“31 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಜಡ್ಜ್​ಗಳ ಕೊರತೆ ಪಟ್ಟಿಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ

1.

ಸುದ್ಧಿಯಲ್ಲಿ ಏಕಿದೆ ? ನ್ಯಾಯಾಧೀಶರ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳು 2, 3ನೇ ಸ್ಥಾನದಲ್ಲಿವೆ. ಕರ್ನಾಟಕ 7ನೇ ಸ್ಥಾನದಲ್ಲಿದೆ.

 • ಉತ್ತರ ಪ್ರದೇಶದಲ್ಲಿ 1,188 ಹುದ್ದೆಗಳು ಖಾಲಿ ಇವೆ. ಬಿಹಾರದಲ್ಲಿ 622 ಹಾಗೂ ಮಧ್ಯಪ್ರದೇಶದಲ್ಲಿ 511 ಹುದ್ದೆಗಳು ಖಾಲಿ ಉಳಿದಿವೆ. ಕರ್ನಾಟಕದಲ್ಲಿ 231 ನ್ಯಾಯಾಧೀಶರ ಹುದ್ದೆಗಳು ಖಾಲಿ ಉಳಿದಿವೆ. ಒಟ್ಟಾರೆ ವಿವಿಧ ರಾಜ್ಯಗಳ ಅಧೀನ ನ್ಯಾಯಾಲಯಗಳಲ್ಲಿ ಒಟ್ಟು 5,135 ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ.
 • 10 ವರ್ಷಕ್ಕೂ ಅಧಿಕ ಸಮಯದಿಂದ ನ್ಯಾಯಾಲಯಗಳಲ್ಲೇ ಉಳಿದಿರುವ ಪ್ರಕರಣಗಳ ಸಂಖ್ಯೆಯೂ ಉತ್ತರಪ್ರದೇಶದಲ್ಲೇ ಹೆಚ್ಚಿದ್ದು,8, 29,128 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.
 • ಹೈಕೋರ್ಟ್​ಗಳ ಸ್ಥಿತಿಯೂ ಭಿನ್ನ ಅಗಿಲ್ಲ: ದೇಶದ 24 ಹೈಕೋರ್ಟ್​ಗಳಿಗೆ ಮಂಜೂರಾಗಿರುವ 1,079 ನ್ಯಾಯಮೂರ್ತಿ ಗಳಲ್ಲಿ ಸದ್ಯ 695 ನ್ಯಾಯಮೂರ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, 387 ನ್ಯಾಯಮೂರ್ತಿ ಹುದ್ದೆಗಳು ಖಾಲಿ ಇವೆ. ಈ ಎಲ್ಲ ಹೈಕೋರ್ಟ್​ಗಳಲ್ಲಿ ಒಟ್ಟು 49,83,236 ಕೇಸ್​ಗಳು ವಿಚಾರಣೆಗೆ ಬಾಕಿ ಇವೆ. ರಾಜಸ್ಥಾನ ಹಾಗೂ ಅಲಹಾಬಾದ್ ಹೈಕೋರ್ಟ್​ಗಳಲ್ಲಿ 7 ಲಕ್ಷಕ್ಕೂ ಅಧಿಕ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದರೆ, ಬಾಂಬೆ ಹೈಕೋರ್ಟ್​ನಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ 3 ಲಕ್ಷಕ್ಕೂ ಹೆಚ್ಚಿದೆ. ಕರ್ನಾಟಕದಲ್ಲಿ ಅಂದಾಜು 1 ಲಕ್ಷ 80 ಸಾವಿರ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.

ನ್ಯಾಯಮೂರ್ತಿಗಳ ನೇಮಕ ಹೇಗೆ?

 • ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಹೆಸರುಗಳ ಪಟ್ಟಿಯನ್ನು ಸುಪ್ರೀಂಕೋರ್ಟ್ ಕೊಲಿಜಿಯಂಗೆ ಕಳುಹಿಸುತ್ತದೆ. ಇವುಗಳನ್ನು ಸೂಕ್ತವಾಗಿ ಅಧ್ಯಯನ ನಡೆಸುವ ಸುಪ್ರಿಂಕೋರ್ಟ್ ಕೊಲಿಜಿಯಂ ಸರ್ಕಾರಕ್ಕೆ ಅಂತಿಮ ಹೆಸರುಗಳನ್ನು ಶಿಫಾರಸು ಮಾಡುತ್ತದೆ. ಕೇಂದ್ರ ಸರ್ಕಾರ ಈ ಹೆಸರುಗಳನ್ನು ಸ್ವೀಕರಿಸಬಹುದು, ಇಲ್ಲವೇ ಮರುಪರಿಶೀಲನೆಗೆ ಸೂಚಿಸಬಹುದು.

ರಾಷ್ಟ್ರೀಯ ಜಾತಿ ಗಣತಿ

2.

ಸುದ್ಧಿಯಲ್ಲಿ ಏಕಿದೆ ? ಇತರ ಹಿಂದುಳಿದ ವರ್ಗಗಳ ಕೇಂದ್ರ ಪಟ್ಟಿಯಲ್ಲಿ ಒಳಮೀಸಲು ಕಲ್ಪಿಸುವ ವಿಚಾರಕ್ಕೆ ಸಂಬಂಧಿಸಿ ರಾಷ್ಟ್ರೀಯ ಜಾತಿ ಗಣತಿಗೆ ಶಿಫಾರಸು ಮಾಡಲಾಗಿದೆ.

 • ನಿವೃತ್ತ ನ್ಯಾಯಮೂರ್ತಿ ರೋಹಿಣಿ ನೇತೃತ್ವದ ಐದು ಸದಸ್ಯರ ಆಯೋಗ ರಾಷ್ಟ್ರಾದ್ಯಂತ ಜಾತಿವಾರು ಜನಸಂಖ್ಯೆ ಲೆಕ್ಕಾಚಾರಕ್ಕಾಗಿ ಸಮೀಕ್ಷೆ ನಡೆಸುವಂತೆ ಶಿಫಾರಸು ಮಾಡಿ ಕೇಂದ್ರ ಸರಕಾರದಿಂದ ಅನುದಾನ ಬಯಸಿದೆ.

ಏತಕ್ಕೆ ಈ ಆಯೋಗ ?

 • ಒಬಿಸಿ ವರ್ಗಕ್ಕಿರುವ ಮೀಸಲಾತಿಯ ಸಮಾನ ಹಂಚಿಕೆಗಾಗಿ ಪ್ರಮಾಣಬದ್ಧ ಸೂತ್ರ ರೂಪಿಸಲು ಸಲಹೆ ನೀಡುವುದಕ್ಕಾಗಿ ಈ ಆಯೋಗ ನೇಮಕವಾಗಿತ್ತು. 2017ರ ಅಕ್ಟೋಬರ್‌ನಲ್ಲಿ ರಚಿಸಲಾದ ಸಮಿತಿಗೆ ನವೆಂಬರ್‌ 22ರಂದು ನಾಲ್ಕನೇ ಬಾರಿ ವಿಸ್ತರಣೆ ನೀಡಲಾಗಿದ್ದು, 2019ರ ಮೇ 31ರವರೆಗೆ ಕಾರ್ಯವ್ಯಾಪ್ತಿ ಹೊಂದಿದೆ.

