“5 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಬೆಳೆ ದರ್ಶಕ ಆ್ಯಪ್

1.

ಸುದ್ಧಿಯಲ್ಲಿ ಏಕಿದೆ ? ರಾಜ್ಯ ಸರ್ಕಾರದ ಬೆಳೆ ದರ್ಶಕ ಆ್ಯಪ್ ಇದೀಗ ರೈತಸ್ನೇಹಿಯಾಗಿದ್ದು, ಅಂಗೈಯಲ್ಲೇ ಜಮೀನು ಹಾಗೂ ಬೆಳೆ ಸಮೀಕ್ಷೆ ಮಾಹಿತಿ ಲಭಿಸಲಿದೆ.

 • ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆ ‘ಬೆಳೆ ದರ್ಶಕ್’ ಆಪ್ ಅನ್ನು ಪರಿಚಯಿಸಿದ್ದು, ಈ ‘ಬೆಳೆ ದರ್ಶಕ್’ (Bele Darshak) ಆಪ್ ಮೂಲಕ ರೈತರು ತಮ್ಮ ಸ್ಮಾರ್ಟ್‌ಫೋನಿನಲ್ಲೇ ತಮ್ಮ ಹೊಲದ ಸಮೀಕ್ಷೆ ನಡೆದ ಸಚಿತ್ರ ವರದಿ ಅಥವಾ ಸಮೀಕ್ಷೆ ನಡೆದಿಲ್ಲವಾದರೆ ಸಮೀಕ್ಷೆ ನಡೆಸುವವರ ಹೆಸರು, ಮೊಬೈಲ್ ಸಂಖ್ಯೆ ಇತ್ಯಾದಿ ವಿವರ ಪಡೆಯಬಹುದಾಗಿದೆ.

ಏನಿದು ಬೆಳೆ ದರ್ಶಕ ಆ್ಯಪ್?

 • ಹೊಲದಲ್ಲಿನ ಬೆಳೆ, ಸರ್ವೆ ನಂಬರ್, ಜಮೀನು ಮಾಲೀಕನ ಭಾವಚಿತ್ರ ಸಹಿತ ದಾಖಲೆಗಳನ್ನು ಮೊಬೈಲ್​ನಲ್ಲೇ ವೀಕ್ಷಿಸಲು ರಾಜ್ಯ ಸರ್ಕಾರ ಬೆಳೆ ದರ್ಶಕ ಆ್ಯಪ್ ಪರಿಚಯಿಸಿದೆ. ಆರ್​ಟಿಸಿ ಸಂಖ್ಯೆ, ಬೆಳೆಗಳ ವಿವರ, ಭಾವಚಿತ್ರ ಇತ್ಯಾದಿ ವಿವರಗಳನ್ನು ಸಮೀಕ್ಷೆದಾರರು ತಂತ್ರಾಂಶದ ಮೂಲಕ ದಾಖಲೀಕರಿಸುತ್ತಾರೆ.
 • ರೈತರ ಬೆಳೆ ಹಾನಿ ಲೆಕ್ಕ ಹಾಕಿ ಪರಿಹಾರ ನೀಡಲು, ಸರ್ಕಾರದ ಯೋಜನೆಗಳನ್ನು ಅನಧಿಕೃತ ವ್ಯಕ್ತಿಗಳು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಈ ಆ್ಯಪ್ ಸಹಕಾರಿ.
 • ಈ ಆಪ್‌ನಲ್ಲಿ ಬೆಳೆ ಸಮೀಕ್ಷೆ ಕಾರ್ಯ ಈವರೆಗೂ ಆರಂಭವಾಗದಿದ್ದರೆ ಕರೆ ಮಾಡಿ ಸಮೀಕ್ಷೆ ನಡೆಸುವವರನ್ನು ಸಂಪರ್ಕಿಸಬಹುದು. ಅಲ್ಲಿ ದಾಖಲಿಸಿರುವ ಮಾಹಿತಿ ಸರಿಯಾಗಿಲ್ಲದಿದ್ದರೆ ತಾಲ್ಲೂಕು ಕಚೇರಿಗೆ ದೂರನ್ನು ನೀಡಬಹುದಾಗಿದೆ. ಸರಳವಾದ ಎರಡು ಪರದೆಯುಳ್ಳ ಆಂಡ್ರಾಯ್ಡ್ ಅಪ್ಲಿಕೇಷನ್ ಇದಾಗಿದ್ದು, ಇದನ್ನು ಬಳಸುವ ವಿಧಾನ ಕೂಡ ಅತ್ಯಂತ ಸರಳವಾಗಿದೆ.

ಮೊದಲ ಸ್ಥಾನದಲ್ಲಿ ಹಾವೇರಿ

 • ಬೆಳೆ ಸಮೀಕ್ಷೆಯಲ್ಲಿ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಕೊಡಗು ಕೊನೇ ಸ್ಥಾನದಲ್ಲಿದೆ.
 • ದಾವಣಗೆರೆ ಮತ್ತು ಕೊಪ್ಪಳ ಕ್ರಮವಾಗಿ 2-3ನೇ ಸ್ಥಾನದಲ್ಲಿವೆ. ಹಾವೇರಿ ಜಿಲ್ಲೆಯಲ್ಲಿ 770 ಸಮೀಕ್ಷೆದಾರರಿದ್ದು, 5.42 ಲಕ್ಷ ಜಮೀನು ಸಮೀಕ್ಷೆ ಗುರಿ ಪೈಕಿ 78 ಲಕ್ಷ ಮುಗಿದಿದೆ.

ವಿಷನ್ ಬೆಂಗಳೂರು-2050 ಯೋಜನೆ

2.

ಸುದ್ಧಿಯಲ್ಲಿ ಏಕಿದೆ ? ರಾಜಧಾನಿಗೆ ಅಂಟಿಕೊಂಡಿರುವ ಐದು ನಗರ ಹಾಗೂ ಪಟ್ಟಣಗಳಿಗೆ ವರ್ತಲಾಕಾರದಲ್ಲಿ ರಸ್ತೆ ಸಂಪರ್ಕ ಕಲ್ಪಿಸುವ ವಿಷನ್ ಬೆಂಗಳೂರು-2050 ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಯಾವ್ಯಾವ ಪ್ರದೇಶ?

 • ಹೊಸಕೋಟೆ, ದೊಡ್ಡಬಳ್ಳಾಪುರ, ದಾಬಸ್​ಪೇಟೆ, ರಾಮನಗರ ಹಾಗೂ ಆನೇಕಲ್ ಪಟ್ಟಣಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಈ ಯೋಜನೆಯನ್ನು ಬಿಎಂಆರ್​ಡಿ ಸಿದ್ಧಪಡಿಸಲು ಮುಂದಾಗಿದೆ.

ಉದ್ದೇಶ

 • ಬೆಂಗಳೂರು ಅಡ್ಡಾದಿಡ್ಡಿಯಾಗಿ ಬೆಳೆಯುವುದನ್ನು ತಪ್ಪಿಸಲು ಈ ಯೋಜನೆ ರೂಪಿಸಲಾಗಿದೆ.

ಹೇಗಿರುತ್ತದೆ ಯೋಜನೆ?

 • ಪೆರಿಫೆರಲ್ ವರ್ತಲ ರಸ್ತೆ ಮೂಲಕ ಈ ನಗರ, ಪಟ್ಟಣಗಳ ನಡುವೆ ಸಂಪರ್ಕ ರಸ್ತೆ ನಿರ್ವಣವಾಗಲಿದೆ. ಇಷ್ಟು ನಗರಗಳನ್ನು ಒಂದು ವರ್ತಲದಲ್ಲಿ ಸೇರಿಸಲಾಗುವುದು. ಇದರಿಂದ ಈ ನಗರ ಹಾಗೂ ಪಟ್ಟಣಗಳ ನಡುವೆ ಹಲವು ಟೌನ್​ಶಿಪ್ ನಿರ್ಮಾಣ ಮಾಡಬಹುದು. ಇದರಿಂದ ಬೆಂಗಳೂರು ನಗರದ ಮೇಲಿನ ಒತ್ತಡ ನಿವಾರಣೆಯಾಗಲಿದೆ.

ಪ್ರಯೋಜನಗಳು

 • ಈ ಪ್ರದೇಶಗಳಲ್ಲಿ ಉಪನಗರಗಳು ನಿರ್ಮಾಣವಾಗಲಿವೆ
 • ಇದರಿಂದ ನಗರ ಕೇಂದ್ರ ಪ್ರದೇಶಗಳ ಮೇಲೆ ಅವಲಂಬನೆ ಕಡಿಮೆಯಾಗಲಿದೆ
 • ಇಲ್ಲಿ ಸಂಚಾರ ದಟ್ಟಣೆ ,ಕುಡಿಯುವ ನೀರು ಪೂರೈಕೆ ಹಾಗೂ ವಸತಿ ಸಮಸ್ಯೆಗಳನ್ನು ನೀಗಿಸಲು ಸಹಾಯಕವಾಗಿದೆ

ಹಿನ್ನಲೆ

 • ಈ ಮೊದಲೇ ಸರ್ಕಾರ ವಿಷನ್ ಬೆಂಗಳೂರು-2031 ನಿರ್ವಿುಸಲು ಮುಂದಾಗಿತ್ತು. ಇದೇ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿ 2050ನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಲಾಗುವುದು. ಸದ್ಯ ಬೆಂಗಳೂರು ನಗರ ಪೂರ್ವ ಯೋಜಿತವಾಗಿ ಅಭಿವೃದ್ಧಿ ಹೊಂದುತ್ತಿಲ್ಲ. ಇದರಿಂದ ಭವಿಷ್ಯದಲ್ಲಿ ಸಮಸ್ಯೆ ಎದುರಾಗಲಿದೆ. ಇದನ್ನು ತಪ್ಪಿಸಲು ಯೋಜನೆ ಜಾರಿಗೆ ತರಲಾಗುತ್ತಿದೆ

ಲಾಲ್‌ಬಾಗ್‌ನಲ್ಲಿ ಮರದ ಮೇಲೆ ಹೆಸರು ಕೆತ್ತಿದರೆ ದಂಡ !

3.

ಸುದ್ಧಿಯಲ್ಲಿ ಏಕಿದೆ ? ಲಾಲ್‌ಬಾಗ್‌ ವೀಕ್ಷಣೆ, ವಿಹಾರಕ್ಕೆಂದು ಆಗಮಿಸುವವರು ಮರಗಳಿಗೆ ಹಾನಿ ಮಾಡುವ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಂಡ ವಿಧಿಸಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ.

 • ಲಾಲ್‌ಬಾಗ್‌ನಲ್ಲಿ ಮರಗಳ ಮೇಲೆ ಹೆಸರು, ಹೃದಯ ಸಿಂಬಲ್‌ ಕೆತ್ತಲು ಮುಂದಾದರೆ ಇಲ್ಲವೇ ಇತರೆ ರೀತಿ ಹಾನಿ ಮಾಡಿದರೆ ಮುಂದಿನ ದಿನಗಳಲ್ಲಿ 500 ರೂ. ದಂಡ ಕಟ್ಟಿಟ್ಟ ಬುತ್ತಿ !

ಯಾವ್ಯಾವ ರೀತಿ ಹಾನಿ:

 • ಕೆಲ ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಮರಗಳಲ್ಲಿ ಹೆಸರನ್ನು ಕೆತ್ತುವುದುಂಟು, ಇಲ್ಲವೇ ಭಗ್ನಪ್ರೇಮಿಗಳು ಹೆಸರನ್ನು ಮೂಡಿಸುವುದುಂಟು. ಇಂತಹ ಪ್ರಕರಣಗಳು ಹೆಚ್ಚಾಗಿ ನಡೆದಿವೆ. ಇದಲ್ಲದೆ ಕೆಲವರು ಬ್ಯಾಸ್ಕೆಟ್‌ ಬಾಲ್‌ ಆಟಕ್ಕಾಗಿ ಬ್ಯಾಸ್ಕೆಟ್‌ ನೆಟ್‌ ಹಾಕಲು ಮೊಳೆ ಹೊಡೆಯುವುದುಂಟು, ಕೆಲವರು ವಿನಾಕಾರಣ ಮರಗಳಿಗೆ ಹಾನಿ ಮಾಡಿದ್ದೂ ಉಂಟು

ಮರಗಳನ್ನು ಕೆತ್ತುವುದರಿಂದಾಗುವ ಹಾನಿ:

 • ತೊಗಟೆ ಮೇಲೆ ಕಾಂಡ ಕಾಣುವಂತೆ ಹೆಸರನ್ನು ಕೆತ್ತಿದರೆ ಮರಗಳಿಗೆ ತೀವ್ರ ಪ್ರಮಾಣದ ಹಾನಿ ಉಂಟಾಗುತ್ತದೆ.
 • ಅವುಗಳು ಉಳಿವಿಗೂ ಧಕ್ಕೆ ಉಂಟಾಗುತ್ತದೆ.
 • ಆದರೆ ಮರಗಳಿಗೆ ವಿನ್ಯಾಸ ಕೊಡುವಾಗ ಬೋಡಾಕ್ಸ್‌ ಮತ್ತಿತರ ರಾಸಾಯನಿಕಗಳನ್ನು ಲೇಪಿಸಿ ವಿನ್ಯಾಸವನ್ನು ಕೊಡುತ್ತೇವೆ. ಇದರಿಂದಾಗಿ ಕೊರೆದ ಜಾಗ ಮತ್ತೆ ಬೆಳೆಯುತ್ತದೆ. ಇದರಿಂದ ಮರಕ್ಕೆ ಯಾವುದೇ ರೀತಿ ಹಾನಿಯಾಗುವುದಿಲ್ಲ.

ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ

4.

ಸುದ್ಧಿಯಲ್ಲಿ ಏಕಿದೆ ? ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಕರಾರುವಕ್ಕಾದ ದತ್ತಾಂಶ ಸಂಗ್ರಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಗ್ರಾಮಪಂಚಾಯಿತಿ ಮಟ್ಟದಲ್ಲಿ ಹೊಸದಾಗಿ ಸರ್ವೆ ನಡೆಸಲು ಮುಂದಾಗಿದೆ.

