“16th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “

ಕರ್ನಾಟಕ ಕೃಷಿಗೆ ಅಮೆರಿಕ ಸೈನಿಕ ಹುಳ ಲಗ್ಗೆ

1.

ಸುದ್ಧಿಯಲ್ಲಿ ಏಕಿದೆ ?ಕರ್ನಾಟಕವೂ ಸೇರಿದಂತೆ ನಾಲ್ಕೈದು ರಾಜ್ಯದ ಕೃಷಿ ಜಮೀನುಗಳಲ್ಲಿ ಅಮೆರಿಕ ಮೂಲದ ಅಪಾಯಕಾರಿ ಕೀಟವೊಂದು ಕಾಣಿಸಿಕೊಂಡಿದ್ದು, ಈ ಬಗ್ಗೆ ತೀವ್ರ ಎಚ್ಚರಿಕೆ ವಹಿಸುವಂತೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

 • ಕೆಲವು ವರ್ಷಗಳಂದ ರಾಜ್ಯದ ಹಲವು ಬೆಳೆಗಳಿಗೆ ಬಾಧಿಸುತ್ತಿರುವ ಸೈನಿಕ ಹುಳುವಿನ ಮಾದರಿಯಲ್ಲಿರುವ ಈ ಅಮೆರಿಕ ಕೀಟ ಬೇರೆಯದಾಗಿದೆ. ಫ್ರುಗಿಪೆರ್ಡ ಸ್ಪೊದೊಪ್ಟೇರಾ ವೈಜ್ಞಾನಿಕ ಹೆಸರಿನ ಈ ಹುಳು ತನ್ನ ಜೀವಿತಾವಧಿಯಲ್ಲಿ ಒಂದು ಸಾವಿರಕ್ಕೂ ಅಧಿಕ ಮೊಟ್ಟೆಗಳನ್ನಿಡುವ ಸಾಮರ್ಥ್ಯ ಹೊಂದಿದೆ. ಈ ಹುಳದ ಚಿಟ್ಟೆಯೂ ಬಹಳ ವೇಗವಾಗಿ ತನ್ನ ವಂಶಾಭಿವೃದ್ಧಿ ಮಾಡುತ್ತದೆ. ಈ ಗುಣ ಸ್ವಭಾವವೇ ಅಮೆರಿಕಾದ ಕೃಷಿ ವಲಯಕ್ಕೆ ಭಾರೀ ಅಪಾಯ ತಂದೊಡ್ಡಿದೆ.

ಹಿನ್ನಲೆ 

 • ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದು ನಿಂತಿರುವ ಫಸಲನ್ನೇ ಹಾನಿ ಮಾಡುವ ಮೂಲಕ ಭಾರತೀಯ ಕೃಷಿ ವಲಯವನ್ನೇ ಅಲ್ಲೋಲಕಲ್ಲೋಲ ಮಾಡುವಷ್ಟು ಶಕ್ತಿಶಾಲಿಯಾದ ಈ ಕೀಟ ಸಂತಾನ ನಾಲ್ಕೈದು ತಿಂಗಳ ಹಿಂದೆ ರಾಜ್ಯದಲ್ಲಿಯೇ ಕಾಣಿಸಿಕೊಂಡಿತ್ತು. ಅದನ್ನು ಶಿವಮೊಗ್ಗ ಕೃಷಿ ವಿವಿಯ ಕೃಷಿ ಕೀಟಶಾಸ್ತ್ರ ವಿಭಾಗದ ವಿಜ್ಞಾನಿಗಳೇ ಸಕಾಲದಲ್ಲಿ ಪತ್ತೆಹಚ್ಚಿ ಸಂಭವನೀಯ ಅಪಾಯವನ್ನು ತಡೆಗಟ್ಟಿದ್ದರು.
 • ”ಅಮೆರಿಕ ಮೂಲದ ಸೈನಿಕ ಹುಳು ಕರ್ನಾಟಕಕ್ಕೆ ಹೇಗೆ ಬಂತು ಎಂಬುದರ ಬಗ್ಗೆ ಇದುವರೆಗೂ ಗೊತ್ತಾಗಿಲ್ಲ. ರಾಜ್ಯದಲ್ಲಿ ಮೊದಲ ಬಾರಿಗೆ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ಮೆಕ್ಕೆಜೋಳದ ಬೆಳೆಯಲ್ಲಿ ಮೇ, ಜೂನ್‌ನಲ್ಲಿ ಕಾಣಿಸಿಕೊಂಡಿತು. ಆನಂತರದಲ್ಲಿ ಇತರ ಜಿಲ್ಲೆಗಳಿಗೆ ಹರಡಿ ಈಗ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಗೂ ಹರಡಿದೆ.

ಪತ್ತೆ ಹಚ್ಚುವುದು ಹೇಗೆ ?

 • ”20ರಿಂದ 40 ದಿನ ಮೆಕ್ಕೆಜೋಳದ ಬೆಳೆಯ ಸುಳಿಯಲ್ಲಿ ಹೆಚ್ಚು ಕಂಡು ಬರುತ್ತದೆ. ಸುಳಿಯನ್ನು ತಿನ್ನುವುದರಿಂದ ಗಿಡ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಸುಳಿ ಎಲೆಯುನ್ನು ತಿಂದು, ಎಲೆ ಮೇಲೆ ಲದ್ದಿಯನ್ನು ಇಡುತ್ತದೆ. ಹೀಗಾಗಿ ಇದನ್ನು ಸುಲಭವಾಗಿ ಪತ್ತೆ ಮಾಡಬಹುದು,”
 • ”ರೈತರು ಬೆಳೆಯ ಮೇಲೆ ಪ್ರತಿದಿನವೂ ನಿಗಾ ವಹಿಸಿ ಗಮನಿಸಬೇಕು. ಯಾವುದೇ ಗಿಡದಲ್ಲಿ ಕೀಟಗಳು ಎಲೆತಿಂದಿರುವುದು ಕಂಡುಬಂದಲ್ಲಿ ಕೂಡಲೆ ಕೀಟ ನಾಶಕ ಬಳಸಿ ನಿಯಂತ್ರಿಸಬೇಕು.

 ನೆನಪಿರಲಿ ಈ ಕೀಟವೇ ಬೇರೆ

 • ಕಳೆದ ವರ್ಷ ಭತ್ತ ಮತ್ತು ಮೆಕ್ಕೆಜೋಳದ ಬೆಳೆಯಲ್ಲಿ ಇದೇ ರೀತಿ ಕಾಣುವ ಸೈನಿಕ ಹುಳು ಕಂಡು ಬಂದಿತ್ತು. ಆದರೆ, ಅದನ್ನು ವೈಜ್ಞಾನಿಕವಾಗಿ ಮೈಥಿಮ್ನ ಸಪರೇಟ ಎಂದು ಕರೆಯಲಾಗುತ್ತದೆ. ಮೇಲ್ನೋಟಕ್ಕೆ ಒಂದೇ ರೀತಿ ಕಂಡರೂ ಇವೆರಡೂ ಪ್ರತ್ಯೇಕ. ರೈತರು ಇವೆರಡೂ ಸೈನಿಕ ಹುಳುಗಳ ಬಗ್ಗೆ ತುಂಬ ಎಚ್ಚರ ವಹಿಸಬೇಕು.

ನಿಯಂತ್ರಣ ಹೇಗೆ?

 • ಒಂದು ಲೀಟರ್‌ ನೀರಿಗೆ 2 ಎಂಎಲ್‌ ಕ್ಲೋರೋ ಫೆರಿಪಾಸ್‌ ಮಿಶ್ರಣ ಮಾಡಿ ಮೆಕ್ಕೆಜೋಳದ ಮೇಲೆ ಸಿಂಪಡಣೆ ಮಾಡಬೇಕು. ಎಲ್ಲ ರೈತರು ಸಿಂಪಡಣೆ ಮಾಡಿದರೆ ನಿಯಂತ್ರಣಕ್ಕೆ ತರಬಹುದು. ಇದು 30 ದಿನದಲ್ಲಿ ಕೋಶಾವಸ್ಥೆಗೆ ಹೋಗುತ್ತದೆ
 • ಬೆಂಗಳೂರು ಕೃಷಿ ವಿವಿಯಲ್ಲಿ ಈ ಹುಳು ಬಾಧೆ ತಪ್ಪಿಸಲು ಪ್ರಯೋಗ ನಡೆಯುತ್ತಿದೆ

ಇದು ದೊಡ್ಡ ಸೈನಿಕ ಕೀಟ!

 • 2016ರ ಜನವರಿಯಲ್ಲಿ ಆಫ್ರಿಕಾದ ನೈಜೀರಿಯಾದಲ್ಲಿ ಪತ್ತೆಯಾಗಿ ಅಮೆರಿಕಾದಲ್ಲಿ ಕಾಣಿಸಿಕೊಂಡಿತು. ಈಗ ಏಷ್ಯಾಗೆ ಪ್ರವೇಶಿಸಿದೆ.
 • ಅಂತಾರಾಷ್ಟ್ರೀಯ ಕೃಷಿ ಸಂಸ್ಥೆಯೊಂದು ಅಂದಾಜು ಮಾಡಿರುವ ಪ್ರಕಾರ, ಕಳೆದ ಕೃಷಿ ಹಂಗಾಮಿನಲ್ಲಿ ಆಫ್ರಿಕಾದಲ್ಲಿ ಉಂಟು ಮಾಡಿರುವ ನಷ್ಟದ ಪ್ರಮಾಣ 220 ಕೋಟಿ ಡಾಲರ್‌
 • ಈ ಕೀಟದ ಮೊದಲ ದಾಳಿ ಮೆಕ್ಕೆಜೋಳವಾದರೂ, ಅದು ಭತ್ತ, ಕಬ್ಬು , ಹತ್ತಿ ಹಾಗೂ ತರಕಾರಿ ಬೆಳೆಗಳ ಮೇಲೂ ದಾಳಿ ಇಡಬಲ್ಲದು
 • ಜೀವಿತ ಅವಧಿಯಲ್ಲಿ ಸಾವಿರ ಮೊಟ್ಟೆ ಇರುವ ಸಾಮರ್ಥ್ಯ‌ ಹೊಂದಿರುವ ಈ ಹುಳದ ಚಿಟ್ಟೆ, ಒಂದು ರಾತ್ರಿ 100 ಕಿ. ಮೀ. ಹಾರಬಲ್ಲದು

ಮೀಸಲು ಬಡ್ತಿಗೆ ಶಾಶ್ವತ ಸೂತ್ರ

ಸುದ್ಧಿಯಲ್ಲಿ ಏಕಿದೆ ?ಮೀಸಲು ಬಡ್ತಿ ವಿಚಾರಕ್ಕೆ ಸಂಬಂಧಿಸಿ ಕಳೆದ 26 ವರ್ಷಗಳಿಂದ ವ್ಯಾಜ್ಯದಲ್ಲಿ ತೊಡಗಿದ್ದವರು ಈಗ ವಿವಾದವನ್ನು ಶಾಶ್ವತವಾಗಿ ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ.

