“3 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಹೊಸ ವಾಹನ ನೋಂದಣಿ 2 ವರ್ಷ ಸ್ಥಗಿತ

1.

ಸುದ್ಧಿಯಲ್ಲಿ ಏಕಿದೆ ? ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಪರಿಹಾರದ ಹಿನ್ನೆಲೆಯಲ್ಲಿ ಮುಂದಿನ ಎರಡು ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸುವ ಚಿಂತನೆ ನಡೆದಿದೆ.

ನಿರ್ಧಾರಕ್ಕೆ ಕಾರಣಗಳು

 • ಬೆಂಗಳೂರು ಮಹಾನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಳದಿಂದ ಮಾಲಿನ್ಯ ಪ್ರಮಾಣ ಮಿತಿ ಮೀರಿದೆ. ಜನರು ನಾನಾ ಆರೋಗ್ಯ ಹಾಗೂ ಇತರೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಈಗಲೇ ಕಡಿವಾಣ ಹಾಕದಿದ್ದರೆ ದಿಲ್ಲಿಯ ಮಾಲಿನ್ಯವನ್ನು ಮೀರಿಸಲಿದೆ.
 • ಮೊದಲಿಗೆ ಬೆಂಗಳೂರಿಗಷ್ಟೇ ಸೀಮಿತಗೊಳಿಸಿ, ಇಲ್ಲಿನ ಪ್ರತಿಕ್ರಿಯೆ ಆಧರಿಸಿ ರಾಜ್ಯದ ಇತರೆಡೆಗೆ ವಿಸ್ತರಿಸುವ ಬಗ್ಗೆಯೂ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು
 • ಪೆಟ್ರೋಲ್‌ ಹಾಗೂ ಡೀಸೆಲ್‌ ವಾಹನಗಳ ಬದಲಿಗೆ ಎಲೆಕ್ಟ್ರಿಕ್‌ ವಾಹನಗಳಿಗೆ ಆದ್ಯತೆ ನೀಡಬೇಕಿದೆ. ನಗರದಲ್ಲಿ ಬಿಎಂಟಿಸಿ ವತಿಯಿಂದ ಎಲೆಕ್ಟ್ರಿಕ್‌ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿಸಲು ಕ್ರಮ ಕೈಗೊಳ್ಳಲಾಗುವುದು

ವಾಯು ಮಾಲಿನ್ಯದ ಪರಿಣಾಮಗಳು ಯಾವುವು?

 • ವಾಯು ಮಾಲಿನ್ಯದ ಕೆಲವು ಪ್ರಮುಖ ಪರಿಣಾಮಗಳು ಕೆಳಕಂಡಂತಿವೆ.

ಆಮ್ಲೀಕರಣ:

 • ವಾಯು ಮಾಲಿನ್ಯಕಾರಕಗಳನ್ನು ಒಳಗೊಂಡಿರುವ ರಾಸಾಯನಿಕ ಪ್ರತಿಕ್ರಿಯೆಗಳು ಆಮ್ಲೀಯ ಸಂಯುಕ್ತಗಳನ್ನು ರಚಿಸಬಹುದು, ಇದು ಸಸ್ಯವರ್ಗ ಮತ್ತು ಕಟ್ಟಡಗಳಿಗೆ ಹಾನಿಯನ್ನುಂಟುಮಾಡುತ್ತದೆ. ಕೆಲವೊಮ್ಮೆ, ಗಾಳಿಯ ಮಾಲಿನ್ಯಕಾರಕ, ಉದಾಹರಣೆಗೆ ಸಲ್ಫ್ಯೂರಿಕ್ ಆಸಿಡ್ ಮೋಡಗಳು ರೂಪಿಸುವ ನೀರಿನ ಹನಿಗಳು ಸಂಯೋಜಿಸುತ್ತದೆ, ನೀರಿನ ಹನಿಗಳು ಆಮ್ಲೀಯ ಆಗಿ, ಆಮ್ಲ ಮಳೆ ರೂಪಿಸುವ.
 • ಆಮ್ಲ ಮಳೆ ಒಂದು ಪ್ರದೇಶದ ಮೇಲೆ ಬೀಳಿದಾಗ, ಅದು ಮರಗಳು ಮತ್ತು ಹಾನಿಕಾರಕ ಪ್ರಾಣಿಗಳನ್ನು, ಮೀನುಗಳನ್ನು ಮತ್ತು ಇತರ ವನ್ಯಜೀವಿಗಳನ್ನು ಕೊಲ್ಲುತ್ತದೆ.
 • ಆಸಿಡ್ ಮಳೆ ಸಸ್ಯಗಳ ಎಲೆಗಳನ್ನು ನಾಶಮಾಡುತ್ತದೆ.
 • ಆಮ್ಲ ಮಳೆ ಮಣ್ಣಿನಲ್ಲಿ ನುಸುಳಿದಾಗ, ಇದು ಮಣ್ಣಿನ ರಸಾಯನಶಾಸ್ತ್ರವನ್ನು ಬದಲಾಯಿಸುತ್ತದೆ, ಇದು ಮಣ್ಣಿನ ಮೇಲೆ ವಾಸಿಸುವ ಅಥವಾ ಪೌಷ್ಟಿಕಾಂಶದ ಮೇಲೆ ಅವಲಂಬಿತವಾಗಿರುವ ಅನೇಕ ಜೀವಿಗಳಿಗೆ ಅನರ್ಹವಾಗುತ್ತದೆ.
 • ಆಸಿಡ್ ಮಳೆ ಮಳೆನೀರು ಹರಿಯುವ ಸರೋವರಗಳು ಮತ್ತು ಹೊಳೆಗಳ ರಸಾಯನಶಾಸ್ತ್ರವನ್ನು ಕೂಡಾ ಬದಲಾಯಿಸುತ್ತದೆ, ಮೀನು ಮತ್ತು ಇತರ ಜಲವಾಸಿ ಜೀವನವನ್ನು ಹಾನಿಗೊಳಿಸುತ್ತದೆ.

