“31st ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”

ಎನ್​ಪಿಎಸ್ ಶೀಘ್ರ ರದ್ದು

1.

ಸುದ್ಧಿಯಲ್ಲಿ ಏಕಿದೆ ?ನೂತನ ಪಿಂಚಣಿ ಯೋಜನೆ (ಎನ್​ಪಿಎಸ್) ರದ್ದು ಮಾಡಬೇಕೆಂಬ ನೌಕರರ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ಈ ಸಂಬಂಧ ಶೀಘ್ರ ಕಡತ ಮಂಡಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ.

ಹಿನ್ನಲೆ

 • ಸರ್ಕಾರದ ವಿವಿಧ ಇಲಾಖೆಗಳಿಗೆ, ಸ್ವಾಯತ್ತ ಸಂಸ್ಥೆಗಳಿಗೆ, ಅನುದಾನಿತ ಸಂಸ್ಥೆಗಳಿಗೆ 2006ರಿಂದ ನೇಮಕವಾಗಿರುವ ಎನ್​ಪಿಎಸ್ ನೌಕರರು, ಈ ಪಿಂಚಣಿ ಯೋಜನೆ ರದ್ದು ಮಾಡಿ ಹಳೆಯ ಯೋಜನೆಯನ್ನೇ ಮುಂದುವರಿ ಸಬೇಕೆಂದು ಹೋರಾಟ ನಡೆಸಿದ್ದಾರೆ. ಇತ್ತೀಚೆಗಷ್ಟೇ ರಕ್ತದಾನದ ಮೂಲಕ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ಮನವಿಯನ್ನೂ ಸಲ್ಲಿಸಿದ್ದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಡತದಲ್ಲಿ ಮಂಡಿಸುವಂತೆ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ
 • ಆರ್ಥಿಕ ಇಲಾಖೆ ಒಪ್ಪಿಗೆ ಮುಖ್ಯ: ಪಿಂಚಣಿ ನಿರ್ಧರಿಸುವುದು ಹಣಕಾಸಿಗೆ ಸಂಬಂಧಿಸಿದ ವಿಚಾರ ಆಗಿರುವುದರಿಂದ ಆರ್ಥಿಕ ಇಲಾಖೆ ನೀಡುವ ಅಭಿಪ್ರಾಯ ಮುಖ್ಯವಾಗಿದೆ. ಆದ್ದರಿಂದಲೇ ಇಲಾಖೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ರ್ಚಚಿಸಲು ಅಧಿಕಾರಿಗಳು ಉದ್ದೇಶಿಸಿದ್ದಾರೆಂದು ಮೂಲಗಳು ಹೇಳಿವೆ.

ಸರ್ಕಾರಕ್ಕೆ ಹೊರೆಯೇ?

ಎನ್​ಪಿಎಸ್ ರದ್ದು ಮಾಡುವುದು ಬೊಕ್ಕಸಕ್ಕೆ ಹೊರೆ ಆಗುವುದೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಸರ್ಕಾರದಲ್ಲಿ ಕಾಡುತ್ತಿದೆ. ಈ ವಿಚಾರವಾಗಿ ಎರಡು ರೀತಿಯ ಅಭಿಪ್ರಾಯಗಳು ಆರ್ಥಿಕ ಇಲಾಖೆಯಲ್ಲಿವೆ.

 1. ಹೊರೆ ಏಕೆ?
 • ಎನ್​ಪಿಎಸ್ ನೌಕರರನ್ನು ಹಳೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಒಳಪಡಿಸಿದರೆ ಸರ್ಕಾರಕ್ಕೆ ಪಿಂಚಣಿಯ ಹೊರೆ ಬೀಳುತ್ತದೆ. ಈಗಾಗಲೇ ಕುಟುಂಬ ಪಿಂಚಣಿ ನೀಡಲಾಗುತ್ತಿದೆ.
 • ಆದರೆ ಈ ವಾದವನ್ನು ಒಪ್ಪದವರೂ ಇದ್ದಾರೆ. ನೌಕರರಿಂದ ಕಡಿತ ಮಾಡಿರುವ 03 ಕೋಟಿ ರೂ.ಗಳ ಜತೆಗೆ, ಸರ್ಕಾರ ಸಹ ಅಷ್ಟೇ ಪ್ರಮಾಣದ ಮೊತ್ತವನ್ನು ಪಿಎಫ್​ಗಾಗಿ ಪಾವತಿಸಿದೆ. ಅದಕ್ಕೆ ವರ್ಷಕ್ಕೆ ಸರಾಸರಿ 3 ಕೋಟಿ ರೂ. ತೆರಿಗೆಯನ್ನು ಪಾವತಿಸುತ್ತಿದೆ. ನೌಕರರ ನಿವೃತ್ತಿ ಆರಂಭವಾಗುವುದು 2037ರಿಂದ.
 • ಈಗ ಇರುವ 5000 ಕೋಟಿ ರೂ.ಗಳನ್ನು ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಬಹುದು. ಹೊರೆಯೇನೂ ಆಗುವುದಿಲ್ಲ ಎಂಬ ಅಭಿಪ್ರಾಯ ನೌಕರರಲ್ಲಿದೆ. ಹಣಕಾಸು ಇಲಾಖೆಯ ಕೆಲ ಅಧಿಕಾರಿಗಳದೂ ಇದೇ ಅಭಿಪ್ರಾಯ.
 • ಖಾಸಗಿ ಸಂಸ್ಥೆ ನಿರ್ವಹಣೆ: ಎನ್​ಪಿಎಸ್ ಅನ್ನು ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ಖಾಸಗಿ ಸ್ವಾಮ್ಯದ ಬ್ಯಾಂಕ್ ಹಣಕಾಸಿನ ಉಸ್ತುವಾರಿ ನೋಡುತ್ತಿದೆ. ಯಾವ ಗ್ಯಾರಂಟಿಯೂ ಇಲ್ಲ, ಅದೇ ಹಣವನ್ನು ಸರ್ಕಾರ ಕೆಜಿಐಡಿಯಲ್ಲಿ ಹಾಕಿದರೆ ಗ್ಯಾರಂಟಿ ಇರುತ್ತದೆ ಎಂಬುದು ನೌಕರರ ಅಭಿಪ್ರಾಯ.

