Published on: June 14, 2022
ವಿಶ್ವ ರಕ್ತದಾನಿಗಳ ದಿನ
ವಿಶ್ವ ರಕ್ತದಾನಿಗಳ ದಿನ
ಸುದ್ದಿಯಲ್ಲಿ ಏಕಿದೆ?
ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ. ‘ರಕ್ತದಾನ ಮಾಡುವುದು ಸಾಮೂಹಿಕ ಕಾರ್ಯ. ಈ ಪ್ರಯತ್ನಕ್ಕೆ ಕೈಜೋಡಿಸಿ ಮತ್ತು ಜೀವ ಉಳಿಸಿ’ ಎಂಬ ಸಂದೇಶದೊಂದಿಗೆ ಈ ಬಾರಿ ರಕ್ತದಾನಿಗಳ ದಿನ ಆಚರಿಸಲಾಗುತ್ತಿದೆ.
ಮುಖ್ಯಾಂಶಗಳು
- ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಾಗಿ ರಕ್ತದ ಅವಶ್ಯಕತೆ ಇರುತ್ತದೆ. ಪ್ರತಿವರ್ಷ ದೇಶದಲ್ಲಿ ಸುಮಾರು 10 ಲಕ್ಷ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತದೆ. ಈ ಜನರ ಪೈಕಿ ಹೆಚ್ಚಿನವರಿಗೆ ಕಿಮೋಥೆರಪಿ ಮಾಡುವಾಗ ರಕ್ತಪೂರಣ ಮಾಡಬೇಕಾಗುತ್ತದೆ.
ಯಾರು ರಕ್ತದಾನ ಮಾಡಬಹುದು?
- 18ರಿಂದ 60 ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ. 45ರಿಂದ 60 ಕೆ.ಜಿ. ತೂಕದ ವ್ಯಕ್ತಿಗಳಿಂದ 350 ಎಂ.ಎಲ್ ರಕ್ತ ಹಾಗೂ 60 ಕೆ.ಜಿ.ಗೂ ಹೆಚ್ಚು ತೂಕ ಹೊಂದಿರುವ ದಾನಿಗಳಿಂದ 450 ಎಂ.ಎಲ್ ರಕ್ತವನ್ನು ದಾನವಾಗಿ ಪಡೆಯಲಾಗುವುದು.
- ‘ಒಮ್ಮೆ ರಕ್ತದಾನ ಮಾಡಿದರೆ ಮುಂದಿನ ಮೂರು ತಿಂಗಳವರೆಗೆ ದಾನ ಮಾಡಬಾರದು.
ರಕ್ತದಾನದ ಅನುಕೂಲಗಳು
-
ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗಿ, ಹೃದಯಾಘಾತ ಸಾಧ್ಯತೆಯೂ ಶೇ 80ರಷ್ಟು ದೂರವಾಗುತ್ತದೆ. ರಕ್ತದ ಒತ್ತಡ, ಮಧುಮೇಹದಂತಹ ರೋಗಗಳನ್ನು ತಡೆಯಲೂ ರಕ್ತದಾನ ಸಹಕಾರಿ’