ಯುಟ್ರೊಫಿಕೇಶನ್:

 • ನದಿಗಳು ಮತ್ತು ಮಣ್ಣುಗಳ ಮೇಲೆ ಕೆಲವು ಮಾಲಿನ್ಯಕಾರಕಗಳಲ್ಲಿ ಮಳೆ ಬೀಸುವ ಮತ್ತು ಸಾರಜನಕವನ್ನು ಇಡಬಹುದು. ಇದು ಮಣ್ಣಿನ ಮತ್ತು ಜಲಸಸ್ಯಗಳಲ್ಲಿನ ಪೌಷ್ಟಿಕಾಂಶಗಳನ್ನು ಪ್ರತಿಕೂಲವಾಗಿ ಪರಿಣಾಮ ಬೀರುತ್ತದೆ. ಇದು ಸರೋವರಗಳು ಮತ್ತು ಜಲಸಸ್ಯಗಳಲ್ಲಿನ ಪಾಚಿ ಬೆಳವಣಿಗೆಗೆ ಕಾರಣವಾಗಬಹುದು, ಮತ್ತು ಇತರ ಜೀವಿಯ ಜೀವಿಗಳಿಗೆ ಹಾನಿಯುಂಟುಮಾಡುತ್ತದೆ.

ನೆಲಮಟ್ಟದ ಓಝೋನ್:

 • ವಾಯು ಮಾಲಿನ್ಯಕಾರಕಗಳನ್ನು ಒಳಗೊಂಡಿರುವ ರಾಸಾಯನಿಕ ಪ್ರತಿಕ್ರಿಯೆಗಳು ವಿಷಕಾರಿ ಅನಿಲ ಓಝೋನ್ (O3) ಅನ್ನು ರಚಿಸುತ್ತವೆ. ಗ್ಯಾಸ್ ಓಝೋನ್ ಜನರ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು ಮತ್ತು ಸಸ್ಯವರ್ಗದ ವಿಧಗಳನ್ನು ಮತ್ತು ಕೆಲವು ಪ್ರಾಣಿಯನ್ನು ಹಾನಿಗೊಳಿಸುತ್ತದೆ.

ಪರ್ಟಿಕ್ಯುಲೇಟ್ ಮ್ಯಾಟರ್

 • ವಾಯು ಮಾಲಿನ್ಯಕಾರಕಗಳು ನಮ್ಮ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾದ ಕಣಗಳ ರೂಪದಲ್ಲಿರಬಹುದು. ಪರಿಣಾಮದ ಮಟ್ಟ ಸಾಮಾನ್ಯವಾಗಿ ಒಡ್ಡಿಕೊಳ್ಳುವ ಸಮಯವನ್ನು ಅವಲಂಬಿಸಿರುತ್ತದೆ, ಜೊತೆಗೆ ರಾಸಾಯನಿಕಗಳು ಮತ್ತು ಕಣಗಳ ರೀತಿಯ ಮತ್ತು ಸಾಂದ್ರತೆಯು ಅವಲಂಬಿತವಾಗಿರುತ್ತದೆ.
 • ಅಲ್ಪಾವಧಿ ಪರಿಣಾಮಗಳು ಕಣ್ಣು, ಮೂಗು ಮತ್ತು ಗಂಟಲು, ಮತ್ತು ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದಂತಹ ಮೇಲ್ಭಾಗದ ಉಸಿರಾಟದ ಸೋಂಕುಗಳಿಗೆ ಕಿರಿಕಿರಿಯನ್ನುಂಟುಮಾಡುತ್ತವೆ. ಇತರರು ತಲೆನೋವು, ವಾಕರಿಕೆ ಮತ್ತು ಅಲರ್ಜಿಯ ಪ್ರತಿಕ್ರಿಯೆಗಳು.
 • ಅಲ್ಪಾವಧಿಯ ವಾಯುಮಾಲಿನ್ಯವು ಆಸ್ತಮಾ ಮತ್ತು ಎಮ್ಪಿಸೆಮಾದೊಂದಿಗೆ ಇರುವ ವ್ಯಕ್ತಿಗಳ ವೈದ್ಯಕೀಯ ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತದೆ. ದೀರ್ಘಕಾಲೀನ ಆರೋಗ್ಯ ಪರಿಣಾಮಗಳು ದೀರ್ಘಕಾಲದ ಉಸಿರಾಟದ ಕಾಯಿಲೆ, ಶ್ವಾಸಕೋಶದ ಕ್ಯಾನ್ಸರ್, ಹೃದಯ ಕಾಯಿಲೆ, ಮತ್ತು ಮೆದುಳಿಗೆ, ನರಗಳ, ಯಕೃತ್ತು, ಅಥವಾ ಮೂತ್ರಪಿಂಡಗಳಿಗೆ ಸಹ ಹಾನಿಯಾಗುತ್ತದೆ.
 • ವಾಯುಮಾಲಿನ್ಯಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಬೆಳೆಯುತ್ತಿರುವ ಮಕ್ಕಳ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಯಸ್ಸಾದವರಲ್ಲಿ ವೈದ್ಯಕೀಯ ಪರಿಸ್ಥಿತಿಯನ್ನು ಉಲ್ಬಣಗೊಳಿಸಬಹುದು ಅಥವಾ ಸಂಕೀರ್ಣಗೊಳಿಸಬಹುದು.

