” 28 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಡಿಎಲ್, ಆರ್​ಸಿ ಡಿಜಿಟಲ್ ದಾಖಲೆ ಪರೀಕ್ಷಿಸಲು ಮಾರ್ಗಸೂಚಿ

1.

ಸುದ್ಧಿಯಲ್ಲಿ ಏಕಿದೆ ?ವಾಹನ ಚಾಲಕರು ಸಲ್ಲಿಸುವ ಡಿಜಿಟಲ್ ಮಾದರಿ ದಾಖಲೆಗಳು ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹಲವು ಮಾರ್ಗಸೂಚಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್- ಎಸ್​ಒಪಿ) ರೂಪಿಸಿದೆ.

 • ಎಸ್​ಒಪಿ ಪಾಲಿಸಲು ಆಯಾ ರಾಜ್ಯದ ಸಾರಿಗೆ ಮತ್ತು ಸಂಚಾರ ಪೊಲೀಸ್ ಪ್ರವರ್ತನ (ಎನ್​ಫೋರ್ಸ್​ವೆುಂಟ್) ವಿಭಾಗಕ್ಕೆ ಸೂಚಿಸಲಾಗಿದೆ.

ಏಕೆ ಈ ಮಾರ್ಗಸೂಚಿ ?

 • ಡಿಜಿಟಲ್ ಮಾದರಿ ದಾಖಲೆಗಳನ್ನು ಹಲವು ರಾಜ್ಯಗಳಲ್ಲಿ ಸಂಚಾರ ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ತಿರಸ್ಕರಿಸುತ್ತಿರುವುದು ಮತ್ತು ಚಾಲಕರಿಗೆ ಸ್ಮಾರ್ಟ್​ಕಾರ್ಡ್, ಕಾಗದ ರೂಪದ ದಾಖಲೆ ಸಲ್ಲಿಸಲು ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಕುರಿತು ಪದೇಪದೆ ದೂರುಗಳು ಸಲ್ಲಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಡಿ.17ರಂದು ಸಚಿವಾಲಯ ಸುತ್ತೋಲೆ ಮೂಲಕ ಸ್ಪಷ್ಟ ಸೂಚನೆ ರವಾನಿಸಿದೆ.
 • ಡಿಜಿಟಲ್ ದಾಖಲೆಗೆ ಮಾನ್ಯತೆ: 1989ರ ಕೇಂದ್ರ ಮೋಟಾರು ವಾಹನ ಕಾಯ್ದೆ ನಿಯಮ 139ಕ್ಕೆ ತಿದ್ದುಪಡಿ ತಂದಿದ್ದ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ, ನೋಂದಣಿ ಪ್ರಮಾಣ ಪತ್ರ (ಆರ್​ಸಿ), ಚಾಲನಾ ಪರವಾನಗಿ (ಡಿಎಲ್), ವಿಮೆ, ಫಿಟ್​ನೆಸ್ ಪ್ರಮಾಣಪತ್ರ (ಎಫ್​ಸಿ), ಪರ್ವಿುಟ್, ವಾಯುಮಾಲಿನ್ಯ ಪ್ರಮಾಣಪತ್ರ ಸೇರಿ ವಾಹನಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಡಿಜಿಟಲ್(ಎಲೆಕ್ಟ್ರಾನಿಕ್) ಮಾದರಿಯಲ್ಲಿ ಸಲ್ಲಿಸಬಹುದು ಎಂದು 2018ರ ನ.2ರಂದು ಅಧಿಸೂಚನೆ ಹೊರಡಿಸಿತ್ತು.
 • ಸ್ಮಾರ್ಟ್​ಕಾರ್ಡ್ ಅಥವಾ ಕಾಗದ ರೂಪದ ದಾಖಲೆಗಳಿಗೆ ಡಿಜಿಟಲ್ ದಾಖಲೆ ಸಮಾನ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಅನ್ವಯವೂ ಡಿಜಿಟಲ್ ದಾಖಲೆಗಳು ಅಧಿಕೃತ ಎಂದು ತಿಳಿಸಲಾಗಿದೆ.
 • ಎರಡು ಆಪ್​ಗಳಲ್ಲಿ ಲಭ್ಯ: ವಾಹನ ಚಾಲಕರಿಗೆ ಅನುಕೂಲವಾಗುವಂತೆ ವಾಹನ ದಾಖಲೆಗಳನ್ನು ಪಡೆಯಲು ಕೇಂದ್ರ ಸರ್ಕಾರ ಎರಡು ಆಪ್ ಅಭಿವೃದ್ಧಿಪಡಿಸಿದೆ.
 • ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಡಿಜಿಲಾಕರ್ ಎಂಬ ಆಪ್ ಅಭಿವೃದ್ಧಿಪಡಿಸಿದ್ದರೆ, ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ನ್ಯಾಷನಲ್ ಇನ್ಪರ್ವೆಟಿಕ್ ಸೆಂಟರ್ (ಎನ್​ಐಸಿ) ಸಹಯೋಗದಲ್ಲಿ ಎಂಪರಿವಾಹನ್ ಎಂಬ ಆಪ್ ರಚಿಸಿದೆ.
 • ವಾಹನ ಮಾಲೀಕರು/ಚಾಲಕರು ಸ್ಮಾರ್ಟ್​ಫೋನ್​ನಲ್ಲಿ ಪ್ಲೇ ಸ್ಟೋರ್ ಮುಖಾಂತರ ಯಾವುದಾದರೂ ಒಂದು ಆಪ್ ಡೌನ್​ಲೋಡ್ ಮಾಡಿಕೊಂಡು ಎಲ್ಲ ಡಿಜಿಟಲ್ ದಾಖಲೆ ಪಡೆಯಬಹುದಾಗಿದೆ.
 • ಡಿಜಿಲಾಕರ್​ನಲ್ಲಿ ಆಧಾರ್ ಸಂಖ್ಯೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಪರಿವಾಹನ್​ನಲ್ಲಿ ನೇರವಾಗಿ ಡಿಎಲ್, ಆರ್​ಸಿ ಸಂಖ್ಯೆ ನಮೂದಿಸಿದರೆ ದಾಖಲೆಗಳು ಲಭ್ಯವಾಗಲಿವೆ.

ಸದ್ಯಕ್ಕೆ ಮಾಲಿನ್ಯ ಪ್ರಮಾಣಪತ್ರ ಲಭ್ಯವಿಲ್ಲ

 • ಡಿಜಿಲಾಕರ್​ಗೆ ಮಾನ್ಯತೆ ನೀಡಿ ಕೆಲ ತಿಂಗಳ ಹಿಂದಷ್ಟೇ ರಾಜ್ಯ ಸರ್ಕಾರ ಪ್ರತ್ಯೇಕ ಅಧಿಸೂಚನೆ ಹೊರಡಿಸಿತ್ತು. ಈ ಸಂದರ್ಭದಲ್ಲಿ ಆರ್​ಸಿ, ಡಿಎಲ್ ಹಾಗೂ ವಾಯುಮಾಲಿನ್ಯ ಪ್ರಮಾಣಪತ್ರ ಲಭ್ಯವಾಗುತ್ತಿತ್ತು. ಪ್ರಸ್ತುತ ಲಭ್ಯವಾಗುತ್ತಿಲ್ಲ.
 • ವಾಹನ್ 4 ತಂತ್ರಾಂಶ ಅಳವಡಿಕೆ ನಂತರ ಎಲ್ಲ ಅಂಕಿಅಂಶ ಗಳು ಕೇಂದ್ರದ ಸರ್ವರ್​ಗೆ ಹೋಗುತ್ತಿವೆ. ಜನವರಿಯಲ್ಲಿ ಮಾಲಿನ್ಯ ತಪಾಸಣಾ ಕೇಂದ್ರಗಳನ್ನು ರಾಜ್ಯ ಡೇಟಾ ಕೇಂದ್ರಕ್ಕೆ (ಎಸ್​ಡಿಸಿ) ಜೋಡಣೆ ಮಾಡಿದ ನಂತರ ವಾಯುಮಾಲಿನ್ಯ ಪ್ರಮಾಣ ಪತ್ರ ದೊರೆಯಲಿದೆ

ಎಸ್​ಒಪಿಯಲ್ಲಿ ಏನೇನಿದೆ?

 • ಚಾಲಕರು ಡಿಜಿಲಾಕರ್ ಅಥವಾ ಎಂ-ಪರಿವಾಹನ್ ಆಪ್ ಮುಖಾಂತರ ದಾಖಲೆ ಸಲ್ಲಿಸಬಹುದು ಆಪ್ ಮೂಲಕ ಡಿಎಲ್, ಆರ್​ಸಿ ಡೌನ್​ಲೋಡ್ ಮಾಡಿಕೊಂಡು, ಮೊಬೈಲ್​ನಲ್ಲಿ ಇಟ್ಟುಕೊಳ್ಳಬಹುದು
 • ಪ್ರವರ್ತನ ಅಧಿಕಾರಿಗಳು ಸಾಮಾನ್ಯ ಆಂಡ್ರಾಯ್್ಡ ಮೊಬೈಲ್ ಮೂಲಕ ಇ-ಚಲನ್ ಆಪ್ ಡೌನ್​ಲೋಡ್ ಮಾಡಿಕೊಳ್ಳಬೇಕು. ಆಪ್ ಮೂಲಕ ಲಾಗ್​ಇನ್ ಆಗಿ ಆನ್​ಲೈನ್ ಅಥವಾ ಆಫ್​ಲೈನ್ ಮೂಲಕ ಎಂ-ಪರಿವಾಹನ್ ಆಪ್​ನ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡಬಹುದು
 • ಡಿಜಿಲಾಕರ್ ಮತ್ತು ಎಂಪರಿವಾಹನ್ ಆಪ್​ನಲ್ಲಿರುವ ಕ್ಯೂಆರ್ ಕೋಡ್​ಗಳನ್ನು ಆಯಾ ಆಪ್​ಗಳ ಮೂಲಕವಷ್ಟೇ ಸ್ಕಾ್ಯನ್ ಮಾಡಿ ಪರೀಕ್ಷಿಸಲು ಸಾಧ್ಯ. ನಕಲಿಯಾಗಿದ್ದಲ್ಲಿ ಸ್ಕಾ್ಯನ್ ಮಾಡಿದ ಸಂದರ್ಭದಲ್ಲಿ ದಾಖಲೆ ದೊರೆಯುವುದಿಲ್ಲ.

ಪ್ರತಿನಿತ್ಯ 80 ವೆಬ್​ಸೈಟ್ ಹ್ಯಾಕ್!

2.

ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಸರ್ಕಾರದ ಅಧೀನದ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್​ಟಿ-ಇನ್) ಸಿದ್ಧಪಡಿಸಿರುವ ವರದಿ ಪ್ರಕಾರ 2017ರಲ್ಲಿ 53,081 ಸೈಬರ್ ದಾಳಿ ಪ್ರಕರಣಗಳು ವರದಿಯಾಗಿವೆ.

 • ಇದರಲ್ಲಿ 29,518 ವೆಬ್​ಸೈಟ್ ದಾಳಿ ಪ್ರಕರಣಗಳಾಗಿದ್ದು, ಸರಾಸರಿ ನಿತ್ಯ 80 ವೆಬ್​ಸೈಟ್​ಗಳು ಹ್ಯಾಕ್ ಆಗುತ್ತಿವೆ. 2018ರ ಜನವರಿಯಿಂದ ಮಾರ್ಚ್​ವರೆಗೆ ಬರೀ 3 ತಿಂಗಳಲ್ಲಿ 4,527 ವೆಬ್​ಸೈಟ್ ಹ್ಯಾಕ್ ಮಾಡಲಾಗಿದೆ.

ಚೀನಾದವರೇ ಹೆಚ್ಚು

 • ಭಾರತದ ಅಧಿಕೃತ ಸರ್ಕಾರಿ ವೆಬ್​ಸೈಟ್​ಗಳ ಮೇಲೆ ಸೈಬರ್ ದಾಳಿ ಮಾಡುವವರಲ್ಲಿ ಗರಿಷ್ಠ ಪ್ರಮಾಣದ ಹ್ಯಾಕರ್ಸ್​ಗಳು (ಶೇ.35) ಚೀನಾದವರು. ನಂತರದ ಸ್ಥಾನಗಳನ್ನು ಅಮೆರಿಕ-ಶೇ.17, ರಷ್ಯಾ-ಶೇ.15, ಪಾಕಿಸ್ತಾನ-ಶೇ.9, ಕೆನಡಾ-ಶೇ.7 ಹಾಗೂ ಜರ್ಮನಿ-ಶೇ.5 ಹೊಂದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರ್ಯಾನ್ಸಂ ಆಯ್ತು ಸ್ಯಾಮ್ಸಮ್ ಬಂತು

 • ರ್ಯಾನ್ಸಂವೇರ್ ವೈರಸ್ ದಾಳಿ ಬಂದು ಹೋಯಿತು. ಈಗ ದಾಳಿಕೋರರು ದೇಶದ ಮೇಲೆ ಸ್ಯಾಮ್ಸಮ್ ವೈರಸ್ ದಾಳಿಗೆ ಸಜ್ಜಾಗಿದ್ದಾರೆ ಎಂದು ಸಿಇಆರ್​ಟಿ-ಇನ್ ಡಿ. 10ರಂದೇ ದೇಶಾದ್ಯಂತ ಅಲರ್ಟ್ ಕೊಟ್ಟಿದೆ. ಜಾಹೀರಾತು ಹಾಗೂ ಸ್ಪ್ಯಾಂ ಇ-ಮೇಲ್​ಗಳ ಮುಖಾಂತರ ಈ ವೈರಸ್ ದಾಳಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದೆ.

ಆಪ್​ಗಳ ಕುರಿತು ಎಚ್ಚರಿಕೆ ಇರಲಿ

 • ನಕಲಿ ಆಪ್​ಗಳಿಂದ ಮೊಬೈಲ್​ನಲ್ಲಿರುವ ವೈಯಕ್ತಿಕ ಮಾಹಿತಿ ಕದಿಯಲಾಗುತ್ತದೆ. ಒಂದು ವೇಳೆ ನಕಲಿ ಮೊಬೈಲ್ ಅಪ್ಲಿಕೇಷನ್ ಇನ್​ಸ್ಟಾಲ್ ಮಾಡಿಕೊಂಡರೆ ಮೊಬೈಲ್​ನಲ್ಲಿರುವ ಎಲ್ಲ ಮಾಹಿತಿ ಅವರಿಗೆ ಸಿಗುತ್ತದೆ. ಮಾಹಿತಿ ಕದ್ದು ಹಣಕ್ಕೆ ಬೇಡಿಕೆ ಇಡಬಹುದು ಅಥವಾ ನಿಮ್ಮೆಲ್ಲ ಮಾಹಿತಿ ಅಳಿಸಲೂಬಹುದು. ಯಾವುದೇ ಅಪ್ಲಿಕೇಷನ್ ಸಂಪೂರ್ಣವಾಗಿ ಪರಿಶೀಲಿಸದೆ ಡೌನ್​ಲೋಡ್ ಮಾಡಿ ಕೊಳ್ಳದಂತೆ ಸಿಇಆರ್​ಟಿ ಸೂಚಿಸಿದೆ.

ಸಿಇಆರ್​ಟಿ-ಇನ್ ಕೆಲಸ

 • ವೆಬ್​ಸೈಟ್​ಗಳ ಹ್ಯಾಕ್ ಹಾಗೂ ಫಿಶ್ಶಿಂಗ್​ನಂಥ ಸೈಬರ್ ಭದ್ರತಾ ಬೆದರಿಕೆಗಳನ್ನು ಸಿಇಆರ್​ಟಿ-ಇನ್ ನಿರ್ವಹಿಸುತ್ತದೆ. ಸಂಭವನೀಯ ಸೈಬರ್ ಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ, ವಿಶ್ಲೇಷಿಸುವ, ಪ್ರಸಾರ ಮಾಡುವ ಹಾಗೂ ಸೈಬರ್ ಬೆದರಿಕೆ ಪ್ರಕರಣಗಳ ಕುರಿತು ಎಚ್ಚರಿಸುವ ಕೆಲಸ ಮಾಡುತ್ತದೆ.

ದಾಳಿ ಉದ್ದೇಶ

# ಬ್ಯಾಂಕಿಂಗ್, ಇಂಧನ, ರಕ್ಷಣಾ, ಟೆಲಿಕಾಂ, ಕೈಗಾರಿಕೆ ಪ್ರಮುಖ ಟಾರ್ಗೆಟ್.

# ವೆಬ್​ಸೈಟ್, ಕಂಪ್ಯೂಟರ್​ಗಳ ಮೇಲೆ ದಾಳಿ ನಡೆಸಿ ಗೌಪ್ಯ ಮಾಹಿತಿ ಕಳವು.

# ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿತ ಖಾತೆ ಹ್ಯಾಕ್ ಮಾಡಿ ಹಣ ಕಳವು.

# ಕಂಪ್ಯೂಟರ್ ಹ್ಯಾಕ್ ಮಾಡಿ ಕಾರ್ಯಚಟುವಟಿಕೆ ಸ್ಥಗಿತಗೊಳಿಸುವುದು.

ಧಾರವಾಡ ಹೈಕೋರ್ಟ್‌ನಲ್ಲಿ ರಜಾಕಾಲದ ನ್ಯಾಯಪೀಠ

3.

ಸುದ್ಧಿಯಲ್ಲಿ ಏಕಿದೆ ?ದಶಕದ ನಂತರ ಮೊದಲ ಬಾರಿಗೆ ಧಾರವಾಡ ಹೈಕೋರ್ಟ್‌ ಸಂಚಾರಿ ಪೀಠದಲ್ಲಿ ರಜಾ ಕಾಲದ ನ್ಯಾಯಪೀಠ ಕಲಾಪ ಆರಂಭಿಸಿತು.

 • ನ್ಯಾ. ಕೆ.ಎಸ್. ಮುದಗಲ್ ಮತ್ತು ಎಸ್.ಜಿ. ಪಂಡಿತ್ ಅವರಿದ್ದ ವಿಭಾಗೀಯ ಪೀಠ, 2 ಮೇಲ್ಮನವಿ ಪ್ರಕರಣಗಳನ್ನು ವಿಚಾರಣೆ ಮಾಡಿತು. ನಂತರ ಏಕಸದಸ್ಯ ಪೀಠವಾಗಿ ಬೇರ್ಪಟ್ಟು ತಲಾ 25 ಪ್ರಕರಣಗಳನ್ನು ವಿಚಾರಣೆ ನಡೆಸಿದರು.
 • ಧಾರವಾಡದಲ್ಲಿ 2008ರಲ್ಲಿ ಉಚ್ಚ ನ್ಯಾಯಾಲಯ ಸಂಚಾರಿ ಪೀಠ ಸ್ಥಾಪನೆಯಾಗಿತ್ತು. ರಜಾಕಾಲದ ನ್ಯಾಯಪೀಠ ಆರಂಭಿಸುವಂತೆ ವಕೀಲರ ಸಂಘದಿಂದ ಮುಖ್ಯನ್ಯಾಯಮೂರ್ತಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು.
 • ಬೇಸಿಗೆ ರಜೆ, ಚಳಿಗಾಲದ ರಜಾ ಕಾಲದಲ್ಲಿ ಕೋರ್ಟ್​ಗೆ ದೀರ್ಘಕಾಲ ರಜೆ ಇರುತ್ತದೆ. ಈ ವೇಳೆ ತುರ್ತು ಪ್ರಕರಣಗಳನ್ನು ವಿಚಾರಣೆ ಮಾಡಲು ರಜಾಕಾಲದ ನ್ಯಾಯಪೀಠ ಅಗತ್ಯವಿದೆ. ಈ ಮೊದಲು ಬೆಂಗಳೂರು ಹೈಕೋರ್ಟ್‌ನಲ್ಲಿ ಮಾತ್ರ ರಜಾಕಾಲದ ನ್ಯಾಯಪೀಠ ಇತ್ತು.

ನ್ಯಾಯ ಪೀಠ

 • ಸಂವಿಧಾನದ ಪೀಠವು ಭಾರತದ ಸಂವಿಧಾನದ “ವ್ಯಾಖ್ಯಾನಕ್ಕೆ ಕಾನೂನಿನ ಗಣನೀಯ ಪ್ರಶ್ನೆ ಒಳಗೊಂಡಂತೆ” ಯಾವುದೇ ಪ್ರಕರಣವನ್ನು ನಿರ್ಧರಿಸಲು ನ್ಯಾಯಾಲಯದ ಕನಿಷ್ಟ ಐದು ನ್ಯಾಯಾಧೀಶರನ್ನು ಒಳಗೊಂಡಿರುವ ಭಾರತದ ಸುಪ್ರೀಂ ಕೋರ್ಟ್ನ ಬೆಂಚ್ಗಳಿಗೆ ನೀಡಲಾದ ಹೆಸರಾಗಿದೆ .
 • ಭಾರತದ ಸಂವಿಧಾನದ ಆರ್ಟಿಕಲ್ 145 (3) ಅಡಿಯಲ್ಲಿ ಈ ನಿಬಂಧನೆಯನ್ನು ಕಡ್ಡಾಯಗೊಳಿಸಲಾಗಿದೆ.
 • ಭಾರತದ ಮುಖ್ಯ ನ್ಯಾಯಾಧೀಶರು ಸಂವಿಧಾನ ನ್ಯಾಯ ಪೀಠವನ್ನು ರೂಪಿಸುವ ಅಧಿಕಾರವನ್ನು ಹೊಂದಿದ್ದಾರೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಪ್ರಕರಣಗಳನ್ನು ಉಲ್ಲೇಖಿಸುತ್ತಾರೆ
 • ಭಾರತದ ಅತ್ಯಂತ ಪ್ರಸಿದ್ಧ ಮತ್ತು ಅತ್ಯಂತ ಪ್ರಮುಖ ಸುಪ್ರೀಂ ಕೋರ್ಟ್ ಪ್ರಕರಣಗಳನ್ನು ಸಂವಿಧಾನದ ಬೆಂಚುಗಳು ಹಲವು ನಿರ್ಧರಿಸಿದೆ. ಉದಾಹರಣೆಗೆ ಎ.ಕೆ.ಗೋಪಾಲನ್ ವಿ. ಮದ್ರಾಸ್ ರಾಜ್ಯ, ಕೇಸವಾನಂದ ಭಾರತಿ ವಿ. ಕೇರಳ ರಾಜ್ಯ (ಮೂಲಭೂತ ರಚನಾ ಸಿದ್ಧಾಂತ) ಮತ್ತು ಅಶೋಕ ಕುಮಾರ್ ಠಾಕೂರ್ ವಿ. ಯುನಿಯನ್ ಆಫ್ ಇಂಡಿಯಾ (ಒಬಿಸಿ ಮೀಸಲಾತಿಗಳು) ಇತ್ಯಾದಿ.

 ತ್ರಿವಳಿ ತಲಾಕ್

4.

ಸುದ್ಧಿಯಲ್ಲಿ ಏಕಿದೆ ?ದಿಢೀರ್ ತ್ರಿವಳಿ ತಲಾಕ್ ಪದ್ಧತಿಯನ್ನು (ತಲಾಕ್ -ಎ-ಬಿದ್ದತ್) ಶಿಕ್ಷಾರ್ಹ ಅಪರಾಧ ಎಂದು ಘೋಷಿಸುವ ಪರಿಷ್ಕೃತ ಮಸೂದೆ ಲೋಕಸಭೆಯಲ್ಲಿ ಸುದೀರ್ಘ ನಾಲ್ಕು ಗಂಟೆಗಳ ಚರ್ಚೆ, ವಾಗ್ವಾದ ಬಳಿಕ ಅನುಮೋದನೆಗೊಂಡಿದೆ.

2ನೇ ಬಾರಿ ಲೋಕಸಭೆಯಲ್ಲಿ ಪಾಸ್

 • ಶಾಯರಾ ಬಾನೊ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತ್ರಿವಳಿ ತಲಾಕ್ ಅಸಾಂವಿಧಾನಿಕ ಎಂದು ತೀರ್ಪು ನೀಡಿದ ಬಳಿಕ 2017ರ ಡಿ.28ರಂದು ಕೇಂದ್ರ ಸರ್ಕಾರ ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ 2017ನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಬಹುಮತದ ಮೂಲಕ ಮಸೂದೆ ಅನುಮೋದನೆ ಕೂಡ ಆಗಿತ್ತು. ಆದರೆ ರಾಜ್ಯಸಭೆಯಲ್ಲಿ ಎನ್​ಡಿಎಗೆ ಅಗತ್ಯ ಸದಸ್ಯರ ಬಲವಿರದ ಕಾರಣ, ಮಸೂದೆ ಅನುಮೋದನೆ ಆಗದೆ ನನೆಗುದಿಗೆ ಬಿದ್ದಿತು.

ಕೇಂದ್ರದ ವಾದ

 • ದಿಢೀರ್ ತ್ರಿವಳಿ ತಲಾಕ್ ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ಈಗಾಗಲೇ ಹೇಳಿದೆ. ಈ ಪದ್ಧತಿ ಅಕ್ರಮ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
 • ಇಸ್ಲಾಮಿಕ್ ಕಾನೂನು ಪಾಲಿಸುವ 20ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತ್ರಿವಳಿ ತಲಾಕ್​ಗೆ ನಿಷೇಧವಿದೆ. ಹಾಗಿದ್ದಲ್ಲಿ ಜಾತ್ಯತೀತ ರಾಷ್ಟ್ರವಾದ ಭಾರತಕ್ಕೆ ಏಕೆ ಸಾಧ್ಯವಾಗಿಲ್ಲ? ್ಝೋನ್, ಎಸ್​ಎಂಎಸ್, ಮೆಸೇಜಿಂಗ್ ಆಪ್ ಮೂಲಕ ಮಹಿಳೆಯರಿಗೆ ತಲಾಕ್ ನೀಡಲಾಗಿದೆ. ಇಂಥ ಕೃತ್ಯಗಳಿಗೆ ಮಸೂದೆ ಅಂಕುಶ ಹಾಕಲಿದೆ. ್ಝ ತಲಾಕ್ ಪದ್ಧತಿ ಅಪರಾಧವಲ್ಲ, ನಾಗರಿಕ ಸಮಸ್ಯೆ ಎನ್ನುವುದು ಹಲವರ ವಾದ.

ಒವೈಸಿ ತಿದ್ದುಪಡಿ ಫೇಲ್

 • ಮಸೂದೆಗೆ ತಿದ್ದುಪಡಿ ಮಾಡುವಂತೆ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮೂರು ನಿಲುವಳಿ ಮಂಡಿಸಿದ್ದರು. ಬಹುಮತ ಸಿಗದ ಕಾರಣ ಮೂರೂ ತಿದ್ದುಪಡಿಗಳು ತಿರಸ್ಕೃತಗೊಂಡವು.

ಮಸೂದೆಯಲ್ಲಿ ಏನಿದೆ?

 • ದಿಢೀರ್ ತ್ರಿವಳಿ ತಲಾಕ್ ನೀಡುವ ಪತಿಗೆ ಮೂರು ವರ್ಷ ಜೈಲು ಶಿಕ್ಷೆ. ಪತ್ನಿ ಒಪ್ಪಿದಲ್ಲಿ ಜಾಮೀನಿಗೆ ಅವಕಾಶ.

ವಿಪಕ್ಷಗಳ ವಾದ

 • ತ್ರಿವಳಿ ತಲಾಕ್ ನೀಡುವ ಪತಿಗೆ ಶಿಕ್ಷೆಯಾದರೆ, ಆತನ ಪತ್ನಿಯ ಜೀವನ ನಿರ್ವಹಣೆ ಹೊಣೆ ಯಾರಿಗೆ? ಬೇರೆ ಧರ್ಮಗಳ ಪದ್ಧತಿಯನ್ನು ಶಿಕ್ಷಾರ್ಹಗೊಳಿಸಿದಾಗ 3 ವರ್ಷ ಜೈಲು ವಾಸ ಇರಲಿಲ್ಲ. ಇದು ತುಂಬಾ ಹೆಚ್ಚಿನ ಸಮಯ. ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಿಂತ ಹೆಚ್ಚಾಗಿ ಮಸೂದೆ ಮುಸ್ಲಿಂ ಪುರುಷರಿಗೆ ಶಿಕ್ಷೆ ನೀಡುವ ಉದ್ದೇಶ ಹೊಂದಿದೆ.

ವಿಧೇಯಕ: ಮುಂದೇನು?

 • ಸರಕಾರ ಸೆಪ್ಟೆಂಬರ್‌ನಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದುಘಿ, ವಿಧೇಯಕಕ್ಕೆ 42 ದಿನಗಳ ಒಳಗೆ ಸಂಸತ್ತಿನ ಅನುಮೋದನೆ ಪಡೆಯಬೇಕು. ಇಲ್ಲವಾದರೆ ಅದು ಲುಪ್ತವಾಗುತ್ತದೆ. ಈಗ ಲೋಕಸಭೆಯ ಒಪ್ಪಿಗೆ ಪಡೆದ ವಿಧೇಯಕ ರಾಜ್ಯಸಭೆಯಲ್ಲಿ ಬಹುಮತದ ಕೊರತೆಯಿಂದ ಸಂಕಷ್ಟ ಎದುರಿಸುವುದು ಖಚಿತ. ಒಂದೊಮ್ಮೆ ಈ ಬಾರಿಯೂ ರಾಜ್ಯಸಭೆಯಲ್ಲಿ ಅಡೆತಡೆ ಎದುರಾದರೆ ಮರು ಸುಗ್ರೀವಾಜ್ಞೆ ಹೊರಡಿಸಲು ಅವಕಾಶವಿದೆ.

ಸ್ವಯಂಚಾಲಿತ ರೈಲು ಪರೀಕ್ಷೆ ವ್ಯವಸ್ಥೆ ಪರಿಚಯ

5.

ಸುದ್ಧಿಯಲ್ಲಿ ಏಕಿದೆ ?ರೈಲುಗಳ ಸುರಕ್ಷತಾ ವರ್ಧನೆಗೆ ಕೇಂದ್ರ ರೈಲ್ವೆಯ ನಾಗಪುರ ಮೆಕಾನಿಕಲ್‌ ಶಾಖೆಯ ನಾಗಪುರ ವಿಭಾಗವು ಸ್ವಯಂಚಾಲಿತ ರೈಲು ಪರೀಕ್ಷೆ ವ್ಯವಸ್ಥೆ (ATES) ಎಂಬ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

 • ಈ ವ್ಯವಸ್ಥೆಯನ್ನು ಕೊಂಕಣ ರೈಲ್ವೆ ಕಾರ್ಪೊರೇಷನ್‌ ಲಿಮಿಟೆಡ್‌ನವರು ಅಭಿವೃದ್ಧಿಪಡಿಸಿದ್ದು, ಇದರಿಂದಾಗಿ ರೈಲು ಮತ್ತು ಆಕ್ಸೆಲ್‌ ಬಾಕ್ಸ್‌ನ ತಾಪಮಾನದ ಅಳತೆಯ ಮಾನವ ಚಾಲಿತ ಪರೀಕ್ಷೆಯನ್ನು ತಪ್ಪಿಸುತ್ತದೆ.
 • ವ್ಹೀಲ್‌ ಡಿಸ್ಕ್‌ ತಾಪಮಾನ ಮತ್ತು ಚಲಿಸುತ್ತಿರುವ ರೈಲಿನ ರೋಲಿಂಗ್‌ ಸ್ಟಾಕ್‌ನ ಕೆಳಭಾಗದ ಗೇರ್‌ಗಳನ್ನು ಅತಿಗೆಂಪು ವಿಕಿರಣ ಮತ್ತು ಇತರೆ ಕ್ಯಾಮರಾಗಳ ಮೂಲಕ ದಾಖಲಿಸುತ್ತದೆ.
 • ಇದರೊಂದಿಗೆ ಎಸಿಇಎಸ್‌ ಅನ್ನು ಅಳವಡಿಸಿರುವ ಹಳಿ ಮೂಲಕ ಹಾದು ಹೋಗುವ ಪ್ರತಿ ರೈಲನ್ನು ಪರಿಶೀಲಿಸುತ್ತದೆ. ಆಕ್ಸೆಲ್‌ನ ತಾಪಮಾನ ಮತ್ತು ಬ್ರೇಕ್ ಬೈಂಡಿಂಗ್ ಕೇಸ್‌ಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ.
 • ಮೊದಲನೇ ಹಂತವಾಗಿ ಈ ವ್ಯವಸ್ಥೆಯನ್ನು ಅಜ್ನಿ ಸಮೀಪದ ಚೆನ್ನೈ ಮತ್ತು ಮುಂಬೈನಿಂದ ನಾಗಪುರಕ್ಕೆ ತೆರಳುವ ಮಾರ್ಗದ ಎ ಕ್ಯಾಬಿನ್‌ ಬಳಿ ಮತ್ತು ಇತರೆ ಅಜ್ನಿ ತರಬೇತಿ ಕೇಂದ್ರಕ್ಕೆ ಬರುವ ಎಲ್ಲ ರೈಲು ಮಾರ್ಗದಲ್ಲಿ ಅಳವಡಿಸಲಾಗಿದ್ದು, ಪ್ರತಿಘಟಕವು ಎರಡು ಕ್ಯಾಮರಾಗಳು, ನಾಲ್ಕು ಸೆನ್ಸಾರ್‌ಗಳನ್ನು ಒಳಗೊಂಡಿದ್ದು, ಹಳಿಯ ಎರಡು ಭಾಗದಲ್ಲಿ ಅಳವಡಿಸಲಾಗಿದೆ.
 • ಈ ಹಳಿಗಳ ಮೂಲಕ ರೈಲು ಹಾದುಹೋಗುವಾಗ ಸಂವೇದಕಗಳು ಮತ್ತು ಕ್ಯಾಮರಾಗಳು ಸಕ್ರಿ ಕ್ರೀಯಗೊಳ್ಳುತ್ತವೆ ಮತ್ತು ಪ್ರತಿ ರೈಲಿನ ಚಲನೆಯನ್ನು ಗಮನಿಸುತ್ತವೆ.
 • ಸಂವೇದಕವು ಆಕ್ಸೆಲ್‌ ಬಾಕ್ಸ್‌ ಬೇರಿಂಗ್‌ ಮತ್ತು ಚಕ್ರದ ತಾಪಮಾನವನ್ನು ದಾಖಲಿಸುತ್ತದೆ. ತಾಪಮಾನ ಮಿತಿಮೀರಿದೆ ಎಂದು ತಿಳಿದ ಕೂಡಲೇ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತದೆ. ಈ ಎಚ್ಚರಿಕೆಯನ್ನು ಅನುಸರಿಸಿ ರೈಲ್ವೆ ಇಂಜಿನಿಯರ್‌ಗಳು ರೈಲನ್ನು ಪರೀಕ್ಷೆಗೆ ಒಳಪಡಿಸುವುದರಿಂದ ಮುಂದಾಗುವ ಅನಾಹುತವನ್ನು ತಪ್ಪಿಸುತ್ತಾರೆ.
 • ಇನ್ನು ಇದೇ ರೀತಿ ಕ್ಯಾಮರಾ ಕೂಡ ವೇಗವಾಗಿ ಚಲಿಸುವ ರೈಲನ್ನು ವಿಡಿಯೋ ರೆಕಾರ್ಡ್‌ ಮಾಡಿಕೊಳ್ಳುತ್ತದೆ. ಈ ವಿಡಿಯೋವನ್ನು ನಿಧಾನವಾಗಿ ನೋಡುವ ಮೂಲಕ ದೋಷವನ್ನು ಗುರುತಿಸಿ ಸಂಭವನೀಯ ಅಪಾಯವನ್ನು ತಪ್ಪಿಸಬಹುದು

ದೇಶದ ಅತಿದೊಡ್ಡ ಕ್ಯಾನ್ಸರ್​ ಆಸ್ಪತ್ರೆ 

6.

ಸುದ್ಧಿಯಲ್ಲಿ ಏಕಿದೆ ?ಹರಿಯಾಣಾದ ಝಜ್ಜರ್​ ಜಿಲ್ಲೆಯಲ್ಲಿ ನಿರ್ಮಾಣವಾದ ದೇಶದಲ್ಲೇ ಅತ್ಯಂತ ದೊಡ್ಡ ಕ್ಯಾನ್ಸರ್​ ಆಸ್ಪತ್ರೆ ಜನವರಿ ಮೂರನೇ ವಾರದಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಆರೋಗ್ಯ ಮಂತ್ರಿ ಜೆ.ಪಿ. ನಡ್ಡಾ ತಿಳಿಸಿದ್ದಾರೆ.

 • ಈ ಸಂಸ್ಥೆ ದೇಶದ ಕ್ಯಾನ್ಸರ್​ ಸಂಶೋಧನಾ ಕ್ಷೇತ್ರದಲ್ಲಿ ಮೈಲಿಗಲ್ಲು ಆಗಲಿದೆ. ಉತ್ತರ ಭಾಗದಲ್ಲಿ ಇರುವ ಕ್ಯಾನ್ಸರ್​ ಕೇರ್​ ಸೆಂಟರ್​ಗಳ ಕೊರತೆಯನ್ನು ಈ ಆಸ್ಪತ್ರೆ ತುಂಬಲಿದೆ.
 • ನೂತನ ಕ್ಯಾನ್ಸರ್​ ಆಸ್ಪತ್ರೆ 710 ಬೆಡ್​ ಹೊಂದಿದೆ. ಅಂಗಾಂಶ ಸಂಗ್ರಹಣಾ ಕೇಂದ್ರವನ್ನು ಹೊಂದಿದ ದೇಶದ ಮೊದಲ ಆಸ್ಪತ್ರೆಯಾಗಿದೆ. ಒಪಿಡಿ ಪ್ರಾರಂಭವಾಗಿದೆ.
 • ಆಂಕೋಲಜಿ ಶಸ್ತ್ರಚಿಕಿತ್ಸೆ, ರೇಡಿಯೇಶನ್​, ಅನಸ್ತೇಶಿಯಾ, ನ್ಯೂಕ್ಲಿಯರ್​ ಚಿಕಿತ್ಸೆ, ಉಪಶಮನ ಆರೈಕೆಗಳ ವ್ಯವಸ್ಥೆಯನ್ನೂ ಆಸ್ಪತ್ರೆ ಹೊಂದಿದೆ.
 • 2013ರಲ್ಲಿ ಮನಮೋಹನ್​ ಸಿಂಗ್​ ಪ್ರಧಾನಿಯಾಗಿದ್ದಾಗ ಈ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರು. ಸುಮಾರು 2035 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಲಾಗಿದ್ದು ಏಮ್ಸ್​ನಡಿ ಕಾರ್ಯನಿರ್ವಹಿಸಲಿದೆ.​
 • 372 ಫ್ಲಾಟ್​ಗಳ ಘಟಕಗಳು, 1080 ಕೋಣೆಗಳ ಹಾಸ್ಟೆಲ್​ಗಳನ್ನು ಆಸ್ಪತ್ರೆ ಸಿಬ್ಬಂದಿಗಾಗಿ ಸಿದ್ಧಗೊಳಿಸಲಾಗಿದೆ. ರೋಗಿಗಳ ಜತೆ ಬರುವ ಕುಟುಂಬದವರು ಉಳಿದುಕೊಳ್ಳಲು 800 ರೂಂಗಳ ಶೆಲ್ಟರ್​ ಕಟ್ಟಲಾಗಿದೆ.
 • ಈ ಸಂಸ್ಥೆಯು ವಿವಿಧ ಕ್ಯಾನ್ಸರ್​ ಮಾದರಿಗಳ ಬಗ್ಗೆ ಅಧ್ಯಯನ ನಡೆಸಲಿದೆ. ಕ್ಯಾನ್ಸರ್​ ಉತ್ಪತ್ತಿ ಹಾಗೂ ಅದರ ಕಾರಣಗಳ ಬಗ್ಗೆ ವಿಮರ್ಶೆ ಮಾಡಲಿದೆ

ಪುರುಷರಿಗೂ ದೊರೆಯಲಿದೆ ಚೈಲ್ಡ್ ಕೇರ್ ಲೀವ್

7.

ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪುರುಷ ಉದ್ಯೋಗಿಗಳಿಗೆ ಸೇವಾವಧಿಯಲ್ಲಿ ಒಟ್ಟಾರೆ 730 ದಿನಗಳ ಚೈಲ್ಡ್ ಕೇರ್ ಲೀವ್ ದೊರೆಯಲಿದೆ.

 • ಸಿಂಗಲ್ ಪ್ಯಾರೆಂಟ್ ಮತ್ತು ಅವಲಂಬಿತ ಮಗು ಇರುವ, ವಿಚ್ಛೇದಿತ ಪುರುಷರು ಅಥವಾ ವಿಧುರರಿಗೆ ಇದು ಅನ್ವಯವಾಗಲಿದೆ.
 • ಈಗಾಗಲೇ ಮಹಿಳಾ ಉದ್ಯೋಗಿಗಳಿಗೆ ಈ ಪ್ರಯೋಜನ ದೊರೆಯುತ್ತಿದ್ದು, ಪುರುಷರಿಗೂ ದೊರೆಯಲಿದೆ.
 • ನೂತನ ನಿಯಮದ ಪ್ರಕಾರ ಮೊದಲ 365 ದಿನಗಳಿಗೆ ಪೂರ್ತಿ ಶೇ. 100 ವೇತನ ಪಾವತಿಯಾಗಲಿದ್ದು, ನಂತರದಲ್ಲಿ ಮುಂದಿನ 365 ದಿನಗಳಿಗೆ ಶೇ. 80 ವೇತನ ದೊರೆಯಲಿದೆ.
 • ಚೈಲ್ಡ್‌ ಕೇರ್ ಲೀವ್ ಹೊರತಾಗಿ ಮಹಿಳೆಯರು 180 ದಿನಗಳ ವೇತನ ಸಹಿತ ಹೆರಿಗೆ ರಜೆ ಪಡೆಯಬಹುದು, ಪುರುಷರು 15 ದಿನ ರಜೆ ಪಡೆಯಲು ಅವಕಾಶವಿದೆ.

Related Posts
“09 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
 ವಾಣಿಜ್ಯ ಸಮರ  ಸುದ್ಧಿಯಲ್ಲಿ ಏಕಿದೆ ?ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಉತ್ತಮಗೊಳ್ಳುತ್ತಿರುವ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ಸಮರ ತೀವ್ರಗೊಳ್ಳುವ ಸಾಧ್ಯತೆ ಇದೆ. ಕಾರಣ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ 2 ಸಾವಿರಕ್ಕೂ ಹೆಚ್ಚು ಉತ್ಪನ್ನಗಳಿಗೆ ನೀಡುತ್ತಿರುವ ಶೂನ್ಯ ತೆರಿಗೆಯನ್ನು ರದ್ದುಗೊಳಿಸುವ ಬಗ್ಗೆ ಅಮೆರಿಕ ...
READ MORE
23rd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಆರೋಗ್ಯ ವಿಮೆ: ಸಾವಿರಕ್ಕೂ ಹೆಚ್ಚು ಪ್ಯಾಕೇಜ್‌ ಬಡವರು ಹಾಗು ಹಿಂದುಳಿದ ಸಮುದಾಯದ ಜನರಿಗಾಗಿ ವೈದ್ಯಕೀಯ ವಿಮೆ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್– ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ (ಎನ್‌ಎಚ್‌ಪಿಎಂ) ಅಡಿಯಲ್ಲಿ 1,347 ಚಿಕಿತ್ಸಾ ಸೇವೆಗಳು ದೊರೆಯಲಿವೆ . ಈ ಯೋಜನೆಗೆ ಕೇಂದ್ರ ...
READ MORE
“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೃಂದಾವನಕ್ಕೆ ಡಿಸ್ನಿಲ್ಯಾಂಡ್‌ ಮಾದರಿ ಲುಕ್‌ ಸುದ್ಧಿಯಲ್ಲಿ ಏಕಿದೆ ?ಕೃಷ್ಣರಾಜಸಾಗರ ಜಲಾಶಯದ ಬೃಂದಾವನ ಉದ್ಯಾನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ 1,200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನೀಲಿನಕ್ಷೆ ಸಿದ್ಧಪಡಿಸಿದೆ. ಈಗಿನ ಪಾರಂಪರಿಕ ತಾಣದ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಬೃಂದಾವನವನ್ನು ವಿಶ್ವದ ಪ್ರವಾಸಿ ತಾಣಗಳಲ್ಲೇ ...
READ MORE
“4th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಅಭಿವೃದ್ಧಿ: 10 ರಾಜ್ಯಗಳಿಗೆ ಸೂಚನೆ ನಕ್ಸಲ್‌ ಹಾವಳಿ ಹೆಚ್ಚಾಗಿರುವ 10 ರಾಜ್ಯಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಅಲ್ಲಿನ ರಾಜ್ಯ ಸರಕಾರಗಳಿಗೆ ಸೂಚಿಸಿದೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅರಣ್ಯ ಇಲಾಖೆಗೆ ಸಂಬಂಧಿಸಿದ ನಿರ್ಬಂಧಗಳನ್ನು ಪರಿಸರ ...
READ MORE
“7th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಜಾಹೀರಾತು ಪ್ರದರ್ಶನ ನಿಷೇಧ ಸುದ್ದಿಯಲ್ಲಿ ಏಕಿದೆ? ಅನಧಿಕೃತ ಫ್ಲೆಕ್ಸ್, ಬ್ಯಾನರ್​ಗಳ ಹಾವಳಿ ತಡೆಯಲು ಮುಂದಿನ ಒಂದು ವರ್ಷದವರೆಗೆ ನಗರದಲ್ಲಿ ಎಲ್ಲ ರೀತಿಯ ಜಾಹೀರಾತು ಪ್ರದರ್ಶನ ನಿಷೇಧಿಸಲು ಬಿಬಿಎಂಪಿ ಕೌನ್ಸಿಲ್​ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹಿನ್ನಲೆ: ಹಲವು ವರ್ಷಗಳಿಂದ ಸಾಧ್ಯವಾಗದೇ ಇದ್ದ ಕೆಲಸವನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ್‌ ...
READ MORE
“3rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಡ್ರೋನ್‌ ಬಳಕೆ ಸುದ್ದಿಯಲ್ಲಿ ಏಕಿದೆ? ನಗರದ ವಾಹನ ದಟ್ಟಣೆಯನ್ನು ಸರಾಗಗೊಳಿಸಲು ಡ್ರೋನ್‌ ಮೂಲಕ ಮಾಹಿತಿ ಸಂಗ್ರಹಿಸಿ, ನೂತನ ವ್ಯವಸ್ಥೆ ಅಳವಡಿಸಿಕೊಳ್ಳಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಕಾರಣವೇನು? ಪ್ರಮುಖ ಜಂಕ್ಷನ್‌, ವೃತ್ತ ಹಾಗೂ ವಾಹನ ನಿಬಿಡ ಸ್ಥಳಗಳಲ್ಲಿನ ದಟ್ಟಣೆ ಹೆಚ್ಚುತ್ತಿರುವ ಕಾರಣ ಸಮಸ್ಯೆ ಉಂಟಾಗುತ್ತಿದೆ. ಸಿಗ್ನಲ್‌ ...
READ MORE
“21st ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮಲಬಾರ್ ಬಾಂಡೆಡ್ ಪಿಕಾಕ್ ಸುದ್ಧಿಯಲ್ಲಿ ಏಕಿದೆ ?ನವಿಲಿನ ಬಣ್ಣದ ಚಿಟ್ಟೆ  ‘ಮಲಬಾರ್ ಬಾಂಡೆಡ್ ಪಿಕಾಕ್’ ಪಶ್ಚಿಮ ಘಟ್ಟದಲ್ಲಿ ಕಂಡುಬಂದಿದೆ ಅಗಲ ರೆಕ್ಕೆಯಲ್ಲಿ ಬಾಲ ಆಕರ್ಷಕವಾಗಿದೆ. ನೀಲಿ, ನೇರಳೆ, ಹಸಿರು ಮಿಶ್ರಿತ ಬಣ್ಣ, ರೆಕ್ಕೆ ಬಿಚ್ಚಿ ಕುಳಿತಾಗ ಇದರ ಚೆಲುವು ಕಣ್ತುಂಬಿಕೊಳ್ಳುವುದೇ ಆನಂದ. ಹೆಮ್ಮೆಯ ವಿಚಾರವೆಂದರೆ ...
READ MORE
“14th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪ್ರಮುಖ ಔಷಧಿಗಳ ಬ್ಯಾನ್‌ ಸುದ್ಧಿಯಲ್ಲಿ ಏಕಿದೆ ? 28 ಸ್ಥಿರ ಸಂಯೋಜನೆಯ ಔಷಧಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಬ್ಯಾನ್‌ ಮಾಡಿದೆ. ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧ ಮಾಡಲಾಗಿದ್ದು, ಇತರೆ 6 ಔಷಧವನ್ನು ನಿರ್ಬಂಧಿಸಿದೆ. ಇದರಿಂದ 2016ರಿಂದ ಸಂಯೋಜನೆಯ ...
READ MORE
“19 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿಟಮಿನ್‌ ಎ ಲಸಿಕೆ ಕೊರತೆ ಸುದ್ಧಿಯಲ್ಲಿ ಏಕಿದೆ ?ಶಿಶುಗಳ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸುವ ವಿಟಮಿನ್‌ ಎ ಲಸಿಕೆಯು ರಾಜ್ಯದಲ್ಲಿ ಸಿಗುತ್ತಿಲ್ಲ. ಅನ್ನಾಂಗ ಕೊರತೆ ನಿವಾರಿಸುವ 10 ತಿಂಗಳಿಂದ 5 ವರ್ಷದೊಳಗಿನ ಮಕ್ಕಳಿಗೆ ಹಾಕುವ ವಿಟಮಿನ್ ಎ ಲಸಿಕೆಯು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ...
READ MORE
“17th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
ಹೊಸ ಲೋಗೋ ಸುದ್ಧಿಯಲ್ಲಿ ಏಕಿದೆ ?2019ರ ಫೆಬ್ರವರಿಯಲ್ಲಿ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2019ಗೆ ಹೊಸ ಲೋಗೋ ಬಿಡುಗಡೆಯಾಗಿದೆ. ರಾಷ್ಟ್ರ ಧ್ವಜದ ಮೂರು ಬಣ್ಣಗಳು, ಅಶೋಕ ಚಕ್ರವೂ ಇರುವ ಹೊಸ ಲೋಗೋವನ್ನು ಕ್ಷಣಾ ಇಲಾಖೆ ಅನಾವರಣಗೊಳಿಸಿದ್ದ, ದಿ ರನ್‌ ವೇ ಟು ಎ ...
READ MORE
“09 ಫೆಬ್ರವರಿ 2019 ರ ಕನ್ನಡ ಪ್ರಚಲಿತ
23rd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
“15 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“4th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
“7th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“3rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“21st ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“14th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“19 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“17th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “

Leave a Reply

Your email address will not be published. Required fields are marked *