Published on: July 30, 2021
ಎಲೆಕ್ಟ್ರಾನಿಕ್ ವಾಹನಗಳ ಮಾರುಕಟ್ಟೆ
ಎಲೆಕ್ಟ್ರಾನಿಕ್ ವಾಹನಗಳ ಮಾರುಕಟ್ಟೆ
ಸುದ್ಧಿಯಲ್ಲಿ ಏಕಿದೆ ? ಭಾರತದ ಎಲೆಕ್ಟ್ರಾನಿಕ್ ವಾಹನಗಳ ಮಾರುಕಟ್ಟೆಯಲ್ಲಿ ಶೇ.21.9ರಷ್ಟು ಪಾಲು ಕರ್ನಾಟಕದಲ್ಲಿದೆ. ವಿದ್ಯುತ್ ಚಾಲಿತ ವಾಹನಗಳನ್ನು (ಇವಿ) ಉತ್ತೇಜಿಸುವ ನಿಟ್ಟಿನಲ್ಲಿ ಫಾಸ್ಟರ್ ಅಡಾಪ್ಷನ್ ಆ್ಯಂಡ್ ಮಾನ್ಯುಫಾಕ್ಷರಿಂಗ್ ಆಫ್ ಹೈಬ್ರಿಡ್ ಆ್ಯಂಡ್ ಎಲೆಕ್ಟ್ರಿಕ್ ವೆಹಿಕಲ್ಸ್ (ಎಫ್ಎಎಂಇ) ನೀತಿಯ ಎರಡನೇ ಹಂತದಲ್ಲಿ 2021ರ ಜುಲೈ 20ರ ತನಕ 87,659 ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಹಣಕಾಸು ನೆರವು ನೀಡಲಾಗಿದೆ.
- ಈ ಪೈಕಿ 19,270 ವಾಹನಗಳು ಕರ್ನಾಟಕ ಒಂದರಲ್ಲೇ ಮಾರಾಟವಾಗಿದ್ದು, ದೇಶದ ಎಲೆಕ್ಟ್ರಿಕ್ ವಾಹನಗಳ ಪ್ರಮುಖ ತಾಣವಾಗಿ ಹೊರಹೊಮ್ಮಿದೆ.
- ತಮಿಳುನಾಡು ಎರಡನೇ ಸ್ಥಾನದಲ್ಲಿದ್ದು, 13,515 ಇವಿಗಳು ಮಾರಾಟವಾಗಿವೆ. ಮಹಾರಾಷ್ಟ್ರದಲ್ಲಿ 9,393 ಇವಿಗಳು ಮಾರಾಟವಾಗಿವೆ.
ಎಫ್ಎಎಂಇ ಯೋಜನೆ
ಕೇಂದ್ರ ಸರಕಾರವು ಈ ಎಫ್ಎಎಂಇ ಯೋಜನೆಗೆ 10,000 ಕೋಟಿ ರೂ. ನೆರವು ನೀಡಿದ್ದು, ಇದರ ಅವಧಿ ಮೂರು ವರ್ಷ. 2019ರ ಏಪ್ರಿಲ್ 1ರಿಂದ ಜಾರಿಯಾಗಿದೆ. 7,000 ಇ-ಬಸ್, 5 ಲಕ್ಷ ಇ-ತ್ರಿಚಕ್ರ ವಾಹನ, 55,000 ಇ-ನಾಲ್ಕು ಚಕ್ರಗಳ ವಾಹನ, 10 ಲಕ್ಷ ಇ-ದ್ವಿಚಕ್ರ ವಾಹನಗಳಿಗೆ ಬೇಡಿಕೆ ಸೃಷ್ಟಿಸುವುದು ಇದರ ಗುರಿ.