Published on: June 8, 2022

ಸ್ಯಾಟಲೈಟ್ ಟೌನ್ ಆಗಿ ಹೊಸಕೋಟೆ ಪಟ್ಟಣ

ಸ್ಯಾಟಲೈಟ್ ಟೌನ್ ಆಗಿ ಹೊಸಕೋಟೆ ಪಟ್ಟಣ

ಸುದ್ಧಿಯಲ್ಲಿಏಕಿದೆ?

ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸುಮಾರು 27 ಕಿ.ಮೀ ದೂರದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪಟ್ಟಣವನ್ನು ಎಲ್ಲಾ ಮೂಲಸೌಕರ್ಯಗಳೊಂದಿಗೆ ಸ್ಯಾಟಲೈಟ್ ಟೌನ್ ಆಗಿ ಶೀಘ್ರದಲ್ಲೇ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮುಖ್ಯಾಂಶಗಳು

  • ಹೊಸಕೋಟೆಯಲ್ಲಿ ಆರ್ಥಿಕ ಚಟುವಟಿಕೆಗೆ ವಿಪುಲ ಅವಕಾಶಗಳಿವೆ.
  • ಕೈಗಾರಿಕೆ, ಉಗ್ರಾಣ ಸೌಲಭ್ಯ, ಕುಡಿಯುವ ನೀರು, ವಿದ್ಯುತ್, ಸ್ವಚ್ಚತೆ, ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಅಭಿವೃದ್ಧಿಗೊಳಿಸಲು ವಿಶೇಷ ಗಮನ ನೀಡಲಾಗುವುದು. ಮೆಟ್ರೋ ಅಥವಾ ಸಬ್ ಅರ್ಬನ್ ಕಾಮಗಾರಿಗಳನ್ನು ಮುಂದಿನ ಯೋಜನೆಗಳಲ್ಲಿ ಸೇರ್ಪಡೆಗೊಳಿಸಲಾಗುವುದು.
  • ಹೊಸಕೋಟೆಗೂ ಎತ್ತಿನಹೊಳೆ ನೀರು ತಲುಪಲಿದೆ ಎಂದರು.

ಹೊಸಕೋಟೆ ಅಭಿವೃದ್ಧಿಗಾಗಿ ಕೈಗೊಳ್ಳುತ್ತಿರುವ ಕ್ರಮಗಳು

  • ಸಮಗ್ರ ಅಭಿವೃದ್ಧಿಯತ್ತ ಹೊಸಕೋಟೆ ದಾಪುಗಾಲು: ಈ ಬಾರಿಯ ಆಯವ್ಯಯದಲ್ಲಿ ಎರೆಮಲ್ಲಪ್ಪನ ಕೆರೆ ಸಂಪೂರ್ಣ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ಒದಗಿಸಿದೆ.
  • ಹೊಸಕೋಟೆಗೆ ಕೆರೆ ತುಂಬಿಸುವ ಯೋಜನೆ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಈ ವರ್ಷದಲ್ಲಿ ಮಂಜೂರಾತಿಯನ್ನು ನೀಡಲಾಗುವುದು.
  • ಆನಗೊಂಡ ಹೋಬಳಿಯಲ್ಲಿ 39 ಕೆರೆ ತುಂಬುವ ಯೋಜನೆಯ ಕಾಮಗಾರಿ ನಡೆದಿದೆ. ಅದಕ್ಕೆ ಹೆಚ್ಚುವರಿಯಾಗಿ 50 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಆದಷ್ಟು ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಸಮಗ್ರ ಅಭಿವೃದ್ಧಿಯತ್ತ ಹೊಸಕೋಟೆ ದಾಪುಗಾಲು ಹಾಕುತ್ತಿದೆ ಎಂದರು.
  • ಪ್ರಮುಖ ನಗರವಾಗಿ ಹೊಸಕೋಟೆ ಅಭಿವೃದ್ಧಿ: ಹೊಸಕೋಟೆ ಪ್ರಮುಖ ನಗರವಾಗಿ ಅಭಿವೃದ್ಧಿಯಾಗುತ್ತಿದೆ. ಈ ಬಾರಿಯ ಬಜೆಟ್‍ನಲ್ಲಿ 3800 ಕೋಟಿ ರೂ.ಗಳನ್ನು ಎಲ್ಲಾ ಪುರಸಭೆ, ನಗರಸಭೆ, ಪಟ್ಟಣ ಪಂಚಾಯತಿಗಳಿಗೆ ಒದಗಿಸಲಾಗಿದೆ.