“29 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಪೋಕ್ಸೋ ಕಾಯ್ದೆಗೆ ತಿದ್ದುಪಡಿ

1.

ಸುದ್ಧಿಯಲ್ಲಿ ಏಕಿದೆ ? ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಕಠಿಣ ನಿಲುವು ಕೈಗೊಂಡಿರುವ ಕೇಂದ್ರ ಸರ್ಕಾರ, ಕಾಮಾಂಧರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಲು ಅವಕಾಶವಾಗುವಂತೆ ಪೋಕ್ಸೋ ಕಾಯ್ದೆಗೆ ತಿದ್ದುಪಡಿ ತರುವ ಮಹತ್ವದ ತೀರ್ಮಾನ ಕೈಗೊಂಡಿದೆ.

 • 2012ರಲ್ಲಿ ಜಾರಿಗೆ ಬಂದ ಪೋಕ್ಸೋ ಕಾಯ್ದೆಗೆ ತಿದ್ದು ಪಡಿಯಾಗಿದೆ.

ತಿದ್ದುಪಡಿ ಏಕೆ ?

 • ಮಕ್ಕಳ ಲೈಂಗಿಕತೆ ಚಿತ್ರ ಹಾಗೂ ವಿಡಿಯೋಗಳನ್ನು ಹರಡುವುದು, ಲೈಂಗಿಕತೆಗೆ ಬಳಸಿಕೊಳ್ಳುವುದಕ್ಕಾಗಿ ಮಕ್ಕಳಿಗೆ ಹಾಮೋನ್ ನೀಡಿ ಶೀಘ್ರ ಪ್ರಾಯಕ್ಕೆ ತರುವಂತಹ ಕೃತ್ಯಗಳು ನಡೆಯುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕಾಯ್ದೆಯ ಸೆಕ್ಷನ್ 9ರನ್ವಯ ಅಪರಾಧಿಗಳ ವಿರುದ್ಧ ಕಠಿಣಾತಿಕಠಿಣ ಕ್ರಮ ಜರುಗಿಸುವಂತೆ ತಿದ್ದುಪಡಿ ತರಲಾಗಿದೆ.
 • ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಡಗಳು ಕೇಳಿಬಂದಿದ್ದವು.
 • ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ 12 ವರ್ಷಗಳ ಕೆಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗಿದರೆ ಮರಣ ದಂಡನೆ ವಿಧಿಸುವ ಕಾನೂನಿಗೆ ಅನುಮೋದನೆ ನೀಡಿದ್ದವು.

ತಿದ್ದುಪಡಿಗಳು:

 • ಮಕ್ಕಳ ಮೇಲೆ ಮೃಗೀಯ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಗಲ್ಲು ಶಿಕ್ಷೆಯಾಗಲಿದೆ
 • ವರದಿಗಾರಿಕೆ ಮತ್ತು ಕೋರ್ಟ್​ನ ಸಾಕ್ಷ್ಯವಾಗಿ ಬಳಸುವ ಹೊರತಾಗಿ ಮಕ್ಕಳ ಲೈಂಗಿಕ ಚಿತ್ರ ಮತ್ತು ವಿಡಿಯೋಗಳನ್ನು ಯಾವುದೇ ರೀತಿಯ ಮಾಧ್ಯಮಗಳ ಮುಖಾಂತರ ಹರಡಿದಲ್ಲಿ ಅಂಥವರಿಗೆ ದಂಡ ವಿಧಿಸಲು ಪರಿಷ್ಕೃತ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
 • ಅಪರಾಧಿಗಳು ಲೈಂಗಿಕ ದೌರ್ಜನ್ಯಕ್ಕೆ ಮತ್ತೆ ಮುಂದಾದಲ್ಲಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲೂ ಕೂಡ ಕಾನೂನು ಅನ್ವಯ ಅವಕಾಶ ಮಾಡಲಾಗಿದೆ.
 • ಮಕ್ಕಳ ಲೈಂಗಿಕ ಚಿತ್ರ ಅಥವಾ ವಿಡಿಯೋವನ್ನೂ ಇನ್ನು ಸಂಗ್ರಹಿಸುವಂತಿಲ್ಲ. ಒಂದು ವೇಳೆ ಇದ್ದಲ್ಲಿ ಅದನ್ನು ನಾಶಗೊಳಿಸಬೇಕು ಎಂದು ಕಾಯ್ದೆ ಹೇಳುತ್ತದೆ.

ಗಗನ ಯಾನ

2.

ಸುದ್ಧಿಯಲ್ಲಿ ಏಕಿದೆ ? ಅಂತರಿಕ್ಷದಲ್ಲಿ ಏಳು ದಿನಗಳ ಕಾಲ ಮೂವರು ಗಗನಯಾತ್ರಿಗಳು ಕೈಗೊಳ್ಳಲಿರುವ ಗಗನಯಾನ ಯೋಜನೆಗೆ ಭಾರತೀಯ ಸರ್ಕಾರ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ ಹತ್ತು ಸಾವಿರ ಕೋಟಿ ರೂ.ಗಳನ್ನು ಒದಗಿಸಲು ನಿರ್ಧರಿಸಿದೆ.