ಕಾರಣ

 • ಶಾಲಾ ಮುಖ್ಯವಾಹಿನಿಗೆ ಬಂದ ವಿದ್ಯಾರ್ಥಿಗಳನ್ನು ಎಸ್‌ಎಟಿಎಸ್‌ ವ್ಯವಸ್ಥೆ ಮೂಲಕ ಕಂಡುಕೊಳ್ಳುವ ವ್ಯವಸ್ಥೆ ಶಿಕ್ಷಣ ಇಲಾಖೆಯಲ್ಲಿದೆ. ಆದರೆ ಎಸ್‌ಎಟಿಎಸ್‌ ವ್ಯವಸ್ಥೆಯಲ್ಲಿ ನಮೂದಾಗಿರುವ ವಿದ್ಯಾರ್ಥಿಗಳ ಸಂಖ್ಯೆ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಬಳಿಯಿರುವ ಅಂಕಿ ಅಂಶಗಳಿಗೂ ಭಾರೀ ವ್ಯತ್ಯಾಸ ಕಂಡುಬಂದಿರುವ ಕಾರಣ ಹೊಸದಾಗಿ ಸರ್ವೆ ಮಾಡಲು ಇಲಾಖೆ ಆದೇಶಿಸಿದೆ.
 • 2018-19ನೇ ಸಾಲಿನಲ್ಲಿ 6ರಿಂದ 16 ವರ್ಷದ ಸುಮಾರು 82,713 ವಿದ್ಯಾರ್ಥಿಗಳು ಶಾಲೆಗಳಿಂದ ಹೊರಗುಳಿದಿದ್ದಾರೆ ಎಂದು ಎಸ್‌ಎಟಿಎಸ್‌ನ ಅಂಕಿಅಂಶಗಳು ಹೇಳುತ್ತಿವೆ.
 • ಶಾಲಾ ವಿದ್ಯಾರ್ಥಿಗಳ ವಿಸ್ತೃತ ಮತ್ತು ಪರಿಣಾಮಕಾರಿಯಾದ ಸಮೀಕ್ಷೆ ನಡೆಸುವ ಅಗತ್ಯವಿದ್ದು, ಶಿಕ್ಷಣ , ಕಾರ್ಮಿಕ , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ , ನಗರಾಭಿವೃದ್ಧಿ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆಗಳ ಸಮನ್ವಯದೊಂದಿಗೆ ಗ್ರಾ.ಪಂ. ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಎನ್‌ಎಸ್‌ಎಸ್‌ ಸೇರಿದಂತೆ ಇತರೆ ಸ್ವಯಂ ಸೇವಕರ ತಂಡ ರಚಿಸಿ ಸಮೀಕ್ಷೆ ನಡೆಸುವಂತೆ ತಿಳಿಸಲಾಗಿದೆ.

ಮೂರು ಸಮಿತಿ ರಚನೆ

 • ಸಮೀಕ್ಷೆಯ ಮೇಲ್ವಿಚಾರಣೆಗೆ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಮೂರು ಸಮಿತಿ ರಚಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಈ ಸಮಿತಿಗೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿದ್ದು, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
 • ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಳಿದ ಇಲಾಖೆಯ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕುಮಟ್ಟದಲ್ಲಿ ತಹಸೀಲ್ದಾರ್‌ ಅಧ್ಯಕ್ಷತೆಯ ಸಮಿತಿ ರಚಿಸಲಾಗಿದೆ.

ಎಲ್ಲೆಲ್ಲಿ ಸಮೀಕ್ಷೆ ನಡೆಸಬೇಕು ?

 • ಕಟ್ಟಡ ಕಾಮಗಾರಿ ನಡೆಯುವ ಸ್ಥಳ, ಬಂದಿಖಾನೆಗಳು, ಮದರಸಾದಲ್ಲಿ ಕಲಿಯುತ್ತಿರುವ ಮಕ್ಕಳು, ಆಸ್ಪತ್ರೆ, ಹೋಟೆಲ್‌, ಛತ್ರಗಳು, ಚಿತ್ರಮಂದಿರಗಳು, ಸಣ್ಣ ಕಾರ್ಖಾನೆಗಳು, ಇಟ್ಟಿಗೆ ಕಾರ್ಖಾನೆಗಳು, ಮಂಡಕ್ಕಿ ಭಟ್ಟಿಗಳು, ಕೃಷಿ ಮತ್ತು ತೋಟಗಾರಿಕೆ ಪ್ರದೇಶಗಳು, ಎಸ್ಟೇಟ್‌ಗಳು, ರಸ್ತೆ ಕಾಮಗಾರಿ, ಗಣಿ ಪ್ರದೇಶ, ಕ್ವಾರಿಗಳು ಸೇರಿದಂತೆ ಎಲ್ಲ ಪ್ರದೇಶದಲ್ಲಿ ಸಮೀಕ್ಷೆ ನಡೆಸಬೇಕು.
 • ಈ ವೇಳೆ ಆಧಾರ್‌ ಹೊಂದಿರದ ಮಕ್ಕಳಿಗೆ ಆಧಾರ್‌ ಸಂಖ್ಯೆಯನ್ನು ಪಡೆಯಲು ಅಗತ್ಯ ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆ ತಿಳಿಸಿದೆ.

5ಜಿ ಫೋನ್‌

5.

ಸುದ್ಧಿಯಲ್ಲಿ ಏಕಿದೆ ? 2019ರ ಅಂತ್ಯಕ್ಕೆ ಅಥವಾ 2020ರ ಆರಂಭದ ಹೊತ್ತಿಗೆ 5ಜಿ ಸ್ಮಾರ್ಟ್‌ಫೋನ್‌ಗಳು ಭಾರತಕ್ಕೆ ಬರಲಿವೆ. 2020ರ ಮುಕ್ತಾಯದ ಹೊತ್ತಿಗೆ ದೊಡ್ಡ ಪ್ರಮಾಣದಲ್ಲಿ 5ಜಿ ಸ್ಮಾರ್ಟ್‌ಫೋನ್‌ಗಳು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಸದ್ದು ಮಾಡಲಿವೆ.

