Published on: April 23, 2022
ಕೇಂದ್ರದ ಪಿಎಲ್ಐ ಯೋಜನೆಗೆ ಭಾರೀ ಬೆಂಬಲ
ಕೇಂದ್ರದ ಪಿಎಲ್ಐ ಯೋಜನೆಗೆ ಭಾರೀ ಬೆಂಬಲ
ಸುದ್ಧಿಯಲ್ಲಿ ಏಕಿದೆ? ಭಾರತದ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಯೋಜನೆಗೆ (ಪಿಎಲ್ಐ) ಭಾರಿ ಬೆಂಬಲ ಲಭಿಸಿದ್ದು, 14 ಕ್ಷೇತ್ರಗಳಲ್ಲಿ 2.34 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಹೆಚ್ಚು ಬಂಡವಾಳವನ್ನು ಯಾವ ಕ್ಷೇತ್ರಗಳು ಆಕರ್ಷಿಸಿವೆ ?
- ಆಟೋಮೊಬೈಲ್ ಮತ್ತು ಆಟೋ ಬಿಡಿ ಭಾಗಗಳು, ಅತ್ಯಾಧುನಿಕ ರಾಸಾಯನಿಕ ಸೆಲ್ ಬ್ಯಾಟರಿ, ವಿಶೇಷ ಉಕ್ಕು, ಅಧಿಕ ದಕ್ಷತೆಯ ಸೌರ ಫಲಕಗಳ ವಲಯವು ಹೆಚ್ಚು ಬಂಡವಾಳವನ್ನು ಆಕರ್ಷಿಸಿವೆ ಎಂದು ಸಚಿವಾಲಯಗಳು ನೀಡಿದ ಅಂಕಿ ಅಂಶಗಳು ತಿಳಿಸಿವೆ.
ಹಿನ್ನಲೆ
- ಎರಡು ವರ್ಷಗಳ ಹಿಂದೆ ಈ ಯೋಜನೆ ಜಾರಿಯಾಗಿತ್ತು. ಇದರಲ್ಲಿ ಸೇರ್ಪಡೆಯಾದ ಕಂಪನಿಗಳು ಭಾರತದಲ್ಲಿಯೇ ತಮ್ಮ ಉತ್ಪನ್ನಗಳನ್ನು ಉತ್ಪಾದಿಸಬೇಕಾಗುತ್ತದೆ ಹಾಗೂ ಉತ್ಪಾದನೆಯನ್ನು ಆಧರಿಸಿ ಪ್ರೋತ್ಸಾಹ ಧನವೂ ಈ ಕಂಪನಿಗಳಿಗೆ ಲಭಿಸಲಿದೆ. ಹೀಗಾಗಿ ಹೂಡಿಕೆಯ ಹರಿವು ಲಭಿಸುತ್ತಿದೆ. 14 ಕ್ಷೇತ್ರಗಳಲ್ಲಿ ಸರಕಾರ 1.97 ಲಕ್ಷ ಕೋಟಿ ರೂ.ಗಳ ಸಹಾಯಧನವನ್ನು ವಿತರಿಸುತ್ತಿದೆ.
- ಭಾರತದ ರಫ್ತು ಹೆಚ್ಚಿಸಲು ಕೂಡ ಇದು ಸಹಕಾರಿಯಾಗಲಿದೆ