 • ಗಗನಯಾತ್ರಿಗಳುನ್ನು ಅಂತರಿಕ್ಷಕ್ಕೆ ಒಯ್ಯುವ ಈ ಐತಿಹಾಸಿಕ ಕ್ಷಣ 2022ಕ್ಕೆ ಸಾಕಾರಗೊಳ್ಳಲಿದೆ
 • ಭಾರತದ ಈ ಮಹತ್ವಾಕಾಂಕ್ಷಿ ಯೋಜನೆಗೆ ‘ಗಗನಯಾನ’ ಎಂದು ಹೆಸರಿಡಲಾಗಿದೆ.
 • ಈ ಮೂಲಕ ನಭಕ್ಕೆ ಮಾನವರನ್ನು ಕಳುಹಿಸಿದ ನಾಲ್ಕನೇ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಲಿದೆ.
 • ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಲುವಾಗಿ ಜಿಯೋ ಸಿಂಕ್ರೋನಸ್​ ಉಪಗ್ರಹ ಉಡ್ಡಾಯನ ವಾಹನವನ್ನು ಸಿದ್ಧಪಡಿಸಲಿದೆ.
 • ಬಾಹ್ಯಾಕಾಶಕ್ಕೆ ಕಳುಹಿಸುವ ಗಗನಯಾನಿಗಳ ಆಯ್ಕೆ ಪ್ರಕ್ರಿಯೆ ಭಾರತೀಯ ವಾಯುಪಡೆಗೆ ವಹಿಸಲಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಹಲವಾರು ಭಾಗವಹಿಸಲಿದ್ದು, ಅಂತಿಮವಾಗಿ ಮೂವರು ಮಾತ್ರ ಅದೃಷ್ಟವಂತರಾಗಲಿದ್ದಾರೆ.
 • ಈ ಮಹತ್ವಾಕಾಂಕ್ಷಿ ಯೋಜನೆಗೆ ಫ್ರಾನ್ಸ್‌, ರಷ್ಯಾ ನೆರವು ನೀಡಲು ಮುಂದೆ ಬಂದಿದೆ.
 • ಜಿಎಸ್‌ಎಲ್‌ವಿ ಮಾರ್ಕ್‌ 3 ನೌಕೆ ಮೂಲಕ ಗಗನಯಾನಿಗಳ ಬಾಹ್ಯಾಕಾಶ ಯಾನ ನಡೆಯಲಿದೆ.

ಜಿಎಸ್ಎಲ್ವಿ ಮಾರ್ಕ್ III

 • GSLV-III ಅಥವಾ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ III ಅಭಿವೃದ್ಧಿಯ ಅಡಿಯಲ್ಲಿ ಉಡಾವಣೆ ವಾಹನವಾಗಿದೆ.
 • ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಇಸ್ರೋ ಇದನ್ನು ಅಭಿವೃದ್ಧಿಪಡಿಸುತ್ತಿದೆ
 • ಭಾರತ ತನ್ನ ಭಾರವಾದ ಉಪಗ್ರಹಗಳನ್ನು ವಿದೇಶಿ ರಾಕೆಟ್ಗಳು ಮತ್ತು ಪೂರೈಕೆದಾರರ ಮೇಲೆ ಅವಲಂಬಿಸದೆ ಆರಂಭಿಸಲು ಅನುವು ಮಾಡಿಕೊಡುತ್ತದೆ. ಜಿಎಸ್ಎಲ್ವಿ ಈವರೆಗೆ ಎಂಟು ಉಡಾವಣಾ ಪ್ರಯತ್ನಗಳನ್ನು ಮಾಡಿದೆ,

ವೈಶಿಷ್ಟ್ಯಗಳು

 • ಜಿಎಸ್ಎಲ್ವಿ ಎಮ್ಕೆ -3 ಒಂದು 3 ಹಂತದ ವಾಹನವಾಗಿದೆ ಮತ್ತು ಇದು ಭಾರತೀಯ ಕ್ರೈಯೊಜೆನಿಕ್ ಮೂರನೇ ಹಂತವನ್ನು ಹೊಂದಿರುತ್ತದೆ.
 • ಜಿಎಸ್ಎಲ್ವಿ ಎಮ್ಕೆ III ನ 3 ಹಂತಗಳು ಘನ ಬೂಸ್ಟರ್ ಗಳು, ದ್ರವ ಮೋಟಾರು ಮತ್ತು ಕ್ರೈಯೊಜೆನಿಕ್ ಮೇಲ್ ಹಂತ.
 • ಭಾರತದ ಜಿಎಸ್ಎಲ್ವಿ-ಎಮ್ಕೆ III ನ ಪ್ರಾಯೋಗಿಕ ಕಾರ್ಯಾಚರಣೆಯನ್ನು ಡಿಸೆಂಬರ್ ಮೊದಲ ಭಾಗದಲ್ಲಿ ಪ್ರಾರಂಭಿಸಲಾಗಿದೆ. 630-ಟನ್
 • GSLV-MK III ಗಗನಯಾತ್ರಿಗಳಿಲ್ಲದೆಯೇ ಒಂದು ಸಿಬ್ಬಂದಿ ಮಾಡ್ಯೂಲ್ (65 ಟನ್ನುಗಳು) ಹೊತ್ತೊಯ್ಯುತ್ತದೆ
 • ಜಿಎಸ್ಎಲ್ವಿ-ಎಮ್ಕೆ III ಯು ಸಂವಹನ ಉಪಗ್ರಹವನ್ನು 4 ಟನ್ಗಳಷ್ಟು ಭೂ-ಸಮಕಾಲಿಕ ಕಕ್ಷೆಗೆ ಅಥವಾ 10 ಟನ್ಗಳಷ್ಟು ಕಡಿಮೆ ಭೂಮಿಯ ಕಕ್ಷೆಗೆ ಉಪಗ್ರಹ.

ಕೋಲ್ಕತಾದಲ್ಲಿ ಎರಡನೇ ವಿಶ್ವಯುದ್ಧದ ಬಾಂಬ್ ಪತ್ತೆ

3.

ಸುದ್ಧಿಯಲ್ಲಿ ಏಕಿದೆ ? ನೇತಾಜಿ ಸುಭಾಷ್ ಡಾಕ್‌ನ 90ನೇ ವರ್ಷಾಚರಣೆಯ ಸಂದರ್ಭದಲ್ಲಿ ಕೋಲ್ಕತಾ ಬಂದರಿನಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾಗ ಎರಡನೇ ಮಹಾಯುದ್ಧದ ಸಂದರ್ಭದ 450 ಕೆಜಿ ತೂಕದ ಬಾಂಬ್ ಪತ್ತೆಯಾಗಿದೆ.

 • 1942-45ರ ಅವಧಿಯಲ್ಲಿ ಎರಡನೇ ಮಹಾಯುದ್ಧ ನಡೆದಿದ್ದು, ಇದೇ ಸಂದರ್ಭದಲ್ಲಿ ಬಾಂಬ್ ಎಸೆಯಲಾಗಿತ್ತು. ಅಮೆರಿಕದ ಸೇನೆಯ ಗುರುತನ್ನು ಹೊಂದಿರುವ ಬಾಂಬ್ ಸ್ಫೋಟಗೊಂಡರೆ ಅರ್ಧ ಕಿಮೀ. ವ್ಯಾಪ್ತಿಯಲ್ಲಿ ಜೀವ ಮತ್ತು ಸೊತ್ತು ಹಾನಿ ಎಸಗಬಲ್ಲದು ಎಂದು ತಜ್ಞರು ಹೇಳಿದ್ದಾರೆ.
 • ಯುದ್ಧದ ಸಂದರ್ಭದಲ್ಲಿ ಬಳಸಲು ಬಾಂಬ್ ತಂದಿದ್ದಿರಬಹುದು ಇಲ್ಲವೆ ದಾಸ್ತಾನು ಇರಿಸಿದ್ದ ಬಾಂಬ್ ನೀರಿಗೆ ಬಿದ್ದಿರಬಹುದು. ಇದೀಗ ಬಾಂಬ್ ಅನ್ನು ಸೂಕ್ತ ಸ್ಥಳಕ್ಕೆ ಕೊಂಡೊಯ್ದು ನಿಷ್ಕ್ರಿಯಗೊಳಿಸಲು ಕೋಲ್ಕತಾ ಪೋರ್ಟ್ ಟ್ರಸ್ಟ್ ಸೇನೆಯನ್ನು ಸಂಪರ್ಕಿಸಿದೆ.
 • ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕನ್ ಸೇನೆ ನೇತಾಜಿ ಸುಭಾಷ್ ಡಾಕ್ ಅನ್ನು ಬಳಸುತ್ತಿತ್ತು.

