Published on: June 21, 2022
ಸುದ್ಧಿ ಸಮಾಚಾರ – 21 ಜೂನ್ 2022
ಸುದ್ಧಿ ಸಮಾಚಾರ – 21 ಜೂನ್ 2022
-
ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಕೆಟಿಆರ್) ಆರ್ಕಿಡೇರಿಯಂ ಸ್ಥಾಪಿಸಲು ಸಜ್ಜಾಗಿದ್ದು, ಜಿಲ್ಲೆಯ ಜೋಯಿಡಾ (ಸೂಪಾ) ತಾಲೂಕಿನ ನುಜ್ಜಿ ಗ್ರಾಮದಲ್ಲಿ ಆರ್ಕಿಡೇರಿಯಂ ನಿರ್ಮಾಣ ಮಾಡಲಾಗುತ್ತಿದೆ.
- ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕಾನಹಳ್ಳಿ ಗ್ರಾಮದಲ್ಲಿ 13ನೇ ಶತಮಾನದ ತುರುಗೋಳ್ ವೀರಗಲ್ಲು ಶಾಸನ ಪತ್ತೆಯಾಗಿದೆ. ಈ ರೀತಿಯ ಶಾಸನ ಕರ್ನಾಟಕದಲ್ಲಿ ಹಾವೇರಿ ಜಿಲ್ಲೆಯ ರಟ್ಟೆಹಳ್ಳಿಯಲ್ಲಿ ಮೊದಲ ಬಾರಿಗೆ ದೊರೆತಿದೆ. ಇದು ಎರಡನೆಯದು.
- ಜುಲೈಗೆ 5ಜಿ ತರಂಗಾಂತರ ಹರಾಜು ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಸಮ್ಮತಿ ಸೂಚಿಸಿದೆ. ಒಟ್ಟು 72 ಗಿಗಾಹರ್ಟ್ಸ್ ತರಂಗಾಂತರವು 20 ವರ್ಷಗಳ ಅವಧಿಗೆ ಹರಾಜು ಹಾಕಲಾಗುತ್ತಿದ್ದು, ಜುಲೈ ಅಂತ್ಯದ ವೇಳೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ.
- ಚೆಸ್ ಒಲಿಂಪಿಯಾಡ್ನಲ್ಲಿ ಇದೇ ಮೊದಲ ಬಾರಿ ಆಯೋಜಿಸಿರುವ ಕ್ರೀಡಾ ಜ್ಯೋತಿ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. 44ನೇ ಚೆಸ್ ಒಲಿಂಪಿಯಾಡ್ ತಮಿಳುನಾಡಿನ ಮಹಾಬಲಿಪುರಂನಲ್ಲಿ ಜುಲೈ 28 ರಿಂದ ಆಗಸ್ಟ್ 10ರ ವರೆಗೆ ನಡೆಯಲಿದೆ. ಅಂತರರಾಷ್ಟ್ರೀಯ ಚೆಸ್ ಸಂಸ್ಥೆ (ಫಿಡೆ) ಇದೇ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ನಲ್ಲಿ ಒಲಿಂಪಿಕ್ ಮಾದರಿಯಲ್ಲಿ ಜ್ಯೋತಿಯಾತ್ರೆ ಪರಿಚಯಿಸಿದೆ.
- ರಷ್ಯಾ ಆಕ್ರಮಣ ಆರಂಭಿಸಿದ ನಾಲ್ಕು ತಿಂಗಳ ನಂತರ ಉಕ್ರೇನ್ಗೆ ಯುರೋಪ್ ಒಕ್ಕೂಟದ (ಯುಇ) ಸದಸ್ಯ ಪಡೆಯುವ ಉಮೇದುವಾರಿಕೆ ಸ್ಥಾನಮಾನವನ್ನು ಯುರೋಪಿಯನ್ ಕಮಿಷನ್ ಬೆಂಬಲಿಸಿರುವುದಕ್ಕೆ ಶ್ಲಾಘಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ‘ಇದೊಂದು ಐತಿಹಾಸಿಕ ತೀರ್ಮಾನ’ ಎಂದು ಬಣ್ಣಿಸಿದ್ದಾರೆ.
-
ಪೆಸಿಫಿಕ್ ಬಿಲಿಯರ್ಡ್ಸ್: ಸೌರವ್ ಕೊಠಾರಿಗೆ ಪ್ರಶಸ್ತಿ : ಭಾರತದ ಸೌರವ್ ಕೊಠಾರಿ ಅವರು ಪೆಸಿಫಿಕ್ ಇಂಟರ್ನ್ಯಾಷನಲ್ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಜಯಿಸಿದರು. ಇದೇ ಟೂರ್ನಿಯ ಸ್ನೂಕರ್ನಲ್ಲೂ ಗೆಲುವು ಪಡೆದಿದ್ದ ಅವರು ಪ್ರಶಸ್ತಿ ‘ಡಬಲ್’ ಸಾಧನೆ ಮಾಡಿದರು.