 • ಕೋರ್ಟ್​ನಲ್ಲಿರುವ ಈ ಪ್ರಕರಣಕ್ಕೆ ಸದ್ಯದಲ್ಲಿ ತೆರೆ ಬೀಳುವ ಲಕ್ಷಣ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಡ್ತಿಯಲ್ಲಿ ಎಸ್ಸಿ ಎಸ್ಟಿ ನೌಕರರಿಗೆ ಶೇ.18 ಮೀಸಲು ಹಂಚಿಕೆ, ಮಾಡಿ ಶೇ.82 ಅನ್ನು ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಸಾಮಾನ್ಯ ವರ್ಗದವರಿಗೆ ಮೀಸಲು ನಿಗದಿ ಮಾಡುವ ಪ್ರಸ್ತಾಪದ ಬಗ್ಗೆ ಗಹನ ಚರ್ಚೆ ಆರಂಭವಾಗಿದೆ.

ಸಮಯ, ಹಣ ವ್ಯರ್ಥ

 • ನ್ಯಾಯಾಲಯದಲ್ಲಿ ಒಮ್ಮೆ ಎಸ್ಸಿ ಎಸ್ಟಿ ನೌಕರರಿಗೆ ಹೆಚ್ಚು ಅನುಕೂಲವಾದರೆ, ಮತ್ತೊಂದು ಸಂದರ್ಭದಲ್ಲಿ ಸಾಮಾನ್ಯ ವರ್ಗದವರಿಗೆ ಅನುಕೂಲವಾಗಿದೆ. ಒಟ್ಟಾರೆ ಪ್ರಕರಣ ಮುಕ್ತಾಯ ಕಾಣುತ್ತಿಲ್ಲ. ಈಗಲೂ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿ (ಪವಿತ್ರಾ ಪ್ರಕರಣ) ವಿಚಾರಣೆಯಲ್ಲಿದೆ.
 • ಸರ್ಕಾರಿ ನೌಕರರು ನ್ಯಾಯಾಲಯದ ಖರ್ಚು ವೆಚ್ಚಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಸುರಿಯುತ್ತಲೇ ಇದ್ದಾರೆ. ಸಮಯ ಕೂಡ ಸಾಕಷ್ಟು ವ್ಯರ್ಥವಾಗಿದೆ. ಸರ್ಕಾರ ಕೂಡ ವಕೀಲರನ್ನು ನೇಮಿಸಿ ಪ್ರಕರಣದ ಇತ್ಯರ್ಥಕ್ಕೆ ಪ್ರಯತ್ನ ನಡೆಸಿದೆ. ಇನ್ನೊಂದೆಡೆ ಇಂದೋ ನಾಳೆಯೋ ವಿವಾದ ಮುಕ್ತಾಯವಾಗಬಹುದೆಂಬ ನಿರೀಕ್ಷೆ ಹೊತ್ತಿದ್ದ ಸಾವಿರಾರು ನೌಕರರು ಸೇವಾ ನಿವೃತ್ತಿ ಹೊಂದಿದ್ದಾರೆ.
 • ಸರ್ಕಾರದ ಮೀಸಲು ಬಡ್ತಿ ನೀತಿಯಿಂದಾಗಿ ಎಸ್ಸಿ ಎಸ್ಟಿ ನೌಕರರಿಗೆ ಶೇ.18ಕ್ಕಿಂತ ಹೆಚ್ಚು ಮೀಸಲು ಸಿಗುತ್ತಿದೆ, ಕೆಲವು ಇಲಾಖೆಗಳಲ್ಲಿ ಶೇ.100 ಪ್ರಾತಿನಿಧ್ಯ ಸಿಗುತ್ತಿದೆ ಎಂದು ಸಾಮಾನ್ಯ ವರ್ಗದವರು (ಅಹಿಂಸಾ) ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದಾರೆ. ಕೊರ್ಟ್ ಇತ್ತೀಚೆಗೆ ಕೊಟ್ಟ ಆದೇಶದ ಪ್ರಕಾರ ಎಸ್ಸಿ ಎಸ್ಟಿ ನೌಕರರಿಗೆ ಶೇ.18 ಮೀಸಲು ಸೀಮಿತಗೊಳ್ಳುತ್ತದೆ. ಹೀಗಾಗಿ ಶೇ.18ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮೀಸಲು ಬಡ್ತಿ ಹೊಂದಿದ್ದವರನ್ನು ರಕ್ಷಿಸಲು ಸರ್ಕಾರ ಕಾಯ್ದೆ ತಂದಿದೆ.

ಪರಿಹಾರ ಸೂತ್ರವೇನು?

 1. ಕ್ಲಾಸ್ 1ರ ಕೆಳಹಂತದಲ್ಲಿ ಬಡ್ತಿ ನೀಡುವಾಗ ಶೇ.18 ಮೀಸಲು ಕೊಡಬಹುದೆಂದು ನ್ಯಾಯಾಲಯದ ಆದೇಶವಿದೆ. ಕ್ಲಾಸ್ 1 ಮೇಲ್ಪಟ್ಟು ಕೂಡ ಶೇ.18 ಮೀಸಲು ಕೊಡುವುದು ಪರಿಹಾರ ಸೂತ್ರದ ಪ್ರಮುಖ ಅಂಶ.
 2. ಮೀಸಲು ಬಡ್ತಿ ವಿಚಾರದಲ್ಲಿ ಹೋರಾಟ ನಡೆಸುತ್ತಿರುವ ಅಹಿಂಸಾ ಮತ್ತು ಎಸ್ಸಿಎಸ್ಟಿ ನೌಕರರ ಸಂಘಟನೆಯನ್ನು ಸರ್ಕಾರ ಕರೆದು ಮಾತನಾಡಿ ಒಮ್ಮತಾಭಿಪ್ರಾಯ ರೂಪಿಸುವುದು.
 3. ಇತ್ತೀಚೆಗೆ ಮಂಡಿಸಿದ ತತ್ಪರಿಣಾಮ ಬಡ್ತಿ ರಕ್ಷಿಸುವ ಕಾನೂನು ಹಿಂಪಡೆದು, ಶೇ.18, ಶೇ.82 ಸೂತ್ರದ ಹೊಸ ಕಾನೂನು ರಚಿಸಿ ಅದನ್ನು ನ್ಯಾಯಾಲಯದ ಮುಂದೆ ಸಲ್ಲಿಸಬೇಕು.
 4. ಒಂದೊಮ್ಮೆ ಶೇ.18-ಶೇ.82 ಸೂತ್ರ ಜಾರಿಗೆ ಬಂದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತೆ.
 5. ಮುಂದೆ ಯಾವ ವರ್ಗದವರು ನಿವೃತ್ತರಾಗುತ್ತಾರೋ ಅಥವಾ ನಿಧನ ಹೊಂದಿದಲ್ಲಿ ಆ ಸ್ಥಾನಕ್ಕೆ ಆ ವರ್ಗದವರನ್ನೇ ಬಡ್ತಿಗೊಳಿಸುವಂತಾಗಬೇಕು.

ಏನಿದು ವಿವಾದ?

 • ಸರ್ಕಾರಿ ನೌಕರರಿಗೆ ಬಡ್ತಿ ನೀಡುವಾಗ ಎಸ್ಟಿ ಎಸ್ಟಿ ನೌಕರರಿಗೆ ಮೀಸಲು ನೀಡಲಾಗುತ್ತಿದೆ. ಕೆಲವು ಇಲಾಖೆಗಳಲ್ಲಿ ಮುಂಬಡ್ತಿ ಪಡೆದವರ ಪ್ರಮಾಣ ಶೇ.18ಕ್ಕಿಂತ ಹೆಚ್ಚಾಗಿದ್ದು, ಇದರ ವಿರುದ್ಧ ಕಾನೂನು ಹೋರಾಟ ನಡೆಯುತ್ತಿದೆ.
 • 2017ರ ಫೆಬ್ರವರಿಯಲ್ಲಿ ನ್ಯಾಯಾಲಯ ಮುಂಬಡ್ತಿಗೊಂಡವರನ್ನು ಹಿಂಬಡ್ತಿಗೊಳಿಸಿ ಹೊಸದಾಗಿ ಜ್ಯೇಷ್ಠತಾ ಪಟ್ಟಿ ಮಾಡಿ ಆ ಮೂಲಕ ಬಡ್ತಿ ನೀಡುವಂತೆ ಸೂಚಿಸಿತ್ತು. ಹಿಂಬಡ್ತಿಗೊಂಡವರನ್ನು ರಕ್ಷಿಸಲು ಸರ್ಕಾರ ಕಾನೂನು ಮಾಡಿದ್ದು, ಅದರ ಅನುಷ್ಠಾನಕ್ಕೆ ನ್ಯಾಯಾಲಯದ ಅನುಮತಿಗೆ ಕಾಯ್ದಿದೆ.

