“18 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “

ತಲಕಾವೇರಿಯಲ್ಲಿ ತೀರ್ಥೋದ್ಭವ

1.

ಸುದ್ಧಿಯಲ್ಲಿ ಏಕಿದೆ ?ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಕಂಡು ಭಕ್ತರು ಪುಳಕಿತರಾದರು.

 • ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಉಕ್ಕುವುದನ್ನು ಕಂಡು ಹಾಗೂ ಪುರೋಹಿತರು ತೀರ್ಥವನ್ನು ಚೆಲ್ಲಿದ ನಂತರ ಭಕ್ತರು ಸಂತೃಪ್ತಗೊಂಡರು.
 • ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಶುಭ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಯಿತು.

ತಲಕಾವೇರಿ

 • ದಕ್ಷಿಣ ಭಾರತದ ಪ್ರಮುಖ ನದಿ, ಕಾವೇರಿಯ ಉಗಮ ಸ್ಥಾನ, ತಲಕಾವೇರಿ.
 • ಕರ್ನಾಟಕದ ಕೊಡಗು ಜಿಲ್ಲೆಯಲ್ಲಿದೆ. ಜಿಲ್ಲಾಕೇಂದ್ರವಾದ ಮಡಿಕೇರಿಯಿಂದ ಸುಮಾರು ೪೬ ಕಿ.ಮೀಗಳ ದೂರದಲ್ಲಿ, ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿದೆ.
 • ಕೊಡವರ ಕುಲದೇವತೆಯಾದ ಕಾವೇರಿಯು, ಪ್ರತಿವರ್ಷವೂ ತುಲಾ ಸಂಕ್ರಮಣದಂದು (ಅಕ್ಟೋಬರ್ ತಿಂಗಳಿನಲ್ಲಿ) ಇಲ್ಲಿ ನೀರುಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತಾಳೆ. ಇದನ್ನು ತೀರ್ಥೋದ್ಭವ ಎನ್ನುವರು. ಹಲವಾರು ಭಕ್ತರು ಈ ಸಂದರ್ಭದಲ್ಲಿ ಇಲ್ಲಿ ನೆರೆದಿರು ತ್ತಾರೆ.
 • ಈ ಸ್ಥಳವನ್ನು ಶರಪಂಜರ, ಹುಲಿಯ ಹಾಲಿನ ಮೇವು ಚಿತ್ರಗಳಲ್ಲಿ ಚಿತ್ರೀಕರಿಸಲಾಗಿದೆ.

ಕಾವೇರಿ ನದಿ ಉಗಮ

 • ಕಾವೇರಿಯ ಉಗಮಸ್ಥಾನ 2′ * 2′ ಯ ಒಂದು ಪುಟ್ಟ ಕೊಳ. ಇದನ್ನು ಕುಂಡಿಗೆ ಎನ್ನುತ್ತಾರೆ. ಇದರ ಪಕ್ಕದಲ್ಲಿ ಉತ್ತರಕ್ಕೆ 4′ ಎತ್ತರದ ಒಂದು ಮಂಟಪವಿದೆ. ಕುಂಡಿಗೆಯ ಮುಂದೆ ಒಂದು ಸಣ್ಣ ಕೊಳವಿದೆ. ಕುಂಡಿಗೆಯಿಂದ ಹೊರಟ ನೀರು ಸಣ್ಣ ಕೊಳ ಸೇರಿ ಅಂತರ್ಗಾಮಿಯಾಗಿ ಹರಿದು ಇನ್ನೊಂದು ಕೊಳವನ್ನು ತುಂಬುತ್ತದೆ.
 • ಪುನಃ ನೀರು ಅಂತರ್ಗಾಮಿಯಾಗಿ ಹರಿದು ಕಣಿವೆಯಲ್ಲಿ ಕಾಣಿಸಿಕೊಂಡು ಮುಂದೆ ಹರಿಯುತ್ತದೆ. ಕುಂಡಿಗೆಯಲ್ಲಿ ಕಾವೇರಿ ತೀರ್ಥ ಉದ್ಭವವಾಗುವುದೆಂದು ನಂಬಿಕೆಯಿದೆ.
 • ಪ್ರತಿವರ್ಷ ತುಲಾ ಸಂಕ್ರಮಣದಂದು ಬೆಳಗಿನ ನಿಶ್ಚಿತ ಮುಹೂರ್ತದಲ್ಲಿ ಆ ಕುಂಡಿಗೆಯಿಂದ ನೀರು ಉಕ್ಕಿ ಹರಿಯುತ್ತದೆ.
 • ತುಲಾ ಸಂಕ್ರಮಣದಿಂದ ವೃಶ್ಚಿಕ ಸಂಕ್ರಮಣದ ವರೆಗೆ ತಲಕಾವೇರಿಯ ಬಳಿ ಜಾತ್ರೆ ನಡೆಯುತ್ತದೆ.

ಎನ್​ಎಸ್​ಜಿ ಇನ್ನಷ್ಟು ಹೈಟೆಕ್

2.

ಸುದ್ಧಿಯಲ್ಲಿ ಏಕಿದೆ ?ರಾಷ್ಟ್ರೀಯ ಭದ್ರತಾ ಪಡೆ (ಎನ್​ಎಸ್​ಜಿ)ಗೆ ಮತ್ತಷ್ಟು ಬಲತುಂಬಲು ಸರ್ಕಾರ ಮುಂದಾಗಿದೆ.

 • ಸೆಮಿಆಟೋಮ್ಯಾಟಿಕ್ ಸ್ನೈಪರ್ ರೈಫಲ್​ಗಳು, ವಿಶ್ವದ ಅತಿಸಣ್ಣ ಸ್ಪೈ ಕ್ಯಾಮರಾ, ಇನ್ನಿತರ ಅತ್ಯಾಧುನಿಕ ಉಪಕರಣಗಳನ್ನು ನೀಡಿದೆ.
 • 4 ಇಂಚಿನ ಡ್ರೋನ್: ಬ್ಲಾ್ಯಕ್ ಹಾರ್ನೆಟ್ ಎಂಬ ವಿಶ್ವದ ಅತಿಸಣ್ಣ ಸ್ಪೈಕ್ಯಾಮರಾ ಹೊಂದಿರುವ ಡ್ರೋನ್​ನ್ನು ಎನ್​ಎಸ್​ಜಿ ಪಡೆದುಕೊಂಡಿದೆ.
 • ಕೇವಲ 4 ಇಂಚು ಉದ್ದ ಹಾಗೂ 16 ಗ್ರಾಂ ಭಾರವಿರುವ ಈ ಡ್ರೋನ್, ಗಂಟೆಗೆ 35 ಕಿ.ಮೀ. ವೇಗದಲ್ಲಿ ಚಲಿಸುತ್ತದೆ.
 • ಮುಂದೆ ಎದುರಾಗಬಹುದಾದ ಅಪಾಯದ ಕುರಿತು ಕಮಾಂಡೋಗಳಿಗೆ ಮಾಹಿತಿ ಒದಗಿಸುತ್ತದೆ. ಇದರಲ್ಲಿ ಇನ್​ಬಿಲ್ಟ್ ಜಿಪಿಎಸ್ ವ್ಯವಸ್ಥೆ ಇದೆ.
 • ದೇಶಿಯ ಕಾಮಿಕೇಜ್ ಡ್ರೋನ್: ಎನ್​ಎಸ್​ಜಿಯ 34ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ದೇಶಿ ನಿರ್ವಿುತ ಕಾಮಿಕೇಜ್ ಎಂಬ ಡ್ರೋನ್​ನ್ನು ಎನ್​ಎಸ್​ಜಿ ಸೇವೆಗೆ ಸೇರ್ಪಡೆಗೊಳಿಸಿಕೊಳ್ಳಲಾಗಿದೆ.
 • ಇಯರ್​ಪೀಸ್: ಅತಿ ಭಾರವಾದ ವಾಕಿಟಾಕಿಗಳನ್ನು ಕೊಂಡೊಯ್ಯುವ ತೊಂದರೆಯಿಂದ ಬ್ಲಾ್ಯಕ್ ಕ್ಯಾಟ್ ಕಮಾಂಡೋಗಳು ಪಾರಾಗಲಿದ್ದಾರೆ. ಇದರ ಬದಲಿಗೆ ಕಿವಿಗೆ ಹಾಕಿಕೊಳ್ಳಬಹುದಾದ ಇಯರ್​ಪೀಸ್​ಗಳೇ ವಾಕಿಟಾಕಿಗಳಾಗಿ ಕಾರ್ಯನಿರ್ವಹಿಸಲಿವೆ.

ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್ಎಸ್ಜಿ)

 • ಎನ್ಎಸ್ಜಿ ಎನ್ನುವುದು ಗೃಹ ವ್ಯವಹಾರ ಸಚಿವಾಲಯದ (ಎಮ್ಎಚ್ಹೆಚ್) ಅಡಿಯಲ್ಲಿ ಫೆಡರಲ್ ಕಾಂಟಿನ್ಸಿನ್ಸಿ ಡಿಪ್ಲಾಯಮೆಂಟ್ ಫೋರ್ಸ್.
 • ಆಂತರಿಕ ಅಡಚಣೆಗಳು ಮತ್ತು ಭಯೋತ್ಪಾದನೆ ವಿರುದ್ಧ ರಾಜ್ಯಗಳನ್ನು ರಕ್ಷಿಸುವ ದೃಷ್ಟಿಯಿಂದ ಇದು 1984 ರಲ್ಲಿ ಹುಟ್ಟಿಕೊಂಡಿತು. ಇದನ್ನು ಸೆಂಟ್ರಲ್ ಸಶಸ್ತ್ರ ಪೋಲಿಸ್ ಫೋರ್ಸಸ್ (ಸಿಎಪಿಎಫ್) ನ ಏಕರೂಪದ ನಾಮಕರಣದ ಅಡಿಯಲ್ಲಿ ವರ್ಗೀಕರಿಸಲಾಗಿಲ್ಲ.
 • ಇದು ವಿಶೇಷ ಪಡೆಗಳ ಆದೇಶವನ್ನು ಹೊಂದಿದೆ ಮತ್ತು ಅದರ ಪ್ರಮುಖ ಕಾರ್ಯಾಚರಣೆಯ ಸಾಮರ್ಥ್ಯವನ್ನು ಭಾರತೀಯ ಸೇನೆಯಿಂದ ಪಡೆದ ವಿಶೇಷ ಕಾರ್ಯಾಚರಣೆ ಗುಂಪು (SAG) ಒದಗಿಸಿದೆ.
 • ಎನ್ಎಸ್ಜಿಯ ಸಿಬ್ಬಂದಿಯನ್ನು ಬ್ಲ್ಯಾಕ್ ಕ್ಯಾಟ್ಸ್ ಎಂದು ಕರೆಯುತ್ತಾರೆ. ಏಕೆಂದರೆ ಕಪ್ಪು ಉಡುಗೆ ಮತ್ತು ಕಪ್ಪು ಬೆಕ್ಕು ಚಿಹ್ನೆಗಳು ಅವುಗಳ ಸಮವಸ್ತ್ರದಲ್ಲಿ ಧರಿಸಲಾಗುತ್ತದೆ
 • ಭೂಮಿ, ಸಮುದ್ರ ಮತ್ತು ವಾಯು, ಬಾಂಬ್ ವಿಲೇವಾರಿ ಮತ್ತು ಪೋಸ್ಟ್ ಬ್ಲಾಸ್ಟ್ ಇನ್ವೆಸ್ಟಿಗೇಷನ್ (ಪಿಬಿಐ) ಮತ್ತು ಹೋಸ್ಟೇಜ್ ಪಾರುಗಾಣಿಕಾ ಕಾರ್ಯಾಚರಣೆಗಳಲ್ಲಿ ಕೌಂಟರ್ ಹೈಜಾಕಿಂಗ್ ಕಾರ್ಯಗಳನ್ನು ಒಳಗೊಂಡಂತೆ ಕೌಂಟರ್ ಭಯೋತ್ಪಾದಕ ಕಾರ್ಯವನ್ನು ನಡೆಸಲು ಎನ್ಎಸ್ಜಿ ತರಬೇತಿ ಪಡೆದಿದೆ.
 • ಇದು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಉಪಯೋಗಿಸಲು ಉದ್ದೇಶಿಸಲಾಗಿದೆ ಮತ್ತು ರಾಜ್ಯ ಪೊಲೀಸ್ ಪಡೆಗಳ ಅಥವಾ ಇತರ ಪ್ಯಾರಾ ಮಿಲಿಟರಿ ಪಡೆಗಳ ಕಾರ್ಯಗಳನ್ನು ತೆಗೆದುಕೊಳ್ಳುವ ಉದ್ದೇಶವನ್ನು ಹೊಂದಿರುವುದಿಲ್ಲ

ಆಧಾರ್‌ ಆಧಾರಿತ ಸೇವೆ ಸ್ಥಗಿತ

3.