ಪಟಾಕಿ ಸಿಡಿಸೋಕೆ ಟೈಂ ಫಿಕ್ಸ್

2.

ಸುದ್ಧಿಯಲ್ಲಿ ಏಕಿದೆ ? ದೀಪಾವಳಿ ಹಬ್ಬದಂದು ಮನಸೋ ಇಚ್ಛೆಯಾಗಿ ರಾತ್ರಿ-ಹಗಲು ಎನ್ನದೆ ಪಟಾಕಿ ಸಿಡಿಸಬೇಕೆಂದುಕೊಂಡವರಿಗೆ ಪ್ರಸ್ತುತ ವರ್ಷ ಅಂಕುಶ ಹಾಕಲಾಗಿದ್ದು, ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ. ತಪ್ಪಿದರೆಕಾನೂನು ಉಲ್ಲಂಘನೆ ಮೇರೆಗೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಹಿನ್ನೆಲೆ

 • ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಕ್ರಮ ಕೈಗೊಂಡಿದ್ದು, ಅಧಿಕೃತ ಪರವಾನಿಗೆ ಪಡೆದವರು ಮಾತ್ರ ಪಟಾಕಿಗಳನ್ನು ಮಾರಾಟ ಮಾಡಬೇಕು.
 • ಸರಣಿ ಸ್ಫೋಟಕ ಪಟಾಕಿಗಳ ತಯಾರಿಕೆ, ಮಾರಾಟ ಹಾಗೂ ಬಳಕೆ ಮಾಡಬಾರದೆಂದು ಸಹ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
 1. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಪಟಾಕಿ ಸಿಡಿಸಿದ ನಂತರದ ಘನತ್ಯಾಜ್ಯ ವಸ್ತುಗಳಿಂದ ಮಾಲಿನ್ಯ ಉಂಟಾಗುವುದರಿಂದ , ಸರಣಿ ಸ್ಫೋಟಕ ಪಟಾಕಿಗಳನ್ನು ( Joined firecrackers (series crackers or laris)ತಯಾರಿಸುವುದು, ಮಾರಾಟ ಮಾಡುವುದು ಮತ್ತು ಬಳಸುವುದು ನಿಷೇಧ.
 2. ಸಿಡಿಮದ್ದು ಪಟಾಕಿಗಳನ್ನು ಅಧಿಕೃತವಾಗಿ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಮಾರಾಟ ಮಾಡುವುದು ಮತ್ತು ಅಧಿಕೃತವಾಗಿ ಪರವಾನಗಿ ಪಡೆದವರು ಸಿಡಿಮದ್ದು ಪಟಾಕಿಗಳನ್ನು ಈ ಆದೇಶಾನುಸಾರ ಮಾತ್ರ ಮಾರಾಟ ಮಾಡುವುದು.
 3. ವಾರ್ತಾ ಮತ್ತು ಪ್ರಚಾರ ಇಲಾಖೆ ಮತ್ತು ಜಿಲ್ಲಾಡಳಿತದ ಎಲ್ಲಾ ಇಲಾಖೆಗಳು ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕರಲ್ಲಿ ಪಟಾಕಿ ಸಿಡಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡುವುದು.
 4. ದೀಪಾವಳಿ ಹಬ್ಬದ ಸಂಬಂಧ ದಿನಾಂಕ 5 ನವೆಂಬರ್ ನಿಂದ 8 ನವೆಂಬರ್ 2018ರವರೆಗೆ ಪಟಾಕಿಗಳನ್ನು ರಾತ್ರಿ 8ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಸಿಡಿಸುವುದು.
 5. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು 14 ದಿನಗಳ ಕಾಲ ಅಂದರೆ ದೀಪಾವಳಿ ಹಬ್ಬ ಆರಂಭವಾಗುವ ಮೊದಲ 7 ದಿನ ಮತ್ತು ಹಬ್ಬರದ ನಂತರದ ಏಳು ದಿನ ಪಟಾಕಿ ಸಿಡಿಸುವುದರ ಬಗ್ಗೆ ಮೇಲ್ವಿಚಾರಣೆ ಮಾಡುವುದು.
 6. ಎಲ್ಲ ಮಹಾನಗರ ಪಾಲಿಕೆಗಳು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಸಭೆ, ಪುರ ಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಪಟಾಕಿಗಳನ್ನು ಸಾಮೂಹಿಕವಾಗಿ ಸಿಡಿಸುವುದರ ಬಗ್ಗೆ ಪರಿಶೀಲಿಸುವುದು
 7. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯವರು ಸರ್ವೋಚ್ಛ ನ್ಯಾಯಾಲಯದ ಆದೇಶ ಪಾಲಿಸುವುದಕ್ಕೆ ಸೂಕ್ತ ಸಹಕಾರ ನೀಡುವುದು
 8. ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಪಟಾಕಿ ಸಿಡಿತ ಪ್ರಕ್ರಿಯೆ ನಿಗದಿತ ಅವಧಿಯಲ್ಲಿ ನಡೆಯುವಂತೆ ನೋಡಿಕೊಳ್ಳುವುದು.

59 ನಿಮಿಷದಲ್ಲಿ 1 ಕೋಟಿ ರೂ. ಸಾಲ

3.

ಸುದ್ಧಿಯಲ್ಲಿ ಏಕಿದೆ ? ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ (ಎಂಎಸ್​ಎಂಇ) ಉತ್ತೇಜನ ನೀಡಲು ನರೇಂದ್ರ ಮೋದಿ ಸರ್ಕಾರ 59 ನಿಮಿಷದಲ್ಲಿ 1 ಕೋಟಿ ರೂ.ವರೆಗೆ ಸಾಲ ನೀಡುವ ಯೋಜನೆಯನ್ನು ಘೋಷಿಸಿದೆ.

 • ವಿಶ್ವಬ್ಯಾಂಕ್​ನ ಉದ್ಯಮ ಸ್ನೇಹಿ ರಾಷ್ಟ್ರಗಳ ರ್ಯಾಂಕಿಂಗ್​ನಲ್ಲಿ ಭಾರತ 2014ರಲ್ಲಿ 142ನೇ ಸ್ಥಾನದಲ್ಲಿತ್ತು. ಕಳೆದ 4 ವರ್ಷಗಳಲ್ಲಿ 77ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಅತಿ ಶೀಘ್ರದಲ್ಲಿ ಅಗ್ರ 50 ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 • 100 ದಿನ, 100 ಜಿಲ್ಲೆಗಳು: ದೇಶಾದ್ಯಂತ ಸುಮಾರು 3 ಕೋಟಿ ಎಂಎಸ್​ಎಂಇ ಉದ್ದಿಮೆಗಳಿದ್ದು, 11.1 ಕೋಟಿ ಉದ್ಯೋಗಿಗಳಿದ್ದಾರೆ. ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ)ಕ್ಕೆ ಶೇ. 30 ಕೊಡುಗೆ ಈ ಕ್ಷೇತ್ರ ನೀಡುತ್ತಿದೆ.
 • ಇಂಥ ಉದ್ದಿಮೆಗಳಿಗೆ ಮತ್ತಷ್ಟು ಬಲ ತುಂಬಲು ಶೀಘ್ರ ಸಾಲ ನೀಡುವ ಯೋಜನೆಯನ್ನು ಒಟ್ಟು 100 ದಿನಗಳವರೆಗೆ 100 ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುವುದು.

ತೆಗೆದುಕೊಂಡ ನಿರ್ಣಯಗಳು

 • ಜಿಎಸ್​ಟಿ ನೋಂದಾಯಿತ ಉದ್ದಿಮೆಗಳಿಗೆ ಹೊಸ ಸಾಲ ಅಥವಾ 1 ಕೋಟಿ ರೂ.ವರೆಗಿನ ಹೆಚ್ಚುವರಿ ಸಾಲಕ್ಕೆ ಶೇ. 2 ಬಡ್ಡಿ ರಿಯಾಯಿತಿ
 • ಆಮದು ಉದ್ದಿಮೆದಾರರಿಗೆ ಸಾಗಣೆಗೂ ಮುನ್ನ ಮತ್ತು ಸಾಗಣೆ ನಂತರದ ಹೂಡಿಕೆಗೆ ನೀಡುವ ಸಾಲಕ್ಕೆ ಶೇ. 3-5 ಬಡ್ಡಿ ರಿಯಾಯಿತಿ
 • 500 ಕೋಟಿ ರೂ.ಗಿಂತ ಅಧಿಕ ವಹಿವಾಟು ಇರುವ ಉದ್ದಿಮೆಗಳು ಟ್ರೇಡ್ ರಿಸೀವೆಬಲ್ಸ್, ಡಿಸ್ಕೌಂಟಿಂಗ್ ವ್ಯವಸ್ಥೆ (ಟಿಆರ್​ಇಡಿಎಸ್ ವೇದಿಕೆ)ಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ
 • ಉದ್ದಿಮೆಗಳಿಗೆ ಪರಿಸರ ಸಚಿವಾಲಯದ ನಿರಾಕ್ಷೇಪಣ ಪತ್ರ ಪಡೆಯುವ ಪ್ರಕ್ರಿಯೆ ಮತ್ತಷ್ಟು ಸಲೀಸು
 • ಉದ್ದಿಮೆಗಳಿಗೆ ಸಾಲ ಯೋಜನೆ ಬಗ್ಗೆ ಜಾಗೃತಿಗಾಗಿ ಕೇಂದ್ರ ಸಚಿವರಿಂದ ದೇಶದ ವಿವಿಧ ಜಿಲ್ಲೆಗಳಿಗೆ ಭೇಟಿ, ಸಭೆ.

ನಿರ್ಧಾರಕ್ಕೆ ಕಾರಣಗಳು

 • ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಕ್ಷೇತ್ರ ವಿಶಾಲವಾಗಿದೆ. ದೇಶದಲ್ಲಿ 3 ಕೋಟಿಗಿಂತ ಅಧಿಕ MSME ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 11.1 ಕೋಟಿಗೂ ಅಧಿಕ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದೆ.
 • ಈ ವಲಯ ದೇಶದ ಜಿಡಿಪಿಗೆ ಶೇ.30ರಷ್ಟು ಕೊಡುಗೆ ನೀಡುತ್ತಿದೆ. ಉತ್ಪಾದನಾ ವಲಯದಲ್ಲಿ ಶೇ.45ರಷ್ಟು ಪಾತ್ರವಹಿಸಿಸಿದ್ದು, ಶೇ.40ರಷ್ಟು ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.
 • ಸಮಯಕ್ಕೆ ಸರಿಯಾಗಿ ಬಂಡವಾಳ ಸಿಗದೆ ಹಲವಾರು ಉದ್ದಿಮೆಗಳು ಪರದಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವುದರಿಂದ ನೂತನ ಯೋಜನೆಯನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ನೌಕಾಪಡೆಗೆ ಮಹಿಳಾ ನಾವಿಕರ ನೇಮಕ

ಸುದ್ಧಿಯಲ್ಲಿ ಏಕಿದೆ ? ಇದುವರೆಗೂ ನೌಕಾಪಡೆಯಲ್ಲಿ ಆಫಿಸರ್‌ ಕೇಡರ್‌ ಹುದ್ದೆಗಳಿಗಷ್ಟೇ ಮಹಿಳೆಯರ ನೇಮಕಾತಿ ಸೀಮಿತವಾಗಿತ್ತು. ಆದರೆ ಇನ್ಮುಂದೆ ಅಗಾಧ ದೈಹಿಕ ಹಾಗೂ ಮಾನಸಿಕ ಸದೃಢತೆ ಅಪೇಕ್ಷಿಸುವ ನಾವಿಕ ಶ್ರೇಣಿಯ ಹುದ್ದೆಗೂ ಮಹಿಳೆಯರ ನೇಮಕವಾಗಲಿದೆ.

 • ಸೇನೆಯಲ್ಲಿ ಸೈನಿಕ ಹುದ್ದೆಗೆ ನೌಕಾಪಡೆಯಲ್ಲಿ ಸಮನಾದುದು ನಾವಿಕ ಹುದ್ದೆ. ಪ್ರತಿಕೂಲ ಸನ್ನಿವೇಶದಲ್ಲಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುವವರು ಇವರೇ. ಹೀಗಾಗಿ ಮಹಿಳಾ ನಾವಿಕರ ನೇಮಕ ಮಹತ್ವದ ನಿರ್ಧಾರವಾಗಿದೆ.
 • ಇತ್ತೀಚೆಗೆಷ್ಟೇ ಆರು ಮಹಿಳಾ ನಾವಿಕರು ಐಎನ್‌ಎಸ್‌ವಿ ತಾರಿಣಿ ನೌಕೆಯಲ್ಲಿ 254 ದಿನಗಳ ಕಾಲ ವಿಶ್ವ ಪರ್ಯಟನೆ ಮಾಡಿ ಗಮನ ಸೆಳೆದಿದ್ದರು.
 • ಭಾರತೀಯ ವಾಯುಪಡೆ ಅಪಾರ ತಾಂತ್ರಿಕ ನೈಪುಣ್ಯ ಬಯಸುವ ಯುದ್ಧ ವಿಮಾನಗಳನ್ನು ಮುನ್ನಡೆಸಲು ಮಹಿಳಾ ಪೈಲಟ್‌ಗಳನ್ನು ನೇಮಿಸಿಕೊಂಡು ಮೇಲ್ಪಂಕ್ತಿ ಹಾಕಿಕೊಟ್ಟಿದೆ.
 • ಕಳೆದ ಮಾರ್ಚ್‌ನಲ್ಲಿ ಭೂಸೇನೆಯು ಕಾರ್ಫ್ಸ್‌ ಆಫ್‌ ಮಿಲಿಟರಿ ಪೊಲೀಸ್‌ ಹುದ್ದೆಗೆ ಮಹಿಳೆಯರನ್ನು ನೇಮಿಸಿಕೊಳ್ಳುವ ನಿರ್ಧಾರ ಪ್ರಕಟಿಸಿತ್ತು. ಈಗ ನೌಕಾಪಡೆ ನಾವಿಕ ಹುದ್ದೆಗೆ ಮಹಿಳೆಯರನ್ನು ನೇಮಿಸಿಕೊಳ್ಳಲು ಮುಂದಾಗಿದೆ.