ಎಲ್ಲ ರಾಜ್ಯಗಳಲ್ಲೂ ಭರವಸೆ

 • ಚುನಾವಣೆ ನಡೆಯುತ್ತಿರುವ ತೆಲಂಗಾಣ ಸೇರಿ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಸಹ ತಮ್ಮ ಪ್ರಣಾಳಿಕೆಯಲ್ಲಿ ಎನ್​ಪಿಎಸ್ ರದ್ದು ಮಾಡುವ ಭರವಸೆ ನೀಡಿವೆ.

ಸಂಸತ್ ಚಲೋ

 • ಎನ್​ಪಿಎಸ್ ರದ್ದು ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಸಲುವಾಗಿ ವಿವಿಧ ರಾಜ್ಯಗಳ ಎನ್​ಪಿಎಸ್ ನೌಕರರು ನ.26ಕ್ಕೆ ದೆಹಲಿ ಚಲೋ ನಡೆಸಲಿದ್ದು, ರಾಜ್ಯದ 2000 ಜನ ಭಾಗವಹಿಸುತ್ತಿದ್ದಾರೆ.

ಸಮಿತಿ ಬೇಡ

 • ಮುಖ್ಯಮಂತ್ರಿ ಕುಮಾರಸ್ವಾಮಿ ಸಮಿತಿಯೊಂದನ್ನು ರಚಿಸುವ ಆಲೋಚನೆ ಮಾಡಿದ್ದರಾದರೂ ತಮಿಳುನಾಡಿನಲ್ಲಿ ಸಮಿತಿ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷವಾದರೂ ಯಾವುದೇ ನಿರ್ಧಾರ ಮಾಡಿಲ್ಲ. ಆದ್ದರಿಂದ ಸಮಿತಿ ಬೇಡ, ಸಭೆ ಮಾಡಿ ನಿರ್ಧಾರ ಮಾಡುವಂತೆ ಒತ್ತಡ ತರಲಾಗಿತ್ತು.

ಎರಡು ಲಕ್ಷ ನೌಕರರು

 • ಎನ್​ಪಿಎಸ್ ಆರಂಭವಾದ 2006ರ ಏ.1 ರಿಂದ ಈವರೆಗೆ ವಿವಿಧ ಇಲಾಖೆಗಳಿಗೆ ನೇಮಕವಾಗಿರುವ 2,00,898 ನೌಕರರಿದ್ದಾರೆ. ಅಲ್ಲದೇ ಅರೆ ಸರ್ಕಾರಿ, ಸ್ವಾಯತ್ತ ಸಂಸ್ಥೆಗಳು, ಅನುದಾನಿತ ಸಂಸ್ಥೆಗಳಿಗೆ ನೇಮಕವಾಗಿರುವ 50 ಲಕ್ಷ ನೌಕರರಿದ್ದಾರೆಂಬುದು ಸರ್ಕಾರದಿಂದಲೇ ಲಭ್ಯವಾಗಿರುವ ಮಾಹಿತಿ.

ಮರಳು ಸಮಿತಿ ರಚನೆ

ಸುದ್ಧಿಯಲ್ಲಿ ಏಕಿದೆ ?ಮರಳು ಗಣಿಗಾರಿಕೆಯಿಂದ ನದಿ ಪಾತ್ರಗಳಲ್ಲಿ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ಎಚ್ಚರವಹಿಸಲು ಮುಂದಾಗಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನದಿಗಳ ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಲು ಮುಂದಾಗಿದೆ.

 • ಮಲಪ್ರಭಾ, ತುಂಗಭದ್ರಾ, ಕೃಷ್ಣಾ ಹಾಗೂ ಭೀಮಾ ಸೇರಿ ಹಲವು ನದಿ ಪಾತ್ರಗಳಲ್ಲಿ ಸಾಮರ್ಥ್ಯಕ್ಕೆ ಮೀರಿದ ಗಣಿಗಾರಿಕೆ ನಡೆದಿರುವ ಅಂದಾಜಿದ್ದು, ಅಂಥ ನದಿ ಪಾತ್ರಗಳ ಅಧ್ಯಯನ ತಜ್ಞರ ಮೂಲಕ .
 • 8 ತಂಡಗಳ ರಚನೆ: ನದಿ ಪಾತ್ರಗಳಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ 8 ಸಮಿತಿಗಳು ಅಧ್ಯಯನ ನಡೆಸಲಿವೆ. ಭೌಗೋಳಿಕ ತಜ್ಞರನ್ನು ಒಳಗೊಂಡಿರುವ 8 ಸಮಿತಿಗಳು ರಚನೆ ಆಗಲಿದ್ದು, ತುಂಗಭದ್ರಾ, ಭೀಮಾ, ಕೃಷ್ಣಾ, ಮಲಪ್ರಭಾ, ಕಾಗಿನಾ, ವೇದಾವತಿ ಸೇರಿ ಇತರ ನದಿ ಪಾತ್ರಗಳಲ್ಲಿ ಮರಳು ಗಣಿಗಾರಿಕೆಯಿಂದ ಉಂಟಾಗಿರುವ ಅನಾಹುತಗಳ ಅಧ್ಯಯನ ನಡೆಸಲಿದೆ.
 • ಅಕ್ರಮ ಮರಳುಗಾರಿಕೆಯಿಂದ ಬೃಹದಾಕಾರದ ಗುಂಡಿಗಳಾಗಿ ನೀರಿಗೆ ಅಭಾವವಾಗಿದ್ದು, ಈ ಎಲ್ಲವನ್ನೂ ಪರಿಗಣಿಸಲಾಗುತ್ತದೆ.

ಎಂ-ಸ್ಯಾಂಡ್​ಗೆ ಆದ್ಯತೆ

 • ನದಿಪಾತ್ರಗಳಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಕೊಟ್ಟರೆ ಮುಂದೆಯೂ ಅದು ಅನಾಹುತಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ತಕ್ಷಣದಲ್ಲಿ ಕಡಿವಾಣ ಹಾಕಲು ನಿರ್ಧರಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಂ- ಸ್ಯಾಂಡ್​ಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದೆ.

ಪಟಾಕಿ ನಿರ್ಬಂಧ ಸಡಿಲಿಕೆ

3.

ಸುದ್ಧಿಯಲ್ಲಿ ಏಕಿದೆ ?ಪಟಾಕಿ ಸಿಡಿಸುವ ಅವಧಿಯ ಮೇಲಿನ ನಿರ್ಬಂಧದ ಆದೇಶವನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿರುವ ಸುಪ್ರೀಂ ಕೋರ್ಟ್, ಅವಧಿಯನ್ನು ಆಯಾ ರಾಜ್ಯ ಸರ್ಕಾರಗಳು ನಿಗದಿಗೊಳಿಸಬಹುದು ಹಾಗೂ ಹಸಿರು ಪಟಾಕಿ ಕೇವಲ ರಾಷ್ಟ್ರ ರಾಜಧಾನಿ ದೆಹಲಿಗೆ ಮಾತ್ರ ಸೀಮಿತ ಎಂದು ಸ್ಪಷ್ಟಪಡಿಸಿದೆ.

 • ಪಟಾಕಿಯನ್ನು ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಸಿಡಿಸಬೇಕು ಎಂದು ನಿಗದಿಪಡಿಸಿರುವುದನ್ನು ಬದಲಾಯಿಸ ಬೇಕು ಎಂದು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿತ್ತು.
 • ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಕೆ.ಸಿಕ್ರಿ ನೇತೃತ್ವದ ನ್ಯಾಯಪೀಠ, ಕಾಲಮಿತಿ (2 ಗಂಟೆ) ಹೆಚ್ಚಿಸಲು ಸಾಧ್ಯವೇ ಇಲ್ಲ.
 • ಆದರೆ ಆಯಾ ರಾಜ್ಯ ಸರ್ಕಾರಗಳು ಸ್ಥಳೀಯ ಅನುಕೂಲತೆಗೆ ತಕ್ಕಂತೆ 2 ಗಂಟೆ ಕಾಲಾವಧಿಯನ್ನು ಬೆಳಗ್ಗೆ, ಮಧ್ಯಾಹ್ನ ಅಥವಾ ಸಂಜೆಗೆ ಬದಲಾಯಿಸಿಕೊಳ್ಳಬಹುದು ಎಂದು ಕೋರ್ಟ್ ತಿಳಿಸಿದೆ. ಈ ಅವಕಾಶವನ್ನು ದಕ್ಷಿಣ ಭಾರತದ ರಾಜ್ಯಗಳಿಗೆ ಮಾತ್ರ ನೀಡಲಾಗಿದೆ.
 • ಇದಲ್ಲದೇ ಹಸಿರು ಪಟಾಕಿ ವಿಚಾರವು ದೆಹಲಿಗೆ ಮಾತ್ರ ಸೀಮಿತವಾಗಿದೆ. ದೀಪಾವಳಿಗೆ ಒಂದು ವಾರ ಬಾಕಿ ಇರುವ ಹಿನ್ನೆಲೆ ಈ ಅಲ್ಪಾವಧಿಯಲ್ಲಿ ಹಸಿರು ಪಟಾಕಿಯನ್ನು ಮಾರುಕಟ್ಟೆಗೆ ಬಿಡಲು ಸಾಧ್ಯವಿಲ್ಲ ಎಂದು ಪಟಾಕಿ ತಯಾರಕರ ಸಂಘ ಕೋರ್ಟ್​ಗೆ ಮನವಿ ಮಾಡಿತ್ತು.

ತಮಿಳುನಾಡು ವಾದವೇನು?

 • ಪ್ರತಿ ರಾಜ್ಯದಲ್ಲಿಯೂ ದೀಪಾವಳಿ ಆಚರಣೆ ಭಿನ್ನವಾಗಿದೆ. ಕೆಲ ರಾಜ್ಯಗಳಲ್ಲಿ ಮುಂಜಾನೆ ದೀಪ ಹಚ್ಚಿ, ಪಟಾಕಿ ಸಿಡಿಸಲಾಗುತ್ತದೆ. ಅಂಥ ಸ್ಥಳಗಳಲ್ಲಿ ಬೆಳಗ್ಗೆ 30ರಿಂದ 6.30ರವರೆಗೆ ಪಟಾಕಿ ಸಿಡಿಸಲು ಅವಕಾಶ ನೀಡಬೇಕು. ಪಟಾಕಿ ಹಚ್ಚುವ ವೇಳೆ ನಿಗದಿ ಆಯಾ ಧರ್ಮದವರ ನಂಬಿಕೆಯನ್ನು ಕೂಡ ಅವಲಂಬಿಸಿದೆ. ಹೀಗಾಗಿ 2 ಗಂಟೆ ಕಾಲಮಿತಿಯನ್ನು ಹೆಚ್ಚಿಸಬೇಕು ಎನ್ನುವುದು ಸರ್ಕಾರದ ವಾದವಾಗಿತ್ತು. ಇದಕ್ಕೆ ಒಪ್ಪದ ಸುಪ್ರೀಂ, ಪೂರ್ವ ಆದೇಶದಲ್ಲಿ ನಿಗದಿಪಡಿಸಲಾಗಿರುವ ಕಾಲಮಿತಿಯನ್ನು ಪಾಲಿಸುವುದು ಕಡ್ಡಾಯ ಎಂದಿದೆ.

ಸುಪ್ರೀಂ ಹೇಳಿದ್ದೇನು?

 • ದಿನದಲ್ಲಿ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ. ಆಯಾ ರಾಜ್ಯ ಸರ್ಕಾರಗಳು ಈ 2 ಗಂಟೆಯನ್ನು ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ನಿಗದಿ ಮಾಡಿಕೊಳ್ಳಬಹುದು.

ಮುಂದಿನ ವರ್ಷ ಹಸಿರು ಪಟಾಕಿ

 • ಸುಪ್ರೀಂಕೋರ್ಟ್ ಆದೇಶದಂತೆ ಹಸಿರು ಪಟಾಕಿಗಳನ್ನು ತಯಾರಿಸಲಾಗಿದೆ. ಆದರೆ ನವೆಂಬರ್ ಮೊದಲ ವಾರದ ದೀಪಾವಳಿ ಹಬ್ಬಕ್ಕೆ ಸರಿಯಾಗಿ ಬೇಡಿಕೆ ಈಡೇರಿಸುವುದು ಕಷ್ಟಸಾಧ್ಯ.
 • ಸುಮಾರು 6 ಸಾವಿರ ಕೋಟಿ ರೂ. ವಾರ್ಷಿಕ ವ್ಯವಹಾರ ಹಾಗೂ 5 ಲಕ್ಷ ಜನರಿಗೆ ಉದ್ಯೋಗಾವಕಾಶ ನೀಡುವ ಈ ಉದ್ಯಮದ ಅವಶ್ಯಕತೆಗೆ ತಕ್ಕಂತೆ ಹಸಿರು ಪಟಾಕಿ ರೂಪಿಸಲಾಗಿದೆ.
 • ಇದರ ಬಳಕೆಯಿಂದ ಶೇ.30 ಕಡಿಮೆ ಮಾಲಿನ್ಯವಾಗಲಿದೆ. ಇದರಲ್ಲಿ ರಾಸಾಯನಿಕಗಳ ಪ್ರಮಾಣ ಕೂಡ ತೀರ ಕಡಿಮೆ ಇರಲಿವೆ. ಮುಂದಿನ ವರ್ಷದ ದೀಪಾವಳಿಗೆ ಅಗತ್ಯ ಪ್ರಮಾಣದಲ್ಲಿ ಹಸಿರು ಪಟಾಕಿ ಪೂರೈಸಲಾಗುವುದು

ಮೊದಲ ದೇಶೀ ನಿರ್ಮಿತ ಟ್ರೇನ್ 18 

4.

ಸುದ್ಧಿಯಲ್ಲಿ ಏಕಿದೆ ?ಸಂಪೂರ್ಣ ಸ್ವದೇಶಿ ನಿರ್ಮಾಣದ ಇಂಜಿನ್ ರಹಿತ ಟ್ರೇನ್ 18 ಪರೀಕ್ಷಾರ್ಥ ಚಾಲನೆಗೆ ಅನುವಾಗುತ್ತಿದೆ. ನೋಡಲು ಬುಲೆಟ್ ಟ್ರೇನ್‌ನಂತಿರುವ ಟ್ರೇನ್ 18 ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ದೇಶದ ರೈಲು ಯಾನದಲ್ಲಿ ಹೊಸ ಗುರುತಾಗಲಿದೆ.

 • ಟ್ರೇನ್ 18 ನಿರ್ಮಾಣ, ವಿನ್ಯಾಸ ಪೂರ್ಣವಾಗಿ ಸ್ವದೇಶಿ ಆಗಿದ್ದು, ಚೆನ್ನೈನ ಅಂತರ್ಗತ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಾಣಗೊಂಡಿದೆ.
 • 16 ಕೋಚ್‌ಗಳ ಟ್ರೇನ್ 18 ನಿರ್ಮಾಣಕ್ಕೆ 18 ತಿಂಗಳ ಸಮಯಾವಕಾಶ ತಗುಲಿದೆ. ದೇಶದಲ್ಲಿ ಪ್ರಸ್ತುತ ಇರುವ ರೈಲುಗಳಲ್ಲಿ ಟ್ರೇನ್ 18 ಹೆಚ್ಚು ವೇಗ ಹೊಂದಿರುವ ರೈಲು ಆಗಿದ್ದು, ಗಂಟೆಗೆ 220 ಕಿಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದರೂ, ಪ್ರಸ್ತುತ 160 ಕಿಮೀ. ವೇಗದಲ್ಲಿ ಚಲಾಯಿಸಿ ಪರೀಕ್ಷಿಸಲಾಗುತ್ತದೆ.
 • ಕಡಿಮೆ ಇಂಧನ ಬಳಕೆ, ವೈ-ಫೈ ಸೌಲಭ್ಯ, 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ, ಒಟ್ಟು 1,128 ಆಸನ ವ್ಯವಸ್ಥೆ ಹೊಂದಿದೆ. ಆರಾಮದಾಯಕ ಸವಾರಿಗೆ ಹೆಚ್ಚು ಪ್ರಾಶಸ್ತ್ಯ ಕಲ್ಪಿಸಲಾಗಿದ್ದು, ಶತಾಬ್ಧಿ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಕ್ಕೆ ಹೋಲಿಸಿದರೆ ಶೇ. 15 ಪ್ರಯಾಣದ ಅವಧಿ ಉಳಿತಾಯವಾಗಲಿದೆ.
 • ಏಪ್ರಿಲ್ 2020 ವೇಳೆಗೆ ಒಟ್ಟು 5 ರೈಲುಗಳು ಸಿದ್ದವಾಗಿ ರೈಲ್ವೆಗೆ ಸೇರ್ಪಡೆಯಾಗಲಿವೆ.

ಸಾಮಾಜಿಕ ಭದ್ರತಾ ಯೋಜನೆಗಳ ನಿರ್ವಹಣೆಗೆ ಪ್ರತ್ಯೇಕ ವಿಭಾಗ

ಸುದ್ಧಿಯಲ್ಲಿ ಏಕಿದೆ ?ಸಾಮಾಜಿಕ ಭದ್ರತೆ ಯೋಜನೆಗಳನ್ನು ನಿರ್ವಹಿಸಲು ಕೇಂದ್ರ ಸರಕಾರಿ ಅಧಿಕಾರಿಗಳ ಪ್ರತ್ಯೇಕ ವಿಭಾಗವನ್ನು ರಚಿಸಲು ಮೋದಿ ಸರಕಾರವು ಮುಂದಾಗಿದೆ. ಸಾಮಾಜಿಕ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಇದರಿಂದ ಅನುಕೂಲವಾಗುವ ನಿರೀಕ್ಷೆ ಇದೆ.

 • ಅಧಿಕಾರಿಗಳ ಉದ್ದೇಶಿತ ವಿಭಾಗವನ್ನು ಇಂಡಿಯನ್‌ ಸೋಶಿಯಲ್‌ ಸೆಕ್ಯುರಿಟಿ ಸರ್ವೀಸ್‌(ಐಎಸ್‌ಎಸ್‌ಎಸ್‌) ಎಂದು ಕರೆಯಲಾಗುವುದು. ಅಧಿಕಾರಿಗಳನ್ನು ಹುಡುಕಿ ಅವರನ್ನು ಈ ವಿಭಾಗಕ್ಕೆ ನಿಯೋಜನೆ ಮಾಡಲು ಸರಕಾರ ಆಲೋಚಿಸುತ್ತಿದೆ.
 • ಇದರ ಅಡಿಯಲ್ಲಿ ಇಪಿಎಫ್‌ಒ ಮತ್ತು ಇಎಸ್‌ಐಸಿಯಲ್ಲಿನ(ಉದ್ಯೋಗಿಗಳ ರಾಜ್ಯ ವಿಮೆ ಕಾರ್ಪೊರೇಷನ್‌) ಗ್ರೂಪ್‌ ಎ ಅಧಿಕಾರಿಗಳ ವಿಭಾಗವನ್ನು ವಿಲೀನಗೊಳಿಸಿ ಪುನಾರಚಿಸಲು ಸರಕಾರ ಪರಿಶೀಲಿಸುತ್ತಿದೆ.
 • ಹಲವು ಲಕ್ಷ ಕೋಟಿ ರೂ.ಗಳ ಫಂಡ್‌ ಹೊಂದಿರುವ ಇಪಿಎಫ್‌ ಫಂಡ್‌ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿಗಳ ಪಡೆ ಅಗತ್ಯ ಎಂದು ಸರಕಾರ ಭಾವಿಸಿದೆ. ಪ್ರಸ್ತುತ ಇಪಿಎಫ್‌ಒ ಕೇಂದ್ರೀಯ ಮತ್ತು ಪ್ರಾಂತೀಯ ಕಚೇರಿಗಳಲ್ಲಿ 18,000 ಸಿಬ್ಬಂದಿಯಿದ್ದು, 2,000 ಮಂದಿ ಗ್ರೂಪ್‌ ಎ ಅಧಿಕಾರಿಗಳಿದ್ದಾರೆ.

ಏನಿದರ ಪ್ರಯೋಜನ?

 • ಇಪಿಎಫ್‌ಒ ಮತ್ತು ಇಎಸ್‌ಐಸಿ ಎನ್ನುವ ಕೇಂದ್ರ ಸರಕಾರದ ಈ ಸಂಸ್ಥೆಗಳು ಪಿಂಚಣಿ, ಭವಿಷ್ಯನಿಧಿ, ಆರೋಗ್ಯ ವಿಮೆ ಸೇರಿದಂತೆ ನಾನಾ ಸಾಮಾಜಿಕ ಭದ್ರತೆ ಯೋಜನೆಗಳನ್ನು ನಿರ್ವಹಿಸುತ್ತಿವೆ. 10 ಕೋಟಿಗೂ ಅಧಿಕ ಉದ್ಯೋಗಿಗಳ ಇದರ ಲಾಭ ಪಡೆಯುತ್ತಿದ್ದು, ಫಲಾನುಭವಿಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಇದರ ವ್ಯವಸ್ಥಿತ ನಿರ್ವಹಣೆಗೆ ಪ್ರತ್ಯೇಕ ವಿಭಾಗ ರಚನೆಗೆ ಸರಕಾರ ಮುಂದಾಗಿದೆ.

ಹೊಸ ದಾಖಲೆ ಸೃಷ್ಟಿಸಿದ ನಾಸಾದ ಬಾಹ್ಯಾಕಾಶ ನೌಕೆ

6.

ಸುದ್ಧಿಯಲ್ಲಿ ಏಕಿದೆ ?ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಈ ವರ್ಷ ತೆರಳಿದ್ದ ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಹೊಸ ದಾಖಲೆ ಸೃಷ್ಟಿಸಿದೆ. ”ಇದುವರೆಗೆ ಯಾವ ಮಾನವ ನಿರ್ಮಿತ ವಸ್ತುವೂ ಸೂರ್ಯನ ಸನಿಹ ತಲುಪದಷ್ಟು ನೌಕೆ ತಲುಪುವ ಮೂಲಕ ದಾಖಲೆ ಸೃಷ್ಟಿಸಿದೆ” ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಘೋಷಿಸಿದೆ.

 • ”ಸೂರ್ಯನ ಮೇಲ್ಮೈ ಪ್ರದೇಶದಿಂದ 55 ಮಿಲಿಯನ್ ಮೈಲುಗಳಷ್ಟು ದೂರ ( 42.73 ಮಿಲಿಯನ್ ಕಿ.ಮೀ. ) ಗಳಷ್ಟು ದೂರದ ಸದ್ಯದ ದಾಖಲೆಯನ್ನು ಬಾಹ್ಯಾಕಾಶ ನೌಕೆ ಅಕ್ಟೋಬರ್ 29, 2018ರಂದು ಅಂತಾರಾಷ್ಟ್ರೀಯ ಕಾಲಮಾನದ ಪ್ರಕಾರ 1704 ಜಿಎಂಟಿಯ ಸಮಯದಲ್ಲಿ ಅಳಿಸಿಹಾಕಿದೆ” ಎಂದು ನಾಸಾ ಮಾಹಿತಿ ನೀಡಿದೆ.
 • ಈ ಹಿಂದೆ ಏಪ್ರಿಲ್ 1976ರಲ್ಲಿ ಜರ್ಮನ್ – ಅಮೆರಿಕದ ಹೀಲಿಯೋಸ್ 2 ಬಾಹ್ಯಾಕಾಶ ಸೂರ್ಯನ ಹತ್ತಿರ ಹೋಗಿ ದಾಖಲೆ ಸೃಷ್ಟಿಸಿತ್ತು.
 • ಆಗಸ್ಟ್‌ ತಿಂಗಳಲ್ಲಿ 150 ಕೋಟಿ ಡಾಲರ್‌ ಮೌಲ್ಯದ ಮಾನವ ರಹಿತ ಬಾಹ್ಯಾಕಾಶ ನೌಕೆ ಸೂರ್ಯನ ಅಪಾಯಕಾರಿ ಬಿರುಗಾಳಿಯ ರಹಸ್ಯಗಳನ್ನು ತಿಳಿಯುವ ಮೂಲಕ ಭೂಮಿಯನ್ನು ರಕ್ಷಿಸುವ ಕಾರ್ಯತಂತ್ರದಿಂದ ಗಗನಕ್ಕೆ ಚಿಮ್ಮಿತ್ತು. ಇನ್ನು, ಸೂರ್ಯನ ಸುತ್ತ 24 ಸುತ್ತುಗಳನ್ನು ಹಾಕುವುದು ನೌಕೆಯ ಗುರಿಯಾಗಿದೆ.
 • ಅಲ್ಲದೆ, ಸೂರ್ಯನ ಬಳಿ ಪ್ರಯಾಣಿಸುತ್ತಿರುವ ಅತ್ಯಂತ ವೇಗದ ಬಾಹ್ಯಾಕಾಶ ನೌಕೆ ಎಂಬ ದಾಖಲೆಗೂ ಪಾತ್ರವಾಗುವ ನಿರೀಕ್ಷೆ ಇದೆ ಎಂದೂ ನಾಸಾ ತಿಳಿಸಿದೆ. ಸದ್ಯ, 246,960 ಕಿ.ಮೀ.ಗಳಷ್ಟು ವೇಗದಲ್ಲಿ ಪ್ರಯಾಣ ಬೆಳೆಸಿದ ದಾಖಲೆಯನ್ನು ಹೀಲಿಯೋಸ್ 2 ನೌಕೆ ಹೊಂದಿದೆ.
 • ಜತೆಗೆ, ಅಕ್ಟೋಬರ್ 31ರಂದು ಪಾರ್ಕರ್ ಸೂರ್ಯನಿಗೆ ಮತ್ತಷ್ಟು ಹತ್ತಿರ ಹೋಗಲಿದೆ. ಇನ್ನು, 2024ರ ವೇಳೆಗೆ ಸೂರ್ಯನ ಮೇಲ್ಮೈ ಪ್ರದೇಶದಿಂದ 83 ಮಿಲಿಯನ್ ಮೈಲುಗಳಷ್ಟು ಸನಿಹ ಹೋಗುವ ಮೂಲಕ ಮತ್ತಷ್ಟು ಹೊಸ ದಾಖಲೆ ನಿರ್ಮಿಸಲಿದೆ ಎಂದೂ ನಾಸಾ ತಿಳಿಸಲಿದೆ.
Related Posts
” 26 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂಡಸ್ ನದಿ ಯೋಜನೆ ಸುದ್ಧಿಯಲ್ಲಿ ಏಕಿದೆ ? ಇಂಡಸ್ ನದಿ ನೀರು ಹಂಚಿಕೆ ಕುರಿತು ಪಾಕಿಸ್ತಾನದೊಂದಿಗೆ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದದಂತೆ ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ. ನದಿಗೆ ಅಡ್ಡಲಾಗಿ ನಿರ್ವಿುಸುತ್ತಿರುವ ಎರಡು ಅಣೆಕಟ್ಟೆಗಳ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಲು ಸರ್ಕಾರ ...
READ MORE
“6th & 7th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಉನ್ನತಿ ಯೋಜನೆ ಸುದ್ಧಿಯಲ್ಲಿ ಏಕಿದೆ?ದುರ್ಬಲ ಸಮುದಾಯಕ್ಕೆ ಅನುಕೂಲವಾಗುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆ, ಆರ್ಥಿಕ ಸಬಲತೆ ಮತ್ತು ಕೌಶಲ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ ಉನ್ನತಿ ಎಂಬ ವಿನೂತನ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಉದ್ಯಮಿಗಳಿಗೆ ನವೋದ್ಯಮಗಳನ್ನು ಸ್ಥಾಪಿಸಲು ...
READ MORE
“23rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಬರಪೀಡಿತ ಜಿಲ್ಲೆ  ಸುದ್ದಿಯಲ್ಲಿ ಏಕಿದೆ? ಇನ್ನು ಮುಂದೆ ಯಾವುದೇ ತಾಲೂಕಿನ ಶೇ.75 ರಷ್ಟು ಕೃಷಿ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.50ರಷ್ಟು ತೇವಾಂಶವಿಲ್ಲದೆ ಶೇ.33 ರಷ್ಟು ಬೆಳೆ ನಾಶವಾದರೂ ಆ ಜಿಲ್ಲೆಯನ್ನೂ ಬರಪೀಡಿತ ಎಂದು ಘೋಷಿಸಬಹುದು . ಹಿನ್ನಲೆ ಬರ ಘೋಷಣೆಗೆ ಸಂಬಂಧಿಸಿದ ಕಠಿಣ ಮಾನದಂಡವನ್ನು ಕೇಂದ್ರ ಸರಕಾರ ...
READ MORE
“19 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶೀಘ್ರವೇ ನೋವಿಲ್ಲದ ಚಿಕಿತ್ಸೆ! ಸುದ್ಧಿಯಲ್ಲಿ ಏಕಿದೆ ?ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಕೊನೆಯ ದಿನಗಳನ್ನು ಎಣಿಸುತ್ತಿರುವ ರೋಗಿಗಳಿಗಾಗಿ ನೋವುರಹಿತ ಚಿಕಿತ್ಸಾ ಪದ್ಧತಿ ಜಾರಿಗೆ ತರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ನಡೆಸಿದೆ. ಯೋಜನೆಯ ಉದ್ದೇಶ ಕ್ಯಾನ್ಸರ್, ಏಡ್ಸ್ ಸೇರಿ ಗುಣಪಡಿಸಲಾಗದ ಕಾಯಿಲೆಗೆ ಒಳಪಟ್ಟವರು ಹಾಗೂ ...
READ MORE
28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
ಡೋಕ್ಲಾಂ ಬಿಕ್ಕಟ್ಟು ಸುದ್ಧಿಯಲ್ಲಿ ಏಕಿದೆ? ಸಿಕ್ಕಿಂ ಗಡಿಯ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸದ್ದಿಲ್ಲದೇ ಕಾರ್ಯಚಟುವಟಿಕೆ ಚುರುಕುಗೊಳಿಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಅಮೆರಿಕದ ಅಧಿಕಾರಿಯೊಬ್ಬರು ನೀಡಿದ್ದಾರೆ. ದೇಶದ ಉತ್ತರ ಭಾಗದಲ್ಲಿನ ಅತಿಕ್ರಮಣ ವಿರುದ್ಧ ಕಠಿಣ ನಿಲುವು ಪ್ರದರ್ಶಿಸುತ್ತಿರುವ ಭಾರತ, ಡೋಕ್ಲಾಂ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ...
READ MORE
9th & 10th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
 ‘ರಾಮಾಯಣ ದರ್ಶನ’ ಸುದ್ಧಿಯಲ್ಲಿ ಏಕಿದೆ? ರಾಮಾಯಣಕ್ಕೆ ಸಂಬಂಧಿಸಿದ ಬಹುತೇಕ ಸ್ಥಳಗಳ ದರ್ಶನವನ್ನು ರೈಲಿನ ಮೂಲಕ ಮಾಡಿಸುವ ವಿನೂತನ ಪ್ರಯೋಗಕ್ಕೆ ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಅಯೋಧ್ಯದಿಂದ ರಾಮೇಶ್ವರ ಮಾರ್ಗವಾಗಿ ಕೋಲೊಂಬೊವರೆಗೆ 16 ದಿನಗಳ ಪ್ರಯಾಣದಲ್ಲಿ ಈ ಸ್ಥಳಗಳ ದರ್ಶನ ಭಾಗ್ಯ ಪ್ರಯಾಣಿಕರಿಗೆ ಸಿಗಲಿದೆ. ‘ಶ್ರೀ ...
READ MORE
“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶಾಲೆಗೆ ಬನ್ನಿ ಶನಿವಾರ ಶೀಘ್ರ ಪುನಾರಂಭ ಸುದ್ಧಿಯಲ್ಲಿ ಏಕಿದೆ ?ಮೂಲೆಗುಂಪಾಗಿದ್ದ ಶಿಕ್ಷಣ ಇಲಾಖೆಯ ಜನಪ್ರಿಯ ಯೋಜನೆ ‘ಶಾಲೆಗೆ ಬನ್ನಿ ಶನಿವಾರ- ಕಲಿಯಲು ನೀಡಿ ಸಹಕಾರ’ ಮತ್ತೆ ಆರಂಭವಾಗಲಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಪಾಠ-ಪ್ರವಚನ ಮಾಡಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ...
READ MORE
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉದ್ಯೋಗ ಖಾತ್ರಿ ಹೆಚ್ಚಳ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಉದ್ಭವಿಸಿರುವ ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಕಾಯ್ದೆಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ 100 ದಿನಗಳ ಉದ್ಯೋಗವನ್ನು 150ಕ್ಕೆ ವಿಸ್ತರಿಸಲಾಗಿದ್ದು, ಈ ವರ್ಷ ಮಾನವ ದಿನಗಳ ಸೃಜನೆ ಗುರಿಯನ್ನು 8.5 ಕೋಟಿ ಯಿಂದ 10 ...
READ MORE
24th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಚಂದ್ರಯಾನ-2 ಉಡಾವಣೆ ಅಕ್ಟೋಬರ್​ಗೆ ಮುಂದೂಡಿಕೆ: ಇಸ್ರೋ ಚಂದ್ರನ ಮೂಲ ಮತ್ತು ಅದರ ವಿಕಾಸದ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ಮುಂದಿನ ತಿಂಗಳು ಉಡಾವಣೆಯಾಗಬೇಕಿದ್ದ ಚಂದ್ರಯಾನ-2 ಯೋಜನೆಯನ್ನು ಅಕ್ಟೋಬರ್​ ತಿಂಗಳಿಗೆ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ. ಇತ್ತೀಚೆಗೆ ನಡೆದ ತಜ್ಞರ ಸಭೆಯಲ್ಲಿ ಚಂದ್ರಯಾನ-2 ನೌಕೆಯನ್ನು ಮತ್ತಷ್ಟು ...
READ MORE
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಸಿವಿಜಿಲ್’ ಮೊಬೈಲ್ ಆಪ್ ಸುದ್ಧಿಯಲ್ಲಿ ಏಕಿದೆ ?ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಚುನಾವಣಾ ಆಯೋಗ ’ ಸಿವಿಜಿಲ್’ ಮೊಬೈಲ್ ಆಪ್ ಹೊರತರುತ್ತಿದೆ. ಆಪ್​ನಲ್ಲಿ ಅಕ್ರಮದ ಫೋಟೋ, ವೀಡಿಯೋ ಅಪ್​ಲೋಡ್ ಮಾಡಿದ 100 ನಿಮಿಷಗಳಲ್ಲಿ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿಯೂ ಲಭಿಸಲಿದೆ. ಹಿನ್ನಲೆ ಕಳೆದ ...
READ MORE
” 26 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“6th & 7th ಅಕ್ಟೋಬರ್ 2018 ಕನ್ನಡ ಪ್ರಚಲಿತ
“23rd ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“19 ಫೆಬ್ರವರಿ 2019 ರ ಕನ್ನಡ ಪ್ರಚಲಿತ
28th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
9th & 10th July ಜುಲೈ 2018 ಕನ್ನಡ ಪ್ರಚಲಿತ
“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
24th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
“15th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

Leave a Reply

Your email address will not be published. Required fields are marked *