರ ಪಡೆಯುವ ತಂತ್ರಕ್ಕೂ ಸುಪ್ರೀಂಕೋರ್ಟ್‌ ಕಡಿವಾಣ ಹಾಕಿದೆ. ”ಕುಟುಂಬದಲ್ಲಿ ಮಕ್ಕಳ ಸಂಖ್ಯೆಯನ್ನು ನಿಯಂತ್ರಿಸುವುದು ಪಂಚಾಯಿತಿ ರಾಜ್‌ ಶಾಸನದ ಉದ್ದೇಶ. ಹೆಚ್ಚುವರಿ ಮಕ್ಕಳನ್ನು ದತ್ತು ನೀಡುವ ಮೂಲಕ ಹಿಂದೂ ದತ್ತು ಮತ್ತು ನಿರ್ವಹಣಾ ಕಾಯಿದೆಯ ಲಾಭ ಪಡೆಯಲು ಇಲ್ಲಿ ಅವಕಾಶವಿಲ್ಲ,” ಎಂದು ಪೀಠ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ?

 • ಒಡಿಶಾದ ನುವಾಪಾಡಾ ಜಿಲ್ಲೆಯಲ್ಲಿ ಮೀನಾಸಿಂಗ್‌ ಮಝಿ ಎಂಬವರು 2002ರ ಫೆಬ್ರವರಿಯಲ್ಲಿ ಸರಪಂಚರಾಗಿ ಆಯ್ಕೆಯಾಗಿದ್ದರು.
 • ಅವರಿಗೆ 1995, 1998ರಲ್ಲಿ ಹುಟ್ಟಿದ ಎರಡು ಮಕ್ಕಳಿದ್ದವು. 2002ರ ಆಗಸ್ಟ್‌ನಲ್ಲಿ ಮೂರನೇ ಮಗು ಹುಟ್ಟಿದ ಹಿನ್ನೆಲೆಯಲ್ಲಿ ಕಾನೂನು ಜಿಜ್ಞಾಸೆ ಹುಟ್ಟಿ ತು.
 • ಒಡಿಶಾ ಹೈಕೋರ್ಟ್‌ ಅವರನ್ನು ಹುದ್ದೆಯಿಂದ ಅನರ್ಹಗೊಳಿಸಿತು. ಇದನ್ನು ಪ್ರಶ್ನಿಸಿ ಮೀನಾಸಿಂಗ್‌ ಸುಪ್ರೀಂ ಮೊರೆ ಹೋಗಿದ್ದರು. 1995ರಲ್ಲಿ ಹುಟ್ಟಿದ ಮಗುವನ್ನು ಇನ್ನೊಂದು ಕುಟುಂಬಕ್ಕೆ ದತ್ತು ನೀಡಲಾಗಿದೆ. ಇದರಿಂದ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬಾರದು ಎಂಬ ಪಂಚಾಯಿತಿ ಕಾಯಿದೆಯನ್ನು ಪಾಲಿಸಿದಂತಾಗಿದೆ ಎಂದು ವಾದಿಸಿದ್ದರು. ಅವಳಿ, ತ್ರಿವಳಿ ಹುಟ್ಟಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಯನ್ನೂ ಎತ್ತಿದ್ದರು.

ಯಾವ ರಾಜ್ಯದಲ್ಲಿ ಜಾರಿ ಇದೆ?

 • ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ಬಿಹಾರ, ಛತ್ತೀಸ್‌ಗಢ, ಗುಜರಾತ್‌, ಮಹಾರಾಷ್ಟ್ರ, ಒಡಿಶಾ, ಹಿಮಾಚಲ ಪ್ರದೇಶ, ಅಸ್ಸಾಂ.

ಪರಿಣಾಮಗಳೇನು?

 • 2ಕ್ಕಿಂತ ಹೆಚ್ಚು ಮಕ್ಕಳು ಇರುವವರು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ ಎಂಬ ನಿಯಮ ದೇಶದ 12 ರಾಜ್ಯಗಳಲ್ಲಿ ಜಾರಿಯಲ್ಲಿದೆ.
 • ಸುಪ್ರೀಂಕೋರ್ಟ್‌ ಪದೇಪದೆ ಈ ನಿಯಮವನ್ನು ಎತ್ತಿ ಹಿಡಿಯುತ್ತಿದೆ. ಹೀಗಾಗಿ ಇತರ ರಾಜ್ಯಗಳೂ ಇದನ್ನು ಅಳವಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.

ಸುಪ್ರೀಂ ತೀರ್ಪು ರಾಜ್ಯಕ್ಕೂ ಅನ್ವಯ

 • ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರು ಪಂಚಾಯಿತಿ ಸದಸ್ಯತ್ವದಿಂದ ಅನರ್ಹರಾಗುತ್ತಾರೆ ಎಂದು ಸುಪ್ರೀಂಕೋರ್ಟ್ ಬುಧವಾರ ನೀಡಿರುವ ಮಹತ್ವದ ತೀರ್ಪು ಕರ್ನಾಟಕ ಪಂಚಾಯಿತಿ ಸಂಸ್ಥೆಗಳಿಗೂ ಅನ್ವಯವಾಗಲಿದೆ.
 • ಸಂವಿಧಾನದ ೭೩ನೇ ತಿದ್ದುಪಡಿಯೊಂದಿಗೆ ಪಂಚಾಯಿತಿ ರಾಜ್ ವ್ಯವಸ್ಥೆ ರಾಜ್ಯದಲ್ಲೂ ಜಾರಿಗೆ ಬಂದಿದೆ. ಆದರೆ ರಾಜ್ಯ ಪಂಚಾಯಿತಿ ರಾಜ್ ನಿಯಮಗಳಲ್ಲಿ ಮಕ್ಕಳ ಸಂಖ್ಯೆಯ ಪ್ರಸ್ತಾಪ ಇಲ್ಲ. ಆದರೆ ಸುಪ್ರೀಂಕೋರ್ಟ್ ತೀರ್ಪು ಕರ್ನಾಟಕದ ಪಂಚಾಯಿತಿ ರಾಜ್ ಸಂಸ್ಥೆಗಳಿಗೂ ಅನ್ವಯವಾಗುತ್ತದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