ಪಾಕ್‌ಗೆ ಚೀನಾ ನೆರವು

5.

ಸುದ್ಧಿಯಲ್ಲಿ ಏಕಿದೆ ? ಪಾಕಿಸ್ತಾನ ತೀವ್ರ ಆರ್ಥಿಕ ಸಂಕಷ್ಟು ಎದುರಿಸುತ್ತಿದ್ದು, ಅದರ ವಿದೇಶೀ ಮೀಸಲು ನಿಧಿ ಶೇ 42ರಷ್ಟು ಕುಸಿದಿದೆ. ಪ್ರಸ್ತುತ 800 ಕೋಟಿ ಡಾಲರ್‌ಗಳಷ್ಟು ಮಾತ್ರವಿದೆ. ಇದು ಎರಡು ತಿಂಗಳ ಆಮದು ವೆಚ್ಚಕ್ಕೂ ಸಾಲದು. ಹೀಗಾಗಿ ನೆರವು ಕೋರಿ ಚೀನಾಗೆ ಮೊರೆ ಹೋಗಿದೆ.

 • ಪಾಕಿಸ್ತಾನದ ವಿದೇಶೀ ಮೀಸಲು ನಿಧಿ ಶೇ 42ರಷ್ಟು ಕುಸಿದಿದ್ದು, ಪ್ರಸ್ತುತ 800 ಕೋಟಿ ಡಾಲರ್‌ಗಳಷ್ಟು ಮಾತ್ರವಿದೆ. ಇದು ಎರಡು ತಿಂಗಳ ಆಮದು ವೆಚ್ಚಕ್ಕೂ ಸಾಲದು.
 • ಪಾಕಿಸ್ತಾನ ಕಳೆದ ತಿಂಗಳು ಸೌದಿ ಅರೇಬಿಯಾದಿಂದ 600 ಕೋಟಿ ಡಾಲರ್‌ ರಕ್ಷಣಾ ಪ್ಯಾಕೇಜ್‌ ಸ್ವೀಕರಿಸಿತ್ತು. ಆದರೆ ಇದು ಸಾಕಾಗದ ಹಿನ್ನೆಲೆಯಲ್ಲಿ ಪಾವತಿ ಬಿಕ್ಕಟ್ಟು ನಿಭಾಯಿಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್‌) ಪಾರುಗಾಣಿಕೆ ಹಣ ಪಡೆಯಲು ಯೋಚಿಸುತ್ತಿದೆ.
 • 1980ರಿಂದೀಚೆಗೆ ಪಾಕಿಸ್ತಾನ ಈ ರೀತಿ ವಿದೇಶಗಳಿಂದ 13ನೇ ಬಾರಿಗೆ ಪಾರುಗಾಣಿಕೆ ಪ್ಯಾಕೇಜ್‌ ಪಡೆಯುತ್ತಿದೆ.
 • ಚೀನಾ ಪಾಕಿಸ್ತಾನದ ಅತ್ಯಂತ ಆಪ್ತ ಮಿತ್ರನಾಗಿದ್ದರೂ, ಹಿಂದಿನ ಸರಕಾರ ಸಹಿ ಹಾಕಿದ್ದ 6000 ಕೋಟಿ ಡಾಲರ್‌ ಮೌಲ್ಯದ ಮಹತ್ವಾಕಾಂಕ್ಷಿ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್‌ (ಸಿಪೆಕ್‌) ಯೋಜನೆಯನ್ನು ಮರುಪರಿಶೀಲಿಸುವಂತೆ ಇಮ್ರಾನ್ ಖಾನ್ ಕೋರಿದ್ದಾರೆ.
 • ಕೇವಲ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡದೆ, ಸಾಮಾಜಿಕ ಪ್ರಗತಿಗೂ ಈ ಯೋಜನೆಯಿಂದ ನೆರವಾಗಬೇಕು ಎಂದು ಪಾಕಿಸ್ತಾನ ಬಯಸುತ್ತಿದೆ.
 • ‘ಸಿಪೆಕ್ ಒಪ್ಪಂದದಡಿ ಯೋಜನೆಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆಯೇ ಹೊರತು ಕಡಿಮೆಯಾಗದು