ಗಣತಿ ಯಾಕೆ?:

 • ಒಬಿಸಿ ಕೇಂದ್ರ ಪಟ್ಟಿಯಲ್ಲಿ 2600 ಜಾತಿಗಳಿವೆ. ಇವುಗಳಲ್ಲಿ ಕೆಲವು ಅತ್ಯಂತ ಸಣ್ಣ ಜನಸಂಖ್ಯೆ ಹೊಂದಿವೆ. ಇನ್ನು ಕೆಲವು ದೇಶದ ಯಾವುದೋ ಭಾಗದಲ್ಲಿವೆ. ಹಾಗಾಗಿ, ದೇಶದ ಎಲ್ಲ ಭಾಗದಲ್ಲಿ ಜಿಲ್ಲಾ ಮಟ್ಟಕ್ಕಿಂತಲೂ ಕೆಳಹಂತದಲ್ಲಿ ಸಮೀಕ್ಷೆ ನಡೆಸಬೇಕು ಎಂದು ಆಯೋಗ ಅಭಿಪ್ರಾಯಪಟ್ಟಿದೆ.
 • ಚುನಾವಣೋತ್ತರದಲ್ಲಿ ಯಾವುದೇ ಅಧಿಕೃತ ಜಾತಿ ಆಧಾರಿತ ಜನಸಂಖ್ಯಾ ದಾಖಲೆ ಇಲ್ಲ. ಜಾತಿಗಣತಿಯಿಂದ ಜಾತಿ ಮಾತ್ರವಲ್ಲ ಕುಟುಂಬಗಳ ಶಿಕ್ಷಣ ಮಟ್ಟ ಮತ್ತು ಔದ್ಯೋಗಿಕ ಸ್ಥಿತಿಗತಿಯ ಮಾಹಿತಿಯೂ ಲಭ್ಯವಾಗಲಿದೆ.

ಯಾಕೆ ಪ್ರಾಮುಖ್ಯತೆ?

 • ಉದ್ಯೋಗ ಮತ್ತು ಬಡ್ತಿಯಲ್ಲಿ ಮೀಸಲಾತಿ ಪ್ರಶ್ನೆ ಬಂದಾಗಲೆಲ್ಲ ಸುಪ್ರೀಂಕೋರ್ಟ್‌ ಪ್ರತಿ ಬಾರಿ ಜಾತಿ ಲೆಕ್ಕಾಚಾರದ ಮಾಹಿತಿ ಕೇಳುತ್ತಿದೆ.
 • ಒಬಿಸಿಗಳಿಗೆ ಸಿಗುವ ಸೌಲಭ್ಯ ಈ ವಿಭಾಗದಲ್ಲಿರುವ ಬಲ್ಲಿದರ ಪಾಲಾಗದೆ ಅತಿ ಬಡವರಿಗೂ ತಲುಪಬೇಕು ಎನ್ನುವ ಅಭಿಪ್ರಾಯವೂ ಇದೆ.
 • ದೇಶದ ರಾಜಕಾರಣ ಜಾತಿ ಪ್ರಾಮುಖ್ಯತೆಯನ್ನು ಪಡೆಯುತ್ತಿರುವುದರಿಂದ ಆಡಳಿತವೂ ಜಾತಿ ಗಣತಿಗೆ ಅವಕಾಶ ನೀಡಬಹುದು.

ಕರ್ನಾಟಕ ಮಾದರಿ ಗಣತಿ

 • ಪ್ರಸಕ್ತ ಶಿಫಾರಸು ಮಾಡಲಾಗಿರುವ ಮಾದರಿಯ ಗಣತಿ ಈಗಾಗಲೇ ರಾಜ್ಯದಲ್ಲಿ ನಡೆದಿದೆ. ಕೇಂದ್ರ ಮತ್ತು ರಾಜ್ಯದ ಜಂಟಿ ಅನುದಾನದಲ್ಲಿ ನಡೆದ ಜಾತಿ ಗಣತಿಯ ವಿವರಗಳು ಇನ್ನೂ ಬಹಿರಂಗವಾಗಿಲ್ಲ.

ಎಫ್ಲಾಟಾಕ್ಸಿನ್‌ ಪತ್ತೆ

3.

ಸುದ್ಧಿಯಲ್ಲಿ ಏಕಿದೆ ? ಆಂಧ್ರ ಪ್ರದೇಶದ ಗುಂಟೂರು ನಗರದಲ್ಲಿ ಸಂಗ್ರಹಿಸಲಾದ ಮೆಣಸಿನಕಾಯಿ ಮಾದರಿಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ವಿಷಕಾರಿ ಎಫ್ಲಾಟಾಕ್ಸಿನ್‌ಗಳು ಹೆಚ್ಚು ಪ್ರಮಾಣದಲ್ಲಿ ಪತ್ತೆಯಾಗಿವೆ

ಏನಿದು ಎಫ್ಲಾಟಾಕ್ಸಿನ್‌?

 • ಕ್ಯಾನ್ಸರ್‌ ತರುವಂತಹ ಸಾಮರ್ಥ್ಯ ಹೊಂದಿರುವ ಫಂಗಸ್‌ ( ಶಿಲೀಂಧ್ರ) ದಲ್ಲಿರುವ ವಿಷಕಾರಿ ವಸ್ತುವೇ ಎಫ್ಲಾಟಾಕ್ಸಿನ್‌.