ಪಂಚಾಯತ್ ರಾಜ್

 • ಪಂಚಾಯತ್ ರಾಜ್ ಗ್ರಾಮಗಳಿಗೆ ಸ್ಥಳೀಯ ಸ್ವಯಂ ಸರಕಾರ ವ್ಯವಸ್ಥೆಯಾಗಿದೆ. ಆಡಳಿತ, ಯೋಜನೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಜನರ ಭಾಗವಹಿಸುವಿಕೆಗಾಗಿ ಗ್ರಾಮ ಪಂಚಾಯತ್ಗಳ ಸಂಘಟನೆಯನ್ನು ರಾಜ್ಯ ನೀತಿಯ ನಿರ್ದೇಶಕ ತತ್ವಗಳಾಗಿ  (ಆರ್ಟಿಕಲ್ 40) ಮಾಡಲಾಗಿದೆ ಏಕೆಂದರೆ ಪಂಚಾಯತ್ಗಳು ಪರಿಣಾಮಕಾರಿಯಾದ ವಾಹನ.
 • ಇದು ನರಸಿಂಹ ರಾವ್ ಸರ್ಕಾರದ ಅವಧಿಯಲ್ಲಿ ಅಂತಿಮವಾಗಿ 1992 ರ 73 ನೇ ಮತ್ತು 74 ನೇ ಸಂವಿಧಾನ ತಿದ್ದುಪಡಿ ಕಾರ್ಯಗಳ ರೂಪದಲ್ಲಿ ವಾಸ್ತವವಾಯಿತು.

73 ನೇ ಮತ್ತು 74 ನೇ ಸಂವಿಧಾನಾತ್ಮಕ ತಿದ್ದುಪಡಿ ಕಾಯಿದೆಗಳಡಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ,

 • 1992 ರ ಕೃತ್ಯಗಳು ಸಂವಿಧಾನದ ಎರಡು ಹೊಸ ಭಾಗಗಳು IX ಮತ್ತು IX-A ಅನ್ನು ಸೇರಿಸಿತು. ಇದು ಪಂಚಾಯತ್ ಮತ್ತು ಪುರಸಭೆಗಳ ಕಾರ್ಯಕಾರಿ ಅಂಶಗಳ ಪಟ್ಟಿಗಳನ್ನು ಹೊಂದಿರುವ 11 ಮತ್ತು 12 ರ ಎರಡು ಹೊಸ ವಿವರಣಾ ಪಟ್ಟಿಗಳನ್ನು ಸೇರಿಸಲಾಗಿದೆ. ಇದು ಪ್ರತಿ ರಾಜ್ಯದಲ್ಲಿ ಮೂರು ಹಂತದ ಪಂಚಾಯತಿ ರಾಜ್ ವ್ಯವಸ್ಥೆಯನ್ನು ಒದಗಿಸುತ್ತದೆ – ಗ್ರಾಮ, ಮಧ್ಯಂತರ ಮತ್ತು ಜಿಲ್ಲೆಯ ಹಂತಗಳಲ್ಲಿ ಕೆಲಸ ಮಾಡುತ್ತದೆ

ಸ್ಥಳೀಯ ಸರ್ಕಾರಿ ಸಂಸ್ಥೆಗಳಲ್ಲಿ  ಚುನಾವಣೆಗಳು ಹೇಗೆ ನಡೆಯುತ್ತವೆ ?

 • ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಎಲ್ಲಾ ಸ್ಥಾನಗಳನ್ನು ನೇರ ಚುನಾವಣೆ ಮೂಲಕ ಆಯ್ಕೆ ಮಾಡಿಕೊಳ್ಳುವ ಜನರು ತುಂಬುತ್ತಾರೆ.
 • ಚುನಾವಣಾ ನೀತಿಯನ್ನು ರಾಜ್ಯ ಚುನಾವಣಾ ಆಯೋಗ ನೋಡಿಕೊಳ್ಳುತ್ತದೆ .
 • ಮಧ್ಯಂತರ ಮತ್ತು ಜಿಲ್ಲಾ ಮಟ್ಟದಲ್ಲಿ ಅಧ್ಯಕ್ಷರು ಚುನಾಯಿತ ಪ್ರತಿನಿಧಿಗಳ ಪೈಕಿ ಪರೋಕ್ಷವಾಗಿ ಚುನಾಯಿತರಾಗುತ್ತಾರೆ.
 • ತಳಮಟ್ಟದಲ್ಲಿ, ಅಧ್ಯಕ್ಷ ಶಾಸಕಾಂಗದ ಮೂಲಕ ವ್ಯಾಖ್ಯಾನಿಸಲಾದ ಒಂದು ವಿಧಾನದಲ್ಲಿ ಅಧ್ಯಕ್ಷರನ್ನು ಚುನಾಯಿಸಲಾಗುತ್ತದೆ.
 • ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ ಮತ್ತು ಎಸ್ಟಿಗೆ ಸೀಟುಗಳನ್ನು ಕಾಯ್ದಿರಿಸಲಾಗಿದೆ.
 • ಈ ಮೀಸಲಾತಿ ಸೀಟುಗಳ ಪೈಕಿ ಮೂರನೇ ಒಂದು ಭಾಗದಷ್ಟು ಮಹಿಳೆಯರಿಗೆ ಮೀಸಲಾತಿ ನೀಡಬೇಕು.
 • ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ನ್ಯಾಯಾಲಯಗಳ ಹಸ್ತಕ್ಷೇಪವನ್ನು ಮಾಡುವುದಿಲ್ಲ .

ಪಂಚಾಯತ್ ಅಥವಾ ಪುರಸಭೆಯ ಸದಸ್ಯರಾಗಿರುವ ಅರ್ಹತೆಗಳು ಯಾವುವು?

