Published on: June 21, 2022

13ನೇ ಶತಮಾನದ ವೀರಗಲ್ಲು ಶಾಸನ ಪತ್ತೆ

13ನೇ ಶತಮಾನದ ವೀರಗಲ್ಲು ಶಾಸನ ಪತ್ತೆ

ಸುದ್ದಿಯಲ್ಲಿ ಏಕಿದೆ? 

ಶಿವಮೊಗ್ಗ  ಜಿಲ್ಲೆಯ ಸೊರಬ ತಾಲ್ಲೂಕಿನ ಕಾನಹಳ್ಳಿ ಗ್ರಾಮದಲ್ಲಿ 13ನೇ ಶತಮಾನದ ತುರುಗೋಳ್ ವೀರಗಲ್ಲು ಶಾಸನ ಪತ್ತೆಯಾಗಿದೆ. “

ಮುಖ್ಯಾಂಶಗಳು

  • ಹೊಸಗುಂದದ ಸಾಮಂತ ರಾಜ ಕುಮಾರ ಬೀರ ಅರಸನು ಸಾಗರ ತಾಲ್ಲೂಕಿನ ಕಲಸಿಯಲ್ಲಿ 13ನೇ ಶತಮಾನದಲ್ಲಿ ನೆಲೆಸಿದ್ದರ ಬಗ್ಗೆ ಈ ಶಾಸನ ತಿಳಿಸುತ್ತದೆ. ಉಳವಿ ಗ್ರಾಮದ ಅವಿನಾಶ್ ಚಕ್ರಸಾಲಿ ಈ ಶಾಸನವನ್ನು ಪತ್ತೆ ಮಾಡಿದ್ದಾರೆ.
  • “ವೀರಗಲ್ಲಿನಲ್ಲಿ ನಾಗರಶೈಲಿಯಲ್ಲಿ 3 ಗೋಪುರಗಳನ್ನು ಕೆತ್ತನೆ ಮಾಡಲಾಗಿದ್ದು, ಈ ರೀತಿಯ ಶಾಸನ ಕರ್ನಾಟಕದಲ್ಲಿ ಹಾವೇರಿ ಜಿಲ್ಲೆಯ ರಟ್ಟೆಹಳ್ಳಿಯಲ್ಲಿ ಮೊದಲ ಬಾರಿಗೆ ದೊರೆತಿದೆ. ಇದು ಎರಡನೆಯದು. ಶಾಸನ ಸುಮಾರು 20 ಅಡಿ ಎತ್ತರ 15 ಅಡಿ ಅಗಲವಿದೆ
  • ಅರಸನ ಪರಾಕ್ರಮದ ವರ್ಣನೆ: ಶಾಸನದಲ್ಲಿ ಹೋರಾಟ, ಅರಸನನ್ನು ಸ್ವರ್ಗಕ್ಕೆ ಅಪ್ಸರೆಯರು ಕೊಂಡೊಯ್ಯುವ ದೃಶ್ಯ, ಶಿವಲಿಂಗ ಹಾಗೂ ನಂದಿಯನ್ನು ಕೆತ್ತಲಾಗಿದೆ.”
  • “ಹೊಸಗುಂದದ ಕುಮಾರ ಬೀರ ಅರಸನು, ಕಲಸೆಯ ಬೀಡಿನಲ್ಲಿರುವಾಗ ಆತನ ದಂಡನಾಯಕ ಜಂಬಾನಿಯ ಮಾಚ ಗಾವುಂಡ ಹಾಗೂ ಕೋಲುಗುಣಸೆಯ ಸಾಯದೇವ ಕುದುರೆಗಳನ್ನು ಕದ್ದು ಒಯ್ಯೊತ್ತಿರುವಾಗ ಹಾಗವಳ್ಳಿಯಲ್ಲಿ ಅವರನ್ನು ತಡೆದು ಸಾಯದೇವನನ್ನು ಕೊಲ್ಲುತ್ತಾರೆ. ಮಾಚ ಗಾವುಂಡ ಕುದುರೆಯನ್ನು ಮರಳಿ ಕೊಂಡೊಯ್ಯುವ ಸಂದರ್ಭದಲ್ಲಿ ವೀರ ಮರಣವನ್ನು ಹೊಂದುತ್ತಾನೆ. ಆಗ ಕಲಸಿಯ ಕುಮಾರ ಬೀರ ಅರಸ ಮಾಚ ಗಾವುಂಡನ ವಂಶಸ್ಥರಿಗೆ ಜಮೀನನ್ನು ದಾನವಾಗಿ ಕೊಟ್ಟಿರುವ ಬಗ್ಗೆ ಶಾಸನದಲ್ಲಿ ತಿಳಿದು ಬರುತ್ತದೆ.”

ವೀರಗಲ್ಲು ಎಂದರೇನು?

  • ವೀರಗಲ್ಲುಗಳು ಯೋಧನೊಬ್ಬ ಯುದ್ಧದಲ್ಲಿ ವೀರಮರಣವನ್ನಪ್ಪಿದ ಸಂಕೇತವಾಗಿ ಸ್ಥಾಪಿಸಲ್ಪಡುತ್ತವೆ.