ಗುಂಟೂರು ಮೆಣಸಿನಕಾಯಿ

 • ಗುಂಟೂರು ಮೆಣಸಿನಕಾಯಿ ಅನನ್ಯ ರುಚಿ ಹಾಗೂ ತೀಕ್ಷ್ಣತೆಯನ್ನು ಹೊಂದಿದ್ದು, ಖಾರವಾಗಿರುತ್ತದೆ. ಹೀಗಾಗಿ, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸಹ ಪ್ರಸಿದ್ಧಿ ಪಡೆದಿದೆ.
 • ಗುಂಟೂರು ಜಿಲ್ಲೆಯೊಂದರಲ್ಲೇ ಅಂದಾಜು 80 ಲಕ್ಷ ಟನ್‌ಗಳಷ್ಟು ಮೆಣಸಿನಕಾಯಿಯನ್ನು ಉತ್ಪಾದಿಸಲಾಗುತ್ತದೆ. ಅಲ್ಲದೆ, ಅಮೆರಿಕ, ಯುಕೆ, ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೂ ಇದನ್ನು ರಫ್ತು ಮಾಡಲಾಗುತ್ತದೆ.
 • ಮೆಣಸಿನಕಾಯಿ ತೆಲುಗು ಭಾಷಿಕರು ಸೇರಿ ದಕ್ಷಿಣ ಭಾರತದ ಅಡುಗೆ ಮನೆಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಉಪ್ಪಿನಕಾಯಿಯನ್ನು ತಯಾರಿಸಲು ಸಹ ಕೆಂಪು ಮೆಣಸಿನಕಾಯಿಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.
 • ಗುಂಟೂರು ಮೆನಸಿನಕಾಯಿ ಮಾದರಿಯಲ್ಲಿ ಪತ್ತೆಯಾಗಿರುವ ಕ್ಯಾನ್ಸರ್‌ ಕಾರಕ ಅಂಶದ ಸಂಶೋಧನಾ ವರದಿಯ ಫಲಿತಾಂಶವನ್ನು ಏಷ್ಯನ್‌ ಜರ್ನಲ್‌ ಆಫ್‌ ಫಾರ್ಮಾಸಿಟಿಕ್ಸ್‌ನ ಇತ್ತೀಚಿನ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಹೇಗೆ ಕಾಣಿಸಿಕೊಳ್ಳುತ್ತದೆ?

 • ಮೆಣಸಿನಕಾಯಿಯನ್ನು ಮಣ್ಣಿನಲ್ಲಿ ಹರಡುವುದು, ಅವೈಜ್ಞಾನಿಕ ನಿರ್ವಹಣೆ ಹಾಗೂ ತೇವಾಂಶ ಒಟ್ಟುವಿಕೆಯಿಂದ ಎಫ್ಲಾಟಾಕ್ಸಿನ್ ಕಾಣಿಸಿಕೊಳ್ಳುತ್ತದೆ ಎಂದು ವರದಿ ತಿಳಿಸಿದೆ.
 • 7 ಮಾದರಿಗಳಲ್ಲಿ ಐದು ಮಾದರಿಗಳಲ್ಲಿ ಜಿ1, ಜಿ2 ಹಾಗೂ ಬಿ2 ಎಫ್ಲಾಟಾಕ್ಸಿನ್ಸ್‌ಗಳು ಪತ್ತೆಯಾಗಿವೆ. ಅಲ್ಲದೆ, ಎಫ್ಲಾಟಾಕ್ಸಿನ್‌ ಸ್ವಲ್ಪ ಪ್ರಮಾಣದಲ್ಲಿದ್ದರೂ ಕ್ಯಾನ್ಸರ್‌ಗೆ ಕಾರಣವಾಗಬಲ್ಲದು. ಇನ್ನು, ಇದರಿಂದ ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ತೊಂದರೆಯಾಗುತ್ತದೆ ಎಂದು ವರದಿಗಳು ಹೇಳಿವೆ.

ಕರೆನ್ಸಿ ಗುರ್ತಿಸಲು ಹೊಸ ಸಿಸ್ಟಮ್‌

ಸುದ್ಧಿಯಲ್ಲಿ ಏಕಿದೆ ? ದೃಷ್ಟಿ ವಿಶೇಷಚೇತನರು ಸುಲಭವಾಗಿ ನೋಟುಗಳನ್ನು ಗುರ್ತಿಸುವಂತಾಗಲು ಮೊಬೈಲ್‌ ಫೋನ್‌ ಆಧಾರಿತ ವ್ಯವಸ್ಥೆ ಅಥವಾ ಸಾಧನ ಕಲ್ಪಿಸಲು ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಆಲೋಚಿಸಿದೆ. ದೇಶದಲ್ಲಿ 80 ಲಕ್ಷ ದೃಷ್ಟಿ ವಿಶೇಷಚೇತನರಿದ್ದು, ಹೊಸ ವ್ಯವಸ್ಥೆ ಜಾರಿಗೆ ಬಂದರೆ ಅನುಕೂಲವಾಗಲಿದೆ.

 • ಪ್ರಸ್ತುತ ಇರುವ ನೋಟುಗಳಲ್ಲಿ ದೃಷ್ಟಿ ವಿಶೇಷ ಚೇತನರಿಗೆ ನಾನಾ ಮುಖಬೆಲೆಯ ನೋಟುಗಳನ್ನು ಗುರ್ತಿಸಲು ಅನುಕೂಲವಾಗುವಂತೆ ಇಂಟ್ಯಾಗ್ಲಿಯೊ ಮುದ್ರಣ ವಿನ್ಯಾಸವಿದೆ. ಅದನ್ನು ತಡಕುವ ಮೂಲಕ ನೋಟಿನ ಮುಖಬೆಲೆಯನ್ನು ಗುರ್ತಿಸಲು ಸಾಧ್ಯವಿದ್ದು, ಮೊಬೈಲ್‌ ಆಧರಿತ ಹೊಸ ವ್ಯವಸ್ಥೆಯಿಂದ ಇನ್ನಷ್ಟು ಪ್ರಯೋಜನವಾಗಲಿದೆ.

ಹೊಸ ಸಾಧನ ಹೇಗಿರುತ್ತದೆ?

 • ನೋಟನ್ನು ಮೊಬೈಲ್‌ ಸಾಧನದ ಸಮೀಪಕ್ಕೆ ತಂದರೆ ಇಲ್ಲವೇ, ಸ್ಕ್ರೋಲ್‌ ಮಾಡಿದರೆ ಕೆಲವೇ ಸೆಕೆಂಡ್‌ಗಳಲ್ಲಿ(2 ಸೆಕೆಂಡ್‌ ಅಥವಾ ಅದಕ್ಕಿಂತ ಕಡಿಮೆ) ನೋಟಿನ ಮುಖಬೆಲೆಯನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಓದಿ ಹೇಳಬೇಕು. ಇಂಥ ತಂತ್ರಜ್ಞಾನದ ಸಾಧನ/ ವ್ಯವಸ್ಥೆ ರೂಪಿಸಲು ಆರ್‌ಬಿಐ ಚಿಂತನೆ ನಡೆಸಿದ್ದು, ಸೂಕ್ತ ತಂತ್ರಂಶ ಅಭಿವೃದ್ಧಿಗೆ ಅನ್ವೇಷಣೆ ನಡೆಸಿದೆ.
 • ಒಂದು ವೇಳೆ ಹಾರ್ಡ್‌ವೇರ್‌ ಆಧಾರಿತ ಸಾಧನ ರೂಪಿಸಿದರೆ, ಅದಕ್ಕೆ ಬ್ಯಾಟರಿ ಮತ್ತು ರೀಚಾರ್ಚ್‌ ಅವಕಾಶ ಇರಬೇಕು. ಕೈಯಲ್ಲಿ ಸುಲಭವಾಗಿ ಕೊಂಡೊಯ್ಯಲು ಸಾಧ್ಯವಾಗುವಂತಿರಬೇಕು. ಹಗುರವಾಗಿರಬೇಕು ಎನ್ನುವ ಅಂಶಗಳನ್ನು ಆರ್‌ಬಿಐ ಪರಿಗಣಿಸಿದೆ.

ಬಾಂಗ್ಲಾ ಪ್ರಧಾನಿಯಾಗಿ ಮತ್ತೆ ಶೇಖ್ ಹಸೀನಾ

ಸುದ್ಧಿಯಲ್ಲಿ ಏಕಿದೆ ? ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆದಿದ್ದು, ಹಾಲಿ ಪ್ರಧಾನಿ ಶೇಖ್ ಹಸೀನಾ ಬೃಹತ್ ಮುನ್ನಡೆ ಸಾಧಿಸಿದ್ದಾರೆ. ಅವರ ಪಕ್ಷ ಕೂಡ ಮುನ್ನಡೆ ಕಾಯ್ದುಕೊಂಡಿರುವ ಕಾರಣ ಶೇಖ್ ಹಸೀನಾ ನಾಲ್ಕನೇ ಬಾರಿಗೆ ಬಾಂಗ್ಲಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.

ಹಸೀನಾಗೆ ಭಾರಿ ಗೆಲುವು

 • ಸಂಜೆ 4 ಗಂಟೆಗೆ ಮತದಾನ ಮುಕ್ತಾಯವಾದ ಬಳಿಕ ಮತ ಎಣಿಕೆ ಕಾರ್ಯ ಆರಂಭವಾಯಿತು. ಗಾಯ್ಬಂಧನಾ-5 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪ್ರಧಾನಿ ಶೇಖ್ ಹಸೀನಾ ಒಟ್ಟು 2,29,539 ಮತಗಳನ್ನು ಗಳಿಸಿ ಗೆದ್ದಿರುವುದಾಗಿ ಚುನಾವಣಾಧಿಕಾರಿಗಳು ಘೋಷಿಸಿದರು. ಇವರ ವಿರುದ್ಧ ಸ್ಪರ್ಧಿಸಿದ್ದ ಬಿಎನ್​ಪಿಯ ಎಸ್.ಎಂ. ಜಿಲಾನಿ ಅವರಿಗೆ ಕೇವಲ 123 ಮತ ಲಭಿಸಿದೆ.

ಮೊದಲ ಬಾರಿಗೆ ಇವಿಎಂ ಬಳಕೆ

 • ಬಾಂಗ್ಲಾದೇಶದ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗಿತ್ತು. ಕೆಲವು ಕಡೆ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಮತದಾರರು ಅಸಮಾಧಾನ ವ್ಯಕ್ತಪಡಿಸಿದರು. ಢಾಕಾ, ಚಿತ್ತಗಾಂಗ್, ರಂಗ್​ಪುರ್, ಖುಲ್ನಾ, ಸಾತ್ಕರ ಮತಕ್ಷೇತ್ರಗಳಲ್ಲಿ ಇವಿಎಂ ಬಳಕೆಯಾಯಿತು.

ಭೂತಾನ್ ಆರ್ಥಿಕ ಯೋಜನೆಗೆ ನೆರವು

ಸುದ್ಧಿಯಲ್ಲಿ ಏಕಿದೆ ? ಭೂತಾನ್​ನ 12ನೇ ಪಂಚವಾರ್ಷಿಕ ಆರ್ಥಿಕ ಯೋಜನೆಗೆ 4,500 ಕೋಟಿ ರೂ. ನೆರವು ನೀಡಲು ಭಾರತ ಸಮ್ಮತಿಸಿದೆ.

 • ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ವೃದ್ಧಿ ಮತ್ತು ಆರ್ಥಿಕ ಸಹಕಾರಕ್ಕೆ ಐದು ವರ್ಷಗಳ ಅವಧಿಗೆ 400 ಕೋಟಿ ರೂ. ವಾಣಿಜ್ಯ ಬೆಂಬಲ ಸೌಲಭ್ಯ ನೀಡಲು ಭಾರತ ಒಪ್ಪಿಕೊಂಡಿದೆ. ಈ ಮೂಲಕ ಡೋಕ್ಲಾಮ್ಲ್ಲಿ ಚೀನಾ ಪ್ರಾಬಲ್ಯಕ್ಕೆ ಕಡಿವಾಣ ಹಾಕುವ ರಾಜತಾಂತ್ರಿಕ ನಡೆಯನ್ನು ನರೇಂದ್ರ ಮೋದಿ ಸರ್ಕಾರ ಇಟ್ಟಿದೆ. ಭೂತಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ಲೊಟೇ ತ್ಸೇರಿಂಗ್ ಭಾರತದ ಪ್ರವಾಸಕ್ಕೆ ಆಗಮಿಸಿದ್ದಾರೆ.
 • ಪ್ರಧಾನಿ ನರೇಂದ್ರ ಮೋದಿ ಜತೆ ಅವರು ಮಾತುಕತೆ ನಡೆಸಿದರು. 720 ಮೆ.ವಾ. ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಮಾಂಗ್​ದೇಚು ಜಲವಿದ್ಯುತ್ ಯೋಜನೆಯ ಕಾಮಗಾರಿಯನ್ನು ಚುರುಕಾಗಿ ಮುಗಿಸುವ ಕುರಿತು ಉಭಯ ರಾಷ್ಟ್ರಗಳು ಮಾತುಕತೆ ನಡೆಸಿವೆ.
 • ರೂಪೇ ಪರಿಚಯಕ್ಕೆ ಸಮ್ಮತಿ : ಭಾರತದ ರೂಪೇ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ನ್ನು ಭೂತಾನ್​ನಲ್ಲಿ ಪರಿಚಯಿಸಲು ತ್ಸೇರಿಂಗ್ ಸಮ್ಮತಿಸಿದ್ದಾರೆ. ಇದೇ ವೇಳೆ ಜಿಎಸ್​ಟಿ ಜಾರಿಯಿಂದ ಭೂತಾನ್ ವ್ಯಾಪಾರಿಗಳಿಗೆ ಆಗಿರುವ ಅನನುಕೂಲತೆಯನ್ನು ಶೀಘ್ರ ಬಗೆಹರಿಸಬೇಕೆಂದು ಭೂತಾನ್ ಪ್ರಧಾನಿ ಮನವಿ ಮಾಡಿದ್ದಾರೆ.

