“30th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”

ವಾಹನ ಸೌಲಭ್ಯ

1.

ಸುದ್ಧಿಯಲ್ಲಿ ಏಕಿದೆ ?ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿಶೇಷಚೇತನ ಮತದಾರರಿಗೆ ವಾಹನ ವ್ಯವಸ್ಥೆ ಕಲ್ಪಿಸುವುದಕ್ಕೆ ಚುನಾವಣಾ ಆಯೋಗ ಮುಂದಾಗಿದೆ.

 • ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂಥ ಸುಧಾರಣಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಚುನಾವಣಾಆ್ಯಪ್‌ ಮೂಲಕ ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
 • ಸ್ಮಾರ್ಟ್‌ ಫೋನ್‌ ಮೂಲಕ ಗೂಗಲ್‌ ಪ್ಲೇ ಸ್ಟೋರ್‌ನಿಂದ ಆಯೋಗದ ಚುನಾವಣಾ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ವಾಹನ ಸೇವೆಗಳ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿ ತಮ್ಮ ಚುನಾವಣಾ ಗುರುತಿನ ಚೀಟಿ ಹಾಗೂ ಮೊಬೈಲ್‌ ನಂಬರ್‌ ನಮೂದಿಸಿದಾಗ ಆಯೋಗದ ಕಡೆಯಿಂದ ಓಟಿಪಿ ಕಳುಹಿಸಲಾಗುತ್ತದೆ.
 • ಈ ಸಂಖ್ಯೆಯನ್ನು ಪುನರ್‌ ನಮೂದಿಸುವ ಮೂಲಕ ಮತದಾನದ ದಿನ ವಾಹನ ಸೌಲಭ್ಯ ಪಡೆಯಬಹುದಾಗಿದೆ. ಸೋಮವಾರದಿಂದ ನವೆಂಬರ್‌ 1ರ ರಾತ್ರಿ 59ರ ವರೆಗೆ ಹೆಸರು ನೋಂದಾಯಿಸಿಕೊಳ್ಳುವುದಕ್ಕೆ ಅವಕಾಶವಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ಚುನಾವಣಾ  ಆಪ್

 • ಮೇ 2, 2018 ರಂದು, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಚುನಾವಣ ಎಂಬ ಮತದಾನ ಬೂತ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು. ಈ ಮತದಾನ ಮತಗಟ್ಟೆ ಅಪ್ಲಿಕೇಶನ್ ಬಳಕೆದಾರರು ತಮ್ಮ ವಿಧಾನಸಭೆ ಮತ್ತು ಮತದಾನ ಕೇಂದ್ರಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.

ನಮಗೆ ಚುನಾವಣ ಅಪ್ಲಿಕೇಶನ್ ಏಕೆ ಬೇಕು?

 • ಚುನಾವಣ ಅಪ್ಲಿಕೇಶನ್ ಮೂಲಕ, ನಾಗರಿಕರು ತಮ್ಮ ಕ್ಷೇತ್ರದ ಮತಗಟ್ಟೆಗೆ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಚುನಾವಣಾ ದಿನದಲ್ಲಿ ಮತ ಚಲಾಯಿಸುವ  ಸಂಖ್ಯೆಯನ್ನು ಹೆಚ್ಚಿಸಲು ಇದು ನೆರವಾಗಬಹುದು ಮತ್ತು ಸರ್ಕಾರವು ‘ಜನರಿಂದ’ ರೂಪುಗೊಂಡಿದೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
 • ಈ ಮತದಾನ ಬೂತ್ ಅಪ್ಲಿಕೇಶನ್ ಅನ್ನು Google Play Store ನಿಂದ ಡೌನ್ಲೋಡ್ ಮಾಡಬಹುದು. ಮತದಾನ ಬೂತ್ಗಳಿಗೆ ಬಳಕೆದಾರರನ್ನು ನ್ಯಾವಿಗೇಟ್ ಮಾಡುವ ಹೊರತಾಗಿಯೂ, ಇದು ಚುನಾವಣಾ ಅಧಿಕಾರಿಗಳಿಗೆ ಸಂಪರ್ಕ ವಿವರಗಳನ್ನು ನೀಡುತ್ತದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ, ದೀರ್ಘವಾದ ಸಾಲುಗಳಲ್ಲಿ ನಿಲ್ಲಬೇಕು ಎಂದು ನಗರ ಮತದಾರರ ಪೈಕಿ 5% ಮತದಾರರು ಮತ ಚಲಾಯಿಸಲಿಲ್ಲ .
 • ಚುನಾವಣ ಅಪ್ಲಿಕೇಶನ್ ಕ್ಯೂ ಸ್ಥಾನಮಾನದ ಬಗ್ಗೆ ನೇರ ಮಾಹಿತಿಯನ್ನು ನೀಡುತ್ತದೆ, ಹೀಗಾಗಿ ಮತದಾನದ ಕೇಂದ್ರಗಳನ್ನು ಭೇಟಿ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಅದೇ ಸಮೀಕ್ಷೆಯ ಪ್ರಕಾರ, ನಗರ ಮತದಾರರ ಪೈಕಿ 5% ನಷ್ಟು ಮತದಾರರು ಮತ ಚಲಾಯಿಸಲಿಲ್ಲ ಏಕೆಂದರೆ ಅವರು ಅಭ್ಯರ್ಥಿಗಳ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿಲ್ಲ. ಮತ್ತೆ, ಈ ಅಪ್ಲಿಕೇಶನ್ ಅಭ್ಯರ್ಥಿಗಳ ಮತ್ತು ಅವರ ಕ್ಷೇತ್ರಗಳಲ್ಲಿ ಮಾಹಿತಿಯನ್ನು ಸಾಬೀತುಮಾಡುವ ಮೂಲಕ ಪಾರುಗಾಣಿಕಾಗೆ ಬರುತ್ತದೆ.

ಭೂ ಪರಭಾರೆಗೆ ಬ್ರೇಕ್

ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಕೃಷಿಭೂಮಿ ಪ್ರಮಾಣ ದಿನದಿಂದ ದಿನಕ್ಕೆ ಕುಗ್ಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಬಗರ್​ಹುಕುಂನಲ್ಲಿ ಮಂಜೂರಾದ ಜಮೀನು ಪರಭಾರೆಗೆ ಇರುವ ಅವಧಿಯನ್ನು 15ರಿಂದ 25 ವರ್ಷಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

 • ಕಳೆದ 10 ವರ್ಷದ ಅವಧಿಯಲ್ಲಿ ಕೃಷಿ ಭೂಮಿ ಪ್ರಮಾಣ 5 ಲಕ್ಷ ಹೆಕ್ಟೇರ್​ನಷ್ಟು ಕಡಿಮೆಯಾಗಿರುವುದರಿಂದ ಕೃಷಿ ಉತ್ಪನ್ನಗಳ ಮೇಲೆ ಪರಿಣಾಮ ಸೇರಿದಂತೆ ಬೇರೆ ಬೇರೆ ರೀತಿಯ ಹತ್ತಾರು ಸಮಸ್ಯೆಗಳೂ ಸೃಷ್ಟಿಯಾಗಿವೆ. ಆದ್ದರಿಂದ ರೈತರು ಭೂರಹಿತರಾಗು ವಂತಾಗಬಾರದು ಎಂಬುದು ಸರ್ಕಾರದ ಇರಾದೆ.
 • ಬಗರ್​ಹುಕುಂ ಸಾಗುವಳಿ ಜಮೀನು ಸಕ್ರಮಕ್ಕೆ ಹೊಸದಾಗಿ ಅರ್ಜಿ ಕರೆಯಲು ಭೂ ಕಂದಾಯ ಕಾಯ್ದೆಗೆ ತಂದಿರುವ ತಿದ್ದುಪಡಿಯಲ್ಲೇ ಪರಭಾರೆ ಅವಧಿ ವಿಸ್ತರಿಸುವ ತೀರ್ವನವನ್ನೂ ಕೈಗೊಳ್ಳಲಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ಖಚಿತಪಡಿಸಿವೆ.
 • ಮಾರ್ಗಸೂಚಿ ಬೆಲೆ: ಸರ್ಕಾರದ ಉದ್ದೇಶಗಳಾದ ವಸತಿ ಹಾಗೂ ಸ್ಮಶಾನಗಳಿಗೆ ಅಗತ್ಯವಿರುವ ಭೂಮಿಯನ್ನು ಬಗರ್​ಹುಕುಂ ಸಾಗುವಳಿದಾರರಿಂದ 25 ವರ್ಷ ಮೀರಿರುವ ಭೂಮಿಯನ್ನು ಮಾರ್ಗಸೂಚಿ ಬೆಲೆ ನೀಡಿ ಖರೀದಿ ಮಾಡಬೇಕೇ ಹೊರತು ಮನಸೋಇಚ್ಛೆ ಸ್ವಾಧೀನ ಮಾಡುವಂತಿಲ್ಲವೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸರ್ಕಾರದ ನಿರ್ಧಾರಗಳೇನು?