 • ರಾಜ್ಯ ಶಾಸಕಾಂಗದ ಸದಸ್ಯರಾಗಿ ಅರ್ಹರಾಗಿರುವ ಯಾವುದೇ ವ್ಯಕ್ತಿಯು ಪಂಚಾಯತ್ ಅಥವಾ ಪುರಸಭೆಯ ಸದಸ್ಯರಾಗಲು ಅರ್ಹರಾಗಿದ್ದಾರೆ.
 • “ಅವರು 21 ವರ್ಷ ವಯಸ್ಸಿನವರಾಗಿದ್ದರೆ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆಂದು ಅವರನ್ನು ಅನರ್ಹಗೊಳಿಸಬಾರದು”
 • ಇದರರ್ಥ ರಾಜ್ಯ ಶಾಸಕಾಂಗದಂತೆ ಒಬ್ಬ ವ್ಯಕ್ತಿಯು ಪಂಚಾಯತ್ / ಪುರಸಭೆಯ ಸದಸ್ಯರಾಗಿ 21 ವರ್ಷ ವಯಸ್ಸನ್ನು ಪಡೆಯಬೇಕಾಗಿದೆ

ಜಮಾಲ್ ಖಶೋಗಿ 

6.

ಸುದ್ಧಿಯಲ್ಲಿ ಏಕಿದೆ ? ಸೌದಿ ಅರೇಬಿಯಾ ಮೂಲದ ಪತ್ರಕರ್ತ, ಲೇಖಕ ಜಮಾಲ್ ಖಶೋಗಿ ಹತ್ಯೆ ಪ್ರಕರಣ ಅಂತಾರಾಷ್ಟ್ರೀಯ ವಲಯದಲ್ಲಿ ಸಂಚಲನ ಮೂಡಿಸಿದ್ದರೆ, ಅರಬ್ ಜಗತ್ತು ವಿಶೇಷವಾಗಿ ಸೌದಿ ಅರೇಬಿಯಾ ಕುರಿತಂತೆ ಹಲವು ರಾಷ್ಟ್ರಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಯಾರು ಈ ಖಶೋಗಿ?

 • ಪ್ರಗತಿಪರ ಪತ್ರಕರ್ತ ಎಂದು ಕರೆಸಿಕೊಂಡಿದ್ದ ಖಶೋಗಿ ‘ಅಲ್ ವತನ್’ ಪತ್ರಿಕೆ ಮತ್ತು ‘ಅಲ್ ಅರಬ್’ ಟಿ.ವಿ. ಸುದ್ದಿವಾಹಿನಿಗೆ ಪ್ರಧಾನ ಸಂಪಾದಕರಾಗಿದ್ದರು.
 • ಖಶೋಗಿಯ ಅಜ್ಜ ಸೌದಿ ದೊರೆಗೆ ಕುಟುಂಬವೈದ್ಯರಾಗಿದ್ದರು.
 • ಸಾಂಪ್ರದಾಯಿಕ ಮನಸ್ಥಿತಿಯನ್ನು ತೀಕ್ಷ್ಣವಾಗಿ ಟೀಕಿಸುತ್ತಿದ್ದ ಖಶೋಗಿ ಎಷ್ಟು ಪ್ರಭಾವಿಯಾಗಿದ್ದರೆಂದರೆ ಹಲವು ಅಂತಾರಾಷ್ಟ್ರೀಯ ನಾಯಕರೊಡನೆ ಅವರಿಗೆ ನಿಕಟ ಸಂಪರ್ಕ, ಸ್ನೇಹವಿತ್ತು.
 • ಟರ್ಕಿ ಅಧ್ಯಕ್ಷರೊಂದಿಗೆ ಮತ್ತು ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಬರಾಕ್ ಒಬಾಮರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.
 • 1980 ಮತ್ತು 90ರ ದಶಕದಲ್ಲಿ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್​ನ ಸಂದರ್ಶನ ಮಾಡಿದ್ದರು. ಅಫ್ಘಾನಿಸ್ತಾನ, ಆಲ್ಜೀರಿಯಾ, ಕುವೈತ್, ಸುಡಾನ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರಿಂದ ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಸ್ಪಷ್ಟ ಅರಿವಿತ್ತು.

