Published on: June 16, 2022
ಸುದ್ಧಿ ಸಮಾಚಾರ – 16 ಜೂನ್ 2022
ಸುದ್ಧಿ ಸಮಾಚಾರ – 16 ಜೂನ್ 2022
-
ರಾಜ್ಯದ ನೂತನ ಲೋಕಾಯುಕ್ತರಾಗಿ ನೇಮಕಗೊಂಡಿರುವ ನ್ಯಾಯಾಮೂರ್ತಿ ಬಿ.ಎಸ್. ಪಾಟೀಲ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
- ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಪರಮಾಣು ಸಾಮರ್ಥ್ಯದ ಪೃಥ್ವಿ-II ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
- ಅಗ್ನಿಪಥ್ ಅಥವಾ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಿದರು. ಭಾರತೀಯ ಸೇನೆಯಲ್ಲಿ ನೇಮಕಾತಿಯನ್ನು ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಲ್ಲಿ ಮಾಡಲಾಗುತ್ತದ್ದು, ಈ ಯೋಜನೆಯಲ್ಲಿ, ದೇಶದ ಎಲ್ಲಾ ಮೂರು ಸೇನೆಗಳಾದ ನೌಕಾಪಡೆ, ಭೂಸೇನೆ, ವಾಯುಸೇನೆಗಳ ಸೈನಿಕರು ಕೇವಲ ಮೂರು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ
- ಭಾರತದ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದ ಗೌಪ್ಯತೆ ರಕ್ಷಿಸಲು ಮತದಾರರಿಗೆವಿಶೇಷವಾಗಿ ರೂಪಿಸಿರುವ,ನೇರಳೆ ಬಣ್ಣದ ಶಾಯಿಯುಳ್ಳ ಪೆನ್ ಒದಗಿಸಬೇಕು ಎಂದು ಚುನಾವಣಾ ಆಯೋಗವು ಚುನಾವಣಾಧಿಕಾರಿಗಳಿಗೆ ಸೂಚಿಸಿದೆ. ಉಲ್ಲೇಖಿತ ಪೆನ್ ಹೊರತುಪಡಿಸಿ, ಇತರೆ ಯಾವುದೇ ಪೆನ್ ಬಳಸಿ ಮತ ಚಲಾವಣೆ ಮಾಡಿದಲ್ಲಿ ಅದು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ನಿಯಮಗಳು ೧೯೭೪ ರ ಅನ್ವಯ ಅಸಿಂಧುಗೊಳ್ಳಲಿದೆ.
- ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಭಾರತೀಯ ಮೂಲದ ರಾಧಾ ಅಯ್ಯಂಗಾರ್ ಪ್ಲಂಬ್ ಅವರನ್ನು ಪೆಂಟಗನ್ ಉನ್ನತ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
-
ಪಾವೋ ನೂರ್ಮಿ ಗೇಮ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ : ಟೋಕಿಯೋ ಒಲಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದು ದಾಖಲೆ ಮಾಡಿದ್ದ ಜಾವೆಲಿನ್ ಥ್ರೋ ಕ್ರೀಡಾಪಟು ನೀರಜ್ ಚೋಪ್ರಾ ಅವರು ಇದೀಗ ಫಿನ್ ಲ್ಯಾಂಡಿನಲ್ಲಿ ನಡೆದ ಪಾವೋ ನೂರ್ಮಿ ಗೇಮ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ..