“27th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”

‘ಸ್ವಚ್ಛ ಬೆಂಗಳೂರು’

1.

ಸುದ್ಧಿಯಲ್ಲಿ ಏಕಿದೆ ? ಬೆಂಗಳೂರು ನಗರವನ್ನು ಸ್ವಚ್ಛ ಮಾಡಲು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಾಲಾವಧಿ ನಿಗದಿಪಡಿಸಿದೆ. ಆದರೆ ಸ್ವಚ್ಛ ಬೆಂಗಳೂರಿನ ಸವಾಲನ್ನು ಎದುರಿಸಿ ಅದನ್ನು ಸಾಧಿಸುವುದು ಕಷ್ಟ.

ಸವಾಲುಗಳೇನು ?

 • ಕಸದಿಂದ ಹಿಡಿದು ಉಗುಳುವವರೆಗೆ, ಸಾರ್ವಜನಿಕ ಶೌಚಾಲಯದಿಂದ ಹಿಡಿದು ಕೊಳಚೆನೀರು ಹರಿದುಹೋಗುವವರೆಗೆ ಬೆಂಗಳೂರು ನಗರವು ಸ್ವಚ್ಛ ಬೆಂಗಳೂರು ಎಂಬ ಹಣೆಪಟ್ಟಿಯನ್ನು ಹೊಂದಲು ಬಹುದೂರ ಸಾಗಬೇಕಾಗಿದೆ.
 • ಇಂದು ಬೃಹತ್ ಬೆಂಗಳೂರಿನ ಜನಸಂಖ್ಯೆ 2 ಕೋಟಿ ದಾಟಿದೆ. ಪ್ರತಿ ಬಾರಿ ಸಮೀಕ್ಷೆ ನಡೆಸಿದಾಗಲೂ ಸ್ವಚ್ಛ ಭಾರತ ರ್ಯಾಂಕಿಂಗ್ ಪಟ್ಟಿಯಿಂದ ಬೆಂಗಳೂರು ಹೊರ ಉಳಿಯುತ್ತದೆ.
 • ನಗರದ ಘನ ತ್ಯಾಜ್ಯ ನಿರ್ವಹಣೆ, ಕಸ ವಿಲೋವಾರಿ, ಬಯಲು ಶೌಚಮುಕ್ತ, ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳ ಲಭ್ಯತೆ ಹೀಗೆ ಹತ್ತಾರು ಸ್ವಚ್ಛತೆ ವಿಷಯಗಳನ್ನು ಪರಿಶೀಲಿಸಿ ಒಂದು ನಗರವನ್ನು ಸ್ವಚ್ಛ ಭಾರತ ರ್ಯಾಂಕಿಂಗ್ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.
 • ನಗರದ ಸ್ವಚ್ಛತೆಯೆಂದರೆ ಕೇವಲ ಕಸ ವಿಲೇವಾರಿ ಒಳಚರಂಡಿ ನಿರ್ವಹಣೆ ಮಾತ್ರ ಸಾಕಾಗುವುದಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಕೆಲವು ವಿಷಯಗಳನ್ನು ಆದ್ಯತೆಯಾಗಿ ಗಮನಹರಿಸಬೇಕಾಗಿದೆ.

ಬಿಬಿಎಂಪಿಯ ಮುಂದಿರುವ ದಾರಿಯೇನು?:

 • ಬಿಬಿಎಂಪಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ನೇರವಾಗಿ ಅವರ ಖಾತೆಗಳಿಗೆ ವೇತನ ಜಮೆಯಾಗುತ್ತದೆ. ಇದರಲ್ಲಿ ಗುತ್ತಿಗೆದಾರರ ಮಧ್ಯ ಪ್ರವೇಶವಿಲ್ಲ. ಆದರೂ ಪುಶ್ ಕಾರ್ಟ್ಸ್, ಆಟೋ ಟಿಪ್ಪರ್ ಗಳಿಂದ ಹಿಡಿದು ಕಾಂಪಾಕ್ಟರ್ ಗಳವರೆಗೆ ಬಿಬಿಎಂಪಿ ಗುತ್ತಿಗೆದಾರರನ್ನೇ ಅವಲಂಬಿಸಿದೆ. ಅದರ ಬದಲು ಬಿಬಿಎಂಪಿ ಸ್ವಂತ ಉಪಕರಣಗಳನ್ನು ಹೊಂದಿದ್ದರೆ ಕಾರ್ಯದಕ್ಷತೆಗೆ ಒಳ್ಳೆಯದು.
 • ಇ ಶೌಚಾಲಯಗಳ ಮೇಲೆ ಹೆಚ್ಚು ಒತ್ತು ನೀಡುವ ಬದಲು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಬಿಬಿಎಂಪಿ ಹೆಚ್ಚು ಗಮನ ಹರಿಸಬೇಕು.
 • ಸಿಸಿಟಿವಿ ಕ್ಯಾಮರಾಗಳನ್ನು ಅಲ್ಲಲ್ಲಿ ಅಳವಡಿಸಿ ಕಸಗಳನ್ನು ಹಾಕುವವರು ಮತ್ತು ಅಲ್ಲಲ್ಲಿ ಉಗುಳುವವರನ್ನು ಪತ್ತೆಹಚ್ಚಬೇಕು.
 • ಕಸಗಳನ್ನು ರಸ್ತೆ ಮೇಲೆ, ಸಾರ್ವಜನಿಕ ಸ್ಥಳಗಳಲ್ಲಿ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
 • ಕಸ ವಿಲೇವಾರಿಯನ್ನು ವಿಕೇಂದ್ರೀಕರಣಗೊಳಿಸಬೇಕು.
 • ಘನತ್ಯಾಜ್ಯ ನಿರ್ವಹಣೆ ಘಟಕವನ್ನು ಸ್ಥಾಪಿಸಿ ಸಂಸ್ಕರಿಸಿದ ನೀರನ್ನು ಚರಂಡಿಗೆ ಬಿಡಬೇಕು.