ಮಾಂಗ್ದೇಚು  ಹೈಡ್ರೊಎಲೆಕ್ಟ್ರಿಕ್ ಪ್ರಾಜೆಕ್ಟ್

 • ಮಾಂಗ್ದೇಚು ಜಲವಿದ್ಯುತ್ ಯೋಜನೆ ಕೇಂದ್ರ ಭೂತಾನ್ನ ಟ್ರಾಂಗ್ಸಾ ಜೋಂಗ್ಘಾಗ್ ಜಿಲ್ಲೆಯ ಮಾಂಗ್ದೇಚು ನದಿಯ ಮೇಲೆ 720MW ರನ್-ಆಫ್-ನದಿಯ ವಿದ್ಯುತ್ ಸ್ಥಾವರವನ್ನು ನಿರ್ಮಿಸಲಾಗಿದೆ. ಭಾರತೀಯ ಸರ್ಕಾರ ಮತ್ತು ಭೂತಾನ್ ರಾಯಲ್ ಸರ್ಕಾರದ ರಚನೆಯಾದ ಮಾಂಗ್ದೇಚು  ಹೈಡ್ರೊಎಲೆಕ್ಟ್ರಿಕ್ ಪ್ರಾಜೆಕ್ಟ್ ಅಥಾರಿಟಿ (ಎಮ್ಎಚ್ಪಿಎ) ಈ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ.
 • ಭಾರತ ಸರ್ಕಾರದಿಂದ ಬೆಂಬಲಿತವಾಗಿ 2020 ರ ಹೊತ್ತಿಗೆ 10,000 ಮೆವ್ಯಾ ಜಲವಿದ್ಯುತ್ ಉತ್ಪಾದನೆಗಾಗಿ ಭೂತಾನ್ ರಾಯಲ್ ಸರ್ಕಾರದ ಯೋಜನೆಯಡಿಯಲ್ಲಿ ಯೋಜಿಸಲಾದ ಹತ್ತು ಜಲವಿದ್ಯುತ್ ಯೋಜನೆಗಳಲ್ಲಿ ಒಂದಾಗಿದೆ ಮಾಂಗ್ದೇಚು . ಏಪ್ರಿಲ್ 2010 ರಲ್ಲಿ ಮಾಂಗ್ದೇಚು ಹೆಚ್ಪಿಪಿಯನ್ನು ನೆರವೇರಿಸಲು  ಎರಡು ಸರ್ಕಾರಗಳು  ಒಪ್ಪಂದ ಮಾಡಿಕೊಂಡಿತು.

ಗಡಿಯಲ್ಲಿ 600 ಟ್ಯಾಂಕ್‌ ಸಜ್ಜುಗೊಳಿಸಲಿರುವ ಪಾಕ್‌

7.

ಸುದ್ಧಿಯಲ್ಲಿ ಏಕಿದೆ ? ಪಾಕಿಸ್ತಾನ ಭಾರತದ ಗಡಿಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಭರ್ಜರಿ ಯೋಜನೆ ರೂಪಿಸಿದ್ದು, ಇದಕ್ಕಾಗಿ ರಷ್ಯಾದಿಂದ 600 ಯುದ್ಧ ಟ್ಯಾಂಕ್‌ಗಳನ್ನು ಖರೀದಿಸಲಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

 • ಅತ್ಯಾಧುನಿಕ ಟಿ-90 ಟ್ಯಾಂಕ್‌ಗಳೂ ಇದರಲ್ಲಿ ಸೇರಿದ್ದು, ಇವುಗಳನ್ನು ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ನಿಯೋಜನೆಗೊಳಿಸಲಾಗುವುದು. ಬಹುತೇಕ ಟ್ಯಾಂಕ್‌ಗಳು 3ರಿಂದ 4 ಕಿ.ಮೀ. ವ್ಯಾಪ್ತಿಯಯ ಗುರಿಯನ್ನು ಹೊಡೆಯಬಲ್ಲ ಸಾಮರ್ಥ್ಯ‌ ಹೊಂದಿರಲಿವೆ ಎಂದು ತಿಳಿದುಬಂದಿದೆ.
 • ಇಟಲಿಯಿಂದಲೂ ಶಸ್ತ್ರಾಸ್ತ್ರ: ಇದರ ಜತೆಗೆ, ಪಾಕಿಸ್ತಾನವು ಇಟಲಿಯಿಂದ 250 ಸಂಖ್ಯೆಯಲ್ಲಿ ‘150ಎಂಎಂ ಎಸ್‌ಪಿ ಮೈಕ್‌-10′ ಗನ್‌ಗಳನ್ನು ತರಿಸಿಕೊಳ್ಳುತ್ತಿದ್ದು, ಈಗಾಗಲೇ ಈ ಪೈಕಿ 120 ಗನ್‌ಗಳು ಪಾಕ್‌ ಸೇನೆಯ ಬತ್ತಳಿಕೆ ಸೇರಿವೆ.
 • ಭಾರತ ರಷ್ಯಾದಿಂದ ಟಿ-90 ಟ್ಯಾಂಕ್‌ಗಳನ್ನು ಖರೀದಿಸಿರುವ ಹಿನ್ನೆಲೆಯಲ್ಲಿ, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ರಷ್ಯಾದಿಂದ ಇದೇ ಟ್ಯಾಂಕ್‌ಗಳನ್ನ ಖರೀದಿಸಿ ಸಮಬಲ ಸಾಧನೆ ಮಾಡಲು ಯೋಜಿಸಿದೆ. ಜತೆಗೆ ರಷ್ಯಾ ಸರಕಾರದೊಂದಿಗೆ ಆಳವಾದ ರಕ್ಷ ಣಾ ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾಗಿದೆ ಎಂದು ಹೇಳಲಾಗಿದೆ.
 • ಈ ನಿಟ್ಟಿನಲ್ಲಿ ಈಗಾಗಲೇ ಪಾಕಿಸ್ತಾನವು ಕಳೆದ ಹಲವು ವರ್ಷಗಳಿಂದ ರಷ್ಯಾ ಜತೆ ಜಂಟಿ ಸಮರಾಭ್ಯಾಸ ನಡೆಸುತ್ತಿರುವುದನ್ನೂ ಇಲ್ಲಿ ಸ್ಮರಿಸಬಹುದು.
 • ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆ: ಭಾರತ-ಪಾಕ್‌ ಗಡಿ ನಿಯಂತ್ರಣ ರೇಖೆ ಬಳಿ ಕಳೆದ ಒಂದು ವರ್ಷದಿಂದ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲೇ ಪಾಕಿಸ್ತಾನ ಸೇನೆಯ ಬಲವರ್ಧನೆಗೆ ಮುಂದಾಗಿರುವುದು ಗಮನಾರ್ಹ. ಪಾಕ್‌ ಸೇನೆ ನಡೆಸುವ ಪ್ರತಿಯೊಂದು ಅಪ್ರಚೋದಿತ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತ್ಯುತ್ತರ ನೀಡುತ್ತಿದೆ.