 • ಉದ್ಯಮ ತಜ್ಞರು ಮತ್ತು ಅಧಿಕಾರಿಗಳ ಪ್ರಕಾರ, 5ಜಿ ಸ್ಮಾರ್ಟ್‌ಫೋನ್‌ಗಳ ದರ ಆರಂಭದಲ್ಲಿ ದುಬಾರಿಯಾದರೂ 2020ರಲ್ಲಿ ಅಗ್ಗವಾಗಲಿವೆ.
 • ಪ್ರಾಯೋಗಿಕವಾಗಿ 5ಜಿ ಸ್ಮಾರ್ಟ್‌ಫೋನ್‌ಗಳು 2019ರ ಜನವರಿಯಿಂದಲೇ ಭಾರತಕ್ಕೆ ಬರಲಿವೆ. ಕೊರಿಯನ್‌ ಮೂಲದ ಪ್ರಮುಖ ಹ್ಯಾಂಡ್‌ಸೆಟ್‌ ತಯಾರಕ ಕಂಪನಿ ಸ್ಯಾಮ್‌ಸಂಗ್‌ ಮತ್ತು ಚೀನಾದ ಒನ್‌ಪ್ಲಸ್‌, ಹುವೇ, ವಿವೊ, ಒಪ್ಪೊ, ಕ್ಸಿಯೋಮಿ ಕಂಪನಿಗಳು 5ಜಿ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಗೆ ಸಜ್ಜಾಗಿವೆ.
 • 2ಜಿ, 3ಜಿ ಸ್ಮಾರ್ಟ್‌ಫೋನ್‌ಗಳು ಬಳಕೆದಾರರನ್ನು ತಲುಪಲು ಸಾಕಷ್ಟು ಸಮಯವನ್ನು ತೆಗೆದುಕೊಂಡವು. ಈಗ 4ಜಿ ಜಮಾನ ಆರಂಭವಾಗಿದೆ. ಆದರೆ, 5ಜಿ ಸ್ಮಾರ್ಟ್‌ಫೋನ್‌ಗಳು ತ್ವರಿತವಾಗಿ ಮಾರುಕಟ್ಟೆಯನ್ನು ಆಕ್ರಮಿಸಲಿವೆ. ಕಡಿಮೆ ಅವಧಿಯಲ್ಲಿಯೇ ಗ್ರಾಹಕರನ್ನು ತಲುಪಲಿವೆ.
 • 2019-20ಕ್ಕೆ ಭಾರತದಲ್ಲಿ 5ಜಿ ಎಕೊಸಿಸ್ಟಮ್‌ ಸೃಷ್ಟಿಯಾಗಬಹುದು. ಆದರೆ, ಅಗ್ಗದ ದರದ ಮತ್ತು ದೊಡ್ಡ ಪ್ರಮಾಣದ 5ಜಿ ಸ್ಮಾರ್ಟ್‌ಫೋನ್‌ಗಳ ಸದ್ದು 2021ರಿಂದಷ್ಟೇ ಸಾಧ್ಯ ಎಂದು ರಿಲಯನ್ಸ್‌ ಜಿಯೊ ಅಂದಾಜು ಮಾಡಿದೆ.
 • ಭಾರತದಲ್ಲಿ 2019ರ ಆರಂಭದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾಯೋಗಿಕವಾಗಿ 5ಜಿ ಸೇವೆ ಆರಂಭಗೊಳ್ಳಲಿದೆ. 2019ರ ಅರ್ಧಭಾಗದ ಹೊತ್ತಿಗೆ ತರಂಗಗುಚ್ಛಗಳ ಹರಾಜು ನಡೆಯಲಿದ್ದು, 2020ರ ಹೊತ್ತಿಗೆ 5ಜಿ ಸೇವೆಯು ಕಮರ್ಷಿಯಲ್‌ ಆಗಿ ಆರಂಭವಾಗಲಿದೆ. ಮುಂದಿನ ತಲೆಮಾರಿನ ತಂತ್ರಜ್ಞಾನವನ್ನು ನಿಗದಿತ ಸಮಯದೊಳಗೆ ದೇಶದಲ್ಲಿ ವ್ಯಾಪಿಸಲು ಭಾರತ ಸರಕಾರವೂ ಕಾರ್ಯಪ್ರವೃತ್ತವಾಗಿದೆ.

ಅಮೆರಿಕದಲ್ಲಿ ಈಗಾಗಲೇ ಶುರು

 • ಜಾಗತಿಕ ಮಟ್ಟದಲ್ಲಿ ಅದರಲ್ಲೂ ಅಮೆರಿಕದಲ್ಲಿ ಸೀಮಿತ ಸಂಖ್ಯೆಯಲ್ಲಿ ಕಮರ್ಷಿಯಲ್‌ 5ಜಿ ಸೇವೆ ಈಗಾಗಲೇ ಚಾಲ್ತಿಯಲ್ಲಿದೆ. 2019ರ ಆರಂಭದಲ್ಲಿ 5ಜಿ ವ್ಯಾಪ್ತಿ ಹಿಗ್ಗಲಿದೆ. ದಕ್ಷಿಣ ಕೊರಿಯಾ, ಜಪಾನ್‌, ಚೀನಾ ಮತ್ತು ಯುರೋಪ್‌ನ ಕೆಲವು ದೇಶಗಳು 2019ರ ಆರಂಭದಲ್ಲಿಯೇ 5ಜಿ ಕಮರ್ಷಿಯಲ್‌ ಸೇವೆಗೆ ಚಾಲನೆ ನೀಡುವ ಯೋಜನೆಯನ್ನು ಹೊಂದಿವೆ.

5 ಜಿ

 • 5G ಯು ಮೂರನೆಯ ತಲೆಮಾರಿನ ಪಾಲುದಾರಿಕೆ ಯೋಜನೆ (3 ಜಿಪಿಪಿ) ಆಧಾರಿತ ನಿಸ್ತಂತು ಸಂವಹನ ತಂತ್ರಜ್ಞಾನವಾಗಿದೆ. ಇದು 4G LTE ನೆಟ್ವರ್ಕ್ಗಳ ನಂತರ ಮುಂದಿನ ಪೀಳಿಗೆಯ ಮೊಬೈಲ್ ನೆಟ್ವರ್ಕ್ ತಂತ್ರಜ್ಞಾನವಾಗಿದೆ.
 • ಕವರೇಜ್ ಅವಶ್ಯಕತೆಗಳನ್ನು ಪೂರೈಸುವ R15 ರಿಪೀಟರ್ಗಳ ಮೂಲಕ ವರ್ಧಿತ ಮೊಬೈಲ್ ಬ್ರಾಡ್ಬ್ಯಾಂಡ್ (ಇಎಮ್ಬಿಬಿ) ಅನ್ನು ಒದಗಿಸುವ ನಿರೀಕ್ಷೆಯಿದೆ.
 • 5G ವೈರ್ಲೆಸ್ ತಂತ್ರಜ್ಞಾನವು ಪ್ರಸ್ತುತ 4G ನೆಟ್ವರ್ಕ್ಗಳಿಗಿಂತ 100 ಪಟ್ಟು ವೇಗವಾದ ಇಂಟರ್ನೆಟ್ ಡೇಟಾ ವೇಗವನ್ನು ಹೆಚ್ಚಿಸುತ್ತದೆ ಮತ್ತು ಡೌನ್ಲೋಡ್ ವೇಗವನ್ನು ನೀಡುತ್ತದೆ.
 • ಇದು ಥಿಂಗ್ಸ್ ಇಂಟರ್ನೆಟ್ (ಐಒಟಿ) ಮತ್ತು ವರ್ಧಿತ ರಿಯಾಲಿಟಿ (ಎಆರ್) / ವರ್ಚುವಲ್ ರಿಯಾಲಿಟಿ (ವಿಆರ್) ನಂತಹ ವೈವಿಧ್ಯಮಯ ಸೇವೆಗಳಿಗೆ ಸ್ಪೆಕ್ಟ್ರಲ್ ದಕ್ಷತೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುವ ಸಾಮರ್ಥ್ಯವನ್ನು ಹೊಂದಿದೆ.

ಮರಳಿ ಮಂದಿರ ಚಳವಳಿ

6.

ಸುದ್ಧಿಯಲ್ಲಿ ಏಕಿದೆ ? ರಾಮ ಮಂದಿರ ನಿರ್ಮಾಣಕ್ಕಾಗಿ ಅಗತ್ಯವಾದರೆ 1992ರ ಮಾದರಿಯ ಹೋರಾಟ ನಡೆಸಲು ಸಿದ್ಧ ಎಂದು ಆರೆಸ್ಸೆಸ್‌ ಗರ್ಜಿಸಿದೆ. ಹೀಗಾಗಿ, ಮತ್ತೊಮ್ಮೆ ದೇಶದಲ್ಲಿ ಅಯೋಧ್ಯೆ ಚಳವಳಿ ರೂಪುಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.

ಏನಿದು 1992 ಮಾದರಿ?

 • ಬಿಜೆಪಿ ನಾಯಕ ಎಲ್‌.ಕೆ. ಆಡ್ವಾಣಿ ನೇತೃತ್ವದಲ್ಲಿ ದೇಶವ್ಯಾಪಿ ರಥಯಾತ್ರೆ ಕೈಗೊಂಡು ಮಂದಿರ ನಿರ್ಮಾಣಕ್ಕೆ ಜನಾಂದೋಲನ ರೂಪಿಸಲಾಗಿತ್ತು.
 • 1990ರ ಸೆ.25ರಂದು ಗುಜರಾತ್‌ನ ಸೋಮನಾಥದಿಂದ ಆರಂಭವಾದ ಯಾತ್ರೆಯನ್ನು ದಿನಕ್ಕೆ 300 ಕಿ.ಮೀ ಕ್ರಮಿಸಿ, ಅ.30ಕ್ಕೆ ಅಯೋಧ್ಯೆಯಲ್ಲಿ ಕೊನೆಗೊಳ್ಳುವಂತೆ ಯೋಜಿಸಲಾಗಿತ್ತು. ಮಾರ್ಗ ಮಧ್ಯೆ ಆಡ್ವಾಣಿ ಅವರನ್ನು ಬಂಧಿಸಲಾಗಿತ್ತು. ಈ ಯಾತ್ರೆಗೆ ಭಾರಿ ಜನ ಬೆಂಬಲ ವ್ಯಕ್ತವಾಗಿತ್ತು.
 • ಮುಂದಿನ 2 ವರ್ಷಗಳಲ್ಲಿ ಅಯೋಧ್ಯಾ ಹೋರಾಟ ನಿರಂತರವಾಗಿ ನಡೆದಿತ್ತು. ಗ್ರಾಮ ಗ್ರಾಮಗಳಲ್ಲಿ ರಥ ಸಂಚಾರ, ಮಂದಿರ ನಿರ್ಮಾಣಕ್ಕೆ ಇಟ್ಟಿಗೆಗಳ ಸಂಗ್ರಹ, ಮನೆ ಮನೆಯಲ್ಲಿ ಶಿಲಾಪೂಜನ ಆಯೋಜಿಸಲಾಗಿತ್ತು. 1992ರ ಡಿಸೆಂಬರ್‌ 6ರಂದು ಕರಸೇವೆಗೆ ದೇಶಾದ್ಯಂತದಿಂದ ಲಕ್ಷಾಂತರ ಮಂದಿ ಹೋಗಿದ್ದರು. ಅಂತಿಮವಾಗಿ ಇಡೀ ವಿವಾದಾಸ್ಪದ ಕಟ್ಟಡವೇ ಕರಸೇವಕರ ಕೈಯಲ್ಲಿ ನೆಲಸಮವಾಗಿತ್ತು.

ಹಿನ್ನಲೆ

 • ಕಳೆದ ಅ.29ರಂದು ಸುಪ್ರೀಂ ಕೋರ್ಟ್‌ ರಾಮ ಜನ್ಮಭೂಮಿ ವಿವಾದದ ವಿಚಾರಣೆಯನ್ನು 2019ರ ಜನವರಿಗೆ ಮುಂದೂಡಿತ್ತು.
 • 14 ಅರ್ಜಿಗಳು : ವಿವಾದಿತ 77 ಎಕರೆ ಜಾಗವನ್ನು ರಾಮ ಲಲ್ಲಾ, ನಿರ್ಮೋಹಿ ಅಖಾಡ ಮತ್ತು ಸುನ್ನಿ ವಕ್ಫ್ ಮಂಡಳಿ ಈ ಮೂರರ ನಡುವೆ ಸಮಾನವಾಗಿ ಹಂಚಬೇಕೆಂದು 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಒಟ್ಟು 14 ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿವೆ.

ಇಂಜಿನಿಯರಿಂಗ್ಅದ್ಭುತ ಸಿಗ್ನೇಚರ್ ಸೇತುವೆ ಉದ್ಘಾಟನೆ

7.

ಸುದ್ಧಿಯಲ್ಲಿ ಏಕಿದೆ ? ವಾಯವ್ಯ ದೆಹಲಿಯ ವಜಿರಾಬಾದ್​ನಲ್ಲಿ ಯಮುನಾ ನದಿಗೆ ನಿರ್ವಿುಸಿರುವ ಸಿಗ್ನೇಚರ್ ಸೇತುವೆ ಭಾನುವಾರ ಉದ್ಘಾಟನೆಗೊಂಡಿದೆ. 14 ವರ್ಷಗಳ ಸುದೀರ್ಘ ಕಾಮಗಾರಿ ಬಳಿಕ ಇದು ಲೋಕಾರ್ಪಣೆಗೊಂಡಿದೆ. ದೆಹಲಿಯ ಪ್ರಮುಖ ಹೆಗ್ಗುರುತುಗಳ ಪಟ್ಟಿಗೆ ಈ ಬ್ರಿಜ್ ಹೊಸದಾಗಿ ಸೇರ್ಪಡೆಯಾಗಿದೆ.

 • ಇಂಜಿನಿಯರಿಂಗ್ ಅದ್ಭುತ ಎನಿಸಿಕೊಂಡಿರುವ ಈ ಸೇತುವೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಜಂಟಿಯಾಗಿ ಉದ್ಘಾಟಿಸಿದ್ದಾರೆ.

ಸೇತುವೆ ವಿಶೇಷ

 • 154 ಮೀಟರ್ ಎತ್ತರ, 575 ಮೀಟರ್ ಉದ್ದ, 35.2 ಮೀಟರ್ ಅಗಲ, 127 ಕೇಬಲ್
 • 104 ಸೆನ್ಸರ್ ಅಳವಡಿಕೆ, ದಿನದ 24 ತಾಸೂ ಸೇತುವೆ ಮೇಲೆ ನಿಗಾ. ಹಾನಿ ಸಂಭವಿಸಿದರೆ ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ರವಾನೆ
 • ವಿಹಂಗಮ (ಪನೋರಮಿಕ್) ನೋಟ ವೀಕ್ಷಣೆಗೆ ಗಾಜಿನ ಕೋಣೆ
 • ಕುತುಬ್ ಮಿನಾರ್​ಗಿಂತ ಎರಡು ಪಟ್ಟು ಎತ್ತರದ ಗಾಜಿನ ಕೋಣೆ
 • ಬ್ರಿಜ್ ಮೇಲ್ಭಾಗಕ್ಕೆ ಹೋಗಲು 4 ಎಲಿವೇಟರ್, 50 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ
 • ಸೇತುವೆಯ ಒಂದೇ ಬದಿಯಲ್ಲಿ ಕೇಬಲ್ ಅಳವಡಿಸಿರುವ ದೇಶದ ಮೊದಲ ಬ್ರಿಜ್ ಎಂಬ ಶ್ರೇಯ
 • ಎರಡನೇ ಹಂತದ ಕಾಮಗಾರಿಯಲ್ಲಿ ಸಿಗ್ನೇಚರ್ ಬ್ರಿಜ್ ಪ್ರವಾಸಿ ತಾಣವಾಗಿ ಅಭಿವೃದ್ಧಿ
 • ಸೇತುವೆಯಿಂದಾಗಿ ದೆಹಲಿ ಉತ್ತರ ಮತ್ತು ಈಶಾನ್ಯ ಭಾಗದ ನಡುವೆ ಸಂಚಾರದ ಅವಧಿ ಇಳಿಕೆ

ಇನ್ನು ರೂಪಾಯಿಯಲ್ಲೇ ತೈಲ ವಹಿವಾಟು

8.

ಸುದ್ಧಿಯಲ್ಲಿ ಏಕಿದೆ ? ಇರಾನ್​ನಿಂದ ಮಾಡಿಕೊಳ್ಳುವ ತೈಲ ಆಮದಿನ ಮೇಲೆ ಅಮೆರಿಕ ಹೇರಿರುವ ನಿರ್ಬಂಧ ಮತ್ತಿತರ ಕಾರಣದಿಂದಾಗಿ ಡಾಲರ್ ಎದುರು ನಿಲ್ಲಲು ರೂಪಾಯಿ ಪರದಾಡುತ್ತಿದೆ. ಹೀಗಾಗಿ ರೂಪಾಯಿಗೆ ಬಲ ತುಂಬಲು ಇನ್ಮುಂದೆ ಇರಾನ್ ಜತೆಗಿನ ತೈಲ ಖರೀದಿ ವ್ಯವಹಾರವನ್ನು ಯುರೋ ಬದಲು ಭಾರತೀಯ ಕರೆನ್ಸಿ ಮೂಲಕವೇ ನಡೆಸಲು ಸಿದ್ಧತೆ ನಡೆಯುತ್ತಿದೆ.

 • ಇದು ಜಾರಿಯಾದಲ್ಲಿ ಯುಕೊ ಬ್ಯಾಂಕ್ ಮೂಲಕ ಭಾರತ ಇರಾನ್​ಗೆ ಹಣ ಪಾವತಿಸಲಿದೆ.
 • ಇರಾನ್ ಜತೆಗಿನ ತೈಲ ಖರೀದಿ ವ್ಯವಹಾರವನ್ನು ಅಮೆರಿಕ ಡಾಲರ್ ಅಥವಾ ಯುರೋ ಬದಲು ಸಂಪೂರ್ಣವಾಗಿ ಭಾರತೀಯ ಕರೆನ್ಸಿ ರೂಪಾಯಿ ಮೂಲಕ ನಡೆಸಲು ಎರಡೂ ರಾಷ್ಟ್ರಗಳು ನಿರ್ಧರಿಸಿವೆ. ಈ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಇದರಿಂದ ಕಡಿಮೆ ಬೆಲೆಗೆ ಕಚ್ಚಾತೈಲ ಆಮದಾಗುವ ಜತೆಗೆ ರೂಪಾಯಿ ಬಲವರ್ಧನೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏನಿದು ಯೋಜನೆ?:

 • ಇರಾನ್​ನಿಂದ ಖರೀದಿಸಲಾದ ತೈಲದ ಮೊತ್ತವನ್ನು ಭಾರತದ ಬ್ಯಾಂಕ್ ಮೂಲಕ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತರಲು ಭಾರತ, ಇರಾನ್ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದುವರೆಗೂ ತೈಲ ಖರೀದಿ ವ್ಯವಹಾರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಪಾವತಿ ಮೊತ್ತದ ಶೇ. 45ನ್ನು ರೂಪಾಯಿಯಲ್ಲಿ ಯುಕೊ ಬ್ಯಾಂಕ್ ಮೂಲಕ ನೀಡಲಾಗುತ್ತಿತ್ತು. ಶೇ. 55 ಮೊತ್ತವನ್ನು ಯುರೋ ಕರೆನ್ಸಿಯಲ್ಲಿ ಪಾವತಿಸಲಾಗುತ್ತಿತ್ತು.
 • ಇನ್ನು ತೈಲ ವ್ಯವಹಾರದ ಎಲ್ಲ ಪಾವತಿಗಳನ್ನು ರೂಪಾಯಿ ಮೂಲಕವೇ ಮಾಡಲಾಗುತ್ತದೆ. ಈ ಮೊತ್ತ ಬಳಸಿ ತನಗೆ ಅವಶ್ಯಕವಾದ ಉತ್ಪನ್ನಗಳನ್ನು ಇರಾನ್ ಭಾರತದಿಂದ ಆಮದು ಮಾಡಿಕೊಳ್ಳಲಿದೆ.
 • ಆದರೆ ಭಾರತ ಸೇರಿದಂತೆ 8 ರಾಷ್ಟ್ರಗಳಿಗೆ 180 ದಿನಗಳವರೆಗೆ ತೈಲ ಆಮದಿಗೆ ವಿನಾಯಿತಿ ಸಿಕ್ಕಿದೆ. ಉಳಿದ ರಾಷ್ಟ್ರಗಳು ಇರಾನ್ ಜತೆ ಯಾವುದೇ ವ್ಯಾಪಾರಗಳನ್ನು ನಡೆಸುವಂತಿಲ್ಲ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ಅಮೆರಿಕ ಬಾಗಿದ್ದೇಕೆ?

 • ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಅಭಾವ ಸೃಷ್ಟಿಯಾಗುವುದನ್ನು ತಡೆಯುವುದು
 • ರಾಜಕೀಯ ತಂತ್ರಗಾರಿಕೆಯಿಂದಾಗಿ ಇಂಧನ ದರ ತೀವ್ರ ಏರಿಕೆಯಾದರೆ ಮಿತ್ರರಾಷ್ಟ್ರಗಳು ಅಸಮಾಧಾನ ಹೊಂದಬಹುದೆಂಬ ಆತಂಕ
 • ಏಷ್ಯಾ ಖಂಡದ ರಾಷ್ಟ್ರಗಳು ತಿರುಗಿಬೀಳಬಹುದೆಂಬ ಲೆಕ್ಕಾಚಾರ
 • ಅಮೆರಿಕ ವಿರುದ್ಧ ಅಸಮಾಧಾನ ಹೊಂದಿರುವ ರಾಷ್ಟ್ರಗಳು ಭವಿಷ್ಯದಲ್ಲಿ ಒಟ್ಟಾಗುವ ಆತಂಕ

ಯುಕೊ ಬ್ಯಾಂಕ್ ಏಕೆ?

 • ಸ್ವಿಫ್ಟ್ ಪಾವತಿ ವ್ಯವಸ್ಥೆ, ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆಯಿಂದ ಇರಾನ್​ನ್ನು ಹೊರಹಾಕುವುದಾಗಿ ಅಮೆರಿಕ ಎಚ್ಚರಿಸಿದೆ. ಇಂಥ ಸಂದರ್ಭದಲ್ಲೂ ಭಾರತ ಸರಾಗವಾಗಿ ಇರಾನ್​ನಿಂದ ತೈಲ ಆಮದು ಮಾಡಿಕೊಳ್ಳಬಹುದು. ಬ್ಯಾಂಕಿಂಗ್ ನಿರ್ಬಂಧ ಇರಾನ್ ಮೂಲದ ಬ್ಯಾಂಕ್​ಗಳಿಗೆ ಮಾತ್ರ ಅನ್ವಯವಾಗಲಿದೆ. ಹೀಗಾಗಿ ಯುಕೊ ಬ್ಯಾಂಕ್ ಮೂಲಕ ವಹಿವಾಟು ನಡೆಸಲು ನಿರ್ಧರಿಸಲಾಗಿದೆ.

ಎಸ್​ಕ್ರೋ ಖಾತೆ

 • ಅಮೆರಿಕದಿಂದ ವಿನಾಯಿತಿ ಪಡೆದು ಇರಾನ್​ನಿಂದ ತೈಲ ಆಮದು ಮುಂದುವರಿಸಲಿರುವ ರಾಷ್ಟ್ರಗಳಿಗೆ ಟ್ರಂಪ್ ಆಡಳಿತದ ಅಧಿಕಾರಿಗಳು ಎಸ್​ಕ್ರೋ ಖಾತೆ ರಚಿಸಲು ಸೂಚಿಸಿದ್ದಾರೆ. ಪ್ರತಿ ಬಾರಿ ಇರಾನ್ ತೈಲ ಮಾರಾಟ ಮಾಡಿದಾಗ, ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರದ ಬ್ಯಾಂಕ್​ನಲ್ಲಿನ ಎಸ್​ಕ್ರೋ ಖಾತೆಗೆ ಮೊತ್ತ ಜಮೆ ಮಾಡಲಾಗುತ್ತದೆ. ಈ ಮೂಲಕ ಇರಾನ್​ಗೆ ನೇರವಾಗಿ ತನ್ನ ಕರೆನ್ಸಿಯಲ್ಲಿಯೇ ಆದಾಯ ಸಿಗದಂತೆ ಮಾಡುವುದು ಅಮೆರಿಕದ ತಂತ್ರ. ಎಸ್​ಕ್ರೋ ಖಾತೆಯಲ್ಲಿನ ಮೊತ್ತವನ್ನು ಇರಾನ್ ಸರ್ಕಾರ ತನ್ನ ಪ್ರಜೆಗಳ ಅವಶ್ಯಕ ಉತ್ಪನ್ನಗಳಿಗೆ ಮಾತ್ರ ವೆಚ್ಚ ಮಾಡಬಹುದಾಗಿದೆ.

ಪ್ರಯೋಜನವೇನು?

 • ಅಮೆರಿಕ ಡಾಲರ್ ಎದುರು ರೂಪಾಯಿ ಬಲವರ್ಧನೆ
 • ಡಾಲರ್ ಮೌಲ್ಯ ಏರಿಕೆಯಾದರೂ ಭಾರತಕ್ಕೆ ಕಡಿಮೆ ದರದಲ್ಲಿ ತೈಲ ಲಭ್ಯ
 • ವಿತ್ತೀಯ ಕೊರತೆ, ಚಾಲ್ತಿ ಖಾತೆ ಕೊರತೆ ನಿವಾರಣೆಗೆ ಸಹಾಯಕ
 • ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ ಸಾಧ್ಯತೆ

ಇರಾನ್​ಗೆ ಹಣ ನೀಡಲು ವಿಶೇಷ ವಿಧಾನ!

 • ಇರಾನ್ ಅಣು ಒಪ್ಪಂದದಿಂದ ಅಮೆರಿಕ ಹೊರನಡೆದಿದ್ದು, ಐರೋಪ್ಯ ಒಕ್ಕೂಟ ಮಾತ್ರ ಒಪ್ಪಂದದ ಪರವಾಗಿದೆ. ಹಾಗಾಗಿ ಇರಾನ್ ಜತೆಗಿನ ಹಣದ ವಹಿವಾಟಿಗಾಗಿ ವಿಶೇಷ ಮಾರ್ಗ (ಎಸ್​ಪಿವಿ) ಸಿದ್ಧಗೊಳಿಸಲಾಗುತ್ತಿದೆ. ಆದರೆ 2019ರವರೆಗೆ ಈ ವ್ಯವಸ್ಥೆ ಜಾರಿಗೆ ಬರುವುದು ಕಷ್ಟಸಾಧ್ಯ ಎಂದು ಅರಿತ ಭಾರತ , ಅಮೆರಿಕವನ್ನು ಎದುರು ಹಾಕಿಕೊಳ್ಳುವ ಬದಲು ತೈಲ ಆಮದು ಪ್ರಮಾಣ ಕಡಿಮೆ ಮಾಡಿ ನಿರ್ಬಂಧದಿಂದ ಪಾರಾಗಿದೆ. ವಿಶೇಷ ವಿಧಾನ ಸಿದ್ಧಗೊಂಡ ಬಳಿಕ ಅಮೆರಿಕದ ನಿರ್ಬಂಧಕ್ಕೆ ಆತಂಕಗೊಳ್ಳುವ ಪ್ರಮೇಯ ಭಾರತಕ್ಕೆ ಎದುರಾಗುವುದಿಲ್ಲ.

Related Posts
” 23 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮನೆಮನೆಗೂ ಅನಿಲ ಭಾಗ್ಯ ಸುದ್ಧಿಯಲ್ಲಿ ಏಕಿದೆ ? ದೇಶದ 129 ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ವ್ಯವಸ್ಥೆ(ಸಿಜಿಡಿ) ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಕೊಳವೆಗಳ ಮೂಲಕ ನೈಸರ್ಗಿಕ ಅನಿಲ (ಸಿಎನ್‌ಜಿ) ವನ್ನು ಮನೆಮನೆಗೂ ತಲುಪಿಸುವ ಯೋಜನೆ ಇದು. ನಗರ ಅನಿಲ ...
READ MORE
“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ರಾಷ್ಟ್ರೀಯ ಯುವ ದಿನ ಸುದ್ಧಿಯಲ್ಲಿ ಏಕಿದೆ ?ಸ್ವಾಮಿ ವಿವೇಕಾನಂದರ ಸ್ವರಣಾರ್ಥ ಜ.12ನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. 1984 ರಲ್ಲಿ ಭಾರತ ಸರಕಾರ ದಿನವನ್ನು ರಾಷ್ಟ್ರೀಯ ಯುವ ...
READ MORE
“29th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ದೇವಾಲಯಗಳ ದೇಣಿಗೆ ಕಡ್ಡಾಯವೆಂಬ ಆದೇಶ ತಿದ್ದುಪಡಿ ಸುದ್ಧಿಯಲ್ಲಿ ಏಕಿದೆ ? ರಾಜ್ಯದ 81 ದೇವಾಲಯಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುಮಾರು 12.38 ಕೋಟಿ ಹಣ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್‌ ಇತ್ಯರ್ಥಗೊಳಿಸಿದೆ. ಹಿನ್ನಲೆ ಸರಕಾರ ಆ.21ರಂದು ಹೊರಡಿಸಿದ್ದ ಆದೇಶದ ಪ್ರಕಾರ ...
READ MORE
10th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಮಹಿಳಾ ಸುರಕ್ಷತೆಗೆ ವಿಶೇಷ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ 8 ಪ್ರಮುಖ ನಗರಗಳಲ್ಲಿ ನಾರಿಯರ ಸುರಕ್ಷತೆಗಾಗಿ ಕೇಂದ್ರ ಸರಕಾರ ವಿಶೇಷ ಯೋಜನೆ ಘೋಷಿಸಿದ್ದು, ಇದಕ್ಕಾಗಿ 3,000 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ಬೆಂಗಳೂರು, ದಿಲ್ಲಿ, ಹೈದರಾಬಾದ್‌ ಒಳಗೊಂಡಂತೆ ...
READ MORE
ಜೀವಸತ್ವಗಳು (ವಿಟಮಿನ್‌) ನಮ್ಮ ದೇಹದ ವಿವಿಧ ಕಾರ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾದ ಅಂಶಗಳು. ನಾವು ಸೇವಿಸುವ ಆಹಾರದಲ್ಲಿನ ಜೀವಸತ್ವಗಳು ಪಚನವಾಗಿ ರಕ್ತದಲ್ಲಿ ಹೀರುವಂತಾಗಲು ಜಿಡ್ಡಿನಂಶದ ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಜಿಡ್ಡಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ (Water Soluble) ಜೀವಸತ್ವಗಳೆಂದು ವಿಂಗಡಿಸಲಾಗಿದೆ. ಜೀವಸತ್ವ ಎ.ಡಿ.ಇ.ಕೆ.ಗಳನ್ನು (ವಿಟಮಿನ್‌ ...
READ MORE
“17 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕಾವೇರಿ ಆನ್‌ಲೈನ್ ಸೇವೆ ಸುದ್ಧಿಯಲ್ಲಿ ಏಕಿದೆ ?ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಭಿವೃದ್ಧಿ ಪಡಿಸಿರುವ ಕಾವೇರಿ-ಆನ್‌ಲೈನ್ ಸೇವೆಗಳಿಗೆ ಚಾಲನೆ ನೀಡಿದರು. ಉದ್ದೇಶ ಸಬ್​ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬೇರೂರಿರುವ ಮಧ್ಯವರ್ತಿಗಳ ಹಾವಳಿಗೆ ತಿಲಾಂಜಲಿ ಇಡುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ‘ಕಾವೇರಿ’ ...
READ MORE
“15 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಂಪ್ರದಾಯಿಕ ಕುಶಲತೆ ಸಂರಕ್ಷಣೆಗೆ ಬದ್ಧ ಸುದ್ಧಿಯಲ್ಲಿ ಏಕಿದೆ ? ರಾಜ್ಯದ ಸಾಂಪ್ರದಾಯಿಕ ಕುಶಲತೆಯನ್ನು ಸಂರಕ್ಷಿಸಲು ಭೌಗೋಳಿಕ ಗುರುತುಗಳ ನೀತಿ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಎಫ್‌ಕೆಸಿಸಿ ಆಶ್ರಯದಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಮ್ಮಿಕೊಂಡಿದದ 'ಕರಡು ಭೌಗೋಳಿಕ ಗುರುತುಗಳ ನೀತಿ' ಕುರಿತಾದ ಪಾಲುದಾರರ ಸಮಾವೇಶವನ್ನು ಉದ್ಘಾಟಿಸಿದರು. 2018-19ನೇ ಸಾಲಿನ ...
READ MORE
“1st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪುರಂದರದಾಸರು ಸುದ್ದಿಯಲ್ಲಿ ಏಕಿದ್ದಾರೆ? ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರ ಹುಟ್ಟೂರಿನ ಜಿಜ್ಞಾಸೆಗೆ ಕೊನೆಗೂ ತೆರೆ ಬಿದ್ದಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಪ್ರಾಂತ್ಯವೇ ದಾಸಶ್ರೇಷ್ಠ ಪುರಂದರಾಸರ ಹುಟ್ಟೂರು ಎಂಬ ಖಚಿತ ವರದಿಯನ್ನು ಅಧ್ಯಯನ ಸಮಿತಿ ಸರಕಾರಕ್ಕೆ ಸಲ್ಲಿಸಿದೆ. ಪುರಂದರದಾಸರ ಹುಟ್ಟೂರು ಮಲೆಸೀಮೆ ಎಂಬ ...
READ MORE
“15th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಾವೇರಿ ನದಿ ನೀರು ಪ್ರಾಧಿಕಾರ ಸುದ್ದಿಯಲ್ಲಿ ಏಕಿದೆ? ಕಾವೇರಿ ಜಲವಿವಾದ ನ್ಯಾಯಾಧೀಕರಣ 2007ರ ತನ್ನ ಐತೀರ್ಪಿನಲ್ಲಿ ಹೇಳಿದ್ದ ನೀರು ನಿರ್ವಹಣಾ ಮಂಡಳಿಯ ತದ್ರೂಪದಂತಿರುವ 'ಕಾವೇರಿ ನೀರು ನಿರ್ವಹಣಾ ಯೋಜನೆ-2018'ರ ಕರಡನ್ನು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಸಲ್ಲಿಸಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಲು ...
READ MORE
ವಿವಿಧ ಅರಸರ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಿ ಬ್ರಿಟಿಷರು ಒಡೆದು ಆಳುವ ನೀತಿ ಅನುಸರಿಸಿದ್ದರು. ಆದರೆ, ಪಟೇಲ್ ಅವರು ಎಲ್ಲಾ ರಾಜ್ಯಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸಿದರು . ಅರಸರ ಆಡಳಿತದಲ್ಲಿ ಇದ್ದ ರಾಜ್ಯಗಳನ್ನು ಒಕ್ಕೂಟದಲ್ಲಿ ಸೇರಿಸಲು ಪಟೇಲರು ರಾಜಕೀಯ ಚಾತುರ್ಯ ತೋರಿಸಿದ್ದರು. ಚಾಣಕ್ಯನೂ ದೇಶವನ್ನು ...
READ MORE
” 23 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“29th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
10th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಜೀವಸತ್ವಗಳು
“17 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“1st ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“15th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಒಂದೇ ಭಾರತ, ಶ್ರೇಷ್ಠ ಭಾರತ’ ಚಾಲನೆ

Leave a Reply

Your email address will not be published. Required fields are marked *