 • ಭೂ ಕಂದಾಯ ಕಾಯ್ದೆ ಪ್ರಕಾರ ಬಗರ್​ಹುಕುಂನಲ್ಲಿ ಮಂಜೂರಾದ ಭೂಮಿಯನ್ನು 15 ವರ್ಷಗಳವರೆಗೆ ಮಾರಾಟ ಮಾಡುವಂತಿರಲಿಲ್ಲ. ಈ ಅವಧಿಯನ್ನು ಈಗ 25 ವರ್ಷಗಳಿಗೆ ಏರಿಸಲಾಗಿದೆ.
 • ಮಂಜೂರಾದ ಭೂಮಿಯನ್ನು 25 ವರ್ಷಗಳವರೆಗೆ ವ್ಯವಸಾಯೇತರ ಉದ್ದೇಶಕ್ಕೆ ಬಳಸುವಂತಿಲ್ಲ.

ಕಾರಣ ಏನು?

 • ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಇತರ ಪ್ರಭಾವಿಗಳು ಬಡವರಿಗೆ ಭೂಮಿಯನ್ನು ಮಂಜೂರು ಮಾಡಿಸಿ, ಬಳಿಕ ಅದನ್ನು ತಮಗೆ ಪರಭಾರೆ ಮಾಡಿಕೊಳ್ಳುತ್ತಿದ್ದರು. ಅಂತಹ ಪ್ರವೃತ್ತಿಗೆ ಬ್ರೇಕ್ ಹಾಕುವುದು ಸರ್ಕಾರದ ಈ ನಡೆಯ ಉದ್ದೇಶ.

ತಹಸೀಲ್ದಾರ್ ಅಧಿಕಾರ ಮೊಟಕು:

 • ಬಗರ್​ಹುಕುಂ ಭೂಮಿ ಮಾರಾಟಕ್ಕೆ ಈ ಮೊದಲು ತಹಸೀಲ್ದಾರರ ಅನುಮತಿ ಸಿಕ್ಕರೆ ಸಾಕಾಗಿತ್ತು. ಆ ಅಧಿಕಾರವನ್ನು ಸರ್ಕಾರ ವಾಪಸ್ ಪಡೆಯಲಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಯೇ ಇನ್ಮುಂದೆ ಅನುಮತಿ ಪಡೆಯಬೇಕಾಗುತ್ತದೆ.

ವಾಯುಮಾಲಿನ್ಯ

3.

ಸುದ್ಧಿಯಲ್ಲಿ ಏಕಿದೆ ?ಮಿತಿಮೀರಿದ ವಾಯುಮಾಲಿನ್ಯದಿಂದಾಗಿ ಅಕ್ಷರಶಃ ಧೃತಿಗೆಟ್ಟಿದೆ ಮಹಾನಗರಿ ದೆಹಲಿ. ದೀಪಾವಳಿ ಸಮೀಪಿಸುತ್ತಿರುವಂತೆಯೇ ದೆಹಲಿ ವಾತಾವರಣ ತೀವ್ರ ಕಲುಷಿತಗೊಂಡಿದೆ. ಉಸಿರಾಟ ಸಂಬಂಧಿತ ಕಾಯಿಲೆಗಳು ಮಕ್ಕಳು-ವೃದ್ಧರೆನ್ನದೆ ಎಲ್ಲ ವಯೋಮಾನದವರನ್ನೂ ಬಾಧಿಸುತ್ತಿವೆ.

ಹಳೇ ವಾಹನಗಳ ಸಂಚಾರಕ್ಕೆ ಬ್ರೇಕ್

 • ದೆಹಲಿಯಲ್ಲಿ ವಾಯುಮಾಲಿನ್ಯ ‘ತೀವ್ರ ಗಂಭೀರ’ ಸ್ವರೂಪಕ್ಕೆ ತಲುಪಿರುವ ಹಿನ್ನೆಲೆಯಲ್ಲಿ 15 ವರ್ಷ ಹಳೆಯ ಪೆಟ್ರೋಲ್ ಚಾಲಿತ ವಾಹನ ಮತ್ತು 10 ವರ್ಷ ಹಳೆಯ ಡೀಸೆಲ್ ಚಾಲಿತ ವಾಹನಗಳ ಸಂಚಾರವನ್ನು ನಿರ್ಬಂಧಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಒಂದು ವೇಳೆ ಇಂಥ ವಾಹನಗಳು ರಸ್ತೆಯಲ್ಲಿ ಕಂಡುಬಂದಲ್ಲಿ ಭಾರಿ ದಂಡ ಹೇರುವಂತೆ ಸಾರಿಗೆ ಸಚಿವಾಲಯಕ್ಕೆ ನಿರ್ದೇಶಿಸಲಾಗಿದೆ.
 • ಜತೆಗೆ ಇಂಥ ವಾಹನಗಳ ಸಂಪೂರ್ಣ ಮಾಹಿತಿಯನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ದೆಹಲಿ ಎನ್​ಸಿಆರ್ ಸಾರಿಗೆ ಇಲಾಖೆ ವೆಬ್​ಸೈಟ್​ನಲ್ಲಿ ಪ್ರಕಟಿಸಲು ಕೋರ್ಟ್ ಸೂಚಿಸಿದೆ.
 • ಸಾಮಾಜಿಕ ಜಾಲತಾಣದಲ್ಲಿ ಹೊಸ ಖಾತೆ ತೆರೆದು ಸಾರ್ವಜನಿಕರಿಗೆ ಮಾಲಿನ್ಯ ಕುರಿತು ದೂರು ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರ್ಟ್ ಸಿಪಿಸಿಬಿಗೆ ಆದೇಶ ನೀಡಿದೆ.

ಹಿನ್ನಲೆ

 • 2014ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಕುಸಿದು ನಾಗರಿಕರಿಗೆ ಪ್ರಾಣಾಪಾಯ ಉಂಟಾಗುವ ವಾತಾವರಣ ನಿರ್ವಣವಾದಾಗ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್​ಜಿಟಿ) 15 ವರ್ಷ ಹಳೆಯ ಪೆಟ್ರೋಲ್ ಹಾಗೂ 10 ವರ್ಷ ಹಿಂದಿನ ಡೀಸೆಲ್ ವಾಹನ ಬಳಕೆಗೆ ನಿರ್ಬಂಧ ಹೇರಿತ್ತು. ಒಟ್ಟು ವಾಯು ಗುಣಮಟ್ಟ ಸೂಚ್ಯಂಕ ದೆಹಲಿಯಲ್ಲಿ 381 ದಾಖಲಾಗಿದ್ದು, ಇದು ತೀವ್ರ ಮಾಲಿನ್ಯ ಮಟ್ಟವಾಗಿದೆ.
 • ಪಂಜಾಬ್ ಮತ್ತು ಹರಿಯಾಣದಲ್ಲಿ ಕೊಯ್ದ ಪೈರಿಗೆ ಬೆಂಕಿ ಹಾಕುವುದರಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಶೇ. 32ರಷ್ಟು ಹೆಚ್ಚಾಗಿದೆ ಎಂದು ಸಿಸ್ಟಂ ಆಫ್ ಏರ್ ಕ್ವಾಲಿಟಿ ಆಂಡ್ ವೆದರ್ ಫೋರ್​ಕಾಸ್ಟಿಂಗ್ (ಸಫರ್) ತಿಳಿಸಿದೆ.