ಬ್ಯಾಂಕ್‌ ವಿಲೀನ

ಸುದ್ಧಿಯಲ್ಲಿ ಏಕಿದೆ ?ವಿಜಯ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ ಮತ್ತು ದೇನಾ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರಿಂದ ಬ್ಯಾಂಕ್‌ಗಳ ಬ್ಯಾಲೆನ್ಸ್‌ಶೀಟ್‌ ಮತ್ತು ಬ್ಯಾಂಕಿಂಗ್‌ ವ್ಯವಸ್ಥೆ ಮೇಲೆ ಮಾತ್ರವಲ್ಲ, ಗ್ರಾಹಕರ ಮೇಲೂ ಕೆಲವು ಪರಿಣಾಮಗಳು ಆಗಬಹುದು. ಅವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

 1. ಖಾತೆ ಸಂಖ್ಯೆ, ಗ್ರಾಹಕರ ಐಡಿಯಲ್ಲಿ ಬದಲಾವಣೆ:ಬ್ಯಾಂಕ್‌ಗಳು ವಿಲೀನವಾದ ಮೇಲೆ ಗ್ರಾಹಕರ ಖಾತೆ ಸಂಖ್ಯೆ, ಕಸ್ಟಮರ್‌ ಐಡಿಯಲ್ಲಿ ಬದಲಾವಣೆಯಾಗಬಹುದು. ಹೊಸ ಅಕೌಂಟ್‌ ನಂಬರ್‌ ಮತ್ತು ಕಸ್ಟಮರ್‌ ಐಡಿಯನ್ನು ಗ್ರಾಹಕರಿಗೆ ವಿತರಿಸುವ ಸಾಧ್ಯತೆ ಇದೆ. ನಿಮ್ಮ ಮೊಬೈಲ್‌ ಸಂಖ್ಯೆ ಮತ್ತು ಇಮೇಲ್‌ ಐಡಿಯನ್ನು ಬ್ಯಾಂಕ್‌ಗೆ ಅಪ್‌ಡೇಟ್‌ ಮಾಡಿದ್ದರೆ, ಈ ಸಂಬಂಧಿ ಸೂಚನೆಗಳು ಬರಲಿವೆ. ಹೊಸ ಖಾತೆಯು ತನ್ನಷ್ಟಕ್ಕೆ ತಾನೇ ಸೃಷ್ಟಿಯಾಗುತ್ತದೆ. ಗ್ರಾಹಕರು ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ಎರಡರಲ್ಲೂ ಖಾತೆಗಳನ್ನು ಹೊಂದಿದ್ದ ಪಕ್ಷದಲ್ಲಿ, ಎರಡು ಖಾತೆಗಳಿಗೂ ಒಂದೇ ಕಸ್ಟಮರ್‌ ಐಡಿ ನೀಡಲಾಗುತ್ತದೆ.
 2. ಥರ್ಡ್‌ ಪಾರ್ಟಿಗೆ ವಿವರಗಳನ್ನು ಅಪ್‌ಡೇಟ್‌ ಮಾಡಿ: ಬ್ಯಾಂಕ್‌ ವಿಲೀನದ ಬಳಿಕ ನಿಮ್ಮ ನೂತನ ಖಾತೆ ಸಂಖ್ಯೆ ಮತ್ತು ಬದಲಾದ ಐಎಫ್‌ಎಸ್‌ಸಿ ಕೋಡ್‌ ಅನ್ನು ಥರ್ಟ್‌ ಪಾರ್ಟಿಗೆ ಅಪ್‌ಡೇಟ್‌ ಮಾಡಬೇಕಾಗುತ್ತದೆ. ಅಂದರೆ, ಆದಾಯ ತೆರಿಗೆ ಇಲಾಖೆ, ವಿಮೆ ಕಂಪನಿ, ಮ್ಯೂಚುವಲ್‌ ಫಂಡ್ಸ್‌ಗಳು, ಎನ್‌ಪಿಎಸ್‌ ಸೇರಿದಂತೆ ನಾನಾ ಸಂಸ್ಥೆಗಳಿಗೆ ನೀವು ಬ್ಯಾಂಕ್‌ ಖಾತೆ ಮತ್ತು ಐಎಫ್‌ಎಸ್‌ಸಿ ಕೋಡ್‌ ಅನ್ನು ಅಪ್‌ಡೇಟ್‌ ಮಾಡಬೇಕು. ಇಲ್ಲದೇ ಹೋದರೆ, ಹಣಕಾಸು ವ್ಯವಹಾರದಲ್ಲಿ ತೊಡಕಾಗುತ್ತದೆ. ಆನ್‌ಲೈನ್‌ ಮೂಲಕ ಅಥವಾ ಸಮೀಪದ ಶಾಖೆಗೆ ತೆರಳಿ ಅಪ್‌ಡೇಟ್‌ ಮಾಡಲು ಅವಕಾಶವಿದೆ.
 3. ಸ್ಥಳೀಯ ಶಾಖೆಗಳು ಬಂದ್‌:ವಿಲೀನದ ಬಳಿಕ ನಿಮ್ಮ ಸಮೀಪದ ಬ್ಯಾಂಕ್‌ ಶಾಖೆಗಳು ಬಂದ್‌ ಆಗುವ ಸಾಧ್ಯತೆ ಇದೆ. ನಿಮ್ಮ ಬ್ಯಾಂಕ್‌ನ ನೂತನ ಐಎಫ್‌ಎಸ್‌ಸಿ ಮತ್ತು ಎಂಐಸಿಆರ್‌ ಕೋಡ್‌ಗಳ ಬಗ್ಗೆ ಮಾಹಿತಿ ಪಡೆಯಬೇಕು. ಹಣ ವರ್ಗಾವಣೆ ಮತ್ತು ಇತರೆ ಹಣಕಾಸು ವ್ಯವಹಾರಗಳಲ್ಲಿ ಈ ಅಂಶಗಳು ಅಗತ್ಯ. ”ಎಸ್‌ಬಿಐ ಸಹವರ್ತಿ ಬ್ಯಾಂಕ್‌ಗಳು ಎಸ್‌ಬಿಐನಲ್ಲಿ ವಿಲೀನವಾದಾಗ, ಖಾತೆ ಸಂಖ್ಯೆಗಳು ಬದಲಾಗಲಿಲ್ಲ. ಆದರೆ, ಹೋಮ್‌ ಬ್ರಾಂಚ್‌ ಬದಲಾಗಿದ್ದು, ಹೊಸ ಶಾಖೆಯ ಕೋಡ್‌ ಅನ್ವಯವಾಗುತ್ತದೆ,”.
 4. ಠೇವಣಿ, ಬಡ್ಡಿ ದರದಲ್ಲಿ ಬದಲಾವಣೆ :ಬ್ಯಾಂಕ್‌ಗಳ ವಿಲೀನವಾದ ಬಳಿಕ, ಆ ದಿನಾಂಕಕ್ಕೆ ಅನ್ವಯವಾಗುವಂತೆ ಠೇವಣಿಗಳು ಮತ್ತು ಬಡ್ಡಿ ದರಗಳಲ್ಲಿ ಬದಲಾವಣೆಗಳಾಗುತ್ತವೆ. ಆದಾಗ್ಯೂ, ಚಾಲ್ತಿಯಲ್ಲಿರುವ ನಿಶ್ಚಿತ ಠೇವಣಿಗೆ(ಎಫ್‌ಡಿ) ಹಿಂದಿನ ಬ್ಯಾಂಕ್‌ ಭರವಸೆ ನೀಡಿದ್ದ ಬಡ್ಡಿ ದರವೇ ಮುಂದುವರಿಯುತ್ತದೆ. ಇದೇ ರೀತಿ, ಸಾಲದ ಕರಾರುಗಳೂ ಮೂಲ ಒಪ್ಪಂದದಂತೆಯೇ ಮುಂದುವರಿಯುತ್ತವೆ.
 5. ಇಸಿಎಸ್‌ ಮತ್ತು ಬ್ಯಾಂಕ್‌ ಚೆಕ್‌ಗಳು:ವಿಲೀನದ ಬಳಿಕ ಬ್ಯಾಂಕ್‌, ಗ್ರಾಹಕರ ಎಲೆಕ್ಟ್ರಾನಿಕ್‌ ಕ್ಲಿಯರಿಂಗ್‌ ಸೇವೆಗಳು (ಇಸಿಎಸ್‌) ಮತ್ತು ಪೋಸ್ಟ್‌ ಡೇಟೆಡ್‌ ಚೆಕ್‌ಗಳ ಸೇವೆಯನ್ನು ಮುಂದುವರಿಸಬೇಕಾಗುತ್ತದೆ. ಈ ಸಂಬಂಧ ಗ್ರಾಹಕರು ತಮ್ಮ ಬ್ಯಾಂಕ್‌ಗಳು ಮತ್ತು ವಿಮೆ ಕಂಪನಿಗಳ ಜತೆ ವ್ಯವಹರಿಸುವುದು ಮುಖ್ಯ. ಗ್ರಾಹಕರು ತಮ್ಮಲ್ಲಿನ ಹಳೆಯ ಚೆಕ್‌ಗಳನ್ನು ಬಳಸಲು 6-12 ತಿಂಗಳ ಅವಕಾಶ ಸಿಗಲಿದೆ.

Me Too

2.

ಸುದ್ಧಿಯಲ್ಲಿ ಏಕಿದೆ ?Me Too ಈ ಟ್ಯಾಗ್​ಲೈನ್​ ಈಗ ದೇಶದಲ್ಲಿ ಸಂಚಲನ ಮೂಡಿಸುತ್ತಿದೆ, ಚಳವಳಿಯಾಗಿ ಮಾರ್ಪಟ್ಟಿದೆ, ಹಲವರ ಎದೆ ನಡುಗಿಸಿದೆ, ದೌರ್ಜನ್ಯಕ್ಕೊಳಗಾದವರಿಗೆ ವೇದಿಕೆ ಎಂಬಂತಾಗಿದೆ.ಚಿತ್ರರಂಗದ ನಟಿಯರು, ಸೆಲೆಬ್ರೆಟಿಗಳು, ಮಹಿಳಾ ಪತ್ರಕರ್ತರು ತಮಗಾದ ವೇದನೆಯನ್ನು Me Too ಅಡಿಯಲ್ಲಿ ನಿವೇದಿಸಿಕೊಳ್ಳುತ್ತಿದ್ದಾರೆ.

ಹಿನ್ನಲೆ

 • ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ನೆರವಾಗಲೆಂದು ಟರಾನಾ ಬರ್ಕ್​ ಎಂಬ ನಾಗರೀಕ ಹೋರಾಟಗಾರ್ತಿ 2006ರಲ್ಲಿ Me Too ಅಭಿಯಾನವನ್ನು ಆರಂಭಿಸಿದರು.
 • ಅತ್ಯಂತ ಕೆಳಸ್ತರದ, ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳ ಒಳಿತಿಗಾಗಿ, ಸಮಸ್ಯೆ ಪರಿಹಾರಕ್ಕಾಗಿ ಮತ್ತು ಅವರಿಗೆ ನೈತಿಕ ಸ್ಥೈರ್ಯ ತುಂಬಲು ಟರಾನಾ ಬರ್ಕ್​ ಈ ಚಳವಳಿಗೆ ಮುನ್ನಡಿ ಬರೆದಿದ್ದರು.
 • ಆರಂಭದಲ್ಲಿ Me Too ಎಂಬುದರ ಮೂಲ ಉದ್ದೇಶ ಮಹಿಳಾ ಸಬಲೀಕರಣವಾಗಿತ್ತು. ಅಲ್ಲದೆ, ದೌರ್ಜನ್ಯಕ್ಕೊಳಗಾದವರು ಒಂಟಿಯಲ್ಲ ಎಂಬ ಭಾವನೆ ಮೂಡಿಸುವುದಾಗಿತ್ತು.

ಯಾರೀ ಟರಾನಾ ಬರ್ಕ್​?

 • ಟರಾನಾ ಬುರ್ಕ್​ ಆಫ್ರಿಕನ್​ ಅಮೆರಿಕನ್​ ಮಹಿಳೆ. ನ್ಯೂಯಾರ್ಕ್​ನ ನಾಗರಿಕ ಹಕ್ಕುಗಳ ಹೋರಾಟಗಾರ್ತಿಯೂ ಹೌದು.
 • ನ್ಯೂಯಾರ್ಕ್​ನ ಬ್ರುಕ್ಲಿನ್​ ಮೂಲದ ‘ಲಿಂಗ ಸಮಾನತೆಗಾಗಿ ಹೆಣ್ಣುಮಕ್ಕಳು’ ಎಂಬ ಸಂಸ್ಥೆಯಲ್ಲಿ ಸದ್ಯ ಟರಾನ್​ ಬುರ್ಕ್​ ಅವರು ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 • ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳ ಪರ ಹೋರಾಡಿದ, ಕಲ್ಯಾಣ ಕಾರ್ಯಕ್ರಮಗಳ ಕೈಗೊಂಡ ಟರಾನಾ ಅವರು 2017ರಲ್ಲಿ ‘ಟೈಮ್​ ವರ್ಷದ ವ್ಯಕ್ತಿ ಪ್ರಶಸ್ತಿಗೆ’ ಪಾತ್ರರಾಗಿದ್ದಾರೆ.

#Me Too ಆರಂಭವಾಗಿದ್ದು ಹೇಗೆ?

 • ಲೈಂಗಿಕ ದಾಸ್ಯಕ್ಕೊಳಗಾದ ಕೆಳ ಸ್ತರದ ಹೆಣ್ಣು ಮಕ್ಕಳ ಪರವಾಗಿ ಹೋರಾಡಲೆಂದು ಟರಾನಾ ಬರ್ಕ್​ 2003ರಲ್ಲಿ Just Be Inc. ಎಂಬ ಸಂಸ್ಥೆ ಆರಂಭಿಸಿದ್ದರು. ಅದರ ಮೂಲಕ ‘my space’ ಎಂಬ ವೆಬ್​ ಪೋರ್ಟಲ್​ನಲ್ಲಿ ಹೆಣ್ಣು ಮಕ್ಕಳ ಸಮಸ್ಯೆ ಆಲಿಸುವ, ಅವರಿಗೆ ಸಾಂತ್ವನ ಹೇಳುವ, ಅವರಿಗೆ ಕಾನೂನು ನೆರವು ಕಲ್ಪಿಸುವ ಕಾರ್ಯಕ್ರಮ (ಯೂತ್​ ಕ್ಯಾಂಪ್​ ) ನಡೆಸುತ್ತಿದ್ದರು. ಟರಾನಾ ಅವರು ಅಪ್ರಾಪ್ತ, ಸಂತ್ರಸ್ತ ಹೆಣ್ಣುಮಕ್ಕಳ ಯೋಗಕ್ಷೇಮಕ್ಕಾಗಿ ಯೋಜನೆಗಳನ್ನು ಹಾಕಿಕೊಳ್ಳಲು ಆರಂಭಿಸಿದರು.
 • ಹೆಣ್ಣು ಮಕ್ಕಳ ಸಮಸ್ಯೆಗಳನ್ನು ಆಲಿಸುತ್ತಿದ್ದ ಟರಾನಾ ಅವರಿಗೆ ಒಂದು ಬಾರಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಾಯಿಯ ಪ್ರಿಯಕರ ನೀಡಿದ ಲೈಂಗಿಕ ದೌರ್ಜನ್ಯದ ವೃತ್ತಾಂತ ಹೇಳಿಕೊಂಡಿದ್ದಳು. ಈ ಸನ್ನಿವೇಶ ಟರಾನಾ ಅವರನ್ನು ಮನ ಕಲಕಿತ್ತು. ಸದ್ಯ ಜನಪ್ರಿಯ ಗೊಂಡಿರುವ Me Too ಅಭಿಯಾನ ಹುಟ್ಟಿಕೊಂಡಿದ್ದು ಅಂದೇ.
 • ಕಷ್ಟ ಹೇಳಿಕೊಳ್ಳಲು ಬಂದ ಹೆಣ್ಣು ಮಕ್ಕಳನ್ನು ಸಂತೈಸಲು ಬಳಸಿದ ಪದ Me Too
 • ಲೈಂಗಿಕ ತೃಷೆಗೆ ನಲುಗಿದ ಆ ಅಪ್ರಾಪ್ತ ಹೆಣ್ಣು ಮಗಳು ತನ್ನ ಸಮಸ್ಯೆ ಹೇಳಿಕೊಳ್ಳುತ್ತಿದ್ದಾಗ ಆಕೆಯನ್ನು ಸಂತೈಸಲು ಟರಾನಾ ಬರ್ಕ್​ ಬಳಿಸಿದ ಪದವೇ Me Too (ನನಗೂ ಹೀಗೆ ಆಗಿದೆ. ನೀನು ಒಂಟಿಯಲ್ಲ ಎಂಬರ್ಥದ ಮಾತು)
 • ಟರಾನಾ ಬರ್ಕ್​ ಅವರು ತಾವು ಹೋದಕಡೆಗಳಲ್ಲೆಲ್ಲ Me Too ಎಂಬ ಪದ ಬಳಸಲಾರಂಭಸಿದರು. ನೀವು ಒಂಟಿಯಲ್ಲ. ಇದು ನನಗೂ ಸಂಭವಿಸಿದ ಸಮಸ್ಯೆ ಎಂದು ಹೇಳಿಕೊಳ್ಳಲಾರಂಭಸಿದರು. ಇದು ಸಂತ್ರಸ್ತರಿಗೆ ಧೈರ್ಯ ತುಂಬುವ ಮಾತಾಗಿತ್ತು.
 • ಕೇವಲ 500 ಟ್ವಿಟರ್​ ಫಾಲೋಯರ್​ಗಳನ್ನು ಹೊಂದಿದ್ದ ಟರಾನಾ ಬರ್ಕ್​ ಅವರು ಸಾಮಾಜಿಕ ಜಾಲತಾಣದಲ್ಲಿ ಈ MeToo ಎಂಬ ಪದವನ್ನು ಪರಿಚಯಿಸಿದರು.
 • ಆದರೆ ಟರಾನಾ ಬರ್ಕ್​ ಅವರ ಸಂದೇಶಕ್ಕೆ ಸಿಗದ ವ್ಯಾಪಕತೆ ನಟಿ ಅಲಿಸ್ಸ ಮಿಲಾನೊ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಉಲ್ಲೇಖ ಮಾಡುವುದರೊಂದಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂತು. 2017ರಲ್ಲಿ ಅಲಿಸ್ಸ ಮಿಲಾನೊ ಮಾಡಿದ ಟ್ವೀಟ್​ನ ನಂತರ Me Too ಜಗತ್ತಿನಾದ್ಯಂತ ಪ್ರಖ್ಯಾತಿ ಪಡೆದುಕೊಂಡಿದೆ.

ಬ್ಲ್ಯಾಕ್‌ ಬಾಕ್ಸ್‌

3.

ಸುದ್ಧಿಯಲ್ಲಿ ಏಕಿದೆ ?ಅಪಘಾತಗಳ ಕಾರಣ ಪತ್ತೆಗೆ ನೆರವಾಗುವ ಧ್ವನಿ ಪೆಟ್ಟಿಗೆ ಅಥವಾ ಬ್ಲ್ಯಾಕ್‌ ಬಾಕ್ಸ್‌ ವ್ಯವಸ್ಥೆಯನ್ನು ರೈಲುಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ರೈಲುಗಳಲ್ಲಿ ಲೋಕೊ ಕ್ಯಾಬ್‌ ವೈಸ್‌ ರೆಕಾರ್ಡಿಂಗ್‌ (ಎಲ್‌ಸಿವಿಆರ್‌) ವ್ಯವಸ್ಥೆ ಅಳವಡಿಸಲಾಗುವುದು

ಬ್ಲಾಕ್ ಬಾಕ್ಸ್ ಅಳವಡಿಸುವುದರ ಪ್ರಯೋಜನಗಳು

 • ಇದರಿಂದ ಅಪಘಾತದ ನಿಖರ ಕಾರಣ ಪತ್ತೆಯಾಗುತ್ತದೆ.
 • ರೈಲು ಸಿಬ್ಬಂದಿಯ ಕಾರ್ಯಕ್ಷಮತೆ ಮೇಲೂ ನಿಗಾ ಇಡಬಹುದಾಗಿದೆ.
 • ಪದೇಪದೆ ದುರಂತಗಳು ಘಟಿಸುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ಆದರೆ ಇದರ ಅಳವಡಿಕೆಗೆ ಸದ್ಯ ಯಾವುದೇ ಕಾಲಮಿತಿ ಇಲ್ಲ. ಆ ಸಾಧನ ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ.

 • ಹಳಿ , ಬೇರಿಂಗ್‌ ಮತ್ತು ಗಾಲಿಗಳಲ್ಲಿ ಇರುವ ಸಮಸ್ಯೆಗಳನ್ನು ಮುಂಚಿತವಾಗಿಯೇ ಪತ್ತೆ ಹಚ್ಚಿ ಅವಘಡ ತಪ್ಪಿಸಲು ನೆರವಾಗುವ ಸ್ಮಾರ್ಟ್‌ ಬೋಗಿಗಳನ್ನು ಕಳೆದ ತಿಂಗಳಷ್ಟೇ ಪರಿಚಯಿಸಿರುವ ಇಲಾಖೆ, ಈಗ ಸುರಕ್ಷತೆಯ ಮತ್ತೊಂದು ಮೈಲಿ ಕ್ರಮಿಸಲು ಮುಂದಾಗಿದೆ.

ಬ್ಲಾಕ್ ಬಾಕ್ಸ್ ಬಗ್ಗೆ ಒಂದಿಷ್ಟು ಮಾಹಿತಿ

 • ವಿಮಾನದಲ್ಲಿ ಬಳಸಿದಂತೆಯೇ ತಂತ್ರಜ್ಞಾನವನ್ನು ರೈಲು ಅಪಘಾತಗಳನ್ನು ತಪ್ಪಿಸಲು ರೈಲ್ವೆಯವರು ಅಳವಡಿಸಿಕೊಳ್ಳುತ್ತಿದ್ದಾರೆ. ವಾಯುಯಾನ ಅಪಘಾತದ ಕಾರಣವನ್ನು ಪತ್ತೆ ಹಚ್ಚುವಲ್ಲಿ ವಿಮಾನದ ಕಪ್ಪು ಪೆಟ್ಟಿಗೆ ಸಹಾಯ ಮಾಡಿದರೆ, ರೈಲುಗಳಲ್ಲಿ ಸಂವೇದಕ ಆಧಾರಿತ ಮಂಡಳಿಯ ಪರಿಸ್ಥಿತಿ ಮೇಲ್ವಿಚಾರಣಾ ವ್ಯವಸ್ಥೆ (OBCMS) ಪ್ರಯಾಣಿಕರ ತರಬೇತುದಾರರಿಗೆ ಸಂಬಂಧಿಸಿದ ದೋಷಗಳನ್ನು ಸಕಾಲಿಕವಾಗಿ ನೈಜ ಸಮಯದ ಆಧಾರದ ಪತ್ತೆಹಚ್ಚಲು ಅನುಕೂಲವಾಗುವಂತೆ ಪ್ರಯಾಣಿಕರಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ.
 • ಕೃತಕ ಬುದ್ಧಿಮತ್ತೆಯನ್ನು ಅವಲಂಬಿಸಿರುವ ಬಾಕ್ಸ್, ಆಂತರಿಕ ತಂತಿಗಳು, ಕೇಬಲ್ಗಳು ಮತ್ತು ಕನೆಕ್ಟರ್ಗಳ ಉಷ್ಣಾಂಶವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ಲೋಕೋ ಪೈಲಟ್ ಅನ್ನು ಎಚ್ಚರಿಸುತ್ತದೆ. ಇದು ನಿರ್ಣಾಯಕ ಘಟಕಗಳನ್ನು ಗಮನದಲ್ಲಿಟ್ಟುಕೊಳ್ಳುತ್ತದೆ.
 • ಆನ್-ಬೋರ್ಡ್ ಸಂವೇದಕಗಳು ನಿರಂತರ ಕಂಪನಗಳನ್ನು ಮತ್ತು ತಾಪಮಾನಗಳನ್ನು ನಿರಂತರವಾಗಿ ರೆಕಾರ್ಡ್ ಮಾಡುತ್ತವೆ ಮತ್ತು ಕಣ್ಮರೆಗೆ ಸಂಬಂಧಿಸಿದ ವೈಪರೀತ್ಯಗಳು ಕಂಡುಬಂದಲ್ಲಿ, ದೋಷಗಳನ್ನು ಪತ್ತೆಹಚ್ಚುವಿಕೆಯನ್ನು ಪತ್ತೆ ಹಚ್ಚಿದರೆ, ಕಣ್ಗಾವಲು ಘಟಕಕ್ಕೆ ಎಚ್ಚರಿಕೆಯನ್ನು ಕಳುಹಿಸುತ್ತದೆ .

ಸೌದಿ ಸಾಂತ್ವನ

4.

ಸುದ್ಧಿಯಲ್ಲಿ ಏಕಿದೆ ?ಇರಾನ್‌ ಮೇಲೆ ಅಮೆರಿಕ ಹಾಕಿರುವ ನಿರ್ಬಂಧದಿಂದ ಭಾರತದ ತೈಲ ಪೂರೈಕೆಗೆ ಆಗಬಹುದಾದ ಕೊರತೆಯನ್ನು ಸೌದಿ ಅರೇಬಿಯಾ ತುಂಬಿಕೊಡಲು ಸಮ್ಮತಿಸಿದೆ. ನವೆಂಬರ್‌ನಲ್ಲಿ ತನ್ನ ತೈಲೋತ್ಪಾದನೆಯನ್ನು ಹೆಚ್ಚಿಸಿ ಭಾರತದ ಬೇಡಿಕೆಯನ್ನು ಪೂರೈಸಲಾಗುವುದು ಎಂದು ಸೌದಿ ಅರೇಬಿಯಾದ ತೈಲ ಸಚಿವ ತಿಳಿಸಿದ್ದಾರೆ.

 • ಪ್ರಧಾನಿ ನರೇಂದ್ರ ಮೋದಿ ಅವರು ಆಯೋಜಿಸಿದ್ದ ಭಾರತೀಯ ಹಾಗೂ ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ವಲಯದ ಕಂಪನಿಗಳ ಸಿಇಒಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಈ ವಿಷಯ ತಿಳಿಸಿದ್ದಾರೆ.
 • ಭಾರತ ತನ್ನ ವ್ಯೂಹಾತ್ಮಕ ಪಾಲುದಾರಿಕೆ ಹೊಂದಿರುವ ಮಿತ್ರ ರಾಷ್ಟ್ರವಾಗಿದ್ದು, ಬೇಡಿಕೆಯನ್ನು ಪೂರೈಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಅವರ ಈ ಹೇಳಿಕೆಯು ತೈಲ ಕೊರತೆಯ ಭೀತಿಯನ್ನು ನಿವಾರಿಸಿದ್ದು, ಮುಂದಿನ ದಿನಗಳಲ್ಲಿ ತೈಲ ದರ ಇಳಿಕೆಯ ಆಶಾವಾದವನ್ನೂ ಮೂಡಿಸಿದೆ.
 • ಸೌದಿಯು ಪ್ರತಿ ದಿನ 20 ಕೋಟಿ ಬ್ಯಾರೆಲ್‌ ತೈಲ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಸದ್ಯ 1.07 ಕೋಟಿ ಬ್ಯಾರೆಲ್‌ನಷ್ಟು ಉತ್ಪಾದಿಸುತ್ತಿದೆ. ನವೆಂಬರ್‌ನಿಂದ ಇದನ್ನು ಹೆಚ್ಚಿಸಲಾಗುವುದು.
 • ಸೌದಿ ಅರೇಬಿಯಾ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಭಾರಿ ಮೊತ್ತದ ಬಂಡವಾಳ ಹೂಡಿಕೆ ಮಾಡಿದೆ. ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯ ಸಲುವಾಗಿ ಸೌದಿ ಬದ್ಧವಾಗಿದೆ ಎಂದು ವಿವರಿಸಿದರು.
 • ಸಾರ್ವಜನಿಕ ತೈಲ ಕಂಪನಿ ಸೌದಿ ಅರಾಮ್ಕೊ, ನವೆಂಬರ್‌ನಲ್ಲಿ ಭಾರತದ ಗ್ರಾಹಕರಿಗೆ ಹೆಚ್ಚುವರಿ 40 ಲಕ್ಷ ಬ್ಯಾರೆಲ್‌ ತೈಲ ಪೂರೈಸಲು ನಿರ್ಧರಿಸಿದೆ.

ಪರ್ಯಾಯ ಕ್ರಮ

 • ಅಮೆರಿಕ ಇರಾನ್ ಮೇಲೆ ಹೇರಿರುವ ನಿರ್ಬಂಧ ಜಾರಿ ಬಳಿಕ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಭಾರತ ಪರ್ಯಾಯ ಕ್ರಮಗಳತ್ತಲೂ ಗಮನ ಹರಿಸಿದೆ. ಇದರ ಭಾಗವಾಗಿ, ಸೌದಿ ಅರೇಬಿಯಾದಿಂದ ಹೆಚ್ಚುವರಿ ಕಚ್ಚಾತೈಲವನ್ನು ತರಿಸಿಕೊಳ್ಳಲು ನಿರ್ಧರಿಸಿದ್ದು, ನವೆಂಬರ್ ತಿಂಗಳಲ್ಲಿ ಹೆಚ್ಚುವರಿ 4 ದಶಲಕ್ಷ ಬ್ಯಾರೆಲ್ ತೈಲವನ್ನು ಸೌದಿ ಅರೇಬಿಯಾ ಪೂರೈಕೆ ಮಾಡಲಿದೆ. ಚೀನಾದ ನಂತರ ಭಾರತ ವಿಶ್ವದ ಅತಿ ಹೆಚ್ಚು ಇಂಧನ ಬೇಡಿಕೆ ಹೊಂದಿರುವ ರಾಷ್ಟ್ರವಾಗಿದೆ. ಅಲ್ಲದೆ, ಇರಾನ್​ನಿಂದ ಅತಿ ಹೆಚ್ಚು ತೈಲ ಖರೀದಿಸುವ 2ನೇ ರಾಷ್ಟ್ರ ಭಾರತವಾಗಿದೆ.

ಆರ್ಥಿಕತೆ ಮೇಲೆ ಪರಿಣಾಮ

 • ಕಚ್ಚಾ ತೈಲ ದರ ಏರಿಕೆಯಿಂದ ಜಾಗತಿಕ ಆರ್ಥಿಕತೆಗೆ ಧಕ್ಕೆಯಾಗುತ್ತಿದ್ದು, ತೈಲೋತ್ಪಾದಕ ರಾಷ್ಟ್ರಗಳು ಕೂಡಲೇ ತೈಲ ದರವನ್ನು ತಾರ್ಕಿಕ ಮಟ್ಟಕ್ಕೆ ಇಳಿಸಬೇಕು ಎಂದು ಪ್ರಧಾನಿ ಸಭೆಯಲ್ಲಿ ಒತ್ತಾಯಿಸಿದರು. ಸ್ಥಳೀಯ ಕರೆನ್ಸಿಗಳು ಡಾಲರ್‌ ಎದುರು ಕುಸಿಯುತ್ತಿರುವುದರಿಂದ ಹಣ ಪಾವತಿಗೆ ಡಾಲರ್‌ ಹೊರತಾದ ಅನ್ಯ ದಾರಿಗಳನ್ನು ಕಂಡುಕೊಳ್ಳಬೇಕು.
 • ಜಾಗತಿಕ ಆರ್ಥಿಕತೆಯ ಸ್ಥಿರತೆಯ ದೃಷ್ಟಿಯಿಂದ ತೈಲೋತ್ಪಾದಕರು ಮತ್ತು ಗ್ರಾಹಕರ ನಡುವೆ ಪಾಲುದಾರಿಕೆ ಹೆಚ್ಚಬೇಕು.
 • ತೈಲೋತ್ಪಾದಕ ರಾಷ್ಟ್ರಗಳು ತಮ್ಮ ಹೆಚ್ಚುವರಿ ಹೂಡಿಕೆಯನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ತೈಲ ವಲಯದಲ್ಲಿ ಹೊಸ ಹೂಡಿಕೆ ಮಾಡಬೇಕು.

ತೈಲೋತ್ಪಾದನೆ ಎಷ್ಟು?

 • ಸೌದಿ ಅರೇಬಿಯಾ ಪ್ರತಿ ದಿನ ಸರಾಸರಿ 01 ಕೋಟಿ ಬ್ಯಾರೆಲ್‌ ತೈಲೋತ್ಪಾದನೆ ಮಾಡುತ್ತಿದೆ. ಅಮೆರಿಕ 1.06 ಕೋಟಿ ಬ್ಯಾರೆಲ್‌ ಉತ್ಪಾದಿಸುತ್ತಿದ್ದು, ತುಸು ಮುಂದಿದೆ. ಹೀಗಿದ್ದರೂ, ಸೌದಿ ಅರೇಬಿಯಾ ದಿನಕ್ಕೆ ಸರಾಸರಿ 70 ಲಕ್ಷ ಬ್ಯಾರೆಲ್‌ ತೈಲ ರಫ್ತು ಮಾಡುತ್ತಿದ್ದರೆ, ಅಮೆರಿಕ 18 ಲಕ್ಷ ಬ್ಯಾರೆಲ್‌ ಮಾಡುತ್ತಿದೆ. ಅಮೆರಿಕ ಉತ್ಪಾದಿಸುವ ಬಹುಪಾಲು ತೈಲ ಅದರ ಬಳಕೆಗೇ ಬೇಕಾಗುತ್ತದೆ.

ಅಮೆರಿಕ ನಿಲುವು

# ಇರಾನ್ ಪರಮಾಣು ಕಾರ್ಯಕ್ರಮಗಳನ್ನು ಕೈಗೊಂಡಿದೆ ಮತ್ತು ಭಯೋತ್ಪಾದನೆಯನ್ನು ಸಮರ್ಥಿಸುತ್ತಿದೆ.

# ಇರಾನ್​ಗೆ ಪಾಠ ಕಲಿಸಲು ಅದನ್ನು ಅಂತಾರಾಷ್ಟ್ರೀಯ ರಂಗದಲ್ಲಿ ಏಕಾಂಗಿಯಾಗಿಸಬೇಕು.

ರಾಜತಾಂತ್ರಿಕ ಸಮರ

 • ಅಮೆರಿಕ ಇರಾನ್ ವಿರುದ್ಧ ದೊಡ್ಡ ಕೂಟವನ್ನೇ ಕಟ್ಟುತ್ತಿದ್ದರೆ, ಮತ್ತೊಂದೆಡೆ ಅಮೆರಿಕದ ಈ ಕ್ರಮದ ವಿರುದ್ಧವೂ ಅಸಮಾಧಾನ ಹೊಂದಿರುವ ರಾಷ್ಟ್ರಗಳು ಒಟ್ಟಾಗುತ್ತಿವೆ. ಹೀಗಾಗಿ, ಈ ಬೆಳವಣಿಗೆ ಕೇವಲ ಅಮೆರಿಕ-ಇರಾನ್ ಬಿಕ್ಕಟ್ಟು ಆಗಿ ಉಳಿಯದೆ ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಮರಕ್ಕೂ ಕಾರಣವಾಗುತ್ತಿದೆ.

ಭಾರತದ ದಿಟ್ಟಹೆಜ್ಜೆ

 • ರಷ್ಯಾ ಜತೆಗಿನ ರಕ್ಷಣಾ ಒಪ್ಪಂದದ ವೇಳೆಯೂ ಭಾರತದ ಮೇಲೆ ಅಮೆರಿಕ ತೀವ್ರ ಒತ್ತಡ ತಂತ್ರ ಹೇರಿತ್ತಲ್ಲದೆ, ನಿರ್ಬಂಧದ ಬೆದರಿಕೆಯನ್ನು ಒಡ್ಡಿತ್ತು. ಆದರೆ, ತನ್ನ ರಕ್ಷಣಾ ಹಿತಾಸಕ್ತಿಯನ್ನು ಪ್ರಮುಖವಾಗಿ ಪರಿಗಣಿಸಿದ ಭಾರತ ರಷ್ಯಾದೊಂದಿಗೆ ಟ್ರಯಂಫ್ ಒಪ್ಪಂದಕ್ಕೆ ಅಂಕಿತ ಹಾಕಿತು.
 • ಅಬ್ಬರಿಸುತ್ತಿದ್ದ ಅಮೆರಿಕ ಮೆತ್ತಗಾಯಿತು. ‘ನಮ್ಮ ಸ್ನೇಹಿತ ಭಾರತಕ್ಕೆ ತೈಲ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುತ್ತೇವೆ’ ಎಂದು ಹೇಳಿರುವ ಅಮೆರಿಕ ಮುಖ್ಯವಾಗಿ, ಇರಾನ್ ಜತೆಗಿನ ವಹಿವಾಟನ್ನು ಕೊನೆಗಾಣಿಸಲು ತುದಿಗಾಲಿನಲ್ಲಿ ನಿಂತಿದೆ. ಆದರೆ, ಭಾರತ-ಇರಾನ್ ನಡುವಿನ ವಾಣಿಜ್ಯ ವಹಿವಾಟುಗಳು ಇಂದು ನಿನ್ನೆಯದೇನಲ್ಲ. ಅಲ್ಲದೆ, ಇರಾನ್ ಕಷ್ಟದ ಪರಿಸ್ಥಿತಿಯಲ್ಲೂ ಭಾರತಕ್ಕೆ ತೈಲ ಪೂರೈಕೆಯನ್ನು ಸ್ಥಗಿತಗೊಳಿಸಿರಲಿಲ್ಲ. ಹೀಗಾಗಿ, ‘ನವೆಂಬರ್ 4ರ ನಂತರವೂ ಇರಾನ್​ನಿಂದ ತೈಲ ಖರೀದಿ ಮುಂದುವರಿಯುತ್ತದೆ, ಇದಕ್ಕಾಗಿ ಸರ್ಕಾರಿ ಸ್ವಾಮ್ಯದ ಎರಡು ಕಂಪನಿಗಳನ್ನು ನಿಯೋಜಿಸಲಾಗಿದೆ’
 • ಮೂಲಗಳ ಪ್ರಕಾರ, ಇಂಡಿಯನ್ ಆಯಿಲ್ ಕಾಪೋರೇಷನ್(ಐಒಸಿ) ಮತ್ತು ಮಂಗಳೂರು ರಿಫೈನರಿ ಆಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್(ಎಂಆರ್​ಪಿಎಲ್) ನವೆಂಬರ್ ತಿಂಗಳಲ್ಲಿ ಇರಾನ್​ನಿಂದ 25 ದಶಲಕ್ಷ ಟನ್ ತೈಲ ಖರೀದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿವೆ.
 • 2018-19ರ ಆರ್ಥಿಕ ವರ್ಷದಲ್ಲಿ ಒಟ್ಟು 9 ದಶಲಕ್ಷ ಟನ್ ತೈಲ ಆಮದು ಮಾಡಿಕೊಳ್ಳುವ ಯೋಜನೆ ಇದೆ.

ಭಾರತ-ಇರಾನ್ ಸಂಬಂಧ

# ವ್ಯಾಪಾರ ಹಾಗೂ ರಾಜತಾಂತ್ರಿಕ ಕ್ಷೇತ್ರಗಳಲ್ಲಿ ಉತ್ತಮ ಬಾಂಧವ್ಯ ಹೊಂದಿವೆ.

# ಇಂಧನ ಪೂರೈಕೆ ನಿಟ್ಟಿನಲ್ಲಿ ಭಾರತ ಈಗಾಗಲೇ ಇರಾನ್​ನೊಂದಿಗೆ ಗರಿಷ್ಠ ಸಂಬಂಧ ಹೊಂದಿದೆ. ಭಾರತ ಕಚ್ಚಾತೈಲ, ಗ್ಯಾಸ್, ಪೆಟ್ರೋಕೆಮಿಕಲ್ ಹಾಗೂ ರಸಗೊಬ್ಬರ ಕ್ಷೇತ್ರಗಳಲ್ಲಿ 20 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ.

# ಇರಾನ್ ಭಾರತದಿಂದ ಬಾಸ್ಮತಿ ಅಕ್ಕಿ, ಸೋಯಾಮಿಲ್, ಸಕ್ಕರೆ, ಬಾರ್ಲಿ, ಮಾಂಸವನ್ನು ಖರೀದಿಸುತ್ತದೆ.

# ಭಾರತ ಇರಾನ್​ನಿಂದ ಪ್ರತಿನಿತ್ಯ 3.50 ಲಕ್ಷ ಬ್ಯಾರಲ್ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ.

# 2016-17ರಲ್ಲಿ ಈ ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ವಹಿವಾಟು 15.26 ಶತಕೋಟಿ ಡಾಲರ್.

ಮೋದಿ-ಕ್ಸಿ ಜಿನ್​ಪಿಂಗ್ ಮಾತುಕತೆ

5.

ಸುದ್ಧಿಯಲ್ಲಿ ಏಕಿದೆ ?ಅರ್ಜೆಂಟಿನಾದಲ್ಲಿ ನವೆಂಬರ್​ನಲ್ಲಿ ನಡೆಯಲಿರುವ ಜಿ-20 ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

 • ಭಯೋತ್ಪಾದನೆ ನಿಗ್ರಹ ಹಾಗೂ ಅಫ್ಘಾನಿಸ್ತಾನದಲ್ಲಿ ಶಾಂತಿ ಮರುಸ್ಥಾಪನೆ ವಿಚಾರವಾಗಿ ಚರ್ಚೆ ನಡೆಯಲಿದೆ ಎಂದು ಭಾರತದಲ್ಲಿನ ಚೀನಾ ರಾಯಭಾರಿ ಲುವೋ ಜಾಹುಯಿ ತಿಳಿಸಿದ್ದಾರೆ.
 • ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಶಾಂಘೈ ಸಹಕಾರ ಒಕ್ಕೂಟದಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡುವ ಒಪ್ಪಂದಕ್ಕೂ ಸಹಿ ಬೀಳುವ ಸಾಧ್ಯತೆಯಿದೆ.
 • ಚೀನಾ-ಪಾಕಿಸ್ತಾನ-ಅಫ್ಘಾನಿಸ್ತಾನ ಕಾರಿಡಾರ್ ಯೋಜನೆಗೆ ಭಾರತದ ನೆರವು ಪಡೆಯುವುದು ಚೀನಾದ ಪ್ರಮುಖ ಅಜೆಂಡಾ ಆಗಿದೆ. ಎನ್​ಎಸ್​ಜಿಗೆ ಸದಸ್ಯತ್ವ ಹಾಗೂ ಪಾಕಿಸ್ತಾನದ ಉಗ್ರ ನಿಗ್ರಹ ವಿಚಾರ ಭಾರತದ ಅಜೆಂಡಾದಲ್ಲಿದೆ.

ಜಿ 20 ಗುಂಪು

 • ಜಿ 20 (ಅಥವಾ ಟ್ವೆಂಟಿ ಗುಂಪು) ಸರ್ಕಾರಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ಗಳಿಗೆ ಅಂತಾರಾಷ್ಟ್ರೀಯ ವೇದಿಕೆಯಾಗಿದೆ.
 • ಅರ್ಜಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಯುರೋಪಿಯನ್ ಯೂನಿಯನ್, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್.
 • 1999 ರಲ್ಲಿ ಸ್ಥಾಪಿತವಾದ ಜಿ 20 ಅಂತರರಾಷ್ಟ್ರೀಯ ಆರ್ಥಿಕ ಸ್ಥಿರತೆಯ ಉತ್ತೇಜನಕ್ಕೆ ಸಂಬಂಧಿಸಿದ ನೀತಿಯನ್ನು ಚರ್ಚಿಸಲು ಗುರಿಯನ್ನು ಹೊಂದಿದೆ. ಯಾವುದೇ ಸಂಸ್ಥೆಗಳ ಜವಾಬ್ದಾರಿಗಳನ್ನು ಮೀರಿರುವ ಸಮಸ್ಯೆಗಳನ್ನು ಪರಿಹರಿಸಲು ಇದು ಪ್ರಯತ್ನಿಸುತ್ತದೆ. G20 ಸರ್ಕಾರಗಳು ಅಥವಾ ರಾಷ್ಟ್ರದ ಮುಖ್ಯಸ್ಥರು ನಿಯತಕಾಲಿಕವಾಗಿ 2008 ರಲ್ಲಿ ತಮ್ಮ ಆರಂಭಿಕ ಸಭೆಯ ನಂತರ ಶೃಂಗಗಳಲ್ಲಿ ಪ್ರದಾನ ಮಾಡಿದ್ದಾರೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಅದರ ಕಾರ್ಯಸೂಚಿಯ ವಿಸ್ತರಣೆಯ ಕಾರಣದಿಂದಾಗಿ ಹಣಕಾಸು ಮಂತ್ರಿಗಳು ಮತ್ತು ವಿದೇಶಾಂಗ ಮಂತ್ರಿಗಳ ಪ್ರತ್ಯೇಕ ಸಭೆಗಳನ್ನು ಗುಂಪು ಆಯೋಜಿಸುತ್ತದೆ.
 • ಜಿ 20 ಸದಸ್ಯತ್ವವು 19 ವೈಯಕ್ತಿಕ ದೇಶಗಳು ಮತ್ತು ಯುರೋಪಿಯನ್ ಯೂನಿಯನ್ (ಇಯು) ಅನ್ನು ಒಳಗೊಂಡಿದೆ. ಯುರೋಪಿಯನ್ ಕಮಿಷನ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಇಯು ಪ್ರತಿನಿಧಿಸುತ್ತದೆ. ಒಟ್ಟಾರೆಯಾಗಿ, ಜಿ 20 ಆರ್ಥಿಕತೆಗಳು ಒಟ್ಟಾರೆ ಜಾಗತಿಕ ಉತ್ಪನ್ನದ 85% ರಷ್ಟು (GWP), ವಿಶ್ವ ವ್ಯಾಪಾರದ 80% (ಅಥವಾ, ಇ-ಇಂಟ್-ಟ್ರೇಡ್, 75% ಹೊರತುಪಡಿಸಿ), ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು, ಮತ್ತು ಸರಿಸುಮಾರು ಅರ್ಧದಷ್ಟು ವಿಶ್ವದ ಭೂಪ್ರದೇಶ.
 • ಜಿ 20 ತನ್ನ ಉದ್ಘಾಟನಾ ನಾಯಕರ 2008 ರ ಶೃಂಗಸಭೆಯ ನಂತರ ಬೆಳವಣಿಗೆ ಹೊಂದಿದ ನಂತರ, ಇದರ ನಾಯಕರು ಶ್ರೀಮಂತ ರಾಷ್ಟ್ರಗಳ ಪ್ರಮುಖ ಆರ್ಥಿಕ ಮಂಡಳಿಯಾಗಿ ಜಿ 8 ಅನ್ನು ಬದಲಿಸುತ್ತಾರೆ ಎಂದು 25 ಸೆಪ್ಟೆಂಬರ್ 2009 ರಂದು ಘೋಷಿಸಿದರು. ಇದರ ಆರಂಭದಿಂದಲೂ, ಜಿ 20 ರ ಸದಸ್ಯತ್ವ ನೀತಿಗಳು ಟೀಕಿಸಲ್ಪಟ್ಟಿವೆ ಹಲವಾರು ಬುದ್ಧಿಜೀವಿಗಳು, ಮತ್ತು ಅದರ ಶೃಂಗಗಳು ಎಡಪಂಥೀಯ ಗುಂಪುಗಳು ಮತ್ತು ಅರಾಜಕತಾವಾದಿಗಳಿಂದ ಪ್ರಮುಖ ಪ್ರತಿಭಟನೆಗೆ ಒಂದು ಗಮನವನ್ನು ಹೊಂದಿವೆ.
 • ಜಿ 20 ರಾಷ್ಟ್ರಗಳ ಮುಖ್ಯಸ್ಥರು 2009 ಮತ್ತು 2010 ರ ನಡುವೆ ಜಿ 20 ಶೃಂಗಗಳಲ್ಲಿ ಅರೆ ವಾರ್ಷಿಕವಾಗಿ ಭೇಟಿ ನೀಡುತ್ತಾರೆ. ನವೆಂಬರ್ 2011 ಕ್ಯಾನೆಸ್ ಶಿಖರದಿಂದ, ಎಲ್ಲಾ ಜಿ 20 ಶೃಂಗಗಳನ್ನು ವಾರ್ಷಿಕವಾಗಿ ನಡೆಸಲಾಗುತ್ತದೆ

ವಿಶ್ವಂಸ್ಥೆಯ ಮಾನವ ಹಕ್ಕುಗಳ ಮಂಡಳಿ

6.

ಸುದ್ಧಿಯಲ್ಲಿ ಏಕಿದೆ ? ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ನಡೆದ ಚುನಾವಣೆಯಲ್ಲಿ ಭಾರತವು ಅತಿಹೆಚ್ಚು ಮತ ಪಡೆಯುವ ಮೂಲಕ ಸದಸ್ಯತ್ವ ಪಡೆದಿದೆ.

 • 193 ಸದಸ್ಯರ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಸಿದ ಚುನಾವಣೆಯಲ್ಲಿ 18 ಹೊಸ ಸದಸ್ಯ ದೇಶಗಳು ಆಯ್ಕೆಯಾಗಿದ್ದು, ಈ ಪೈಕಿ ಭಾರತ ಅತಿ ಹೆಚ್ಚು (188) ಮತ ಗಳಿಸಿ ಸ್ಥಾನ ಗಿಟ್ಟಿಸಿದೆ. ಯಾವುದೇ ದೇಶ ಆಯ್ಕೆಯಾಗಲು ಕನಿಷ್ಠ 97 ಮತಗಳನ್ನು ಪಡೆಯಬೇಕಾಗಿತ್ತು.
 • ಭಾರತವು ಏಷ್ಯಾ-ಫೆಸಿಫಿಕ್​ ವಿಭಾಗದಲ್ಲಿ ಸ್ಪರ್ಧಿಸಿತ್ತು.
 • ಭಾರತದೊಂದಿಗೆ ಏಷ್ಯ ಫೆಸಿಫಿಕ್​ ವಿಭಾಗದಲ್ಲಿ ಫಿಜಿ (187 ಮತ), ಬಾಂಗ್ಲಾದೇಶ (178 ಮತ), ಬಹ್ರೇನ್​ (165 ಮತ) ಮತ್ತು ಫಿಲಿಫಿನ್ಸ್​ (165 ಮತ) ಪಡೆದು ಆಯ್ಕೆಯಾಗಿದೆ. ಸದಸ್ಯತ್ವ 3 ವರ್ಷಗಳ ಅವಧಿಗೆ ಇರಲಿದ್ದು, 2019ರ ಜನವರಿ ಒಂದರಿಂದ ಅವಧಿ ಆರಂಭವಾಗಲಿದೆ.
 • ಉಳಿದಂತೆ ಆಫ್ರಿಕಾ ರಾಷ್ಟ್ರಗಳ ವಿಭಾಗದಲ್ಲಿ ಬುರ್ಕಿನಾ ಫಾಸೊ, ಕ್ಯಾಮರೂನ್, ಎರಿಟ್ರಿಯಾ, ಸೊಮಾಲಿಯಾ, ಟೋಗೋ, ಪೂರ್ವ ಯೂರೋಪ್​ ರಾಷ್ಟ್ರಗಳ ವಿಭಾಗದಲ್ಲಿ ಬಲ್ಗೇರಿಯಾ, ಜೆಕ್​ ರಿಪಬ್ಲಿಕ್​, ಲ್ಯಾಟಿನ್​ ಅಮೆರಿಕ ಮತ್ತು ಕೆರಿಬಿಯನ್​ ರಾಷ್ಟ್ರಗಳ ವಿಭಾಗದಲ್ಲಿ ಅರ್ಜೆಂಟೀನಾ, ಬಹಾಮಾಸ್​ ಮತ್ತು ಉರುಗ್ವೆ, ಪಶ್ಚಿಮ ಯೂರೋಪ್​ ರಾಷ್ಟ್ರಗಳ ವಿಭಾಗದಲ್ಲಿ ಆಸ್ಟ್ರಿಯಾ, ಡೆನ್ಮಾರ್ಕ್​ ಮತ್ತು ಇಟಲಿ ಆಯ್ಕೆಯಾಗಿವೆ.
 • ವಿಶ್ವಸಂಸ್ಥೆ ಕಾಯಂ ಸದಸ್ಯತ್ವದ ಮೇಲೆ ಕಣ್ಣಿಟ್ಟಿರುವ ಭಾರತವು ಈ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆಯುವ ಮೂಲಕ ವಿಶ್ವಸಂಸ್ಥೆಯಲ್ಲಿ ತನ್ನ ಪ್ರಾಬಲ್ಯ ಪ್ರದರ್ಶಿಸಿದೆ. ಈ ಚುನಾವಣೆಯಲ್ಲಿನ ಜಯವು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿದೇಶಾಂಗ ನೀತಿಗೆ ಸಿಕ್ಕ ಗೆಲುವು ಎನ್ನಲಾಗುತ್ತಿದೆ

ಯುನೈಟೆಡ್ ನೇಷನ್ಸ್ ಹ್ಯೂಮನ್ ರೈಟ್ಸ್ ಕೌನ್ಸಿಲ್ (ಯುಎನ್ಹೆಚ್ಆರ್ಸಿ)

 • ಯುನೈಟೆಡ್ ನೇಷನ್ಸ್ ಹ್ಯೂಮನ್ ರೈಟ್ಸ್ ಕೌನ್ಸಿಲ್ (ಯುಎನ್ಹೆಚ್ಆರ್ಸಿ) ಯು ವಿಶ್ವಸಂಸ್ಥೆಯ ಅಂಗವಾಗಿದ್ದು, ವಿಶ್ವದಾದ್ಯಂತ ಮಾನವ ಹಕ್ಕುಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಉದ್ದೇಶವಾಗಿದೆ. ಯುಎನ್ಹೆಚ್ಆರ್ಸಿ 47 ಸದಸ್ಯರನ್ನು ಪ್ರಾದೇಶಿಕ ಗುಂಪಿನ ಆಧಾರದ ಮೇಲೆ ಮೂರು ವರ್ಷಗಳ ಅವಧಿಗೆ ಚುನಾಯಿಸಿದೆ. ಯುಎನ್ಹೆಚ್ಆರ್ಸಿ ಕೇಂದ್ರ ಕಾರ್ಯಾಲಯವು ಜಿನೀವಾ, ಸ್ವಿಜರ್ಲ್ಯಾಂಡ್ನಲ್ಲಿದೆ.
 • UNHRC ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಗಳ ಆರೋಪಗಳನ್ನು ತನಿಖೆ ಮಾಡುತ್ತದೆ ಮತ್ತು ಸಂಘಟನೆ ಮತ್ತು ಸಭೆ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ನಂಬಿಕೆ ಮತ್ತು ಧರ್ಮದ ಸ್ವಾತಂತ್ರ್ಯ, ಮಹಿಳಾ ಹಕ್ಕುಗಳು, ಎಲ್ಜಿಬಿಟಿ ಹಕ್ಕುಗಳು ಮತ್ತು ಜನಾಂಗೀಯ ಹಕ್ಕುಗಳಂತಹ ವಿಷಯಾಧಾರಿತ ಮಾನವ ಹಕ್ಕುಗಳ ಸಮಸ್ಯೆಗಳನ್ನು ಪರಿಹರಿಸುತ್ತದೆ.
 • ಯುಎನ್ ಜನರಲ್ ಅಸೆಂಬ್ಲಿಯಿಂದ ಮಾನವ ಹಕ್ಕುಗಳ ಯುಎನ್ ಆಯೋಗವನ್ನು (ಯುಎನ್ಎಚ್ಸಿಆರ್, ಸಿಎಚ್ಆರ್) ಬದಲಿಸಲು ಯುಎನ್ಹೆಚ್ಆರ್ಸಿ ಸ್ಥಾಪನೆಯಾಯಿತು. ಇದು ಕಳಪೆ ಮಾನವ ಹಕ್ಕುಗಳ ದಾಖಲೆಗಳನ್ನು ಹೊಂದಿರುವ ಸದಸ್ಯರಿಗೆ ಸದಸ್ಯರಾಗಿರಲು ಬಲವಾಗಿ ಟೀಕಿಸಲ್ಪಟ್ಟಿದೆ.
Related Posts
Not many takers in state for free LPG connections for poor
Why in News: The Centre’s flagship scheme to distribute free liquefied petroleum gas (LPG) connections to the Below Poverty Line (BPL) families, has received a lacklustre response in the state. In the ...
READ MORE
2010-11ನೇ ಸಾಲಿನಿಂದ ಕೇಂದ್ರ ಸರ್ಕಾರದ ಯೋಜನೆ ಇಂದಿರಾಗಾಂದಿ ಮಾತೃತ್ವ ಸಹಯೋಗ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದಲ್ಲಿ  2 ಜಿಲ್ಲೆಗಳಾದ ಕೋಲಾರ ಹಾಗೂ ಧಾರವಾಡದಲ್ಲಿ  ಜಾರಿಗೊಳಿಸಲಾಗುತ್ತಿದೆ. ಇದರಡಿ ಗಬಿಣಿಯರಿಗೆ ಹಾಗೂ ಹಾಲುಣಿಸುವ ಮಹಿಳೆಯರಿಗೆ ,ಪೌಷ್ಠಿಕತೆ ಕುರಿತು ಶಿಕ್ಷಣ, ಆರೋಗ್ಯ ಸಲಹೆ  ಪದ್ಧತಿಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು. ...
READ MORE
National Current Affairs – UPSC/KAS Exams- 19th September 2018
UN Report: A child under 15 dies every 5 seconds around the world Why in news? According to the new mortality estimates released by UNICEF, the World Health Organization (WHO), the United ...
READ MORE
National Current Affairs – UPSC/KAS Exams- 10th November 2018
Government approves mechanism for sale of enemy shares Topic: Governance IN NEWS:The Union Cabinet has approved a mechanism for sale of enemy shares which at the current price is estimated at around Rs ...
READ MORE
ಡೆಡ್ಲಿ ವೈರಾಣು ನಿಫಾ! ಸುದ್ದಿಯಲ್ಲಿ ಏಕಿದೆ?  ಮಾರಣಾಂತಿಕ ನಿಫಾ ವೈರಾಣು ರೋಗ ನಿಯಂತ್ರಣಕ್ಕೆ ಕೇಂದ್ರ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ನಿಯೋಗವನ್ನು ಕೇರಳಕ್ಕೆ ಕಳುಹಿಸಲಾಗಿದೆ. ಕೇರಳಕ್ಕೆ ನಿಫಾ ವೈರಸ್ ಪ್ರವೇಶಿಸಿ ರುವುದು ಹಾಗೂ ಇತರ ವಿವರಗಳಿಗೆ ಸಂಬಂಧಿಸಿ ರಾಷ್ಟ್ರೀಯ ರೋಗ ನಿರೋಧಕ ಕೇಂದ್ರದ ನಿರ್ದೇಶಕರ ...
READ MORE
ಯಾರು ಅಂಗವಿಕಲರು? ದೇಹದ ಯಾವುದಾದರೂ ಒಂದು ಅಥವಾ ಹೆಚ್ಚು ಅಂಗ ಶೇ.40ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಊನವಾಗಿರುವ ದೈಹಿಕ ಅಂಗವಿಕಲರು, ದೃಷ್ಟಿದೋಷ, ಶ್ರವಣದೋಷ, ಬುದ್ಧಿಮಾಂದ್ಯರು, ಮಾನಸಿಕ ಅಸ್ವಸ್ಥರು ಇವರನ್ನು ಅಂಗವಿಕಲರೆಂದು ಪರಿಗಣಿಸಲಾಗುತ್ತದೆ. ಅಂಗವೈಕಲ್ಯ ನಿವಾರಣೆ ಶಸ್ತ್ರಚಿಕಿತ್ಸೆಗೆ ಲಕ್ಷ ರೂ.ವರೆಗೆ ವೈದ್ಯಕೀಯ ಪರಿಹಾರ ನಿಧಿ ಈ ಯೋಜನೆಯಲ್ಲಿ ಅಂಗವೈಕಲ್ಯದ ...
READ MORE
Karnataka: Vijayapura wins best district hospital award
The Vijayapura district hospital has emerged the best district hospital in Karnataka and won a cash prize of Rs 50 lakh for the second straight year under the Health Department’s ...
READ MORE
National Current Affairs – UPSC/KAS Exams – 6th July 2018
Higher Education Financing Agency (HEFA) Context: The Cabinet Committee on Economic Affairs chaired by Prime Minister Shri Narendra Modi has approved the proposal for expanding the scope of Higher Education Financing ...
READ MORE
Sustainable Development Goals (SDGs)
The Sustainable Development Goals (SDGs) are officially known as Transforming our world: the 2030 Agenda for Sustainable Development They are an intergovernmental set of aspiration Goals with 169 targets. The Goals are contained in ...
READ MORE
Karnataka Current Affairs – KAS/KPSC Exams- 10th January 2019
Kolar leaf-nosed bat habitat a conservation reserve Rediscovered four years ago in the caves of Hanumanahalli Betta in Mulbagal taluk of Kolar district, the endangered Hipposiderid bats, also known as Kolar ...
READ MORE
Not many takers in state for free LPG connections
ಇಂದಿರಾಗಾಂದಿ ಮಾತೃತ್ವ ಸಹಯೋಗ ಯೋಜನೆ
National Current Affairs – UPSC/KAS Exams- 19th September
National Current Affairs – UPSC/KAS Exams- 10th November
“22nd ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
ವಿಕಲಾಂಗರ ನೆರವಿಗೆ ಹಲವು ಯೋಜನೆ
Karnataka: Vijayapura wins best district hospital award
National Current Affairs – UPSC/KAS Exams – 6th
Sustainable Development Goals (SDGs)
Karnataka Current Affairs – KAS/KPSC Exams- 10th January

Leave a Reply

Your email address will not be published. Required fields are marked *