ಕಸ ವಿಲೇವಾರಿ ಸಮಸ್ಯೆ:

 • ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ಸುಮಾರು 5 ಸಾವಿರ ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತದೆ. ಅವುಗಳಲ್ಲಿ ಶೇಕಡಾ 40ರಷ್ಟು ಹಸಿ ತ್ಯಾಜ್ಯಗಳು. ಮಾವಳ್ಳಿಪುರ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ಹಾಕುವುದಕ್ಕೆ ಅಲ್ಲಿನ ನಿವಾಸಿಗಳು 2012ರಲ್ಲಿ ವಿರೋಧ ವ್ಯಕ್ತಪಡಿಸಿದ ನಂತರ ಕಸ ವಿಲೇವಾರಿ ಸಮಸ್ಯೆ ತೀವ್ರವಾಯಿತು.
 • 2014ರಲ್ಲಿ ಮಂಡೂರಿನಲ್ಲಿ ಕಸ ಹಾಕುವುದಕ್ಕೆ ಸಹ ಅಲ್ಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಇದೇ ಪರಿಸ್ಥಿತಿ ಲಕ್ಷ್ಮೀಪುರ, ಎಸ್ ಬಿಂಗಿಪುರ ಮತ್ತು ಇತರ ಸ್ಥಳಗಳಲ್ಲಿ ಕೂಡ ಉಂಟಾಯಿತು. ವಿವಾದ ಹೈಕೋರ್ಟ್ ಮೆಟ್ಟಿಲೇರಿತು.
 • ಹೈಕೋರ್ಟ್ ಮಧ್ಯ ಪ್ರವೇಶಿಸಿದ ನಂತರ ಕಸ ವಿಂಗಡನೆ ಮಾಡಬೇಕೆಂದು ಬಿಬಿಎಂಪಿ ಅಧಿಸೂಚನೆ ಹೊರಡಿಸಿತು. ಆದರೆ ಅದಾಗಿ 6 ವರ್ಷಗಳು ಕಳೆದ ನಂತರವೂ ನಗರದ ಕಸ ವಿಲೇವಾರಿ ಸಮಸ್ಯೆ ಬಗೆಹರಿದಿಲ್ಲ.
 • ನಗರದಲ್ಲಿ ಹಸಿ ಮತ್ತು ಒಣ ಕಸ ಪ್ರತ್ಯೇಕಪಡಿಸುವಿಕೆ ಇತ್ತೀಚೆಗೆ ವಿಫಲವಾಗಿದೆ

ಸ್ಟಾರ್ಟ್ ಅಪ್

2.

ಸುದ್ಧಿಯಲ್ಲಿ ಏಕಿದೆ ? ಟೆಕ್ ಸ್ಟಾರ್ಟ್ ಅಪ್ ಕಂಪನಿಗಳನ್ನು ಅತ್ಯಧಿಕ ಸಂಖ್ಯೆಯಲ್ಲಿ ಹೊಂದಿರುವ ನಗರಗಳಲ್ಲಿ ಬೆಂಗಳೂರು ಜಾಗತಿಕವಾಗಿ ಮೂರನೆಯ ಸ್ಥಾನದಲ್ಲಿದೆ.

 • ಸಿಲಿಕಾನ್ ವ್ಯಾಲಿ ಮತ್ತು ಲಂಡನ್ ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿವೆ ಎಂದು ನಾಸ್ಕಾಮ್ ವರದಿ ಹೇಳಿದೆ.
 • 2018 ರಲ್ಲಿ 1,200 ಹೊಸ ತಾಂತ್ರಿಕ ಉದ್ಯಮಗಳು ಆರಂಭವಾಗುವುದರೊಂದಿಗೆ ಭಾರತ ಜಾಗತಿಕವಾಗಿ ಮೂರನೆಯ ಸ್ಥಾನದಲ್ಲಿ ಮುಂದುವರಿದಿದ್ದು 7,200 ರಿಂದ 7,700ನಷ್ಟು ತಂತ್ರಜ್ಞಾನ ಕಂಪನಿಗಳನ್ನು ಹೊಂದಿದೆ.
 • ಹೊಸ ಕಂಪನಿಗಳ ಉದಯದಿಂದ ಈ ವರ್ಷ (2018) ದೇಶದಲ್ಲಿ 40,000 ಕ್ಕೂ ಹೆಚ್ಚು ನೇರ ಉದ್ಯೋಗಗಳು ಸೃಷ್ಟಿಯಾಗಿವೆ. ಪರಿಣಾಮ ಈ ಕ್ಷೇತ್ರದಲ್ಲಿ ಉದ್ಯೋಗ 6 ಲಕ್ಷದಿಂದ1.7 ಲಕ್ಷಕ್ಕೆ ಏರಿಕೆಯಾಗಿದೆ, 4 ರಿಂದ 5 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಅಂದಾಜಿಸಲಾಗಿದೆ.
 • ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಲ್ಲಿ ಕೂಡ ಸ್ಟಾರ್ಟ್ ಅಪ್‌ಗಳು ಬೆಳವಣಿಗೆ ಕಾಣುತ್ತಿವೆ.
 • 40% ದಷ್ಟು ಸ್ಟಾರ್ಟ್ ಅಪ್ ಕಂಪನಿಗಳು ಬೆಂಗಳೂರು, ದೆಹಲಿ NCR ಮತ್ತು ಮುಂಬೈ ಹೊರಗಡೆ ಕಾರ್ಯನಿರ್ವಹಿಸುತ್ತವೆ ಎಂದು ವರದಿ ತಿಳಿಸಿದೆ.
 • ಈ ವರ್ಷ ಉಡಾನ್, ಓಯೋ, ಫ್ರೆಶ್‌ವರ್ಕ್, ಸ್ವಿಗ್ಗಿ, ಪೇಟಿಮ್ ಮಾಲ್, ಪಾಲಿಸಿ ಬಜಾರ್, ಝೊಮೆಟೊ, ಮತ್ತು ಬೈಜುಗಳು ಬಿಲಿಯನ್ ಡಾಲರ್ ಕ್ಲಬ್ ಪ್ರವೇಶಿಸಿವೆ.

ಸ್ಟಾರ್ಟ್ ಅಪ್  ಭಾರತ

 • ಸ್ಟಾರ್ಟ್ ಅಪ್ ಭಾರತ ಕಾರ್ಯಕ್ರಮವು ಉದ್ಯಮಶೀಲತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತ ಸರ್ಕಾರದಿಂದ ಪ್ರಾರಂಭದ ಕಾರ್ಯ ಯೋಜನೆಯನ್ನು ಆಧರಿಸಿ ಕಾರ್ಯಾಚರಣೆಯಾಗಿದೆ. 2016 ರ ಜನವರಿ 16 ರಂದು ಈ ಕಾರ್ಯಕ್ರಮವನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು. ಆದರೆ ಅದರ ಮುಂಚೆಯೇ, 15 ಆಗಸ್ಟ್ 2015 ರಂದು ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯ ರಾಂಪಾರ್ಟ್ಗಳಿಂದ “ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ” ಗೆ ಒತ್ತಾಯಿಸಿದರು.

ಸ್ಟಾರ್ಟ್ ಅಪ್ ಎಂದರೇನು?

 • 2016 ರ ಫೆಬ್ರುವರಿ 17 ರಂದು ಪ್ರಕಟಿಸಲಾದ ಅಧಿಸೂಚನೆಯ ಪ್ರಕಾರ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಒಂದು ಘಟಕವನ್ನು ‘ಸ್ಟಾರ್ಟ್ ಅಪ್ ‘ ಎಂದು ವಿವರಿಸಿದೆ:
 • ಅದರ ಏಕೀಕರಣ / ನೋಂದಣಿ ದಿನಾಂಕದಿಂದ ಐದು ವರ್ಷಗಳವರೆಗೆ,ಯಾವುದೇ ಹಣಕಾಸಿನ ವರ್ಷಗಳಿಗೆ ಅದರ ವಹಿವಾಟು ರೂ 25 ಕೋಟಿ ಮೀರದೇ ಇದ್ದರೆ, ಮತ್ತು
 • ಹೊಸ ತಂತ್ರಜ್ಞಾನಗಳು, ಪ್ರಕ್ರಿಯೆಗಳು ಅಥವಾ ತಂತ್ರಜ್ಞಾನ ಅಥವಾ ಬೌದ್ಧಿಕ ಆಸ್ತಿಯಿಂದ ನಡೆಸಲ್ಪಡುವ ಸೇವೆಗಳ ನಾವೀನ್ಯತೆ, ಅಭಿವೃದ್ಧಿ, ನಿಯೋಜನೆ ಅಥವಾ ವಾಣಿಜ್ಯೀಕರಣದ ಕಡೆಗೆ ಅದು ಕಾರ್ಯನಿರ್ವಹಿಸುತ್ತಿದೆ

ವಾಣಿಜ್ಯೋದ್ಯಮವನ್ನು ಉತ್ತೇಜಿಸುವ ಸರ್ಕಾರಿ ಉಪಕ್ರಮಗಳು:

 • ಸರಕಾರ ಈಗಾಗಲೇ ಪಿಎಂಎಂವೈ (ಪ್ರಧಾನ್ ಮಂತ್ರ ಮುದ್ರ ಯೋಜನೆ), ಮುದ್ರ (ಮೈಕ್ರೋ ಯುನಿಟ್ಸ್ ಡೆವೆಲಪ್ಮೆಂಟ್ ಮತ್ತು ರಿಫೈನೆನ್ಸ್ ಏಜೆನ್ಸಿ) ಬ್ಯಾಂಕ್ ಅನ್ನು ಪ್ರಾರಂಭಿಸಿದೆ. ಇದು ಹೊಸ ಸಂಸ್ಥೆಯಾಗಿದೆ. ಇದು ಮೈಕ್ರೋ ಘಟಕಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಮತ್ತು ಮರುಹಣಕಾಸನ್ನು ಮಾಡುವ ಚಟುವಟಿಕೆಗಳನ್ನು ಸ್ಥಾಪಿಸಿದೆ. ಇದು ರಿಫೈನೆನ್ಸ್ ಫಂಡ್ ಆಫ್ ₹ 200 ಶತಕೋಟಿ. ಸ್ಟ್ಯಾಂಡ್ ಅಪ್ ಇಂಡಿಯಾ ಉಪಕ್ರಮವು ವಾಣಿಜ್ಯೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ, ಆದರೆ ಎಸ್ಸಿಗಳು / ಎಸ್ಟಿಗಳ ನಡುವೆ, ಮಹಿಳಾ ಸಮುದಾಯಗಳು.

ಸ್ಟಾರ್ಟ್ ಅಪ್ ಭಾರತ ಕಾರ್ಯಕ್ರಮದ ಮುಖ್ಯಾಂಶಗಳು

 • ಪ್ರಕಟಣೆಯ ಕೆಲವು ದೊಡ್ಡ ಅಂಕಗಳು ಇಲ್ಲಿವೆ:
 • ತೆರಿಗೆ ವಿನಾಯಿತಿಗಳು ಮತ್ತು ರಿಯಾಯಿತಿಗಳು.
 • ಸ್ವಯಂ-ಪ್ರಮಾಣೀಕರಣ ಮತ್ತು ಮೂರು ವರ್ಷಗಳ ಕಾಲ ನಿಯಂತ್ರಕ ತಪಾಸಣೆ.
 • ರೂ. 10,000 ಕೋಟಿ.
 • ಕ್ರೆಡಿಟ್ ಗ್ಯಾರಂಟಿ ಫಂಡ್.
 • ಆರಂಭಿಕ ಭಾರತ ಕೇಂದ್ರ.
 • ಅಟಾಲ್ ಇನೋವೇಶನ್ ಮಿಷನ್ (ಎಐಎಂ).
 • ಪಿಪಿಪಿ ಮಾದರಿಯಲ್ಲಿ ಇನ್ಕ್ಯುಬೇಟರ್ಗಳು.
 • ನಾವೀನ್ಯತೆ ಕೇಂದ್ರಗಳು.
 • ಸಂಶೋಧನಾ ಉದ್ಯಾನವನಗಳು.
 • ಆರಂಭಿಕ ಪೇಟೆಂಟ್ ಅನ್ವಯಿಕೆಗಳಿಗಾಗಿ ಫಾಸ್ಟ್-ಟ್ರ್ಯಾಕ್ ಯಾಂತ್ರಿಕತೆ.
 • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆರಂಭಿಕ ಉತ್ಸವಗಳು.
 • ಒಂದು ದಿನದಲ್ಲಿ ಸ್ಟಾರ್ಟ್ಅಪ್ಗಳನ್ನು ನೋಂದಾಯಿಸಲು ಮೊಬೈಲ್ ಅಪ್ಲಿಕೇಶನ್.

ಯೋಜನೆಯ ಲಾಭಗಳು

 • ಇದು ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.
 • ಇದು ಭಾರತದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
 • ಮೇಕ್ ಇನ್ ಇಂಡಿಯಾ ಉಪಕ್ರಮದ ಜೊತೆಗೆ, ಭಾರತದಲ್ಲಿ ಉದ್ಯಮಶೀಲತೆ ಸಂಸ್ಕೃತಿಯ ಅಭಿವೃದ್ಧಿಯಲ್ಲಿ ಇದು ಸಹಾಯ ಮಾಡುತ್ತದೆ.

ಮೂಳೆ ಕ್ಯಾನ್ಸರ್‌ ಚಿಕಿತ್ಸೆ

ಸುದ್ಧಿಯಲ್ಲಿ ಏಕಿದೆ ? ರಾಜಸ್ಥಾನದ ಸರಕಾರಿ ಆಸ್ಪತ್ರೆಯಾದ ಸವಾಯಿ ಮನ್‌ ಸಿಂಗ್ ( ಎಸ್‌ಎಂಎಸ್‌) ಆಸ್ಪತ್ರೆ ಹೊಸ ಪ್ರಯೋಗವೊಂದನ್ನು ಮಾಡಿದೆ. ಮೂಳೆ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಇದೇ ಮೊದಲ ಬಾರಿಗೆ ಹೊಸ ವಿಧಾನವೊಂದನ್ನು ಬಳಸಿದೆ. ಎಲುಬಿನ ಆಸ್ಟಿಯೋಜನಿಕ್ ಸರ್ಕೋಮಾದಿಂದ ಬಳಲುತ್ತಿದ್ದ 15 ವರ್ಷದ ಯುವಕನಿಗೆ ದ್ರವ ಸಾರಜನಕ ( ಲಿಕ್ವಿಡ್‌ ನೈಟ್ರೋಜನ್‌ ) ಮೂಲಕ ಚಿಕಿತ್ಸೆ ನೀಡಿದ್ದಾರೆ.