ಸತ್ಯ ಒಪ್ಪಿಕೊಂಡ ಸೌದಿ

 • ಅಂದು ಅಕ್ಟೋಬರ್ ಟರ್ಕಿಯ ಇಸ್ತಾಂಬುಲ್​ನ ಸೌದಿ ರಾಯಭಾರಿ ಕಚೇರಿಗೆ ತಮ್ಮ ಮದುವೆಯ ದಾಖಲಾತಿ ಪಡೆಯಲು ತೆರಳಿದ್ದ ‘ವಾಷಿಂಗ್ಟನ್ ಪೋಸ್ಟ್’ನ ಹಿರಿಯ ವರದಿಗಾರ ಜಮಾಲ್ ಖಶೋಗಿ (60) ನಿಗೂಢವಾಗಿ ಕಣ್ಮರೆಯಾದರು!
 • ಖಶೋಗಿ ಮತ್ತು ಅವರನ್ನು ಭೇಟಿಯಾದ ವ್ಯಕ್ತಿಗಳ ನಡುವೆ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ಹೋಗಿ ಖಶೋಗಿಯನ್ನು ಕಾನ್ಸುಲೇಟ್ ಕಚೇರಿಯಲ್ಲೇ ಬರ್ಬರವಾಗಿ, ಸಜೀವವಾಗಿ ದೇಹವನ್ನು ಕತ್ತರಿಸಿ ಹತ್ಯೆ ಮಾಡಲಾಗಿದೆ ಎಂದು ಟರ್ಕಿಯ ಹಿರಿಯ ಅಧಿಕಾರಿಗಳು ಹೇಳಿದಾಗ ಆತಂಕ, ತಲ್ಲಣದ ಸ್ಥಿತಿ ಸೃಷ್ಟಿಯಾಯಿತು.
 • ಅಮೆರಿಕ ಸೌದಿ ಅರೇಬಿಯಾದ ಸ್ನೇಹಿತನಾಗಿದ್ದರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತು. ‘ಪತ್ರಕರ್ತನ ಕಣ್ಮರೆ ವಿಚಾರದಲ್ಲಿ ವಾಸ್ತವ ಹೇಳದಿದ್ದರೆ ಕಠಿಣ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ’ ಎಂದೂ ಎಚ್ಚರಿಸಿತು.
 • ಆದರೂ, ಸೌದಿ ಅರೇಬಿಯಾ ಎರಡು ವಾರಗಳ ಕಾಲ ಸತ್ಯವನ್ನು ಒಪ್ಪಿಕೊಳ್ಳಲಿಲ್ಲ. ಅಷ್ಟೊತ್ತಿಗೆ, ಹಲವು ರಾಷ್ಟ್ರಗಳ ಪ್ರಬಲ ವಿರೋಧ ಸೃಷ್ಟಿಯಾದ ಹಿನ್ನೆಲೆಯಲ್ಲಿ ‘ಪತ್ರಕರ್ತ ಜಮಾಲ್ ಖಶೋಗಿ ಅವರನ್ನು ಇಸ್ತಾಂಬುಲ್​ನ ದೂತಾವಾಸದಲ್ಲೆ ಕೊಲೆ ಮಾಡಲಾಗಿದೆ’ ಎಂದು ಸೌದಿ ಅರೇಬಿಯಾದ ಅಟಾರ್ನಿ ಜನರಲ್ ಶೇಖ್ ಸೌದ್ ಅಲ್-ಮೊಜೆಬ್ ಹೇಳಿದರು.
 • ಕಾನ್ಸುಲೇಟ್ ಕಚೇರಿ ಆವರಣದಲ್ಲಿ ಕಾರ್ ಪತ್ತೆಯಾಗಿದ್ದು, ಪೊಲೀಸರು ಅದರಿಂದ ಲ್ಯಾಪ್​ಟಾಪ್, ಬಟ್ಟೆಗಳನ್ನು ವಶಪಡಿಸಿಕೊಂಡಿದ್ದು, ಹತ್ಯೆಗೆ ಸಂಬಂಧಿಸಿದ ಸುಳಿವು ದೊರೆತಿರುವುದಾಗಿ ಹೇಳಿದ್ದಾರೆ. ಈ ಮಧ್ಯೆ ಕೊಲೆ ಆರೋಪಕ್ಕೆ ಒಳಗಾಗಿರುವ ಅಧಿಕಾರಿಗಳ ವೀಸಾವನ್ನು ಅಮೆರಿಕ ರದ್ದುಪಡಿಸಿದೆ. ಖಶೋಗಿ ಹತ್ಯೆಗೆ ಸೌದಿ ಹಲವು ದಿನಗಳ ಹಿಂದೆಯೇ ಸಂಚು ರೂಪಿಸಿತ್ತು ಎಂದು ಟರ್ಕಿ ಅಧ್ಯಕ್ಷರು ಆರೋಪಿಸಿದ್ದಾರೆ.

ಸೌದಿ ದೊರೆಗೇಕೆ ಕೋಪ?

 • ಸೌದಿ ರಾಜಮನೆತನದ ಕಟು ಟೀಕಾಕಾರರಾಗಿದ್ದ ಜಮಾಲ್ ರಾಜಕುಮಾರ ಮೊಹ್ಮದ್ ಬಿನ್ ಸಲ್ಮಾನ್ ನೀತಿಗಳನ್ನು ತೀಕ್ಷ್ಣವಾಗಿ ಖಂಡಿಸುತ್ತಿದ್ದರು.
 • ಸೌದಿಯಲ್ಲಿ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ ಎಂದು ಹಲವು ಬಾರಿ ದೊಡ್ಡದನಿಯಲ್ಲಿ ಹೇಳಿದ್ದು ರಾಜಮನೆತನಕ್ಕೆ ಇರುಸುಮುರುಸು ಉಂಟುಮಾಡಿತ್ತು. ಅಷ್ಟೇ ಅಲ್ಲ, ಯೆಮೆನ್ ಮೇಲೆ ಸೌದಿ ಆಡಳಿತ ನಿರ್ಬಂಧ ಹೇರಿರುವುದು ತಪು್ಪ, ಪ್ರಗತಿಪರ ಹೋರಾಟಗಾರರನ್ನು ಸರ್ಕಾರ ಬಂಧಿಸಿರುವುದು ತಪು್ಪನಡೆ ಎಂದೂ ಖಶೋಗಿ ಹೇಳಿದ್ದರು.
 • ಕತಾರ್ ಮೇಲೆ ಸೌದಿ ವಿಧಿಸಿದ ಆರ್ಥಿಕ ದಿಗ್ಬಂಧನ, ಲೆಬನಾನ್ ಜತೆಗಿನ ಶೀತಲಸಮರ, ಕೆನಡಾದೊಂದಿಗಿನ ಜಟಾಪಟಿ, ಸೌದಿಯಲ್ಲಿ ಮಾಧ್ಯಮಗಳ ಮೇಲೆ ವಿಧಿಸಿದ ನಿರ್ಬಂಧ, ಸ್ತ್ರೀವಾದಿ ಹೋರಾಟಗಾರರ ಬಂಧನ-ಈ ಎಲ್ಲ ಘಟನಾಕ್ರಮಗಳನ್ನು, ಈ ನೀತಿಗೆ ಕಾರಣವಾದ ಮೊಹ್ಮದ್ ಬಿನ್ ಸಲ್ಮಾನ್​ರನ್ನು ಜಮಾಲ್ ಉಗ್ರವಾಗಿ ಟೀಕಿಸುತ್ತ ಬಂದರು. ಹಾಗಾಗಿ, ಸೌದಿ ದೊರೆಗೆ ಜಮಾಲ್ ವಿರುದ್ಧ ಕೋಪ, ಆಕ್ರೋಶ ಮಡುಗಟ್ಟಿತ್ತು ಎನ್ನಲಾಗಿದೆ.