ಎರಡನೇ ಮಹಾಯುದ್ಧ

 • ಎರಡನೆಯ ಮಹಾಯುದ್ಧ 1939ರಿಂದ 1945ರವರೆಗೆ ನಡೆದ, ಜಗತ್ತಿನ ಅನೇಕ ದೇಶಗಳನ್ನೊಳಗೊಂಡ ಯುದ್ಧ. ಪ್ರಧಾನವಾಗಿ ಯೂರೋಪ್ ಮತ್ತು ಏಷಿಯಾ ಖಂಡದಲ್ಲಿ ನಡೆಯಲ್ಪಟ್ಟ ಈ ಯುದ್ಧದಲ್ಲಿ ಮಿತ್ರ ರಾಷ್ಟ್ರ ( ಫ್ರಾನ್ಸ್, ರಶಿಯಾ, ಇಂಗ್ಲೆಂಡ್ ಮತ್ತು ಅಮೆರಿಕಾ) ಮತ್ತು ಅಕ್ಷ ರಾಷ್ಟ್ರ (ಜರ್ಮನಿ, ಇಟಲಿ ಮತ್ತು ಜಪಾನ್) ಎಂಬ ಎರಡು ಬಣಗಳಿದ್ದವು. ಒಟ್ಟಿನಲ್ಲಿ ೭೦ ರಾಷ್ಟ್ರಗಳ ಸೈನ್ಯಗಳು ಭಾಗವಹಿಸಿದ ಈ ಯುದ್ಧದಲ್ಲಿ ಆರು ಕೋಟಿಗೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
 • ಕೊನೆಯಲ್ಲಿ ಮಿತ್ರ ರಾಷ್ಟ್ರಗಳ ಮೇಲುಗೈಯಾಯಿತು. ಎಲ್ಲ ಅಂತಾರಾಷ್ಟ್ರೀಯ ವ್ಯಾಜ್ಯಗಳನ್ನೂ ಶಾಂತಿಯುತ ಮಾರ್ಗದಿಂದಲೇ ಪರಿಹರಿಸಿಕೊಳ್ಳಬೇಕೆಂದು ಒಂದನೆಯ ಮಹಾಯುದ್ಧಾನಂತರದಲ್ಲಿ ಆಗಿದ್ದ ವರ್ಸೇಲ್ಸ್‌ ಒಪ್ಪಂದದ ಆಶಯವನ್ನು ಉಲ್ಲಂಘಿಸಿ ಬಲಪ್ರಯೋಗದಿಂದ ರಾಜ್ಯ ವಿಸ್ತರಣೆಯ ಕಾರ್ಯದಲ್ಲಿ ತೊಡಗಿದ್ದ ಜರ್ಮನಿ, ಇಟಲಿ, ಜಪಾನುಗಳನ್ನೆದುರಿಸಿ ಬ್ರಿಟನ್, ಫ್ರಾನ್ಸ್‌, ಸೋವಿಯತ್ ಒಕ್ಕೂಟ ಅಮೆರಿಕ ಸಂಯುಕ್ತ ಸಂಸ್ಥಾನಗಳೇ ಮೊದಲಾದ ರಾಷ್ಟ್ರಗಳು ನಡೆಸಿದ ಯುದ್ಧ.
 • 6 ವರ್ಷ ಕಾಲ ನಡೆದ ಈ ಯುದ್ಧ ವಿಶ್ವವ್ಯಾಪಿಯಾಗಿ ಪರಿಣಮಿಸಿ ಅಗಾಧ ಸಾವು ನೋವು ಕಷ್ಟ ನಷ್ಟಗಳಲ್ಲಿ ಪರ್ಯಾವಸಾನವಾಯಿತಲ್ಲದೆ ವಿಶ್ವದ ಆರ್ಥಿಕ ರಾಜಕೀಯ ಸಾಮಾಜಿಕ ವೈಜ್ಞಾನಿಕ ಕ್ಷೇತ್ರಗಳಲ್ಲಿ ಅಗಾಧ ಪರಿವರ್ತನೆಗಳಿಗೂ ಕಾರಣವಾಯಿತೆನ್ನಬಹುದು.

ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಅಮೆರಿಕ

4.

ಸುದ್ಧಿಯಲ್ಲಿ ಏಕಿದೆ ? ಸರ್ಕಾರಿ ಕಾರ್ಯಕ್ರಮಗಳಿಗೆ ಹಣ ಇಲ್ಲದ್ದರಿಂದ ಸರ್ಕಾರಿ ಕೆಲಸಗಳನ್ನು ನಿಲ್ಲಿಸುವುದನ್ನೇ ಶಟ್​ಡೌನ್ ಎಂದು ಕರೆಯಲಾಗುತ್ತದೆ. ಅಮೆರಿಕ ಸರ್ಕಾರಿ ವಿಭಾಗಗಳನ್ನು ಅತಿ ಅವಶ್ಯಕ ಹಾಗೂ ಅನವಶ್ಯಕ ವಿಭಾಗಗಳು ಎಂದು ವಿಂಗಡಿಸಿದ್ದು ಶಟ್​ಡೌನ್ ಅವಧಿಯಲ್ಲಿ ಅನವಶ್ಯಕ ವಿಭಾಗಗಳು ಕೆಲಸ ನಿಲ್ಲಿಸುತ್ತವೆ.