 • ಮೂಳೆ ಗ್ರಂಥಿಶಾಸ್ತ್ರದ ಕ್ಷೇತ್ರದಲ್ಲಿ ಉದಯೋನ್ಮುಖ ತಂತ್ರವಾದ ದ್ರವ ಸಾರಜನಕ ವಿಧಾನವನ್ನು ರಾಜಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಬಳಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿಕೊಂಡಿದ್ದಾರೆ.
 • ಕಂಪ್ಯೂಟರ್‌ಗಳಲ್ಲಿ ಕೂಲೆಂಟ್‌ ಅನ್ನಾಗಿ ಹಾಗೂ ಇತರ ಉದ್ದೇಶಗಳಿಗಾಗಿ ಲಿಕ್ವಿಡ್‌ ನೈಟ್ರೋಜನ್‌ ಅನ್ನು ಬಳಸಲಾಗುತ್ತದೆ. ಅಲ್ಲದೆ, ಅದರ ಕುದಿಯುವ ಬಿಂದು ( ಬಾಯ್ಲಿಂಗ್ ಪಾಯಿಂಟ್ ) ಮೈನಸ್‌ 196 ಡಿಗ್ರಿ ಸೆಲ್ಶಿಯಸ್ ಆಗಿದ್ದು, ಹೀಗಾಗಿ ಈ ತಂಪು ಉಷ್ಣಾಂಶವನ್ನು ಬಾಧಿತ ಮೂಳೆಗಳಿಂದ ಕ್ಯಾನ್ಸರ್‌ ಜೀವಕೋಶಗಳನ್ನು ನಾಶಮಾಡಲು ವೈದ್ಯರು ಬಳಸುತ್ತಾರೆ.

ಲಿಕ್ವಿಡ್‌ ನೈಟ್ರೋಜನ್‌ ಬಳಸಲು ಕಾರಣ

 • ”ರೋಗಿ ಬೆಳೆಯುತ್ತಿರುವ ಯುವಕನಾದ್ದರಿಂದ ಎಂಡೋಪ್ರೊಸ್ಥೆಸಿಸ್‌ ಬಳಸಿದ್ದರೆ 5 ರಿಂದ 10 ವರ್ಷಗಳಲ್ಲಿ ಅದನ್ನು ಪದೇ ಪದೇ ಬದಲಿಸಬೇಕಿತ್ತು. ಇನ್ನು, ರೇಡಿಯೋಥೆರಪಿ ಮೂಲಕ ಚಿಕಿತ್ಸೆ ನೀಡಿದ್ದರೆ ಮೂಳೆಗಳು ಸುಲಭವಾಗಿ ಮುರಿತಕ್ಕೊಳಗಾಗುವ ಸಾಧ್ಯತೆಯಿದ್ದು, ಮತ್ತೆ ಮೂಳೆಗಳನ್ನು ಮರುಜೋಡಿಸಲು 18 ತಿಂಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಹೀಗಾಗಿ, ದ್ರವ ಸಾರಜನಕವನ್ನು ಆಯ್ಕೆ ಮಾಡಿಕೊಂಡೆವು” ಎಂದು ಮಾಹಿತಿ ನೀಡಿದ್ದಾರೆ.
 • ಅಲ್ಲದೆ, ” ಗುಣಮಟ್ಟದ ವಿಚಾರವಾಗಿಯೂ ಅದು ಉತ್ತಮವಾಗಿದ್ದು, ಮೂಳೆಗಳು ವೇಗವಾಗಿ ಕೂಡಿಕೊಳ್ಳುತ್ತವೆ. ಜತೆಗೆ ಮತ್ತೆ ಮೂಳೆಯಲ್ಲಿ ಕ್ಯಾನ್ಸರ್‌ ಮರುಕಳಿಸುವ ಸಾಧ್ಯತೆ ಸಹ ಬಹಳ ಕಡಿಮೆ.
 • ಹೀಗಾಗಿ, ಕ್ಯಾನ್ಸರ್‌ಕಾರಕ ಗಡ್ಡೆ ಬೆಳೆದಿದ್ದ ಮೂಳೆಯನ್ನು ಲಿಕ್ವಿಡ್‌ ನೈಟ್ರೋಜನ್‌ನಲ್ಲಿ ಮುಳುಗಿಸಿ 20 ನಿಮಿಷಗಳ ಕಾಲ ಇಡಲಾಯಿತು”. ಜತೆಗೆ, ”ಅದರಿಂದ ಮೂಳೆಯ ಗುಣಮಟ್ಟ ಸಹ ಉತ್ತಮವಾಗೇ ಇರುತ್ತದೆ. ಆದರೆ, ದ್ರವ ಸಾರಜನಕದಿಂದ ಅಪಾಯ ಸಹ ಹೆಚ್ಚಿರುತ್ತದೆ. ಅದನ್ನು ಮೈನಸ್‌ 190 ಡಿಗ್ರಿ ಸೆಲ್ಶಿಯಸ್‌ ವಾತಾವರಣದಲ್ಲಿ ಇಡಲಾಗುತ್ತದೆ. ನಿಮ್ಮ ದೇಹದ ಮೇಲೆ ಬಿದ್ದರೆ ಅದರಿಂದ ಗ್ಯಾಂಗ್ಇನ್ ಸಂಭವಿಸಬಹುದು. ಜತೆಗೆ, ಕಣ್ಣಿಗೆ ಬಿದ್ದರೆ, ದೃಷ್ಟಿ ದೋಷ ಸಂಭವಿಸಬಹುದು. ಆದ್ದರಿಂದ, ಶಸ್ತ್ರಚಿಕಿತ್ಸೆಗೂ ಎರಡು ದಿನಗಳ ಮುನ್ನ ರಿಹರ್ಸಲ್‌ ನಡೆಸಲಾಗಿತ್ತು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು”.

ಪ್ರಕ್ರಿಯೆ

 • ”ಕ್ಯಾನ್ಸರ್‌ ಸಂಭವಿಸಿದ್ದ ಮೂಳೆಯನ್ನು ತೆಗೆದ ಬಳಿಕ ಅದನ್ನು 20 ನಿಮಿಷಗಳ ಕಾಲ ರಾಸಾಯನಿಕದಲ್ಲಿಡಲಾಗುತ್ತದೆ. ಅದಾದ ಬಳಿಕ 15 ನಿಮಿಷಗಳ ಕಾಲ ಸಾಮಾನ್ಯ ಸ್ಥಿತಿಯಲ್ಲಿಡಲಾಗುತ್ತದೆ. ಬಳಿಕ 30 ಡಿಗ್ರಿ ಸೆಲ್ಶಿಯಸ್‌ ವಾತಾವರಣದಲ್ಲಿಯೂ 15 ನಿಮಿಷಗಳ ಕಾಲ ಇಡಬೇಕಾಗುತ್ತದೆ. ನಂತರ, ಮೂರು ಲಾಕಿಂಗ್ ಪ್ಲೇಟ್‌ಗಳ ಮೂಲಕ ಮೂಳೆಯನ್ನು ದೇಹಕ್ಕೆ ಜೋಡಿಸಲಾಗುತ್ತದೆ. ಈ ವಿಧಾನವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಯತ್ನಿಸಿದ್ದೇವೆ”

ಇನ್ವೆಸ್ಟ್ ಇಂಡಿಯಾ

4.

ಸುದ್ಧಿಯಲ್ಲಿ ಏಕಿದೆ ? ವಿಶ್ವಸಂಸ್ಥೆಯಿಂದ ಕೊಡಮಾಡಲಾಗುವ ಪರಿಸರಕ್ಕೆ ಸಂಬಂಧಿಸಿದ ಅತ್ಯುನ್ನತವಾದ ಪ್ರಶಸ್ತಿಯಾದ  ‘ಚಾಂಪಿಯನ್ ಆಫ್ ಅರ್ಥ್’ ಪ್ರಶಸ್ತಿಯನ್ನು ಪ್ರಧಾನಿ ಮೋದಿಗೆ ನೀಡಿರುವ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ.

 • ಈ ಬಾರಿ ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ ಹೂಡಿಕೆಯನ್ನು ಉತ್ತೇಜಿಸುತ್ತಿರುವುದಾಗಿ ಭಾರತಕ್ಕೆ ವಿಶ್ವಸಂಸ್ಥೆಯ ಪ್ರತಿಷ್ಠಿ ಪ್ರಶಸ್ತಿ ಲಭ್ಯವಾಗಿದ್ದು, ಇನ್ವೆಸ್ಟ್ ಇಂಡಿಯಾದ ಸಿಇಒ ದೀಪಕ್ ಬಾಗ್ಲಾ ಅವರಿಗೆ ಜಿನಿವಾದಲ್ಲಿ ಅರ್ಮೇನಿಯನ್ ಅಧ್ಯಕ್ಷರು ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.
 • ಯುಎನ್ ಸಿಟಿಎಡಿ ನವೀಕರಿಸಬಹುದಾದ ಇಂಧನ ಹೂಡಿಕೆಯ ವಿಷಯದಲ್ಲಿ ಭಾರತದ ಉತ್ತೇಜನದ ಬಗ್ಗೆ ಮಾತನಾಡಿದ್ದು, ಭಾರತ ಜಾಗತಿಕ ಮಟ್ಟದ ವಿಂಡ್ ಟರ್ಬೈನ್ ಕಂಪನಿಗಳಿಗೆ ಬ್ಲೇಡ್ ಉತ್ಪಾದನಾ ಘಟಕವನ್ನು ಸ್ಥಾಪಿಸುವುದಕ್ಕೆ ಉತ್ತೇಜನ ನೀಡುತ್ತಿರುವುದನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಾಗಿ ಹೇಳಿದೆ.
 • ಕಾರ್ಯಕ್ರಮದಲ್ಲಿ 160 ರಾಷ್ಟ್ರಗಳಿಂದ 5,000 ಪ್ರತಿನಿಧಿಗಳು ಭಾಗವಹಿಸಿದ್ದರು.

ಇನ್ವೆಸ್ಟ್ ಇಂಡಿಯ

 • ಹೂಡಿಕೆ ಭಾರತವು ದೇಶದ ಅಧಿಕೃತ ಸಂಸ್ಥೆಯಾಗಿದೆ
 • ಸಂಸ್ಥೆ ಬಂಡವಾಳ ಹೂಡಿಕೆಯ ಪ್ರಚಾರ ಮತ್ತು ಅನುಕೂಲಕ್ಕಾಗಿ ಸಮರ್ಪಿಸಲಾಗಿದೆ. FICCI (51% ಇಕ್ವಿಟಿ), ಡಿಐಪಿಪಿ (ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಇಲಾಖೆಯಿಂದ 34% ಇಕ್ವಿಟಿ) ಮತ್ತು ಭಾರತದ ರಾಜ್ಯ ಸರ್ಕಾರಗಳು (5% ಪ್ರತಿ) ನಡುವಿನ ಜಂಟಿ ಉದ್ಯಮವಾಗಿ ಸ್ಥಾಪಿಸಿ, ಅದರ ಆದೇಶವು ಜಾಗತಿಕ ಹೂಡಿಕೆ ಸಮುದಾಯಕ್ಕೆ ಮೊದಲ ಉಲ್ಲೇಖದ ಕೇಂದ್ರವಾಗಿ ಮಾರ್ಪಟ್ಟಿದೆ.
 • ಇದು ಕ್ಷೇತ್ರ-ನಿರ್ದಿಷ್ಟತೆಯನ್ನು ಒದಗಿಸುತ್ತದೆ
 • ವಿದೇಶಿ ಹೂಡಿಕೆದಾರರಿಗೆ ರಾಜ್ಯ-ನಿಶ್ಚಿತ ಮಾಹಿತಿ, ನಿಯಂತ್ರಕ ಅನುಮೋದನೆಗಳು ಮತ್ತು ಆದೇಶಗಳನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತದೆ
 • ಇದರ ಆದೇಶವು ಭಾರತೀಯ ಹೂಡಿಕೆದಾರರಿಗೆ ವಿದೇಶಿ ಹೂಡಿಕೆಯ ಅವಕಾಶಗಳ ಬಗ್ಗೆ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಒದಗಿಸುವಂತೆ ಸಹ ಒಳಗೊಂಡಿದೆ.
 • ಅಧಿಕಾರಿಗಳೊಂದಿಗೆ ಭಾರತ ಪಾಲುದಾರರನ್ನು ಹೂಡಿಕೆ ಮಾಡ,ಹೂಡಿಕೆ ಮತ್ತು ವಿಸ್ತಾರವಾದ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ಹೆಚ್ಚಿಸಲು ಹಲವಾರು ದೇಶಗಳ ಹೂಡಿಕೆ ಪ್ರಚಾರ ಏಜೆನ್ಸಿಗಳು (ಯುಎಸ್ಎ, ಯುಕೆ, ಫ್ರಾನ್ಸ್, ಇಟಲಿ, ಜಪಾನ್, ಕೊರಿಯಾ ಮತ್ತು ಮಾರಿಷಸ್). ಇತ್ತೀಚಿನ ತಿಂಗಳುಗಳಲ್ಲಿ, ಯುಎಇ, ಸೌದಿ ಅರೇಬಿಯಾ ಮತ್ತು ಸಿಂಗಾಪುರ್ಗಳಲ್ಲಿನ ಅದರ ಕೌಂಟರ್ ಏಜೆನ್ಸಿಗಳೊಂದಿಗೆ ಇದು ನಿಕಟ ಸಂಬಂಧಗಳನ್ನು ರೂಪಿಸಿದೆ
 • ವಿದೇಶಾಂಗ ಸಚಿವಾಲಯದ ಜಂಟಿ ಸಹಭಾಗಿತ್ವ ಮತ್ತು ಆಫ್ರಿಕಾ ಮತ್ತು ವಾಣಿಜ್ಯ ಸಂಬಂಧದ ಸಚಿವಾಲಯದ ಬಂಡವಾಳ-ಘಟಕವನ್ನು ಸಹಕರಿಸುವ ನೋಡಾಲ್ ಸಂಸ್ಥೆ ಕೂಡಾ.

