Published on: June 6, 2022
ಸುದ್ಧಿ ಸಮಾಚಾರ 06 ಜೂನ್ 2022
ಸುದ್ಧಿ ಸಮಾಚಾರ 06 ಜೂನ್ 2022
-
ಬೈಯಪ್ಪನಹಳ್ಳಿ ಬಳಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೇ ಟರ್ಮಿನಲ್ ನಲ್ಲಿ ಜೂನ್ 6 ರಂದು ರೈಲು ಸಂಚಾರ ಆರಂಭಗೊಳ್ಳಲಿದೆ. ಬೆಂಗಳೂರು ವಿಮಾನ ನಿಲ್ದಾಣದ ಮಾದರಿಯಲ್ಲಿ ಸೆಂಟ್ರಲೈಸ್ಡ್ ಎಸಿ ಸೌಲಭ್ಯ ಹೊಂದಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಮಾದರಿಯ ಹೊರವಿನ್ಯಾಸ. ದೇಶದ ಮೂರನೇ ವಿಶ್ವ ದರ್ಜೆಯ ಟರ್ಮಿನಲ್ ಎಂಬ ಹೆಗ್ಗಳಿಕೆ
- ರಾಜ್ಯದಲ್ಲಿ ಪ್ರತಿ 3ನೇ ಶನಿವಾರ ವಿದ್ಯುತ್ ಅದಾಲತ್ ನಡೆಸಬೇಕು ಎಂದು ಇಂಧನ ಸಚಿವ ಸುನೀಲ್ ಕುಮಾರ್ಅವರು ಸೂಚನೆ ನೀಡಿದ್ದಾರೆ.
- ಎರಡನೇ ಮಕ್ಕಳ ಸ್ನೇಹಿ ಪ್ರದೇಶಕ್ಕೆ ಯಶವಂತಪುರ ರೈಲು ನಿಲ್ದಾಣದಲ್ಲಿ ರೈಲ್ವೆ ಸುರಕ್ಷತಾ ಪಡೆ ಚಾಲನೆ ನೀಡಿದೆ. ಆರ್ ಪಿಎಫ್ ಔಟ್ ಫೋಸ್ಟ್ ಬಳಿಯ ಪ್ಲಾಟ್ ಫಾರಂ ನಂಬರ್ 1 ರಲ್ಲಿ ಸುಮಾರು 400 ಚದರ ಅಡಿ ವಿಸ್ತೀರ್ಣದಲ್ಲಿ ‘ಖುಷಿ ಹಬ್” ತಲೆ ಎತ್ತಿದೆ.
- ಮುಖ್ಯಮಂತ್ರಿಗಳ ಅಮೃತ ನಗರೋತ್ಧಾನ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಮೂರು ವರ್ಷಗಳ ಬದಲಾಗಿ ಎರಡು ವರ್ಷಗಳಲ್ಲಿಯೇ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
- ಮುಂಬರುವ ದಿನಗಳಲ್ಲಿ ಗ್ರಾಮ ಒನ್ ಕೇಂದ್ರವನ್ನು ರಾಜ್ಯಾದ್ಯಂತ ಪ್ರಾರಂಭಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
- ಪ್ರವಾಸೋದ್ಯಮ ವಿಶೇಷ ಪ್ಯಾಕೇಜ್ಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರೈಲ್ವೆ ಇಲಾಖೆಯು ಭಾರತ್ ಗೌರವ್ ಯೋಜನೆಯನ್ನು ಪರಿಚಯಿಸಿದ್ದು, ಕರ್ನಾಟಕ ಸರ್ಕಾರವು ಎರಡು ತಿಂಗಳೊಳಗೆ ಬೆಂಗಳೂರಿನಿಂದ ಕಾಶಿ, ಅಯೋಧ್ಯೆ ಮತ್ತು ಪ್ರಯಾಗ್ರಾಜ್ಗೆ ಪ್ರವಾಸಿ ರೈಲುಗಳ ಭಾಗವಾಗಿರುವ ಮೊದಲ ‘ಭಾರತ್ ಗೌರವ್’ ರೈಲು ಸಂಚಾರ ಆರಂಭಿಸಲು ಉತ್ಸುಕವಾಗಿದೆ.
- ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಸಿಡುಬಿಗಿಂತ ಕಡಿಮೆ ತೀವ್ರತೆ ಹೊಂದಿದೆ. ಸಾಮಾನ್ಯವಾಗಿ ಪಶ್ಚಿಮ ಮತ್ತು ಮಧ್ಯ ಆಫ್ರಿಕಾಕ್ಕೆ ಸೀಮಿತವಾಗಿದ್ದ ಈ ಕಾಯಿಲೆ ಮೇ ತಿಂಗಳಿನಿಂದ ಯುರೋಪ್ ನಲ್ಲಿಯೂ ಕಂಡುಬರುತ್ತಿದೆ.
- ದೇಶದ ಮೊದಲ ಸೂಪರ್ಫಾಸ್ಟ್ ರೈಲು ಡೆಕ್ಕನ್ ಕ್ವೀನ್ನ 92 ವರ್ಷಗಳ ಸವಿ ನೆನಪಿಗಾಗಿ, ಜರ್ಮನ್ ತಂತ್ರಜ್ಞಾನದಲ್ಲಿ ತಯಾರಿಸಲಾದ ಅಲ್ಟ್ರಾಮೋಡರ್ನ್ ಮತ್ತು ಸುರಕ್ಷಿತ ಎಲ್ಎಚ್ಬಿ ಕೋಚ್ಗಳ ಹಲಬುಗಳೊಂದಿಗೆ (rakes) ರೈಲನ್ನು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.
- ಭವಿಷ್ಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಗುರಿಯನ್ನಿಟ್ಟುಕೊಂಡು’ ಪಿಎಂ ಶ್ರೀ ಶಾಲೆಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
- ನವಜಾತ ಶಿಶುಗಳು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಶೀಘ್ರದಲ್ಲೇ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ABHA) ಅಥವಾ ಆರೋಗ್ಯ ಸಂಖ್ಯೆಯನ್ನು ಪಡೆಯುತ್ತಾರೆ.
- ಉತ್ತರ ಪ್ರದೇಶದಲ್ಲಿರುವ ಹಿಂದೂ ಧಾರ್ಮಿಕ ಗ್ರಂಥಗಳ ಅತಿ ದೊಡ್ಡ ಮುದ್ರಕ ಸಂಸ್ಥೆ ಗೀತಾ ಪ್ರೆಸ್ ನ ಶತಮಾನೋತ್ಸವವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾತನಾಡುತ್ತಿದ್ದರು. 1923 ರಲ್ಲಿ ಜಯ ದಯಾಲ್ ಗೋಯಂಕಾ ಹಾಗೂ ಘನ್ ಶ್ಯಾಮ್ ದಾಸ್ ಜಲನ್ ಸ್ಥಾಪಿಸಿದ್ದ ಗೀತಾ ಪ್ರೆಸ್ ನ್ನು ರಾಷ್ಟ್ರಪತಿಗಳು ಸಾಹಿತ್ಯದ ದೇಗುಲ ಎಂದು ಬಣ್ಣಿಸಿದ್ದಾರೆ.
- ಕೋರ್ಬೆವ್ಯಾಕ್ಸ್ ಕೋವಿಡ್-19 ಲಸಿಕೆಯನ್ನು ಡಿಸಿಜಿಐ ವೈವಿಧ್ಯಮಯ ಬೂಸ್ಟರ್ ಡೋಸ್ ನ್ನಾಗಿ ಬಳಕೆ ಮಾಡುವುದಕ್ಕೆ ಅನುಮೋದನೆ ನೀಡಿದೆ
- ರೆಸ್ಟೊರೆಂಟ್ಗಳು ಗ್ರಾಹಕರಿಗೆ ‘ಸೇವಾ ಶುಲ್ಕ’ ವಿಧಿಸುವಂತಿಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು ಹೇಳಿದ್ದಾರೆ. ಆದರೆ ಗ್ರಾಹಕರು ಸ್ವ ಇಚ್ಛೆಯಿಂದ ಪ್ರತ್ಯೇಕವಾಗಿ “ಟಿಪ್ಸ್” ನೀಡಬಹುದು.
- ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 5 ರಂದು ‘ಮಣ್ಣು ಉಳಿಸಿ ಆಂದೋಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- ಜೂನ್ 3, ವಿಶ್ವ ಸೈಕಲ್ ದಿನ. ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಫಿಟ್ ಇಂಡಿಯಾ ಚಳವಳಿ (Fit India movement) ಹೆಸರಿನಲ್ಲಿ ಹಮ್ಮಿಕೊಂಡಿರುವ ಕೇಂದ್ರ ಸರ್ಕಾರ ಸೈಕಲ್ ಜಾಥಾ ಹಮ್ಮಿಕೊಂಡಿದೆ.
- ಸಂತೂರ್ ವಾದಕ ಭಜನ್ ಸೊಪೋರಿ ನಿಧನ. ಅವರು ತಮ್ಮ ವೃತ್ತಿಜೀವನದ ಸಾಧನೆಗಳ ಮೂಲಕ 2004 ರಲ್ಲಿ ಪದ್ಮಶ್ರೀ, 1992 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು.
- ಭಾರತ ಮೂಲದ 14 ವರ್ಷದ ವಿದ್ಯಾರ್ಥಿನಿ ಹರಿಣಿ ಲೋಗನ್ ಸ್ಕ್ರಿಪ್ಟ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಟೂರ್ನಿಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಪ್ರಶಸ್ತಿ ಪಡೆದಿದ್ದಾರೆ.
-
ಫ್ರೆಂಚ್ ಓಪನ್ 2022ರ ಪುರುಷರ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ಅವರು ಕ್ಯಾಸ್ಪರ್ ರುಡ್ ರನ್ನು ಸೋಲಿಸಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ಬೀಗಿದರು.