 • ಡಾಟಾ ಬೇಸ್ ಎಂಟ್ರಿ, ಪ್ರವಾಸೋದ್ಯಮ, ಪಾಸ್​ಪೋರ್ಟ್/ ವೀಸಾ ಸೇವೆಗಳನ್ನು ಅನಗತ್ಯ ವಿಭಾಗಗಳಲ್ಲಿ ನಮೂದಿಸಲಾಗಿದೆ. ಹಾಗಾಗಿ, ಈ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 8 ಲಕ್ಷ ಸಿಬ್ಬಂದಿಯನ್ನು ರಜೆ ಮೇಲೆ ಕಳುಹಿಸಲಾಗಿದೆ.
 • ಹಲವು ಬಾರಿ ಬಂದೆರಗಿದ ಸಂಕಷ್ಟ: ಅಮೆರಿಕದಲ್ಲಿ ಶಟ್​ಡೌನ್ ಈ ಹಿಂದೆಯೂ ನಡೆದಿದೆ. ಸರ್ಕಾರಿ ಖರ್ಚಿಗೂ ಹಣವಿಲ್ಲದೆ ಸರ್ಕಾರದ ಕೆಲಸಗಳನ್ನು ನಿಲ್ಲಿಸುವ ಪರಿಪಾಠ ಅಮೆರಿಕದಲ್ಲಿ ಹೊಸದೇನಲ್ಲ. ಅಮೆರಿಕದ ಇತಿಹಾಸದಲ್ಲಿ ಈ ಹಿಂದೆ ಐದು ಬಾರಿ ಶಟ್​ಡೌನ್ ಮಾಡಲಾಗಿದೆ. 1981, 1984, 1990, 1995-96 ಮತ್ತು 2013ರಲ್ಲಿ ಇಂತಹದ್ದೇ ಬಿಕ್ಕಟ್ಟು ಸೃಷ್ಟಿಯಾಗಿತ್ತು.
 • 2013ರಲ್ಲಿ ಶಟ್​ಡೌನ್ ತಪ್ಪಿಸುವ ಒಬಾಮರ ಪ್ರಯತ್ನ ರಾಜಕೀಯ ಭಿನ್ನಾಭಿಪ್ರಾಯದ ಕಾರಣ ಕೈಗೂಡಲಿಲ್ಲ. ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ 1995-96ರಲ್ಲಿ ಸರ್ಕಾರಿ ಕೆಲಸಗಳನ್ನು ನಿಲ್ಲಿಸಲಾಗಿತ್ತು. 1995ರ ಡಿಸೆಂಬರ್​ನಲ್ಲಿ 28 ದಿನಗಳ ಕಾಲ ಈ ಸ್ಥಿತಿಯಿತ್ತು. ಇದರಿಂದ ಅಮೆರಿಕ 800 ಮಿಲಿಯನ್ ಡಾಲರ್​ನಷ್ಟು ನಷ್ಟ ಅನುಭವಿಸಿತ್ತು. ಮೆಡಿಕ್ಲೇಮ್ 4 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಯಿತು. ಪಾಸ್​ಪೋಟ್ ರ್ಾಗಿ ಬಂದಿದ್ದ 80 ಸಾವಿರ ಅರ್ಜಿಗಳನ್ನು ಸ್ವೀಕರಿಸಲೇ ಇಲ್ಲ. 20 ಲಕ್ಷ ಪ್ರವಾಸಿಗರನ್ನು ನ್ಯಾಷನಲ್ ಪಾರ್ಕ್ ಹಾಗೂ ವಸ್ತುಸಂಗ್ರಹಾಲಯಗಳ ಪ್ರವೇಶದ್ವಾರದಿಂದಲೇ ವಾಪಸ್ ಕಳುಹಿಸಲಾಯಿತು. ಏಕೆಂದರೆ, ಒಳಗಡೆ ಸಿಬ್ಬಂದಿಯೇ ಇರಲಿಲ್ಲ.

ಏನಿದು ಗೋಡೆ ವಿವಾದ?:

 • ಯುಎಸ್ ಎ-ಮೆಕ್ಸಿಕೊ ಗಡಿಯ 1610 ಕಿಮೀ ಪ್ರದೇಶದಲ್ಲಿ ಗೋಡೆ ನಿರ್ವಿುಸುವ ಯೋಜನೆಯಲ್ಲಿ ಡೋನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಸಂದರ್ಭದಲ್ಲೇ ತಿಳಿಸಿದ್ದರಾದರೂ, ತಾವೇ ಅಧಿಕಾರಕ್ಕೆ ಬಂದ ಮೇಲೆ ಇದರ ಜಾರಿ ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಅರಿವಾಯಿತು. ಆದರೂ, ಪಟ್ಟುಬಿಡದ ಟ್ರಂಪ್ ಮೆಕ್ಸಿಕೊ ಗಡಿಪ್ರದೇಶದಲ್ಲಿ ತಡೆಗೋಡೆ ನಿರ್ವಣಕ್ಕೆ ಬೇಕಾದ 5 ಬಿಲಿಯನ್ ಡಾಲರ್ ಹಣವನ್ನು ಬಜೆಟ್​ನಲ್ಲಿ ಸೇರಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಇದಕ್ಕೆ ಸೆನೆಟ್ ಒಪ್ಪದ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರಿ ಸೇವೆ ಸ್ಥಗಿತಗೊಂಡಿದ್ದು, ಸರ್ಕಾರಿ ನೌಕರರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.
 • ಹಿನ್ನೆಲೆ: ಉತ್ತರ ಅಮೆರಿಕಕ್ಕೆ ತಾಗಿಕೊಂಡಿರುವ ಮೆಕ್ಸಿಕೊ 31 ಸಂಸ್ಥಾನಗಳು ಮತ್ತು ಮೆಕ್ಸಿಕೊ ನಗರವನ್ನು ಒಳಗೊಂಡ ಸಾಂವಿಧಾನಿಕ ಒಕ್ಕೂಟ ಗಣರಾಜ್ಯವಾಗಿದೆ. ಅಮೆರಿಕದೊಂದಿಗೆ ಈ ಪುಟ್ಟರಾಷ್ಟ್ರದ ಗಡಿವಿವಾದ ತುಂಬ ಹಳೆಯದು.
 • 19ನೇ ಶತಮಾನದಲ್ಲಿ ಈ ಎರಡೂ ರಾಷ್ಟ್ರಗಳ ನಡುವೆ ನಡೆದ ಯುದಟಛಿವಂತೂ ಕರಾಳ ಅಧ್ಯಾಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ಆರ್ಥಿಕ ಹಾಗೂ ಸಾಂಸ್ಕೃತಿಕ ಕೊಡುಕೊಳ್ಳುವಿಕೆಗಳು ಹೆಚ್ಚಿ, ಸಂಬಂಧಗಳು ಸಾಮಾನ್ಯ ಸ್ಥಿತಿಗೆ ಬಂದಿವೆ. ಆದರೆ, ಭಾರಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಮೆಕ್ಸಿಕೊ ಆಂತರಿಕ ಕ್ಷೋಭೆಗಳಿಂದ ತತ್ತರಿಸಿದೆ. ಮತ್ತೊಂದೆಡೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಾಂಗ ನೀತಿಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದು, ಮೆಕ್ಸಿಕೊದೊಂದಿಗಿನ ಗಡಿ ಪೈಕಿ 1610 ಕಿಲೋಮೀಟರ್ ಪ್ರದೇಶಲ್ಲಿ ಗೋಡೆ ನಿರ್ವಿುಸುವುದಾಗಿ ಘೊಷಿಸಿದ್ದಾರೆ!
 • ಅಮೆರಿಕ-ಮೆಕ್ಸಿಕೊ ಗಡಿ: ಮೆಕ್ಸಿಕೊ ಮತ್ತು ಅಮೆರಿಕದ ಗಡಿ 3,100 ಕಿಮೀ ಉದ್ದದ್ದು. ಇದರಲ್ಲಿ ಈಗಾಗಲೇ 1,046 ಕಿಲೋಮೀಟರ್ ಪ್ರದೇಶ ಬೇಲಿ, ಕಾಂಕ್ರೀಟ್ ಸ್ಲಾಬ್ ಮತ್ತಿತರ ರೀತಿಯಲ್ಲಿ ಆವರಿಸಿದೆ. ಟ್ರಂಪ್ 1610 ಕಿಮೀ ಪ್ರದೇಶದಲ್ಲಿ ಗೋಡೆ ನಿರ್ವಿುಸುವುದಾಗಿ ಭರವಸೆ ನೀಡಿದ್ದಾರೆ. ಆಗ ಮೆಕ್ಸಿಕೋದ ಗಡಿ ಪೂರ್ಣವಾಗಿ ಮುಚ್ಚಿದಂತೆ ಆಗಲಿದೆ.

ಅಮೆರಿಕದಲ್ಲೇ ಯಾಕೆ ಹೀಗಾಗುತ್ತೆ?

 • ಇದು ಅಮೆರಿಕದಲ್ಲಿ ಅಸ್ತಿತ್ವದಲ್ಲಿರುವ ಪ್ರಜಾತಂತ್ರ ವ್ಯವಸ್ಥೆಯ ಪರಿಣಾಮ. ಇಲ್ಲಿ ಅಧ್ಯಕ್ಷರು ರಾಜ್ಯ ಹಾಗೂ ಸರ್ಕಾರದ ಪ್ರಮುಖರಾಗಿದ್ದರೂ ಸಂಸತ್ತಿನಲ್ಲಿ ಬಹುಮತ ಹೊಂದಿರುತ್ತಾರೆ ಎಂದೇನೂ ಇಲ್ಲ. ಏಕೆಂದರೆ ಅಧ್ಯಕ್ಷ, ಕಾಂಗ್ರೆಸ್ (ಸಂಸತ್ತು), ಸೆನೆಟ್ ಚುನಾವಣೆಗಳು ಪ್ರತ್ಯೇಕವಾಗಿ ನಡೆಯುತ್ತವೆ.
 • ಸದ್ಯ ರಿಪಬ್ಲಿಕನ್ ಪಕ್ಷ, ಹೌಸ್ ಆಫ್ ರೆಪ್ರಿಸೆಂಟೇಟಿವ್ (ಅಮೆರಿಕ ಸಂಸತ್ತಿನ ಕೆಳಮನೆ)ನಲ್ಲಿ ಬಹುಮತ ಹೊಂದಿದ್ದರೆ, ಡೆಮಾಕ್ರಟಿಕ್ ಪಕ್ಷ ಸೆನೆಟ್ ಮೇಲೆ ಹಿಡಿತ ಹೊಂದಿದೆ.
 • ಅಮೆರಿಕ ಕಾನೂನಿನ ಪ್ರಕಾರ ದೇಶದ ಖರ್ಚುವೆಚ್ಚಗಳಿಗಾಗಿ ಬಜೆಟ್ ಮಸೂದೆಗೆ ರಾಷ್ಟ್ರಾಧ್ಯಕ್ಷರು, ಹೌಸ್ ಆಫ್ ರೆಪ್ರಿಸೆಂಟೇಟಿವ್ ಹಾಗೂ ಸೆನೆಟ್ ಅನುಮೋದನೆ ನೀಡಬೇಕು. ಪ್ರತಿ ವರ್ಷ ಸೆಪ್ಟೆಂಬರ್ 30ರಂದು ಅಮೆರಿಕ ಕಾಂಗ್ರೆಸ್ ಮುಂದಿನ ವರ್ಷದ ಅವಧಿಯವರೆಗೆ ಬಜೆಟ್ ಅಂಗೀಕರಿಸುತ್ತದೆ. ಇದರಿಂದ ಸರ್ಕಾರಕ್ಕೆ ತನ್ನ ಯೋಜನೆಗಳಿಗಾಗಿ ಹಣ ಲಭಿಸುತ್ತದೆ.

ಭಾರತದ ಮೇಲೂ ಪರಿಣಾಮ

 • ಅಮೆರಿಕದಲ್ಲಿನ ಶಟ್​ಡೌನ್ ಪರಿಣಾಮ ಅಲ್ಲಿಗೆ ತೆರಳಲು ವೀಸಾ ಸಿಗುವುದು ಕಠಿಣವಾಗಲಿದೆ. ಶಟ್​ಡೌನ್ ಅವಧಿಯಲ್ಲಿ ವಿದೇಶಿಯರ ಆಗಮನಕ್ಕೆ ಅಮೆರಿಕ ಕಡಿವಾಣ ಹಾಕುತ್ತದೆ. ಇದರಿಂದ ಭಾರತದ ಸಾಫ್ಟ್​ವೇರ್ ಕಂಪನಿಗಳು ತೊಂದರೆಗೆ ಒಳಗಾಗಲಿದ್ದು, ಅವುಗಳ ವಹಿವಾಟು ಕುಸಿಯಲಿದೆ. ರೂಪಾಯಿ ಮತ್ತಷ್ಟು ಅಪಮೌಲ್ಯಗೊಳ್ಳುವ ಆತಂಕ ಎದುರಾಗಿದೆ.
Related Posts
“15 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮೇಲ್ವರ್ಗ ಮೀಸಲು ಜಾರಿ ಸುದ್ಧಿಯಲ್ಲಿ ಏಕಿದೆ ?ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನಿಕ ಸವಲತ್ತು ಅಧಿಕೃತವಾಗಿ ಅನುಷ್ಠಾನಗೊಂಡಿದೆ. ಈ ದಿಸೆಯಲ್ಲಿನ ಸಂವಿಧಾನ ತಿದ್ದುಪಡಿಗೆ ರಾಷ್ಟ್ರಪತಿಗಳ ಸಮ್ಮತಿ ಲಭಿಸಿತ್ತು. ''ಸಂವಿಧಾನ (ತಿದ್ದುಪಡಿ) ಕಾಯಿದೆ -2019ರ ವಿಧಿ ...
READ MORE
7th & 8th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಸೈಬರ್ ಕ್ರೈಂ ಸುದ್ಧಿಯಲ್ಲಿ ಏಕಿದೆ? ಭಯೋತ್ಪಾದನೆಯಷ್ಟೇ ಗಂಭೀರ ಸ್ವರೂಪದಲ್ಲಿ ದೇಶವನ್ನಾವರಿಸುತ್ತಿರುವ ಸೈಬರ್ ಕ್ರೈಂ ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ. ಜನಸಾಮಾನ್ಯರ ನಿತ್ಯಜೀವನದ ಮೇಲೆ ಅಂತರ್ಜಾಲ ಬೀರುತ್ತಿರುವ ಪ್ರಭಾವದ ತೀವ್ರತೆಯನ್ನು ಪರಿಗಣಿಸಿ ಸೈಬರ್ ಅಪರಾಧಗಳನ್ನು ಇನ್ನು ರಾಷ್ಟ್ರೀಯ ಅಪರಾಧಗಳ ...
READ MORE
“13 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹೆಸರಿನ ಜತೆ ಭಾರತರತ್ನ, ಪದ್ಮ ಪ್ರಶಸ್ತಿ ಬಳಸುವಂತಿಲ್ಲ! ಸುದ್ಧಿಯಲ್ಲಿ ಏಕಿದೆ ? ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳೆನಿಸಿರುವ ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗಳು ಗೌರವಗಳೇ ಹೊರತು ಬಿರುದುಗಳಲ್ಲ. ಹಾಗಾಗಿ ಹೆಸರಿನ ಜತೆ ಅವುಗಳನ್ನು ಬಳಸುವಂತಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಒಂದು ವೇಳೆ ...
READ MORE
“15 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಂಪ್ರದಾಯಿಕ ಕುಶಲತೆ ಸಂರಕ್ಷಣೆಗೆ ಬದ್ಧ ಸುದ್ಧಿಯಲ್ಲಿ ಏಕಿದೆ ? ರಾಜ್ಯದ ಸಾಂಪ್ರದಾಯಿಕ ಕುಶಲತೆಯನ್ನು ಸಂರಕ್ಷಿಸಲು ಭೌಗೋಳಿಕ ಗುರುತುಗಳ ನೀತಿ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಎಫ್‌ಕೆಸಿಸಿ ಆಶ್ರಯದಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಮ್ಮಿಕೊಂಡಿದದ 'ಕರಡು ಭೌಗೋಳಿಕ ಗುರುತುಗಳ ನೀತಿ' ಕುರಿತಾದ ಪಾಲುದಾರರ ಸಮಾವೇಶವನ್ನು ಉದ್ಘಾಟಿಸಿದರು. 2018-19ನೇ ಸಾಲಿನ ...
READ MORE
“19 ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕೆಮ್ಮಣ್ಣುಗುಂಡಿ ಸುದ್ದಿಯಲ್ಲಿ ಏಕಿದೆ? ಕರ್ನಾಟಕದ ಊಟಿ ಎಂದೇ ಹೆಸರಾದ ಪ್ರವಾಸಿತಾಣ ಕೆಮ್ಮಣ್ಣುಗುಂಡಿ(ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ)ಯಲ್ಲಿ ಕಾಡುಪ್ರಾಣಿಗಳ ಕಾಟ ಹಾಗೂ ಪ್ರವಾಸಿಗರ ಸುರಕ್ಷತೆಗಾಗಿ ಚೈನ್‌ ಲಿಂಕ್‌ ಮೆಷ್‌ ಫೆನ್ಸಿಂಗ್‌ ಅಳವಡಿಸಲು ರಾಜ್ಯ ತೋಟಗಾರಿಕೆ ಇಲಾಖೆ ಮುಂದಾಗಿದೆ. ಕಡವೆಗಳು, ಕಾಡು ಕುರಿಗಳಿಂದ ಗಿರಿಧಾಮ ರಕ್ಷಿಸುವುದು ಹಾಗೂ ಗಾರ್ಡನ್‌ ...
READ MORE
“31st ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಎನ್​ಪಿಎಸ್ ಶೀಘ್ರ ರದ್ದು ಸುದ್ಧಿಯಲ್ಲಿ ಏಕಿದೆ ?ನೂತನ ಪಿಂಚಣಿ ಯೋಜನೆ (ಎನ್​ಪಿಎಸ್) ರದ್ದು ಮಾಡಬೇಕೆಂಬ ನೌಕರರ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ಈ ಸಂಬಂಧ ಶೀಘ್ರ ಕಡತ ಮಂಡಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ. ಹಿನ್ನಲೆ ಸರ್ಕಾರದ ವಿವಿಧ ಇಲಾಖೆಗಳಿಗೆ, ...
READ MORE
“20th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕೃಷಿ ಯಂತ್ರಧಾರ ಯೋಜನೆ ಸುದ್ಧಿಯಲ್ಲಿ ಏಕಿದೆ?ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ 'ತೋಟಗಾರಿಕೆಯಲ್ಲಿ ಯಾಂತ್ರೀಕರಣ' ಯೋಜನೆ ಪುನರಾರಂಭವಾಗುತ್ತಿದ್ದು, ಶೀಘ್ರದಲ್ಲೇ ರೈತರಿಗೆ ಸಹಾಯಧನ ಲಭ್ಯವಾಗಲಿದೆ. ಹಿನ್ನಲೆ ಕೂಲಿಕಾರ್ಮಿಕರ ಕೊರತೆ ನೀಗಿಸಲು ರಾಜ್ಯ ತೋಟಗಾರಿಕೆ ಇಲಾಖೆಯು 'ತೋಟಗಾರಿಕೆಯಲ್ಲಿ ಯಾಂತ್ರೀಕರಣ' ಯೋಜನೆಯನ್ನು ಜಾರಿಗೆ ತಂದಿತ್ತು. ರೈತರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ...
READ MORE
ಶಿಕ್ಷಣದಲ್ಲಿ ಪಾರದರ್ಶಕತೆ ಹಾಗೂ ಆಡಳಿತ ವ್ಯವಸ್ಥೆಯ ವೇಗ ಹೆಚ್ಚಿಸಲು ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ‘ಡಿಜಿಟಲೀಕರಣ’ಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಪದವಿ ಕಾಲೇಜು, ಸ್ನಾತಕೋತ್ತರ ಕೇಂದ್ರ, ವಿಶ್ವವಿದ್ಯಾಲಯಗಳು, ಸ್ವಾಯತ್ತ ವಿಶ್ವವಿದ್ಯಾಲಯಗಳು, ಪಾಲಿಟೆಕ್ನಿಕ್ ಕಾಲೇಜುಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಮುಖ್ಯವಾಗಿ ಎಜುಕೇಷನ್ ...
READ MORE
“30th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ವಾಹನ ಸೌಲಭ್ಯ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿಶೇಷಚೇತನ ಮತದಾರರಿಗೆ ವಾಹನ ವ್ಯವಸ್ಥೆ ಕಲ್ಪಿಸುವುದಕ್ಕೆ ಚುನಾವಣಾ ಆಯೋಗ ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂಥ ಸುಧಾರಣಾ ಕ್ರಮ ...
READ MORE
“21st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಚಾಲ್ತಿ ಖಾತೆ ಕೊರತೆ ಸುದ್ದಿಯಲ್ಲಿ ಏಕಿದೆ? ಭಾರತದ ದೇಶೀಯ ಒಟ್ಟು ಉತ್ಪನ್ನ (ಜಿಡಿಪಿ)ದಲ್ಲಿ ಚಾಲ್ತಿ ಖಾತೆ ಕೊರತೆ ಪ್ರಮಾಣ ಶೇ. 5ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಚಾಲ್ತಿ ಖಾತೆ ಕೊರತೆಗೆ ಕಾರಣಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ, ಡಾಲರ್ ಎದುರು ರೂಪಾಯಿ ಹಿನ್ನಡೆ ...
READ MORE
“15 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
7th & 8th July ಜುಲೈ 2018 ಕನ್ನಡ ಪ್ರಚಲಿತ
“13 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“15 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“19 ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“31st ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“20th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಉನ್ನತ ಶಿಕ್ಷಣ ಇನ್ನು ಡಿಜಿಟಲೀಕರಣ
“30th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“21st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *