Published on: August 6, 2022

ವಿದ್ಯಾರ್ಥಿಗಳಿಗೆ ಚೆಸ್ ಕಲಿಕೆ

ವಿದ್ಯಾರ್ಥಿಗಳಿಗೆ ಚೆಸ್ ಕಲಿಕೆ

ಸುದ್ದಿಯಲ್ಲಿ ಏಕಿದೆ?

ಚೆಸ್ ಒಲಂಪಿಯಾಡ್ ನಿಂದ ಪ್ರೇರಣೆ ಪಡೆದು ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಲ್ಲಿ ಚೆಸ್ ಕಲಿಕೆಯನ್ನು ಉತ್ತೇಜಿಸಲು ಮುಂದಾಗಿದೆ. ಗ್ರಂಥಾಲಯಗಳಲ್ಲಿ ಒಳಾಂಗಣ ಬೋರ್ಡ್ ಗೇಮ್ ಗಳನ್ನು ಪರಿಚಯಿಸಲು ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿದ್ದು, ಜಿಲ್ಲೆಯಾದ್ಯಂತ ಡಿಜಿಟಲ್ ಗ್ರಂಥಾಲಯಗಳಲ್ಲಿ ಪರಿಚಯವಾಗಿರುವ ಚದುರಂಗವನ್ನು ಕೊಡಗು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈಗ ಕಲಿಯುತ್ತಿದ್ದಾರೆ.

ಮುಖ್ಯಾಂಶಗಳು

  • ಪ್ರತಿಯೊಂದು ಶಾಲೆಗೂ ಗ್ರಂಥಾಲಯ ಅವಧಿ ಇದ್ದು, ಈ ಅವಧಿಯನ್ನು ಕೊಡಗು ಜಿಲ್ಲಾ ಪಂಚಯಾತ್ನ ಶ್ರಮದಿಂದಾಗಿ ಉತ್ತಮವಾಗಿ ಬಳಸಿಕೊಳ್ಳಲಾಗುತ್ತಿದೆ.
  • ಚೆಸ್ ಒಲಂಪಿಯಾಡ್ ಜೊತೆ ಜೊತೆಗೇ ಡಿಜಿಟಲ್ ಗ್ರಂಥಾಲಯಗಳಲ್ಲಿ ಚೆಸ್ ನ್ನು ಪರಿಚಯಿಸಲಾಗಿದೆ.
  • ಡಿಜಿಟಲ್ ಲೈಬ್ರರಿಗಳನ್ನು ಸಾಮಾಜಿಕ ಸ್ಥಳವನ್ನಾಗಿ ಉತ್ತೇಜಿಸಲಾಗುತ್ತಿದ್ದು, ಕೇರಂ ಮತ್ತು ಚೆಸ್ ಮುಂತಾದ ಒಳಾಂಗಣ ಗೇಮ್ ಗಳನ್ನು ಪರಿಚಯಿಸಲಾಗಿದೆ. ಇದಕ್ಕೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಗ್ರಾಮಪಂಚಾಯತ್ ನ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
  • ಆಟಗಳೊಂದಿಗೆ ಮಕ್ಕಳಿಗೆ ಓದುವ ಆಸಕ್ತಿಯನ್ನು ಬೆಳೆಸುವುದಕ್ಕೂ ಹಲವು ಶಾಲೆಗಳು, ಪ್ರಮುಖವಾಗಿ ಗ್ರಾಮೀಣ ಶಾಲೆಗಳು ಡಿಜಿಟಲ್ ಲೈಬ್ರರಿಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ.

ಡಿಜಿಟಲ್‌ ಗ್ರಂಥಾಲಯ

  • ರಾಜ್ಯದಲ್ಲಿ ಮಾದರಿ ಡಿಜಿಟಲ್‌ ಗ್ರಂಥಾಲಯ ವ್ಯವಸ್ಥೆ ಹೊಂದಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಕೊಡಗು ಪಾತ್ರವಾಗಿದೆ
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್‌ರಾಜ್‌ ಇಲಾಖೆ ಅಗತ್ಯ ಸಂಪನ್ಮೂಲಗಳನ್ನು ಸೂಚಿತ ಅನುದಾನದಲ್ಲಿ ಬಳಸಿ ಎಲ್ಲ ಗ್ರಾಪಂಗಳಿಗೆ ಗ್ರಂಥಾಲಯ ಡಿಜಿಟಲೀಕರಣಕ್ಕೆ ಸೂಚನೆ ನೀಡಿತು. ಅದರಂತೆ 15ನೇ ಹಣಕಾಸು ಯೋಜನೆ, ಗ್ರಾಪಂ ಸ್ವಂತ ನಿಧಿ ಬಳಸಿ ಗ್ರಂಥಾಲಯಗಳಿಗೆ ಹೈಟೆಕ್‌ ಸ್ಪರ್ಶ ನೀಡಿದೆ.
  • ಡಿಜಿಟಲ್‌ ಕಾರಣದಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಾಲತಾಣ ಮತ್ತು ಇ-ಸಾರ್ವಜನಿಕ ಗ್ರಂಥಾಲಯ, ಆ್ಯಪ್‌ ಮೂಲಕ ಇ-ಪುಸ್ತಕಗಳು, ಶೈಕ್ಷಣಿಕ ವಿಡಿಯೋಗಳು ಲಭ್ಯವಿರುವುದರಿಂದ ಯುವಕರು, ವಿದ್ಯಾರ್ಥಿಗಳು, ಸಾರ್ವಜನಿಕರ ಶೈಕ್ಷಣಿಕ ಮತ್ತು ಬೌದ್ಧಿಕ ಮಟ್ಟವನ್ನು ವೃದ್ಧಿಸುವಲ್ಲಿ ಡಿಜಿಟಲ್‌ ಗ್ರಂಥಾಲಯಗಳ ಪಾತ್ರ ಮಹತ್ವದ್ದಾಗಿರುತ್ತದೆ.

ಏನೇನು  ಇರಬೇಕು :ಕನಿಷ್ಠ 2 ಗಣಕ ಯಂತ್ರಗಳು, ಯುಪಿಎಸ್‌ ವ್ಯವಸ್ಥೆ, ಜಾಲತಾಣ ವ್ಯವಸ್ಥೆ,  ವೈಫೈ ರೂಟರ್‌ ಮತ್ತು ಮೋಡೆಮ್‌