ಮಾಲಿನ್ಯ ನಿಯಂತ್ರಣಕ್ಕೆ ಸರಣಿ ಕ್ರಮಗಳು

 • ಸಿಪಿಸಿಬಿ ಟಾಸ್ಕ್​ಫೋರ್ಸ್ ಕಾರ್ಯನಿರತವಾಗಿದ್ದು, ಕಲ್ಲಿದ್ದಲು ಮತ್ತು ಬಯೋಮಾಸ್ ಫ್ಯಾಕ್ಟರಿಗಳನ್ನು ಕೆಲದಿನಗಳ ಕಾಲ ಬಂದ್ ಮಾಡಲು ಸೂಚಿಸಿದೆ.
 • ಅಲ್ಲದೆ, ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ಸಾರ್ವಜನಿಕ ವಾಹನ/ಸಾರಿಗೆ ಬಳಸುವಂತೆ ಮನವಿ ಮಾಡಿದೆ.
 • ನವೆಂಬರ್ 1ರಿಂದ 10ರವರೆಗೆ ದೆಹಲಿಯಲ್ಲಿ ವಾಯುಮಾಲಿನ್ಯದ ಕಾರಣ ಉಂಟಾಗುವ ಸಂಚಾರದಟ್ಟಣೆಯನ್ನು ನಿಯಂತ್ರಿಸಲು ಆರ್​ಟಿಒ/ಟ್ರಾಫಿಕ್ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.

ಯಾವುದರಿಂದ ಎಷ್ಟು ಮಾಲಿನ್ಯ?

 • ವಿವಿಧ ಮೂಲಗಳಿಂದ ಹೊರಹೊಮ್ಮಿ ಗಾಳಿಯೊಳಗೆ ಸೇರಿಕೊಳ್ಳುವ ವಿಷಯುಕ್ತ ಪೃಥಕ್ಕಣಗಳು ವಾಯುಮಾಲಿನ್ಯಕ್ಕೆ ಕಾರಣವಾಗುತ್ತವೆ.
 • ಇವುಗಳಲ್ಲಿ ಹೆಚ್ಚಿನ ಭಾಗ ಬರುವುದು ರಸ್ತೆಯ ಧೂಳಿನಿಂದ.
 • ಕೈಗಾರಿಕಾ ಅಥವಾ ವಿದ್ಯುತ್ ಸ್ಥಾವರಗಳು, ಮನೆಯಲ್ಲಿನ ಅಡುಗೆ ಕಾರ್ಯದಿಂದ ಮತ್ತು ವಾಹನಗಳಿಂದ (ಇವುಗಳಲ್ಲಿ ಟ್ರಕ್ಕುಗಳು ಅಕ್ಷರಶಃ ಮಾರಣಾಂತಿಕ ಎನಿಸಿವೆ) ಹೊಮ್ಮುವ ಹೊರಸೂಸಿಕೆಗಳು ಕೂಡ ಈ ಪಟ್ಟಿಗೆ ಸೇರುತ್ತವೆ.

ಪರಿಸ್ಥಿತಿಯ ಅವಲೋಕನ

 • ದೆಹಲಿ ವಾಯುಮಾಲಿನ್ಯದ ಸ್ಥಿತಿ ವಿಕೋಪಕ್ಕೆ ಹೋಗುತ್ತಿರುವಂತೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಅಲ್ಲದೆ, ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಸೂಚನೆ ನೀಡಿದ್ದಾರೆ.
 • ಸಿಪಿಸಿಬಿ (Central Pollution Control Board) ಮತ್ತು ರಾಜ್ಯ (ದೆಹಲಿ) ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳನ್ನು ಉಲ್ಲಂಘಿಸಿದವರ ವಿರುದ್ಧ ಅಪರಾಧಿಕ ಪ್ರಕರಣ ದಾಖಲಿಸಲು ಸೂಚನೆ.
 • ಪ್ರಕರಣ ದಾಖಲಿಸುವ 48 ಗಂಟೆಗಳ ಮುನ್ನ ಸಂಬಂಧಪಟ್ಟವರಿಗೆ ಎಚ್ಚರಿಕೆ ನೋಟಿಸ್ ಜಾರಿಗೊಳಿಸುವುದು, ತಪ್ಪಿತಸ್ಥರಿಗೆ ದಂಡ, ಜೈಲು ಎರಡೂ ವಿಧಿಸುವ ಸಾಧ್ಯತೆ.
 • ಪರಿಸ್ಥಿತಿ ಅವಲೋಕಿಸಲು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳ ಮೇಲೆ ನಿಗಾ ಇರಿಸಲು ದೆಹಲಿ ಮತ್ತು ಎನ್​ಸಿಆರ್​ನಲ್ಲಿ 50 ತಂಡಗಳ ನಿಯೋಜನೆ.
 • ಜನರಲ್ಲಿ ಜಾಗೃತಿ ಮೂಡಿಸಲು ದೆಹಲಿ ಸರ್ಕಾರದ ಜತೆಗೂಡಿ ಕೇಂದ್ರ ಸರ್ಕಾರದಿಂದ ಒಂದು ವಾರದ ವಿಶೇಷ ಅಭಿಯಾನ., ದೆಹಲಿಗೆ ಹೊಂದಿಕೊಂಡಂತಿರುವ ರಾಜ್ಯಗಳೊಂದಿಗೆ ಗುರುವಾರ ಸಭೆ.
 • ಗಾಳಿಯ ಗುಣಮಟ್ಟ ಹದಗೆಟ್ಟ ಕಾರಣದಿಂದ ಇಡೀ ದೆಹಲಿ ಮಹಾನಗರಿ ಉಸಿರುಗಟ್ಟಿ ನರಳುತ್ತಿದೆ. 2016 ಮತ್ತು 2017ರಲ್ಲಿ ದೀಪಾವಳಿ ಹಬ್ಬದ ನಂತರ ಈ ಸಮಸ್ಯೆ ಕಾಣಿಸಿಕೊಂಡು, ಹಲವು ದಿನಗಳ ಕಾಲ ಶಾಲೆಗಳಿಗೆ ರಜೆ ನೀಡಲಾಗಿತ್ತು.

ವಿಷಗಾಳಿಯ ಪ್ರತಾಪ

 • ವಿಷಯುಕ್ತ ಗಾಳಿಯ ದಪ್ಪಪದರ ದೆಹಲಿ, ಗಾಜಿಯಾಬಾದ್​ಗೆ ಹೊದಿಕೆಯಾಗಿಬಿಟ್ಟಿದೆ. ಪರಿಣಾಮ, ಉಸಿರಾಟದ ತೊಂದರೆ, ಅಸ್ತಮಾ, ಕೆಮ್ಮು, ಶೀತ, ಶ್ವಾಸನಾಳಗಳ ಒಳಪೊರೆಯ ಉರಿಯೂತ ಹಾಗೂ ಅಲರ್ಜಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿವೆ.
 • ಮುಂಚೆಯಿಂದಲೇ ಈ ಸಮಸ್ಯೆಗಳಿಂದ ಬಳಲುತ್ತಿದ್ದವರಲ್ಲಿ ಅವುಗಳ ತೀವ್ರತೆ ಹೆಚ್ಚಿದೆ. ವಾಯುಮಾಲಿನ್ಯದಿಂದ ಮಕ್ಕಳೇ ಹೆಚ್ಚು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ, ಸೋಂಕಿನ ಸಮಸ್ಯೆ ವಾಸಿಯಾಗುವುದಕ್ಕೂ ದೀರ್ಘಕಾಲವನ್ನು ತೆಗೆದುಕೊಳ್ಳುತ್ತಿರುವುದು ಜನರಲ್ಲಿ ಸಹಜವಾಗಿಯೇ ಆತಂಕ ಹುಟ್ಟಿಸಿದೆ.
 • ಹಿಂದೆಲ್ಲ ಮಾಲಿನ್ಯ-ಸಂಬಂಧಿತ ಕಾಯಿಲೆಯ ಪ್ರಕರಣಗಳು ಶೇ. 15-20ರ ಆಸುಪಾಸಲ್ಲಿದ್ದರೆ, ಈಗ ಅದು ಶೇಕಡ 60ರವರೆಗೆ ಜಿಗಿದಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ.
 • 2016ರಲ್ಲಿ ಭಾರತದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ವಾಯುಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
 • ವಾಯುಮಾಲಿನ್ಯ ಮತ್ತು ಮಕ್ಕಳ ಆರೋಗ್ಯ: ಸ್ವಚ್ಛ ವಾತಾವರಣ ಎಂಬ ಶೀರ್ಷಿಕೆಯಲ್ಲಿ 15 ವರ್ಷಕ್ಕಿಂತ ಕೆಳಗಿನ ಸುಮಾರು 6 ಲಕ್ಷ ಮಕ್ಕಳು 2016ರಲ್ಲಿ ಮನೆಯ ಒಳಗಿನ ಮತ್ತು ಮನೆಯ ಹೊರ ವಾತಾವರಣದ ವಾಯುಮಾಲಿನ್ಯಗಳಿಗೆ ತುತ್ತಾಗುತ್ತಿದ್ದಾರೆ.
 • ಜಾಗತಿಕವಾಗಿ ವಿಶ್ವದ 18 ವರ್ಷಕ್ಕಿಂತ ಕೆಳವಯಸ್ಸಿನ ಶೇಕಡಾ 93ರಷ್ಟು ಮಕ್ಕಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವಾಯುಗುಣಮಟ್ಟದ ಮಾರ್ಗಸೂಚಿ ಪ್ರಕಾರ ವಾತಾವರಣದಲ್ಲಿ ಸುತ್ತುವರಿದ ಸೂಕ್ಷ್ಮ ಕಣ (5) ಮಟ್ಟಗಳು 5 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ 630 ಮಿಲಿಯನ್ ಮತ್ತು 15 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ 1.8 ಬಿಲಿಯನ್ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ಅಧ್ಯಯನದಲ್ಲಿ ಹೇಳಿದೆ.
 • ಗ್ರೀನ್ ಪೀಸ್ ಎಂಬ ಸಂಸ್ಥೆ ಬಿಡುಗಡೆ ಮಾಡಿರುವ ಇನ್ನೊಂದು ವರದಿಯಲ್ಲಿ ಭಾರತದ ಮಾಲಿನ್ಯ ಮಟ್ಟವನ್ನು ಸೂಚಿಸುತ್ತದೆ. ವಿಶ್ವದ 5 ಮತ್ತು ಓಝೋನ್ ರಚನೆಗೆ ಕಾರಣವಾಗುವ ಸಾರಜನಕ ಆಕ್ಸೈಡ್ ದೆಹಲಿ-ಎನ್ ಸಿಆರ್ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಉತ್ತರ ಪ್ರದೇಶದ ಸೋನಭದ್ರ, ಮಧ್ಯ ಪ್ರದೇಶದ ಸಿಂಗ್ರೌಲಿ ಮತ್ತು ಒಡಿಶಾದ ಟಲ್ಚರ್-ಅಂಗುಲ್ ಹೆಚ್ಚು ಮಾಲಿನ್ಯದ ಪ್ರದೇಶಗಳೆಂದು ವರದಿಯಲ್ಲಿ ಗುರುತಿಸಲಾಗಿದೆ.

ಮಾಲಿನ್ಯಕ್ಕೆ ಕಾರಣಗಳು

 • ಕೈಗಾರಿಕೆಗಳು, ಮನೆಗಳು, ಕಾರು ಮತ್ತು ಟ್ರಕ್ ಗಳಿಂದ ಹೊರಸೂಸುವ ಹೊಗೆ ವಾತಾವರಣದಲ್ಲಿ ಸೇರಿಕೊಂಡು ಕಲುಷಿತವಾಗುತ್ತದೆ.
 • 2016ರಲ್ಲಿ ಮನೆಗಳಿಂದ ಬಂದ ಹೊಗೆ, ಧೂಳುಗಳಿಂದ 5 ವರ್ಷಕ್ಕಿಂತ ಕೆಳಗಿನ ಸುಮಾರು 66,890 ಮಕ್ಕಳು ಮೃತಪಟ್ಟಿದ್ದು ಅವುಗಳಲ್ಲಿ 36,073 ಹೆಣ್ಣುಮಕ್ಕಳು ಮತ್ತು 30,817 ಬಾಲಕರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಒಳನಾಡಿನ ಜಲ ಮಾರ್ಗ

4.

ಸುದ್ಧಿಯಲ್ಲಿ ಏಕಿದೆ ?ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಕೋಲ್ಕೊತಾ-ವಾರಾಣಸಿ ನಡುವೆ ಒಳನಾಡಿನ ಜಲ ಮಾರ್ಗದಲ್ಲಿ ಸರಕು ಸಾಗಣೆಯಾಗಲಿದೆ!

 • ಒಳನಾಡು ಜಲಮಾರ್ಗ ಪ್ರಾಧಿಕಾರವು (ಐಡಬ್ಲುಎಐ) ಪೆಪ್ಸಿಕೊ ಕಂಪನಿಯ ಉತ್ಪನ್ನಗಳನ್ನು ಕೋಲ್ಕೊತಾದಿಂದ ವಾರಾಣಸಿಗೆ ಗಂಗಾನದಿಯಲ್ಲಿ ಹಡಗಿನ ಮೂಲಕ ರವಾನಿಸಲಿದೆ.
 • ಈ ಮಾರ್ಗ ರಾಷ್ಟ್ರೀಯ ಜಲ ಮಾರ್ಗ-1 ಎಂದು ಹೆಸರು ಪಡೆದಿದ್ದು, ಭಾರತ ತನ್ನೆಲ್ಲ ಒಳ ನಾಡಿನ ಜಲ ಮಾರ್ಗಗಳನ್ನು ಬಳಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
 • ದೇಶದಲ್ಲಿ ಸಮುದ್ರ ಮಾರ್ಗದಲ್ಲಿ ಸಾರಿಗೆ ಸಾಮಾನ್ಯ. ಆದರೆ ಇದೀಗ ಒಳನಾಡಿನ ಜಲ ಮಾರ್ಗಗಳ ಸದ್ಬಳಕೆಗೆ ಕೇಂದ್ರ ಸರಕಾರ ಕ್ರಾಂತಿಕಾರಕ ಯೋಜನೆ ರೂಪಿಸಿದೆ.
 • ಪೆಪ್ಸಿಕೊ ಕಂಪನಿಯ 16 ಟ್ರಕ್‌ ಲೋಡ್‌ ಸರಕುಗಳನ್ನು ಹೊತ್ತುಕೊಂಡು ಎಂವಿ ಆರ್‌ಎನ್‌ ಠಾಗೋರ್‌ ನೌಕೆಯು ಕೋಲ್ಕೊತಾದಿಂದ ವಾರಾಣಸಿಗೆ 9ರಿಂದ 10 ದಿನಗಳಲ್ಲಿ ತಲುಪಲಿದೆ.

ಪ್ರಯೋಜನವೇನು?

 • ಜಲ ಮಾರ್ಗದಲ್ಲಿ ಸಂಚಾರದಿಂದ ಸರಕುಗಳ ಸಾಗಣೆಯ ನಿರ್ವಹಣಾ ವೆಚ್ಚ ಕಡಿಮೆಯಾಗಲಿದೆ.
 • ರಸ್ತೆಯ ಮೇಲಿನ ಸಂಚಾರ ದಟ್ಟಣೆ, ಪರಿಸರ ಮಾಲಿನ್ಯವನ್ನೂ ತಡೆಯಲಿದೆ.
 • ರಸ್ತೆಯಲ್ಲಿ ಸಂಚಾರದಿಂದ ಸರಕುಗಳಿಗೆ ಹಾನಿಯಾಗುವ ಸಾಧ್ಯತೆ ಹೆು್ಚ. ಆದರೆ ಜಲ ಮಾರ್ಗದಲ್ಲಿ ಅಂಥ ಅಪಾಯ ಇರುವುದಿಲ್ಲ. ವಾರಾಣಸಿಯಿಂದ ಹಿಂತಿರುಗುವಾಗ ಠಾಗೋರ್‌ ನೌಕೆಯು ರಸಗೊಬ್ಬರವನ್ನು ತುಂಬಿಕೊಂಡು ಬರಲಿದೆ.
 • ಕೇಂದ್ರ ಸರಕಾರವು ಪ.ಬಂಗಾಳದ ಹಲ್ದಿಯಾದಿಂದ ಉತ್ತರಪ್ರದೇಶದ ವಾರಾಣಸಿಗೆ, 1390 ಕಿ.ಮೀ ದೂರದ ರಾಷ್ಟ್ರೀಯ ಜಲ ಮಾರ್ಗ-1 ಅನ್ನು ಗಂಗಾ ನದಿಯಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇದಕ್ಕೆ ಅಂದಾಜು 5,369 ಕೋಟಿ ರೂ. ವೆಚ್ಚವಾಗಲಿದೆ. 2023ರ ಮಾರ್ಚ್‌ ಒಳಗೆ ಈ ಯೋಜನೆ ಪೂರ್ಣವಾಗಲಿದ್ದು, 46,000 ಮಂದಿಗೆ ನೇರವಾಗಿ ಉದ್ಯೋಗ ಕಲ್ಪಿಸಲಿದೆ.

ಪ್ರಾಯೋಗಿಕ ಸಂಚಾರ ಯಶಸ್ವಿ:

 • ಒಟ್ಟು 15ಕ್ಕೂ ಹೆಚ್ಚು ರಾಷ್ಟ್ರೀಯ ಜಲ ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಸರಕು ಸಾಗಣೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. 100ಕ್ಕೂ ಹೆಚ್ಚು ನದಿಗಳನ್ನು ರಾಷ್ಟ್ರೀಯ ಜಲ ಮಾರ್ಗಗಳಾಗಿ ಪರಿವರ್ತಿಸಲು ಸಿದ್ಧತೆ ನಡೆಯುತ್ತಿದೆ.

ಕರ್ನಾಟಕದಲ್ಲೂ ಜಲ ಮಾರ್ಗ:

 • ಕರ್ನಾಟಕದಲ್ಲಿ ರಾಷ್ಟ್ರೀಯ ಜಲಮಾರ್ಗಗಳನ್ನು ಗುರುತಿಸಲಾಗಿದೆ. ನೇತ್ರಾವತಿ ನದಿಯಲ್ಲಿ (78 ಕಿ.ಮೀ), ಮಲಪ್ರಭಾ ( ಕಿ.ಮೀ), ಶರಾವತಿ (20 ಕಿ.ಮೀ), ಕಾವೇರಿ (324 ಕಿ.ಮೀ), ಕಬಿನಿ (23 ಕಿ.ಮೀ) ಘಟಪ್ರಭಾ (112 ಕಿ.ಮೀ), ಭೀಮಾ (139 ಕಿ.ಮೀ)

ಮುಕ್ತ ವ್ಯಾಪಾರ ನೀತಿ

5.

ಸುದ್ಧಿಯಲ್ಲಿ ಏಕಿದೆ ?ಭಾರತ- ಜಪಾನ್ 13ನೇ ವಾರ್ಷಿಕ ಶೃಂಗಸಭೆ ವೇಳೆ ಮಹತ್ವದ ಆರು ಒಪ್ಪಂದಗಳಿಗೆ ಸಹಿ ಬಿದ್ದಿದೆ.

 • ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಜಂಟಿ ಹೇಳಿಕೆ ಬಿಡುಗಡೆ ಮಾಡಿ ಒಪ್ಪಂದಗಳ ವಿವರ ನೀಡಿದ್ದಾರೆ.
 • ಆರ್ಥಿಕ ಸಹಕಾರ, ಪ್ರಾದೇಶಿಕ ರಕ್ಷಣೆ, ಹಿಂದು ಮಹಾಸಾಗರ ಮತ್ತು ಶಾಂತ ಸಾಗರ ವಲಯದಲ್ಲಿ ಮುಕ್ತ ವ್ಯಾಪಾರ ವಹಿವಾಟು ಕುರಿತು ಮಹತ್ವದ ಚರ್ಚೆ ನಡೆಯಿತು.
 • ಚೀನಾ ಈಗ ಶಾಂತ ಸಾಗರದ ಪೂರ್ವ ಭಾಗದ ಮೇಲೂ ಕಣ್ಣಿಟ್ಟಿರುವುದು ಜಪಾನ್​ಗೆ ಆತಂಕ ಉಂಟು ಮಾಡಿದೆ. ಹಿಂದು ಮಹಾಸಾಗರದಲ್ಲಿ ಚೀನಾ ಅನಗತ್ಯವಾಗಿ ಮೂಗು ತೂರಿಸುವುದನ್ನು ತಡೆಯುವುದು ಭಾರತದ ಉದ್ದೇಶವಾಗಿದೆ. ಹೀಗಾಗಿ ಇಂಡೋ-ಪೆಸಿಫಿಕ್ ವಲಯದಲ್ಲಿ ಮುಕ್ತ ವ್ಯಾಪಾರ ನಡೆಸಲು ಭಾರತ- ಜಪಾನ್ ಮಾತುಕತೆ ನಡೆಸಿವೆ.

ಡಿಜಿಟಲ್ ಇಂಡಿಯಾ

 • ಬ್ರಾಡ್​ಬ್ಯಾಂಡ್ ಸಂಪರ್ಕ ಹಳ್ಳಿಗೂ ತಲುಪಿದೆ. ಭಾರತದಲ್ಲಿ 100 ಕೋಟಿ ಮೊಬೈಲ್ ಫೋನ್​ಗಳು ಸಕ್ರಿಯವಾಗಿವೆ. 1 ಜಿಬಿ ಡೇಟಾ ಸಣ್ಣ ಬಾಟಲ್​ನ ತಂಪುಪಾನೀಯಕ್ಕಿಂತ ಅಗ್ಗವಾಗಿದೆ. ಇದು ಡಿಜಿಟಲ್ ಕ್ರಾಂತಿಯ ಸಾಧನವಾಗಿದೆ.

ಮೇಕ್ ಇನ್ ಇಂಡಿಯಾ

 • ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಈಗ ಜಾಗತಿಕ ಬ್ರಾ್ಯಂಡ್ ಆಗಿದೆ. ಈ ಯೋಜನೆಯಡಿ ತಯಾರಾಗುತ್ತಿರುವ ಗುಣಮಟ್ಟದ ವಸ್ತುಗಳು ಜಾಗತಿಕವಾಗಿ ಮನ್ನಣೆ ಗಳಿಸಿವೆ. ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರತ ಈಗ ಗ್ಲೋಬಲ್ ಹಬ್ ಆಗಿದೆ. ಮೊಬೈಲ್ ಫೋನ್ ತಯಾರಿಕೆಯಲ್ಲಿ ಭಾರತ ಪ್ರಥಮ ಸ್ಥಾನಗಳಿಸುವತ್ತ ದಾಪುಗಾಲು ಇಡುತ್ತಿದೆ.

ಒಪ್ಪಂದಗಳು

 • ಉಭಯ ದೇಶಗಳ ಮಧ್ಯೆ -ಠಿ; 5.50 ಲಕ್ಷ ಕೋಟಿ (75 ಬಿಲಿಯನ್ ಡಾಲರ್) ಕರೆನ್ಸಿಸ್ವ್ಯಾಪ್​ಗೆ ಒಪ್ಪಿಗೆ. ಇದರಿಂದ ಉಭಯ ದೇಶಗಳ ನಡುವೆ ಅಮೆರಿಕ ಡಾಲರ್ ಅವಲಂಬನೆ ಕಡಿಮೆಯಾಗಲಿದೆ. ವಿದೇಶಿ ವಿನಿಮಯ ಮತ್ತು ವಿದೇಶಿ ಹೂಡಿಕೆಯಲ್ಲಿ ಸ್ಥಿರತೆ ಉಂಟಾಗಲಿದೆ.
 • ಉಭಯ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ಸಚಿವರ ಮಧ್ಯೆ (2+ 2) ಸಭೆ ನಡೆಸಲು ನಿರ್ಧಾರ. ಜಾಗತಿಕ ಶಾಂತಿ ಮತ್ತು ಸ್ಥಿರತೆಯ ದೃಷ್ಟಿಯಿಂದ ಈ ಸಭೆ ನಡೆಸಲು ಮೋದಿ ಮತ್ತು ಶಿಂಜೋ ನಿರ್ಧರಿಸಿದ್ದಾರೆ.
 • ಭಾರತದಲ್ಲಿ -ಠಿ; 18,355 ಕೋಟಿ (5 ಬಿಲಿಯನ್ ಡಾಲರ್) ಹೂಡಿಕೆಗೆ ಜಪಾನ್ ಪ್ರಧಾನಿ ಸಮ್ಮತಿಸಿದ್ದಾರೆ. ಸಾಗರೋದ್ಯಮ, ಬಾಹ್ಯಾಕಾಶ, ಸೈಬರ್ ಕ್ಷೇತ್ರಗಳಲ್ಲಿ ಈ ಹೂಡಿಕೆ ಆಗಲಿದೆ.
 • ಹೈಸ್ಪೀಡ್ ರೈಲು, ನೌಕಾ ಸಹಕಾರಗಳು ಕುರಿತೂ ಒಪ್ಪಂದ ಆಗಿದೆ.
 • ಆಯುಷ್ ಸಚಿವಾಲಯ ಮತ್ತು ಜಪಾನ್ ಕನಗಾವಾ ಪ್ರಿಫೆಕ್ಚರ್ ಮಧ್ಯೆ ಸಾಂಪ್ರದಾಯಿಕ ಔಷಧ ವಿನಿಮಯಕ್ಕೆ ಒಡಂಬಡಿಕೆ.

ಮುಕ್ತ ವ್ಯಾಪಾರ ಒಪ್ಪಂದಗಳು (ಎಫ್ಟಿಎ)ಎಂದರೇನು ?

 • ಒಂದು ಮುಕ್ತ ವ್ಯಾಪಾರ ಒಪ್ಪಂದವು ವ್ಯಾಪಾರಕ್ಕೆ ತಡೆಗಳನ್ನು ಕಡಿಮೆ ಮಾಡಲು ಅಥವಾ ತೆಗೆದುಹಾಕುವ ರಾಷ್ಟ್ರಗಳ ನಡುವಿನ ಒಂದು ಒಪ್ಪಂದವಾಗಿದೆ. ತೆರಿಗೆ ಅಡೆತಡೆಗಳು ತೆರಿಗೆಗಳು ಮತ್ತು ನಿಯಂತ್ರಕ ನಿಯಮಗಳಂತಹ ಸುಂಕದ ತಡೆಗಳಂತಹ ಸುಂಕ ತಡೆಗಟ್ಟುಗಳನ್ನು ಒಳಗೊಂಡಿರುತ್ತದೆ.
 • ಒಂದು ಮುಕ್ತ ವ್ಯಾಪಾರ ಒಪ್ಪಂದ ಅಥವಾ ಎಫ್ಟಿಎ ಎರಡು ದೇಶಗಳ ನಡುವಿನ ಒಪ್ಪಂದವಾಗಿದೆ, ಅಲ್ಲಿ ದೇಶಗಳು ಸರಕು ಮತ್ತು ಸೇವೆಗಳಲ್ಲಿನ ವ್ಯಾಪಾರದ ಮೇಲೆ ಪರಿಣಾಮ ಬೀರುವ ಕೆಲವು ಜವಾಬ್ದಾರಿಗಳನ್ನು ಒಪ್ಪಿಕೊಳ್ಳುತ್ತವೆ ಮತ್ತು ಇತರ ವಿಷಯಗಳ ನಡುವೆ ಹೂಡಿಕೆದಾರರು ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗಾಗಿ ರಕ್ಷಣೆಗಳನ್ನು ನೀಡುತ್ತವೆ.

ಎಫ್ಟಿಎ ವಿಧಗಳು

 • ಆದ್ಯತಾ ವ್ಯಾಪಾರ ಒಪ್ಪಂದ (ಪಿಟಿಎ): ಪಿಟಿಎ ಯಲ್ಲಿ, ಎರಡು ಅಥವಾ ಅದಕ್ಕಿಂತ ಹೆಚ್ಚು ಪಾಲುದಾರರು ಒಪ್ಪಿದ ಸಂಖ್ಯೆಯ ಸುಂಕದ ರೇಖೆಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲು ಒಪ್ಪುತ್ತಾರೆ. ಸುಂಕವನ್ನು ಕಡಿಮೆ ಮಾಡಲು ಪಾಲುದಾರರು ಒಪ್ಪಿಕೊಳ್ಳುವ ಉತ್ಪನ್ನಗಳ ಪಟ್ಟಿಯನ್ನು ಧನಾತ್ಮಕ ಪಟ್ಟಿ ಎಂದು ಕರೆಯಲಾಗುತ್ತದೆ. ಭಾರತ ಮೆರ್ಕೋಸರ್ ಪಿಟಿಎ ಅಂತಹ ಉದಾಹರಣೆಯಾಗಿದೆ. ಆದಾಗ್ಯೂ, ಸಾಮಾನ್ಯ ಪಿ.ಟಿ.ಎ.ಗಳು ಎಲ್ಲಾ ವ್ಯಾಪಾರವನ್ನು ಗಣನೀಯವಾಗಿ ಒಳಗೊಂಡಿರುವುದಿಲ್ಲ.
 • ಎಫ್ಟಿಎ ಮತ್ತು ಪಿಟಿಎ ನಡುವಿನ ಪ್ರಮುಖ ವ್ಯತ್ಯಾಸವೇನೆಂದರೆ ಪಿಟಿಎಯಲ್ಲಿದ್ದಾಗ ಉತ್ಪನ್ನಗಳ ಸಕಾರಾತ್ಮಕ ಪಟ್ಟಿಯು ಸುಂಕವನ್ನು ಕಡಿಮೆಗೊಳಿಸುವುದು; ಒಂದು ಎಫ್ಟಿಎ ಯಲ್ಲಿ ಋಣಭಾರದ ಪಟ್ಟಿಯನ್ನು ಕಡಿತಗೊಳಿಸಲಾಗುವುದಿಲ್ಲ ಅಥವಾ ತೆಗೆದುಹಾಕಲಾಗುವುದಿಲ್ಲ.
 • ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಟಿ): ಒಪ್ಪಂದದ ಪಾಲುದಾರ ದೇಶದಲ್ಲಿ ಹೂಡಿಕೆ ಮಾಡುವಾಗ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಟಿ) ಹೂಡಿಕೆದಾರರಿಗೆ ವಿವಿಧ ಗ್ಯಾರಂಟಿಗಳನ್ನು ಒದಗಿಸುತ್ತದೆ.
 • ಆರ್ಥಿಕ ಸಹಭಾಗಿತ್ವ ಒಪ್ಪಂದ (ಇಪಿಎ) ಅಥವಾ ಸಮಗ್ರ ಆರ್ಥಿಕ ಸಹಭಾಗಿತ್ವ (ಸಿಇಪಿ): ಇಪಿಎ / ಸಿಇಪಿ ಒಪ್ಪಂದಗಳು ವ್ಯಾಪ್ತಿಯಲ್ಲಿ ಸಮಗ್ರವಾಗಿವೆ, ಸರಕುಗಳಲ್ಲಿ ವ್ಯಾಪಾರ, ವ್ಯಾಪಾರದಲ್ಲಿ ಸೇವೆಗಳು, ಹೂಡಿಕೆ ಮತ್ತು ಆರ್ಥಿಕ ಸಹಕಾರ
 • ವಿದೇಶಿ ಹೂಡಿಕೆ ಮತ್ತು ರಕ್ಷಣಾ ಒಪ್ಪಂದ (FIPA): ವಿದೇಶಿ ಹೂಡಿಕೆ ಮತ್ತು ಸಂರಕ್ಷಣಾ ಒಪ್ಪಂದದ ಪ್ರಮುಖ ನಿಬಂಧನೆಗಳು ಆತಿಥೇಯ ದೇಶದಿಂದ ವಿದೇಶಿ ಹೂಡಿಕೆಗಳನ್ನು ನಿರ್ವಹಿಸುವುದು, ಬಂಡವಾಳ ಮತ್ತು ಬಂಡವಾಳದ ಆದಾಯದ ವರ್ಗಾವಣೆ, ವಂಚನೆಗಾಗಿ ಪರಿಹಾರ ಮತ್ತು ವಿವಾದಗಳನ್ನು ಪರಿಹರಿಸುವ ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ.
 • ಕಸ್ಟಮ್ ಯೂನಿಯನ್: ಕಸ್ಟಮ್ಸ್ ಒಕ್ಕೂಟದಲ್ಲಿ, ಪಾಲುದಾರ ದೇಶಗಳು ತಮ್ಮಲ್ಲಿ ಶೂನ್ಯ ಕರ್ತವ್ಯವನ್ನು ವ್ಯಾಪಾರ ಮಾಡಲು ನಿರ್ಧರಿಸಬಹುದು, ಆದಾಗ್ಯೂ ಅವರು ಪ್ರಪಂಚದ ಉಳಿದ ಭಾಗಗಳ ವಿರುದ್ಧ ಸಾಮಾನ್ಯ ಸುಂಕವನ್ನು ನಿರ್ವಹಿಸುತ್ತಾರೆ. ದಕ್ಷಿಣ ಆಫ್ರಿಕಾ, ಲೆಸೋಥೊ, ನಮೀಬಿಯಾ, ಬೊಟ್ಸ್ವಾನಾ ಮತ್ತು ಸ್ವಾಜಿಲ್ಯಾಂಡ್ ನಡುವೆ ದಕ್ಷಿಣ ಆಫ್ರಿಕನ್ ಕಸ್ಟಮ್ಸ್ ಯೂನಿಯನ್ (SACU) ಉದಾಹರಣೆಯಾಗಿದೆ. ಯುರೋಪಿಯನ್ ಒಕ್ಕೂಟ ಕೂಡ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.
 • ಕಾಮನ್ ಮಾರ್ಕೆಟ್: ಕಾಮನ್ ಮಾರುಕಟ್ಟೆಯಿಂದ ಒದಗಿಸಲ್ಪಟ್ಟ ಏಕೀಕರಣವು ಕಸ್ಟಮ್ಸ್ ಯೂನಿಯನ್ನಿಂದ ಒಂದು ಹೆಜ್ಜೆ ಆಳವಾಗಿದೆ. ಒಂದು ಸಾಮಾನ್ಯ ಮಾರುಕಟ್ಟೆ ಕಾರ್ಮಿಕ ಮತ್ತು ಬಂಡವಾಳದ ಮುಕ್ತ ಚಲನೆಗಳನ್ನು ಒದಗಿಸುವ ನಿಬಂಧನೆಗಳೊಂದಿಗಿನ ಕಸ್ಟಮ್ಸ್ ಯೂನಿಯನ್ ಆಗಿದೆ, ಸದಸ್ಯರಲ್ಲಿ ತಾಂತ್ರಿಕ ಗುಣಮಟ್ಟವನ್ನು ಸಮನ್ವಯಗೊಳಿಸುತ್ತದೆ. ಯುರೋಪಿಯನ್ ಕಾಮನ್ ಮಾರ್ಕೆಟ್ ಒಂದು ಉದಾಹರಣೆಯಾಗಿದೆ.
 • ಸಹಭಾಗಿತ್ವ ಸಹಕಾರ ಒಪ್ಪಂದ (ಪಿಸಿಎ): ರಾಜಕೀಯ, ವಾಣಿಜ್ಯ, ಆರ್ಥಿಕ ಮತ್ತು ಸಾಂಸ್ಕೃತಿಕ ಸಹಕಾರವನ್ನು ಉತ್ತೇಜಿಸುವುದು ಪಾಲುದಾರಿಕೆ ಮತ್ತು ಸಹಕಾರ ಒಪ್ಪಂದ (ಪಿಸಿಎ) ಗುರಿಯಾಗಿದೆ. ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಗಳಿಗೆ ಗಮನ ಹರಿಸುವುದರಿಂದ, ಪಿಸಿಎ ಅನೇಕ ಇತರ ವ್ಯಾಪಾರ ಒಪ್ಪಂದಗಳನ್ನು ಮೀರಿ ಚಲಿಸುತ್ತದೆ.
Related Posts
“21st ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಮುಖ್ಯ ನ್ಯಾಯಮೂರ್ತಿ ಪದಚ್ಯುತಿ ಹೇಗಾಗುತ್ತದೆ ಗೊತ್ತಾ? ದೇಶದಲ್ಲೀಗ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಸಂಘರ್ಷ ನಡೆಯುತ್ತಿದೆ. ಅದರಲ್ಲೂ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರ ಹಟಾವೋ ಚಳವಳಿ ಜೋರಾಗಿ ಸಾಗುತ್ತಿದೆ. ಪ್ರತಿಪಕ್ಷಗಳು ಈ ಸಂಬಂಧ ನಿಲುವಳಿ ಸೂಚನೆ ಕೂಡ ಮಂಡಿಸಿದೆ. ಸಹೋದ್ಯೋಗಿ ನ್ಯಾಯಮೂರ್ತಿಗಳೇದೀಪಕ್‌ ಮಿಶ್ರಾ ವಿರುದ್ಧ ಆರೋಪ ...
READ MORE
“3 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಹೊಸ ವಾಹನ ನೋಂದಣಿ 2 ವರ್ಷ ಸ್ಥಗಿತ ಸುದ್ಧಿಯಲ್ಲಿ ಏಕಿದೆ ? ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಪರಿಹಾರದ ಹಿನ್ನೆಲೆಯಲ್ಲಿ ಮುಂದಿನ ಎರಡು ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸುವ ಚಿಂತನೆ ನಡೆದಿದೆ. ನಿರ್ಧಾರಕ್ಕೆ ಕಾರಣಗಳು ಬೆಂಗಳೂರು ಮಹಾನಗರದಲ್ಲಿ ವಾಹನಗಳ ಸಂಖ್ಯೆ ...
READ MORE
24th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ ) ಸುದ್ಧಿಯಲ್ಲಿ ಏಕಿದೆ? ಬೇರೆ ಬೇರೆ ಯುನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್ (ಯುಪಿಐ) ಐಡಿಯನ್ನು ಬಳಸಿಕೊಂಡು ತಮ್ಮದೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಆಗಸ್ಟ್ 1ರಿಂದ ತಡೆ ಬೀಳಲಿದೆ. ವರ್ಗಾವಣೆಯಾದ ತಕ್ಷಣದಲ್ಲೆ ಹಣ ಪಡೆಯುವ ವ್ಯವಸ್ಥೆಯಾದ ಯುಪಿಐ ಐಡಿ ದುರ್ಬಳಕೆ ತಡೆಯಲು ...
READ MORE
ಹಣದುಬ್ಬರವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ಜೊತೆಗೆ ವಿತ್ತೀಯ ಚೌಕಟ್ಟು ಒಪ್ಪಂದ ಮಾಡಿಕೊಂಡಿದೆ. ಏನಿದು ವಿತ್ತೀಯ ಚೌಕಟ್ಟು ಒಪ್ಪಂದ?: ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಫೆಬ್ರುವರಿ 20, 2015ರಲ್ಲಿ Monetary Policy Framework Agreement ಅಥವಾ ವಿತ್ತೀಯ ...
READ MORE
7th & 8th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಸೈಬರ್ ಕ್ರೈಂ ಸುದ್ಧಿಯಲ್ಲಿ ಏಕಿದೆ? ಭಯೋತ್ಪಾದನೆಯಷ್ಟೇ ಗಂಭೀರ ಸ್ವರೂಪದಲ್ಲಿ ದೇಶವನ್ನಾವರಿಸುತ್ತಿರುವ ಸೈಬರ್ ಕ್ರೈಂ ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ. ಜನಸಾಮಾನ್ಯರ ನಿತ್ಯಜೀವನದ ಮೇಲೆ ಅಂತರ್ಜಾಲ ಬೀರುತ್ತಿರುವ ಪ್ರಭಾವದ ತೀವ್ರತೆಯನ್ನು ಪರಿಗಣಿಸಿ ಸೈಬರ್ ಅಪರಾಧಗಳನ್ನು ಇನ್ನು ರಾಷ್ಟ್ರೀಯ ಅಪರಾಧಗಳ ...
READ MORE
“17th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ರಾಷ್ಟ್ರಪತಿ ಗೌರವ ಸುದ್ಧಿಯಲ್ಲಿ ಏಕಿದೆ? ಕನ್ನಡದ ಖ್ಯಾತ ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಅವರಿಗೆ 2018ನೇ ಸಾಲಿನ ರಾಷ್ಟ್ರಪತಿ ಗೌರವ ಪ್ರಶಸ್ತಿ ಸಂದಿದೆ. ಶಾಸ್ತ್ರೀಯ ಕನ್ನಡ ಭಾಷೆಯಲ್ಲಿ ಅವರು ನಡೆಸಿದ ಸಂಶೋಧನೆಯನ್ನು ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಶಾಸ್ತ್ರೀಯ ತೆಲುಗು, ಸಂಸ್ಕೃತ, ಪರ್ಷಿಯಾ, ಅರೇಬಿಕ್‌, ...
READ MORE
11th – 12th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ನೌಕಾನೆಲೆ ಬಳಸಿಕೊಳ್ಳಲು ಒಪ್ಪಿಗೆ ರಕ್ಷಣೆ ಮತ್ತು ಪರಮಾಣು ಶಕ್ತಿ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಭಾರತ ಮತ್ತು ಫ್ರಾನ್ಸ್‌ 14 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ. ಯುದ್ಧನೌಕೆಗಳಿಗೆ ನೌಕಾನೆಲೆಗಳನ್ನು ಮುಕ್ತವಾಗಿ ಬಳಸಿಕೊಳ್ಳಲು ಎರಡೂ ರಾಷ್ಟ್ರಗಳು ಒಪ್ಪಿಗೆ ಸೂಚಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಸೇನಾ ಪ್ರಾಬಲ್ಯ ...
READ MORE
ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿಗೆ ಹಿರಿಯ ಸಾಹಿತಿಗಳಾದ ಬನ್ನಂಜೆ ಗೋವಿಂದಾಚಾರ‍್ಯ, ಪ್ರೊ. ಸೋಮಶೇಖರ ಇಮ್ರಾಪುರ, ಪ್ರೊ. ಎಚ್.ಜೆ. ಲಕ್ಕಪ್ಪಗೌಡ, ಪ್ರೊ. ಎನ್‌.ಎಸ್. ಲಕ್ಷ್ಮೀನಾರಾಯಣ ಭಟ್ಟ, ಕಸ್ತೂರಿ ಬಾಯರಿ ಭಾಜನರಾಗಿದ್ದಾರೆ. ತಲಾ ₹50,000 ನಗದು ಮತ್ತು ...
READ MORE
“3rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಡ್ರೋನ್‌ ಬಳಕೆ ಸುದ್ದಿಯಲ್ಲಿ ಏಕಿದೆ? ನಗರದ ವಾಹನ ದಟ್ಟಣೆಯನ್ನು ಸರಾಗಗೊಳಿಸಲು ಡ್ರೋನ್‌ ಮೂಲಕ ಮಾಹಿತಿ ಸಂಗ್ರಹಿಸಿ, ನೂತನ ವ್ಯವಸ್ಥೆ ಅಳವಡಿಸಿಕೊಳ್ಳಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಕಾರಣವೇನು? ಪ್ರಮುಖ ಜಂಕ್ಷನ್‌, ವೃತ್ತ ಹಾಗೂ ವಾಹನ ನಿಬಿಡ ಸ್ಥಳಗಳಲ್ಲಿನ ದಟ್ಟಣೆ ಹೆಚ್ಚುತ್ತಿರುವ ಕಾರಣ ಸಮಸ್ಯೆ ಉಂಟಾಗುತ್ತಿದೆ. ಸಿಗ್ನಲ್‌ ...
READ MORE
“27th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಮಾಂಡಿಂಗ್ ಸ್ಟೇಷನ್ ಸುದ್ಧಿಯಲ್ಲಿ ಏಕಿದೆ ? ರಾಮನಗರ ಜಿಲ್ಲೆ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ಇಂಚಿಂಚು ಸಾರ್ವಜನಿಕ ಪ್ರದೇಶದ ಮೇಲೂ ಈಗ ಪೊಲೀಸರ ಕ್ಯಾಮೆರಾ ಕಣ್ಗಾವಲು ಇಡಲಿದೆ. ಈ ಠಾಣಾ ವ್ಯಾಪ್ತಿಯ ಸುಮಾರು 15 ಕಿ. ಮೀ. ಸುತ್ತಳತೆಯಲ್ಲಿ ಯಾವ ರೀತಿಯ ಚಟುವಟಿಕೆ ನಡೆಯುತ್ತಿದೆ ? ...
READ MORE
“21st ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“3 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
24th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಹಣದುಬ್ಬರ ತಡೆಗಟ್ಟಲು ಆರ್ ಬಿಐ ಜೊತೆ ವಿತ್ತೀಯ ಒಪ್ಪಂದ
7th & 8th July ಜುಲೈ 2018 ಕನ್ನಡ ಪ್ರಚಲಿತ
“17th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
11th – 12th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
2nd ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
“3rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“27th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *