Published on: June 13, 2022
ಸುದ್ಧಿ ಸಮಾಚಾರ – 13 ಜೂನ್ 2022
ಸುದ್ಧಿ ಸಮಾಚಾರ – 13 ಜೂನ್ 2022
-
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಅರೆ ರೋಬೋಟಿಕ್ ಟೋಯಿಂಗ್ ಸಾಧನವನ್ನು ನಿಯೋಜಿಸಿದ ವಿಶ್ವದ ಎರಡನೇ ವಿಮಾನ ನಿಲ್ದಾಣವಾಗಿದೆ.
- ದಕ್ಷಿಣ ಏಷ್ಯಾದಲ್ಲಿಯೇ ಅತಿ ಉದ್ದವಾದ ದಂತ ಹೊಂದಿದ್ದ ‘ಭೋಗೇಶ್ವರ’ನನ್ನು ಆನೆಗಳ ಸಂರಕ್ಷಣೆಗೆ ಐಕಾನಿಕ್ ಆಗಿ ಬಳಕೆ ಮಾಡಲು ಹಾಗೂ ಇದರ ಉದ್ದವಾದ ದಂತವನ್ನು ಸಂರಕ್ಷಿಸಿಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
- ವಾಯು ಮಾಲಿನ್ಯಕ್ಕೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಕಾರಣ: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಇತ್ತೀಚಿನ ಅಧ್ಯಯನವು ಮಹಿಳೆಯರಿಗಿಂತ ಪುರುಷರೇ ವಾಯು ಮಾಲಿನ್ಯಕ್ಕೆ ಹೆಚ್ಚಿನ ಕಾರಣರಾಗುತ್ತಾರೆ ಎಂದು ತೋರಿಸಿದೆ. ಜರ್ನಲ್ ಆಫ್ ಟ್ರಾನ್ಸ್ಪೋರ್ಟ್ ಜಿಯಾಗ್ರಫಿಯಲ್ಲಿ ಇದನ್ನು ಪ್ರಕಟಿಸಲಾಗಿದೆ.
- ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ತಂತ್ರಜ್ಞಾನದ ರಾಯಭಾರಿಯಾಗಿ ಹಿರಿಯ ಭಾರತೀಯ ರಾಜತಾಂತ್ರಿಕ ಅಧಿಕಾರಿ ಅಮನ್ ದೀಪ್ ಸಿಂಗ್ ಗಿಲ್ ಅವರನ್ನು ನೇಮಕ ಮಾಡಲಾಗಿದೆ.
- ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯವು ಸಚಿವಾಲಯದ ವಿವಿಧ ವಿಭಾಗಗಳಲ್ಲಿ ಪ್ರತಿಭಾವಂತ, ಕ್ರಿಯಾತ್ಮಕ ಮತ್ತು ಮುಂದಾಲೋಚನೆಯ ಯುವ ವೃತ್ತಿಪರರನ್ನು ತೊಡಗಿಸಿಕೊಳ್ಳುವ ಪ್ರಯತ್ನದಲ್ಲಿ “ಸಾಗರಮಾಲಾ ಯುವ ವೃತ್ತಿಪರ ಯೋಜನೆ” ಎಂಬ ಯೋಜನೆಯನ್ನು ಪ್ರಾರಂಭಿಸಿದೆ.
- ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಗೋವಾದ ಪ್ರವಾಸೋದ್ಯಮ ಕ್ಷೇತ್ರ ಮತ್ತು ಕಡಲತೀರಗಳನ್ನು ಗಮನದಲ್ಲಿಟ್ಟುಕೊಂಡು “ಬೀಚ್ ವಿಜಿಲ್ ಆಪ್” ಅನ್ನು ಪ್ರಾರಂಭಿಸಿದರು.
- ಭಾರತಕ್ಕೆ ರಷ್ಯಾದ ಸರಕುಗಳ ಸಾಗಣೆಗೆ ಇರಾನ್ ಹೊಸ ವ್ಯಾಪಾರಿ ಮಾರ್ಗ ಆರಂಭಿಸಿದೆ’ ಎಂದು ಇರಾನ್ನ ಸರ್ಕಾರಿ ಸ್ವಾಮ್ಯದ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಶಿಪ್ಪಿಂಗ್ ಲೈನ್ಸ್ ಗ್ರೂಪ್ ತಿಳಿಸಿದೆ’.
- ಎಲಿಜಬೆತ್ ರಾಣಿ ಜಗತ್ತಿನಲ್ಲೇ ಅತ್ಯಂತ ಸುದೀರ್ಘ ಆಳ್ವಿಕೆ ನಡೆಸಿದ ಎರಡನೇ ರಾಜ ವಂಶಸ್ಥೆಯಾಗಿ ಬ್ರಿಟನ್ ರಾಣಿ 2ನೇ ಎಲಿಜಬೆತ್ ದಾಖಲೆ ನಿರ್ಮಿಸಿದ್ದಾರೆ.
- ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿರುವ WTO ಪ್ರಧಾನ ಕಛೇರಿಯಲ್ಲಿ WTO ಸಮ್ಮೇಳನವು ಆಯೋಜಿಸಲಾಗಿದೆ.ಸಮ್ಮೇಳನವು ಜೂನ್ 15, 2022 ರಂದು ಮುಕ್ತಾಯಗೊಳ್ಳಲಿದೆ.
-
ಫ್ರೆಂಚ್ ಓಪನ್ 2022ರ ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಫ್ರೆಂಚ್ ಜೋಡಿ ಕ್ಯಾರೊಲಿನ್ ಗಾರ್ಸಿಯಾ ಮತ್ತು ಕ್ರಿಸ್ಟಿನಾ ಮ್ಲಾಡೆನೊವಿಕ್ ಪ್ರಶಸ್ತಿಯನ್ನು ಎತ್ತಿಹಿಡಿದ್ದಿದ್ದಾರೆ.