ಮಹಿಂದಾ ರಾಜಪಕ್ಷ ಶ್ರೀಲಂಕಾ ಪ್ರಧಾನಿ!

5.

ಸುದ್ಧಿಯಲ್ಲಿ ಏಕಿದೆ ? ಶ್ರೀಲಂಕಾ ಸರ್ಕಾರದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅಲ್ಲಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಂದ ಅಧಿಕಾರ ಪಡೆದು ನೂತನ ಪ್ರಧಾನಿಯಾಗಿ ಮಹಿಂದಾ ರಾಜಪಕ್ಷ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜಪಕ್ಷ ಅವರ ಅಧಿಕಾರಾವಧಿಯ ಬಗ್ಗೆ ಸ್ಪಷ್ಟತೆಯಿಲ್ಲ.

ಹಿನ್ನಲೆ

 • ದೈನಂದಿನ ಆಡಳಿತ ಹಾಗೂ ಸರ್ಕಾರ ಕೈಗೊಂಡ ಆರ್ಥಿಕ ನಿರ್ಧಾರಗಳ ಕುರಿತು ಸಿರಿಸೇನಾ ಮತ್ತು ವಿಕ್ರಮಸಿಂಘ ನಡುವೆ ಭಾರಿ ಭಿನ್ನಾಭಿಪ್ರಾಯ ಮೂಡಿತ್ತು.
 • ಮಹಿಂದಾ ಅವರ ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್​ಎಲ್​ಎಫ್​ಪಿ) ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿತ್ತು. ಮುಂಬರುವ ಸಾರ್ವತ್ರಿಕ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿ ಎಂದೇ ಪರಿಗಣಿಸಲಾಗಿತ್ತು.
 • ಅಂದಿನಿಂದ ಯುಪಿಎಫ್​ಎ ಮತ್ತು ವಿಕ್ರಮಸಿಂಘ ಅವರ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್​ಪಿ) ಮೈತ್ರಿಕೂಟದ ಸರ್ಕಾರದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿದ್ದವು. ಈ ಹಿನ್ನೆಲೆಯಲ್ಲಿ ಯುಪಿಎಫ್​ಎ ಮೈತ್ರಿಕೂಟದಿಂದ ಹೊರಬರಲು ನಿರ್ಧರಿಸಿತು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮಹಿಂದಾ ಅಮರವೀರಾ ತಿಳಿಸಿದ್ದಾರೆ.
 • ಪದಚ್ಯುತಿ ಅಸಾಧ್ಯ: ರಾನಿಲ್ ವಿಕ್ರಮಸಿಂಘ ಅವರನ್ನು ಪದಚ್ಯುತಿಗೊಳಿಸುವ ಸಿರಿಸೇನಾ ನಿರ್ಧಾರ ಸಾಂವಿಧಾನಿಕ ಮಾನ್ಯತೆ ಹೊಂದಿಲ್ಲ ಎಂದು ವಿಶ್ಲೇಷಿಸಲಾಗಿದೆ.
 • ಶ್ರೀಲಂಕಾದ ಸಂವಿಧಾನದ 19ನೇ ತಿದ್ದುಪಡಿ ಪ್ರಕಾರ, ಬಹುಮತ ಸಾಬೀತುಪಡಿಸದೆ ಪ್ರಧಾನಿಯನ್ನು ಪದಚ್ಯುತಗೊಳಿಸುವಂತಿಲ್ಲ. ಹಾಗಾಗಿ ವಿಕ್ರಮಸಿಂಘ ಅವರನ್ನು ಪದಚ್ಯುತಗೊಳಿಸುವ ನಿರ್ಧಾರದಿಂದ ಶ್ರೀಲಂಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಬಹುಮತ ಇಲ್ಲ

 • ಸಿರಿಸೇನಾ ಮತ್ತು ರಾಜಪಕ್ಸ ಅವರ ಯುಪಿಎಫ್​ಎ ಮತ್ತು ಎಸ್​ಎಲ್​ಎಫ್​ಪಿ ಮೈತ್ರಿಕೂಟ ಒಟ್ಟು 95 ಸ್ಥಾನಗಳನ್ನು ಹೊಂದಿವೆ. ವಿಕ್ರಮಸಿಂಘ ಅವರ ಯುಎನ್​ಪಿ 106 ಸ್ಥಾನಗಳನ್ನು ಹೊಂದಿದೆ. ಸರಳ ಬಹುಮತಕ್ಕೆ 113 ಸ್ಥಾನಗಳು ಅಗತ್ಯ. ಹೀಗಾಗಿ ಬಹುಮತಕ್ಕೆ ಯುಎನ್​ಪಿಗೆ 7 ಸ್ಥಾನಗಳ ಕೊರತೆ ಇದ್ದರೆ, ಸಿರಿಸೇನಾ ಮತ್ತು ರಾಜಪಕ್ಸ ಮೈತ್ರಿಕೂಟಕ್ಕೆ 18 ಸ್ಥಾನಗಳ ಕೊರತೆ ಇದೆ.