ಸಂಬಂಧಗಳ ಮೇಲೆ ಪರಿಣಾಮ

 • ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಅಳಿಯ ಜೇರ್ಡ್ ಕುಶ್ನರ್ ಮತ್ತು ರಾಜಕುಮಾರ ಮೊಹ್ಮದ್ ಬಿನ್ ಸಲ್ಮಾನ್ ನಡುವೆ ಘನಿಷ್ಠ ಗೆಳೆತನವಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಸಲ್ಮಾನ್ ‘ಸುಧಾರಣಾವಾದಿ’ ಎಂಬ ವರ್ಚಸ್ಸು ರೂಪಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಆದರೆ, ಸೌದಿಯಲ್ಲಿ ಪರಿಸ್ಥಿತಿ ಮಾತ್ರ ತದ್ವಿರುದ್ಧವಾಗಿದೆ.
 • ರಾಜಮನೆತನದ ವಿರೋಧಿಗಳ ದನಿಯನ್ನು ಅದುಮುವ ಮಾನಸಿಕತೆ ಗಾಢವಾಗಿಯೇ ಇದೆ. ಸಲ್ಮಾನ್​ರ ಹಲವು ದಿಢೀರ್ ನಿರ್ಧಾರ, ತೀರ್ವನಗಳು ಚರ್ಚೆಗೆ ಗ್ರಾಸವಾಗಿದ್ದವು. ಆದರೆ, ಪ್ರಸಕ್ತ ಖಶೋಗಿ ಪ್ರಕರಣದಿಂದ ರಾಜಕೀಯ ಸಮೀಕರಣಗಳು, ದ್ವಿಪಕ್ಷೀಯ ಸಂಬಂಧಗಳು ಬದಲಾಗಲಿವೆ ಎನ್ನಲಾಗಿದ್ದು, ಸೌದಿ-ಅಮೆರಿಕ ಸಂಬಂಧ ಹದಗೆಡಲಿದೆ ಎಂಬ ವಿಶ್ಲೇಷಣೆಯೂ ಕೇಳಿಬರತೊಡಗಿದೆ. ಸಾಂಪ್ರದಾಯಿಕ ಮನಸ್ಥಿತಿ ತೊರೆಯದ ಸೌದಿ ವಿರುದ್ಧ ಹಲವು ರಾಷ್ಟ್ರಗಳು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿವೆ.

ಜರ್ಮನಿಯಿಂದ ಕಠಿಣ ಕ್ರಮ

 • ಖಶೋಗಿ ಹತ್ಯೆಯನ್ನು ಜರ್ಮನಿ ಖಂಡಿಸಿದೆ. ಅಲ್ಲದೆ, ಖಶೋಗಿ ಹತ್ಯೆ ಕುರಿತಾದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುವವರೆಗೂ ಸೌದಿ ಅರೇಬಿಯಾಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡುವುದಿಲ್ಲ ಎಂದು ಘೋಷಿಸಿದೆ. ಜರ್ಮನಿಯ ಚಾನ್ಸಲರ್ ಏಂಜೆಲಾ ಮಾರ್ಕೆಲ್, ಖಶೋಗಿ ಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಸೌದಿ ಅರೇಬಿಯಾಗೆ ಶಸ್ತ್ರಾಸ್ತ್ರ ಮಾರಾಟ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೌದಿ ಅರೇಬಿಯಾಗೆ 15 ಬಿಲಿಯನ್ ಡಾಲರ್ ಮೌಲ್ಯದ ಮಿಲಿಟರಿ ವಾಹನಗಳನ್ನು ಮಾರಾಟ ಮಾಡುವ ಜರ್ಮನಿ ಸರ್ಕಾರದ ನಿರ್ಣಯ ವಿರೋಧಕ್ಕೂ ಕಾರಣವಾಗಿತ್ತು.

ಯುಎಸ್ ಆಯಾಮ

 • ವಿದೇಶಿ ನೀತಿಯು ರಾಷ್ಟ್ರೀಯ ಆಸಕ್ತಿಯನ್ನು ಉತ್ತೇಜಿಸುವ ಬಗ್ಗೆ ಇರಬೇಕೆ ಹೊರತು ಅದರಲ್ಲಿ ಭಾವನೆಗಳಿಗೆ ಯಾವುದೇ ಸ್ಥಾನವಿಲ್ಲ ಎಂದು ಕೆಲವು ತಜ್ಞರು ನಂಬುತ್ತಾರೆ. ಪ್ರಸ್ತುತ ಯು.ಎಸ್. ವಿದೇಶಾಂಗ ನೀತಿಯು ಈ ನಂಬಿಕೆಯನ್ನು ಆಧರಿಸಿದೆ . ಉದಾಹರಣೆಗೆ, U.S. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ತತ್ತ್ವವನ್ನು ನಿರ್ದಯವಾಗಿ ಅನುಸರಿಸುತ್ತಾರೆ . ಅವನು ಅದರ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ ಆದರೆ ಯಾವುದೇ  ಕಪಟಗಳನ್ನು ಸಹಿಸುವುದಿಲ್ಲ .
 • ನೂರಾರು ಶತಕೋಟಿ ಮೌಲ್ಯದ ಶಸ್ತ್ರಾಸ್ತ್ರ ಮಾರಾಟಗಳು ಸಾಲಿನಲ್ಲಿವೆ ಎಂದು ಘೋಷಿಸುವಲ್ಲಿ ಅವರು ನಿರಾಶೆಗೊಂಡಿದ್ದಾರೆ ಮತ್ತು ಅವುಗಳನ್ನು ಕಳೆದುಕೊಳ್ಳಲು ಸಿದ್ಧವಾಗಿಲ್ಲ.

ಭಾರತೀಯ ಸನ್ನಿವೇಶ:

 • ಭಾರತದಲ್ಲಿನ ಮೂಲಭೂತ ಸುನ್ನಿ ಮತ್ತು ಶಿಯಾ ಮಸೀದಿಗಳಿಗೆ ಹಣ ನೀಡುವ ಮೂಲಕ, ಸೌದಿಯರು ಹಾಗೂ ಇರಾನಿಯನ್ನರು ತಮ್ಮ ಮುಕ್ತ ,ಬೇಷರತ್ , ಪರಿಶೀಲಿಸದೆ ಇರುವ ಬೆಂಬಲವನ್ನು ನೀಡುತ್ತಿದ್ದಾರೆ.ಇದರಿಂದಾಗಿ ಆರ್ಥಿಕತೆ ಮತ್ತು ಇನ್ನಿತರ ಮುಖಾಮುಖಿಗಳನ್ನು ಎದುರಿಸದಂತೆ ತಡೆಯುವ ರಾಷ್ಟ್ರೀಯ ಆಸಕ್ತಿಗೆ ತೊಡಕಾಗಿದೆ ಮತ್ತು ಇದು ಸ್ವಾತಂತ್ರ್ಯ ಮೊದಲು, ದಶಕಗಳಿಂದ ನಡೆದುಕೊಂಡು ಬಂದಿದೆ
 • ಹೇಗಾದರೂ, ಈ ಹೊರತಾಗಿಯೂ, ಭಾರತದಲ್ಲಿ ಸತತ ಸರ್ಕಾರಗಳು ಅಂತಹ ನಡವಳಿಕೆಯನ್ನು ಪ್ರತಿಭಟಿಸಲು ಸಾಧ್ಯವಾಗಿಲ್ಲ ಎಂದು ವಿಮರ್ಶಕರು ನಂಬುತ್ತಾರೆ. ಈ ನಡವಳಿಕೆಯು ಭಾರತದ ಆಂತರಿಕ ವ್ಯವಹಾರಗಳಲ್ಲಿ ಮತ್ತು ಮುಸ್ಲಿಮ್ ಸಮುದಾಯದ ತೀವ್ರಗಾಮಿತ್ವ ವಿಭಾಗಗಳಲ್ಲಿ ನೇರ ಹಸ್ತಕ್ಷೇಪಕ್ಕೆ ಕಾರಣವಾಗುತ್ತದೆ
 • ಭಾರತದ ರಾಷ್ಟ್ರೀಯ ಆಸಕ್ತಿಯು, ಪಶ್ಚಿಮ ಏಷ್ಯಾದ ಶಕ್ತಿ ಮೂಲಗಳ ಮೇಲೆ ಭಾರತದ ಅವಲಂಬನೆ ಮತ್ತು ಕಾಶ್ಮೀರ ಸಮಸ್ಯೆಯ ಮೇಲೆ ಪಾಕಿಸ್ತಾನದ ಜೊತೆಗಿನ ಸಂಘಟನೆಯ ಸಭೆಗಳಲ್ಲಿ ಅವರು ತಮ್ಮ ವಿರುದ್ಧ ಮತ ಚಲಾಯಿಸದಿರುವುದರಿಂದ ಆತಂಕವನ್ನು ಹೆಚ್ಚಿಸಬಾರದು ಎಂದು ಭಾರತದ ತಜ್ಞರು ನಂಬಿದ್ದಾರೆ.

 ಮುಕ್ತಯಾದ ಟೀಕೆಗಳು :

 • ಯೆಮೆನ್ನಲ್ಲಿನ ದುರದೃಷ್ಟ ಸನ್ನಿವೇಶಗಳನ್ನು ಮುಂದುವರೆಸಲು ಸೌದಿ ಅರೇಬಿಯಾ ಅವರು ಬಹಳಷ್ಟು  ತೈಲವನ್ನು ಮಾರಾಟ ಮಾಡಬೇಕು .
 • ಪ್ರಸ್ತುತ, ಉನ್ನತ ಮಟ್ಟದ ಕಚ್ಚಾತೈಲ ಬೆಲೆಯು  ಯುದ್ಧದ ವೆಚ್ಚವನ್ನು ಕಡಿಮೆಗೊಳಿಸುತ್ತದೆ ಹಾಗು , ಕ್ರೌನ್ ಪ್ರಿನ್ಸ್ ಮಹತ್ವಾಕಾಂಕ್ಷೆಯ ಸುಧಾರಣಾ ಯೋಜನೆಗೆ  ಹೆಚ್ಚು ಹಣ ಬೇಕಾಗುತ್ತದೆ.
 • ಹೀಗಾಗಿ, ಸೌದಿ ಅರೇಬಿಯಾದಿಂದ ಭಾರತಕ್ಕೆ ತೈಲ ಬೇಕಾದಲ್ಲಿ, ಅವರು ಅದನ್ನು ಮಾರಬೇಕಾಗುತ್ತದೆ.
 • ಮುಂದಿನ ಕೆಲವು ವಾರಗಳಲ್ಲಿ ಇರಾನಿನ ತೈಲ ಆಮದು ಕಡಿಮೆಯಾಗುವಂತೆ ಭಾರತವನ್ನು ಒತ್ತಾಯಿಸಿದರೆ, ಭಾರತಕ್ಕೆ ಬೇಕಾದ ಪರ್ಯಾಯ ಮೂಲಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ನೈಸರ್ಗಿಕ ಅನಿಲದ ಬಗ್ಗೆ  ಭಾರತದಲ್ಲಿ ಪ್ರತಿಯೊಬ್ಬರಿಗೂ ಭರವಸೆ ಇದೆ .
 • ಸೌದಿ ಅರೇಬಿಯಾಗೆ ಯಾವುದೇ ಆಯ್ಕೆಯಿಲ್ಲ ಎಂಬುದು ಈ ಕೆಳಗಿನ ಕಾರಣಗಳಿಂದಾಗಿ ಭಾವನೆಯಾಗಿದೆ:
 • ಅದು ಅದರ ತೈಲವನ್ನು ಮಾರಬೇಕಾಗಿದೆ, ಆದರೆ ಎರಡನೆಯ ಮತ್ತು ಹೆಚ್ಚು ಮುಖ್ಯವಾದದ್ದು, ಅದರ ಎಲ್ಲಾ ಶಕ್ತಿಯನ್ನು ತನ್ನ ದುರ್ಬಲ ಶತ್ರುವನ್ನು ಮತ್ತಷ್ಟು ದುರ್ಬಲಗೊಳಿಸಲು ಮತ್ತು ನಾಶಪಡಿಸಲು ಹಾಗು ವಿಶ್ವದ ಶಿಯಾ ಮುಸ್ಲಿಮರ ನಾಯಕನಾಗಬೇಕು ಎಂಬುದರಲ್ಲಿ ವ್ಯಯಿಸುತ್ತಿದೆ .
 • ಸೌದಿ ಅರೇಬಿಯದ ರಾಜ ಅಬ್ದುಲ್ಲಾ ಕೆಲವು ವರ್ಷಗಳ ಹಿಂದೆ ಯು.ಎಸ್ಗೆ ತಿಳಿಸಿದಂತೆ, “ಹಾವಿನ ತಲೆ ಕತ್ತರಿಸಿ ಬೇಕು”.ಇರಾನ್ ವಿರುದ್ಧಸೌದಿ ಅರೇಬಿಯಾದ ಪಟ್ಟುಹಿಡಿದ ಕಾರ್ಯಾಚರಣೆಯಲ್ಲಿ ಭಾರತದ ಸ್ನೇಹಗಳಿಸುವುದು  ಉಪಯುಕ್ತವಾಗಿದ್ದರೆ, ಅದು ಪಾವತಿಸಲು ಸಣ್ಣ ಬೆಲೆಯಾಗಿರುತ್ತದೆ ಎಂದು ತಜ್ಞರು ನಂಬಿದ್ದಾರೆ.

ಭಾರತವು ಆಯ್ಕೆಮಾಡಬಹುದಾದ ಮತ್ತೊಂದು ಶಸ್ತ್ರಾಸ್ತ್ರವಿದೆ.

 1. ಸೌದಿಗಳ ನಂತರ, ಭಾರತವು ವಿಶ್ವದ ಶಸ್ತ್ರಾಸ್ತ್ರಗಳ ಅತಿದೊಡ್ಡ ಖರೀದಿದಾರವಾಗಿದೆ.
 2. ಇದಲ್ಲದೆ, ಯು.ಎಸ್., ಫ್ರಾನ್ಸ್, ರಷ್ಯಾ ದೇಶ ಭಾರತದಲ್ಲಿ ಕೇವಲ ಒಂದು ಆಸಕ್ತಿಯನ್ನು ಹೊಂದಿರುತ್ತಾರೆ – ಅವರ ಅತ್ಯಂತ ದುಬಾರಿ ಯುದ್ಧ ಸಾಮಗ್ರಿಯನ್ನು ಮಾರಾಟ ಮಾಡಲು. ಅವರು ಹಣವನ್ನು ಮಾತ್ರ ಗಳಿಸುವುದಿಲ್ಲ, ಅವರು ನಮ್ಮ ಕೃತಜ್ಞತೆಯನ್ನು ಸಂಪಾದಿಸುತ್ತಾರೆ.
 3. “ನನ್ನ ದೇಶದ ಮೊದಲು ” ತತ್ವವನ್ನು ಅನುಸರಿಸಲು ಟ್ರಂಪ್ ಅವರು ತಮ್ಮ ದೇಶಕ್ಕೆ ಮತ್ತು ಇತರರಿಗೆ ಸಲಹೆ ನೀಡಿರುವರು  ಇರಾನ್ ಅಥವಾ ರಷ್ಯಾಕ್ಕೆ ಭೇಟಿ ನೀಡುವ ಮೂಲಕ ಅವರ ಕಾರ್ಯಸೂಚಿಯಲ್ಲಿ ಭಾರತಕ್ಕೆ ದಂಡ ವಿಧಿಸಲು ಅವರು ಕೊನೆಯವರಾಗಿರುತ್ತಾರೆ ಎಂದು  ತಜ್ಞರು ನಂಬಿದ್ದಾರೆ. . ಭಾರತವು ಹೊಂದಿರುವ ಈ ಪ್ರಯೋಜನವನ್ನು ಸರ್ಕಾರದ ಜಾಗರೂಕತೆಯು ತೋರುತ್ತದೆ
Related Posts
“18 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆಯುಷ್ಮಾನ್​ಗೆ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ ಸುದ್ಧಿಯಲ್ಲಿ ಏಕಿದೆ ?ವಿಶ್ವದಲ್ಲೇ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ಎಬಿ-ಎಆರ್​ಕೆ) ಯೋಜನೆಯಲ್ಲಿ ಹೆಸರು ನೋಂದಾ ಯಿಸಲು ಖಾಸಗಿ ಆಸ್ಪತ್ರೆಗಳು ನಿರಾಸಕ್ತಿ ತೋರಿರುವ ಸಂಗತಿ ಬೆಳಕಿಗೆ ಬಂದಿದೆ. ರಾಜ್ಯದಲ್ಲಿರುವ 26 ಸಾವಿರ ಖಾಸಗಿ ಆಸ್ಪತ್ರೆಗಳ ಪೈಕಿ ...
READ MORE
“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೃಂದಾವನಕ್ಕೆ ಡಿಸ್ನಿಲ್ಯಾಂಡ್‌ ಮಾದರಿ ಲುಕ್‌ ಸುದ್ಧಿಯಲ್ಲಿ ಏಕಿದೆ ?ಕೃಷ್ಣರಾಜಸಾಗರ ಜಲಾಶಯದ ಬೃಂದಾವನ ಉದ್ಯಾನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ 1,200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನೀಲಿನಕ್ಷೆ ಸಿದ್ಧಪಡಿಸಿದೆ. ಈಗಿನ ಪಾರಂಪರಿಕ ತಾಣದ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಬೃಂದಾವನವನ್ನು ವಿಶ್ವದ ಪ್ರವಾಸಿ ತಾಣಗಳಲ್ಲೇ ...
READ MORE
“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕಬ್ಬನ್‌ ಪಾರ್ಕ್‌ಗೆ ಏರ್‌ ಕ್ಲೀನರ್‌ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ರಾಜಧಾನಿಯಲ್ಲೂ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಈ ನಡುವೆ, ಅತಿ ಹೆಚ್ಚು ಜನರು ವಾಯು ಸೇವನೆಗೆ ಆಗಮಿಸುವ ಕಬ್ಬನ್‌ ಪಾರ್ಕ್‌ನಲ್ಲೂ ವಾಯು ಮಾಲಿನ್ಯ ಹೆಚ್ಚಿರುವುದನ್ನು ಮನಗಂಡು ಅಲ್ಲಿ ಗಾಳಿಯ ಶುದ್ಧೀಕರಣಕ್ಕೆ ಯಂತ್ರವನ್ನು ...
READ MORE
“12 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೃಷ್ಣರಾಜಸಾಗರ ಅಣೆಕಟ್ಟು ಸುದ್ಧಿಯಲ್ಲಿ ಏಕಿದೆ ?ಮಂಡ್ಯ ರೈತರ ಜೀವನಾಡಿ ಕಾವೇರಿ ನದಿಗೆ ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣಕ್ಕೆ  ಶಂಕುಸ್ಥಾಪನೆ ನೆರವೇರಿಸಿ 107 ವರ್ಷಗಳು ಸಂದಿವೆ. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿ ಫಲವಾಗಿ ಮಂಡ್ಯದ ಕನ್ನಂಬಾಡಿ ಗ್ರಾಮದಲ್ಲಿ ಕೆಆರ್​ಎಸ್ ಜಲಾಶಯ ನಿರ್ಮಾಣವಾಯಿತು. ಅದರ ...
READ MORE
” 14 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳಗಾವಿ-ಯರಗಟ್ಟಿ ರಸ್ತೆ ಸುದ್ಧಿಯಲ್ಲಿ ಏಕಿದೆ ?ಮೇಲ್ದರ್ಜೆಗೇರಿರುವ ಇಲ್ಲಿನ ಬೆಳಗಾವಿ-ಯರಗಟ್ಟಿ ನಡುವಿನ ರಸ್ತೆ, ಅಪಘಾತ ನಿಯಂತ್ರಿಸುವ ದೇಶದ ಮೊದಲ ಮಾದರಿ ರಸ್ತೆಯಾಗಿ ನಿರ್ಮಾಣಗೊಂಡಿದೆ. ಇದಕ್ಕೆ ಅತ್ಯಧಿಕ ರಾರ‍ಯಂಕ್‌ ನೀಡಿರುವ ವಿಶ್ವಬ್ಯಾಂಕ್‌, ಈ ಮಾದರಿ ರಸ್ತೆಯನ್ನು ಅನುಸರಿಸುವಂತೆ ಇತರ ರಾಜ್ಯಗಳಿಗೂ ಸೂಚನೆ ನೀಡಿದೆ. ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿಯಿಂದ ...
