Published on: July 25, 2022
ಸುದ್ಧಿ ಸಮಾಚಾರ – 25 ಜುಲೈ 2022
ಸುದ್ಧಿ ಸಮಾಚಾರ – 25 ಜುಲೈ 2022
-
ತೋಟಗಾರಿಕೆ ಸಚಿವರ ರಾಷ್ಟ್ರೀ ಯ ಸಮ್ಮೇ ಳನದಲ್ಲಿ’ಮಣ್ಣಿನ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಭೂಚೇತನ ಯೋಜನೆಯನ್ನು ಮರು ಜಾರಿಗೊಳಿಸಲು ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಭೂಚೇತನ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು 2009ರಲ್ಲಿ ಆರಂಭಿಸಿದರು.
- ಸ್ಟಾರ್ಟಪ್ಗಳನ್ನು ಬೆಂಬಲಿಸುವ ಪ್ರಯತ್ನದಲ್ಲಿ, ವಿಶೇಷವಾಗಿ ಬಿ2ಬಿ (ಬಿಸಿನೆಸ್-ಟು-ಬಿಸಿನೆಸ್)ಯಂತ ಸ್ಟಾರ್ಟ್ಅಪ್ಗಳಿಗೆ ಅನುಕೂಲವಾಗಲು ಸಿಐಐ ಕರ್ನಾಟಕ ‘ಸ್ಟಾರ್ಟ್ಅಪ್ ಟಾಸ್ಕ್ ಫೋರ್ಸ್’ ಅನ್ನು ಸ್ಥಾಪಿಸಲಿದ್ದು, ಅದು ಬಿ2ಬಿಗೆ ದೊಡ್ಡ ಕಂಪನಿಗಳೊಂದಿಗೆ ಸಂವಹನ ನಡೆಸಲು ಅವಕಾಶವನ್ನು ಒದಗಿಸುತ್ತದೆ ಮತ್ತು ವೇದಿಕೆಯನ್ನು ಸೃಷ್ಟಿಸಲಿದೆ.
- ಗಡಿ ನಿಯಂತ್ರಣ ರೇಖೆ (LOC) ಅಥವಾ ಗಡಿಯ 100 ಕಿ.ಮೀ ವ್ಯಾಪ್ತಿಯಲ್ಲಿ ರಕ್ಷಣಾ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಗೆ ಸಂಬಂಧಿಸಿದ ಹೆದ್ದಾರಿ ಯೋಜನೆಗಳಿಗೆ ಪರಿಸರ ತೆರವು ಅಗತ್ಯದಿಂದ ವಿನಾಯಿತಿ ನೀಡುವ ಪರಿಸರ ಪ್ರಭಾವ ಮೌಲ್ಯಮಾಪನ ನಿಯಮಗಳಿಗೆ ತಿದ್ದುಪಡಿಗಳನ್ನು ಕೇಂದ್ರವು ಸೂಚಿಸಿದೆ.
- ಮಾರ್ಬರ್ಗ್’ ವೈರಾಣುವಿನ ಮೊದಲ ಪ್ರಕರಣ ಪಶ್ಚಿಮ ಆಫ್ರಿಕಾ ಖಂಡದ ಘಾನಾದಲ್ಲಿ ಪತ್ತೆಯಾಗಿದೆ. ಈ ರೋಗವು ಸಾಂಕ್ರಾಮಿಕ ಹೆಮರಾಜಿಕ್ ಆಗಿದೆ, ಇದು ಎಬೋಲಾದ ಅದೇ ಕುಟುಂಬಕ್ಕೆ ಸೇರಿದೆ. ಹಣ್ಣನ್ನು ತಿನ್ನುವ ಬಾವಲಿಗಳ ಮೂಲಕ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಗಳು ಮತ್ತು ಮೇಲ್ಮೈಗಳ ದೈಹಿಕ ದ್ರವಗಳ ನೇರ ಸಂಪರ್ಕದ ಮೂಲಕ ಸಾಂಕ್ರಾಮಿಕ ವೈರಸ್ ಜನರಲ್ಲಿ ಹರಡುತ್ತದೆ.
- ‘ಡಿವೈನ್ ಟೈಡ್ಸ್’ ಸಂಗೀತ ಆಲ್ಬಂಗೆ ಖ್ಯಾತ ಗಾಯಕ ರಿಕಿ ಕೇಜ್ ಅವರ ಜೊತೆ ಕನ್ನಡಿಗ ವನಿಲ್ ವೇಗಸ್ ಹಾಗೂ ಮುಂಬೈನ ಪಿ.ಎ. ದೀಪಕ್ ಅವರಿಗೂ ಪ್ರತಿಷ್ಠಿತ ಗ್ರ್ಯಾ ಮಿ ಪ್ರಶಸ್ತಿ ತಲುಪಿದೆ.ಈ ವರ್ಷ ಏಪ್ರಿಲ್ 4ರಂದು ಈ ಪ್ರಶಸ್ತಿ ಪ್ರಕಟವಾಗಿತ್ತು. ರಿಕಿ ಅವರು ಲಾಸ್ವೇಗಸ್ನಲ್ಲಿ ಈ ಪ್ರಶಸ್ತಿ ಸ್ವೀಕರಿಸಿದ್ದರು. ವನಿಲ್ ಅವರಿಗೆ ಗ್ರ್ಯಾ ಮಿ ಟ್ರೋ ಫಿ ಇತ್ತೀ ಚೆಗೆ ಕೈ ಸೇರಿದೆ.
- ಗಡಿ ಬಿಕ್ಕಟ್ಟು: ಭಾರತ, ಚೀನಾ ಮಧ್ಯೆ 16ನೇ ಸುತ್ತಿನ ಮಾತುಕತ: ಪೂರ್ವ ಲಡಾಖ್ನಲ್ಲಿ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಬಳಿಯ ಗಡಿ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಮಿಲಿಟರಿ ಕಮಾಂಡರ್ಗಳ ಮಟ್ಟದ ಮಾತುಕತೆ ನಡೆಯಿತು. ಭಾರತದ ಗಡಿಯಲ್ಲಿರುವ ಚುಶೂಲ್ ಠಾಣೆಯಲ್ಲಿ ನಡೆದ 16ನೇ ಸುತ್ತಿನ ಮಾತುಕತೆಯಲ್ಲಿ ಲೆಫ್ಟಿ ನೆಂಟ್ ಜನರಲ್ ಅನಿಂದ್ಯ ಸೇನ್ಗುಪ್ತ ನೇತೃತ್ವದ ಮಿಲಿಟರಿ ಅಧಿಕಾರಿಗಳ ನಿಯೋಗ ಪಾಲ್ಗೊಂಡಿತ್ತು. ಚೀನಾ ಸೇನಾಧಿಕಾರಿಗಳ ನಿಯೋಗದ ನೇತೃತ್ವವನ್ನು ಮೇಜರ್ ಜನರಲ್ ಯಾಂಗ್ ಲಿನ್ ವಹಿಸಿದ್ದರು.
- ಕರ್ನಾಟಕದ ಹಷಿಕಾ ರಾಮಚಂದ್ರ ಮತ್ತು ರಿಧಿಮಾ ವೀರೇಂದ್ರ ಕುಮಾರ್ ಅವರು ರಾಷ್ಟ್ರೀ ಯ ಜೂನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಕೂಟದ 12ರಿಂದ 14 ವರ್ಷದೊಳಗಿನವರ ಬಾಲಕಿಯರ 200 ಮೀ. ಫ್ರೀ ಸ್ಟೈ ಲ್ ವಿಭಾಗದಲ್ಲಿ ಹಷಿಕಾ 2 ನಿಮಿಷ 5.65 ಸೆಕೆಂಡುಗಳಲ್ಲಿ ಗುರಿ ತಲುಪಿದರು.