ಭಾರತಕ್ಕೆ ಆತಂಕ

 • 2015ರಲ್ಲಿ ರಾಜಪಕ್ಸೆಯನ್ನು ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ಆ ವೇಳೆ, ಮೈತ್ರಿಪಾಲ ಸಿರಿಸೇನಾ ಹಾಗೂ ರಾನಿಲ್‌ ವಿಕ್ರಮಸಿಂಘೆ ನಡುವೆ ಮೈತ್ರಿ ಕುದುರಿಸಿಲು ಭಾರತ ಸಹ ಪ್ರಭಾವ ಬೀರಿತ್ತು. ಚೀನಾ ಪರ ಒಲವು ವ್ಯಕ್ತಪಡಿಸಿದ್ದ ರಾಜಪಕ್ಸೆ, ಹಂಬನ್‌ಟೊಟಾ ಬಂದರನ್ನು ಗುತ್ತಿಗೆಗೆ ನೀಡಿದ್ದರು. ಅಲ್ಲದೆ, ಕೊಲಂಬೊ ಬಂದರನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದರು. ಜತೆಗೆ, ಚೀನಾದ ಸಬ್‌ಮರಿನ್‌ಗಳನ್ನು ಶ್ರೀಲಂಕಾದಲ್ಲಿರಲು ರಾಜಪಕ್ಸೆ ಅವಕಾಶ ನೀಡಿದ್ದರು.
 • ರಾಜಪಕ್ಸೆಯ ಕಳೆದ ಅವಧಿಯಲ್ಲಿ ದಕ್ಷಿಣ ಏಷ್ಯಾದಲ್ಲೇ ಚೀನಾ ದೊಡ್ಡ ಪ್ರಭಾವ ಬೀರಿದ್ದು, ಭಾರತದ ಪ್ರಭಾವ ಕುಸಿದಿತ್ತು. ಇನ್ನು, 2017ರ ಒಪ್ಪಂದದ ವಿರುದ್ಧವಾಗಿ ಪೂರ್ವ ಕಂಟೇನರ್ ಟರ್ಮಿನಲ್ ಅನ್ನು ಭಾರತಕ್ಕೆ ಒಪ್ಪಿಸುವುದಿಲ್ಲ ಎಂದು ಕಳೆದ ವಾರ ಶ್ರೀಲಂಕಾ ಬಂದರು ಸಚಿವ ಮಹಿಂದಾ ಸಮರಸಿಂಘೆ ಘೋಷಿಸಿದ್ದರು. ಇನ್ನೊಂದೆಡೆ, ಲಂಕಾದ ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಭಾರತ ಎದುರು ನೋಡುತ್ತಿದೆ.
 • ಜತೆಗೆ, ಲಂಕಾದ ಸ್ವತ್ತನ್ನು ಭಾರತಕ್ಕೆ ನೀಡುವುದಿಲ್ಲ ಎಂದು ಇತ್ತೀಚಿಗೆ ಸಿರಿಸೇನಾ ಘೋಷಿಸಿದ್ದರೂ ಸಹ ಹಂಬನ್‌ಟೊಟಾ ಬಂದರನ್ನು ಚೀನಾಗೆ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಅವರೇ ಕಾರಣಕರ್ತರಾಗಿದ್ದಾರೆ. ಇನ್ನು, ಭಾರತ ಶ್ರೀಲಂಕಾದಲ್ಲಿ ಪ್ರಬಲ ಭದ್ರತಾ ಹಿತಾಸಕ್ತಿಯನ್ನು ಹೊಂದಿದ್ದು, ದ್ವೀಪ ರಾಷ್ಟ್ರದಲ್ಲಿ ಹೆಚ್ಚು ಚೀನಾದ ಸಮಕ್ಷಮವನ್ನು ಮೋದಿ ಸರಕಾರ ಮತ್ತೆ ಎದುರು ನೋಡಬಹುದು. ಇತ್ತೀಚೆಗೆ ಮಾಲ್ಡೀವ್ಸ್‌ ಕೂಡ ಚೀನಾ ಪರ ಒಲವು ಹೊಂದಿದ್ದು ಭಾರತಕ್ಕೆ ತೊಂದರೆ ನೀಡಿದ್ದನ್ನು ಮರೆಯಲಾಗದು.

Related Posts
“16 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಸ್​ಟಿಪಿ ಕಡ್ಡಾಯ ನಿಯಮ ಸುದ್ಧಿಯಲ್ಲಿ ಏಕಿದೆ ? ನಗರದ ವಸತಿ ಸಮುಚ್ಚಯಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ (ಎಸ್​ಟಿಪಿ) ಘಟಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ನಿಯಮ ಕಗ್ಗಂಟಾಗಿಯೇ ಮುಂದುವರಿದಿದೆ. ಸಮಸ್ಯೆಗೆ ಕಾರಣ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಲ್ಲಿ ಜಲಮಂಡಳಿ ಸೇವೆ ಇಲ್ಲದಿರುವುದರಿಂದ ಆ ಪ್ರದೇಶಗಳಲ್ಲಿ ಎಸ್​ಟಿಪಿ ಕಡ್ಡಾಯದ ...
READ MORE
“18 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಸಾಕ್ಷಿಗಳ ರಕ್ಷಣಾ ಯೋಜನೆ’ ಜಾರಿಗೆ ಸುಪ್ರೀಂ ಆದೇಶ ಸುದ್ಧಿಯಲ್ಲಿ ಏಕಿದೆ ?ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯ ಸುಧಾರಣೆಗೆ ಒಂದೂವರೆ ದಶಕದ ಹಿಂದೆ ಕರ್ನಾಟಕದ ನ್ಯಾ.ವಿ.ಎಸ್‌.ಮಳೀಮಠ್‌ ಸಲ್ಲಿಸಿದ್ದ ವರದಿಯ ಪ್ರಮುಖ ಅಂಶವಾದ 'ಸಾಕ್ಷಿಗಳ ರಕ್ಷಣಾ ಯೋಜನೆ' ದೇಶಾದ್ಯಂತ ಜಾರಿಯಾಗುತ್ತಿದೆ. ಸುಪ್ರೀಂಕೋರ್ಟ್‌ ಇತ್ತೀಚೆಗೆ ಸಾಕ್ಷಿಗಳ ರಕ್ಷಣಾ ಯೋಜನೆ ಕುರಿತು ...
READ MORE
“05 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕದಂಬೋತ್ಸವ ಮುಂದೂಡಿಕೆ ಸುದ್ಧಿಯಲ್ಲಿ ಏಕಿದೆ ?ಮಂಗನ ಕಾಯಿಲೆ ಭೀತಿ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ಫೆಬ್ರವರಿ 9 ಮತ್ತು 10ರಂದು ನಡೆಯಬೇಕಿದ್ದ ಕದಂಬೋತ್ಸವನ್ನು ಮುಂದೂಡಲಾಗಿದೆ. ಹಿನ್ನಲೆ ಫೆಬ್ರವರಿ 9 ಮತ್ತು 10ರಂದು ಕದಂಬೋತ್ಸವನ್ನು ನಡೆಸಲು ಜಿಲ್ಲಾಡಳಿತ ಈಗಾಗಲೇ ಅಂತಿಮ ಹಂತದ ಸಿದ್ಧತೆಗಳನ್ನು ...
READ MORE
” 07 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಾತೃಪೂರ್ಣ ಯೋಜನೆ  ಸುದ್ಧಿಯಲ್ಲಿ ಏಕಿದೆ ? ಪೌಷ್ಟಿಕ ಆಹಾರ ಒದಗಿಸಿ ತಾಯಿ, ಮಗುವಿನ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ರಾಜ್ಯದಲ್ಲಿ ಆರಂಭಗೊಂಡ ‘ಮಾತೃಪೂರ್ಣ’ ಯೋಜನೆ ಪೂರ್ಣ ಫಲ ನೀಡುವಲ್ಲಿ ವಿಫಲವಾಗಿದೆ. ವಿಫಲವಾಗಲು ಕಾರಣ ರಾಜ್ಯದಲ್ಲಿ 61 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಅಂದಾಜು 25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ...
READ MORE
“14 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕೆಜಿಎಫ್‌ ಗಣಿ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ ಸುದ್ಧಿಯಲ್ಲಿ ಏಕಿದೆ ?ಕೆಜಿಎಫ್‌ನ ಭಾರತ್‌ ಗೋಲ್ಡ್‌ ಮೈನ್ಸ್‌ ಕಂಪನಿ (ಬಿಜಿಎಂಎಲ್‌) ವಶದಲ್ಲಿರುವ ಸುಮಾರು 10 ಸಾವಿರ ಎಕರೆ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ಹಾಗೂ ಟೌನ್‌ಶಿಪ್‌ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಬಯಸಿದೆ. ''ಗಣಿಗಾರಿಕೆ ಸಂಬಂಧಿಸಿದಂತೆ 2015ರಲ್ಲಿ ಕೇಂದ್ರ ಸರ್ಕಾರ ...
READ MORE
“10 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ರಾಜ್ಯದಲ್ಲಿ ತಂಬಾಕು ಮಾರಾಟ ಕುಸಿತ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ತಂಬಾಕು ಮಾರುಕಟ್ಟೆಯಲ್ಲಿ ಒಟ್ಟು 8.5 ಕೋಟಿ ಕೆ.ಜಿ ತಂಬಾಕು ಮಾರಾಟವಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ 2.1 ಕೋಟಿ ಕೆ.ಜಿ ತಂಬಾಕು ಮಾರಾಟ ಕುಸಿತ ಕಂಡಿದೆ. ಒಟ್ಟು 11 ತಂಬಾಕು ಹರಾಜು ಮಾರುಕಟ್ಟೆಗಳಿದ್ದು , ...
READ MORE
“15 ಏಪ್ರಿಲ್ 2019 ಕನ್ನಡದ ಪ್ರಚಲಿತ ವಿದ್ಯಮಾನಗಳು”
ಚುನಾವಣೆ ಕ್ಷಿಪ್ರ ಪಡೆಗಳ ಸಮನ್ವಯಕ್ಕೆ ವಿಶೇಷಾಧಿಕಾರಿ ನೇಮಕ ಸುದ್ಧಿಯಲ್ಲಿ ಏಕಿದೆ? ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಿರ ಕಣ್ಗಾವಲು ತಂಡದ (ಎಸ್‌ಎಸ್‌ಟಿ) ಕ್ಷಿಪ್ರ ಕಾರ್ಯ ಪಡೆ (ಫ್ಲೈಯಿಂಗ್ ಸ್ಕ್ವಾಡ್‌)ಯ ಚಟುವಟಿಕೆಗಳ ಉಸ್ತುವಾರಿಗಾಗಿ ಬಿಬಿಎಂಪಿ ವಿಶೇಷಾಧಿಕಾರಿಯನ್ನು ನೇಮಿಸಿದೆ. ವಿಶೇಷ ಅಧಿಕಾರಿ (ಜಾರಿ) ಯಾಗಿ ಸರ್ವೇ, ಸೆಟಲ್‌ಮೆಂಟ್‌ ಮತ್ತು ...
READ MORE
26th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಪ್ರಸಾದದ ಮೇಲೆ ಎಕ್ಸ್‌ಫೈರಿ ಡೇಟ್‌ ಕಡ್ಡಾಯ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ದೇವಸ್ಥಾನಗಳಲ್ಲಿ ಪ್ಯಾಕ್‌ ಮಾಡಿ ವಿತರಿಸುವ ಪ್ರಸಾದದ ಮೇಲೆ ತಯಾರಿಸಿದ ದಿನ ಹಾಗೂ ಎಷ್ಟು ದಿನಗಳವರೆಗೆ ಮಾತ್ರ ಸೇವಿಸಬಹುದು ಎಂಬ ಮಾಹಿತಿ ನಮೂದಿಸುವುದು ಕಡ್ಡಾಯವಾಗಲಿದೆ. ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದ ನಿಯಮ ...
READ MORE
“16 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಿಪಂ ವಾಹನಗಳಲ್ಲಿ ಬಯೋಡೀಸೆಲ್‌ ಬಳಕೆಗೆ ಸೂಚನೆ ಸುದ್ಧಿಯಲ್ಲಿ ಏಕಿದೆ ? ರಾಜ್ಯದಲ್ಲಿ ಜೈವಿಕ ಇಂಧನ ಉತ್ಪಾದನೆ ಮತ್ತು ಬಳಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಸರಕಾರಿ ವಾಹನಗಳಲ್ಲಿ ಬಯೋಡೀಸೆಲ್‌ ಬಳಸುವಂತೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಬಯೋಡೀಸೆಲ್‌ ಬಳಸುವ ಬಗ್ಗೆ ಮಾರ್ಗಸೂಚಿ ಸಹ ...
READ MORE
“14 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಎಫ್​ಐಆರ್ ಲೋಪಕ್ಕೆ ಅಧಿಕಾರಿಯೇ ಹೊಣೆ ಸುದ್ಧಿಯಲ್ಲಿ ಏಕಿದೆ ?ಸಮಾಜಘಾತಕ ಶಕ್ತಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗದೇ ಬಹುಬೇಗ ಬಿಡುಗಡೆ ಹೊಂದುತ್ತಾರೆ ಎಂಬ ಆರೋಪ ಸಾರ್ವಕಾಲಿಕ. ಆದರೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೇ ಇದನ್ನು ಒಪ್ಪಿ ಎಫ್​ಐಆರ್ ದಾಖಲಾತಿಯ ಪದ್ಧತಿಯಲ್ಲೇ ಆಮೂಲಾಗ್ರ ಬದಲಾವಣೆಗೆ ಮುಂದಾಗಿದೆ. ಯಾವ ಬದಲಾವಣೆಗಳು ...
READ MORE
“16 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“18 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“05 ಫೆಬ್ರವರಿ 2019 ರ ಕನ್ನಡ ಪ್ರಚಲಿತ
” 07 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“14 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“10 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“15 ಏಪ್ರಿಲ್ 2019 ಕನ್ನಡದ ಪ್ರಚಲಿತ ವಿದ್ಯಮಾನಗಳು”
26th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
“16 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“14 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *