Published on: January 29, 2022
ಐಎನ್ಎಸ್ ಖುಕ್ರಿ
ಐಎನ್ಎಸ್ ಖುಕ್ರಿ
ಸುದ್ಧಿಯಲ್ಲಿ ಏಕಿದೆ ? ಕಳೆದ ಡಿಸೆಂಬರ್ ನಲ್ಲಿ ಸೇವೆಯಿಂದ ಅಧಿಕೃತವಾಗಿ ನಿವೃತ್ತಿ ಹೊಂದಿದ ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ನಿರ್ಮಿತ ಕ್ಷಿಪಣಿ ಕಾರ್ವೆಟ್ ಐಎನ್‌ಎಸ್ ಖುಕ್ರಿಯನ್ನು ಶೀಘ್ರದಲ್ಲೇ ಮ್ಯೂಸಿಯಂ ಆಗಿ ಪರಿವರ್ತನೆ ಮಾಡಲಾಗುವುದು ಎಂದು ಸೇನಾ ಮೂಲಗಳು ಹೇಳಿವೆ.
ಮುಖ್ಯಾಂಶಗಳು
- ಕಳೆದ ವರ್ಷ ಡಿಸೆಂಬರ್‌ನಲ್ಲಿ 32 ವರ್ಷಗಳ ಸೇವೆಯ ನಂತರ, ಐಎನ್‌ಎಸ್ ಖುಕ್ರಿಯನ್ನು ಸೇವೆಯಿಂದ ನಿವೃತ್ತಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದಾಗ್ಯೂ, ದಿಯು ಆಡಳಿತವು ಜನವರಿ 26 ರಂದು ಔಪಚಾರಿಕವಾಗಿ ಖುಕ್ರಿಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತ್ತು.
- ವಿಶಾಖಪಟ್ಟಣದಿಂದ ಭಾರತೀಯ ನೌಕಾಪಡೆಯ ಹಡಗುಗಳ ಮೂಲಕ ಹಡಗು ತನ್ನ ಕೊನೆಯ ಪ್ರಯಾಣವನ್ನು ಪ್ರಾರಂಭಿಸಿ ಜನವರಿ 14 ರಂದು ದಿಯುಗೆ ಆಗಮಿಸಿತು.
- 1989ರ ಆಗಸ್ಟ್ 23 ರಂದು ಖುಕ್ರಿ ಹಡಗನ್ನು ಮಜಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ನಿರ್ಮಿಸಲಾಗಿತ್ತು. ಪಾಶ್ಚಿಮಾತ್ಯ ಮತ್ತು ಪೂರ್ವ ನೌಕಾಪಡೆಗಳ ಎರಡೂ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದು, ಹಡಗನ್ನು ಮುಂಬೈನಲ್ಲಿ ಅಂದಿನ ರಕ್ಷಣಾ ಸಚಿವ ಕೃಷ್ಣ ಚಂದ್ರ ಪಂತ್ ಹಾಗೂ ದಿವಂಗತ ಕ್ಯಾಪ್ಟನ್ ಮಹೇಂದ್ರ ನಾಥ್ ಮುಲ್ಲಾ ಅವರ ಪತ್ನಿ ಶ್ರೀಮತಿ ಸುಧಾ ಮುಲ್ಲಾ, ಎಂವಿಸಿ ಕಮಾಂಡರ್ (ಈಗ ವೈಸ್ ಅಡ್ಮಿರಲ್ ನಿವೃತ್ತ) ಸಂಜೀವ್ ಭಾಸಿನ್ ಸಮ್ಮುಖದಲ್ಲಿ ನೌಕಾಪಡೆಗೆ ಸೇರಿಸಿಕೊಳ್ಳಲಾಗಿತ್ತು. 32 ವರ್ಷಗಳ ಸುದೀರ್ಘ ಸೇವೆಯ ಬಳಿಕ ಈ ಹಡಗು ನಿವೃತ್ತಿಯಾಗುತ್ತಿದೆ.