Published on: August 6, 2022
‘ಆಜಾದಿಸ್ಯಾಟ್’
‘ಆಜಾದಿಸ್ಯಾಟ್’
ಸುದ್ದಿಯಲ್ಲಿ ಏಕಿದೆ?
ದೇಶಾದ್ಯಂತ 75 ಶಾಲೆಗಳ 750 ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿರುವ ‘ಆಜಾದಿಸ್ಯಾಟ್’ ಇಸ್ರೋದ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹಕದಲ್ಲಿ (ಎಸ್ಎಸ್ಎಲ್ವಿ) ಉಡಾವಣೆಗೆ ಸಿದ್ಧವಾಗಿದೆ.
ಮುಖ್ಯಾಂಶಗಳು
- ಎಂಟು ಕೆಜಿ ತೂಕದ ಉಪಗ್ರಹವು 75 ಫೆಮ್ಟೊ ಪ್ರಯೋಗಗಳನ್ನು ಹೊಂದಿದ್ದು, ತನ್ನದೇ ಆದ ಸೌರ ಫಲಕಗಳ ಚಿತ್ರಗಳನ್ನು ಕ್ಲಿಕ್ ಮಾಡಲು ಸೆಲ್ಫಿ ಕ್ಯಾಮೆರಾಗಳು ಮತ್ತು ದೀರ್ಘ-ಶ್ರೇಣಿಯ ಸಂವಹನ ಟ್ರಾನ್ಸ್ಪಾಂಡರ್ಗಳನ್ನು ಹೊಂದಿದೆ.
- ಆರು ತಿಂಗಳ ಅವಧಿಯ ಈ ಯೋಜನೆಯು ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿದೆ. ‘ಬಾಹ್ಯಾಕಾಶದಲ್ಲಿ ಮಹಿಳೆಯರು’ ವಿಶ್ವಸಂಸ್ಥೆಯ ಈ ವರ್ಷದ ಧ್ಯೇಯವಾಕ್ಯವಾಗಿರುವುದರಿಂದ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಶಾಸ್ತ್ರದಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರ ಪರಿಕಲ್ಪನೆಯಡಿ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು 500 ಕೆಜಿಗಿಂತ ಕಡಿಮೆ ತೂಕದ ಉಪಗ್ರಹವನ್ನು ಕಕ್ಷೆಯಲ್ಲಿ ಇರಿಸಲು ಎಸ್ ಎಸ್ ಎಲ್ ವಿ ಅಭಿವೃದ್ಧಿಪಡಿಸಿದೆ. ಇಸ್ರೋ ಪ್ರಕಾರ, ಬೆಳೆಯುತ್ತಿರುವ ಬಾಹ್ಯಾಕಾಶ ಕ್ಷೇತ್ರದ ಬೇಡಿಕೆಗಳನ್ನು ಪೂರೈಸಲು ಒಂದು ವಾರದೊಳಗೆ ಎಸ್ ಎಲ್ ಎಲ್ ವಿ ರಾಕೆಟ್ ತಯಾರಿಸಬಹುದು.