ಟಾರ್ಗೆಟ್‌ 2025:

 • 2025ರ ವೇಳೆಗೆ ಶಸಸ್ತ್ರ ಪಡೆಯನ್ನು ಭಾರಿ ಮಟ್ಟದಲ್ಲಿ ಬಲಪಡಿಸುವ ಮಹತ್ವದ ಯೋಜನೆಯ ಭಾಗವಾಗಿ, ಒಟ್ಟು 360 ಯುದ್ಧ ಟ್ಯಾಂಕ್‌ಗಳನ್ನು ಖರೀದಿಸುವ ಗುರಿಯನ್ನು ಪಾಕ್‌ ಹೊಂದಿದೆ. ಈ ಪೈಕಿ ಮಿತ್ರ ಚೀನಾದಿಂದಲೇ ದೇಶಿಯವಾಗಿ ತಯಾರಿಸಲಾದ 220 ಟ್ಯಾಂಕ್‌ಗಳನ್ನೂ ಪಾಕಿಸ್ತಾನ ಖರೀದಿಸಲಿದೆ. ಈ ಗುರಿಯನ್ನು ತಲುಪಲು ಪಾಕಿಸ್ತಾನಕ್ಕೆ ನೆರವಾಗುವುದಾಗಿ ಚೀನಾ ಈಗಾಗಲೇ ಭರವಸೆ ನೀಡಿದೆ.

ಕುಂಟುತ್ತಿರುವ ಭಾರತದ ಯೋಜನೆ

 • ಭಾರತವು ಪದಾತಿದಳ ಮತ್ತು ಶಸಸ್ತ್ರ ಪಡೆಗಳನ್ನು ಬಲವರ್ಧನೆಗೊಳಿಸಲು ಮೆಗಾ ಪ್ಲಾನ್‌ ಸಿದ್ಧಪಡಿಸಿದೆಯಾದರೂ, ಇದರ ಭಾಗವಾಗಿರುವ ಬಹುತೇಕ ಯೋಜನೆಗಳು ಹತ್ತು ಹಲವು ಕಾರಣಗಳಿಂದಾಗಿ ಕುಟುಂತ್ತಾ ಸಾಗಿವೆ. 60,000 ಕೋಟಿ ರೂ.ವೆಚ್ಚದ ಉದ್ದೇಶಿತ ಫ್ಯೂಚರಿಸ್ಟಿಕ್‌ ಇನ್‌ಫೆಂಟ್ರಿ ಕಾಂಬ್ಯಾಟ್‌ ವೆಹಿಕಲ್‌‘(ಎಫ್‌ಐಸಿವಿ) ಯೋಜನೆಯೂ ಹೀಗೆ ನೆನೆಗುದಿಗೆ ಬಿದ್ದವುಗಳಲ್ಲಿ ಒಂದಾಗಿದೆ. ಪ್ರಸ್ತುತ ಭಾರತದ ಬಳಿ ಪಾಕ್‌ಗಿಂತಲೂ ಸುಧಾರಿತ ಟಿ-90, ಟಿ-72ಮತ್ತು ಅರ್ಜುನ ಮುಂದಾದ ಟ್ಯಾಂಕ್‌ಗಳಿವೆ. ಈ ‘ಕೊರತೆ’ಯನ್ನು ನೀಗಿಸಲು ಪಾಕಿಸ್ತಾನ ಭಾರತದಷ್ಟೇ ಬಲಿಷ್ಠವಾದ ಟ್ಯಾಂಕ್‌ಗಳನ್ನು ಖರೀದಿಸಲು ಮುಂದಾಗಿದೆ.

ಕರ್ತಾರ್‌ಪುರ ಗುರುದ್ವಾರ

8.

ಸುದ್ಧಿಯಲ್ಲಿ ಏಕಿದೆ ? ಕರ್ತಾರ್‌ಪುರ ಕಾರಿಡಾರ್‌ ಮೂಲಕ ಗುರುದ್ವಾರಕ್ಕೆ ಭಾರತದಿಂದ ತೆರಳುವ ಸಿಖ್‌ ಯಾತ್ರಿಕರಿಗೆ ದಿನಕ್ಕೆ 500 ಜನರಿಗೆ ಮಾತ್ರ ಅವಕಾಶ ಕಲ್ಪಿಸಿ, ಯಾತ್ರಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸುವ ಕರಡನ್ನು ಪಾಕಿಸ್ತಾನ ರಚಿಸುತ್ತಿದ್ದು, ಒಪ್ಪಂದದ ಸಹಿಗಾಗಿ ಭಾರತಕ್ಕೆ ಕಳುಹಿಸಲು ಚಿಂತನೆ ನಡೆಸಿದೆ.

ಕರಡಿನಲ್ಲಿ ಏನಿದೆ ?

 • ಈ ಒಪ್ಪಂದದಲ್ಲಿ, ಕರ್ತಾರ್‌ಪುರ ಕಾರಿಡಾರ್‌ ಮೂಲಕ ಪ್ರವೇಶ ಬಯಸುವ ಸಿಖ್‌ ಯಾತ್ರಾರ್ಥಿಯು ಮೂರು ದಿನಗಳ ಮುಂಚಿತವಾಗಿ ಸರಿಯಾದ ಮಾಹಿತಿ ಒದಗಿಸಬೇಕು ಮತ್ತು ಭಾರತದ ಕಡೆಯಿಂದ ಯಾತ್ರಿಯ ಪ್ರವೇಶಕ್ಕೂ ಮುನ್ನ ಭದ್ರತಾ ಕ್ಲಿಯರೆನ್ಸ್ ಅಗತ್ಯವಿರುತ್ತದೆ.
 • ಇಂತದ್ದೊಂದು ಕರಡು ಪ್ರಸ್ತಾವದ ಕುರಿತು ಪಾಕಿಸ್ತಾನದ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ಯಾತ್ರಿಗಳ ಪ್ರವೇಶವನ್ನು ನಿರಾಕರಿಸುವ ಸಂಪೂರ್ಣ ಹಕ್ಕನ್ನು ಪಾಕ್‌ ಹೊಂದಿರುತ್ತದೆ.
 • ಯಾತ್ರಿಗಳು ಅಲ್ಲಿ ತಂಗುವ ಅವಧಿಯನ್ನು ಕಡಿಮೆ ಮಾಡಬಹುದು ಅಥವಾ ಯಾವುದೇ ಯಾತ್ರಿಕರ ತಂಗುವಿಕೆಗೆ ಅನುಮತಿ ನೀಡಿದ್ದರೂ ಕೂಡ ಅವರಿಂದ ದೇಶಕ್ಕೆ ಬೆದರಿಕೆ ಅಥವಾ ಭದ್ರತಾ ದೃಷ್ಟಿಯಿಂದ ಅನಪೇಕ್ಷಿತ ನಡೆಗಳು ಕಂಡುಬಂದರೆ ಅವರ ಪರವಾನಗಿಯನ್ನು ರದ್ದುಗೊಳಿಸಬಹುದು ಎನ್ನಲಾಗಿದೆ.
 • ಪಾಕ್‌ ಪ್ರವೇಶ ಪರವಾನಗಿಯನ್ನು ಆಧರಿಸಿರುತ್ತದೆ ಮತ್ತು ಪಾಸ್‌ಪೋರ್ಟ್‌ ಕಡ್ಡಾಯವಾಗಿದೆ. ಒಮ್ಮೆ ಆ ಪ್ರದೇಶಕ್ಕೆ ಪ್ರವೇಶಿಸಿದ ನಂತರ ಅಲ್ಲಿನ ಕಾನೂನು ಮತ್ತು ನಿಯಮಗಳಿಗೆ ಬದ್ಧರಾಗಿರಬೇಕು. ಇದರಿಂದ ಯಾತ್ರಿಗಳಿಗೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂಬುದು ಕರಡಿನಲ್ಲಿದೆ.
 • ಯಾತ್ರಾರ್ಥಿಗಳು ಪಾಕ್‌ನ ಹಲವು ನೀತಿ ನಿಯಮಗಳಿಗೆ ಒಳಪಟ್ಟಿರುತ್ತಾರೆ. ಭಾರತ ಸರ್ಕಾರವೇ ಯಾತ್ರಾರ್ಥಿಗಳ ಸಂಪೂರ್ಣ ಮಾಹಿತಿಯನ್ನು ಮೂರು ದಿನ ಮುಂಚಿತವಾಗಿ ನೀಡಬೇಕು. ಕಾರಿಡಾರ್‌ನಲ್ಲಿ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೂ ಪ್ರವೇಶಕ್ಕೆ ಮುಕ್ತವಾಗಿರುತ್ತದೆ.

ಹಿನ್ನಲೆ

 • ಸಿಖ್​ ಸಮುದಾಯದ ಬಹುದಿನಗಳ ಬೇಡಿಕೆಯಾದ ಕರ್ತಾರ್​ಪುರ್​ ಕಾರಿಡಾರ್​ ಯೋಜನೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್ ನ. 28ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಇದು ಒಮ್ಮೆ ತೆರೆದರೆ ಕರ್ತಾರ್‌ಪುರದಲ್ಲಿರುವ ಸಿಖ್‌ ಯಾತ್ರಿಕರು ಐತಿಹಾಸಿಕ ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ನೇರವಾಗಿ ಪ್ರವೇಶ ಪಡೆಯಬಹುದು.

ಕರ್ತಾರ್​ಪುರ್​ ಸಾಹೇಬ್​ ಗುರುದ್ವಾರ

 • ಕರ್ತಾರ್​ಪುರ್​ ಸಾಹೇಬ್​ ಗುರುದ್ವಾರ ಪಾಕಿಸ್ತಾನದ ರಾವಿ ನದಿ ದಡದಲ್ಲಿದ್ದು, ಗುರುದಾಸ್​ಪುರದಲ್ಲಿರುವ ಡಾರಾ ಬಾಬಾ ನಾನಕ್​ ಗುರುದ್ವಾರದಿಂದ ಕೇವಲ 4 ಕಿ.ಮೀ. ದೂರದಲ್ಲಿದೆ. ಕರ್ತಾರ್​ಪುರದಲ್ಲಿರುವ ಗುರುದ್ವಾರವನ್ನು 1522ರಲ್ಲಿ ಗುರುನಾನಕ್​ ಅವರು ಸ್ಥಾಪಿಸಿದ್ದರು. ಅವರು 1539ರಲ್ಲಿ ಅಲ್ಲಿಯೇ ಸಮಾಧಿ ಹೊಂದಿದ್ದರು ಎಂದು ನಂಬಲಾಗಿದೆ.

Related Posts
13th ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಎನ್‌ಐಆರ್‌ಎಫ್‌ ರಾಯಂಕಿಂಗ್‌ ಸುದ್ಧಿಯಲ್ಲಿ ಏಕಿದೆ ? ಅಂಕಿ ಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳದೆ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ರಾರ‍ಯಂಕಿಂಗ್‌ ಫ್ರೇಮ್‌ವರ್ಕ್‌(ಎನ್‌ಐಆರ್‌ಎಫ್‌) ನಲ್ಲಿ ಪಿಇಎಸ್‌ ವಿಶ್ವವಿದ್ಯಾಲಯಕ್ಕೆ 149 ನೇ ಸ್ಥಾನ ನೀಡಲಾಗಿದೆ. ಈ ತಪ್ಪನ್ನು ಸರಿಪಡಿಸದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ವಿವಿ ಕುಲಾಧಿಪತಿ ಡಾ.ಎಂ.ಆರ್‌.ದೊರೆಸ್ವಾಮಿ ...
READ MORE
“29 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿಶ್ವ ಕನ್ನಡ ಸಮ್ಮೇಳನ ಸುದ್ಧಿಯಲ್ಲಿ ಏಕಿದೆ ? ನಾವಿಕ ಸಂಸ್ಥೆಯು ಅಮೆರಿಕದ ಓಹಾಯೋ ರಾಜ್ಯದಲ್ಲಿ ಆ. 30 ರಿಂದ ಸೆ. 1ರವರೆಗೆ '5ನೇ ವಿಶ್ವ ಕನ್ನಡ ಸಮ್ಮೇಳನ' ಆಯೋಜಿಸಿದೆ. ಕನ್ನಡದ ಸೊಗಡನ್ನು ಈ ಉತ್ಸವದಲ್ಲಿ ಬಿಂಬಿಸಲಾಗುವುದು.ಕನ್ನಡದ ನಾಟಕಗಳು,ಕವಿ ಗೋಷ್ಠಿಗಳು, ಕನ್ನಡ ಗೀತಗಾಯನ,ಸಂಗೀತ ಸಂಜೆ,ಸ್ವಾತಂತ್ರ್ಯದ ...
READ MORE
“05 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಟ್ರಿಣ್​ಟ್ರಿಣ್ ಸುದ್ಧಿಯಲ್ಲಿ ಏಕಿದೆ ?ಪರಿಸರ ಮಾಲಿನ್ಯ ಮತ್ತು ಸಂಚಾರದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ನಗರದಲ್ಲಿ ಟ್ರಿಣ್ ಟ್ರಿಣ್ ಯೋಜನೆ ಜಾರಿಗೊಳಿಸಿದೆ. ಆ ಮೂಲಕ ಸೈಕಲ್ ಸವಾರಿಗೆ ಹೆಚ್ಚಿನ ಒತ್ತು ನೀಡಿ ವಾಹನ ಸಂಚಾರ ಪ್ರಮಾಣ ಕಡಿಮೆ ಮಾಡಲು ...
READ MORE
“27th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
'ಸ್ವಚ್ಛ ಬೆಂಗಳೂರು' ಸುದ್ಧಿಯಲ್ಲಿ ಏಕಿದೆ ? ಬೆಂಗಳೂರು ನಗರವನ್ನು ಸ್ವಚ್ಛ ಮಾಡಲು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಾಲಾವಧಿ ನಿಗದಿಪಡಿಸಿದೆ. ಆದರೆ ಸ್ವಚ್ಛ ಬೆಂಗಳೂರಿನ ಸವಾಲನ್ನು ಎದುರಿಸಿ ಅದನ್ನು ಸಾಧಿಸುವುದು ಕಷ್ಟ. ಸವಾಲುಗಳೇನು ? ಕಸದಿಂದ ಹಿಡಿದು ಉಗುಳುವವರೆಗೆ, ಸಾರ್ವಜನಿಕ ಶೌಚಾಲಯದಿಂದ ಹಿಡಿದು ...
READ MORE
“12 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಚುನಾವಣಾ ಬಾಂಡ್‌ ಸುದ್ಧಿಯಲ್ಲಿ ಏಕಿದೆ ?ಕೇಂದ್ರ ಸರಕಾರದ ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿದ್ದ ಜನಹಿತಾಸಕ್ತಿ ಅರ್ಜಿಯ ಕುರಿತ ತೀರ್ಪುನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ರಾಜಕೀಯ ಪಕ್ಷಗಳಿಗೆ ಆರ್ಥಿಕ ನೆರವು ನೀಡುವ ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವವನ್ನು ಪ್ರಸ್ನಿಸಿ ಸರ್ಕಾರರೇತರ ಸಂಸ್ಥೆಯೊಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಚುನಾವಣಾ ...
READ MORE
“11 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಟಾಪ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹಂಪಿ ಸುದ್ಧಿಯಲ್ಲಿ   ಏಕಿದೆ ?ಈ ವರ್ಷ ನೀವು ನೋಡಲೇಬೇಕಾದ ಜಗತ್ತಿನ 52 ಟಾಪ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ರಾಜ್ಯದ ಪಾರಂಪರಿಕ ನಗರಿ ಹಂಪಿ ಟಾಪ್ 2 ಸ್ಥಾನ ಪಡೆದಿದೆ. ದಿ ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ 2019ರ ಟಾಪ್ ...
READ MORE
” 26 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಇಂಡಸ್ ನದಿ ಯೋಜನೆ ಸುದ್ಧಿಯಲ್ಲಿ ಏಕಿದೆ ? ಇಂಡಸ್ ನದಿ ನೀರು ಹಂಚಿಕೆ ಕುರಿತು ಪಾಕಿಸ್ತಾನದೊಂದಿಗೆ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದದಂತೆ ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ. ನದಿಗೆ ಅಡ್ಡಲಾಗಿ ನಿರ್ವಿುಸುತ್ತಿರುವ ಎರಡು ಅಣೆಕಟ್ಟೆಗಳ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಲು ಸರ್ಕಾರ ...
READ MORE
“18 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಸಾಕ್ಷಿಗಳ ರಕ್ಷಣಾ ಯೋಜನೆ’ ಜಾರಿಗೆ ಸುಪ್ರೀಂ ಆದೇಶ ಸುದ್ಧಿಯಲ್ಲಿ ಏಕಿದೆ ?ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯ ಸುಧಾರಣೆಗೆ ಒಂದೂವರೆ ದಶಕದ ಹಿಂದೆ ಕರ್ನಾಟಕದ ನ್ಯಾ.ವಿ.ಎಸ್‌.ಮಳೀಮಠ್‌ ಸಲ್ಲಿಸಿದ್ದ ವರದಿಯ ಪ್ರಮುಖ ಅಂಶವಾದ 'ಸಾಕ್ಷಿಗಳ ರಕ್ಷಣಾ ಯೋಜನೆ' ದೇಶಾದ್ಯಂತ ಜಾರಿಯಾಗುತ್ತಿದೆ. ಸುಪ್ರೀಂಕೋರ್ಟ್‌ ಇತ್ತೀಚೆಗೆ ಸಾಕ್ಷಿಗಳ ರಕ್ಷಣಾ ಯೋಜನೆ ಕುರಿತು ...
READ MORE
“27 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏಪ್ರಿಲ್‌ಗೆ ಕರ್ನಾಟಕ ಪೂರ್ತಿ ಉಜ್ವಲ! ಸುದ್ಧಿಯಲ್ಲಿ ಏಕಿದೆ ? ರಾಜ್ಯದಲ್ಲಿ ವಿಸ್ತರಿತ ಪ್ರಧಾನಮಂತ್ರಿ ಉಜ್ವಲ ಯೋಜನೆ-2(ಇಪಿಎಂಯುವೈ) ಅಡಿ ಹೊಸದಾಗಿ ಐದು ಲಕ್ಷ ಬಡ ಕುಟುಂಬಗಳಿಗೆ ಅನಿಲ ಸಂಪರ್ಕ ಕಲ್ಪಿಸಲು ಭಾರತೀಯ ತೈಲ ನಿಗಮ ಮುಂದಾಗಿದೆ. 2019ರ ಜ.1ರಿಂದ ಉಜ್ವಲ-2ರ ಯೋಜನೆಗೆ ಚಾಲನೆ ಸಿಗಲಿದೆ. ಸದ್ಯ ...
READ MORE
26th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಪ್ರಸಾದದ ಮೇಲೆ ಎಕ್ಸ್‌ಫೈರಿ ಡೇಟ್‌ ಕಡ್ಡಾಯ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ದೇವಸ್ಥಾನಗಳಲ್ಲಿ ಪ್ಯಾಕ್‌ ಮಾಡಿ ವಿತರಿಸುವ ಪ್ರಸಾದದ ಮೇಲೆ ತಯಾರಿಸಿದ ದಿನ ಹಾಗೂ ಎಷ್ಟು ದಿನಗಳವರೆಗೆ ಮಾತ್ರ ಸೇವಿಸಬಹುದು ಎಂಬ ಮಾಹಿತಿ ನಮೂದಿಸುವುದು ಕಡ್ಡಾಯವಾಗಲಿದೆ. ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದ ನಿಯಮ ...
READ MORE
13th ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
“29 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“05 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“27th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“12 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“11 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 26 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“18 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“27 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
26th ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು

One thought on ““31 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು””

Leave a Reply

Your email address will not be published. Required fields are marked *