READ MORE
“07 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಓಝೋನ್​ ಪದರ ರಂಧ್ರ ಕ್ರಮೇಣ ಕ್ಷೀಣ ಸುದ್ಧಿಯಲ್ಲಿ ಏಕಿದೆ ?ಭೂಮಿಯನ್ನು ಸೂರ್ಯನ ನೇರಳೆ ಕಿರಣಗಳಿಂದ ರಕ್ಷಣೆ ಮಾಡುವ ಓಝೋನ್​ ಪದರ ಸವಕಳಿ ಸುಧಾರಿಸುತ್ತಿದ್ದು ಪದರಕ್ಕೆ ಆಗಿದ್ದ ಹಾನಿ ಕ್ರಮೇಣ ಸರಿಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಹಿನ್ನೆಲೆ ಓಝೋನ್​ ಪದರ 1970ನೇ ಇಸ್ವಿಯಿಂದೀಚೆಗೆ ತೆಳುವಾಗುತ್ತಿದೆ ಎಂದು ...
READ MORE
“16th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
ಕರ್ನಾಟಕ ಕೃಷಿಗೆ ಅಮೆರಿಕ ಸೈನಿಕ ಹುಳ ಲಗ್ಗೆ ಸುದ್ಧಿಯಲ್ಲಿ ಏಕಿದೆ ?ಕರ್ನಾಟಕವೂ ಸೇರಿದಂತೆ ನಾಲ್ಕೈದು ರಾಜ್ಯದ ಕೃಷಿ ಜಮೀನುಗಳಲ್ಲಿ ಅಮೆರಿಕ ಮೂಲದ ಅಪಾಯಕಾರಿ ಕೀಟವೊಂದು ಕಾಣಿಸಿಕೊಂಡಿದ್ದು, ಈ ಬಗ್ಗೆ ತೀವ್ರ ಎಚ್ಚರಿಕೆ ವಹಿಸುವಂತೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಕೆಲವು ವರ್ಷಗಳಂದ ರಾಜ್ಯದ ಹಲವು ...
READ MORE
” 23 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮನೆಮನೆಗೂ ಅನಿಲ ಭಾಗ್ಯ ಸುದ್ಧಿಯಲ್ಲಿ ಏಕಿದೆ ? ದೇಶದ 129 ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ವ್ಯವಸ್ಥೆ(ಸಿಜಿಡಿ) ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಕೊಳವೆಗಳ ಮೂಲಕ ನೈಸರ್ಗಿಕ ಅನಿಲ (ಸಿಎನ್‌ಜಿ) ವನ್ನು ಮನೆಮನೆಗೂ ತಲುಪಿಸುವ ಯೋಜನೆ ಇದು. ನಗರ ಅನಿಲ ...
READ MORE
” 20 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂದಿರಾ ಕ್ಯಾಂಟೀನ್​ಗೆ ಬಯೋಗ್ಯಾಸ್ ಸುದ್ಧಿಯಲ್ಲಿ ಏಕಿದೆ ?ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಪೋರ್ಟೆಬಲ್ ಜೈವಿಕ ಅನಿಲ (ಬಯೋಗ್ಯಾಸ್) ಉತ್ಪಾದನಾ ಘಟಕ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ. ಅದರಿಂದ ಉತ್ಪಾದನೆಯಾಗುವ ಗ್ಯಾಸ್ ಇಂದಿರಾ ಕ್ಯಾಂಟೀನ್​ಗಳಿಗೆ ಪೂರೈಕೆ ಮಾಡುವ ನೂತನ ಪ್ರಯೋಗಕ್ಕೆ ಪಾಲಿಕೆ ...
READ MORE
“3 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹೊಸ ವಾಹನ ನೋಂದಣಿ 2 ವರ್ಷ ಸ್ಥಗಿತ ಸುದ್ಧಿಯಲ್ಲಿ ಏಕಿದೆ ? ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಪರಿಹಾರದ ಹಿನ್ನೆಲೆಯಲ್ಲಿ ಮುಂದಿನ ಎರಡು ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸುವ ಚಿಂತನೆ ನಡೆದಿದೆ. ನಿರ್ಧಾರಕ್ಕೆ ಕಾರಣಗಳು ಬೆಂಗಳೂರು ಮಹಾನಗರದಲ್ಲಿ ವಾಹನಗಳ ಸಂಖ್ಯೆ ...
READ MORE
“18 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“2 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“12 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 14 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“07 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“16th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
” 23 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 20 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“3 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *