“17th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನಗಳು “

ಹೊಸ ಲೋಗೋ

1.

ಸುದ್ಧಿಯಲ್ಲಿ ಏಕಿದೆ ?2019ರ ಫೆಬ್ರವರಿಯಲ್ಲಿ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2019ಗೆ ಹೊಸ ಲೋಗೋ ಬಿಡುಗಡೆಯಾಗಿದೆ.

 • ರಾಷ್ಟ್ರ ಧ್ವಜದ ಮೂರು ಬಣ್ಣಗಳು, ಅಶೋಕ ಚಕ್ರವೂ ಇರುವ ಹೊಸ ಲೋಗೋವನ್ನು ಕ್ಷಣಾ ಇಲಾಖೆ ಅನಾವರಣಗೊಳಿಸಿದ್ದ, ದಿ ರನ್‌ ವೇ ಟು ಎ ಬಿಲಿಯನ್‌ ಒಪೊರ್ವುನಿಟೀಸ್‌ ಎಂಬ ಟ್ಯಾಗ್‌ಲೈನ್‌ ನೀಡಲಾಗಿದೆ.
 • ಕಳೆದ 11 ಆವೃತ್ತಿಯಲ್ಲಿನ ಲೋಗೋವನ್ನು ಬದಲಾಯಿಸಲಾಗಿದೆ. ಕೇಸರಿ ಬಿಳಿ ಹಸಿರು ನಡುವೆ ಅಶೋಕ ಚಕ್ರವನ್ನು ಅಳವಡಿಸಲಾಗಿದೆ.
 • ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌ನ ವಿನ್ಯಾಸ ವನ್ನು ಮಧ್ಯದಲ್ಲಿ ಅಳವಡಿಸಿ ಅದರ ಮಧ್ಯ ಅಶೋಕ ಚಕ್ರ ವಿನ್ಯಾಸಗೊಳಿಸಲಾಗಿದೆ.
 • ಫೆ. 20ರಿಂದ 24ರ ವರೆಗೆ ಯಲಹಂಕದ ವಾಯುನೆಲೆಯಲ್ಲಿ 12ನೇ ಆವೃತ್ತಿಯ ಏರೋ ಇಂಡಿಯಾ ನಡೆಯಲಿದೆ.

ಎರೋ ಇಂಡಿಯಾ ಪ್ರದರ್ಶನದ ಬಗ್ಗೆ

 • ಏರೋ ಇಂಡಿಯಾ ಷೋ ಬೆಂಗಳೂರಿನಲ್ಲಿಯೆಲಹಂಕ ಏರ್ ಫೋರ್ಸ್ ಸ್ಟೇಷನ್ನಲ್ಲಿ ನಡೆಯುವ ದ್ವೈವಾರ್ಷಿಕ ಏರ್ ಶೋ ಮತ್ತು ವಿಮಾನಯಾನ ಪ್ರದರ್ಶನವಾಗಿದೆ. ಈ ಪ್ರದರ್ಶನವು ಭಾರತೀಯ ವೈಮಾನಿಕ ಮತ್ತು ವಿದೇಶದಿಂದ ಅನೇಕ ತಯಾರಕರು ಮತ್ತು ಸೇವಾ ಪೂರೈಕೆದಾರರಿಗೆ ತಮ್ಮ ಉತ್ಪನ್ನಗಳಿಗೆ ಸಂಭವನೀಯ ಖರೀದಿದಾರರನ್ನು ಪೂರೈಸಲು ಒಂದೇ ವೇದಿಕೆಯನ್ನು ಒದಗಿಸುತ್ತದೆ.
 • ರಕ್ಷಣಾ ಇಲಾಖೆಯ ರಕ್ಷಣಾ ಇಲಾಖೆಯು ರಕ್ಷಣಾ ಸಚಿವಾಲಯದ ಅಧೀನದಲ್ಲಿ ಇದನ್ನು ಆಯೋಜಿಸುತ್ತದೆ. ಏರ್ ಶೋನ ಮೊದಲ ಆವೃತ್ತಿ 1996 ರಲ್ಲಿ ನಡೆಯಿತು

ದೇಶದ ಮೊದಲ ಹಾರಾಡುವ ಹೊಟೇಲ್‌ 

2.

ಸುದ್ಧಿಯಲ್ಲಿ ಏಕಿದೆ ?ದೇಶದಲ್ಲೇ ಮೊದಲ ಬಾರಿ 160 ಅಡಿ ಎತ್ತರ ಫ್ಲ್ಯಾಶ್‌ ಟವರ್‌ ರೀತಿ ಮೇಲಕ್ಕೆ ಕರೆದೊಯ್ದು ಅಲ್ಲೇ ಊಟ ಮಾಡಲು ಅವಕಾಶ ನೀಡುವ ಹೊಸ ಹೊಟೇಲ್‌ ಫ್ಲೈ ಡೈನಿಂಗ್‌‘ ಕೆಲ ದಿನಗಳ ಹಿಂದಷ್ಟೇ ನಾಗವಾರ ಉದ್ಯಾನದಲ್ಲಿ ಆರಂಭವಾಗಿದೆ.

 • 22 ಕುರ್ಚಿಗಳು ಇರುವ ವಿಭಿನ್ನ ಅನುಭವದ ಹೊಟೇಲ್‌ ಆರಂಭಿಸಿರುವ ಅಡ್ವೆಂಚರ್‌ ಸ್ಪೋರ್ಟ್ಸ್‌ ಕಂಪನಿಯಾದ ಜಂಪ್‌ಕಿಂಗ್‌ ಇಂಡಿಯಾ ಕಂಪನಿ ಜಾಗತಿಕ ಗುಣಮಟ್ಟದಲ್ಲಿ ಕ್ರೇನ್‌ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಬಳಸಿ ವಾರದ ಹಿಂದಷ್ಟೇ ಹೊಟೇಲ್‌ ಆರಂಭಿಸಿದ್ದೇವೆ.
 • ಜಗತ್ತಿನ 65 ರಾಷ್ಟ್ರಗಳು ಈ ರೀತಿಯ ಹೊಟೇಲ್‌ ಹೊಂದಿವೆ. ಆದರೆ, ನಮ್ಮ ದೇಶದಲ್ಲಿ ಇದೇ ಮೊದಲು”.

ಹೇಗಿದೆ ಹಾರಾಡುವ ಹೋಟೆಲ್ ?

 • ಡೆಕ್‌ ಮೇಲೆ ಇರಿಸಲಾಗಿರುವ ಚೇರ್‌ಗಳಲ್ಲಿ ಗ್ರಾಹಕರು ಕುಳಿತುಕೊಳ್ಳುತ್ತಾರೆ. ಸುರಕ್ಷತೆಗಾಗಿ ಬೆಲ್ಟ್‌ ಇರುತ್ತದೆ.
 • ಗರ್ಭಿಣಿ ಮತ್ತು 13 ವರ್ಷಕ್ಕಿಂತ ಕಮ್ಮಿ ವಯಸ್ಸಿನ ಮಕ್ಕಳಿಗೆ ಅವಕಾಶ ಇಲ್ಲ.
 • ಕನಿಷ್ಟ ಎತ್ತರ 4 ಅಡಿ 5 ಇಂಚು ಇರಬೇಕು. ತೂಕಕ್ಕೆ ಮಿತಿ ಇಲ್ಲ. ಊಟ ಬಡಿಸಲು ಸಿಬ್ಬಂದಿ ಹಾಗೂ ವಿಭಿನ್ನ ಅನುಭವದ ಛಾಯಾಚಿತ್ರ ತೆಗೆಯಲು ಪೋಟೋಗ್ರಾಫರ್‌ ಇರುತ್ತಾರೆ.
 • ಎಲ್ಲ ಸುರಕ್ಷತಾ ಕ್ರಮ ಆಧರಿಸಿ ಫ್ಲೈ ಡೈನಿಂಗ್‌ ಆರಂಭಿಸಲಾಗಿದೆ. ಗಾಳಿ, ಮಳೆಯಿಂದ ತೊಂದರೆ ಇಲ್ಲ. ಅತಿಯಾಗಿ ಗಾಳಿ ಬೀಸಿದರೆ ಡೆಕ್‌ ಅನ್ನು ಕೆಳಗೆ ಇಳಿಸುತ್ತೇವೆ.
 • ಅತಿ ಗಾಳಿಯನ್ನು ಅರಿಯಲು ತಾಂತ್ರಿಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ

ಸಿವಿಸಿ ವರದಿ ಸಿದ್ಧ

3.

ಸುದ್ಧಿಯಲ್ಲಿ ಏಕಿದೆ ?ಕೇಂದ್ರ ವಿಚಕ್ಷಣ ಆಯೋಗವು (ಸಿವಿಸಿ) ಮೊದಲ ಬಾರಿಗೆ 100 ಬ್ಯಾಂಕಿಂಗ್‌ ಹಗರಣಗಳು ಹಾಗೂ ವಂಚನೆಗಳ ವಿಶ್ಲೇಷಣೆ ಒಳಗೊಂಡ ವರದಿ ಸಿದ್ಧಪಡಿಸಿದೆ.

 • ಜ್ಯುವೆಲ್ಲರಿ, ಉತ್ಪಾದನೆ, ಉದ್ಯಮ, ಕೃಷಿ, ವೈಮಾನಿಕ, ಸೇವೆ ಸೇರಿ 13 ವಲಯಗಳಲ್ಲಿ ಹೇಗೆ ಬ್ಯಾಂಕ್‌ ಸಾಲಗಳು ವಂಚನೆ ಅಥವಾ ಹಗರಣಗಳಾಗುತ್ತವೆ ಎಂಬುದನ್ನು ಸಿವಿಸಿ ವಿವರಿಸಿದೆ.
 • ಒಟ್ಟು 100 ಸಾಲ ವಂಚನೆಯ ಪ್ರಕರಣಗಳನ್ನು ವಿಶ್ಲೇಷಿಸಲಾಗಿದ್ದು, ವ್ಯವಸ್ಥೆಯಲ್ಲಿನ ಲೋಪದೋಷಗಳನ್ನೂ ಉಲ್ಲೇಖಿಸಿ ಪರಿಹಾರ ಸೂಚಿಸಲಾಗಿದೆ.
 • ವಿಜಯ್‌ ಮಲ್ಯ, ನೀರವ್‌ ಮೋದಿ ಮುಂತಾದವರ ಭಾರಿ ಸುಸ್ತಿ ಸಾಲ ಹಗರಣಗಳ ತನಿಖೆ ನಡೆಯುತ್ತಿರುವ ಹಂತದಲ್ಲಿ ಸಿವಿಸಿ ವರದಿ ಮಹತ್ವ ಪಡೆದಿದೆ.

ಕೇಂದ್ರ ವಿಜಿಲೆನ್ಸ್ ಕಮಿಷನ್ (ಸಿವಿಸಿ)

 • ಸಿವಿಸಿ ಸರ್ಕಾರದ ಭ್ರಷ್ಟಾಚಾರವನ್ನು ಪರಿಹರಿಸಲು ರೂಪುಗೊಂಡ ಕೇಂದ್ರ ಸರ್ಕಾರದ ಅತ್ಯುನ್ನತ ಸಂಚಾರಿ ವಾಚ್ಡಾಗ್ ಆಗಿದೆ. ಭ್ರಷ್ಟಾಚಾರ ತಡೆಗಟ್ಟುವಿಕೆ ಕುರಿತು ಕೆ. ಸಂತಾನಂ ಸಮಿತಿಯ ಶಿಫಾರಸುಗಳನ್ನು ಫೆಬ್ರವರಿ 1964 ರಲ್ಲಿ ಕೇಂದ್ರ ಸರ್ಕಾರವು ಸಿವಿಸಿಯನ್ನು ಸ್ಥಾಪಿಸಿತು. ಇದು ಶಾಸನಬದ್ಧ ಸ್ವಾಯತ್ತ ಸಂಸ್ಥೆ ಮತ್ತು 2003 ರ ಕೇಂದ್ರ ವಿಜಿಲೆನ್ಸ್ ಕಮಿಷನ್ (ಸಿವಿಸಿ) ಕಾಯ್ದೆಯ ನಿಬಂಧನೆಗಳ ಪ್ರಕಾರ ಯಾವುದೇ ಕಾರ್ಯನಿರ್ವಾಹಕ ಅಧಿಕಾರದಿಂದ ನಿಯಂತ್ರಣವನ್ನು ಹೊಂದಿರುವುದಿಲ್ಲ.
 • ಕಾರ್ಯಗಳು: ಇದು ಕೇಂದ್ರೀಯ ಸರ್ಕಾರದಲ್ಲಿ ಎಲ್ಲಾ ಜಾಗೃತ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅವರ ಜಾಗರೂಕ ಕೆಲಸವನ್ನು ಯೋಜನೆ, ಕಾರ್ಯಗತಗೊಳಿಸುವಿಕೆ, ವಿಮರ್ಶೆ ಮತ್ತು ಸುಧಾರಣೆಯಲ್ಲಿ ಕೇಂದ್ರ ಸರ್ಕಾರ ಸಂಸ್ಥೆಗಳಲ್ಲಿ ವಿವಿಧ ಅಧಿಕಾರಿಗಳಿಗೆ ಸಲಹೆ ನೀಡುತ್ತದೆ. ಕಚೇರಿಯ ಭ್ರಷ್ಟಾಚಾರ ಅಥವಾ ದುರುಪಯೋಗದ ಯಾವುದೇ ಆರೋಪದ ಬಗ್ಗೆ ಬಹಿರಂಗಪಡಿಸುವ ಸಲುವಾಗಿ ಲಿಖಿತ ದೂರುಗಳನ್ನು ಸ್ವೀಕರಿಸಲು ಕೇಂದ್ರ ಸರ್ಕಾರವು ಸಿ.ವಿ.ಸಿ ಯನ್ನು “ಗೊತ್ತುಪಡಿಸಿದ ಏಜೆನ್ಸಿ” ಎಂದು ಅಧಿಕೃತಗೊಳಿಸಿದೆ ಮತ್ತು ಸರಿಯಾದ ಕ್ರಮವನ್ನು ಶಿಫಾರಸು ಮಾಡಿದೆ .
 • ಸಂಯೋಜನೆ: ಸಿವಿಸಿ ಕೇಂದ್ರ ವಿಜಿಲೆನ್ಸ್ ಆಯುಕ್ತರ ನೇತೃತ್ವದಲ್ಲಿದೆ ಮತ್ತು ಎರಡು ವಿಜಿಲೆನ್ಸ್ ಆಯುಕ್ತರನ್ನು ಹೊಂದಿದೆ. ಪ್ರಧಾನ ಮಂತ್ರಿಯ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಶಿಫಾರಸುಗಳ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ, ಆಯ್ಕೆ ಸಮಿತಿಯಲ್ಲಿ ಕೇಂದ್ರ ಗೃಹ ವ್ಯವಹಾರ ಸಚಿವ ಮತ್ತು ಲೋಕಸಭೆಯಲ್ಲಿ ಪ್ರತಿ  ಪಕ್ಷದ ನಾಯಕ ಇರುತ್ತಾರೆ .
 • ಅವಧಿ : ಅವರು ನಾಲ್ಕು ವರ್ಷಗಳ ಅವಧಿಗೆ ಅಥವಾ ಅವರು ಅರವತ್ತೈದು ವರ್ಷ ವಯಸ್ಸಿನವರೆಗೆ, ಯಾವುದು ಮುಂಚೆಯೇ ಸಾಧಿಸುವವರೆಗೂ ಕಚೇರಿಯನ್ನು ಹೊಂದಿದ್ದಾರೆ. ಅವರ ಅಧಿಕಾರಾವಧಿಯ ನಂತರ, ಅವರು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಹೆಚ್ಚಿನ ಉದ್ಯೋಗಕ್ಕೆ ಅರ್ಹರಾಗುವುದಿಲ್ಲ.

ಎಫ್​ಡಿಐ

4.

ಸುದ್ಧಿಯಲ್ಲಿ ಏಕಿದೆ ?ವಾಣಿಜ್ಯ ಹಾಗೂ ಆರ್ಥಿಕ ಅಭಿವೃದ್ಧಿ ಕುರಿತು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ 2018ರ ಮೊದಲಾರ್ಧದಲ್ಲಿ 1.61 ಲಕ್ಷ ಕೋಟಿ ರೂ. ವಿದೇಶಿ ನೇರ ಬಂಡವಾಳ (ಎಫ್​ಡಿಐ) ಹೂಡಿಕೆ ಹರಿದುಬಂದಿದೆ.

 • ಈ ಮೂಲಕ ದಕ್ಷಿಣ ಏಷ್ಯಾಕ್ಕೆ ಹರಿದುಬಂದ ಒಟ್ಟಾರೆ ಎಫ್​ಡಿಐನಲ್ಲಿ ಶೇ.13 ಭಾರತಕ್ಕೆ ಸಿಕ್ಕಿದೆ. ಪರಿಣಾಮ ಜಾಗತಿಕವಾಗಿ ಟಾಪ್-10 ಪಟ್ಟಿಯಲ್ಲಿ ಭಾರತ ಸ್ಥಾನ ಗಳಿಸಿದೆ.
 • ಚೀನಾ ಮೊದಲ ಸ್ಥಾನ ಗಳಿಸಿದ್ದು 41 ಲಕ್ಷ ಕೋಟಿ ರೂ. ಎಫ್​ಡಿಐ ಪಡೆದಿದೆ. ಎರಡನೇ ಸ್ಥಾನದಲ್ಲಿ ಬ್ರಿಟನ್ 4.81 ಲಕ್ಷ ಕೋಟಿ ರೂ., ನಂತರದ ಸ್ಥಾನಗಳಲ್ಲಿ ಅಮೆರಿಕ (3.41 ಲಕ್ಷ ಕೋಟಿ ರೂ.), ನೆದರ್​ಲೆಂಡ್( 3.27 ಲಕ್ಷ ಕೋಟಿ ರೂ.) ಆಸ್ಟ್ರೇಲಿಯಾ (2.65 ಲಕ್ಷ ಕೋಟಿ ರೂ.), ಸಿಂಗಾಪುರ (2.55 ಲಕ್ಷ ಕೋಟಿ ರೂ.), ಬ್ರೆಜಿಲ್ (1.87 ಲಕ್ಷ ಕೋಟಿ ರೂ.) ವಿದೇಶಿ ನೇರ ಬಂಡವಾಳ ಗಳಿಸಿವೆ. ಆದರೆ ಜಾಗತಿಕವಾಗಿ ಎಫ್​ಡಿಐನಲ್ಲಿ ಶೇ.41 ಕುಸಿತವಾಗಿದೆ. ವರ್ಷಾಂತ್ಯದವರೆಗೂ ಕುಸಿತ ಮುಂದುವರಿಯುವ ಸಾಧ್ಯತೆಯಿದೆ.
 • ಜಾಗತಿಕ ಆರ್ಥಿಕತೆಗೆ ಮಬ್ಬು: ಅಮೆರಿಕ-ಚೀನಾ ವಾಣಿಜ್ಯ ಸಮರ, ಇತರ ಕಾರಣಗಳಿಂದ ಜಾಗತಿಕ ಆರ್ಥಿಕತೆಗೆ ಮಬ್ಬು ಹಿಡಿದಿದೆ. ಗ್ರೀನ್​ಫೀಲ್ಡ್ ಯೋಜನೆಗಳು ಮಾತ್ರ ಅಭಿವೃದ್ಧಿ ದಾರಿಯಲ್ಲಿವೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಎಚ್ಚರಿಸಲಾಗಿದೆ.

ಭಾರತಕ್ಕೆ ಎಚ್ಚರಿಕೆ

 • ಇ-ಕಾಮರ್ಸ್ ಹಾಗೂ ಡಿಜಿಟಲ್ ವ್ಯವಹಾರಗಳ ಬಗ್ಗೆ ಭಾರತ ಎಚ್ಚರಿಕೆ ವಹಿಸಬೇಕಿದ್ದು, ಸಂಬಂಧಿತ ಕಂಪನಿಗಳ ಓಲೈಕೆಗೆ ಮಣಿಯಬಾರದು. ಯಾವುದೇ ಕಾರಣಕ್ಕೂ ದೇಶದ ಗಡಿ ದಾಟಿ ಪ್ರಜೆಗಳ ಖಾಸಗಿ ಮಾಹಿತಿ ಹೋಗದಂತೆ ಎಚ್ಚರಿಕೆ ವಹಿಸಬೇಕು. ಈ ಕುರಿತು ಭಾರತ ವಿಶೇಷ ಡಿಜಿಟಲ್ ನೀತಿ ಹೊಂದುವ ಅಗತ್ಯವಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.

ಎಫ್ಡಿಐ

 • ವಿದೇಶಿ ನೇರ ಹೂಡಿಕೆ ಉತ್ಪಾದನೆ ಮತ್ತು ನಿರ್ವಹಣೆಗೆ ನೇರ ಹೂಡಿಕೆಯನ್ನು ಸೂಚಿಸುತ್ತದೆ. ಇದು ಕಂಪನಿಯೊಂದನ್ನು ಖರೀದಿಸುವ ಮೂಲಕ ಅಥವಾ ಅಸ್ತಿತ್ವದಲ್ಲಿರುವ ವ್ಯವಹಾರದ ಕಾರ್ಯಾಚರಣೆಗಳನ್ನು ವಿಸ್ತರಿಸುವ ಮೂಲಕ ಸಾದಿಸಬಹುದು .ಇದರರ್ಥ ಎಫ್ಡಿಐ ವಿದೇಶಿ ಬಂಡವಾಳ, ತಂತ್ರಜ್ಞಾನ ಮತ್ತು ನಿರ್ವಹಣೆಯನ್ನು ಭಾರತಕ್ಕೆ ತರುತ್ತದೆ.

UNCTAD

 • 1964 ರಲ್ಲಿ ಶಾಶ್ವತ ಅಂತರಸರ್ಕಾರಿ ಸಂಸ್ಥೆಯಾಗಿ ಟ್ರೇಡ್ ಅಂಡ್ ಡೆವಲಪ್ಮೆಂಟ್ (UNCTAD) ಮೇಲೆ ವಿಶ್ವಸಂಸ್ಥೆಯ ಸಮ್ಮೇಳನವನ್ನು ಸ್ಥಾಪಿಸಲಾಯಿತು.
 • UNCTAD ಯು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಪ್ರಮುಖ ಅಂಗವಾಗಿದ್ದು ವ್ಯಾಪಾರ, ಹೂಡಿಕೆ ಮತ್ತು ಅಭಿವೃದ್ಧಿಯ ವಿಷಯಗಳ ಬಗ್ಗೆ ವ್ಯವಹರಿಸುತ್ತದೆ. ಸಂಘಟನೆಯ ಗುರಿಗಳು ಹೀಗಿವೆ: “ಅಭಿವೃದ್ಧಿಶೀಲ ದೇಶಗಳ ವ್ಯಾಪಾರ, ಹೂಡಿಕೆ ಮತ್ತು ಅಭಿವೃದ್ಧಿಯ ಅವಕಾಶಗಳನ್ನು ಹೆಚ್ಚಿಸಿ ಮತ್ತು ವಿಶ್ವ ಆರ್ಥಿಕತೆಗೆ ಸಮನಾಗಿ ಆಧಾರವಾಗಿ ಸಂಯೋಜಿಸಲು ಅವರ ಪ್ರಯತ್ನಗಳಲ್ಲಿ ನೆರವಾಗುವುದು

ದೇಶದ ಸೇನೆಗೆ ತ್ರಿಶಕ್ತಿ

5.

ಸುದ್ಧಿಯಲ್ಲಿ ಏಕಿದೆ ?ದೇಶದ ರಕ್ಷಣಾ ವ್ಯವಸ್ಥೆಗೆ ಸವಾಲು ಒಡ್ಡುತ್ತಿರುವ ಆಧುನಿಕ ಬೆದರಿಕೆಗಳನ್ನು ಎದುರಿಸುವ ಉದ್ದೇಶದಿಂದ ಭಾರತೀಯ ಸೇನಾಪಡೆಯಲ್ಲಿ ಮೂರು ಹೊಸ ವಿಭಾಗಗಳನ್ನು ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

 • ಸೈಬರ್ ಏಜೆನ್ಸಿ (ಡಿಸಿಎ), ಬಾಹ್ಯಾಕಾಶ ಏಜೆನ್ಸಿ (ಡಿಎಸ್​ಎ) ಹಾಗೂ ವಿಶೇಷ ಕಾರ್ಯಪಡೆಗಳ (ಎಸ್​ಒಡಿ) ರಚನೆಗೆ ಭದ್ರತಾ ವಿಚಾರಗಳಿಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿಯು ಸಮ್ಮತಿಸಿದೆ. ಅಮೆರಿಕ ಹಾಗೂ ಚೀನಾ ಬಳಿಕ ಆಧುನಿಕ ಭದ್ರತಾ ಸವಾಲುಗಳನ್ನು ಎದುರಿಸಲು ಈ 3 ವಿಶೇಷ ವಿಭಾಗಗಳನ್ನು ಹೊಂದುತ್ತಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಹಿನ್ನಲೆ

 • 2013ರಲ್ಲಿ ಶಿಫಾರಸು: ಐದು ವರ್ಷಗಳ ಹಿಂದೆ ಭದ್ರತಾ ಪಡೆಗಳ ಮುಖ್ಯಸ್ಥರ ಸಮಿತಿಯು ಕೇಂದ್ರ ಸರ್ಕಾರಕ್ಕೆ ಈ ವಿಭಾಗಗಳ ರಚನೆಗೆ ಶಿಫಾರಸು ಮಾಡಿತ್ತು. ಸೇನೆಗೆ ಆಧುನಿಕತೆಯ ಸ್ಪರ್ಶ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹೇಳಿದ್ದರು. ಇದರ ಭಾಗವಾಗಿ ಈ ಮೂರು ವಿಭಾಗಗಳನ್ನು ಆರಂಭಿಸಲಾಗುತ್ತಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಿಂದಲೇ ಈ ವಿಭಾಗಗಳು ಕಾರ್ಯನಿರ್ವಹಿಸಲಿವೆ.

ಸೈಬರ್, ಬಾಹ್ಯಾಕಾಶ ಭದ್ರತೆ

 • ಆಧುನಿಕ ತಂತ್ರಜ್ಞಾನ ಹಾಗೂ ಬದಲಾದ ಯುದ್ಧ ಕಾರ್ಯತಂತ್ರಗಳಿಂದಾಗಿ ಸೈಬರ್ ಹಾಗೂ ಬಾಹ್ಯಾಕಾಶ ಭದ್ರತೆ ಆದ್ಯತೆಯ ವಿಚಾರವಾಗಿದೆ.
 • ಶತ್ರುಪಡೆಯನ್ನು ನಿಯಂತ್ರಿಸಲು ವಿಶೇಷ ತರಬೇತಿ ಹೊಂದಿದ ಕಾರ್ಯಪಡೆ ಅವಶ್ಯಕವಾಗಿದೆ. ಹೀಗಾಗಿ ಭೂ, ನೌಕೆ ಹಾಗೂ ವಾಯು ಸೇನೆಯಲ್ಲಿನ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ಈ ಮೂರು ವಿಭಾಗಗಳನ್ನು ರಚಿಸಲಾಗುತ್ತಿದೆ.
 • ನೆರೆ ದೇಶಗಳು ಹಾಗೂ ವಿದೇಶಗಳಿಂದ ಎದುರಾಗುವ ಸೈಬರ್ ದಾಳಿ ಹಾಗೂ ಇತರ ಅಂತರ್ಜಾಲ ಮೂಲದ ಆತಂಕಗಳ ಮೇಲೆ ರಕ್ಷಣಾ ಸೈಬರ್ ಏಜೆನ್ಸಿ ನಿಗಾ ಇರಿಸಲಿದೆ. ಇನ್ನೊಂದೆಡೆ ಪ್ರತಿಯೊಂದು ಮುಂದುವರಿದ ರಾಷ್ಟ್ರಗಳು ಬಾಹ್ಯಾಕಾಶದಲ್ಲಿ ತಮ್ಮ ಪ್ರಾಬಲ್ಯ ಸಾಧಿಸಲು ಉತ್ಸುಕವಾಗಿವೆ.
 • ಚೀನಾ, ರಷ್ಯಾ ರಾಷ್ಟ್ರಗಳ ಬಾಹ್ಯಾಕಾಶ ಕ್ಷೇತ್ರದಲ್ಲಿನ ಅಭಿವೃದ್ಧಿ ಜಾಗತಿಕ ಆತಂಕಕ್ಕೂ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಇಸ್ರೋ ಹಾಗೂ ಡಿಆರ್​ಡಿಒ ಜತೆಗೆ ಬಾಹ್ಯಾಕಾಶ ಭದ್ರತೆ ವಿಚಾರವಾಗಿ ರಕ್ಷಣಾ ಬಾಹ್ಯಾಕಾಶ ಏಜೆನ್ಸಿ ಕಾರ್ಯನಿರ್ವಹಿಸಲಿದೆ. ಚೀನಾ ಹಾಗೂ ಆಮೆರಿಕ ಸೇನೆಯು ಈ ವಿಭಾಗಗಳನ್ನು ಹೊಂದಿದ್ದು, ಬೇರೆ ರಾಷ್ಟ್ರಗಳ ಬಾಹ್ಯಾಕಾಶ ಯೋಜನೆಯ ಮೇಲೆ ನಿಗಾ ಇಡುತ್ತವೆ.

ವಿಭಾಗ ರಚನೆ ಹೀಗೆ

 • ಮೂರೂ ಸೇನಾಪಡೆಗಳ ಮುಖ್ಯಸ್ಥರ ಸಮಿತಿ ಯೊಂದಿರುತ್ತದೆ. ಅದನ್ನು ಚೀಫ್ ಆಫ್ ಸ್ಟಾಫ್ ಕಮಿಟಿ ಎಂದು ಕರೆಯುತ್ತಾರೆ. ಈ ಕಮಿಟಿಯ ಮುಖ್ಯಸ್ಥರು ನೂತನ ವಿಭಾಗಗಳನ್ನು ಮುನ್ನಡೆಸಲಿದ್ದಾರೆ. ಮೂರು ಸೇನಾಪಡೆಗಳಲ್ಲಿನ ತಜ್ಞರನ್ನು ವಿಭಾಗಗಳಿಗೆ ಆಯ್ಕೆ ಮಾಡಲಾಗುತ್ತದೆ.

ಏನಿದು ವಿಶೇಷ ಕಾರ್ಯಪಡೆ?

 • ಪ್ರಸ್ತುತ ಭಾರತೀಯ ಸೇನಾಪಡೆಗಳಲ್ಲಿ ಪ್ಯಾರಾ ಕಮಾಂಡೊ, ಮರೀನ್ ಕಮಾಂಡೊ ಹಾಗೂ ಗರುಡ್ ಕಮಾಂಡೊ ಎಂಬ ವಿಭಾಗವಿದೆ. ಈ ಮೂರು ವಿಭಾಗಗಳು ಭೂ, ನೌಕೆ ಹಾಗೂ ವಾಯುಪಡೆಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತವೆ. ಇದರ ಬದಲಿಗೆ ಯುದ್ಧ ಮತ್ತು ತುರ್ತು ಸಂದರ್ಭಗಳಲ್ಲಿನ ವಿಶೇಷ ಕಾರ್ಯಾಚರಣೆಗೆಂದು ‘ವಿಶೇಷ ಕಾರ್ಯಪಡೆ(ಸ್ಪೆಷಲ್ ಆಪರೇಷನ್ ಡಿವಿಜನ್)’ ರಚಿಸಲಾಗುತ್ತಿದೆ. ಭೂ, ವಾಯು ಹಾಗೂ ಜಲ ಯುದ್ಧ ನಡೆಸಲು ಕಾರ್ಯಪಡೆಗೆ ತರಬೇತಿ ನೀಡಲಾಗುತ್ತದೆ. ಎನ್​ಎಸ್​ಜಿ ಕೂಡ ಇದರ ಭಾಗವಾಗಲಿದೆ.

ಜಟ್‌ಪಟ್ ಕನೆಕ್ಷನ್ ಯೋಜನಾ

6.

ಸುದ್ಧಿಯಲ್ಲಿ ಏಕಿದೆ ?ಉತ್ತರ ಪ್ರದೇಶದಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಬಿಪಿಎಲ್ ಕಾರ್ಡುದಾರರು 10 ರೂ. ಪಾವತಿಸಿದರೆ ಸಾಕು. ಇಂತಹ ಯೋಜನೆಯೊಂದನ್ನು ಪರಿಚಯಿಸಲು ಉತ್ತರ ಪ್ರದೇಶ ವಿದ್ಯುತ್ ನಿಗಮ ಸಿದ್ಧತೆ ನಡೆಸಿದೆ.

 • ಯುಪಿಪಿಸಿಎಲ್ ಜಟ್‌ಪಟ್ ಕನೆಕ್ಷನ್ ಯೋಜನಾ ಮೂಲಕ ಹೊಸ ವಿದ್ಯುತ್ ಸಂಪರ್ಕಕ್ಕೆ ಕೋರಿರುವ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಮತ್ತು ಸಂಬಂಧಿತ ಎಲ್ಲ ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕವೇ ನಡೆಸಲು ಸಿದ್ಧತೆ ನಡೆಸಿದೆ.
 • ಈ ಯೋಜನೆಯಡಿ ಅರ್ಜಿ ಸಲ್ಲಿಸಿದರೆ ಅವರ ಅರ್ಜಿ ಸಂಬಂಧಿತ ಪ್ರದೇಶದ ಇಂಜಿನಿಯರ್‌ಗಳಿಗೆ ರವಾನೆಯಾಗಿ, ಅರ್ಜಿದಾರರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ.
 • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಸಲಾಗಿದೆ, ಉಳಿದಂತೆ ಸುವಿಧಾ/ ಜನ್‌ ಸುವಿಧಾ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಬಹುದು.
 • ಬಿಪಿಎಲ್ ಕಾರ್ಡುದಾರರು ಅರ್ಜಿ ಜತೆಗೆ 10 ರೂ. ಮತ್ತು ಬಡತನ ರೇಖೆಗಿಂತ ಮೇಲಿನವರು 100 ರೂ. ಶುಲ್ಕ ಪಾವತಿಸಿದರೆ ಸಾಕಾಗುತ್ತದೆ.
 • ಹೊಸ ವಿದ್ಯುತ್ ಸಂಪರ್ಕ ನೀಡಲು ವಿಳಂಬ ಮತ್ತು ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ನಿಗಮ ಈ ಕ್ರಮಕ್ಕೆ ಮುಂದಾಗಿದೆ.

ಕೊಹಿನೂರ್

7.

ಸುದ್ಧಿಯಲ್ಲಿ ಏಕಿದೆ ?ಕೊಹಿನೂರ್ ಬ್ರಿಟಿಷರ ಪಾಲಾಗಿದ್ದು ಹೇಗೆ ಎಂಬ ಬಗ್ಗೆ ಕೇಂದ್ರ ಸರಕಾರದ ಹೇಳಿಕೆಗೆ ವ್ಯತಿರಿಕ್ತ ಅಭಿಪ್ರಾಯ ನೀಡಿರುವ ಕೇಂದ್ರ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಶರಣಾಗತಿಯ ಸಂಕೇತವಾಗಿ ಇದನ್ನು ಬ್ರಿಟಿಷರಿಗೆ ಒಪ್ಪಿಸಲಾಗಿತ್ತು ಎನ್ನುವುದರ ಮೂಲಕ ವಿವಾದ ಮತ್ತೆ ಜೀವ ಪಡೆದಿದೆ.

ಹಿನ್ನಲೆ

 • ಮಾಹಿತಿ ಹಕ್ಕು ಕಾರ್ಯಕರ್ತ ರೋಹಿತ್ ಸಬರ್ವಾಲ್ ಎಂಬುವವರು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಇಲಾಖೆ ಲಾಹೋರ್ ಮಹಾರಾಜ ಕೊಹಿನೂರ್ ವಜ್ರವನ್ನು ಇಂಗ್ಲೆಂಡಿನ ವಿಕ್ಟೋರಿಯಾ ರಾಣಿಗೆ ನೀಡಿದ್ದರು ಎಂದಿದೆ.
 • ಏಪ್ರಿಲ್ 2016ರಲ್ಲಿ ಕೇಂದ್ರ ಸರಕಾರ ಕೊಹಿನೂರ್‌ನನ್ನು ಬ್ರಿಟಿಷರು ಬಲವಂತವಾಗಿ ಕಿತ್ತುಕೊಂಡಿಲ್ಲ ಅಥವಾ ಕಳವು ಮಾಡಿಲ್ಲ. ಬದಲಾಗಿ ಪಂಜಾಬ್ ಅನ್ನು ಆಳುತ್ತಿದ್ದ ಮಹಾರಾಜ ರಣಜಿತ್ ಸಿಂಗ್ ಉತ್ತರಾಧಿಕಾರಿಗಳು ಇದನ್ನು ಈಸ್ಟ್ ಈಂಡಿಯಾ ಕಂಪನಿಗೆ ಉಡುಗೊರೆಯಾಗಿ ನೀಡಿದ್ದರು.
 • ಆಂಗ್ಲೋ- ಸಿಖ್ ಯುದ್ಧದ ವೆಚ್ಚಕ್ಕೆ”ಸ್ವಯಂಪ್ರೇರಿತ ಪರಿಹಾರ” ವಾಗಿ ಇದನ್ನು ಹಸ್ತಾಂತರಿಸಲಾಗಿತ್ತು ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. ಆದರೆ ಪ್ರಾಚ್ಯ ವಸ್ತು ಇಲಾಖೆ ಸರಕಾರದ ಹೇಳಿಕೆಗೆ ವಿರುದ್ಧವಾಗಿ ಉತ್ತರ ನೀಡಿದೆ.
 • ಅದಕ್ಕೆ ಉತ್ತರಿಸಿದ ಪುರಾತತ್ವ ಇಲಾಖೆ 1849ರಲ್ಲಿ ಮಹಾರಾಜ ದುಲೀಪ್ ಸಿಂಗ್ ಮತ್ತು ಲಾರ್ಡ್ ಡಾಲ್‌ಹೌಸಿ ನಡುವೆ ಲಾಹೋರ್ ಒಪ್ಪಂದವಾಯಿತು. ಆ ಸಂದರ್ಭದಲ್ಲಿ ಮಹಾರಾಜ ವಜ್ರವನ್ನು ಇಂಗ್ಲೆಂಡ್ ರಾಣಿಗೆ ಒಪ್ಪಿಸಿದ್ದರು. ಆ ಸಮಯದಲ್ಲಿ ಅಪ್ರಾಪ್ತರಾಗಿದ್ದ ದುಲೀಪ್ ಸಿಂಗ್ ಮನಃಪೂರ್ವಕವಾಗಿ ವಜ್ರವನ್ನು ಬ್ರಿಟಿಷರಿಗೆ ಒಪ್ಪಿಸಿರಲಿಲ್ಲ. ಬದಲಾಗಿ ಒಪ್ಪಂದದ ಅನ್ವಯ ನೀಡಿದ್ದರು , ಎಂದಿದೆ.

ಕೋಹಿನೂರ್‌ ವಜ್ರದ ಬಗ್ಗೆ

 • ಕೋಹಿನೂರ್‌ ಒಂದು ಕಾಲದಲ್ಲಿ ಪ್ರಪಂಚದಲ್ಲೇ ಅತಿ ದೊಡ್ಡ ವಜ್ರವಾಗಿದ್ದ 105 ಕ್ಯಾರಟ್ (6 ಗ್ರಾಂ) ವಜ್ರವಾಗಿದೆ. ಇದಕ್ಕೆ ಪರ್ಷಿ ಯನ್‌ನಲ್ಲಿ “ಬೆಟ್ಟದಷ್ಟು ಬೆಳಕು” ಎಂಬರ್ಥವಿದೆ. ಕೋಹಿನೂರ್‌ ಭಾರತದ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರಿನಲ್ಲಿ ಮೊದಲು ಕಂಡು ಬಂದಿತು. ಈ ವಜ್ರಕ್ಕಾಗಿ ಇತಿಹಾಸದಲ್ಲಿ ಅನೇಕ ಹಿಂದು, ಮೊಘಲ್, ಪರ್ಷಿಯನ್, ಅಫ್ಘನ್, ಸಿಖ್ ಮತ್ತು ಬ್ರಿಟಿಷ್ ಆಡಳಿತಗಾರರು ತೀವ್ರವಾಗಿ ಕಾದಾಡಿದ್ದಾರೆ. ಅಲ್ಲದೇ ಯುದ್ಧದ ಸಂದರ್ಭದಲ್ಲಿ ಲೂಟಿ ಮಾಡಿದ್ದಾರೆ. ಇದು ಅಂತಿಮವಾಗಿ ಈಸ್ಟ್ ಇಂಡಿಯಾ ಕಂಪೆನಿಯಿಂದ ಸೂರೆಮಾಡಲ್ಪಟ್ಟಿತು. ಅದಲ್ಲದೇ ರಾಣಿ ವಿಕ್ಟೋರಿಯಾಳು 1877ರಲ್ಲಿ ಭಾರತದ ಸರ್ವಾಧಿಕಾರಿಣಿ ಎಂಬುದಾಗಿ ಘೋಷಿಸಲ್ಪಟ್ಟಾಗ ಬ್ರಿಟಿಷ್ ರಾಜಪ್ರಭುತ್ವದ ಆಭರಣಗಳ ಭಾಗವಾಯಿತು.

Related Posts
KAS
'ರಾಷ್ಟ್ರೀಯ ಇ- ಮಾರ್ಕೆಟ್‌ ಸವೀರ್‍ಸಸ್‌ ಪ್ರೈ.ಲಿ'  ಸುದ್ಧಿಯಲ್ಲಿ ಏಕಿದೆ ? ರಾಜ್ಯದ ಎಪಿಎಂಸಿಗಳಲ್ಲಿ ರೈತರಿಂದ ಅವೈಜ್ಞಾನಿಕ ಶುಲ್ಕ ಸಂಗ್ರಹಿಸುತ್ತಿರುವ 'ರಾಷ್ಟ್ರೀಯ ಇ- ಮಾರ್ಕೆಟ್‌ ಸವೀರ್‍ಸಸ್‌ ಪ್ರೈ.ಲಿ' (ರೆಮ್ಸ್‌) ಸೇವೆಯನ್ನು ರದ್ದು ಪಡಿಸಲು ಸರಕಾರ ಗಂಭೀರ ಆಲೋಚನೆ ನಡೆಸಿದೆ. ಏಕೆ ಈ ನಿರ್ಧಾರ ? ರಾಜ್ಯ ಕೃಷಿ ...
READ MORE
“22 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
ಸಾರಯುಕ್ತ ಅಕ್ಕಿ ಸುದ್ಧಿಯಲ್ಲಿ ಏಕಿದೆ ?ಬಿಸಿಯೂಟ ಯೋಜನೆಯನ್ವಯ ರಾಜ್ಯದ 4 ಜಿಲ್ಲೆಗಳ ಒಟ್ಟು 5 ಘಟಕಗಳಲ್ಲಿ ಸಾರವರ್ಧಿತ ಅಕ್ಕಿ ಬಳಸುವ ಸಂಬಂಧ 2017-18ನೇ ಸಾಲಿನ ಬಜೆಟ್​ನಲ್ಲಿ ಘೊಷಿಸಿರುವ ಕಾರ್ಯಕ್ರಮ ಜಿಲ್ಲೆಯಲ್ಲಿ ಇನ್ನೂ ಕಾರ್ಯರೂಪಕ್ಕೆ ಬಾರದೆ ವಿಳಂಬವಾಗಿದೆ. ಸಾರಯುಕ್ತ ಅಕ್ಕಿ ಬಳಕೆಗೆ ಕಾರಣ ಇದು ತೀವ್ರ ತರಹದ ...
READ MORE
“25th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
‘ಒಂದು ವಲಯ ಒಂದು ರಸ್ತೆ’ ಸುದ್ದಿಯಲ್ಲಿ ಏಕಿದೆ? ಚೀನಾದ ‘ಒಂದು ವಲಯ ಒಂದು ರಸ್ತೆ’ (ಒಬಿಒಆರ್) ಯೋಜನೆ ಕುರಿತಂತೆ ಭಾರತದ ನಿಲುವಿಗೆ ನೆದರ್‌ಲೆಂಡ್ ಬೆಂಬಲ ವ್ಯಕ್ತಪಡಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಕಲ್ಪಿಸುವ ಯತ್ನಗಳು ಆಯಾ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವ ರೀತಿಯಲ್ಲಿ ಇರಬೇಕು ಒಂದು ಬೆಲ್ಟ್, ಒಂದು ...
READ MORE
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉದ್ಯೋಗ ಖಾತ್ರಿ ಹೆಚ್ಚಳ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಉದ್ಭವಿಸಿರುವ ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಕಾಯ್ದೆಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ 100 ದಿನಗಳ ಉದ್ಯೋಗವನ್ನು 150ಕ್ಕೆ ವಿಸ್ತರಿಸಲಾಗಿದ್ದು, ಈ ವರ್ಷ ಮಾನವ ದಿನಗಳ ಸೃಜನೆ ಗುರಿಯನ್ನು 8.5 ಕೋಟಿ ಯಿಂದ 10 ...
READ MORE
“7th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಎರಡೇ ರೂಪಾಯಿಗೆ ವೈ-ಫೈ ಸೌಲಭ್ಯ! ಗ್ರಾಮೀಣ ಪ್ರದೇಶಗಳಿಗೆ ಅಂತ ರ್ಜಾಲ ಸೌಲಭ್ಯ ಕಲ್ಪಿಸಲು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೇಂದ್ರ ಸರ್ಕಾರಕ್ಕೆ ಹೊಸ ಶಿಫಾರಸು ಮಾಡಿದೆ. ಸಾರ್ವಜನಿಕ ದೂರವಾಣಿ ಕೇಂದ್ರ (ಪಿಸಿಒ) ಮಾದರಿಯಲ್ಲಿ ವೈ-ಫೈ ಸೌಲಭ್ಯ ಒದಗಿಸುವ ಸಾರ್ವಜನಿಕ ಡೇಟಾ ಕೇಂದ್ರ ...
READ MORE
“28th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
'ಕಾವೇರಿ' ಸಾಫ್ಟ್‌ವೇರ್‌ ಸುದ್ಧಿಯಲ್ಲಿ ಏಕಿದೆ ?ಆಸ್ತಿಗಳ ನೋಂದಣಿ ಸಂದರ್ಭದಲ್ಲಿ ನಡೆಯುವ ಅಕ್ರಮ ತಡೆಗೆ 'ಕಾವೇರಿ' ಸಾಫ್ಟ್‌ವೇರ್‌ ಅನ್ನು ನಗರಾಭಿವೃದ್ಧಿ ಇಲಾಖೆಯೊಂದಿಗೆ ಜೋಡಣೆ ಮಾಡಲು ನಿರ್ಧರಿಸಲಾಗಿದೆ ಹಿನ್ನಲೆ ನಗರ ಪ್ರದೇಶಗಳಲ್ಲಿ ದಾಖಲೆ ಪತ್ರಗಳನ್ನು ಆಧರಿಸಿ ನಡೆಯುತ್ತಿರುವ ಆಸ್ತಿ ನೋಂದಣಿಯಿಂದ ಬಹಳಷ್ಟು ವಂಚನೆಗಳು ನಡೆಯುತ್ತಿವೆ. ಇದನ್ನು ತಪ್ಪಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ...
READ MORE
Talgo tilting train- between Mysore Bangalore
Travel time between Bengaluru and Mysuru could be reduced to 90 minutes in the near future if trials with a high speed, tilting train manufactured by Spanish manufacturer Talgo conducted ...
READ MORE
IMF staff recommended that the currency be included in the IMF’s benchmark foreign exchange basket Managing Director of the IMF Christine Lagarde also endorsed the yuan’s inclusion in the IMF’s Special ...
READ MORE
“24th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
‘ಶಾಲಾ -ಸಂಪರ್ಕ ಸೇತು’ ಯೋಜನೆ ಸುದ್ಧಿಯಲ್ಲಿ ಏಕಿದೆ ? ಮಲೆನಾಡು, ಕರಾವಳಿ ಭಾಗದ ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲಿ ವಾಸಿಸುವ ಜನರು ವಿಶೇಷವಾಗಿ ಶಾಲಾ ಮಕ್ಕಳು ಮಳೆಗಾಲದಲ್ಲಿ ಅಪಾಯಕಾರಿ ತೋಡು, ಹಳ್ಳ -ಕೊಳ್ಳ ದಾಟುವ ಪ್ರಯಾಸವನ್ನು ಶಾಶ್ವತವಾಗಿ ಪರಿಹರಿಸಲು 'ಶಾಲಾ -ಸಂಪರ್ಕ ಸೇತು' ಎಂಬ ...
READ MORE
ರೈತರ ಕೃಷಿ ಉತ್ಪನ್ನಗಳನ್ನು ಪಟ್ಟಣದ ಮಾರುಕಟ್ಟೆಗೆ ಸುರಕ್ಷಿತವಾಗಿ ಸಾಗಿಸುವುದಕ್ಕೆ ಮತ್ತು ಗ್ರಾಮೀಣ ಪ್ರದೇಶದ ಜನರಿಗೂ ಉತ್ತಮ ಸಂಪರ್ಕ ರಸ್ತೆ ಅನುಕೂಲ ಕಲ್ಪಿಸುವ ಯೋಜನೆ. ರಸ್ತೆ ನಿರ್ಮಾಣಗೊಂಡ ನಂತರದ ಐದು ವರ್ಷಗಳವರೆಗೆ ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕು, ಆರನೇ ವರ್ಷ ಮತ್ತೆ ಮರುಡಾಂಬರಿಕರಣಗೊಳಿಸಿ ಸರ್ಕಾರಕ್ಕೆ ಹಸ್ತಾಂತರಿಸುವುದು ಯೋಜನೆಯಲ್ಲಿರುವ ...
READ MORE
9th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“22 ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
“25th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“7th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“28th ಆಗಸ್ಟ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Talgo tilting train- between Mysore Bangalore
China’s yuan for SDR basket inclusion
“24th ಅಕ್ಟೋಬರ್ 2018ರ ಕನ್ನಡ ಪ್ರಚಲಿತ ವಿದ್ಯಮಾನ”
‘ನಮ್ಮ ಗ್ರಾಮ ನಮ್ಮ ರಸ್ತೆ’

Leave a Reply

Your email address will not be published. Required fields are marked *