ಐಎಮ್ಎಫ್ ಸಾಲ

 • ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯನ್ನು ಪುನಃಸ್ಥಾಪಿಸಲು ಹೊಂದಾಣಿಕೆಯ ನೀತಿಗಳನ್ನು ಅನುಷ್ಠಾನಗೊಳಿಸುವಾಗ ಐಎಮ್ಎಫ್ ದೇಶಗಳಿಗೆ ಸ್ಥಿರತೆಯನ್ನುಹೊಂದಲು ಹಣಕಾಸಿನ ಬೆಂಬಲವನ್ನು ಒದಗಿಸುವ ಮೂಲಕ ಬಿಕ್ಕಟ್ಟುಗಳಿಂದ ಪ್ರಭಾವಿತವಾಗಿರುವ ದೇಶಗಳಿಗೆ ಸಹಾಯ ಮಾಡುತ್ತದೆ. ಬಿಕ್ಕಟ್ಟಿನ ವಿರುದ್ಧ ತಡೆಯಲು ಮತ್ತು ವಿಮೆ ಮಾಡಲು ಸಹಾಯ ಮಾಡುವ ಮುನ್ನೆಚ್ಚರಿಕೆಯ ಹಣಕಾಸು ಸಹ ಇದು ಒದಗಿಸುತ್ತದೆ. ಐಎಮ್ಎಫ್ನ ಸಾಲ ನೀಡುವ  ದೇಶಗಳ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ನಿರಂತರವಾಗಿ ಪರಿಷ್ಕರಿಸಲ್ಪಡುತ್ತದೆ.
Related Posts
ಕಷ್ಠಕರ ಪರಿಸ್ಥತಿಯಲ್ಲಿರುವ ಮಹಿಳೆಯರಿಗಾಗಿ ಯೋಜನೆ ಇದು ಕೇಂದ್ರ ವಲಯದ ಯೋಜನೆಯಾಗಿದ್ದು ಕಷ್ಠಕರ ಪರಿಸ್ಥಿತಿಯಲ್ಲಿರುವ ಅಂದರೆ ಪರಿತ್ಯಕ್ತೆಯರು, ವಿಧವೆಯರು , ಜೈಲಿನಿಂದ ಬಿಡುಗಡೆ ಹೊಂದಿದ ಮಹಿಳಾ ಖೈದಿಗಳು ಮತ್ತು ಕುಟುಂಬದ ಸಹಾಯವಿಲ್ಲದವರು, ಪ್ರಕೃತಿ ವಿಕೋಪಕ್ಕೆ ಸಿಕ್ಕಿ ಒಬ್ಬಂಟಿಗರಾದ ಮಹಿಳೆಯರು , ಅನೈತಿಕ ಸಾಗಣೆಗೆ ಒಳಗಾಗಿ ...
READ MORE
“29th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮಗುವಿಗೊಂದು ಮರ, ಶಾಲೆಗೊಂದು ವನ ಸುದ್ದಿಯಲ್ಲಿ ಏಕಿದೆ? ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 'ಮಗುವಿಗೊಂದು ಮರ-ಶಾಲೆಗೊಂದು ವನ' ಕಾರ್ಯಕ್ರಮ ಜಾರಿಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಜೂನ್‌ 5ರಂದು ವಿಶ್ವ ಪರಿಸರ ದಿನ ಆಚರಣೆ ಮೂಲಕ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.  ವಿಶ್ವ ...
READ MORE
4th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಚಳಿಗಾಲದ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಸರಕಾರವು ಚಳಿಗಾಲದಲ್ಲಿ ಕೊಯ್ಲಿಗೆ ಬರುವ ಅಥವಾ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಗೋಧಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) 105 ರೂ. ಹೆಚ್ಚಿಸಿದ್ದು, ಪ್ರತಿ ಕ್ವಿಂಟಾಲ್‌ಗೆ 1,840 ರೂ.ಗೆ ಏರಿಕೆಯಾಗಿದೆ. ...
READ MORE
“23rd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಿಶನ್‌ಗಂಗಾ ಸುದ್ದಿಯಲ್ಲಿ ಏಕಿದೆ? ಕಾಶ್ಮೀರದಲ್ಲಿ ಕಿಶನ್‌ಗಂಗಾ ಜಲವಿದ್ಯುತ್‌ ಯೋಜನೆ ಉದ್ಘಾಟಿಸುವ ಮೂಲಕ ಭಾರತವು ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಪಾಕಿಸ್ತಾನವು ವಿಶ್ವಬ್ಯಾಂಕ್‌ಗೆ ದೂರು ಸಲ್ಲಿಸಿದೆ. ಪಾಕಿಸ್ತಾನಕ್ಕೆ ಹರಿಯುವ ನದಿಗೆ ಅಡ್ಡಲಾಗಿ ಕಟ್ಟುವ ಅಣೆಕಟ್ಟೆಯಿಂದಾಗಿ ನೀರಿನ ಹರಿವಿಗೆ ಅಡ್ಡಿಯಾಗುತ್ತದೆ ಎಂಬ ಪಾಕಿಸ್ತಾನದ ಪ್ರತಿಭಟನೆ ನಡುವೆಯೇ ...
READ MORE
“18 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ತ್ರಿವೇಣಿಸಂಗಮದಲ್ಲಿ ಕುಂಭಮೇಳ ಸುದ್ಧಿಯಲ್ಲಿ ಏಕಿದೆ ?ದಕ್ಷಿಣದ ಪವಿತ್ರ ನದಿಗಳಾದ ಕಾವೇರಿ, ಕಪಿಲಾ,ಸ್ಪಟಿಕ ಸಂಗಮದ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದ ಶ್ರೀ ಕ್ಷೇತ್ರದಲ್ಲಿ ಮೂರು ದಿನಗಳ 11ನೇ ಕುಂಭಮೇಳಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ದೊರೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಜನರು ಮೊದಲ ದಿನವೇ ತ್ರಿವೇಣಿ ಸಂಗಮದಲ್ಲಿ ...