ಸುದ್ಧಿಯಲ್ಲಿ ಏಕಿದೆ ?ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಹಲವಾರು ಡಿಜಿಟಲ್‌ ಪೇಮೆಂಟ್‌ ಕಂಪನಿಗಳಿಗೆ ಆಧಾರ್‌ ಆಧಾರಿತ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ.

ಹಿನ್ನಲೆ

 • ಖಾಸಗಿ ಕಂಪನಿಗಳು ಆಧಾರ್‌ ಮಾಹಿತಿ ಸಂಗ್ರಹಿಸುವಂತೆ ಇಲ್ಲ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ತೀರ್ಪು ಕೊಟ್ಟ ನಂತರ, ಪ್ರಾಧಿಕಾರವು ಹೊರಡಿಸಿದ ಮಹತ್ವದ ಸೂಚನೆ ಇದಾಗಿದೆ.
 • ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು 102 ಕೋಟಿಗೂ ಅಧಿಕ ಭಾರತೀಯರ ಆಧಾರ್‌ ಮಾಹಿತಿಯನ್ನು ನಿರ್ವಹಿಸುತ್ತಿದ್ದು, ಆಧಾರ್ ಸಿಸ್ಟಮ್‌ನಿಂದ ಹೊರ ಬಂದಿರುವ ಬಗ್ಗೆ ದೃಢೀಕರಣ ನೀಡಲು ಪೇಮೆಂಟ್‌ ಕಂಪನಿಗಳಿಗೆ ನಿರ್ದೇಶಿಸಿದೆ.
 • ಪೇಪಾಯಿಂಟ್‌, ಎಕೊ ಫೈನಾನ್ಷಿಯಲ್‌ ಸವೀರ್‍ಸ್‌ ಮತ್ತು ಆಕ್ಸಿಜನ್‌ ಸವೀರ್‍ಸ್‌ ಮುಂತಾದ ಪೇಮೆಂಟ್‌ ಕಂಪನಿಗಳು ಯುಐಡಿಎಐನಿಂದ ನೋಟಿಸ್‌ಗಳನ್ನು ಸ್ವೀಕರಿಸಿವೆ.
 • ಆಧಾರ್‌ ಎಕೊ ಸಿಸ್ಟಮ್‌ನಿಂದ ನಿರ್ಗಮಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಲು ಈ ಕಂಪನಿಗಳಿಗೆ ನಿರ್ದೇಶಿಸಲಾಗಿದೆ.
 • ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸದ್ಯಕ್ಕೆ ಇಂಥ ನೋಟಿಸ್‌ ರವಾನೆಯಾಗಿದೆ.
 • ಬ್ಯಾಂಕಿಂಗ್‌ ಪರವಾನಗಿ ಹೊಂದಿರುವ ಪೇಟಿಎಂಗೆ ನೋಟಿಸ್‌ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
Related Posts
“07 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಋುಣ ಪರಿಹಾರ ಆಯೋಗ ಸುದ್ಧಿಯಲ್ಲಿ ಏಕಿದೆ ?ರೈತರು, ಕೂಲಿಕಾರ್ಮಿಕರು ಹಾಗೂ ಕೆಳಸ್ತರದ ಜನರಿಗೆ ಖಾಸಗಿ ಸಾಲದ ಹೊರೆಯಿಂದ ಮುಕ್ತಿ ನೀಡುವ ಉದ್ದೇಶದ 'ಋುಣ ಪರಿಹಾರ ಕಾಯಿದೆ'ಗೆ ರಾಷ್ಟ್ರಪತಿ ಅಂಕಿತ ಬಾಕಿ ಇರುವ ಬೆನ್ನಲ್ಲೇ, ಕೇರಳ ಮಾದರಿಯಲ್ಲಿ 'ಋುಣ ಪರಿಹಾರ ಆಯೋಗ' ರಚನೆಗೆ ರಾಜ್ಯ ...
READ MORE
“04 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉಪ್ಪು ನೀರು ಸಿಹಿಯಾಗೋ ಕಾಲ ಸುದ್ಧಿಯಲ್ಲಿ ಏಕಿದೆ ?ಸಮುದ್ರದ ಉಪ್ಪು ನೀರು ಸಿಹಿಯಾಗಿ ಮನೆ ಮನೆಗೆ ತಲುಪುವ ಕಾಲ ಸನ್ನಿಹಿತವಾಗುತ್ತಿದೆ. ಮಂಗಳೂರು ತೈಲಾಗಾರ (ಎಂಆರ್‌ಪಿಎಲ್‌) ಕೈಗೆತ್ತಿಕೊಂಡಿರುವ ಬಹು ನಿರೀಕ್ಷೆಯ ಉಪ್ಪು ನೀರು ಸಂಸ್ಕರಣಾ ಘಟಕ 2020ರ ವೇಳೆಗೆ ಕಾರ್ಯಗತಗೊಳ್ಳುವ ನಿರೀಕ್ಷೆಯಿದ್ದು, ರಾಜ್ಯದಲ್ಲೇ ಪ್ರಥಮ ...
READ MORE
“21 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆಗೆ ಯೋಜನೆ ಸುದ್ಧಿಯಲ್ಲಿ ಏಕಿದೆ ? ಪದೇಪದೆ ಕಾಡುವ ಚಂಡಮಾರುತ ಸುಳಿಯಿಂದ ಪಾರಾಗಲು ಕೇಂದ್ರ ಸರ್ಕಾರದ ನೇತೃತ್ವದಲ್ಲಿ, ಕರ್ನಾಟಕ ಸೇರಿದಂತೆ ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆ ಯೋಜನೆ ಕೈಗೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಈ ಯೋಜನೆ ಶೇ.75-25 ಕೇಂದ್ರ-ರಾಜ್ಯ ಸಹಕಾರದಲ್ಲಿ ...
READ MORE
” 01 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಗ್ರಾಮ ವಿಕಾಸ ಯೋಜನೆ ಸುದ್ಧಿಯಲ್ಲಿ ಏಕಿದೆ ?ಸಿದ್ದರಾಮಯ್ಯ ಸರಕಾರದ ಮಹತ್ವಾಕಾಂಕ್ಷಿ 'ಗ್ರಾಮ ವಿಕಾಸ' ಯೋಜನೆಗೆ ಅನುದಾನ ಸ್ಥಗಿತಗೊಳಿಸಿದ್ದು, ಕಾಂಗ್ರೆಸ್‌ ಸಚಿವರ ಆಕ್ರೋಶಕ್ಕೆ ಕಾರಣವಾಗಿದೆ. ಹಿನ್ನಲೆ ಎಚ್‌.ಕೆ.ಪಾಟೀಲ್‌ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ 2015ರ ಗಾಂಧಿ ಜಯಂತಿಯಂದು ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಕಾಂಗ್ರೆಸ್‌ ಸರಕಾರದ 'ಫ್ಲ್ಯಾಗ್‌ಶಿಫ್‌ ಪ್ರೋಗ್ರಾಮ್ಸ್‌ ' ಪಟ್ಟಿಯಲ್ಲಿದ್ದ ...
READ MORE
“15 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದ ಮೆರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌ ರ‍್ಯಾಂಕ್ ಪಟ್ಟಿ  ಸುದ್ಧಿಯಲ್ಲಿ ಏಕಿದೆ ?ಗುಣಮಟ್ಟದ ಜೀವನಕ್ಕೆ ಅತ್ಯುತ್ತಮ ನಗರ ಯಾವುದೆಂದು ತೀರ್ಮಾನಿಸುವ 2019ರ ದ ಮೆರ್ಸರ್ಸ್‌ ಕ್ವಾಲಿಟಿ ಆಫ್‌ ಲಿವಿಂಗ್‌ ರ‍್ಯಾಂಕ್ ಪಟ್ಟಿ (21ನೇ ಆವೃತ್ತಿ) ಬಿಡುಗಡೆಯಾಗಿದ್ದು, ಬೆಂಗಳೂರು ಜಾಗತಿಕ ಮಟ್ಟದಲ್ಲಿ 149ನೇ ಸ್ಥಾನ ...
READ MORE
“17th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
ಹೊಸ ಲೋಗೋ ಸುದ್ಧಿಯಲ್ಲಿ ಏಕಿದೆ ?2019ರ ಫೆಬ್ರವರಿಯಲ್ಲಿ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2019ಗೆ ಹೊಸ ಲೋಗೋ ಬಿಡುಗಡೆಯಾಗಿದೆ. ರಾಷ್ಟ್ರ ಧ್ವಜದ ಮೂರು ಬಣ್ಣಗಳು, ಅಶೋಕ ಚಕ್ರವೂ ಇರುವ ಹೊಸ ಲೋಗೋವನ್ನು ಕ್ಷಣಾ ಇಲಾಖೆ ಅನಾವರಣಗೊಳಿಸಿದ್ದ, ದಿ ರನ್‌ ವೇ ಟು ಎ ...
READ MORE
“25 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಾರುಕಟ್ಟೆ ಖಾತರಿ ಯೋಜನೆ ಸುದ್ಧಿಯಲ್ಲಿ ಏಕಿದೆ ?ಕೃಷಿ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಂದ ರೈತರಿಗಾಗುವ ವಂಚನೆ ತಪ್ಪಿಸುವುದಕ್ಕಾಗಿ ಕೆಲವು ಕೃಷಿ ಉತ್ಪನ್ನಗಳಿಗಷ್ಟೇ ಇರುವ ಕನಿಷ್ಠ ಬೆಂಬಲ ಬೆಲೆಯನ್ನು ವಾಣಿಜ್ಯ ಹಾಗೂ ಸಿರಿಧಾನ್ಯ ಬೆಳೆಗಳಿಗೂ ವಿಸ್ತರಿಸಿ ಮಾರುಕಟ್ಟೆ ಖಾತರಿ ಒದಗಿಸುವ ನಿರ್ಧಾರಕ್ಕೆ ಸರ್ಕಾರ  ಬಂದಿದೆ. ಏಕೆ ಈ ಯೋಜನೆ ...
READ MORE
“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶಾಲೆಗೆ ಬನ್ನಿ ಶನಿವಾರ ಶೀಘ್ರ ಪುನಾರಂಭ ಸುದ್ಧಿಯಲ್ಲಿ ಏಕಿದೆ ?ಮೂಲೆಗುಂಪಾಗಿದ್ದ ಶಿಕ್ಷಣ ಇಲಾಖೆಯ ಜನಪ್ರಿಯ ಯೋಜನೆ ‘ಶಾಲೆಗೆ ಬನ್ನಿ ಶನಿವಾರ- ಕಲಿಯಲು ನೀಡಿ ಸಹಕಾರ’ ಮತ್ತೆ ಆರಂಭವಾಗಲಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಪಾಠ-ಪ್ರವಚನ ಮಾಡಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ...
READ MORE
“09 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
 ವಾಣಿಜ್ಯ ಸಮರ  ಸುದ್ಧಿಯಲ್ಲಿ ಏಕಿದೆ ?ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಉತ್ತಮಗೊಳ್ಳುತ್ತಿರುವ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ಸಮರ ತೀವ್ರಗೊಳ್ಳುವ ಸಾಧ್ಯತೆ ಇದೆ. ಕಾರಣ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ 2 ಸಾವಿರಕ್ಕೂ ಹೆಚ್ಚು ಉತ್ಪನ್ನಗಳಿಗೆ ನೀಡುತ್ತಿರುವ ಶೂನ್ಯ ತೆರಿಗೆಯನ್ನು ರದ್ದುಗೊಳಿಸುವ ಬಗ್ಗೆ ಅಮೆರಿಕ ...
READ MORE
“09 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ದೇಶದ ಅತ್ಯುತ್ತಮ ವಿವಿ: ಸುದ್ಧಿಯಲ್ಲಿ ಏಕಿದೆ ? ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿದ ಉನ್ನತ ಶಿಕ್ಷಣ ಸಂಸ್ಥೆಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಬೆಂಗಳೂರಿನ ಮೂರು ಸಂಸ್ಥೆಗಳು ಸ್ಥಾನ ಪಡೆದಿವೆ. ಉನ್ನತ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಎರಡನೇ ...
READ MORE
“07 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“04 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“21 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 01 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“17th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “
“25 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“09 ಫೆಬ್ರವರಿ 2019 ರ ಕನ್ನಡ ಪ್ರಚಲಿತ
“09 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *