Published on: April 18, 2022
ಭಾರತ ಗೋಧಿ ಪೂರೈಕೆದಾರ
ಭಾರತ ಗೋಧಿ ಪೂರೈಕೆದಾರ
ಸುದ್ಧಿಯಲ್ಲಿ ಏಕಿದೆ? ಉಕ್ರೇನ್ ಮತ್ತು ರಷ್ಯಾದಿಂದ ಅತಿ ಹೆಚ್ಚು ಗೋಧಿ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿರುವ ಈಜಿಪ್ಟ್ ಈಗ ಭಾರತವನ್ನು ಗೋಧಿ ಪೂರೈಕೆದಾರರನ್ನಾಗಿ ಅನುಮೋದಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಹೇಳಿದ್ದಾರೆ.
ಹಿನ್ನಲೆ
- ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿಯ ಲಭ್ಯತೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಎರಡೂ ರಾಷ್ಟ್ರಗಳು ಗೋಧಿಯ ಪ್ರಮುಖ ಉತ್ಪಾದಕ ಮತ್ತು ರಫ್ತುದಾರ ದೇಶಗಳಾಗಿದ್ದವು.
- ‘ಕರ್ನಾಲ್ ಬಂಟ್’ ಕಾಯಿಲೆಯಿಂದ ಭಾರತೀಯ ಗೋಧಿ ಸೋಂಕಿತವಾಗಿದೆ ಎಂಬ ದೂರುಗಳ ನಂತರ ಭಾರತದಲ್ಲಿ ಈಜಿಪ್ಟ್ ಅಧಿಕಾರಿಗಳು ಕ್ವಾರಂಟೈನ್ ಸೌಲಭ್ಯಗಳ ಪರಿಶೀಲನೆ ಮತ್ತು ಕ್ಷೇತ್ರ ಭೇಟಿಗಳ ಕಠಿಣ ಪ್ರಕ್ರಿಯೆಯ ನಂತರ, ರಫ್ತಿಗೆ ಅನುಮೋದನೆ ನೀಡಲಾಯಿತು.
- ದೇಶದಲ್ಲಿ ಉತ್ಪಾದನೆಯಾಗುವ ಗೋಧಿ ಗುಣಮಟ್ಟವನ್ನು ಪರಿಶೀಲಿಸಲು ಅಧಿಕಾರಿಗಳು ಯುಪಿ, ಮಧ್ಯಪ್ರದೇಶ ಮತ್ತು ಪಂಜಾಬ್‌ನ ಗೋಧಿ ಹೊಲಗಳಿಗೆ ಭೇಟಿ ನೀಡಿದರು.
- FY23 ರಲ್ಲಿ, ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಂತರ ಜಾಗತಿಕ ಬೇಡಿಕೆ ಹೆಚ್ಚುತ್ತಿರುವ ಕಾರಣ ಭಾರತವು 10 ರಿಂದ 11 ಮಿಲಿಯನ್ ಟನ್ ಗೋಧಿಯನ್ನು ರಫ್ತು ಮಾಡುವ ಗುರಿಯನ್ನು ಹೊಂದಿದೆ.
ಭಾರತದಲ್ಲಿ ಗೋಧಿ ಉತ್ಪಾದನೆ
- 2020 ರಲ್ಲಿ ಜಾಗತಿಕ ಗೋಧಿ ಉತ್ಪಾದನೆಯಲ್ಲಿ ಸುಮಾರು 14.14 ಪ್ರತಿಶತದಷ್ಟು ಪಾಲನ್ನು ಹೊಂದಿರುವ ವಿಶ್ವದ ಎರಡನೇ ಅತಿದೊಡ್ಡ ಗೋಧಿ ಉತ್ಪಾದಕ ಭಾರತವಾಗಿದೆ.
- ವಾರ್ಷಿಕವಾಗಿ, ದೇಶವು 107.59 ಮಿಲಿಯನ್ ಟನ್‌ಗಳಷ್ಟು ಗೋಧಿಯನ್ನು ಉತ್ಪಾದಿಸುತ್ತದೆ ಮತ್ತು ಅದರಲ್ಲಿ ಹೆಚ್ಚಿನದನ್ನು ದೇಶೀಯ ಬಳಕೆಗೆ ಬಳಸಲಾಗುತ್ತದೆ (98 ಮಿಲಿಯನ್ ಟನ್‌ಗಳು).
- ಗೋಧಿ ಬೆಳೆಯುವ ಪ್ರಮುಖ ರಾಜ್ಯಗಳೆಂದರೆ ಪಂಜಾಬ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಬಿಹಾರ, ರಾಜಸ್ಥಾನ ಮತ್ತು ಗುಜರಾತ್.