READ MORE
“3rd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸುಳ್ಳು ಸುದ್ದಿ ಪ್ರಕಟಿಸಿದರೆ ಪತ್ರಕರ್ತರ ಮಾನ್ಯತೆ ರದ್ದು: ಕೇಂದ್ರ ಸುಳ್ಳು ಸುದ್ದಿ ಸೃಷ್ಟಿಸುವ ಮತ್ತು ಹರಡುವ ಪತ್ರಕರ್ತರ ಮಾನ್ಯತೆ ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಸುಳ್ಳು ಸುದ್ದಿ ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ ಆರೋಪ ಸಾಬೀತಾದರೆ, ಮೊದಲ ತಪ್ಪಿಗೆ ಆರು ತಿಂಗಳ ಮಟ್ಟಿಗೆ ...
READ MORE
10th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಮಹಿಳಾ ಸುರಕ್ಷತೆಗೆ ವಿಶೇಷ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ 8 ಪ್ರಮುಖ ನಗರಗಳಲ್ಲಿ ನಾರಿಯರ ಸುರಕ್ಷತೆಗಾಗಿ ಕೇಂದ್ರ ಸರಕಾರ ವಿಶೇಷ ಯೋಜನೆ ಘೋಷಿಸಿದ್ದು, ಇದಕ್ಕಾಗಿ 3,000 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ಬೆಂಗಳೂರು, ದಿಲ್ಲಿ, ಹೈದರಾಬಾದ್‌ ಒಳಗೊಂಡಂತೆ ...
READ MORE
“18th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮತ್ತೆ ಕರೆನ್ಸಿ ಎಮರ್ಜೆನ್ಸಿ! ನೋಟು ಅಮಾನ್ಯೀಕರಣದ ಆರಂಭಿಕ ದಿನಗಳಲ್ಲಾದಂತೆ ಈಗ ಮತ್ತೆ ಹಲವು ರಾಜ್ಯಗಳಲ್ಲಿ ನಗದು ಕೊರತೆ ಎದುರಾಗಿದೆ. ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಕರ್ನಾಟಕ ಸೇರಿ 9ಕ್ಕೂ ಹೆಚ್ಚು ರಾಜ್ಯಗಳ ಎಟಿಎಂಗಳು ಖಾಲಿಯಾಗಿದ್ದು, ಹಣವಿಲ್ಲ ಎಂಬ ಬೋರ್ಡ್​ಗಳು ರಾರಾಜಿಸುತ್ತಿವೆ. ಕೇಂದ್ರ ಸರ್ಕಾರದ ಆರ್ಥಿಕ ಅವ್ಯವಸ್ಥೆಯೇ ...
READ MORE
ಸರ್ಕಾರಿ ಬ್ಯಾಂಕ್‌ಗಳ ವಿಲೀನ ದೇಶಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ತರಲು ಹೊರಟಿರುವ  ಸುಧಾರಣಾ ಕ್ರಮಗಳು ಹೊಸ ಚರ್ಚೆ ಹುಟ್ಟು ಹಾಕಿವೆ. ದೊಡ್ಡ ಬ್ಯಾಂಕ್‌ಗಳಲ್ಲಿ ಸಣ್ಣ ಪುಟ್ಟ ಬ್ಯಾಂಕ್‌ಗಳ ವಿಲೀನ ಆಲೋಚನೆಯು ಭಾರತದ ಪಾಲಿಗೆ ಹೊಸದೇನಲ್ಲ. . ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಭಾರತೀಯ ಸ್ಟೇಟ್‌ ...
READ MORE
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉದ್ಯೋಗ ಖಾತ್ರಿ ಹೆಚ್ಚಳ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಉದ್ಭವಿಸಿರುವ ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಕಾಯ್ದೆಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ 100 ದಿನಗಳ ಉದ್ಯೋಗವನ್ನು 150ಕ್ಕೆ ವಿಸ್ತರಿಸಲಾಗಿದ್ದು, ಈ ವರ್ಷ ಮಾನವ ದಿನಗಳ ಸೃಜನೆ ಗುರಿಯನ್ನು 8.5 ಕೋಟಿ ಯಿಂದ 10 ...
READ MORE
ಸ್ವಾಧಾರ
“29th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
4th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“23rd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
“18 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“3rd ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
10th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ
“18th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸರ್ಕಾರಿ ಬ್ಯಾಂಕ್‌ಗಳ ವಿಲೀನ
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *